Saturday, August 22, 2009

ಬ್ಲಾಗ್ ಮಾಯಾಲೋಕದಲ್ಲಿ ಎರಡನೇ ವರ್ಷಕ್ಕೆ ಅಂಬೆಗಾಲಿಡುತ್ತಾ...."ಹಲೋ, ಶಿವುರವರಾ....ನಾನು ಮೋಹನ್. ನೀವು ಮದುವೆ ಫೋಟೊ ತೆಗೆಯುತ್ತೀರಾ? " ಕೇಳಿದರು.

ನಾನು ಹೌದೆಂದೆ.

"ನಮ್ಮದೊಂದು ಮದುವೆ ಕಾರ್ಯಕ್ರಮವಿದೆ ಫೋಟೋಗ್ರಫಿ ಮಾಡಿಕೊಡ್ತೀರಾ...?" ಅಂತ ಒಂದು ಫೋನ್ ಕಾಲ್ ಬಂತು. ನಾನು ಎಂದಿನಂತೆ ಆಯ್ತು ಸರ್ ಮಾಡಿಕೊಡ್ತೀನಿ ಅಂತ ಒಪ್ಪಿಕೊಂಡೆ.


"ನೋಡಿ ಶಿವು, ನನಗೆ ಫೋಟೋಗಳೆಲ್ಲಾ ಸಹಜವಾಗಿರಬೇಕು. ಯಾರನ್ನೂ ಹೀಗೆ ನಿಲ್ಲಿ ಹಾಗೆ ಬನ್ನಿ ಅನ್ನದೇ ಅವರು ಹೇಗಿರುತ್ತಾರೆ ಹಾಗೆ ಫೋಟೋ ತೆಗೆಯಬೇಕು" ಅಂದರು

ಈಟೀವಿಯಲ್ಲಿ ನ್ಯೂಸ್ ಚೀಪ್ ಆಗಿದ್ದ ಜಿ.ಎನ್.ಮೋಹನ್‍ರವರು. ಈ ರೀತಿ ಸಹಜವಾದ ಫೋಟೋಗ್ರಫಿ ಬೇಕೆಂದು ಕೇಳಿದ್ದರಲ್ಲಿ ನನಗೆ ಆಶ್ಚರ್ಯವಾಗಲಿಲ್ಲ. ಬದಲಾಗಿ ನನಗೆ ಇಂಥ ಫೋಟೋಗ್ರಫಿ ಖುಷಿಕೊಡುತ್ತಿರುತ್ತವೆ. ಮತ್ತು ನಮ್ಮ ಕ್ರಿಯಾಶೀಲತೆಯನ್ನು ಓರೆಗೆ ಹಚ್ಚಲು ಇದೊಂದು ಸದವಕಾಶ ಅಂದುಕೊಂಡು ಒಪ್ಪಿಕೊಂಡೆ. ಮದುವೆ ಮುಗಿಯಿತು. ನಾನು ತೆಗೆದ ಫೋಟೋಗಳನ್ನು ಆಯ್ಕೆಮಾಡಲು ಮೋಹನ್ ಸರ್ ನಮ್ಮ ಮನೆಗೆ ಬಂದರು. ನೋಡಿಹೋದರು. ಮದುವೆ ಫೋಟೋ ಅಲ್ಬಂ ಸಿದ್ದವಾಯಿತು. ನನ್ನ ಹೊಸ ಪ್ರಯೋಗ ಅವರಿಗೆ ಇಷ್ಟವಾಯಿತು. ಅವರಿಗೆ ಇಷ್ಟವಾಗಿದ್ದರಿಂದ ನನಗೂ ಖುಷಿಯಾಗಿತ್ತು. ಈ ನಡುವೆ ಮದುವೆ ಫೋಟೋಗಳಲ್ಲದೇ ಬೇರೆ ರೀತಿಯಲ್ಲಿ ನಾನು ತೆಗೆದ ಫೋಟೋಗಳನ್ನು ಅವರು ನೋಡಿದ್ದರು. ಒಂದು ದಿನ

"ನೀವ್ಯಾಕೆ ಒಂದು ಬ್ಲಾಗ್ ಅಂತ ತೆರೆಯಬಾರದು? ನೀವು ತೆಗೆದ ಫೋಟೋಗಳನ್ನು, ಮತ್ತು ಬರಹಗಳನ್ನು ನಿಮ್ಮದೇ ಬ್ಲಾಗಿನಲ್ಲಿ ಹಾಕಿದರೆ ವಿಶ್ವದಾದ್ಯಂತ ನಮ್ಮ ಕನ್ನಡಿಗರು ನೋಡುತ್ತಾರೆ" ಅಂದರು.

ಅವರು ಹೇಳಿದ ಮೇಲು ನಾನು ಈ ಬ್ಲಾಗ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅವರು ನನ್ನಲ್ಲಿ ಅದೇನು ಗುರುತಿಸಿದರೋ ಗೊತ್ತಿಲ್ಲ ಇನ್ನೊಮ್ಮೆ ತಮ್ಮ ಲ್ಯಾಪ್‍ಟಾಪ್ ತಂದು ಅದರೊಳಗೆ ತಮ್ಮ ಅವಧಿ ಬಗ್ಗೆ ಅವು ತಲುಪುವ ಬಗ್ಗೆ ಇನ್ನಿತರ ಅನೇಕ ವಿಚಾರಗಳನ್ನು ಹೇಳಿ,

" ನಮ್ಮ ಮೇಪ್ಲವರ್ ಆಫೀಸಿಗೆ ಬನ್ನಿ. ಅಲ್ಲಿ ನಿಮಗೆ ನಾನು ನಿಮ್ಮದೇ ಒಂದು ಬ್ಲಾಗ್ ತೆರೆದುತೋರಿಸಿಕೊಡುತ್ತೇನೆ." ಅಂದರು.

ನಾನು ಒಂದು ದಿನ ಹೋದೆ. ಅವರು ತೆರೆದುಕೊಟ್ಟ ಬ್ಲಾಗ್ ನನಗೆ ಆಪರೇಟ್ ಮಾಡಲು ಬರಲಿಲ್ಲ. ಅದನ್ನು ಅಲ್ಲಿಗೆ ಬಿಟ್ಟೆ.


ಮತ್ತೊಂದು ತಿಂಗಳು ಕಳೆಯಿತು. ಈ ಬ್ಲಾಗ್ ಲೋಕವೆನ್ನುವುದು ಎಲ್ಲಾದಿನಪತ್ರಿಕೆಗಳಲ್ಲಿ ಗೆಳೆಯರಲ್ಲಿ ಸದಾ ಚಲಾವಣೆಯಲ್ಲಿದ್ದರಿಂದ ನಾನು ಇದರ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಕೊನೆಗೊಂದು ದಿನ ನನ್ನದೇ ಒಂದು ಬ್ಲಾಗ್ ಸ್ಪಾಟ್ ಅಂತ ಮಾಡಿಕೊಂಡು ಅದಕ್ಕೆ ಛಾಯಾಕನ್ನಡಿ ಅಂತ ಹೆಸರಿಟ್ಟೆ. ಆದೇ ಖುಷಿಯಲ್ಲಿ ಮೋಹನ್ ಸರ್‌ಗೆ ತಕ್ಷಣ ಫೋನ್ ಮಾಡಿ "ಸಾರ್ ನಾನು ಒಂದು ಬ್ಲಾಗ್ ಮಾಡಿದ್ದೇನೆ. ಅದರ ಹೆಸರು ಛಾಯಾಕನ್ನಡಿ ಅಂತ ಚೆನ್ನಾಗಿದೆಯಾ" ಕೇಳಿದೆ. "ವೆರಿಗುಡ್ ಹೆಸರು ಚೆನ್ನಾಗಿದೆ ಮುಂದುವರಿಸಿ" ಅಂದರು ಅವತ್ತು ದಿನಾಂಕ 24-8-2008. ಈಗ ಸರಿಯಾಗಿ ಒಂದು ವರ್ಷವಾಯಿತು.


ಅಂದಿನಿಂದ ಇವತ್ತಿನವರೆಗೆ ನಡೆದು ಬಂದ ದಾರಿಯಲ್ಲಿ ಮೂರು ಕವನಗಳು ಸೇರಿದಂತೆ ೭೦ ಲೇಖನಗಳನ್ನು ಬ್ಲಾಗಿಗೆ ಹಾಕಿದ್ದೇನೆ. ಸರಾಸರಿ ಐದು ದಿನಕ್ಕೊಂದರಂತೆ ಹಾಕಿದ ಚಿತ್ರಗಳಲ್ಲಿ ಮತ್ತು ಲೇಖನಗಳಲ್ಲಿ ತಿರುಳೆಷ್ಟು, ಜೊಳ್ಳೆಷ್ಟು, ಯಾವುದು ಭಾರ, ಹಗುರ, ಹೀಗೆ ನಾನೇ ಹಿಂತಿರುಗಿ ನೋಡಿ ಅವಲೋಕಿಸಿದಾಗ ಕೆಲವೊಂದು ಆಂಶಗಳು ಗಮನಕ್ಕೆ ಬಂದವು. ಮೊದಲಿಗೆ ನಾನು ಈ ಬ್ಲಾಗ್ ಲೋಕಕ್ಕೆ ಹೊಸತನ್ನು ಕೊಡುವ ಪ್ರಯತ್ನದಲ್ಲಿ ಆಧಾರವಾಗಿ ನಾನು ಕ್ಲಿಕ್ಕಿಸಿದ ಫೋಟೋಗಳನ್ನು ಆನೇಕ ಲೇಖನಗಳಲ್ಲಿ ಬಳಸಿಕೊಂಡಿದ್ದೇನೆ. ಅದು ಮೊದಲಿಗೆ ನೀವೆಲ್ಲಾ ನನ್ನತ್ತ ತಿರುಗಿನೋಡಲು ಈ ಫೋಟೋಗಳು ಸಹಕಾರಿಯಾದವೆಂದೆ ಹೇಳಬಹುದು. ನೀವು ನನ್ನ ಫೋಟೋಗಳನ್ನು ಅದೆಷ್ಟೇ ಮೆಚ್ಚಿ ಹೊಗಳಿದರೂ ಎಲ್ಲಾ ಲೇಖನಗಳಿಗೂ ಫೋಟೊಗಳಿಲ್ಲದೇ ನಾನು ಬರಹವೆನ್ನುವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವ ಅಂತ ಯೋಚಿಸಿದಾಗ ಪಲಿತಾಂಶ ಸೊನ್ನೆ ಎಂದೇ ಹೇಳಬಹುದು. ಆದರೂ ಕೆಲವು ಪ್ರಯತ್ನಗಳನ್ನು ಖುಷಿಯಿಂದ ಮಾಡಿದ್ದೇನೆ.

ನಾನು ಬರೆದ ಅನೇಕ ಲೇಖನಗಳಲ್ಲಿ ಟೋಪಿಗಳ ಸರಣಿ, ಭೂಪಟ ಸರಣಿಗಳ ಗಿಮಿಕ್ಕುಗಳು, ಚಿಟ್ಟೆ-ಪತಂಗ, ಪಕ್ಷಿಗಳ ಪ್ರಯೋಗಾತ್ಮಕ ಚಿತ್ರಲೇಖನಗಳ ಯಶಸ್ಸಿಗೆ ಫೋಟೋಗಳು ಮುಖ್ಯ ಕಾರಣವಾದ್ದರಿಂದ ಅಲ್ಲಿ ನನ್ನ ಬರವಣಿಗೆಯ ಚಾಪು ಏನು ಇರಲಿಲ್ಲವೆಂದೇ ಹೇಳಬಹುದು. ಅವುಗಳನ್ನು ಬಿಟ್ಟು ನಾನು ಈ ಒಂದು ವರ್ಷದ ದಾರಿಯಲ್ಲಿ ಇಷ್ಟಪಟ್ಟ ಹತ್ತು ಬರಹಗಳು ಇವು.


೧೦. ಮಾಲ್ಗುಡಿ ಡೇಸ್ ಮಿಂಚು ಮಲ್ಲೇಶ್ವರಂ ರೈಲು ನಿಲ್ದಾಣ.

ನಮ್ಮ ಮೆಚ್ಚಿನ ರೈಲುನಿಲ್ದಾಣದ ಪ್ಲಾಟ್‍ಫಾರಂನಲ್ಲಿ ನಿತ್ಯ ಸಂಜೆ ನಾನು ಮತ್ತು ನನ್ನಾಕೆ ಇಲ್ಲಿ ಓಡಾಡುವಾಗ ಆಗಿದ್ದ ಆನುಭವಗಳಿಂದಾಗಿ ಅದೇ ಇಷ್ಟಪಟ್ಟು ಬರೆಸಿಕೊಂಡ ನನ್ನ ಮೊದಲ ಲೇಖನವಾದರೂ ಪೂರ್ತಿ ಯಶಸ್ಸಿನ ಪಾಲನ್ನು ಫೋಟೋಗಳು ಕಸಿದುಕೊಂಡವು.


೯. ಹಳೆ ಮನೆಯ ನೆನಪುಗಳು....ಹೊಸ ಮನೆಯ ಕನಸುಗಳು..

ಇದೂ ಕೂಡ ನೆನಪು..ಕನಸುಗಳ ತಳಹದಿಯಲ್ಲಿ ಬರೆದಿದ್ದಾದರೂ ಪೂರ್ತಿ ಯಶಸ್ಸಿನಲ್ಲಿ ಸ್ವಲ್ಪವನ್ನು ಫೋಟೋಗಳು ಲೇಖನಕ್ಕೆ ಬಿಟ್ಟುಕೊಟ್ಟವು.


೮. ವಾರಕೊಮ್ಮೆ ಯಶವಂತಪುರ ಸಂತೆ.

ಇಲ್ಲಿಯೂ ಕೂಡ ನಾವಿಬ್ಬರೂ ಪ್ರತಿಭಾನುವಾರ ಆ ಸಂತೆಗೆ ಹೋಗುತ್ತಿದ್ದುದರಿಂದ ಅದರ ಆನುಭವಗಳನ್ನು ಚಿತ್ರಗಳ ಸಹಿತ ಬರೆದಿದ್ದೆ. ಬರೆಯುವಾಗ ನಾನು ನಕ್ಕಿದ್ದೆ. ಓದುವಾಗ ನೀವು ನಕ್ಕಿರುತ್ತೀರಿ ಅಂದುಕೊಳ್ಳುತ್ತೇನೆ. ಈ ಲೇಖನದಿಂದಾಗಿ ಕೆಲವು ಬ್ಲಾಗು ಮತ್ತು ಬ್ಲಾಗಿನಾಚೆಗಿನ ಹೆಣ್ಣುಮಕ್ಕಳ ಆಕ್ಷೇಪಣೆಗಳಿಗೆ ಒಳಗಾದರೂ ನಾನು ಇಷ್ಟಪಟ್ಟಿದ್ದ ಲೇಖನಗಳಲ್ಲಿ ಇದು ಒಂದು.


೭. ಇವು ಎಲ್ಲಿ ಕಾಣಿಸಿದ್ರೂ ನಾಯಿಗಳು ಅಲ್ಲೇ ಕಾಲೆತ್ತಿಬಿಡುತ್ತವೆ ಸರ್.....

ಇದು ಹೊಸ ಲೇಖನ ಮತ್ತು ಬರೆಯುವಾಗಿನ ಖುಷಿ ಎಂಥದ್ದು ಅನ್ನುವುದನ್ನು ತೋರಿಸಿಕೊಟ್ಟ ಪುಟ್ಟ ಲೇಖನ. ಅದಕ್ಕೆ ತಕ್ಕಂತೆ ಆದ ಆನುಭವಕ್ಕಾಗಿ ಆ ನಂಬರ್ ಪ್ಲೇಟ್ ಕಲಾವಿದನಿಗೆ ನನ್ನ ಧನ್ಯವಾದಗಳು.


೬. ಯಾರ್ರೀ...ಟೀ...ಟೀ....ಟೀ.......

ಏನನ್ನೋ ಬರೆಯಲು ಹೋಗಿ ಮತ್ತೆಂಥದ್ದೋ ಅನುಭವ ಪಡೆದುಕೊಂಡ ಲೇಖನವಿದು. ಸುಮ್ಮನೇ ಸರಳವಾಗಿ ಅವರ ನಿತ್ಯ ದಿನಚರಿಯ ವಿಚಾರವನ್ನು ಬರೆಯಲು ಅವರ ಹಿಂದೆ ಬಿದ್ದಾಗ ಆದ ಅನುಭವಗಳು, ಕೇಳಿದ ಮಾತು ಈಗಲು ನನ್ನಲ್ಲಿ ಗುನುಗುನಿಸುತ್ತಿವೆ. ಪ್ರತಿಯೊಂದು ವೃತ್ತಿಯಲ್ಲೂ ಅವುಗಳದೇ ಆದ ಆಳ, ಆಗಲ, ಉದ್ದ, ಎತ್ತರವಿರುತ್ತದೆ ಅಂತ ಗೊತ್ತಾಗಿದ್ದು ಇವರ ಒಡನಾಟದಿಂದ. ಇಲ್ಲಿಯೂ ಕೆಲವು ಫೋಟೋಗಳನ್ನು ಬಳಸಿಕೊಂಡರೂ ಲೇಖನವನ್ನು ನೀವು ಮೆಚ್ಚಿದ್ದರೇ ಅದು ಬರಹದಿಂದ ಮಾತ್ರವೇ ಹೊರತು ಫೋಟೋಗಳಿಂದಲ್ಲ ಅಲ್ಲವೇ..?


೫. ನನ್ ಹಿಂಬದಿ ಕಣ್ಣು ಒಡೆದೊಯ್ತು....ಅಮೇಲೆ...ಏನೇನಾಯ್ತು...?

ಸುಮಾರು ಒಂದು ತಿಂಗಳು ನಾನು ನನ್ನ ಗಾಡಿಯ ಬಲಬದಿಯ ಮಿರರ್ ಇಲ್ಲದೇ ಓಡಾಡುತ್ತಿರುವಾಗ ಅನ್ನಿಸಿದ್ದನ್ನೂ ಹಾಗೇ ನೇರವಾಗಿ ಅಕ್ಷರ ರೂಪಕ್ಕಿಳಿಸಿದ್ದೆ. ಆಹಾ....ಈ ಲೇಖನ ಬರೆಯುವಾಗಿನ ಮಜವೇ ಬೇರೆ. ಈ ಲೇಖನವನ್ನು ಓದಿ ನೀವೆಲ್ಲರೂ ನನಗೆ ಮಹಾ ರಸಿಕತನ ಪಟ್ಟ ಕೊಟ್ಟುಬಿಟ್ಟಿರಿ. ಆರೆರೆ..ನನ್ನಲ್ಲೂ ರಸಿಕತನವಿದೆಯಲ್ಲವೇ ಅಂತ ನನಗೇ ಗೊತ್ತಾಗಿದ್ದು ಈ ಲೇಖನದಿಂದ. ಮತ್ತೆ ಈ ಲೇಖನವನ್ನು ಇದುವರೆಗೂ ನನ್ನಾಕೆಗೆ ಓದುವ ಅವಕಾಶ ನೀಡಿಲ್ಲ.


೪. ಬಾಲ್ಡಿ ತಲೆ ಮನುಷ್ಯನಿಗಾಗದೇ ಪ್ರಾಣಿ, ಪಕ್ಷಿ, ಮರಗಳಿಗೆ ಆಗುತ್ತಾ....!

ಭೂಪಟವೆನ್ನುವ ಹೊಸ ಫೋಟೋ ಕಾನ್ಸೆಪ್ಟುಗಳಿಗಾಗಿ ಈ ಲೇಖನವನ್ನು ಬರೆದಿದ್ದೆ. ನಾನು ಬರವಣಿಗೆಯಲ್ಲಿ ಸಕ್ಕತ್ ಮಜಕೊಟ್ಟ ಲೇಖನವಿದು. ಕಟೀಂಗ್ ಷಾಪ್‍ನವನ ಮಾತುಗಳನ್ನು ಅವನ ಬಾಯಿಂದ ಕೇಳುವಾಗ ಅದನ್ನು ಹಾಗೆ ಅಕ್ಷರ ರೂಪಕ್ಕೆ ತರುವಾಗ ತುಂಬಾ ಖುಷಿಪಟ್ಟಿದ್ದೇನೆ.


೩. ಹಿರಿಯಜ್ಜನಿಗೆ ಕತೆ ಹೇಳಿದ ಕರಿಬೇವು.

ಚುಟುಕು ಕತೆಯನ್ನು ಬರೆಯಬೇಕೆನ್ನುವ ಆಸೆ ಮನದಲ್ಲಿ ಮೂಡಿದಾಗ "ವಿಶ್ವ ಹಿರಿಯರ ದಿನಕ್ಕಾಗಿ" ಬರೆದ ಈ ನಾನು ಬರೆದ ಲೇಖನಗಳಲ್ಲಿ ಮೂರನೆ ಸ್ಥಾನದಲ್ಲಿ ನಿಲ್ಲುತ್ತದೆ.


೨. ನಾ ನಿನ್ನ ಮದುವೆಯಾಗೋಲ್ಲ ಅಂದೆ....ಅವಳು ಬಹ್ಮಕುಮಾರಿಗೆ ಸೇರಿದಳು....

ನನ್ನದೇ ಬದುಕಿನ ಕತೆಯನ್ನು ಹಾಗೇ ನೇರವಾಗಿ ಬರೆಯುವಾಗಿನ ಆತಂಕ, ನಲುಗಾಟ, ದಿಗಿಲು, ಖುಷಿ, ಯಾರೇನು ಅಂದುಕೊಳ್ಳುತ್ತಾರೋ ಅನ್ನುವ ಭಯ, ಎಲ್ಲವನ್ನೂ ಅನುಭವಿಸಿದ ಒಂದು ಭಾವಾನಾತ್ಮಕ ಲೇಖನವಿದು. ಮತ್ತು ಬರೆದ ಮೇಲೆ ತುಂಬಾ ನಿರಾಳವೆನಿಸಿ ಅದೇ ಗುಂಗಿನಲ್ಲಿ, ದೇಹ ಮತ್ತು ಮನಸ್ಸು ಹಗುರತ್ವವನ್ನು ಅನುಭವಿಸಿದ್ದು ಈ ಲೇಖನದಿಂದಲೇ... ಇಂಥ ಅನುಭವ ನೀಡಿದ ಈ ಲೇಖನಕ್ಕೂ ಮತ್ತು ಅತಿಹೆಚ್ಚು ಪ್ರತಿಕ್ರಿಯೆಗಳು[೭೦] ಅತಿಹೆಚ್ಚು ಬಾರಿ ನೋಡಿದ ಬ್ಲಾಗ್ ಗೆಳೆಯರಿಗೂ ನನ್ನ ಹೃತ್ಫೂರ್ವಕ ನಮನಗಳು.


೧. ಈ ದೇಹದಿಂದ ದೂರನಾದೆ ಏಕೆ ಆತ್ಮನೇ....ಈ ಸಾವು ನ್ಯಾಯವೇ ?

ಬ್ಲಾಗ್ ಲೋಕವೆನ್ನುವ ಮಾಯಾಲೋಕಕ್ಕೆ ಕಾಲಿಟ್ಟ ಮೇಲೆ ಪುಟ್ಟ ಕತೆಯನ್ನು ಬರೆಯಬೇಕೆನ್ನುವ ಆಸೆಯೆಂದ ಈ ಕತೆಯನ್ನು ಬರೆದಿದ್ದೆ. ರೈಲ್ವೇ ನಿಲ್ದಾಣ ಒಡನಾಟ ನನಗೆ ಯಾವಾಗಲು ಇದ್ದುದ್ದರಿಂದ ಕಥೆಯ ಸ್ಥಳವಾಗಿ ರೈಲ್ವೇ ನಿಲ್ದಾಣವನ್ನೇ ಬಳಸಿಕೊಂಡು ಕುರುಡ, ಅಂಗವಿಕಲ ಹುಡುಗಿ, ಮತ್ತೊಬ್ಬಳು ತಂಗಿ ಮೂರೇ ಪಾತ್ರದಾರಿಗಳಿರುವ ಈ ಕತೆ ನನ್ನ ಇದುವರೆಗಿನ ಬರಹಗಳಲ್ಲೇ ನನಗೆ ತುಂಬಾ ಇಷ್ಟವಾದದ್ದು. ಬರೆಯುವಾಗ ಸ್ವಲ್ಪ ಎಚ್ಚರ ತಪ್ಪಿದ್ದರೂ ಭಾವುಕತೆ ಎನ್ನುವುದು ಉಮ್ಮಳಿಸಿ ಬಂದುಬಿಡುವ ಅಪಾಯದಿಂದ ಪಾರಾದ ಈ ಕತೆಯನ್ನು ನಾನೇ ಆಗಾಗ ಓದಬೇಕೆನ್ನಿಸುವಷ್ಟು ಇಷ್ಟವಾಗುತ್ತದೆ. ಯಾರಾದರೂ ಇದುವರೆಗಿನ ನಿಮ್ಮ ಮೆಚ್ಚಿನ ಮತ್ತು ಮೊದಲ ಸ್ಥಾನದ ಬರಹ ಯಾವುದೆಂದು ಕೇಳಿದರೆ ನಾನು ಖಂಡಿತ ಇದನ್ನೇ ಆಯ್ಕೆಮಾಡುತ್ತೇನೆ.


ಇವುಗಳ ಜೊತೆಗೆ ಪುಟ್ಟ ಪುಟ್ಟ ಪುಟಾಣಿ ಸಂತೋಷಗಳು, ತಂಗಿ ಇದೋ ನಿನಗೊಂದು ಪತ್ರ, ಕೊನೇದು ಹೆಲಿಕಾಪ್ಟರು..ತವರುಮನೆ ಕಡೀಕೆ ತಿರೀಕತ್ತು, ನಿಮ್ಮ ಮೂಗು ಆರ್ಡರ್ ಕೊಟ್ಟು ಮಾಡಿಸಿದಂತಿದೆಯಲ್ವೇ?, ನನ್ನಪ್ಪನ್ನ ಕರ್ಕೊಂಡು ಬರ್ತೀನಿ ತಾಳು, ಮಾಡಲ್ ಒಂದೆ ಆದ್ರೆ ತಂದೆ ತಾಯಿ ಬೇರೆ, ನಿಮ್ಮೆಂಗುಸ್ರು.....ಪಕ್ಕದ ಮನೆಯ ಹೆಂಗಸ್ರೂ...., ನಾಚಿಕೆಯಿಲ್ಲದ ಪಾರಿವಾಳಗಳು.........ಇತ್ಯಾದಿ. ಹಾಗೆ ನನ್ನ ವೃತ್ತಿ ಜೀವನದ ಆನುಭವಗಳ ಸರಮಾಲೆಯೊಂದು ಪುಸ್ತಕ ರೂಪ ಪಡೆಯುತ್ತಿದೆ. ಇವನೆಲ್ಲಾ ಮರೆಯಲು ಸಾಧ್ಯವೇ?


ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ನಾನು ಬರೆದ ಲೇಖನಗಳ ವಿಚಾರವಾಗಿಯೇ ಮಾತಾಡುತ್ತಿದ್ದೇನೆ ಅಂದುಕೊಳ್ಳಬೇಡಿ. ಒಮ್ಮೆ ಇವನ್ನೆಲ್ಲಾ ಅವಲೋಕಿಸಿ ಬೇರೆ ಬ್ಲಾಗುಗಳ ಬರಹ, ಓದಿದ ಕತೆಗಳು, ಲೇಖನಗಳನ್ನು ಗಮನಿಸಿದಾಗ ಹೊರಗಿನ ಪುಸ್ತಕ ಪ್ರಪಂಚದಲ್ಲಿ ಎಂಥೆಂಥ ಪ್ರಯೋಗಗಳಾಗುತ್ತಿವೆ! ಅವುಗಳ ನಡುವೆ ನಾನು ಅಂಬೆಗಾಲಿಡುತ್ತಿದ್ದೇನೆ ಅನ್ನಿಸಿದ್ದು ಸತ್ಯ. ಅದಕ್ಕಾಗಿ ನಾನು ಮತ್ತಷ್ಟು ಓದಬೇಕಿದೆ. ಓದುತ್ತಾ ಕಲಿಯಬೇಕಿದೆ. ಕಲಿಕಲಿತು ಜೊತೆಗೆ ನಲಿಯುತ್ತಾ ಹೊಸದರತ್ತ ತೊಡಗಿಸಿಕೊಳ್ಳಬೇಕಿದೆ.


ಬ್ಲಾಗ್ ಲೋಕದ ಗೆಳೆಯರಾದ ನೀವು ನನ್ನ ಫೋಟೋಗಳನ್ನು ಮೆಚ್ಚಿದ್ದೀರಿ. ಬರೆದ ಲೇಖನಗಳನ್ನು ಓದಿ ಇಷ್ಟಪಟ್ಟಿದ್ದೀರಿ, ಮೆಚ್ಚಿದ್ದೀರಿ, ನಕ್ಕಿದ್ದೀರಿ ನನ್ನನ್ನೂ ನಗಿಸುತ್ತಿದ್ದೀರಿ, ತಪ್ಪಾದ ಕಡೆ ಹೀಗಲ್ಲಾ ಹಾಗೆ ಅಂತ ತಿದ್ದಿ ಕೈಹಿಡಿದು ನಡೆಸುತ್ತಿದ್ದೀರಿ. ಬ್ಲಾಗ್ ಲೋಕಕ್ಕೆ ಪ್ರತ್ಯಕ್ಷವಾಗಿ ಎಳೆತಂದ ಜಿ.ಎನ್.ಮೋಹನ್‍ರವರಿಗೆ ಈ ಕ್ಷಣದಲ್ಲಿ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಾ, ನಾನು ಏನೇ ಗೀಚಿದರೂ ಉತ್ಸಾಹದಿಂದ ಓದಿ ಬೆನ್ನುತಟ್ಟುವ ನಿಮಗೆಲ್ಲಾ ನನ್ನ ನಮನಗಳನ್ನು ಸಲ್ಲಿಸುತ್ತಾ, ನನ್ನ ಒಂದು ವರ್ಷದ ಛಾಯಾಕನ್ನಡಿ ಎರಡನೇ ವರ್ಷಕ್ಕೆ ತನ್ನ ಪುಟ್ಟ ಹೆಜ್ಜೆಗಳನ್ನಿಡುತ್ತಿದೆ..........ಮುಂದೆಯೂ ಹೀಗೆಯೇ ಕೈಹಿಡಿದು ನಡಿಸಿ......


ಎಲ್ಲಾ ಬ್ಲಾಗ್ ಗೆಳೆಯರಿಗೂ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.ಧನ್ಯವಾದಗಳು.
ಶಿವು.ಕೆ.

86 comments:

Ittigecement said...

ಶಿವು ಸರ್...

ಈ ಬ್ಲಾಗ್ ಲೋಕದಲ್ಲಿ ನೀವೊಂದು ಹೊಸ ಥರ....
ವೈವಿದ್ಯಮಯವಿದೆ ನಿಮ್ಮ ಬ್ಲಾಗಿನಲ್ಲಿ....

ಫೋಟೊಗ್ರಫಿಯ ಸಂಗಡ ನಿಮ್ಮಲ್ಲಿರುವ ಬರಹಗಾರ ಪ್ರಕಟವಾಗಿದ್ದಾನೆ...

ದೇವರು ನಿಮಗೆ.. ನಿಮ್ಮ ಪ್ರಯತ್ನಗಳಿಗೆ ಇನ್ನಷ್ಟು ಯಶಸ್ಸು ತರಲೆಂದು ಹಾರೈಸುವೆ....

ಗೌರಿಗಣೇಶ ಹಬ್ಬದ ಶುಭ ಕಾಮನೆಗಳು...

rukminimalanisarga.blogspot.com said...

ಶುಭವಾಗಲಿ.
ಮಾಲಾ

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಆಗಲೇ ಒಂದು ವರ್ಷ ತುಂಬಿತಾ? ನನ್ನ ತಮ್ಮನಿಂದ ಹೇಳಿಸಿಕೊಂಡು ನನ್ನ ಬ್ಲಾಗ್ ಮಾಡಿ ನಿಮಗೆ ಫೋನಿನಲ್ಲಿ ಹೇಳಿದೆ. ಫೋನಿನಲ್ಲಿ ಹೇಳಿಕೊಟ್ಟರೂ ನಿಮಗೆ ಆಗಲಿಲ್ಲ. ಬೆಂಗಳೂರಿಗೆ ಬಂದಾಗ ಬ್ರೌಸಿಂಗ್ ಸೆಂಟರಿನಲ್ಲಿ ನಾವು ಕೂತು ನಿಮ್ಮ ಬ್ಲಾಗ್ ಕ್ರಿಯೇಟ್ ಮಾಡಿದ್ದು ಎಲ್ಲ ನೆನಪಾಗುತ್ತಿದೆ.
ನಿಮ್ಮ ಲೇಖನಗಳ ಅವಲೋಕನ, ಟಾಪ್ ಟೆನ್ ರೇಟಿಂಗ್ ಎಲ್ಲ ಚೆನ್ನಾಗಿದೆ.
ಗೌರಿಗಣೇಶ ಹಬ್ಬದ ಶುಭಾಶಯಗಳು.

ಸುಧೇಶ್ ಶೆಟ್ಟಿ said...

ಶಿವು ಅವರೇ...
ನಾನು ತು೦ಬಾ ಇಷ್ಟ ಪಡುವ, ಬೇಸರವಾದಾಗಲೆಲ್ಲಾ ಬ೦ದು ಓದುವ ಬ್ಲಾಗು ನಿಮ್ಮದು. ನಿಮ್ಮ ಬ್ಲಾಗ್ ಬರಹಗಳು ಎ೦ತವರನ್ನೂ ಸೆಳೆಯುತ್ತದೆ... ಅದಕ್ಕೆ ಸಾಕ್ಷಿ ನಿಮ್ಮ ಬ್ಲಾಗುಗಳಿಗೆ ಬರುವ ಕಮೆ೦ಟುಗಳು....

ಎರಡನೇ ವರುಷದ ಹುಟ್ಟಿದ ಹಬ್ಬಕ್ಕೆ ಶುಭಾಶಯಗಳು ಛಾಯಾಕನ್ನಡಿಗೆ....

ಸುಧೇಶ್ ಶೆಟ್ಟಿ said...

ಅ೦ದ ಹಾಗೇ ಗಣೇಶ ಗೌರಿ ಸೂಪರ್ ಆಗಿದೆ :)

ವನಿತಾ / Vanitha said...

ಶಿವು,
ಅಭಿನಂದನೆಗಳು..ನಿಮ್ಮ ಟಾಪ್ ೧೦ ನಲ್ಲಿ ಕೆಲವು ನನಗೆ ಕೂಡಾ ತುಂಬಾ ಇಷ್ಟವಾದ ಲೇಖನಗಳು..ಆದರೆ ಇವತ್ತೇ ಗೊತ್ತಾಗಿದ್ದು ನಾನು ಕೆಲವನ್ನು ಓದಿಲ್ಲ ಎಂದು..ನಿದಾನದಲ್ಲಿ ಟೈಮ್ ಸಿಕ್ಕಾಗ ಓದ್ತೇನೆ..ನಿಮಗೆ ಹಾಗು ಹೇಮಶ್ರೀಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು..

umesh desai said...

ಶಿವು ಅಭಿನಂದನೆಗಳು ನಿಮ್ಮ ಬ್ಲಾಗ್ ಹಿಗೆಬೇಳೆಯಲಿ ಹೊಳೆಯಲಿ .
ಅ ಗಣಪ್ಪ ನಿಮಗೆ ಶುಭ ತರಲಿ...

ವಿನುತ said...

ನಿಮಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಬಗೆಯ ಒ೦ದು ಅವಲೋಕನದೊ೦ದಿಗೆ ಹೊಸ ವಸ೦ತಕ್ಕೆ ಕಾಲಿಟ್ಟಿದ್ದೀರಿ. ಅಭಿನ೦ದನೆಗಳು. ಸಾಗಲಿ ನಿಮ್ಮ ಪಯಣ ನಿರ೦ತರವಾಗಿ..

ಮನಸು said...

nimage shubhavagali..nimma blog heege hattu halavu varushagalu kaanali nammellarigu olleya chitragalu barahagLu needali..

Gowri ganesh ibbarigu swine flu baruva munchene echettukondiruvudu olleya vishaya hahaha

nimagu haagu nimmavarellarigu gowri ganesha habbada shubashayagaLu..

ಮೂರ್ತಿ ಹೊಸಬಾಳೆ. said...

ಶಿವು ಸರ್,
ಛಾಯಾಕನ್ನಡಿಗೆ ಮೊದಲನೆಯ ಹುಟ್ಟು ಹಬ್ಬದ ಶುಭಾಷಯಗಳು. ಹೀಗೇ ಹೊಸ ಹೊಸ ವಿಚಾರಗಳನ್ನ,ಮನರಂಜನೆಯನ್ನ,ಮಾಹಿತಿಗಳನ್ನ, ಹೊತ್ತುತರುವ ಛಾಯಾಕನ್ನಡಿ ಶತಾಯುಷಿಯಾಗಲಿ.

ಸವಿಗನಸು said...

ವರುಷ ತುಂಬಿದ ಛಾಯಾಕನ್ನಡಿ ಕೂಸಿಗೆ ಶುಭಾಷಯಗಳು...ಹೀಗೆ ಹತ್ತು ಹಲವಾರು ಹರುಷ ನಮ್ಮನ್ನು ರಂಜಿಸಲಿ...
ನಿಮ್ಮ ಟಾಪ್ ೧೦ ನಲ್ಲಿ ನಾನು ಇನ್ನು ಕೆಲವು ನೋಡಿಲ್ಲ...ಬಿಡುವು ಮಾಡಿಕೊಂಡು ನೋಡುತ್ತೇನೆ...
ಗೌರಿಗಣೇಶ ಹಬ್ಬದ ಶುಭಾಷಯಗಳು...

Prabhuraj Moogi said...

ವರುಷ ತುಂಬಿದ ಸಂಭ್ರಮದಲ್ಲಿದ್ದೀರಿ, ಅಭಿನಂದನೆಗಳು... ಹಾಗೂ ಹೀಗೂ ಬ್ಲಾಗ್ ಆರಂಭಿಸಿ ಇಶ್ಟು ಪ್ರಸಿದ್ಧ ಆಗಿದ್ದು ಹೆಮ್ಮೆ ಪಡೊ ವಿಷಯ...
ಬಾಲ್ಡಿ ತಲೆ ಫೋಟೊಗಳ ಬಗ್ಗೆ ನಾನೇನು ಬೇರೆ ಹೇಳಬೇಕಿಲ್ಲ... ಹಳೆ ಮನೆ ನೆನಪಿನ ಲೇಖನ ಬಹಳ ಇಷ್ಟವಾದದ್ದು.
all the best, ಮುಂದುವರೆಸಿ

PaLa said...

ಆತ್ಮೀಯ ಶಿವು,
ನಿಜ ಹೇಳ್ಬೇಕು ಅಂದ್ರೆ ಈಚೆಗೆ ನಿಮ್ಮ ಚಿತ್ರಗಳಿಗಿಂತ ಬರವಣಿಗೆ ಮುದ ನೀಡುತ್ತದೆ. ಅದೂ ವ್ಯಾಲಂಟೈನ್ಸ್ ಡೇಯ ದಿನದಿಂದ ನೀವು ಬರೆದ ಕಥೆಯನ್ನೂ ಸೇರಿಸಿ, ಈಚೆಗೆ ಬರೆದ ಕೆಲವು ಲೇಖನ ಚೆನ್ನಾಗಿದೆ. ಉದಾಸೀನದಿಂದಲೋ, ಪ್ರತಿಕ್ರಿಯಿಸಲು ಏನೂ ತೋಚದೆಯೋ ಎಲ್ಲದಕ್ಕೂ ಪ್ರತಿಕ್ರಿಯಿಸಲಾಗಲಿಲ್ಲ.

ನಿಮ್ಮ ಬ್ಲಾಗಿನಲ್ಲಿ ಮೊದಲು ನೋಡಿದ ಚಿನ್ನದ ಧೂಳಿನ ತೂರಾಟ, ಗೋಧೂಳಿಯಲ್ಲಿ, ಬಲೆ ಬೀಸುವುದು, ಗ್ರೀನ್ ಬೀ ಈಟರ್ ಮೊದಲಾದ ಚಿತ್ರ ನನ್ನಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟದ ಚಿತ್ರ ನಿಮ್ಮಿಂದ ನಿರೀಕ್ಷಿಸುವಂತೆ ಮಾಡಿದೆ. ನಿಮ್ಮಲ್ಲಿ ಇಂತಹ ಚಿತ್ರದ ಸರಕು ಯಥೇಚ್ಛವಾಗಿದೆಯೆಂದು ನನ್ನ ಅನಿಸಿಕೆ. ನಿಮ್ಮ ಬರವಣಿಗೆಗೆ ಹೊಂದದೆಯೋ, ಇನ್ನೇನೋ ಕಾರಣದಿಂದ ಆ ಚಿತ್ರ ನಿಮ್ಮ ಬಳಿಯೇ ಉಳಿದಿರಬಹುದು. ತಿಂಗಳಿಗೊಮ್ಮೆಯಾದರೂ ಅಂತಹ ಚಿತ್ರವೊಂದನ್ನು (ಅದರಲ್ಲೂ ನಿಮ್ಮ ಪಿಕ್ಟೋರಿಯಲ್ ಚಿತ್ರಗಳು) ಸೇರಿಸಿ, ನಿಮ್ಮ ಅನುಭವ ಬರೆದರೆ ಆಸಕ್ತರಿಗೆ ಚೆನ್ನ ಎಂಬುದು ನನ್ನ ಅನಿಸಿಕೆ.

ಛಾಯಾಕನ್ನಡಿ ಒಂದು ವರ್ಷ ಪೂರೈಸಿದಕ್ಕೆ ಅಭಿನಂದನೆ. ಗೌರಿ ಗಣೇಶ ಹಬ್ಬದ ಸವಿ ಹಾರೈಕೆ, ನಿಮಗೂ ನಿಮ್ಮ ಮನೆವರಿಗೂ.

sunaath said...

ಶಿವು,
ಹುಟ್ಟುಹಬ್ಬಕ್ಕೆ ಶುಭಾಶಯಗಳು. ನಮ್ಮೆಲ್ಲರ ಮನಸ್ಸಿಗೆ ಮುದ ಕೊಡುತ್ತ ನಿಮ್ಮ blog ಇನ್ನೂ ನೂರು ವರ್ಷ ಮುಂದುವರೆಯಲಿ.
ನೀವೇನೋ, ನಿಮ್ಮ ಲೇಖನಗಳಿಂದ Top Ten ಆರಿಸಿ ತೆಗೆದಿದ್ದೀರಿ. ನನಗೋ ನಿಮ್ಮ ಪ್ರತಿಯೊಂದು ಲೇಖನವೂ ಮೆಚ್ಚಿಗೆಯದೇ ಆಗಿದೆ. ನನ್ನ ಹಾರೈಕೆ ಇಷ್ಟೇ:
Be on the Top!

ಜಲನಯನ said...

ಶಿವು, ಎರಡು ವಸಂತ ಕಂಡ ನಿಮ್ಮ ಬ್ಲಾಗ್ ಪಯಣಕ್ಕೆ ಶುಭಕೋರುತ್ತಾ
ನಿಮ್ಮ ಲೇಖನವನ್ನು ಸವಿಯಲು ನಿಮ್ಮಲ್ಲಿರುವ ಲೇಖಕನನ್ನು ಅಳೆಯಲು ಅನುವುಮಾಡಿಕೊಟ್ಟಿದ್ದೀರಾ...ಧನ್ಯವಾದ.
ಗೌರಿ-ಗಣೇಶರಿಗೆ ಮಾಸ್ಕ್ ತೊಡಿಸಿ ವಿಭಿನ್ನ ರೀತಿಯಲ್ಲಿ ಮಾನವನಿಂದ ಶೃಷ್ಠಿಯಾದ ವೈರಸ್ನಿಂದ ಅವರಿಗೆ ರಕ್ಷಣೆ ಕೊಡಿಸಿದ್ದೀರಾ...ಬಹುಶಃ ಇದು ನಾವೇ ಮಾಡಬೇಕಾದ್ದು ಎಮ್ದು ತೋರಿಸಿದ್ದೀರಾ...ಶುಭವಾಗಲಿ

Naveen ಹಳ್ಳಿ ಹುಡುಗ said...

ಶಿವಣ್ಣ.. ಬ್ಲಾಗ್ ಲೋಕದಲ್ಲಿ ೨ ವರ್ಷ ಕಳೆದಿದಕ್ಕೆ ಧನ್ಯವಾದಗಳು.. ತಮಗೂ ಕೂಡ ಗೌರಿ ಗಣೇಶ ಹಬ್ಬದ ಶುಭಾಶಯಗಳು... ಹೀಗೆ ಬರೆಯುತ್ತಿರಿ..

Anonymous said...

shubhashayagaLu...

Unknown said...

ಶಿವು ನಾವು ನಡೆದು ಬಂದ ಹಾದಿಯನ್ನು ಹಿಂತಿರುಗಿ ಆಗಾಗ ನೋಡಿಕೊಳ್ಳಬೇಕು. ಅದರ ತಪ್ಪು-ಒಪ್ಪುಗಳನ್ನು ಅರಿತುಕೊಳ್ಳಬೇಕು. ನಮ್ಮ ಮಟ್ಟಿಗಾದರೂ ಅದರ ವಾಸ್ತವವನ್ನು ಒಪ್ಪಿಪಿಕೊಳ್ಳಬೇಕು. ಆಗ ಮಾತ್ರ ನಮಗೆ ಹೊಸದನ್ನು ಕಲಿಯಲು, ಹೊಸದನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ನಿಮ್ಮ ಈ ಪೋಸ್ಟ್ ನೋಡಿ ನನಗನ್ನಿಸಿದ್ದು ಇದು. ನಿಮ್ಮ ಆತ್ಮಾ(ಬ್ಲಾಗ್)ವಲೋಕನ ನಮಗೆ ಮಾದರಿಯಾಗಿ ಮೂಡಿ ಬಂದಿದೆ.

shridhar said...

ಶಿವೂ ಸರ್ ,
ನಿಮ್ಮ ಎರಡು ವರ್ಷದ ಯಶಸ್ವಿ ಬ್ಲಾಗ್ ಸಾಧನೆಗೆ ನನ್ನ ಅಭಿನಂದನೆಗಳು. ಉತ್ತಮ ಲೇಖನಗಳ ಸರಮಾಲೆ ಹೀಗೆ ಮುಂದುವರಿಯಲಿ .. ನಿಮ್ಮ ಫೋಟೋ ಗಳ ಜೊತೆ ಒಬ್ಬ ಬರಹಗರನು ಹೊರಹೊಮ್ಮಿರುವುದು ನಿಮ್ಮ ಬ್ಲಾಗ್ನಿಂದ ಕಾಣಬಹುದು ..
ಪುಸ್ತಕ ಬಿಡುಗಡೆಯ ಕರೆಯೋಲೆಗೆ ಕಾಯುತ್ತಿರುತ್ತೇನೆ :) .. ಶುಭ ವಂಧನೆಗಳು.

ಶ್ರೀಧರ್ ಭಟ್

ಕ್ಷಣ... ಚಿಂತನೆ... said...

ಶಿವು ಸರ್‍, ನಿಮ್ಮ ಸ್ನೇಹಿತರ ಸ್ಫೂರ್ತಿಯಿಂದ ಪ್ರಾರಂಭವಾದ ಛಾಯಾಕನ್ನಡಿಗೆ ಒಂದು ವರ್ಷ ತುಂಬಿ ಎರಡಕ್ಕೆ ಕಾಲಿಡುತ್ತಿರುವುದು ಸಂತಸದ ವಿಚಾರ. ಈ ಛಾಯಾಕನ್ನಡಿ ಅಂತರ್ಜಾಲವೆಂಬ ಗಣಕ ಕನ್ನಡಿಯಲ್ಲಿ ಪ್ರಕಟವಾಗಲು ಕಾರಣರಾದ ಎಲ್ಲರಿಗೂ ಮತ್ತು ಅದಕ್ಕೆ ಸಹಕರಿಸಿದ, ಸಹಕರಿಸುತ್ತಿರುವವರೆಲ್ಲರಿಗೂ ಅಭಿನಂದನೆಗಳು

ನಿಮ್ಮ ಚಿತ್ರ-ಬರಹಗಳಲ್ಲಿ ಬೇಕಾದಷ್ಟು ಮಾಹಿತಿಗಳಿವೆ. ಛಾಯಾಚಿತ್ರಗಳಿಗೆ ಮಾತ್ರವೇ ಅಲ್ಲದೇ ಸಮಾಜಕ್ಕೆ ಸಂಬಂಧಿಸಿದವೂ ಸಹ ಸೂಕ್ಷ್ಮವಾಗಿ ನಿರೂಪಿಸಿದ್ದೀರಿ ಎಂದು ನನ್ನ ಅನಿಸಿಕೆ. ಒಂದು ವರ್ಷದಲ್ಲಿ ಪ್ರಕಟಿಸಿರುವ ಮುಖ್ಯವೆನಿಸುವ ಹತ್ತುಬರಹಗಳೊಡನೆ ಉಳಿದವೂ ತಮ್ಮದೇ ಆದ ರೀತಿಯಲ್ಲಿ ಓದುಗರನ್ನು ಆಕರ್ಷಿಸಿವೆ ಎಂದರೆ ತಪ್ಪಾಗದು.

ನಿಮ್ಮಿಂದ ಇನ್ನೂ ಹೆಚ್ಚಿನ ಚಿತ್ರಗಳು, ಬರಹಗಳು ಮೂಡಿಬರಲಿ ಎಂಬುದಾಗಿ....

ಸಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.

ಬಾಲು said...

ಪ್ರೀತಿಯ ಶಿವೂ ಅವರೆ,
ಇತ್ತಿಚೆಗೆ ನಿಮ್ಮ ಬರವಣಿಗೆಳು ಆಪ್ತವಾಗಿರುತ್ತವೆ.


ಬ್ಲಾಗ್ ಎರದು ವರ್ಷ ಪೂರೈಸಿದಕ್ಕೆ ಅಭಿನ೦ದನೆಗಳು. ಹ೦ದಿ ಜ್ವರಕ್ಕೆ ಗಣಪತಿ ಮತ್ತು ಗೌರಿ ಅಲ೦ಕಾರ ಚೆನ್ನಾಗಿದೆ.

ಚಿತ್ರಾ said...

ಶಿವೂ,
ಮೊದಲಿಗೆ ನಿಮ್ಮ ಬ್ಲಾಗ್ ನ ಎರಡನೇ ಹುಟ್ಟುಹಬ್ಬಕ್ಕೆ ನನ್ನ ಹಾರ್ದಿಕ ಶುಭಾಶಯಗಳು ಹಾಗೂ ಈ ಅಲ್ಪ ಕಾಲಾವಧಿಯಲ್ಲಿ ಇಷ್ಟೊಂದು ಜನರ ಮನಸೆಳೆದದ್ದಕ್ಕೆ ಅಭಿನಂದನೆಗಳು !
ನಿಮ್ಮ ಬ್ಲಾಗ್ ಗಳ highlight ನಿಮ್ಮ ಫೋಟೋಗಳು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ . ಹಾಗೆಂದು ನಿಮ್ಮ ಬರವಣಿಗೆಯೂ ಕೂಡ ಅದಕ್ಕೆ ಪೂರಕವಾಗಿರುವುದೂ ಅಷ್ಟೇ ನಿಜ !
ಇದು ಹೀಗೆಯೇ ಮುಂದುವರಿಯಲಿ ! ನಿಮ್ಮ ಬ್ಲಾಗ್ ಇಂಥಾ ಬಹಳಷ್ಟು ಜನ್ಮದಿನಗಳನ್ನು ಕಾಣಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ !

ರಾಜೀವ said...

ಹಾರ್ಧಿಕ ಶುಭಾಶಯಗಳು ಶಿವು ಸರ್.

ನಿಮ್ಮ ಚಿತ್ರಗಳು ಮತ್ತು ಅದರ ನಿರೂಪಣೆ, ಕೆಲಸದ ಒತ್ತಡದಿಂದ ಬೆಂದು ಹೋಗಿದ್ದ ನಮ್ಮ ಮನಸ್ಸನ್ನು ಮತ್ತೆ ಸಕ್ರಿಯಗೊಳಿಸುತ್ತದೆ. ನಿಮ್ಮ ಕ್ರಿಯಾಶೀಲತೆ ನನ್ನತ ಇನ್ನೆಷ್ಟು ಜನರಿಗೆ ಸ್ಫೂರ್ತಿ ನೀಡಿದೆಯೋ!!

ಒಂದು ಹತ್ತಾಗಲಿ, ಹತ್ತು ನೂರಾಗಲಿ.

Pramod P T said...

ಹಾಯ್ ಶೀವು,

ಹೀಗೆ ಬರಿತಾ ಇರಿ. ವರುಷ ಕಳೆದ ಖುಷಿಯಲ್ಲಿ ನಾವೂ ಪಾಲ್ಗೋಳ್ತಿವಿ.

Unknown said...

ಶುಭಾಶಯಗಳು ಸರ್.

shivu.k said...

ಪ್ರಕಾಶ್ ಸರ್,

ಮೊದಲು ಈ ಬ್ಲಾಗ್ ಲೋಕಕ್ಕೆ ಬಂದಾಗ ಕ್ಯಾಮೆರವೇ ನನ್ನ ಮೊದಲ ಆಸ್ತ್ರವಾಗಿತ್ತು. ನಂತರ ಅದು ಹೇಗೆ ಬರವಣಿಗೆ ಬಂತೋ ಗೊತ್ತಿಲ್ಲ. ಬಹುಶಃ ನಿಮ್ಮೆಲ್ಲರ ಪ್ರೋತ್ಸಾಹದಿಂದ ನಾನು ಹೆಚ್ಚು ಹೆಚ್ಚು ಬರೆಯುವುದರಲ್ಲಿ ತಲ್ಲೀನನಾದೆನೇನೋ...

ನಿಮ್ಮ ಸಹಕಾರ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

shivu.k said...

ಮಾಲ ಮೇಡಮ್,

ಥ್ಯಾಂಕ್ಸ್...

shivu.k said...

ಮಲ್ಲಿಕಾರ್ಜುನ್,

ನನ್ನ ಬ್ಲಾಗಿಗೆ ಒಂದು ವರ್ಷ ತುಂಬಿರುವುದು ನನಗೆ ನಂಬಲೇ ಆಗುತ್ತಿಲ್ಲ. ಈಗಷ್ಟೇ ಪ್ರಾರಂಭಿಸಿದಂತೆ ನೆನಪಾಗುತ್ತಿದೆ.
ಮೊದಲು ಇದು ನನಗೆ ಕಬ್ಬಿಣದ ಕಡಲೇ ಆಗಿತ್ತು. ನಿಮ್ಮ ತಮ್ಮ, ನೀವು ಇನ್ನೂ ಅನೇಕ ಗೆಳೆಯರು ಮಾಡಿದ ಸಹಾಯದಿಂದ ನಾನು ಬ್ಲಾಗ್ update ಮಾಡಲು ಕಲಿತಿದ್ದು.
ನನ್ನ ಒಂದು ವರ್ಷದ ಬರಹದ ಅವಲೋಕನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಸುಧೇಶ್,

ನೀವು ಬೇಸರವಾದಾಗಲೆಲ್ಲಾ ನನ್ನ ಬ್ಲಾಗಿನ ಲೇಖನವನ್ನು ಓದುತ್ತೀರೆಂದು ಹೇಳಿರುವುದು ನನಗಂತೂ ತುಂಬಾ ಖುಷಿಯಾಯ್ತು. ನನ್ನ ಬರವಣಿಗೆ ಮತ್ತು ಚಿತ್ರಗಳು ನಿಮಗೆ ಅಷ್ಟು ಇಷ್ಟವಾಗಿದ್ದರೆ ನಾನು ನಿಮಗೆ ಋಣಿ. ಬ್ಲಾಗಿನ ಕಾಮೆಂಟು ವಿಚಾರಕ್ಕೆ ಬಂದಾಗ ನೀವು ಕೂಡ ಅವರಲ್ಲಿ ಒಬ್ಬರು ಅಲ್ಲವೆ...

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

shivu.k said...

ಮತ್ತೆ ಸುದೇಶ್,

ಈ ಮಾಸ್ಕ್ ಹಾಕಿರುವ ಗೌರಿ ಗಣೇಶನ ಫೋಟೊ ತೆಗೆದಮೇಲೆ ಎಲ್ಲಾ ಪತ್ರಿಕೆಯ ಸಂಪಾದಕರಿಗೆ ಕಳುಹಿಸಿದೆ. ಅವರಿಗೆ ಇಷ್ಟವಾಗಲಿಲ್ಲವೇನೋ...ಅದಕ್ಕೆ ಪ್ರಕಟವಾಗಲಿಲ್ಲ. ಅದಕ್ಕೆ ಬ್ಲಾಗಿನ ಗೆಳೆಯರಿಗಾಗಿ ಹಾಕಿದೆ. ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ವನಿತಾ,

ನನ್ನ ಬ್ಲಾಗಿಗೆ ಒಂದು ವರ್ಷ ತುಂಬಿದಾಗ ಒಮ್ಮೆ ಇಂಥ ಅವಲೋಕನ ಬೇಕೆನಿಸಿತ್ತು. ಅದಕ್ಕೆ ನನ್ನ ಬರಹಗಳಲ್ಲಿ ನನಗೆ ಇಷ್ಟವಾದವುಗಳನ್ನು ಪಟ್ಟಿ ಮಾಡಿದಾಗ ಇವೆಲ್ಲಾ ಸಿಕ್ಕವು. ಇವುಗಳನ್ನೆಲ್ಲಾ ಬಿಡುವಾದಾಗ ಓದಿ. ನಿಮಗೆ ಖಂಡಿತ ಇಷ್ಟವಾಗುತ್ತವೆ....

ನಿಮಗೂ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.

shivu.k said...

ಉಮೇಶ್ ದೇಸಾಯಿ ಸರ್,

ಬ್ಲಾಗಿನ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ನಿಮ್ಮ ಹಾರೈಕೆ ಮುಖ್ಯ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

shivu.k said...

ವಿನುತಾ,

ಒಂದು ವರ್ಷದ ಸಂದರ್ಭದಲ್ಲಿ ನನ್ನ ಬ್ಲಾಗಿನ ಅವಲೋಕನವನ್ನು ಮೆಚ್ಚಿದ್ದೀರಿ..ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ನಿಮಗೂ ಗೌರಿ ಮತ್ತುಗಣೇಶ ಹಬ್ಬದ ಶುಭಾಶಯಗಳು.

shivu.k said...

ಮನಸು ಮೇಡಮ್,

ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆ ನನಗೆ ಟಾನಿಕ್ ಇದ್ದಂತೆ. ಇನ್ನಷ್ಟು ಕ್ಲಿಕ್ಕಿಸಲು, ಬರೆಯಲು ತೊಡಗಿಕೊಳ್ಳುತ್ತೇನೆ.

ಗೌರಿ ಮತ್ತು ಗಣೇಶನ ಮಾಸ್ಕ್ ಮೊನ್ನೆ ಕ್ಲಿಕ್ಕಿಸಿದ್ದು.

ನನ್ನ ಬ್ಲಾಗಿನ ಒಂದು ವರ್ಷದ ಸಂದರ್ಭದಲ್ಲಿ ನಿಮ್ಮ ಹಾರೈಕೆ ಹೀಗೆ ಇರಲಿ...ಧನ್ಯವಾದಗಳು.

shivu.k said...

ಮೂರ್ತಿ ಹೊಸಬಾಳೆ ಸರ್,

ನೀವೆಲ್ಲರೂ ನನ್ನ ಬ್ಲಾಗನ್ನು ಹಿಂಬಾಲಿಸುತ್ತಾ ನಿರಂತರವಾಗಿ ನೋಡುತ್ತಿರೆನ್ನುವುದೇ ನನಗೆ ಮತ್ತಷ್ಟು ಹೊಸ ವಿಚಾರಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ. ನನ್ನ ಛಾಯಾಕನ್ನಡಿ ಬ್ಲಾಗಿಗೆ ನಿಮ್ಮ ಹಾರೈಕೆ ಹೀಗೆ ಇರಲಿ...

ಧನ್ಯವಾದಗಳು.

shivu.k said...

ಮಹೇಶ ಸರ್,

ನನ್ನ ಬ್ಲಾಗಿಗೆ ನಿಮ್ಮ ಹಾರೈಕೆ ಹೀಗೆ ಇರಲಿ. ಒಂದು ವರ್ಷದ ಈ ಅವಲೋಕನದಲ್ಲಿ ನಾನು ಬರೆದಿದ್ದು ಹೇಗಿದೆ ಅಂತ ಸುಮ್ಮನೆ ಒಂದು ಹಿನ್ನೋಟ. ನೀವು ಬಿಡುವು ಮಾಡಿಕೊಂಡು ಓದಿ. ಖಂಡಿತ ಅವು ಇಷ್ಟವಾಗುತ್ತವೆ...

ನಿಮಗೂ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.

shivu.k said...

ಪ್ರಭು,

ನೀವು ಹೇಳಿದಂತೆ ನನ್ನ ಬ್ಲಾಗನ್ನು ಒಂದು ವರ್ಷ ಈ ರೀತಿ ಪೂರೈಸಿದ್ದು ನಾನೇನಾ ಅಂತ ಅನ್ನಿಸಿದೆ. ಆದರೂ ಪೂರೈಸಿರುವುದರಿಂದ ಸಂಭ್ರಮವಂತೂ ಇದ್ದೇ ಇದೆ. ನೀವು ಹೇಳಿದಂತೆ ಪ್ರಸಿದ್ದಿ ಅನ್ನುವುದು ದೊಡ್ಡ ಪದ. ಭೂಪಟ ಇನ್ನಿತರ ವಿಚಾರಗಳು ಮೊದಲು ನಾನು ಅವುಗಳ ಹಿಂದೆ ಬಿದ್ದು ತುಂಬಾ ಖುಷಿಪಟ್ಟು ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ..ಅದು ಬಿಟ್ಟು ಮತ್ತೇನು ಅದರಲ್ಲಿ ವಿಶೇಷವಿಲ್ಲ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....
ಧನ್ಯವಾದಗಳು

shivu.k said...

ಪಾಲಚಂದ್ರ,

ಛಾಯಾಕನ್ನಡಿಗೆ ಒಂದು ವರ್ಷವಾದ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ಪ್ರೋತ್ಸಾಹಿಸುತ್ತಿದ್ದೀರಿ..
ಅದಕ್ಕೆ ಧನ್ಯವಾದಗಳು.

ನೀವು ಬಹುಶಃ ತುಂಬಾ ಬ್ಯುಸಿಯಾಗಿರಬಹುದು ಅದಕ್ಕೆ ಬ್ಲಾಗಿಗೆ ಬರಲಾಗುತ್ತಿಲ್ಲವೆಂದುಕೊಂಡಿದ್ದೆ. ಆದರೂ ಅಲ್ಲಲ್ಲಿ ಬಿಡುವು ಮಾಡಿಕೊಂಡು ನಿಮ್ಮ ಪ್ರತಿಕ್ರಿಯೆ ನೀಡುತ್ತಿದ್ದೀರಿ...

ಪ್ರೇಮಿಗಳ ದಿನ ಬರೆದ ಕತೆ. ಅದು ಈಗಲೂ ನನ್ನ ತುಂಬಾ ಇಷ್ಟದ ಕತೆ. ಅದನ್ನೂ ನಾನು ಬೇರೆಯವರು ಬರೆದ ಕತೆಯೇನೋ ಅನ್ನುವಂತೆ ಓದುತ್ತೇನೆ. ಮತ್ತೆ ನನ್ನ ಎಲ್ಲಾ ಬರಹಗಳನ್ನು ಬರೆಯುವಾಗ ನಾನು ಮೊದಲು ಬರೆಯುವ ಖುಷಿಯನ್ನು ಅನುಭವಿಸುತ್ತೇನೆ. ಬರೆಯುವಾಗ ಖುಷಿಯಾಗದಿದ್ದಲಿ ಅದು ಬೇರೆಯವರಿಗೂ ಓದುವ ಖುಷಿ ಕೊಡುವುದಿಲ್ಲ. ಫೋಟೋಗ್ರಫಿಗಳಿಗಿಂತ ನನ್ನ ಬರಹಗಳು ಇತ್ತೀಚೆಗೆ ಚೆನ್ನಾಗಿವೆ ಎಂದಿದ್ದೀರಿ ಥ್ಯಾಂಕ್ಸ್..

ಮತ್ತೆ ಫೋಟೋಗ್ರಫಿ ವಿಚಾರ ಬಂದಾಗ ನೀವು ಹೇಳಿದಂತ ಫೋಟೋಗಳು ಇದ್ದರೂ ಅವುಗಳಿಗೆ ಸರಿಯಾದ ಬರಹವಿಲ್ಲದೇ ನಾನು ಬ್ಲಾಗಿಗೆ ಹಾಕುತ್ತಿಲ್ಲ. ಅದಕ್ಕೆ ತಕ್ಕಂತೆ ಸನ್ನಿವೇಶ, ಅನುಭವ ಆದಾಗ ಖಂಡಿತ ಆ[ಪಿಕ್ಟೋರಿಯಲ್] ಫೋಟೊಗಳನ್ನು ಹಾಕುತ್ತೇನೆ.

ಮತ್ತೊಮ್ಮೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ನನ್ನ ಬ್ಲಾಗಿಗೆ ನಿಮ್ಮ ಆಶೀರ್ವಾದ ಹೀಗೆ ಇರಲಿ. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವಂತೆ ನನ್ನ ಬರಹಗಳಲ್ಲಿ ಆರಿಸಿದ್ದೆ ಹತ್ತು. ಆದ್ರೆ ನೀವು ನನ್ನೆಲ್ಲಾ ಬರಹ ಮತ್ತು ಚಿತ್ರಗಳು ನಿಮ್ಮೆ ಮೆಚ್ಚಿಗೆಯಾದವು ಅಂತ ಹೇಳಿದ್ದೀರಿ. ಅದರಿಂದ ಒಂದು ಖುಷಿಯಾದರು ಮತ್ತೊಂದು ಕಡೆ ಮುಂದೆಯೂ ಹೀಗೆ ನೀವು ಸದಾ ಕಾಲ ಮೆಚ್ಚುವಂತಹ ಬರಹ ಮತ್ತು ಫೋಟೋಗಳನ್ನು ಕೊಡಲು ಸಾಧ್ಯವೇ ಅಂತ ದಿಗಿಲಾಗುತ್ತದೆ.

ಧನ್ಯವಾದಗಳು.

shivu.k said...

ಜಲನಯನ ಸರ್,

ಗಣೇಶ ಮತ್ತು ಗೌರಿಗೆ ಮಾಸ್ಕ್ ಹಾಕಿದ ಫೋಟೊ ತೆಗೆದ ಮೇಲೆ ಮೊದಲು ಒಂದು ಪತ್ರಿಕೆಗೆ ಕಳಿಸಿದೆ. ಅವರು ಇವರಿಗೆ ಫೋನ್ ಮಾಡಿ, ಅವರಿಗೆ ಫೋನ್ ಮಾಡಿ ಅಂತ ಹೇಳುವಾಗ ನನಗೆ ಬೇಸರವಾಯಿತು. ಒಂದು ವಿಭಿನ್ನ ಫೋಟೊವನ್ನು ತೆಗೆದುಕೊಟ್ಟರೆ ಚೆನ್ನಾಗಿದ್ದಲ್ಲಿ ಪ್ರಕಟಿಸುತ್ತೇವೆ ಅಂತಲೂ ಇಲ್ಲದಿದ್ದಲ್ಲಿ ಚೆನ್ನಾಗಿಲ್ಲವೆಂದು ನೇರವಾಗಿ ಹೇಳಿಬಿಡಬೇಕು. ಅದುಬಿಟ್ಟು ಫೋನ್ ಮಾಡಿ ಮರ್ಜಿ ಮಾಡಿ ಅಂದ್ದಿದ್ದು ನನಗಿಷ್ಟವಾಗದೆ ಸುಮ್ಮನಾಗಿಬಿಟ್ಟೆ. ಮತ್ತು ಇದು ಎಲ್ಲಾ ದಿನಪತ್ರಿಕೆಯವರ ಕತೆಯೂ ಹೀಗೆ ಆಗಿದೆ. ಅದಕ್ಕೆ ನಮ್ಮ ಬ್ಲಾಗ್ ಗೆಳೆಯರಿಗೆ ತೋರಿಸೋಣವೆಂದು ಬ್ಲಾಗಿನಲ್ಲಿ ಹಾಕಿದೆ.

ಮತ್ತೆ ನಾನು ಪೋಟೊಗಳನ್ನು ಹಾಕಲು ಬ್ಲಾಗ್ ತೆರೆದರೂ ಕೊನೆಗೆ ಇಷ್ಟೆಲ್ಲಾ ಬರೆದು ಗೀಚಿರುವುದು ನಿಮ್ಮೆಲ್ಲರ ಪ್ರೋತ್ಸಾಹದಿಂದ.

ಮತ್ತೆ ನನ್ನ ಬ್ಲಾಗಿಗೆ ಈಗ ಒಂದು ವರ್ಷ ತುಂಬಿದೆ. ನೀವು ಮರೆತು ಎರಡು ವರ್ಷ ಅಂತ ಪ್ರತಿಕ್ರಿಯಿಸಿದ್ದೀರಿ...

ಧನ್ಯವಾದಗಳು.

shivu.k said...

ನವೀನ್,

ನಿಮಗೂ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.

ಮತ್ತೆ ನನ್ನ ಬ್ಲಾಗಿಗೆ ಈಗ ಒಂದು ವರ್ಷವಾಗಿದೆ. ಎರಡು ವರ್ಷವಲ್ಲ. ಮತ್ತೊಮ್ಮೆ ನೋಡಿ.

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು.

shivu.k said...

ವಿಜಯ ಕನ್ನಂತ ಸರ್,

ಧನ್ಯವಾದಗಳು.

shivu.k said...

ಸತ್ಯನಾರಾಯಣ ಸರ್,

ಛಾಯಕನ್ನಡಿ ಬ್ಲಾಗಿನಿಂದಾಗಿ ನಾನು ಸ್ವಲ್ಪ ಬರೆಯಲು ಯತ್ನಿಸಿದ್ದೇನೆ. ಒಂದು ವರ್ಷವಾದ ನಂತರ ಒಮ್ಮೆ ನಾನು ಬರೆದಿದ್ದು ಹೇಗಿದೆ ಅಂತ ಒಬ್ಬ ಓದುಗನಾಗಿ ನೋಡಿಕೊಳ್ಳಬೇಕು ಅನ್ನಿಸಿತು. ಅದರ ಒಂದು ಸಣ್ಣ ಪ್ರಯತ್ನವಷ್ಟೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

shivu.k said...

ಶ್ರೀಧರ್,

ನೀವು ಮತ್ತೊಮ್ಮೆ ನನ್ನ ಈ ಲೇಖನ ಓದಿ. ನನ್ನ ಬ್ಲಾಗಿಗೆ ಒಂದು ವರ್ಷವಷ್ಟೇ ಆಗಿದೆ. ಮತ್ತೆ ನನ್ನ ಬರಹ ಮತ್ತು ಚಿತ್ರಗಳನ್ನು ಮೆಚ್ಚುವವರಲ್ಲಿ ನೀವು ಒಬ್ಬರು. ಹೀಗೆ ನಿಮ್ಮ ಪ್ರೋತ್ಸಾಹವಿರಲಿ...

ಧನ್ಯವಾದಗಳು.

shivu.k said...

ಕ್ಷಣ ಚಿಂತನೆ ಸರ್,

ಒಂದು ವರ್ಷದ ಹಿಂದೆ ಬ್ಲಾಗ್, ಇಂಟರ್‍ನೆಟ್ ಇತ್ಯಾದಿಗಳೆಲ್ಲಾ ಗೊತ್ತೆ ಇರಲಿಲ್ಲ. ಫೋಟೊ ಕ್ಲಿಕ್ಕಿಸುತ್ತಾ, ಅದರ ಬಗ್ಗೆ ಬರೆದ ಚಿತ್ರ ಲೇಖನಗಳನ್ನು ಪತ್ರಿಕೆಗಳಿಗೆ ಕಳುಹಿಸುತ್ತಾ ಸುಮ್ಮನಿದ್ದೆ. ನನ್ನ ಗೆಳೆಯರ ಒತ್ತಾಯದ ಮೇರೆ ತೆರೆದ ಬ್ಲಾಗ್ ಹೀಗೆಲ್ಲಾ ಬರೆಸಿಕೊಳ್ಳುತ್ತದೆಂದು ಗೊತ್ತಿರಲಿಲ್ಲ.

ಸಾವಿರ ಬರೆದರೂ ಅದಕ್ಕೆ ಓದುವವರೂ ಇರಲೇಬೇಕಲ್ಲವೇ. ನನ್ನ ಬರಹವನ್ನು ನೀವೆಲ್ಲಾ ಓದಿ ಪ್ರೋತ್ಸಾಹಿಸುತ್ತಿದ್ದೀರಿ...
ಒಂದಂತೂ ನಿಜ ಬರೆಯುವಾಗಿನ ಆನಂದವನ್ನು ಚೆನ್ನಾಗಿ ಅನುಭವಿಸಿದ್ದೇನೆ. ಮತ್ತೆ ಹಾಗೆ ಬರೆಯುತ್ತಾ ಸಮಾಜದ ಅನೇಕ ಸೂಕ್ಷ್ಮ ವಿಚಾರಗಳು ಗೊತ್ತಾಗುತ್ತಿದ್ದಂತೆ ಅದೆಷ್ಟು ಸಂತೋಷವಾಗುತ್ತೆ ಸರ್.

ಮುಂದೆಯೂ ನಿಮ್ಮ ಸಹಕಾರ ಹೀಗೆಯೆ ಇರಲಿ.

shivu.k said...

ಬಾಲು ಸರ್,

ಹಂದಿ ಜ್ವರದ ಮಾಸ್ಕ್ ಗಣೇಶ ಗೌರಿಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ನನ್ನ ಬರಹವನ್ನು ಇಷ್ಟಪಟ್ಟು ಓದುತ್ತೇನೆ ಅಂದಿದ್ದೀರಿ ಥ್ಯಾಂಕ್ಸ್..

ಮತ್ತೆ ನನ್ನ ಬ್ಲಾಗಿಗೆ ಒಂದು ವರ್ಷವಷ್ಟೇ ತುಂಬಿದೆ ನೀವು ಕೂಡ ಎರಡು ವರ್ಷವೆಂದುಕೊಂಡಿದ್ದೀರಿ..

ಧನ್ಯವಾದಗಳು.

ಮುತ್ತುಮಣಿ said...

chayakannadiya birthdayge abhinandanegalu... heege belaguttirali kannadi... :)

shivu.k said...

ಚಿತ್ರಾ ಮೇಡಮ್,

ನೀವು ಕೂಡ ನನ್ನ ಬ್ಲಾಗ್ ಎರಡು ವರ್ಷ ಪೂರೈಸಿದೆ ಅಂತಾನೆ ಬರೆದಿದ್ದೀರಿ. ಮತ್ತೊಮ್ಮೆ ಓದಿನೋಡಿ.

ನನ್ನ ಬ್ಲಾಗಿನ ಚಿತ್ರಗಳು ಮತ್ತು ಲೇಖನವನ್ನು ಇಷ್ಟಪಟ್ಟಿದ್ದೀರಿ...ನಿಮ್ಮೆಲ್ಲರ ಪ್ರೋತ್ಸಾಹದಿಂದಲೇ ಛಾಯಾಕನ್ನಡಿ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಹಂಬೆಗಾಲಿಡುತ್ತಿದೆ. ನಿಮ್ಮ ಸ್ಫ್ರೂರ್ತಿಯುತ ಮಾತಿಗೆ ಧನ್ಯವಾದಗಳು.

shivu.k said...

ರಾಜೀವ್ ಸರ್,

ನನ್ನ ಬರಹಗಳು ಮತ್ತು ಫೋಟೊಗಳು ನಿಮಗೆ ಸ್ಪೂರ್ತಿ ನೀಡುತ್ತವೆ ಅಂದಿದ್ದೀರಿ. ಬಲು ದೊಡ್ಡ ಮಾತು. ನಿಮ್ಮ ಆರೈಕೆ, ಪ್ರೋತ್ಸಾಹ ಹೀಗೆ ಇರಲಿ.

ಧನ್ಯವಾದಗಳು.

shivu.k said...

ಹಾಯ್ ಪ್ರಮೋದ್,

ನೀವು ಬಿಡುವು ಮಾಡಿಕೊಂಡು ಬ್ಲಾಗಿಗೆ ಬಂದಿದ್ದು ಖುಷಿಯಾಯ್ತು...ಧನ್ಯವಾದಗಳು.

shivu.k said...

ರೂಪ ಮೇಡಾಮ್,

ಧನ್ಯವಾದಗಳು.

shivu.k said...

ಮುತ್ತು ಮಣಿ ಮೇಡಮ್,

ನನ್ನ ಛಾಯಾಕನ್ನಡಿಯನ್ನು ಹಿಂಬಾಲಿಸುತ್ತಿರುವವರಲ್ಲಿ ನೀವು ಒಬ್ಬರು. ಅದಕ್ಕೆ ಒಂದು ವರ್ಷವಾದ ಸಂದರ್ಭದಲ್ಲಿ ಹಾರೈಸಿದ್ದೀರಿ. ಧನ್ಯವಾದಗಳು.

ಮತ್ತೆ ನಿಮ್ಮ ಬ್ಲಾಗಿನ ಸರಣಿ ಕತೆಯನ್ನು ಮೊದಲು ನಾಲ್ಕು ಓದಿ ನಂತರ ಅದರ ಲಿಂಕ್ ತಪ್ಪಿದ್ದರಿಂದ ಓದಲಾಗಲಿಲ್ಲ. ಕ್ಷಮೆಯಿರಲಿ. ಮತ್ತೆ ಮೊದಲಿನಿಂದ ಓದಿದರೆ ಚೆನ್ನಾಗಿ ಅರ್ಥವಾಗುತ್ತದೆ. ಅದಕ್ಕೆ ಸುಮ್ಮನಾದೆ..ಮುಂದೆ ಬಿಡುವು ಮಾಡಿಕೊಂಡು ಓದುತ್ತೇನೆ..

ಧನ್ಯವಾದಗಳು.

ರೂpaश्री said...

ಶಿವು ಅವರೆ,
ಛಾಯಕನ್ನಡಿಗೆ ವರುಷ ತುಂಬಿದಕ್ಕೆ ಅಭಿನಂದನೆಗಳು!! ಹೀಗೇ ಮುಂದುವರೆಯಲಿ..

ನಿಮ್ಮ ಬ್ಲಾಗಿಗೆ ಮೊದಲು ಬಂದಾಗ ನಿಮ್ಮ ಫೋಟೋಗಳಿಗೆ ಮಾರುಹೋಗಿ ಫಾಲೋ ಮಾಡಲು ಶುರು ಮಾಡಿದೆ. ನಂತರ ನಿಮ್ಮ ಲೇಖನವೂ ಇಷ್ಟವಾಗುತ್ತಾ ಹೋಯಿತು.
ಬ್ಲಾಗಿನ ವರ್ಷೋತ್ಸಹ ಆಚರಿಸುತ್ತಾ ಹಿಂದಿನ ಲೇಖನಗಳ ಬಗ್ಗೆ ಅವಲೋಕನ ಮಾಡಿದ್ದು ಚೆನ್ನಾಗಿದೆ. ನಿಮ್ಮ ಟಾಪ್ ೧೦ ರಲ್ಲಿ ನಾನು ಕೆಲವನ್ನು ಓದಿಲ್ಲ , ಟೈಮ್ ಸಿಕ್ಕಾಗ ಓದಿ ಕಮೆಂಟಿಸುವೆ.

ನಿಮ್ಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು(ತಡವಾಗಿ)..ನೀವು ಹಾಕಿರುವ ಗಣಪನ ಫೋಟೋ ಸಕಾಲಿಕವೆನಿಸಿದರೂ, ಜನರನ್ನು ಎಚ್ಚರಿಸುವ ದೃಷ್ಟಿಯಿಂದ ಮಾಡಿದ್ದಾದರೂ ಯಾಕೋ ಇಂಥಹ ಗಣೇಶನ ವಿಗ್ರಹಗಳು ಇಷ್ಟವಾಗುದಿಲ್ಲ!

Prashanth Arasikere said...

hi shivu,

hegidiira, nimma hale nenapu hagu nimage sahaya madiddavarenella nenansi kondiddira,nimma haleya baraha galennela vimarshe madiddira,hige nimma payana sagali hagu nimma baraha galu ellarannu serali endu haraisuve..

Shweta said...

ಶಿವೂ ಸರ್,
ಹ್ಯಾಪಿ ಬರ್ತ್ ಡೇ ನಿಮ್ಮ ಬ್ಲಾಗ್ ಗೆ...

ನೀವು ಸೆಲೆಕ್ಟ್ ಮಾಡಿದ ಲೇಖನ ಗಳಲ್ಲಿ ಹಲವನ್ನು ಓದಿದೆ ..ಚೆನ್ನಾಗಿದೆ
ಹೀಗೆ ಬರೆಯುತ್ತಾ , ಸುಂದರವಾದ ಫೋಟೋ ಗಳನ್ನೂ ನಮಗೆ ತೋರಿಸುತ್ತಾ ಸದಾ ಖುಷಿಯಿಂದಿರಿ ಸರ್.
ಪುಸ್ತಕ ಯಾವಾಗ ಬರುತ್ತೆ ?

Umesh Balikai said...
This comment has been removed by the author.
Umesh Balikai said...

ಶಿವು ಸರ್,

ಕೆಲಸದ ಒತ್ತಡದಿಂದಾಗಿ ತಡವಾಗಿ ಪ್ರತಿಕ್ರಿಯಿಸುತ್ತಿದ್ದುದಕ್ಕೆ ಕ್ಷಮೆಯಿರಲಿ. ಮೊದಲು ನಿಮ್ಮ ಬ್ಲಾಗ್ ನ ಎರಡನೇ ವಾರ್ಷಿಕೋತ್ಸವದ ಮತ್ತು ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ನೀವು ಇಡುತ್ತಿರುವ ಅಂಬೆಗಾಲು ನಾಗಾಲೋಟಕ್ಕೆ ಪರಿವರ್ತನೆಯಾಗಿ ನಿಮ್ಮ ಬ್ಲಾಗ್ ಪ್ರಯಾಣ ಇನ್ನೂ ಹೆಚ್ಚು ವೇಗ ಪಡೆದುಕೊಳ್ಳಲಿ, ನಮಗೆ ಇನ್ನೂ ಹೆಚ್ಚಿನ ಜ್ಞಾನಾರ್ಜನೆ ನಿಮ್ಮಿಂದಾಗಲಿ ಎಂದು ಆಶಿಸುತ್ತೇನೆ.

- ಉಮೇಶ್

ವಿ.ರಾ.ಹೆ. said...

abhinandanegaLu shivu.

nimma chanda chandada chitralekhanagaLu bahaLa ishTa.

nange photography bagge tilidukolluva aasakti huttiddE nimma blogininda.

bareyuttiri. all d best.. happy blogging... :)

PARAANJAPE K.N. said...

ಶಿವೂ, ನೀವು ಬ್ಲಾಗಿಗರಾಗಿ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಸ೦ದರ್ಭದಲ್ಲಿ ಶುಭ ಹಾರೈಸುವೆ. ನಿಮ್ಮ ಮತ್ತು ನಿಮ್ಮ೦ಥವರ ಬ್ಲಾಗ್ ಗಳನ್ನೂ ನೋಡಿಯೇ ಬ್ಲಾಗಿಸಲು ಆರ೦ಭಿಸಿದವನು ನಾನು. ಒ೦ದರ್ಥದಲ್ಲಿ ನೀವೇ ನನಗೆ ಸ್ಪೂರ್ತಿ. ನಿಮ್ಮ ಛಾಯಾಚಿತ್ರಗಳ೦ತೆ ನಿಮ್ಮ ಬಾವನಿಗೆ ಕೂಡ ಪಕ್ವವಾಗುತ್ತ ಬ೦ದಿದೆ. ಶುಭವಾಗಲಿ.

PARAANJAPE K.N. said...

ಶಿವೂ,
"ಬರವಣಿಗೆ" ಎ೦ದಿರ ಬೇಕಾದಲ್ಲಿ ತಪ್ಪಾಗಿ "ಬಾವನಿಗೆ" ಎ೦ದು ಕಾಣಿಸಿಕೊ೦ಡಿದೆ. ಅದನ್ನು ಈ ಮೂಲಕ ತಿದ್ದುಪಡಿ ಮಾಡುತ್ತಿದ್ದೇನೆ.

ಭಾರ್ಗವಿ said...

ವರ್ಷ ತುಂಬಿದಕ್ಕೆ ಅಭಿನಂದನೆಗಳು. ಅಂಬೆಗಾಲು ಇಡಲು ಶುರುವಾದ ಮೇಲೆ ನಡೆಯುವುದು,ಓಡುವುದು ತಡವಿಲ್ಲ. ಹಾಗಾದ್ರೆ ಛಾಯಾಕನ್ನಡಿಯಲ್ಲಿ ಇನ್ನು ಹೆಚ್ಚಿನ ಬರಹ ಮತ್ತು ಚಿತ್ರಗಳನ್ನು ನಿರೀಕ್ಷಿಸುತ್ತೇನೆ:-).

ಚಿತ್ರಾ said...

ಶಿವೂ,
ದಯವಿಟ್ಟು ಕ್ಷಮಿಸಿ. ನಿಮ್ಮ ಸ್ನೇಹಿತರ ಬಳಗವನ್ನು ನೋಡುವಾಗ ನಿಮ್ಮ ಬ್ಲಾಗ್ ಈಗ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ ಎಂದು ಅನಿಸಲೇ ಇಲ್ಲ !
ನನ್ನಿಂದ ಮತ್ತೊಮ್ಮೆ ಶುಭಾಶಯಗಳು !

Sushrutha Dodderi said...

shubhashaya shivu..

ಜಲನಯನ said...

ಶಿವು, ನಿಮ್ಮ ಬ್ಲಾಗಿಗೆ ಒಂದು ವರ್ಷ ವಯಸ್ಸೇ..?? ನನಗೆ ಈಗ ನೀವು ನನ್ನ ಪ್ರತಿಕ್ರಿಯೆಗೆ ಪ್ರತಿಪ್ರತಿಕ್ರಿಯೆ ನೀಡಿದಾಗಲೇ ತಿಳಿದದ್ದು. ಅಂದರೆ ನಿಮ್ಮ ಬ್ಲಾಗಿನ ಜನಪ್ರಿಯತೆ ಎರಡುಪಟ್ಟು ಎಂದಾಯ್ತು...ಡಬಲ್ ಶುಭಾಷಯ..!!! ಹಹಹ...ಪತ್ರಿಕೆಯವರಿಗೂ ಯಾರದೋ ಭಯ!! ಬಂದು ಕುರ್ಚಿ, ಮೇಜು, ಉಪಕರಣ ಒಡೆದು ಹೋದರೆ..!!?? ನಮ್ಮ ಮೆಚ್ಚುಗೆ ಪ್ರೋತ್ಸಾಹ ನಿಮಗೆ ಎಂದೂ ಸಿಗುತ್ತೆ...ಮುಂದುವರೆಯಲಿ ನಿಮ್ಮ ಮನದ ಮತ್ತು ಕಣ್ಣಿನ (ಕ್ಯಾಮರಾ) ಮಾತು.

ದೀಪಸ್ಮಿತಾ said...

ಶಿವು ಸರ್, ಮೊದಲ ವರ್ಷದ ಹುಟ್ಟು ಹಬ್ಬದ ಶುಭಾಷಯಗಳು. ನಿಮ್ಮ ಫೋಟೋಗಳಷ್ಟೇ ನಿಮ್ಮ ಲೇಖನಗಳು ಒಳ್ಳೆಯವು. ತಿಳಿಹಾಸ್ಯದಿಂದ ರಂಜಿಸುತ್ತವೆ. ಫೋಟೋಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ನಿಮ್ಮಿಂದ ಇನ್ನಷ್ಟು ಅದ್ಭುತ ಫೋಟೋಗಳು, ರಂಜನೆಯ ಲೇಖನಗಳನ್ನು ನಿರೀಕ್ಷಿಸುತ್ತಿದ್ದೇನೆ

ಸಿಂಧು sindhu said...

ಶಿವ್,

ನಿಮ್ಮ ಬ್ಲಾಗ್ ನೋಡುವುದೇ ಒಂದು ಖುಶಿ.
ಸಂತಸದ ಸಮಯದಲ್ಲಿ ನನ್ನ ಶುಭಹಾರೈಕೆ.
ಹೀಗೇ ಪೋಸ್ಟ್ ಮಾಡುತ್ತಿರಿ ನಿಮ್ಮ ದೃಶ್ಯ ಕಾವ್ಯಗಳನ್ನು.

ಪ್ರೀತಿಯಿಂದ
ಸಿಂಧು

ಪಾಚು-ಪ್ರಪಂಚ said...

Happy Birthday " Chaayakannadi".

ಶಿವೂ ಅವರೇ,
ಅಭಿನಂದನೆಗಳು. ಹೊಸತನದ ನಿಮ್ಮ ಸುಂದರ ಚಿತ್ರ ಲೇಖನ ಸರಣಿ ಹೀಗೆ ಮುಂದುವರಿಯಲಿ.

Harisha - ಹರೀಶ said...

ಗೌರಿ-ಗಣೇಶ ಚಿತ್ರ ಸಖತ್ತಾಗಿದೆ :-)

b.saleem said...

ಶಿವು ಸರ್,
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

Laxman (ಲಕ್ಷ್ಮಣ ಬಿರಾದಾರ) said...

ಪ್ರೀತಿಯ ಶಿವು ಅವರೆ,
ಅಭಿನಂದನೆಗಳು ,
ನಿಮ್ಮ ಸಕ್ರಿಯವಾದ ಬ್ಲಾಗ ನಿರ್ವಹಣೆಯ ಒಂದು ವರುಷಕ್ಕೆ.
ಉತ್ತಮವಾದ ಛಾಯಾಚಿತ್ರಗಳನ್ನೋಳಗೊಂಡ ಬರಹಗಳನ್ನ ಬರೆಯುತ್ತಾ ಮತ್ತು ಎಲ್ಲರ ಬ್ಲಾಗಿಗೆ ಪ್ರತಿಕ್ರಿಯಿಸುತ್ತಾ
ನಿಮ್ಮದೆ ಆದ ಒಂದು ಬಳಗ ಸೃಷ್ಟಿಸಿಕೊಡಿದ್ದಿರಾ.
ಹೀಗೆ ಮುಂದುವರಿಸಿ,
ನಿಮ್ಮ ಈ ಸ್ನೇಹಿತರ ವೃಂದ ಚಿರಕಾಲ ಹೀಗೆ ಇರಲಿ ಎಂದು ಆಶಿಸುವ
ಲಕ್ಷ್ಮಣ

shivu.k said...

ರೂಪಶ್ರಿ,

ನೀವು ನನ್ನ ಬ್ಲಾಗ್ ಫಾಲೋ ಮಾಡುತ್ತಿರುವುದು ನನಗೆ ಖುಷಿಯ ಸಂಗತಿ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಹೀಗೆಲ್ಲಾ ಆಗುತ್ತಿದೆಯೋ ಹೊರತು ಇಲ್ಲಿ ನನ್ನದೇನು ಹೆಗ್ಗಳಿಕೆಯಿಲ್ಲ. ಮತ್ತೆ ನನ್ನ ಮೆಚ್ಚಿನ ಹತ್ತು ಲೇಖನಗಳಲ್ಲಿ ನೀವು ಯಾವುದನ್ನು ಓದಿಲ್ಲವೋ ಅದನ್ನು ಬಿಡುವಿನಲ್ಲಿ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ನನ್ನ ಫೋಟೋಗಳನ್ನು ಮೆಚ್ಚಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
ಗಣೇಶ ಮತ್ತು ಗೌರಿಗೆ ಮಾಸ್ಕ್ ಹಾಕಿರುವ ಫೋಟೋಗಳು ನನಗೂ ಇಷ್ಟವಿಲ್ಲ. ಅದ್ರೆ ಪ್ರಸ್ತುತ ಸ್ಥಿತಿಯಲ್ಲಿ ಅಂತವೂ ಬೇಕಲ್ಲವೇ....
ಕಳೆದ ಮೂರು ದಿನದಿಂದ ನೆಟ್ ತೊಂದರೆಯಿಂದಾಗಿ ನನ್ನ ಅನೇಕ ಕೆಲಸಗಳು ಮುಂದೆ ಹೋದವು.
ಧನ್ಯವಾದಗಳು.

shivu.k said...

ಪ್ರಶಾಂತ್,

ನನ್ನ ಬ್ಲಾಗಿಗೆ ಒಂದು ವರ್ಷ ತುಂಬಿದ ಸಮಯದಲ್ಲಿ ನನಗೆ ಪ್ರೋತ್ಸಾಹ ನೀಡಿದವರನ್ನು ನೆನಪಿಸಿಕೊಳ್ಳಬೇಕಲ್ಲವೇ. ಹಾಗೆ ನೀವು ನನ್ನ ಬ್ಲಾಗನ್ನು ಪ್ರತಿನಿತ್ಯ ನೋಡುವವರಲ್ಲಿ ಒಬ್ಬರು. ಧನ್ಯವಾದಗಳು ಹೀಗೆ ಬರುತ್ತಿರಿ...

shivu.k said...

ಶ್ವೇತಾ ಮೇಡಮ್,

ಧನ್ಯವಾದಗಳು.

ನನ್ನ ಬ್ಲಾಗಿನ ನನ್ನ ಮೆಚ್ಚಿನ ಹತ್ತು ಲೇಖನಗಳನ್ನು ಓದಿದ್ದೇನೆ ಅಂದಿದ್ದು ನನಗು ಸಂತೋಷದ ವಿಚಾರ. ನಿಮ್ಮ ಪ್ರೋತ್ಸಹ ಹೀಗೆ ಇರಲಿ...

shivu.k said...

ಉಮೇಶ್ ಸರ್,

ನೀವು ನನ್ನ ಬ್ಲಾಗಿಗೆ ತಡವಾಗಿಲ್ಲ. ಏಕೆಂದರೆ ನಾನು ಪೋಸ್ಟ್ ಮಾಡಿ ಐದು ದಿನಗಳಷ್ಟೇ ಕಳೆದಿವೆ. ನೀವು ನನ್ನ ಹೊಸ ಲೇಖನಗಳನ್ನು ಇಷ್ಟ ಪಟ್ಟು ಓದಿ ಪ್ರತಿಕ್ರಿಯಿಸುವವರಲ್ಲಿ ನೀವು ಒಬ್ಬರು. ಮುಂದೆಯೂ ನನ್ನ ಛಾಯಾಕನ್ನಡಿಗೆ ಹೀಗೆ ನಿಮ್ಮ ಪ್ರೋತ್ಸಾಹವಿರಲಿ....

ಧನ್ಯವಾದಗಳು.

shivu.k said...

ವಿಕಾಶ್,

ಫೋಟೊಗ್ರಫಿ ಬಗ್ಗೆ ಆಸಕ್ತಿ ಬಂದಿದ್ದೆ ನನ್ನ ಬ್ಲಾಗಿಂದ ಎನ್ನುವ ಮಾತು ನನಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೊತ್ಸಾಹ ಮುಂದೆಯೂ ಹೀಗೆ ಇರಲಿ...
ಧನ್ಯವಾದಗಳು.

shivu.k said...

ಪರಂಜಪೆ ಸರ್,

ನನ್ನ ಬ್ಲಾಗಿನ ಹೊಸ ಪೋಸ್ಟಿಂಗ್ ಮೊದಲು ಓದುವುದರಲ್ಲಿ ನೀವು ಒಬ್ಬರು. ಮತ್ತೆ ನನ್ನ ಬ್ಲಾಗನ್ನು ನೋಡಿಕೊಂಡು ನಿಮಗೂ ಬ್ಲಾಗ್ ಮಾಡುವ ಆಸೆಯಾಯಿತೆಂದು ಹೇಳಿದ್ದೀರಿ. ನಾನು ನಿಮ್ಮಂತೆ ಅನೇಕರ ಬ್ಲಾಗ್ ನೋಡಿಯೇ ಬ್ಲಾಗ್ ಮಾಡುವ ಆಸೆಯುಂಟಾಗಿದ್ದು. ಈ ಪ್ರಕ್ರಿಯೆ ಒಬ್ಬರಿಂದ ಒಬ್ಬರಿಗೆ ನಡೆಯುತ್ತಿರುತ್ತದೆ. ನನ್ನ ಬ್ಲಾಗಿಗೆ ಒಂದು ವರ್ಷ ತುಂಬಿದ ಈ ಸಂದರ್ಭದಲ್ಲಿ ನೀವು ಆಗಾಗ ನನ್ನ ಬರವಣಿಗೆಯ ಆಕ್ಷರಗಳ ತಪ್ಪುಗಳನ್ನು ತಿದ್ದಿ ಸಹಕರಿಸಿದ್ದೀರಿ...
ನಿಮ್ಮ ಹೊಗಳಿಕೆಯ ಜೊತೆಗೆ ಆಗಾಗ ತಿದ್ದುವಿಕೆ ಹೀಗೆ ಮುಂದುವರಿಯಲಿ....
ಧನ್ಯವಾದಗಳು.

shivu.k said...

ಭಾರ್ಗವಿ ಮೇಡಮ್,

ಅಂಬೆಗಾಲು ಇಟ್ಟ ಮೇಲೆ ಇನ್ನೂ ಓಡುವುದು ತಡವಿಲ್ಲವೆಂದಿದ್ದೀರಿ...ಥ್ಯಾಂಕ್ಸ್...

ಛಾಯಾಕನ್ನಡಿಗೆ ಒಂದು ಸಂದರ್ಭದಲ್ಲಿ ನೀವು ಬಂದಿದ್ದು ತುಂಬಾ ಖುಷಿ...ಹೀಗೆ ಬರುತ್ತಿರಿ...

shivu.k said...

ಚಿತ್ರಾ ಮೇಡಮ್,

ಜನಪ್ರಿಯತೆ ನೋಡಿ ಎರಡನೇ ವರ್ಷ ಅಂದಿದ್ದು ಅಂತ ಹೇಳಿದ್ದೀರಿ...ತೊಂದರೆಯಿಲ್ಲ. ನನ್ನ ಬ್ಲಾಗಿಗೆ ನೀವು ಮತ್ತೆ ಬಂದಿದ್ದು ಖುಷಿ. ಇಂಥ ಜನಪ್ರಿಯತೆಗೆ ಕಾರಣಕರ್ತರಲ್ಲಿ ನೀವು ಒಬ್ಬರು ಅಲ್ಲವೇ...

shivu.k said...

ಸುಶ್ರುತಾ,

ಧನ್ಯವಾದಗಳು.

shivu.k said...

ಜಲನಯನ ಸರ್,

ನನ್ನ ಬ್ಲಾಗ್ ಎರಡುವರ್ಷವಾಯಿತೆಂದು ಹೇಳಿದವರಲ್ಲಿ ನೀವು ಒಬ್ಬರು. ಆದ್ರೆ ಒಂದೇ ವರ್ಷವಾಗಿದೆ. ಆದನ್ನು ಮತ್ತೆ ಹೇಳಲು ಮತ್ತೊಮ್ಮೆ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್..
ಪತ್ರಿಕೆಯವರಲ್ಲಿ ಹೊಸ ವಿಚಾರವನ್ನು ಈಗ ಪ್ರೋತ್ಸಾಹಿಸುವುದಿಲ್ಲ. ಕಾರಣವನ್ನು ತಿಳಿದಿಲ್ಲ. ಇದು ನನ್ನ ಹೀಗಿನ ಅನುಭವದ ಮಾತು. ಒಂದು ೯ ತಿಂಗಳ ನಂತರ ಸುಧಾ ವಾರಪತ್ರಿಕೆಯಲ್ಲಿ ಕೇರಳ ಬೋಟ್ ರೇಸ್ ಬಗ್ಗೆ ನನ್ನ ಚಿತ್ರ ಲೇಖನ ಬಂದಿದೆ ನೋಡಿ. ಓಣಂ ಬರದಿದ್ದಲ್ಲಿ ಅದು ಬರುತ್ತಿರಲ್ಲವಂತೆ...

ಧನ್ಯವಾದಗಳು.

shivu.k said...

ಕುಲದೀಪ್ ಸರ್,


ನನ್ನ ಬ್ಲಾಗಿನ ಹೊಸ ಲೇಖನ ಮತ್ತು ಫೋಟೋ ನಿಮಗೆ ಇಷ್ಟವೆಂದು ಹೇಳಿರುವುದು ನನಗೆ ಮತ್ತಷ್ಟು ಹೊಸ ಜವಾಬ್ದಾರಿಯನ್ನು ತಂದಿದೆ. ಬ್ಲಾಗಿನ ಒಂದು ವರ್ಷದ ಸಂದರ್ಭದಲ್ಲಿ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ಧನ್ಯವಾದಗಳು.

shivu.k said...

ಸಿಂಧು ಮೇಡಮ್,

ನನ್ನ ಬ್ಲಾಗಿನ ಚಿತ್ರಲೇಖನವನ್ನು ನೋಡುವುದೇ ಖುಷಿ ಎಂದಿದ್ದೀರಿ. ಥ್ಯಾಂಕ್ಸ್...ಒಂದು ವರ್ಷದ ಸಂದರ್ಭದಲ್ಲಿ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

shivu.k said...

ಪ್ರಶಾಂತ್ ಭಟ್,

ಒಂದು ವರ್ಷದ ಸಂದರ್ಭದಲ್ಲಿ ನಿಮ್ಮ ಪ್ರೋತ್ಸಾಹ ನನಗೆ ತುಂಬಾ ಮುಖ್ಯ. ನೀವು ನನ್ನ ಬ್ಲಾಗಿನ ಓದುಗರಾಗಿರುವುದು ನನಗೆ ಖುಷಿ. ನಿಮ್ಮ ಪ್ರೊತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

shivu.k said...

ಹರೀಷ್,

ಗೌರಿ ಮತ್ತು ಗಣೇಶ್ ಚಿತ್ರವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಸಲೀಂ,

ಬ್ಲಾಗಿನ ಒಂದು ವರ್ಷದ ಸಂದರ್ಭದಲ್ಲಿ ಹಾರೈಸಿದ್ದೀರಿ. ಧನ್ಯವಾದಗಳು.

shivu.k said...

ಲಕ್ಷ್ಮಣ್ ಸರ್,

ನನ್ನ ಸಕ್ರೀಯ ಬ್ಲಾಗ್ ಕಾರ್ಯಾಚರಣೆಗೆ ಮತ್ತು ನನ್ನದೇ ಗೆಳೆಯರ ಬಳಗದ ಕಾರಣಕ್ಕೆ ನೀವು ಒಬ್ಬರು ಮತ್ತು ಆ ಗೆಳೆಯರ ಬಳದಲ್ಲಿ ನೀವು ಇದ್ದಿರಲ್ಲವೇ ಸರ್...

ಒಂದು ವರ್ಷದ ಹಾರೈಕೆಗೆ ಥ್ಯಾಂಕ್ಸ್....ನೀವೆಲ್ಲಾ ಚಿತ್ರಗಳನ್ನು ಮತ್ತು ಲೇಖನಗಳನ್ನು ಇಷ್ಟಪಟ್ಟು ನೋಡುವುದರಿಂದಲೇ ನನಗೂ ಮತ್ತಷ್ಟು ಹೊಸತನ್ನು ನೀಡುವ ಉತ್ಸಾಹ ಬರುತ್ತದೆ. ಹೀಗೆ ಬರುತ್ತಿರಿ...
ಧನ್ಯವಾದಗಳು.