ಕಳೆದ ಸಂಚಿಕೆಯ ಮುಂದುವರಿದ ಭಾಗವೆಂದುಕೊಳ್ಳಬೇಡಿ. ಅದು ನನ್ನ ಕತೆಯಾದರೆ ಇದು ಯುವ ಡೈವಿಂಗ್ ಕ್ರೀಡಾಪಟುಗಳ ಚಾಕಚಕ್ಯತೆ.
ನಮ್ಮ ಫೋಟೊಗ್ರಫಿ ಪ್ರದರ್ಶನ ಮೇಳ ಉತ್ತರದಿಕ್ಕಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದರೆ ಅತ್ತ ದಕ್ಷಿಣದಿಕ್ಕಿನ ಜಯನಗರ ಈಜುಕೊಳದಲ್ಲಿ ರಾಷ್ಟ್ರೀಯ ಜೂನಿಯರ್ ಡೈವಿಂಗ್ ಚಾಂಪಿಯನ್‍ಷಿಪ್ ನಡೆಯುತ್ತಿತ್ತು. ನನಗೂ ಇದು ಮೊದಲ ಅನುಭವವಾದ್ದರಿಂದ ಮೊದಲು ನೋಡಿ ಆನಂದಿಸುವುದು ನಂತರ ಸಾಧ್ಯವಾದರೆ ಫೋಟೊಗ್ರಫಿ ಮಾಡೋಣವೆಂದುಕೊಂಡು ಹೋಗಿದ್ದೆ.
ಓಡಿಬಂದು ಸ್ಪ್ರಿಂಗ್ ಬೋರ್ಡ್ ಒತ್ತಿ, ಮೇಲೆ ನೆಗೆದು, ಮತ್ತೆ ಕೆಳಗೆ ಬಂದು ಮತ್ತೊಮ್ಮೆ ಸ್ಪ್ರಿಂಗ್ ಬೋರ್ಡ್ ಅದುಮಿ......
ಆತ ಸ್ಪ್ರಿಂಗ್ ಬೋರ್ಡ್ ಮೇಲೆ ಮೂರು ಹೆಜ್ಜೆ ಬಂದು ತುದಿಯಲ್ಲಿ ನಿಂತು ಒಮ್ಮೆ ಉಸಿರುಬಿಗಿಹಿಡಿದು ಕಾಲಿಗೆ ಎಲ್ಲಾ ಶಕ್ತಿಯನ್ನು ತಂದುಕೊಂಡು ನಾಲ್ಕಡಿ ಮೇಲೆ ನೆಗೆದು ಮತ್ತೆ ಅಷ್ಟೇ ವೇಗದಲ್ಲಿ ಕೆಳಗೆ ಬಂದು ಅದೇ ಸ್ಪ್ರಿಂಗ್ ಬೋರ್ಡ್ ಒತ್ತಿದನೆಂದರೆ ಮುಗೀತು ಈ ಬಾರಿ ದುಪ್ಪಟ್ಟು ವೇಗದಲ್ಲಿ ಮೇಲೆ ಹಾರಿ ಮೇಲೆ ಒಂದು ಅಥವ ಎರಡು ಸಮ್ಮರ್ ಸಾಲ್ಟ್ ಪಲ್ಟಿಹೊಡೆದು ನೀರಿಗೆ ಬಿದ್ದರೆ ಎಲ್ಲರಿಂದ ಚಪ್ಪಾಳೆ.
ಸಿನಿಮಾಗಳಲ್ಲಿ ನೋಡಿದ್ದ ನನಗೂ ಆತನ ನೈಜ ಪ್ರದರ್ಶನ ಕಂಡು ಖುಷಿಯಾಯ್ತು. ಆವನಾದ ಮೇಲೆ ಮತ್ತೊಬ್ಬ, ಮಗದೊಬ್ಬ ಹೀಗೆ ಎಂಟು ಜನ ಒಬ್ಬರಾದ ಮೇಲೆ ಒಬ್ಬರು ಡೈವ್ ಹೊಡೆಯುತ್ತಿದ್ದರು. ಕೆಲವರಿಗೆ ಜೋರು ಚಪ್ಪಾಳೆಯಾದರೆ ಮತ್ತೆ ಕೆಲವರಿಗೆ ಚಪ್ಪಾಳೆ ಸಿಗಲಿಲ್ಲ.
ಹೀಗೇಕೆ ಅಂದುಕೊಂಡೆನಾದರೂ ಡೈವಿಂಗ್ ಬಗ್ಗೆ ನನಗೇನು ಗೊತ್ತಿರಲಿಲ್ಲವಾದ್ದರಿಂದ ಸುಮ್ಮನೆ ಹಾಗೆ ನೋಡಿ ಖುಷಿಪಡುತ್ತಿದ್ದೆ. ಕೆಲವು ಫೋಟೊಗಳನ್ನು ತೆಗೆಯೋಣವೆಂದು ಸಿದ್ದನಾದರೆ ನನ್ನ ಕ್ಯಾಮೆರಾ ಒಂದು ಫೋಟೊವನ್ನು ಕ್ಲಿಕ್ಕಿಸಲಿಲ್ಲ. ಎಷ್ಟೋ ಬಾರಿ ಪ್ರಯತ್ನಿಸಿದರೂ ಒಂದು ಫೋಟೊ ಕೂಡ ಸರಿಯಾಗಿ ಬರಲಿಲ್ಲ. ಬಹುಶಃ ಅದಕ್ಕೂ ಡೈವಿಂಗ್ ನೀತಿ ನಿಯಮಗಳು ಅರ್ಥವಾಗಲಿಲ್ಲವೇನೋ. ಹೇಗಾದರೂ ಫೋಟೊವನ್ನು ತೆಗೆಯಲೇಬೇಕೆಂದು ತೀರ್ಮಾನಿಸಿ ಅಲ್ಲಿದ್ದ ಕೋಚ್ ಒಬ್ಬರನ್ನು ಮಾತಾಡಿಸಿ ಅದರ ವಿವರಗಳನ್ನು ಪಡೆದುಕೊಂಡೆ. ನನಗೆ ವಿವರವನ್ನು ಕೊಟ್ಟವರು ಕರ್ನಾಟಕದ ಪ್ರಖ್ಯಾತ ಡೈವಿಂಗ್ ತರಬೇತುದಾರರಾದ ಬಾಲರಾಜ್. ಅವರು ೧೦೭೦ರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರಂತೆ. ಆಗ ನಾನು ಹುಟ್ಟಿರಲಿಲ್ಲ. ಈಗಲೂ ಅವರ ಉತ್ಸಾಹ ನೋಡಿ ಆಶ್ಚರ್ಯವಾಯಿತು.
ಡೈವಿಂಗ್‍ನಲ್ಲಿ ಪ್ರತಿಯೊಬ್ಬರಿಗೂ ಹತ್ತು ಡೈವಿಂಗ್ ಅವಕಾಶಗಳಿರುತ್ತವೆ. ಪ್ರತಿಯೊಂದು ನೆಗೆತದಲ್ಲೂ ಅನೇಕ ವಿಧಾನವನ್ನು ಪ್ರದರ್ಶಿಸಬೇಕು. ಮೊದಲು ನೇರವಾಗಿ ಹಾರಿ ಬೀಳುವುದರಿಂದ ಪ್ರಾರಂಭವಾಗಿ ನಡುವೆ ಒಂದು ಸಮ್ಮರ ಸಾಲ್ಟ್, ಮತ್ತೆ ಎರಡು ಸಮ್ಮರ್ ಸಾಲ್ಟ್, ಕೆಲವೊಮ್ಮೆ ಉದ್ದುದ್ದವಾಗಿ ಹಾರಿ ದೇಹವನ್ನು ಟ್ವಿಷ್ಟ್ ಮಾಡಿ ತಿರುಗಿಸಿ ಬೀಳವುದು, ಹೀಗೆ ಹತ್ತು ಸುತ್ತುಗಳಲ್ಲಿ ಎಲ್ಲಾ ವರಸೆಗಳನ್ನು ಮಾಡಬೇಕು. ಇವುಗಳನ್ನೆಲ್ಲಾ ಎಲ್ಲರೂ ಮಾಡುತ್ತಾರೆ. ಆದ್ರೆ ನೂರಕ್ಕೆ ನೂರರಷ್ಟು ಸರಿಯಾಗಿ ಮಾಡುವವರಿಗೆ ಹೆಚ್ಚು ಅಂಕಗಳು ದೊರೆಯುತ್ತವೆ. ಮತ್ತೆ ಕೊನೆಯಲ್ಲಿ ಕೈಗಳು ಕೆಳಮುಖವಾಗಿ, ಕಾಲುಗಳು ಮೇಲ್ಮುಖವಾಗಿ ಮಾಡಿಕೊಂಡು ದೇಹವನ್ನು ಕೋಲಿನಂತೆ ಲಂಬಾಕಾರವಾಗಿ ತಲೆಕೆಳಗಾಗಿ ತೊಂಬತ್ತು ಡಿಗ್ರಿ ನೇರವಾಗಿ ನೀರಿಗೆ ಪ್ರವೇಶ ಮಾಡಬೇಕೆನ್ನುವುದು ನಿಯಮ. ಬಾಲರಾಜ್‍ರವರು ಹೇಳಿದ್ದು ನನಗಿಂತ ನನ್ನ ಕ್ಯಾಮೆರಾಗೆ ಚೆನ್ನಾಗಿ ಅರ್ಥವಾಯಿತೆನಿಸುತ್ತದೆ. ನಂತರ ನಾನು ವಿವರಿಸುವುದಕ್ಕಿಂತ ಹೆಚ್ಚು ಸೊಗಸಾಗಿ ಕರಾರುವಾಕ್ಕಾಗಿ ಎಲ್ಲವನ್ನು ಹೀಗೆ ಕ್ಲಿಕ್ಕಿಸತೊಡಗಿತು. ಅವುಗಳಲ್ಲಿ ಕೆಲವನ್ನು ನೋಡಿ.

ನನ್ನ ವಿವರಣೆಗಿಂತ ಫೋಟೊ ಹೇಳುವ ಕತೆಯೇ ಚಂದವಲ್ಲವೇ! ಅದಕ್ಕೆ ಒಂದೊಂದಾಗಿ ನೋಡಿ.
ಒಂದು ಮೀಟರ್ ಸ್ಪ್ರಿಂಗ್ ಬೋರ್ಡ್ ಒತ್ತಿ ಹಾರಿದ ಮೇಲೆ ಹೀಗೆ ಒಂದು ದೇಹವನ್ನು ಉದ್ದುದ್ದ ತಿರುಗಿಸಿ[ಟ್ವಿಷ್ಟ್ ಮಾಡಿ]
ಹಾಗೆ ತಿರುಗಿಸುತ್ತಲೇ ತಲೆಕೆಳಗಾಗಿ.............
ಗಾಳಿಯಲ್ಲೇ....ತಲೆಕೆಳಕಾದ ರೀತಿಯಲ್ಲೇ ಲಂಬಾಕಾರವಾಗಿ....
ನಂತರ ನೀರಿಗೆ ಇಳಿಯುವ ಮೊದಲು ದೇಹವನ್ನು ಹೀಗೆ A ಆಕಾರದಲ್ಲಿ ಬಗ್ಗಿಸಿ......
ಕೊನೆಯಲ್ಲಿ ಹೀಗೆ ನೇರ ೯೦ ಡಿಗ್ರಿ ನೇರವಾಗಿ ನೀರಿಗೆ ಪ್ರವೇಶ!
ಮತ್ತೊಂದು ಕೋನದಲ್ಲಿ ಫೋಟೊ ತೆಗೆದಾಗ....ಸ್ಪ್ರಿಂಗ್ ಬೋರ್ಡ್ ಒತ್ತಿದ ಮೇಲೆ ಗಾಳಿಯಲ್ಲೇ ಹೀಗೆ ಕಾಲುಗಳನ್ನು ಮಡಚಿ, ಕೈಗಳಿಂದ ನೇರವಾದ ಕಾಲುಗಳನ್ನು ಹಿಡಿದು....
ಒಂದು ಸಮ್ಮರ್ ಸಾಲ್ಟ್[ಪಲ್ಟಿ] ಮಾಡಿ, ಕೈಗಳನ್ನು ಬಿಟ್ಟು.....
ತಿರುಗುತ್ತಲೇ...ತಲೆಕೆಳಕಾಗಿ.....ಕೈ ಮತ್ತು ಕಾಲುಗಳನ್ನು ನೇರವಾಗಿ ನೀಡುತ್ತಾ....
ನೀರಿಗೆ ಬೀಳುವ ಮೊದಲು ದೇಹವನ್ನು ಮತ್ತೆ ಅಗಲಿಸಿ
ಕೊನೆಯಲ್ಲಿ ತಲೆಕೆಳಕಾಗಿ ನೇರವಾಗಿ ನೀರಿಗೆ....
ಹದಿನೈದು ಮೀಟರ್ ಎತ್ತರದಿಂದ ನೇರವಾಗಿ ನೀರಿಗೆ ತಲೆಕೆಳಕಾಗಿ ಬೀಳುತ್ತಿರುವುದು.
ಗಾಳಿಯಲ್ಲಿ ಹೀಗೆ ಕರಾರುವಕ್ಕಾಗಿ ನಿಂತರೆ........
ತಲೆಕೆಳಕಾಗಿ ಹೀಗೆ ನಿಂತರೆ......
ಹೀಗೆ ಆಡ್ಡಡ್ಡವಾಗಿ ತೇಲಿದರೆ.......ಹೆಚ್ಚೆಚ್ಚು ಅಂಕಗಳು ಸಿಗುತ್ತವೆ.
ಸ್ಪರ್ಧೆಯಲ್ಲಿ ಪುಣೆಯ ಅರ್ಮಿ ತಂಡದ ಹುಡುಗರ ಪ್ರದರ್ಶನ ಅದ್ಬುತವಾಗಿತ್ತು. ಅವರು ಎಲ್ಲಾ ವಿಭಾಗಗಳನ್ನು ಚಿನ್ನದ ಪದಕಗಳನ್ನು ಪಡೆದುಕೊಂಡರು. ಉಳಿದಂತೆ ಕರ್ನಾಟಕದ ದಿವ್ಯ ನಮೀ ತೇಜ ಮೂರು ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಳು. ನಾನು ಕೊನೇ ದಿನ ಮಾತ್ರ ಹೋಗಿದ್ದರಿಂದ ಹಿಂದಿನ ದಿನಗಳಲ್ಲಿ ನಡೆದ ಮೂರು ಮೀಟರ್ ಸ್ಪ್ರಿಂಗ್ ಬೋರ್ಡ್, ಐದು ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್ ಎಲ್ಲ ಮುಗಿದುಹೋಗಿತ್ತು. ಕೊನೆಯ ದಿನ ಒಂದು ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್ ಫೋಟೊಗ್ರಫಿಗೆ ಮಾತ್ರ ಸಾಧ್ಯವಾಗಿತ್ತು.
ಚಿತ್ರಗಳು ಮತ್ತು ಲೇಖನ.
ಶಿವು.ಕೆ