Saturday, July 24, 2010

ಹಾರಿ...ದೇಹವನ್ನು ಟ್ವಿಷ್ಟ್ ಮಾಡಿ.....

ಕಳೆದ ಸಂಚಿಕೆಯ ಮುಂದುವರಿದ ಭಾಗವೆಂದುಕೊಳ್ಳಬೇಡಿ.  ಅದು ನನ್ನ ಕತೆಯಾದರೆ ಇದು ಯುವ ಡೈವಿಂಗ್ ಕ್ರೀಡಾಪಟುಗಳ ಚಾಕಚಕ್ಯತೆ.


ನಮ್ಮ ಫೋಟೊಗ್ರಫಿ ಪ್ರದರ್ಶನ ಮೇಳ ಉತ್ತರದಿಕ್ಕಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದರೆ ಅತ್ತ ದಕ್ಷಿಣದಿಕ್ಕಿನ ಜಯನಗರ ಈಜುಕೊಳದಲ್ಲಿ ರಾಷ್ಟ್ರೀಯ ಜೂನಿಯರ್ ಡೈವಿಂಗ್ ಚಾಂಪಿಯನ್‍ಷಿಪ್ ನಡೆಯುತ್ತಿತ್ತು. ನನಗೂ ಇದು ಮೊದಲ ಅನುಭವವಾದ್ದರಿಂದ ಮೊದಲು ನೋಡಿ ಆನಂದಿಸುವುದು ನಂತರ ಸಾಧ್ಯವಾದರೆ ಫೋಟೊಗ್ರಫಿ ಮಾಡೋಣವೆಂದುಕೊಂಡು ಹೋಗಿದ್ದೆ.
ಓಡಿಬಂದು ಸ್ಪ್ರಿಂಗ್ ಬೋರ್ಡ್ ಒತ್ತಿ, ಮೇಲೆ ನೆಗೆದು, ಮತ್ತೆ ಕೆಳಗೆ ಬಂದು ಮತ್ತೊಮ್ಮೆ ಸ್ಪ್ರಿಂಗ್ ಬೋರ್ಡ್ ಅದುಮಿ......ಆತ ಸ್ಪ್ರಿಂಗ್ ಬೋರ್ಡ್ ಮೇಲೆ ಮೂರು ಹೆಜ್ಜೆ ಬಂದು ತುದಿಯಲ್ಲಿ ನಿಂತು ಒಮ್ಮೆ ಉಸಿರುಬಿಗಿಹಿಡಿದು ಕಾಲಿಗೆ ಎಲ್ಲಾ ಶಕ್ತಿಯನ್ನು ತಂದುಕೊಂಡು ನಾಲ್ಕಡಿ ಮೇಲೆ ನೆಗೆದು ಮತ್ತೆ ಅಷ್ಟೇ ವೇಗದಲ್ಲಿ ಕೆಳಗೆ ಬಂದು ಅದೇ ಸ್ಪ್ರಿಂಗ್ ಬೋರ್ಡ್ ಒತ್ತಿದನೆಂದರೆ ಮುಗೀತು ಈ ಬಾರಿ ದುಪ್ಪಟ್ಟು ವೇಗದಲ್ಲಿ ಮೇಲೆ ಹಾರಿ ಮೇಲೆ ಒಂದು ಅಥವ ಎರಡು ಸಮ್ಮರ್ ಸಾಲ್ಟ್ ಪಲ್ಟಿಹೊಡೆದು ನೀರಿಗೆ ಬಿದ್ದರೆ ಎಲ್ಲರಿಂದ ಚಪ್ಪಾಳೆ.


          ಸಿನಿಮಾಗಳಲ್ಲಿ ನೋಡಿದ್ದ ನನಗೂ ಆತನ ನೈಜ ಪ್ರದರ್ಶನ ಕಂಡು ಖುಷಿಯಾಯ್ತು. ಆವನಾದ ಮೇಲೆ ಮತ್ತೊಬ್ಬ, ಮಗದೊಬ್ಬ ಹೀಗೆ ಎಂಟು ಜನ ಒಬ್ಬರಾದ ಮೇಲೆ ಒಬ್ಬರು ಡೈವ್ ಹೊಡೆಯುತ್ತಿದ್ದರು. ಕೆಲವರಿಗೆ ಜೋರು ಚಪ್ಪಾಳೆಯಾದರೆ ಮತ್ತೆ ಕೆಲವರಿಗೆ ಚಪ್ಪಾಳೆ ಸಿಗಲಿಲ್ಲ.


ಹೀಗೇಕೆ ಅಂದುಕೊಂಡೆನಾದರೂ ಡೈವಿಂಗ್ ಬಗ್ಗೆ ನನಗೇನು ಗೊತ್ತಿರಲಿಲ್ಲವಾದ್ದರಿಂದ ಸುಮ್ಮನೆ ಹಾಗೆ ನೋಡಿ ಖುಷಿಪಡುತ್ತಿದ್ದೆ. ಕೆಲವು ಫೋಟೊಗಳನ್ನು ತೆಗೆಯೋಣವೆಂದು ಸಿದ್ದನಾದರೆ ನನ್ನ ಕ್ಯಾಮೆರಾ ಒಂದು ಫೋಟೊವನ್ನು ಕ್ಲಿಕ್ಕಿಸಲಿಲ್ಲ. ಎಷ್ಟೋ ಬಾರಿ ಪ್ರಯತ್ನಿಸಿದರೂ ಒಂದು ಫೋಟೊ ಕೂಡ ಸರಿಯಾಗಿ ಬರಲಿಲ್ಲ. ಬಹುಶಃ ಅದಕ್ಕೂ ಡೈವಿಂಗ್ ನೀತಿ ನಿಯಮಗಳು ಅರ್ಥವಾಗಲಿಲ್ಲವೇನೋ. ಹೇಗಾದರೂ ಫೋಟೊವನ್ನು ತೆಗೆಯಲೇಬೇಕೆಂದು ತೀರ್ಮಾನಿಸಿ ಅಲ್ಲಿದ್ದ ಕೋಚ್ ಒಬ್ಬರನ್ನು ಮಾತಾಡಿಸಿ ಅದರ ವಿವರಗಳನ್ನು ಪಡೆದುಕೊಂಡೆ. ನನಗೆ ವಿವರವನ್ನು ಕೊಟ್ಟವರು ಕರ್ನಾಟಕದ ಪ್ರಖ್ಯಾತ ಡೈವಿಂಗ್ ತರಬೇತುದಾರರಾದ ಬಾಲರಾಜ್. ಅವರು ೧೦೭೦ರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರಂತೆ. ಆಗ ನಾನು ಹುಟ್ಟಿರಲಿಲ್ಲ. ಈಗಲೂ ಅವರ ಉತ್ಸಾಹ ನೋಡಿ ಆಶ್ಚರ್ಯವಾಯಿತು.
ಡೈವಿಂಗ್‍ನಲ್ಲಿ ಪ್ರತಿಯೊಬ್ಬರಿಗೂ ಹತ್ತು ಡೈವಿಂಗ್ ಅವಕಾಶಗಳಿರುತ್ತವೆ. ಪ್ರತಿಯೊಂದು ನೆಗೆತದಲ್ಲೂ ಅನೇಕ ವಿಧಾನವನ್ನು ಪ್ರದರ್ಶಿಸಬೇಕು. ಮೊದಲು ನೇರವಾಗಿ ಹಾರಿ ಬೀಳುವುದರಿಂದ ಪ್ರಾರಂಭವಾಗಿ ನಡುವೆ ಒಂದು ಸಮ್ಮರ ಸಾಲ್ಟ್, ಮತ್ತೆ ಎರಡು ಸಮ್ಮರ್ ಸಾಲ್ಟ್, ಕೆಲವೊಮ್ಮೆ ಉದ್ದುದ್ದವಾಗಿ ಹಾರಿ ದೇಹವನ್ನು ಟ್ವಿಷ್ಟ್ ಮಾಡಿ ತಿರುಗಿಸಿ ಬೀಳವುದು, ಹೀಗೆ ಹತ್ತು ಸುತ್ತುಗಳಲ್ಲಿ ಎಲ್ಲಾ ವರಸೆಗಳನ್ನು ಮಾಡಬೇಕು. ಇವುಗಳನ್ನೆಲ್ಲಾ ಎಲ್ಲರೂ ಮಾಡುತ್ತಾರೆ. ಆದ್ರೆ ನೂರಕ್ಕೆ ನೂರರಷ್ಟು ಸರಿಯಾಗಿ ಮಾಡುವವರಿಗೆ ಹೆಚ್ಚು ಅಂಕಗಳು ದೊರೆಯುತ್ತವೆ. ಮತ್ತೆ ಕೊನೆಯಲ್ಲಿ ಕೈಗಳು ಕೆಳಮುಖವಾಗಿ, ಕಾಲುಗಳು ಮೇಲ್ಮುಖವಾಗಿ ಮಾಡಿಕೊಂಡು ದೇಹವನ್ನು ಕೋಲಿನಂತೆ ಲಂಬಾಕಾರವಾಗಿ ತಲೆಕೆಳಗಾಗಿ ತೊಂಬತ್ತು ಡಿಗ್ರಿ ನೇರವಾಗಿ ನೀರಿಗೆ ಪ್ರವೇಶ ಮಾಡಬೇಕೆನ್ನುವುದು ನಿಯಮ. ಬಾಲರಾಜ್‍ರವರು ಹೇಳಿದ್ದು ನನಗಿಂತ ನನ್ನ ಕ್ಯಾಮೆರಾಗೆ ಚೆನ್ನಾಗಿ ಅರ್ಥವಾಯಿತೆನಿಸುತ್ತದೆ. ನಂತರ ನಾನು ವಿವರಿಸುವುದಕ್ಕಿಂತ ಹೆಚ್ಚು ಸೊಗಸಾಗಿ ಕರಾರುವಾಕ್ಕಾಗಿ ಎಲ್ಲವನ್ನು ಹೀಗೆ ಕ್ಲಿಕ್ಕಿಸತೊಡಗಿತು. ಅವುಗಳಲ್ಲಿ ಕೆಲವನ್ನು ನೋಡಿ.
ನನ್ನ ವಿವರಣೆಗಿಂತ ಫೋಟೊ ಹೇಳುವ ಕತೆಯೇ ಚಂದವಲ್ಲವೇ! ಅದಕ್ಕೆ ಒಂದೊಂದಾಗಿ ನೋಡಿ.
ಒಂದು ಮೀಟರ್ ಸ್ಪ್ರಿಂಗ್ ಬೋರ್ಡ್ ಒತ್ತಿ ಹಾರಿದ ಮೇಲೆ ಹೀಗೆ ಒಂದು ದೇಹವನ್ನು ಉದ್ದುದ್ದ ತಿರುಗಿಸಿ[ಟ್ವಿಷ್ಟ್ ಮಾಡಿ]
ಹಾಗೆ ತಿರುಗಿಸುತ್ತಲೇ ತಲೆಕೆಳಗಾಗಿ.............


 
ಗಾಳಿಯಲ್ಲೇ....ತಲೆಕೆಳಕಾದ ರೀತಿಯಲ್ಲೇ ಲಂಬಾಕಾರವಾಗಿ....


ನಂತರ ನೀರಿಗೆ ಇಳಿಯುವ ಮೊದಲು ದೇಹವನ್ನು ಹೀಗೆ A ಆಕಾರದಲ್ಲಿ ಬಗ್ಗಿಸಿ......


ಕೊನೆಯಲ್ಲಿ ಹೀಗೆ ನೇರ ೯೦ ಡಿಗ್ರಿ ನೇರವಾಗಿ ನೀರಿಗೆ ಪ್ರವೇಶ!ಮತ್ತೊಂದು ಕೋನದಲ್ಲಿ ಫೋಟೊ ತೆಗೆದಾಗ....ಸ್ಪ್ರಿಂಗ್ ಬೋರ್ಡ್ ಒತ್ತಿದ ಮೇಲೆ ಗಾಳಿಯಲ್ಲೇ ಹೀಗೆ ಕಾಲುಗಳನ್ನು ಮಡಚಿ, ಕೈಗಳಿಂದ ನೇರವಾದ ಕಾಲುಗಳನ್ನು ಹಿಡಿದು....


ಒಂದು ಸಮ್ಮರ್ ಸಾಲ್ಟ್[ಪಲ್ಟಿ] ಮಾಡಿ, ಕೈಗಳನ್ನು ಬಿಟ್ಟು.....


ತಿರುಗುತ್ತಲೇ...ತಲೆಕೆಳಕಾಗಿ.....ಕೈ ಮತ್ತು ಕಾಲುಗಳನ್ನು ನೇರವಾಗಿ ನೀಡುತ್ತಾ....   ನೀರಿಗೆ ಬೀಳುವ ಮೊದಲು ದೇಹವನ್ನು ಮತ್ತೆ ಅಗಲಿಸಿ


ಕೊನೆಯಲ್ಲಿ ತಲೆಕೆಳಕಾಗಿ ನೇರವಾಗಿ ನೀರಿಗೆ....

 
ಹದಿನೈದು ಮೀಟರ್ ಎತ್ತರದಿಂದ ನೇರವಾಗಿ ನೀರಿಗೆ ತಲೆಕೆಳಕಾಗಿ ಬೀಳುತ್ತಿರುವುದು.

 

ಗಾಳಿಯಲ್ಲಿ ಹೀಗೆ ಕರಾರುವಕ್ಕಾಗಿ ನಿಂತರೆ........


              ತಲೆಕೆಳಕಾಗಿ ಹೀಗೆ ನಿಂತರೆ......ಹೀಗೆ ಆಡ್ಡಡ್ಡವಾಗಿ ತೇಲಿದರೆ.......ಹೆಚ್ಚೆಚ್ಚು ಅಂಕಗಳು ಸಿಗುತ್ತವೆ.


ಸ್ಪರ್ಧೆಯಲ್ಲಿ ಪುಣೆಯ ಅರ್ಮಿ ತಂಡದ ಹುಡುಗರ ಪ್ರದರ್ಶನ ಅದ್ಬುತವಾಗಿತ್ತು. ಅವರು ಎಲ್ಲಾ ವಿಭಾಗಗಳನ್ನು ಚಿನ್ನದ ಪದಕಗಳನ್ನು ಪಡೆದುಕೊಂಡರು. ಉಳಿದಂತೆ ಕರ್ನಾಟಕದ ದಿವ್ಯ ನಮೀ ತೇಜ ಮೂರು ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಳು. ನಾನು ಕೊನೇ ದಿನ ಮಾತ್ರ ಹೋಗಿದ್ದರಿಂದ ಹಿಂದಿನ ದಿನಗಳಲ್ಲಿ ನಡೆದ ಮೂರು ಮೀಟರ್ ಸ್ಪ್ರಿಂಗ್ ಬೋರ್ಡ್, ಐದು ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್ ಎಲ್ಲ ಮುಗಿದುಹೋಗಿತ್ತು. ಕೊನೆಯ ದಿನ ಒಂದು ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್ ಫೋಟೊಗ್ರಫಿಗೆ ಮಾತ್ರ ಸಾಧ್ಯವಾಗಿತ್ತು.


ಚಿತ್ರಗಳು ಮತ್ತು ಲೇಖನ.
ಶಿವು.ಕೆ


37 comments:

balasubramanya said...

ವಾವ್ ಶಿವೂ ಅವರೇ ಮತ್ತೊಂದು ಉತ್ತಮ ಲೇಖನ .ಚೆನ್ನಾಗಿದೆ.ಆದ್ರೆ ನಂದು ಒಂದು ಕಂಪ್ಲೇಂಟು ನಿಮ್ಮ ಕಾಡಿನ ಅನುಭವ ಎರಡನೆ ಸಂಚಿಕೆ ಬರಲಿಲ್ಲ . ನಿಮ್ಮ ಮೇಲೆ ಕೋಪ ಬಂದಿದೆ.ನಿಮ್ಮ ಕಾಡಿನ ಅನುಭವ ಬಂದ ನಂತರ ನನ್ನದು ಶುರು ಮಾಡ್ತೀನಿ . ಅಲ್ಲಿಯವರೆಗೆ ನಿಮ್ಮ ಕಾಡಿನ ಅನುಭವ ಬರಲಿ .

ಅನಂತ್ ರಾಜ್ said...

ಉತ್ತಮ ಚಿತ್ರಗಳು ಶಿವು ಅವರೇ..ಅದಕ್ಕೆ ತಕ್ಕ೦ತೆ ಲೇಖನ ಕೂಡ ಚೆನ್ನಾಗಿ ಮೂದಿ ಬ೦ದಿದೆ.

Ranjita said...

ಶಿವೂ ಸರ್ ,
ಉತ್ತಮ ಚಿತ್ರ ಲೇಖನ ಚೆನ್ನಾಗಿದೆ :)

ಸವಿಗನಸು said...

ಶಿವು ಸರ್,
ಯುವ ಡೈವಿಂಗ್ ಕ್ರೀಡಾಪಟುಗಳ ಚಾಕಚಕ್ಯತೆ ಅಧ್ಬುತವಾಗಿ ಸೆರೆ ಹಿಡಿದಿದ್ದೀರ.....
ಸೊಗಸಾಗಿದೆ.....

sunaath said...

ಶಿವು,
ಈಜಿನ ಅನೇಕ ವರಸೆಗಳನ್ನು ಸುಂದರವಾಗಿ ಸೆರೆಹಿಡಿದಿದ್ದೀರಿ. ನೋಡಿ ಖುಶಿಯಾಯಿತು.

ಚುಕ್ಕಿಚಿತ್ತಾರ said...

ತು೦ಬಾ ಚನ್ನಾಗಿ ವಿವರಿಸಿದ್ದೀರ.. ಫೋಟೋಗಳು ಚ೦ದ ಬ೦ದಿವೆ..
ಥ್ಯಾ೦ಕ್ಸ್.

shivu.k said...

ನಿಮ್ಮೊಳಗೊಬ್ಬ ಬಾಲು ಸರ್,
ನಿಮ್ಮ ಕಂಪ್ಲೇಂಟನ್ನು ನಾನು ಖಂಡಿತ ಒಪ್ಪಿಕೊಳ್ಳುತ್ತೇನೆ. ಮತ್ತೆ ಕಾಡಿನ ಲೇಖನದ ಎರಡನೇ ಭಾಗವನ್ನು ಅನಿರೀಕ್ಷಿತ ಕಾರಣಗಳಿಂದಾಗಿ ಮುಂದಕ್ಕೆ ಹಾಕಿದ್ದೆ. ಮುಂದಿನ ಭಾರಿ ಖಂಡಿತ ಹಾಕುತ್ತೇನೆ. ಡೈವಿಂಗ್ ಪಟುಗಳ ಪಟ್ಟುಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಅನಂತರಾಜ್ ಸರ್,
ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ರಂಜಿತಾ,

ಥ್ಯಾಂಕ್ಸ್...

shivu.k said...

ಸವಿಗನಸು ಮಹೇಶ್ ಸರ್,

ಡೈವಿಂಗ್ ಪಟುಗಳ ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ..

shivu.k said...

ಸುನಾಥ್ ಸರ್,

ಈಜುಪಟುಗಳ ಫೋಟೊಗಳೇ ಬೇರೆ ಇವೆ. ಅವು ಇವುಗಳಿಗಿಂತ ಬಿನ್ನವಾಗಿಯೇ ಇವೆ. ಇವರು ಡೈವಿಂಗ್ ಪಟುಗಳು. ಒಟ್ಟಾರೆ ನಿಮಗೆ ಇಷ್ಟವಾದವಲ್ಲ..ಆಷ್ಟು ಸಾಕು..ಧನ್ಯವಾದಗಳು

shivu.k said...

ಚುಕ್ಕಿಚಿತ್ತಾರ,

ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಮನಸು said...

wow super sir... enta foto's tegediddeeri naavantu enjoy madidvi foto's nodi thnq..

Subrahmanya said...

ವಿವಿಧ ಭಂಗಿಗಳ ಈಜಿನ ಚಿತ್ರಗಳನ್ನು ಸೊಗಸಾಗಿ ಸೆರೆದಿಟ್ಟಿದ್ದೀರಿ. ಇಲ್ಲಿ ಹಮ್ಚಿಕೊಂಡಿದ್ದಕ್ಕೆ ಧನ್ಯವಾದ.

AntharangadaMaathugalu said...

ಶಿವು ಸಾರ್...
ಚಿತ್ರಗಳು ಸೊಗಸಾಗಿವೆ.... ವಿವರಣೆ ಕೂಡ ಪೂರಕವಾಗಿದೆ.. ಎಂದಿನಂತೆ...:-)

ಶ್ಯಾಮಲ

ಸಾಗರದಾಚೆಯ ಇಂಚರ said...

ಶಿವೂ ಸರ್
ಅದ್ಭುತ ಲೇಖನ
ಸೊಗಸಾದ ಫೋಟೋಗಳು
ಸುಂದರ ವಿವರಣೆ
ಅದೇ ಶಿವೂ ಸ್ಪೆಷಲ್

Unknown said...

sakat lekhana sir , endinanate olleya papegalu , super :)

Uday Hegde said...

Good one sir..Unfortunately i missed this event..

ಮನಸಿನಮನೆಯವನು said...

shivu.k ,

ಚೆನ್ನಾಗಿದೆ.. ಅಧ್ಭುತ ಫೋಟೋಗಳನ್ನೇ ಸೆರೆ ಹಿಡಿದಿದ್ದೀರಿ..

ಸೀತಾರಾಮ. ಕೆ. / SITARAM.K said...

ಛಾಯಾಚಿತ್ರಗಳು ಚೆನ್ನಾಗಿ ಬಂದಿವೆ ಜೊತೆಗೆ ತಮ್ಮ ವಿವರಣೆ.

ಕ್ಷಣ... ಚಿಂತನೆ... said...

ಶಿವು ಅವರೆ, ತುಂಬಾ ಆಸಕ್ತಿದಾಯಕವಾದ ವಿಷಯದ ಮಾಹಿತಿ ಕೊಟ್ಟಿದ್ದೀರಿ.. ನಿಮ್ಮ ಶ್ರಮಕ್ಕೆ ಧನ್ಯವಾದಗಳು. ಡೈವಿಂಗ್‌ ಬಗೆಗಿನ ಚಿತ್ರಗಳೂ ಸೂಪರ್‌...

ಇನ್ನಷ್ಟು ವಿಶೇಷತೆಗಳಲ್ಲಿ 'ಆಳವಾಗಿ' ಡೈವ್‌ ಮಾಡಿರಿ...ಮಾಹಿತಿ ಚಿತ್ರ ನೀಡುತ್ತಿರಿ...

ಸ್ನೇಹದಿಂದ...

Guruprasad said...

ಒಳ್ಳೆಯ ಫೋಟೋಗಳು,, ಹಾಗು ಲೇಖನ,,, ದಿವಿಂಗ್ ಬಗ್ಗೆ ನಮಗೂ ಸ್ವಲ್ಪ ಮಾಹಿತಿ ನಿಮ್ಮ ಈ ಲೇಖನದಿಂದ ಲಭಿಸಿತು.....
ಧನ್ಯವಾದಗಳು ...

ವನಿತಾ / Vanitha said...

Wow Photos ಮತ್ತು ಡೈವಿಂಗ್ ಪಟುಗಳು:))

ದಿನಕರ ಮೊಗೇರ said...

thank you sir...... uttama photo vivaraNege...... baalu sir heLida haage kaaDina anubhava eraDane bhaaga bandilla...

ಮನದಾಳದಿಂದ............ said...

ಶಿವು ಸರ್,
ಚಂದದ ಫೋಟೋಗಳ ಜೊತೆಗೇ ವಿವರಣೆ ಕೂಡ,
ಚನ್ನಾಗಿವೆ, ನಿಮ್ಮ ಫೋಟೋಗಳು, ಮತ್ತು ಲೇಖನ...........

shridhar said...

ಶಿವು ಸರ್,
ಉತ್ತಮ ಚಿತ್ರಗಳು ಹಾಗೂ ಒಳ್ಳೆಯ ವಿವರಣೆ .. ನಾನು ಒಮ್ಮೆ ಬಸವನಗುಡಿ ಸ್ವಿಮ್ಮಿಂಗ ಫೂಲ್ ನಲ್ಲಿ ಡೈವ್ ಮಾಡ ಹೋಗಿ ನೀರೆಲ್ಲ ಮೂಗಲ್ಲಿ ಸೇರಿಹೋಗಿತ್ತು .. ಆದರು ಡೈವ್ ಮಾಡುವ ಮಜವೇ ಬೇರೆ ..

ತೇಜಸ್ವಿನಿ ಹೆಗಡೆ said...

ಅದ್ಭುತ ಪ್ರತಿಭೆ... ಉತ್ತಮ ಚಿತ್ರಗಳು.

ಸಾಗರಿ.. said...

ಶಿವು ಅವರೇ,
ಬಹಳ ಸೊಗಸಾಗಿದೆ ವಿವರಣೆ ಮತ್ತು photo. ಖುಷಿ ಕೊಟ್ಟವು

ಚಿನ್ಮಯ said...

ಚಿತ್ರಗಳು ತುಂಬಾ ಚೆನ್ನಾಗಿವೆ! ೩-೪ ಸೆಕೆಂಡ್ನಲ್ಲಿ ಮುಗಿದುಹೋಗುವ ಡೈವಿಂಗ್ ಚಿತ್ರಗಳನ್ನು ತುಂಬಾ ಚೆನ್ನಾಗಿ ಸೆರೆ ಹಿಡಿದಿದ್ದೀರ. ಚಿತ್ರಗಳು ತುಂಬಾ ಅಚುಕಟ್ಟಾಗಿ ಮೂಡಿಬಂದಿವೆ.
ಒಂದು ನಿವೇದನೆ -Sports photography ವಿಧಾನಗಳ ಬಗ್ಗೆ, ಕ್ಯಾಮರಾ ಸೆಟ್ಟಿಂಗ್ ಬಗ್ಗೆ ತಿಳಿಸಿ ಕೊಡುತ್ತಿರ?

Shweta said...

Sooper shivu sir...

nimge ellinda sigutto hosa hosa subjects.Tumba chennagide..

Rakesh Holla said...

Wow superb...Amzing photography...
Nice writeup...

PARAANJAPE K.N. said...

ಚೆನ್ನಾಗಿವೆ ಚಿತ್ರ ಗಳು ಮತ್ತು ಬರಹ ಕೂಡ. ನಿಮ್ಮ ಪುಸ್ತಕ ಬಿಡುಗಡೆ ಹತ್ತಿರ ಬರ್ತಿದೆ ಆಲ್ವಾ ?

Snow White said...

wow..superb pics and post:)

shivu.k said...

ಮನಸು ಮೇಡಮ್,

ಫೋಟೊಗಳನ್ನು ನೋಡಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್..ಆಜಾದ್‍ರವರ ಜಲನಯನ ಮುಖಪುಟ ತುಂಬಾ ಚೆನ್ನಾಗಿ ವಿನ್ಯಾಸ ಮಾಡಿದ್ದೀರಿ...ನನಗಂತೂ ತುಂಬಾ ಇಷ್ಟವಾಯಿತು. ಮತ್ತೆ ನಮ್ಮ ಪ್ರಿಂಟರು ಕೂಡಾ ತುಂಬಾ ಇಷ್ಟಪಟ್ಟರು. ನಿಮ್ಮಿಂದ ಮತ್ತಷ್ಟು ಮುಖಪುಟಗಳು ವಿನ್ಯಾಸಗೊಳ್ಳಲಿ...

ಜಲನಯನ said...

ಶಿವು ಸ್ಪ್ರೊಂಗ್ ಬೋರ್ಡ್ ಡೈವಿಂಗ್ ನ ವಿವಿಧ ಹಂತಗಳನ್ನ ಬಹಲ ಚನ್ನಗಿ ಸೆರೆಹಿಡಿದು ಅದಕ್ಕೆ ವಿವವರಕೊಟ್ಟು ಲೇಖನ ಹಾಕಿದ್ದೀರ..ನಿಮ್ಮ ವಿವಿಧತೆ ನೀವೇ ಸಾಟಿ ಬೇರೆ ಯಾರಿಲ್ಲ...ಹಹಹ...ಹ್ಯಾಪಿ ಡೈವಿಂಗ್ ಎನ್ನಲೇ..?

ಶಿವಪ್ರಕಾಶ್ said...

Great photos with perfect timing :)

Ganesh Bhat said...

olle maahiti sir, thank u