Saturday, April 4, 2009

ಹಿರಿಯಜ್ಜನಿಗೆ ಕತೆ ಹೇಳಿದ ಕರಿಬೇವು.

ಗೆಳೆಯರೆ, ನನ್ನ ಛಾಯಾಕನ್ನಡಿ ಬ್ಲಾಗಿನಲ್ಲಿ ಇದು ಐವತ್ತನೇ ಪೋಸ್ಟಿಂಗ್.
ಮನುಷ್ಯನ ಜೀವನದಲ್ಲಿ ಐವತ್ತನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ವೃದ್ಧಾಪ್ಯದ ಕಡೆಗೆ ನೋಟ ನೆಟ್ಟಂತೆ ಲೆಕ್ಕ. ಮತ್ತೆ ಇಂದು ವಿಶ್ವ ಹಿರಿಯರ ದಿನ. ಅದಕ್ಕಾರಿ ಅವರನ್ನು ಗೌರವಿಸಲು ಈ ಚಿತ್ರ ಲೇಖನ.


ಜಿಗುಪ್ಸೆಯಿಂದ ಭಾರವಾದ ಹೆಜ್ಜೆಗಳನ್ನಿಡುತ್ತಿದ್ದರೂ ನೆಲದಲ್ಲಿ ಬಿದ್ದಿದ್ದ ತರಗಲೆಗಳು ಸದ್ದು ಮಾಡದೇ ಅವನ ನೋವಿಗೆ ಸಹಕರಿಸುತ್ತಿದ್ದವು. ಆತ ಹಗುರಾಗಿ ಆ ಕಟ್ಟೆಯ ಮೇಲೆ ಕುಳಿತರೂ ಮೈ ಮನಸೆಲ್ಲಾ ಭಾರವಾಗಿದೆ ಎನಿಸುತ್ತಿತು.

ವಯಸ್ಸು ೭೦ ದಾಟಿರಬಹುದು. ತೊಡೆಯ ಮೇಲೆ ಏನೋ ಸ್ಪರ್ಶವಾಯಿತು, ಮುಗ್ಧ ಮಗು ತನ್ನ ಬೆರಳುಗಳಿಂದ ಆತನ ಕೆನ್ನೆಯನ್ನು ಸೋಕಿದಷ್ಟು ನುಣುಪಾಗಿ.ಆತನ ದೃಷ್ಟಿ ತನ್ನ ತೊಡೆಯ ಮೇಲೆ ಬಿತ್ತು. ವಯಸ್ಸಾದ, ಮುಟ್ಟಿದರೆ ಪುಡಿಯಾಗುವಷ್ಟು ಒಣಗಿದ ಕರಿಬೇವಿನ ಎಲೆ ಗಾಳಿಗೆ ತೂರಾಡಿ, ಮಕ್ಕಳು ಕಾಗದದಲ್ಲಿ ಮಾಡಿ ಮೇಲೆ ಎಸೆದಾಗ ಹಾರಿದ ಪೇಪರ್ ಪಾರಿವಾಳದ ಹಾಗೆ ಗಾಳಿಯಲ್ಲಿ ಜೀಕಿ, ತೊಯ್ದಾಡಿ ನಿದಾನವಾಗಿ ಆತನ ತೊಡೆಯನ್ನಲಂಕರಿಸಿತ್ತು.

ಆತ ಅದನ್ನು ಮುಟ್ಟಬೇಕೆನ್ನುವಷ್ಟರಲ್ಲಿ ಆ ಕರಿಬೇವು ಮಾತಾಡಲಾರಂಬಿಸಿತು.

"ಗೆಳೆಯ ನನ್ನನ್ನು ಮುಟ್ಟುತ್ತಿದ್ದೀಯ?, ನೀನನಲ್ಲದೆ ಇನ್ಯಾರು ನನ್ನನ್ನು ಸ್ಪರ್ಶಿಸಲು ಸಾಧ್ಯ. ನಿನಗೆ ನಾನು ನನಗೆ ನೀನು ಅಲ್ಲವೇ, ಸೆಳೆಯುತ್ತಿವೆಯೇ ಭಾರವಾದ ಹೆಜ್ಜೆಗಳು ಬದುಕಿನ ಕೊನೆಯ ಹಾದಿಗೆ, ಕೊರಗಿ ಕರಗುತ್ತಿವೆಯೇ ಅಂದಿನ ಭಾವ ತುಂಬಿದ ನೂರಾರು ಅನುಭವಗಳು........ ಗೆಳೆಯ ನೀ ಹುಟ್ಟಿದಂತೆ ನಾನೂ ಚಿಗುರಿದೆ, ದಿನಕಳೆದಂತೆ ಬೆಳೆದೆ, ಬೀಸುವ ಗಾಳಿಯಲ್ಲಿ ನಲಿದೆ, ರವಿಕಿರಣಗಳಲ್ಲಿ ಜಿಗಿದು ಜೋಕಾಲಿಯಾಡಿದ್ದೆ. ಅತ್ತ ನೀನು ನಿನ್ನ ಸಂಕ್ರಮಣಕಾಲದಲ್ಲಿ ಗಮಗಮಿಸಿದ್ದೆ ನನ್ನಂತೆ".

ವೃದ್ದ ಎಲೆಯ ಮಾತುಗಳನ್ನು ಕೇಳುತ್ತಾ...ಭಾವಪೂರ್ಣನಾಗಿದ್ದ..... ಆ ಹಣ್ಣೆಲೆ ಒಮ್ಮೆ ನಿಟ್ಟುಸಿರು ಬಿಟ್ಟಿತು... ಮತ್ತೆ ಮಾತು ಮುಂದುವರಿಸಿತು......

"ತಳ್ಳೇಬಿಟ್ಟರಲ್ಲ ನಿನ್ನನ್ನು ಹೆದ್ದಾರಿಯಿಂದ ಕಾಲುದಾರಿಗೆ ಸಮಾಜದ ಜೊತೆಗೂಡಿದ ನಿನ್ನ ಮಕ್ಕಳು, ಊಟದ ಎಲೆಯಿಂದ ಎತ್ತಿ ಬಿಸಾಡಿ ತಿರಸ್ಕರಿಸಿದರು ನಿನ್ನಂತೆ. ಆದರೇನು ನಾನು ಕೊರಗಲಾರೆನು. ಮತ್ತೆ ಮಣ್ಣಲ್ಲಿ ಮಣ್ಣಾಗಿ ನನ್ನ ಕಣಕಣಗಳು ಮತ್ತೊಂದು ಚಿಗುರುವ ಬೇರಿಗೆ ಮೂಲಸತುವಾಗುವ ಉತ್ಸಾಹದಲ್ಲಿ ನೀಡುತ್ತೇನೆ ನಿನಗೆ ಚಿಟಿಕೆಯಷ್ಟು ವಿಶ್ವಾಸ, ಒಂದಿಡಿ ಆತ್ಮೀಯತೆ, ಗುಟುಕಿನಷ್ಟು ಪ್ರೀತಿ. ಹೋಗಿಬರುತ್ತೇನೆ"

ಮತ್ತೆ ಗಾಳಿ ನಿದಾನವಾಗಿ ಬೀಸತೊಡಗಿತು. ವೃದ್ಧ ಮತ್ತೊಮ್ಮೆ ಆ ಕರಿಬೇವನ್ನು ಮುಟ್ಟಿದ ಮಗುವಿನ ಕಿರುಬೆರಳು ಸೋಕಿದಷ್ಟು ನವಿರಾಗಿ. ಮನದೊಳಗೆಲ್ಲೋ ಮಗುವಾದ ಅನುಭವ. ಕಣ್ಣಂಚಿಗೆ ಇಳಿದ ಹನಿಗಳಲ್ಲಿ ಅಮ್ಮನ ನೆನಪು..... ನಿರೀಕ್ಷೆಗಳಿಲ್ಲದ ಆನಂದದ ದಾರಿಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಭಾವುಕತೆ.

ಅಷ್ಟರಲ್ಲಿ ಗಾಳಿ ಮತ್ತಷ್ಟು ಜೋರಾಗಿ ಬೀಸಿತು. ತೊಡೆಯ ಮೇಲಿದ್ದ ಕರಿಬೇವು ಹಾರಿಹೋಯಿತು ಗಾಳಿ ಬೀಸಿದೆಡೆಗೆ, ಮರಳಿ ಮಣ್ಣಿನೆಡೆಗೆ, ಮಣ್ಣಿನ ಕಣದೊಳಗೆ ಸೇರಿ ಮೂಲಸತುವಾಗುವ ಸಾರ್ಥಕತೆಯ ಕಡೆಗೆ.

ಚಿತ್ರ ಮತ್ತು ಲೇಖನ.
ಶಿವು ಕೆ.

86 comments:

mukhaputa said...

sundarvaada baravnige, karibevu ajjanige kathe heluva pari nijjakoo adbhuthavaada kalpane.
nimma 50thane barvanige nijakko sarthakathe tandu kottide,1000koo hechu lekhnagalu neevu bareyali yendu aashisuttene

ಮನಸು said...

ಶಿವೂ ಸರ್,
ನಿಮ್ಮ ೫೦ನೆ ಲೇಖನಕ್ಕೆ ನಮ್ಮ ಶುಭಾಶಯಗಳು.. ನೀವು ಬರೆದ ಲೇಖನ ತುಂಬಾ ಹಿಡಿಸಿತು..... ನಾವು ಒಂದಲ್ಲ ಒಂದುದಿನ ಮುಪ್ಪಿನ ಕಾಲವನ್ನು ನೋಡುತ್ತೇವೆ... ಕರಿಬೇವಿನ ಕತಿಯೇ ನಮಗೆ ಹ ಹ ... ತುಂಬಾ ತುಂಬಾನೇ ಚೆನ್ನಾಗಿದೆ..
ಚಿತ್ರ ಇವತ್ತಿನಕತೆಗೆ ಹೇಳಿ ಮಾಡಿಸಿದ ಹಾಗಿದೆ..ಮುಪ್ಪಿನೋಂದಿಗೆ ಕರಿಬೇವು ಬೇರೆಸಿದೀರಿ
ಹೀಗೆ ಹೆಚ್ಚು ಬರಹಗಳು ಮೂಡಲಿ

Guruprasad said...

ಶಿವೂ,
ವಿಶ್ವ ಹಿರಿಯರ ದಿನ ಇಂಥ ಭಾವ ಪೂರ್ಣ ಲೇಖನ ಕೊಟ್ಟಿದಕ್ಕೆ ಅಭಿನಂದನೆಗಳು. ....ಇವೊತು ನಾನು ಪೇಪರ್ ನೋಡ್ತಾ ಇರ್ಬೇಕಾದ್ರೆ ವಿಜಯ ಕರ್ನಾಟಕ ಪಪೆರ್ನಲ್ಲಿ ಒಂದು article ಬಂದಿತ್ತು , ಸ್ವಲ್ಪ ಹೊತ್ತು ಕೂತ್ಕೊಂಡ್ ಇದರ ಬಗ್ಗೆನೇ ಯೋಚನೆ ಮಾಡ್ತಾ ಇದ್ದೆ.. ೬೦ ವರ್ಷ ದಾಟಿದ ವಯೋವ್ರುದ್ದರಿಗೆ ಸರಕಾರ ಒಂದು ಕಾರ್ಡ್ ಕೊಡುತ್ತೆ, ಇದು ಅವರಿಗೆ ಪ್ರಯಾಣಿಸುವಾಗ ಹಾಗು ಬೇರೆ ಕಡೆ ರಿಯಾಯಿತಿ ದೊರಕಲಿ ಎಂದು .. ಆದರೆ ಇ ಕಾರ್ಡ್ ಪಡ್ಕೊಳಕ್ಕೆ ವಯಸ್ಸಾದವರು ತುಂಬ ಅಲೆದು , ಯಾರ ಯಾರೋ ಕೈ ಕಾಲು ಹಿಡಿದು ತಗೊಳ್ಳೋ ಪರಿಸ್ಥಿತಿ ಬಂದಿದೆ ಅಂತ ಇತ್ತು,, ಅದನ್ನ ನೋಡಿ ತುಂಬ ಬೇಜಾರ್ ಆಯಿತು,,,, ಬೇರೆ ದೇಶದಲ್ಲಿ ಆದ್ರೆ ಎಷ್ಟು respect ನಿಂದ ನೋಡ್ಕೋತಾರೆ aged people ನ ಆದರೆ ಇಲ್ಲೇಕೆ ಹೀಗೆ ?

ಹಾಗೆ ನನ್ನ ಬ್ಲಾಗಿನ ಕಡೆ ಬಂದು ಹೋಗಿ ಸರ್....
ಗುರು

Anonymous said...

ಕರಿಬೇವು ಹೇಳುವ ಮಾತು ಅರ್ಥಪೂರ್ಣವಾಗಿದೆ.
ಆದರೆ ಮಕ್ಕಳು ಈ ರೀತಿ ಮಾಡುತ್ತಾರೆ ಎಂದು ಓದಿದಾಗ ಬೇಸರವಾಗುತ್ತಿದೆ. :-(
ಯಾಕೆ ಅಪ್ಪ-ಅಮ್ಮನನ್ನೇ ಈ ರೀತಿ ದೂರ ಮಾಡುತ್ತಾರೆ? ಮುಂದೆ ಇದೆ ದಿನ ತಮಗೂ ಬರುತ್ತದೆ ಎನ್ನುವುದನ್ನು ಯಾಕೆ ಯೋಚನೆ ಮಾಡುವುದಿಲ್ಲ.

ಫೋಟೋ ಮತ್ತು ಲೇಖನ ಚೆನ್ನಾಗಿವೆ.
ನಿಮಗೆ ರಾಯಲ್ ಸೊಸೈಟಿ ಅವಾರ್ಡ್ ಬಂದ ಫೋಟೋಗಳನ್ನು ಯಾವಾಗ ಹಾಕುತ್ತೀರಿ?

shivu.k said...

ಅಜಿತ್,

ಬರವಣಿಗೆಯನ್ನು ಪೋಸ್ಟಿಂಗ್ ಮಾಡುತ್ತಿದ್ದಂತೆ ಮೊದಲು ಓದಿದ್ದೀರಿ.. ಇಷ್ಟಪಟ್ಟಿದ್ದೀರಿ....ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ನಿಮ್ಮ ಮಾತು ಟಾನಿಕ್ ನಂತೆ..ಧನ್ಯವಾದಗಳು.

shivu.k said...

ಮನಸು ಮೇಡಮ್,

ಇವತ್ತು ವೃದ್ದರ ದಿನ ಅವರಿಗಾಗಿ ಒಂದು ಲೇಖನ ಬರೆಯಬೇಕೆನಿಸಿತ್ತು. ನಿಜಕ್ಕೂ ಮೊದಲೇ ಬರೆದಿದ್ದೆ....ಈ ಸಮಯ ಕಾಯುತ್ತಿದ್ದೆ. ಕರಿಬೇವಿನ ಸ್ಥಿತಿಗೂ ವಯಸ್ಕರಿಗೂ ವ್ಯತ್ಯಾಸವೇನಿಲ್ಲ ಅಲ್ಲವೇ....
ಈ ಲೇಖನದ ಮುಖಾಂತರ ಮುಪ್ಪಿನಲ್ಲಿರುವವರಿಗೆ ಸಲಾಂ ಹೇಳುವ ಬಯಕೆ.....
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು..

shivu.k said...

ಗುರು,

ನಿಮ್ಮ ಹಾಗೆ ನಾನು ಇವತ್ತು ವಿಜಯ ಕರ್ನಾಟಕದಲ್ಲಿ ನೋಡಿದಾಗಲೇ ಗೊತ್ತಾಗಿದ್ದು ಇವತ್ತು ಹಿರಿಯರ ದಿನ ಅಂತ. ಈ ಲೇಖನವನ್ನು ಮೊದಲೇ ಬರೆದು ಎತ್ತಿಟ್ಟಿದ್ದೆ.

ಮತ್ತೆ ನೀವು ಹೇಳಿದಂತೆ ವಿದೇಶದಲ್ಲಿ ಹಿರಿಯರಿಗೆ ಸಿಗುವ ನಮ್ಮ ದೇಶದಲ್ಲಿ ಸಿಗುತ್ತಿಲ್ಲವೆಂಬ ಕೊರಗು ನನಗೂ ಇದೆ...
ನನ್ನ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
ನಿಮ್ಮ ಬ್ಲಾಗಿಗೆ ಬರದೇ ಇರುತ್ತೇನೆಯೇ...ಹೊಸ ಹೊಸ ವಿಚಾರ...ಅದರಲ್ಲೂ ಸೃಜನಶೀಲರ ಕೆಲಸವನ್ನು ಹೆಕ್ಕಿ ತಂದು ಉಣಬಡಿಸುತ್ತೀರಿ...ಅದನ್ನು ಅನುಭವಿಸುವುದರಲ್ಲಿ ನಾನು ಮೊದಲಿಗೆ ಸ್ವಲ್ಪ ಬಿಡುವಿರಲಿಲ್ಲ...ಖಂಡಿತ ಎಲ್ಲಾ ಹೊಸತನ್ನು ಓದುತ್ತೇನೆ...
ಧನ್ಯವಾದಗಳು...

shivu.k said...

ಜ್ಯೋತಿ ಮೇಡಮ್,


ಮಕ್ಕಳು ಹಿರಿಯರನ್ನು ಈ ರೀತಿ ನಡೆಸಿಕೊಳ್ಳುವುದು ನೋಡಿದಾಗ ಮನಸ್ಸಿಗೆ ಬೇಸರವಾಗುತ್ತದೆ....
ಕರಿಬೇವು ಕೂಡ ಅದೇ ಸ್ಥಿತಿಯನ್ನು ಅನುಭವಿಸುವುದರಿಂದ ಅದನ್ನು ಲೇಖನದಲ್ಲಿ ಬಳಸಿಕೊಂಡು ಸ್ವಲ್ಪ ಬೇರೆ ರೀತಿ ಬರೆದಿದ್ದೇನೆ....
ನನ್ನ ಐವತ್ತನೇ ಪೋಸ್ಟಿಂಗ್ ಮೆಚ್ಚಿದ್ದೀರಿ...ಹೀಗೆ ಪ್ರೋತ್ಸಾಹಿಸಿ.....
ರಾಯಲ್ ಸೊಸೈಟಿ ಅವಾರ್ಡ್ ಫೋಟೋಗಳನ್ನು ಒಂದು ಪುಟ್ಟ ಲೇಖನದ ಮೂಲಕ ಹಾಕುವ ಬಯಕೆಯಿದೆ. ಸದ್ಯದಲ್ಲೇ ಹಾಕುತ್ತೇನೆ. ಕಾಯಬೇಕಷ್ಟೇ..

ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಶಿವೂ ಸರ್,
ಮೊದಲಿಗೆ ಹಿರಿಯರ ದಿನದ ಶುಭಾಶಯಗಳನು ಎಲ್ಲ ಹಿರಿಯರಿಗೆ ಅರ್ಪಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಒಂದು ಭಾವಪೂರ್ಣ ಲೇಖನ ಕೊಟ್ಟಿದ್ದಕ್ಕೆ ಅಭಿನಂದನೆಗಳು. ನಿಮ್ಮ ೫೦ ನೆ ಲೇಖನಕ್ಕೆ ಹಾರ್ದಿಕ ಅಭಿನಂದನೆಗಳು. ಹೀಗೆ ನಿಮ್ಮ ಲೇಖನಿಯಿಂದ ಅರ್ಥಪೂರ್ಣ ಲೇಖನಗಳು ಹೊರಹೊಮ್ಮುತ್ತಿರಲಿ.
ವ್ರದ್ದರನ್ನು ನಾವು ನಡೆಸಿಕೊಳ್ಳುತ್ತಿರುವ ರೀತಿಯ ವಿಮರ್ಶೆ ಅಗತ್ಯ. ಯಾವ ತಂದೆ ತಾಯಿಗಳು ನಮ್ಮನ್ನು ಈ ಸ್ಥಾನಕ್ಕೆ ತಂದಿರುತ್ತಾರೋ ಅಂಥವರನ್ನೇ ದೂರ ಮಾಡುವಷ್ಟು ಕ್ರೂರಿಗಳು ನಾವ? ಎನ್ನುವ ಸಂಗತಿ ಮನಸ್ಸಿಗೆ ನೋವನ್ನು ಕೊಡುತ್ತದೆ. ಅದು ನಾವು ಅನುಭವಿಸಿದಾಗಲೇ ಗೊತ್ತಾಗುತ್ತದೆ. ಮನುಷ್ಯ ಬೆಳೆದಂತೆಲ್ಲ ತುಂಬಾ ಸಣ್ಣವನಾಗುತ್ತಿದ್ದಾನೆ ಎನಿಸುತ್ತಿಲ್ಲವೇ?

PARAANJAPE K.N. said...

ಶಿವೂ
ಜೀವನದ ಇಳಿಸ೦ಜೆ ಹೊತ್ತಲ್ಲಿ ಜೀವನ ಅದೆಷ್ಟು ದುರ್ಭರವಾಗಿರ್ತದೆ, ಹಿರಿಯ ಜೀವಗಳೆಡೆ ಕುದಿರಕ್ತದ ಹುಡುಗರು ಯಾವ ರೀತಿ ತಾತ್ಸಾರಭಾವ ಹೊ೦ದಿರ್ತಾರೆ, ಮನಸು ಮನಸುಗಳ ನಡುವಿನ ಭಾವತ೦ತು ಇ೦ದಿನ ಯಾ೦ತ್ರಿಕ ಯುಗದಲ್ಲಿ ಹೇಗೆ ನಿರ್ಭಾವುಕವಾಗಿ ಬಿಡುತ್ತದೆ, ಮುದಿಜೀವಗಳಿಗೆ ಬೇಕಾದ ಹಿಡಿಪ್ರೀತಿಯನ್ನು ಕೊಡುವುದು ಎಷ್ಟು ಅಗತ್ಯ ಎ೦ಬುದನ್ನು ವಿಶ್ವ ಹಿರಿಯ ನಾಗರಿಕರ ದಿನದ ಸ೦ದರ್ಭದಲ್ಲಿ, ಕರಿಬೇವಿನ ಎಲೆಯನ್ನು ರೂಪಕವಾಗಿಸಿ ಮನಮುಟ್ಟುವ೦ತೆ ಬರೆದಿದ್ದೀರಿ. ಚೆನ್ನಾಗಿದೆ. ಬರಹ ಕಾವ್ಯಮಯವಾಗಿದೆ. ನಿಮ್ಮ ಬ್ಲಾಗಿನ ಐವತ್ತನೇ ಲೇಖನ ಇದಾಗಿರುವುದರಿ೦ದ ನಿಮಗೆ ಪ್ರೀತಿಪೂರ್ವಕ ಅಭಿನ೦ದನೆ.

Rajesh Manjunath - ರಾಜೇಶ್ ಮಂಜುನಾಥ್ said...

ಶಿವು ಸರ್
ಒಳ್ಳೆಯ ಲೇಖನ, ಅದರಲ್ಲೂ ಸರಿಯಾದ ದಿನದಂದು....
ಅರ್ಧ ಶತಕ ಬಾರಿಸಿದ್ದೀರಿ, ಅಭಿನಂದನೆಗಳು. ಶತಕ ದಾಟಿ ಸಹಸ್ರದತ್ತ ನಿಮ್ಮ ಈ ಅಕ್ಷರಾಭಿಯಾನ ಸಾಗಲಿ ಎಂಬುದೇ ನನ್ನ ಹಾರೈಕೆ...

ಚಂದ್ರಕಾಂತ ಎಸ್ said...

ಶಿವೂ

ನಿಮ್ಮ ಐವತ್ತನೆಯ ಬರವಣಿಗೆಗೆ ಹಾರ್ದಿಕ ಶುಭಾಶಯಗಳು. ನಿಮ್ಮ ಬರವಣಿಗೆಯೂ ಐವತ್ತರ ಬಳಿ ಬರುವಷ್ಟರಲ್ಲಿ ಬಹಳ ಪಕ್ವತೆ ಪಡೆದಿದೆ.
ಇನ್ನೊಂದು ಮಾತು. ಐವತ್ತನೆಯ ವಯಸ್ಸು ವೃದ್ಧಾಪ್ಯ ಎಂದು ನಿಮಗ್ಯಾರು ಹೇಳಿದರು!!?? ಈಗಿನ ಮನಶ್ಯಾಸ್ತ್ರಜ್ಞರ ಪ್ರಕಾರ ನಲವತ್ತು ಮಧ್ಯವಯಸ್ಸು ಪ್ರಾರಂಭವಾಗುವ ಹೊತ್ತು. ಅರವತೈದರ ನಂತರವೇ ವೃದ್ಧಾಪ್ಯ ಪ್ರಾರಂಭವಾಗುತ್ತದೆ!!

ಹಾಗೆಯೇ ಈಗಿನ ಐವತ್ತನೆಯ ವಯಸ್ಸಿನವರು ಉದುರುವ ಎಲೆಯ ಹಾಗೆ ಕಾಣುವುದಿಲ್ಲ. ಆದರೂ ನಿಮ್ಮ ಬರವಣಿಗೆ ಬಹಳ ಚೆನ್ನಾಗಿದೆ.ಮಕ್ಕಳು ಹಿರಿಯರನ್ನು ಮರೆಯುವ ಬಗ್ಗೆ ಎಲ್ಲರೂ ಪ್ರತಿಕ್ರಿಯಿಸಿದ್ದಾರೆ. ನಿಜ ಅವರು ಅಲಕ್ಷಿಸಿದಾಗ ಅದನ್ನು ಎದುರಿಸಲು ಸಿದ್ಧವಾಗುವಂತೆ ಮನುಷ್ಯ ತನ್ನನ್ನು ತಾನು ಸಿದ್ಧಗೊಳಿಸಿಕೊಳ್ಳಬೇಕು.

ಅಂತರ್ವಾಣಿ said...

ಐವತ್ತನೆ ಪೋಸ್ಟಿಗೆ ಶುಭಾಶಯಗಳು. ಹೀಗೆ ಮುಂದುವರಿಯಲಿ.
ಲೇಖನ ತುಂಬಾ ಚೆನ್ನಾಗಿತ್ತು. ಎಲೆಯು ತುಂಬಾ ಚೆನ್ನಾಗಿ ಸಂಭಾಷಣೆ ಮಾಡಿದೆ.

SSK said...

Shivu avare, modalaneyadagi naanu nimage ondu vishaya tilisuttene, adenendare neevu nanna blog details nodi neevu re-comment maaduvaga ssk sir endu barediddiri. Ee google account nannavara hesarinalliruvudu nija, aadare namakaavaste ashte. Aadare ee blog chalaayisuttiruvudu naanu avara srimathi!

Naanu itteechege nannade ondu hosa blog open maadide, aadare naanu ee blog nalli bareyalu shuru maadi tumba dinagalaagittu. Nanna hosa blognalle bareyonavendukonde, aadare yaako ee blog annu bittu hogalu manassagalilla. Eshte aadaru naanu avara ardhaangi allave adakke!!

Innu neevu barediruva lekahanada bagge thilisabekendare, endinante chennaagi moodi bandide.
Naaneega nimage matte 2 vishayagalannu tilisalu icchisuttene, adenendare
1. Naavu karibevina soppaannu swalpavoo waste maaduvudilla, adannu etti bisakada reetiyalli sannadaagi cut maadi upayogisutteve.
2. Ee lekhanakke tadviruddavaagide namma anubhava, yakendare naanu nanna atteyavarannu namma jotheyalliye iruvante heli, ottaayisi saakagide. Yaako avaru oorinalliruva tamma maneyalli ontiyage iralu ishtapaduttaare mattu eshtu karedaroo baruvudilla endu heluttaare.

Idakke allave hiriyaru heliruvudu
HALLIDDAVARIGE KADALE ILLA, KADALE IDDAVARIGE HALLU ILLAA...... anta.!!

ಬಿಸಿಲ ಹನಿ said...

ಶಿವು,
ಮೊಟ್ಟ ಮೊದಲಿಗೆ ನಿಮ್ಮ ೫೦ನೇ ಪೋಸ್ಟಿಗಾಗಿ ಅಭಿನಂದನೆಗಳು. ಹಣ್ಣೆಲೆ ಕರಿಬೇವು ಎಲೆಯನ್ನು ಹಣ್ಣಾದ ಮುದಕನಿಗೆ ಹೋಲಿಸುತ್ತಾ ಅವರ ನಡುವಿನ ಸಾಮ್ಯತೆಯನ್ನು ಬಹಳ ಸೊಗಸಾಗಿ ತಂದಿದ್ದೀರಿ. ನಾನು ಗಮನಿಸಿದಂತೆ ಇಲ್ಲಿ ನಿಮ್ಮ ಭಾಷೆ ಭಾವಗೀತೆಯಾಗಿದೆ. ಬಾಷೆಗೆ ಕಾವ್ಯದ ಸ್ಪರ್ಶವನ್ನು ಕೊಡುವದು ಕೂಡ ಒಂದು ಕಲೆ! Keep it up! ಹೀಗೆ ಕಾವ್ಯಮಯವಾಗಿ ಬರೆಯುವರನ್ನು ಕಂಡರೆ ನನಗೆ ಹೊಟ್ಟೆ ಉರಿ.<....

Srinidhi said...

ಒಳ್ಳೆಯ ಬರಹ...

ರಾಯಲ್ ಸೊಸೈಟಿ ಅವಾರ್ಡ್ ಫೋಟೋಗಳನ್ನು ನೋಡಲು ಕಾಯ್ತಿದ್ದೀವಿ, ಬೇಗ ಹಾಕಿ!

Prabhuraj Moogi said...

50ನೇ ಲೇಖನಕ್ಕೆ ಶುಭಾಶಯ, ಹೀಗೆ ನಿಮ್ಮ ಬ್ಲಾಗು ಬೆಳೆಯುತ್ತಿರಲಿ ಎಂದು ಹಾರೈಕೆ, ಬೇವುಬೆಲ್ಲದ ನಂತರ ಬಂದ ನಿಮ್ಮ ಕರಿಬೇವು ಚೆನ್ನಾಗಿದೆ.

Unknown said...

ನಿಜವಾಗಲೂ ಇದು ಸಂಭ್ರಮಿಸಬೇಕಾದ ಸುದ್ದಿಯೇ! ನನ್ನ ಬ್ಲಾಗಿಗೆ ಬಂದವರ ಸಂಖ್ಯೆ ನೂರು ಐನೂರು ದಾಟಿದಾಗಲೂ ನನಗೆ ಖುಷಿಯಾಗಿತ್ತು. ಈಗ ಸಾವಿರ ದಾಟುವುದರಲ್ಲಿದೆ. ಇಂತಹ ಸಣ್ನಸಣ್ಣ ವಿಷಯಗಳೂ ಮನುಷ್ಯನನ್ನು ಖುಷಿಯಾಗಿಡಬಲ್ಲವು. (ವೊಡಾಫೋನ್ ಜಾಹಿರಾತುಗಳನ್ನು ಒಮ್ಮೆ ನೆನಪಿಸಿಕೊಳ್ಳಿ!) ನಿಮ್ಮ ಐವತ್ತು ಐನೂರಸಾವಿರವಾಗಲಿ ಎಂದು ಹಾರೈಸುತ್ತೇನೆ. ಈ ರೀತಿ ಒಂದು ಫೋಟೋ ಲೇಖನ ಕೊಡಬೇಕೆನ್ನುವ ನಿಮ್ಮ ಕಾನ್ಸೆಪ್ಟ್ ನನಗೆ ಇಷ್ಟವಾಯಿತು.

Ittigecement said...

ಶಿವು.....

ಈ ಲೇಖನದಿಂದ ಪ್ರಭಾವಿತನಾದೆ...
ನಿಮ್ಮ ಈ ಥರಹದ ಪ್ರಯೋಗ ಇಷ್ಟವಾಗುತ್ತದೆ...
ಬರವಣಿಗೆಯಲ್ಲಿ ಪಕ್ವತೆ ಕಾಣುತ್ತಿದೆ...

ಹಿರಿಯರ ದಿನಕ್ಕೆ ಅರ್ಥಪೂರ್ಣವಾದ ಲೇಖನ...

ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಇಂಥಹ
ಲೇಖನಗಳು ಇನ್ನಷ್ಟು ಬರಲಿ...

ನಿಮ್ಮ ಐವತ್ತನೆ ಲೇಖನಕ್ಕೆ ಶುಭಾಶಯಗಳು...

ಹೆಚ್ಚಿಗೆ ಹೇಳಿದರೆ "ಗೆಳೆಯ" ಹೊಗಳುತ್ತಾನೆ ಎಂದಾಗಿಬಿಡುತ್ತದೆ...

ನೀವು, ನಿಮ್ಮ ಲೇಖನಗಳು ಹೊಗಳಿಕೆಗೆ ಅರ್ಹರು...

ಅಭಿನಂದನೆಗಳು....

Umesh Balikai said...

ಶಿವು ಸರ್,

ನಿಮ್ಮ ಬ್ಲಾಗ್ ಪೋಸ್ಟ್ ಗಳ ಸುವರ್ಣ ಮಹೋತ್ಸವದ ಹಾರ್ದಿಕ ಶುಭಾಶಯಗಳು.

ವೃದ್ಧರನ್ನು ಕರಿಬೇವಿಗೆ ಹೋಲಿಸಿದ್ದೀರಿ. ಹೇಗೆ ಕರಿಬೇವನ್ನು ಅಡುಗೆ ಮಾಡುವವರೆಗೆ ಬಳಸಿ ನಂತರ ಊಟ ಮಾಡುವಾಗ ತೆಗೆದು ಬಿಸಾಕುತ್ತೇವೆಯೋ ಹಾಗೆ ವೃದ್ಧರನ್ನು ಈಗಿನ ಸುಮಾರು ಯುವ ಜನತೆ ಕಡೆಗಣಿಸುತ್ತಿರುವುದು ವಿಷಾದದ ಸಂಗತಿ. ಹಿರಿಯರನ್ನು ಗೌರವಿಸುವುದು, ಆದರಿಸುವುದು ನಮ್ಮ ಆದ್ಯ ಕರ್ತವ್ಯ. ಬೇರೆಯವರು ಬೇಡ, ಕಡೇ ಪಕ್ಷ ನಮ್ಮ ತಂದೆ-ತಾಯಿಯನ್ನಾದರೂ ಅವರ ಮುಪ್ಪಿನ ಕಾಲದಲ್ಲಿ ಜೋಪಾನವಾಗಿ ನೋಡಿಕೊಳ್ಳುವುದು ನಮ್ಮ ಧರ್ಮ.

ಮನಮೋಹಕ ಚಿತ್ರ-ಲೇಖನಕ್ಕೆ ಅಭಿನಂದನೆಗಳು

ವಿ.ರಾ.ಹೆ. said...

ಶಿವು ಸಾರ್,

ಚಂದದ ಚಿತ್ರಲೇಖನ ... ಶುಭಾಶಯಗಳು ನಿಮಗೆ..

ಬಾಲು said...

ಶಿವು ಅವರೇ, 50 ನೇ ಲೇಖನ ಕೆ ಶುಭಾಶಯಗಳು.

ಎಲ್ಲ ಹಿರಿಯರಿಗೂ ಅಂತಹ ಸ್ಥಿತಿ ಬರೂಲ್ಲ, ಮಕ್ಕಳನ್ನು ಬೆಳೆಸುವ ರೀತಿಯಲ್ಲೂ ಇರುತ್ತದೆ ಅಲ್ಲವ?

shivu.k said...

Hari solunky said,

Dear Shivu,

Thank U for reminding to-day is world elders day,sorry I cound't watch your programme on Kasturi channel at KGF, we have only SUN dish more over there was no power between 10 to 11 pm that day. sory please give me a recorded CD. Dr. Hari. and this is nice writeup...keep it up...all the best..

shivu.k said...

Rajaram K S said,

Dear Shivu, Congrats.. for your half Centuri.. keep it up .... Can U pl send the bEvinele kathe to Devegowda, Karrage, D singh, and all those Hiriyaas.. and ask them if they have any thing to recall as to be Honoured as the little leaf said.... (being productive even after its burrial.) all the best.............. regards rajaram

shivu.k said...

charitha mysore said,

dear shivu,....congrats on ur 50th article...

ವಿನುತ said...

ಶಿವುರವರೆ,

ಮೊದಲನೆಯದಾಗಿ ನಿಮ್ಮ ೫೦ ನೆ ಬ್ಲಾಗ್ ಬರಹಕ್ಕೆ ಅಭಿನ೦ದನೆಗಳು.
ಈ ಬರಹವು ಸಕಾಲಿಕವಾಗಿದೆ. ನನಗನ್ನಿಸಿದ್ದಿಷ್ಟು. ಕರಿಬೇವಿನ ಮಹತ್ವ ತಿಳಿದಿಲ್ಲದವರಷ್ಟೇ ಅದನ್ನು ಅಡುಗೆಗೆ ಬಳಸಿ, ಉಣ್ಣುವಾಗ ತೆಗೆದಿಡುವುದು. ಹಿರಿಯರ ಅನುಭವ, ಪ್ರೀತಿ, ಅಕ್ಕರೆಗಳಿದ್ದರೆ ಅದು ಮನೆಯಾಗುವುದು. ಇಲ್ಲವಾದಲ್ಲಿ ಕೇವಲ ಸಿಮೆ೦ಟು ಮರಳುಗಳ ಒ೦ದು ಕಟ್ಟಡವಷ್ಟೇ. ಹಳೆ ಬೇರು ಹೊಸ ಚಿಗುರು ಇದ್ದಾಗಲೇ ಮರ. ಇಲ್ಲವಾದಲ್ಲಿ ಕಟ್ಟಿಗೆ ತು೦ಡು.

ಕ್ಷಣ... ಚಿಂತನೆ... said...

ಶಿವು ಅವರೆ ಐವತ್ತನೆಯ ಲೇಖನಕ್ಕೆ ಅಭಿನಂದನೆಗಳು.

ಜೊತೆಗೆ ಹಿರಿಯರ ದಿನದಂದೇ ಈ ಲೇಖನ ಸೂಕ್ತವಾಗಿ, ಸೂಕ್ಷ್ಮವಾಗಿ ಯಾವ ಸಂದೇಶವನ್ನು ಯುವವರ್ಗದವರಿಗಷ್ಟೇ ಅಲ್ಲದೇ ಸಮಾಜದೊಂದಿಗಿರುವವರೆಲ್ಲರಿಗೂ ಹಿರಿಯರನ್ನು ಕಾಣುವ ಬಗೆಯನ್ನು ಹೇಗೆ ತಿಳಿಸಬೇಕೋ ಹಾಗೆ ತಿಳಿಸುತ್ತಿದೆ. ಚಿತ್ರ ಮತ್ತು ಕರಿಬೇವಿನ ಎಲೆಯ ಮಾತುಗಳು, ವೃದ್ಧನ ತುಮುಲ ಇವೆಲ್ಲ ಒಂದಕ್ಕೊಂದು ಸೂಕ್ತವಾಗಿ ಹೊಂದಿಸಿ ಬರೆದಿದ್ದೀರಿ. ಒಟ್ಟಿನಲ್ಲಿ ಕ್ಯಾಮೆರಾ ಭಾಷೆಯಲ್ಲಿಯೇ ತಿಳಿಸುವುದಾದರೆ ಸಬ್ಜೆಕ್ಟು, ಕಾಂಸೆಪ್ಟು, ಕಂಪೊಸಿಷನ್‌, ಕ್ಲೈಮಾಕ್ಸು ಎಲ್ಲ ಒಂದಕ್ಕೊಂದು ಪೂರಕವಾಗಿವೆ.

ಧನ್ಯವಾದಗಳು

Sushrutha Dodderi said...

ಐವತ್ತನೇ ಪೋಸ್ಟಿಗೆ ಶುಭಾಶಯಗಳು ಶಿವು..

ಶಿವಪ್ರಕಾಶ್ said...

ಶಿವು ಅವರೇ,
ನಿಮ್ಮ ೫೦ನೆ ಲೇಖನಕ್ಕೆ ಹಾಗು ವಿಶ್ವ ಹಿರಿಯರ ದಿನದ ಶುಭಾಶಯಗಳು...
ಜೀವನದ ಪ್ರತಿಯೊಂದು ಹಂತವು ಚಂದ,
ಅದಕ್ಕೆ ಅಲ್ವ ಹೇಳೋದು ...
"ಮಕ್ಕಳಾಟವು ಚಂದ ಮತ್ತೆ ಯೌವನ ಚಂದ, ಮುಪ್ಪಿನಲಿ ಚಂದ ನರೆಗಡ್ಡ ಜಗದೊಳಗೆ, ಎತ್ತ ನೋಡಿದರೂ ನಗು ಚಂದ"

ಧನ್ಯವಾದಗಳು...

ಶರಶ್ಚಂದ್ರ ಕಲ್ಮನೆ said...

ಶಿವು ಅವ್ರೆ,
ನಿಮ್ಮ ೫೦ ನೆ ಪೋಸ್ಟ್ ಗೆ ಹಾರ್ದಿಕ ಅಭಿನಂದನೆಗಳು :) ನಿಮ್ಮ ಬರಹ ಪ್ರೀತಿ ಹೀಗೆ ಮುಂದುವರೆದು ಶತಕಗಳನ್ನು ಸಹಸ್ರಗಳನ್ನು ದಾಟಲಿ.... ಶುಭವಾಗಲಿ

ಶರಶ್ಚಂದ್ರ ಕಲ್ಮನೆ

ಧರಿತ್ರಿ said...

ಶಿವಣ್ಣ ....
ಛಾಯಾಕನ್ನಡಿಯ 'ಸುವರ್ಣಮಹೋತ್ಸವ'ಕ್ಕೆ ಶುಭಾಶಯಗಳು...

ಇನ್ನಷ್ಟು ಬರೆಯಿರಿ......

ಶರಧಿಯಂತೆ ನಿಮ್ಮ ಬರಹಗಳು ಸಾಗುತ್ತಿರಲಿ....

ಹಿರಿಯರ ಕುರಿತಾದ ಕಾಳಜಿ, ಕಿರಿಯರಿಗಿರುವ ಜವಾಬ್ದಾರಿಯನ್ನು ಉತ್ತಮ ಪರಿಕಲ್ಪನೆ ಮೂಲಕ ಹೇಳಿದ್ದೀರಿ. ಶುಭವಾಗಲಿ.

-ಧರಿತ್ರಿ

shivu.k said...

ಗುರುಮೂರ್ತಿ ಹೆಗಡೆ ಸರ್,

ಹಿರಿಯರ ದಿನಕ್ಕಾಗಿ ಒಂದು ಭಾವಪೂರ್ಣ ಲೇಖನವನ್ನು ಮೊದಲೇ ಬರೆದಿದ್ದೆ. ಮತ್ತು ಹಾಗೆ ಎತ್ತಿಟ್ಟಿದ್ದೆ. ಈ ದಿನ ಬಂದಿದ್ದು ಆ ಲೇಖನಕ್ಕೆ ಸೂಕ್ತವಾಗಿದ್ದು ನನ್ನ ಅದೃಷ್ಟವೆನಿಸಿತ್ತು. ನನ್ನ ಐವತ್ತನೇ ಪೋಷ್ಟಿಂಗ್ ಮುಗಿದಿದೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಮತ್ತೆ ಹಿರಿಯರೆಡೆಗೆ ಒಂದು ನುಡಿನಮನವನ್ನು ಈ ರೀತಿ ಸಲ್ಲಿಸುವ ಬಯಕೆ ಈಗ ಈಡೇರಿದಂತಾಯಿತು.

ಧನ್ಯವಾದಗಳು....

shivu.k said...

ಪರಂಜಪೆ ಸರ್,

ಹಿರಿಯರ ಬಗೆಗೆ ಬರೆದ ಲೇಖನದ ಒಟ್ಟಾರೆ ಸಾರಂಶವನ್ನು ನೀವು ಚೆನ್ನಾಗಿ ಗ್ರಹಿಸಿದ್ದೀರಿ. ಹಾಗೆ ಇದು ಸರಿಯಾಗಿ ನನ್ನ ಅರ್ದ ಶತಕಕ್ಕೆ ಮುಟ್ಟಿದ್ದು ಕೂಡ ಕಾಕತಾಳೀಯ..
ಮತ್ತೆ ನನಗೆ ಐವತ್ತನೇ ಪೋಸ್ಟಿಂಗ್ ಅಂತ ವಿಶೇಷವೆನಿಸಿರಲಿಲ್ಲ. ಏಕೆಂದರೆ ಐವತ್ತು ...ನೂರು..ಈ ಸಂಖ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅವಕ್ಕೆ ಮಾತ್ರ ತುಂಬಾ ಕಾಳಜಿ ಶ್ರದ್ಧೆ ವಹಿಸಿದಾಗ...ಉಳಿದ ಲೇಖನಗಳ ತಯಾರಿಯಲ್ಲಿ... ಬರವಣಿಗೆಯಲ್ಲಿ ನಿರುತ್ಸಾಹ ಬರುವುದುಂಟು.....ಆದ ಕಾರಣ ನನಗೆ ಪ್ರತಿ ಹೊಸ ಲೇಖನ ಸಿದ್ದಪಡಿಸುವಾಗಲು ಅದು ಮೊದಲಿನದಕ್ಕಿಂತ ಚೆನ್ನಾಗಿರಬೇಕು, ವಿಭಿನ್ನವಾಗಿರಬೇಕು ಎನ್ನುವ ಕಾಳಜಿ ನನಗೆ ಸದಾ ಇದ್ದೇ...ಇದೆ.

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....
ಧನ್ಯವಾದಗಳು.

shivu.k said...

ರಾಜೇಶ್,

ಹಿರಿಯರ ದಿನಕ್ಕಾಗಿ ಭಾವಪೂರ್ಣ ಲೇಖನವನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು...ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ ಧನ್ಯವಾದಗಳು.

shivu.k said...

ಚಂದ್ರ ಕಾಂತ ಮೇಡಮ್,

ನನ್ನ ಐವತ್ತನೇ ಪೋಸ್ಟಿಂಗ್‌ಗೆ ಸ್ವಲ್ಪ ಬೇಗಬಂದು ಅಭಿನಂದಿಸಿದ್ದೀರಿ ಧನ್ಯವಾದಗಳು. ಮತ್ತೆ ನಿಮ್ಮ ಪಕ್ವವಾಗಿದೆ ಅನ್ನುವ ಪದ ನನಗೆ ಮತ್ತಷ್ಟು ಈ ಕೃಷಿಯಲ್ಲಿ ಸಾಗಲು ಶಕ್ತಿಕೊಡುವಂತಿದೆ.

ನೀವು ಸೇರಿದಂತೆ ಕೆಲವರಿಂದ ಇಂಥ ಅಭಿಪ್ರಾಯ ಬರುತ್ತದೆ ಅಂತ ನಿರೀಕ್ಷಿಸಿದ್ದೆ.

ಈ ಲೇಖನವನ್ನೂ ಬ್ಲಾಗಿನಲ್ಲಿ ಹಾಕುವುದಕ್ಕೂ....ಹಿರಿಯರ ದಿನ ಬರುವುದಕ್ಕೂ..ನನ್ನ ಬರಹ ಐವತ್ತು ತಲುಪುವುದಕ್ಕೂ ಎಲ್ಲಾ ಹೊಂದಿಕೆಯಾಗಿದ್ದರಿಂದ "ಐವತ್ತು ವೃದ್ಧಾಪ್ಯದ ಕಡೆಗೆ ನೆಟ್ಟ ನೋಟ" ಅಂತ ಬರೆದಿದ್ದೇನೆ ಆಷ್ಟೇ.

ನಿಜಕ್ಕೂ ನೀವು..ಸುನಾಥ್ ಸರ್ ಸೇರಿದಂತೆ ಆನೇಕ ಹಿರಿಯರು ಇಷ್ಟೊಂದು ಆಕ್ಟೀವ್ ಆಗಿರುವುದು ನೋಡಿದರೆ ಖುಷಿಯಾಗುತ್ತದೆ ಮತ್ತು ಸ್ಪೂರ್ತಿಉಂಟಾಗುತ್ತದೆ...ಈಗಲೂ ನನಗೆ ಕಿರಿಯರಿಗಿಂತ ಎಪ್ಪತ್ತು ದಾಟಿದ ಅಬ್ದುಲ್ ಕಲಾಂ, ನಡೆದಾಡುವ ದೇವರು ನೂರು ದಾಟಿದ ಶಿವಕುಮಾರ ಸ್ವಾಮೀಜಿ, ನಮ್ಮ ಅರವತ್ತು ದಾಟಿದ ssy ಋಷಿ ಪ್ರಭಾಕರ ಗುರುಜೀ ಸೇರಿದಂತೆ....ಅನೇಕರು ರೋಲ್ ಮಾಡೆಲ್ಲುಗಳೇ....ಕೆಲವರಿಗೆ ಮುಪ್ಪೆನ್ನುವುದೇ ಇಲ್ಲವೇನೋ ಅನಿಸುವಂತೆ ಅವರೆಲ್ಲಾ ಪ್ರತಿಕ್ಷಣವೂ ಜೀವಿಸುತ್ತಿರುವುದು ನಮಗೆಲ್ಲಾ ಅನುಕರಣೀಯಾ... ನಾನು ಹೇಳಿದ ಐವತ್ತು..ಎಪ್ಪತ್ತೈದು...ನೂರು...ಅನ್ನುವುದೆಲ್ಲಾ ಕೇವಲ ಸಂಖ್ಯೆಗಳಾಗೆ ಉಳಿದುಬಿಡುತ್ತವೆ.
ನನ್ನ ಬರವಣಿಗೆ ಉದ್ದೇಶದಲ್ಲಿ ಅನ್ಯತ ಭಾವಿಸಬೇಡಿ...
ಧನ್ಯವಾದಗಳು...

b.saleem said...

ಶಿವು ಸರ್
ನಿಮ್ಮ ೫೦ನೆ ಬರಹಕ್ಕೆ ಮತ್ತು ವಿಶ್ವ ಹಿರಿಯರ ದಿನದ ಶುಭಾಶಯಗಳು.
ಗಾಳಿ ಬೀಸಿದೆಡೆಗೆ, ಮರಳಿ ಮಣ್ಣಿನೆಡೆಗೆ, ಮಣ್ಣಿನ ಕಣದೊಳಗೆ ಸೇರಿ ಮೂಲಸತುವಾಗುವ ಸಾರ್ಥಕತೆಯ ಕಡೆಗೆ.
ಈ ಮಾತು ತುಂಬಾ ಅರ್ಥಗರ್ಬಿತವಾಗಿದೆ ಸರ್.

shivu.k said...

ಜಯಶಂಕರ್,

ಹೊಸ ಪ್ರಯೋಗವಾದ ಒಣಎಲೆಯ ಸಂಭಾಷಣೆ ಮೆಚ್ಚಿದ್ದಕ್ಕೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು...

shivu.k said...

ssk medam,

ನೀವು ಹೇಳಿದಂತೆ ನಿಮ್ಮ ಬ್ಲಾಗಿಗೆ ಹೋದೆ...ಅಲ್ಲಿ ನಿಮ್ಮ ಹೆಸರು ಇರಲಿಲ್ಲ...ಮತ್ತೆ ಲೇಖನಗಳನ್ನು ಬಿಡುವು ಮಾಡಿಕೊಂಡು ಓದುತ್ತೇನೆ...ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ...

ಮತ್ತೆ ಲೇಖನದ ವಿಚಾರವಾಗಿ ನೀವು ಕರಿಬೇವಿನ ಬಗ್ಗೆ ಹೇಳಿದ್ದು ಇಷ್ಟವಾಯಿತು...ನನ್ನ ಲೇಖನದ ಉದ್ದೇಶ ಒಂದು ಹೋಲಿಕೆಯಷ್ಟೇ... ನಿಮ್ಮಂತೆ ನಾನು ಕರಿಬೇವನ್ನು ಬಿಸಾಡುವುದಿಲ್ಲ...

ಮತ್ತೆ ನಿಮ್ಮ ಅತ್ತೆಯವರ ಬಗೆಗಿನ ಅನುಭವವೇ ನನ್ನ ತಾಯಿಯ ಕತೆಯೂ ಕೂಡ. ಅವರು ಕೂಡ ಎಷ್ಟು ಕರೆದರೂ ಬೆಂಗಳೂರಿಗೆ ಬರುವುದಿಲ್ಲ...ಮತ್ತು ಹಳ್ಳಿಯನ್ನೇ ಇಷ್ಟಪಡುತ್ತಾರೆ....ಇದು ಅವರ ಸ್ವಾಭಿಮಾನದ ಸಂಕೇತವೆಂದು ನಾವು ಸಂತೋಷ ಪಡಬೇಕು ಅಷ್ಟೇ ಅಲ್ಲವೇ...
ಕೊನೆಗೆ ಹಿರಿಯರು ಹೇಳಿದ ಗಾದೆ ಮಾತನ್ನು ನಾನು ನೀವು ಒಪ್ಪಿದರೂ...ನಾವಂದುಕೊಂಡ ಹಾಗೆ ಏನು ನಡೆಯುವುದಿಲ್ಲವೆಂದಕೊಂಡು ಸಮಾಧಾನಪಟ್ಟುಕೊಳ್ಳಬೇಕು ಅಲ್ಲವೇ....
ಒಟ್ಟಾರೆ ದೀರ್ಘವಾದ ಉತ್ತರ, ಅನುಭವ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು...

shivu.k said...

ಉದಯ್ ಸರ್,

ನನ್ನ ಹೊಸ ಲೇಖನದ ಎಲ್ಲಾ ಭಾವರ್ಥಗಳನ್ನು ಸಂಪೂರ್ಣ ಅರ್ಥೈಸಿದ್ದೀರಿ. ನಾನು ಬರೆದಿದ್ದಕ್ಕೂ ಸಾರ್ಥಕ. ಮತ್ತೆ ಭಾಷೆಗೆ ಕಾವ್ಯದ ಸ್ಪರ್ಶದ ಕೊಡುವುದು ಅಂದಿದ್ದೀರಿ..ಇದು ಹೇಳಿದ ಮೇಲೆ ಗೊತ್ತಾಗಿದ್ದು...ಈ ರೀತಿಯೂ ಇದೆಯಾ ಅಂತ....ಮತ್ತೆ ಅದೆಲ್ಲಾ ನಿರೀಕ್ಷೆ ಇಟ್ಟುಕೊಟ್ಟುಕೊಳ್ಳದೇ ನಡೆದ ಘಟನೆಯ ಅನುಭವ ಮತ್ತು ಬರೆಯುವಾಗಿನ ಆನಂದ ಅನುಭವಿಸುವುದಷ್ಟೇ ನನಗೆ ಗೊತ್ತಿರುವುದು...
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...
ಧನ್ಯವಾದಗಳು...

shivu.k said...

ಟಿ.ಜಿ.ಶ್ರೀನಿಧಿ,

ಪ್ರೋತ್ಸಾಹಕ್ಕೆ ಧನ್ಯವಾದಗಳು. ಸಾಧ್ಯವಾದಷ್ಟು ಬೇಗ ಹಾಕುತ್ತೇನೆ. ನಿಮ್ಮ ನಿರೀಕ್ಷೆ ಹುಸಿಗೊಳಿಸುವುದಿಲ್ಲ...

shivu.k said...

ಪ್ರಭುರಾಜ್,

ಬೇವುಬೆಲ್ಲದ ನಂತರ ಬಂದ ಕರಿಬೇವನ್ನು enjoy ಮಾಡಿದ್ದೀರಿ...ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..

shivu.k said...

ಡಾ.ಬಿ.ಅರ್. ಸತ್ಯನಾರಾಯಣ ಸರ್,

ನಿಮ್ಮ ಸಂಭ್ರಮವೇ ನನ್ನದೂ ಕೂಡ. ಚಿಕ್ಕ ಸಂತೋಷಗಳನ್ನು ನಾನು ತುಂಬಾ ಇಷ್ಟಪಡುತ್ತೇನೆ....ಅದಕ್ಕಾಗಿ..
http://chaayakannadi.blogspot.com/2009/02/blog-post.html
ಇದನ್ನೂ ನೋಡಿ..

ನಿಮ್ಮ ಪ್ಯಾಮಿಲಿಯನ್ನು ತೇಜಸ್ವಿ ನೆನಪಿನ ಕಾರ್ಯಕ್ರಮದಲ್ಲಿ ನೋಡಿ ಸಂತೋಷವಾಯಿತು....

ನಿಮ್ಮ ಹಾರೈಕೆಗೆ ಧನ್ಯವಾದಗಳು...

shivu.k said...

ಪ್ರಕಾಶ್ ಸರ್,

ನಿಮ್ಮ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು. ನನ್ನ ಅನೇಕ ವಿಚಾರಗಳಲ್ಲಿ ನಿಮ್ಮ ಅನುಭವದ ಮೂಲಕ ತಿದ್ದಿದ್ದೀರಿ....ನಾನು ತುಂಬಾ ಕಲಿತಿದ್ದೇನೆ...
ನನಗೆ ಫೋಟೊಗ್ರಫಿಯಲ್ಲಾಗಲಿ...ಅಥವ ಬರವಣಿಗೆಯಲ್ಲಾಗಲಿ ಹೊಸ ಪ್ರಯೋಗ ಮಾಡಲು ನನಗೆ ಮಜಾ ಬರುತ್ತೆ...ಪಲಿತಾಂಶಗಳನ್ನು ನಿರೀಕ್ಷೆ ಮಾಡೋಲ್ಲ...ಮಾಡುವ ಕ್ಷಣಗಳನ್ನು enjoy ಮಾಡುತ್ತೇನೆ...ಅನುಭವಿಸುತ್ತೇನೆ....
ನಿಮ್ಮ ಪ್ರತಿಕ್ರಿಯೆಯನ್ನು ನಾನೆಂದು ಹೊಗಳಿಕೆಯೆಂದುಕೊಳ್ಳುವುದಿಲ್ಲ...

ಧನ್ಯವಾದಗಳು..

shivu.k said...

ಉಮೀ ಸರ್,

ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು..

"ಹಿರಿಯರನ್ನು ಗೌರವಿಸುವುದು, ಆದರಿಸುವುದು ನಮ್ಮ ಆದ್ಯ ಕರ್ತವ್ಯ. ಬೇರೆಯವರು ಬೇಡ, ಕಡೇ ಪಕ್ಷ ನಮ್ಮ ತಂದೆ-ತಾಯಿಯನ್ನಾದರೂ ಅವರ ಮುಪ್ಪಿನ ಕಾಲದಲ್ಲಿ ಜೋಪಾನವಾಗಿ ನೋಡಿಕೊಳ್ಳುವುದು ನಮ್ಮ ಧರ್ಮ". ಈ ಮಾತುಗಳೇ ನನ್ನ ಲೇಖನದ ಉದ್ದೇಶ. ನನಗು ನಿಮ್ಮ ಅನಿಸಿಕೆ ಇಷ್ಟವಾಯಿತು...

ಧನ್ಯವಾದಗಳು...

shivu.k said...

ವಿಕಾಶ್,

ಧನ್ಯವಾದಗಳು...

shivu.k said...

ಬಾಲು ಸರ್,

ನಿಮ್ಮ ಮಾತನ್ನು ಒಪ್ಪುತ್ತೇನೆ...ನಿಜ. ಅದ್ರೆ ಏನೇ ಅದರೂ ಕೊನೆಗಾಲದಲ್ಲಿ ನೋಡಿಕೊಳ್ಳುವುದು ನಮ್ಮ ಧರ್ಮ ಅಲ್ಲವೇ....

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

shivu.k said...

ಡಾ. ಹರಿನಾರಯಣ್ ಸರ್,

ಹಿರಿಯರ ದಿನವನ್ನು ನೀವು enjoy ಮಾಡಿ. ಮತ್ತೆ ನನ್ನ ಕಸ್ತೂರಿ ಚಾನಲ್ಲಿನ ಸಿಡಿಯನ್ನು ನಿಮಗೆ ಸಾಧ್ಯವಾದಷ್ಟು ಬೇಗ ತಲುಪಿಸುತ್ತೇನೆ...
ಧನ್ಯವಾದಗಳು..

shivu.k said...

ರಾಜರಾಂ ಸರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಮತ್ತೆ ನೀವು ತಿಳಿಸಿದ ಹಿರಿಯರಿಗೆ ನಾನು ನನ್ನ ಕತೆಯನ್ನು ತಲುಪಿಸಲು ಸಾಧ್ಯವಿಲ್ಲ ಸಾರ್....ರಾಜಕೀಯದವರಿಗೆ ಇದ್ಯಾವುದು ತಲುಪುವುದಿಲ್ಲ...ನಮ್ಮಂಥ ಸಾಮಾನ್ಯರಿಗೆ ಇದೆಲ್ಲಾ ಅಲ್ಲವೇ...

shivu.k said...

ಚರಿತಾ ಮೇಡಮ್,

ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್...

shivu.k said...

ವಿನುತಾ ಮೇಡಮ್,

ಐವತ್ತನೇ ಲೇಖನಕ್ಕೆ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದೀರಿ...

ಮತ್ತೆ ಲೇಖನದ ವಿಚಾರವಾಗಿ ಅವಿಭಕ್ತ ಕುಟುಂಬದ ವಿಚಾರವನ್ನು ನೆನಪಿಸಿದ್ದೀರಿ...ಮತ್ತೆ ಭಾವಾನಾತ್ಮಕವಾಗಿ ಮನೆಯೆನ್ನುವ ಕಟ್ಟಡದ ಬಗ್ಗೆ ಚೆನ್ನಾಗಿ ಹೇಳಿದ್ದೀರಿ...

ಧನ್ಯವಾದಗಳು...

shivu.k said...

ಕ್ಷಣ ಚಿಂತನೆ ಸರ್,

ಈ ಲೇಖನವನ್ನು ಬರೆದಿಟ್ಟಿದ್ದರೂ ಹಾಕಲು ಮನಸ್ಸಾಗಿರಲಿಲ್ಲ...ಒಂದು ದಿನ ಮೊದಲೇ ಹಿರಿಯರ ದಿನ ಅಂತ ಗೊತ್ತಾದ ಮೇಲೆ ಇದನ್ನು ಹಾಕಿದೆ....ಫೋಟೋವನ್ನು...ಮತ್ತು ಲೇಖನದ ಭಾವನಾತ್ಮಕ ವಿಚಾರವನ್ನು ಇಷ್ಟಪಟ್ಟಿದ್ದೀರಿ...

ಧನ್ಯವಾದಗಳು..

shivu.k said...

ಸುಶ್ರುತ..ಧನ್ಯವಾದಗಳು...

shivu.k said...

ಶಿವಪ್ರಕಾಶ್,

ಹಿರಿಯರ ದಿನ ಶುಭಾಶಯಕ್ಕೆ ಮತ್ತು ಲೇಖನ ನೀವು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

"ಜೀವನದ ಪ್ರತಿಯೊಂದು ಹಂತವು ಚಂದ,
ಅದಕ್ಕೆ ಅಲ್ವ ಹೇಳೋದು ...
"ಮಕ್ಕಳಾಟವು ಚಂದ ಮತ್ತೆ ಯೌವನ ಚಂದ, ಮುಪ್ಪಿನಲಿ ಚಂದ ನರೆಗಡ್ಡ ಜಗದೊಳಗೆ, ಎತ್ತ ನೋಡಿದರೂ ನಗು ಚಂದ"

ನಿಮ್ಮ ಮಾತನ್ನು ನಾನು enjoy ಮಾಡುತ್ತೇನೆ...
ಧನ್ಯವಾದಗಳು..

shivu.k said...

ಶರತ್ ಚಂದ್ರ,

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....
ನಿಮ್ಮ ಓದು..ಮತ್ತು ಪರೀಕ್ಷೆಗಳು ಚೆನ್ನಾಗಿ ಸಾಗಲಿ...
ಧನ್ಯವಾದಗಳು...

shivu.k said...
This comment has been removed by the author.
shivu.k said...

ಸಲೀಂ,

ನೀವು ಮೆಚ್ಚಿದ ಸಾಲುಗಳು ನನಗೂ ತುಂಬಾ ಇಷ್ಟ.

ಅದನ್ನು ಬರೆಯುವಾಗ ತುಂಬಾ enjoy ಮಾಡಿದ್ದೇನೆ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

PaLa said...

ಶಿವು,
ಅರ್ಧ ಶತಕಕ್ಕೆ ಧನ್ಯವಾದ. ನಿಮ್ಮ ಬರವಣಿಗೆಯ ಶೈಲಿ ಹಿಡಿಸಿತು.

ಪ್ರಸಿದ್ಧ ಲೇಖಕರೊಬ್ಬರು (ಮೂರ್ತಿರಾವ್/ಕಾರಂತ - ಸರಿ ನೆನಪಿಲ್ಲ), ಮಕ್ಕಳು ಚಿಕ್ಕವರಿರಬೇಕಾದ್ರೆ ತಮ್ಮ ಪ್ರೀತಿಯಿಂದ ನಮ್ಮ ಋಣ ಎಲ್ಲಾ ತೀರಿಸಿ ಬಿಡ್ತಾರೆ, ಅವು ಬೆಳೆದ ಮೇಲೆ ಬಹುಷಃ ಇನ್ನೇನೂ ಕೊಡೋಕೆ ಉಳಿದಿರೊಲ್ಲ ಅಂತ ಹೇಳಿದ್ದಾರೆ.

ಚಂದ್ರಕಾಂತ ಮೇಡಂ ಹೇಳಿದಂತೆ ನಾವು ಇಂತಹ ಪರಿಸ್ಥಿತಿಗೆ ತಯ್ಯಾರಾಗಿರೋದು ಒಳ್ಳೆಯದೇನೋ!

ಕಾರಂತರಿಗೆ ಇಳಿ ವಯಸ್ಸಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಾಗ ಕರ್ನಾಟಕ ಸರ್ಕಾರ ಅವರಿಗೆ ನಿವೇಶನ ಮನೆ ಒದಗಿಸುವುದಾಗಿ ಹೇಳಿದಾಗ, ಕಾರಂತರು "ಕಾರಂತ ತನ್ನ ಕಾಲಮೇಲೆ ತಾನೇ ನಿಂತುಕೊಳ್ಳಬಲ್ಲ" ಅಂತ ಹೇಳಿದ್ದು ಇದಕ್ಕೇ ಏನೋ. ೯೦ರ ವಯಸ್ಸಲ್ಲಿ ಅವರು ನಮ್ಮ ಶಾಲೆಯಲ್ಲಿ ಯಕ್ಷಗಾನ ಮಾಡಿದ್ದು ಕಣ್ಣಿಗೆ ಕಟ್ಟಿದಂತಿದೆ!

shivu.k said...

ಪಾಲಚಂದ್ರ,

"ಮಕ್ಕಳು ಚಿಕ್ಕವರಿರಬೇಕಾದ್ರೆ ತಮ್ಮ ಪ್ರೀತಿಯಿಂದ ನಮ್ಮ ಋಣ ಎಲ್ಲಾ ತೀರಿಸಿ ಬಿಡ್ತಾರೆ, ಅವು ಬೆಳೆದ ಮೇಲೆ ಬಹುಷಃ ಇನ್ನೇನೂ ಕೊಡೋಕೆ ಉಳಿದಿರೊಲ್ಲ ಅಂತ ಹೇಳಿದ್ದಾರೆ".

ವಾಹ್! ಸೂಪರ್ ಮೇಲಿನ ಸಾಲುಗಳು....ಇದನ್ನು ಹೇಳೀರುವ ಹಿರಿಯರಿಗೆ ನನ್ನ ಧನ್ಯವಾದಗಳು...
ಬಹುಶಃ ವಯಸ್ಸಾದವರು ಮುಂದೆ ಕೊರಗದೆ ಮತ್ತು ಏನು ನಿರೀಕ್ಷಸದೇ ಧನ್ಯಜೀವನ ಮಾಡಲು ಹೀಗೆ ಹೇಳಿರಬಹುದೇನೋ....
ಅದಕ್ಕೆ ತಕ್ಕಂತೆ ನಿವೇಶನದ ಬಗ್ಗೆ ಕಾರಂತರ ಸ್ವಾಭಿಮಾನದ ವಿಚಾರವನ್ನು ತಿಳಿಸಿದ್ದೀರಿ...
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

ಧನ್ಯವಾದಗಳು....

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
Golden ಜ್ಯುಬಿಲಿ. ಅಭಿನಂದನೆಗಳು.
ಕರಿಬೇವು ಹೇಳುವ ಮಾತುಗಳು ಅರ್ಥಪೂರ್ಣ. ಅದು ಎಲ್ಲರಿಗೂ ಅನ್ವಯಿಸುತ್ತೆ. ಫೋಟೋ ಮತ್ತು ಲೇಖನ ಎರಡೂ ಮಾದರಿಯಾಗಿದೆ. ತನ್ನನ್ನು ಬಿಸಾಡಿದರೂ ತಾನು ಮುಂದಿನವರ ಏಳಿಗೆಗಾಗಿ ಕರಗುವೆ ಎಂಬುದು ನಿಜಕ್ಕೂ ಒಳ್ಳೆ message.Thanks.

shivu.k said...

ಮಲ್ಲಿಕಾರ್ಜುನ್,

ಕರಿಬೇವಿನ ಕೊನೆಯ ಮಾತುಗಳ ನೀವು ಗಮನಿಸಿದ್ದಕ್ಕೆ ಥ್ಯಾಂಕ್ಸ್..ನನ್ನ ಉದ್ದೇಶ ಸಾರ್ಥಕವೆನಿಸುತ್ತದೆ....

ನಿಮ್ಮೆಲ್ಲರ ಪ್ರೋತ್ಸಹವೇ ನನ್ನ ಬರವಣಿಗೆಯ ಕೃಷಿಯಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಲು ಮನಸ್ಸಾಗುತ್ತಿದೆ...

ಧನ್ಯವಾದಗಳು...

shivu.k said...

ಧರಿತ್ರಿ...

ಸುವರ್ಣ ಮಹೋತ್ಸವ ಅನ್ನುವ ದೊಡ್ಡ ಪದ ಬಳಸಿಬಿಟ್ಟೀದ್ದೀಯ...ನನಗೆ ಭಯವಾಗುತ್ತೆ....ಏನೋ ಇಷ್ಟಪಟ್ಟು ಬರೆದ ಲೇಖನಗಳನ್ನು ನೀವೆಲ್ಲಾ ಪ್ರೋತ್ಸಾಹಿಸುತ್ತಿದ್ದೀರಿ...

ಹಿರಿಯರ ಬಗೆಗೆ ಇದು ನಾನು ಇಷ್ಟಪಟ್ಟು ಬರೆದ ಲೇಖನ...

ಧನ್ಯವಾದಗಳು..

guruve said...

ಶಿವು,

೫೦ ನೇ ಲೇಖನಕ್ಕೆ ಅಭಿನಂದನೆಗಳು.. ಇನ್ನೂ ಹೆಚ್ಚು ಹೆಚ್ಚು ಬರಲಿ...
ಈ ಕಥೆಯಿಂದ ಕಲಿಯುವುದು ಸಾಕಷ್ಟಿದೆ....

shivu.k said...

ಗುರುಪ್ರಸಾದ್,

ನಿಮ್ಮ ಮಾತು ಸತ್ಯ.. ಮತ್ತು ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

NiTiN Muttige said...

ಶಿವು ಅವರೇ, ಮೊದಲಿನ ಚಿತ್ರವೇ ಲೇಖನಕ್ಕೆ ಶೋಭೆ ತಂದಿದೆ.

shivu.k said...

ನಿತಿನ್,

ಚಿತ್ರವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...

divya vittal said...

ಎಲ್ಲ ಹಿರಿಯ ಜೀವಗಳಿಗೆ ಇನ್ನು ಆ ದೇವರು ದೀರ್ಗಾಯುಷ್ಯ ,ಆರೋಗ್ಯಮತ್ತು ನೆಮ್ಮದಿ ನೀಡಲಿ .ನಿಮ್ಮ ಕಾಳಜಿ ಹಾಗು ಬರವಣಿಗೆ ಎರಡೂ ಇಷ್ಟ ಆಯ್ತು ನಿಮ್ಮ ಮುಂದಿನ ಎಲ್ಲ ಬರವಣಿಗೆಗೂ ನನ್ನ ಶುಭ ಹಾರೈಕೆಗಳು .

divya vittal said...

ಎಲ್ಲ ಹಿರಿಯ ಜೀವಗಳಿಗೆ ಇನ್ನು ಆ ದೇವರು ದೀರ್ಗಾಯುಷ್ಯ ,ಆರೋಗ್ಯಮತ್ತು ನೆಮ್ಮದಿ ನೀಡಲಿ .ನಿಮ್ಮ ಕಾಳಜಿ ಹಾಗು ಬರವಣಿಗೆ ಎರಡೂ ಇಷ್ಟ ಆಯ್ತು ನಿಮ್ಮ ಮುಂದಿನ ಎಲ್ಲ ಬರವಣಿಗೆಗೂ ನನ್ನ ಶುಭ ಹಾರೈಕೆಗಳು .

divya vittal said...

ಎಲ್ಲ ಹಿರಿಯ ಜೀವಗಳಿಗೆ ಇನ್ನು ಆ ದೇವರು ದೀರ್ಗಾಯುಷ್ಯ ,ಆರೋಗ್ಯಮತ್ತು ನೆಮ್ಮದಿ ನೀಡಲಿ .ನಿಮ್ಮ ಕಾಳಜಿ ಹಾಗು ಬರವಣಿಗೆ ಎರಡೂ ಇಷ್ಟ ಆಯ್ತು ನಿಮ್ಮ ಮುಂದಿನ ಎಲ್ಲ ಬರವಣಿಗೆಗೂ ನನ್ನ ಶುಭ ಹಾರೈಕೆಗಳು .

Naveen ಹಳ್ಳಿ ಹುಡುಗ said...

Namasthe Shivu anna..
Lekhana tumba arthapurnavagide...

Indina "The Hindu" patrikeyali nimma mathu Malikarjunara kurithada lekhana odi thumba Kushiyagthaide...

Ige ninna Camera Jeevana Yashaswiyagi sagali antha harisuthene..

Inthi Nimma preethiya Abhimani...

Anonymous said...

ಶಿವೂ ನಿಮ್ಮ ಪ್ರತಿ ಬರಹವೂ ಅರ್ಥ ಮತ್ತು ಭಾವ ಎರಡರಿಂದ ಮೌಲ್ಯ ಹೆಚ್ಚಿಸಿಕೊಂಡಿರುತ್ತದೆ. ಹೀಗೆ ಬರೆಯುತ್ತಿರಿ..
ಶುಭವಾಗಲಿ,
ಶಮ, ನಂದಿಬೆಟ್ಟ

ಅನಿಲ್ ರಮೇಶ್ said...

ಶಿವು,
ಐವತ್ತನೆಯ ಬ್ಲಾಗ್ ಬರಹಕ್ಕೆ ನನ್ನ ಅಭಿನಂದನೆಗಳು.

ಈ ಲೇಖನಕ್ಕೆ ಈಗ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಲೇಖನ ತುಂಬಾ ಹಿಡಿಸಿತು. ಇನ್ನಷ್ಟು ಲೇಖನಗಳು ನಿಮ್ಮಿಂದ ಬರಲಿ.

shivu.k said...

eದಿವ್ಯ ಮೇಡಮ್,

ಹಿರಿಯರ ಬಗ್ಗೆ ನಿಮ್ಮ ಕಾಳಜಿ ಪ್ರೀತಿ...ನನಗೆ ಇಷ್ಟವಾಯಿತು...ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....

shivu.k said...

ನವೀನ್,

ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದೀರಿ...ನನಗೂ ಖುಷಿಯಾಯಿತು....ಲೇಖನ ನೀವು ಇಷ್ಟಪಟ್ಟಿದ್ದೀರಿ.....

ಭಾನುವಾರ ಉದಯವಾಣಿಯಲ್ಲಿ,..ಟೈಮ್ಸ್ ಆಪ್ ಇಂಡಿಯ ಕನ್ನಡದಲ್ಲಿ, ಸೋಮವಾರ ಡೆಕ್ಕನ್ ಹೆರಾಲ್ಡ್‌ನಲ್ಲಿ,...ಮತ್ತು ಸಂಯುಕ್ತ ಕರ್ನಾಟಕದಲ್ಲಿ ಇದೇ ವಿಚಾರ ಮತ್ತು ಫೋಟೋಗಳು ಬಂದಿವೆ...
ಮತ್ತೆ ಇವತ್ತಿನ ಹಿಂದು ದಿನಪತ್ರಿಕೆಯಲ್ಲಿ ನಮ್ಮ ಛಾಯಾಗ್ರಹಣ ಮತ್ತು ನಮ್ಮ ಕುರಿತಾದ ಲೇಖನ ಓದಿ ಮೆಚ್ಚಿದ್ದೀರಿ....ಮತ್ತೆ ನೀವು ನನ್ನ ಅಭಿಮಾನಿಯಾಗಿದ್ದೀರಿ ಅನ್ನುವ ಮಾತು ನನಗೆ ತುಂಬಾ ಮುಜುಗರ ತರಿಸುತ್ತದೆ...ನಾನೇನು ವಿಶೇಷವಲ್ಲ...ನಿಮ್ಮಂತೆ ಸ್ವಲ್ಪ ಕ್ಯಾಮೆರಾ ಹಿಡಿದು ಓಡಾಡುತ್ತೇನೆ...ಅಷ್ಟೇ...
ನನ್ನ ಮುಂದಿನ ಲೇಖನ ಒಂದು ಹೊಸ ವಿಚಾರದ ನಗು ತರಿಸುವ ವಸ್ತು...ನೋಡಿ ನಗಲು ಬನ್ನಿ...
ಮತ್ತೆ ಹೀಗೆ ಬರುತ್ತಿರಿ...
ಧನ್ಯವಾದಗಳು....

shivu.k said...

ಶಮ ಮೇಡಮ್,

ನಿಮ್ಮ ಮೆಚ್ಚಿಗೆಯ ಮಾತುಗಳು ನನಗೆ ಸ್ಪೂರ್ತಿಯುತ ಟಾನಿಕ್ ಕೊಟ್ಟಂತೆ ಆಗುತ್ತಿದೆ....ಮತ್ತಷ್ಟು ಹೊಸ ವಿಚಾರಗಳಿಗೆ ತೆರೆದುಕೊಳ್ಳಲು ಮನಸ್ಸು ಸಿದ್ಧಗೊಳ್ಳುತ್ತಿದೆ..
ಹೀಗೆ ಬಂದು ಪ್ರೋತ್ಸಾಹಿಸಿ...ಧನ್ಯವಾದಗಳು...

shivu.k said...

ಅನಿಲ್ ರಮೇಶ್,

ತಡವಾದರೂ ನೀವು ಬರುತ್ತೀರೆಂದು ನನಗೆ ಅನ್ನಿಸುತ್ತೆ..
ಲೇಖನ ಮೆಚ್ಚಿದ್ದಕ್ಕೆ ಮತ್ತು ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Anonymous said...

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ...
ಮಕ್ಕಳಿಗೆ ತಂದೆ-ತಾಯಿಯರು ಬೆಳೆಯುವಾಗ ಕಲಿಸುವ ನೀತಿಯೇ ಅವರನ್ನು ರೂಪಿಸುವುದು. (ಕೆಟ್ಟ ಸಂಘದಿಂದ ಕೆಟ್ಟುಹೋಗಬಹುದು, ಆದರೆ, ಹಾಗಾಗದಂತೆ ಎಚ್ಚರವಹಿಸುವುದು ತಂದೆ-ತಾಯಿಯರ ಕರ್ತವ್ಯವಲ್ಲವೇ) ಇಂದಿನ ಬಹುತೇಕರು ತಮ್ಮ ಮಕ್ಕಳಿಗೆ ಯಾವ ನೀತಿ ಕೊಡುತ್ತಿದ್ದಾರೆ? "ಮಗನೇ, ಚೆನ್ನಾಗಿ ಓದಿ, ಕಲಿತು ಒಳ್ಳೆಯ ಸಂಬಳದ ಕೆಲಸ ಗಿಟ್ಟಿಸಿಕೋ". ಇದನ್ನೇ ತಲೆಯಲ್ಲಿ ತುಂಬಿಸಿ, ತುಂಬಿಸಿ, ಅವರ ತಲೆಯಲ್ಲಿ ಹಣಕ್ಕೇ ಅಂತಸ್ತಿಗೇ ಪ್ರಾಮುಖ್ಯತೆಯುಳಿಯುವುದೇ ಹೊರತು, ಸಂಬಂಧಗಳಿಗಲ್ಲ..

ಚೆನ್ನಾಗಿ ಬರೆದಿದ್ದೀರಿ ಸಾರ್.. ಮರಳಿ ಮಣ್ಣಿನೆಡೆಗೆ..
ಮನ್ಣಿದ ಬಂದ ನಾವು, ಮಣ್ಣಿಗೇ ಸೇರುವೆವೆ.. :-)

Prashanth Arasikere said...

namaskara shivu,
ondu photo nooru matu helutte anthare ade tara ide nimma photo..photo nodudre saku adara ola artha gottagutte..hagu lekana kuda chennagide...mugiyadirali...lekhana..all the best.

Unknown said...

ಜೀವನದ ಜಂಜಾಟಗಳ ಮಧ್ಯೆ ನಿಮಗೆ ಅಭಿನಂದನೆ ಸಲ್ಲಿಸೋದು ಸ್ವಲ್ಪ ತಡವಾಯಿತು... ದಿ ಹಿಂದೂ ದಲ್ಲಿ ಬಂದ ನಿಮ್ಮ ಪ್ರಶಸ್ತಿ ಕುರಿತಾದ ವಾರ್ತೆ ಓದಿದೆ... ತುಂಬ ಸಂತೋಷವಾಯಿತು... ಪ್ರಶಸ್ತಿ ಬಂದಿದ್ದಕ್ಕೆ ನಿಮಗೆ ಅಭಿನಂದನೆಗಳು...

ಲೇಖನ ಚೆನ್ನಾಗಿದೆ... ಹೀಗೆ ಮುಂದುವರೆಸಿ...ನಿಮ್ಮ ಮಿತ್ರ ಮಲ್ಲಿಕಾರ್ಜುನ್ ಅವರಿಗೂ ನನ್ನ ಅಭಿನಂದನೆ ತಿಳಿಸಿ...
ಅಂದ ಹಾಗೆ ನಿಮ್ಮನ್ನ ಒಂದು ವಿಷ್ಯ ಕೇಳ್ಬೇಕು... ನೀವು ದಿನಕ್ಕೆ ಎಸ್ಟ್ ಗಂಟೆ ನಿದ್ದೆ ಮಾಡ್ತಿರಾ? :-) ( ನಿದ್ದೆ ಮಾಡ್ತಿರೋ ಇಲ್ವೋ?!!!)

ಗಿರಿ said...

ಪ್ರೀತಿಯ ಶಿವಣ್ಣಾ,
ನಾನು ಒಂದು ವಾರ ಊರಿಗೆ ಹೋಗಿದ್ದರಿಂದ ನಿಮ್ಮ ಬ್ಲಾಗಿಗೆ ಬರಲು ತಡವಾಯಿತು...

ನೀವು ಹಿರಿಯರ ದಿನಕ್ಕಾಗಿ, ಅವರ ಬಗ್ಗೆ ಕೇವಲ ಒಂದು ಬರಹ ಬರೆದು ನಿರಾಳರಾಗಿದ್ದಲ್ಲವೆಂದು ಅರ್ಥವಾಗುತ್ತದೆ.
ಪ್ರೀತಿ, ಗೌರವದಿಂದ ತುಂಬಿ ತುಳುಕಿದೆ.
ಅಲ್ಲೊಂದು ಕಾಳಜಿ, ಕಳಕಳಿ ಇತ್ತು.
ವಿನಮ್ರವಾದ ವಿನಂತಿಯೂ ಇತ್ತು.
ಜೊತೆಗೊಂದು ಸಂದೇಶವೂ ಇತ್ತು - "ಕೆರೆಯ ನೀರನು ಕೆರೆಗೆ ಚೆಲ್ಲಿ"...

-ಗಿರಿ

shivu.k said...

ಪ್ರದೀಪ್,

ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ...
ಮಕ್ಕಳ ಸ್ಕೂಲ್ ಮನೇಲಲ್ವೇ....ಅನ್ನೋದು ನಿಜ ಸರ್,

"ಇಂದಿನ ಬಹುತೇಕರು ತಮ್ಮ ಮಕ್ಕಳಿಗೆ ಯಾವ ನೀತಿ ಕೊಡುತ್ತಿದ್ದಾರೆ? "ಮಗನೇ, ಚೆನ್ನಾಗಿ ಓದಿ, ಕಲಿತು ಒಳ್ಳೆಯ ಸಂಬಳದ ಕೆಲಸ ಗಿಟ್ಟಿಸಿಕೋ". ಇದನ್ನೇ ತಲೆಯಲ್ಲಿ ತುಂಬಿಸಿ, ತುಂಬಿಸಿ, ಅವರ ತಲೆಯಲ್ಲಿ ಹಣಕ್ಕೇ ಅಂತಸ್ತಿಗೇ ಪ್ರಾಮುಖ್ಯತೆಯುಳಿಯುವುದೇ ಹೊರತು, ಸಂಬಂಧಗಳಿಗಲ್ಲ.". ನಿಮ್ಮ ಮಾತು ಕೂಡ ಇದೇ ಅರ್ಥ ಕೊಡುತ್ತದೆ....
ಹಿರಿಯರ ಬಗ್ಗೆ ನಿಮ್ಮ ಅಭಿಪ್ರಾಯವೂ ಸರಿಯಿದೆ ಎನಿಸುತ್ತದೆ..ಧನ್ಯವಾದಗಳು.

shivu.k said...

ಪ್ರಶಾಂತ್,

ಎಲ್ಲರೂ ಲೇಖನದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುತ್ತಿದ್ದರೆ...ನೀವು ಚಿತ್ರ ಬಗ್ಗೆ ಹೇಳುತ್ತಿದ್ದಿರಿ...ನಾನು ಛಾಯಾಗ್ರಾಹಕನಾಗಿ ಇದನ್ನು ಇಷ್ಟಪಡುತ್ತೀನಿ...
ಧನ್ಯವಾದಗಳು.

shivu.k said...
This comment has been removed by the author.
shivu.k said...

ರವಿಕಾಂತ್ ಸರ್,

ದಿನಪತ್ರಿಕೆ ಬ್ಲಾಗ್ ಎಲ್ಲಾ ಕಡೆ ಗುರುತಿಸಿ ಪ್ರೋತ್ಸಾಹಿಸುತ್ತಿದ್ದೀರಿ..ಧನ್ಯವಾದಗಳು
ಮತ್ತೆ ಮಲ್ಲಿಕಾರ್ಜುನ್ ಗೂ ನಿಮ್ಮ ಅಭಿನಂದನೆ ತಿಳಿಸುತ್ತೇನೆ...

ನಾನು ನಿದ್ರಿಸುವ ವಿಚಾರದಲ್ಲಿ ನಿಮಗೂ ಸೇರಿದಂತೆ ಅನೇಕರಿಗೆ ಕುತೂಹಲವಿದೆ...ರಾತ್ರಿ ಹನ್ನೊಂದು ಗಂಟೆಗೆ ಮಲಗಿ ಮುಂಜಾನೆ ನಾಲ್ಕು ಗಂಟೆಗೆ ಏಳುತ್ತೇನೆ...ಸರ್...
ಆ ಸಮಯದಲ್ಲಿ ಚೆನ್ನಾಗಿ ನಿದ್ರೆ ಮಾಡುತ್ತೇನೆ...
ಧನ್ಯವಾದಗಳು..ಸರ್.

shivu.k said...

ಆತ್ಮೀಯ ಗಿರಿ,

ನೀವು ತಡವಾಗಿ ಬಂದರೂ ತೊಂದರೆಯಿಲ್ಲ...

ನಾನು ನಿಮ್ಮಂತೆ ಇತ್ತೀಚೆಗೆ ಕೆಲಸ ಜಾಸ್ತಿಯಾದ್ದರಿಂದ ಹೀಗೆ ಆಗುತ್ತಿದೆ.... ಹಿರಿಯರ ಬಗ್ಗೆ ನನಗೆ ಮೊದಲು ಈ ರೀತಿಯೆಲ್ಲಾ ಅನಿಸಿರಲಿಲ್ಲ...ನನ್ನ ಇಲ್ಲವಾದ ಮೇಲೆ ಎಲ್ಲಾ ಹಿರಿಯರ ಕಡೆಯೂ ನೋಡತೊಡಗಿದೆ..
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...
ಹೀಗೆ ಬರುತ್ತಿರಿ...ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗಿಗೂ ಬರುತ್ತೇನೆ...
ಸಾಧ್ಯವಾದರೆ ನಿಮ್ಮ ಈ ಮೇಲ್ ಐಡಿ ಕೊಡಿ...

ವನಿತಾ / Vanitha said...

ತುಂಬಾ ಹಿಡಿಸಿತು..
ಶುಭಾಶಯಗಳೊಂದಿಗೆ,
ವನಿತಾ.

shivu.k said...

ವನಿತಾ ಮೇಡಮ್,

ಥ್ಯಾಂಕ್ಸ್...ಮತ್ತೆ ಈಗ ಹೊಸ ಲೇಖನವನ್ನು ಹಾಕಿದ್ದೇನೆ...ಬಿಡುವು ಮಾಡಿಕೊಂಡು ನೋಡಿ...

ಧನ್ಯವಾದಗಳು..