Sunday, September 20, 2009

ಕುಲುಮೆ

ಕತೆಗಾರ ನಾನು ಎಂದು ಹೇಳಿಕೊಳ್ಳುವ ಯೋಗ್ಯತೆ ಖಂಡಿತ ನನಗಿಲ್ಲ. ಹಾಗೂ ಮೂಲತಃ ನಾನು ಬರಹಗಾರನೂ ಅಲ್ಲ. ಮೊದಲು ಸಣ್ಣ ಪುಟ್ಟ ಚಿತ್ರಲೇಖನಗಳನ್ನು ಬರೆದು ಪತ್ರಿಕೆಗೆ ಕಳಿಸುತ್ತಿದ್ದೆ. ಪ್ರಕಟವಾದಾಗ ಖುಷಿಯಾಗುತ್ತಿತ್ತು. ಈಗ ಬ್ಲಾಗಿನಲ್ಲಿ ಸ್ವಲ್ಪ ಗೀಚುತ್ತಿದ್ದೇನೆ. ಇಂಥ ಹಿನ್ನೆಲೆಯ ನನಗೇ ಈ ಪುಟ್ಟ ಕತೆ ಏಕೆ ನನ್ನೊಳಗೆ ಕಾಡುತ್ತಿತ್ತೋ ಗೊತ್ತಿಲ್ಲ. ನನ್ನಿಂದ ಬರೆಯಲು ಸಾಧ್ಯವಿಲ್ಲವೆಂದು ಉಡಾಫೆಯಿಂದಿದ್ದರೂ ಇದು ಯಾವ ರೀತಿ ಕಾಡಿತೆಂದರೇ ಇನ್ನೂ ನಾನು ಸುಮ್ಮನಿರಲೂ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆಗಿ ಕೂತು ಬರೆಸಿಕೊಂಡಿತು. ಬರೆದ ಮೇಲೆ ದೊಡ್ಡ ಹೊರೆ ಇಳಿಸಿದಷ್ಟು ಸಮಾಧಾನ. ಒಂದಷ್ಟು ದಿನ ಅದೇ ಗುಂಗಿನಲ್ಲಿದ್ದು ಈಗ ನಿಮ್ಮ ಮುಂದೆ ಇಡುತ್ತಿದ್ದೇನೆ.

------------ ---------------- ------------------

ಅದೇನಲೇ ಮಂಗ್ಯ, ಸಣ್ಣ ಮಗನ್ನ ಮನಗಿಸ್ಯಾಕೆ ಬೆನ್ನು ತಟ್ಟುತ್ತಾರಲ್ಲ ಅಂಗೆ ತಟ್ಟುತ್ತಿದ್ದಿ, ಅದು ಕಬ್ಬಿಣ ಕಣ್ಲ, ಒಸಿ ಜೋರಾಗಿ ಏಟು ಹಾಕ್ಲ, ನೀನು ಹಿಂಗೆ ಬಡಿತಿದ್ರೆ ಕ್ಯಾಮೆ ಆದಂಗೆಯಾ...ಕುಲುಮೆಯಲ್ಲಿ ಕಾದ ಕಬ್ಬಿಣದ ತುಂಡಿಗೆ ಉಸ್ ಉಸ್ ಉಸಿರು ಬಿಡುತ್ತಾ ಸುತ್ತಿಗೆಯಿಂದ ಟಣ್ ಟಣ್ ಟಣ್......ಬಡಿಯುತ್ತಿದ್ದ ಮಂಜನಿಗೆ ಕಮ್ಮಾರ ಶೆಟ್ಟಿ ರೇಗಿದಾಗ ತನ್ನದೇ ಆಲೋಚನೆಯಲ್ಲಿ ದಗ ದಗ ದಗೆಯನ್ನು ಮರೆತು ಕೆಲಸ ಮಾಡುತ್ತಿದ್ದ ಆ ಹುಡುಗನಿಗೆ ದಗೆಯ ಜೊತೆಗೆ ಉರಿಬಿಸಿಲು ಮೈ ಮುತ್ತಿದಂತಾಯಿತು. ಅವನಿಗೆ ಅದೇನು ಹೊಸದಲ್ಲ. ಕಳೆದ ಒಂದು ತಿಂಗಳಿಂದ ಸಡಗರ, ಕುತೂಹಲ, ಆಕಾಂಕ್ಷೆಗಳೆಲ್ಲಾ ಮಾಯಾವಾಗಿ ಒಂದು ರೀತಿಯ ಜಿಗುಪ್ಸೆ, ವೇದನೆಗಳು ಬೆನ್ನುಮೂಳೆಯ ಚಳುಕಿನಂತೆ ಅವನನ್ನು ಕಾಡುತ್ತಿವೆ.

ಶಿಥಿಲಗೊಂಡು ಜೀರ್ಣವಾಗಿ ಹೋಗಿದ್ದ, ಬಣ್ಣ ಕಾಣದ, ಬಾಗಿಲೇ ಇಲ್ಲದ ಆ ಗುಡಿಸಲು ಹೊರನೋಟಕ್ಕೆ ಕಮ್ಮಾರಶೆಟ್ಟಿಯಂತೆ ಜಬರದಸ್ತಾಗಿ ಕಂಡರೂ ಒಳಗಡೆ ಕುಲುಮೇಲಿ ನಡೆಯುವ ಬಡಿದಾಟ, ಬಗ್ಗಿಸುವುದು, ತಟ್ಟುವುದು ಎಲ್ಲಾ ಅವನ ಬೈಗುಳ, ಜಿಗುಟುತನ, ಕೋಪದಂತೆ ಜೊತೆಯಲ್ಲೇ ಸಾಗುತ್ತಿತ್ತು ಕಬ್ಬಿಣದ ತುಂಡುಗಳಿಗೆ ಮತ್ತು ಕೆಲಸ ಮಾಡುವ ಬಾಲಕಾರ್ಮಿಕರಿಗೆ.

ಎದುರುಗಡೆ ಸರ್ವದಿಕ್ಕಿಗೂ ತನ್ನ ರೆಂಬೆಕೊಂಬೆಗಳನ್ನು ಹರಡಿಕೊಂಡಿದ್ದ ಆಲದ ಮರದ ಕೆಳಗೆ ಒಂದು ಮುರುಕು ಕುರ್ಚಿ ಹಾಕಿಕೊಂಡು ಬಾಯೊಳಗೆ ಎಲೆಅಡಿಕೆಯೊಂದಿಗೆ ಹೊಗೆಸೊಪ್ಪು ಜಗಿಯುತ್ತಾ, ತುಪಕ್ಕೆಂದು ಬಾಯಿಂದ ಆಗಾಗ ಕೆಂಪುನೀರು ಹೊಡೆಯುತ್ತಾ ಎದುರು ಕುಳಿತವರ ಜೊತೆ ಗಂಟೆಗಟ್ಟಲೇ ಹರಟುತ್ತಾನೆ ಕಮ್ಮಾರಶೆಟ್ಟಿ. ಅದಿನ್ನೆಂತಾ ಘನಾನ್‌ದಾರಿ ವಿಷಯಗಳಿರುತ್ತವೋ...ಎದುರು ಕುಳಿತವರು ಇವನ ಮಾತನ್ನು ಕೇಳಲು ಬರುತ್ತಾರೋ ಅಥವ ಕಮ್ಮಾರ ಶೆಟ್ಟಿಯೋ ದಿನಕ್ಕೊಬ್ಬರಂತೆ ಜೊತೆಗಾಕಿಕೊಂಡು ಬರುತ್ತಾನೋ, ಇಲ್ಲ ಇವನು ಕೊಡಿಸುವ ಅರ್ಧ 'ಚಾ" ದ ದಾಕ್ಷಿಣ್ಯಕ್ಕಾಗಿ ಇವನಿಗಂಟಿಕೊಂಡಿರುತ್ತಾರೋ ತಿಳಿಯದು. ಆದರೆ ಒಂದಂತು ನಿಜ. ಗುಡಿಸಲಲ್ಲಿರುವ ಕೆಲಸಗಾರರನ್ನು ಬೈಯ್ಯುವುದು, ಹೊರಗೆ ಆಲದ ಮರದಡಿ ಕುಳಿತು ಹರಟುವುದು, ಜೊತೆಗಾರರ ಜೊತೆ ಊರ ಉಸಾಬರಿಗಳನ್ನೆಲ್ಲಾ ತನ್ನ ಮೇಲೆಳೆದುಕೊಳ್ಳುವಂತೆ ಮಾತಾಡುತ್ತಾ, ಕಾಲು ನೋವುಬಂತೆಂದು ಎದ್ದು ತಿರುಗಾಡಿ ರಸ್ತೆ ಅಳತೆ ಹಾಕುವುದು ಇವಿಷ್ಟೇ ಜೀವನದಲ್ಲಿ ಕಲಿತದ್ದು ಇದು ಬಿಟ್ಟರೇ ಬೇರೇನು ಗೊತ್ತಿಲ್ಲವೆನ್ನುವಷ್ಟರ ಮಟ್ಟಿಗೆ ಸಾಗಿತ್ತು ಕಮ್ಮಾರಶೆಟ್ಟಿಯ ದಿನಚರಿ.

ನಿದಾನವಾಗಿ ಸೂರ್ಯ ಪಶ್ಚಿಮ ದಿಕ್ಕಿಗೆ ಜಾರುತ್ತಿದ್ದ ಯಾರೋ ಆಕರ್ಷಿಸುತ್ತಿದ್ದಾರೆನ್ನುವಷ್ಟರ ಮಟ್ಟಿಗೆ. ರಂಗೇರಿದ್ದ ಸೂರ್ಯನಂತೆ ಮಂಜನ ಮುಖದಲ್ಲೂ ನಿಟ್ಟುಸಿರು ಇಣುಕಿ ಸಮಾಧಾನದ ಗಾತ್ರ ಹೆಚ್ಚಾಗುತ್ತಿತ್ತು. ಸಂಜೆಯಾಗುತ್ತಿದ್ದಂತೆ ಈ ನರಕ ಸದೃಶ ಕೆಲಸದಿಂದ ಅಂದಿನ ಮಟ್ಟಿಗೆ ಬಿಡುಗಡೆಯಾಗಿ ಮನೆಯ ಹಾದಿ ಹಿಡಿಯಬಹುದಲ್ಲ ಎಂದು. ಎದುರು ಆಲದ ಮರದ ಕೆಳಗೆ ಕಮ್ಮಾರ ಶೆಟ್ಟಿ ಕೂರದೆ ಊರಲ್ಲೆಲ್ಲೋ ಸುತ್ತಾಡಲು ಹೋಗಿದ್ದರಿಂದ ನಿರಮ್ಮಳವಾದಂತಾಗಿ ಮಂಜ ತನ್ನ ಜೊತೆಗಾರನೊಂದಿಗೆ ಮಾತಾಡುತ್ತಾ ಕುಳಿತ. ಸೂರ್ಯ ಮುಳುಗಿ ಕತ್ತಲು ತನ್ನ ಕರಿಬಾಹುಗಳನ್ನು ನಿದಾನವಾಗಿ ಆವರಿಸಿಕೊಳ್ಳುತ್ತಿತ್ತು.

ಆಷ್ಟೋತ್ತಿಗೆ ಎಲ್ಲಿಗೋ ಹೋಗಿದ್ದ ಕಮ್ಮಾರಶೆಟ್ಟಿ ಬಂದವನೇ, "ಲೋ ಮಂಜ, ಹೀರ ಆಯ್ತೇನ್ರೋ, ಹೋಗಿ ಕೈಕಾಲು ತೊಳಕೊಂಡು ಮನೆಗೆ ಹೋಗಿ, ನಾಳೆ ಒತ್ತಾರೆ ಬೇಗನೆ ಬಂದುಬಿಡಿ, ಹೋಗುತ್ತಾ ಬಾಗಿಲು ಮುಚ್ಚಿ ಹೋಗಿ" ಎಂದ ಗತ್ತಿನಿಂದ ಮುರುಕು ಚಾಪೆಯನ್ನು ತೋರಿಸಿ. ಅರ್ಧಂಬರ್ಧ ತಯಾರಾದ ಕಬ್ಬಿಣದ ವಸ್ತುಗಳನ್ನು ಹೆಗಲ ಮೇಲೇರಿಸಿ ಜೊತೆಗಿದ್ದವನ ಜೊತೆ ಮನೆಯ ಕಡೆ ಹೆಜ್ಜೆ ಹಾಕತೊಡಗಿದ. ಈಗ ಹೊರಟಿದ್ದು ಮನೆಯ ಕಡೆಗಾದರೂ ಹೆಗಲಮೇಲಿದ್ದವನ್ನು ಮನೆಯೊಳಗೆ ಇಟ್ಟ ಮೇಲೆ ಮನಸ್ಸು ಮತ್ತು ಹೆಜ್ಜೆಗಳು ಒಂದಾಗಿ ಸಾಗುತ್ತಿದ್ದುದ್ದು ಕಳ್ಳಬಟ್ಟಿಸಾರಾಯಿ ಅಂಗಡಿಗೆ ಎಂಬುದು ಇಡೀ ಊರಿಗೆ ತಿಳಿದ ವಿಷಯವಾಗಿತ್ತು.

ಆಷ್ಟರಲ್ಲಾಗಲೇ ಮಬ್ಬು ಆವರಿಸಿತ್ತು. ನಾಳೆ ಬರುವ ಎಂದು ಹೀರ ಮಂಜನಿಗೆ ಹೇಳಿ ತನ್ನ ಊರು ಕಬ್ಬಳ್ಳಿಯ ಹಾದಿಯನ್ನು ಸೀಳತೊಡಗಿದಾಗ ಮಂಜನೂ ಇತ್ತ ತನ್ನೂರು ತಳ್ಳೀಗೆ ಹೊರಡಲನುವಾದನು, ಕಮ್ಮಾರ ಶೆಟ್ಟಿಯ ಮಾತು ನೆನಪಾಗಿ ಮುರುಕು ಚಾಪೆಯ ಬಾಗಿಲು ಹೊಚ್ಚಲು ಹೋದ. ಒಳಗೆ ಏನಿದೆ ಕದಿಯಲು! ನೆಲ ಹಗೆದು ಕೂರಿಸಿದ ಕುಲುಮೆ ಬಿಟ್ಟರೆ ಗೋಡೆಗೊಂದು ಗಣೇಶ ಕ್ಯಾಲೆಂಡರ್ ಮಾತ್ರ. ಗಣೇಶನೂ ಕೂಡ ಆ ಕತ್ತಲಿಗೆ ಬೆದರಿ ಏಕಾಂಗಿಯಾಗಿರಲು ಇಷ್ಟಪಡದೇ ನಾನು ಬರುತ್ತೇನೆ ಎನ್ನುವಂತಿತ್ತು. ಮುರುಕು ಚಾಪೆಯ ಕದವಿಕ್ಕಿ ಎರಡು ಮೈಲು ದೂರದ ತನ್ನೂರಿನತ್ತ ಕತ್ತಲನ್ನು ಸೀಳುತ್ತಾ ಮಬ್ಬು ನೆರಳಂತೆ ಹೆಜ್ಜೆ ಹಾಕತೊಡಗಿದ ಮಂಜ.

ನಿರ್ಜನ ದಾರಿಯನ್ನು ಸೀಳುತ್ತಾ ತಣ್ಣನೇ ಕೊರೆಯುವ ಚಳಿ ಲೆಕ್ಕಿಸದೇ ಹೊತ್ತಾಗೋಯ್ತು ಅಂದುಕೊಳ್ಳುವಾಗ ಚೆನ್ನಯ್ಯ ಮೇಷ್ಟು ನೆನಪಾದರು. ಎಂಟನೇ ತರಗತಿಯನ್ನು ಓದುತ್ತಿದ್ದ ಮಂಜ ಸ್ಕೂಲ್ ಬಿಡಲು ದೊಡ್ಡ ಕಾರಣವೇ ಇತ್ತು. ತನ್ನ ತಮ್ಮ ಮತ್ತು ತಂಗಿಯ ಜೊತೆ ಅಪ್ಪ ಅವ್ವ ಸೇರಿ ಐದು ಜನರ ಕುಟುಂಬ ಮೊದಲು ಚೆನ್ನಾಗಿಯೇ ಸಾಗಿತ್ತು. ಅಪ್ಪ ಕೂಲಿಕೆಲಸದಲ್ಲಿ ಮೈಮುರಿದು ದುಡಿಯುತ್ತಿದ್ದರಿಂದ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಒಂದು ದಿನ ಅಪ್ಪ ನಿದಾನವಾಗಿ ತೂರಾಡುತ್ತಾ ಮನೆಯೊಳಗೆ ಬಂದ. ಕುಡಿಯುತ್ತಾನೆ ಎಂಬ ಗುಮಾನಿ ಇದ್ದದ್ದು ನಿಜವೆಂಬಂತೆ ಅಂದು ತೂರಾಡುತ್ತಾ ಮನೆಗೆ ಬಂದಾಗ ಯಾವುದೋ ಗಂಡಾಂತರ ಒಕ್ಕರಿಸುವ ಸೂಚನೆ ಇಣುಕಿತ್ತು. ಸಹವಾಸದಿಂದಾಗಿ ಕುಡಿತಕ್ಕೆ ದಾಸನಾಗಿ ಬರುಬರುತ್ತಾ ಕೆಲಸಕ್ಕೆ ಹೋಗುವುದು ಬಿಟ್ಟು ಸರಾಯಿ ಕುಡಿತವನ್ನೇ ಖಾಯಂ ಮಾಡಿಕೊಳ್ಳುವಂತೆ ಕಂಡ. ಇತ್ತ ಸಂಸಾರವೂ ಬಿಗಡಾಯಿಸತೊಡಗಿತ್ತು. ಹೊಟ್ಟೆಗೆ ಗಂಜಿಗೂ ಗತಿಇಲ್ಲದಂತಾಗಿ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಸ್ಥಿತಿ ಬಂದಾಗ ವಿಧಿಯಿಲ್ಲದೇ ಅವ್ವನೇ ಕೂಲಿ ಮಾಡಲು ಹೊರಟಿದ್ದಳು. ಹೆಣ್ಣಾಳಿಗೆ ಕೂಲಿ ಕಡಿಮೆಯಿದ್ದರೂ ಬಂದಿದ್ದರಲ್ಲಿ ಸಂಸಾರ ಭಾರ ಹೊತ್ತು ನಡೆಯತೊಡಗಿದಳು ಮಂಜನ ಅವ್ವ. ಎಂಟನೇ ತರಗತಿಯಲ್ಲಿ ಓದುತ್ತಿದ್ದ ಮಂಜ ತುಂಬಾ ಚುರುಕಾಗಿದ್ದು ಎಲ್ಲಾ ಪಾಠಗಳನ್ನು ಒಬ್ಬರೇ ಮಾಡುವ ಏಕೋಪದ್ಯಾಯ ಶಾಲೆಯ ಚೆನ್ನಯ್ಯ ಮೇಷ್ಟರ ಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಅವರ ಮಾತು, ಪಾಠಗಳು ಅದನ್ನು ವಿವರಿಸಿ ಹೇಳೋ ವಿಧಾನ ಎಂಥ ದಡ್ಡನಿಗೂ ತಲೆಯೊಳಗೆ ಕೊರೆದು ಹೋಗುತ್ತಿತ್ತು. ಉಳಿದ ಹುಡುಗರಿಗಿಂತ ಮಂಜನ ನೆನಪಿನ ಶಕ್ತಿ ಚೆನ್ನಾಗಿದೆ ಅಂತ ಹೊಗಳುವ ಮೇಷ್ಟ್ರು ಇವರ ಸಂಸಾರ ತಾಪತ್ರಯ ನೋಡಿ ಮಂಜನಿಗೆ ಓದು ಬರಹಕ್ಕೆ ಬೇಕಾದ ಪುಸ್ತಕ ಪೆನ್ನು, ಪೆನ್ಸಿಲ್ ಎಲ್ಲಾ ಅವರೇ ಕೊಡಿಸಿದ್ದರು. " ಮಂಜ ನೀನೊಬ್ಬನೇ ಕಣ್ಲ ಚೆನ್ನಾಗಿ ಓದೋನು, ನೀನು ಓದಿ ದೊಡ್ಡ ಅಫೀಸರ್ ಆಗಬೇಕು ಗೊತ್ತಾ...ಎನ್ನುತ್ತಿದ್ದರು.

ಒಂದು ದಿನ ಅವನಪ್ಪ ಸ್ಕೂಲಿಗೆ ಬಂದು ಮೇಷ್ಟ್ರ ಬಳಿ ಅದೆಷ್ಟೋ ಹೊತ್ತು ಮಾತಾಡಿದ. ಮಾತು ಅನ್ನುವುದಕ್ಕಿಂತ ವಾದಿಸಿದ್ದ. ನಂತರ ಮಂಜನನ್ನು ಕರೆದುಕೊಂಡು ಮನೆಗೆ ಬಂದ. ಅನಂತರವೇ ತಿಳಿದಿದ್ದು ತನ್ನನ್ನು ಸ್ಕೂಲಿನಿಂದ ಬಿಡಿಸಿದ್ದಾರೆಂದು ಮರುದಿನವೇ ಕಮ್ಮಾರಶೆಟ್ಟಿಯ ಕುಲುಮೆ ಗುಡಿಸಲಲ್ಲಿ ಕೆಲಸಕ್ಕೆ ತಗುಲಿಸಿದ್ದರು. ಅಂದಿನಿಂದ ಕಾದ ಕಬ್ಬಿಣ ಬಡಿಯುವುದು ಮತ್ತೆ ಕಾಯಿಸುವುದು ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ನಡೆದಿತ್ತು.

ರಾತ್ರಿ ಎಂಟುಗಂಟೆ ದಾಟಿತ್ತು ಮಂಜ ಮನೆಗೆ ಬರುವ ಹೊತ್ತಿಗೆ. ಕಿಟಿಕಿಯ ಕಿಂಡಿಯಿಂದ ಕಂಡ ಸಣ್ಣಗೆ ಉರಿಯುತ್ತಿದ್ದ ಕಂದೀಲಿನ ಮಬ್ಬು ಬೆಳಕು ಅರಿವಿಗೆ ಬಂದ ನಂತರ ಇದುವರೆಗೆ ಕೇಳಿಸುತ್ತಿದ್ದ ಶಬ್ದದ ಜೊತೆಗೆ ಅಲೋಚಿಸುತ್ತಿದ್ದ ನೆನಪಿನ ಸುರುಳಿಯು ತುಂಡಾಯಿತು. ಒಂದು ಕ್ಷಣ ನಿಂತ ಅವನ ತಲೆಗೆ ಅಸ್ಪಷ್ಟವಾಗಿ ಏನೋ ಹೊಳೆದಂತಾಯಿತು. ಸರಿಯಾಗಿ ತಿಳಿಯಲಿಲ್ಲ. ಕೊನೆಗೆ ಆಮೇಲೆ ಯೋಚಿಸಿದರಾಯಿತು ಎಂದು ಮನೆಯೊಳಕ್ಕೆ ಆಡಿಯಿಟ್ಟ. ಅವ್ವ ಅಡುಗೆ ಮಾಡುತ್ತಿದ್ದಳು. ತಮ್ಮ ಬೀರ ಮತ್ತು ತಂಗಿ ಪಾರ್ವತಿ ಒಂದು ಮೂಲೆಯಲ್ಲಿ ಕುಳಿತು ಮಬ್ಬಲ್ಲೇ ಆಟವಾಡಿಕೊಳ್ಳುತ್ತಿದ್ದರು. ಮತ್ತೊಂದು ಮೂಲೆಯಲ್ಲಿ ಕಂಠಪೂರ್ತಿ ಕುಡಿದಿದ್ದ ಅಪ್ಪ ಅಡ್ಡಗೋಡೆಗೆ ತಲೆ ಒರಗಿಸಿ ತೂಕಡಿಸುತ್ತಿದ್ದ. ಬಹುಶಃ ಅವನ ತೂಕಡಿಕೆಯ ಮೊದಲು ಭಯಂಕರ ಚಂಡಮಾರುತಕ್ಕೆ ಊರಿಗೆ ಊರೇ ಕೊಚ್ಚಿ ಹೋಗಿ ಅನಂತರ ಕೇವಲ ಅವಶೇಷ ಉಳಿಯುವಂತೆ ಅವ್ವನೊಂದಿಗೆ ಬೈದಾಡಿ ಮನೆಯ ನಿಶ್ಯಬ್ಧತೆಯನ್ನೆಲ್ಲಾ ಕಲಕಿ ಕೊನೆಗೆ ಸರಾಯಿ ವಾಸನೆ ಮತ್ತು ತೂಕಡಿಕೆ ಮಾತ್ರ ಉಳಿದಿತ್ತು.

ಮುಂದುವರಿಯುವುದು......

ಶಿವು.ಕೆ.


72 comments:

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಕಥೆ ಮತ್ತು ಕಥನ ಶೈಲಿ ಎರಡೂ ತುಂಬ ಚೆನ್ನಾಗಿದೆ. ಮುಂದೇನು ಎಂಬ ಕುತೂಹಲವಿದೆ...
ಆದಷ್ಟು ಬೇಗ ಪ್ರಕಟಿಸಿ.

ಶರಶ್ಚಂದ್ರ ಕಲ್ಮನೆ said...

"ನಿದಾನವಾಗಿ ಸೂರ್ಯ ಪಶ್ಚಿಮ ದಿಕ್ಕಿಗೆ ಜಾರುತ್ತಿದ್ದ ಯಾರೋ ಆಕರ್ಷಿಸುತ್ತಿದ್ದಾರೆನ್ನುವಷ್ಟರ ಮಟ್ಟಿಗೆ" ಇಷ್ಟವಾಯಿತು. ಕತೆ ಬೇಗ ಮುಂದುವರೆಯಲಿ :)

ವಿನುತ said...

ಶಿವು,
ಕಥೆ ಮು೦ದುವರೆಯುತ್ತದೆ ಎ೦ದಿದ್ದೀರಿ. ಇದುವರೆಗೂ ಚೆನ್ನಾಗಿ ಮೂಡಿಬ೦ದಿದೆ. ಮು೦ದಿನ ಕಮೆ೦ಟ್ ಮು೦ದಿನ ಭಾಗವನ್ನು ಓದಿದ ಬಳಿಕ.. :)

Ittigecement said...

ಶಿವು ಸರ್...

ನಿಮ್ಮಲ್ಲಿ ಒಬ್ಬ ಒಳ್ಳೆಯ ಕಥೆಗಾರ ಇದ್ದಾನೆ...
ಅದು ನಿಮ್ಮೊಡನೆ ಮಾತನಾಡುವಾಗ ಗೊತ್ತಾಗುತ್ತದೆ...

ತುಂಬಾ ಸಹಜವಾಗಿ..
ಆಪ್ತತೆಯಿಂದ... ಬರೆಯುತ್ತೀರಿ...

ಇಲ್ಲಿಯವರೆಗೆ ಸೊಗಸಾಗಿ ಬಂದಿದೆ...

ಕುತೂಹಲ...
ಜಾಸ್ತಿ ಕಾಯಿಸ ಬೇಡಿ...
ಮುಂದು ವರೆಸಿರಿ...

ಸವಿಗನಸು said...

ಶಿವು ಸರ್,
ಕಥೆ ಬಹಳ ಚೆನ್ನಾಗಿತ್ತು....ನಿಮ್ಮ ಶೈಲಿ ಸಹ ವಿಭಿನ್ನವಾಗಿತ್ತು...
ಮುಂದೇನೂ ಅಂತ ಕುತೂಹಲದಿಂದ ಕಾಯುತ್ತ ಇದ್ದೇನೆ....

Ramesh BV (ಉನ್ಮುಖಿ) said...

ಮುಂದೇನಾಯ್ತು ಹೇಳಿ ಬೇಗ..! :)

ಸಾಗರದಾಚೆಯ ಇಂಚರ said...

ಶಿವೂ ಸರ್,
ತುಂಬಾ ಇಂಟರೆಸ್ಟಿಂಗ್ ಆಗಿದೆ ಕಥೆ, ಮುಂದಿನ ಕಂತಿಗೆ ಕಾಯ್ತ್ತಿದ್ದೇವೆ, ಬೇಗ ಪ್ರಕಟಿಸಿ

ಸುಮ said...

ಬೆನ್ನು ಮೂಳೆಯ ಛುಳುಕು,ಆಕರ್ಷಣೆಯಿಂದ ಜಾರುತ್ತಿರುವ ಸೂರ್ಯ -ಉಪಮೆಗಳು ಚೆನ್ನಾಗಿವೆ.ಉತ್ತಮ ಶೈಲಿ ಸರ‍್.ಮುಂದುವರೆಸಿ.

Prashanth Arasikere said...

hi,shivu

Kate chennagide..mundina kanthige kayutta iddene..

PARAANJAPE K.N. said...

ಕಥೆ ಚೆನ್ನಾಗಿದೆ.ಗ್ರಾಮ್ಯಶೈಲಿಯ ಮಾತಿನ ಸೊಗಡು ಇದೆ. ಮುಂದುವರಿಯಲಿ, ಮುಂದಿನ ಕಂತಿಗೆ ಕಾದಿದ್ದೇನೆ.

Prashanth Arasikere said...

hi shivu,

Nimma halli bashe kuda tumba sogasagi bandide,

guruve said...

ಬಳಸಿರುವ ಭಾಷೆ, ಕಥೆಗೆ ಪೂರಕವಾಗಿದೆ.. ವರ್ಣನೆ ಕಣ್ಣಿಗೆ ಕಟ್ಟಿದೆ.. ಆಸಕ್ತಿಯನ್ನು ಹುಟ್ಟಿಸಿದೆ.. ಮುಂದುವರೆಯಲಿ..

sunaath said...

ಶಿವು,
ಇಷ್ಟು ದಿವಸ ನಿಮ್ಮಲ್ಲಿರೊ ಕತೆಗಾರನನ್ನ ಮುಚ್ಚಿಟ್ಟದ್ದೇಕೆ?
ಕತೆ ಆಸಕ್ತಿಕರವಾಗಿದೆ. ಬೇಗನೇ ಮುಂದಿನ ಕಂತನ್ನು ಕೊಡಿ.

ಸುಧೇಶ್ ಶೆಟ್ಟಿ said...

ಶಿವಣ್ಣ... ಯಾವ ಅನುಭವಿ ಕಥೆಗಾರನಿಗಿ೦ತ ಏನೂ ಭಿನ್ನವಾಗಿಲ್ಲ ನಿಮ್ಮ ಕಥನ ಶೈಲಿ... ಮನಸಿಗೆ ಹಿಡಿಸುವ೦ತಹ ಶೈಲಿ, ಆರ೦ಭ.... ಮು೦ದಿನ ಭಾಗಕ್ಕೆ ಕಾಯುತ್ತೇನೆ....

Prabhuraj Moogi said...

ಸರ್ ಕಥೆ ಸೂಪರ, ಕಥೆಗಾರ ಅಲ್ಲ ಅಂತ ಯಾರು ಹೇಳಿದರು, ಕಥೆ ಕಣ್ಣಿಗೆ ಕಟ್ಟುವ ಹಾಗೆ ಹೇಳಿದ್ದೀರಿ...
ಕುಲುಮೆ ಚೆನ್ನಾಗೇ ಕಾದಿದೆ ಬೇಗ ಬೇಗ ಕಭ್ಭಿಣ ಹಾಕಿ ಏಟು ಕೊಡಿ...
ಮುಂದಿನ ಕಂತಿಗೆ ನಿರೀಕ್ಷೇ...

shivu.k said...

ಮಲ್ಲಿಕಾರ್ಜುನ್,

ಮೊದಲ ಬಾರಿ ಈ ಪ್ರಯತ್ನ. ಕತೆ ಹೊಳೆದ ಮೇಲೆ ಬರೆದ ಭಾಷೆ ಸರಳವಾಗಿತ್ತು. ನಂತರ ಮತ್ತೊಮ್ಮೆ ಎಲ್ಲವನ್ನು ಗ್ರಾಮ್ಯ ಭಾಷೆಗೆ ಬದಲಾಯಿಸಿದೆ. ಉಳಿದ ಭಾಗವನ್ನು ಎರಡನೇ ಭಾಗದಲ್ಲಿ ಹಾಕುವೆ..

shivu.k said...

ಶರತ್ಚಂದ್ರ,

ನಾನು ಇಷ್ಟ ಪಡುವ ಅನೇಕ ಸಾಲುಗಳಲ್ಲಿ ಇದು ಒಂದು.

ಮುಂದಿನ ಭಾಗವನ್ನು ಬೇಗನೇ ಹಾಕುತ್ತೇನೆ.

ಧನ್ಯವಾದಗಳು.

shivu.k said...

ವಿನುತಾ,

ಕತೆ ಖಂಡಿತ ಮುಂದುವರಿಯುತ್ತದೆ ಮತ್ತು ಎರಡನೆ ಕಂತಲ್ಲಿ ಖಂಡಿತ ಮುಗಿಯುತ್ತದೆ. ಕತೆ ಚೆನ್ನಾಗಿದೆ ಎಂದಿದ್ದೀರಿ. ಎರಡನೇ ಭಾಗವನ್ನು ಮೆಚ್ಚುತ್ತಿರೆನ್ನುವ ನಂಬಿಕೆಯಿದೆ.

ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ನನ್ನೊಳಗೆ ಯಾವ ವ್ಯಕ್ತಿ ಇದ್ದಾನೆ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ಆದ್ರೆ ಯಾವ ವಿಚಾರದಲ್ಲಿ ತೊಡಗಿಸಿಕೊಂಡರೂ ಅದರಲ್ಲಿ ತನ್ಮಯನಾಗಿಬಿಡುವುದು ನನಗೆ ಇಷ್ಟ.

ಈ ರೀತಿ ಬರಹ ನನಗೆ ಮೊದಲನೆಯದು. ನೀವು ಇಷ್ಟಪಟ್ಟಿದ್ದೀರಿ. ಎರಡನೆಯ ಕಂತು ಕೂಡ ನಿಮಗೆ ಇಷ್ಟವಾಗಬಹುದು...

ಧನ್ಯವಾದಗಳು.

shivu.k said...

ಮಹೇಶ್ ಸರ್,

ಕತೆಯ ಗ್ರಾಮ್ಯ ಶೈಲಿಯನ್ನು ಇಷ್ಟಪಟ್ಟಿದ್ದೀರಿ...ಧನ್ಯವಾದಗಳು. ಬೇಗನೆ ಎರಡನೆ ಭಾಗವನ್ನು ಹಾಕುತ್ತೇನೆ...

shivu.k said...

ರಮೇಶ್ ಬಿ.ವಿ[ಉನ್ಮುಖಿ]

ಮುಂದಿನ ಕಂತನ್ನು ಸಧ್ಯದಲ್ಲೇ ಹಾಕುತ್ತೇನೆ.

ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ಕತೆ ನಿಮಗೆ ಕುತೂಹಲ ಕೆರಳಿಸಿದೆಯಾ...ಧನ್ಯವಾದಗಳು.

ಸದ್ಯದಲ್ಲೇ ಮುಂದಿನ ಕಂತನ್ನು ಹಾಕುತ್ತೇನೆ...

shivu.k said...

ಸುಮ ಮೇಡಮ್,

ಕತೆಯಲ್ಲಿನ ಉಪಮೆಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ಮುಂದಿನ ಕಂತಿಗೆ ಬರುತ್ತಿರಲ್ಲ...

shivu.k said...

ಪ್ರಶಾಂತ್,

ಕತೆ ಇಷ್ಟವಾಯಿತಾ...ಧನ್ಯವಾದಗಳು.

ಮುಂದಿನ ಭಾಗವೂ ನಿಮಗೆ ಇಷ್ಟವಾಗಬಹುದು ಅಂದುಕೊಳ್ಳುತ್ತೇನೆ...

shivu.k said...

ಪರಂಜಪೆ ಸರ್,

ಗ್ರಾಮ್ಯ ಭಾಷೆಯ ಶೈಲಿಯ ಕಥನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಪ್ರಶಾಂತ್ ಹಳ್ಳಿ ಭಾಷೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಗುರುವೇ,

ಬಳಸಿರುವ ಭಾಷೆ ನನಗೂ ತುಂಬಾ ಇಷ್ಟ ಅದ್ರೆ ಬರೆಯೋದು ಕಷ್ಟ. ಏನೋ ಪ್ರಯತ್ನಿಸಿದ್ದೇನೆ. ಮುಂದಿನ ಕಂತಿಗೂ ಬನ್ನಿ.

shivu.k said...

ಸುನಾಥ್ ಸರ್,

ನೀವು ಹೇಳಿದ್ದು ನಿಜಾನ ಸರ್, ನಾನೇನೋ ಸುಮ್ಮನೆ ಹೀಗೆ ಪ್ರಯತ್ನ ಮಾಡುತ್ತಿದ್ದೇನೆ. ಮುಂದಿನ ಕಂತನ್ನು ಬೇಗ ಹಾಕುತ್ತೇನೆ.

shivu.k said...

ಸುಧೇಶ್,

ಬರಹದ ಶೈಲಿ ಮತ್ತು ಭಾಷೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ಖಂಡಿತ ಬೇಗ ಮುಂದಿನ ಕಂತನ್ನು ಹಾಕುತ್ತೇನೆ..

shivu.k said...

ಪ್ರಭು,

ಕತೆ ಸೂಪರ್ ಅಂದಿದ್ದ್ರೀರಿ ಥ್ಯಾಂಕ್ಸ್..

ಛಾಯಾಗ್ರಹಣದ ದೃಷ್ಟಿಕೋನದಲ್ಲಿ ಎಲ್ಲಾ ಚಿತ್ರಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ಡೇನೆ. ಕುಲುಮೆಯಲ್ಲಿನ ಕಬ್ಬಿಣ ಕಾದಿದೆಯಾ...ಏಟಿನ ಹೊಡೆತಕ್ಕೆ ಏನಾಗಿದೆಯೋ ನೋಡೋಣ ಮುಂದಿನ ಬಾರಿ...

SSK said...

ಶಿವೂ ಅವರೇ,
ಉದಯೋನ್ಮುಖ ಕಥೆಗಾರರು ನೀವು......!
ಮೊಟ್ಟಮೊದಲನೆಯ ಕಥೆಯಲ್ಲೇ ನಮ್ಮನ್ನೆಲ್ಲಾ ತುಂಬಾ ಇಂಪ್ರೆಸ್ಸ್ ಮಾಡಿ ಬಿಟ್ಟಿದ್ದೀರಾ ನೀವು!!
ಚಂದದ ಕಥೆಗೆ, ಉತ್ತಮ ಕಥನಕ್ಕೆ ಧನ್ಯವಾದಗಳು!
ಮುಂದಿನ ಭಾಗಕ್ಕಾಗಿ ಕಾಯುತ್ತಾ.........!

ರಾಜೀವ said...

ಸರ್,

ನಿಮ್ಮೊಳಗಿನ ಕಥೆಗಾರ ಇಷ್ಟು ದಿನ ಎಲ್ಲಿ ಬಚ್ಚಿಟ್ಟುಕೊಂಡಿದ್ದ? ಕುತೂಹಲವಾಗಿ ಮೂಡಿಬರುತಿದೆ.
ಮುಂದುವರೆಸಿ ನಿಮ್ಮ ಕಥೆಯನ್ನು.

ಬಿಸಿಲ ಹನಿ said...

ಶಿವು ಅವರೆ ಒಳ್ಳೆ ಕತೆಗಾರನಾಗುವ ಎಲ್ಲ ಲಕ್ಷಣಗಳೂ ನಿಮ್ಮಲ್ಲಿ ಕಾಣಿಸುತ್ತಿವೆ. ಕತೆ ಬರೆಯುತ್ತಾ ಹೋಗಿ ಇಂಟರ್ ನ್ಯಾಶನಲ್ ಫೋಟೋಗ್ರಾಫರ್ ತರ ಇಂಟರ್ ನ್ಯಾಶನಲ್ ಕತೆಗಾರ ಬೆಳೆದರೂ ಬೆಳೆಯಬಹುದು. All the best. ಅಂದ ಹಾಗೆ ಮಂಜನ ಮುಂದಿನ ಬದುಕಿನ ಕತೆಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ.

ಶಿವಪ್ರಕಾಶ್ said...

ಶಿವು ಅವರೇ,
ಕಥೆಗೆ ಉತ್ತಮ ಆರಂಭವನ್ನು ಕೊಟ್ಟಿದ್ದಿರಿ..
ಹೀಗೆ ಮುಂದುವರೆಯಲಿ....

ಜಲನಯನ said...

ಮಂಜನ ಅಸಹಾಯಕತೆ ಎಂಬ ಕಾದ ಕಬ್ಬಿಣಕ್ಕೆ ಅವನಪ್ಪನ ಬೇಜವಾಬ್ದಾರಿತನದ ಸುತ್ತಿಗೆ ಬಡಿತ ಅವನ ಮನಸಿನಾಳದ ದುಗುಡಗಳು..ತಾಯಿಯ ನೋವು ಮತ್ತು ಸಂಕಟ ಹೀಗೆ ಹಲವು ವಿಷಯಗಳನ್ನು ಪೋಣಿಸುತ್ತಾ ಮಂಜನ ಕನಸಿನ ಸೌಧಕ್ಕೆ ಅಡಿಪಾಯ ಹಾಕಿದ್ದೀರ..ಚನ್ನಾಗೇ..ಪ್ರಾರಂಭ ಮಾಡಿದ್ದೀರ...ಮುಂದುವರೆಸಿ.....ಶಿವು. ನಿಮ್ಮಲ್ಲಿ ಸೇರಿರುವ ಆ ಶಕ್ತಿಯನ್ನು ಇನ್ನಷ್ಟು ಕ್ರೂಢೀಕರಿಸಿ...ಕಂತುಕೊಡುತ್ತಾ ಹೋಗಿ..ನಾವು ನಮ್ಮ ಅನಿಸಿಕೆಗಳಿಂದ ನಿಮ್ಮ ಉತ್ಸಾಹದ ಕುಲುಮೆಗೆ ಗಾಳಿ ಹಾಕುತ್ತೇವೆ...

shivu.k said...

SSK ಮೇಡಮ್,

ನನ್ನ ಕತೆ ನಿಜಕ್ಕೂ ಅಷ್ಟು ಇಷ್ಟವಾಗಿದೆಯಾ...ನನಗೆ ಖಂಡಿತ ಆಶ್ಚರ್ಯವಾಗುತ್ತಿದೆ. ಬ್ಲಾಗ್ ಗೆಳೆಯರೆಲ್ಲಾ ಇದನ್ನು ಓದಿ ಇಷ್ಟಪಡುತ್ತಿದ್ದಾರೆಂದರೆ ನನ್ನ ಪುಟ್ಟ ಪ್ರಯತ್ನ ಸಾರ್ಥಕ.

ಖಂಡಿತ ಮುಂದಿನ ಭಾಗವನ್ನು ಹಾಕುತ್ತೇನೆ...ಧನ್ಯವಾದಗಳು.

shivu.k said...

ರಾಜೀವ್ ಸರ್,

ನೀವು ಹೇಳಿದಂತೆ ನನ್ನೊಳಗೆ ಕಥೆಗಾರ ಇದ್ದಾನ ?
ನಿಮ್ಮ ಪ್ರೋತ್ಸಾಹ ನನಗೆ ಮತ್ತಷ್ಟು ಹುರುಪು ತರುತ್ತಿದೆ...ಕತೆಯನ್ನು ಖಂಡಿತ ಮುಂದುವರಿಸುತ್ತೇನೆ.

shivu.k said...

ಉದಯ್ ಸರ್,

ಕಥೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನನ್ನ ಮೊದಲ ಅಸಕ್ತಿ ಛಾಯಾಗ್ರಹಣವೇ ಹೊರತು. ಕಥೆಗಾರನಾಗುವುದಲ್ಲ. ಆದ್ರೆ ನನಗೆ ಯಾವುದು ಯಾವ ಸಮಯಕ್ಕೆ ಇಷ್ಟವಾಗುತ್ತೊ ಆಗ ಎಲ್ಲವನ್ನು ಮರೆತು ಅದರಲ್ಲಿ ತೊಡಗಿಸಿಕೊಂಡುಬಿಡುತ್ತೇನೆ. ಅದರಿಂದ ಸಿಗುವ ಆನಂದವನ್ನು ವರ್ಣಿಸಲಾಗುವುದಿಲ್ಲ...
ಕಥೆಯಲ್ಲಿನ ಮಂಜನ ಬದುಕು ಏನಾಗುತ್ತೋ....ಖಂಡಿತ ನಿಮ್ಮ ನಿರೀಕ್ಷೆ ಹುಸಿಗೊಳಿಸೊಲ್ಲ...

shivu.k said...

ಶಿವಪ್ರಕಾಶ್,

ಕತೆಯ ಆರಂಭವನ್ನು ಇಷ್ಟಪಟ್ಟಿದ್ದೀರಿ...ಧನ್ಯವಾದಗಳು.

shivu.k said...

ಜಲನಯನ ಸರ್,


"ಮಂಜನ ಅಸಹಾಯಕತೆ ಎಂಬ ಕಾದ ಕಬ್ಬಿಣಕ್ಕೆ ಅವನಪ್ಪನ ಬೇಜವಾಬ್ದಾರಿತನದ ಸುತ್ತಿಗೆ ಬಡಿತ ಅವನ ಮನಸಿನಾಳದ ದುಗುಡಗಳು.".

ಇವು ನನಗೆ ಗೊತ್ತೇ ಇರಲಿಲ್ಲ. ಸುಮ್ಮನೇ ವೇಗವಾಗಿ ಬರೆದುಕೊಂಡು ಹೋಗಿದ್ದಷ್ಟೆ. ಬರೆಯುವಾಗ ಮಾತ್ರ ಪೂರ್ತಿ ಚಿತ್ರ ಫೋಟೊಗ್ರಫಿಯಂತೆ ಕಾಣುತ್ತಿತ್ತು.

ಮತ್ತೆ ಇದು ಎರಡೇ ಕಂತಿನಲ್ಲಿ ಮುಗಿಯುವ ಕತೆ. ನನಗೆ ದೊಡ್ಡ ಕತೆ ಬರೆಯುವ ಶಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ...ಸದ್ಯಕ್ಕೆ ಹೀಗೆ ಹೊಳೆದಂತೆ ಪುಟ್ಟ ಲೇಖನ, ಕತೆ, ಲಲಿತ ಪ್ರಭಂದಗಳನ್ನು ಬರೆಯುತ್ತಾ ಖುಷಿಪಡುತ್ತಿದ್ದೇನೆ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

Guruprasad said...

ತುಂಬ ಚೆನ್ನಾಗಿ ಇದೆ ಶಿವೂ,, ನಿಮ್ಮಲ್ಲೂ ಒಬ್ಬ ಕತೆಗಾರ ಒಳಗಿದ್ದನ?
ಮುಂದುವರಿಸಿ,,

ಮನಸು said...

ಕಥೆ ಮಸ್ತ್ ಇದೆ ಸರ್, ಮುಂದುವರಿಸಿ.... ಮತ್ತಷ್ಟು ಕಥೆಗಳು ಹೀಗೆ ಮೂಡಿಬರಲಿ.

Dileep Hegde said...

ಶಿವು ಸರ್..

ಚೆನ್ನಾಗಿದೆ...
ಮುಂದೇನಾಯ್ತು..??
ತಿಳಿಯುವ ಕುತೂಹಲ ಜಾಸ್ತಿಯಾಗ್ತಿದೆ.. ಬೇಗ ಹೇಳಿ

Unknown said...

ಶಿವು ಕಥೆಯ ಮೊದಲಭಾಗ ಚೆನ್ನಾಗಿ ಮೂಡಿ ಬಂದಿದೆ. ಹಾಗೂ ಮುಂದಿನ ಭಾಗ ಕುತೂಹಲ ಮೂಡಿಸಿದೆ. ಅಂದ ಹಾಗೆ ಕುಲುಮೆ ಅಂದರೇನು? ಈ ಪ್ರಶ್ನೆಯನ್ನು ಯಾರೂ ನಿಮಗೆ ಕೇಳಲಿಲ್ಲವೆ? ಏಕೆಂದರೆ ನನ್ನ ಅನುಭವದಲ್ಲಿ ನಗರದಲ್ಲೇ ಹುಟ್ಟಿ ಬೆಳೆದ ಎಷ್ಟೋ ಜನಕ್ಕೆ ನೇಗಿಲು, ಕುಂಟೆ, ಕೂರಿಗೆ, ನೊಗ ಅಡ್ಡ, ಿವಾವೂ ಗೊತ್ತೇ ಆಗುತ್ತಲ್ಲ. ನಾನು ಒಮ್ಮೆ ಕನಕದಾಸರ 'ಎಲ್ಲಾರು ಮಾಡುವುದು ಹೊಟ್ಟೆಗಾಗಿ' ಪದ್ಯವನ್ನು ಪಾಠ ಮಾಡುವಾಗ ಮಕ್ಕಳಿಗೆ ಈ ಕುಂಟೆ ಕೂರಿಗೆ ನೇಗಿಲು ಮೊದಲಾದ ಚಿತ್ರಗಳನ್ನು ತೋರಿಸಿ ವಿವರಿಸಬೇಕಾಯಿತು! ಅದಕ್ಕೇ ಈ ಪ್ರಶ್ನೆ. ಕುಲುಮೆಯ ೊಂದು ಚಿತ್ರವನ್ನು ಕಥೆಗೆ ಪೂರಕವಾಗಿ ಬಳಸಿಕೊಳ್ಳಬಹುದಾಗಿತ್ತು.

shivu.k said...

ಗುರು,

ಕತೆ ಇಷ್ಟವಾಯಿತಾ....ಮುಂದಿನ ಭಾಗ ಮರೆಯದೆ ಓದಿ..

ಧನ್ಯವಾದಗಳು.

shivu.k said...

ಮನಸು ಮೇಡಮ್,

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...ಹೀಗೆ ಬರುತ್ತಿರಿ...

shivu.k said...

ದಿಲೀಪ್,

ಕತೆ ಕುತೂಹಲ ಕೆರಳಿಸಿದೆಯಾ.....ಮುಂದಿನ ಭಾಗದಲ್ಲಿ ಅದು ಏನು ಅಂತ ಗೊತ್ತಾಗುತ್ತೆ...ಧನ್ಯವಾದಗಳು.

shivu.k said...

ಸತ್ಯನಾರಾಯಣ ಸರ್.

ಕತೆಯ ಮೊದಲ ಭಾಗ ಇಷ್ಟಪಟ್ಟಿದ್ದೀರಿ...

ಕುಲುಮೆ ಅಂದರೇನು ಎಂದು ಯಾರು ಕೇಳಲಿಲ್ಲವಾದ್ದರಿಂದ ಅದ್ರ ಬಗ್ಗೆ ವಿವರಣೆ ಕೊಟ್ಟಿಲ್ಲ. ನಮ್ಮೆಲ್ಲಾ ಬ್ಲಾಗಿಗರಿಗೂ ಇದು ಚೆನ್ನಾಗಿ ಗೊತ್ತಿದೆಯೆಂದು ನಾನು ಅಂದುಕೊಂಡಿದ್ದೇನೆ.

ನಗರದಲ್ಲಿ ಹುಟ್ಟಿ ಬೆಳೆದ ಈಗಿನ ಮಕ್ಕಳಿಗೆ ಅದರಲ್ಲೂ ನಮ್ಮ ಓಣಿಯ ಮಕ್ಕಳಿಗೆ ಇಂಥ ಕೆಲವು ಹಳ್ಳಿಯ ಸಾಮಾನುಗಳನ್ನು ಹೇಳಿ ಇವೆಲ್ಲಾ ಗೊತ್ತಾ ಅಂತ ಕೇಳಬೇಕೆನಿಸಿದೆ. ಗೊತ್ತಿಲ್ಲದಿದ್ದಲ್ಲಿ ಒಂದು ಆಟದ ರೀತಿ ಹೇಳಿ ತಿಳುವಳಿಕೆ ಮೂಡಿಸಬೇಕು... ನೋಡೋಣ ಪ್ರಯತ್ನಿಸುತ್ತೇನೆ.

ಧನ್ಯವಾದಗಳು.

PaLa said...

ಮುಂದುವರಿಸಿ, ಚೆನ್ನಾಗಿದೆ

Unknown said...

ಮುಂದಿನ ಭಾಗ ಬೇಗನೆ ಬರಲಿ... ಆಮೇಲೆ abhipraaya bareyuve... :-)

Shweta said...

Shivu sir,

Tumba kutoohalavaaguttide mundina bhaaga oodalu....
heege bareyiri sir..mundina bhaaga odi nantara nanna abhipraya tilisuttene..

mundina bhaaga yaavaga baruttade?

ಅನಿಲ್ ರಮೇಶ್ said...

ಶಿವು,
ಕಥೆ ಇದುವರೆಗೂ ಚೆನ್ನಾಗಿದೆ..
ಮುಂದಿನ ಭಾಗದ ನಿರೀಕ್ಷೆಯಲ್ಲಿ..

-ಅನಿಲ್

Naveen ಹಳ್ಳಿ ಹುಡುಗ said...

ನಮಸ್ತೆ ಶಿವಣ್ಣ... ಕಥೆ ತುಂಬಾ ಚೆನ್ನಾಗಿದೆ.... ಆದರೆ ನಿಮ್ಮ ಬರಹಗಳನ್ನು ಫೋಟೋಗಳಿಲ್ಲದೆ ನೋಡಲು ಸ್ವಲ್ಪ ಬೇಸರವಾಗುತ್ತದೆ(ಹಿಂದಿನ ಲೇಖನಕ್ಕೂ ಫೋಟೋಗಳಿರಲಿಲ್ಲ) ... ದಯವಿಟ್ಟು ಕಥೆಗೆ ಹೋಲುವಂತಹ ಚಿತ್ರಗಳನ್ನು ಹಾಕಲು ಕೋರುತ್ತೇನೆ..

shivu.k said...

ಪಾಲಚಂದ್ರ,

ಧನ್ಯವಾದಗಳು.

shivu.k said...

ರವಿಕಾಂತ್ ಗೋರೆ ಸರ್,

ಖಂಡಿತ ಮುಂದಿನ ಭಾಗವನ್ನು ಬೇಗನೇ ಹಾಕುತ್ತೇನೆ ಸರ್...
ಧನ್ಯವಾದಗಳು.

shivu.k said...

ಶ್ವೇತ ಮೇಡಮ್,

ಮುಂದಿನ ಭಾಗ ಸದ್ಯದಲ್ಲೇ ಹಾಕುತ್ತೇನೆ. ಈ ಭಾಗ ಕುತೂಹಲವಾಗಿದೆಯೆಂದಿದ್ದೀರಿ...ಧನ್ಯವಾದಗಳು.
ಹೀಗೆ ಬರುತ್ತಿರಿ...

shivu.k said...

ಅನಿಲ್ ರಮೇಶ್,

ಧನ್ಯವಾದಗಳು.

shivu.k said...

ನಮಸ್ಕಾರ ನವೀನ್,

ಕಳೆದ ಲೇಖನದಿಂದ ಚಿತ್ರಗಳಿಲ್ಲವೆಂದು ನೀವು ಸೇರಿದಂತೆ ಅನೇಕರು ಹೇಳುತ್ತಿದ್ದಾರೆ. ಕೆಲವೊಂದು ಬರಹಗಳಿಗೆ ಫೋಟೋಗಳು ಬೇಡವೆಂದೇ ಬ್ಲಾಗಿನಲ್ಲಿ ಹಾಕುತ್ತಿಲ್ಲ. ಹಿಂದಿನ ಲೇಖನದಲ್ಲಿ ಜಿರಲೆಗಳ ಫೋಟೊ ಮತ್ತು ಈ ಲೇಖನಕ್ಕೆ ಸಂಭಂದಿಸಿದ ಫೋಟೋವನ್ನು ಕ್ಲಿಕ್ಕಿಸಿಲ್ಲ. ಹಾಗೆ ಇಂಟರ್‍ನೆಟ್‍ನಿಂದ ತೆಗೆದು ಹಾಕಲು ನನಗೆ ಮನಸ್ಸಿಲ್ಲವಾದ ಕಾರಣ ಚಿತ್ರಗಳನ್ನು ಹಾಕಿಲ್ಲ.
ಮುಂದಿನ ಲೇಖನಗಳಲ್ಲಿ ಖಂಡಿತ ಫೋಟೋಗಳನ್ನು ಹಾಕಲು ಪ್ರಯತ್ನಿಸುತ್ತೇನೆ...

ಈ ಕತೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಇದರ ಎರಡನೆ ಭಾಗವನ್ನು ಖಂಡಿತ ಬೇಗ ಹಾಕುತ್ತೇನೆ.

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
"ಕತೆಗಾರ ನಾನು ಎಂದು ಹೇಳಿಕೊಳ್ಳುವ ಯೋಗ್ಯತೆ ಖಂಡಿತ ನನಗಿಲ್ಲ" ಈ ಮಾತನ್ನು ವಾಪಸ್ ತಗೊಳ್ಳಿ, ಕತೆಯ ನಿರೂಪಣೆ ಬೊಂಬಾಟ್ ಆಗಿದೆ. ಮುಂದಿನ ಕಂತಿಗೆ ಕಾಯುತ್ತಿದ್ದೇನೆ.

ಸೀತಾರಾಮ. ಕೆ. / SITARAM.K said...

ನಿರೂಪಣಾಶೈಲಿ ಚೆನ್ನಾಗಿದೆ. ನಿಮ್ಮಲ್ಲೊಬ್ಬ ಕಥೆಗಾರನಿದ್ದಾನೆ. ಮು೦ದಿನ ಕ೦ತಿಗೆ ಕಾಯುತ್ತಿರುವೆ.

ಕ್ಷಣ... ಚಿಂತನೆ... said...

ಶಿವು ಸರ್‍,

ಕುಲುಮೆ - ಕಥೆ ಓದುತ್ತಿದ್ದಾಗ ಒಂದು ಅನಿರ್ವಚನೀಯ ನೋವು ಕಾಣಿಸುತ್ತದೆ. ಅಲ್ಲದೇ, ಒಂದು ಸಂಸಾರದಲ್ಲಿ ಒಂದು ದುಡಿತದೊಂದಿಗೆ, ಕುಡಿತ ಸೇರಿದಾಗುವ ಅನಾಹುತ, ಅದರಿಂದಾಗುವ ಮಕ್ಕಳ ಮೇಲಿನ ಪರಿಣಾಮ ಇವೆಲ್ಲ ಒಂದು ಚಲನಚಿತ್ರದಂತಿದೆ. ಮುಂದಿನ ತಿರುವಿಗಾಗಿ ಕಾಯುತ್ತಿರುವೆ. ..

ಹಾಗೆಯೇ ನಿಮ್ಮಲ್ಮೊಬ್ಬ ಕತೆಗಾರನಿದ್ದಾನೆ. ಮುಂದುವರೆಸಿ....

ಧನ್ಯವಾದಗಳು.

ಚಂದ್ರು.

ಚಕೋರ said...

ತುಂಬಾ ಚೆನಾಗಿದೆ ಕಥೆ. ಮುಂದಿನ ಭಾಗದ ನಿರೀಕ್ಷೆಯಲಿ.

-ಚಕೋರ.

Ranjita said...

ಚೆನ್ನಾಗಿದೆ ಸರ್ ಬೇಗ ಮುಂದುವರೆಸಿ .. ಜೊತೆಗೆ ನಿಮ್ಮ ಕಥೆಗೆ ಫೋಟೋಗಳ ಜಲಕ್ ಇದ್ದಿದ್ದರೆ ಕಣ್ಣುಗಳನ್ನು ತಂಪಾಗಿಸಬಹುದಿತ್ತು.. :)

Godavari said...

ಶಿವೂ ಅವರೇ,

ನಿಮ್ಮಲ್ಲಿ ಒಬ್ಬ ಒಳ್ಳೆಯ ಕಥೆಗಾರ ಇದ್ದಾನೆ..

ಬಹಳ ಸರಳ ಸುಂದರ ನಿರೂಪಣೆ..
ಮುಂದೇನು? ತಿಳಿಯುವ ಕುತೂಹಲ..


ಆದಷ್ಟು ಬೇಗ ಪ್ರಕಟಿಸಿ..

ಪಾಚು-ಪ್ರಪಂಚ said...

ಶಿವೂ ಅವರೇ,

ಛಾಯಾಕನ್ನಡಿಯಲ್ಲಿ ಕಥೆಗಾರನ ನೆರಳು ಕಾಣಿಸುತ್ತಿದೆ. ನಿರೂಪಣೆಯಲ್ಲಿನ ಗ್ರಾಮೀಣ ಶೈಲಿ ಇಷ್ಟವಾಯಿತು.
ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.

shivu.k said...

ರಾಜೇಶ್,

ನನಗೆ ಇದು ಮೊದಲ ಪ್ರಯತ್ನ. ಸುಮ್ಮನೇ ಬರೆದಿದ್ದೇನೆ. ನೀವು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಸೀತಾರಾಮ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಕತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...

shivu.k said...

ಕ್ಷಣ ಚಿಂತನೆ ಸರ್,

ಕತೆಯಲ್ಲಿನ ಭಾವನೆಗಳನ್ನು ಚೆನ್ನಾಗಿ enjoy ಮಾಡಿದ್ದೀರಿ..ನಾನು ಹೇಳಲೆತ್ನಿಸಿದ ವಿಚಾರಗಳು ನಿಮಗೆ ತಲುಪಿದ್ದಕ್ಕೆ ಧನ್ಯವಾದಗಳು.

shivu.k said...

ಚಕೋರ,

ನಿಮ್ಮ ಹೆಸರು ಗೊತ್ತಾಗಲಿಲ್ಲ. ನನ್ನ ಬ್ಲಾಗಿಗೆ ಸ್ವಾಗತ...

shivu.k said...

ರಂಜಿತರವರೆ,

ಕತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಮತ್ತೆ ಈ ಲೇಖನಕ್ಕೆ ಫೋಟೋ ಕ್ಲಿಕ್ಕಿಸಿರಲಿಲ್ಲವಾದ್ದರಿಂದ ಹಾಕಲಾಗಲಿಲ್ಲ. ಮತ್ತೆ ನನಗೆ ಅಂತರಜಾಲದಿಂದ ಹುಡುಕಿತಂದು ಹಾಕುವ ಮನಸ್ಸು ಇಲ್ಲ. ಮುಂದಿನ ಲೇಖನದಲ್ಲಿ ಖಂಡಿತ ಪ್ರಯತ್ನಿಸುತ್ತೇನೆ...

shivu.k said...

ಗೋದಾವರಿ ಮೇಡಮ್,

ತುಂಬಾ ದಿನಗಳ ನಂತರ ಬ್ಲಾಗಿಗೆ ಬಂದಿದ್ದೀರಿ...ಕತೆಯನ್ನು ಅದರ ನಿರೂಪಣೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...

shivu.k said...

ಪ್ರಶಾಂತ್ ಭಟ್,

ಛಾಯಾಕನ್ನಡಿಯಲ್ಲಿ ಕತೆಗಾರನ ನೆರಳು...ಕಾಣಿಸಿತೆಂದು ಹೇಳಿದಿರಿ..ಇದಕ್ಕೆ ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ...ಧನ್ಯವಾದಗಳು..