Thursday, September 24, 2009

ಕುಲುಮೆ-ಬಾಗ ೨

ಹೊರಬಂದು ನೋಡಿದರೆ ಇವರ ಮನೆಯೊಂದು ಬಿಟ್ಟು ಊರು ಪೂರ್ತಿ ಮಲಗಿತ್ತು. ಬಾವಲಿಗಳ ಹಾರಾಟ, ಮಿಂಚುಳಗಳ ಮಿಣುಕಾಟ, ಕಪ್ಪೆಗಳ ಸಣ್ಣ ಒಟರ್‌‍ಗುಟ್ಟುವಿಕೆ ಬಿಟ್ಟರೇ ದೂರದಲ್ಲಿ ಭಯಂಕರ ಮೌನವಿತ್ತು. "ಯಾವಾಗ ಬಂದಿ ಮಗ ಬಾ, ಕೈಕಾಲು ತೊಳಕೊಂಡು ಬಾ, ಉಂಡು ಮಲಗುವಿಯಂತೆ, ನಾಳೆ ಸರೋತ್ತಿನಲ್ಲಿ ಎದ್ದೇಳಬೇಕು" ಅವ್ವನ ಮಾತು ಕೇಳಿ ಒಳಗೆ ಕೈಕಾಲು ತೊಳೆಯಲು ಬಚ್ಚಲುಗೂಡಿನ ಕಡೆಗೆ ನಡೆದ. ಬೀರ ಮತ್ತು ಪಾರ್ವತಿ ಇಬ್ಬರಿಗೂ ಉಣಬಡಿಸಿ ಅಪ್ಪನನ್ನು ಎಚ್ಚರಗೊಳಿಸುತ್ತಿದ್ದಳು. ಮಂಜ ಊಟಕ್ಕೆ ಕೂತ. "ಲೇ ಮಗ ನಾಳೆ ನಿನಗೆ ಸಂಬಳ ಕೊಡೋ ದಿನ ಅಲ್ವೇನೋ" ಅವ್ವನ ಮಾತು ಕೇಳಿ ಗಕ್ಕನೇ ನೆನಪಾಯಿತು. ತಾನಾಗಲೇ ಯೋಚಿಸಿದ್ದು ನನ್ನ ಸಂಬಳದ ಬಗ್ಗೇನೆ ಅಲ್ವೇ, ಆದರೇ ಆಗ ಸರಿಯಾಗಿ ನೆನಪಾಗಲಿಲ್ಲವಲ್ಲ. "ಹೂನವ ನಾಳೆ ಕಮ್ಮಾರ ಶೆಟ್ಟಿ ಸಂಬಳ ಕೊಡಬಹುದು" ಜೋಪಾನವಾಗಿ ತಗಂಡು ಬಾ ಮಗ" ಎನ್ನುತ್ತಾ ತಾನು ಊಟ ಮಾಡಲು ಕೋಣೆಗೆ ಹೋದಳು. ರಾತ್ರಿ ಮಲಗುವಾಗ ನಾಳೆ ತೆಗೆದುಕೊಳ್ಳುವ ಸಂಬಳದ ಯೋಚನೆಯಲ್ಲೇ ನಿದ್ದೇ ಹೋಗಿದ್ದ ಮಂಜ.

ಎಚ್ಚರವಾದಾಗ ಕಣ್ಣು ಬಿಟ್ಟು ನೋಡಿದ. ಹೊರಗೆ ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿಸುತ್ತಿತ್ತು. ಇನ್ನೂ ಪೂರ್ತಿ ಬೆಳಕಾಗಿರಲಿಲ್ಲ ಮಂಜನ ತಾಯಿ ಬಚ್ಬಲು ಮನೆಯಲ್ಲಿ ನೀರೊಲೆಗೆ ಬೆಂಕಿಹಾಕಿದ್ದಳೆನಿಸುತ್ತದೆ, ಅದರ ಮಬ್ಬು ಬೆಳಕು ನಾನು ಮಲಗಿದ್ದ ಕೋಣೆಯನ್ನು ಬೇರ್ಪಡಿಸಿದ್ದ ಗೋಡಿಯ ಕಿಂಡಿಯಿಂದ ಬಿಳಿಕೋಲಾಗಿ ಎದುರುಗೋಡೆಯನ್ನು ಕೊರೆಯುತ್ತಿತ್ತು. ಪಕ್ಕದ ಗೋಣಿತಾಟು ಅಲುಗಿದ್ದರಿಂದ "ಪಾತಿ" ಅಂದ. ಕೊಂಚ ಅಲುಗಾಡಿ ಪೂರ್ತಿ ತಲೆ ಒಳಗೆ ಎಳೆದುಕೊಂಡು "ಹೂಂ" ಎಂದು ಸದ್ದಾಗಿ ಮತ್ತೆ ಸ್ಥಬ್ಧವಾಯಿತು. ಈ ಪಕ್ಕ ಮಲಗಿದ್ದ ಬೀರನನ್ನು ಕೂಗಬೇಕೆನಿಸಿದರೂ ಅವನು ಮೂಲೆಯಲ್ಲಿ ಮುಸುಕು ಹಾಕಿಕೊಂಡು ಮುದುರಿಕೊಂಡಿರುವುದು ನೋಡಿ ಬೇಡವೆನಿಸಿತ್ತು ಕೂಗಲಿಲ್ಲ. ಅವರಿಬ್ಬರೂ ತಮ್ಮ ಗೋಣಿತಾಟಿನೊಳಗೆ ಮುದುರಿ ಗೊರಕೆ ಹೊಡೆಯುತ್ತಿದ್ದರು. ಅವ್ವ ಯಾರೊಡನೆಯೋ ಮಾತಾಡುತ್ತಿರುವುದು ಕೇಳಿಸಿತು. ಮತ್ಯಾರ ಜೊತೆ ಮಾತಾಡಿಯಾಳು, ಅಪ್ಪನ ಜೊತೆ ತಾನೆ, ಅವನು ಅವ್ವನಿಗೆ ಏನೇನೋ ಬೈಯ್ಯುತ್ತಿದ್ದ. ಅವನ ಗಲಾಟೆ ಜೋರಾಗಿತ್ತು. ಬಹುಶಃ ಅವನ ಗಲಾಟೆಯಿಂದಲೇ ಮಂಜನಿಗೆ ಎಚ್ಚರವಾಯಿತೇನೋ. "ಹತ್ತು ರೂಪಾಯಿ ಕೊಡೆ" ಅವ್ವನನ್ನು ಕೇಳುತ್ತಿದ್ದ. ಕೇಳುತ್ತಿದ್ದ ಎನ್ನುವುದಕ್ಕಿಂತ ಪೀಡಿಸುತ್ತಿದ್ದ. ಹಾಡು ಹಗಲಾಗಲಿ, ಮದ್ಯ ರಾತ್ರಿಯಾಗಲಿ ತನಗೆ ಕುಡಿಯಲು ಕಾಸುಬೇಕೆಂದರೇ ಅವ್ವನನ್ನು ಹೀಗೆ ಪೀಡಿಸುತ್ತಿದ್ದ. ಅವನು ಕೂಲಿ ಮಾಡುವುದು ಬಿಟ್ಟು ಅದೆಷ್ಟು ದಿನ ಕಳೆದುಹೋದವೋ.. "ದಿನಾ ಯಾಕೆ ನನ್ನ ಪಿರಾಣ ತಿಂತೀ, ನಿನಗೇನು ಹೊತ್ತು ಗೊತ್ತಿಲ್ಲವೇ, ಇನ್ನೂ ಬೆಳಕೇ ಹರಿದಿಲ್ಲ ಆಗಲೇ ನನ್ನ ಪೀಡಿಸುತ್ತಿದ್ದಿಯಲ್ಲ, ಕಾಸು ಕಾಸು ನಾನೆಲ್ಲಿಂದ ತರಲಿ ಹೋಗು" ಗೊಣಗುತ್ತಿದ್ದಳು. ಅವಳಾದರೂ ಏನು ಮಾಡುತ್ತಾಳೆ, ಅಪ್ಪ ಕೂಲಿ ಮಾಡೋದು ಬಿಟ್ಟ ಮೇಲೆ ಅವ್ವನೇ ಕೂಲಿಗೆ ಹೋಗಬೇಕಾಗಿತ್ತು. ಗಂಡಾಳಿಗಿಂತ ಹೆಣ್ಣಾಳಿಗೆ ಕಡಿಮೆ ಕೂಲಿ ಇದ್ದರೂ ಅದರಲ್ಲೇ ಸಂಸಾರ ನಿಭಾಯಿಸುತ್ತಿದ್ದಳು. ಅಪ್ಪ ಮೊದಲು ಹೇಗಿದ್ದ ಈಗ ಏಕೆ ಹಿಂಗಾದ? ದಿನಾಲು ಕೆಲಸಕ್ಕೆ ಹೋಗುತ್ತಿದ್ದವನು ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಇದ್ದಕ್ಕಿದ್ದಂತೆ ಒಂದು ದಿನ ಏನಾಯಿತೋ ಕುಡಿದು ಬಂದಿದ್ದ. ಅವ್ವನ ಮೇಲೆ ಜಗಳ ಮಾಡಿದ. ಅಂದೇ ಕೊನೆ ಮರುದಿನದಿಂದ ಕೂಲಿಗೆ ಹೋಗಲಿಲ್ಲ. ಕುಡಿತದ ದಾಸನಾಗಿಬಿಟ್ಟಿದ್ದ. ಸಹವಾಸದಿಂದ ಕೆಟ್ಟು ಹೋಗಿದ್ದ. ಅಂದಿನಿಂದ ಇಂದಿನವರೆಗೆ ಮನೆಯ ಪರಿಸ್ಥಿತಿಯಂತೂ ಬಿಗಡಾಯಿಸಿಹೋಗಿದೆ. ಅಮೇಲೆ ತಾನೆ ನಾನು ಸ್ಕೂಲು ಬಿಟ್ಟು ದೂರದ ಬಡಿಗಳ್ಳಿಯ ಕಮ್ಮಾರ ಶೆಟ್ಟಿಯ ಕುಲುಮೇಲಿ ಕಬ್ಬಿಣ ಬಡಿಯುವ ಕೆಲಸಕ್ಕೆ ಸೇರಿದ್ದು. ಇಂದಿಗೆ ಸರಿಯಾಗಿ ಒಂದು ತಿಂಗಳಾಯಿತು. ಅಂದರೆ ಇಂದು ನನಗೆ ಸಂಬಳದ ದಿನ. ಸಂಬಳವೆಂದ ಕೂಡಲೇ ಲಗುಬಗನೇ ಎದ್ದ. ಪಕ್ಕದಲ್ಲಿ ತಮ್ಮ ತಂಗಿಯರಿಬ್ಬರೂ ಇನ್ನೂ ನಿದ್ರಿಸುತ್ತಿದ್ದರು. ಎದ್ದು ಬಚ್ಚಲುಗೂಡಿನ ಕಡೆಗೆ ನಡೆದ. ಅವ್ವನನ್ನು ಅಪ್ಪ ಪೀಡಿಸುತ್ತಲೇ ಇದ್ದ ಹತ್ತು ರೂಪಾಯಿಗಾಗಿ. ಅದನ್ನು ಗಮನಿಸದೆ ಅವ್ವ ಮಂಜನನ್ನು ನೋಡಿ "ಏನ್ ಮಗ ಇಷ್ಟು ನಿದಾನ ಎದ್ದಿ, ಹೊತ್ತಾಯ್ತಾ ಬಂತು, ಬೇಗ ಹೊರಡು ಎಂದಳು ಮಂಜನಿಗೆ ಹೊಟ್ಟೆ ಚುರುಗುಟ್ಟುತ್ತಿತ್ತೇನೋ ಹಾಗೆ ನಿಂತಿದ್ದ. ಅದ್ಯಾಕೆ ಹಾಗೆ ನಿಂತಿದ್ದಿ, ರಾತ್ರೀದು ಮುದ್ದೆ ಮೆಣಸಿನ ಕಾರ ಇರಬೋದು ಹಾಕ್ಕೊಂಡು ತಿಂದು ಹೋಗು ಮಗ" ಮತ್ತೆ ಹೇಳಿದ್ದಳು. ಅವ್ವ ದಿನಾಲು ಇದೇ ಮಾತನ್ನು ಹೇಳುತ್ತಿದ್ದಳು. ಮಂಜನೂ ದಿನಾ ಅದನ್ನೇ ತಿನ್ನುತ್ತಿದ್ದ. ಆದರೆ ಇಂದು ಹಾಗಾಗುವುದಿಲ್ಲ ಅವನಿಗೆ ಸಂಬಳ ಬರುತ್ತದೆ, ಕಮ್ಮಾರ ಶೆಟ್ಟಿ ಸಂಬಳ ಕೊಟ್ಟ ಮೇಲೆ ನಾಗಮಂಗಲ ಪೇಟೆಗೆ ಹೋಗಿ ಮನೆಗೆ ಬೇಕಾದ ಅಕ್ಕಿ ಮುಂತಾದ ಸಾಮಾನು ತರಬೇಕು, ಹಾಗೆ ಅವ್ವನ ಬಳಿ ಇರೋದು ಒಂದೇ ರವಿಕೆ, ಅದೂ ಬೆನ್ನ ಹಿಂದೆ ಹರಿದು ಹೋಗಿದೆ. ಅವಳಿಗೆ ಹೊಸದೊಂದು ರವಿಕೆ ತರಬೇಕು, ನಾಳೆಯಿಂದ ಕೆಲದಿನಗಳ ಮಟ್ಟಿಗಾದ್ರು ಅನ್ನದ ಮುಖ ನೋಡ್ತಿವಲ್ಲ ಅಂದುಕೊಳ್ಳುತ್ತಾ ಖುಷಿಯಲ್ಲಿ ತಟ್ಟೆಯಲ್ಲಿದ್ದದ್ದನ್ನೆಲ್ಲಾ ಖಾಲಿಮಾಡಿ ನೀರು ಕುಡಿದು ಎದ್ದ. ಅಪ್ಪ ಅವ್ವನನ್ನು ಪೀಡಿಸುತ್ತಿದ್ದು ಇನ್ನೂ ನಡೆಯುತ್ತಿತ್ತು. ಅವಳು ಕೊಡೋವರೆಗೂ ಇವನು ಬಿಡೋದಿಲ್ವೇನೋ ಅಂದುಕೊಂಡು ಮಂಜ ಮನೆಯಂಗಳ ದಾಟಿದ್ದ.

ಪುಟ್ಟೇಗೌಡ್ರ ಹಿತ್ತಲು ದಾಟಿದ್ರೆ ಸಾಮೇಗೌಡ್ರ ಅಂಗಳ, ಅಲ್ಲಿಂದ ಮುಂದೆ ಮಣ್ಣಿನ ರಸ್ತೆ. ಕಾಲುದಾರೀಲಿ ನಾಗಮಂಗಲದತ್ತ ಹೆಜ್ಜೆ ಹಾಕುವಾಗ ತಣ್ಣಗೆ ಚಳಿ ಕೊರೆಯುತ್ತಿತ್ತು. ಕಮ್ಮಾರ ಶೆಟ್ಟಿ ಕುಲುಮೆ ತಲುಪುವ ಹೊತ್ತಿಗೆ ಬೆಳಕಾಗಿತ್ತು. ಕೊಂಚ ತಡವೂ ಆಗಿತ್ತು. ಕುತ್ತಿಗೆಯಿಂದಿಳಿಯುತ್ತಿದ್ದ ಬೆವರು ಒರೆಸಿಕೊಳ್ಳುತ್ತಾ ಕುಲುಮೆಯ ಗುಡಿಸಲಿಗೆ ಕಾಲಿಟ್ಟರೆ ಬಾಗಿಲಲ್ಲೇ ಇದ್ದಾನೆ ಕಮ್ಮಾರಶೆಟ್ಟಿ. "ಸಾಕೇನೋ ಹೊತ್ತು, ಇನ್ನೂ ಕೊಂಚ ತಡವಾಗಿ ಬರಬಹುದಿತ್ತಲ್ಲ, ಬರೋವಾಗ ಮೊದಲೇ ಹೇಳಿದ್ರೆ ಸಾರೋಟು ಕಳಿಸ್ತಿದ್ದೆ. ನಿಮ್ಮಂತವರನ್ನು ನಂಬಿದ್ರೆ ನನ್ನ ಹೊಟ್ಟೆ ತುಂಬಿದಾಗೆ, ನಡಿಯೋ ಒಳಗೆ" ಕಮ್ಮಾರ ಶೆಟ್ಟಿಯ ಬೈಗುಳದಿಂದ ಅವನಿಗೇನು ಬೇಸರವಾಗಲಿಲ್ಲ. ಯಾಕೆಂದರೆ ಇದೆಲ್ಲಾ ಪ್ರತಿದಿನದ ದಿನಚರಿ ಎಂಬಷ್ಟು ಸಲೀಸಾಗಿ ಒಳನಡೆದ. ಅವನಿಗಾಗಿ ಕೆಲಸ ಕಾಯುತ್ತಿತ್ತು. ಆಗ ಶುರುಮಾಡಿದ ಕೆಲಸ ಸಂಜೆಯಾದರೂ ಮುಗಿಯುತ್ತಿರಲಿಲ್ಲ. ಒಂಬತ್ತು ಗಂಟೆಗೊಮ್ಮೆ 'ಚಾ" ಬಂತು. ಅದು ದಿನವೂ ಬರುತ್ತದೆ, ಅದು "ಚಾ"ನೋ ಅಥವ ಕಲಗಚ್ಚೋ, ಅದಾದರೂ ಸಿಕ್ಕುತ್ತಲ್ಲ ಸುಸ್ತಾದವನಿಗೆ ಸುಧಾರಿಸಿಕೊಳ್ಳಲು ಒಂದೇ ದಾರಿ ಇದಾಗಿತ್ತು. ಮತ್ತೊಮ್ಮೆ ಸಂಬಳ ಸಿಕ್ಕುವ ನೆನಪಾಯ್ತು. ರಾತ್ರಿ ಅಂದುಕೊಂಡಂತೆ ಮಾಡಿದ ಮೇಲೆ ಹಣ ಉಳಿದರೆ ತಂಗಿ ಪಾರ್ವತಿ, ತಮ್ಮ ಬೀರನಿಗೆ ಬಳೆ ಬತ್ತಾಸು ಕೊಳ್ಳಬೇಕು. ಅವನ್ನೆಲ್ಲಾ ಪಡೆದುಕೊಂಡ ಮೇಲೆ ಅವರ ಮುಖದಲ್ಲೂ ಅರಳುವ ಸಂತೋಷವನ್ನು ನಾನು ನೋಡಬೇಕು. ಆಲೋಚನೆಯ ಜೊತೆಯಲ್ಲೇ ಕೆಲಸವನ್ನು ಮಾಡುತ್ತಾ ಸಂಜೆಯಾಗುವುದನ್ನು ಕಾಯುತ್ತಿದ್ದ ಮಂಜ.

ಸಂಜೆ ಐದು ಗಂಟೆಯಾಯಿತು ಹೀರ ಮತು ಮಂಜ ಇಬ್ಬರು ಕೆಲಸ ಮುಗಿಸಿ ಕೈಕಾಲು ತೊಳೆದುಕೊಂಡು ಕಮ್ಮಾರಶೆಟ್ಟಿಗಾಗಿ ಕಾಯುತ್ತಿದ್ದರು ಸಂಬಳ ಪಡೆಯಲು. ಕಮ್ಮಾರ ಶೆಟ್ಟಿ ಹೊರಗೆ ಹೋಗಿದ್ದ. ಇಬ್ಬರು ಮಾತಾಡಿಕೊಳ್ಳುತ್ತಿರುವಾಗ ದೂರದಿಂದ ಒಬ್ಬ ವ್ಯಕ್ತಿ ವೇಗವಾಗಿ ಬರುತ್ತಿದ್ದುದು ಕಂಡಿತು. ಅವನ ಮುಖದಲ್ಲಿ ವಿಷಾದ, ದುಃಖ ಮಿಶ್ರಿತವಾಗಿ ಎದ್ದುಕಾಣುತ್ತಿತ್ತು.

"ಕಮ್ಮಾರ ಶೆಟ್ಟಿ ಎಲ್ಲಿ" ಹೀರ ಕೇಳಿದ.

ನೀವಿಬ್ಬರೂ ಬೇಗ ಹೋಗಿ ಕಮ್ಮಾರ ಶೆಟ್ಟಿಯ ಹೆಣವನ್ನು ಊರ ಚತ್ರದ ಅಂಗಳದಲ್ಲಿ ಮಲಗಿಸಿದ್ದಾರೆ. ಮದ್ಯಾಹ್ನ ರಸ್ತೆಯನ್ನು ದಾಟುವಾಗ ಲಾರಿಯೊಂದು ವೇಗವಾಗಿ ಬಂದು ಕಮ್ಮಾರಶೆಟ್ಟಿಗೆ ಅಪ್ಪಳಿಸಿ ಅಲ್ಲೇ ಸತ್ತ" ಹೇಳಿ ಬಂದಷ್ಟೇ ವೇಗವಾಗಿ ವಾಪಸ್ ಹೊರಟ ಆತ.

"ಕಮ್ಮಾರ ಶೆಟ್ಟಿ ಸತ್ತ" ಮಾತಷ್ಟೇ ಕೇಳಿಸಿತ್ತು. ಮುಂದಿನ ಮಾತುಗಳ್ಯಾವುವು ಕೇಳಿಸಲಿಲ್ಲ ಮಂಜನಿಗೆ. ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು ಒರೆಸಿಕೊಂಡಷ್ಟು ಜಾಸ್ತಿಯಾಗಿ. ಅವ್ವನ ಹರಿದ ರವಿಕೆ, ಗೋಣಿತಾಟುಗಳಲ್ಲಿ ಮುದುರಿಕೊಂಡಿರುವ ತಮ್ಮ ತಂಗಿ, ಅದೇ ಗಂಜಿ, ತಂಗಳು ಮುದ್ದೆ, ಗೊಡ್ಡು ಕಾರ ಎಲ್ಲಾ ಕಣ್ಣ ಮುಂದೆ ಸರಿಯುತ್ತಿದ್ದವು.

ಶಿವು.ಕೆ.

75 comments:

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ಭಾಗ-೧ ಹಾಗೂ ಎರಡನ್ನು ಒಟ್ಟಿಗೇ ಓದಿದೆ. ಕಥೆಯ ವಸ್ತು ಮನಮುಟ್ಟುವಂತಿದೆ. ನಿಮ್ಮಲ್ಲಿ ಉತ್ತಮ ಕಥೆಗಾರನಾಗುವ ಎಲ್ಲಾ ಲಕ್ಷಣಗಳಿವೆ. ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರೆ ಅದೆಷ್ಟೋ ಕಟು ವಾಸ್ತವಿಕತೆಗಳು, ಘಟನೆಗಳು ಹಲವು ಕಥೆಗಳಿಗೆ ವಸ್ತುವಾಗಬಲ್ಲವು. ಉತ್ತಮ ಪ್ರಯತ್ನ.. ಮುಂದುವರಿಸಿ.

Guruprasad said...

ಶಿವೂ ,
ತುಂಬ ಚೆನ್ನಾಗಿ ಬರೆದಿದ್ದೀರ. ಇಷ್ಟ ಆಯಿತು ನಿಮ್ಮ ಬರೆಯುವ ಶೈಲಿ,,,"ತಾಯಿ ಬಚ್ಬಲು ಮನೆಯಲ್ಲಿ ನೀರೊಲೆಗೆ ಬೆಂಕಿಹಾಕಿದ್ದಳೆನಿಸುತ್ತದೆ, ಅದರ ಮಬ್ಬು ಬೆಳಕು ನಾನು ಮಲಗಿದ್ದ ಕೋಣೆಯನ್ನು ಬೇರ್ಪಡಿಸಿದ್ದ ಗೋಡಿಯ ಕಿಂಡಿಯಿಂದ ಬಿಳಿಕೋಲಾಗಿ ಎದುರುಗೋಡೆಯನ್ನು ಕೊರೆಯುತ್ತಿತ್ತು." ತುಂಬ ಚೆನ್ನಾಗಿ ಇದೆ imagination ,,, ಇದೆ ರೀತಿ ಮುಂದುವರಿಸಿ.....
ಗುರು

SSK said...

ಶಿವೂ ಅವರೇ,
ಕಥೆ ಚಿಕ್ಕದಾದರೂ ಚೊಕ್ಕವಾಗಿತ್ತು! ಓದಲು ಶುರು ಮಾಡಿದ್ದಷ್ಟೇ, ಅಷ್ಟರಲ್ಲೇ ಕಥೆಯ ಕ್ಲೈಮ್ಯಾಕ್ಸ್ ಬಂದುಬಿಟ್ಟಿತ್ತು!!
ಏಕೆಂದರೆ ಅಷ್ಟು ಭಾವುಕತೆಯಿಂದ ಓದಿದ್ದೆ. ಇನ್ನೊದು ವಿಷಯ, ನಾಗಮಂಗಲ ಎನ್ನುವ ಊರಿನ ಹೆಸರು ಓದಿ ಖುಷಿಯಾಯಿತು ಏಕೆಂದರೆ ನನ್ನ ಅಕ್ಕ, ಅವರ ಫ್ಯಾಮಿಲಿ ಆ ಊರಿನಲ್ಲಿ ಇದ್ದಾರೆ!

ನಿಮ್ಮಿಂದ ಇನ್ನಷ್ಟು ಕಥೆಗಳು ಸೃಸ್ಟಿಯಾಗಲಿ ಎಂದು ಆಶಿಸುತ್ತಾ......,
ಚಂದದ ಪುಟ್ಟ ಕಥೆಯನ್ನು, ಸರಳವಾಗಿ ನಿರೂಪಿಸಿದ ನಿಮಗೆ ಧನ್ಯವಾದ ಮತ್ತು ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.

Ranjita said...

ಮನ ಮುಟ್ಟುವ೦ತಹ ಕಥಾ ವಸ್ತು ತುಂಬಾ ಚೆನ್ನಾಗಿದೆ ಓದಲು ನಾವಿದ್ದೇವೆ .. ಹೀಗೆ ಪ್ರಯತ್ನ ಮುಂದುವರೆಯಲಿ ....

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಜೀವನದ ಅನೂಹ್ಯ ತಿರುವುಗಳನ್ನು ಕಣ್ಣಿಗೆ ಕಟ್ಟುವಂತೆ ಮನಸ್ಸನ್ನು ತಟ್ಟುವಂತೆ ಬರೆದಿದ್ದೀರ. ಬರೆದಿರುವ ಶೈಲಿ ತುಂಬ ಚೆನ್ನಾಗಿದೆ. ಓದುವಾಗ ನಾನೇ ಪಾತ್ರಧಾರಿಯಾಗಿದ್ದೆ.

umesh desai said...

ಶಿವು ಕತೆಯಕೊನೆ ತಿರುವು ಮೆಚ್ಚಿಗೆ ಯಾಯಿತು. ಯಾವುದಾದರೂ ಪತ್ರಿಕೆಗೆ ಕಳಿಸಿಕೊಡ್ರಿ ಭಾಳ ಛಂದ ಅದ.

ಅನಿಲ್ ರಮೇಶ್ said...

ಶಿವು,
ಕುಲುಮೆ ಕಥೆಯ ಎರಡು ಭಾಗಗಳೂ ತುಂಬಾ ಇಷ್ಟ ಆಯ್ತು.
ತುಂಬಾ ಚೆನ್ನಾಗಿ ಬರ್ದಿದೀರ. ನಿಮ್ಮ ಬರಹ ಶೈಲಿ ಹಿಡಿಸಿತು.

ಹೀಗೇ ಇನ್ನಷ್ಟು ಕಥೆಗಳನ್ನು ಬರೆಯಿರಿ.

-ಅನಿಲ್

Unknown said...

ಶಿವು ಒಟ್ಟಾರೆ ಕಥೆ ಇಷ್ಟವಾಯಿತು. ಕುಲುಮೆ ಇಲ್ಲಿ ಸಂಕೇತವಾಗಿ ಹೊರಹೊಮ್ಮಿದೆ. ಬದುಕಿನ ಕುಲುಮೆ ಎಂಬುದು ಕರ್ತಾರನ ಕಮ್ಮಟವಯ್ಯಾ ಎಂಬ ವಚನಕಾರರ ಸಾಲನ್ನು ನೆನಪಿಸುತ್ತದೆ. ಬಹು ಆಯಾಮ ಪಡೆದುಕೊಳ್ಳುವ ಕಥೆ.

ranjith said...

ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕೆಲವು ಕಡೆ imagination ಬಹಳ ಸೊಗಸಾಗಿದೆ.

ಹಾಗೆ ನಿಮ್ಮಲ್ಲಿ ಒಂದು request.

ಕ್ಯಾಮರಾ ಹಿಂದೆ ಬ್ಲಾಗಿನಲ್ಲೂ ಬರವಣಿಗೆ ಮುಂದುವರಿಸಿ.

ಕ್ಷಣ... ಚಿಂತನೆ... said...

ಶಿವು ಅವರೆ,

`ಕುಲುಮೆ' ಕಥೆ ಇಷ್ಟವಾಯಿತು. ಆ ಪಾತ್ರಗಳೆಲ್ಲ ನಮ್ಮ ಸುತ್ತಮುತ್ತಲೇ ಇದ್ದು, ಕೆಲವೊಂದು ನಾವೇ ಆ ಪಾತ್ರಗಳಾಗಿದ್ದಂತೆ ಭಾಸವಾಯಿತು. ನಾನು ಕ್ಲೈಮಾಕ್ಸ್ ಊಹಿಸಿಕೊಂಡಿದ್ದೇ ಬೇರೆ (ಆ ಮಂಜನಂತೆ). ಹಾಗೆಯೇ ಕಮ್ಮಾರಶೆಟ್ಟಿಯ ಸಾವು ಹಾಗೂ ಮಂಜನ ಮರುದಿನದಿಂದ ನಡೆಯುವ ಮಾಮೂಲಿ ಜೀವನ ಭಾವುಕತೆಯನ್ನು ತರಿಸಿತು. ವಾಸ್ತವ ಬದುಕಿನಲ್ಲಿನ ತಿರುವುಗಳು ಹೀಗೆಯೇ ಎಂದು ಹೇಳಲು ಯಾರಿಗೂ ಅಸಾಧ್ಯ.

ಕಥೆಗಾರ ನಾನಲ್ಲ ಎಂದೇ ಇಂತಹ ಒಂದು ಕಥೆಯನ್ನು ಕೊಟ್ಟಿದ್ದೀರಿ. ಸರಳ ನಿರೂಪಣೆ, ಪುಟ್ಟಪುಟ್ಟ ವಾಕ್ಯಗಳಿಂದ ಕಥೆ ತುಂಬಾ ಚೆನ್ನಾಗಿದೆ. ಇನ್ನಷ್ಟು ಕಥೆಗಳು ಮೂಡಿಬರಲಿ.

ಸ್ನೇಹದೊಂದಿಗೆ,

ಚಂದ್ರು

ರಾಜೀವ said...

ಬಹಳ ನಿರೀಕ್ಷಣೆಯಲ್ಲಿದ್ದ ಮಂಜನ ಆಸೆಯನ್ನು ತಕ್ಷಣವೇ ಮುಳುಗಿಸಿಬಿಟ್ಟರಲ್ಲಾ.
ನಿಮ್ಮ ಮೊದಲ ಕಥೆ ಸುಖಾಂತ್ಯದಿಂದ ಮುಗಿಸಬಾರದಿತ್ತೇ? (ತಮಾಶೆಗೆ).

ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ನಿಮ್ಮ ಕಥೆ. ಇನ್ನಷ್ಟು ಕಥೆಗಳು ನಿಮ್ಮಿಂದ ಹೊರಬರಲಿ.

ಸುಧೇಶ್ ಶೆಟ್ಟಿ said...

ಚೆನ್ನಾಗಿತ್ತು ಕಥೆ ಶಿವಣ್ಣ.... ಆದರೆ ಕಥೆ ದು:ಖಾ೦ತ್ಯ ಆದುದಕ್ಕೆ ಬೇಸರ ಆಯಿತು :(

ನಿಮ್ಮ ಕಥನ ಶೈಲಿ ಎಷ್ಟು ಚೆನ್ನಾಗಿದೆ. ಕಥೆಗಾರ ಎ೦ದು ಕರೆಸಿಕೊಳ್ಳುವ ಸಕಲ ಯೋಗ್ಯತೆಗಳೂ ನಿಮಗಿವೆ :)

ಹಳ್ಳಿ ಭಾಷೆಯಲ್ಲಿ ಸ೦ಭಾಷಣೆಗಳಲ್ಲಿ ಸ್ವಲ್ಪ ಪಟ್ಟಣದ ಭಾಷೆಯೂ ನುಸುಳಿದೆ ಎ೦ದೆನಿಸಿತು.....

ಮು೦ದೆ ಯಾವ ಕಥೆಯ ಬಗ್ಗೆ ಯೋಚಿಸುತ್ತಿದ್ದೀರಿ? :)

ಮನಸು said...

shivu sir,
kathe tumba chennagide... neevu innu matastu kathegaLannu bareyabahudu bareyuttaliri...

ಮೂರ್ತಿ ಹೊಸಬಾಳೆ. said...

ಶಿವು ಸರ್,
ಕಥೆ ಇವತ್ತಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ.
ತುಂಬಾ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ.
ನಿಮ್ಮಿಂದ ಇನ್ನೂ ಹಲವಾರು ಬರಹಗಳನ್ನು ಬರೆಯುವಂತಾಗಲಿ.

Unknown said...

ಉತ್ತಮ ಕಥೆ.. ಅಲ್ಲಿನ ಪಾತ್ರ ಮತ್ತು ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ.. ತುಂಬ ಇಷ್ಟ ವಾಯಿತು..

jaya said...

Thank God, neevu manja ammana ravikeya bagge, appana kuditakkaagi peeDisuva reetiyannu baredaddu nOdi elli avaribbaralli obbarige anaahutavaaguttadO endu hedaridde. sadya haagaagalilla, mamateya maatege Enu aagadiddare inta hattu halavu kelasagalannu sapaadisabahudu. ganda kudukanE aadaru, avanige kudiyuvudakke hana koduva hennu manadaaLadalli avanannu preetisuttale. haagaagi avanige Enaadaru aagioddaru, taayi sukhiyaagiruttiralilla. katheya antya duhkhadinda kUDiddaru, alliyu sukhantyavannu kaaNuttiddEne naanu. nimma bhaavanege dhakkeyaagiddare kshamisi.

ಸವಿಗನಸು said...

ಶಿವು ಸರ್,
ತುಂಬ ಚೆನ್ನಾಗಿ ಬರೆದಿದ್ದೀರ.... ಇಷ್ಟ ಆಯಿತು

ಶಿವಪ್ರಕಾಶ್ said...

ಕಥೆ ಉತ್ತಮವಾಗಿ ಮೂಡಿಬಂದಿದೆ...
ಹೀಗೆ ಬರಿಯುತ್ತಿರಿ...
ಧನ್ಯವಾದಗಳು

sunaath said...

ಶಿವು,
ನಿಮ್ಮ ಕಥನ ಶೈಲಿ ತುಂಬ ಚೆನ್ನಾಗಿದೆ. ದಯವಿಟ್ಟು ಈ ಕಲೆಯನ್ನು ಮುಂದುವರೆಸಿ.

ಶಾಂತಲಾ ಭಂಡಿ (ಸನ್ನಿಧಿ) said...

ಶಿವು ಅವರೆ...
ಕಥೆಯೊಳಗಿನ ನೈಜತೆ ಮನತಟ್ಟುತ್ತದೆ. ಯಾವತ್ತಿನಂತೆ ಸುಂದರವಾದ ನಿರೂಪಣೆ.
ಫೆಬ್ರುವರಿ ತಿಂಗಳಿನಲ್ಲಿ ನೀವು ಬರೆದ ‘ಈ ದೇಹದಿಂದ ದೂರನಾದೆ ಏಕೆ ಆತ್ಮನೆ’ ಎಂಬ ಕಥೆಯೂ ಸಹ ಹೀಗೆಯೇ ಕಾಡಿತ್ತು. ಬರೆಯುತ್ತಿರಿ.

PARAANJAPE K.N. said...

ಶಿವೂ, ನಿಮ್ಮ ಸರಳ ನಿರೂಪಣೆ, ಪಾತ್ರಪೋಷಣೆಯಲ್ಲಿರುವ ಕುಶಲ ಕಲೆಗಾರಿಕೆ, ಕಥನ ಶೈಲಿ ಎಲ್ಲವೂ ಚೆನ್ನಾಗಿದೆ. ನೀವು ಉದಯೋನ್ಮುಖ ಕಥೆಗಾರ ಎ೦ಬುದರಲ್ಲಿ ಎರಡು ಮಾತಿಲ್ಲ. All the Best.

Prabhuraj Moogi said...

ಕಥೆ ಬಹಳ ಚೆನ್ನಾಗಿದೆ ಸರ್, ಅದರಲ್ಲೂ ಆಲ್ಲಿ ಬರುವ ಸನ್ನಿವೇಷ ವರ್ಣನೆಗಳು ಸೂಪರ್.. ಬಿಸಿಲು ಬೆಳಕು ಬಿಳಿಕೊಲಾಗಿ ಕೊರೆದದ್ದು ಅಂತೂ ಬಹಳ ಹಿಡಿಸಿತು... ಕಥೆ ಮುಗೀತು ಅಂತ ಎಲ್ರೂ ಅಂತೀದಾರೆ, ಅದ್ರೆ ಮುಗಿದಿದೆ ಅಂತ ನನಗನ್ನಿಸುತ್ತಿಲ್ಲ, ಇನ್ನೂ ಮುಂದುವರೆಯಬಹುದು...

ಬಿಸಿಲ ಹನಿ said...

ಶಿವು,
ಮಂಜ ಸಂಬಳದ ಕನಸು ಕಾಣುತ್ತಿರುವಾಗಲೇ ಸಂಬಳ ಕೊಡಬೇಕಾದ ಕೄರ ಮಾಲೀಕ ನೆಗೆದುಬಿದ್ದು ಹೋದ ಮೇಲೆ ಅದಕ್ಕೂ ಅವನಿಗೆ ಕತ್ತರಿ ಬೀಳುತ್ತಾದರೂ ಅವನ ಸಾವಿಗೊಂದು ಅನುಕಂಪ ಸೂಚಿಸುವದರ ಮೂಲಕ ಮಂಜ ದೊಡ್ಡವ್ಯಕ್ತಿಯಾಗಿ ಕಾಣುತ್ತಾನೆ. ಕಥೆಯ ಮೇಲೆ ದೇವನೂರ ಮಹದೇವನವರ "ಅಮಾಸ" ಕಥೆಯ ದಟ್ಟ ಪ್ರಭಾವವಿದೆ. ದಲಿತ ಸಂವೇದನೆಗಳ ತೀವ್ರತೆಯಿದೆ. ನೀವೇಕೆ ಕತೆಗಾರರಾಗಬಾರದು?

ಜಲನಯನ said...

ಒಬ್ಬ ಕಥಗಾರನ ಉದಯವಾದದ್ದು ನಮ್ಮೆಲ್ಲರಿಗೆ ಸಂತಸದ ವಿಷಯ. ಚನ್ನಾಗಿ ಓದಿಸಿಕೊಂಡು ಹೋಗುವ ಕಥೆ ಬರೆದು ಪ್ರಸ್ತಾವನೆ ಸಹಾ ಚನ್ನಾಗಿತ್ತು. ಮುಂದುವರೆಯಲಿ ಶಿವು-ಲೇಖಕನ ಪಯಣ....ಶುಭವಾಗಲಿ..ಅದೂ ಪುಣ್ಯ ನವರಾತ್ರಿ ದಸರೆಯ ಸಂಭ್ರಮದ ಸಮಯದಲ್ಲಿ...

Godavari said...

ಶಿವೂ ಅವರೇ,

ತುಂಬಾ ಚೆನ್ನಾಗಿ ಬರೆಯುತ್ತಿರಿ.. ಕಥೆಯು ಸುಂದರವಾಗಿ ಮೂದಿಬಂದಿದೆ. ಈ ಕಲೆಯನ್ನು ಮುಂದುವರಿಸಿ..

ಕೆಲಸದ ಒತ್ತಡದಿಂದಾಗಿ ಬ್ಲಾಗ್ ಓದುವಿಕೆ ಮತ್ತು ಬ್ಲಾಗಿಂಗ್ ಎರಡೂ ಕಷ್ಟವಾಗಿ ಹೋಗಿದೆ. ಆದರೆ ಸಮಯವಿದ್ದಾಗ ನಿಮ್ಮ ಬ್ಲಾಗ್ ನಲ್ಲಿ ಇರಬಹುದಾದ ಹೊಸ ಛಾಯಾಚಿತ್ರಗಳು ಮತ್ತು ಲೇಖನಗಳಿಗಾಗಿ ಖಂಡಿತವಾಗಿ ಬರುತ್ತಿರುತ್ತೇನೆ.

-ಗೋದಾವರಿ

Ittigecement said...

ಶಿವು ಸರ್...

ಮಂಜ ನನ್ನ ದೃಷ್ಟಿಯಲ್ಲಿ ಎತ್ತರಕ್ಕೆ ನಿಂತು ಬಿಡುತ್ತಾನೆ..
ಇಂಥಹ ಪಾತ್ರಗಳನ್ನು ನಾವಾಗಿ ಒದುತ್ತೇವೆ...
ಇದು ನಿಮ್ಮಿಂದ ಮಾತ್ರ ಸಾಧ್ಯ...

ನಿಮ್ಮ ಕಥೆಯನ್ನು ಓದುತ್ತಿದ್ದ ಹಾಗೆ ಕುಂ.ವೀ. ನೆನಪಾದರು..
ಅವರಂತೆಯೆ ಸತ್ವಯುತವಾಗಿ ಬರೆಯಬಲ್ಲಿರಿ...

ಇನ್ನಷ್ಟು ಕಥೆಗಳ ನಿರೀಕ್ಷೆಯಲ್ಲಿರುವೆ...

ವಿಜಯದಶಮಿಯ,
ನಾಡ ಹಬ್ಬದ ಶುಭಾಶಯಗಳು... ಶುಭಾಶಯಗಳು...

shivu.k said...

ತೇಜಸ್ವಿನಿ ಮೇಡಮ್,

ಎರಡು ಭಾಗವನ್ನು ಒಟ್ಟಿಗೆ ಓದಿ ಕಥೆಯ ವಸ್ತುವನ್ನು ಇಷ್ಟಪಟ್ಟಿದ್ದೀರಿ...ನೀವು ಕೊಟ್ಟಿರುವ ಸಲಹೆಗಳು ತುಂಬಾ ಉಪಯುಕ್ತವಾಗಿವೆ...ಆ ನಿಟ್ಟಿನಲ್ಲಿ ತೊಡಗಿಕೊಳ್ಳುತ್ತೇನೆ..

ಧನ್ಯವಾದಗಳು.

shivu.k said...

ಗುರು,

ಕಥೆಯ ಶೈಲಿ ಮತ್ತು ಕಲ್ಪಿಸಿಕೊಂಡು ಬರೆದ ಸಾಲನ್ನು ಇಷ್ಟಪಟ್ಟಿದ್ದೀರಿ...ಅಂಥ ಸಾಲುಗಳನ್ನು ಬರೆಯಲು ನನ್ನ ಫೋಟೊಗ್ರಫಿ ದೃಷ್ಟಿಕೋನ ಸಹಾಯ ಮಾಡಿದೆ. ಅದನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್...

shivu.k said...

SSK ಮೇಡಮ್,

ಕತೆಯನ್ನು ದೊಡ್ಡದಾಗಿ ಬರೆಯಲು ನನಗೆ ಬರುವುದಿಲ್ಲ. ಏನೋ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ಅದನ್ನು ಭಾವುಕತೆಯಿಂದ ಓದಿದೆ ಅಂದಿದ್ದೀರಿ. ಥ್ಯಾಂಕ್ಸ್..
ನಾಗಮಂಗಲ ಹತ್ತಿರ ಒಂದು ಹಳ್ಳಿ ನಮ್ಮ ಊರು. ಆಟೋಗಳು ಸಿಗದಿದ್ದಲ್ಲಿ ಮೂರು ಕಿಲೋಮೀಟರ್ ನಡೆಯಬೇಕು. ಹಾಗೆ ನಡೆಯುತ್ತಾ ದಾರಿಯಲ್ಲಿ ಸಿಗುವ ಇತರ ಹಳ್ಳಿಗಳ ಮನೆಗಳನ್ನು ನೋಡುತ್ತಾ ಬರುವಾಗ ಈ ಕತೆ ಹೊಳೆಯಿತು. ಹಾಗೆ ವಾಪಸ್ ಬಂದು ಬರೆದೆ.
ಧನ್ಯವಾದಗಳು.

shivu.k said...

ರಂಜಿತ,

ನನ್ನ ಮೊದಲ ಪ್ರಯತ್ನವನ್ನು ಮನಮುಟ್ಟುವ ಕತೆಯೆಂದಿದ್ದೀರಿ..ಥ್ಯಾಂಕ್ಸ್...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu.k said...

ಮಲ್ಲಿಕಾರ್ಜುನ್,

ಕತೆ ಹೊಳೆದಾಗ ಸರಳವಾಗಿತ್ತು. ಅದಕ್ಕೆ ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡಾಗ ಕತೆ ಹೀಗೆ ಬೆಳೆಯಿತು. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಉಮೇಶ್ ದೇಸಾಯ್ ಸರ್,

ಕತೆಯ ತಿರುವು ಮತ್ತು ಅಂತ್ಯವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...
ನೀವು ಹೇಳಿದಂತೆ ನನ್ನ ಹೊಸ ಪ್ರಯತ್ನವನ್ನು ಮೊದಲು ಪತ್ರಿಕೆಗೆ ಕಳಿಸುತ್ತೇನೆ. ಹಾಗೆ ಇದನ್ನು ಕಳಿಸಿದ್ದೆ. ಆದ್ರೆ ಪ್ರಕಟವಾಗದೆ ಹಾಗೆ ಎರಡು ತಿಂಗಳು ಕಳೆದ ಮೇಲೆ ಕೊನೆಗೆ ಬ್ಲಾಗಿನಲ್ಲಿ ಹಾಕಿದ್ದೇನೆ.

ಧನ್ಯವಾದಗಳು.

shivu.k said...

ಅನಿಲ್,

ಕತೆಯ ಎರಡು ಭಾಗಗಳನ್ನು ಓದಿ ಶೈಲಿ ಇಷ್ಟವಾಗಿದೆಯೆಂದಿದ್ದೀರಿ...ಥ್ಯಾಂಕ್ಸ್...

shivu.k said...

ಡಾ.ಸತ್ಯನಾರಾಯಣ ಸರ್,

ಕತೆ ಹೊಳೆದಿದ್ದು ಬೇರೆ ರೀತಿ. ಕುಲುಮೆಯನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲು ಕಾರಣ ಊರಿನ ರಸ್ತೆಯಲ್ಲಿ ನಡೆವಾಗ ಕಂಡ ಕುಲುಮೆ ಕೆಲಸ. ಆಗ ಅದನ್ನು ಬದಲಾಯಿಸಿಕೊಂಡೆ. ಕತೆ ಹೊಸ ಆಯಾಮ ಪಡೆದುಕೊಳ್ಳುತ್ತದೆ ಅಂದಿದ್ದೀರಿ...ಅಂತ ಮಾತುಗಳು ನನಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತೆ ಥ್ಯಾಂಕ್ಸ್...

shivu.k said...

ರಂಜಿತ್,

ಕತೆಯನ್ನು ಮತ್ತು ನಾನು ಕಲ್ಪಿಸಿಕೊಂಡ ರೀತಿಯನ್ನು ಇಷ್ಟಪಟ್ಟಿದ್ದೀರಿ.

ಮತ್ತೆ ಕ್ಯಾಮೆರಾ ಹಿಂದೆ ಬ್ಲಾಗನ್ನು ಪ್ರಾರಂಭಿಸಿದ್ದೇ ಬೇರೆ ಕಾರಣಕ್ಕಾಗಿ ಅದರಲ್ಲಿ ಬರೆದಿರುವ ಲೇಖನಗಳ ಜೊತೆಗೆ ಮತ್ತಷ್ಟು ಸೇರಿ ಪುಸ್ತಕವಾಗಿ ಬರುತ್ತಿದೆ. ಅಲ್ಲಿನ ನನ್ನ ಉದ್ದೇಶ ಈಡೇರಿದ್ದ ಕಾರಣಕ್ಕಾಗಿ ಕ್ಯಾಮೆರಾ ಹಿಂದೆ ಬ್ಲಾಗ್ ನಿಲ್ಲಿಸಿದ್ದೇನೆ. ಮತ್ತೆ ಎರಡು ಬ್ಲಾಗಿನಲ್ಲಿ ಸೊಗಸಾದ ಲೇಖನವನ್ನು ಮತ್ತು ಚಿತ್ರಗಳನ್ನು ಕೊಡುತ್ತಾ ಮುಂದುವರಿಸುವುದು ಈಗಿನ ಕೆಲಸದ ಒತ್ತಡದಲ್ಲಿ ಸಾಧ್ಯವಾಗದ ಕಾರಣ ನಿಲ್ಲಿಸಿದ್ದೇನೆ.

Laxman (ಲಕ್ಷ್ಮಣ ಬಿರಾದಾರ) said...

ನಾನೋಂದು ಮೊಟ್ಟ ಮೊದಲ ಬಾರಿಗೆ ಒಂದು ಕಥೆ ಬರೆದಿದ್ದೆನೆ. ನೋಡಿ ನಿಮ್ಮ ಆಭಿಪ್ರಾಯ ತಿಳಿಸಿ
www.nanisaha.blogspot.com

ಚಿತ್ರಾ said...

ಶಿವೂ,
ತಡವಾಗಿ ಬಂದಿದ್ದೇನೆ , ಕ್ಷಮೆಯಿರಲಿ ! ಕಥೆ ಓದಿ , ಒಂಥರಾ ವಿಷಾದ ! ಮಂಜನಂಥಾ ಅದೆಷ್ಟು ಜನ ಹೀಗೆ ಬಡತನದ ' ಕುಲುಮೆ' ಯಲ್ಲಿ ಬೇಯುತ್ತಿದ್ದಾರೆ ಅಲ್ಲವೇ ?
ಬೆಂಕಿಯಲ್ಲಿಬೇಯುತ್ತಾ, ಇಂದಿನ ಆಸೆಗಳನ್ನು ಸುತ್ತಿಗೆಯಿಂದ ಹೊಡೆದು ಮಲಗಿಸಿ ನಾಳೆಯ ಕನಸುಗಳನ್ನು ಕಟ್ಟುವವರು , ನೆಮ್ಮದಿಯ ನಿದ್ದೆಗಾಗಿ ಕಾಯುವವರು ...
ಭರವಸೆಯ ಹೊಂಗಿರಣವನ್ನು ಕಾಯುತ್ತಾ ಕತ್ತಲ ರಾತ್ರಿ ಕಳೆಯುವವರು .. ಎಷ್ಟು ಜನರೋ !
ಚೆನ್ನಾಗಿದೆ

PaLa said...

ಸೊಗಸಾದ ಶೈಲಿ, ಬರಹದ ಮಧ್ಯ ಇಣುಕುವ ನಿಮ್ಮ ಕಲ್ಪನಾ ಶಕ್ತಿ, ಕತೆಯ ಅಂತ್ಯ ಬಹಳ ಚೆನ್ನಾಗಿದೆ..

Prashanth Arasikere said...

Hi, shivu


Nimma kate tumba chennagide..munde enu anno tara oduskondu hoythu...konelli ...shetty sattaga..avna reaction matte avna munde baro kartayva tumba channagi bandide...

shivu.k said...

ಕ್ಷಣ ಚಿಂತನೆ ಸರ್,

ನೀವು ಊಹಿಸಿದ ಕ್ಲೈಮ್ಯಾಕ್ಸ್‍ಗಿಂತ ಬೇರೇನೇ ಆಗಿದ್ದರೇ ಚೆನ್ನಾಗಿರುತ್ತೇ ಅಲ್ಲವೇ....ಪಾತ್ರಗಳಲ್ಲಿನ ಭಾವನಾತ್ಮಕತೆ, ವಾಸ್ತವಿಕತೆ, ಇತ್ಯಾದಿಗಳನ್ನು ಮೆಚ್ಚಿದ್ದೀರಿ. ನಿರೂಪಣೆಯನ್ನೂ ಇಷ್ಟಪಟ್ಟಿದ್ದೀರಿ...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

ಧನ್ಯವಾದಗಳು.

shivu.k said...

ರಾಜೀವ್,

ಕಥೆಯ ಸರಳತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

ಕತೆಯನ್ನು ನೀವಂದುಕೊಂಡಂತೆ ಮುಗಿಸಬಹುದಿತ್ತು. ಆದ್ರೆ ಬಡತನದಲ್ಲಿ ಸತ್ಯವಾಗಿ ನಡೆಯುವುದೆಲ್ಲಾ ಹೀಗೆ ಅಲ್ಲವೇ....

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಸುಧೇಶ್,

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಮತ್ತು ಅಂತ್ಯ ಸುಖಾಂತ್ಯವಾಗಬೇಕೆನ್ನುವ ನಿಮ್ಮ ಅಭಿಪ್ರಾಯದ ನನಗೆ ಗೌರವವಿದೆ.

ಹಳ್ಳಿಭಾಷೆಯಲ್ಲಿ ಮೊದಲ ಭಾರಿ ಪ್ರಯತ್ನಿಸಿದಾಗ ನನಗೆ ಗೊತ್ತಿಲ್ಲದೆ ಶಿಷ್ಟಭಾಷೆ ನುಸುಳಿದೆ ನಂತರ ಅದು ಗೊತ್ತಾಯಿತು. ಮುಂದಿನ ಕತೆಗಳಲ್ಲಿ ಅದನ್ನು ಖಂಡಿತ ಗಮನದಲ್ಲಿರಿಸಿಕೊಳ್ಳುತ್ತೇನೆ.

ಮುಂದಿನ ಕತೆ ಹೊಳೆದಾಗ ಬರೆಯುತ್ತೇನೆ. ಸದ್ಯ ಮತ್ತೊಂದು ಹೊಸ ನನ್ನ ಜೀವನದ ಒಂದು ಸನ್ನಿವೇಶವನ್ನು ಬರೆಯುತ್ತಿದ್ದೇನೆ. ಅದನ್ನು ನೋಡಲು ಮುಂದಿನ ಸಾರಿ ಖಂಡಿತ ಬನ್ನಿ.

shivu.k said...

ಮನಸು ಮೇಡಮ್,

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ಖಂಡಿತ ನಿಮ್ಮ ಅನಿಸಿಕೆಯಂತೆ ಮತ್ತಷ್ಟು ಕತೆಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

shivu.k said...

ಮೂರ್ತಿ ಹೊಸಬಾಳೆ ಸರ್,

ಕತೆಯನ್ನು ವ್ಯಕ್ತಪಡಿಸಿದ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

shivu.k said...

ರವಿಕಾಂತ್ ಗೋರೆ ಸರ್,

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಜಯಲಕ್ಷ್ಮಿ ಮೇಡಮ್,

ಕತೆಯಲ್ಲಿನ ಅಪ್ಪ ಅಮ್ಮನ ಪಾತ್ರದ ಬಗೆಗೆ ನೀವು ಆಳವಾಗಿ ಯೋಚಿಸಿದ್ದು ನೋಡಿದರೆ ನನ್ನ ಶ್ರಮ ಸಾರ್ಥಕವೆನಿಸುತ್ತೆ.

ಮತ್ತೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೀರಿ ಅದಕ್ಕೆ ಕ್ಷಮೆ ಕೇಳುವ ಅಗತ್ಯವಿಲ್ಲ. ಮತ್ತೆ ಕತೆಯಲ್ಲಿ ದುಃಖಾಂತ್ಯದಲ್ಲಿ ನೀವು ಸುಖಾಂತ್ಯವನ್ನೇ ಕಂಡಿರುವುದು ನನಗಂತೂ ಖುಷಿ.
ಹೀಗೆ ಬರುತ್ತಿರಿ, ಪ್ರೋತ್ಸಾಹ ನೀಡುತ್ತಿರಿ...

ಧನ್ಯವಾದಗಳು.

shivu.k said...

ಸವಿಗನಸು ಸರ್,

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಶಿವಪ್ರಕಾಶ್,

ಧನ್ಯವಾದಗಳು. ಹೀಗೆ ಬರುತ್ತಿರಿ..

shivu.k said...

ಸುನಾಥ್ ಸರ್,

ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

shivu.k said...

ಶಾಂತಲ ಮೇಡಮ್,

ಕತೆಯೊಳಗಿನ ನೈಜತೆ ಮತ್ತು ಸರಳ ನಿರೂಪಣೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಫೆಬ್ರವರಿಯಲ್ಲಿ ಪ್ರೇಮಿಗಳ ದಿನಕ್ಕಾಗಿ ಬರೆದ "ಈದೇಹದಿಂದ ದೂರನಾದೆ ಏಕೆ ಆತ್ಮನೆ" ಸಣ್ಣ ಕತೆಯನ್ನು ನೆನಪಿಸಿಕೊಂಡಿದ್ದಕ್ಕೆ ಮತ್ತೊಮ್ಮೆ ಥ್ಯಾಂಕ್ಸ್...
ನನಗಿಷ್ಟವಾದ ಕತೆಗಳಲ್ಲಿ ಅದು ಒಂದು. ಹೀಗೆ ಬರುತ್ತಿರಿ..

shivu.k said...

ಪರಂಜಪೆ ಸರ್,

ಕತೆಯಲ್ಲಿನ ಎಲ್ಲಾ ಪ್ರಕಾರಗಳನ್ನು ಗುರುತಿಸಿ ಇಷ್ಟಪಟ್ಟಿದ್ದೀರಿ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

shivu.k said...

ಪ್ರಭು,

ಕಥೆ ಮತ್ತು ಕತೆಯಲ್ಲಿನ ಚಿತ್ರಣಗಳನ್ನು ಇಷ್ಟಪಟ್ಟಿದ್ದೀರಿ. ಮತ್ತು ಕತೆ ಖಂಡಿತ ಮುಗಿದಿದೆ. ಆದ್ರೆ ನೀವು ನನಗೆ ಮತ್ತೆ ಮುಂದುವರಿಸಲು ಹೇಳಿದ್ದೀರಿ. ನೋಡೋಣ...

ಧನ್ಯವಾದಗಳು.

shivu.k said...

ಉದಯ್ ಸರ್,

ಕತೆಯಲ್ಲಿ ಮಂಜನ ವ್ಯಕ್ತಿತ್ವದ ಬಗ್ಗೆ ಮಾತಾಡಿದ್ದೀರಿ.

ಮತ್ತೆ ನಾನು ದೇವನೂರ ಮಹಾದೇವರವರ ಕತೆಯನ್ನು ಓದಿಲ್ಲ. ನೀವು ಹೇಳಿದ ಮೇಲೆ ಓದಬೇಕೆನಿಸಿದೆ. ದಲಿತ ಸಂವೇದನೆ ಬಗ್ಗೆ ಹೇಳಿದ್ದೀರಿ. ಅದು ಬರೆಯುವಾಗ ನನಗೆ ಗೊತ್ತಿರಲಿಲ್ಲ. ಗುರುತಿಸಿದ್ದೀರಿ.
ಮತ್ತೆ ಕತೆಗಾರನಾಗಬೇಕೆಂಬ ಕನಸಿಲ್ಲ. ಆದ್ರೆ ಬರೆಯಬೇಕೆಂಬ ತುಡಿತ ಬಂದಾಗ ಅದು ನಿಲ್ಲುವುದಿಲ್ಲವೆನ್ನುವುದು ನನ್ನ ಭಾವನೆ.
ಧನ್ಯವಾದಗಳು.

shivu.k said...

ಆಜಾದ್ ಸರ್,

ನನ್ನಲ್ಲಿ ಕತೆಗಾರ ಹುಟ್ಟಿದ್ದಾನೆ ಅಂತ ಹೇಳಿ ನನಗೆ ಭಯ ಪಡಿಸಿದ್ದೀರಿ. ನಿಜಕ್ಕೂ ನನಗೆ ಕತೆಗಾರನಾಗಲೂ ಅರ್ಹತೆಯಿದೆಯಾ? ಹೊಳೆದ ಒಂದು ಸಣ್ಣ ಯೋಚನೆಯನ್ನು ಹಳ್ಳಿಭಾಷೆಯಲ್ಲಿ ಬರೆದಿದ್ದೇನೆ. ಕತೆ ಓದಿಸಿಕೊಂಡು ಹೋದರೆ ಸಾಕು ಅಂತ ನಿರೀಕ್ಷಿಸಿದ್ದೆ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಈ ನಿಟ್ಟಿನಲ್ಲಿ ಮತ್ತಷ್ಟು ತೊಡಗಿಕೊಳ್ಳುವ ಆಸೆಯಾಗಿದೆ...

ಧನ್ಯವಾದಗಳು.

shivu.k said...

ಗೋದಾವರಿ ಮೇಡಮ್,

ನನ್ನ ಪ್ರಯತ್ನವನ್ನು ಮೆಚ್ಚಿದ್ದೀರಿ. ಮತ್ತೆ ನಿಮ್ಮ ಬ್ಲಾಗಿನಲ್ಲಿ ಬರೆಯುವ ನಿಮ್ಮ ಲೇಖನಗಳು ತುಂಬಾ ತೂಕವುಳ್ಳದ್ದಾಗಿರುತ್ತವೆ. ನೀವು ಬಿಡುವು ಮಾಡಿಕೊಂಡು ಅಪರೂಪಕ್ಕೆ ಬರೆದರೂ ಅದರಲ್ಲಿ ತಿಳಿದುಕೊಳ್ಳುವಂತದ್ದು[ಸಾಹಿತ್ಯಿಕವಾಗಿ]ತುಂಬಾ ಇರುತ್ತೆ....ಸದ್ಯ ನನಗೂ ಬಿಡುವಾಗದೇ ನಿಮ್ಮ ಬ್ಲಾಗಿಗೆ ಹೋಗಿಲ್ಲ. ಸದ್ಯದಲ್ಲೇ ಓದುತ್ತೇನೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ಇಂಥ ಕತೆಗಳು ಮೂಡಲು ಮುಖ್ಯ ಕಾರಣ ನಾವು ಬೆಳೆದು ಬಂದ ಹಿನ್ನೆಲೆಗಳು ಮುಖ್ಯವಾಗುತ್ತವೆ. ನಾನು ಬರೆಯುವಾಗಲೇ ಆಗಲಿ ಅಥವ ನೀವು ಓದುವಾಗಲೇ ಆಗಲಿ ಪಾತ್ರಗಳಲ್ಲಿ ಒಂದಾಗಲು ಸಾಧ್ಯವಿದ್ದರೇ ಅದು ನಮ್ಮ ಬಾಲ್ಯದ ಹಿನ್ನೆಲೆಗಳೇ ಕಾರಣವೆಂದು ನನ್ನ ಅಭಿಪ್ರಾಯ.

ಮತ್ತೆ ನನ್ನ ಕತೆಗಳನ್ನು ದಯವಿಟ್ಟು ಕು.ವಿ.ಅವರ ಕತೆಗಳಿಗೆ ಹೋಲಿಸಬೇಡಿ. ಅವರೊಂದು ಕನ್ನಡ ಸಾಹಿತ್ಯ ಲೋಕದಲ್ಲಿ ದಂತಕತೆ. ಏನೋ ಬಿಡುವಿನ ಸಮಯದಲ್ಲಿ ಮನಸ್ಸಿಗೆ ತೋಚಿದ್ದನ್ನು ಬರೆಯುತ್ತೇನೆ ಆಷ್ಟೆ.

ನಿಮ್ಮ ಪ್ರೋತ್ಸಾಹದಿಂದ ಮತ್ತಷ್ಟು ಬರೆಯಲು ಯತ್ನಿಸುತ್ತೇನೆ..
ಧನ್ಯವಾದಗಳು.

shivu.k said...

ಲಕ್ಷ್ಮಣ ಬಿರದಾರ್ ಸರ್,

ನಿಮ್ಮ ಬ್ಲಾಗಿನ್ನು ನಿತ್ಯ ಬೇಟಿಕೊಡುತ್ತಿರುತ್ತೇನೆ.ಖಂಡಿತ ನಿಮ್ಮ ಕತೆಯನ್ನು ಓದುತ್ತೇನೆ. ಈ ಕುಲುಮೆ ಕತೆ ಹೇಗಿದೆ ಅಂತ ನಿಮ್ಮ ಅಭಿಪ್ರಾಯ ತಿಳಿಸಿ...

ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.

shivu.k said...

ಚಿತ್ರಾ ಮೇಡಮ್,

ತಡವಾಗಿ ಬಂದಿದ್ದಕ್ಕೆ ಬೇಸರವಿಲ್ಲ. ನನಗೂ ಇತ್ತೀಚೆಗೆ ಕೆಲಸದ ಒತ್ತಡದಿಂದಾಗಿ ಅನೇಕರ ಬ್ಲಾಗಿಗೆ ಹೋಗಲಾಗಿಲ್ಲ.

ಬಿಡುವು ಮಾಡಿಕೊಂಡು "ಕುಲುಮೆ" ಕತೆಯನ್ನು ಓದಿ ಅದರೊಳಗಿನ ಭಾವನೆಗಳನ್ನು ನಿತ್ಯ ಬದುಕಿಗೆ ಹೋಲಿಸಿದ್ದೀರಿ..ಧನ್ಯವಾದಗಳು ಹೀಗೆ ಬಿಡುವು ಮಾಡಿಕೊಂಡು ಬರುತ್ತಿರಿ.

shivu.k said...

ಪಾಲಚಂದ್ರ,

ಕತೆಯ ಶೈಲಿ, ಮತ್ತು ಅಂತ್ಯವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಮತ್ತೆ ನಿಮ್ಮ ಬ್ಲಾಗಿನಲ್ಲಿ ದೊಡ್ಡ ಲೇಖನವನ್ನು ಬರೆದಿದ್ದೀರಿ. ಅದನ್ನು ಓದಲು ಬಿಡುವು ಮಾಡಿಕೊಂಡು ಬರುತ್ತೇನೆ.

shivu.k said...

ಪ್ರಶಾಂತ್,

ಕುತೂಹಲದಿಂದ ಕತೆಯನ್ನು ಓದಿದ್ದೀರಿ. ಕೊನೆಯಲ್ಲಿ ಕತೆಯ ಅಂತ್ಯವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಹೀಗೆ ಬರುತ್ತಿರಿ...

Shweta said...

ಶಿವೂ ಸರ್,
ಏನು ಹೇಳೋದು ತಿಳಿಯುತ್ತಿಲ್ಲ...' ಮಂಜು ' ಜನಸಾಮಾನ್ಯನ ಪ್ರತೀಕದಂತೆ ತೋರಿಬರುತ್ತಾನೆ...ಹೌದು ನಮಗೆಲ್ಲ ಎಸ್ಟೆಲ್ಲ ಕನಸುಗಳಿವೆ ,ಆಸೆಗಳಿವೆ , ಅದಕ್ಕೊಸ್ಕರವಲ್ಲವೇ ನಾವು ಬದುಕುತ್ತಿರುವದು...,ನಾಳೆ ಇನ್ನು ಚೆನ್ನಾಗಿರುತ್ತೆ ಅನ್ನುವ ಭರವಸೆ .....
ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರಾ. ಕತೆಯೊಂದಿಗೆ ನಾವು ಒಂದು ಪಾತ್ರವಾಗುವಂತೆ ಫೀಲ್ ಆಗುತ್ತದೆ.. ..ನಮ್ಮ ಮನೆಯಲ್ಲೂ ಎಲ್ಲರು ಓದಿದ್ದಾರೆ ಈ ನಿಮ್ಮ ಕಥೆಯನ್ನ.. ...
ಎಂದಿನಂತೆ ನಾನು ಎಲ್ಲರಿಗಿಂತ ತಡವಾಗಿ ಪ್ರತಿಕ್ರಿಯಿಸಿದ್ದೇನೆ... ಆದರೆ ಸಮಯವಾದಾಗಲೆಲ್ಲ
ಖಂಡಿತವಾಗಿ ನಿಮ್ಮ ಬ್ಲಾಗಿಗೆ ಮೊದಲು ಭೇಟಿ ಕೊಡುವದು...
ಧನ್ಯವಾದಗಳು .....

Dileep Hegde said...

ಶಿವು ಸರ್..
ತಡವಾಗಿ ಬರುತ್ತಿರುವುದಕ್ಕೆ ಕ್ಷಮೆಯಿರಲಿ...
ಕಥೆ ಇಷ್ಟವಾಯ್ತು.. ಇನ್ನಷ್ಟು ಮತ್ತಷ್ಟು ಕಥೆಗಳು ಬರಲಿ...
ಅಭಿನಂದನೆಗಳು... :)

shivu.k said...

ಶ್ವೇತರವರೆ,

ಕುಲುಮೆ ಕಥೆಯನ್ನು ನೀವು ಅರ್ಥೈಸಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ಒಂದು ಕತೆ ಒಬ್ಬೊಬ್ಬರಿಗೂ ಒಂದೊಂದು ರೀತಿ ಅರ್ಥವಾಗುವುದೆಂದರೆ ನನ್ನ ಶ್ರಮ ಸಾರ್ಥಕ ಮತ್ತು ನಿಮ್ಮ ಕುಟುಂಬದವರೆಲ್ಲಾ ಕತೆಯನ್ನು ಓದಿದ್ದನ್ನು ತಿಳಿದು ನನಗಂತೂ ತುಂಬಾ ಸಂತೋಷವಾಯಿತು ನಿಮಗೂ ಮತ್ತು ನಿಮ್ಮ ಕುಟುಂಬದವರೆಲ್ಲರಿಗೂ ಧನ್ಯವಾದಗಳು
ಹೀಗೆ ನಿಮ್ಮ ಪ್ರೋತ್ಸಾಹ ಇರಲಿ...

shivu.k said...

ದಿಲೀಪ್,

ತಡವಾಗಿ ಬಂದರೂ ಕಥೆಯನ್ನು ಓದಿ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ...

ಸಾಗರದಾಚೆಯ ಇಂಚರ said...

ಶಿವೂ ಸರ್,
ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ,
ಕಥೆ ತುಂಬಾ ಇಷ್ಟವಾಯಿತು,
ಹೀಗೆಯೇ ಬರೆಯುತ್ತಿರಿ

Laxman (ಲಕ್ಷ್ಮಣ ಬಿರಾದಾರ) said...

ಶಿವುರವರೆ,

ನಾನು ನಿಮ್ಮ ಕಥೆಯನ್ನು ಓದಿದ್ದೆ , ಅಭಿಪ್ರಾಯ ಕೂಡ ಬರೆದಿದ್ದೆ. ಆದರೆ MSWORD ದಿಂದ Copy paste ಮಾಡಿಲ್ಲ ಅಂತ ಕಾಣುತ್ತೆ. ನಿಮ್ಮ ಕಥೆ ನನಗೆ ಹಿಡಿಸಿತು, ಶಬ್ದಗಳ ಅಲಕಾಂಕರವಿಲ್ಲದ ಸರಳವಾದ ನಿರೂಪಣೆ ನನಗೆ ಖುಷಿ ಕೊಟ್ಟಿತು. ಕಥೆಯನ್ನು ಓದಿಸಿಕೊಂಡು ಹೋಗುವುದು ಅಷ್ಟು ಸಲಿಸಲ್ಲಾ ಸರ್.
ನೀವು ಅದರಲ್ಲಿ ಗೆಲುವು ಸಾಧಿಸಿದ್ದಿರಿ.
ನಿಜ ಹೇಳಬೇಕೆಂದರೆ ನೀವು ಬರೆದಿದ್ದು ನೋಡಿನೇ ನಾನು ಬರೆಯಲು ಪ್ರಯತ್ನಿಸಿದ್ದು .
ನನ್ನ ಜೀವಮಾನದಲ್ಲಿ ಇದೇ ಪ್ರಥಮವಾಗಿ ನಾನು ಒಂದು ಲೇಖನ ಬರೆದಿದ್ದು.
ನನ್ನದೇ ಒಂದು ಹೊಸ ತರಹದ ಕಥೆ ಮತ್ತು ಸಂದೇಶ ಇರಬೇಕೆಂದು ಯೋಚಿಸಿ
ಯೋಚಿಸಿ ನನ್ನ “ದೇವರು ಮತ್ತು ಚಟ” ಕಥೆ ಬರೆದಿದ್ದು.
ಎಲ್ಲ ಆತ್ಮೀಯ ಬರಹಗಾರರ ಅಭಿಪ್ರಾಯ ನನಗೆ ಬೇಕು ನೀವೂ ತಿಳಿಸಿ ಮತ್ತು ನಿಮ್ಮ ಆತ್ಮೀಯರಿಗೂ
ಓದಿ ಅಭಿಪ್ರಾಯ ತಿಳಿಸಲು ಹೇಳಿ.

ಅಭಿಪ್ರಾಯದ ನೀರಿಕ್ಷೆಯಲ್ಲಿ
ಲಕ್ಷ್ಮಣ

AntharangadaMaathugalu said...

ಶಿವು ಸಾರ್...
ಮೊದಲ ಕಥೆಯಾ ನಿಜವಾಗಿಯೂ? ತುಂಬಾ ಚೆನ್ನಾಗಿದೆ. ಎಷ್ಟೊಂದು ಆಸೆ, ಕನಸು ಕಂಡಿದ್ದ ಮಂಜನನ್ನು ಅಷ್ಟು ಸುಲಭವಾಗಿ ಮರೆಯುವುದಾಗುವುದಿಲ್ಲ. ಜೀವನದಲ್ಲಿ ಕುಲುಮೆಯ ಸಾಂಕೇತಿಕತೆ ಕಥೆಗೆ ಒಂದು ಆಳ ಕೊಟ್ಟಿದೆ. ತಡವಾಗಿ ಓದಿದ್ದಕ್ಕೆ ಮನ್ನಿಸಿ...

ಶ್ಯಾಮಲ

shivu.k said...

ಗುರುಮೂರ್ತಿ ಸರ್,

ಧನ್ಯವಾದಗಳು.

shivu.k said...

ಲಕ್ಷ್ಮಣ ಸರ್,

ಕತೆ ಸರಳವಾಗಿದ್ದು ಶಬ್ದಗಳ ಅಲಂಕಾರವಿಲ್ಲವೆಂದು ನೀವು ಹೇಳಿದ್ದ ಮೇಲೆ ನನಗೆ ಗೊತ್ತಾಗಿದ್ದು ಹೌದಲ್ವಾ ಅಂತ. ಕತೆಯೂ ಓದಿಸಿಕೊಂಡು ಹೋಗುತ್ತಿದೆ ಅಂದಿದ್ದೀರಿ ಮತ್ತೆ ನೀವು ಬರೆಯಲು ಈ ಕತೆಯೇ ಸ್ಪೂರ್ತಿ ಎಂದಿದ್ದೀರಿ. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮ ಕತೆಯನ್ನು ಓದಿ ಖಂಡಿತ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ನನಗೂ ಹೀಗೆ ಬ್ಲಾಗ್ ಗೆಳೆಯರ ಪ್ರೋತ್ಸಾಹದಿಂದಾಗಿಯೇ ಕತೆ, ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದು. ನಿಮ್ಮ ಕತೆಯನ್ನು ಓದಲು ಇತರ ಗೆಳೆಯರಿಗೂ ತಿಳಿಸುತ್ತೇನೆ.
ಹೀಗೆ ಬರುತ್ತಿರಿ...

shivu.k said...

ಶ್ಯಾಮಲ ಮೇಡಮ್,

ಇದು ನನ್ನ ಮೊದಲ ಕತೆ ಅದರ ನಂತರ ಬರೆದಿದ್ದೂ "ಈ ದೇಹದಿಂದ ದೂರನಾದೆ ಏಕೆ ಆತ್ಮನೇ" ಅದನ್ನು ಫೆಬ್ರವರಿಯಲ್ಲಿ ಬ್ಲಾಗಿನಲ್ಲಿ ಹಾಕಿದ್ದೆ. ಬಿಡುವಾದಾಗ ನೋಡಿ. ಇದನ್ನು ಮೊದಲು ಬರೆದರೂ ಅಳುಕಿನಿಂದ ಬ್ಲಾಗಿಗೆ ಹಾಕಿರಲಿಲ್ಲ. ಈಗ ಇಂಥ ಪ್ರೋತ್ಸಾಹ ನೋಡಿ ನನಗೆ ತುಂಬಾ ಮತ್ತಷ್ಟು ಬರೆಯಬೇಕೆನಿಸುತ್ತದೆ.

ಕುಲುಮೆ ಸಾಂಕೇತಿಕವಾಗಿರುವುದು, ಮಂಜನ ಕನಸು ಎಲ್ಲವನ್ನು ಇಷ್ಟಪಟ್ಟಿದ್ದೀರಿ...ಧನ್ಯವಾದಗಳು

ಹೀಗೆ ಬರುತ್ತಿರಿ.

b.saleem said...

ಶಿವು ಸರ್
ಕಥೆಯ ಎರಡು ಭಾಗವನ್ನು ಒಟ್ಟಿಗೆ ಒದಿದೆ. ಕಥೆಯ ನಿರೂಪಣಾ ಶೈಲಿ ಮತ್ತು ಬಳಸಿರುವ ಆಡು ಭಾಷೆ ಸೊಗಸಾಗೆದೆ.
ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ

shivu.k said...

ಸಲೀಂ,

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ರಾಜಸ್ಥಾನ ಫೋಟೊಗ್ರಫಿ ಪ್ರವಾಸ ಯಶಸ್ವಿಯಾಗಲಿ ಅಂತ ಆರೈಸುತ್ತೇನೆ...
all the best...

Jyoti Hebbar said...

ಕಥೆ ಓದಿ ಕಣ್ಣು ತು೦ಬಿ ಬ೦ತು. ನಿಜವೇನೋ ಎನ್ನಿಸಿತು.ನಿಜಕ್ಕೂ ತು೦ಬ ಚೆನ್ನಾಗಿದೆ.

shivu.k said...

ಜ್ಯೋತಿ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ.

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಬಿಡುವು ಮಾಡಿಕೊಂಡು ನನ್ನ ಬ್ಲಾಗಿನ ಉಳಿದ ಲೇಖನಗಳನ್ನು ನೋಡಿ. ನಿಮಗೆ ಇಷ್ಟವಾಗಬಹುದು..

Saangatya said...

vendar kannu tumba channagide