Friday, September 17, 2010

ಛಾಯಾಲೋಕದ ದಿಗ್ಗಜರ ಛಾಯಾಚಿತ್ರ ಪ್ರದರ್ಶನ


 
     ನೇಚರ್ ಫೋಟೊಗ್ರಫಿಯ ವಿಶ್ವಕಪ್ ಸ್ಪರ್ಧೆ ತೀರ್ಪುಗಾರರಾಗಿ ಬೆಂಗಳೂರಿಗೆ ಮೂವರು ವಿದೇಶಿ ಸ್ಥಿರ ಛಾಯಾಗ್ರಾಹಣ ಕಲೆಯ ದಿಗ್ಗಜರು ಬಂದಿದ್ದರು.  ಸೌತ್ ಅಫ್ರಿಕದ ಮೇಡಮ್ ಸ್ನೀಜ್ ಜಿಸ್ಬೆ[Ms. Jill Sneesby, ESFIAP]. ಫೋಟೊಗ್ರಫಿ ಸಾಧನೆ ಮತ್ತು ಸೇವೆಗಾಗಿ ESFIAP  ಡಿಸ್ಟಿಂಕ್ಷನ್ ಪಡೆದಿದ್ದರೆ, ಫೆಡರೇಷನ್ ಅಪ್ ಇಂಟರ್‌ನ್ಯಾಷನಲ್ ಫೋಟೊಗ್ರಫಿ ಉಪಾದ್ಯಕ್ಷರಾದ ಜಾಕೀ ಮಾರ್ಟಿನ್[Mr.Jacky Martin,EFIAP] ಬಂದಿದ್ದರು. ಇವರ ಅಮೋಘ ಫೋಟೊಗ್ರಫಿ ಸಾಧನೆಗಾಗಿ ಎಕ್ಸಲೆನ್ಸ್ ಅಪ್ ಆಶೋಷಿಯೇಟ್ ಫೋಟೊಗ್ರಫಿ ಡಿಸ್ಟಿಂಕ್ಷನ್[EFIAP] ಗೌರವ ದೊರೆತಿದೆ.   ಇನ್ನೂ ಮೂರನೇಯವರಾದ ಇಟಲಿಯ ರೆಕಾರ್ಡೋ ಬುಸಿ[Mr. Riccardo Busi,MFIAP, HonEFIAP]ಇವರಂತೂ ತಮ್ಮ ಫೋಟೊಗ್ರಫಿ ಸಾಧನೆಗೆ ಮಾಸ್ಟರ್ ಆಪ್ ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಲ ಆಶೋಷಿಯೇಟ್ ಫೋಟೊಗ್ರಫಿ" ಎನ್ನುವ ಗೌರವವನ್ನೇ ಪಡೆದಿದ್ದಾರೆ. ಇದಂತೂ ಫೋಟೋಗ್ರಫಿ ಸಾಧನೆಗೆ ಸಿಗುವ ಅತ್ಯುನ್ನತ ಗೌರವ. ಈ ಮೂವರು ವಿದೇಶಿ ತೀರ್ಪುಗಾರರ ಜೊತೆ  ರೆಕಾರ್ಡೋ ಬುಸಿಯಷ್ಟೇ ಉನ್ನತ ಗೌರವ ಹೊಂದಿರುವುದರ ಜೊತೆಗೆ ರಾಯಲ್ ಫೋಟೊಗ್ರಫಿ ಲಂಡನ್‍ನಿಂದ [ ]ಫೆಲೊಶಿಪ್ ಅಫ್ ರಾಯಲ್ ಫೋಟೊಗ್ರಫಿ ಸೊಸೈಟಿ ಮನ್ನಡೆ ಪಡೆದಿರುವ ನಮ್ಮ ದೇಶದ ಪ್ರಖ್ಯಾತ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ[B.SRinivasa,MFIAP,FRPS]ಮತ್ತು ಟಿ.ಎನ್.ಎ. ಪೆರುಮಾಳ್[T.N.A.Perumal,MFIAP,FRPS] ಕೂಡ ತೀರ್ಪುಗಾರರಾಗಿದ್ದರು.  ಇವರನ್ನೆಲ್ಲಾ ಒಟ್ಟಿಗೆ ನೋಡುವುದು ಮಾತಾಡಿಸುವುದು ನನ್ನ ನೂರಾರು ಕನಸುಗಳಲ್ಲಿ ಇದೂ ಒಂದು. ಅವತ್ತು ನನಸಾಗಿತ್ತು.


T.N.A.Perumal, B.Srinivasa, Riccardo busi, Jacky Martin, Jill Sneesby.


 ಸೆಪ್ಟಂಬರ್ ೧೦ ಮತ್ತು ೧೧ರಂದು ಹೋಟಲ್ ತಾಜ ವೆಸ್ಟೆಂಡ್ ನಲ್ಲಿ ಫೋಟೋಗ್ರಫಿಯ ತೀರ್ಪು ಕಾರ್ಯಕ್ರಮ ಮುಗಿದ ಮೇಲೆ ಸೆಪ್ಟಂಬರ್ ಹದಿನಾಲ್ಕರಂದು ಈ ಐವರು ಸಾಧಕರ ಫೋಟೊಗ್ರಫಿ ಪ್ರೊಜೆಕ್ಷನ್ ಷೋ ಮತ್ತು ಸಂವಾದ ನಡೆಯಿತು.  ನಿಜಕ್ಕೂ ನನ್ನಂತ ಛಾಯಾಗ್ರಾಹಕರಿಗೆ ಮರೆಯಲಾಗದ ಅನುಭವ.  ಮೊದಲಿಗೆ ಮೇಡಮ್ ಸ್ನೀಜ್ ಜಿಸ್ಬೆ  ಸೌತ್ ಆಫ್ರಿಕಾದ ಕಾಡುಗಳಲ್ಲಿ ಕ್ಲಿಕ್ಕಿಸಿದ ಅದ್ಬುತ ಚಿತ್ರಗಳನ್ನು ಪ್ರದರ್ಶಿಸಿದರು.  ನಡುವೆ ಕೆಲವು ಫೋಟೊಗಳನ್ನು ತೆಗೆಯಲು ಕಾಡಿನ ನಡುವೆ ಹಳ್ಳ ತೆಗೆದು ಅದರೊಳಗೊಂದು ಬಂಕರ್ ನಿರ್ಮಿಸಿ  ಅದರೊಳಗೆ ಕುಳಿತು ನೆಲಮಟ್ಟದಲ್ಲಿ  ಕುಳಿತು, ಮಲಗಿ ಫೋಟೊ ತೆಗೆಯುವಾಗಿನ ಅನುಭವಗಳನ್ನು ಹಂಚಿಕೊಂಡರು.  ಒಂಟಿಸಲಗಗಳು ಇವರು ಬಂಕರಿನೊಳಗೆ ಇದ್ದಾಗ ಇಪ್ಪತ್ತು ಅಡಿ ಅಂತರದಲ್ಲಿ ಬಂದು ಬಂಕರನ್ನೆಲ್ಲಾ ಮೂಸಿ ನೋಡಿ ಹೋಗಿದ್ದು ಅವಕ್ಕೆ ತಲೆಕೆಟ್ಟು ಬಂಕರಿನೊಳಗೆ ಕಾಲಿಟ್ಟುಬಿಟ್ಟಿದ್ದರೆ ನಾನಿಲ್ಲಿ ನಿಮಗೆ ಇದನ್ನೆಲ್ಲಾ ತೋರಿಸಲು ಬರಲಾಗುತ್ತಿರಲಿಲ್ಲವೆಂದಾಗ ಅಲ್ಲಿ ನೆರೆದಿದ್ದ ಛಾಯಾಭಿಮಾನಿಗಳಲ್ಲಿ ರೋಮಾಂಚನ.

 ಪ್ರದರ್ಶನಗೊಂಡ ಅವರ ಕೆಲವು ಫೋಟೊಗಳು ಇಲ್ಲಿವೆ.

ಈ ಚಿತ್ರವನ್ನು ನೀವು ಎಲ್ಲಾ ಕಡೆ ನೋಡಿರುತ್ತೀರಿ. ಅಷ್ಟು ಪ್ರಸಿದ್ಧಿಯಾದ ಚಿತ್ರ.


ಜೀಬ್ರಾಗಳ ಕಾದಾಟ

ಸೌತ್ ಆಫ್ರಿಕಾದ ಜಿಂಕೆಗಳು ಆಸ್ಟ್ರಿಚ್ ಹಕ್ಕಿ ಸೂರ್ಯಾಸ್ತದ ದೂಳಿನ ಹಿನ್ನೆಲೆಯಲ್ಲಿ

  ಸೌತ್ ಅಫ್ರಿಕಾದ ಸ್ಪ್ರಿಂಗ್ ಬಾಕ್ ಜಿಂಕೆ


       ನಂತರ ಬಂದವರು ಬಂದವರು ಇಂಟರನ್ಯಾಷನಲ್ ಫೆಡರೇಷನ್ ಅಪ್ ಫೋಟೊಗ್ರಫಿಯ ಉಪಾದ್ಯಕ್ಷರಾದ ಪ್ರಾನ್ಸಿನ ಜಾಕಿ ಮಾರ್ಟಿನ್.  ಅವರು ತಮಗಿಷ್ಟವಾದ ಅಮೇರಿಕಾದ ಫೀನಿಕ್ಸ್ ನಗರದ ಕೆಲವು ಲ್ಯಾಂಡ್‍ಸ್ಕೇಪಿನ ಅಮೋಘ ಚಿತ್ರಗಳನ್ನು  ಪ್ರದರ್ಶಿಸಿದರು. ಅವರ ಕೆಲವು ಚಿತ್ರಗಳು ಇಲ್ಲಿವೆ.

 ಎಷ್ಟು ಚೆಂದವಲ್ವ ಈ ಒಂಟಿಮರದ ದೃಶ್ಯ
 
 ಹೀಗೊಂದು ಸುಂದರ ಪ್ರಕೃತಿ ಸೌಂದರ್ಯ

 ಬ್ರೈಸ್ ಕ್ಯಾನಿಯನ್‍ನ ಒಂದು ಲ್ಯಾಂಡ್‍ಸ್ಕೇಪ್

 ಮೂರನೇಯದಾಗಿ  ಇಟಲಿಯ ರೆಕಾರ್ಡೋ ಬುಸಿಯಂತೂ ತಮ್ಮ ಅಷ್ಟು ಚಿತ್ರಗಳನ್ನು ಎಂಟು ನಿಮಿಷಗಳ ಪವರ್ ಪಾಯಿಂಟ್ ಪ್ರದರ್ಶನದಲ್ಲಿ ತೋರಿಸಿ ಇಟಲಿಯವರ ಸೃಜನಶೀಲತೆಯನ್ನು ಮೆರೆದರು. ಅವರ ಕೆಲವು ಚಿತ್ರಗಳು ಇಲ್ಲ
ಹರಿವ ನೀರಿಗೆ ವಿರುದ್ಧವಾಗಿ ಈಜಿ ಮೇಲೆ ಹಾರಿದ ಮೀನನ್ನು ಹಿಡಿಯುತ್ತಿರುವ ಹಿಮಕರಡಿ

 ಪಫಿಟ್ ಹಕ್ಕಿಗಳ ಫೋಸು

 ಕಾಡುಬೆಕ್ಕು ಬೇಟೆಗಾಗಿ ಓಟ

ಓಡಿ ಪ್ರಾಣ ಉಳಿಸಿಕೊಳ್ಳುತ್ತಿರುವ ಜಿಂಕೆ
                                  

 ಇವರ ನಂತರ ಬಂದವರು ನಮ್ಮವರೇ ಆದ ಬಿ.ಶ್ರೀನಿವಾಸ. ತಮ್ಮ ನಲವತ್ತು ವರ್ಷಗಳ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳುವುದಲ್ಲದೇ ಕೆಲವು ವಿಶೇಷವೆನ್ನುವ ಪಕ್ಷಿಗಳ ಛಾಯಾಚಿತ್ರಗಳನ್ನು ತೋರಿಸಿದರು.

 ರಂಗನತಿಟ್ಟಿನಲ್ಲಿ  ಹಕ್ಕಿಗಳ ಲವ್ ಲವಿಕೆ
 ಬ್ಲೂ ಜೇ ಹಕ್ಕಿಯ ಹಾರಾಟ

 ಕೆಸ್ಟ್ರಾಲ್ ಎನ್ನುವ ಗಿಡುಗನ ಹಾರಾಟ


 ಎರಡೂ ಗ್ರೀನ್ ಬೀಈಟರುಗಳ ಬಾಯಲ್ಲಿ ಬೇಟೆ. ಖುಷಿಯ ವಿಚಾರವೆಂದರೆ ಈ ಚಿತ್ರವನ್ನು ನನ್ನ ಜೊತೆಗೆಯಲ್ಲಿ ಕ್ಲಿಕ್ಕಿಸಿದ್ದು. ಕೊನೆಯಲ್ಲಿ ಬಂದವರು ಇವರೆಲ್ಲರಿಗಿಂತ ಹಿರಿಯರಾದ ೭೬ ವರ್ಷದ ಟಿ.ಎನ್.ಎ. ಪೆರುಮಾಳ್.  ಅವರ ಐವತ್ತು ಫೋಟೊಗ್ರಫಿ ಅನುಭವಗಳ ಜೊತೆಗೆ  ಕೀಟಲೋಕದ ವಿಶೇಷಗಳು, ಪಕ್ಷಿಲೋಕದ ವೈವಿಧ್ಯಗಳನ್ನು ವಿವರಿಸಿದರು.  ಜೊತೆಗೆ  ಒಂದು ಗೂಬೆಯ ಫೋಟೊ ಕ್ಲಿಕ್ಕಿಸಲು ಸುಮಾರು ೩೨ ರಾತ್ರಿಗಳನ್ನು ನಿದ್ರೆಯಿಲ್ಲದೇ ಕಳೆದ ಆನುಭವಗಳನ್ನು ವಿವರಿಸಿದಾಗ ನಮ್ಮಂತ ಯುವ ಛಾಯಾಗ್ರಾಹಕರಿಗಂತೂ ಮೈಜುಮ್ಮೆನ್ನಿಸಿತ್ತು. ಅವರ ಕೆಲವು ಚಿತ್ರಗಳು ಇಲ್ಲಿವೆ.

ಕಾಡುನಾಯಿಗಳು ಲವ್‍ಲವಿಕೆ


ಒಂದು ರೀತಿಯ ವಿಶೇಷ ನೊಣ ಮತ್ತೊಂದು ನೊಣವನ್ನು ಹಿಡಿದು ತಿನ್ನುತ್ತಿರುವುದು ಇದು ಕೀಟಲೋಕದ  ವೈವಿಧ್ಯತೆ

ಇದೊಂದು ಗೂಬೆಯ ಚಿತ್ರವನ್ನು ಕ್ಲಿಕ್ಕಿಸಲು ಪೆರುಮಾಳ್‍ರವರು ೩೨ ರಾತ್ರಿಗಳನ್ನು ವ್ಯಯಿಸಿದ್ದಾರೆ. ಅದಕ್ಕೆ ತಕ್ಕಂತೆ ಈ ಚಿತ್ರವೂ ಅವರಿಗೆ ನೂರಾರು ಬಹುಮಾನಗಳನ್ನು ಗಳಿಸಿಕೊಟ್ಟಿದೆ.


ಛಾಯಾಚಿತ್ರ ಪ್ರದರ್ಶನ ಮತ್ತು ಸಂವಾದದಲ್ಲಿ ಭಾಗವಹಿಸಿದ್ದ ಛಾಯಾಗ್ರಾಹಕರು ಮತ್ತು ಅಭಿಮಾನಿಗಳು


ಇವರೆಲ್ಲರ ಛಾಯಾಚಿತ್ರಗಳ ಪ್ರದರ್ಶನದ ನಂತರ ಸಂವಾದ ಕಾರ್ಯಕ್ರಮವಿತ್ತು.  ಯುವ ಛಾಯಾಗ್ರಾಹಕರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವಿತ್ತು. 

 ಎಲ್ಲ ಮುಗಿದ ಮೇಲೆ  ವಿದೇಶಿ ದಿಗ್ಗಜರಾದ ಪ್ರಾನ್ಸಿನ ಜಾಕಿ ಮಾರ್ಟಿನ್ ಮತ್ತು ಇಟಲಿಯ ರೆಕಾರ್ಡೋ ಬುಸಿಯ ಜೊತೆ ನಾನು ಫೋಟೊ ತೆಗೆಸಿಕೊಳ್ಳುವ ಆಸೆ ಈಡೇರಿತ್ತು. ನನ್ನ ಜೊತೆ ಬಂದಿದ್ದ ಉದಯ್ ಹೆಗಡೆ ನಮ್ಮ ಫೋಟೊ ತೆಗೆದುಕೊಟ್ಟಿದ್ದರು.
ನಾನು ಮುಂದಿನ ವರ್ಷ EFIAP ಮನ್ನಣೆಗಾಗಿ ಅರ್ಜಿ ಸಲ್ಲಿಸಬೇಕು ಎಂದಾಗ ನನಗೆ ಅವರಿಬ್ಬರೂ "ALL THE BEST" ಹೇಳಿದಾಗ ನನಗೆ ತುಂಬಾ ಖುಷಿಯಾಗಿತ್ತು.

ಚಿತ್ರಗಳು ಮತ್ತು ಲೇಖನ.
ಶಿವು.ಕೆ

57 comments:

ಸವಿಗನಸು said...

ಶಿವು,
ಛಾಯಾಲೋಕದ ದಿಗ್ಗಜರನ್ನು ಛಾಯಾಚಿತ್ರದ ಮೂಲಕ ನಮಗೆಲ್ಲಾ ತಿಳಿಸಿದ್ದೀರಾ....
ಅಭಿನಂದನೆಗಳು....

PARAANJAPE K.N. said...
This comment has been removed by the author.
PARAANJAPE K.N. said...

ಶಿವೂ,
ತು೦ಬಾ ಚೆನ್ನಾಗಿವೆ ಛಾಯಾ ಚಿತ್ರಗಳು. ನಿಮ್ಮನ್ನು ದಿಗ್ಗಜರ ನಡುವೆ ನೋಡಿ ಖುಷಿಯಾಯಿತು.

Anonymous said...

ಒಂದೊಂದೂ ಅದ್ಬುತ ಚಿತ್ರಗಳು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಹಾಗೆ ನೀವು ಗ್ರಾಂಡ್ ಕಾನ್ಯನ್ ಎಂದು ಹೇಳಿದ ಚಿತ್ರ ನನ್ನ ಪ್ರಕಾರ ಗ್ರಾಂಡ್ ಕಾನ್ಯನ್ ಅಲ್ಲ, ಅದು ಬ್ರೈಸ್ ಕಾನ್ಯನ್.

Dr.D.T.Krishna Murthy. said...

ಶಿವು;ಛಾಯಾ ಚಿತ್ರ ಲೋಕದ ದಿಗ್ಗಜರನ್ನೂ,ಅವರ ಚಿತ್ರಗಳನ್ನೂ ಪರಿಚಯಿಸಿದ್ದಕ್ಕೆಅನಂತಧನ್ಯವಾದಗಳು.ಅವರಂತೆ ನೀವೂ ಕೂಡ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಕೀರ್ತಿ ಗಳಿಸುವಂತಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.

ನಾಗರಾಜ್ .ಕೆ (NRK) said...

yella photogalu super. . .
photography diggajaranna nodi khushiyayitu. . .

ಸುಮ said...

ನಿಜಕ್ಕೂ ಅದ್ಭುತ ಫೋಟೋಗಳು .

balasubramanya said...

ನನ್ನ ಕನಸಿನ ಛಾಯಾಚಿತ್ರಗಾರರನ್ನು ನೀವು ಭೇಟಿ ಮಾಡಿದ್ದು ನನಗೆ ಖುಷಿಯಾಗಿದೆ. ನೀವು ಮುಂದೊಮ್ಮೆ ಅವರಸಾಲಿನಲ್ಲಿ ಖಂಡಿತ ನಿಲ್ಲುತ್ತೀರಾ !! ಆ ದಿನಗಳಿಗಾಗಿ ನಾನು ಕಾಯುವೆ.ನಿಮಗೆ" ಆಲ್ ದಿ ಬೆಸ್ಟ್ " ಚಿತ್ರಗಳ ಬಗ್ಗೆ ಹೇಳಲಾರೆ. ಒಂದು ವಿಷಯ" manual camara with film roll "ನ ಚಿತ್ರಗಳಷ್ಟು digital ಫೋಟೋಗಳು ಖುಷಿ ಅನ್ನಿಸೋಲ್ಲ ಅಲ್ವ ??? ನೀವೇನಂತೀರಾ.???

Naveen ಹಳ್ಳಿ ಹುಡುಗ said...

Soooooper Shivanna... :)

Unknown said...

Very nice shivu... Congratulations and all the best!!..

sunaath said...

ಚಿತ್ರಗಳು ತುಂಬ ಚೆನ್ನಾಗಿವೆ. All the best for your aspirations.

ದಿನಕರ ಮೊಗೇರ said...

ಶಿವು ಸರ್,
ನನಗೆ ನೆನಪಿದ್ದ ಹಾಗೆ, ನಿಮ್ಮ ಚಿತ್ರಕ್ಕೆ ಎರಡನೆ ಬಹುಮಾನ ಬಂದಿದೆ ಅಲ್ಲವೇ...? ನ್ಯೂಸ್ ಪೇಪರ್ನಲ್ಲಿ ಓದಿದ ನೆನಪು.... ನೀವು ಇಲ್ಲಿ ನಮಗೆ ತೋರಿದ ಚಿತ್ರಗಳು ಎಲ್ಲಾ ಸೂಪರ್..... ಪ್ರಥಮ ಸ್ಥಾನಕ್ಕಾಗಿ ತುಂಬಾ ಚಿತ್ರಗಳು ಅರ್ಹವಾಗಿವೆ..... ನಿಮ್ಮ ಮುಂದಿನ ಅಭಿಯಾನಕ್ಕೆ ನಮ್ಮದೂ ಶುಭ ಕಾಮನೆಗಳು ಸರ್....

ಸುಧೇಶ್ ಶೆಟ್ಟಿ said...

ಫೋಟೋಗಳನ್ನು ನೋಡುತ್ತಿದ್ದರೆ ನನ್ನ ಮೈ ಕೂಡ ಜುಮ್ಮೆ೦ದಿತು! ಗೂಬೆಯ ಫೋಟೋ ತು೦ಬಾ ಚೆನ್ನಾಗಿದೆ...

ನಿಮ್ಮ ಮು೦ದಿನ ಸಾಧನೆಗೆ ಹಾರೈಕೆಗಳು... :)

ಮನಸು said...

foto's nodi kushi aytu...... naavu saha all the best heLteevi

ಮನದಾಳದಿಂದ............ said...

ಶಿವಣ್ಣ,
ಛಾಯಾಚಿತ್ರಲೋಕದ ದಿಗ್ಗಜರ ಚಿತ್ರಗಳನ್ನು ನೋಡಿ ತುಂಬಾ ಖುಷಿಯಾಯಿತು. ಅವರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಹಾಗೆಯೇ ನಿಮಗೂ ಅಭಿನಂದನೆಗಳು.

ಪಾಚು-ಪ್ರಪಂಚ said...

ಶಿವೂ ಅವರೇ,

ದಿಗ್ಗಜರ ಪರಿಚಯ ಅವರವರ ಫೋಟೋಗಳೊಂದಿಗೆ ಮಾಡಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಮುಂದಿನ ಸಾಧನೆಗೆ ಆಲ್ ದಿ ವೆರಿ ಬೆಸ್ಟ್.

-ಪ್ರಶಾಂತ್ ಭಟ್

ಮನಮುಕ್ತಾ said...

wonderful photos...!

Ashok.V.Shetty, Kodlady said...

Shivu Sir,

Very nice, nodi, odi khushi aitu, congraats sir and all the best....

shridhar said...

Sooper Photos and nice information

ಭಾಶೇ said...

Adbhuta photogalu!

Thanks for sharing

ಸಾಗರದಾಚೆಯ ಇಂಚರ said...

ಶಿವೂ ಸರ್

ನಿಜಕ್ಕೂ ಅವರನ್ನೆಲ್ಲ ಭೇಟಿಯಾದ ನೀವೇ ಅದೃಷ್ಟವಂತರು

ಸುಂದರ ಫೋಟೋಗಳು ಮನಸೂರೆಗೊಂಡವು

ಹಾಗೆಯೇ ನಿಮಗೆ ನಮ್ಮ ಕಡೆಯಿಂದಲೂ ಶುಭ ಹಾರೈಕೆಗಳು

Subrahmanya said...

ಅತ್ಯುತ್ತಮ ಚಿತ್ರಗಳನ್ನು ಇಲ್ಲಿ ಹಂಚಿಕೊಂಡ ನಿಮಗೆ ಧನ್ಯವಾದಗಳು. ದಿಗ್ಗಜರ ನಡುವೆ ನಿಮ್ಮನ್ನು ನೋಡಿ ಸಂತೋಷವಾಯಿತು.

AntharangadaMaathugalu said...

ಅದ್ಭುತವಾದ ಚಿತ್ರಗಳನ್ನು ನಮಗೂ ತೋರಿಸಿದ ನಿಮಗೆ ಧನ್ಯವಾದಗಳು ಶಿವು ಸಾರ್....


ಶ್ಯಾಮಲ

Pradeep said...

ಶಿವೂ ಅವರೇ, ತುಂಬಾ ಚೆನ್ನಾಗಿವೆ ಚಿತ್ರಗಳು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು!

ಶಿವಪ್ರಕಾಶ್ said...

great photos shivu... :)

ಪ್ರಗತಿ ಹೆಗಡೆ said...

ಚಿತ್ರಗಳು ತುಂಬ ಚೆನ್ನಾಗಿವೆ.... ಅಭಿನಂದನೆಗಳು....

shivu.k said...

ಮಹೇಶ್ ಸರ್,
ಫೋಟೊಗ್ರಫಿ ಕೆಲವು ಚಟುವಟಿಕೆಗಳನ್ನು ತಿಳಿಸುವ ಪ್ರಯತ್ನವಾಗಿ ಇದೆಲ್ಲಾ. ಧನ್ಯವಾದಗಳು.

shivu.k said...

ಪರಂಜಪೆ ಸರ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಅದು ನನ್ನ ಮಹದಾಸೆಯಾಗಿತ್ತು ಕೂಡ.

shivu.k said...

ಮನೋಜ್,

ನೀವು ಗುರುತಿಸಿದ ತಪ್ಪನ್ನು ತಿದ್ದಿದ್ದೇನೆ. ಅದನ್ನು ತಿಳಿಸಿದ್ದಕ್ಕೆ ಮತ್ತು ಫೋಟೊಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಡಾ.ಕೃಷ್ಣಮೂರ್ತಿ ಸರ್,

ಫೋಟೊಗ್ರಫಿಯಂಥ ಅತಿದೊಡ್ಡ ವಿಚಾರಗಳು ಕೂಡ ನಮ್ಮ ಪತ್ರಿಕೆಯಲ್ಲಿ ಸರಿಯಾಗಿ ಬರುವುದಿಲ್ಲ. ಈಗ ಒಂದೋ ಸೆಲೆಬ್ರಿಟಿ ಆಗಿರಬೇಕು. ಅಥವ ಸಾಹಿತಿಯಾಗಿರಬೇಕು. ಇವೆರಡು ವಿಚಾರಗಳು ಪತ್ರಿಕೆಯಲ್ಲಿ ಜಾಗವನ್ನು ಆಕ್ರಮಿಸಿ ಉಳಿದ ವಿಚಾರಗಳಿಗೆ ಅವಕಾಶವಿಲ್ಲದಂತಾಗಿದೆ. ಅದಕ್ಕೆ ಈ ವಿಚಾರದಲ್ಲಿ ನನ್ನದೊಂದು ಪ್ರಯತ್ನ. ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

ನಾಗರಾಜ್,

ಫೋಟೊಗ್ರಫಿಯ ಹತ್ತಾರು ದಿಗ್ಗಜರಲ್ಲಿ ಇವರೂ ಕೂಡ. ಆದ್ರೆ ಇವರು ಯಾವ ಪತ್ರಿಕೆಯಲ್ಲಿ ಬಂದಿದ್ದಾರೆ ಹೇಳಿ. ಇವರ ಸಾಧನೆಯ ಬಗ್ಗೆ ಬರೆದರೆ ಅದೆಷ್ಟೋ ಪುಟಗಳಾಗುತ್ತವೆ. ಅವರನ್ನೆಲ್ಲಾ ನಿಮಗೆ ಹೀಗೆ ಪರಿಚಯಿಸುವಾಸೆ,.
ಧನ್ಯವಾದಗಳೂ.

shivu.k said...

ಸುಮಾ ಮೇಡಾಮ್,

ಥ್ಯಾಂಕ್ಸ್.

shivu.k said...

ಬಾಲು ಸರ್,
ನಿಮ್ಮ ಕನಸು ನನಸಾಗಿದ್ದಕ್ಕೆ ನನಗೂ ಖುಷಿಯಿದೆ. ನಿಮ್ಮ ಆರೈಕೆಗೆ ಧನ್ಯವಾದಗಳು.
ಮ್ಯಾನುವಲ್ ಕ್ಯಾಮೆರ ಮತ್ತು ರೀಲ್‍ ಇದ್ದಂತೆ ಆ ಕಾಲದ ಆನಂದವೇ ಬೇರೆ. ಈಗಿನ instant ಕಾಲವೇ ಬೇರೆ. ಆದ್ರೆ ಖುಷಿಯೊಂದೆ ಸರ್.

ಇದರ ಬಗ್ಗೆ ಮುಂದೆ ಎಂದಾದರೂ ಬ್ಲಾಗಿನಲ್ಲಿ ಬರೆಯಬೇಕು.
ಧನ್ಯವಾದಗಳು.

shivu.k said...

ನವೀನ್,

ಥ್ಯಾಂಕ್ಸ್.

shivu.k said...

ರವಿಕಾಂತ್ ಸರ್,

ತುಂಬಾ ಧನ್ಯವಾದಗಳು.

shivu.k said...

ಸುನಾಥ್ ಸರ್,

ಥ್ಯಾಂಕ್ಸ್.

shivu.k said...

ದಿನಕರ್ ಸರ್,

ನಾನು ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿಲ್ಲ. ಆದ್ರೆ ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಅದರಲ್ಲಿ ಮೊದಲಿಗೆ ವಿಖ್ಯಾತ ತೀರ್ಪುಗಾರರ ಬಗ್ಗೆ ಒಂದು ಸಣ್ಣ ಪರಿಚಯವಷ್ಟೆ. ವಿಶ್ವಕಪ್ ಬಗ್ಗೆ ಮುಂದಿನ ಭಾರಿ ಬ್ಲಾಗಿಗೆ ಹಾಕುತ್ತೇನೆ.

ನೀವು ಪೇಪರಿನಲ್ಲಿ ನೋಡಿನ ನನ್ನ ಇತ್ತೀಚಿನ ಬಹುಮಾನಿತ ಚಿತ್ರ ಟೈಪೆನಲ್ಲಿ ನಡೆದ ೩೪ನೇ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯದು.

ನಿಮ್ಮ ಆರೈಕೆಗೆ ಧನ್ಯವಾದಗಳು.

shivu.k said...

ಸುಧೇಶ್,

ನಾನು ಕಾರ್ಯಕ್ರಮದಲ್ಲಿ ಅವರ ವಿವರಣೆಯನ್ನು ಕೇಳುತ್ತಿದ್ದಾಗಲೂ ನನಗೂ ಮೈ ಜುಮ್ ಎನಿಸಿತ್ತು.

ನಿಮ್ಮ ಆರೈಕೆಗೆ ಧನ್ಯವಾದಗಳು.

shivu.k said...

ಶಿವಶಂಕರ್ ಎಳವತ್ತಿ,

ನನ್ನ ಉದ್ದೇಶ ನಿಮಗೆಲ್ಲಾ ಫೊಟೊಗ್ರಫಿ ಎಲ್ಲಾ ಮಜಲುಗಳನ್ನು ತೋರಿಸುವುದೇ ಆಗಿದೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಸುಗುಣಕ್ಕ,

ನಿಮ್ಮ ಬೆಸ್ಟಿಗೆ ನನ್ನ ಥ್ಯಾಂಕ್ಸು...

shivu.k said...

ಪ್ರವೀಣ್,

ದಿಗ್ಗಜರ ಜೊತೆ ಮೂರು ದಿನ ನಾನು ಕಳೆದ ಕ್ಷಣಗಳನ್ನು ಮರೆಯಲಾಗುವುದಿಲ್ಲ. ಅವರ ಪರಿಚಯದಿಂದಾಗಿ ಇಷ್ಟೆಲ್ಲಾ ಬರೆಯಲು ಸಾಧ್ಯವಾಯಿತು.

ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.

shivu.k said...

ಪ್ರಶಾಂತ್ ಭಟ್,


ಅಪರೂಪಕ್ಕೆ ಬಂದು ಫೋಟೊಗಳನ್ನು ನೋಡಿ ಅಭಿನಂದಿಸುತ್ತಿದ್ದೀರಿ..ಅದಕ್ಕಾಗಿ ಥ್ಯಾಂಕ್ಸ್. ಹೀಗೆ ಬರುತ್ತಿರಿ..

shivu.k said...

ಮನಮುಕ್ತ,

ಥ್ಯಾಂಕ್ಸ್.

shivu.k said...

ಆಶೋಕ್ ಒಡಲಾಡಿ ಸರ್,

ನಿಮ್ಮ ಪ್ರತಿಕ್ರಿಯೆಗೆ ಮತ್ತು ಶುಭಾಶಯಕ್ಕೆ ಧನ್ಯವಾದಗಳು.

shivu.k said...

ಶ್ರೀಧರ್ ಸರ್,

ಫೋಟೊಗಳು ಮತ್ತು ಮಾಹಿತಿಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಭಾಶೇ,

ಥ್ಯಾಂಕ್ಸ್.

shivu.k said...

ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಪ್ರತಿಕ್ರಿಯೆಗೆ ಮತ್ತು ಅಭಿನಂದನೆಗೆ ಧನ್ಯವಾದಗಳು. ಮತ್ತೆ ವಿಜ್ಞಾನ ಪುಸ್ತಕದ ವಿವರದ ಮೇಲ್ open ಆಗಲಿಲ್ಲ. ಆದರೂ ನಿಮ್ಮ ಸಾಧನೆಗಾಗಿ ನನ್ನ ಅಭಿನಂದನೆಗಳು.

shivu.k said...

ಸುಭ್ರಮಣ್ಯ ಸರ್,

ನಿಮ್ಮ ಬರಹಗಳನ್ನು ಮರಳಮಲ್ಲಿಗೆಯಲ್ಲಿ ಓದುತ್ತೇನೆ. ಮತ್ತು ಬ್ಲಾಗಿನಲ್ಲಿ ಕಡಿಮೆಯಾಗಿದೆಯಲ್ಲಾ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,
ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಪ್ರದೀಪ್,

ಥ್ಯಾಂಕ್ಸ್.

shivu.k said...

ಶಿವಪ್ರಕಾಶ್,

ಥ್ಯಾಂಕ್ಸ್...

shivu.k said...

ಪ್ರಗತಿ ಹೆಗಡೆ,

ಧನ್ಯವಾದಗಳು.

ಯಜ್ಞೇಶ್ (yajnesh) said...

Shivu,

Fotos and information chennagittu.

Thank you

shivu.k said...

ಯಜ್ಞೇಶ್,

ಥ್ಯಾಂಕ್ಸ್...

ಕ್ಷಣ... ಚಿಂತನೆ... said...

ಸರ್‍, ಛಾಯಾಲೋಕದ ದಿಗ್ಗಜರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಚಿತ್ರಗಳೂ ಸೂಪರ್‌.... ಒಂದಕಿಂತ ಒಂದು ಚೆಂದವಾಗಿವೆ. ಅಭಿನಂದನೆಗಳು.

ಸ್ನೇಹದಿಂದ,

Anand said...

Beautiful.. specially African Dear..

ಸೀತಾರಾಮ. ಕೆ. / SITARAM.K said...

ಚಿತ್ರಗಳು ಅದ್ಭುತವಾಗಿವೆ. ಸಂತಸದ ಕ್ಷನಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.