Monday, April 26, 2010

ಅವು ಕಿಟಕಿ ಮೂಲಕ ಒಳಗೆ ಬರಬಹುದು!

ಮೊದಲ ಭಾಗವನ್ನು ಓದಿಲ್ಲದವರು ಇಲ್ಲಿ ಕ್ಲಿಕ್ಕಿಸಿ ದೇವರಿಗೆ ಇರಿಸುಮುರಿಸಾಗಬಹುದು, ಬೇಡ ಸುಮ್ಮನಿರ್ರೀ..... ಇದನ್ನು ಓದಿದ ನಂತರ ಎರಡನೆ ಭಾಗವನ್ನು ಓದಿದರೆ ನಿಮಗೂ ಆ ರೈಲಿನಲ್ಲಿ ಕುಳಿತು ಪ್ರಯಾಣಿಸಿದ ಅನುಭವವಾಗಬಹುದು!]

[ಬೆಂಗಳೂರು-ಮಂಗಳೂರು ರೈಲು ಪ್ರಯಾಣ ಅನುಭವ ಭಾಗ-2

ಇದುವರೆಗೆ ಉತ್ತಮ ವೇಗದಲ್ಲಿ ಸಾಗುತ್ತಿದ್ದ ರೈಲು ಇಲ್ಲಿಂದಾಚೆಗೆ ನಿದಾನಗತಿಯಲ್ಲಿ ಚಲಿಸಲಾರಂಭಿಸಿ ಎಲ್ಲರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಅನೇಕ ಕಡೆ ತೆವಳುತ್ತದೆ, ಕೆಲವೊಮ್ಮೆ ಸುಮಾರು ಹೊತ್ತು ನಿಂತೇ ಬಿಡುತ್ತದೆ. ಆಗ ಒಳಗಿದ್ದ ಪ್ರಯಾಣಿಕರಿಗೆಲ್ಲಾ ಇದರ ಸಹವಾಸವೇ ಬೇಡವೆಂದು ಅರಾಮವಾಗಿ ನಿದ್ರೆಹೋಗಿಬಿಡುತ್ತಾರೆ. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಸಕಲೇಶಪುರ ದಾಟಿ ಬಾಳ್ಳುಪೇಟೆ ತಲುಪುವ ಹೊತ್ತಿಗೆ ನಿದಾನವಾಗಿ ನಮ್ಮ ಶಿರಾಡಿ ಘಾಟಿನ ವಿವಿಧ ಮಜಲುಗಳು ತೆರೆದುಕೊಳ್ಳಲಾರಂಭಿಸುತ್ತವೆ. ನಿದಾನವಾಗಿ ತೆವಳುವ ರೈಲು ಹಾವಿನಂತೆ ಚಲಿಸುತ್ತದೆ. ನೂರಾರು ಅಡಿ ಎತ್ತರದ ಸೇತುವೆ ಮೇಲೆ ಸಾಗುವಾಗ ನಮ್ಮ ಬೋಗಿಯಿಂದ ಕೆಳಗೆ ಇಣುಕಿದರೆ ಹೃದಯ ಬಾಯಿಗೆ ಬಂದಂತೆ ಆಗುತ್ತದೆ. ಇಂಥ ಐವತ್ತಕ್ಕೂ ಹೆಚ್ಚು ಸೇತುವೆಗಳ ಮೇಲೆ ಸಾಗುವಾಗ ಒಂದು ಬದಿಯಲ್ಲಿ ದೊಡ್ಡಬೆಟ್ಟಗಳಿದ್ದರೇ ಮತ್ತೊಂದು ಕಡೆ ಹತ್ತಾರು ಕಿಲೋಮೀಟರುಗಟ್ಟಲೇ ಹರಡಿಕೊಂಡಿರುವ ಶಿರಾಡಿಘಾಟು ದಟ್ಟ ಹಸಿರಿನ ಕಾಡು ನಮ್ಮ ಕಣ್ತುಂಬಿಕೊಳ್ಳುತ್ತದೆ. ಮತ್ತೆ ಇಲ್ಲಿನ ಸುರಂಗದಲ್ಲಿ ಸಾಗುವಾಗ ಸಿಗುವ ಅನುಭವ ಅನುಭೂತಿಯೇ ಬೇರೆ ರೀತಿಯದು. ಕೆಲವು ಸುರಂಗಗಳಂತೂ ಅರ್ಧಕ್ಕೂ ಹೆಚ್ಚು ಕಿಲೋಮೀಟರ್ ದೂರವಿರುವುದುಂಟು. ಕೆಲವು ಸುರಂಗದಲ್ಲಿ ನಮ್ಮ ರೈಲು ಯೂ ಆಕಾರದಲ್ಲಿ ಚಲಿಸುವಾಗ ನಮ್ಮ ಕಣ್ಣಗಲಿಸಿದರೆ ಹೆಬ್ಬಾವಿನ ಹೊಟ್ಟೆಯೊಳಗೆ ಚಲಿಸುತ್ತಿರುವಂತೆ ಭಾಸವಾಗುತ್ತದೆ.


ಬೃಹಾದಾಕಾರದ ಸೇತುವೆಯ ಮೇಲೆ ಚಲಿಸುವ ನಮ್ಮ ರೈಲಿನ ಫೋಟೊವನ್ನು ಸುಲಭವಾಗಿ ಕ್ಲಿಕ್ಕಿಸಿದೆನಾದರೂ ಸುರಂಗದಲ್ಲಿ ಫೋಟೊಗ್ರಫಿ ಒಂದು ಸವಾಲು. ನಮ್ಮ ಕಣ್ಣು ಕತ್ತಲಿಗೆ ಹೊಂದಿಕೊಂಡಷ್ಟು ಸುಲಭವಾಗಿ ಕ್ಯಾಮೆರಾ ಕಣ್ಣು ಹೊಂದಿಕೊಳ್ಳುವುದಿಲ್ಲ. ಆದರೂ ಅದರದೇ ಭಾಷೆಯಲ್ಲಿ ತಾಂತ್ರಿಕವಾಗಿ ಲೆಕ್ಕಚಾರಮಾಡಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿದ್ದೆ. ಕೆಲವು ಸುರಂಗಗಳಿಗೆ ಒಳಗಿನಿಂದ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದರೆ ಇನ್ನೂ ಕೆಲವು ರಾಕ್ಷಸಾಕಾರದ ಬಂಡೆಗಳನ್ನು ಕೊರೆದು ಮಾಡಿರುವುದರಿಂದ ಸಿಮೆಂಟ್ ಪ್ಲಾಸ್ಟರಿಂಗ್ ಮಾಡದೇ ಹಾಗೆ ಬಿಟ್ಟಿದ್ದಾರೆ. ಸುರಂಗದ ಫೋಟೊ ಕ್ಲಿಕ್ಕಿಸಲು ರೈಲಿನ ಬಾಗಿಲಲ್ಲಿ ಕುಳಿತು ಸರ್ಕಸ್ ಮಾಡುತ್ತಿರಬೇಕಾದರೆ ನನ್ನ ತಲೆ ಮತ್ತು ಕ್ಯಾಮೆರಾ ಮೇಲೆ ತುಂತುರು ಹನಿಗಳ ಹಾಗೆ ನೀರು ಬಿದ್ದಿದ್ದು ನನಗೆ ಆಶ್ಚರ್ಯವಾಯಿತು. ತಲೆಯೆತ್ತಿ ನೋಡಿದೆ. ಈ ಮಟಮಟ ಉರಿಬೇಸಿಗೆಯಲ್ಲಿ ರೈಲಿನ ಮೇಲ್ಬಾಗದಿಂದ ನೀರು ಬೀಳಲು ಹೇಗೆ ಸಾಧ್ಯ? ಮತ್ತೊಂದು ಸುರಂಗದಲ್ಲೂ ಹೀಗೆ ನೀರು ಬಿತ್ತು. ಇದ್ಯಾಕೋ ಸರಿಬರುತ್ತಿಲ್ಲವೆಂದು ಕ್ಯಾಮೆರವನ್ನು ಬ್ಯಾಗಿನೊಳಗೆ ಇಟ್ಟು ಮತ್ತೊಂದು ಸುರಂಗ ಬಂದಾಗ ಬಾಗಿಲಲ್ಲಿ ನಿಂತೆ. ಆಗ ಮೈಮೇಲೆ ಬಿದ್ದ ನೀರು ಬೇಸಿಗೆಯಲ್ಲಿ ಹಾಯ್ ಎನಿಸಿ ಅದನ್ನು ಆನಂದಿಸತೊಡಗಿದೆ. ಇಷ್ಟಕ್ಕೂ ಈ ನೀರು ಎಲ್ಲಿಂದ ಬರುತ್ತದೆಂದರೇ ಬೆಟ್ಟದ ತುದಿಯ ಮೇಲಿಂದ ಹರಿವ ಸಣ್ಣ ಸಣ್ಣ ಜರಿಗಳ ಕೆಳಗೆ ಪರ್ಲಾಂಗುಗಳಷ್ಟು ದೂರ ಸುರಂಗಗಳನ್ನು ಕೊರೆದು ರೈಲು ಹಳಿಗಳನ್ನು ಹಾಕಿರುವುದರಿಂದ ಅಂತ ಬೃಹತ್ ಬಂಡೆಗಳ ನಡುವೆ ಝರಿನೀರು ಜಿನುಗುತ್ತಿರುತ್ತದೆ. ನಾವು ರೈಲಿನಲ್ಲಿ ಹೋಗುವಾಗ ಬಾಗಿಲಲ್ಲಿ ಹುಷಾರಾಗಿ ನಿಂತುಕೊಂಡರೆ ನಮ್ಮ ಮೇಲೂ ಬಿದ್ದು ತಂಪನ್ನೆರೆಯುತ್ತವೆ.

ಬಂಡೆಗಳ ಒಳಗಿಂದ ಜಿನುಗುವ ನೀರು ನನ್ನ ಕ್ಯಾಮೆರಾ ಕಣ್ಣಿಗೆ!



ಸಕಲೇಶಪುರ ದಾಟುತ್ತಿದ್ದಂತೆ ಸುಬ್ರಮಣ್ಯ ರೋಡ್ ನಿಲ್ದಾಣದವರೆಗೆ ಮೂರು ಗಂಟೆಯ ಪ್ರಯಾಣದಲ್ಲಿ ತಿನ್ನಲು ಚುರುಮುರಿ, ಕಡ್ಲೆಕಾಯಿ, ಕಾಫಿ,ಟೀ ಇತ್ಯಾದಿಗಳೇನು ಬರದಿರುವುದರಿಂದ ವಯಸ್ಸಾದವರೆಲ್ಲಾ ಮಲಗಿದ್ದರು. ಆದ್ರೆ ಯುವಕ-ಯುವತಿಯವರು, ಮಕ್ಕಳು ಅದರ ಪರಿವೇ ಇಲ್ಲದೇ "ಯು" ಆಕಾರದಲ್ಲಿ "ಎಸ್ " ಆಕಾರದಲ್ಲಿ ಸಿಗುವ ಸುರಂಗಗಳು ಮತ್ತು ಸೇತುವೆಗಳನ್ನು ನೋಡಿ ಆನಂದಿಸುತ್ತಿದ್ದರು. ಪ್ರಾರಂಭದಲ್ಲಿ ಸೀಟಿಗಾಗಿ ಟಿಕೆಟ್ ಹೊಂದಾಣಿಕೆ ಮಾಡಿಕೊಂಡು ಶಿರಾಡಿ ಘಾಟ್ ದೃಶ್ಯವನ್ನೇ ನೋಡಲು ರೈಲುಹತ್ತಿದ್ದ ಹಿರಿಯರು ಉತ್ಸಾಹದಿಂದ ರೈಲಿನ ಎಮರ್ಜೆನ್ಸಿ ಕಿಟಕಿಗಳಲ್ಲಿ ಜಾಗ ಹಿಡಿದು ಸುರಂಗಗಳು ಮತ್ತು ಸೇತುವೆಗಳು ಬಂದಾಗ ತಲೆಹೊರಗೆ ಹಾಕಿ ನೋಡಿ ಮಕ್ಕಳಂತೆ ಅನಂದಿಸುತ್ತಿದ್ದರು.

ಬೃಹತ್ ಸೇತುವೆ, ಹಸಿರು ಕಾಡಿನ ನಡುವೆ ಹಾವಿನಂತೆ ಚಲಿಸುವ ನಮ್ಮ ರೈಲು

ಸೇತುವೆ ದಾಟುತ್ತಿದ್ದಂತೆ ಸಿಗುವ ಸುರಂಗ ಮಾರ್ಗ!

ಎಡಕುಮೇರಿ ರೈಲು ನಿಲ್ದಾಣದ ನಂತರ ಕಾಣಸಿಗುವ ಹಸಿರು ಕಾಡು!

ಸುರಂಗದೊಳಗಿನ ಬಂಡೆಗಳಿಗೆ ಸಿಮೆಂಟ್ ಪ್ಲಾಸ್ಟರಿಂಗ್.

ಬಲಭಾಗದಲ್ಲಿ ಸುರಂಗ ಮಾರ್ಗದೊಳಗಿನ ಬಂಡೆಗಳ ಚಿತ್ರ
ಎಡಭಾಗದ ಸುರಂಗ ಮಾರ್ಗದಲ್ಲಿ ಬಂಡೆಗಳ ಚಿತ್ರ

ಹಸಿರೊಳಗೆ ನುಗ್ಗುತ್ತಿರುವಂತೆ ಭಾಷವಾಗುತ್ತಿದೆಯಲ್ಲವೇ!

ಇಳಿಜಾರು ಬೆಟ್ಟ ಕೊರೆದು ಮಾಡಿದ ಸೇತುವೆ ಮೇಲೆ ನಮ್ಮ ರೈಲು


"ಬೆಳಿಗ್ಗೆ ಹತ್ತು ಗಂಟೆಗೆ ಕೆಲಸ ಶುರುಮಾಡಿದರೆ ಸಂಜೆ ನಾಲ್ಕುಗಂಟೆಯ ಹೊತ್ತಿಗೆ ಕೆಲಸ ನಿಲ್ಲಿಸಬೇಕಾಗಿತ್ತಂತೆ, ನಂತರವೂ ಕೆಲಸಗಾರರು ಅಲ್ಲೇ ಇದ್ದರೆ ಕಾಡಿನ ಆನೆಗಳು ಇವರನ್ನು ಸೊಂಡಿಲಿನಿಂದ ಎತ್ತಿ ಪುಟ್‍ಬಾಲಿನಂತೆ ಕಣಿವೆಯೊಳಕ್ಕೆ ಬಿಸಾಡುತ್ತಿದ್ದವಂತೆ, ಹೀಗೆ ಪ್ರಾಣ ಕಳೆದುಕೊಂಡವರೆಷ್ಟೋ ಜನ", ಅಂತ ಒಬ್ಬ ಹಿರಿಯ ಹೇಳಿದರೆ,

"ಹೌದಪ್ಪ ಅವರ ತ್ಯಾಗದಿಂದಾಗಿಯೇ ನಾವೆಲ್ಲಾ ಇಷ್ಟು ಸುಖವಾಗಿ ಇಂಥ ದೃಶ್ಯಗಳನ್ನು ನೋಡುತ್ತಿರುವುದು" ಅಂತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಮತ್ತೊಬ್ಬರು.

"ಇಲ್ಲಿ ಹಾವುಗಳು ಹೆಚ್ಚಂತೆ. ಇಲ್ಲಿ ರಾತ್ರಿ ಮತ್ತು ಹಗಲು ಎರಡೇ ರೈಲು ಓಡಾಡುವುದರಿಂದ ಉಳಿದ ಸಮಯದಲ್ಲಿ ಸುರಂಗದಲ್ಲಿ ನಾಗರಹಾವು ಕೋಬ್ರ ಸೇರಿದಂತೆ ಎಲ್ಲಾ ರೀತಿಯ ಹಾವುಗಳು ಹರಿದಾಡುತ್ತಿರುತ್ತವೆ" ಅಂದರು ಒಬ್ಬರು.

"ಹೌದಾ ಹಾಗಾದರೆ ನಾವು ಇಲ್ಲಿ ಹುಷಾರಾಗಿರಬೇಕು ಅಲ್ವಾ" ಮತ್ತೊಬ್ಬರು ಭಯದಿಂದ ಉತ್ತರಿಸಿದರು. ಅವರ ಮಾತನ್ನು ಕೇಳುತ್ತಿದ್ದ ಉಳಿದವರಿಗೂ ಒಂದು ರೀತಿಯ ಭಯದ ಛಾಯೆ ಮುಖದಲ್ಲಿ ಮೂಡಿತ್ತು.
"ನಾವು ಚಲಿಸುತ್ತಿರುವ ರೈಲು ಸುರಂಗದಲ್ಲಿ ನಿದಾನವಾಗಿ ಸಾಗುತ್ತಿದೆ. ಇದೇ ಸಮಯದಲ್ಲಿ ಸುರಂಗದ ಒಳಬದಿಯ ಪೊಟರೆಗಳಲ್ಲಿರುವ ಹಾವುಗಳು ರೈಲು ಹೀಗೆ ನಿದಾನವಾಗಿ ಸಾಗುತ್ತಿರುವಾಗ ನಮ್ಮ ಬೋಗಿಯ ಮೇಲ್ಬಾಗಕ್ಕೆ ಬಿದ್ದು ಅಲ್ಲಿಂದ ಕಿಟಕಿಗಳ ಮೂಲಕ ಬೋಗಿಯೊಳಕ್ಕೆ ಬರಲೂಬಹುದು" ಅಂದರು.
ಅವರ ಮಾತನ್ನು ಕೇಳಿದ ತಕ್ಷಣ ಎಮರ್ಜೆನ್ಸಿ ಕಿಟಕಿಯಿಂದ ತಲೆ ಹೊರಹಾಕಿ ಉತ್ಸಾಹದಿಂದ ನೋಡುತ್ತಿದ್ದ ಹಿರಿಯರೆಲ್ಲಾ ಭಯದಿಂದ ತಲೆಯನ್ನು ಒಳಗೆ ಎಳೆದುಕೊಂಡು ಕಿಟಕಿಗಳನ್ನು ಮುಚ್ಚಿದರು. ಆ ಮಾತು ಎಲ್ಲಾ ಬೋಗಿಗಳಿಗೂ ಹರಡಿ ಎಲ್ಲರ ಮನದೊಳಗೂ ಒಂಥರ ಭಯ ಮತ್ತು ದಿಗಿಲು ಮುಖದಲ್ಲಿ ಆವರಿಸಿ ಕಿಟಕಿಗಳನ್ನು ಮುಚ್ಚಿದರು. ಅಲ್ಲಿಯವರೆಗೆ ತಮ್ಮ ತಮ್ಮ ಗಂಡಸರ ಉತ್ಸಾಹವನ್ನು ಹತೋಟಿಗೆ ತರಲಾಗದೆ ಒಳಗೊಳಗೆ ಸಿಟ್ಟಿನಿಂದಿದ್ದ ಮಹಿಳಾಮಣಿಗಳಂತೂ ಉತ್ಸಾಹದಿಂದಿದ್ದ ತಮ್ಮ ತಮ್ಮ ಯಜಮಾನರಿಗೆ "ತಲೆಹೊರಹಾಕದೆ ಕಿಟಕಿಗಳನ್ನು ಬಂದು ಮಾಡಿ ತೆಪ್ಪಗೆ ಕುಳಿತುಕೊಳ್ಳಿ" ಅಂತ ಬುದ್ಧಿವಾದ ಹೇಳಿ ತಮ್ಮ ಮಾಂಗಲ್ಯದ ಸುರಕ್ಷತೆಯನ್ನು ಕಾಯ್ದುಕೊಂಡರು. ಮತ್ತೆ ಅಲ್ಲಿದ್ದ ಹೆಂಗಸರಿಗೆಲ್ಲಾ ಇಂಥ ಭಯದ ವಾತಾವರಣದ ವಿಚಾರ ಚರ್ಚಿಸಲು ಸಿಕ್ಕಿದ್ದರಿಂದ ಮತ್ತೊಮ್ಮೆ ಅವರಲ್ಲೇ ಗುಸುಗುಸು ಪ್ರಾರಂಭವಾಗಿತ್ತು. "ತಮ್ಮ ದುರಾದೃಷ್ಟಕ್ಕೆ ಕಿಟಕಿ ಬಾಗಿಲುಗಳಿಂದ ನುಗ್ಗಿದ ಹಾವು ಕಾಲ ಕೆಳಗೆ ಬಂದುಬಿಟ್ಟರೆ " ಎನ್ನುವ ಭಯದ ಕಾರಣಕ್ಕೆ ತಮ್ಮ ತಮ್ಮ ಕಾಲುಗಳನ್ನು ಮೇಲೆತ್ತಿ ಸೀಟಿನಲ್ಲಿ ಚಕ್ಕಳಬಕ್ಕಳ ಹಾಕಿ ಕೂತರು. ಈ ವಿಚಾರದ ಚರ್ಚೆಯಂತೂ ಅವರ ಪ್ರಯಾಣದ ಅವಧಿ ಮುಗಿಯುವವರೆಗೂ ನಡೆದೇ ಇತ್ತು. ಇದೆಲ್ಲದರ ನಡುವೆಯೂ ನನ್ನಂತೆ ಹತ್ತಾರು ಪ್ರಯಾಣಿಕರು ಇವ್ಯಾದಕ್ಕೂ ತಲೆಕೆಡಿಸಿಕೊಳ್ಳದೇ ಫೋಟೊ ವಿಡಿಯೋ ಮಾಡಿ ಆನಂದಿಸಿದರು. ಅವರ ಮಾತುಗಳನ್ನು ಕೇಳುತ್ತಲೇ ಸುರಂಗ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದ ನನಗೆ ಆ ಕತ್ತಲ್ಲಲ್ಲಿ ಸುರಂಗದೊಳಗೆ ಕೆಲಸ ಮಾಡುವ ರೈಲ್ವೇ ಕೆಲಸಗಾರ ಅವನ ಬಿಟ್ಟಿದ್ದ ಟಾರ್ಚ್ ಬೆಳಕಿನಿಂದಾಗಿ ಕಾಣಿಸಿದ. ದೂರದಿಂದಲೇ ಆ ಕತ್ತಲಲ್ಲಿ ಅವನೆಡೆಗೆ ನನ್ನ ಕ್ಯಾಮೆರಾ ಫೋಕಸ್ ಮಾಡಿದೆ. ನನ್ನ ಕ್ಯಾಮೆರಾ ಬೆಳಕನ್ನು ನೋಡಿ ಅದಕ್ಕೆ ಉತ್ತರವಾಗಿ ತನ್ನ ಟಾರ್ಚನ್ನು ಬಿಟ್ಟು ಪ್ರತಿಕ್ರಿಯಿಸಿದ. ಅಷ್ಟರಲ್ಲಿ ಅವನಿಗೆ ಹತ್ತಿರವಾಗಿದ್ದರಿಂದ ಅವನ ಫೋಟೊ ಕ್ಲಿಕ್ಕಿಸಿದ್ದೆ. ಆ ಕತ್ತಲೆಯಲ್ಲೂ ಚಲಿಸುವ ರೈಲಿನಲ್ಲಿರುವ ನನ್ನ ಕ್ಯಾಮೆರಾಗೆ ನಗುತ್ತಾ ಕೆಲಸ ಮಾಡುತ್ತಿದ್ದುದ್ದು ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಒಳಗಿದ್ದವರೆಲ್ಲಾ ಭ್ರಮೆಯ ಹಾವುಗಳನ್ನು ಸೃಷ್ಟಿಸಿಕೊಂಡು ದಿಗಿಲಿನಿಂದ ಮಾತಾಡುತ್ತಿದ್ದರೇ...ಸುರಂಗದಲ್ಲಿ ಹಾವುಗಳು ಇರುವ ಜಾಗದಲ್ಲಿ ನಗುತ್ತಾ ಕೆಲಸ ಮಾಡುವ ಅವನ ಬದುಕು ನಿಜಕ್ಕೂ ಶ್ಲಾಘನೀಯವೆನಿಸಿತ್ತು. ಕೊನೆಗೂ ಸುಬ್ರಮಣ್ಯ ರೋಡ್ ರೈಲುನಿಲ್ದಾಣವನ್ನು ನಮ್ಮ ರೈಲು ತಲುಪಿದಾಗ ಸಂಜೆಯ ನಾಲ್ಕುಗಂಟೆ ದಾಟಿತ್ತು.

ಸುರಂಗದೊಳಗೆ ಕೆಲಸ ಈ ಕೆಲಸಗಾರನಿಗೆ ಹಾವುಗಳ ಭಯವಿಲ್ಲವೇ?

ಇಲ್ಲಿಂದ ಸುಬ್ರಮಣ್ಯ ದೇವಸ್ಥಾನ ೧೨ ಕಿಲೋಮೀಟರ್ ದೂರದಲ್ಲಿದೆ. ಆಟೋದಲ್ಲಿ ಹೋದರೆ ೧೫೦ ರೂಪಾಯಿ. ಜೀಪಿನಲ್ಲಿ ಒಬ್ಬರಿಗೆ ೨೦ ರೂಪಾಯಿ. ಐದುಜನರು ಕೂತು ಪ್ರಯಾಣಿಸುವ ಜೀಪಿನಲ್ಲಿ ಹನ್ನೊಂದು ಜನರನ್ನು ಕೂರಿಸಿಕೊಳ್ಳುವ ಇಲ್ಲಿನ ಡ್ರೈವರುಗಳು ತಮ್ಮ ಡ್ರೈವಿಂಗ್ ಜಾಗವನ್ನು ಮತ್ತೊಬ್ಬರಿಗೆ ಸೀಟುಮಾಡಿಕೊಟ್ಟು ಬಲಬದಿಯ ತುದಿಯಲ್ಲಿ ದೇಹವನ್ನು ಪೂರ್ತಿಹೊರಹಾಕಿ ಒಂದೇ ಕುಂಡಿಯಲ್ಲಿ ಕುಳಿತು ಜೀಪು ಓಡಿಸುವ ಪರಿ ನೋಡಿದಾಗ ನಿಜಕ್ಕೂ ಮೊದಲಿಗೆ ನಮಗೆ ದಿಗಿಲಾಗುತ್ತದೆ. ಆದ್ರೆ ಸ್ವಲ್ಪ ಹೊತ್ತಿಗೆ ಅವರ ಪ್ರತಿಭೆ, ಪರಿಣತಿ, ಚಾಕಚಕ್ಯತೆಯನ್ನು ಗಮನಿಸಿದಾಗ ಅವರ ಮೇಲೆ ನಂಬಿಕೆಯುಂಟಾಗುತ್ತದೆ. ಸುಬ್ರಮಣ್ಯ ದೇವಸ್ಥಾನ ತಲುಪುವುದು ನಾಲ್ಕು ಕಿಲೋಮೀಟರ್ ಇದೆಯೆನ್ನುವಾಗ ಸಡನ್ನಾಗಿ ರಸ್ತೆಯಲ್ಲಿ ವೇಗವಾಗಿ ದಾಟುತ್ತಿದ್ದ ಹಾವೊಂದರ ಮೇಲೆ ನಾವು ಕುಳಿತಿದ್ದ ಜೀಪಿನ ಮುಂದಿನ ಚಕ್ರ ಹತ್ತೇ ಬಿಟ್ಟಿತು ಅಂದುಕೊಳ್ಳುವಷ್ಟರಲ್ಲಿ ಒಂದೇ ಕುಂಡಿಯಲ್ಲಿ ಕುಳಿತು ಡ್ರೈವ್ ಮಾಡುವ ನಮ್ಮ ಡ್ರೈವರ್ ಚಾಕಚಕ್ಯತೆಯಿಂದಾಗಿ ಹಾವು ಬಚಾವಾಗಿತ್ತು.
ಮರುದಿನ ಬೆಳಿಗ್ಗೆ ಇದೇ ರೈಲು ಮಂಗಳೂರಿನಿಂದ ಹೊರಡುತ್ತದೆ. ಇಲ್ಲಿ ಸರಿಯಾಗಿ ಹತ್ತುಗಂಟೆಗೆ ಬರುತ್ತದೆ ಅಂತ ಸಮಯವನ್ನು ಕೊಟ್ಟಿರುತ್ತಾರೆ ಆದ್ರೆ ಅರ್ಧ ಅಥವ ಮುಕ್ಕಾಲು ಗಂಟೆ ತಡವಾಗಿಯೇ ಬರುತ್ತದೆ. ಮತ್ತದೇ ಸುರಂಗಗಳು ಸೇತುವೆಗಳು, ಅಲ್ಲಲ್ಲಿ ಕೆಲಸ ಮಾಡುವ ರೈಲ್ವೇ ಕೆಲಸಗಾರರು, ಕೂಲಿಕಾರರು, ಹೀಗೆ ಸಾಗಿ ಎಡಕುಮೇರಿ ಸಕಲೇಶಪುರ, ಹಾಸನ, ಅರಸೀಕೆರೆ ತಲುಪುವವರೆಗೆ ನಿದಾನವಾಗಿ ಸಾಗುವ ರೈಲು ಅಲ್ಲಿಂದ ಮತ್ತೆ ವೇಗವನ್ನು ಪಡೆದುಕೊಳ್ಳುತ್ತದೆ. ಇದೇ ರೈಲಿನಲ್ಲಿ ಒಮ್ಮೆ ಹೋಗಿಬಂದಾಗ ನಿಮಗೆ ಮ್ಯಾರಥಾನ್ ಓಟಗಾರನ ನೆನಪಾಗುತ್ತದೆ. ಮ್ಯಾರಥಾನ್ ಓಟಗಾರನಂತೆ ಈ ರೈಲು ಪ್ರಾರಂಭದಲ್ಲಿ ವೇಗವಾಗಿ ಅರಸೀಕೆರೆಯವರೆಗೆ ಚಲಿಸಿ, ಅಲ್ಲಿಂದಾಚೆಗೆ ನಿದಾನವಾಗಿಬಿಡುತ್ತದೆ. ಮತ್ತೆ ವಾಪಸು ಬರುವಾಗ ಗುರಿ ಹತ್ತಿರವಾಗುತ್ತಿದ್ದಂತೆ ವೇಗ ಪಡೆದುಕೊಳ್ಳುವ ಓಟಗಾರನಂತೆ ವೇಗ ಹೆಚ್ಚಿಸಿಕೊಳ್ಳುತ್ತದೆ. ತುಮಕೂರಿನಿಂದ ಯಶವಂತಪುರಕ್ಕೆ ಒಂದೇ ಉಸುರಿಗೆ ಓಡಿಬಂದಂತೆ ಭಾಷವಾಗುತ್ತದೆ.
ನಮ್ಮ ರೈಲು ಸುರಂಗದೊಳಗೆ ನುಗ್ಗುತ್ತಿರುವಾಗ...

ಮತ್ತೊಂದು ಕೋನದಲ್ಲಿ ಬೆಂಗಾಲಿ ಬಿಕ್ಷುಕಿಯ ಚಿತ್ರ!

ಸಕಲೇಶಪುರ ರೈಲುನಿಲ್ದಾಣದಲ್ಲಿ ಕೋತಿಗಳ ಚೆಲ್ಲಾಟ!


ಒಟ್ಟಾರೆ ನನಗೆ ಈ ಪ್ರಯಾಣದಲ್ಲಿ ಇಷ್ಟೆಲ್ಲಾ ಅನುಭವಗಳ ನಡುವೆ ತೇಜಸ್ವಿಯವರ ಎರಡು ಪುಸ್ತಕಗಳನ್ನು ಓದಿಮುಗಿಸಿದ್ದು ಒಂಥರ ಖುಷಿಕೊಟ್ಟಿತ್ತು.

ಚಿತ್ರಗಳು ಮತ್ತು ಲೇಖನ.
ಶಿವು.ಕೆ.

60 comments:

PARAANJAPE K.N. said...

ಫೋಟೋಗಳು,ಲೇಖನ ಎರಡೂ ಚೆನ್ನಾಗಿವೆ. ಶಿರಾಡಿ ಘಾಟಿಯಲ್ಲಿ ಸಾಗುವ ರೈಲಿನ ಸುರ೦ಗದ ಹಾದಿ ಮತ್ತು ರಮಣೀಯ ಹಸಿರು ಹಾಸಿನ ಕಾಡು ಚೆನ್ನಾಗಿದೆ. ನನಗೂ ಒಮ್ಮೆ ಸ೦ಸಾರ ಸಮೇತ ಹೋಗಬೇಕೆನಿಸಿದೆ.

shivu.k said...

hivuuimages
ಪರಂಜಪೆ ಸರ್,

ನೀವು ಹೋಗುವುದಾದರೆ ಮಳೆಗಾಲಕ್ಕೆ ಮೊದಲು ಹೋಗಿಬನ್ನಿ. ಎಲ್ಲವನ್ನು ನೋಡಿ ಖುಷಿಪಡಬಹುದು.
ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಜಲನಯನ said...

ಶಿವು ನಿಮ್ಮ ಈ ಸೀರೀಸ್ ಚನ್ನಾಗಿದೆ ..ಅಂದಹಾಗೆ ನಿಮ್ಮ ಈ ಆರ್ಟಿಕಲ್ ರೈಲ್ವಯ್ಸ್ ನವರು ಸ್ಪಾನ್ಸರ್ ಮಾಡಿದ್ದಾರಾ ಇಲ್ಲ ಅಂದ್ರೆ ಜಾಹೀರಾತಿನ ಹಣ ಕೇಳಿ,....ಹಹಹ

shivu.k said...

ಅಜಾದ್,

ಕಾಕತಾಳೀಯವೆಂಬಂತೆ ನಾನು ನಾಡಿದ್ದು golden chariot project manager ರವರನ್ನು ಬೇಟಿ ಮಾಡಲು ಹೋಗುತ್ತಿದೇನೆ. ಈ ವಿಚಾರಕ್ಕಲ್ಲ...ನನ್ನ ಫೋಟೋಗಳನ್ನು ನೋಡಲು ಅವರ ಕಛೇರಿಗೆ ಕರೆದಿದ್ದಾರೆ. ಅಲ್ಲಿ ನನ್ನ ಅದೃಷ್ಟ ಹೇಗಿದೆಯೋ ನೋಡಬೇಕು.

ನನ್ನ ಸರಣಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

Ittigecement said...

ಶಿವು ಸರ್..

ನಿಮ್ಮ ಫೋಟೊಗಳು ನಿಮ್ಮ ಬರಹಕ್ಕಿಂತ ಚಂದ...
ನಿಮ್ಮ ಬರಹ ನಿಮ್ಮ ಫೋಟೊಗಳಿಗಿಂತ ಅಂದ...

ಎರಡನ್ನೂ..
ಸುಮ್ಮನೆ ಎಂಜಾಯ್ ಮಾಡುತ್ತಿದ್ದೇನೆ...

ಚಂದದ ಚಿತ್ರ ಲೇಖನಕ್ಕಾಗಿ ಅಭಿನಂದನೆಗಳು...

Greeshma said...

ಚೆನ್ನಾಗಿದೆ ಶಿವು ಸರ್ Green route ಚಿತ್ರಗಳು :)
ಕಳೆದ ಚಳಿಗಾಲದಲ್ಲಿ ನಾವು ಒಂದಿಷ್ಟು ಜನ ರಾತ್ರಿ ರೈಲಿನಲ್ಲಿ ಹೋಗಿದ್ವಿ. ಸೂರ್ಯೋದಯ ನೋಡಲು ಸಿಗಬಹುದು ಅಂತ ರಾತ್ರಿ ಎಲ್ಲ ನಿದ್ದೆಗೆಟ್ಟು ಬಾಗಿಲ ಬಳಿ ಕೂತಿದ್ವಿ.. ಬೆಳಗಾಗೋ ಹೊತ್ತಿಗೆ ಸುಬ್ರಹ್ಮಣ್ಯ ತಲುಪಿದ್ದರಿಂದ ಈ ಘಾಟಿ ಬೆಳಕಿನಲ್ಲಿ ನೋಡೋಕೆ ಸಿಗಲೇ ಇಲ್ಲ.
ದಾರಿಯುದ್ದಕ್ಕೂ ತೇಜಸ್ವಿ ಅವರ "ಜುಗಾರಿ ಕ್ರಾಸ್" ನೆನಪಿಸಿಕೊಳ್ತಾ ಬಂದ್ವಿ.
ನಿಮ್ಮ ಲೇಖನ ಓದಿದ ಮೇಲೆ ಪುನಃ ಈ ದಾರೀಲಿ ಬೆಳಿಗ್ಗೆ ಒಂದ್ ಸರ್ತಿ ಹೋಗಬೇಕು ಅಂತ ಅನ್ಸ್ತಾ ಇದೆ.
ಮಳೆಗಾಲದಲ್ಲಿ ಹೋದ್ರೆ ಇನ್ನು ಹಸಿರಾಗಿರುತ್ತೆ ಅಲ್ವ?

shridhar said...

ಶಿವು ಸರ್,
ಚಿತ್ರ ಲೇಖನ ಸೂಪರ್ .. ಸುಂದರ ಚಿತ್ರಗಳು ಹಾಗೂ ಒಳ್ಳೆ ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... said...

ಫೋಟೋಗಳು, ಶೀರ್ಷಿಕೆ ಮತ್ತು ಬರಹ ಚೆನ್ನಾಗಿವೆ. ಶಿರಾಡಿ ಘಾಟಿನಲ್ಲಿ, ಸುರಂಗಗಳಲ್ಲಿ, ಹಸಿರ ಕಾನನದ ನಡುವೆ ಸಾಗುವ ರೈಲು. ಜೊತೆಗೆ ಪ್ರಯಾಣಿಕರ ಉತ್ಸಾಹ, ಆತಂಕ (ಹಾವುಗಳು...), ರೈಲು ಹಾದಿಗೆ ಶ್ರಮಿಸಿದವರ ನೆನೆಯುವುದು, ಇವೆಲ್ಲವನ್ನೂ ಸರಳವಾಗಿ ತಿಳಿಸಿದ್ದೀರಿ.

ನಮಗೂ ಹೋಗಬೇಕೆನಿಸುತ್ತಿದೆ.

Unknown said...

ನನಗಿನ್ನೂ ಈ ಭಾಗ್ಯ ಲಭಿಸಿಲ್ಲ. ಒಮ್ಮೆ ರಾತ್ರಿ ರೈಲು ತಡವಾಗಿ ಹೊರಟಿದ್ದಕ್ಕೆ, ಬೆಳಗಿನ ಜಾವದ ಸವಿಯನ್ನಷ್ಟೇ ಅನುಭವಿಸಿದ್ದೆ. ಈಗ ಆ ಅನುಭವವನ್ನು ಈ ಫೋಟೋಗಳ ಮೂಲಕ ಸವಿಯುವ ಯತ್ನ ನಡೆದಿದೆ.

ಸಂದೀಪ್ ಕಾಮತ್ said...

Superb!!

ಭಾಶೇ said...

ಮಜವಾಗಿದೆ ನಿಮ್ಮ ಪ್ರಯಾಣ ಕಥನ
ಗೋಲ್ಡನ್ ಚಾರಿಯೇಟ್ ನಲ್ಲಿ ಒಳ್ಳೆಯದಾಗಲಿ

ಪ್ರಯಾಣ ಮಾಹಿತಿಯನ್ನ ನನ್ನ ಯಾವುದೇ ಬರಹಕ್ಕೆ ಕಾಮೆಂಟ್ ನ ರೀತಿ ಕಳಿಸಿ. ಅದು ನನ್ನ ಮೇಲ್ ಬಾಕ್ಸ್ ಬಂದು ಸೇರುತ್ತದೆ.

ತುಂಬಾ ಧನ್ಯವಾದಗಳು
ಭಾಶೇ

Chaithrika said...

ಅನುಭವ ಚೆನ್ನಾಗಿದೆ. ಇಂಥ ಜಾಗಗಳಲ್ಲಿ ಕೆಲಸ ಮಾಡುವವರ ಕಷ್ಟವನ್ನು ನೆನೆಸಿ ಬೇಸರವಾಯಿತು.

ಸೀತಾರಾಮ. ಕೆ. / SITARAM.K said...

ಅದ್ಭುತ ಛಾಯಚಿತ್ರಗಳು.
ಉತ್ತಮ ಪ್ರವಾಸ ಲೇಖನ.
ಸು೦ದರ ನಿರೂಪಣೆ.
ತಮ್ಮ ಸಾಹಸ, ವಿಶ್ವವನ್ನು ನೋಡುವ ಬೆರಗಿನ ಆಸಕ್ತ ಕಣ್ಣುಗಳಿಗೆ, ಮನದ ಆಪ್ತತೆಗೆ, ಆ ಆಪ್ತತೆಗೆ ಕೊಡುವ ಭಾಶೆಗೆ ನನ್ನ ಅನ್೦ತ ಅನ೦ತ ನಮನಗಳು. ತಮ್ಮ ಈ ಕ್ರಿಯಾಶೀಲ ಮನೋಭಾವ ಸದಾಅ ಜಾಗೃತವಾಗಿದ್ದು ನಮಗೆ ಹೀಗೆ ಸಾಹಿತ್ಯ, ಜ್ಞಾನ, ಮನರ೦ಜನೆ ನೀಡುತ್ತಿರಲಿ ಎ೦ದು ಹಾರೈಸುತ್ತೆನೆ.

ಸಾಗರಿ.. said...

ರೈಲಿನಲ್ಲಿ ಹೋಗುವ ಮಜ, ಮತ್ತು ದೃಶ್ಯ ಬೆಗ ಹೋಗಲೆಂದು ಹತ್ತುವ ಬಸ್ಸಲ್ಲಿ ಕಡಿಮೆಯೇ ಅನ್ನಿಸುತ್ತದೆ. ಎಲ್ಲಾ ಫೋಟೊಗಳು ಚೆನ್ನಾಗಿದೆ, ಬಂಗಾಳಿ ಭಿಕ್ಷುಕಿಯ ಫೋಟೊ ಎಲ್ಲಾಕ್ಕು ಚೆನ್ನಾಗಿದೆ.

Subrahmanya said...

ತುಂಬ ಚೆನ್ನಾಗಿದೆ, ಲೇಖನ ಮತ್ತು ಚಿತ್ರಗಳು .

PaLa said...

ಭಿಕ್ಷುಕಿ ಚಿತ್ರ ಕಲ್ಲರಲ್ಲೂ ಚೆನ್ನಾಗಿದೆ.. ನೀವು ರೈಲಲ್ಲಿ ಹೋದ ಎಡಕುಮೇರಿ - ಸುಬ್ರಮಣ್ಯ ದಾರಿ ರೈಲು ಆರಂಭ ಆಗೋಕೆ ಮುಂಚೆ ಗೆಳೆಯರಜೊತೆ ನಡೆದುಕೊಂಡು ಹೋಗಿದ್ದೆ.. ರಾತ್ರಿ ಎಲ್ ಆಯ್ತೋ ಅಲ್ ಮಲ್ಕೊಂಡು.. ತುಂಬಾ ಸುಂದರ ಜಾಗ.. ದಾರಿಯುದ್ದಕ್ಕೂ ರೈಲ್ ಪಟ್ಟಿ ಮಧ್ಯ ಮಧ್ಯ ಸುರಂಗ, ಕಣಿವೆ-ಸೇತುವೆ, ಅಕ್ಕ ಪಕ್ಕದಲ್ಲೆಲ್ಲಾ ಕಾಡು..

balasubramanya said...

ಶಿವೂ ಭಾರಿಸಿದ ಮೊತ್ತೊಂದು ಸಿಕ್ಸರ್ !!!ತುಂಬಾ ಖುಷಿಕೊಟ್ಟ ಚಿತ್ರಗಳು !!!ನಿಮಗೆ ಧನ್ಯವಾದಗಳು ಶಿವೂ!!!

ಸುಧೇಶ್ ಶೆಟ್ಟಿ said...

adhbhuthavaagidhe nimma prayaaNadha anubhavagaLu. nanagoo aa railinalli hogabEku embudhu bahudhianagaLa aase :)

umesh desai said...

ಶಿವು ಮತ್ತೊಂದು ಸುಮಧುರಯಾನದ ಸವಿ ಉಣ್ಣಿಸಿರುವಿರಿ...
ಧನ್ಯವಾದಗಳು..

ಮನಸು said...

ಅಬ್ಬಾ!!! ಎಂತಾ ಫೋಟೋಗಳು ಸರ್, ನಿಜಕ್ಕೂ ಅಚ್ಚರಿ ಮೂಡಿಸುತ್ತೆ.....ಬರವಣಿಗೆಯಲ್ಲೂ ಸಹ ವಿಶಿಷ್ಟತೆಯನ್ನ ತೊರುತ್ತಲಿದ್ದೀರಿ..ಸಾಗಲಿ ನಿಮ್ಮ ಪಯಣ.
ವಂದನೆಗಳು

ಮನಸಿನಮನೆಯವನು said...

shivu.k,
ನಮ್ಮೂರಿನ ಹತ್ತಿರ ಇರುವ ರೈಲುಹಾದಿಯಲ್ಲೂ ಕೂಡ ನೀರು ಜಿನುಗುತ್ತಲೇ ಇರುತ್ತೆ..
ಸುಮಾರು ದೂರ ಬಹಳ ಎತ್ತರದ ಅರೆಕಲ್ಲಿನಿಂದ ತೋಡಿದ ಹಾದಿ ಅದು..
ನೋಡಿರ್ಬೇಕಲ್ಲ ಸ್ವಲ್ಪನ 'ಮನಸಾರೆ' ಚಲನಚಿತ್ರದಲ್ಲಿ..

ಸಾಗರದಾಚೆಯ ಇಂಚರ said...

ಶಿವೂ ಅದ್ಭುತ ಫೋಟೋಗಳು
ಸುಂದರ ವಿವರಣೆ
ನಿಮ್ಮ ಸಂಶೋಧನೆಗೆ ಒಂದು ನಮಸ್ಕಾರ
ತುಂಬಾ ಉತ್ಸಾಹೀ ವ್ಯಕ್ತಿ ನೀವು

shivu.k said...

ಪ್ರಕಾಶ್ ಸರ್,

ರೈಲು ಪ್ರಯಾಣವೆಂದರೆ ನನಗೆ ಮೊದಲ ಆದ್ಯತೆ. ಈ ರೈಲಿನಲ್ಲಿ ಪ್ರಯಾಣಿಸಬೇಕೆಂಬುದು ತುಂಬಾ ದಿನದ ಕನಸು.
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಗ್ರೀಷ್ಮಾ,

ನೀವು ರಾತ್ರಿ ರೈಲಿಗಿಂತ ಹಗಲಿನ ರೈಲಿನಲ್ಲಿ ಹೋದರೆ ಅದರ ಅನುಭವವೇ ಬೇರೆ. ಈ ಪ್ರಯಾಣ ಒಂಥರ ಜುಗಾರಿ ಕ್ರಾಸ್ ನೆನಪಿಸುತ್ತದೆ.

ಬೇಸಿಗೆಯಲ್ಲಿ ಒಂಥರ ಅನುಭವವಾದರೆ ಮಳೆಗಾಲದಲ್ಲಿ ಬೇರೊಂದು ರೀತಿಯ ಅನುಭವವಾಗಬಹುದು. ಮತ್ತೆ ಹಸಿರು ನಳನಳಿಸುವುದು ಚೆನ್ನಾಗಿ ಕಾಣಬಹುದು...ಖಂಡಿತ ಹೋಗಿಬನ್ನಿ...

ಧನ್ಯವಾದಗಳು.

shivu.k said...

ಶ್ರೀಧರ್,

ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...

ದಿನಕರ ಮೊಗೇರ said...

nimma jote prayaana maadida haagittu........ tumbaa hidisitu........... dhanyavaada sir............

shivu.k said...

ಚಂದ್ರು ಸರ್,

ನೀವು ಬಿಡುವು ಮಾಡಿಕೊಂಡು ಒಮ್ಮೆ ಈ ರೈಲಿನಲ್ಲಿ ಹಗಲು ಪ್ರಯಾಣ ಮಾಡಿ. ನಿಮಗೆ ಇನ್ನೂ ಬೇರೆ ರೀತಿಯ ಅನುಭವವಾಗಬಹುದು. ಸುತ್ತಲ ಹಸಿರು ಪರಿಸರವನ್ನು ಆನಂದಿಸಿ...

ಧನ್ಯವಾದಗಳು.

shivu.k said...

ಕೃಷ್ಣ ಮರೂರ್ ಸರ್,


ನನ್ನ ಬ್ಲಾಗಿಗೆ ಸ್ವಾಗತ.
ರಾತ್ರಿ ರೈಲಿನ ಪ್ರಯಾಣ ಒಂದು ರೀತಿ ಕತ್ತಲಲ್ಲಿ ತೇಲಿದಂತೆ. ನೀವು ಹಗಲು ರೈಲಿನಲ್ಲಿ ಒಮ್ಮೆ ಪ್ರಯಾಣಿಸಿದರೆ ಮತ್ತಷ್ಟು ಹೊಸತು ಕಾಣಸಿಗುತ್ತದೆ...

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಸಂದೀಪ್ ಕಾಮತ್,

ಥ್ಯಾಂಕ್ಸ್...

shivu.k said...

ಭಾಶೇ ಮೇಡಮ್,

ಗೋಲ್ಡನ್ ಚಾರಿಯೇಟ್ ನಲ್ಲಿ ನನ್ನ ಫೋಟೊಗ್ರಫಿಗೆ ಕೆಲಸ ಸಿಕ್ಕರೆ ನಾನು ಧನ್ಯ. ನನ್ನ ವರ್ಕ್ ನೋಡಲು ಕರೆದಿದ್ದಾರೆ. ಹೋಗಬೇಕಿದೆ. ನಿಮ್ಮ ಆರೈಕೆಗೆ ಧನ್ಯವಾದಗಳು.

ಪ್ರಯಾಣ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ನೀವು ಹೇಳಿದಂತೆ ನಿಮಗೆ ಮೇಲ್ ಕಳಿಸುತ್ತೇನೆ..

shivu.k said...

ಚೈತ್ರಿಕಾ,

ನನ್ನ ಉದ್ದೇಶ ಪ್ರಯಾಣದ ಅನುಭವವನ್ನು ಕೊಡುವುದೇ ಆದರೂ ಇಂಥ ಅನುಭವ ಸಿಗಲು ಅಲ್ಲಿನ ಕೆಲಸಗಾರರು ಅದೆಷ್ಟು ಕಷ್ಟಪಟ್ಟಿರಬಹುದು ಅಲ್ವಾ...ಅದಕ್ಕೇ ಅವರ ಕಡೆಗೂ ನನ್ನ ಕ್ಯಾಮೆರಾ ಗಮನ ಹೋಗಿದೆ...

ಚಿತ್ರ ಲೇಖನವನ್ನು ಮೆಚ್ಚಿದ್ದೀರಿ. ಧನ್ಯವಾದಗಳು.

shivu.k said...

ಸೀತಾರಾಂ ಸರ್,

ಪ್ರತಿಯೊಂದು ಪ್ರಯಾಣದಲ್ಲೂ ವಿಶೇಷವೇನಾದರೂ ಇರುತ್ತದೆಯೋ ಅಂಥ ಗಮನಿಸುವುದರಲ್ಲಿ ಒಂಥರ ಥ್ರಿಲ್ ಇದೆ ಸರ್. ನಾನು ಅನುಭವಿಸಿದ್ದನ್ನೂ ನೀವು enjoy ಮಾಡಿದರೆ ನನ್ನ ಪ್ರಯತ್ನ ಸಾರ್ಥಕ.

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್.

shivu.k said...

ಸಾಗರಿ ಮೇಡಮ್,

ನೀವು ಹೇಳುವುದು ಸರಿ. ರೈಲಿನಲ್ಲಿ ಸಿಗುವ ಅರಾಮಧಾಯಕ, ಮಜ ಬಸ್ಸಿನಲ್ಲಿ ಸಿಗುವುದಿಲ್ಲ. ನನ್ನ ಶ್ರೀಮತಿಯಂತೂ ರೈಲು ಎಂದರೆ ಎಲ್ಲಿಗಾದರೂ ಹೊರಟು ನಿಲ್ಲುವಳು. ಬಸ್ಸು ಅಂದರೆ ಅಷ್ಟಕಷ್ಟೆ. ಚಿತ್ರ ಲೇಖನವನ್ನು ಮೆಚ್ಚಿದಕ್ಕೆ ಧನ್ಯವಾದಗಳು.

shivu.k said...

ಸುಬ್ರಮಣ್ಯ ಸರ್,

ಧನ್ಯವಾದಗಳು.

shivu.k said...

ಪಾಲಚಂದ್ರ,

ಬಿಕ್ಷುಕಿಯ ಚಿತ್ರವನ್ನು ಅನೇಕ ಕೋನಗಳಲ್ಲಿ ಸೆರೆಯಿಡಿದಿದ್ದೇನೆ. ಕಲರ್ ನಲ್ಲಿ ಇದೊಂದು ರೀತಿಯ ಕಾಂಪೋಸಿಂಗ್.
ನನಗೂ ಈ ದಾರಿಯಲ್ಲಿ ಟ್ರಕ್ಕಿಂಗ್ ಹೋಗಬೇಕೆನ್ನುವುದು ಆಸೆಯಿತ್ತು. ಗೆಳೆಯರು ಅನೇಕ ಬಾರಿ ಕರೆದರೂ ನಾನು ಹೋಗಲಾಗಲಿಲ್ಲ. ಅಂಥ ಅನುಭವವನ್ನು ಮಿಸ್ ಮಾಡಿಕೊಂಡಿದ್ದೇನೆ. ನಿಮ್ಮ ಅನುಭವವನ್ನು ಬರೆಯಿರಿ..
ಧನ್ಯವಾದಗಳು.

shivu.k said...

ನಮ್ಮೊಳಗೊಬ್ಬ ಬಾಲು ಸರ್,

ನೀವು ನನ್ನ ಪ್ರತಿ ಲೇಖನಕ್ಕೂ ಸಿಕ್ಸರ್, ಬೌಂಡರಿ ಅಂತ ಹೊಗಳುತ್ತಿದ್ದರೆ ನಾನು ಹಿಗ್ಗಿ ಹೀರೇಕಾಯಿಯಾಗಿಬಿಡುತ್ತೇನೇನೋ ಅನ್ನುವ ಭಯ. ಆದರೂ ನಿಮ್ಮ ಮೆಚ್ಚಿಗೆ ನನ್ನಲ್ಲಿ ಸ್ಪೂರ್ತಿ ತುಂಬುವುದಂತೂ ನಿಜ...

ಧನ್ಯವಾದಗಳು.

shivu.k said...

ಸುಧೇಶ್,

ಪ್ರಯಾಣದ ಅನುಭವವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

ನೀವು ಬ್ಯಾಚುಲರ್ಸ್ ಆಗಿರುವಾಗಲೇ ಒಮ್ಮೆ ಹೋಗಿಬಿಡಿ.ಅದರ ಅನುಭವವೇ ಬೇರೆ. ಮದುವೆಯಾದಮೇಲೆ ನಿಮ್ಮ ಶ್ರೀಮತಿಯವರು ನಿಮ್ಮನ್ನು ರೈಲಿನಲ್ಲಿ ಸುಲಭವಾಗಿ ಓಡಾಡಲು ಬಿಡುವುದಿಲ್ಲವೆಂದು ನನ್ನ ಅನಿಸಿಕೆ.[ನನ್ನ ಅನುಭವ]

shivu.k said...

ಉಮೇಶ್ ದೇಸಾಯಿ ಸರ್,

ಪ್ರಯಾಣದ ಅನುಭವದ ಸವಿಯನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್..

shivu.k said...

ಮನಸು ಮೇಡಮ್,

ಫೋಟೊಗಳು ಮತ್ತು ಲೇಖನವನ್ನು ಮೆಚ್ಚಿ ಹೊಗಳಿದ್ದೀರಿ..ಥ್ಯಾಂಕ್ಸ್...ನಿಮ್ಮ ಮರಳ ಮಲ್ಲಿಗೆಯಲ್ಲಿ ನನ್ನ ಪರಿಚಯ ಮತ್ತು ಫೋಟೊ ತುಂಬಾ ಚೆನ್ನಾಗಿ ಹಾಕಿದ್ದೀರಿ..ಅದಕ್ಕೂ ಮತ್ತೊಮ್ಮೆ ಧನ್ಯವಾದಗಳು.

shivu.k said...

ಜ್ಞಾನಾರ್ಪಣಮಸ್ತು,

ಮನಸಾರೆ ಚಿತ್ರವನ್ನು ನೋಡಿದ್ಡೇನೆ. ಅದ್ರೆ ಅದರಲ್ಲಿ ನೀವು ಹೇಳಿದ ದೃಶ್ಯ ನೆನಪಿಗೆ ಬರುತ್ತಿಲ್ಲ. ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...

shivu.k said...

ಗುರುಮೂರ್ತಿ ಹೆಗಡೆ ಸರ್,

ಈ ಪ್ರಯಾಣದಲ್ಲಿ ನನ್ನ ಸಂಶೋಧನೆಯೇನು ಇಲ್ಲ ಸರ್...ಅನುಭವವನ್ನು ಹೀಗೆ ಹಂಚಿಕೊಳ್ಳುತ್ತಿದ್ದೇನೆ..ನಿಮ್ಮ ಡೆನ್ಮಾರ್ಕ್ ಪ್ರಯಾಣದ ಫೋಟೊಗಳು ಮತ್ತು ಅನುಭವ ತುಂಭಾ ಚೆನ್ನಾಗಿವೆ.

ಧನ್ಯವಾದಗಳು.

shivu.k said...

ದಿನಕರ್ ಸರ್,

ರೈಲು ಪ್ರಯಾಣದಲ್ಲಿ ನಮ್ಮ ಜೊತೆ ಇದ್ದಹಾಗೆ ನಿಮಗೆ ಅನ್ನಿಸಿದೆಯಲ್ಲವೇ...ನನಗೂ ಅದೇ ಉದ್ದೇಶವಿತ್ತು. ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

jithendra hindumane said...

ಶಿವು ಸರ್‍, ಲೇಖನ ಚಿನ್ನಾಗಿ ಮೂಡಿ ಬಂದಿದೆ.
ಫೋಟೋಗಳು ಅದ್ಭುತವಾಗಿವೆ.

ದೀಪಸ್ಮಿತಾ said...

ಸುಂದರ ಚಿತ್ರಗಳು. ಕಿಟಕಿಯ ಹೊರಗೆ ತೆಗೆಯುವುದು ಕಷ್ಟಕರ ಹಾಗೂ ಅಪಾಯಕಾರಿ. ಸಕತ್ತಾದ ಚಿತ್ರ ಮತ್ತು ಬರಹ

shivu.k said...

ಜಿತೇಂದ್ರ ಸರ್,

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಕುಲದೀಪ್ ಸರ್,

ಹೌದು. ಖಂಡಿತ ಕಿಟಕಿಯ ಹೊರಗೆ ತಲೆಹಾಕಿ ಮೂರು ಕೆಜಿ ತೂಕದ ಕ್ಯಾಮೆರಾ ಮತ್ತು ಲೆನ್ಸ್ ಹೊತ್ತು ಫೋಟೊ ತೆಗೆಯುವುದು ಅಪಾಯಕಾರಿ. ಆದ್ರೂ ಈ ಕುತೂಹಲವೆನ್ನುವುದು ಎಲ್ಲವನ್ನು ಮಾಡಿಸಿಬಿಡುತ್ತದೆ. ಅದರ ಪಲಿತಾಂಶವೇ ಇದು...

ಧನ್ಯವಾದಗಳು.

ವನಿತಾ / Vanitha said...

ಶಿವು, ಫೋಟೋ-ಲೇಖನ ಎರಡೂ ಚೆನ್ನಾಗಿವೆ

shivu.k said...

ವನಿತಾ,

ಥ್ಯಾಂಕ್ಸ್..

rukminimalanisarga.blogspot.com said...

ಶಿವು ಅವರೆ
೨ ಕಂತನ್ನು ಓದಿದೆ. ಚೆನ್ನಾಗಿದೆ ಲೇಖನ ಚಿತ್ರಗಳು.

shivu.k said...

ಮಾಲಾ ಮೇಡಮ್,

ಥ್ಯಾಂಕ್ಸ್...

ಚಿತ್ರಾ said...

ಶಿವೂ,
ಎರಡು ಕಂತುಗಳನ್ನು ಒಟ್ಟಿಗೆ ಓದಿದೆ. ತುಂಬಾ ಸುಂದರವಾಗಿ ಬಂದಿದೆ ಚಿತ್ರ ಲೇಖನ ! ಮುಂಬಯಿಯಿಂದ ಕೊಂಕಣ ರೈಲ್ವೆ ಯಲ್ಲಿ ಪ್ರಯಾಣಿಸುವಾಗ ಕೂಡ ಇಂಥದ್ದೇ ಅದ್ಭುತ ಅನುಭವವಾಗುತ್ತದೆ . ಅಷ್ಟೇ ಅಲ್ಲಾ , ಪುಣೆಯಿಂದ ಮುಂಬಯಿಗೆ ' express way " ಯಲ್ಲಿ ಹೋಗುವಾಗ ಕೂಡ ಸಿಗುವ ಕಿ.ಮೀ ಉದ್ದದ ಸುರಂಗಗಳು, ಮತ್ತು ರಮಣೀಯ ದೃಶ್ಯಗಳು ಹೀಗೇ ಮನಸೆಳೆಯುತ್ತವೆ !

Snow White said...

lekhana mattu chitragalu eradu tumba chennagide sir :):)

Pradeep said...

ಚೆನ್ನಾಗಿದೆ ಸಾರ್!!!! ಅಂದ ಹಾಗೆ, ಮಂಗಳೂರು-ಮುಂಬೈ ದಾರಿಯಲ್ಲೂ ಒಮ್ಮೆ ರೈಲು ಪ್ರಯಾಣ ಮಾಡಿ ನೋಡಿ! :-)

ಬಾಲು ಸಾಯಿಮನೆ said...

ಶಿವು,
ಪೋಟೋ, ಬರಹ ತುಂಬಾ ಚನ್ನಾಗಿದೆ.
93ರಲ್ಲಿ ನಾನೂ ಎಡಕುಮೇರಿಯಿಂದ ಸಿರಿಬಾಗಿಲಿನವರೆಗೆ ಈ ರೈಲು ಮಾರ್ಗದಲ್ಲಿ ಸ್ನೇಹಿತರೊಂದಿಗೆ, ನಡೆದುಹೋಗಿದ್ದೆ. ಅದ್ಭುತ ನಿಸರ್ಗ!
ಮೊದಲ ತಿಂಗಳ ಪಗಾರಿನಲ್ಲಿ, 550 ರೂ ಕೊಟ್ಟು ಖರೀದಿಸಿದ ಕ್ಯಾಮರಾದಲ್ಲಿ ಎರಡು ರೋಲ್ ಆಗುವಷ್ಟು ಪೊಟೋ ಹೊಡೆದಿದ್ದೆ. ಎಷ್ಟು ಚೆನ್ನಾಗಿತ್ತು! ಈಗ ಆ ಫೋಟೋಗಳು, Rollಗಳೆಲ್ಲ ಥಂಡಿ ಹಿಡಿದು ಮಸುಕಾಗಿದೆ; ನೆನಪೂ ಸಹ!
ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.

shivu.k said...

ಚಿತ್ರ ಮೇಡಮ್,

ಎರಡು ಲೇಖನವನ್ನು ಒಟ್ಟಿಗೆ ಓದಿಬಿಟ್ಟರೆ ಆಗ ರೈಲಿನಿಂದ ಎಲ್ಲೂ ಇಳಿಯದ ಹಾಗೆ ಪ್ರಯಾಣಿಸಿದ ಅನುಭವವಾಗುತ್ತದೆ ಅಲ್ವಾ...ಥ್ಯಾಂಕ್ಸ್...ನೀವು ಹೇಳಿದ ಮಾರ್ಗದಲ್ಲೂ ಪ್ರಯಾಣಿಸಬೇಕು ಅನ್ನುವ ಆಸೆ ನನಗಿದೆ. ನೋಡೋಣ ಯಾವಾಗ ಕೈಗೂಡುತ್ತೋ ಗೊತ್ತಿಲ್ಲ...

ರೈಲು ಪ್ರಯಾಣವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

Snow white,

thanks....

shivu.k said...

ಪ್ರದೀಪ್,

ನನಗೆ ಮೊದಲಿಗೆ ಮಂಗಳೂರು-ಮುಂಬೈ ರೈಲು ಪ್ರಯಾಣದ ಮೊದಲು ಮಾಡಬೇಕೆನ್ನಿಸಿದರೂ ಅದು ಇನ್ನೂ ಕೈಗೂಡಿಲ್ಲ...ಮುಂದೆ ಸಾಧ್ಯವಾದರೆ ಮಾಡಬೇಕು. ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಬಾಲು ಸಾಯಿಮನೆ ಸರ್,


ನಿಮ್ಮಂತೆ ಅನೇಕರು ಎಡಕುಮೇರಿ ಟ್ರಕ್ಕಿಂಗ್ ಅನುಭವ ಹಂಚಿಕೊಂಡಿದ್ದಾರೆ. ಆಗಿನ ಅನುಭವವೇ ವಿಭಿನ್ನ ಅಲ್ವಾ...ಈಗಿನ ಕೆಲಸದ ಒತ್ತಡದಲ್ಲಿ ನಮಗೆ ಎಲ್ಲಾ ಅನುಕೂಲವಿದ್ದರೂ ಕೂಡ ಎಲ್ಲೂ ಸರಿಯಾಗಿ ಹೋಗಲಾಗುತ್ತಿಲ್ಲ ನೋಡಿ. ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಹರೀಶ ಮಾಂಬಾಡಿ said...

tumbaa chennagittu nimma lekana mattu photo

shivu.k said...

ಹರೀಶ್ ಮಾಂಬಾಡಿ,

ತುಂಬಾ ಧನ್ಯವಾದಗಳು. ಹೀಗೆ ಬರುತ್ತಿರಿ...