Monday, May 3, 2010

ನಮಗೆ ಅನ್ಯಾಯವಾಗುತ್ತಿದೆ....


"ಸ್ವಾಮಿ ನೀವು ನಮಗೆ ಅನ್ಯಾಯ ಮಾಡುತ್ತಿದ್ದೀರಿ, ನಿಮ್ಮ ಪಕ್ಷಪಾತತನ ಹೆಚ್ಚಾಗುತ್ತಿದೆ"

ಮಾತನ್ನು ಕೇಳಿ ಸುತ್ತ ನೆರೆದಿದ್ದವರಿಗೆಲ್ಲಾ ಒಂದು ಕ್ಷಣ ಶಾಕ್ ಆಗಿತ್ತು.

ಇಷ್ಟಕ್ಕೂ ಈ ಮಾತನ್ನು ಹೇಳಿದ್ದು ಲಕ್ಷಾಂತರ ಮರಗಳ ಪರವಾಗಿ ಒಂದು ಅಂಗವಿಕಲ ಮರ. ಅದೊಂದು ದೊಡ್ಡ ಸಭೆ.

ಆ ಸಭೆಯಲ್ಲಿ ನೆರೆದಿದ್ದವರೆಲ್ಲಾ ಮಹಾನ್ ಘಟಾನುಘಟಿಗಳೇ. ಒಂದು ಕಡೇ ನೀರು ನಿಂತಿದ್ದರೇ, ಅದರ ಪಕ್ಕದಲ್ಲೇ ಗಾಳಿ ಕಂಡರೂ ಕಾಣದ ಹಾಗೆ ತೇಲುತ್ತಾ ನಿಲ್ಲುತ್ತಾ.. ಕುಳಿತಿತ್ತು. ಭೂಮಿಯೂ ನೆಲದ ಮೇಲೆ ಕುಳಿತಿದ್ದರೇ, ಅದರ ಮೇಲೆ ಅಕಾಶ ನಿಂತಿತ್ತು. ಅವೆರಡರ ನಡುವೆ ಶಾಂತವಾಗಿ ಕುಳಿತಿದ್ದ ಸಮುದ್ರ ಮರಗಳ ಅಹ್ವಾನದ ಮೇರೆಗೆ ಈ ಸಭೆಗೆ ಬಂದಿತ್ತು. ಇಷ್ಟಕ್ಕೂ ಈ ಸಭೆಯನ್ನು ಕರೆದಿದ್ದು ಮರಗಳು. ಇಡೀ ಭೂಮಿಯ ಮರಗಳೆಲ್ಲಾ ತಮಗೆ ಅನ್ಯಾಯವಾಗುತ್ತಿದೆಯೆಂದು, ಹೀಗೆ ಆದರೆ ನಮಗೆ ಉಳಿಗಾಲವಿಲ್ಲ, ನಮಗೆ ನ್ಯಾಯ ದೊರಕಿಸಿಕೊಡಿ ಅಂತ ನ್ಯಾಯ ಕೇಳಲು ಬಂದಿದ್ದವು. ಮರಗಳಿಗೆ ನ್ಯಾಯ ದೊರಕುತ್ತದೆಯೋ ಇಲ್ಲವೇ ನೋಡೋಣವೆಂದು ಭೂಮಿಯ ಪಂಚಭೂತಗಳೂ ಸೇರಿದಂತೆ ಎಲ್ಲವು ಸೇರಿದ್ದವು.

ಪ್ರತಿಯೊಂದು ಆಗುಹೋಗುಗಳನ್ನು ನಿಯಂತ್ರಿಸಿ ಇಡೀ ಪ್ರಪಂಚವನ್ನು ಸುಸ್ತಿತಿಯಲ್ಲಿಡುವ ಜವಾಬ್ದಾರಿಯನ್ನು ಹೊತ್ತಿದ್ದ ಪ್ರಕೃತಿ ದೇವತೆ ಅವತ್ತು ನ್ಯಾಯಾದೀಶನ ಸ್ಥಾನವನ್ನು ಅಲಂಕರಿಸಿತ್ತು. ಸಹಜವಾಗಿ ಯಾರಿಗೂ ಕಾಣದ ಹಾಗೆ ಇರುತ್ತಿದ್ದ ಪ್ರಕೃತಿ ದೇವತೆ ಅವತ್ತು ಮರಗಳು ಸಲ್ಲಿಸಿದ್ದ ಮನವಿಗಾಗಿ ಪ್ರತ್ಯಕ್ಷವಾಗಿತ್ತು.

"ಎಲೈ ಮರವೇ, ನೀನು ನೇರವಾಗಿ ನಿನ್ನ ದೂರು ಸಲ್ಲಿಸುವುದು ಬಿಟ್ಟು ನಮ್ಮನ್ನು ಅಪಾದಿಸುವುದು ಸರಿಯೇ?" ಪ್ರಕೃತಿ ದೇವತೆ ಕೇಳಿತು.

"ಮಹಾಸ್ವಾಮಿ, ನೀವೇ ನೋಡಿ, ಕಳೆದ ವಾರ ಬೆಂಗಳೂರಿನಲ್ಲಿ ಜೋರು ಮಳೆ ಬಿತ್ತಲ್ಲ, ಆಗ ಹೆಚ್ಚು ಬಲಿಯಾಗಿದ್ದು ನಾವು. ಬೆಂಗಳೂರಿನ ಪ್ರತಿಯೊಂದು ರಸ್ತೆಯಲ್ಲಿಯೂ ನಮ್ಮನ್ನು ಉರುಳಿಸಿ ಸಾಯಿಸಲಾಗಿತ್ತು. ಇಷ್ಟೇ ಅಲ್ಲದೇ ಇತ್ತೀಚೆಗೆ ನಡೆಯುತ್ತಿರುವ ಪ್ರತಿಯೊಂದು ವಿಕೋಪಕ್ಕೂ ಈ ಪ್ರಪಂಚದಲ್ಲಿ ನಾವು ಬಲಿಪಶುಗಳಾಗುತ್ತಿದ್ದೇವೆ, ನೀವೇ ನೋಡಿ ಬೆಂಗಳೂರಿನ ಮೆಟ್ರೋ ಸಲುವಾಗಿ, ರಸ್ತೆ ಅಗಲೀಕರಣಕ್ಕಾಗಿ, ಭೂಸ್ವಾಧೀನಕ್ಕಾಗಿ, ಪ್ಲೇಓವರಿಗಾಗಿ".........ಹೀಗೇ ರಾಜ್ಯದ, ದೇಶದ ವಿದೇಶಗಳಲ್ಲಿನ ವಿಧ್ಯಾಮಾನಗಳನ್ನು ಚಿತ್ರಗಳ ಸಹಿತ ಅಂಕಿ ಅಂಶ ನೀಡಿತು ಮರ.

ಅದನ್ನು ನೋಡಿದ ಪ್ರಕೃತಿ ದೇವತೆಗೆ ನಿಜಕ್ಕೂ ಅಶ್ಚರ್ಯ, ದಿಗಿಲು, ಒಟ್ಟಿಗೆ ಆಯಿತು.

"ನಿಮಗೆ ಇಡೀ ಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸುವ ಶಕ್ತಿ ಇದೆ. ಎಲ್ಲೂ ಹೆಚ್ಚು ಕಡಿಮೆಯಾಗದಂತೆ ಸಮತೂಕ ಮಾಡಿಕೊಂಡು ಈ ಜಗತ್ತನ್ನು ಸುಸ್ತಿತಿಯಲ್ಲಿಡುವ ಜವಾಬ್ದಾರಿ ನಿಮ್ಮದು. ಒಂದು ಹುಲ್ಲು ಕಡ್ಡಿಯೂ ಕೂಡ ನಿಮ್ಮ ಅನುಮತಿಯಿಲ್ಲದೇ ಅಲುಗಾಡುವುದಿಲ್ಲ. ಒಂದು ಹುಳು ಪ್ಯೂಪ ಸೇರಿ ಸುಂದರ ಚಿಟ್ಟೆಯಾಗಿ ಬರುವಂತ ಅದ್ಬುತವನ್ನು, ಚಳಿರಾತ್ರಿಯಲ್ಲಿ ಗಾಳಿಯಲ್ಲಿರುವ ಕೋಟ್ಯಾಂತರ ನೀರಿನ ಕಣಗಳನ್ನು ಕತ್ತಲಲ್ಲಿ ಅಷ್ಟಷ್ಟೂ ಒಟ್ಟುಗೂಡಿಸಿ ಒಂದೊಂದೇ ಎಲೆಯ ಮೇಲೆ ನಿದಾನವಾಗಿ ಕತ್ತಲೆಯಲ್ಲೇ ಒಂದೊಂದು ಎಲೆಯ ಮೇಲೆ ಕೂರಿಸಿ, ಮುಂಜಾನೆಗೆ ಸೂರ್ಯನಿಂದ ಅವುಗಳ ಮೇಲೆ ತಿಳಿಯಾದ ಹದವಾದ ತಂಪು ಕಿರಣಗಳಿಂದ ಬಿಸಿಲ ಕೋಲುಗಳನ್ನು ಸೃಷ್ಟಿಸಿ, ನೋಡುಗರ ಕಣ್ಣಿಗೆ ಅದಮ್ಯ ಸೌಂದರ್ಯವನ್ನು ಸೃಷ್ಟಿಸುತ್ತೀರಿ. ಆದ್ರೆ ನಮ್ಮ ವಿಚಾರದಲ್ಲಿ ಏಕೆ ಹೀಗೆ ಅನ್ಯಾಯವಾಗುತ್ತಿದೆ ಮಹಾಸ್ವಾಮಿ?"

ಪ್ರಕೃತಿ ದೇವತೆ ಮರದ ದೂರನ್ನು ಪರಿಶೀಲಿಸಿದಾಗ ಇದೆಲ್ಲದಕ್ಕೂ ಕಾರಣ ಮಳೆ. ಅದರ ಕಡೆಗೆ ತಿರುಗಿ,


"ಮಳೆಯೇ ನಿನ್ನ ಕೆಲಸದಲ್ಲಿ ವ್ಯತ್ಯಾಸವಾಗಿರುವುದರಿಂದ ಈ ಅಚಾತುರ್ಯ ನಡೆದಿದೆಯೆಂದು ನನ್ನ ಅಭಿಪ್ರಾಯ. ಇದಕ್ಕೆ ನಿನ್ನ ಉತ್ತರವೇನು?" ಮಳೆಯನ್ನು ಉದ್ದೇಶಿಸಿ ಕೇಳಿತು ಪ್ರಕೃತಿ ದೇವತೆ.

"ಮಹಾಸ್ವಾಮಿ ಇದಕ್ಕೆ ಖಂಡಿತನಾನು ಕಾರಣನಲ್ಲ, ನಾನು ನನ್ನ ನಿತ್ಯ ಕೆಲಸವನ್ನು ಸರಿಯಾಗಿ ನಿಮ್ಮ ಆದೇಶದಂತೆ ಸರಿಯಾಗಿ ಮಾಡುತ್ತಿದ್ದೇನೆ. ಆದರೂ ಕೆಲವೊಮ್ಮೆ ನನ್ನ ಕೈ ಮೀರಿ ಕೆಲವು ಕಡೇ ಹೆಚ್ಚು ಸುರಿದಾಗ ಹೀಗೆ ಪ್ರವಾಹವಾಗುವುದುಂಟು, ಈ ಮರಗಳು ಬುಡಮೇಲಾಗಿ ಸಾಯುವುದುಂಟು. ಇದನ್ನೆಲ್ಲಾ ನಾನೇ ಮಾಡಿದರೂ ಇದರಲ್ಲಿ ನನ್ನ ಪಾತ್ರವೇನು ಇದಕ್ಕೆಲ್ಲಾ ಕಾರಣ ಈ ಮೋಡಗಳು." ಮೋಡಗಳ ಕಡೆ ಕೈತೋರಿಸಿ ತನ್ನ ವಾದ ಮಂಡಿಸಿತು ಮಳೆ.

ಇದುವರೆಗೂ ಅರಾಮವಾಗಿ ತಮಾಷೆಯಾಗಿ ಮಾತಾಡಿಕೊಂಡಿದ್ದ ಮೋಡವೂ ತನ್ನ ಮೇಲೆ ಗೂಬೆ ಕೂರಿಸುತ್ತಿರುವ ಮಳೆಯ ಮೇಲೆ ಕೋಪ ಬಂದರೂ ಆ ಸಭೆಯಲ್ಲಿ ಅದನ್ನು ತೋರ್ಪಡಿಸುವಂತಿರಲಿಲ್ಲ. ಆದರೂ ಈಗ ಆಗಿರುವ ತಪ್ಪಿಗೆ ಕಾರಣ ನಾನೆಂದು ಎಲ್ಲರೂ ಹೇಳುತ್ತಿದ್ದಾರೆ. ನಾನೇನು ಮಾತಾಡದಿದ್ದಲ್ಲಿ ನಾನೇ ತಪ್ಪಿತಸ್ಥನಾಗಿಬಿಡುತ್ತೇನೆ. ಹಾಗೆ ಪ್ರಾಮಾಣಿಕವಾಗಿ ನೋಡಿದರೆ ನಾನೂ ಈ ಅವಾಂತರಕ್ಕೆ ಕಾರಣನಲ್ಲವಲ್ಲ? ನಾನು ಹೇಗೆ ಇದಕ್ಕೆಲ್ಲಾ ಕಾರಣನಲ್ಲವೆಂದು ಇಲ್ಲಿ ವಿವರಿಸಬೇಕು ಅಂದುಕೊಂಡು,

"ಮಹಾಸ್ವಾಮಿ, ನಾನು ನಿಮ್ಮ ಆಜ್ಞೆಯಂತೆ ಸೂರ್ಯನಬೆಳಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾ, ತಿಳಿಮೋಡ, ಬೆಳ್ಳಿಮೋಡ,......ಹೀಗೆ ಸೌಂದರ್ಯವನ್ನು ಹೊಮ್ಮಿಸುತ್ತಾ ನೋಡುಗರ ಕಣ್ಣನ್ನು ಮನಸ್ಸನ್ನು ಸೂರೆಗೊಳ್ಳುತ್ತಿದ್ದೇನೆ. ಕತೆ ಕಾದಂಬರಿಕಾರರ, ಕವಿಗಳ, ಛಾಯಾಚಿತ್ರಕಾರರ, ಚಿತ್ರಕಲೆಗಾರರ ಕಲೆಗಳಿಗೆ ಸ್ಪೂರ್ತಿ ನೀಡುತ್ತಾ, ಅವರಿಂದ ಅದ್ಭುತ ಕಲಾಕೃತಿ ರಚನೆಗೆ ಕಾರಣನಾಗಿದ್ದೇನೆ. ಅಷ್ಟೇ ಅಲ್ಲದೇ ನೀವು ಹೇಳಿದ ಕಡೆ ಕರಿಮೋಡವಾಗಿ ಸಾಲುಗಟ್ಟಿ ಈ ಮಳೆ ಬೇಕಾದಷ್ಟು ಚೆನ್ನಾಗಿ ಸುರಿಯಲು ಅನುಕೂಲ ಮಾಡಿಕೊಟ್ಟಿದ್ದೇನೆ. ಅಂತದ್ದರಲ್ಲಿ ಈ ಮಳೆ ನನ್ನ ಮೇಲೆ ತಪ್ಪು ಹಾಕಿದೆ. ಆದರೂ ಈಗ ಈತನ ಅಭಿಪ್ರಾಯದಂತೆ ನನ್ನ ಕಡೆ ತಪ್ಪಾಗಿದೆಯೆಂದು ಅನ್ನಿಸಿದರೆ ಅದಕ್ಕೆ ಕಾರಣ ನಾನಲ್ಲ. ಈ ಸಮುದ್ರವೇ ಕಾರಣ" ತಪ್ಪನ್ನು ಸಮುದ್ರ ಮೇಲೆ ಹೊರಿಸಿ ಸುಮ್ಮನಾಯಿತು ಮೋಡ.

ಈಗ ಎಲ್ಲರ ಗಮನವೂ ಸಮುದ್ರದ ಕಡೆಗೆ ಬಿತ್ತು. ಶಾಂತವಾಗಿ ಸುಮ್ಮನೆ ಕುಳಿತಿದ್ದ ಸಮುದ್ರವೂ ದಿಡೀರ್ ಬಂದ ಹೊರೆಯಿಂದ ಈಗ ತಪ್ಪಿಸಿಕೊಳ್ಳಲೇಬೇಕಿತ್ತು.

"ಮಹಾಸ್ವಾಮಿ, ಇಲ್ಲಿ ತಮ್ಮ ತಪ್ಪುಗಳನ್ನು ಹೀಗೆ ಒಬ್ಬರ ಮೇಲೆ ಒಬ್ಬರೂ ಹೊರಿಸುತ್ತಾ ಈಗ ನನ್ನ ತಲೆಗೆ ಕಟ್ಟಿದ್ದಾರೆ. ನಾನು ಪ್ರಪಂಚದಲ್ಲಿನ ಸಕಲ ಜಲಚರಗಳಿಗೂ ಆಸರೆ ನೀಡುತ್ತಾ, ವಿಶ್ವದೆಲ್ಲೆಡೆ ಹರಡಿಕೊಂಡು ಸಾವಿರಾರು ಹಡಗು, ದೋಣಿಗಳು, ಸರಾಗವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಜೀವನದುದ್ದಕ್ಕೂ ಶ್ರಮಿಸುತ್ತಿದ್ದೇನೆ. ನನ್ನೊಳಗೆ ಸೇರಿಕೊಂಡ ನದಿಗಳ ನೀರನ್ನು ಆಗಾಗ ಆವಿರೂಪದಲ್ಲಿ ಸೃಷ್ಟಿಸಿ ಆಕಾಶಕ್ಕೆ ಕಳಿಸಿ ಮೋಡಗಳಾಗುವುದಕ್ಕೆ ಸಹಕರಿಸುತ್ತಿದ್ದೇನೆ. ನಾನು ಈ ಕೆಲಸವನ್ನು ಮಾಡಿದ ಮೇಲೆ ಅದನ್ನು ಮೇಲೆ ಸರಿಯಾದ ಸ್ಥಳಕ್ಕೆ ಕಳಿಸುವ ಜವಾಬ್ದಾರಿ ಈ ಗಾಳಿಯದು ಅದು ಸರಿಯಾಗಿ ಕೆಲಸ ಮಾಡದಿದ್ದ ಮೇಲೆ ಈ ರೀತಿ ಆಚಾತುರ್ಯವಾಗಿರಬಹುದು. ಆದ್ದರಿಂದ ನೀವು ಗಾಳಿಯನ್ನು ವಿಚಾರಿಸಿಕೊಳ್ಳುವುದು ಒಳ್ಳೆಯದು" ಅಂತ ತನ್ನ ವಾದವನ್ನು ಮಂಡಿಸಿತು.

ಇದು ನನ್ನ ಬುಡಕ್ಕೆ ಬರುತ್ತದೆಯೆಂದು ಸಿದ್ದನಾಗಿದ್ದ ಗಾಳಿಯೂ "ಮಹಾಸ್ವಾಮಿ ನಾನು ನನ್ನ ಕೆಲಸವನ್ನು ಸರಿಯಾಗಿಯೇ ನಿರ್ವಹಿಸುತ್ತಿದ್ದೇನೆ. ಆದರೆ ಈಗ್ಗೆ ಸುಮಾರು ಐವತ್ತು ವರ್ಷಗಳಿಂದ ನನ್ನನ್ನು ಈ ಮಾನವರು ಅದೆಷ್ಟು ಕಲುಷಿತಗೊಳಿಸಿದ್ದಾರೆಂದರೆ, ಅವರ ವಾಹನಗಳು, ಕಾರ್ಖಾನೆಗಳು....ಇತ್ಯಾದಿಗಳಿಂದ ಬಿಡುಗಡೆಯಾಗುವ ಹೊಗೆಯಲ್ಲಿ ಪ್ರತಿದಿನ ಟನ್‍ಗಟ್ಟಲೇ ಇಂಗಾಲವನ್ನು ನನ್ನೊಳಗೆ ಸೇರಿಸುತ್ತಿದ್ದಾರೆ. ಇದರಿಂದ ನನ್ನ ಆರೋಗ್ಯ ಸದಾ ಹದಗೆಟ್ಟು ನನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ ಸ್ವಾಮಿ,"

"ಗಾಳಿಯೂ ಹೇಳುವುದರಲ್ಲಿ ನೂರಕ್ಕೂ ನೂರರಷ್ಟು ಸತ್ಯವಿದೆ ಮಹಾಸ್ವಾಮಿ, ನಾವು ಕುಂಬಕರ್ಣನ ವಂಶದವರು. ನಿನ್ನ ಆಜ್ಞೆಯಂತೆ ನೂರಾರು ವರ್ಷಗಳಿಗೊಮ್ಮೆ ನಾವು ನಿದ್ರೆಯಿಂದ ನಿದಾನವಾಗಿ ಎದ್ದು, ಸಣ್ಣ ಪುಟ್ಟ ಆಘಾತಗಳನ್ನುಂಟು ಮಾಡಿ ಭೂತಾಯಿಯ ಸಮತೋಲನವನ್ನು ಕಾಪಾಡುತ್ತಿದ್ದೆವು. ಆದ್ರೆ ಈ ಮನುಷ್ಯರು ವಾತಾವರಣವನ್ನು ಎಷ್ಟು ಬಿಸಿಗೊಳಿಸುತ್ತಿದ್ದಾರೆಂದರೆ, ಅಂಟಾರ್ಟಿಕದಲ್ಲಿ, ಹಿಮಪ್ರದೇಶದಲ್ಲಿ, ಹಿಮಾಲಯದಲ್ಲಿನ ಹಿಮದ ನೀರ್ಗಲ್ಲುಗಳು ಕರಗುತ್ತಿವೆ, ಮತ್ತಷ್ಟು ನೀರು ಸಮುದ್ರಕ್ಕೆ ಸೇರಿ ಅನೇಕ ಭೂಭಾಗಗಳು ಮುಳುಗುತ್ತಿವೆ, ಈ ಬಿಸಿಯಿಂದಾಗಿ ಸಮುದ್ರದ ಕೆಳಗೆ, ಭೂಭಾಗದ ಒಳಗೆ ನೆಮ್ಮದಿಯಾಗಿ ನಿದ್ರಿಸುತ್ತಿರುವ ನಾವೆಲ್ಲಾ ಈ ಬಿಸಿಯಿಂದಾಗಿ ದಿಡೀರ್ ಅಂತ ಬೆಚ್ಚಿಬಿದ್ದು ಎದ್ದುಬಿಡುತ್ತೇವೆ. ಆಗ ನಮಗೆ ಗೊತ್ತಿಲ್ಲದ ಹಾಗೆ ಪ್ರಪಂಚದೆಲ್ಲೆಡೆ ಅಲ್ಲೋಲಕಲ್ಲೋಲವಾಗಿಬಿಡುತ್ತದೆ ಸ್ವಾಮಿ," ಅಲ್ಲಿಯವೆರೆಗೂ ಸುಮ್ಮನಿದ್ದ ಚಂಡಮಾರುತ, ಸುನಾಮಿಗಳು ತಮ್ಮ ಅಹವಾಲುಗಳನ್ನು ಸಲ್ಲಿಸಿದವು.


"ಹೌದು ಮಹಾಸ್ವಾಮಿ ಇದಕ್ಕೆಲ್ಲಾ ಕಾರಣ ಈ ಮನುಷ್ಯರು, ಹೆಣ್ಣು, ಹೊನ್ನು ಮಣ್ಣಿನ ಆಸೆಯಿಂದಾಗಿ ಎಲ್ಲಾ ಕಡೆ ಮರಗಳನ್ನು ಕತ್ತರಿಸುತ್ತಿದ್ದಾರೆ, ತಮ್ಮ ಅಧುನಿಕ ಬದುಕಿಗಾಗಿ ಇರುವ ನೀರನ್ನೆಲ್ಲಾ ಕಲುಷಿತಗೊಳಿಸುತ್ತಿದ್ದಾರೆ, ಗಾಳಿಗೆ ವಿಷಾನಿಲಗಳನ್ನು ಸೇರಿಸುತ್ತಿದ್ದಾರೆ. ಯಾವ ರೀತಿಯಿಂದಲೂ ಸಾಯಿಸಲಾಗದಂತ ಪ್ಲಾಸ್ಟಿಕನ್ನು ಟನ್‍ಗಟ್ಟಲೇ ತಯಾರಿಸುತ್ತಿದ್ದಾರೆ, ಇದಕ್ಕೆಲ್ಲಾ ಕಾರಣ ಈ ಮನಷ್ಯ, ಅವನ ದುರಾಸೆಗಳು, ಆಧುನಿಕ ಐಬೋಗಗಳು, ಎಲ್ಲವನ್ನೂ ಇವತ್ತೇ ಅನುಭವಿಸಿಬಿಡಬೇಕೆನ್ನುವ ದುರಾಸೆ............ಈ ಮನುಜನಿಂದಾಗಿಯೇ ನಾವೆಲ್ಲಾ ನಮ್ಮ ನಮ್ಮ ಕರ್ತವ್ಯಗಳನ್ನು ಅರೋಗ್ಯಕರವಾಗಿ ನಿರ್ವಹಿಸಲು ಆಗುತ್ತಿಲ್ಲ. ಅವನನ್ನು ಮಟ್ಟಹಾಕಬೇಕು" ಅಲ್ಲಿ ನೆರೆದಿದ್ದ ಎಲ್ಲವೂ ಒಕ್ಕೊರಲಿನಿಂದ ತಮ್ಮ ಮನವಿಯನ್ನು ಸಲ್ಲಿಸಿದವು.


ಸಭೆಯಲ್ಲಿ ಅಲ್ಲಿಯವರೆಗೆ ಎಲ್ಲರ ವಿಚಾರಗಳು, ತಪ್ಪುಗಳು, ಅಹವಾಲುಗಳು, ಮನವಿಗಳನ್ನು ಕೇಳುತ್ತಾ ಕುಳಿತಿದ್ದ ಪ್ರಕೃತಿ ದೇವತೆ, ಇದಕ್ಕೆಲ್ಲಾ ಕಾರಣ ಈ ನವರಸಗಳನ್ನು ಹೊಂದಿ, ನವಆಟಗಳನ್ನು ಆಡುತ್ತಾ ಮೆರೆಯುತ್ತಿರುವ ಮನುಜನೇ ಕಾರಣವೆಂದು ಗೊತ್ತಾದ ಮೇಲೆ ಚಿಂತಿಸತೊಡಗಿತು. ಇದಕ್ಕೆ ಪರಿಹಾರವೇನು? ಎಂದು ಯೋಚಿಸುತ್ತಿರುವಾಗಲೇ...ದೂರದಿಂದ ಕೂಗು ಬಂತು.

"ಮಹಾಸ್ವಾಮಿ, ಬೇಗನೇ ತಪ್ಪಿಸಿಕೊಳ್ಳಿ, ಇಲ್ಲದಿದ್ದರೇ ನಮಗೆ ಉಳಿಗಾಲವಿಲ್ಲ. ದೂರದಿಂದ ಅಣ್ವಸ್ತ್ರವೊಂದು ನಮ್ಮ ಸಭೆಯ ಕಡೆಗೆ ಹಾರಿಬರುತ್ತಿದೆ. ಅದನ್ನು ಕಂಡುಹಿಡಿದಿದ್ದು ಈ ಮನುಷ್ಯನೇ.....ನಾವೆಲ್ಲಾ ಈಗ ಓಡದಿದ್ದಲ್ಲಿ ನಾಶವಾಗಿಬಿಡುತ್ತೇವೆ.... ದೂರದಿಂದ ಕೂಗು ಕೇಳಿಬಂತು.

"ಆರೆರೆ....ಇದೇನಿದು, ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವ ನನಗೆ ಇದ್ಯಾವುದು ನನಗೆ ತಿಳಿಯದಂತಾ ಅಣ್ವಸ್ತ್ರ,? ಅದನ್ನು ನಿಯಂತ್ರಿಸಲು ನೀವೆಲ್ಲಾ ಸೇರಿ ಪ್ರಯತ್ನಿಸಿ," ಆಜ್ಞಾಪಿಸಿತು ಪ್ರಕೃತಿ ದೇವತೆ.

"ಇಲ್ಲ ಮಹಾಸ್ವಾಮಿ, ಇದು ನಮ್ಮ ಕೈಮೀರಿದ್ದು, ಏಕೆಂದರೆ ಅದನ್ನು ನಾವು ಸೃಷ್ಟಿಸಿದ್ದಲ್ಲ. ಈ ಮಾನವ ಸೃಷ್ಟಿಸಿದ್ದು. ಅದರ ಶಕ್ತಿ ನಮ್ಮಳತೆಯನ್ನು ಮೀರಿದ್ದು. ಅದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ" ಅಲ್ಲಿ ಸೇರಿದ್ದ, ಸಮುದ್ರ, ಮೋಡ, ಗಾಳಿ, ಮರಗಳು, ನೀರು, ಸುನಾಮಿ, ಚಂಡಮಾರುತ, ಆಕಾಶ, ಭೂಮಿ ಎಲ್ಲವೂ ಒಕ್ಕೊರಲಿನಿಂದ ಹೇಳಿದವು.

ಈ ಮಾತನ್ನು ಕೇಳಿ ಅದುವರೆಗೂ ಎಲ್ಲರ ಅಹವಾಲುಗಳನ್ನು ಕೇಳುತ್ತಿದ್ದ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ದೂರದಿಂದಲೇ ಅದನ್ನು ನಿಸ್ಕ್ರೀಯಗೊಳಿಸಲು ಪ್ರಯತ್ನಿಸಿತು. ಅದರ ಯಾವ ಶಕ್ತಿಯೂ ಕೂಡ ಅಣ್ವಸ್ತ್ರವನ್ನು ನಿಯಂತ್ರಿಸಲಾಗಲಿಲ್ಲ....ಕೊನೆಗೆ ನಿಸ್ಸಾಯಕನಾಗಿ ಸೋತು ನೋವು ವಿಷಾದದಿಂದ ಪ್ರಕೃತಿದೇವತೆ ಕಣ್ಮರೆಯಾಗಿಬಿಟ್ಟಿತು. ತಮ್ಮ ಒಡೆಯನೇ ಹೀಗೆ ಕಣ್ಮರೆಯಾಗಿ ತಪ್ಪಿಸಿಕೊಂಡಿದ್ದು ನೋಡಿ ದಿಗಿಲಿನಿಂದ ತಮ್ಮೆಡೆಗೆ ತಮ್ಮ ನಾಶಕ್ಕೆ ಬರುತ್ತಿರುವ ಆಣ್ವಸ್ತ್ರ, ರಾಸಾಯನಿಕ ಅಸ್ತ್ರಗಳನ್ನು ನೋಡುತ್ತಾ ಸಾವಿರಾರು ಮರಗಳು, ನೀರು ಗಾಳಿ, ಮೋಡ, ಸಾಗರ, ಮಳೆ, ಭೂಮಿ, ಆಕಾಶಗೆಳೆಲ್ಲಾ ಅನಾಥರಾಗಿ ನಿಂತುಬಿಟ್ಟವು.
[ಈ ಪುಟ್ಟ ಕತೆಯನ್ನು ವಿಶ್ವ ಭೂದಿನ ಆಚರಣೆ ಸಲುವಾಗಿ ಏಪ್ರಿಲ್ ೨೨ರಂದು ಬ್ಲಾಗಿಗೆ ಹಾಕಲು ಬರೆದಿದ್ದೆ. ಕಾರಣಾಂತರದಿಂದ ಬ್ಲಾಗಿಗೆ ಹಾಕಿರಲಿಲ್ಲ. ಈಗ ಬ್ಲಾಗಿಗೆ ಹಾಕಿದ್ದೇನೆ. ನೀವು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ...]

ಚಿತ್ರ ಮತ್ತು ಲೇಖನ
ಶಿವು.ಕೆ

39 comments:

Guruprasad said...

ಶಿವೂ,,
ಇದಕ್ಕೆ ನಾನೇನು ಹೆಚ್ಚಿನದನ್ನು ಹೇಳಲಾಗುವುದಿಲ್ಲ..... ಅದ್ಬುತ ಅಸ್ಟೇ...
ನನಗೂ ನಿಮ್ಮ ಹಾಗೆ ಪ್ರಕೃತಿಯ ಬಗ್ಗೆ ತುಂಬಾ ಕಾಳಜಿ ಇದೆ... ಆದರೆ... ಪ್ರಕೃತಿಯ ತರ ನಾನು ಮೌನವಾಗಿ ರೋದಿಸುತ್ತ ಇದ್ದೇನೆ...... ಕೈಲಾದ ಮಟ್ಟಿಗೆ ಸಣ್ಣ ಸಹಾಯ ಮಾಡ್ತಾ ಇದೇನೆ ಅಸ್ಟೇ.......
ನಿಮ್ಮ ಕಲ್ಪನಾ ಕತೆ .... ವಾಸ್ತವದ ಅಂಶ,,, ತುಂಬಾ ಚೆನ್ನಾಗಿ ಮೂಡಿ ಬಂದಿದೆ ಶಿವೂ.... ರಿಯಲಿ ವೆರಿ ನೈಸ್....

ಗುರು

sunaath said...

ಪ್ರಕೃತಿಯ ಅದ್ಭುತಗಳೂ ಸಹ ಮಾನವನ ಎದುರಿಗೆ ಸೋಲುವ ವಿಚಿತ್ರವನ್ನು ಸುಂದರವಾಗಿ ಚಿತ್ರಿಸಿದ್ದೀರಿ!

ಸುಧೇಶ್ ಶೆಟ್ಟಿ said...

hmmm...

idhannu odhuttiddare mundina baduku hEge e0du chinthe aagtha idhe :(

haudu... avattu Metro gaagi lal bhag ge kai haakittu sarakaara... e bhaariya vipareetha sekege adhu saha ondu kaaraNa irabahudu....

thumba chennagittu shivaNNa baraha... thumba aalochisi barediddeeri... panchaboothagaLa naduvina sambandavannu thumba chennagi vivarisiddeeri :)

Subrahmanya said...

ಪ್ರಕೃತಿಯೇ ಒಂದು ದಿನ ಎಲ್ಲವನ್ನೂ balance ಮಾಡಿಕೊಳ್ಳುತ್ತದೆ, ತನ್ನ ಪ್ರತಾಪವನ್ನು ತೋರುವುದರ ಮೂಲಕ. ಆಧುನಿಕ ಮನುಷ್ಯ ಎಲ್ಲವನ್ನೂ ನಿಯಂತ್ರಿಸಬಲ್ಲ ಎನ್ನುವ (ಕೆಲಕಾಲ!) , ಸೋಲಿಸಬಲ್ಲ ಎನ್ನುವುದನ್ನು ಚೆನ್ನಾಗಿ ಬರೆದಿದ್ದೀರಿ.

ಮನಸು said...

ಶಿವು ಸರ್,
ಒಳ್ಳೆಯ ವಿಷಯವನ್ನೇ ಮುಂದಿಟ್ಟಿದ್ದೀರಿ, ಈಗಷ್ಟೆ ನಾನು ನನ್ನ ಮನೆಯಿಂದ ಹೊರಡುವಾಗ ಅಲ್ಲಿದ್ದ ಮರಗಳನ್ನೇಲ್ಲಾ ಕಡಿದಿದ್ದರು ಅಯ್ಯೋ ಎಷ್ಟು ಚೆನ್ನಾಗಿತ್ತು ಯಾಕೆ ಕಡಿತಾ ಇದಾರೆ ಅಂತ ಬೇಸರ ಪಟ್ಟುಕೊಂಡೆ ಅಲ್ಲದೆ ನಮ್ಮೂರಲ್ಲೇ ಕಡಿತಾ ಇದ್ದರೂ ಈಗ ಇಲ್ಲು ಪ್ರಾರಂಭವಾಯ್ತ ಎಂದೆನಿಸಿತು..... "ಹಸಿರು ಜೀವಕೆ ಉಸಿರು" ಇದನ್ನ ನಾವು ಮರೆಯದೆ ಹಸಿರನ್ನ ಉಳಿಸಿ ಬೆಳೆಸಬೇಕು...ಪ್ರತಿ ಮನೆಯ ಮುಂದೆ ಒಂದು ಮರ ಬೆಳೆಸಿದರೆ ಸಾಕು.... ಎಷ್ಟೋ ಒಳ್ಳೆಯದಾಗುತ್ತದೆ ಅಲ್ಲವೆ.

ಕ್ಷಣ... ಚಿಂತನೆ... said...

ಶಿವು ಸರ್‍,
ಪ್ರಕೃತಿಯಲ್ಲಿನ ಅಸಮತೋಲನಕ್ಕೆ ಕಾರಣರಾರು ಎಂಬುದನ್ನು ಮುಂದಿಟ್ಟುಕೊಂಡು ಸಭೆಯನ್ನು ನಡೆಸಿದ್ದೀರಿ. ಕಲ್ಪನೆಯ ಮೂಸೆಯಲ್ಲಿ ಅದ್ದಿಬಂದಿದ್ದರೂ ನಿಜ ವಿಚಾರಕ್ಕೆ ಸಂಬಂಧಿಸಿದೆ ಎಂದು ಹೇಳಬಹುದು.

ತುಂಬಾ ಚೆನ್ನಾಗಿದೆ.

ಸ್ನೇಹದಿಂದ,

ಭಾಶೇ said...

ಇಂದಿನ ಗತಿಗಳನ್ನು ತುಂಬಾ ಚೆನ್ನಾಗಿ ಬರೆದಿದ್ದೀರ

ಚಿತ್ರಾ said...

ಶಿವೂ,
ತುಂಬಾ ಚೆನ್ನಾಗಿ ಬರೆದಿದ್ದೀರ ! ಇದು ಕೇವಲ ಭೂ ದಿನಕ್ಕೆ ಮಾತ್ರವಲ್ಲ , ಎಂದಿಗೂ ಅನ್ವಯವಾಗುವಂಥದ್ದು ! ನಮ್ಮ ಸುಖ-ಸೌಲಭ್ಯಗಳಿಗಾಗಿ ಪ್ರಕೃತಿಯನ್ನು ಸರಿಪಡಿಸಲಾಗದ ಮಟ್ಟಿಗೆ ಹಾಳುಮಾಡುತ್ತಿರುವ ನಮ್ಮ ಕಣ್ಣು ತೆರೆಯುವುದು ಯಾವಾಗ? ಬುದ್ಧಿ ಬರುವುದು ಯಾವಾಗ ? ನಮ್ಮನ್ನು ನಾವು ಉಳಿಸಿಕೊಳ್ಳುವುದು ಯಾವಾಗ? ಪ್ರಖ್ಯಾತ ಲೇಖಕ Paulo Coehlo ತನ್ನ ಪುಸ್ತಕವೊಂದರಲ್ಲಿ ಬರೆದಿದ್ದಾನೆ " ಭೂಮಿಯನ್ನು ಉಳಿಸಬೇಕು ಎಂದು ನಾವು ಬೊಬ್ಬೆ ಹೊಡೆಯುವುದು ಮೂರ್ಖತನ ! ಭೂಮಿ ಹಿಂದೆಯೂ ಇತ್ತು , ಮುಂದೂ ಇರುತ್ತದೆ. ಅದು ಸುಲಭವಾಗಿ ನಾಶವಾಗದು . ನಾಶವಾಗುವುದು ನಾವು ಮಾತ್ರ ! ನಮ್ಮ ಹುಚ್ಚಾಟಗಳು ಮೂರ್ಖತನಗಳಿಂದ ! ತನ್ನ ಮೇಲಿನ ಅತ್ಯಾಚಾರ ಹೆಚ್ಚಾಯಿತು ಅನಿಸಿದಾಗ ಭೂಮಿ ಮೈ ಕೊಡವಿಕೊಂಡು ಎಲ್ಲವನ್ನೂ ಒರೆಸಿಹಾಕಿಬಿಡುತ್ತದೆ. ಡೈನೋಸಾರ್ ಗಳನ್ನು ಅಳಿಸಿದಂತೆ . ಹೀಗಾಗಿ ನಮ್ಮನ್ನು ಉಳಿಸಿಕೊಳ್ಳಬೇಕೆಂದರೆ ಪ್ರಕೃತಿಯನ್ನುಳಿಸುವುದು ಅನಿವಾರ್ಯ ! ಒಂದರ್ಥದಲ್ಲಿ ಭೂಮಿ ನಮ್ಮನ್ನುಳಿಸಬೇಕೆ ಹೊರತು ನಾವು ಭೂಮಿಯನ್ನಲ್ಲ "

ಸೀತಾರಾಮ. ಕೆ. / SITARAM.K said...

ಮಾನವನ ದುರಾಶೆಗೆ ನಲುಗುತ್ತಿರುವ ಪ್ರಕೃತಿಮಾತೆಯ ಬವಣೆಯ ಅಣುಕಿನ ಕಥೆ ಚೆನ್ನಾಗಿ ಮೂಡಿ ಮನವನ್ನ ಸೂರೆಗೊ೦ಡಿತು. ಆದರೆ ಕೊನೆಗೆ ಪರಿಹಾರೋಪಾಯದೊ೦ದಿಗೆ ಮುಕ್ತಾಯವಾಗಿದ್ದರೆ ಚೆ೦ದವಿರುತ್ತಿತ್ತು. ಅನಾಥವಗಿ ನಿ೦ತು ನೋಡುವ ಪರಿಸ್ಥಿತಿ ಬರದಿರಲಿ. ಆದರೆ ಮನ ಮಿಡಿವ ವಿವರಣೆ ಮನದಾಳದೆಲ್ಲೋ ಜಾಗೃತಿಯು೦ಟು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

umesh desai said...

ಬೆಂಗಳೂರು ಗಾರ್ಡನ್ ಸಿಟಿ ಹೋಗಿ ಬೋಳುಮರಗಳ ಸಿಟಿ ಆಗುತ್ತಿದೆ...ನಮಗರಿವಿಲ್ಲದೇ ನಾವೆಲ್ಲ ಆ ಪಾಪದಲ್ಲಿ ಭಾಗಿಯಾಗುತ್ತಿದ್ದೇವೆ...

b.saleem said...

ಶಿವು ಸರ್,
ಪ್ರಸ್ತುತ ವಿಷೆಯವನ್ನು ಅಯ್ಕೆಮಾಡಿಕೊಂಡ್ಡಿದ್ದಿರಿ.
ಪ್ರಕೃತಿ ದೇವತೆಯೊಂದಿಗಿನ ಸಂಭಾಷಣೆ ಸಹಜತೆಯಿಂದ ಕೂಡಿದೆ ಅಲ್ಲದೆ ಗಿಡ-ಮರ , ಮೊಡ, ನೀರು ಮುಂತಾದವರನ್ನು ಕಷ್ಟಕ್ಕೆ ಸಿಲುಕಿಸಿದ ಮನುಷ್ಯ ಅವರ ಸಂಭಾಷಣೆಯನ್ನು ಪೂರ್ತಿಗೊಳಿಸಲು ಬಿಡದೆ ಬಾಂಬ್ ಪ್ರಯೊಗಿಸಿದ ಮನುಷ್ಯ ಎಷ್ಟು ಕ್ರೂರಿ.......

ಸರ್ ಪ್ರಕೃತಿ ದೇವತೆ ಸ್ತ್ರೀ ಆಗಿರುವದರಿಂದ ಸಂಭಾಷಣೆಯಲ್ಲಿ ಮಾಹಾಪ್ರಭು ಶಬ್ಡ ಬಳಸಿದ್ದಿರಿ ಇದರಿಂದ ಸ್ವಲ್ಪ ಗೊಂದಲವಾಗುತ್ತೆ ಅನ್ಸುತ್ತೆ.
ನನ್ನ ಅನಿಸಿಕೆ ತಪ್ಪಿದ್ದರೆ ಕ್ಷಮಿಸಿ

PARAANJAPE K.N. said...

ಪ್ರಕೃತಿಯ ಬಗ್ಗೆ, ಭೂಮಿಯ ಬಗೆಗಿನ ನಿಮ್ಮ ಕಥನ ಚೆನ್ನಾಗಿದೆ. ಇದು ಭೂದಿನಕ್ಕೆ ಮಾತ್ರವಲ್ಲ, ಎ೦ದೆ೦ದಿಗೂ ಪ್ರಸ್ತುತ

Arivashy said...

ಪ್ರಕೃತಿಯ ಬಗೆಗಿನ ಕಾಳಜಿಯನ್ನು ಈ ಹೊಸ ಪ್ರಯೋಗದ ಬರಹದ ಮೂಲಕ ಚೆನ್ನಾಗಿ ವಿವರಿಸಿದ್ದೀರಿ. ಆದರೆ ಒಮ್ಮೆ ಒಂದೇ ಒಂದು ಸಾರಿ ನಿಜವಾಗಿ ಪ್ರಕೃತಿ ಮಾತೆ ಮನು ಕುಲದ ಮೇಲೆ ಮುನಿಸಿಕೊಂಡಳೆಂದರೆ ಮುಗಿಯಿತು....ಕ್ಷಮಯಾ ಧರಿತ್ರಿಯ ಕ್ಷಮಾ ಗುಣವನ್ನು ನಾವು ಅತ್ಯಂತ ಕ್ರೂರವಾಗಿ ಪರೀಕ್ಷಿಸುತ್ತಿದ್ದೇವೆನ್ನಿಸುತ್ತದೆ. ಒಟ್ಟಿನಲ್ಲಿ ಎಲ್ಲರೂ ಚಿಂತಿಸಲೇ ಬೇಕಾದ ಮಹತ್ವದ ವಿಷಯ....

AntharangadaMaathugalu said...

ಪ್ರಕೃತಿಯ ಬಗೆಗಿನ ಕಾಳಜಿಯನ್ನು ಈ ಹೊಸ ಪ್ರಯೋಗದ ಬರಹದ ಮೂಲಕ ಚೆನ್ನಾಗಿ ವಿವರಿಸಿದ್ದೀರಿ. ಆದರೆ ಒಮ್ಮೆ ಒಂದೇ ಒಂದು ಸಾರಿ ನಿಜವಾಗಿ ಪ್ರಕೃತಿ ಮಾತೆ ಮನು ಕುಲದ ಮೇಲೆ ಮುನಿಸಿಕೊಂಡಳೆಂದರೆ ಮುಗಿಯಿತು....ಕ್ಷಮಯಾ ಧರಿತ್ರಿಯ ಕ್ಷಮಾ ಗುಣವನ್ನು ನಾವು ಅತ್ಯಂತ ಕ್ರೂರವಾಗಿ ಪರೀಕ್ಷಿಸುತ್ತಿದ್ದೇವೆನ್ನಿಸುತ್ತದೆ. ಒಟ್ಟಿನಲ್ಲಿ ಎಲ್ಲರೂ ಚಿಂತಿಸಲೇ ಬೇಕಾದ ಮಹತ್ವದ ವಿಷಯ....

ಸಾಗರದಾಚೆಯ ಇಂಚರ said...

ಶಿವೂ ಸರ್
ಮತ್ತೊಂದು ಒಳ್ಳೆಯ ಬರಹ
ನಿಮ್ಮ ಬ್ಲಾಗಿನಲ್ಲಿ ಮಾಹಿತಿಗಳ ಭಂಡಾರವೇ ಇದೆ

ಮನಸಿನಮನೆಯವನು said...

shivu.k ,

ಒಂದು ಉತ್ತಮ ವಿಚಾರಿಕ ವಾದ-ವಿವಾದದ ಮಂಡನೆಯ ಲೇಖನ...

ವನಿತಾ / Vanitha said...

ಒಳ್ಳೆಯ ವಿಶ್ಲೇಷಣೆ..
ಅದಕ್ಕೆ ಎಲ್ಲರೂ ಮೂರು Rನ್ನು (Reduce, Reuse, Recycle) ಉಪಯೋಗಿಸಿದರೆ, ಪ್ರಕೃತಿ ನಾಶವಾಗದಂತೆ ಸ್ವಲ್ಪವಾದರೂ Contribution ಮಾಡುತ್ತಿದ್ದೇನೆ ಎನ್ನುವ ನೆಮ್ಮದಿ.

ಮನದಾಳದಿಂದ............ said...

ಶಿವೂ ಸರ್,
ಪ್ರಕೃತಿಯ ಬಗ್ಗೆ ಪ್ರೀತಿ ಕಾಳಜಿ ನಿಮ್ಮಲ್ಲಿ ಒಳ್ಳೆಯ ಕತೆ ಬರೆಸಿದೆ.
ಇದೆ ರೀತಿ ಎಲ್ಲರಲ್ಲೂ ಕಾಳಜಿ ಇದ್ದು, ಆ ಕಾಳಜಿ ಕಾರ್ಯರೂಪಕ್ಕೆ ಬಂದರೆ ಬಹುಶಃ ಇಂದಿನ ವಾತಾವರಣ ಸುಂದರವಾಗೇ ಇರುತಿತ್ತೇನೋ!
ಅದ್ಭುತ ಕಲ್ಪನೆ!

shivu.k said...

ಗುರು,

ನಾವು ಮಾತಾಡುವುದಕ್ಕಿಂತ ಮಾಡುವುದು ಬೇಕಾದಷ್ಟಿದೆ. ನನ್ನ ಪ್ರಕಾರ ಪ್ರತಿಯೊಬ್ಬರೂ ಸ್ವಲ್ಪ ವಿವೇಕದಿಂದ, ತಿಳುವಳಿಕೆಯಿಂದ ಬದುಕಿದರೆ ಖಂಡಿತ ನಮ್ಮ ಪ್ರಕೃತಿಗೆ ಒಳ್ಳೆಯದು ಮಾಡಬಹುದು ಅನ್ನುವುದು ನನ್ನ ಭಾವನೆ. ಇದು ನನ್ನ ಕಲ್ಪನೆ ಕತೆಯಾದರೂ ವಾಸ್ತವ ಸತ್ಯವನ್ನು ನಿತ್ಯ ನೋಡುತ್ತಿರುವುದರಿಂದ ಮತ್ತು ಕಳೆದ ವಾರ ಜೋರು ಮಳೆ ಬಂದು ಬೆಂಗಳೂರಿನ ಮರಗಳು ಬಿದ್ದು ಮರುದಿನ ನಾನು ಓಡಾಡಿದಾಗ ಮರಗಳ ಸ್ಥಿತಿಯನ್ನು ಕಂಡು ಇದನ್ನು ಬರೆಯಲೇ ಬೇಕಾಯಿತು..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಇದೊಂದು ಕಲ್ಪನೆಯನ್ನು ಪ್ರಯೋಗಾತ್ಮಕವಾಗಿ ಬರೆದಿದ್ದೆ. ಅದನ್ನು ಮೆಚ್ಚಿದ್ದೀರಿ..ಅದಕ್ಕೆ ಧನ್ಯವಾದಗಳು.

shivu.k said...

ಸುಧೇಶ್,

ಈ ಪುಟ್ಟ ಕತೆಯನ್ನು ಓದಿದ ಮೇಲೆ ನಿಮ್ಮಂತೆ ಎಲ್ಲರಿಗೂ ಅನ್ನಿಸಬೇಕು. ಅದೇ ನನ್ನ ಉದ್ದೇಶ. ಕೊನೆಪಕ್ಷ ಈ ನಿಟ್ಟಿನಲ್ಲಿ ಚಿಂತನೆ ಮಾಡಿ ಅವರವರ ಮಟ್ಟಿಗೆ ಬದಲಾವಣೆ ಕಂಡುಕೊಂಡರೆ ನನ್ನ ಪ್ರಯತ್ನ ಸಾರ್ಥಕವೆನಿಸುತ್ತದೆ...

ಕತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಸುಬ್ರಮಣ್ಯ ಸರ್,

ಪ್ರಕೃತಿಯೇ ಎಲ್ಲವನ್ನು ನಿಯಂತ್ರಿಸುತ್ತದೆ. ನಿಜ ಆದ್ರೆ ಮನುಜ ದುರಾಸೆಯಿಂದ ತನ್ನ ಕೈಯಲ್ಲಿ ನಿಯಂತ್ರಸಲಾಗದನ್ನು ಸೃಷ್ಟಿಸಿಬಿಟ್ಟಿದ್ದಾನೆ. ಮುಂದೇನಾಗಬಹುದು ಅನ್ನುವ ಒಂದು ಸಣ್ಣ ಕಲ್ಪನೆ ಈ ಕತೆ ಅಷ್ಟೆ. ಆದರೂ ನೀವು ಹೇಳಿದಂತೆ ಪ್ರಕೃತಿಯೇ ಮುಂದೆ ಎಲ್ಲವನ್ನೂ ನಿಯಂತ್ರಿಸುತ್ತದೆ.
ಕತೆಯನ್ನು ಇಷ್ಟಪಟ್ಟಿದ್ದೀರಿ ಅದಕ್ಕೆ ಧನ್ಯವಾದಗಳು.

shivu.k said...

ಮನಸು ಮೇಡಮ್,

ನಮ್ಮ ಬೆಂಗಳೂರಿನಲ್ಲಿ ಒಂದಲ್ಲ ಒಂದು ಮರವನ್ನು ಏನೋ ಕಾರಣಕ್ಕಾಗಿ ಕಡಿಯುತ್ತಿದ್ದಾರೆ. ಅಂತದ್ದರಲ್ಲಿ ಈ ಮಳೆ ಬೇರೆ ಹೀಗೆ ಮಾಡುತ್ತಿದೆ ಅದನ್ನು ನೋಡಿದ ಮೇಲೆ ನನಗೆ ಹೊಳೆದ ಕತೆಯಿದು. ಆದರೂ ನಾವು ನಮ್ಮ ಕೈಲಾದ ಮಟ್ಟಿಗೆ ಹಸಿರನ್ನು ಬೆಳಸಬೇಕು ಅನ್ನುವುದು ನನ್ನ ಆಶೆ.

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಚಂದ್ರು ಸರ್,


ಇದು ವಾಸ್ತವದ ತಳಹದಿಯಲ್ಲೇ ಮೂಡಿದ ಕತೆ. ನಮ್ಮ ಪಂಚತಂತ್ರದಲ್ಲಿ ಹೀಗೆ ಒಬ್ಬರ ತಪ್ಪನ್ನು ಮತ್ತೊಬ್ಬರ ಮೇಲೆ ಆರೋಪಿಸುತ್ತಾ ಕೊನೆಗೆ ಅಂತ್ಯ ಚೆನ್ನಾಗಿರುತ್ತೆ. ನಾನದನ್ನು ಇಲ್ಲಿ ಬಳಸಿಕೊಂಡು ಅಂತ್ಯವನ್ನು ವಿಭಿನ್ನವಾಗಿ ವಾಸ್ತವವಾಗಿ ಹೀಗೆ ಆಗಬಹುದು ಅನ್ನುವ ಕಲ್ಪನೆಯಲ್ಲಿ ಬರೆದಿದ್ದೇನೆ.
ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸುವ ನಿಮಗೆ ಧನ್ಯವಾದಗಳೂ.

shivu.k said...

ಭಾಶೆ,

ಧನ್ಯವಾದಗಳು.

shivu.k said...

ಚಿತ್ರ ಮೇಡಮ್,

ನಿಜ ನೀವು ಹೇಳಿದಂತೆ ಇದು ಎಲ್ಲಾ ದಿನಕ್ಕೂ ಪ್ರಸ್ತುತವಾಗುತ್ತದೆ. ನಮ್ಮ ಬದುಕಿನ ದುರಾಸೆಗಳಿಗಿಂದಾಗಿ ಏನೆಲ್ಲಾ ಆಗಬಹುದು ಅನ್ನುವ ಒಂದು ಪುಟ್ಟ ಕಲ್ಪನೆಯಷ್ಟೇ. ನಿಮ್ಮ ಅಭಿಪ್ರಾಯ ಭೂಮಿಯ ಬಗ್ಗೆ ಸರಿಯಾಗಿಯೇ ಇದೆ. ಅದು ಎಂದು ನಾಶವಾಗುವುದಿಲ್ಲ. ಆಗುವುದಿದ್ದರೇ ನಾವೇ ನಾಶವಾಗುವುದು...ನಿಜವೆನಿಸುತ್ತೆ...

ಧನ್ಯವಾದಗಳು.

shivu.k said...

ಸೀತಾರಾಂ ಸರ್,

ಕತೆಯ ಅಂತ್ಯದಲ್ಲಿ ಪರಿಹಾರ ಕೊಡಬೇಕೆನ್ನಿಸಿದರೂ ಅದು ನಮ್ಮಿಂದ ಸಾಧ್ಯವೇ ಅನ್ನಿಸಿತು. ಅದಕ್ಕಿಂತ ಹೆಚ್ಚಾಗಿ ವಾಸ್ತವಸ್ಥಿತಿಯನ್ನು ಆನಾವರಣಗೊಳಿಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಬರಹ. ಓದಿದ ಮೇಲೂ ನಿಮಗನ್ನಿಸಿದಂತೆ ಎಲ್ಲರಿಗೂ ಜಾಗೃತಿಯನ್ನು ಮೂಡಿಸಿದರೆ ನನ್ನಪ್ರಯತ್ನ ಸಾರ್ಥಕ.

ಧನ್ಯವಾದಗಳು.

shivu.k said...

ಉಮೇಶ್ ದೇಸಾಯಿ ಸರ್,

ಬೆಂಗಳೂರು ಮುಂದೊಂದು ದಿನ ಬರಡಾಗಿಬಿಡುಬಹುದು ಅನ್ನುವ ಕಲ್ಪನೆಯನ್ನು ಮಾಡಿಕೊಂಡರೆ ಮನಸ್ಸಿಗೆ ಏನೋ ಒಂಥರ ದಿಗಿಲಾಗುವುದು. ನೀವು ಹೇಳಿದಂತೆ ಖಂಡಿತ ಇದರಲ್ಲಿ ನಮ್ಮ ಪಾಲು ಇದ್ದೇ ಇದೆ. ಪಾಪಿಗಳ ಲೆಕ್ಕದಲ್ಲಿ ನಮ್ಮ ಹೆಸರು ಇದ್ದೇ ಇರುತ್ತದೆ...

ನಿಮ್ಮ ವಿಮರ್ಶೆಗೆ ಇಷ್ಟವಾಯಿತು...ಧನ್ಯವಾದಗಳು.

shivu.k said...

ಸಲೀಂ,

ಈ ಕತೆಯನ್ನು ಬೇರೆಯ ರೀತಿಯಲ್ಲಿ ಬರೆದಿದ್ದೆ. ನಂತರ ಇದನ್ನು ಸಂಭಾಷಣೆಯ ರೂಪದಲ್ಲಿ ಬದಲಾಯಿಸಿದೆ. ನೀವು ನಮ್ಮ ಮನೆಗೆ ಬಂದಾಗ ಇದರ ಕುರುಹು ಕೊಟ್ಟಿದ್ದೆ. ನೀವು ಅದಕ್ಕಾಗಿ ಕುತೂಹಲವನ್ನು ವ್ಯಕ್ತಪಡಿಸಿದ್ದೀರಿ..

ದೇವತೆ ಎನ್ನುವ ವಿಚಾರದಲ್ಲಿ ಅದು ಹೆಣ್ಣು ಆಗಬಹುದು ಅಥವ ಗಂಡು ಆಗಬಹುದು. ಅದಕ್ಕಾಗಿ ನಾನು ಹೀಗೆ ಎಂದು ಸೂಚಿಸಿಲ್ಲ...ನನ್ನ ಪ್ರಕಾರ ಬರಹದಲ್ಲಿ ಅದನ್ನು ಗಂಡು ದೇವತೆಯನ್ನುವ ಕಲ್ಪನೆಯಲ್ಲಿ ಬರೆದಿರುವುದರಿಂದ ಸಂಭಾಷಣೆಯಲ್ಲಿ ಉಳಿದವರು ಮಾತಾಡುವಾಗಲೂ ಅದನ್ನೇ ಕಲ್ಪಿಸಿಕೊಂಡಿದ್ದೇನೆ..
ಆದರೂ ನಿಮ್ಮ ಅಭಿಪ್ರಾಯವನ್ನು ಪರಿಗಣಿಸುತ್ತೇನೆ. ಮುಂದಿನ ಬರಹದಲ್ಲಿ ಇಂಥಹ ಗೊಂದಲಗಳು ಆಗದಂತೆ ನೋಡಿಕೊಳ್ಳುತ್ತೇನೆ. ಅದನ್ನು ಗುರುತಿಸಿ ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಪರಂಜಪೆ ಸರ್,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

Aravishy,

ನನ್ನ ಬ್ಲಾಗಿಗೆ ಸ್ವಾಗತ.

ನನ್ನ ಬರಹದ ಪ್ರಯೋಗವನ್ನು ಮೆಚ್ಚಿದ್ದೀರಿ. ಇದು ಒಂದು ಸಣ್ಣ ಪ್ರಯತ್ನವಷ್ಟೇ.

ನಿಮ್ಮ ಅಭಿಪ್ರಾಯದಂತೆ ಒಮ್ಮೆ ನಾವೆಲ್ಲಾ ಗಂಭೀರವಾಗಿ ಚಿಂತಿಸಲೇ ಬೇಕಾದ ವಿಚಾರವಿದು...

ಧನ್ಯವಾದಗಳು.

shivu.k said...

ಶ್ಯಾಮಲಾ ಮೇಡಮ್,

ನೀವು ಅವಿನಾಶಿಯವರ ಅಭಿಪ್ರಾಯವನ್ನೇ ಹಾಕಿಬಿಟ್ಟಿದ್ದೀರಲ್ಲ....ಇರಲಿ ನಿಮಗೆ ಅದು ಇಷ್ಟವಾಗಿದ್ದರೆ ಅದಕ್ಕೆ ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೇ ಸರ್,

ಕತೆಯನ್ನು ಮೆಚ್ಚಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಮತ್ತೆ ನನ್ನ ಬ್ಲಾಗು ನೀವು ಹೇಳಿದ ಮಟ್ಟದ ಮಾಹಿತಿ ಭಂಡಾರವಲ್ಲ ಸರ್...ನಾನು ನನ್ನ ಕಲ್ಪನೆಯ ಮೂಸೆಯಲ್ಲಿ ಅರಳಿದ ಬರಹವನ್ನು ಬ್ಲಾಗಿಗೆ ಹಾಕಿದ್ದೇನೆ..ಆದರೂ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳೂ.

shivu.k said...

ಜ್ಞಾನಾರ್ಪಣಮಸ್ತು...

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ವನಿತಾ,

ನಿಮ್ಮ ಮೂರು ವಿಶ್ಲೇಷಣೆಗಳು ನನಗೆ ಇಷ್ಟವಾಯಿತು. ನಾನು ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ..

ಧನ್ಯವಾದಗಳು.

shivu.k said...

ಮನದಾಳದ ಪ್ರವೀಣ್ ಸರ್,

ಇದು ನನ್ನ ನಿತ್ಯ ಓಡಾಟದ ನಡುವೆ ಕಂಡುಕೊಂಡ ಸತ್ಯಕ್ಕೆ ಬರಹದ ರೂಪವನ್ನು ಕೊಟ್ಟಿದ್ದೇನೆ...ನೀವು ಅದನ್ನು ಗುರುತಿಸಿದ್ದೀರಿ...

ಪ್ರಕೃತಿ ಬಗೆಗಿನ ನನ್ನ ಕತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಜಲನಯನ said...

ಶಿವು, ವಿಷಯ ಮರಗಳ ಮನವಿ, ನ್ಯಾಯಪೀಠ ..ಪ್ರಕ್ಱುತೀದೇವಿಯ ಅಸಹಾಯಕತೆ..ಚನ್ನಾಗಿದೆ ವಿಷಯ ಪ್ರಸ್ತಾವನೆ...ನಿಜ ನೆಡುವ ಮಾತಿಲ್ಲ ಕೆಡಹೋ ಕಡೆ ಜನ..ದನ ಮತ್ತೆ ಪ್ರಕ್ಱುತಿ ಸಹಾ....ಈ ವರ್ಷ ಜೈವ ವಿವಿಧತೆಗೆ (ಬಯೋ ದೈವರ್ಸಿಟಿ) ವರ್ಷ..ನಾವು ಮಾಡುತ್ತಿರುವುದು ತದ್ವಿರುದ್ಧ..

ದಿನಕರ ಮೊಗೇರ said...

vishaya ellinda hekki taruttiro gottilla sir............ uttama vichaara tilisiddeeri..... naavoo saha mara kadiyuva paapadalli bhaagi aagtaa iddeve......

Snow White said...

nijakku adbutavada chintane :) tumba ista aithu sir :)