Sunday, May 16, 2010

ಬ್ಲಾಗಿಗರ ಕೂಟ.

ಇಪ್ಪತ್ತು ದಿನಗಳ ಹಿಂದೆ ನನ್ನ ಮೊಬೈಲಿಗೆ ಪೋನೊಂದು ಬಂತು. "ಹಲೋ ಸರ್ ಹೇಗಿದ್ದೀರಿ, ನೀವು ಶಿವು ಅಲ್ವಾ, ನಾನು ಉದಯ್ ಇಟಗಿ, ಬೆಂಗಳೂರಿಗೆ ಬಂದಿದ್ದೇನೆ. ನನಗೊಂದು ಆಸೆಯಿದೆ. ನಮ್ಮ ಆತ್ಮೀಯ ಬ್ಲಾಗ್ ಗೆಳೆಯರನ್ನೆಲ್ಲಾ ಒಮ್ಮೆ ಬೇಟಿಯಾಗಬೆಕೆನಿಸುತ್ತದೆ, ನಿಮ್ಮ ಬಳಿ ನಮ್ಮ ಬ್ಲಾಗ್ ಗೆಳೆಯರ ಫೋನ್ ನಂಬರುಗಳಿದ್ದರೇ ಕೊಡಿ" ಎಂದರು. ಅವರು ಕೇಳಿದಾಗ ನನಗಂತೂ ಆಶ್ಚರ್ಯವೇ ಆಯಿತು. ನಮ್ಮ ರಾಜ್ಯದ ಇಟಗಿಯಲ್ಲಿ ಹುಟ್ಟಿ ಬೆಳೆದು ಉದ್ಯೋಗಕ್ಕಾಗಿ ದೂರದ ಲಿಬಿಯಾ ದೇಶದಲ್ಲಿ ಲೆಕ್ಚರರ್ ಆಗಿರುವ ಉದಯ ಸರ್ ಫೋನನ್ನು ನಾನು ನಿರೀಕ್ಷಿಸಿರಲಿಲ್ಲವಾದ್ದರಿಂದ ಒಂದು ರೀತಿಯ ಅಚ್ಚರಿ, ಖುಷಿ ಒಟ್ಟೊಟ್ಟಿಗೆ ಆಗಿತ್ತು. ತಕ್ಷಣವೇ ನನ್ನ ಬಳಿಯಿರುವ ಅನೇಕ ಬ್ಲಾಗ್ ಗೆಳೆಯರ ಫೋನ್ ನಂಬರುಗಳನ್ನು ಮೆಸೇಜ್ ಮಾಡಿದ್ದೆ.

ಮತ್ತೆ ನಾನು ಕೆಲವು ದಿನಗಳು ಕೆಲಸದಲ್ಲಿ ಬ್ಯುಸಿಯಾಗಿಬಿಟ್ಟೆ. ಅವರು ಇಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಆಗಾಗ ಫೋನ್ ಮಾಡುತ್ತಿದ್ದರು.


ನಾಲ್ಕು ದಿನಗಳ ನಂತರ ಮತ್ತೆ ಫೋನ್ ಮಾಡಿ "ಕನಕಪುರ ರಸ್ತೆಯಲ್ಲಿರುವ ಹೋಟಲ್ ಅತಿಥಿ ಗ್ರ್ಯಾಂಡ್‍ನಲ್ಲಿ ಮಂಗಳವಾರ ಸಂಜೆ ಸೇರೋಣ ಎಲ್ಲರೂ ಬರುತ್ತಿದ್ದಾರೆ ನೀವು ಕುಟುಂಬ ಸಮೇತರಾಗಿ ಬನ್ನಿ." ಎಂದು ಆಹ್ವಾನವಿತ್ತರು. ಅನೇಕ ಬ್ಲಾಗ್ ಗೆಳೆಯರನ್ನು ಈ ಮೂಲಕ ಬೇಟಿಯಾಗುವ ಅವಕಾಶ ಸಿಕ್ಕಿರುವಾಗ ಬಿಡುವುದುಂಟೆ! ಒಪ್ಪಿಕೊಂಡೆ.


ಪ್ರಕಾಶ್ ಹೆಗಡೆ, ಮಲ್ಲಿಕಾರ್ಜುನ್ ಮತ್ತು ನಾನು ಕೊನೆಯಲ್ಲಿ ತಡವಾಗಿ ಹೋಗಿದ್ದರಿಂದ ಬೇರೆ ಬ್ಲಾಗಿಗರೆಲ್ಲಾ ಆಗಲೇ ಸೇರಿದ್ದರು. ಸಂಪದದ ಹರಿಪ್ರಸಾದ್ ನಾಡಿಗ್, ಚಾಮರಾಜ ಸಾವಡಿಯವರ ಕುಟುಂಬ, ಶಿವಪ್ರಕಾಶ್, ಓಂ ಪ್ರಕಾಶ್, ಡಾ.ಸತ್ಯನಾರಾಯಣ್ ಕುಟುಂಬ, ಪರಂಜಪೆ ಜೊತೆಗೆ ನಾವು ಮೂವರು ಅತಿಥಿಗಳಾಗಿದ್ದರೇ, ಉದಯ ಇಟಗಿ ಅವರ ಶ್ರೀಮತಿಯವರು ಮತ್ತು ಅವರ ಮಗಳು ಭೂಮಿಕ ಅತಿಥೇಯರಾಗಿದ್ದರು. ಪರಸ್ಪರ ಪರಿಚಯ ಉಭಯ ಕುಶಲೋಪರಿಯಿಂದ ಶುರುವಾಗಿ ಅಲ್ಲಿ ಅನೇಕ ಆರೋಗ್ಯಕರ ಚರ್ಚೆಗಳು ಇತ್ತು. ವಿಕಿಪೀಡಿಯ ಬಳಸುವ ವಿಧಾನ ಇತ್ಯಾದಿಗಳ ಬಗ್ಗೆ ಹರಿಪ್ರಸಾದ್ ನಾಡಿಗ್ ವಿವರಿಸಿ ಅದರ ಬಗ್ಗೆ ಇಡೀ ರಾಜ್ಯಾ ಎಲ್ಲಾ ಜಿಲ್ಲೆಯ ವಿಶ್ವವಿದ್ಯಾಲಯಗಳಲ್ಲೂ ಕಾರ್ಯಕ್ರಮ ಆಗುತ್ತಿದ್ದು ಅದರ ಪಲಿತಾಂಶ ಅದ್ಬುತವಾಗಿದೆ ಎನ್ನುವುದನ್ನು ಅಂಕಿಅಂಶ ಸಹಿತ ವಿವರಿಸಿದರು. ಎಪ್ಪತ್ತು ವರ್ಷದ ವೃದ್ಧರು ವಿಕೀಪೀಡಿಯಾ ಬಳಕೆಯಿಂದ ಈಗ ಇಂಟರ್ ನೆಟ್ ಬಳಸಲು ಅಸಕ್ತಿ ತೋರಿರುವುದನ್ನು ವಿವರಿಸಿದರು. ಚಾಮರಾಜಸಾವಡಿಯವರು ಇತ್ತೀಚಿನ ಪತ್ರಿಕೋದ್ಯಮ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿ ಸ್ವಲ್ಪ ಗಂಭೀರ ವಿಚಾರದ ಬಗ್ಗೆ ಮಾತಾಡಿದರೆ, ಡಾ.ಸತ್ಯನಾರಯಣ್ ಸರ್ ತಮ್ಮ ಬ್ಲಾಗಿನ ಇತ್ತೀಚಿನ ಬರಹದ ಬಗ್ಗೆ ಮಾತಾಡಿದರು. ಅದರಲ್ಲಿ ಬೀಡಿ ಸೇದುವ ಪ್ರಕರಣವಂತೂ ಅಲ್ಲಿದ್ದ ಅನೇಕ ಬ್ಲಾಗಿಗರಿಗೆ ತಮ್ಮ ಬಾಲ್ಯದ ಅನುಭವಗಳನ್ನು ಅದರಲ್ಲೂ ಮೊದಲು ಬೀಡಿ ಸಿಗರೇಟು ಸೇದಿದ ಬಗ್ಗೆ ಬರೆಯಲು ಮುಂದಾದರು. ನಡುನಡುವೆ ಪ್ರಕಾಶ್ ಹೆಗಡೆಯವರು ತಮ್ಮ ಮೂಲನಿವಾಸಿಗಳ ಬಗ್ಗೆ ನಾಗು ಬಗ್ಗೆ, ಮತ್ತೆ ಪುಸ್ತಕದ ಬಗ್ಗೆ ಅಲ್ಲಲ್ಲಿ ತಮ್ಮ ಎಂದಿನ ನಗೆ ಚಟಾಕಿಗಳನ್ನು ಹಾರಿಸುತ್ತ ಎಲ್ಲರನ್ನು ರಂಜಿಸುತ್ತಿದ್ದರು. ಬ್ಲಾಗ್ ಎನ್ನುವ ವಿಚಾರ ಮೊದಲು ತಲೆಗೆ ಹೇಗೆ ಬಂತು ಮೊದಲು ಕಬ್ಬಿಣ ಕಡಲೆಯೆನಿಸಿದ್ದ ಅದು ಹೇಗೆ ನಂತರ ಸುಲಭವಾಯಿತು, ಅದಕ್ಕೆ ಸ್ಪೂರ್ತಿಯಾರು.....ಹೀಗೆ ಶುರುವಾಗಿ ಎಲ್ಲರ ಬ್ಲಾಗಿಂಗುಗಳ ತರಲೇ ಆಟಗಳು, ಬರಹಗಳಿಗೆ ಯಾರ್ಯಾರು ಪ್ರೋತ್ಸಾಹ ನೀಡಿದ್ದರು ಎನ್ನುವ ವಿಚಾರಗಳೆಲ್ಲಾ ಚರ್ಚೆಗೆ ಬಂತು. ಪ್ರೋತ್ಸಾಹದ ವಿಚಾರದಲ್ಲಿ ನಾಗೇಶ್ ಹೆಗಡೆಯವರು ಎಲ್ಲಿರುವ ಎಲ್ಲರಿಗೂ ಒಂದಲ್ಲ ಒಂದು ರೀತಿ ಪ್ರೋತ್ಸಾಹ ನೀಡಿರುವುದನ್ನು ತಿಳಿದಾಗ ನಮಗಂತೂ ಅವರ ಬಗ್ಗೆ ಗೌರವ ಇಮ್ಮಡಿಯಾಗಿತ್ತು. ಊಟದ ನಡುವೆ ಕ್ಯಾಷ್ಟ್ ಅವೆ, ಲೈಪ್ ಇಸ್ ಬ್ಯುಟಿಪುಲ್, ಮಾಜಿದ್ ಮಜ್ದಿಯ ಚಿಲ್ಡ್ರನ್ ಆಪ್ ಹೆವನ್, ಬಾರನ್, ಸಾಂಗ್ ಅಪ್ ಸ್ಪ್ಯಾರೋ, ಶ್ಯಾಮ್ ಬೆನಗಲ್ ರವರ ಜರ್ನಿ ಟು ಸಜ್ಜನ್ ಪುರ್....ಕೊನೆಗೆ ಇತ್ತೀಚಿನ ಮೊಗ್ಗಿನ ಮನಸ್ಸು, ನಟ ಪ್ರಕಾಶ್ ರೈ ಇತ್ಯಾದಿ ನಟರ ಬಗ್ಗೆ ಆರೋಗ್ಯಕರವಾದ ಚರ್ಚೆಯೂ ಆಯಿತು. ಎಲ್ಲರು ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು.


ನಾನು ಮತ್ತು ಮಲ್ಲಿಕಾರ್ಜುನ್ ಸುಮ್ಮನಿರಲಿಲ್ಲ ಎಲ್ಲರ ಮಾತುಗಳನ್ನು ಕೇಳುತ್ತಾ ಆಗಾಗ ಅವರ ಸಹಜ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದೆವು. ಉದಯ್ ಇಟಗಿಯವರು ಲಿಬಿಯ ದೇಶ, ಅಲ್ಲಿನ ಅಗ್ಗದ ಪೆಟ್ರೋಲ್, ಜನರ ವಿದ್ಯಾಬ್ಯಾಸದ ಪರಿಸ್ಥಿತಿ, ವಾತಾವರಣದ ಬಿಸಿ, ರಾಜಧಾನಿ ಟ್ರಿಪೋಲಿಯ ಹಸಿರುವಾತವರಣ ಉಳಿದೆಡೆಯಲ್ಲಾ ಮರಳುಗಾಡು, ಅಲ್ಲಿನ ಆರ್ಥಿಕ ಪರಿಸ್ಥಿತಿ, ಎಲ್ಲಾ ವಿಚಾರವನ್ನು ನಮ್ಮೊಂದಿಗೆ ಅಲ್ಲಲ್ಲಿ ಹಾಸ್ಯ ಮಾತುಗಳಲ್ಲಿ ಹಂಚಿಕೊಂಡರು.


ನಡುವೆಯೇ ಚಾಮರಾಜ್ ಸಾವಡಿಯವರ ಇಬ್ಬರು ಮಕ್ಕಳು, ಉದಯ್ ಇಟಗಿಯವರ ಮಗಳು ಭೂಮಿಕ, ಸತ್ಯನಾರಾಯಣ್ ಮಗಳು ಇಂಚಿತ, ಆಟವಾಡಿಕೊಳ್ಳುತ್ತಾ ಇಡೀ ರೂಮಿನ ತುಂಬಾ ಓಡಾಡಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿದ್ದರು.


ಉದಯ ಇಟಗಿಯವರ ಮಗಳು ಭೂಮಿಕ..

ಡಾ.ಸತ್ಯನಾರಾಯಣರವರ ಮಗಳು ಇಂಚಿತಮನಸಾರೆ ನಗುವ ಉದಯ ಇಟಗಿ
ನನ್ನ ಜೊತೆ ಶಿವಪ್ರಕಾಶ್
ಚಾಮರಾಜಸಾವಡಿಯವರ ಜೊತೆ ಮಗಳು
ಪ್ರಕಾಶ್ ಹೆಗಡೆ, ಮಲ್ಲಿಕಾರ್ಜುನ್, ಉದಯ್, ಹರಿಪ್ರಸಾದ್ ನಾಡಿಗ್,
ಡಾ.ಸತ್ಯನಾರಾಯಣ, ಪರಂಜಪೆ,


" ಸರ್, ನೀವೆಲ್ಲಾ ಬಂದಿದ್ದು ನನಗಂತೂ ತುಂಬಾ ಖುಷಿಯಾಯ್ತು....ಈ ಸಂಜೆ ತುಂಬಾ ಚೆನ್ನಾಗಿತ್ತು." ಖುಷಿಯಿಂದ ಹೇಳಿದರು ಉದಯ್ ಇಟಗಿ.

"ನಮಗೂ ತುಂಬಾ ಖುಷಿಯಾಗಿದೆ ಸರ್, ನಿಮ್ಮ ಕರೆಯ ನೆಪದಲ್ಲಿ ನಾವು ಚೆನ್ನಾಗಿ ತಿಂದು ಮನಸಾರೆ ಮಾತಾಡಿದ್ದೇವೆ," ನಾನಂದೆ.

" ಹೌದು ಸರ್, ಎಲ್ಲಾ ತುಂಬಾ ಚೆನ್ನಾಗಿತ್ತು. ಮತ್ತೆ ಮುಟ್ಟಾದ ಮೇಲೆ ಸಿಗೋಣ" ಪ್ರಕಾಶ ಹೆಗಡೆಯವರ ಬಾಯಿಂದ ಪಟ್ಟನೆ ಬಂತು ಮಾತು.

"ಏನ್ ಸರ್ ನನಗೆ ಗೊತ್ತಾಗಲಿಲ್ಲ ಮತ್ತೆ ಹೇಳಿ" ಎಂದರು. ಇಟಗಿ.

"ಅದೇ ಸರ್, ಮುಟ್ಟಾದ ಮೇಲೆ ಸಿಗೋಣ" ಮತ್ತೊಮ್ಮೆ ಅವರ ಮಾತಿನ ಒಳ ಅರ್ಥವನ್ನು ಗಮನಿಸಿ ಎಷ್ಟು ನಕ್ಕಿದ್ದೆವೆಂದರೆ, ಅಲ್ಲಿದ್ದ ಹೋಟಲ್ಲಿನ ಬೇರೆ ಜನಗಳೆಲ್ಲಾ ನಮ್ಮತ್ತ ತಿರುಗಿ ನೋಡುವಂತಾಗಿತ್ತು. ಅನೇಕ ಗಹನವಾದ ವಿಚಾರಗಳ ಹಿತಕರವಾದ ಮಾತಿನ ನಾಡುವೆ ಪ್ರಕಾಶ್ ಹೆಗಡೆಯವರ ಇಂಥಹ ಮಾತುಗಳು ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದವು.

ನಾವೆಲ್ಲಾ ಬ್ಲಾಗಿಗರು.

ಎಲ್ಲರ ಮಾತುಗಳ ನಡುವೆ ಆಂದ್ರ ಶೈಲಿಯ ಸೊಗಸಾದ ಊಟ, ಐಸ್‍ಕ್ರೀಮ್, ಮೊಗಲಾಯ್ ಬೀಡ, ಕೊನೆಗೆ ಗ್ರೂಪ್ ಫೋಟೊ ಇಟಗಿ ಕುಟುಂಬದ ಫೋಟೋ ಇತ್ಯಾದಿಗಳೆಲ್ಲಾ ಸಾಂಗವಾಗಿ ಜರುಗಿ ಒಂದು ಉತ್ತಮ ಸಂಜೆಯನ್ನು ನಮ್ಮ ಆತ್ಮೀಯ ಬ್ಲಾಗ್ ಗೆಳೆಯರ ಜೊತೆ ಕಳೆದಿದ್ದು ನನ್ನ ತುಂಬಾ ಚೆನ್ನಾಗಿತ್ತು.


ಬಿಸಿಲಹನಿ ಬ್ಲಾಗಿನ ಉದಯ ಇಟಗಿಯವರ ಒಂದು ಸೊಗಸಾದ ಇಚ್ಛಾಶಕ್ತಿಯಿಂದ ಒಂದಷ್ಟು ಬ್ಲಾಗ್ ಗೆಳೆಯರು ತಮ್ಮ ನಿತ್ಯದ ದುಗುಡ ದುಮ್ಮಾನಗಳನ್ನು ಮರೆತು ಮನೆಸಾರೆ ನಕ್ಕು ಒಂದು ಒಳ್ಳೆಯ ಊಟವನ್ನು ಮಾಡಿ ಎಲ್ಲರೂ ಬೀಳ್ಕೊಡುವಾಗ ಬ್ಲಾಗ್ ಎನ್ನುವ ಲೋಕದಲ್ಲಿ ಎಷ್ಟು ಸೊಗಸಾದ ಸಂತೃಪ್ತಿಯಿದೆ ಅನ್ನಿಸಿತ್ತು. ಅದಕ್ಕಾಗಿ ಉದಯ ಇಟಗಿಯವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.


[ಕಳೆದೊಂದು ವಾರದಿಂದ ಪ್ರವಾಸ, ಕೆಲಸ ಇತ್ಯಾದಿಗಳಿಂದಾಗಿ ಬೆಂಗಳೂರಿನಲ್ಲಿರಲಿಲ್ಲವಾದ್ದರಿಂದ ಬ್ಲಾಗಿಗೆ ಹೊಸ ಪೋಸ್ಟ್ ಹಾಕುವುದು, ಗೆಳೆಯರ ಬ್ಲಾಗುಗಳನ್ನು ನೋಡುವುದು ಸಾಧ್ಯವಾಗಲಿಲ್ಲ. ಈಗ ಎಲ್ಲವನ್ನು ಒಂದೊಂದಾಗಿ ನೋಡಬೇಕಿದೆ...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.]

ಚಿತ್ರ ಲೇಖನ

ಶಿವು.ಕೆ.

47 comments:

bhadra said...

ನಮಸ್ತೆ

ಸುಂದರ ಚಿತ್ರಗಳನ್ನು ನೋಡಿ, ಹೊಟ್ಟೆ ಉರಿಯುತ್ತಿದೆ.

ಬಹಳ ಬಹಳ ದಿನಗಳ ನಂತರ ನಾನು ಬ್ಲಾಗುಗಳ ಲೋಕದೆಡೆಗೆ ಕಣ್ಣು ಹಾಯಿಸುತ್ತಿರುವೆ. ಏನೇನೋ ತೊಂದರೆಗಳು, ಎಲ್ಲೆಲ್ಲೋ ಕೆಲಸಗಳು ಆಗಿ, ಬರವಣಿಗೆ ಲೋಕದಿಂದ ಬಹಳ ದೂರವಾಗಿರುವೆ. :(

ಈ ವರ್ಷವೂ ಬೆಂಗಳೂರಿನ ಕಡೆಗೆ ಬರುವುದಾಗುತ್ತದೋ ಇಲ್ಲವೋ ನೋಡಬೇಕು. ಆಗಸ್ಟ್ ೨೨ ಎಂದು ಮೊದಲೇ ತಿಳಿಸಿರುವುದರಿಂದ, ಪ್ರಯತ್ನಿಸುವೆ

ಎಲ್ಲರಿಗೂ ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

ಜಲನಯನ said...

ನಲ್ಮೆಯ ಶಿವುಗೆ ನನ್ನ ಆಭಾರ..ಯಾಕಂದ್ರೆ ಭಾರ ಹೊರೋರು ಅಲ್ಲಿರೋರು...ಅಲ್ವೇ...?? ನಾನು ಶಿವು ಮನೆಗೆ ಭೇಟಿ ಕೊಟ್ಟಾಗ ಈ ವಿಷಯ ಚರ್ಚಿಸಿದ್ದೆವು, ದಿನಕರ್ ಸಹಾ ಮಂಗಳೂರಿನಲ್ಲಿ ಸಿಕ್ಕು ಇದೇ ಪ್ರಸ್ತಾಪ ಮಾಡಿದಾಗ ನಾನು ಕುವೈತ್ ನ ನನ್ನ ಸ್ನೇಹಿತರಾದ ಮಹೇಶ್ ದಂಪತಿಗಳಲ್ಲಿ ಚರ್ಚಿಸಿದಾಗ ಅವರೂ ಸಕಾರಾತ್ಮಕ ಪ್ರತಿಕ್ರಿಯೆ ಕೊಟ್ಟಿದ್ದೇ ಅಲ್ಲದೇ ಬ್ಲಾಗಿಗರ ಆಯ್ದ ಲೇಖನಗಳನ್ನೊಳಗೊಂಡ ಒಂದು ಪುಸ್ತಿಕೆಯ ಬಿಡುಗಡೆಯ ಸಲಹೆಯನ್ನೂ ಕೊಟ್ಟರು ಅದರಂತೆ ಶಿವು, ಪ್ರಕಾಶರ ಜೊತೆ ಸಮಾಲೋಚಿಸಿ ಈ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದು ಈಗಾಗಲೇ ಹಲವು ಮಿತ್ರರಿಗೆ ತಿಳಿದಿದ್ದ್ದೇ..
ಲೇಖನ ಕಳುಹಿಸುವ ವಿಷಯದಿಂದ ಮೊದಲುಗೊಂಡು ಈ ಬ್ಲಾಗಿಗರ ಕೂಟದ ಯಶಸ್ಸಿಗೆ ನೀವೆಲ್ಲಾ ಕೈಜೋಡಿಸಬೇಕೆಮ್ದು ವಿನಂತಿ..ನಿಮ್ಮ ನಿಮ್ಮ ಸ್ನೇಹಿತರ ವರ್ತುಲದಲ್ಲಿ ಇದಕ್ಕೆ ಹೆಚ್ಚು ಪ್ರಚಾರ ಸಿಗಬೇಕು.. ..ಇದು ಒಂದು ಉತ್ತಮ ಪ್ರಾರಂಭವಾಗಬೇಕು..ಮುಂದಿನ ಅಮೋಘ ಕಾರ್ಯಕ್ರಮಗಳಿಗೆ.

ಸವಿಗನಸು said...

ಶಿವು ಸರ್.
ನೀವು ಕಾರ್ಯಕ್ರಮದ ದಿನ ಸಹ ತಿಳಿಸಿದ್ದುದರಿಂದ ಒಳ್ಳೆದಾಯಿತು....ಎಲ್ಲರೂ ಈಗಿನಿಂದಲೆ ತಯಾರಿ ಮಾಡಬಹುದು....
ಮುಂದೆ ಕಾರ್ಯಕ್ರಮದ ಚೌಕಟ್ಟು ಮಾಡಬೇಕು....ಎಲ್ಲರೂ ಕಾರ್ಯಕ್ರಮಕ್ಕೆ ಪ್ರಚಾರ ನೀಡಲಿ...
ಬ್ಲಾಗಿಗರ ದಿನ ಯಶಸ್ಸಾಗಲಿ....

ಮನದಾಳದಿಂದ............ said...

ಶಿವೂ ಸರ್,
ನಾನು ಖಂಡಿತಾ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಕನಿಷ್ಠ ಒಂದು ವಾರ ಮುಂಚೆ ಬೆಂಗಳೂರಿಗೆ ಬಂದು ನಿಮ್ಮನ್ನೆಲ್ಲ ಸೇರುತ್ತೀನೆ. ಈಗಾಗ್ಲೇ ರಜೆ ಅರ್ಜಿ ಕೂಡ ತಯಾರು ಮಾಡಿ ಆಯಿತು!
ದಯವಿಟ್ಟು ಕಾರ್ಯಕ್ರಮದ ರೂಪುರೆಶುಗಳೇನು ಎಂದು ಆಗಾಗ ತಿಳಿಸ್ತಾ ಇರಿ. ನನ್ನ ಸ್ನೇಹಿತರ ಬಳಗ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತದೆ.ನನ್ನ ಗೆಳೆಯ ಸಿನಿ ಸಾಹಿತಿ ಕವಿರಾಜನನ್ನು ಆಹ್ವಾನಿಸುತ್ತೇನೆ. ಆಗಬಹುದಲ್ಲ?
ನನ್ನ ಫೋನ್ ನಂಬರ್ ನಿಮ್ಮ ಬಳಿ ಇದ್ದೆ ಇದೆ.

kanasu said...

I think its a grt idea! :)

Subrahmanya said...

ಖಂಡಿತ ಆಗಬೇಕಾದುದೆ. ಮುಂದಿನ ರೂಪುರೇಶೆಗಳ ಬಗ್ಗೆ ಚರ್ಚಿಸಿ ಮುಂದುವರಿಯೋಣ. All the best, ನಮ್ಮೆಲ್ಲರಿಗೂ !

ತೇಜಸ್ವಿನಿ ಹೆಗಡೆ said...

ಉತ್ತಮ ವಿಚಾರ. ತಪ್ಪದೇ ಭಾಗಿಯಾಗುವೆ. ಸಾಂಗವಾಗಲಿ ಸಾಗಲಿ ಎಲ್ಲಾ...

ಬಿಸಿಲ ಹನಿ said...

ಶಿವು,
ನಮ್ಮ ಭೇಟಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ. ನನಗೆ ಮತ್ತೆ ಹಿಂದಿನದೆಲ್ಲಾ ಜ್ಞಾಪಕವಾಯಿತು. ಅಂದಹಾಗೆ ಬ್ಲಾಗಿಗರ ಭೇಟಿಯ ವಿಷಯವನ್ನು ‘ಅವಧಿ’ಯಲ್ಲಿ ಹಾಗೂ ಕನ್ನಡ ಬ್ಲಾಗಿಗರ ತಾಣದಲ್ಲಿ ಮತ್ತು ಬೇರೆ ಬೇರೆ ಕಡೆ ಪ್ರಕಟಿಸಿದರೆ ಇನ್ನಷ್ಟು ಪ್ರಚಾರ ಸಿಗುಬಹುದು ಎಂದು ನನ್ನ ಅನಿಸಿಕೆ. ಇದೇ ವಿಷಯವನ್ನು ಬೇರೆ ಬೇರೆ ಕಡೆ ಪ್ರಕಟಿಸಿ. ಬೇರೆಲ್ಲ ಸಹಾಯಕ್ಕೆ ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ.

Snow White said...

chitragalannu nodi haagu lekhana odi tumba khushiyaayitu sir :)

SSK said...
This comment has been removed by the author.
SSK said...

ಶಿವೂ ಅವರೇ,
ನಮ್ಮ ಎಲ್ಲಾ ಬ್ಲಾಗ್ ಸ್ನೇಹಿತರನ್ನು ಭೇಟಿಯಾಗಬೇಕೆಂದು ಬಹಳ ಉತ್ಸಾಹಿಯಾಗಿದ್ದೇನೆ. ಈ ಕೂಟದಲ್ಲಿ ಭಾಗವಹಿಸುವ ಆಸೆ ನನಗೂ ಇದೆ.
ಆದರೆ ದಿನಾಂಕ ೨೨ ರ ಬದಲು ೧೫ ನೇ ಆಗಸ್ಟ್, ಸ್ವಾತಂತ್ರ್ಯ ದಿನಾಚರಣೆಯಂದು ಆಗಿದ್ದರೆ ಅನುಕೂಲವಾಗಿತ್ತು.
ಆದರೆ ಒಬ್ಬರಿಗೊಸ್ಕರ ಎಲ್ಲಾ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ ಅಲ್ಲವೇ?
ನೋಡೋಣ, ನೀವೆಲ್ಲಾ ಏನು ತೀರ್ಮಾನಿಸುತ್ತೀರೋ? ಇಷ್ಟರ ಮೇಲೆ ನನ್ನ ಅದೃಷ್ಟ, ಅಷ್ಟೇ!

ಅಂದಹಾಗೆ ಈ ಲೇಖನದಲ್ಲಿ ಕೊಟ್ಟಿರುವ ವಿವರಣೆ ಮತ್ತು ಫೋಟೋಗಳನ್ನು ನೋಡಿ ನನಗೆ ಮನದುಂಬಿಬಂತು!!
ನಾನೂ ಸಹ ಅಲ್ಲಿರುವಂತೆ ಊಹಿಸಿಕೊಂಡೆ!!!

ಈ ಫೋಟೋಗಳಲ್ಲಿ ನಿಮ್ಮೆಲ್ಲರನ್ನು ನೋಡಿ, ನನ್ನ ಪತಿಯ ಆಪ್ತ ಸ್ನೇಹಿತರೊಬ್ಬರು, ಎರಡು ವರ್ಷಗಳ ಹಿಂದೆ, ಮೈಸೂರಿನಲ್ಲಿ ಹೀಗೆ ತಮ್ಮ ಸ್ನೇಹಿತರನ್ನೆಲ್ಲಾ ಅವರ ಪರಿವಾರದೊಂದಿಗೆ ಭೇಟಿಯಾಗುವ ಅವಕಾಶ ಕಲ್ಪಿಸಿದ್ದರು.
ಆ ಪ್ರಸಂಗವೆಲ್ಲಾ ನೆನಪಿಗೆ ಬಂದು, ಮನಸ್ಸಿಗೆ ಮುದ ನೀಡಿತು! ಧನ್ಯವಾದಗಳು ನಿಮಗೆ.

ಶಾಂತಲಾ ಭಂಡಿ (ಸನ್ನಿಧಿ) said...

ಶಿವು ಅವರೆ...
ಜುಲೈ ಎರಡನೇ ವಾರದಲ್ಲಾಗಿದ್ರೆ ನಾನೂ ಸಹ ಬರೋಕೆ ಪ್ರಯತ್ನಿಸ್ತಿದ್ದೆ.
ಪರವಾಗಿಲ್ಲ, ಕಾರ್ಯಕ್ರಮಕ್ಕೆ ಮುಂಚಿತವಾಗಿ ಶುಭಾಶಯ.
ಎಲ್ಲಿದ್ದರೇನು, ಅಲ್ಲಿಯೇ ಇದ್ದಂತೆ.

NilGiri said...

ಶಿವು,

ಬ್ಲಾಗಿಗರೆಲ್ಲಾ ಒಂದೆಡೆ ಸೇರುತ್ತಿರುವುದು ನಿಜಕ್ಕೂ ಸಡಗರದ ವಿಷಯ. ನಾನಂತೂ ಬರಲಾಗುವುದಿಲ್ಲ :( ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಲಿ.

NilGiri said...
This comment has been removed by the author.
b.saleem said...

ಶಿವು ಸರ್,
ನಿಮ್ಮನ್ನು ಭೇಟಿ ಆದಾಗ ಬ್ಲಾಗ ಲೇಖಕರು
ಒಂದು ಕಡೆ ಸೆರುವ ಮತ್ತು ಪುಸ್ತಕ ತರವು
ವಿಚಾರ ತಿಳಿಸಿದ್ದಿರಿ. ನಾನಂತು ಕಾರ್ಯಕ್ರಮಕ್ಕೆ
ಖಂಡಿತ ಬರುವೆ.

AntharangadaMaathugalu said...

ಶಿವು ಸಾರ್...
ತುಂಬಾ ಸಂತಸವಾಯಿತು ವಿಷಯ ಓದಿ... ಎಲ್ಲರನ್ನೂ ಭೇಟಿಯಾಗುವ ಉತ್ತಮ ಅವಕಾಶ... ತಪ್ಪದೇ ಭಾಗವಹಿಸುತ್ತೇನೆ...

ಸುಮ said...

ಶಿವು ಸರ್ ನೆಟ್ ಎಂಬ ಮಾಯಾಲೋಕದಲ್ಲಿ ಪರಿಚಿತರಾಗಿ , ಗೆಳೆಯರಾಗಿರುವವರನ್ನು ಭೇಟಿಯಾಗುವ ಅವಕಾಶ! ನಿಜಕ್ಕೂ ಒಳ್ಳೆಯ ವಿಚಾರ. ಭಾಗವಹಿಸಲು ಉತ್ಸುಕಳಾಗಿದ್ದೇನೆ.

ವನಿತಾ / Vanitha said...

Good..:)
ಬರಲಾಗದಿದ್ದವರಿಗೆ live telecast ತೋರ್ಸಿ ಪ್ಲೀಸ್ ..!!

Anonymous said...

Me a new entrant to blog world.
Looking forward for the meeting.

ಮನಸು said...

oLLe kelasa ellaru seruva

ದಿನಕರ ಮೊಗೇರ said...

ellaroo seri .... olleya samaya kaleyona........ waiting for august 22nd

prashi said...

ಸರ್ ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡ್ತೀರ. ನಾನು ನಿಮ್ ಜೊತೆ ಮಾತಾಡ್ಬೇಕು. ನನ್ ಮೇಲ್ ಐಡಿ prashi00@yahoo.co.in Please mail me sir. or 9844595644 this is my contact number.please send your number to this. I hope you will give. Thank you sir

shivu.k said...

ಶ್ರೀನಿವಾಸ್ ಸರ್,

ನೀವು ತುಂಬಾ ದಿನಗಳ ನಂತರ ನನ್ನ ಬ್ಲಾಗಿನೆಡೆಗೆ ಬರುತ್ತಿರುವುದು ನನಗೆ ಖುಷಿಯ ವಿಚಾರ. ನಾವೆಲ್ಲಾ ಒಮ್ಮೆ ಒಂದು ದಿನ ಸಾಹಿತ್ಯ, ಕತೆ, ಕವನ, ಫೋಟೊಗ್ರಫಿ, ಪುಸ್ತಕ ಅಂತ ನಮ್ಮದೇ ಅಂತ ಒಂದು ದಿನ ಕಳೆಯೋಣವೆನ್ನುವುದು ಎಲ್ಲರ ಮನದ ಆಸೆ. ನೀವು ಖಂಡಿತ ಬರಲೇಬೇಕು. ದೂರದ ದೇಶಗಳಿಂದ ಕನ್ನಡ ಬ್ಲಾಗರ್ಸ್ ಬರುತ್ತಿದ್ದಾರೆ. ನೀವು ಬರಲೇ ಬೇಕು. ನಿಮ್ಮ ಮೇಲ್ ಐಡಿ ಕೊಡಿ. ನಿಮಗೆ ಮತ್ತಷ್ಟು ವಿವರಗಳನ್ನು ಕೊಡುತ್ತೇನೆ.

ನಿಮ್ಮ ಸಹಕಾರವಿರಲಿ.

ಧನ್ಯವಾದಗಳು

shivu.k said...

ಅಜಾದ್,

ಬ್ಲಾಗ್ ಕೂಟಕ್ಕೆ ನಾನು ಭಾರ ಹೊರುವುದೇನು ಇರುವುದಿಲ್ಲವೆಂದೇ ನನ್ನ ಭಾವನೆ. ಎಲ್ಲರನ್ನೂ ಸೇರಿಸಿಕೊಂಡು ನಮ್ಮ ಜವಾಬ್ದಾರಿಗಳನ್ನು ಹಂಚಿಕೊಂಡಾಗ ಎಲ್ಲವೂ ಚೆನ್ನಾಗಿ ಆಗುತ್ತದೆಯೆನ್ನುವುದು ನನ್ನ ಅನಿಸಿಕೆ. ಸದ್ಯ ಇದಕ್ಕೆ ಚಾಲನೆ ದೊರೆತಿರುವುದು ಖುಷಿ. ಒಮ್ಮೆ ಎಲ್ಲರೂ ಸೇರಿ ಚರ್ಚಿಸಿ ಮುಂದೆ ಏನಾಗಬೇಕು ಎನ್ನುವುದನ್ನು ನೋಡಬೇಕಿದೆ. ಮತ್ತೆ ನಮ್ಮ ಗೆಳೆಯರಿಗೆಲ್ಲಾ ಮೇಲ್ ಮಾಡುತ್ತಿದ್ದೇನೆ. ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿದೆ. ನಿಮಗೆ ಆಗಾಗ ಇದರ ವಿಚಾರವಾಗಿ update ಮಾಡುತ್ತಿರುತ್ತೇನೆ...

ಹಾಗೆ ನೋಡಿದರೆ ಅಷ್ಟು ದೂರದಿಂದ ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದು ನೀವೇ. ನಮಗೆಲ್ಲಾ ಸ್ಪೂರ್ತಿ ನೀಡಿದ್ದೂ ನೀವೆ ಅಲ್ಲವೇ. ಯಾರೋ ಒಬ್ಬರೂ ಶುರು ಮಾಡಬೇಕಿತ್ತು. ಅದು ನಿಮ್ಮಿಂದ ಆಗಿರುವುದು ಖುಷಿ ವಿಚಾರ...
ಧನ್ಯವಾದಗಳು.

shivu.k said...

ಮಹೇಶ್ ಸರ್,

ನೀವು ಕಾರ್ಯಕ್ರಮದ ಬಗ್ಗೆ ಕಾಳಜಿ ವಹಿಸುತ್ತಿರುವುದು ನೋಡಿದರೆ ಬರುವುದು ಖಚಿತ. ಅದಕ್ಕೆ ನಮಗೆಲ್ಲಾ ಸಂತೋಷ. ನೀವು ನಿಮ್ಮ ಪೂರ್ಣ ತಯಾರಿಯಿಂದ ಸಿದ್ದರಾಗಿ ಬಂದು ನಮ್ಮ ಜೊತೆಗೆ ಕೈ ಜೋಡಿಸಿ. ಎಲ್ಲರೂ ಒಟ್ಟಾಗಿ ಆನಂದದಿಂದ ಕಳೆಯೋಣ... ನಿಮ್ಮ ಕಡೆಯಿಂದಲೂ ಸಹಕಾರ ಬೆಂಬಲಕ್ಕೆ ಖುಷಿಯೆನಿಸುತ್ತೆ...

ಧನ್ಯವಾದಗಳು.

shivu.k said...

ಮನದಾಳದ ಪ್ರವೀಣ್,

ನೀವು ಈ ಭಾಗವಹಿಸಲು ನಿರ್ಧರಿಸುವುದು ನಮಗೆಲ್ಲಾ ತುಂಬಾ ಖುಷಿ. ನಿಮಗೆ ನಮ್ಮ ಕಾರ್ಯಕ್ರಮದ ಪಟ್ಟಿಯನ್ನು ಸ್ವಲ್ಪ ದಿನದಲ್ಲೇ ಮೇಲ್ ಮಾಡುತ್ತೇನೆ. ಅದಕ್ಕಿಂತ ನೀವು ಫೋನಿಗೆ ಸಿಗುತ್ತೀರಲ್ಲ...ತಿಳಿಸುತ್ತೇನೆ. ನೀವು ಹೇಳಿದ ಸಿನಿಮಾ ಸಾಹಿತಿ ಕವಿರಾಜ್ ರನ್ನು ಕರೆಸುತ್ತೀರೆನ್ನುವ ವಿಚಾರ ನನಗಂತೂ ಸಂತೋಷವಾಗಿದೆ. ಇದನ್ನು ನಮ್ಮ ಕಮಿಟಿ ಮುಂದೆ ಇಡುತ್ತೇನೆ.

ಧನ್ಯವಾದಗಳು.

shivu.k said...

ಕನಸು,

ಇದು ಗ್ರೇಟ್ ಐಡಿಯವೆಂದು ಸುಮ್ಮನಾಗದಿರಿ. ನೀವು ಭಾಗವಹಿಸಲೇಬೇಕು. ನಿಮ್ಮ ಮೇಲ್ ಐಡಿಯನ್ನು ನನಗೆ ಮೇಲ್ ಮಾಡಿ ನಿಮಗೆ ಈ ವಿಚಾರವಾಗಿ ಮತ್ತಷ್ಟು ವಿವರಗಳನ್ನು ತಿಳಿಸುತ್ತೇನೆ..

ಧನ್ಯವಾದಗಳು.

shivu.k said...

ಸುಬ್ರಮಣ್ಯ ಸರ್,

ನೀವು ನಮ್ಮ ಜೊತೆಗಿರುವುದು ನಮಗೆಲ್ಲಾ ಆನಂದ. ನಿಮ್ಮ ಸಹಕಾರ ನಮಗೆ ಬೇಕೇ ಬೇಕು. ನಿಮ್ಮ ಮೇಲ್ ಐಡಿ ಕೊಡಿ. ನಾನು ಮತ್ತಷ್ಟು ರೂಪುರೇಶೆಗಳನ್ನು ನಿಮಗೆ ತಿಳಿಸುತ್ತೇನೆ.
ಇದು ಖಂಡಿತ ನಮಗೆಲ್ಲರಿಗೂ all the best.

ಧನ್ಯವಾದಗಳು.

shivu.k said...

ತೇಜಸ್ವಿನಿ ಮೇಡಮ್,


ನೀವು ಮೊದಲಿಗೆ ಬ್ಲಾಗರ್ಸ್ ಪುಸ್ತಕದಲ್ಲಿ ನಿಮ್ಮ ಸ್ಥಳವನ್ನು ಕಾದಿಸಿರಿಸಿದ್ದೀರಿ. ಧನ್ಯವಾದಗಳು. ನಿಮ್ಮ ಬರಹವನ್ನು ಕಳಿಸಿಬಿಡಿ..

ನಿಮ್ಮ ಸಹಕಾರ, ಬೆಂಬಲಕ್ಕೆ ಧನ್ಯವಾದಗಳು. ಅನೇಕವಿಚಾರಗಳನ್ನು ಮುಂದೆ ನಿಮ್ಮೊಂದಿಗೆ ಚರ್ಚಿಸುತ್ತೇವೆ.

ಧನ್ಯವಾದಗಳು.

shivu.k said...

ಉದಯ ಸರ್,

ನೀವು ಈ ಬ್ಲಾಗರ್ಸ್ ಅನ್ನು ಭೇಟಿಮಾಡಲು ಮೊದಲು ಅವಕಾಶ ಮಾಡಿಕೊಟ್ಟಿದ್ದು ಈ ದೊಡ್ಡ ಕಾರ್ಯಕ್ರಮವನ್ನು ಮಾಡಲು ಧೈರ್ಯಬಂದಿದೆ. ಮತ್ತೆ ಈ ವಿಚಾರವನ್ನು ಆಗಲೇ ಅವಧಿ ಪ್ರಕಟಿಸಿದೆ. ಮತ್ತೆ ನಾವು ಎಲ್ಲರಿಗೂ ಮೇಲ್ ಮಾಡುತ್ತಿದ್ದೇವೆ. ಫೋನ್ ಮಾಡಿ ಹೇಳುತ್ತಿದ್ದೇವೆ. ಎಲ್ಲರ ಒತ್ತಾಸೆಯಿಂದ ಇದು ಸಂಪೂರ್ಣ ಯಶಸ್ವಿಯಾಗುತ್ತದೆಯೆನ್ನುವ ಭರವಸೆ ಎಲ್ಲರದು.

ನಿಮ್ಮ ಬೆಂಬಲ ಸಹಕಾರಕ್ಕೆ ಧನ್ಯವಾದಗಳು. ಮತ್ತಷ್ಟು ವಿವರಗಳನ್ನು ನಿಮಗೆ ಮೇಲ್ ಮಾಡುತ್ತೇನೆ.

shivu.k said...

ಸ್ನೋ ವೈಟ್,

ಚಿತ್ರಗಳನ್ನು ನೋಡಿ ಖುಷಿಪಟ್ಟಿರಲ್ಲ..ಅವರನ್ನೆಲ್ಲಾ ಖುದ್ದಾಗಿ ನೋಡುವ ಆಸೆಯಿಲ್ಲವೆ. ನೀವು ಇವತ್ತೆ ನಿಮ್ಮ ಕ್ಯಾಲೆಂಡರಿನಲ್ಲಿ ಆಗಸ್ಟ್ ೨೨ ಮಾರ್ಕ್ ಮಾಡಿಬಿಡಿ. ಅವತ್ತು ಬೇಟಿಯಾಗೋಣ ಏನಂತೀರಿ.?

shivu.k said...

ಚಂದ್ರು ಸರ್,

ಈ ಲೇಖನವನ್ನು ಪ್ರಕಟಿಸಿದ ಇಟ್ಟು ಕೊಂಡಿದ್ದೆ. ಈಗ ಸರಿಯಾದ ಸಮಯವೆನಿಸಿದ್ದರಿಂದ ಪ್ರಕಟಿಸಿದ್ದೇನೆ. ಎಲ್ಲರಿಗೂ ಅನುಕೂಲವಾಗುವಂತೆ ಅಗಸ್ಟ್ ೨೨ ಅಂತ ನಿಗದಿ ಪಡಿಸಿದ್ದೇವೆ.
ಮತ್ತೆ ನೀವು ಅದೃಷ್ಟವೆಂದು ಹೇಳಬೇಡಿ. ಈಗಲೇ ನಿಮ್ಮ ಕ್ಯಾಲೆಂಡರಿನಲ್ಲಿ ಮತ್ತು ಮನಸ್ಸಿನಲ್ಲಿ ಟಿಕ್ ಮಾಡಿಬಿಡಿ. ಸಕ್ರೀಯ ಬ್ಲಾಗಿಗರಾಗಿ ನೀವು ತಪ್ಪಿಸಿಕೊಳ್ಳುವಂತಿಲ್ಲ. ಮತ್ತೆ ನಿಮ್ಮಿಂದಲೂ ನಮಗೆ ಸಹಕಾರ ಬೇಕು. ಎಂಥ ಸಹಕಾರವೆನ್ನುವುದನ್ನು ಸದ್ಯದಲ್ಲೇ ತಿಳಿಸುತ್ತೇವೆ.
ಚಿತ್ರ ಲೇಖನವನ್ನು ನೋಡಿ ನೀವು ನಮ್ಮ ಜೊತೆ ಇದ್ದಂತೆ ಅಂದುಕೊಂಡಿದ್ದಕ್ಕೆ ಧನ್ಯವಾದಗಳು. ಮತ್ತೆ ಆಗಸ್ಟ್ ೨೨ ರಂದು ನೂರಾರು ಬ್ಲಾಗರುಗಳು ಒಟ್ಟಿಗೆ ಸೇರಿತ್ತೇವಲ್ಲ...ಅದನ್ನು ಕಲ್ಪಿಸಿಕೊಂಡರೆ......ಸೂಪರ್ ಅನ್ನಿಸುತ್ತೆ ಅಲ್ವಾ...

ನಿಮಗೆ ಮತ್ತಷ್ಟು ವಿವರಗಳನ್ನು ಮೇಲ್ ಮಾಡುತ್ತೇನೆ.
ಧನ್ಯವಾದಗಳು.

shivu.k said...

ಶಾಂತಲ ಮೇಡಮ್,

ನೀವು ದೂರದಿಂದಲೇ ಈ ಕಾರ್ಯಕ್ರಮಕ್ಕೆ ಶುಭಾಶಯ ತಿಳಿಸುತ್ತಿರುವುದಕ್ಕೆ ಥ್ಯಾಂಕ್ಸ್. ನೀವು ಬಿಡುವು ಮಾಡಿಕೊಂಡು ಭಾಗವಹಿಸಲು ಪ್ರಯತ್ನಿಸಿ. ಯಶಸ್ವಿಯಾದರೇ ನಮಗೆಲ್ಲಾ ಸಂತೋಷ. ಕಾಯುತ್ತಿರುತ್ತೇವೆ.

shivu.k said...

ನೀಲಗಿರಿ[ಗಿರಿಜಾ]ಮೇಡಮ್,

ನೀವು ಕೂಡ ಮತ್ತೊಂದು ದಿಕ್ಕಿನಿಂದ[ನ್ಯೂಜಿಲೆಂಡ್]ನಮಗೆಲ್ಲಾ ಆರೈಸುತ್ತಿರುವುದು ಖುಷಿಯಾಗಿದೆ. ನಿಮ್ಮ ಸಹಕಾರ ನಮಗೆಲ್ಲಾ ಬೇಕೇ ಬೇಕು. ಅವತ್ತು ನಿಮ್ಮನ್ನು ನಿರೀಕ್ಷಿಸುತ್ತೇವೆ.
ಧನ್ಯವಾದಗಳು.

shivu.k said...

ಸಲೀಂ,

ನೀವು ಸಕ್ರೀಯಾ ಬ್ಲಾಗ್ ಓದುಗರಾಗಿ, ಛಾಯಾಗ್ರಾಹಕರಾಗಿ ನೀವು ಬರಲೇ ಬೇಕು. ನಿಮ್ಮ ಕೊಪ್ಪಳ, ಗದಗ ಸುತ್ತ ಮುತ್ತ ಗೆಳೆಯರಿಗೆ ತಿಳಿಸಿ ಅವರ ಜೊತೆಗೂಡಿ ಬನ್ನಿ. ಕಾಯುತ್ತಿರುತ್ತೇನೆ.

shivu.k said...

ಶ್ಯಾಮಲ ಮೇಡಮ್,

ಇದು ನಮ್ಮೆಲ್ಲರ ತುಂಬಾ ದಿನದ ಆಸೆ. ನಿಮಗೂ ಇದೇ ಆಸೆಯಿರಬೇಕು ಅಲ್ಲವೇ...ಖಂಡಿತ ಸೇರಿ ಅವತ್ತು ಆತ್ಮೀಯವಾಗಿ ನಮ್ಮ ದಿನ ಮಾಡಿಕೊಳ್ಳೋಣ.

ನಿಮ್ಮ ಮೇಲ್ ಐಡಿ ಕೊಡಿ ಮತ್ತಷ್ಟು ವಿವರಗಳನ್ನು ಕಳಿಸುತ್ತೇನೆ.

shivu.k said...

ಸುಮ ಮೇಡಮ್,

ನೆಟ್ ಎನ್ನುವ ಮಾಯಲೋಕದಲ್ಲಿ, ಬ್ಲಾಗ್ ಲೋಕದ ತಾರೆಗಳನ್ನು ನೋಡಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ ಅಲ್ಲವೇ. ನಿಮ್ಮ ಮಾತೇ ನನ್ನ ಮಾತು ಕೂಡ. ನಿಮ್ಮ ಮೇಲ್ ಐಡಿ ಕಳಿಸಿ. ಬ್ಲಾಗರ್ಸ್ ಪುಸ್ತಕದ ವಿವರಗಳು ಮತ್ತು ಕಾರ್ಯಕ್ರಮದ ವಿವರಗಳನ್ನು ಕಳಿಸುತ್ತೇವೆ.

ಧನ್ಯವಾದಗಳು.

shivu.k said...

ವನಿತಾ,

ಬರಲಾಗದೇ ಇರುವವರ ಪಟ್ಟಿಗೆ ಈಗಲೇ ಸೇರಿಕೊಳ್ಳಬೇಡಿ. ಅವಕಾಶ ತೆರೆದಿಟ್ಟುಕೊಳ್ಳಿ. ಅದೃಷ್ಟದ ಬಲವಿದ್ದಲ್ಲಿ ಅಲ್ಲಿಂದ ಹಾರಿಬರಬಹುದಲ್ಲವೇ...ಮತ್ತೆ ನಿಮ್ಮ ಆಸೆಯನ್ನು ಪೂರೈಸಲು ಸಾಧ್ಯವಾ? ನೋಡಬೇಕು. ಆದ್ರೆ ರೆಕಾರ್ಡ್ ಖಂಡಿತ ತೋರಿಸುತ್ತೇವೆ.

ಧನ್ಯವಾದಗಳು.

shivu.k said...

ಸುಧಾ ಮೂರ್ತಿ ಮೇಡಮ್,

ನೀವು ನಮ್ಮ ಬ್ಲಾಗ್ ಲೋಕಕ್ಕೆ ಬಂದಿರುವುದು ನಮಗೆಲ್ಲಾ ಸಾವಿರ ಆನೆ ಬಲ ಬಂದಂತೆ. ನೀವು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದರೂ ನಿಮ್ಮ ಸರಳತೆ ನಮಗೆಲ್ಲಾ ಇಷ್ಟ. ಖಂಡಿತ ಬ್ಲಾಗರ್ ಕೂಟದಲ್ಲಿ ಬೇಟಿಯಾಗಿ ಅಂತರಂಗದ ಮಾತುಗಳನ್ನು ಹಂಚಿಕೊಳ್ಳೋಣ.

ಧನ್ಯವಾದಗಳು.

shivu.k said...

ಮನಸು ಮೇಡಮ್,

ನೀವು ಕುವೈಟಿನಿಂದ ಚಿಟ್ಟೆಗಳಂತೆ ಹಾರಿಕೊಂಡು ಬನ್ನಿ. ನಿಮ್ಮಲ್ಲರೆ ಒತ್ತಾಸೆಯೇ ನಮಗೆಲ್ಲಾ ಸ್ಪೂರ್ತಿ.

shivu.k said...

ದಿನಕರ್ ಸರ್,


ನಾನು ನಿಮ್ಮಂತೆ ಆಗಸ್ಟ್ ೨೨ ಕ್ಕೆ ಕಾಯುತ್ತಿದ್ದೇನೆ. ನಮ್ಮ ಬೆಳವಣಿಗೆಗಳನ್ನು ಫೋನ್ ಮಾಡುತ್ತೇನೆ. ಮೇಲ್ ಮಾಡುತ್ತೇನೆ.

ಧನ್ಯವಾದಗಳು.

shivu.k said...

ಪ್ರಶಾಂತ್ ಸರ್,

ನೀವು ಬ್ಲಾಗ್ ಲೋಕಕ್ಕೆ ಹೊಸಬರಾಗಿದ್ದೇನೆ ಅಂತ ನನಗೆ ಫೋನ್ ಮಾಡಿ ಹೇಳಿದ್ದೀರಿ. ಹಾಗೆಂದುಕೊಳ್ಳಬೇಡಿ ನನ್ನ ಬ್ಲಾಗಿಗೂ ಕೇವಲ ಒಂದುವರೆ ವರ್ಷವಷ್ಟೇ ಆಗಿದೆ. ಮತ್ತಷ್ಟು ವಿವರಗಳನ್ನು ನಿಮಗೆ ಮೇಲ್ ಮಾಡುತ್ತೇನೆ. ನಿಮ್ಮ ಮೇಲ್ ಐಡಿಯನ್ನು ನನಗೆ ಕಳಿಸಿಬಿಡಿ.

ಧನ್ಯವಾದಗಳು.

PARAANJAPE K.N. said...

ನಿಮ್ಮ ಬ್ಲಾಗಿನ ಬರಹ-ಫೋಟೋ ನೋಡಿ ನೆನಪು ಒ೦ದು ವರ್ಷ ಹಿ೦ದಕ್ಕೋಡಿತು. ಚೆನ್ನಾಗಿತ್ತು ಅಲ್ಲವೇ ಅ೦ದಿನ get-together. ನಾನು ಕೂಡ ನಿಮ್ಮ ಜೊತೆ ಇದ್ದು ಖುಷಿ ಅನುಭವಿಸಿದ್ದೆ, ಹೌದು ಬ್ಲಾಗಿಗರೆಲ್ಲರ ಸಮಾವೇಶ ನಡೆದಾಗ ಇನ್ನೆಷ್ಟು ಖುಷಿಯಾಗಬಹುದು?

ದೀಪಸ್ಮಿತಾ said...

ಶಿವು ಸರ್, ಬ್ಲಾಗಿಗರೆಲ್ಲ ಒಟ್ಟಿಗೆ ಸೇರಬೇಕೆನ್ನುವುದು ಒಳ್ಳೆಯ ವಿಚಾರವೇ. ಆಗಸ್ಟ್ 22 ರಂದು ಎಲ್ಲರೂ ಸೇರೋಣ

umesh desai said...

ಶಿವು ೨೨/೦೮/೨೦೧೦ ನಾ ಅಂತೂ ಬರತೇನಿ..ಮತ್ತೇನು ಸುದ್ದಿ...

balasubramanya said...

ಬ್ಲಾಗಿಗರ ಕೂಟ ಎಳೆಯಲು ಸಿದ್ದವಾಗಿರುವ ಶಿವೂ ನಿಮಗೆ ಶುಭಾಶಯಗಳು. ಸ್ವಾಮೀ ಹುಷಾರು ಇದು ಆರಂಭ ಶೂರತ್ವ ಆಗಭಾರದು.ಹಲವಾರು ಕೂಟಗಳು ಆರಂಭದಲ್ಲಿ ಉತ್ಸಾಹ ಕಂಡು ನಂತರ ಮುನ್ನಡೆಸುವವರಿಲ್ಲದೆ ಪತನ ಕಂಡಿವೆ , ಈ ಬಗ್ಗೆ ಇನ್ನಷ್ಟು ಚರ್ಚೆಯಾಗಿ ,ವಿಚಾರಗಳ ಮಂಥನವಾಗಲಿ. ಭದ್ರವಾದ ಬುನಾದಿ ಹಾಕಿ ಬ್ಲಾಗಿಗರ ಒಕ್ಕೂಟ ನಿರ್ಮಿಸೋಣ !! ನಿಮ್ಮೊಂದಿಗೆ ನಾವಿದ್ದೇವೆ.ಮೈಸೂರಿನಲ್ಲೂ ಹಾಗೂ ಮಂದ್ಯದಲ್ಲೂ ಇಂತಹ ಸಾಹಸಕ್ಕೆ ಕೈ ಹಾಕುವ ಧೈರ್ಯ ಬರುತ್ತಿದೆ ಪ್ರಯತ್ನ ಮಾಡುತ್ತೇನೆ. ಬನ್ನಿ ಒಂದಾಗಿ ಹಾರೋಣ ನಿಮ್ಮ ಕೆಲಸಕ್ಕೆ ಜೈ ಹೋ.ನನ್ನ ಮೊಬೈಲ್ ನಂಬರ್ ೯೪೪೮೨೧೮೪೪೯, ಹಾಗೆ ನಿಮ್ಮ ಮೊಬೈಲ್ ನಂಬರ್ ನನಗೆ ನೀಡಿ ಮಾತಾಡೋಣ.ಇದು ಒಂದು ನಿಸ್ವಾರ್ತ ತುಂಬಿದ ಕೆಲಸ ಆಗಲೆಂದು ನನ್ನ ಆಸೆ.

ಮನಸಿನ ಮಾತುಗಳು said...

Shivu sir,

bahala santoshada vichaara...

naanu nimmodane iddene... :-)