Thursday, February 12, 2009
ಈ ದೇಹದಿಂದ ದೂರನಾದೆ ಏಕೆ ಆತ್ಮನೇ....ಈ ಸಾವು ನ್ಯಾಯವೇ ?
ಕೂ...........ಚುಕ್‍ಬುಕ್...ಚುಕ್‌ಬುಕ್....ಕೂ..............ತುಂಬಾ ದೂರದಲ್ಲಿ ರೈಲಿನ ಶಬ್ದ ಕೇಳಿಸಿದಾಗ ಪ್ಲಾಟ್‌ಫಾರಂನ ಒಂದು ಮೂಲೆಯಲ್ಲಿ ಅರೆ ನಿದ್ರೆಯಲ್ಲಿದ್ದ ವಾಜಿದ್‌ಗೆ ಎಚ್ಚರವಾಯಿತು..."ಫಾತಿಮಾ... ಫಾತಿಮಾ....ಫಾತಿಮಾ......ಮೂರ್ನಾಲ್ಕು ಸಲ ಅವನು ಕೂಗಿದಾಗ ಯಾರೋ ಕೈಯಿಡಿದಂತಾಯಿತು......ಇದು ಖಂಡಿತ ನನ್ನ ತಂಗಿ ಫಾತಿಮಾ ಕೈಯಲ್ಲ. ಅರೆನಿದ್ರೆ...ಮತ್ತೊಮ್ಮೆ ಕೂಗಿದ..... "ಫಾತಿಮಾ ಇಲ್ಲ. ನಾನು ಗಿಡ್ಡಮ್ಮ ನಿನ್ನ ಗಿಡ್ಡಿ. ಇರು ನಾನೇ ರೈಲು ಹತ್ತಿಸ್ತೀನಿ...ಅಷ್ಟರಲ್ಲಿ ಫಾತಿಮ ಬರಬಹುದು....
ಗಿಡ್ಡಿ ಕೈಯನ್ನು ಒಮ್ಮೆ ಮೆದುವಾಗಿ ಅದುಮಿ ನಕ್ಕ. ಫಾತಿಮ ನನ್ನ ತೋಳನ್ನು ಹಿಡಿದರೆ ಮಗುವೇ ದಾರಿ ತೋರಿದ ಹಾಗೆ....ಗಿಡ್ಡಿ ಕೈ ಹಿಡಿದರೆ ಅಮ್ಮನೇ ಕೈಯಿಡಿದು ಮಗುವಿಗೆ ದಾರಿ ತೋರಿದಂತೆ.
ಗಿಡ್ಡಮ್ಮ ತನ್ನ ಫೋಲಿಯೋ ಪೀಡಿತ ಬಲಗಾಲಿನ ಸಹಾಯಕ್ಕೆ ಇದ್ದ ಊರುಗೋಲನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡು ಕಾಲೆಳೆಯುತ್ತಾ ಆತನ ಕೈಯಿಡಿದುಕೊಂಡು ಫ್ಲಾಟ್‌ಫಾರಂನತ್ತ ನಡೆದಳು.
" ಬಾಲೆ ತಮ್ಮದು ರೈಲಿನಲ್ಲಿ ಏನೂ ಕೆಲಸ ? " ವಾಜಿದ್ ಮಾತು ಪ್ರಾರಂಬಿಸುವುದು ಹೀಗೆ...
"ಸ್ವಾಮಿ ನಾನು ಪ್ರತಿ ಬೋಗಿಯ ನೆಲದ ಕಸವನ್ನು ಗುಡಿಸಿ, ಸ್ವಚ್ಚಮಾಡಿ....ಜನರು ಕೊಡುವ ಚಿಲ್ಲರೆ ಹಣವನ್ನು ಒಟ್ಟು ಕೂಡಿಸಿ ನನ್ನಮ್ಮನಿಗೆ ಗಂಜಿ ಮಾಡಿಕೊಡುತ್ತೇನೆ. ನಿನಗೂ ನಿನ್ನ ತಂಗಿಗೂ ಪಾಲು ಕೊಡುತ್ತೇನಲ್ಲ......ಅಂದ ಹಾಗೆ ತಮ್ಮದೇನು ಕೆಲಸ ?" ಅವಳ ಮಾತಿನಲ್ಲೂ ನಾಟಕೀಯತೆ ಇತ್ತು.
"ರಾಜಕುಮಾರಿ ನನಗೆ ಕಣ್ಣು ಕಾಣುವುದಿಲ್ಲ. ಅದ್ರೆ ಪ್ರತಿ ಬೋಗಿಯಲ್ಲೂ ಹಾಡು ಹಾಡುತ್ತೇನೆ. ತದನಂತರ ನನ್ನ ತಂಗಿಗೆ ಜನರು ಕೊಡುವ ಬಿಕ್ಷೆ ಕಾಸಿನಿಂದ ತಂಗಿ, ಅಮ್ಮನನ್ನು ಸಾಕುತ್ತೇನೆ......"
"ಎಲೈ ಬಾಲಕ, ಇಬ್ಬರಲ್ಲಿ ಒಬ್ಬಳು ನಿನ್ನ ತಂಗಿ ಯಾರೆಂದು ನನಗೆ ತಿಳಿದಿದೆ.. ಅಮ್ಮ ಯಾರೆಂದು ಹೇಳುವಂತವನಾಗು...
"ಸರಿ ಕೇಳು ಬಾಲೆ ನನ್ನ ಅಮ್ಮ ನೀನೇ ಅಲ್ಲವೇ"
ಇಬ್ಬರು ಜೋರಾಗಿ ನಕ್ಕರು...ನಗುತ್ತಿದ್ದರು... ನನಗಿಂತ ದೊಡ್ಡವನಾದ ಇವನಿಗೆ ನಾನು ಅಮ್ಮನಾದೆನೇ........ನಗುನಗುತ್ತಾ ಹಾಗೆ ಕಣ್ಣೀರಾದಳು....ವಾಜಿದ್ ನಗುತ್ತಲೇ ಇದ್ದ.
ಇವರಿಬ್ಬರೇ ಇದ್ದಾಗ ಒಂದು ಅದ್ಬುತ ಗೆಳೆತನದ ಅಲೆ ಅವರ ನಡುವೆ ಸುತ್ತುತ್ತಿರುತ್ತದೆ. ಶ್ರೀಮಂತರಿಗೆ ಶ್ರೀಮಂತರು, ಬಡವರಿಗೆ ಮತ್ತಷ್ಟು ಬಡವರು, ಬಿಕ್ಷುಕರಿಗೆ ಬಿಕ್ಷುಕರೆ ಜೊತೆಯಾಗುವಂತೆ ದೇವರು ಹೊಂದಿಸಿರುತ್ತಾನಾ ? ಅವಳು ಅಂದುಕೊಳ್ಳುವಷ್ಟರಲ್ಲಿ ಫಾತಿಮಾ ಇವರನ್ನು ಕೂಡಿಕೊಂಡಳು.
"ಈ ದೇಹದಿಂದ ದೂರನಾದೆ ಏಕೆ ಆತ್ಮನೇ, ಈ ಸಾವು ನ್ಯಾಯವೇ...ಈ ಸಾವು ನ್ಯಾಯವೇ....." ಬಲಗೈಯಲ್ಲಿ ಎರಡು ಪುಟ್ಟ ತೆಳು ಹಲಗೆ ತುಂಡುಗಳನ್ನೆ ತಾಳಬದ್ದವಾಗಿ ತಟ್ಟುತ್ತಾ...ಮೈಮರೆತು ತನ್ಮಯತೆಯಿಂದ ವಾಜಿದ್ ಹಾಡುತ್ತಿದ್ದರೆ........ ಇಡೀ ಬೋಗಿ ಜನರ ಗಮನವೆಲ್ಲಾ ಅವನ ಕಡೆ.
ಹುಟ್ಟು ಕುರುಡನಾದ ವಾಜಿದ್ ಮುಸ್ಲಿಮ್ ಕೇರಿಯಲ್ಲಿ ಬೆಳೆದವನು. ತನ್ನ ಹತ್ತನೆ ವಯಸ್ಸಿನಲ್ಲಿ ಹದಿನೈದು ವರ್ಷಗಳ ಹಿಂದೆ ಒಂದು ದಿನ ತಡೆಯಲಾರದ ಹಸಿವು. ಹಸಿವು ತಡೆಯಲು ಏನಾದರೂ ಮಾಡಬೇಕಿತ್ತು. ದೇವಸ್ಥಾನದಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿದ್ದ ಇದೇ ಹಾಡು ಕೇಳುತ್ತಾ ಅವನಿಗರಿವಿಲ್ಲದಂತೆ ಮೈ ಮರೆತು ಜೀವ ಹಿಂಡುತ್ತಿದ್ದ ಹಸಿವನ್ನು ಮರೆತಿದ್ದ. ಜೊತೆಗೆ ತಾನು ಗುನುಗತೊಡಗಿದ್ದ. ಅಂದು ಹಾಡಲು ಶುರು ಮಾಡಿದವನು ಇಂದಿಗೂ ಅದೇ ಹಾಡನ್ನು ತನ್ಮಯನಾಗಿ ಹಾಡುತ್ತಾನೆ....ಹಾಡು ಮುಗಿದ ನಂತರ ಪುಟ್ಟ ಫಾತಿಮ ಒಡ್ಡಿದ ಸೆರಗಿನೊಳಗೆ ಅವತ್ತಿನ ಗಂಜಿ ಹಣ.
ತನ್ನ ದೇಹಕ್ಕೆ ಭಾರವೆನಿಸಿದ್ದ ತನ್ನ ಫೋಲಿಯೋ ಪೀಡಿತ ಕಾಲನ್ನು ಎಳೆದಾಡುತ್ತಾ ಬೋಗಿಗಳನ್ನು ಗುಡಿಸಬೇಕಾದರೆ ಗಿಡ್ಡಮ್ಮನಿಗೆ ಸಾಕು ಸಾಕಾಗುತ್ತಿತ್ತು....ಬೇಡಿದ ಬಿಕ್ಷೆ ಹಣ ಪುಡಿಗಾಸು. ಅದರಲ್ಲೇ ಜೀವನ.. ಎಷ್ಟೋ ದಿನ ಇಡಿ ಬೋಗಿಯಲ್ಲಿ ಒಂದೇ ಒಂದು ರೂಪಾಯಿಯೂ ಸಿಗುತ್ತಿರಲಿಲ್ಲ....ಉಪವಾಸ..ನಿಟ್ಟುಸಿರು..... ಈಗ ಆಗಿಲ್ಲ... "ಸ್ವಲ್ಪ ಕಾಲು ಎತ್ಕಳ್ಳಿ ಸಾ" .....ವಿನಯದಿಂದ ಹೇಳುತ್ತಾ ಒಂದೊಂದೆ ಕಂಪಾರ್ಟ್‌ಮೆಂಟುಗಳನ್ನು ಸುಲಭವಾಗಿ ಗುಡಿಸುತ್ತಿದ್ದಾಳೆ......ಭಾರವೆನಿಸುವ ಕಾಲನ್ನು ವಾಜಿದ್ ಹಾಡು ಮರೆಸುತ್ತದೆಯೆ ? ಅವಳಿಗೂ ಗೊತ್ತಿಲ್ಲ.
ಇಷ್ಟಕ್ಕೂ ಅವನು ಮತ್ತು ಅವನ ತಂಗಿ ಪರಿಚಯವಾಗಿದ್ದು ಎರಡು ವರ್ಷಗಳ ಹಿಂದೆ. ಬರ್ಬರವಾದ ನನ್ನ ಜೀವನಕ್ಕೆ ಊರುಗೋಲಂತೆ ಸಿಕ್ಕಿದ್ದ. ಇವತ್ತಿಗೂ ಆಗಿದ್ದಾನೆ. ಹಾಡಿ ನನ್ನ ನೋವು ಮರೆಸುತ್ತಾನೆ....ಹಣ, ಪ್ರೀತಿ, ನೋವು ನಲಿವು, ಮಾತು, ನಗು, ಅಳು...ಎಲ್ಲವನ್ನು ಹಂಚಿಕೊಳ್ಳುತ್ತಾನೆ. ಹಂಚಿಕೊಳ್ಳುವುದರಲ್ಲಿನ ಆನಂದ ತೋರಿಸಿದ್ದೆ ಅವನು. ಈಗೀಗ ನಾನು ಮತ್ತು ನನ್ನ ತಾಯಿ ಉಪವಾಸವಿಲ್ಲ.....ಕೊನೆ ಪಕ್ಷ ಎರಡು ಹೊತ್ತಿನ ಗಂಜಿ ಸಿಗುತ್ತಿದೆ. ಅಲ್ಪಸ್ವಲ್ಪ ಓದಿ ಬರೆಯಲು ಬಂದರೂ ಬೇರೆಲ್ಲೂ ಹೋಗುವ ಬದಲು ಇವನ ಹಾಡು ಕೇಳುತ್ತಾ ಬಿಕ್ಷೆ ಬೇಡುವ ಆನಂದವೇ ನನಗೆ ಸಾಕು. ಅವನ ಕಾಣದ ಕಣ್ಣಿಗೆ ಅದೇನೊ ಆಪರೇಷನ್ ಮಾಡಿಸಿದರೆ ಕಣ್ಣು ಬರುತ್ತದೆಂದು ಯಾರ್‍ಓ ಹೇಳಿದ ನೆನಪು. ಅವತ್ತಿನಿಂದ ಸ್ವಲ್ಪ ಸ್ವಲ್ಪ ಹಣವನ್ನು ಎತ್ತಿಡುತ್ತಿದ್ದಾಳೆ.
ಪಕ್ಕದ ಬೋಗಿಗೆ ತೆವಳಿಕೊಂಡು ಹೋದಳು.
"ನೋಡೇ ನನ್ನ ಬಾಯ್ ಪ್ರೆಂಡ್ ಸುಮಂತ್ ಸಿಕ್ಕಾ ಪಟ್ಟೆ ಕಂಜೂಸ್ ಕಣೆ...ಏನು ಕೊಡಿಸೊಲ್ಲ ... "
"ಹೌದಾ ನನ್ನ ಬಾಯ್ ಪ್ರೆಂಡ್ ಕಾರ್ತಿಕ್ ಆಗಿಲ್ಲಪ್ಪ...ಕೇಳಿದ್ದನೆಲ್ಲಾ ಕೊಡಿಸುತ್ತಾನೆ... "
"ಅಯ್ಯೋ ಇಲ್ಲಿ ಕೇಳು ನನ್ನ ಗೆಳೆಯ ರಾಜ್ ಇದ್ದಾನಲ್ಲ ಅವನು ತುಂಬಾ ಕ್ಯೂಟ್. ಅದಕ್ಕೆ ಅವನಿಗೆ ನಾನೇ ಖರ್ಚ್ ಮಾಡುತ್ತೇನೆ ಗೊತ್ತೆ ಅವನು ನಾನು ಹೇಳಿದ ಹಾಗೆ ಕೇಳುತ್ತಾನೆ"............ "
ಮೂವರು ಕಾಲೇಜು ಹುಡುಗಿಯರ ನಡುವೆ ಬಿರುಸಿನ ಮಾತುಕತೆ ನಡೆದಿತ್ತು......ಪ್ರೆಂಡ್-ಗೆಳೆಯ ಅಂದರೇನು.....ಕೇಳಿದ್ದನ್ನೆಲ್ಲಾ ಕೊಡಿಸಿದರೆ ಒಳ್ಳೆಯವನು...ಇಲ್ಲದಿದ್ದರೆ ಕೆಟ್ಟವನೇ ? ಇಷ್ಟಕ್ಕೂ ವಾಜಿದ್ ಬಳಿ ನಾನು ಏನು ಕೇಳಿಲ್ಲ. ಅವನು ನನ್ನನ್ನು ಏನು ಕೇಳಿಲ್ಲ. ಇದ್ದುದ್ದನ್ನು ಹಂಚಿಕೊಳ್ಳುತ್ತೇವೆ...ಇಲ್ಲದಿದ್ದಲ್ಲಿ ಉಪವಾಸವಿರುತ್ತೇವೆ.. ನನಗೆ ಮತ್ತು ನನ್ನ ಅಮ್ಮನಿಗಾಗಿ ಅವನ ಸಂಪಾದನೆಯಲ್ಲಿ ಹೆಚ್ಚಿನ ಪಾಲನ್ನು ನಾನು ಎಷ್ಟು ಬೇಡವೆಂದರೂ ಕೊಟ್ಟುಬಿಡುತ್ತಾನೆ. ಅವರಿಬ್ಬರು ಕಡಿಮೆ ಉಳಿಸಿಕೊಳ್ಳುತ್ತಾರೆ. ಕಣ್ಣಿಲ್ಲದ ಅವನಿಗೆ ನಾನು ಯಾವಾಗಲು ಸಹಾಯ ಮಾಡಬೇಕು. ಅದರೆ ಅವನು ನನ್ನಿಂದ ಎಂದಿಗೂ ಸಹಾಯವನ್ನೇ ಬೇಡುವುದಿಲ್ಲವಲ್ಲ.....ಹಾಗದರೆ ಅವನು ನನಗೆ ಏನಾಗಬೇಕು...? ಇವಳಲ್ಲಿ ಪ್ರಶ್ನೆಗಳೇಳುತ್ತಿದ್ದವು..
ತಂದೆಯಂತೆ ವಾತ್ಸಲ್ಯವಿದೆ .-ನನ್ನ ತಾಯಿಗೆ ನಾನೇ ತಾಯಿಯಾದರು ನನಗೂ ತಾಯಿಬೇಕೆನಿಸಿದರೆ ಅವನ ಮಡಿಲು ತಾಯಿತೂಕದ್ದು....ಅಣ್ಣನೇ ಆಗಿ ಕೈತುತ್ತು ತಿನ್ನಿಸುವನಲ್ಲ...ಬಂದುವಾಗಿ ಸದಾ ನನ್ನ ಕಾಳಜಿ.....ಹಾಡುವಾಗ ಮಗುವಿನಂತೆ ತನ್ಮಯನಾಗುವ ಇವನು ಮಗುವೇ ? ಇದೆಲ್ಲವನ್ನೂ ನೀಡುತ್ತಾನೆ ಒಟ್ಟೊಟ್ಟಿಗೆ. ಕೆಲವೊಮ್ಮೆ ಬಿಡಿ ಬಿಡಿಯಾಗಿ. ಮೂವರು ಆಡುತ್ತೇವೆ...ಕುಣಿಯುತ್ತೇವೆ...ರೇಗಿಸಿಕೊಳ್ಳುತ್ತಿರುತ್ತೇವೆ....ಒಟ್ಟಿಗೆ ನಗುತ್ತೇವೆ....ಅಳುತ್ತೇವೆ....ಆದರೂ ಅವನು ನನ್ನಿಂದ ಏನು ಬಯಸುವುದಿಲ್ಲ.....ಪರಿಶುದ್ಧ ಗೆಳೆತನವೆಂದರೆ ಇದೇನಾ ?...........ಗಿಡ್ಡಿಗೆ ಹಾಗೆ ಅನ್ನಿಸುತ್ತಿದ್ದಂತೆ....ಮುಖದಲ್ಲಿ ಚಿಮ್ಮಿದ ಮುಗುಳ್ನಗೆ ಯಾರಿಗೂ ಕಾಣಲಿಲ್ಲ...
ರೈಲು ನಿಂತಿತು...ಒಂದಷ್ಟು ಜನ ಹತ್ತಿಳಿದರು....ಮತ್ತೊಂದು ಬೋಗಿಯಲ್ಲಿ " ಈ ದೇಹದಿಂದ............ಹಾಡು ಕೇಳಿ ಕೆಲವು ಮಕ್ಕಳು ಮತ್ತು ಮಕ್ಕಳ ಮನಸ್ಸಿನವರು ಪ್ರೀತಿಯಿಂದ, ಇನ್ನೂ ಕೆಲ ದೊಡ್ಡ ಮನಸ್ಸಿನವರು ಕರುಣೆಯಿಂದ, ತಮ್ಮ ಗಂಬೀರ ಚರ್ಚೆಗೆ ತೊಂದರೆಯಾಯಿತೆಂದು ಬೇಸರದಿಂದ ಕೆಲವರು ಪುಡಿಗಾಸು ಹಾಕಿದರೆ, ಇನ್ನೂ ಕೆಲವರು ಹಾಕಬೇಕೆಂದು ಕೈಯನ್ನು ಜೇಬಿಗಿಳಿಸಿ ಮುಂದಿನ ನಿಲ್ದಾಣದಲ್ಲಿ ಸಿಗರೇಟಿಗೆ ಬೇಕಾಗುತ್ತದೆ ಅಂತ ಸುಮ್ಮನಾದರು......ಬರಿಕೈ ಹೊರತೆಗೆದರೆ ಕೈಗೆ ನಾಚಿಕೆಯಾಗುತ್ತದೆಂದು ಕೈಯನ್ನು ಜೀಬಿನಲ್ಲೇ ಬಿಟ್ಟರು......
"ನೋಡಯ್ಯ....ವ್ಯಾಲೆಂಟೇನ್ಸ್ ಡೇ ದಿನ ಪ್ರೇಮಿಗಳೆ ಒಬ್ಬರಿಗೊಬ್ಬರು ಪ್ರೀತಿಯನ್ನು ವ್ಯಕ್ತಪಡಿಸಬೇಕೆಂದೇನಿಲ್ಲ....."
"ಮತ್ತೆ ?......."
"ಪ್ರೀತಿಸುವ ಮನಸ್ಸುಳ್ಳವರು ಯಾರನ್ನು ಬೇಕಾದರೂ ಪ್ರೀತಿಸಬಹುದು."
"ಹೌದಾ! "
"ಇಂಥ ಪ್ರೀತಿಗಳಿಗೆ ತಾಯಿ-ಮಗುವಿನ ಪ್ರೀತಿ, ಗೆಳೆಯರ ನಡುವಿನ ಪ್ರೀತಿ, ಅಣ್ಣ-ತಂಗಿ, ಮಕ್ಕಳು-ಅಜ್ಜ ಅಜ್ಜಿಯರ ಪ್ರೀತಿ ......ಇತ್ಯಾದಿಗಳನ್ನು ಆ ದಿನ ವ್ಯಕ್ತಪಡಿಸಿ ಗಿಪ್ಟ್ ಕೊಡಬಹುದು.... "
ಕೆಲವರ ನಡುವೆ ಭಯಂಕರ ಚರ್ಚೆಯಾಗುತ್ತಿದ್ದ ಈ ವಿಚಾರ ವಾಜಿದ್ ಗಮನ ಸೆಳೆಯಿತು. ಆತನ ಕೈ ಬಿಕ್ಷೆ ಬೇಡುತ್ತಿದ್ದರು ವಾಜಿದ್ ಗಮನ ಮಾತ್ರ ಈ ವಿಚಾರದತ್ತಲೇ ಇತ್ತು ರಾತ್ರಿ ತನ್ನ ಗುಡಿಸಲಿನಲ್ಲೂ ಇದೇ ವಿಚಾರ ...
"ಫಾತಿಮಾ ನಾವು ಕೂಡಿಟ್ಟ ಹಣವೆಷ್ಟಿದೆ. ?"
"ಅಣ್ಣಾ ಈಗ ಇರುವ ಹಣದಲ್ಲಿ ಒಂದು ಚೆಂದವಾದ ಕ್ಯಾಲಿಪರ್ ಮತ್ತು ಷೂವನ್ನು ಗಿಡ್ಡಿಗೆ ಹಾಕಿಸಬಹುದು....." ಅದರಿಂದ ಈಗಿನ ತೆವಳುವ ಸ್ಥಿತಿಗಿಂತ ನಡೆದಾಡುವ ಸ್ಥಿತಿಗೆ ಬರುತ್ತಾಳೆಂದು ಡಾಕ್ಟರ್ ಹೇಳಿದಾರೆ ಅಣ್ಣ."
"ಹೌದಾ ! ಹಾಗಾದರೆ ಅದೆಂತದೊ ಪ್ರೇಮಿಗಳ ದಿನ ಇದೆಯಂತಲ್ಲ, ಅವತ್ತು ಏನ್ ಮಾಡಿದರೂ ಒಳ್ಳೆಯದಾಗುತ್ತಂತೆ !! ಅವಳಿಗೆ ಅವತ್ತು ಹಾಕಿಸೋಣ, ಅವಳು ಚೆನ್ನಾಗಿ ನಡೆದಾಡಿದರೇ ಎಷ್ಟು ಚೆನ್ನಾ ಅಲ್ವಾ........".
"ಹೌದು ಅಣ್ಣ. ನಾನು ನಾಳೇನೆ ಹೋಗಿ ಇರೋ ದುಡ್ಡನ್ನೆಲ್ಲಾ ಡಾಕ್ಟ್ರಪ್ಪನಿಗೆ ಕೊಟ್ಟು ಬರುತ್ತಿನಿ.....".
ಹೇಳುತ್ತಾ ತನ್ನ ತೊಡೆಯ ಮೇಲೆ ತಲೆಹಾಕಿದ್ದ ಅಣ್ಣನ ತಲೆಕೂದಲೊಳಗೆ ಕೈಯಾಡಿಸುತ್ತಿದ್ದರೆ ವಾಜಿದ್ ನಿದ್ದೆ ಹೋದ........ ಆಣ್ಣನ ಕಣ್ಣಿನ ಆಪರೇಷನ್‌ಗಾಗಿ ಕೂಡಿಟ್ಟ ಹಣವನ್ನು ಗಿಡ್ಡಿ ಒಮ್ಮೆ ತೋರಿಸಿ, ಕಳೆದ ವಾರ ನನ್ನನ್ನು ಕರೆದುಕೊಂಡು ಹೋಗಿ ಡಾಕ್ಡ್ರರಿಗೆ ಕೊಟ್ಟು ಬಂದ ವಿಚಾರವನ್ನು ವಾಜಿದ್‌ಗೆ ಹೇಳಬೇಡವೆಂದು ಅವಳು ಹೇಳಿದ್ದು ನೆನಪಾಗಿ ಕಣ್ತುಂಬಿ ಬಂದಿತ್ತು.
ಆ ದಿನ ಬಂದೇ ಬಿಟ್ಟಿತ್ತು. ಇಬ್ಬರೂ ಗಿಡ್ಡಮ್ಮನಿಗಾಗಿ ಫ್ಲಾಟ್‌ಪಾರಂನಲ್ಲಿ ಕಾಯುತ್ತಿದ್ದಾರೆ.......ಮುಖದಲ್ಲಿ ಸಂಬ್ರಮ. ಇವತ್ತು ತುಂಬಾ ಸಂತೋಷವಾಗಿರುವಾಗ ತನ್ನ ಮೆಚ್ಚಿನ ಹಾಡು ಹಾಡಬಾರದೆಂದು ವಾಜಿದ್ ಅಂದುಕೊಳ್ಳುತ್ತಿದ್ದರೆ....ನನ್ನ ಆಣ್ಣನ ಕಣ್ಣು ಮತ್ತು ಗೆಳತಿಯ ಕಾಲು ಎರಡು ಒಟ್ಟಿಗೆ ಬರುತ್ತಿರುವುದು ಕಲ್ಪಿಸಿಕೊಂಡು ಫಾತಿಮ ಮುಖದಲ್ಲಿ ಸಾವಿರ ಖುಷಿಗಳ ಮಿಂಚು.
ನಿಲ್ದಾಣದಲ್ಲಿ ನಿದಾನವಾಗಿ ಶುರುವಾದ ಗದ್ದಲ ತಾರಕಕ್ಕೇರತೊಡಗಿತ್ತು.
ಅಲ್ಲಲ್ಲೇ ಗುಸು ಗುಸು ಪಿಸಪಿಸ....ಮಾತುಗಳು. ಯಾರೋ ರೈಲಿಗೆ ಸಿಕ್ಕಿ ಸತ್ತು ಹೋಗಿದ್ದಾರೆ.....ಹಾಗೆ ಹೀಗೆ...ಮಾತು ಕೇಳಿ ಬರುತ್ತಿದ್ದಂತೆ ಕಲ್ಪನಾ ಲೋಕದಲ್ಲಿ ಮುಳುಗಿದ್ದ ಇಬ್ಬರಿಗೂ ಎಚ್ಚರವಾಯಿತು.......ಆಣ್ಣಾ ಯಾರೋ ರೈಲಿಗೆ ಸಿಕ್ಕಿ ಸತ್ತು ಹೋಗಿದ್ದರಂತೆ....ನೀನಿಲ್ಲೇ ಇರು ನಾನು ಹೋಗಿ ನೋಡಿ ಬರುತ್ತೇನೆ......ಅಂದವಳೇ ಅಲ್ಲಿಂದ ಓಡಿದಳು......
ತನ್ನ ಕಣ್ಣನ್ನು ತಾನೇ ನಂಬಲು ಆಗುತ್ತಿಲ್ಲ. ಅದು ಗಿಡ್ಡಿ. ಸಂಶಯವೇ ಇಲ್ಲ......ತುಂಬಾ ಖುಷಿಯಿಂದ ಬರುತ್ತಿದ್ದಳಂತೆ. ಅದೇ ಗುಂಗಿನಲ್ಲಿ ಮೈಮರೆತು ಬರುತ್ತಿರುವ ರೈಲನ್ನು ಗಮನಿಸಲಿಲ್ಲವಂತೆ......ಗುಂಪಿನಲ್ಲಿ ಮಾತುಗಳು ಹರಿದಾಡಿದವು.....ಫಾತಿಮಾ ಓಡಿಬಂದಳು ಅಣ್ಣನ ಬಳಿಗೆ. ವಾಜಿದ್‌ಗೆ ವಿಚಾರ ಗೊತ್ತಾಗುತ್ತಿದ್ದಂತೆ...ಭೂಮಿ ಬಿರಿದಂತಾಯಿತು......ಎಷ್ಟು ತಡೆದುಕೊಂಡರೂ ಆಗುತ್ತಿಲ್ಲ.....ಅವನಿಗರಿವಿಲ್ಲದಂತೆ ಒತ್ತರಿಸಿಕೊಂಡು ಬಂತು.....
" ಈ ದೇಹದಿಂದ ದೂರನಾದೆ ಏಕೆ ಆತ್ಮನೇ ಈ ಸಾವು ನ್ಯಾಯವೇ ಈ ಸಾವು ನ್ಯಾಯವೇ...................
[ನನ್ನ ಭಾವ ಸ್ಕೂಲ್ ಟೀಚರ್. ಪ್ರತಿದಿನ ಶಾಲೆಗೆ ರೈಲಿನಲ್ಲಿ ಹೋಗಿ ಬರುತ್ತಾರೆ. ಅವರು ಹೇಳಿದ ನಡೆದ ಘಟನೆಯನ್ನು ಆದಾರಿಸಿ ಬರೆದ ಪುಟ್ಟ ಕತೆ ಇದು. ನನ್ನ ಕಡೆಯಿಂದ ಇದು ಬ್ಲಾಗ್ ಗೆಳೆಯರಿಗೆ ವ್ಯಾಲೆಂಟೈನ್ಸ್ ಡೇ ಗಿಫ್ಟು ಆಂದುಕೊಳ್ಳುತ್ತೇನೆ.....]
ಲೇಖನ ಮತ್ತು ಚಿತ್ರ.
ಶಿವು.
Subscribe to:
Post Comments (Atom)
79 comments:
ಕತೆ ಚೆನ್ನಾಗಿದೆ, ಓದಿಸಿಕೊಂಡು ಹೋಯಿತು.
ಅದರಲ್ಲಿದ್ದ ಸಂಬಂಧಗಳು ಭಾವನೆಗಳು ಇನ್ನೂ ಇಷ್ಟವಾದವು.
ಶಿವು ಅವರೆ...
ಪ್ರೇಮಿಗಳ ದಿನಕ್ಕೆ ನಿಮ್ಮೆಲ್ಲ ಓದುಗರಾದ ನಮಗೆ ಚೆಂದದ ಉಡುಗೊರೆ ಕೊಟ್ಟಿದ್ದೀರಿ, ಧನ್ಯವಾದಗಳು.
ಕಥೆ ಓದಿ ಮುಗಿವಾಗ ಕಣ್ದುಂಬಿ ಬರುತ್ತದೆ. ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ.
ಮನಸ್ಪರ್ಶಿ ಬರಹ.
ಈ ಕಥೆಗೆ ನನ್ನದೊಂದು ಕಂಬನಿ.
ಶಿವು ...
ನಿಮ್ಮ ಬರವಣಿಗೆ ಪಕ್ವವಾಗುತ್ತ ಸಾಗುತ್ತಿದೆ...
ತುಂಬಾ.. ಭಾವ ಪೂರ್ಣವಾಗಿದೆ...
ಓದುತ್ತ ನನಗೆ ಕಣ್ಣಲ್ಲಿ ನೀರು ಬಂತು..
ಅ ಜನರ ಚಿತ್ರಣ ಚೆನ್ನಾಗಿ ಕಣ್ಮುಂದೆ ಚಿತ್ರಿಸಿದ್ದೀರಿ..
ಅದಕ್ಕೆ ಫೋಟೊ ಕೂಡ.. ಪೂರಕವಾಗಿದೆ..
ಪ್ರ್‍ಎಮಿಗಳ ದಿನಕ್ಕೊಂದು "ಅರ್ಥಪೂರ್ಣ"
ಉಡುಗೊರೆ...
ಧನ್ಯವಾದಗಳು..
ಅಣ್ಣಯ್ಯ...
ಈ ಸಾವು ನ್ಯಾಯವೇ? ಬರಹನಾ ಓದುತ್ತಾ ಕೊನೆಯಲ್ಲಿ ನನ್ನಲ್ಲೂ ಇಂಥದ್ದೊಂದು ಪ್ರಶ್ನೆ ಮೂಡಿಬಿಡ್ತು. ಆದರೆ ಯಾವತ್ತೂ 'ನ್ಯಾಯಯುತ'ವಾದ ಸಾವುಗಳು ಜರುಗುವುದು ತೀರ ಅಪರೂಪವಲ್ಲವೇ? ಒಂದು 'ಬದುಕು-ಭಾವ' ಎರಡನ್ನೂ ಹೇಳುತ್ತಾ ಹೋದ ಪರಿ, ಆರಂಭ.....ಎಲ್ಲನೂ ತುಂಬಾ ಚೆನ್ನಾಗಿದೆ ಶಿವಣ್ಣ. ಅಣ್ಣ-ತಂಗಿಯ ಮಮತೆಯ ಬಾಂಧವ್ಯ ಮನಸ್ಸನ್ನು ಹಿಡಿದಿಡುತ್ತೆ...ವಂದನೆಗಳು.
-ಚಿತ್ರಾ
ರಿ ಸ್ವಾಮಿ, ಏನಿದು? ಒಳ್ಳೇ ಟ್ರ್ಯಾಜಿಡೀ ಎಂಡಿಂಗ್ ಕೊಟ್ಟು ಬಿಟ್ರಲ್ಲಾ? ಲೈಫ್ ನಲ್ಲಿ ಅಂತೂ ಕಷ್ಟ ಗಳೆ, ಆಟ್ ಲೀಸ್ಟ್ ಕತೆ ನಲ್ಲಿ ಆದ್ರೂ ಹ್ಯಾಪೀ ಎಂಡಿಂಗ್ ಬೇಡವೇ?
:)
ಕಥೆ ಚೆನ್ನಾಗಿದೆ, ಲೇಖನ ಶೈಲಿ ಸ್ವಲ್ಪ ಬದಲಾದ ಹಾಗಿದೆ!!!! ಹೀಗೆ ಬರೀತಾ ಇರಿ.
ಜ್ಯೋತಿ ಮೇಡಮ್,
ಕತೆಯನ್ನು ಮತ್ತು ಅದರ ಭಾವನೆಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್....
ಶಾಂತಲಾ ಮೇಡಮ್,
ಪುಟ್ಟ ಕತೆಯ ಭಾವನೆಗಳಿಗೆ ಸ್ಪಂದಿಸಿದ್ದಕ್ಕೆ ಥ್ಯಾಂಕ್ಸ್....
ಬರೆದು ಮುಗಿಸಿದ ನಂತರ ನನಗೂ ಕೊನೆಯಲ್ಲಿ ಹಾಗೆ ಆಯಿತು....
ಪ್ರಕಾಶ್ ಸರ್,
ಕಥೆಯ ಭಾವನೆಗಳಿಗೆ ಸ್ಪಂದಿಸಿದ್ದಕ್ಕೆ ಥ್ಯಾಂಕ್ಸ್....ಚಿತ್ರಣ ಕಟ್ಟಿಕೊಡಲು ಬಹುಶಃ ನನಗೆ ಛಾಯಾಚಿತ್ರ ಕಲೆಯೂ ಸಹಾಯ ಮಾಡುತ್ತದೇನೊ....
ಬರವಣಿಗೆಯ ಬಗ್ಗೆ ನಿಮ್ಮ ಮಾತು ನನಗೆ ಟಾನಿಕ್ ನಂತಿದೆ..
ಶಿವಣ್ಣ
ಕಥೆ ಮತ್ತು ಕಥನ ಶೈಲಿ ಚೆನ್ನಾಗಿದೆ. ಬರೆಯುತ್ತಿರಿ.
ಬಾಲು ಸರ್,
ಇದು ನಿಜಘಟನೆಯನ್ನು ಆಧಾರಿಸಿದ್ದು....ಅದನ್ನು ಬದಲಿಸಬೇಕೆನಿಸಲಿಲ್ಲ....ಒಂದು ಸಣ್ಣ ಎಳೆಯನ್ನು ನೀವು ಹೇಳಿದಂತೆ ಬದಲಾದ ಶೈಲಿಯಲ್ಲಿ ಬರೆದುಕೊಂಡು ಹೋಗಿದ್ದೇನೆ....
ಜೀವನದಲ್ಲಿ ಯಾವಾಗಲು ಕಷ್ಟಗಳನ್ನೇ ಬರೆದಿಲ್ಲಾ ಸಾರ್, ನನ್ನ ಬ್ಲಾಗಿನಲ್ಲಿ ಖುಷಿಗೆ "ಪುಟ್ಟ ಪುಟ್ಟ ಸಂತೋಷಗಳು" ನಗಲಿಕ್ಕೆ "ಭೂಪಟಗಳು" ಟೋಪಿಗಳು ,... ಮನಃತೃಪ್ತಿಗೆ " ಚಿಂದಿ ಆಯುವವರು", "ಸಮಾಧಿಯಾಗುವ ಕಾತುರದಲ್ಲಿ" ಕವನಗಳು,....ಹೀಗೆ ಎಲ್ಲಾ ವಿಧಾನಗಳಲ್ಲೂ ಪ್ರಯತ್ನ ನಡೆಯುತ್ತಿದೆಯಲ್ಲ ಒಮ್ಮೇ ಕಣ್ಣಾಡಿಸಿ ಸರ್, ನಿಮಗೂ ಎಲ್ಲಾ ರಸಗಳ ಅನುಭವ ಸಿಗಬಹುದು.....ಥ್ಯಾಂಕ್ಸ್...
ಪರಂಜಪೆ ಸರ್, ಥ್ಯಾಂಕ್ಸ್...ಹೀಗೆ ಬರುತ್ತಿರಿ....
ಶಿವು,
ಓದಿ ಭಾವುಕನಾದೆ.
ಗಂಡಸರು ಅಳುವ ಹಾಗಿಲ್ಲವಲ್ಲ ಅಂತ ನೆನಪಾಯ್ತು. ನಕ್ಕುಬಿಟ್ಟೆ. :)
ಚಿತ್ರ, ಅದಕ್ಕೆ ತಕ್ಕ ಲೇಖನ ಎರಡೂ ಚೆನ್ನಾಗಿದೆ.
ಪ್ರೇಮಿಗಳ ದಿನಕ್ಕೆ ಒಳ್ಳೇ ಉಡುಗೊರೆ ಕೊಟ್ಟಿದ್ದೀರ.
ಹೀಗೇ ಬರೆಯುತ್ತಿರಿ.
-ಅನಿಲ್.
ಚಿತ್ರಾ ಪುಟ್ಟಿ,
ಈ ಸಾವು ನ್ಯಾಯವೇ ಅಂತ ನನಗೂ ಅನ್ನಿಸಿದ್ದಕ್ಕೆ ಈ ಪುಟ್ಟ ಕತೆಯನ್ನು ಬರೆದಿದ್ದು.... ಬದುಕು-ಭಾವವನ್ನು ಕತೆಯಲ್ಲಿ ಗುರುತಿಸಿದ್ದಕ್ಕೆ ಥ್ಯಾಂಕ್ಸ್....
ಕತೆಯಲ್ಲಿ ಅಣ್ಣ-ತಂಗಿ ಮಮತೆಯ ಭಾಂಧವ್ಯವನ್ನು ನಾನು ಹೆಚ್ಚಾಗಿ ಹೇಳಿಲ್ಲ...ಅದಕ್ಕಿಂತ ಮಿಗಿಲಾಗ ವಾಜಿದ್-ಗಿಡ್ಡಿ ಇಬ್ಬರ ತಿಳಿನೀರಿನಷ್ಟೆ ಪರಿಶುದ್ಧವಾದ ಸಲಿಗೆ, ಒಬ್ಬರಿಂದ ಮತ್ತೊಬ್ಬರೂ ಏನೂ ನಿರೀಕ್ಷಿಸದೆ ಸದಾ ಕೊಡುವುದರಲ್ಲೇ ಕಂಡುಕೊಳ್ಳುವ ಸಾರ್ಥಕತೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನುವಂತೆ ತಾವು ಹೇಳದೆ ಒಬ್ಬರಿಗೊಬ್ಬರು ಮಾಡುವ ಸಹಾಯ, ಅದೆಲ್ಲಕ್ಕಿಂತ ಮಿಗಿಲಾಗಿ ಪರಿಶುದ್ದ ಗೆಳೆತನ, ಲಗು ಹಾಸ್ಯ, [ಕಷ್ಟಕ್ಕೆ ಪ್ರೀತಿಯಿಂದ ಹೆಗಲು ಕೊಡುವ ಪರಿ, ವಾಜಿದ್ ಗಿಡ್ಡಿಯಲ್ಲಿ[ಆರಂಭದ ಕೈಯಿಡಿದು ನಡೆಸುವುದು] ತಾಯಿಯನ್ನು ಕಂಡುಕೊಂಡರೆ, ಗಿಡ್ಡಿಯ ಆತನ ತೊಡೆಯ ಮಲಗುವ ಖುಷಿಯನ್ನು ತಾಯಿ ತೂಕಕ್ಕೆ ಹೋಲಿಸುತ್ತಾಳೆ....ಒಟ್ಟಾರೆ ಒಂದು ಪರಿಶುದ್ಧ "ಗೆಳೆತನ" ಇಷ್ಟೆಲ್ಲಾವನ್ನು ತನ್ನೊಡಲಲ್ಲಿ ತುಂಬಿಸಿಕೊಂಡಿರುತ್ತದೆ ಎಂದು ಹೇಳಲು ಪ್ರಯತ್ನಿಸಿದ್ದೇನೆ....ಥ್ಯಾಂಕ್ಸ್....
ಅನಿಲ್,
ಕತೆ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್.....
ಗಂಡಸರು ಆಳಬಾರದು ಅಂತೋನು ಇಲ್ಲ....ಭಾವನೆಗಳು ಒಂದೇ ಆಗಿರುತ್ತವೆ. ಎಲ್ಲರಲ್ಲೂ ಇರುತ್ತವೆ...ಅದರೆ ಅವು ಹೊರಬರುವ ಸಮಯ ಮಾತ್ರ ಬೇರೆ ಬೇರೆ...ಹೀಗೆ ಬರುತ್ತಿರಿ....ಥ್ಯಾಂಕ್ಸ್...
ಓಹ್!!!
ನಾನು ಸಾಮಾನ್ಯವಾಗಿ ಭಾವುಕನಾದಾಗ ನಕ್ಕುಬಿಡ್ತೀನಿ.
ಮನಸ್ಸಿಗೆ ಸಮಾಧಾನ ಆಗಿಬಿಡುತ್ತೆ.
-ಅನಿಲ್.
ಬರಿ ಚಾಕ್ಲೇಟ್, ರೋಸ್, ಗಿಫ್ಟ್ ಕೊಟ್ಟುಕೊಳ್ಳುವುದೇ ಪ್ರೀತಿ ಅಂದುಕೊಂಡಿರೋ ಈಗಿನ ಕಾಲದಲ್ಲಿ ಇಂಥ ನಿಜವಾದ ನಿಷ್ಕಲ್ಮಶ ಪ್ರೀತಿ ಕಾಣಸಿಗುವುದು ತುಂಬಾನೆ ಅಪರೂಪ ಅನ್ನಿಸುತ್ತೆ. ಎಲ್ಲರಿಗೂ ಅಂಥ ಪ್ರೀತಿ ಸಿಗಲಿ ಅಂತ ಹಾರೈಸುತ್ತೇನೆ.
ಶಿವು,
ಪ್ರೇಮಿಗಳ ದಿನಕ್ಕೆ ಒಂದು ಒಳ್ಳೆಯ ಕತೆ ಕೇಳಿಸಿದ್ದಕ್ಕೆ ವಂದನೆಗಳು..
--
ಪಾಲ
olle gift.. thanks..nivu attiddira shivu??~
ಶಿವು ಅಣ್ಣ
ಬರೆದ ಶೈಲಿ ತುಂಬಾ ಇಷ್ಟವಾಯಿತು. ಓದುತ್ತಾ ಓದುತ್ತಾ ನನ್ನ ಕಣ್ಣ ಮುಂದೇನೆ ನಡೆಯುತಿದೆ ಅಂತ ಅನಿಸಿಬಿಟ್ಟಿತ್ತು. ನನಗೂ ಒಂದು ಪ್ರೆಶ್ನೆ ಕಾಡಲು ಶುರುವಾಗಿದೆ ಅಣ್ಣ ಈ ಸಾವು ನ್ಯಾಯವೇ?
ಶಿವು,
ಭಾವಪೂರ್ಣವಾದ ಕತೆ. ನಡುನಡುವೆ ಸಂಭಾಷಣೆಗಳನ್ನು ಬಳಸುತ್ತ ಉತ್ತಮವಾಗಿ ಹೆಣೆದಿದ್ದೀರಿ.
ಶಿವೂ ,
ಈ ಸಾವು ಖಂಡಿತಾ ನ್ಯಾಯವಲ್ಲ ! ನೀವು ಹೀಗೆ ನಮ್ಮ ಕಣ್ಣಲ್ಲಿ ನೀರು ತರಿಸಿದ್ದೂ ನ್ಯಾಯವಲ್ಲ !
ಮತ್ತೇನೂ ಬರೆಯಲಾರೆ .....
ಶಿವು ಸಾರ್ , ಹೃದಯಸ್ಪರ್ಶಿ ಬರಹ .. ಈಷ್ಟ ಆಯಿತು ..
ಶಿವು ಅವರೆ,
ಕಥೆ ಮನಮುಟ್ಟುವಂತಿದೆ. ಇಂತಹ ಸುಂದರವಾದ ಉಡುಗೊರೆಗೆ ತುಂಬಾ ಧನ್ಯವಾದಗಳು.
ಕಥೆ ತುಂಬಾ ತುಂಬಾ ಚೆನ್ನಾಗಿದೆ ಸರ್, ಮನಮುಟ್ಟುವಂತದು..
ರೈಲಿನಲ್ಲಿ ಕಣ್ಣಿಲ್ಲದವರು ಹೆಚ್ಚು ಅದೇ ಹಾಡು ಗುನುಗುತ್ತಾರೆ... ನಿಜಕ್ಕೊ ಯಾವ ಹಾಡುಗಾರನಿಗೇನು ಕಮ್ಮಿ ಇಲ್ಲ ಅನ್ನೊ ಹಾಗೆ..
ಸಾವು ನ್ಯಾಯವಲ್ಲ ಆದರು ವಿಧಿಆಟ... ಯಾರನ್ನು ಬಿಡುವುದಿಲ್ಲ...
ವಂದನೆಗಳು..
ಶೀವು, ನಿಮ್ಮ ಮೊದಲಿನ ಬರಹಗಳಿಗೆ ಹೋಲಿಸಿದಾಗ ಇಲ್ಲಿಯ ಬರವಣಿಗೆಯ ಶೈಲಿ ಬದಲಾಗಿದೆ.
ಬರಿತಾ ಇರಿ.
ಶಿವು, ನನಗರಿವಾಗದಂತೆ ಓದಿ ಮುಗಿಸಿದಾಗ ಕಣ್ಣಲ್ಲಿ ನೀರು ತುಂಬಿತ್ತು. ಭಾವುಕವಾದ ಕಥೆ.ಹೆಸರಿರಿಸಲಾಗದ ಸಂಬಂಧದ ಬಗ್ಗೆ ತುಂಬಾ ಚೆನ್ನಾಗಿ ಬರೆದಿರುವಿರಿ. ಅಂಗವಿಕಲತೆ ಹೊರಗಲ್ಲ ಒಳಗಿರುತ್ತದೆ ಎಂದು ಸೂಕ್ಷ್ಮವಾಗಿ ತಿಳಿಸಿರುವಿರಿ.
ಅನಿಲ್,
ನಗುತ್ತಲೋ, ಅಥವಾ ಅಳುತ್ತಲೋ...ಹೇಗಾದರೂ ಸರಿ..ನಿಮ್ಮ ಭಾವನೆಗಳನ್ನು ಹೊರಹಾಕುವುದು ಮುಖ್ಯ....
ಉಮಿ ಸರ್,
ಪ್ರೀತಿಯನ್ನುವ ಪದವನ್ನು ಸೀಮಿತ ಮಿತಿಯಲ್ಲಿ ನೋಡುವುದನ್ನು ಬಿಟ್ಟಾಗ ನಮ್ಮ ಸುತ್ತ ಮುತ್ತಲಿನ ಪ್ರೀತಿಗಳು ನೋಡಲು ಸಿಗುತ್ತವೆ..ಇಷ್ಟಪಟ್ಟರೇ ಅನುಭವಿಸಲು ದಕ್ಕುತ್ತವೆ....ಹೀಗೆ ಬರುತ್ತಿರಿ....ಥ್ಯಾಂಕ್ಸ್...
ಪಾಲಚಂದ್ರ....
ಪ್ರೇಮಿಗಳ ದಿನ ಅಂತ ನಾವು ಮಾಡಿಕೊಂಡಿದ್ದು ಅಲ್ಲವ....ಕತೆಯ ಪಾತ್ರಧಾರಿಗಳಿಗೆ ಪ್ರತಿದಿನವೂ ಪ್ರೀತಿ ಕೊಡುವ ಪಡೆಯುವ ದಿನಗಳಾಗಿರುತ್ತವೆ..ಅಲ್ಲವೇ....ಥ್ಯಾಂಕ್ಸ್....
ನಿತಿನ್, ಸಂತೋಷ್....
ಪ್ರೇಮಿಗಳ ದಿನ ನನ್ನ ಲೇಖನ ಓದಿದ್ದಕ್ಕೆ ಥ್ಯಾಂಕ್ಸ್.....
ಹೀಗೆ ಬರುತ್ತಿರಿ.....
ರೋಹಿಣಿ ಪುಟ್ಟಿ....
ಈ ಸಾವು ನ್ಯಾಯವೇ ಅಂತ ಕಾಡಿದರೂ.....ಆಗಿಹೋಗಿದ್ದನ್ನು ಒಪ್ಪಿಕೊಳ್ಳಲೇ ಬೇಕು....ಈ ರೀತಿ ಬರೆಯಲು ನನಗೆ ಫೋಟೊಗ್ರಫಿ ಸಹಾಯ ಮಾಡಬಹುದು ಅನ್ನಿಸುತ್ತೆ....ಮತ್ತೆ ಈ ಪುಟ್ಟ ಕತೆ ತಕ್ಕಂತೆ ಅದರೆ feel ಬರಲು ಸ್ವಲ್ಪ ನನ್ನ ಶೈಲಿಯನ್ನು ಬದಲಿಸಿ ಬರೆದಿದ್ದೇನೆ....ಹೀಗೆ ಬರುತ್ತಿರು...ಥ್ಯಾಂಕ್ಸ್..
ಸುನಾಥ್ ಸರ್,
ಲೇಖನದ ನಡು ನಡುವೆ ಸಂಭಾಷಣೆಗಳನ್ನು ಇಷ್ಟಪಟ್ಟು ಬರೆದಿದ್ದೆ....ಅದನ್ನು ನೀವು ಗುರುತಿಸಿದ್ದೀರಿ...ಥ್ಯಾಂಕ್ಸ್...ಹೀಗೆ ಬರುತ್ತಿರಿ ಸರ್,
ಚಿತ್ರಾ ಮೇಡಮ್,
ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯ. ಖಂಡಿತ ಈ ಸಾವು ನ್ಯಾಯವಲ್ಲ.....ಅದ್ರೆ ನಾನು ನಿಮಗೆ ಖಂಡಿತ ಕಣ್ಣೀರು ತರಿಸಿಲ್ಲ....ಕೆಲವು ನಿಜಘಟನೆಗಳು ನಮ್ಮ ಭಾವೋದ್ವೇಗದ ಕಟ್ಟೆ ಒಡೆದು ಈ ರೀತಿ ಆಗುತ್ತದೆ...ಥ್ಯಾಂಕ್ಸ್...ಹೀಗೆ ಬರುತ್ತಿರಿ...ಮುಂದಿನ ಬಾರಿ ಖಂಡಿತ ನಗಿಸುತ್ತೀನಿ....
ತೇಜಸ್ವಿನಿ ಮೇಡಮ್,
ಕತೆ ಇಷ್ಟಪಟ್ಟು....ಗಿಫ್ಟ್ ಅಂಥ ಪಡೆದುಕೊಂಡಿರಿ..ನಿಮ್ಮ ಕಾಮೆಂಟುಗಳೆಲ್ಲಾ ನನಗೇ ಆಗಾಗ ಟಾನಿಕ್ಕುಗಳಿದ್ದಂತೆ....ಥ್ಯಾಂಕ್ಸ್...ಹೀಗೆ ಬರುತ್ತಿರಿ...
ಮನಸು,
ಕಥೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....
ರೈಲಿನಲ್ಲಿ ಒಮ್ಮೆ ಪ್ರಯಾಣ ಮಾಡಿದರೆ ನಮಗೆ ಎಲ್ಲಾ ಸಮಾಜದ ಜನರ ಪರಿಚಯವಾಗುತ್ತದೆ...ಹಾಗಂತ ನಾವು ಮಾತಾಡಿ ಪರಿಚಯ ಮಾಡಿಕೊಳ್ಳಬೇಕಂತೇನಿಲ್ಲ....ಸುಮ್ಮನೆ ಸೂಕ್ಷ್ಮವಾಗಿ ಗಮನಿಸಿದರೆ ಇದೆಲ್ಲಾ ಅನುಭವವಾಗುತ್ತದೆ....ಇದೇ ರೀತಿ. ರೈಲಿನಲ್ಲಿ ವ್ಯಾಪಾರ ಮಾಡುವವರು....ಟಿಕೆಟ್ ಇಲ್ಲದೇ ಪ್ರಯಾಣ ಮಾಡುವವರು....ಅಷ್ಟೇ ಏಕೆ ಮಕ್ಕಳಾದಿಯಾಗಿ...ಹೊಸ ಹನಿಮೂನ್ ಜೋಡಿ...ಅಜ್ಜ-ಅಜ್ಜಿಯವರೆಗೆ.....ಯುವಕರು...ಯುವತಿಯರ ಗುಂಪುಗಳು...ಇತ್ಯಾದಿ ಇವರೆಲ್ಲಾರ ಬಗ್ಗೆ ಬರೆಯುವ ಅಲೋಚನೆಯಿದೆ....ಥ್ಯಾಂಕ್ಸ್...
ಪ್ರಮೋದ್,
ಕತೆಯನ್ನು ಮೆಚ್ಚಿದ್ದಕ್ಕೆ ಮತ್ತು ಬದಲಾಯಿಸಿಕೊಂಡ ಶೈಲಿಯನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...
ಮಲ್ಲಿಕಾರ್ಜುನ್,
ಪ್ರೇಮಿಗಳ ದಿನದ ಪ್ರಯುಕ್ತ ಕತೆಯ ಅಂತ್ಯವನ್ನು ಸುಖಾಂತ್ಯ ಮಾಡಲು ಮನಸ್ಸು ಬಯಸಿತ್ತು... ಮೊದಲು ಹಾಗೆ ಬರೆದಿದ್ದೆ....ಆದ್ರೆ ಏಕೋ ಸ್ವಲ್ಪ ಹೊತ್ತಿನ ನಂತರ ನನ್ನಲ್ಲಿ ಅಫರಾಧಿ ಭಾವನೆ ಕಾಡತೊಡಗಿ ಇರುವ ಸತ್ಯವನ್ನು ಹಾಗೆ ಕೊಟ್ಟುಬಿಡೋಣ ಅನ್ನಿಸಿ ಬದಲಾಯಿಸಿದೆ...ಮನಸ್ಸು ನಿರಾಳವಾಯಿತು....ಕತೆಯ ನಿಜವಾದ ಒಳತಿರುಳನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್...
ನಾಗೇಶ್ ಹೆಗಡೆ ಸರ್ ಹೇಳಿದರು...
ತುಂಬ ಚೆನ್ನಾಗಿದೆ ಈ ಕಥೆ. ಅದು ಕಥೆಯೇ ಅಲ್ಲ, ಗದ್ಯರೂಪದ ಪೊಯೆಟ್ರಿ. ಇದರ ಶ್ರೇಯ ನಿಮ್ಮ ಭಾವನಿಗೆ ಹೋಗಬೇಕೊ ನಿಮಗೊ ಗೊತ್ತಾಗುತ್ತಿಲ್ಲ. ಆದರೆ ಕಥನ ಶೈಲಿ ನಿಮ್ಮದೆಂಬಂತೆ ಆಪ್ತವಾಗಿದೆ. ಹೃದಯಸ್ಪರ್ಶಿಯಾಗಿದೆ. ಕಾಗುಣಿತ spelling (ಬಿಕ್ಷೆ , ಬಂದುವಾಗಿ, ಗಿಪ್ಟ್ , ಫ್ಲಾಟ್‌ಪಾರಂನಲ್ಲಿ , ಸಂಬ್ರಮ , ಆಡುತ್ತೇವೆ... , ನಿದಾನವಾಗಿ , ಆದಾರಿಸಿ ) ಇವೆಲ್ಲ ನಮ್ಮಂಥ ಮಾಜಿ ಎಡಿಟರ್ ಗಳಿಗೆ ರಸವತ್ತಾದ ಜಿಲೇಬಿಯಲ್ಲಿ ಮೊಳೆಗಳನ್ನು ಜಗಿದಂತಾಗುತ್ತದೆ. ಹೇಗಾದರೂ ಮಾಡಿ ಯಾರೊಬ್ಬರಿಂದ ತುಸು ಓದಿಸಿ ನಂತರ ಬ್ಲಾಗ್ ಗೆ ಹಾಕಿದರೆ, ನಿಮ್ಮ ನಿರೂಪಣೆಗಳು ಸೂಪರ್ಬ್!
ನಾಗೇಶ್ ಹೆಗಡೆ...
ನಾಗೇಶ್ ಹೆಗಡೆ ಸರ್,
ನೀವು ನನ್ನ ಬ್ಲಾಗಿಗೆ ಬಂದು ನನ್ನ ಲೇಖನ ಓದುವುದೇ ನನಗೆ ಖುಷಿಯ ವಿಚಾರ..ಇದರಲ್ಲಿ ನನ್ನ ತಪ್ಪ-ಒಪ್ಪುಗಳನ್ನು ಗುರುತಿಸಿ ತಿದ್ದಿ ತೀಡುವ ಕೆಲಸ ಮಾಡುತ್ತಿದ್ದೀರಿ. ಮುಂದಿನ ಬಾರಿ ಜಿಲೇಬಿಯನ್ನು ಜೀಲೇಬಿಯಾಗೇ ಕೊಡಲು ಪ್ರಯತ್ನಿಸುತ್ತೇನೆ.....ಇದು ನನ್ನ ಆಸೆಯೂ ಕೂಡ.....ನಿಮ್ಮ ಅಮೂಲ್ಯ ಸಲಹೆಗಳನ್ನು ಖಂಡಿತ ಗಮನದಲ್ಲಿಸಿಕೊಳ್ಳುತ್ತೇನೆ ಸಾರ್. ಹೀಗೆ ಬರುತ್ತಿರಿ ನಮ್ಮಂಥ ಯುವಕರನ್ನು ಪ್ರೋತ್ಸಾಹಿಸಿ. ನಿರೂಪಣೆಯನ್ನು ಮೆಚ್ಚಿದ್ದಕ್ಕೆ..ಥ್ಯಾಂಕ್ಸ್..
ನಮಸ್ತೆ... ಶಿವಣ್ಣ .....
ನಿಮ್ಮ ಛಾಯ ಕನ್ನಡಿ ಮತ್ತು ಕ್ಯಾಮರದ ಹಿಂದೆ . . . ಈ ಮೊದಲೇ ನೋಡಿ ಸುತ್ತೀ ಬಂದಿದ್ದೇನೆ.
ನಿಮ್ಮ ಫೋಟೋಗ್ರಫಿ , ಬರಹ....ದ ಬಗ್ಗೆ ಮಾತಾಡಲು ಹೊರಟರೆ ಅತಿಶಯವಾದೀತು...
ಪಾಲ ಅವರ ಅನುಭವ ಮಂಟಪದಲ್ಲಿ ನಿಮ್ಮ ಸನ್ಯಾಸಿಯ ಬಾಲ್ಯ , ೩ ಚಕ್ರದ ಗಾಡಿ ರಾಷ್ಟ್ರೀಯ , ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೆದ್ದಿದ್ದು... ಓದಿದ್ದೆ .. .
ಪಲ್ಲವಿಯಲ್ಲಿ ನಸುಕಿನಲ್ಲಿ ಪಾರಿಜಾತಕ್ಕೆ ಫೋಟೋ ನೀಡಿದ್ದು... ಸುಹಾಸ್ ನಿಮಗೂ . . . ಹೇಮಾ ಗೂ (ನಿಮ್ಮ ಶ್ರೀಮತಿ) ಹೊಸ ವರ್ಷಕ್ಕೂ ... ಸಂಕ್ರಾಂತಿಗೂ ಶುಭ ಹಾರೈಸಿದ್ದು. . . ಎಲ್ಲವೂ ತಿಳಿದಿದೆ....
ನಿಮ್ಮ ಖ್ಯಾತಿ ನೋಡಿ ನೀವು ಇಷ್ಟ ವಾಗಿದ್ದು ಅಲ್ಲ್ಲ . . .
ನಿಮ್ಮ ಬಾಲ್ಯ .... ಬೆಳೆದ ರೀತಿ.... ನಿಮ್ಮಲ್ಲಿ ಉಳಿದ ಸರಳತೆ.... ಸಹೃದಯತೆ ......
ಪ್ರಕಾಶ್ ಹೆಗಡೆ ನಿಮ್ಮ ಮೇಲೆ ಇಟ್ಟ ಅಭಿಮಾನ . . . ಪ್ರೀತಿ....
ವಿಂಧ್ಯಾ .... ಚಿತ್ರ ಪುಟ್ಟಿ .... ಮೇಲೆ ನೀವು ಇಟ್ಟ ಪ್ರೀತಿ...
ಉಳಿದ ಸಹ ಬ್ಲಾಗಿಗರನ್ನು ಪ್ರೋತ್ಸಾಹಿಸುವ ಮಾತುಗಳು ........
ಪ್ರತಿಯೊಂದು ಭಾವಗಳನ್ನು ಬಿಚ್ಚಿಡಲು ಆಗೋಲ್ಲ . . .
ಪ್ರಕಾಶ್ ಹೆಗಡೆ ಅವರು ಚೇತನಾ ಎಡೆಗೆ ಇಟ್ಟಿದಂತಹ ಭಾವ . . .
ನೀವು ಹೇಳಿದಂತೆ ......
"ನೋಡಯ್ಯ....ವ್ಯಾಲೆಂಟೇನ್ಸ್ ಡೇ ದಿನ ಪ್ರೇಮಿಗಳೆ ಒಬ್ಬರಿಗೊಬ್ಬರು ಪ್ರೀತಿಯನ್ನು ವ್ಯಕ್ತಪಡಿಸಬೇಕೆಂದೇನಿಲ್ಲ....."
"ಮತ್ತೆ ?......."
"ಪ್ರೀತಿಸುವ ಮನಸ್ಸುಳ್ಳವರು ಯಾರನ್ನು ಬೇಕಾದರೂ ಪ್ರೀತಿಸಬಹುದು."
"ಹೌದಾ! "
"ಇಂಥ ಪ್ರೀತಿಗಳಿಗೆ ತಾಯಿ-ಮಗುವಿನ ಪ್ರೀತಿ, ಗೆಳೆಯರ ನಡುವಿನ ಪ್ರೀತಿ, ಅಣ್ಣ-ತಂಗಿ, ಮಕ್ಕಳು-ಅಜ್ಜ ಅಜ್ಜಿಯರ ಪ್ರೀತಿ ......ಇತ್ಯಾದಿಗಳನ್ನು ಆ ದಿನ ವ್ಯಕ್ತಪಡಿಸಿ ಗಿಪ್ಟ್ ಕೊಡಬಹುದು.... "
ನಿಮ್ಮನ್ನೇ ಕೇಳ್ತೀನಿ ಏನಂತೀರಾ?
ಕೃಪಾ....
ಶಿವೂ ಸರ್,
ಕೆಲವೊಂದು ಬರಹಗಳಿಗೆ ಅಭಿಪ್ರಾಯ ವ್ಯಕ್ತಪಡಿಸುವುದು ವಿಪರೀತ ಕಷ್ಟ.
ಅಂತಹ ಬರಹಗಳಲ್ಲಿ ಇದು ಒಂದು, ಚೆನ್ನಾಗಿದೆ ಅಂದರೆ ಆಳದ ನೋವನ್ನು ಅವಲೋಕಿಸದೆ ಆನಂದಿಸಿದೇನ ಎಂಬ ವಿಕೃತ ಭಾವ ಮನವನ್ನು ಕಾಡುತ್ತದೆ, ಏನು ಬರೆಯದಿದ್ದರೆ ಬರಹವನ್ನು ಕಡೆಗಣೆಸಿದಂತಾಗುತ್ತಿದೆಯ ಎಂಬ ಆತಂಕ. ನೋವು ಮನವನ್ನು ಹಿಂಡುತ್ತದೆ, ಬರಹ ಅಂತಹ ಒಂದು ಮನೋಜ್ಞ ಚಿತ್ರವನ್ನು ಕಟ್ಟಿ ಕೊಡುತ್ತಿದೆ.
-ರಾಜೇಶ್ ಮಂಜುನಾಥ್
ಶಿವು,
ಫೋಟೊ ತುಂಬಾ ಚೆನ್ನಾಗಿದೆ. ನಿಜವಾದ ಸಂತೋಷ ಅಂದರೆ, ಆ ಪುಟಾಣಿಗಳ ಮುಖದಲ್ಲಿ ಪ್ರತಿಫಲಿಸುತ್ತಿದಿಯಲ್ಲಾ ಅದೇ ಅಲ್ವಾ?
ಇನ್ನೂ ಗಿಡ್ಡಿ, ಫಾತಿಮಾ, ವಾಜಿದ್...........
ಕತೆ ಚೆನ್ನಾಗಿದೆ ಎಂದು ಹೇಳುವುದಿಲ್ಲ. ಹಾಗೆ ಹೇಳಿದರೆ ಈ ಜೀವಿಗಳು ನನ್ನನ್ನು ಕಾಡುತ್ತವೆ. ಈ ಯಾಂತ್ರಿಕ ಪ್ರಪಂಚದಲ್ಲಿ ನಡೆದ ಒಂದು ಮಾನವ ಸಂಬಂಧಿ ದುರ್ಘಟನೆಯ ಮನಮುಟ್ಟುವ ನಿರೂಪಣೆ ಮೂಲಕ ನಿಜವಾದ ಸ್ನೇಹ, ಪ್ರೀತಿ, ಮಾನವ ಸಂಬಂಧಗಳ ದರ್ಶನ ಮಾಡಿಸಿದ್ದೀರಿ, ಅದಕ್ಕಾಗಿ ಧನ್ಯವಾದಗಳು.
ರಾಜೇಶ್,
ಘಟನೆ ಗೊತ್ತಿದ್ದರೂ .....ಬರೆಯಲಾಗದೆ...ಮುಂದೂಡುತ್ತಿದ್ದೆ...ಏಕೆಂದರೆ ನಾನು ಈ ನಿಜಚಿತ್ರಣಗಳಿಗೆ ಬರಹದ ಮೂಲಕ ಸರಿಯಾದ ನ್ಯಾಯ ಒದಗಿಸುತ್ತೇನಾ ಅನ್ನುವ ಅಳುಕು ನನ್ನಲ್ಲಿತ್ತು......ಬರೆದು ಮುಗಿಸಿದಾಗ ಇದರ ಮೂರರಷ್ಟು ಇತ್ತು....ಪ್ರತಿದಿನ ಸ್ವಲ್ಪ ಸ್ವಲ್ಪ ಕತ್ತರಿಸುತ್ತಾ ಬಂದಾಗ ಭಾವನೆಗಳಿಗೆಲ್ಲಿ ಧಕ್ಕೆಯಾಗುತ್ತದೋ ಎನ್ನುವ ಭಯವೂ ಇತ್ತು....
ನೀವು ಇದರ ಸಂಪೂರ್ಣ ಆಳಕ್ಕಿಳಿದು ಅನುಭವಿಸಿದ್ದಿರೆಂದ ಮೇಲೆ ಮೂಲ ಬರಹ-ಭಾವಕ್ಕೆ ದಕ್ಕೆಯಾಗಿಲ್ಲವೆಂಬ ನಂಬಿಕೆ ಬಂದಿದೆ....ಥ್ಯಾಂಕ್ಸ್....ಹೀಗೆ ಬರುತ್ತಿರಿ....
ಜಾವೀದ್,
ಫೋಟೋ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....
ಕತೆಯ ಪಾತ್ರಗಳ ಸಂಪೂರ್ಣ ಆಳಕ್ಕೆ ಇಳಿದು , ಅವರ ಭಾವನೆಗಳನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್....
ಹೀಗೆ ಬರುತ್ತಿರಿ......
ಹೆಸರಿಲ್ಲದ ಸಂಬಂಧದಲ್ಲಿ ಇಷ್ಟೊಂದು ಪ್ರೀತಿ ! :)
happy ending expect ಮಾಡಿದ್ದೆ,ಕೊನೆಯಲ್ಲಿ ಅಳ್ಸಿಬಿಟ್ರಿ.
ಚೆನಾಗ್ ಬರಿತೀರ shivu sir :)
ಗ್ರೀಷ್ಮ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ....
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....ಕೊನೆಯ ಅಂತ್ಯ ಸತ್ಯವಾಗಿರಬೇಕಾದರೆ ನಾನು ಸುಳ್ಳು ಬರೆಯಲು ಮನಸ್ಸು ಒಪ್ಪಲಿಲ್ಲ. ಅಳು ನಗು ಎಲ್ಲಾ ನಿಮ್ಮ ಭಾವನೆಗಳಿಗೆ ಸಂಭಂದಿಸಿದ್ದು......ಹೀಗೆ ಬರುತ್ತಿರಿ......
ಕಥೆ ಬಹಳ ಚೆನ್ನಾಗಿದೆ. ನಿಮ್ಮ ಬರವಹಣಿಗೆ ನಿಮ್ಮ ಕನ್ನಡಿಯೊಳಗೊಂದು ದೂರದರ್ಶನದ ನೇರಪ್ರಸಾರದಂತಿತ್ತು. ಕೊನೆಯಲ್ಲಿ ಆಟ ಸೋತಂತೆ ಬಹಳ ಬೆಸರವೂ ಆಯಿತು. ಆದರೂ ಪ್ರೀತಿಯ ನ್ಯೆಜತೆಯನ್ನು ತೋರಿಸಿದ್ದೀರಿ. Thanks...
chitra, baraha eradu super, namma page kooda swalpa nodi shivu
kathe chennaagide. photo saha. sambandhagaLanna chennaagi bimbisiddeeri.
ಶಿವೂ, ಈ ಬರಹದ ಮೂಲಕ ಕಥೆಗಾರರಾಗಿದ್ದೀರಿ! ನಿಮ್ಮ ವೈವಿಧ್ಯಮಯ ಕಲೆಗಳನ್ನು ನೋಡಿ ಹೊಟ್ಟೆಕಿಚ್ಚಾಗುತ್ತದೆ!
ನಿಜವಾದ ಪ್ರೀತಿ ಆಡಂಬರದಿಂದ ಕೂಡಿರುವುದಿಲ್ಲ ಎಂಬುದನ್ನು ಈ ಬರಹದ ಮೂಲಕ ನಿರೂಪಿಸಿದ್ದೀರಿ..
ಶಿವು ಅವರೆ
ನಾನು ಲೇಖನ ನೋಡಲು ಬರುವಷ್ಟರಲ್ಲಿ ಪ್ರತಿಕ್ರಿಯೆಗಳು ಅರ್ಧ ಶತಕ ಬಾರಿಸಿವೆ. ಅವುಗಳನ್ನು ಆಮೇಲೆ ಓದುತ್ತೇನೆ. ಈಗ ನನಗನಿಸಿದ್ದನ್ನು ಹೇಳುವೆ.
ನಿಮ್ಮ ಫೋಟೊಗ್ರಫಿ ಕಲೆಯಂತೆ ನಿಮ್ಮ ಬರವಣಿಗೆಯ ಶೈಲಿಯೂ ಇದೆ. ಕ್ಯಾಮೆರಾದ ಜೊತೆ ಆಟವಾಡುವಂತೆ ಪದಗಳ ಜೊತೆಯೂ ಸೊಗಸಾಗಿ ಆಟವಾಡಿರುವಿರಿ. ಕತೆಯಂತೂ ( ನಿಜದ ಘಟನೆಯಾಧಾರಿತವಾದರೂ )ಹೃದಯಸ್ಪರ್ಶಿಯಾಗಿದೆ. ಈ ಕತೆಯ ಅಂದವನ್ನು- ನಿಮ್ಮ ಬರವಣಿಗೆಯಲ್ಲಿರುವ ಹಾಡುಗಳೂ, ಅವುಗಳಿಗಾಗಿ ಬಳಸಿರುವ ಬಣ್ಣಗಳೂ, ನೇರ ನಿಂತಿರುವ, ಕೊಂಚ ಬಾಗಿರುವ ಅಕ್ಷರಗಳೂ-ಹೆಚ್ಚಿಸಿವೆ.ಆದರೆ ಇದ್ಯಾವುದೂ ಕೃತಕ ಅನಿಸುವುದಿಲ್ಲ.
ನನ್ನ ಬ್ಲಾಗ್ ಗೆ ಮೊದಲು ಭೇಟಿ ಕೊಟ್ಟು ನನ್ನ ಬರಹದ ಬಗ್ಗೆ ಒಳ್ಳೆಯ ಮಾತಾಡಿರುವುದಕ್ಕೆ ಧನ್ಯವಾದಗಳು
ಗಿರೀಶ್,
ನನ್ನ ಯಾವುದೇ ಬರಹ, ಕವನ, ಕತೆ, ಫೋಟೊ ಇತ್ಯಾದಿಗಳನ್ನು ಮೊದಲಿಗೆ ಎಲ್ಲಾ ಮರೆತು ಯಾವುದೇ ಪೂರ್ವಗ್ರಹ ಪೀಡಿತನಾಗದೆ, ನಾನೇ ಒಬ್ಬ ಹೊಸ ಓದುಗನಾಗಿ ಮೊದಲು ನನ್ನ ಛಾಯಾಕನ್ನಡಿಯ ಹೊರಗೆ ನಿಂತು ಅಸ್ವಾದಿಸುತ್ತೇನೆ... ನಿಜಕ್ಕೂ ಅಸ್ವಾದ ನೀಡಿದರೆ ಆಗ ಅದನ್ನು ಎಲ್ಲರಿಗೂ ಓದಲು ಬ್ಲಾಗಿಗೆ ಹಾಕುತ್ತೇನೆ....ಇದು ನನ್ನ ಬರವಣಿಗೆಯ ಶೈಲಿ..
ಮತ್ತೆ ಆಟದಲ್ಲಿ ಸೋಲು ಗೆಲುವಿಗಿಂತ ಆಡೋದು ಮುಖ್ಯ ಅಂತ ನನ್ನ ಭಾವನೆ....ನೀವೇನಂತೀರಿ....
ನೇರ ನುಡಿಯವರೆ,
ನನ್ನ ಬ್ಲಾಗಿಗೆ ನಿಮಗೆ ಸ್ವಾಗತ....ನಿಮ್ಮ ಪ್ರತಿಕ್ರಿಯೆ ಇಷ್ಟವಾಯಿತು...ಹೀಗೆ ಬರುತ್ತಿರಿ....ಥ್ಯಾಂಕ್ಸ್...
ಲಕ್ಷ್ಮಿ ಮೇಡಮ್,
ಕತೆಯನ್ನು ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್....ಸಂಭಂದಗಳ ಬಗ್ಗೆ ಇನ್ನೂ ಬರೆಯುವುದಿದೆ....ಸಾಧ್ಯವಾದರೆ ಮುಂದೆ ಬರೆಯುತ್ತೇನೆ....ಹೀಗೆ ಬರುತ್ತಿರಿ...ಥ್ಯಾಂಕ್ಸ್...
ಹರೀಶ್,
ನನಗೆ ಹೊಟ್ಟೆ ಕಿಚ್ಚಾಗುತ್ತಿದೆ ಅಂತ ಪ್ರಾಮಾಣಿಕವಾಗಿ ಹೇಳಿಕೊಳ್ಳುವುದರ ಮೂಲಕ ನೀವು ನನ್ನ ಬರವಣಿಗೆ ಮತ್ತಷ್ಟು ಟಾನಿಕ್ ನೀಡುತ್ತಿದ್ದೀರಿ...
ಕತೆ ಮೆಚ್ಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....
ಚಂದ್ರ ಕಾಂತ ಮೇಡಮ್,
ಭೂಪಟಗಳಿಗೆ ನೂರಾದ ಮೇಲೆ ಇಲ್ಲಿ ಐವತ್ತು ಆದ ಮೇಲೆ...ಕೊನೆಯಲ್ಲಿ ಬಂದರೂ ಕಡೆಗಾಣಿಸಬಾರದು[Last but not Least]ಅನ್ನುವಂತೆ ನಿಮ್ಮ ಪ್ರತಿಕ್ರಿಯೆ ಚೆನ್ನಾಗಿರುತ್ತದೆ...
ಇನ್ನೂ ಅಲಂಕಾರದ ವಿಚಾರ ಬಂದಾಗ ನನಗೆ ಅದರ ಕ್ರೇಜ್ ಹೆಚ್ಚು....ಯಾವುದನ್ನೆ ಕೊಟ್ಟರೂ ಆತುರ ಪಡದೆ...ನಿದಾನವಾಗಿ finishing touch ಚೆನ್ನಾಗಿ ಮಾಡಿ ಕೊಡಬೇಕೆನ್ನುವುದು ನನ್ನ ಆಸೆ...ಅದಕ್ಕೆ ಇದೆಲ್ಲಾ ಬಣ್ಣ..ಓರೆ ಕೋರೆ ...ಹಾಡು...[ಹಾಡಂತೂ ಲೇಖನಕ್ಕೆ ಹೆಚ್ಚು ಸೂಕ್ತ ಮತ್ತು ಹತ್ತಿರವೆನಿಸಿದೆ] ಇತ್ಯಾದಿಗಳೆಲ್ಲಾ....ಇಷ್ಟೆಲ್ಲಾ ಮಾಡಿದರೂ ಸಹಜತೆಯನ್ನು ಕಾಪಾಡುವಲ್ಲಿ ನನ್ನ ಗಮನವಿದ್ದೆ ಇರುತ್ತದೆ.....
ಲೇಖನವನ್ನು ಓದಿಲ್ಲವೆಂದಿರಿ...ಪ್ಲೀಸ್ ಓದಿ..ಅದರ ಅನುಭವವನ್ನು ಹಂಚಿಕೊಳ್ಳಿ.....
ಗಿಡ್ಡಿಯ ಪಾತ್ರ ಮನ ಕಲಕುತ್ತದೆ, ಸಾವು ನ್ಯಾಯವೊ ಇಲ್ವೊ ಗೊತ್ತಿಲ್ಲ ಹುಟ್ಟು ನ್ಯಾಯವೆಂದಾದರೆ ಅದೂ ನ್ಯಾಯವೇ, ಸಾವಿಲ್ಲದ ಮನೆಯ ಸಾಸಿವೆ ಕಾಳು ಹುಡುಕಿ ತರಲಾಗಲ್ಲ ಅನ್ನೋದು ವಾಸ್ತವ. ಛಾಯಾಕನ್ನಡಿಯಲ್ಲಿ ವಾಸ್ತವಕ್ಕೊಂದು ಕನ್ನಡಿ ಹಿಡಿದಿದ್ದೀರಿ...
ಶಿವಣ್ಣ....
ಕಥನ ಶೈಲಿ ತು೦ಬಾ ಇಷ್ಟವಾಯಿತು. ಆದರೆ unexpected ಆಗಿ ಕಥೆಗೆ ಟ್ರಾಜಿಡಿ ಎ೦ಡಿ೦ಗ್ ಕೊಟ್ಟಿದ್ದು ಇಷ್ಟವಾಗಲಿಲ್ಲ ನೋಡಿ :(:(:(
ಪ್ರಭು,
ತುಂಬಾ ಒಳ್ಳೆಯ ತೂಕವುಳ್ಳ ಮಾತುಗಳಿಂದ ಪ್ರತಿಕ್ರಿಯಿಸಿದ್ದೀರಿ...
ಛಾಯಾಕನ್ನಡಿಯಲ್ಲಿ ಸಾಧ್ಯವಾದಷ್ಟು ವಾಸ್ತವದ ತಳಹದಿಯಲ್ಲೇ ಲೇಖನ, ಕತೆ ಕವನ, ಫೋಟೋ ಕಟ್ಟಿಕೊಡುವ ಪ್ರಯತ್ನ ನನ್ನದು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.....ಬರುತ್ತಿರಿ....
ಸುಧೇಶ್,
ಕತೆಗಾಗಿ ಬದಲಾದ ಶೈಲಿಯನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್...
ಅಂತ್ಯವನ್ನು ಬದಲಿಸಬೇಕೆಂಬ ಆಸೆ ನನಗೂ ಇತ್ತು. ಕೊನೆಯ ಕ್ಷಣದಲ್ಲಿ ನಿಜವೇ ಇರಲಿ ಅನ್ನಿಸಿ ಹಾಗೆ ಬಿಟ್ಟೆ..!
ಹೀಗೆ ಬರುತ್ತಿರಿ....
ನಮಸ್ಕಾರ. ನಿಜಕ್ಕೂ ಕಣ್ಗಳು ತುಂಬಿಬಂದು ಕೊನೆಯಲ್ಲಿನ ಸಾಲುಗಳನ್ನು ಓದಲು ಬಹಳ ತ್ರಾಸವಾಯಿತು.
ಕ್ಷಣ..ಚಿಂತನೆ...
ನಿಮ್ಮ ಬ್ಲಾಗಿನ ಶೀರ್ಷಿಕೆ ಚೆನ್ನಾಗಿದೆ.
ನನ್ನ ಬ್ಲಾಗಿಗೆ ಸ್ವಾಗತ. ಪುಟ್ಟ ಕತೆಯನ್ನು ಓದಿ ಅನುಭವಿಸಿದ್ದಕ್ಕೆ ಥ್ಯಾಂಕ್ಸ್.....ಹೀಗೆ ಬರುತ್ತಿರಿ....
ಚನ್ನಾಗಿ ಬರಿದಿದ್ದಿರಿ ಶಿವು.
ಕೊನೆಯ ಸಾಲುಗಳನ್ನು ಓದುವಾಗ ಬೇಸರವಾಯಿತು.
ಶಿವಪ್ರಕಾಶ್,
ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....
ಶಿವಣ್ಣ,
ಕಥೆ ನಿಜಕ್ಕೂ ಅಳು ತರಿಸುವಂತದ್ದು.
ನಿಮ್ಮ ಬ್ಲಾಗ್ ಗೆ ಬಂದು ಮೊದಲನೆ ಲೇಖನ ಈ ಕಥೆ ಓದಿದೆ ನೋಡಿ... ಮತ್ತೆ ಮುಂದುವರಿಯುವ ಮನಸ್ಸಾಗಲಿಲ್ಲ!!! ಈ ಕಥೆಯ ಪಾತ್ರಗಳುಅದ್ಯಾಕೋ ಮನಸ್ಸನ್ನು ಕಾಡೋಕೆ ಶುರು ಮಾಡಿವೆ... ಕಥೆ ಚೆನ್ನಾಗಿವೆ...ಅದ್ಯಾಕೋ ಮನಸ್ಸು ಭಾರ ಭಾರ.. ಉಳಿದ ಲೇಖನಗಳನ್ನು ಮುಂದೆ ಓದುವೆ.. ಫೋಟೋ ಕೂಡ ಕಥೆಗೆ ತಕ್ಕುದಾಗಿ ಅರ್ಥವತ್ತಾಗಿದೆ ... ಸುಪರ್ಬ್
http://ravikanth-gore.blogspot.com/
ಜಯಶಂಕರ್, ಥ್ಯಾಂಕ್ಸ್....
ರವಿಕಾಂತ್ ಗೋರೆ ಸರ್,
ಮೊದಲು ನನ್ನ ಕ್ಯಾಮೆರಾ ಹಿಂದೆ ಬ್ಲಾಗಿಗೆ ಬೇಟಿಕೊಟ್ಟಿರಿ....ಈಗ ಇಲ್ಲಿಗೂ ಬಂದಿದ್ದೀರಿ...ನಿಮಗೆ ಸ್ವಾಗತ! ಮೊದಲನೇ ಲೇಖನವೇ ನಿಮ್ಮನ್ನೂ ಕಾಡುವಂತಾಗಿದ್ದು....ನಾನು ಇದನ್ನು ಬರೆದಿದ್ದಕ್ಕೂ ಸಾರ್ಥಕ...ಬಹುಶಃ ನನ್ನ ಉಳಿದೆಲ್ಲಾ ಲೇಖನಗಳನ್ನು ಇಷ್ಟಪಡಬಹುದು....ಹೀಗೆ ಬರುತ್ತಿರಿ....
ಶಿವು ಅವರೆ
ನನ್ನ ಕಾಮೆಂಟ್ ಅನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವಿರಿ. ನಾನು ನಿಮ್ಮ ಲೇಖನ ಓದಿದ್ದೆ. ಪ್ರತಿಕ್ರಿಯೆಗಳನ್ನಲ್ಲ. ಈಗ ಅವುಗಳನ್ನೂ ಓದಿ ಮುಗಿಸಿದೆ
ಚಂದ್ರ ಕಾಂತ ಮೇಡಮ್,
ನೀವು ಹೇಳಿದ್ದು ಸರಿ....ನಾನೇ ತಪ್ಪಾಗಿ ಅರ್ಥೈಸಿದ್ದೆ...ಕ್ಷಮಿಸಿಬಿಡಿ.....ಮತ್ತೆ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್....
ಶಿವು ಅವರೇ,
ನೈಜ ಘಟನೆಯೊಂದನ್ನು, ಮೂಲಕ್ಕೆ ಕುತ್ತು ಬಾರದಂತೆ ಹೇಳಿರುವ ನಿಮ್ಮ ಶೈಲಿ ಚೆನ್ನಾಗಿದೆ. ಗೆಳೆಯ ಅಂದರೇನು? ಉತ್ತರ ಸಿಕ್ಕಿದಲ್ಲಿ ತಿಳಿಸಿ :)
ಎಲ್ಲಕ್ಕಿಂತ ನನಗಿಷ್ಟವಾದದ್ದೆಂದರೆ, ಆ ಚಿತ್ರ. ನನ್ನ ತಂಗಿಯರ ಬಾಲ್ಯ ಹಾಗೇ ಕಣ್ಣಿನ ಮುಂದೆ ತೇಲಿ ಹೋಯಿತು. ಮೂಲ ಚಿತ್ರವನ್ನು ನನಗೆ ಇ-ಮೇಲ್ ಮಾಡಲು ಸಾಧ್ಯವೇ?
ಶಿವು ಅವರೇ,
ಒಂದು ನೈಜ ಘಟನೆಯನ್ನು ತುಂಬಾ ಭಾವಪೂರ್ಣವಾಗಿ ಚಿತ್ರಿಸಿದ್ದೀರಿ..ಅದಕ್ಕೊಂದುವಂತಹ ಚಿತ್ರವು ಕೂಡ. ಪ್ರೇಮಿಗಳ ದಿನಕ್ಕೆ ನಿಮ್ಮ ಕೊಡಗೆ ತುಂಬ ದಿನ ನೆನಪಿನಲ್ಲಿ ಇರುವಂತದ್ದು.
ಸುನಿಲ್
ಶಿವು, ಓದಿದ ನಂತರ ಕಣ್ಣು ಹನಿಗೂಡಿದೆ. ಬರೆವೆ ಕೈ ತಡವರಿಸುತ್ತಿದೆ.. ಇಂಥ ವಿಷಾದ ಕಟ್ಟಿ ಕೊಡುವ
ಬರಹಗಳನ್ನು ಚೆನ್ನಾಗಿದೆ ಅನ್ನಲೂ ಒಂಥರಾ ಹಿಂಸೆ. ಆ ಪುಟ್ಟ ಜೀವಕ್ಕೆ ನನ್ನದೊಂದು ಕಂಬನಿ.
- ಮಿಂಚುಳ್ಳಿ
ವಿನುತಾ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ...... ಕತೆ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
ವಾಜಿದ್-ಗಿಡ್ಡಿ ಇಬ್ಬರ ತಿಳಿನೀರಿನಷ್ಟೆ ಪರಿಶುದ್ಧವಾದ ಸಲಿಗೆ, ಒಬ್ಬರಿಂದ ಮತ್ತೊಬ್ಬರೂ ಏನೂ ನಿರೀಕ್ಷಿಸದೆ ಸದಾ ಕೊಡುವುದರಲ್ಲೇ ಕಂಡುಕೊಳ್ಳುವ ಸಾರ್ಥಕತೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನುವಂತೆ ತಾವು ಹೇಳದೆ ಒಬ್ಬರಿಗೊಬ್ಬರು ಮಾಡುವ ಸಹಾಯ, ಅದೆಲ್ಲಕ್ಕಿಂತ ಮಿಗಿಲಾಗಿ ಪರಿಶುದ್ದ ಗೆಳೆತನ, ಲಗು ಹಾಸ್ಯ, [ಕಷ್ಟಕ್ಕೆ ಪ್ರೀತಿಯಿಂದ ಹೆಗಲು ಕೊಡುವ ಪರಿ, ವಾಜಿದ್ ಗಿಡ್ಡಿಯಲ್ಲಿ[ಆರಂಭದ ಕೈಯಿಡಿದು ನಡೆಸುವುದು] ತಾಯಿಯನ್ನು ಕಂಡುಕೊಂಡರೆ, ಗಿಡ್ಡಿಯ ಆತನ ತೊಡೆಯ ಮಲಗುವ ಖುಷಿಯನ್ನು ತಾಯಿ ತೂಕಕ್ಕೆ ಹೋಲಿಸುತ್ತಾಳೆ....ಒಟ್ಟಾರೆ ಇವೆಲ್ಲಾ ಗುಣಗಳು ಇಬ್ಬರಲ್ಲೂ ಇದ್ದಾಗ ಅವರಿಬ್ಬರಿಗೂ ಬಂಗಾರದಂತ ಗೆಳೆಯ-ಗೆಳತಿ ಸಿಕ್ಕುತ್ತಾರೆ....
ನನ್ನ ಪ್ರಕಾರ ಗೆಳೆತನವೆಂದರೆ ಇದೆ ಅಲ್ಲವೇ...
ಸುನಿಲ್,
ಕತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....
ಮಿಂಚುಳ್ಳಿ.....
ನನ್ನ ಬ್ಲಾಗಿಗೆ ಸ್ವಾಗತ.....ಮೊದಲ ಕತೆ ನಿಮ್ಮನ್ನೂ ಈ ಕಾಡಿದ್ದಕ್ಕೆ ನಾನು ಆ ಕತೆಗೊಂದು ಥ್ಯಾಂಕ್ಸ್ ಹೇಳುತ್ತೇನೆ....ನಿಮ್ಮ ಕಣ್ಣ ಹನಿಮುತ್ತು.......ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ...ಹೀಗೆ ಬರುತ್ತಿರಿ...
ಶಿವೂ ಅನ್ನ ಬೆಂದಿದೆಯಾ ನೋಡಲು ಪಾತ್ರೆಯೊಳಗಿನ ಅಷ್ಟೂ ಅಗುಳನ್ನು ಪರೀಕ್ಷೆ ಮಾಡಬೇಕಿಲ್ಲ... ನಿಮ್ಮ ಬರವಣಿಗೆಯ ಸಾಮರ್ಥ್ಯಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ.. ನಿಮ್ಮನ್ನು ನನ್ನ ಬ್ಲಾಗ್ ರೋಲ್ ಗೆ ಸೇರಿಸಿದ್ದೇನೆ. ನನ್ನ ಮನೆಯಲ್ಲಿದ್ದೇ ನಿಮ್ಮ ಮನೆ ನೋಡಬಹುದು ಅಂತ ..
ಮಿಂಚುಳ್ಳಿ,
ನೀವು ನನ್ನ ಬ್ಲಾಗನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಸಾಧ್ಯವಾದರೆ ಉಳಿದ ಲೇಖನಗಳನ್ನು ನೋಡಿ....ಥ್ಯಾಂಕ್ಸ್....
Post a Comment