Tuesday, February 3, 2009

ಪುಟ್ಟ ಪುಟ್ಟ ಪುಟಾಣಿ ಸಂತೋಷಗಳು......

ಜೀವನದಲ್ಲಿ ಪುಟ್ಟ ಪುಟ್ಟ ಸಂತೋಷಗಳನ್ನು ಅನುಭವಿಸಿದಾಗ ಅವುಗಳ ಕಡೆಗೆ ಕೃತಜ್ಞತೆಯಿಂದ....................

'ಖುಷಿಯಾಗಿದೆ ಯಾಕೋ ನಿಮ್ಮಿಂದಲೇ.......!! ಹಾಡಬೇಕೆನಿಸುತ್ತದೆ.............

ಇವು ಪ್ರತಿದಿನ ನಮ್ಮ ಜೀವನದಲ್ಲಿ ಮಿಂಚಾಗಿ ಬಂದು ಹೋಗುತ್ತಿರುತ್ತವೆ......


ಬಿಡಿ ಬಿಡಿ ಹೂಗಳ ಹಾಗೆ.....

ಮನಸ್ಸನ್ನು ನವಿರಾಗಿ ತಾಕಿ ಹೋಗುತ್ತಿರುತ್ತವೆ. ಪುಳಕಗೊಳಿಸುತ್ತಿರುತ್ತವೆ...............

ಆವುಗಳಲ್ಲಿ ಕೆಲವು ಇಲ್ಲಿವೆ.............


ಕಳೆದ ವಾರ ನನಗಿಷ್ಟವಿಲ್ಲದಿದ್ದರೂ ನನ್ನವಳ ಜೊತೆ ಹೊಸ ಬಟ್ಟೆ ಖರೀದಿಗೆ ಹೋಗಿದ್ದೆ. ಅವಳು ಇಷ್ಟಪಡುವ ಬಣ್ಣದ, ವಿನ್ಯಾಸದ ಬಟ್ಟೆಗಳನ್ನು ನಾನು ಹಾಕಿಕೊಳ್ಳಬೇಕೆಂಬ ಆಸೆ. ಆವಳು ಕೊಡಿಸಿದ ಬಟ್ಟೆಗಳನ್ನು ಹಾಕಿಕೊಂಡಾಗ ನನಗಿಷ್ಟವಾಗಿರದಿದ್ದರೂ ಹೊರಗೆ ಗೆಳೆಯ ಗೆಳತಿಯರು ಚೆನ್ನಾಗಿದೆ ಅಂದಿದ್ದರು.. ಮನೆಗೆ ಬಂದು ಇದನ್ನು ಅವಳಿಗೆ ಹೇಳಿದಾಗ ಅವಳ ಮುಖದಲ್ಲಿ ಖುಷಿಯ ಮಿಂಚು.........


ನೀವು ಟ್ರಾಫಿಕ್‌ನಲ್ಲಿ ನಿಂತಿರುತ್ತೀರಿ...... ಸುತ್ತಲು ದೂಳೂ, ಗಾಳಿ. ನಿಮಗೆ ಕಷ್ಟವಾಗುತ್ತಿರುತ್ತದೆ.... ಪಕ್ಕದಲ್ಲಿ ಒಂದು ಕಾರು ಬಂದು ನಿಲ್ಲುತ್ತದೆ... ನಿಮಗೆ ಗೊತ್ತಿಲ್ಲದ ಹಾಗೆ ಒಂದು ಕ್ಷಣ ಕಾರಿನ ಕಿಟಕಿಯ ಕಡೆಗೆ ನೋಡುತ್ತೀರಿ.. ಕಾರಿನಲ್ಲಿ ಅಮ್ಮನ ತೊಡೆಯಮೇಲೆ ಕುಳಿತಿದ್ದ ತುಂಟ ಮಗು ನೀವು ನೋಡುವುದನ್ನೇ ಕಾಯುತ್ತಿದ್ದು ತಕ್ಷಣ ನಿಮ್ಮೆಡೆಗೆ ಒಂದು ಕಿರುನಗೆ ಚಿಮ್ಮುತ್ತದೆ.........ಆಹಾ! ನಿಮ್ಮ ಮೈ ಮನಸೊಳಗೆ ಮಿಂಚಿನಂತೆ ಖುಷಿಯೊಂದು ಅವರಿಸಿದಂತಾಗುವುದಿಲ್ಲವೇ !...............


ಮನೆಯಲ್ಲಿ ಬಟ್ಟೆ ಬದಲಿಸಿಕೊಳ್ಳುವಾಗ ಪ್ಯಾಂಟಿನಿಂದ ಹತ್ತರ ನೋಟುಗಳು ಕೆಳಗೆ ಬಿದ್ದಾಗ ಅದನ್ನು ಗಮನಿಸಿದ ನನ್ನಾಕೆ, ಅದನ್ನು ಕೈಗಿತ್ತಿಕೊಳ್ಳುತ್ತಾಳೆ. ಓಹೋ ಇವತ್ತು ಹತ್ತು ರೂಪಾಯಿ ಹೋಯ್ತಲ್ಲ ಅನ್ನುವ ಅಲೋಚನೆ, ಅದು ಬಂದ ಮರುಕ್ಷಣದಲ್ಲಿಯೇ ತಪ್ಪಾಗುತ್ತದೆ. ಕೆಳಗೆ ಬಿದ್ದ ನೋಟನ್ನು ತೆಗೆದುಕೊಂಡು ನನ್ನ ಎರಡು ಕಣ್ಣುಗಳಿಗೊತ್ತಿ, ನಂತರ ನನ್ನ ಪ್ಯಾಂಟ್ ಜೇಬಿನೊಳಗೆ ಇಡುತ್ತಾಳೆ......ಇದ್ಯಾಕೆ ಹೀಗೆ ಎಂದರೆ ನೀವೆ ತಾನೆ ಬೀಳಿಸಿ ತಪ್ಪು ಮಾಡಿದ್ದು , ಆ ತಪ್ಪನ್ನು ಸರಿಮಾಡಬೇಕಾದರೆ ಆ ನೋಟನ್ನು ನಿಮ್ಮ ಕಣ್ಣಿಗೆ ಮುಟ್ಟಿಸುವುದೇ ಸರಿ ಎಂದಾಗ ಅಲ್ಲಿ ನಗೆ ಅಲೆ ಉಕ್ಕಿರುತ್ತದೆ.....


ಅಕ್ಕನ ಮಕ್ಕಳಾದ ಚೇತನ್ ಮತ್ತು ವರ್ಷಿಣಿ ೯ ಮತ್ತು ೭ ವರ್ಷದವರು. ನನ್ನ ಹುಟ್ಟಿದ ದಿನಕ್ಕಾಗಿ ಒಂದೊಂದು ಗ್ರೀಟಿಂಗ್ ಕಾರ್ಡುಗಳನ್ನು ಕೊಟ್ಟಿದ್ದು ನನಗೆ ಖುಷಿಯಾಗಿತ್ತು.


ಅವುಗಳನ್ನು ಅವರು ರಾತ್ರಿ ಒಂದು ಗಂಟೆಯವರಿಗೆ ಕೂತು ತಮ್ಮ ಕೈಯಾರೆ ಚಿತ್ರಬಿಡಿಸಿ....ಅಕ್ಷರ ಜೋಡಿಸಿದ್ದರಂತೆ........ ಅದನ್ನು ನೋಡಿದಾಗ ನನಗೆ ನಾನು ಬಾಲ್ಯದಲ್ಲಿ ಹೀಗೆ ಮಾಡುತ್ತಿದ್ದ ನೆನಪು ಮರುಕಳಿಸಿದ ಅನಂದವನ್ನು ಹೇಗೆ ವರ್ಣಿಸಲಿ.......!!
ಇದೇ ಮಾತನ್ನು ಕಾನ್ಸೂರಿನ ಹತ್ತಿರದ ಮುತ್ಮರ್ಡುನಲ್ಲಿರುವ ನಾಗೇಂದ್ರನ ಮಗನಾದ ಸುಹಾಸನ ಬಗ್ಗೆ ಹೇಳಬೇಕೆನಿಸುತ್ತದೆ........ಈ ಪೋರ ಪಾತ್ರದಾರಿಯಾಗಿರುವ ನನ್ನ ಆನೇಕ ಛಾಯಾಚಿತ್ರಗಳು ರಾಷ್ಟ್ರೀಯ ಅಂತರಾಷ್ಟ್ರಿಯ ಪ್ರಶಸ್ತಿಯನ್ನು ಗಳಿಸಿಕೊಟ್ಟಿವೆ......ಹೊಸ ವರ್ಷಕ್ಕೆ ಈತ ನನಗೆ ಕಳಿಸಿರುವ ಗ್ರೀಟೀಂಗ್ ಕಾರ್ಡು ಅವನೇ ಸ್ವತಃ ಅದರಲ್ಲಿ ಚಿತ್ರ ರಚಿಸಿ....ಬರೆದಿರುವುದು.....!!


ಇಂಥ ಸುಹಾಸನಂಥ ಸುಹಾಸನೇ ನಮ್ಮ ಮನೆಯಲ್ಲಿ ರಾಗಿ ಮುದ್ದೆಯನ್ನು ಎಷ್ಟು ಕಷ್ಟಪಟ್ಟರೂ ನುಂಗಲಾಗದೆ....ಅಗಿದು ನುಂಗಲೆತ್ನಿಸಿದ್ದು.......ಆ ಸಮಯದಲ್ಲಿ ಅವನ ಮುಖಭಾವ..........


"ಶಿವು ಮಾಮ...." ಅಂತ ಓಡಿ ಬಂದು ಪುಟ್ಟ ತೋಳುಗಳಿಂದ ನನ್ನ ಕುತ್ತಿಗೆ ಬಳಸುವ ನಾಗೇಂದ್ರನ ಎರಡನೇ ಮಗನಾದ ಆರುವರ್ಷದ ವಿಕಾಶನ ಮುಗ್ಧತೆ,........


ನಾನು " ಚಿಕ್ಕ ಬಿನ್ನೆತ್ತಿ" [ಎಲ್ ಕೆ ಜಿ] ಎನ್ನುತ್ತಾ ಹತ್ತಾರು ಮುಖಭಾವ ಪ್ರದರ್ಶಿಸುವ ೪ ವರ್ಷದ ಜಯಂತ......

ಜಯಂತ ಮತ್ತು ಆಶ್ವಿನಿ...ನನ್ನ ಕ್ಯಾಮೆರಾದಲ್ಲಿ ಈ ರೀತಿ ಸೆರೆಯಾದರು..........


ನಿಮ್ಮ ನೂರು ಮಾತಿಗೂ ಒಂದು ಮಾತು ಆಡದ ೪ ವರ್ಷದ ಆಶ್ವಿನಿ........

ಜೇಬಿನಲ್ಲೇ ತಿಂಡಿಯನ್ನು ಇಟ್ಟುಕೊಂಡು ಸ್ವಲ್ಪ ಸ್ವಲ್ಪ ತಿಂದು ಮತ್ತೆ ಜೇಬಿಗಿಳಿಸುವ ಅವನ ಅಣ್ಣ ಭರತ.............

ಫೋಟೋಗ್ರಫಿಯ ಬಗ್ಗೆ ಸದಾ ಕುತೂಹಲ ತೋರಿಸುವ ಅವಳಿಗಿಂತ ಎರಡೇ.... ವರ್ಷ ದೊಡ್ಡವ ಅವಳಣ್ಣ ಆಕ್ಷಯ....

ಇವರೆಲ್ಲರಿಗೂ ಲೀಡರಾಗಿ ಮುಂದಿರುವ ಸ್ವಾತಿ.......ಈ ಪುಟಾಣಿಗಳು........ಅವರ ಪುಟ್ಟ ಪುಟ್ಟ ಸಂತೋಷಗಳು.....

ದಿನಪತ್ರಿಕೆ ಕೆಲಸಗಳಿಗಾಗಿ ಕಛೇರಿಗಳಿಗೆ ನನ್ನ ಟೂ ವೀಲರ್‌ನಲ್ಲಿ ಓಡಾಡುವಾಗ, ಲಂಕೇಶ್, ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಬಂದಿರುವ " ಸ್ಲಂ ಡಾಗ್ ಮಿಲಿಯನೇರ್ " ಲೇಖನವನ್ನು ಬೆಂಗಳೂರಿನ ಪ್ರತಿ ಟ್ರಾಫಕ್‌ನಲ್ಲೂ ನಿಂತಾಗ ಹತ್ತತ್ತು ಸಾಲುಗಳನ್ನು ಓದುವುದರಲ್ಲಿನ ಮಜಾ, ಆನಂದ......ಆಹಾ........[ಇದು ಪ್ರತಿದಿನ ಬೇರೆ ಬೇರೆ ಪತ್ರಿಕೆ, ವಿವಿಧ ವಿಚಾರಗಳು...........ಬೆಂಗಳೂರಿನ ಟ್ರಾಫಿಕ್ ನನಗೆಂದೂ ಕಿರಿಕಿರಿಯೆನಿಸಿಲ್ಲ.!!..........

"ಸಿಲಿಂಡರ್ ಮಾಡೋ, ಕಾಯಿ ಹೊಡಿ, ಹಣ್ಣು ಮಾಡೋ, ನಿದಾನವಾಗಿ ಫಾಲೋ ಮಾಡೋ.......!! " ಈ ಮಾತುಗಳು ನಾನು ಮೊನ್ನೆ ನಾಗಮಂಗಲ ರಸ್ತೆಯ ನಮ್ಮ ಹಳ್ಳಿಗೆ ಹೋಗುವ ತಿರುವಿನಲ್ಲಿ ಬಸ್ಸಿಗೆ ಕಾಯುವಾಗ ಅಲ್ಲಿರುವ ಅರಳಿಕಟ್ಟೆಯ ಮೇಲೆ ಹಿರಿಯರೆಲ್ಲಾ ಚೌಕಾಬಾರ ಆಡುತ್ತಾ ಹೇಳುತ್ತಿದ್ದ ಮಾತುಗಳು...ನಮ್ಮೂರಿನ ರಸ್ತೆ ಬದಿಯ ಚೌಕಾಬಾರ ಆಟನಿರತ ಗುಂಪು..........

ಇನ್ನಷ್ಟು ಹೊತ್ತು ನಿಂದಿದ್ದರೆ ಮತ್ತಷ್ಟು ಮಾತುಗಳು ಕೇಳಿಬರುತ್ತಿದ್ದವೇನೋ..........ಅವರ ತನ್ಮಯತೆ, ಕುತೂಹಲ, ಮಾತುಗಾರಿಕೆ.......ಆಹಾ...............

ನನ್ನೂರಿನಲ್ಲಿ ಚುಮುಚುಮು ಚಳಿಯಲ್ಲಿ, ದೊಡ್ಡ ಹಂಡೆಯ ತುಂಬಾ ತೆಂಗಿನ ಸೋಗೆಯಿಟ್ಟು ಕಾಯಿಸಿದ ನೀರು.....ನನ್ನಮ್ಮ ಬೆಳಗಿನ ಚಳಿಯಲ್ಲಿ ಎದ್ದೇಳಿಸಿ ಸ್ನಾನ ಮಾಡಿಕೊ ಅಂದಾಗ ಮನಸ್ಸಿಲ್ಲದ ಮನಸ್ಸಿನಲ್ಲಿ ಎದ್ದು ಹೋದೆ....ಗಣಗಣ ಕಾಯುತ್ತಿರುವ ನೀರು......ಹೊರಗೆ ಚಳಿಯಂಥ ಚಳಿ.....ಉರಿಯುವ ಹೊಲೆಮುಂದೆ ಕೂತು ಬೆಂಕಿ ಕಾಯಿಸಿಕೊಳ್ಳುತ್ತಿದ್ದರೇ.........

ಆ ಬೆಂಗಳೂರಿನ ಟೆನ್ಸನ್ ಜೀವನವನ್ನು ನೀವಾಳೀಸಿ ಎಸೆದುಬಿಡಬೇಕೆನ್ನಿದ್ದುನಿಜ....

ಸೂರ್ಯ ಮತ್ತು ಇತರ ಗ್ರಹಗಳಿಂದ ನಮ್ಮೆಡೆಗೆ ಹರಿದುಬರುವ ಫಲ ಫಲಾಗಳಿಗೂ, ದೆಹಲಿಯ ಪ್ರಧಾನ ಮಂತ್ರಿ ಫಂಡ್‌ನಿಂದ ಹರಿದುಬರುವ ಹಣ ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ತಲುಪಿ ಅದರಿಂದ ಆಗುವ ಜನಕಾರ್ಯಕ್ಕೂ ಲಿಂಕಿಸುವ ನಮ್ಮೂರಿನ ಅಡುಗೆ ಭಟ್ಟನ ಅಧ್ಬುತ ಮಾತೂಗಾರಿಕೆಗಳೂ.......

ವಿಂಧ್ಯಾಳಿಂದ ಆಗಾಗ ಬರುವ ಮಿಸ್ಸ್‌ಡ್ ಕಾಲುಗಳು...............ಎಸ್ ಎಮ್ ಎಸ್ ಜೊತೆಗೆ ಬರುವ ಕೈಗಳು......

ಗದ್ದೆ ಬಯಲಿನಲ್ಲಿ ಮುಂಜಾನೆ ನಡೆಯುತ್ತಿದ್ದರೆ.........ತೆಂಗಿನ ಮರಗಳ ನಡುವೆ ತೂರಿ ಬರುವ ಬಿಸಿಲ ಕೋಲುಗಳು.........

ಹಂಚಿಕಡ್ಡಿ ಮೇಲೆ ಕುಳಿತ ಚಿಟ್ಟೆಯ ಕಾಮನಬಿಲ್ಲಿನಂತ ರೆಕ್ಕೆಗಳ ಮೇಲೆ ಕುಳಿತ ತುಷಾರ ಬಿಂದುಗಳು.........


ಇವುಗಳನ್ನು ಎಂಜಾಯ್ ಮಾಡುವಷ್ಟೇ ಚೆನ್ನಾಗಿ........

ರಾಗಿ ಮುದ್ದೆ ನುಂಗುವುದಾ ಅಥವಾ ಅಗಿಯುವುದಾ.........

ನ್ಯೂಡಲ್ಸ್ ಕೈಯಲ್ಲಿ ತಿನ್ನೋದ ಅಥವ ಚಮಚದಲ್ಲಿ ತಿನ್ನೋದ...........ಅಂಥ ಅವರದೇ ಶೈಲಿಯಲ್ಲಿ ತರ್ಕಿಸುವ ಪ್ರಕಾಶ ಹೆಗಡೆಯವರ ಮಾತುಗಾರಿಕೆ.........

ಗೊತ್ತಿಲ್ಲದೇ ಪೂರ್ತಿ ಅಮುಕಿ ಹೊರಬಂದ ಟೂತ್ ಪೇಷ್ಟನ್ನು ಮತ್ತೆ ಬಂದದಾರಿಯಲ್ಲೇ ಒಳಹಾಕುವ ಪ್ರಯತ್ನದಲ್ಲಿ. ಗೊತ್ತಿಲ್ಲದಾ ಹಾಗೆ ನನ್ನ ಬಾಯಿಂದ ಗಾಳಿಯನ್ನು ಒಳಗೆ ಎಳೆದುಕೊಳ್ಳುತ್ತಾ............

ಪುಸ್ತಕ ಓದುತ್ತಾ ನಿದ್ರೆ ಮಾಡೋದ್ ಸರೀನಾ ? ಅಥವ ನಿದ್ರೆ ಮಾಡುತ್ತಾ ಪುಸ್ತಕ ಓದೋದ್ ಸರಿನಾ ?......

ಅಂತ ಕನ್‌ಪ್ಯೂಸನ್ ಮಾಡಿಕೊಳ್ಳುವ ಗೆಳೆಯರನ್ನು ನೋಡುವಾಗ ಆಗುವ ಪುಟ್ಟ...ಪುಟ್ಟ ಪುಟಾಣಿ ಸಂತೋಷಗಳಗೆ ಬೆಲೆಕಟ್ಟಲು ಸಾಧ್ಯವೇ ?

ಇನ್ನೂ ನನ್ನ ಮೆಚ್ಚಿನ ವೃತ್ತಿ ಮತ್ತು ಹವ್ಯಾಸವಾದ[ದಿನಪತ್ರಿಕೆ ಕೆಲಸವೂ ಮೆಚ್ಚಿನದೇ]ಫೋಟೋ ತೆಗೆಯುವಾಗ ಅದು ಮದುವೆ ಮನೆಯಿರಲಿ, ಚಿಟ್ಟೆ ಹುಳುಗಳಾಗಲಿ, ಪಕ್ಷಿಗಳಾಗಲಿ.....ಪಿಕ್ಟೋರಿಯಲ್ ಫೋಟೊಗ್ರಫಿಯ ನೆರಳು ಬೆಳಕಿನ ದೃಶ್ಯಗಳಾಗಲಿ................ನನ್ನ ಕಣ್ಣಿಗೂ-ಕ್ಯಾಮೆರಾ ಕಣ್ಣಿಗೂ ಸಲಿಗೆ.....ಸಲುಗೆಯಲ್ಲ....ಇಂಥ ಪುಟ್ಟ ಪುಟ್ಟ ಸಂತೋಷಗಳ ಸುಲಿಗೆ. ..........

ಇಂಥವು ಸಾವಿರಾರು. ಅವುಗಳಲ್ಲಿ ಕೆಲವನ್ನು ನಿಮಗಿಲ್ಲಿ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇನೆ.......ಎಂಜಾಯ್ ಮಾಡಿ....ನಿಮಗೂ ನೆನಪಾಗಬಹುದು.....ಹಂಚಿಕೊಳ್ಳಿ.........

ಚಿತ್ರ ಮತ್ತು ಲೇಖನ....
ಶಿವು......

55 comments:

ಅನಿಲ್ ರಮೇಶ್ said...

ಶಿವು,

ಚಿತ್ರಪುಟಗಳು, ಅದಕ್ಕೆ ಹೊಂದುವಂಥಾ ಲೇಖನ.

ಸಕ್ಕತಾಗಿದೆ.

ಚಿಟ್ಟೆಯ ಚಿತ್ರವಂತೂ ಬೊಂಬಾಟ್.

-ಸ್ವಾಮಿ ಶರಣಂ.

Umesh Balikai said...

ನಿಜ, ದಿನನಿತ್ಯದ ಪುಟ್ಟ ಪುಟ್ಟ ಸಂತಸಗಳನ್ನು ಅನುಭವಿಸುತ್ತಾ ಬದುಕುವುದರಲ್ಲೇ ನಿಜವಾದ ಸಂತೋಷ ಅಡಗಿದೆ. ಜಯಂತ ಮತ್ತು ಅಶ್ವಿನಿ ಚಿತ್ರ ತುಂಬಾ ಇಷ್ಟವಾಯಿತು. ನೀವು ಫೋಟೋಗ್ರಫೀಗೆ ಯಾವ ಕ್ಯಾಮರ ಬಳಸುವುದು? ನನಗೂ ಫೋಟೋಗ್ರಫೀ ಅಂದರೆ ತುಂಬಾ ಇಷ್ಟ, ಆದರೆ ನನ್ನ ಹತ್ತಿರ ಇರುವ ಕ್ಯಾನನ್ ಪಾಯಂಟ್ ಅಂಡ್ ಶೂಟ್ ಕ್ಯಾಮರದಲ್ಲಿ ಸಬ್ಜೆಕ್ಟ್ ನ ಮಾತ್ರ ಫೋಕಸ್ ಮಾಡಿ ಉಳಿದ ಹಿನ್ನೆಲೆಯನ್ನ ಮಬ್ಬುಗೊಳಿಸುವ ಫೀಚರ್ ಇಲ್ಲ. :( ಅದಕ್ಕೆ ಎಸ್ ಎಲ್ ಆರ್ ಕ್ಯಾಮರ ನೇ ಬೇಕು ಅನ್ಸುತ್ತೆ.

ಚಿತ್ರಾ ಸಂತೋಷ್ said...

ಶಿವಣ್ಣ..

ಪುಟ್ಟ ಪುಟ್ಟ ಸಂತೋಷಗಳ ಕುರಿತು ಬರೆದ..ಪುಟ್ಟ ಪುಟ್ಟ ಸಾಲುಗಳು ನನಗೆ ಅಗಾಧ ಖುಷಿಕೊಟ್ಟವು. ಆಫೀಸ್ ನಲ್ಲಿ ಬರೋಬ್ಬರಿ ಕೆಲಸಗಳ ನಡುವೆ, ಬಾಸ್ ಕೈಯಿಂದ ಬೈಸಿಕೊಳ್ಳುತ್ತಲೇ..ಪುಟ್ಟ ಸಂತೋಷಾನ ಹುಡುಕುತ್ತಾ ಇದ್ದವಳಿಗೆ ನಿಮ್ಮ ಲೇಖನ 'ಬೆಳಕಿನಷ್ಟೇ ಖುಷಿ ಕೊಡ್ತು'.

ಪುಟ್ಟ ಸಂತೋಷಗಳನ್ನೇ ಅನುಭವಿಸುತ್ತಾ ಬದುಕಬೇಕು ಅನ್ನೋದು ಕೂಡಾ ಒಂದು ಕಲೆ..ಎಲ್ಲರಿಗೂ ಅದು ಒಲಿಯುವುದಿಲ್ಲ. ನಿಮಗದು ಚೆನ್ನಾಗಿ ಗೊತ್ತಿದೆ..ಅದರಿಂದ ನಮಗೂ ಹೇಳಿಕೊಟ್ಟಿರಿ.

ರಾಜಬೀದಿಯಾಗಲು ಸಾಧ್ಯವಿಲ್ಲವಾದರೂ, ಕಾಲುದಾರಿಯಾಗಲೂ ಸಾಧ್ಯವಿದೆ ಎಂದ ಆಂಗ್ಲ ಕವಿಯೊಬ್ಬನ ಮಾತು ನೆನಪಾಯಿತು...ಇರಲಿ, ಬಂದಿದ್ದು ಬರಲಿ..ಪುಟ್ಟ ಸಂತೊಷಗಳನ್ನೇ ಬೆಚ್ಚಗೆ ಮಡಿಲಲ್ಲಿಟ್ಟು ಪೋಷಿಸೋಣ, ಖುಷಿ ಪಡೋಣ...

ಯಪ್ಪಾ! ಇವತ್ತು ನಮಗೆ ಡೆಡ್ ಲೈನ್ ..ಕೆಲಸ ಇದೆ..ತಲೆಯೆಲ್ಲಾ ನೋವಾಗ್ತಿತ್ತು..ನಿಮ್ ಬ್ಲಾಗ್ ಓದಿ ಮನದಲ್ಲೆ ನಗೆಬೆಳದಿಂಗಳು ಚೆಲ್ಲಿಬಿಡ್ತು. ಒಳ್ಳೆ ಬರಹ.
-ಚಿತ್ರಾ

ಮನಸು said...

ಶಿವು ಸರ್,

ನಿಮ್ಮ ಚಿತ್ರಗಳು ಅದಕ್ಕೆ ಅನುಗುಣವಾದ ಲೇಖನ ಚೆನ್ನಾಗಿದೆ, ನಿಮ್ಮ ಲೇಖನ ನೋಡಿ ನನ್ನ ಮಗನ ಮಾತು, ಬರವಣಿಗೆ, ಚಿತ್ರ, ಎಲ್ಲವೂ ನೆನಪಾಗುತ್ತದೆ.. ಚಿಕ್ಕಮಕ್ಕಳು ಏನು ಮಾಡಿದರೂ ಚೆನ್ನ...ಹಳ್ಳಿಯ ಹರಟೆ ಕಟ್ಟೆಯಲ್ಲಿ ಕುಳಿತರೆ ಏನೆಲ್ಲಾ ಮಾತು ತಿಳಿದುಕೊಳ್ಳಬಹುದು.

ಮುದ್ದೆ..ನೂಡಲ್ಸ್ ಹೇಗೆ ತಿಂದರೂ ಹೊಟ್ಟೆಗೆ ಹೋಗುವುದು ಬಿಡಿ ಹ ಹ ಹ ..

ವಂದನೆಗಳು.....

Ashok Uchangi said...

ಪ್ರಿಯ ಶಿವು
ಮಕ್ಕಳು,ಹಳ್ಳಿಗರು ಅನುಭವಿಸುವ ಸಣ್ಣಪುಟ್ಟ ಸಂತಸಗಳು ನಗರವಾಸಿಗಳ ಟೆನ್ಷನ್ ಜೀವನದಲ್ಲಿ ಕಾಣುವುದೇ ಇಲ್ಲವೆನಿಸುತ್ತೆ.ಚಿಕ್ಕಚಿಕ್ಕ ಸಂಗತಿಗಳಲ್ಲಿ ಸಂತಸಪಡುವುದನ್ನು ರೂಡಿಸಿಕೊಂಡರೆ ಮಾತ್ರ ಬದುಕು ಹಸನಾಗಲು ಸಾಧ್ಯ.ನಿನ್ನೆ ತಾನೆ ನನಗೆ ಈ ಅನುಭವವಾಗಿದೆ.ಯಾವುದೇ ವಸ್ತುಪ್ರದರ್ಶನಗಳು,ಮಾಲ್,ಸಿನಿಮಾಹಾಲ್ ಕೊಡದ ಸಂತಸ ಶ್ರೀರಂಗಪಟ್ಟಣದ ಚಿಕ್ಕ ಜಾತ್ರೆಯಲ್ಲಿ ಸಿಕ್ಕಿತು.
ಒಳ್ಳೆಯ ಬರಹ.ಚಿತ್ರಗಳು ಮನಸ್ಸಿಗೆ ಮುದನೀಡುತ್ತವೆ.
ಧನ್ಯವಾದಗಳು
ಅಶೋಕ ಉಚ್ಚಂಗಿ
http://mysoremallige01.blogspot.com/

shivu.k said...

ಅನಿಲ್ ರಮೇಶ್, ಥ್ಯಾಂಕ್ಸ್........

ಚಿಟ್ಟೆಯ ಚಿತ್ರ ಮಾತ್ರ ಇಷ್ಟವಾಯಿತೆ ? ಉಳಿದ ಚಿತ್ರಗಳು ?

ಅನಿಲ್ ರಮೇಶ್ said...

ಇಲ್ಲ, ಎಲ್ಲಾ ಚಿತ್ರಗಳೂ ಚೆನ್ನಾಗಿವೆ.

ಚಿಟ್ಟೆಯ ಚಿತ್ರ ತುಂಬಾನೇ ಚೆನ್ನಾಗಿದೆ. ತುಂಬಾ ಇಷ್ಟ ಆಯ್ತು.

-ಸ್ವಾಮಿ ಶರಣಂ.

shivu.k said...

ಉಮಿ ಸರ್,

ಪುಟಾಣಿ ಸಂತೋಷಗಳನ್ನು ಅನುಭವಿಸಿದ್ದಕ್ಕೆ ಥ್ಯಾಂಕ್ಸ್....

ನಾನು ಬಳಸುವ ಕ್ಯಾಮೆರಾ ಕ್ಯಾನನ್ ೩೦ ಡಿ. ಮತ್ತು ೧೦೦-೪೦೦ ಐ.ಎಸ್ ಲೆನ್ಸ್ ಬಳಸುತ್ತೇನೆ... ಇವು ಪಕ್ಕ ವೃತ್ತಿಪರ ಕ್ಯಾಮೆರಾ ಮತ್ತು ಲೆನ್ಸುಗಳು... ನೀವು ಹೇಳಿದಂತೆ ಎಸ್.ಎಲ್.ಅರ್ ಕ್ಯಾಮೆರಾಗಳಿಂದ ಮಾತ್ರ ಎಲ್ಲ ರೀತಿಯ ಚಿತ್ರಗಳನ್ನು ತೆಗೆಯಲು ಸಾಧ್ಯ[ನೀವು ಹೇಳಿದ ಹಿನ್ನೆಲೆಯನ್ನು ಮಬ್ಬುಗೊಳಿಸುವ ಫೀಚರ್ ಸೇರಿದಂತೆ]

shivu.k said...

ಪುಟಾಣಿ ಪುಟ್ಟಿ,

ಪುಟ್ಟ ಪುಟ್ಟ ಸಂತೋಷಗಳನ್ನು ನೀನು ಚೆನ್ನಾಗಿ ಅನುಭವಿಸುವುದರಿಂದ ನಿನ್ನ ಲೇಖನಗಳು ಅಷ್ಟು ಚೆನ್ನಾಗಿರುತ್ತವೆ....ಡೆಡ್ ಲೈನ್ ಗಳಿರುವಾಗ ಇಂಥವುಗಳ ಹಿಂದೆ ಬಿದ್ದರೆ..
ಪುಟ್ಟ ಪುಟ್ಟದಾಗಿ ಸಿಗುವ ಇವುಗಳನ್ನು ಪಟ್ಟಾಗಿ ಹಿಡಿದು ಅನುಭವಿಸಿಬಿಡಬೇಕು. ಆಗ ಅಂತಿಮ ರೇಖೆ...ಪ್ರಾರಂಭದ ರೇಖೆ ಎಲ್ಲವನ್ನು ಸುಲಭವಾಗಿ ಪಳಗಿಸಬಹುದು....

ಮೆಚ್ಚಿದ್ದಕ್ಕೆ ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್.....

shivu.k said...

ಮನಸ್ವಿ ಸರ್,

ನಿಮ್ಮ ಮಗನ ಪ್ರತಿಯೊಂದು ಚಟುವಟಿಕೆಗಳನ್ನು ಚೆನ್ನಾಗಿ enjoy ಮಾಡಿ....ಚಿಕ್ಕ ಚಿಕ್ಕ ಸಂತೋಷಗಳು ಎಲ್ಲೇ ಸಿಕ್ಕಲಿ [ ಮಗ, ಹೆಂಡತಿ, ಗೆಳೆಯ, ಪ್ರಕೃತಿ, ಹಳ್ಳಿ, ಇತ್ಯಾದಿ] ಅವು ನಿಮ್ಮದಾಗಲಿ......

ಲೇಖನ ಮತ್ತು ಫೋಟೊ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಮುದ್ದೆಯ ಬಗ್ಗೆ ಬೇಕಾದರೆ ಈಗಲು ನೀವು ಪ್ರಕಾಶ್ ಹೆಗಡೆಯವರನ್ನು ಕೇಳಬಹುದು.....
ನ್ಯೂಡಲ್ಸ್.....?..!!!??????

PaLa said...

ಶಿವು,

"बार बार आती है मुझकॊ मधुर याद बचपन तॆरी, गया लॆ गया तू जीवन कि सबसे मधुर खुशी मॆरी " ಅಂತಾ ಹಿಂದಿಯ ಕವಿಯೊಬ್ರು ಹೇಳಿದ್ದು ಎಷ್ಟು ನಿಜ ಅಲ್ವಾ? ಚಿಕ್ಕ ಪುಟ್ಟ ಸಂತೋಷ ಸವಿಯೋಕೆ ಮಗುವಿನ ಮುಗ್ಧತೆ, ಸರಳತೆ ಬೇಕು. ನಿಮ್ಮನ್ನು ಭೇಟಿಯಾದ ನನಗೆ ನಿಮ್ಮಲ್ಲಿ ಅದು ಇದೆ ಅಂತ ಅನ್ನಿಸಿದ್ದಿದೆ, ಈಗ ಮನವರಿಕೆ ಆಯ್ತು. ನೀವು ಹೇಳಿದ್ದು ನಿಜ ಇಂತಹ ಪುಟಾಣಿ ಸಂತೋಷಗಳಲ್ಲಿ ಸಿಗುವ ತೃಪ್ತಿ ತುಂಬಾ. ಅದಕ್ಕೇ ದೇಹ ಬೆಳೆದರೂ ಮನಸ್ಸಿನಲ್ಲಿ ಮಾತ್ರ ಮಗುವಿನ ಮುಗ್ದತೆ ಕುತೂಹಲ ಉಳಿಸಿಕೊಳ್ಳಬೇಕು ಅಂತ ಹೇಳೋದೇನೋ!

ಸುಂದರ ಚಿತ್ರಗಳೊಂದಿಗೆ ಮನ ಮುಟ್ಟುವ ಭಾವನೆ ಹಂಚಿಕೊಂಡ ನಿಮ್ಮ ಮುಗ್ದ ಮನಸ್ಸು, ಪ್ರೌಢ ಛಾಯಾಗ್ರಹಣದ ನಿಪುಣತೆ ಹೀಗೆ ಬೆಳೆಯಲಿ..
--
ಪಾಲ

shivu.k said...

ಆಶೋಕ್,

ಸಂತೋಷಗಳನ್ನು ಹುಡುಕಿಕೊಂಡು ನಾವು ಹೋಗಬೇಕಾಗಿಲ್ಲ....ಅವು ನಮ್ಮ ಕಾಲ ಬುಡದಲ್ಲೇ ಇರುತ್ತವೆ....ಗುರುತಿಸಿ ತಬ್ಬಿಕೊಳ್ಳಿ....ಅವು ನಿಮ್ಮನ್ನಪ್ಪಿಕೊಳ್ಳುತ್ತವೆ.....ಅದಕ್ಕೆ ಹಳ್ಳಿ-ನಗರ ಹೊರದೇಶ, ಕಾಡು, ಮರಳುಗಾಡು ಅಂತೇನಿಲ್ಲ....ನಿಮ್ಮ ಮಗಳ ಪ್ರತಿಯೊಂದು ಚಟುವಟಿಕೆಯಲ್ಲೂ ಚಿಕ್ಕ ಚಿಕ್ಕ ಚಿಲ್ಟಾರಿ ಸಂತೋಷಗಳು ಸಿಕ್ಕಾಗ ನಿಮ್ಮ ಮಗಳ ಸಮೇತ ಅವುಗಳನ್ನು ಅಪ್ಪಿಕೊಳ್ಳಿ....
ನಿಮ್ಮ ಜಾತ್ರೆ ಲೇಖನ ಚೆನ್ನಾಗಿದೆ...ಥ್ಯಾಂಕ್ಸ್...

shivu.k said...
This comment has been removed by the author.
shivu.k said...

ಪಾಲಚಂದ್ರ,

ನನ್ನನ್ನು ಹೆಚ್ಚಾಗಿ ಹೊಗಳಿ ಅಟ್ಟಕೇರಿಸುತ್ತಿದ್ದೀರಿ..
ಎಲ್ಲರಲ್ಲೂ ಈ ಕುತೂಹಲ ಮುಗ್ಧತೆ...ಸರಳತೆ ಇದ್ದೇ ಇರುತ್ತದೆ.....ನಾವು ಗುರುತಿಸಬೇಕಷ್ಟೇ. ಫೋಟೋಗಳನ್ನು ಮೆಚ್ಚಿ, ನನ್ನ ಪುಟ್ಟ ಪುಟ್ಟ ಭಾವನಗಳಲ್ಲಿ ಪಾಲು ಪಡೆದುಕೊಂಡಿದ್ದಕ್ಕೆ ಥ್ಯಾಂಕ್ಸ್...

ಹೀಗೆ ಬರುತ್ತಿರಿ...ನಮಗೂ ಪಾಲುಕೊಡಿ...

ಶಿವಪ್ರಕಾಶ್ said...

ಹಾಯ್ ಶಿವು,
ಚಿತ್ರಗಳು ಹಾಗು ಲೇಖನ ಚನ್ನಾಗಿದೆ

hEmAsHrEe said...

ಶಿವು ಅವ್ರೇ,
ನಿಮ್ಮ ಬರಹಗಳಲ್ಲಿ ಜೀವನಪ್ರೀತಿ ಎದ್ದು ಕಾಣುತ್ತದೆ.
ನೀವು ಕ್ಲಿಕ್ಕಿಸುವ ಬದುಕಿನ ಕ್ಷಣಗಳಲ್ಲೂ ಸಹ.
ಹೀಗೇ ಬರೆಯುತ್ತಿರಿ.

shivu.k said...

ಶಿವ ಪ್ರಕಾಶ್, ಹೇಮಾಶ್ರಿ,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....

Ittigecement said...

ಶಿವು ಸರ್...

ಬದುಕಿನ ಸಣ್ಣ ಘಟನೆ, ಸಂದರ್ಭಗಳನ್ನು.. ಅನುಭವಿಸ ಬೇಕು..

ಅದು ಜೀವನ ಕಲೆ...

ಹೆಣ್ಣು ಮಕ್ಕಳಿಗೆ ಇದು ಸಹಜವಾಗಿ ಬಂದಿರುತ್ತದೆ...

ಮಕ್ಕಳಿಗೆ ಇದು ಗೊತ್ತಿರುತ್ತದೆ...

ಅಂದರೆ ಜೀವನದ ಪ್ರತಿ ಕ್ಷಣದಲ್ಲಿ ನಾವು ಎಲ್ಲಿ ಇರುತ್ತೇವೊ ಅಲ್ಲೇ ಇರಬೇಕು...

ಕೆಲಸಕ್ಕೆ ಬಾರದ ಯೋಚನೆ ಗಳಿಂದ ಕಳೆದು ಹೋಗ ಬಾರದು...

ನಿಮ್ಮ ಅನುಭವಗಳಿಂದ ನಮ್ಮನ್ನು ಮುದ ಗೊಳಿಸಿದ್ದಕ್ಕೆ ...

ವಂದನೆಗಳು...

ಅದಕ್ಕೆ ಪೂರಕವಾದ ಫೋಟೊಗಳಿಗೆ..

ಅಭಿನಂದನೆಗಳು...!

shivu.k said...

ಪ್ರಕಾಶ್ ಸರ್,

ನಿಮ್ಮ ಮಾತು ನಿಜ. ಇದು ಹೆಣ್ಣು ಮಕ್ಕಳು ಮಾತ್ರವಲ್ಲ...ಎಲ್ಲರಿಗೂ ಜೊತೆಯಲ್ಲಿ ಬಂದಿರುತ್ತದೆ...ಬಾಲ್ಯದಲ್ಲಿ ಅನುಭವಿಸಿರುತ್ತೇವೆ....ದಿನಕಳೆದಂತೆ ಎಲ್ಲೋ....ಏನನ್ನೋ ಹುಡುಕುವ ಸಲುವಾಗಿ ಇವನೆಲ್ಲಾ ನಿದಾನವಾಗಿ ಮರೆಯಲಾರಂಭಿಸುತ್ತೇವೆ....

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.....

ಕೆ.ಎನ್. ಪರಾಂಜಪೆ said...

ಶಿವೂ ಅವರೇ,
ಚಿಕ್ಕ ಪುಟ್ಟ ಸ೦ತಸದ ಕ್ಷಣಗಳು ಕೊಡುವ ಅನುಭೂತಿ ಅನನ್ಯ.ಆದರೆ ಅದನ್ನು ಅನುಭವಿಸಲು ಬೇಕಾದ ಮನಸ್ಥಿತಿ ಎಲ್ಲರಲ್ಲೂ ಇರುವುದಿಲ್ಲ. ಭಾವಜೀವಿಗಳಿಗೆ ಮಾತ್ರ ಇದು ಸಾಧ್ಯ ಪುಟ್ಟಪುಟ್ಟ ಸಂಗತಿಗಳು, ಅವುಗಳಿಗೆ ಹೊ೦ದಿಕೆ ಯಾಗುವ ಛಾಯಚಿತ್ರಗಳು ಇಷ್ಟವಾದವು. ಇನ್ನಷ್ಟು ಬರೆಯಿರಿ. ಅ೦ದಹಾಗೆ ಇನ್ನೊ೦ದು ಮಾತು. ನನ್ನದು ಒ೦ದು ಬ್ಲಾಗು ಸಿದ್ಧವಾಗುತ್ತಿದೆ. ನುಡಿ ಯಿ೦ದ ಯುನಿ ಕೋಡ್ ಗೆ transliterate ಮಾಡುವುದು
ಹೇಗೆ೦ದು ಸ್ವಲ್ಪ ಹೇಳಿಕೊಡಿ ಗುರು ?

Anonymous said...

ಶಿವು ಸರ್
ನೀವು ಬರಿಯೋ ಲೇಖನ ತುಂಬಾ ಅದ್ಭುತ ವಾಗಿರುತ್ತೆ. ಹಾಗೇ ಛಾಯಾಚಿತ್ರಗಳು ತುಂಬಾ ಚೆನ್ನಾಗಿವೆ.
ಲೇಖನಕ್ಕೆ ಸಂಬಂದಿಸಿದಂಥ ಛಾಯಚಿತ್ರ. ನಾವು ಎಷ್ಟೇ ಬೇಜರಾಗಿದ್ದರು ಕೋಪದಲ್ಲಿದ್ದರು ಇಂತಹ ಪುಟ್ಟ ಪುಟ್ಟ ಖುಷಿಗಳು ಬೇಜಾರನ್ನು ಕೋಪವನ್ನು ಹೊಡೆದು ಓಡಿಸುತ್ತೆ. ಇಂತಹ ಒಂದು ಸಂದರ್ಭನ ನಾನು ಹೇಳ್ತೀನಿ. ಒಂದುದಿನ ನನ್ನ ತಮ್ಮ 3ನೇ ಮಹಡಿಯಿಂದ ಬಿದ್ದು ಆಸ್ಪತ್ರೆ ಸೇರಿದ್ದ. ನನಗೆ ಈ ವಿಷಯನ ಯಾರು ಹೇಳಿರಲಿಲ್ಲ. ಸಂಜೆ ನಾನು ಕೆಲಸ ಮುಗಿಸಿ ಮನೆಗೆ ವಾಪಸ್ಸು ಬರೋವಾಗ ನೆರೆಮನೆಯ ಹುಡುಗ ನನ್ನ ಬಸ್ಸಿಂದನು ಇಳಿಯಲು ಬಿಡದೆ ಆಸ್ಪತ್ರೆಗೆ ಕರೆದು ಕೊಂದು ಹೋದ. ಅಲ್ಲಿ ತಮ್ಮನ ಸ್ಥಿತಿ ನೋಡಿ ಅಳಲು ಶುರುಮಾಡಿದೆ. ಆಗ ಪಕ್ಕದ ಬೆಡ್ ನಲ್ಲಿದ್ದ ಸಣ್ಣ ಪಾಪು (4 ವರ್ಷ ಇರಬೇಕು) ಅಕ್ಕ ಅಣ್ಣನಿಗೆ ಏನು ಆಗಲ್ಲ ಅಂತ ನನ್ನ ಕಣ್ಣು ಒರೆಸಿದ್ದು. ಎಂತಹ ಅನುಭವ ನೋಡಿ ಈಗಲೂ ಆ ಸನ್ನಿವೇಶನ ನೆನಪು ಮಾಡಿಕೊಂಡಾಗ ಆ ಪಾಪುವಿನ ಮುಗ್ಧಮುಖ ಕಣ್ಣ ಮುಂದೆ ಬರುತ್ತೆ.
ಹಾಗೇ ನನ್ನ ಬ್ಲಾಗ್ ನಲ್ಲಿ ನಿಮ್ಮ ಪ್ರತಿಕ್ರಿಯೆ ನೋಡಿದೆ. ಖಂಡಿತ ನಿಮಗೆ ಹೇಗನ್ನಿಸುತ್ತೋ ಹಾಗೇ ಕರೀರಿ ನಾನು ನಿಮ್ಮನ್ನ ಶಿವು ಅಣ್ಣ ಅಂತ ಕರಿಲಾ?

Anonymous said...

ಚಿಟ್ಟೆ ಹಾಗೂ ಪುಟಾಣಿಗಳು ಚೆನ್ನಾಗಿವೆ ಸಾರ್! ಅಂಧಾಗೆ, ನಿಮ್ಮ "ಛಾಯಾಲೋಕ" ಯಾವಾಗ ಷುರು?

ಚಂದ್ರಕಾಂತ ಎಸ್ said...

ಶಿವು ಅವರೆ ನಿಮ್ಮ ಚಿತ್ರಗಳನ್ನು ಹೊಗಳಬೇಕೋ ನಿಮ್ಮ ಬರಹವನ್ನು ಮೆಚ್ಚಬೇಕೋ ತಿಳಿಯುತ್ತಿಲ್ಲ.ನಿಮ್ಮ ಬರವಣಿಗೆ ಸಿನಿಮಾ ಸಾಲುಗಳಿಂದ , ಸಿನಿಮಾದಲ್ಲಿ ಬಳಕೆಯಾದ ಪದಗಳಿಂದ ಪ್ರಾರಂಭವಾಗಿ ಕ್ರಮೇಣ ಅದರ ಹಿಡಿತದಿಂದ ಬಿಡಿಸಿಕೊಂಡು ತನ್ನಷ್ಟಕ್ಕೆ ತಾನೆ ಕವಿತೆಯ ಸತ್ವವುಳ್ಳ ಸಾಲುಗಳಾಗಿ ಮೂಡಿ ಬಂದಿರುವ ರೀತಿ ವಿಶೇಷವಾಗಿದೆ.
ನೀವು ಹೇಳಿರುವ ಮಾತು ಸತ್ಯ. ನಗರದಲ್ಲಿ luxury ಸಿಗಬಹುದೇ ಹೊರತು ಇಂತಹ ಸಂತೋಷವಲ್ಲ. ನನ್ನಲ್ಲಿಯೂ ಇಂತಹ ಪುಟ್ಟಪುಟ್ಟ ಸಂತಸಗಳ ಭಂಡಾರವೇ ಇದೆ. ಈಗಾಗಲೇ ನನ್ನ ‘ನೆನಪು ಸವಿಸವಿ ...’ ಬರವಣಿಗೆಯಲ್ಲಿ ನೋಡಿರುವಿರಿ

ಸುಹಾಸ್ ಬರೆದ Greeting ನೋಡಿ ಅವನ ಕೈಬರಹ ನೋಡಿ ಆಶ್ಚರ್ಯವಾಯಿತು. ಎಂತಹ ಸುಂದರ ಬರವಣಿಗೆ ( ನಾನು ಮೊದಲಿನಿಂದಲೂ ಸುಂದರ ಬರವಣಿಗೆಯ ಪಕ್ಷಪಾತಿ ) ಅವನಿಗೆ ನನ್ನ ಶುಭಾಶಯಗಳನ್ನೂ ಮತ್ತು ಬರವಣಿಗೆಯನ್ನು ಹಾಗೇ ಉಳಿಸಿಕೊಳ್ಳಬೇಕೆಂದೂ ತಿಳಿಸಿ.

ಚಿತ್ರಾ said...

ಶಿವು ,
ತುಂಬಾ ಚೆನ್ನಾಗಿ ಬರೆದಿದೀರಾ.

ನಾವು ದೊಡ್ಡ ದೊಡ್ಡ ಕನಸುಗಳನ್ನು ಕಾಣುವುದರಲ್ಲಿ ಎಷ್ಟು ಮುಳುಗಿ ಹೋಗುತ್ತೇವೆಂದರೆ ,ಅದೆಷ್ಟೋ ಸಲ ಜೀವನದ ಚಿಕ್ಕ ಚಿಕ್ಕ ಖುಷಿಗಳನ್ನು ಸವಿಯಲು ಮರೆತುಬಿಡುತ್ತೇವೆ ಅಲ್ಲವೆ?
ಅಥವಾ ಅವೆಲ್ಲ ತೀರಾ ಸಾಮಾನ್ಯ ಎಂದುಕೊಂಡು ನಿರ್ಲಕ್ಷಿಸುತ್ತೇವೆಯೆ?
ಬಹಳ ಇಷ್ಟವಾಯಿತು ಬರಹ .

shivu.k said...

ಪರಂಜಪೆ ಸರ್,

ನಾನು ಬರೆದ ಈ ಪುಟ್ಟ ಸಂಗತಿಗಳು ಎಲ್ಲರ ಜೀವನದಲ್ಲೂ ನಡೆಯುತ್ತಿರುತ್ತವೆ....ಅದನ್ನು ನಾನಿಲ್ಲಿ ನೆನಪಿಸಿದ್ದೇನೆ ಅಷ್ಟೇ....ಲೇಖನದ ಜೊತೆಗೆ ಛಾಯಾ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಅಂದ ಹಾಗೆ ನೀವು ಬ್ಲಾಗ್ ಮಾಡುತ್ತಿರುವ ವಿಚಾರ ಕೇಳಿ ತುಂಬಾ ಖುಷಿಯಾಯಿತು....ಒಳ್ಳೆಯದಾಗಲಿ...

ನೀವು ನುಡಿಯಲ್ಲಿ ಬರೆಯುವುದಕ್ಕಿಂತ ಬರಹದಲ್ಲಿ ಬರೆಯುವುದು ಸುಲಭ ಮತ್ತು ಬ್ಲಾಗಿಗೆ update ಮಾಡುವುದು ಮತ್ತಷ್ಟು ಸುಲಭ....ಈ ವಿಚಾರದಲ್ಲಿ ನೀವು ಹರೀಶ್‌ರವರನ್ನು ಕೇಳುವುದು ಸರಿಯೆನಿಸುತ್ತದೆ...
http://baala-doni.blogspot.com/

shivu.k said...

ಪ್ರದೀಪ್..,

ಲೇಖನ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಾವೆಲ್ಲರೂ ಬೇರೆ ಕೆಲಸದ ಒತ್ತಡದಲ್ಲಿದ್ದೇವಾದ್ದರಿಂದ ಛಾಯಾ ಲೋಕ ಮುಂದಕ್ಕೆ ಹೋಗಿದೆ...

shivu.k said...

ರೋಹಿಣಿ ಪುಟ್ಟಿ,

ಲೇಖನ ಮತ್ತು ಛಾಯ ಚಿತ್ರಗಳ ಭಾವನೆಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಎಂಥ ನೋವೆ ಇರಲಿ, ಪಕ್ಕದಲ್ಲಿ ಪುಟ್ಟ ಮಕ್ಕಳಿದ್ದರೆ ಸಾಕು ನೋವು ಮರೆಯಾಗಿರುತ್ತದೆ...ನಿಮ್ಮಂತೆ ಎಲ್ಲರ ಅನುಭವಗಳು ನೆನಪಾಗಬೇಕು. ನಮ್ಮೊಂದಿಗೆ ಆ ಖುಷಿಯನ್ನು ಹಂಚಿಕೊಳ್ಳಬೇಕು ಅದು ನನ್ನ ಅನಿಸಿಕೆ....

ಮತ್ತೆ ನೀವು ನನ್ನನ್ನೂ ಪ್ರೀತಿಯಿಂದ ಹೇಗನ್ನಿಸುತ್ತೇ ಹಾಗೆ ಕರೆಯಬಹುದು...[ವಿಂಧ್ಯಾಳಂತೆ ನೀವು ಕೂಡ.]

shivu.k said...

ಚಂದ್ರಕಾಂತ ಮೇಡಮ್,

ನೀವು ನನ್ನ ಬರವಣಿಗೆ ಮತ್ತು ಚಿತ್ರಗಳ ಭಾವನೆಗಳನ್ನು ಗುರುತಿಸಿದ್ದಕ್ಕೆ...ಅನುಭವಿಸಿದ್ದಕ್ಕೆ....ಅದರಿಂದ ನಿಮ್ಮ ಹಳೆಯ ನೆನಪುಗಳು ಗರಿಗೆದರಿದ್ದಕ್ಕೆ ಥ್ಯಾಂಕ್ಸ್...ಅದರಿಂದ ನನಗೂ ಮತ್ತಷ್ಟು ಖುಷಿಯಾಗಿದೆ...

ನಿಮಗಾದ ಅನುಭವಗಳನ್ನು ನಿಮ್ಮ ಬ್ಲಾಗಿನಲ್ಲಿ ಬರೆದು ನಮ್ಮೊಂದಿಗೆ ಹಂಚಿಕೊಳ್ಳಿ...

ಸುಹಾಸನಿಗೆ ನಿಮ್ಮ ಅಮೂಲ್ಯ ಹಿತವಚನ ಮತ್ತು ನಿಮ್ಮ ಅಭಿನಂದನೆಗಳನ್ನು ತಿಳಿಸುತ್ತೇನೆ...

shivu.k said...

ಚಿತ್ರ ಮೇಡಮ್,

ದೊಡ್ಡ ದೊಡ್ಡ ಕನಸುಗಳು ನಮಗೆ ಬೇಕು....ಅವು ಜೀವನದಲ್ಲಿ ಕೆಲವೇ ಮಾತ್ರ.....ಪುಟ್ಟ ಪುಟ್ಟ ಕನಸುಗಳು-ನನಸುಗಳು...ಪ್ರತಿದಿನವೂ ಸಿಗುವಾಗ....ಅದರ ಖುಷಿಯೇ ಬೇರೆ......

ಬರಹ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್....

Archu said...

tumbaa khushiyaayitu nimma chitragaLannu nodi + lekhana odi .

nimage raashtreeya,antara rashtreeya prashastigaLu bandiruva vishaya odi hemme anisitu.

khushi nimma baaLalli prati kshaNa irali.
preetiyinda,
archana

shivu.k said...

ಅರ್ಚನ ಮೇಡಮ್,

ಲೇಖನ ಮತ್ತು ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....

Umesh Balikai said...

ಸರ್, ನನ್ನ ಬ್ಲಾಗಿನಲ್ಲಿ ನಾನೇ ತೆಗೆದ ಕೆಲವು ಫೋಟೋಗಳನ್ನು ಹಾಕಿದ್ದೇನೆ. ಒಮ್ಮೆ ನೋಡಿ ನಿಮ್ಮ ಅನಿಸಿಕೆ ತಿಳಿಸಿ.
http://umeshbalikai.blogspot.com/

shivu.k said...

ಉಮಿ ಸರ್,

ನಾನಾಗಲೇ ನೋಡಿ ಪ್ರತಿಕ್ರಿಯಿಸಿದ್ದೇನೆ...

sunaath said...

ಜಯಂತ-ಅಶ್ವಿನಿ ಇವರ ಜೋಡಿ ಚಿತ್ರ ಹಾಗೂ ಚಿಟ್ಟೆಯ ಚಿತ್ರ
ತುಂಬ ಸುಂದರವಾಗಿವೆ. ಅಭಿನಂದನೆಗಳು

ಭಾರ್ಗವಿ said...

ಪುಟ್ಟ ಪುಟ್ಟ ಸಂತಸದ ಕ್ಷಣಗಳು ಸಂತಸ ತರುವ ನೆನಪುಗಳು. ಫೋಟೋ ಸಹ ಚೆನ್ನಾಗಿವೆ. ಮಕ್ಕಳು ಮಾಡಿದ ಗ್ರೀಟಿಂಗ್ಸ್ ಇಷ್ಟವಾದವು. ಪ್ರಶಸ್ತಿಗಳನ್ನು ಪಡೆದ ನಿಮಗೆ ಅಭಿನಂದನೆಗಳು.

ಅಂತರ್ವಾಣಿ said...

ಶಿವಣ್ಣ,

ಚಿತ್ರಗಳು, ನಿಮಗೆ ಸಂತೋಷಕೊಟ್ಟ ಕ್ಷಣಗಳು ಚೆನ್ನಾಗಿವೆ.

ಪುಟಾಣಿ ಮಕ್ಕಳ ಜೊತೆ ಆಡುತ್ತಾ ನನಗೆ ಸಂತೋಷ ಸಿಗುತ್ತದೆ

shivu.k said...

ಸುನಾಥ್ ಸರ್,

ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಭಾರ್ಗವಿ ಮೇಡಮ್,

ಪುಟ್ಟ ಪುಟ್ಟ ಕ್ಷಣಗಳನ್ನು ಅನುಭವಿಸಿದ್ದಕ್ಕೆ, ಥ್ಯಾಂಕ್ಸ್..

ಮಕ್ಕಳ ಗ್ರೀಟಿಂಗ್ಸ್ ಕಲೆಯನ್ನು ಚಂದ್ರಕಾಂತ ಮೇಡಮ್, ಜೊತೆ ನೀವು ಗುರುತಿಸಿದಿರಲ್ಲ....ನನಗದು ತುಂಬಾ ಖುಷಿಯಾಯಿತು....ಹೀಗೆ ಬರುತ್ತಿರಿ...

Rajesh Manjunath - ರಾಜೇಶ್ ಮಂಜುನಾಥ್ said...

ಶಿವು ಸರ್,
ಇದರ ಬಗ್ಗೆ ಏನು ಬರೆದರು ಕಡಿಮೆ, ಪುಟ್ಟ ಕ್ಷಣಗಳು ಹೊತ್ತು ತರುವ ದೊಡ್ಡ ಸಂತಸಗಳಿವು. ಇವನ್ನು ಗುರುತಿಸಿ, ಅನುಭವಿಸಿ, ಆಹ್ಲಾದಿಸಲು ಮುಗ್ಧತೆ ಬೇಕು. ಲೇಖನ ಚೆನ್ನಾಗಿ ಬಂದಿದೆ, ಜೊತೆಗೆ ಫೋಟೋ ಸಹ.
-ರಾಜೇಶ್ ಮಂಜುನಾಥ್

shivu.k said...

ರಾಜೇಶ್,

ಪುಟ್ಟ ಕ್ಷಣಗಳಲ್ಲಿ ದೊಡ್ಡ ಸಂತಸಗಳನ್ನು ಕಾಣುವ ನಿಮಗೆ ಥ್ಯಾಂಕ್ಸ್...ನಿಮ್ಮ ಲೇಖನಗಳಲ್ಲೂ ನಾನು ಅದನ್ನು ಗುರುತಿಸಿದ್ದೇನೆ....ಫೋಟೊ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

Anonymous said...

ಶಿವು ಅವರೇ,
ನನ್ನವೂ ಒಂದಷ್ಟು: ಯಾವುದೋ ಸಂತೆ/ಜಾತ್ರೆ(exhibition) ಗೆ ಹೋಗಿದ್ದಾಗ ಬಾಲ್ಯದ ಸಹಪಾಠಿಗಳು ಸಿಕ್ಕಿ ಗುರುತಿಸಿ ಮಾತಾಡಿಸೋದು, ರೇಡಿಯೋ ಕೇಳುತ್ತಿರುವಾಗ ಇಷ್ಟವಾಗಿರುವ ತುಂಬಾ ದಿನದಿಂದಾ ಕೇಳದೇ ಇರೋ ಹಾಡು ಪ್ರಸಾರವಾಗೋದು, ಹೀಗೇ ಇನ್ನೂ ಸುಮಾರಿದೆ.
ನೀವು ಬಾವರ್ಚೀ(ಹಿಂದಿ- ರಾಜೇಶ್ ಖನ್ನಾ ಚಿತ್ರ) ನೋಡಿದೀರಾ? ಅದ್ರಲ್ಲಿ ಬರೋ ಒಂದು ಸಂಭಾಶಣೆ ನನಗೆ ತುಂಬಾನೇ ಇಷ್ಟ ಅದ್ರ ಸಾರಾಂಶ ಇಷ್ಟೇ, ನಾವು ದೊಡ್ಡ ಸಂತೋಶ ಸಿಗತ್ತೆ ಅಂತ ಚಿಕ್ಕ ಚಿಕ್ಕ ಸಂತೋಶಾನ ಅನುಭವಿಸೋದೇ ಇಲ್ಲ, ಎಲ್ಲಾ ಚಿಕ್ಕ ಪುಟ್ಟ ಸಂತೋಶ ಅನುಹವಿಸಿದರೆ ಜೀವನ ಎಷ್ಟೊಂದು ಸುಂದರವಾದಿರತ್ತೆ. ನಿಜಾನೇ ಅಲ್ವಾ?

b.saleem said...

ಶಿವು ಸರ್
ಪುಟ್ಟ ಪುಟ್ಟ ಸಂತಸಗಳನ್ನು ಅನುಭವಿಸುವ ಮಾತನ್ನು
ತುಂಬಾ ಅದ್ಭುತವಾಗಿ ನಿರೂಪಿಸಿದ್ದಿರಿ.
ಚಿತ್ರಗಳು ತುಂಬಾ ಚನ್ನಾಗಿವೆ.

shivu.k said...

ಜಯಶಂಕರ್,

ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಮಕ್ಕಳ ಜೊತೆ ಆಡುವ ಅವಕಾಶ ಸಿಕ್ಕಾಗ ನೀವು ಮಕ್ಕಳಾಗಿ enjoy ಮಾಡಿ....

shivu.k said...

ಸಲೀಂ,

ನೀವು ನನ್ನ ಬ್ಲಾಗಿಗೆ ರೆಗ್ಯುಲರ್ ಆಗಿ ಬರುತ್ತಿರುವುದು..ನಿಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿರುವುದು ನನಗೆ ತುಂಬಾ ಖುಷಿಯಾಗುತ್ತದೆ....ಥ್ಯಾಂಕ್ಸ್....

shivu.k said...

ಜ್ಯೋತಿ ಮೇಡಮ್,

ನನ್ನ ಈ ಲೇಖನದಿಂದ ನಿಮ್ಮ ಪುಟ್ಟ ಪುಟ್ಟ ಸಂತೋಷಗಳು ನೆನಪಾದರೆ ನಮ್ಮೊಂದಿಗೆ ಹಂಚಿಕೊಳ್ಳಿ.....

ಮತ್ತೆ ನೀವು ಹೇಳಿದ ಬೆವಾರ್ಚಿ ಸಿನಿಮಾದ ಕನ್ನಡ ಅವತರಣಿಕೆ " ನಂ ೭೩. ಶಾಂತಿ ನಿವಾಸ" ನೋಡಿದ್ದೇನೆ.
ನಾನು ಯಾವಾಗಲೂ ಪ್ರತಿಕ್ಷಣ ಸಿಗುವ ಸಂತೋಷಗಳನ್ನು enjoy ಮಾಡುತ್ತಿರುತ್ತೇನೆ..ಇವುಗಳ ಬಗ್ಗೆ ಬರೆಯುವ ವಿಚಾರ ಬಂದಿದ್ದು...ಈ ಸಿನಿಮಾ ನೋಡಿದ ಮೇಲೆ...
ಅದರಲ್ಲಿ ನೀವು ಸುದೀಪ್ ಹೇಳುವ [ನೀವು ಬರೆದಿರುವ]ಸಂಭಾಷಣೆಯೇ ನನಗೆ ಈ ಲೇಖನ ಬರೆಯಲು ಸ್ಪೂರ್ತಿ....

PARAANJAPE K.N. said...

Shivanna,

ನನ್ನ ಬ್ಲಾಗ್ ಆರ೦ಭವಾಗಿದೆ. ಪ್ರಥಮ ಬ್ಲಾಗ್ ಬರಹ post ಮಾಡಿದ್ದೇನೆ.ದಯವಿಟ್ಟು ಭೇಟಿ ಇತ್ತು ಓದಿ ಅಭಿಪ್ರಾಯಿಸಿದಲ್ಲಿ ನಾನು ಧನ್ಯ

Unknown said...

Amma super phoTo kanri. adestu jana comment ... Abba Hootekihagutte shivu

kush huva

ಸುಧೇಶ್ ಶೆಟ್ಟಿ said...

Nimma jeevana preethi thumba ishtavaayithu shivanna.. naanu haagiralu prayathnisuththene.

shivu.k said...

ಶ್ರೀ ಶಂ ಸರ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....

ಸುಧೇಶ್,

ಜೀವನ್ಮುಖಿ ಪ್ರೀತಿ ನಿಮ್ಮಲ್ಲೂ ಇರುತ್ತದೆ..ಗಮನಿಸಿಕೊಳ್ಳಿ..enjoy ಮಾಡಿ !!

PARAANJAPE K.N. said...

ದಯವಿಟ್ಟು ನನ್ನ ಬ್ಲಾಗಿನ ಕಡೆ ಒಮ್ಮೆ ಕಣ್ಣು
ಹಾಯಿಸುವಿರಾ ??

bhadra said...

ಸೊಗಸಾದ ಚಿತ್ರಗಳಿಗೆ ತಕ್ಕಂತಹ ಲೇಖನ - ಹೇಳಿಮಾಡಿಸಿದಂತಿದೆ :)

shivu.k said...

ಶ್ರೀನಿವಾಸ್ ಸರ್,

ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸಿದ್ದಕ್ಕೆ ಥ್ಯಾಂಕ್ಸ್..

shivu.k said...

ನಾಗೇಶ್ ಹೆಗಡೆ ಸರ್ ಹೇಳಿದರು.,

ನಿಮ್ಮ 'ಪುಟಾಣಿ ಸಂತಸಗಳು' ಚೆನ್ನಾಗಿತ್ತು. ಲೇಖನದ ಜತೆಗೇ ಚಿತ್ರಗಳೂ ಇದ್ದುದರಿಂದ ಸಂತಸಕ್ಕೆ ಬಣ್ಣ, ಸುಗಂಧ, ಸಂಗೀತ, ರುಚಿ, ಮೃದುತ್ವ ಜತೆಗೆ ಆರನೆಯ ಸುಖರೂಪದಲ್ಲಿ ರೆಕ್ಕೆಯೂ ಬಂದಿದೆ. ವಿಶೇಷ ಏನೆಂದರೆ ವಿಂದ್ಯ ಈ ಬಾರಿ ಸರಿಯಾಗಿ 'ವಿಂಧ್ಯ'ರಾಗಿದ್ದಾರೆ. ಈ ದೋಷವನ್ನು ಸರಿಪಡಿಸಿದ್ದಕ್ಕೆ ನೀವು ವಂದ್ಯರಾಗಿದ್ದೀರಿ!
ಟೋಪಿ ಸರಣಿ ಕೂಡ ಚೆನ್ನಾಗಿಯೇ ಇರಬೇಕು. ನನ್ನ ಸ್ಲೋ ಸಿಸ್ಟಮ್ ನಲ್ಲಿ ಇನ್ನೂ ತುಸುತುಸುವಾಗಿ ಟೋಪಿಗಳು ಮೂಡುತ್ತಲೇ ಇವೆ.
ಸಂತಸದ ಬಗ್ಗೆ ಈಚೆಗೆ ನಾನು ಬರೆದ ಅಂಕಣವನ್ನು ಲಗತ್ತಿಸಿದ್ದೇನೆ.
-ನಾಹೆ.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಶಿವೂ,
ಫೋಟೋ, ಬರಹ ಎರಡೂ ಚೆನ್ನಾಗಿದೆ.
ಮುತ್ಮುರ್ಡು ಊರಿನ ಪುಟಾಣಿಗಳ ಚಿತ್ರ ನೋಡಿ - ಅವರ ಬಗ್ಗೆ ಓದಿ ಖುಷಿಯಾಯ್ತು :)

shivu.k said...

ಪೂರ್ಣಿಮಾ ಮೇಡಮ್,

ಪುಟ್ಟ ಸಂತೋಷಗಳನ್ನು ಅನುಭವಿಸಲು ಬಂದಿದ್ದಕ್ಕೆ ಥ್ಯಾಂಕ್ಸ್...

ಮತ್ಮರ್ಡು ಊರು...ಅಲ್ಲಿನ ಕೆಲವು ಸನ್ನಿವೇಶಗಳು...ಪುಟಾಣಿಗಳು...ಬಟಾಣಿಗಳು...ಮತ್ತೆ ಕೆಲವು ಅದ್ಬುತ ಘಟನೆಗಳ ಬಗ್ಗೆ ಮುಂದೆ ಬರೆಯುವುದಿದೆ..ಆಗ ಖಂಡಿತ ಬನ್ನಿ...ಕಾಯುತ್ತಿರುತ್ತೇನೆ...

parasurama kalal said...

ಶಿವು ನಿನ್ನ ’ಪುಟ್ಟ ಪುಟ್ಟ ಪುಟಾಣಿ ಸಂತೋಷಗಳು’ ಚಿತ್ರ ಲೇಖನ ಓದಿ ಖುಷಿಯಾಯಿತು.
ಹಂಪಿಯ ಹಗಲುವೇಷಗಾರರು ’ಹನುಮಾಯಣ’ದ ದೃಶ್ಯ ಗಮನ ಸೆಳೆಯಿತು.
ಆನೆಗೊಂದಿಯಲ್ಲಿ ಇವರನ್ನೆಲ್ಲಾ ಹಿಡಿದು ಕೊಂಡು ಹನುಮಾಯಣ ರೂಪಿಸುವಾಗ ಭಾವೈಕ್ಯತಾ ವೇದಿಕೆಯ ಸಹನಾ, ಸಹರಾ, ನಾಗರಾಜ್ ಕಷ್ಟಪಟ್ಟಿದ್ದು ನೆನಪಿಗೆ ಬಂತು. ಅಲ್ಲಿಯ ಕಿಷ್ಕಿಂದಾ ಟ್ರಸ್ಟ್ ಈ ಕೆಲಸ ವಹಿಸಿಕೊಟ್ಟಿತ್ತು. ಆಗ ನಾನು ಆನೆಗೊಂದಿಗೆ ತೆರಳಿ ಅವರೊಂದಿಗೆ ಇಡೀ ದಿನ ಕಳೆದು ಅವರ ರಂಗ ಪ್ರಸಂಗಗಳನ್ನು ನೋಡಿದ ಮೇಲೆಯೇ ಅವರಿಗಾಗಿ ’ಹನುಮಾಯಣ’ ಸ್ಕ್ರಿಪ್ಟ್ ಸಿದ್ಧ ಮಾಡಿಕೊಟ್ಟಿದ್ದೆ. ಅದನ್ನು ಅದಷ್ಟು ರಂಗರೂಪಕ್ಕೆ ತರಲು ಸಹನಾ ಅಂತೂ ತುಂಬಾ ಹೆಣಗಾಡಿದ್ದಳು. ಕೊನೆಗೂ ಅದು ಪ್ರದರ್ಶನಕ್ಕೆ ಬಂದಾಗ ಅವರ ಕೈಯಲ್ಲಿ ತನ್ನ ಹಳೇಯ ಪಾರ್‍ಮೆಟ್‌ಗೆ ಹೋಗಿ ನಿಂತು ಬಿಟ್ಟಿತು. ಈ ಚಿತ್ರವನ್ನು ನೋಡಿದಾಗ ಇದೆಲ್ಲಾ ನೆನಪಾಯಿತು.
ಪುಟ್ಟ ಪುಟಾಣಿ ಸಂತೋಷವನ್ನು ನನಗಂತೂ ನೀಡಿತು.
- ಪರುಶುರಾಮ ಕಲಾಲ್