Wednesday, February 18, 2009

ಕೊನೇದು ಹೆಲಿಕಾಪ್ಟರು...ತವರುಮನೆ ಕಡೀಕೆ ತಿರಿಕತ್ತು.......


ನಾನು ಈ ಬಾರಿ ಏರ್ ಷೋಗೆ ಹೊರಗಿನ ವಾತವರಣದಲ್ಲಿ ಹೇಗಿರುತ್ತದೆ ಅಂತ ನೋಡಲು ಹೋಗಿದ್ದೆ......ಹೊರಗೂ ಕೂಡ ಸಿಕ್ಕಾಪಟ್ಟೆ ಜನ. ಮರಗಳ ಮೇಲೇರಿರುವವರು, ದೊಡ್ಡ ದೊಡ್ಡ ಜಾಹೀರಾತು ಪಲಕಗಳ ತುದಿಯಲ್ಲಿ, ಕೆಲವರು ಅಲ್ಲೇ ಕೆರೆಯ ದಂಡೆಯ ಮೇಲೆ ನಿಂತಿದ್ದರು. ಬಹುಶಃ ಇವರೆಲ್ಲಾ ಸುತ್ತಮುತ್ತಲ ಹಳ್ಳಿಜನರಿರಬಹುದು....ನಾನು ಇವರ ಮದ್ಯ ನನ್ನ ಕ್ಯಾಮೆರಾ ಹಿಡಿದು ನಿಂತಾಗ ಬಿಸಿಲು ನೆತ್ತಿ ಸುಡುತ್ತಿತ್ತು....

ಏರ್ ಷೋ ಜಾಹಿರಾತು ಪಲಕದ ಮೇಲೆ, ಹಿಂಬಾಗ ಕುಳಿತ ಜನ.
ಇಲ್ಲೋಬ್ಬ ಕುಳಿತಿರುವ ಪರಿ ನೋಡಿದರೆ ವಿಮಾನಗಳಿಗೆ ಸವಾಲೆಸೆಯುವಂತಿದೆಯಲ್ಲ !!
ಜನಮರುಳೋ....ಏರ್ ಷೋ ಮರುಳೋ....
ವಿಮಾನಗಳ ಹಾರಾಟಗಳ ಮದ್ಯ ಈ ಮಕ್ಕಳ ಐಸ್ ಕ್ರೀಂ ಚಪ್ಪರಿಕೆ!!
ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು.. ಈತನಿಗೆ ಹಸುರೆಲೆಗಳೇ ಟೋಪಿ !!
ನನಗೂ ಫೋಟೊ ತೆಗೆಯುವ ಕೆಲಸವಾಗಬೇಕಿದ್ದರಿಂದ...ಅವರ ಜೊತೆ ಸೇರಿಕೊಂಡು ನಿದಾನವಾಗಿ ಫೋಟೊ ತೆಗೆಯುತ್ತಿದ್ದರು....ಕಿವಿಗಳು ಮಾತ್ರ ತೆರೆದುಕೊಂಡಿದ್ದವು......ಆಗ ಕೇಳಿ ಬಂದ ಕೆಲವು ಮಾತುಗಳನ್ನು ಹಾಗೆ ನಿಮಗಿಲ್ಲಿ ಹೇಳುತ್ತಿದ್ದೇನೆ.....


"ಲೇ ಮಗಾ ಇದೇನ್ಲಾ ಒಂದು ಮೇಲಕ್ಕೆ ಹೋಗಲಿಲ್ಲ...."


"ಅಯ್ಯೋ ಇರಣ್ಣ, ಮೇಲಿರದು ಕೆಳಕ್ಕಿಳಿದ್ರೆ ಇನ್ನೊಂದು ಮೇಲಕ್ಕೆ ಹಾರೋದು......"


ಇಬ್ಬರು ಹೆಂಗಸರು ಇವರ ಜೊತೆ ಮಾತಿಗೆ ಸೇರಿಕೊಂಡರು...


"ಅಲ್ಲ ಕಣಣ, ಈ ಇಮಾನಗಳೆಲ್ಲಾ ನಮ್ಮನೆ ಹತ್ರನೇ ಬತ್ತವಲ್ಲ.....ಇಲ್ಲೇನು ನೋಡೋದು ಇಶೇಷ....? "


"ನಿಂಗೊತ್ತಿಲ್ಲ ಕಣ್ ಸಿಮ್ಕಿರಮ್ಮಿ, ಇಲ್ಲಿ ಈ ವಿಮಾನಗಳೆಲ್ಲಾ ಸರ್ಕಸ್‌ನಲ್ಲಿ ಲಾಗ ಹಾಕಿದಂತೆ ಪಲ್ಟಿ ಹೊಡೀತವಂತೆ.... ಅ ಪಲ್ಟಿ ನೋಡಾಕೆ ಈ ಪಾಟಿ ಜನ ಬಂದವ್ರೇ.... ಮತ್ತೆ ದುಡ್ಡಿರೋರು.....೫೦೦ ಸಾವಿರ ಅಂತ ಟಿಕಿಟ್ಟು, ಪಾಸ್, ತೊಗೊಂಡು ನೋಡೋಕೆ ಕಾರಲ್ಲಿ ಮೋಟರ ಬೈಕಲ್ಲಿ ಒಳಕ್ಕೆ ಹೋಗವರೆ ಗೊತ್ತಾ ?"


"ಹೇ ನಿನೊಂದು.....ಆಕಾಶದಲ್ಲಿ ಹಾರೋದು ನೋಡಾಕೆ ದುಡ್ಡು ಯಾಕೆ ಕೊಡಬೇಕು....ಅವಕ್ಕೆ ಬುದ್ದಿಯಿಲ್ಲ....ಇಲ್ಲಿಂದಾನೆ ವೈನಾಗಿ ಕಾಣ್ತವೇ.....".


"ಹೌದ್ ಕಣಕ್ಕ, ಒಳಿಗಿಂತ ಇಲ್ಲೇ ಪಲ್ಟಿ.....ಲಾಗಾಟಿ......ಚೆನ್ನಾಗಿ ಕಾಣ್ತವೆ.....ಜೊತೆಗಾತಿ ಮಾತು..."


ಆಷ್ಟರಲ್ಲಿ ಸುಖೋಯ್ ೩೫ ಯುದ್ಧವಿಮಾನ ಮೇಲೇರಿತು...ಇವರು ಸುಮ್ಮನಾದದ್ದು ಕಂಡು......" ಈ ವಿಮಾನ ಒಂದು ಸಲ ಮೇಲೇರಿ ಈ ರೀತಿ ಪ್ರದರ್ಶನ ಮಾಡಬೇಕು ಅಂದರೆ ಅದಕ್ಕೆ ಒಂದುವರೆ ಲಕ್ಷ ರೂಪಾಯಿಯಷ್ಟು ಪೇಟ್ರೋಲ್, ಇನ್ನಿತರ ಖರ್ಚು ಬರುತ್ತೆ...ನೋಡಿ....." ಮಾತಿನ ಕಿಡಿ ಅಂಟಿಸಿದೆ....


"ಹೌದಾ ಸರ, ಆಷ್ಟೊಂದು ರೊಕ್ಕ ಆಯ್ತದ........."


"ಹೂ ಕಣ್ಲ, ಅದಕ್ಕೆ ಹಾಕಾದು ಪ್ಯೂರ್ ಪೆಟ್ರೋಲ್ ಹಾಕದು.....ನಿನ್ನಂಗೆ ಆಟೋಗೆ ಸೀಮೀಣ್ಣಿ ಮಿಕ್ಸ್ ಮಾಡಿ ಓಡಿಸ್ತೀಯಲ್ಲ...ಅಂಗಲ್ಲ...".


"ಹೇ ಸುಮ್ಕಿರಣ್ಣೋ ಇಲ್ಲೆಲ್ಲಾ ಮಾನ ಮರ್ವಾದಿ ತೆಗೆಬೇಡ...."


ಮಾತಿನ ಮದ್ಯವೇ ಐಸ್ ಕ್ರೀಮ್, ಚುರುಮುರಿ,, ಇತ್ಯಾದಿಗಳ ವ್ಯಾಪಾರ ನಡೆದಿತು....ಮೇಲೆ ಮಿರಾಜ್ ೨೯, ಸಣ್ಣ ಸಣ್ಣ ವಿಮಾನಗಳು, ನಮ್ಮದೇ ದೇಶದ ತೇಜಸ್ ಯುದ್ದವಿಮಾನ, ಅಮೇರಿಕಾದ ಎಫ್ ೧೮, ಸ್ವೀಡನ್ನಿನ ವಿಮಾನಗಳು ಒಂದು ಸುತ್ತು ಪ್ರದರ್ಶನ ಮಾಡಿದವು.....


ಕೊನೆಯಲ್ಲಿ ಆರು ಸೂರ್ಯಕಿರಣ ವಿಮಾನಗಳು ಒಂದೊಂದಾಗಿ ಮೇಲೇರಿ...ಒಟ್ಟಾಗಿ ಸೇರಿ ತಮ್ಮ ಪ್ರದರ್ಶನ ಪ್ರಾರಂಬಿಸಿದವು.....


"ಈ ಆರು ವಿಮಾನಗಳು ಅವುಗಳ ಅಂಡಿಂದ ಹೊಗೆ ಬಿಡೋದು ನೋಡಿದ್ರೆ..".......ನಾಚಿಕೆ ಪಟ್ಟುಕೊಂಡಳು...


"ನೋಡಿದ್ರೆ ಏನು ನೋಡು ಎಷ್ಟು ವೈನಾಗಿ ಬಿಡ್ತಿವೆ...."


"ಅಲ್ಲ ಕಣಕ್ಕ, ಈ ಹೊಗೆ ನೋಡಿ..ನಮ್ಮ ಮಾವ ಅವಾಗವಾಗ ಅಂಡೆತ್ತಿ ಹೂಸು ಬಿಡೋದು ಗ್ಯಾಪಕ ಬಂತು..." ಇಬ್ಬರು ಮಾತು ಕೇಳಿ ಎಲ್ಲರೂ ಗೊಳ್ಳನೆ ನಕ್ಕರು.....


"ಅಲ್ನೋಡಣ್ಣ ಬಣ್ಣ ಬಣ್ಣದ್ ಹೊಗೆ !""ಹೂ ಕಣಮ್ಮಿ ಅವು ಕೆಂಪು ಬಿಳಿ ಹಸಿರು...ಬಣ್ಣದ್ದು. ನಮ್ಮ ದೇಶದ ಬಾವುಟ ಕಲರ್......".


ಇವರ ಮಾತು ಮುಗಿಯುವಷ್ಟರಲ್ಲಿ ಸೂರ್ಯಕಿರಣಗಳು ಲ್ಯಾಂಡ್ ಆಗಿ ನವಿಲು ಗರಿಯ ಕಣ್ಣಿನಂತೆ ಬಣ್ಣ ಹೊಂದಿದ ನಾಲ್ಕು ಹೆಲಿಕಾಪ್ಟರುಗಳು ಮೇಲೇರಿದವು.....


"ಇವೆಂತವಣ್ಣಾ ಇಂಗವೆ? ....".


"ಇವನ್ನು ಹೆಲಿಕಾಪ್ಟರು ಅಂತಾರೆ, ಇಮಾನಗಳಿಗಿಂತ ಸ್ಲೋ ಕಣಮ್ಮಿ,"


"ಹೌದ್ ಕಣಣ, ಆ ಒಂದುವರೆ ಲಕ್ಷ ರೊಕ್ಕ ನುಂಗುತ್ತಾ ಅದು ಕಣ್‌ಬಿಟ್ ಕಣ್ ತೆರೆಯೋದ್ರಲ್ಲಿ ಮಾಯಾವಾಗಿ ಬಿಡುತ್ತಲ್ಲಣ, ಇದೇ ಪರ್ವಾಗಿಲ್ಲ...ನಮ್ಮ ಹಳ್ಳಿ ಐಕಳ ಹಾಗೆ ಸುಲೋ..... "


"ಹೂ ಕಣಕ್ಕ ನೀನೇಳೋದು ದಿಟವೇ.....".


ಮೇಲೆ ಒಟ್ಟಿಗೆ ಹಾರಾಡುತ್ತಿದ್ದ ನಾಲ್ಕರಲ್ಲಿ ಒಂದು ಹೆಲಿಕಾಪ್ಟರ್ ಬೇರೆ ದಿಕ್ಕಿಗೆ ತಿರುಗಿತು....


"ಇದೇನಕ್ಕಾ ಅದೊಂದು ಅತ್ಲಾಗೊಯ್ತು...?"


"ಅಯ್ಯೋ ಸುಮ್ಕಿರಮ್ಮಿ, ನಿನ್ನ ತರ ಆ ಹೆಲಿಕಾಪ್ಟ್ರು ತವರು ಮನೆಕಡೀಗೆ ಹೋಗಿರಬೇಕು..."


ಕಳೆದ ಬಾರಿ ಒಂದು ದೊಡ್ಡ ಸಂಸ್ಥೆಗಾಗಿ ಅಲ್ಲಿಗೆ ಹೋಗಿದ್ದಾಗ ಕೆಲವೊಂದು ಅಪರೂಪದ ಫೋಟೊ ತೆಗೆಯುವ ಅವಕಾಶ ದೊರಕಿತ್ತು. ರನ್‌ವೇ ಹತ್ತಿರವೇ ಕುಳಿತು...ನಿಂತೂ.....ಎಲ್ಲಾ ಹೆಲಿಕಾಪ್ಟರ್, ವಿಮಾನಗಳ ಟೇಕಾಫ್......ಲ್ಯಾಂಡಿಂಗ್.....ಮತ್ತು ಎಲ್ಲಾ ವಿಮಾನಗಳನ್ನು ಹತ್ತಿರದಿಂದ ನೋಡುವ ಮುಟ್ಟುವ ಅವಕಾಶ ದೊರಕಿತ್ತು. ಸುಕೋಯ್ ೩೦ ವಿಮಾನದ ಏಣಿಯ ಮೇಲೆ ನಾನು ನಿಂತು ಅದೇ ಪೈಲಟ್ ಕೈಯಿಂದ ನನ್ನ ಫೋಟೊ ತೆಗೆಸಿಕೊಂಡಿದ್ದು ಒಂದು ವಿಶಿಷ್ಟ ಅನುಭವ.


ಆದ್ರೂ ಕೂಡ...ಒಳಗಿನ ಅದ್ದೂರಿ ವಾತಾವರಣ, ಅಲ್ಲಿ ಓಡಾಡುವ ವಿ.ಐ.ಪಿಗಳು ಅವರ ಮಾತು ಕತೆಗಳು ನಡುವಳಿಕೆಗಳಿಗಿಂತ ಹೊರಗಿನ ಹಳ್ಳಿಜನರ ಕುತೂಹಲ, ಮುಗ್ಧತೆ, ಮಾತುಗಳು ನನಗೆ ಅಚ್ಚುಮೆಚ್ಚಾಗಿತ್ತು.


ರಷ್ಯಾ ನಿರ್ಮಿತ ಸುಖೋಯ್ ೩೫ ಹೊಸ ಬಣ್ಣದಲ್ಲಿ...!!ನಮ್ಮ ಹೆಮ್ಮೆಯ ಯುದ್ದವಿಮಾನ ತೇಜಸ್....೨೦೧೧ರಲ್ಲಿ ನಮ್ಮ ಸೈನ್ಯಕ್ಕೆ ಸೇರುತ್ತದೆ.....


ಮೀರಜ್ ೨೯ ಯುದ್ದವಿಮಾನಗಳು ಈಗ ತಾನೆ ಟೇಕಾಫ್ ಆಗುತ್ತಿವೆ.....ಅದೋ ನೋಡಿ ನಮ್ಮ ಸೂರ್ಯ ಕಿರಣಗಳು ಟೇಕಾಫ್ ಆಗುತ್ತಿವೆ...!!!


ಅವುಗಳ ಅದ್ಬುತ ಪ್ರದರ್ಶನ ಶುರುವಾಯಿತಲ್ಲ...!ನೀಲಾಕಾಶದಲ್ಲಿ ನಮ್ಮ ತ್ರಿವರ್ಣ ಬಣ್ಣಗಳು...!
ಇದು ನಿಜಕ್ಕೂ ಅದ್ಬುತ ಪಲ್ಟಿ........ಲಾಗಾಟಿಯೇ ಸರಿ...!!ನಿಶ್ಯಬ್ದವಾದ ಶಾಂತವಾದ ಪಯಣ...!!ಬಂದವಲ್ಲ ನವಿಲುಗರಿಯ ಬಣ್ಣ ಹೊಂದಿದ ಹೆಲಿಕಾಫ್ಟರುಗಳು!!


ವಿಮಾನಗಳ ಹಾರಾಟ ನೋಡಲು ಅಣ್ಣ ತಂಗಿಗೆ ಕುತೂಹಲ ಹೆಚ್ಚು!!ಆಗೋಳಮ್ಮಿ ಹೊಡೀತು ನೋಡು ಒಂದು ಪಲ್ಟಿ.....!!
ಪ್ಯಾರಚ್ಯೂಟಿನಿಂದ ಕೆಳಗಿಳಿಯುತ್ತಿರುವ ನಮ್ಮ ಸೈನಿಕ...!!ಸುಖೋಯ್ ೩೦ ಯುದ್ದ ವಿಮಾನ ಏರುವ ಏಣಿಯಲ್ಲಿ ನಾನು

ಚಿತ್ರ ಮತ್ತು ಲೇಖನ
ಶಿವು.

75 comments:

ಏ ಜೆ ಜಾವೀದ್ said...

Shivu,

Superb!!!!!!!!!!!!!

Ittigecement said...

ಶಿವು ಸರ್...
ಹೊಟ್ಟೆಕಿಚ್ಚು ತರಸ್ತೀರಲ್ಲ...ಸಾರ್...

ನೀವು ಕರೆದು ಕೂಡ್ಲೆ ಬಂದುಬಿಡಬೇಕಿತ್ತು..

ಮಿಸ್ ಮಾಡ್ಖೊಬಿಟ್ನಲ್ರ್‍ಇ..

ಎಷ್ಟು ಚಂದವಾಗಿ ಹಳ್ಳಿಗರ ಮುಗ್ಧತನ ಬಣ್ಣಿಸಿದ್ದೀರಿ..?

ವಾವ್...!

ಓದಿ ತುಂಬಾ ಖುಷಿಯಾಯ್ತು..

ಫೋಟೊಗಳಂತೂ ಸೂಪರ್...!

ಚಂದವಾದ ಬರಹಕ್ಕೆ

ಸುಂದರವಾದ ಫೋಟೊಗಳಿಗೆ..

ನಮಗೆ ಸಂತೋಷ ತಂದಿದ್ದಕ್ಕೆ..

ವಂದನೆಗಳು..

ಅಭಿವಂದನೆಗಳು...

Ittigecement said...

ಶಿವು...

ನಿಮ್ಮ ಹೊಸ ಮನೆ..

ನಿಮ್ಮೆಲ್ಲ ಕನಸುಗಳನ್ನು,

ಆಸೆಗಳನ್ನು ..

ಈಡೆರಿಸಲೆಂದು ಹಾರೈಸುವೆ..

shivu.k said...

ಜಾವೀದ್, ಥ್ಯಾಂಕ್ಸ್...

shivu.k said...

ಪ್ರಕಾಶ್ ಸರ್,

ಚಿಂತಿಸಬೇಡಿ ಮುಂದಿನ ಬಾರಿ...ರನ್ ವೇ ಎದುರೇ ಇಬ್ಬರೂ ಒಟ್ಟಿಗೆ ನಿಂತೂ ಫೋಟೊ ತೆಗೆಯೋಣ....

shivu.k said...
This comment has been removed by the author.
shivu.k said...

ಪ್ರಕಾಶ್ ಸರ್,

ನನ್ನ ಹಳೇ ಮನೆ ಅದರ ಟೆರಸ್ಸು...ಅದರ ಮೇಲೆ ನನ್ನ ಆಟ್ಯಾಚ್ ಮೆಂಟು...ಕಂಡ ದೃಶ್ಯಗಳು. ಅದರೆಡೆಗಿನ ಒಂದು "ಕೃತಜ್ಞತೆ"....ಅನುಭವಿಸಿದ ಅನಂದಗಳು...ಮತ್ತೆ ಹೊಸ ಮನೆಯ ವಾತಾವರಣ ಅದರ ಬಗೆಗಿನ " ಕನಸು" ಇದೆಲ್ಲಾ ಸೇರಿ ಒಂದು ಲೇಖನ ಬರೆಯುತ್ತಿದ್ದೇನೆ...ಮುಂದಿನ ಬಾರಿ ಬ್ಲಾಗಿಗೆ...

ಸಾಗರದಾಚೆಯ ಇಂಚರ said...

super shivu avare,

ಅನಿಲ್ ರಮೇಶ್ said...

ಶಿವು,
ಈ ಸಲ ಶಬರಿಮಲೆಗೆ ಹೋದ ಕಾರಣ ಏರ್-ಶೋ ಹ್ಯಾಟ್ರಿಕ್ ನನಗೆ Miss ಆಯ್ತು. ಹ್ಯಾಟ್ರಿಕ್ ತಪ್ಪಿತಲ್ಲ ಅಂತ ಬೇಸರವಾಗಿತ್ತು.

ನಿಮ್ಮ ಫೋಟೋಗಳು ಹಾಗೂ ಬರಹ ಓದಿ ಸಮಾಧಾನ ಆಯ್ತು.

ಫೋಟೊಗಳಂತೂ ತುಂಬಾ ಚೆನ್ನಾಗಿದೆ. ಬರಹ ಕೂಡ.

ಹೀಗೇ ಬರೆಯುತ್ತಿರಿ.

-ಅನಿಲ್.

Anonymous said...

ಶಿವು ಅವರೇ,
ಸೂಪರ್ ಫೋಟೋಗಳು :-)
ನಾನೂ ನೋಡಲಿಕ್ಕಾಗಲಿಲ್ಲ ಅಂತ ಬೇಜಾರು ಮಾಡಿಕೊಂಡಿದ್ದೆ, ಫೋಟೋ ನೋಡಿದಾಗ ನೈಜವಾಗಿ ಅಲ್ಲಿ ನೋಡಿದಷ್ಟೇ ಖುಷಿಯಾಯಿತು.
ಇಷ್ಟು ಒಳ್ಳೆಯ ಫೊಟೋಗಳನ್ನು ಹಾಕಿದ್ದಕ್ಕೆ ಧನ್ಯವಾದಗಳು.

Shankar Prasad ಶಂಕರ ಪ್ರಸಾದ said...

ಸಾರ್,
ನಮ್ಮ ಕಂಪೆನಿಯವರೂ ಈ ಸಲ ಸ್ಟಾಲ್ ಇಟ್ಟಿದ್ರು.
ಜೊತೆಗೆ ನನಗೆ VVIP ಪಾಸ್ ಸಿಕ್ಕಿರೋದು ಭಾರತದಲ್ಲೇ ಇದ್ದಿದ್ರೆ.
ಕಳೆದ ಬಾರಿ ಕೂಡಾ ಹೀಗೆ ಹೋಗಿದ್ವಿ. ಬಹಳಾ ಹೊಟ್ಟೆ ಉರೀತ ಇದೆ ನಂಗೆ. 2008ರ ಆಗಸ್ಟ್ ತಿಂಗಳಲ್ಲಿ ಬರ್ಲಿನ್ ನಗರದಲ್ಲಿ ಏರ್ ಶೋ ಇತ್ತು, ಅವಾಗ ನಾನು ಭಾರತದಲ್ಲಿ ಇದ್ದೆ. ಈಗ ಏರೋ ಇಂಡಿಯಾ ನಡೆದಿದೆ, ನಾನು ಈಗ ಜರ್ಮನಿಯಲ್ಲಿ ಇದೀನಿ. ಬಹಳಾ ಉರೀತಾ ಇದೆ ಕಣ್ರೀ.
ಅದೆಲ್ಲಾ ಸರಿ, ನಿಮ್ಮ ಬರವಣಿಗೆ ಈ ಲೇಖನದಲ್ಲಿ ಮಸ್ತಗಿ ಬಂದಿದೆ. "ನಮ್ಮಾವ ಅಂಡೆತ್ತಿ ಹೂಸು ಬಿಡೋ ಹಾಗೈತೆ" ಸಖತ್ ನಗು ಕೊಡ್ತು.
ಫೋಟೋಗಳು ಸಖತ್ತಾಗಿ ಬಂದಿವೆ. ಯಾವ ಕ್ಯಾಮೆರ ನೀವು ಉಪಯೋಗಿಸಿರೋದು ?

ಕಟ್ಟೆ ಶಂಕ್ರ

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ವಿಮಾನಗಳ ಫೋಟೋಗಳು ಸೂಪರ್ರಾಗಿದೆ. ಆದರೂ ನನಗೆ ಆ ನೋಡುತ್ತಿರುವ ಜನರ ಫೋಟೋಗಳೇ ಖುಷಿ ಕೊಟ್ಟಿತು. ಇನ್ನಷ್ಟು ಹಾಕಬೇಕಿತ್ತು. ಅವರ ಮಾತುಗಳನ್ನು ನೀವು ಹಾಗೇ ಬರೆದಿರುವುದು ತುಂಬಾ ಚೆನ್ನಾಗಿದೆ.ಒಟ್ಟಾರೆ ಫೆಂಟಾಸ್ಟಿಕ್.

shivu.k said...

ಸಾಗರದಾಚೆಯ ಇಂಚರ,

ನನ್ನ ಬ್ಲಾಗಿಗೆ ಸ್ವಾಗತ....ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿರುವುದು ಖುಷಿಯಾಯಿತು.....ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ....

ಅಂದಹಾಗೆ ನಿಮ್ಮ ಹೆಸರು ?

shivu.k said...

ಅನಿಲ್ ರಮೇಶ್,

ಏರ್‍ ಷೋ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಮುಂದಿನ ಬಾರಿ ನಾವೆಲ್ಲಾ ಒಟ್ಟಿಗೆ ಸೇರಿ ಏರ್ ಷೋ ಫೋಟೋ ತೆಗೆಯಲು ಹೋಗೋಣ ಏನಂತೀರಿ....

shivu.k said...
This comment has been removed by the author.
shivu.k said...

ಜ್ಯೋತಿ ಮೇಡಮ್,

ಏರ್ ಷೋಗೆ ಹೋಗಲಿಲ್ಲ ಅಂತ ಚಿಂತಿಸಬೇಡಿ....ನಾನಿರುವುದೇ ನಿಮಗೆ ಇಂಥ ಪೋಟೋ ತೆಗೆದು ತೋರಿಸಲು....ಇನ್ನಷ್ಟು ಫೋಟೊಗಳಿವೆ...ಮತ್ತೆಂದಾದರೂ ಹಾಕುತ್ತೇನೆ....ಹೀಗೆ ಬರುತ್ತಿರಿ..ಥ್ಯಾಂಕ್ಸ್....

shivu.k said...

ಶಂಕರ್ ಸರ್,

ಏರೋ ಷೋ ಫೋಟೊ ನೋಡಲಿಕ್ಕೆ ಬಂದಿದ್ದಕ್ಕೆ ಥ್ಯಾಂಕ್ಸ್...ನಿಮ್ಮ VIP ಪಾಸ್ ನನಗೆ ಕೊಟ್ಟಿದ್ದರೆ ಮತ್ತಷ್ಟು ವೈವಿದ್ಯಮಯ ತೆಗೆಯಲು ಸಾಧ್ಯವಿತ್ತೇನೋ...
ಇರಲಿ.....ಮತ್ತೆ ಹಳ್ಳಿ ಜನರ ಮಾತುಗಳು ಇನ್ನೂ ಇತ್ತು..ನಾನು ಸ್ವಲ್ಪ ಕತ್ತರಿಸಿ ಹಾಕಿದ್ದೇನೆ...
ನನ್ನ ಕ್ಯಾಮೆರಾ canon 30D. lens 100-400 IS USM canan. [ಇವೆರಡು ಪಕ್ಕಾ ವೃತ್ತಿಪರ ಕ್ಯಾಮೆರಾ ಮತ್ತು ಲೆನ್ಸ್ಗ್‌ಗಳು]

shivu.k said...

ಮಲ್ಲಿಕಾರ್ಜುನ್,

ವಿಮಾನಗಳ ಫೋಟೊ ಮತ್ತು ಜನರ ಫೋಟೊಗಳು ತುಂಬಾ ಇದ್ದವು. ಬ್ಲಾಗಿನಲ್ಲಿ ಹೆಚ್ಚು ಬೇಡವೆಂದು ನಾನೆ ಕಡಿಮೆ ಹಾಕಿದೆ...ನೋಡೋಣ ಮುಂದಿನ ಬಾರಿ ಮತ್ತಷ್ಟು ಹಾಕಲು ಸಾಧ್ಯವೇ ಅಂತ....ಥ್ಯಾಂಕ್ಸ್.....

PARAANJAPE K.N. said...

ಶಿವಣ್ಣ
ಛಾಯಾಚಿತ್ರಗಳು ತು೦ಬಾನೇ ಚೆನ್ನಾಗಿವೆ. ನನಗೂ ಮಕ್ಕಳನ್ನು ಕರಕೊ೦ಡು ಹೋಗಬೇಕೆ೦ಬ ಅಪೇಕ್ಷೆ ಇತ್ತು. ಆದರೆ ಆಗಲಿಲ್ಲಾ. ನಿಮ್ಮ ಬ್ಲಾಗ್ ನೋಡಿದ ಮೇಲೆ ಹೋಗದೆ ಇದ್ದುದಕ್ಕೆ ನನಗೆ ನಾನೇ ಶಪಿಸಿಕೊ೦ಡೆ. ಮು೦ದಿನ ಬಾರಿ ಖ೦ಡಿತ ತಪ್ಪಿಸಿಕೊಳ್ಳಲ್ಲ. ಅ೦ದ ಹಾಗೆ ನಿಮ್ಮ ದೇಸಿ ಸೊಗಡಿನ ಲೇಖನ, ಹಳ್ಳಿಯ ಭಾಷೆ, ಅವರ ಕಲ್ಪನೆ ತು೦ಬಾನೇ ಚೆನ್ನಾಗಿ ಮೂಡಿ ಬ೦ದಿದೆ. Very Good.

Anonymous said...

ಚಿತ್ರಗಳು ಚೆನ್ನಾಗಿವೆ ಸಾರ್! :-)

Pramod said...

ಫೋಟೊಗ್ರಾಫಿ ಚೆನ್ನಾಗಿದೆ.. ನಿಮಗೆ ಫ್ಲಿಕ್ಕರ್ ಗೆ ಅಪ್-ಲೋಡ್ ಮಾಡ್ಬೋದಲ್ಲ ಸರ್..?

ಚಿತ್ರಾ ಸಂತೋಷ್ said...

ಶಿವಣ್ಣ..
ಇಮಾನ, ಆ ರೊಕ್ಕ, ಗ್ಯಾಪಕ, ಐಕಳ ಹಾಗೇ, ವೈನಾಗಿ ಕಾಣುವುದು.....ಹಳ್ಳಿ ಜನರ ಮುಗ್ಧತೆ, ಅದರಲ್ಲಿರುವ ಆಪ್ತತೆ, ಪ್ರಾಮಾಣಿಕತೆ...ಕಂಡಾಗ ನಿಜಕ್ಕೂ ಮನಸ್ಸು ಖುಷಿಗೊಳ್ಳುತ್ತೆ ಗೊತ್ತಾ? ಟಿಕೇಟ್ ಖರೀದಿಸಿ ನೋಡೋರಿಗಿಂತ, ಟಿಕೇಟ್ ಖರೀದಿಸದೆ..ರಸ್ತೆ ಬದಿಯಲ್ಲಿ, ಮರದ ಮೇಲೆ, ಜಾಹೀರಾತು ಹಲಗೆ ಮೇಲೆ 'ಇಮಾನ ಹಾರಾಟ' ವೀಕ್ಷಿಸಿದ ಇವರ ಖುಷಿಗೆ ಎಲ್ಲೆಯುಂಟೇ? ಚಿಕ್ಕದರಲ್ಲಿ 'ದೊಡ್ಡ' ಖುಷಿ ಕಾಣುವ 'ಹಳ್ಳಿಬದುಕಿಗೆ' ಸರಿಸಾಟಿ ಏನುಂಟು?
ಅಣ್ಣ..ನಾನೂ ಬೆಂಗಳೂರಿಗೆ ಬಂದ ಮೊದ ಮೊದಲು ಹಾಗೇ ಪಕ್ಕಾ ಹಳ್ಳಿ ಹುಡುಗಿ ಥರ ಮಾತಾಡುತ್ತಿದೆ. ಎಲ್ಲರೂ ನಂಗೆ ಬೈಯುತ್ತಿದ್ರು. ಹಳ್ಳಿಗುಗ್ಗು ಅನ್ನುತ್ತಿದ್ದರು. ಈಗ ಭಾಷೆ ಬದಲಾಗಿದೆ..ಆದರೆ 'ಚಿತ್ರಾ' ಹಾಗೇ ಇದ್ದಾಳೆ. ಬರಹ ತುಂಬಾ ಚೆನ್ನಾಗಿದೆ ಶಿವಣ್ಣ..ಹಾಗೇ ದಿನಸರಿದಂತೆ ನಿಮ್ಮ ಬರಹಗಳು ತುಂಬಾನೇ ಪ್ರೌಢವಾಗಿಬಿಟ್ಟಿವೆ..ಭಾವನೆಗಳನ್ನು ಅಕ್ಷರಗಳಲ್ಲಿ ಪೋಣಿಸುವಾಗ..ಈಗೀಗ ಒಂದೇ ಬಾರಿಗೆ ,ಮನಸ್ಸಿಗೆ ನಾಟಿಬಿಡುವಂತೆ ಪೋಣಿಸಿಬಿಡ್ತೀರಾ..ಶುಭವಾಗಲೀ...ನನ್ ಕಡೆಯಿಂದ ಪ್ರೀತಿ ತುಂಬಿದ ಶುಭಾಶಯಗಳು.
-ಪ್ರೀತಿಯಿಂದ,
ಚಿತ್ರಾ

Sushrutha Dodderi said...

ಫೋಟೋಸ್ ಚೆನ್ನಾಗಿವೆ ಶಿವು.. ನಂಗೆ ಈ ವರ್ಷ ಹೋಗ್ಲಿಕ್ ಆಗಿರ್ಲಿಲ್ಲ ಶೋಗೆ.

ವಿ.ರಾ.ಹೆ. said...

ಏರ್ ಶೋ ವನ್ನು ಹಳ್ಳಿ ಕಾಮೆಂಟ್ರಿಯೊಂದಿಗೆ ಕೊಟ್ಟಿದ್ದು ಸೂಪರ್. "ಕೊನೇದು ಹೆಲಿಕಾಪ್ಟರು...ತವರುಮನೆ ಕಡೀಕೆ ತಿರಿಕತ್ತು......." ಅನ್ನೋ ಮಾತುಗಳು ನಗು ತರಿಸಿದ್ವು.
ಫೋಟೊಗಳು ಚಂದ ಇವೆ. ಇನ್ನೊಂದಿಷ್ಟು ಇದ್ರೆ ತೋರಿಸ್ರೀ..

ಕ್ಷಣ... ಚಿಂತನೆ... said...

ಶಿವು ಅವರೆ, ಏರ್‌ಷೋ ಛಾಯಾಚಿತ್ರಗಳು ನಯನಮನೋಹರ ಮತ್ತು ರೋಮಾಂಚಕಾರಿಯಾಗಿವೆ. ಜೊತೆಗೆ ಬರಹವೂ ಹೊಸತನ್ನು ನೀಡಿ ರಮಿಸುತ್ತದೆ. ಇಂತಹ ಸಂತಸ ಉಂಟುಮಾಡುವ ಚಿತ್ರ-ಬರಹ ಬ್ಲಾಗಿಸಿದ್ದಕ್ಕಾಗಿ ಧನ್ಯವಾದಗಳು.

ಶಿವಪ್ರಕಾಶ್ said...

ಶಿವು ಅವರೇ,
Nice Capture of photos and explanation.
Thank you

ಆದ್ರೆ,
ಅವರು "ಹೂ ಕಣಮ್ಮಿ ಅವು ಕೆಂಪು ಬಿಳಿ ಹಸಿರು...ಬಣ್ಣದ್ದು. ನಮ್ಮ ದೇಶದ ಬಾವುಟ ಕಲರ್......". ಅಂತ ಅಂದ್ರಾ ?
ಕೇಸರಿ ಕೆಂಪಾಯಿತಾ ?

ಜ್ಞಾನಮೂರ್ತಿ said...

ಶಿವೂ ಸರ್ ,

ಯಲಹಂಕ ವಾಯುನೆಲೆಯಲ್ಲಿ ನಡೆದ 7ನೇ ರೋಮಾಂಚಕ ವೈಮಾನಿಕ ಪ್ರದರ್ಶನದ ಮಾಹಿತಿಯನ್ನು ಹಳ್ಳಿ ಸೊಗಡಿನಲ್ಲಿ ನಿರುಪಿಸಿದ್ದಕ್ಕೆ ದನ್ಯವಾದಗಳು ಸರ್,

ಫೋಟೋಗಳು ತುಂಬಾ ಚನ್ನಾಗಿದೆ..

ಬಾಲು said...

ಹಳ್ಳಿಗರ ಕಾಮೆಂಟರೀ ಚೆನ್ನಾಗಿದ್.

ಇನ್ನೂ ಫೋಟೋ ಗಳು ಇದ್ದರೆ ತೋರಿಸಿರಿ!!!

Santhosh Rao said...

sir.. super, ಲೇಖನ ಮತ್ತು ಫೋಟೋಗಳು ತುಂಬ ಚೆನ್ನಾಗಿದೆ, ತುಂಬ ಇಷ್ಟ ಆಯಿತು

PaLa said...

ಶಿವು,
ಏರ್ ಶೋ ಹಳ್ಳಿಯವರ ದೃಷ್ಟಿಯಲ್ಲಿ ಚಿತ್ರಿಸಿರೋದು ಭಿನ್ನವಾಗಿದೆ, ವಂದನೆಗಳು
--
ಪಾಲ

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಶಿವೂ, ಚೆನ್ನಾಗಿದೆ ಕಣ್ರೀ.. ಬರೀ ಚಿತ್ರಗಳನ್ನ ನೋಡಿದ್ರೆ ಇಷ್ಟು ಮಜಾ ಬರ್ತಿರಲಿಲ್ಲ... ಹಾಗೇ ಬರೀ ಲೇಖನ ಓದಿದ್ರೂ ಇಷ್ಟು ಖುಷಿ ಸಿಕ್ತಿರಲಿಲ್ಲ. ಎರಡೂ ಒಟ್ಟಿಗೇ ಕೊಟ್ಟಿದ್ದಕ್ಕೆ ಥ್ಯಾಂಕ್ಸ್!

sunaath said...

Running commentary ತುಂಬಾ ಚೆನ್ನಾಗಿದೆ. ಅಲ್ರೀ ಹಾರೋಪ್ಲೇನ್‍ಗಳ ಫೋಟೋ ಹೊಡೆದೀರಲ್ಲ. ಶಟರ್-ಸ್ಪೀಡು ಎಷ್ಟು ಇಡಬೇಕಾಗತ್ತೆ?
ಓದ್ತಾ,ನೋಡ್ತಾ ತುಂಬಾ ಖುಶಿ ಆಯ್ತು.

ಚಂದ್ರಕಾಂತ ಎಸ್ said...

ಶಿವು ಅವರೆ
ಈ ಬಾರಿಯೂ ನಾನು ಲೇಟ್. ಆದರೂ ಬರಹದ ಅಂದವೇನೂ ಕುಂದಿಲ್ಲ.

ಲೇಖನ ಆತ್ಮೀಯ ಶೈಲಿಯಲ್ಲಿ ಚೆನ್ನಾಗಿ ಮೂಡಿಬಂದಿದೆ. ಆ ವರ್ಣನೆಯ ಹಿನ್ನೆಲೆಯಲ್ಲಿ ಫೋಟೋಗಳು ಅದ್ಭುತವಾಗಿ ಕಾಣುತ್ತವೆ.

ನನಗೆ ಬಹಳ ಇಷ್ಟವಾದದ್ದು ಜನಸಾಮಾನ್ಯರ ಚಿತ್ರಗಳು. ( ಅಣ್ಣ ತಂಗಿ, ಮುಂತಾದವು) ಎಲ್ಲರ ಮುಖದಲ್ಲೂ ಎಷ್ಟೊಂದು ಆನಂದವಿದೆ!

nirusha said...

ಶಿವು, ನಿಮ್ಮ ಕ್ಯಾಮರ ತು೦ಬ ಚುರುಕು ಮಾರಾಯ.ಜನಗಳ ಚಿತ್ರಗಳು ತು೦ಬಾ ಹಿಡಿಸಿದವು.ನಿಮ್ಮ ಕ್ಯಾಮರ ಯಾವುದು ಶಿವು ನಾನು ಕೊಳ್ಳುವ ಆಲೋಚನೆಯಲ್ಲಿದ್ದೇನೆ ಸಲಹೆ ಕೊಡಿ.

NiTiN Muttige said...

nimma kivi chendaake aiti.... hange cendaake bardidrala.... !!

Greeshma said...

shivu sir, ನಾನು ಮೈಸೂರಿನಿಂದ ಆಕಾಶ ನೋಡಿದೆ. ಕಾಣಲಿಲ್ಲ .ತಡವಾಗಿ ಆದ್ರೂ ಇಲ್ಲಿಂದನೆ air show ತೋರ್ಸಿದಕ್ಕೆ ಥ್ಯಾಂಕ್ಸ್ :)

bhadra said...

ಹಳ್ಳಿಗರ ಮಾತುಗಳ ಸೊಗಡು ಸೊಗಸಾಗಿದೆ. ತಕ್ಕಂತೆ ನಿಮ್ಮ ನಿರೂಪಣೆ. ರಮಣೀಯ ವೈವಿಧ್ಯಮಯ ವಿಮಾನಗಳ ಚಿತ್ರಗಳು.
ಛತ್ರಿ ಕೆಳಗೆ ಕುಳಿತಿರುವ ಪುಟ್ಟಕ್ಕ ಕ್ಯಾಮೆರಾ ಕಡೆಗೇ ಕಣ್ಣಿಟ್ಟಿದ್ದರೆ, ಪುಟ್ಟಣ್ಣ ಯಾವುದೋ ಗುಂಗಿನಲ್ಲಿ ಪುಂಗಿ ಊದುತ್ತಿದ್ದಾನೆ. ಪಕ್ಕದಲ್ಲಿ ಕುಳಿತಿರುವಾತನ ಆಶ್ಚರ್ಯದಿಂದ ತೆರೆದ ಬಾಯಿ ತೆರೆದೇ ಇದೆ.

ಒಟ್ಟಿನಲ್ಲಿ note worthy blogನಲ್ಲಿ memorable ಸಚಿತ್ರ ಲೇಖನ ಎನ್ನುವೆ :)

ಗುರುದೇವ ದಯಾ ಕರೊ ದೀನ ಜನೆ

Anonymous said...

ಶಿವು ಅಣ್ಣ
ತುಂಬಾ ಚೆನ್ನಾಗಿ ಬರೆದಿದ್ದೀರ. ಈ ಅಣ್ಣ ಏರ್ ಶೋ ನೋಡಿಲ್ಲ ಅನ್ಸುತ್ತೆ. ಏರ್ ಶೋ ಹೆಸರಲ್ಲಿ ಬರೀಯೋದಿಕ್ಕೆ ಯಾವ ವಿಷಯ ಸಿಗುತ್ತೆ ಅಂತ ಹುಡುಕಾಟನೇ ಜೋರಾಗಿತ್ತು ಅನ್ಸುತ್ತೆ. ಏರ್ ಶೋ ನೋಡೋ ಅಸೆ ಬಹಳ ಇತ್ತು ಆದರೆ ಸಾಧ್ಯ ಆಗಿರಲಿಲ್ಲ. ನಿಮ್ಮ ಲೇಖನ ಹಾಗೂ ಛಾಯ ಚಿತ್ರ ನೋಡಿ. ಏರ್ ಶೋ ನೋಡಿದಷ್ಟೇ ಖುಷಿ ಪಟ್ಟೆ. ನಿಮ್ಮ ಲೇಖನ ನಾವು ಹೀಗೆ ಏನಾದ್ರು ಬರೀಬೇಕು ಅನ್ನೋ ಆಸೇನ ಹುಟ್ಟಿಸುತ್ತೆ. ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ. ಧನ್ಯವಾದಗಳು ಅಣ್ಣ ನಿಮ್ಮ ಪ್ರೋತ್ಸಾಹಕ್ಕೆ.

ಚಿತ್ರಾ said...

ಸಖತ್ತಾಗಿದೆ ಶಿವೂ ,

ಅದೃಷ್ಟವಂತರು ನೀವು!ಅಲ್ಲಿ ಹೋಗಿ ಫೋಟೋ ತೆಗೆಸ್ಕೊಂಡಿದೀರಾ.
ಹಳ್ಳಿಜನರ ಮಾತುಗಳು ,ಲೇಖನವನ್ನು ಇನ್ನಷ್ಟು ಕಳೆಗಟ್ಟಿಸಿವೆ." ಈ ವಿಮಾನಗಳು ಅಂದಿಂದ ಹೊಗೆ ಬಿಡೋದು ನೋಡಿದ್ರೆ .... " ಹ ಹ ಹ ..
ಥ್ಯಾಂಕ್ಯೂ ಸರ್ !

ತೇಜಸ್ವಿನಿ ಹೆಗಡೆ said...

ಎಲ್ಲಾ ಚಿತ್ರಗಳೂ ಚೆನ್ನಾಗಿವೆ. ಆದರೆ ೫ನೆಯ ಹಾಗೂ ೮ನೆಯ ಚಿತ್ರಗಳು ಮತ್ತೂ ಇಷ್ಟವಾದವು. ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ನನ್ನ ಮಗಳಿಗೆ ಹೆಲಿಕಾಪ್ಟರ್ ಅಂದರೆ ಬಲು ಹುಚ್ಚು. ನಿಮ್ಮ ಚಿತ್ರಗಳನ್ನು ತೋರಿಸಿದಾಗ ಬಲು ಸಂತೋಷಪಟ್ಟಳು..:)

shivu.k said...

ಪರಂಜಪೆ ಸರ್,

ಫೋಟೋ ಮತ್ತು ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಮುಂದಿನ ಬಾರಿ ತಪ್ಪಿಸಿಕೊಳ್ಳದೇ ನೋಡಿ....

shivu.k said...

ಪ್ರದೀಪ್...ಥ್ಯಾಂಕ್ಸ್...


ಪ್ರೊಮೋದ್,

ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಮತ್ತೆ ನನ್ನ ಫೋಟೊಗಳನ್ನು flickr.com ಗೆ ಮೊದಲು upload ಮಾಡುತ್ತಿದ್ದೆ...ಈಗ ಸಮಯವಿಲ್ಲದ ಕಾರಣ ಸಾಧ್ಯವಾಗುತ್ತಿಲ್ಲ...ಕ್ಷಮಿಸಿ..ಮುಂದೆ ಮಾಡುತ್ತೇನೆ...

Anonymous said...

really superb ...

shivu.k said...

ಚಿತ್ರ ಪುಟ್ಟಿ,

ನಿನಗೆ ಹಳ್ಳಿ ಭಾಷೆಯ ಪದಗಳು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ನಿಜಕ್ಕೂ ಹಳ್ಳಿ ಜನರ ಮದ್ಯ ಇದ್ದರೆ ಅದೆಷ್ಟು ಸಂತೋಷವಾಗುತ್ತದೊ ಗೊತ್ತಿಲ್ಲ....ಅವರ ಮುಗ್ದತೆ ತುಂಬಾ ಇಷ್ಟವಾಗುತ್ತದೆ....ಮೊದಲು ನೀನು ಹಾಗೆ ಇದ್ದೆ, ಮತ್ತು ಮಾತಾಡುತ್ತಿದ್ದೆ ಅಂತ ಹೇಳಿದ್ದೀಯಾ....ಅದೇ ಕಾರಣಕ್ಕೆ ನೀನು ನನಗೆ ಇಷ್ಟವಾಗಿರಲೂಬಹುದು.

ಇನ್ನೂ ಬರಹದ ವಿಚಾರ ಬಂದಾಗ ನನ್ನನ್ನು ಹೊಗಳುವುದು ಕಡಿಮೆ ಮಾಡಬಹುದು...ಅದ್ರೆ ಅನುಭವಿಸಿ ಬರೆಯುತ್ತೇನೆನ್ನುವುದು ನಿಜ....ಎರಡು ದಿನದಿಂದ ನನ್ನ ಮನೆ ಬದಲಾವಣೆ ಕಾರಣ ಬ್ಯುಸಿಯಾಗಿದ್ದೇನೆ...ಅದ ಕಾರಣ ಯಾರ ಬ್ಲಾಗಿಗೂ ಹೋಗಲಿಕ್ಕಾಗುತ್ತಿಲ್ಲ...ಥ್ಯಾಂಕ್ಸ್...

shivu.k said...

ಸುಶ್ರುತ, ಥ್ಯಾಂಕ್ಸ್...

ವಿಕಾಶ್,

ಹಳ್ಳಿ ಭಾಷೆಯವರ ಜೊತೆ ನಾನಿದ್ದು ಅದನ್ನು ಅನುಭವಿಸಿದ್ದು ನನಗೆ ಹೀಗೆ ಬರೆಯಲು ಕಾರಣ. ನಿಮ್ಮ ಬೇಡಿಕೆಯಂತೆ ಮತ್ತಷ್ಟು ಫೋಟೋಗಳನ್ನು ಹಾಕಿದ್ದೇನೆ...ಹೀಗೆ ಬರುತ್ತಿರಿ ಥ್ಯಾಂಕ್ಸ್..

shivu.k said...

ಕ್ಷಣ ಚಿಂತನೆ,

ಬ್ಲಾಗಿಗೆ ಬಂದು ಲೇಖನ ಮತ್ತು ಫೋಟೋಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....

shivu.k said...

ಶಿವಪ್ರಕಾಶ್,

ಫೋಟೋ ಮತ್ತು ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

ಹಳ್ಳಿಯವರ ಭಾಷೆಯಲ್ಲಿ ಕೇಸರಿ...ಕೆಂಪಾಗುತ್ತದೆ....

shivu.k said...

ಜ್ಞಾನಮೂರ್ತಿ ಸರ್,

ಏಳು ಬಾರಿ ಏರ್‍ ಷೋ ಬೆಂಗಳೂರಿನಲ್ಲಿ ನಡೆದಿದೆ.ಅದರಲ್ಲಿ ನಾನು ನಾಲ್ಕು ಬಾರಿ ಹೋಗಿದ್ದೇನೆ...ಫೋಟೊ ಮೆಚ್ಚಿದ್ದಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....

shivu.k said...

ಬಾಲು ಸರ್, ಥ್ಯಾಂಕ್ಸ್...

ಸಂತೋಷ್, ಥ್ಯಾಂಕ್ಸ್....

shivu.k said...

ಪಾಲಚಂದ್ರ,

ಏರೋ ಷೋ ಮಾತ್ರವಲ್ಲ ನೀವು ಏನನ್ನೇ ಆಗಲಿ ಈ ರೀತಿ ಸ್ವಲ್ಪ ಬಿನ್ನವಾಗಿ ಯೋಚಿಸಿದರೆ ಈ ರೀತಿಯ ಪಲಿತಾಂಶ ಸಿಗುತ್ತದೆ...ಥ್ಯಾಂಕ್ಸ್....

shivu.k said...

ಪೂರ್ಣಿಮ ಮೇಡಮ್,

ಎರಡನ್ನು ಸೇರಿಸಿ ಬ್ಲಾಗಿಗೆ ಹಾಕಿದಾಗ ನಿಮ್ಮ ಅನಿಸಿಕೆ ನಿಜವಾಯಿತು.. ಹಾಲು ಮತ್ತು ಸಕ್ಕರೆಯನ್ನು ಒಂದೊಂದೆ ಉಪಯೋಗಿಸುವುದಕ್ಕಿಂತ ಸೇರಿಸಿ ಉಪಯೋಗಿಸಿದರೆ ಅದರ ಮಜವೇ ಬೇರೆ..ಥ್ಯಾಂಕ್ಸ್...

shivu.k said...

ಸುನಾಥ್ ಸರ್,

ಹಳ್ಳಿಯವರ ರನ್ನಿಂಗ್ ಕಾಮೆಂಟರಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಮತ್ತೆ ಹಾರುವ ವಿಮಾನ ಫೋಟೋ ತೆಗೆಯಲು ನಾನು ಅಪಾರ್ಚರ್ ಮೋಡ್ ನಲ್ಲಿ ಕ್ಯಾಮೆರಾ ಸೆಟ್ ಮಾಡುತ್ತೇನೆ. ಮತ್ತು ಷಟರ್ ಸ್ಪೀಡ್ ಕಡಿಮೆಯೆಂದರೂ ೧೦೦೦ ಕ್ಕಿಂತ ಹೆಚ್ಚು ಇರುವಂತೆ ನೋಡಿಕೊಳ್ಳುತ್ತೆನೆ...ಕ್ಯಾಮೆರಾ ತಾಂತ್ರಕ ವಿಚಾರ ಕೇಳಿದ್ದಕ್ಕೆ ಥ್ಯಾಂಕ್ಸ್..

shivu.k said...

ಚಂದ್ರಕಾಂತ ಮೇಡಮ್,

ನೀವು ಈ ಬಾರಿ ಮೊದಲಿಗಿಂತ ಸ್ವಲ್ಪ ಬೇಗ ಬಂದಿದ್ದೀರಿ..ಬರಹ ಮತ್ತು ಫೋಟೋಗಳನ್ನು ತಾಂತ್ರಕವಾಗಿ ಗುರುತಿಸಿದ್ದಕ್ಕೆ ಥ್ಯಾಂಕ್ಸ್...ನಿಮ್ಮ ಇಷ್ಟದಂತೆ ಹಳ್ಳಿ ಜನರ ಪೋಟೋಗಳನ್ನು ಹಾಕಲು ಪ್ರಯತ್ನಿಸಿದೆ...ಸಾಧ್ಯವಾಗಲಿಲ್ಲ[ನಾನು ಮನೆಯನ್ನು ಬದಲಿಸಿದ್ದರಿಂದ ಹೊಸ ಮನೆಯಲ್ಲಿ ಇಂಟರ್ ನೆಟ್ ಇಲ್ಲ...ಮತ್ತು ಹೊರಗೆ ಸೈಬರ್ ಕೆಪೆಯಲ್ಲಿ ಫೋಟೋಗಳು ಸರಿಯಾಗಿ upload ಆಗಲಿಲ್ಲವಾದ್ದರಿಂದ ಹಳ್ಳಿಗರ ಚಿತ್ರಗಳನ್ನು ಹಾಕಲು ಸಾಧ್ಯವಾಗಲಿಲ್ಲ...ಥ್ಯಾಂಕ್ಸ್...

shivu.k said...

ನಿರುಷ ಸರ್,

ನನ್ನ ಕ್ಯಾಮೆರವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
[ನನ್ನ ಕ್ಯಾಮೆರಾ canon 30D. lens 100-400 IS USM canan. [ಇವೆರಡು ಪಕ್ಕಾ ವೃತ್ತಿಪರ ಕ್ಯಾಮೆರಾ ಮತ್ತು ಲೆನ್ಸ್ಗ್‌ಗಳು]
ಮತ್ತೆ ಸರ್ ನೀವು ಕ್ಯಾಮೆರಾ ಕೊಳ್ಳುವ ಮೊದಲು ನಿಮ್ಮ ಬಜೆಟ್ ಮತ್ತು ಬಳಸುವ ಉದ್ದೇಶ ಹೇಳಿ. ಆಗ ನಾನು ಯಾವ ಕ್ಯಾಮೆರಾ ಕೊಳ್ಳಬಹುದು ಹೇಳುತ್ತೇನೆ..

shivu.k said...

ನಿತಿನ್,

ನಿಮ್ ಕಣ್ಣು ಚೆಂದಕೈತ್ರಿ....ಅದ್ದರಿಂದಲೇ ಅಲ್ವೇ ನೀವು ಇದನ್ನು ಮೆಚ್ಚಿದ್ದು..!!ಥ್ಯಾಂಕ್ಸ್...

shivu.k said...

ಗ್ರೀಷ್ಮ ಮೇಡಮ್,

ನನಗೆ ಬೆಂಗಳೂರಿನ ಯಲಹಂಕದಿಂದಲೇ ವಿಮಾನಗಳ ಹಾರಾಟ ಕಾಣಲಿಲ್ಲ...ಇನ್ನು ನಿಮಗೆ ಅಲ್ಲಿ ಹೇಗೆ ಕಾಣಬೇಕು ಹೇಳಿ ? ಇಲ್ಲಿ ನೋಡಿ ಸಂತೋಷ ಪಟ್ಟಿರಲ್ಲ ಅದೇ ಖುಷಿ ನನಗೆ...ಥ್ಯಾಂಕ್ಸ್.. ಹೀಗೆ ಬರುತ್ತಿರಿ...

shivu.k said...

ಶ್ರೀನಿವಾಸ್ ಸರ್,

ವಿಮಾನಗಳ ಮತ್ತು ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಮುಗ್ಧ ಜನರ ನಡುವಳಿಕೆಗಳನ್ನು ಸೂಕ್ಷ್ಮವಾಗಿ ನೋಡಿ ಸಂತೋಷ ಪಟ್ಟಿದ್ದೀರಿ. ಇದರಿಂದ ನನಗೆ ಮತ್ತಷ್ಟು ಫೋಟೊಗಳನ್ನು ಹಾಕಲು ಪ್ರಯತ್ನಿಸಿದೆ...ಸಾಧ್ಯವಾಗಲಿಲ್ಲ.ಸಾರಿ ಸರ್...ಹೀಗೆ ಬರುತ್ತಿರಿ. ಥ್ಯಾಂಕ್ಸ್...

shivu.k said...

ರೋಹಿಣಿ ಪುಟ್ಟಿ,

ಏರ್ ಷೋ ನೋಡಲು ಹೋದಾಗ ಕಾಲಿ ತಲೆಯಲ್ಲೇ ಹೋಗಿದ್ದೆ...ಆ ಸಮಯದಲ್ಲಿ ನಾವು ಎಲ್ಲಿರುತ್ತೇವೆ ಅದಕ್ಕೆ ಹೊಂದಿಕೊಂಡು ಕಣ್ಣು ಕಿವಿ ತೆರೆದುಕೊಂಡರೆ ಮುಗಿಯಿತು...ನಿನಗೆ ಬೇಕಾದ ಹೊಸ ವಿಚಾರಗಳು ತಾನಾಗೆ ದಕ್ಕುತ್ತವೆ....ನನ್ನ ಈ ಲೇಖನದಿಂದ ನಿನಗೆ ಸ್ಪೂರ್ತಿ ಬಂದರೆ ನನಗೆ ಸಂತೋಷ...ನಿನ್ನ ಹೊಸ ಬರಹ ಕಾಯುತ್ತೇನೆ....ಹೀಗೆ ಬರುತ್ತಿರು...ಥ್ಯಾಂಕ್ಸ್...

shivu.k said...

ಚಿತ್ರಾ ಮೇಡಮ್.,

ನಾನು ಹೋಗಿ ಅಲ್ಲಿ ಫೋಟೊ ತೆಗೆದಿದ್ದೇನೆ...ತೆಗೆಸಿಕೊಂಡಿದ್ದಲ್ಲ...

ಮತ್ತೆ ಹಳ್ಳಿಯ ಮಾತುಗಳು ನನಗೆ ಅವರ ಮದ್ಯೆ ಅದರಲ್ಲೂ ಇಂಥ ವಾಕ್ಯಗಳು ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ ಅಲ್ಲವೇ..? ಥ್ಯಾಂಕ್ಸ್...ಹೀಗೆ ಬರುತ್ತಿರಿ.....

shivu.k said...

ತೇಜಸ್ವಿನಿ ಮೇಡಮ್

ಚಿತ್ರ-ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಅದರಲ್ಲೂ ನಿಮ್ಮ ಮಗಳು ಹೆಲಿಕಾಪ್ಟರ್ ಫೋಟೊ ಮೆಚ್ಚಿದ್ದು ನನಗಂತೂ ತುಂಬಾ ಖುಷಿಯಾಯಿತು....ಹೀಗೆ ಬರುತ್ತಿರಿ...ಥ್ಯಾಂಕ್ಸ್...

shivu.k said...

ಮಿಂಚುಳ್ಳಿ ಥ್ಯಾಂಕ್ಸ್...ಹೀಗೆ ಬರುತ್ತಿರಿ...

ಅಂತರ್ವಾಣಿ said...

ಶಿವಣ್ಣ,
ಹಳ್ಳಿ ಭಾಷೆಯಲ್ಲಿ ಬರೆದಿರೋದು ಚೆನ್ನಾಗಿದೆ. ಫೋಟೋ ಸೂಪರ್.

ಸಾಗರದಾಚೆಯ ಇಂಚರ said...

ಶಿವೂ ಅವರೇ,
ನನ್ನ ಹೆಸರು, ಗುರುಮೂರ್ತಿ ಹೆಗಡೆ ಅಂತ, ಮತ್ತೊಮ್ಮೆ ಸುಂದರ ಬರಹಕ್ಕೆ ಅಭಿನಂದನೆಗಳು,

shivu.k said...

ಜಯಶಂಕರ್,

ಹಳ್ಳಿ ಭಾಷೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....

shivu.k said...

ಗುರುಮೂರ್ತಿ ಹೆಗಡೆಯವರ ನಿಮ್ಮ ಹೆಸರು ತಿಳಿಸಿದ್ದಕ್ಕೆ ಥ್ಯಾಂಕ್ಸ್.....ಮತ್ತೆ ಸಿಗೋಣ ಹೀಗೆ ಬರುತ್ತಿರಿ....

ಮನಸು said...

ಸೂಪರ್ ಫೋಟೋಗಳು ಸರ್,

ಅಲ್ಲೆಲ್ಲಾ ಕೂತು ಬಿಟ್ಟರೆ ಭಯ ಆಗೋಲ್ವಾ ಅವರಿಗೆ ಅಹ್ ಹ ಹ ಬಿದ್ದುಬಿಟ್ಟೆವು ಎಂದು ಅನಿಸಲಿಲ್ಲವೇನೋ ಹ ಹ ಹ ... ಆ ಮಗು ಐಸ್ ಕ್ರೀಂ ತಿನ್ನುತಿಲ್ಲ ಸರ್ ಐಸ್ ಕ್ಯಾಂಡಿ ತಿನ್ನುತ್ತಾ ಇರೋದು ಹ ಹ ಹ ಹ ಸುಮ್ಮನೆ ತಮಾಷೆ ಮಾಡಿದ್ದು ...
ನಿಜಕ್ಕೂ ನನಗೆ ಬಹಳ ಇಷ್ಟವಾಯ್ತು ಕೂತಲ್ಲೇ ನಮ್ಮೂರಲ್ಲಿ ಆಗೋದೆಲ್ಲ ನೋಡ್ತೀವಿ ಕುಶಿ ಕೂಡ ಕೂಟ್ಟಿದೆ

shivu.k said...

ಮನಸು,

ವಿಮಾನಗಳು, ಮಕ್ಕಳು ಮತ್ತು ಹಳ್ಳಿಜನರ ಭಾಷೆ enjoy ಮಾಡಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....

Pramod P T said...

ಬರಹ ಮತ್ತು ಫೋಟೊಗಳೆಲ್ಲವೂ ಚೆನ್ನಾಗಿವೆ ಶೀವು. "ವಿಮಾನಗಳ ಹಾರಾಟ ನೋಡಲು ಅಣ್ಣ ತಂಗಿಗೆ ಕುತೂಹಲ ಹೆಚ್ಚು" ಈ ಚಿತ್ರ ತುಂಬಾ ಇಷ್ಟ ಆಯ್ತು.

shivu.k said...

ಪ್ರಮೋದ್, ಏರ್ ಷೋ ನೋಡಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ.....

ದೀಪಸ್ಮಿತಾ said...

ಚಿತ್ರಗಳು ಸಕತ್ತಾಗಿವೆ. ನನಗೆ ಹೋಗಲಾಗಲಿಲ್ಲ. ನಾನೂ ಕೂಡ ಫೋಟೋ ತೆಗೆಯುವ ಹುಚ್ಚಿನವನು

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಇಲ್ಲಿ ಮಾತಿಲ್ಲ, ಬರಿಯ ಮೌನ ಮಾತ್ರ...
ಬರಹ ಮತ್ತು ಚಿತ್ರ ಎಲ್ಲಾ ಬೊಂಬಾಟ್...
-ರಾಜೇಶ್ ಮಂಜುನಾಥ್

Ashok Uchangi said...

ಪ್ರಿಯ ಶಿವು
ಎಲ್ಲರೂ ಕತ್ತೆತ್ತಿ ಆಗಸದೆಡೆಗೆ ದಿಟ್ಟಿಸುತ್ತಿದ್ದಾಗ ನೀವು ಸ್ವಲ್ಪಹೊತ್ತು ಕತ್ತು ಬಗ್ಗಿಸಿ ಈ ಗ್ರಾಮವಾಸಿಗಳ ಮುಗ್ಧತೆಯನ್ನು ಮಾತು ಹಾಗು ಚಿತ್ರಗಳಲ್ಲಿ ಸೆರೆಹಿಡಿದಿರುವುದು
ವಿಭಿನ್ನತೆಯ ಪ್ರತೀಕವಾಗಿದೆ..ಹೀಗೆ ವಿಭಿನ್ನ,ವಿಶಿಷ್ಟ ಬರಹ ಬರುತ್ತಿರಲಿ

shivu.k said...

ದೀಪಸ್ಮಿತ,

ವಿಮಾನಗಳನ್ನು ನೋಡಲು ಹೋಗದ್ದಿದ್ದಿಕ್ಕೆ ಚಿಂತಿಸಬೇಡಿ...೨೦೧೧ ರ ಫೆಬ್ರವರಿಯಲ್ಲಿ ಮತ್ತೆ ನಡೆಯುತ್ತದೆ..ಆಗ ನೋಡಲು ತಪ್ಪಿಸಿಕೊಳ್ಳಬೇಡಿ..ನನ್ನ ಬ್ಲಾಗಿನಲ್ಲಿ ನೋಡಿ ಖುಷಿ ಪಟ್ಟಿದ್ದಕ್ಕೆ ಥ್ಯಾಂಕ್ಸ್...

shivu.k said...

ರಾಜೇಶ್,

ವಿಮಾನಗಳು ಮತ್ತು ಲೇಖನಗಳನ್ನು ಮೌನದಲ್ಲೇ enjoy ಮಾಡಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ..

shivu.k said...

ಆಶೋಕ್,

ನಾನು ವಿಮಾನಗಳ ಫೋಟೊಗಳನ್ನೇ ಕ್ಲಿಕ್ಕಿಸಲು ಹೋಗಿದ್ದರೂ ನನ್ನ ಗಮನ ಯಾವಾಗಲು ಬೇರೆ ಕಡೆ ಇರುತ್ತದೆ....ಅದರ ಪ್ರತಿಫಲವೇ ಇದು.....