Wednesday, October 27, 2010ದಿನಾಂಕ ೨೬-೧೦-೨೦೧೦ ರಂದು ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ{ರಿ]ಧಾರವಾಡ ಸಂಸ್ಥೆಯವರು ಬಹುಮಾನ ವಿಜೇತ ಪುಸ್ತಕಗಳ ಅವಲೋಕನ ಮತ್ತು ಕೃತಿಕಾರರಿಗೆ ಬಹುಮಾನ ಸಮ್ಮಾನ ಮಾಡಿದರು ಅದರ ಕೆಲವು ಫೋಟೊಗಳು. 


ಆಯ್ಕೆಗಾರರಾದ  ರಂಗರಾಜ ವನದುರ್ಗರವರು "ಜಂಗಮ ಪಕೀರನ ಜೋಳಿಗೆ, ಮತ್ತು ವೆಂಡರ್ ಕಣ್ಣು  ಪುಸ್ತಕಗಳನ್ನು ಅವಲೋಕಿಸಿದರು.

ಆಯ್ಕೆಗಾರರಲ್ಲಿ ಒಬ್ಬರಾದ ಜಗದೀಶ್ ಮಂಗಳೂರ್ ಮಠರವರು "ಯಜ್ಞ, ವಿಸ್ತರಣೆ, ಡಾ.ಬಸವರಾಜ ಮನ್ಸೂರ್ ಜೀವನಚರಿತ್ರೆ, ಗೋಡೆಗೆ ಬರೆದ ನವಿಲು" ಪುಸ್ತಕಗಳ ಬಗ್ಗೆ ಮಾತಾಡಿದರು.


ಮುಖ್ಯ ಅತಿಥಿಗಳಾದ ಜಯಂತ್ ಕಾಯ್ಕಿಣಿ ಸರ್ ಪುಸ್ತಕಗಳ ಬಗ್ಗೆ ಮಾತಾಡಿದ್ದು ಹೀಗೆ..... 

ಕಾರ್ಯಕ್ರಮಕ್ಕೆ ಬಂದಿದ್ದ ಧಾರವಾಡದ ಸಾಹಿತ್ಯಾಭಿಮಾನಿಗಳು.


"ವೆಂಡರ್ ಕಣ್ಣು" ಬಗ್ಗೆ ನನ್ನ ಮಾತು


"ಡಾ.ಬಸವರಾಜ ಮನ್ಸೂರ್ ಜೀವನ ಚರಿತ್ರೆ"  ಕೃತಿಕಾರ ಮಾರ್ತಾಂಡಪ್ಪ ಕತ್ತಿ 

 ತಮ್ಮ ವಿಸ್ತರಣೆ ಪುಸ್ತಕದ ಬಗ್ಗೆ ಮಾತಾಡಿದ ಶ್ರೀಧರ್ ಹೆಗೆಡೆ ಭದ್ರನ್.

ನಾಡಿನ ಖ್ಯಾತ ಕವಿಗಳಾದ ಸಿದ್ದಲಿಂಗ ಪಟ್ಟಣಸೆಟ್ಟಿಯವರು ನನಗೆ ಮಾತಾಡಿಸಲು ಸಿಕ್ಕಿದ್ದು ನನಗೆ ಮರೆಯಲಾಗದ ಅನುಭವ

ನನಗೆ ಜಯಂತ್ ಕಾಯ್ಕಿಣಿ ಸರ್ ಈ ರೀತಿ ಸಿಕ್ಕಿದ್ದು ನನ್ನ ಸುಯೋಗ. 

ಮೂವರು ಹರಟುತ್ತಿದ್ದಾಗ ನಮ್ಮನ್ನು ಕ್ಲಿಕ್ಕಿಸಿದ್ದು ಸಲೀಂ 

"ಯಜ್ಞ"  ಅನುವಾದ ಕೃತಿಗೆ ಬಹುಮಾನ ಗಳಿಸಿದ ಗೆಳೆಯ ಚಿದಾನಂದ್ ಸಾಲಿ ನನ್ನ ಕ್ಯಾಮೆರಾಗೆ ಸೆರೆಸಿಕ್ಕಿದ್ದು ಹೀಗೆ.

ಕವನ ವಿಭಾಗದಲ್ಲಿ ಪ್ರಶಸ್ಥಿ ಗಳಿಸಿದ ಗೆಳೆಯ ಆರೀಪ್ ರಾಜ  ಸಿನಿಮಾದಲ್ಲಿ ಬುದ್ದಿವಂತ ವಿಲನ್ ಪಾತ್ರದಂತೆ ಕಾಣುತ್ತಾರಲ್ಲವೇ?
 
ಸಂಜೆ  ಸೃಜನ ರಂಗಮಂದಿರದಲ್ಲಿ ಗಣ್ಯರ ಜೊತೆಗೆ ಪ್ರಶಸ್ಥಿ ವಿಜೇತರು.

ಪ್ರಶಸ್ಥಿ ಪ್ರಧಾನದಲ್ಲಿ ಜಯಂತ್ ಕಾಯ್ಕಿಣಿ, ಡಾ.ಶ್ಯಾಮಸುಂದರ್ ಬಿದರಕುಂದಿ, ಡಾ.ಕೆ.ಶರ್ಮ
 
ಕನ್ನಡ ನಾಡಿನ ಖ್ಯಾತ ಕವಿ ಚೆನ್ನವೀರಕಣವಿಯವರು ನಮ್ಮ ಕಾರ್ಯಕ್ರಮದಲ್ಲಿ
ಸಹಜ ಬೆಳಕಿನಲ್ಲಿ ಬೇಂದ್ರೆಯವರ ಫೋಟೊವನ್ನು ಸೆರೆಯಿಡಿದ ಬಾಗಲಕೋಟದ ಇಂದ್ರಕುಮಾರ್.
ಸೃಜನ ರಂಗಮಂದಿರದಲ್ಲಿ ಸಂಜೆ ಸಿಕ್ಕ ಹಿರಿಯ ಬ್ಲಾಗಿಗರಾದ ಸುನಾಥ್[ಸುಧೀಂದ್ರ ದೇಶಪಾಂಡೆ]ಸರ್

ಸಮಾರಂಭದಲ್ಲಿ ಖ್ಯಾತ ಸಾಹಿತಿಗಳು
  

ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಾಗ ರಾತ್ರಿ ಹತ್ತು ಗಂಟೆ. ಇವತ್ತು ಬೆಳಿಗ್ಗೆ ಕೆಲವು ಫೋಟೊಗಳನ್ನು ಆಯ್ಕೆ ಮಾಡಿ ಬ್ಲಾಗಿಗೆ ಹಾಕಿದ್ದೇನೆ. ಮುಂದಿನ ಭಾರಿ ಧಾರವಾಡದ ಅನುಭವಗಳು. 

ಚಿತ್ರಗಳು.: ಮುಂಡರಗಿಯ ಸಲೀಂ,
ಬಾಗಲಕೋಟದ ಇಂದ್ರಕುಮಾರ.
 ಶಿವು.ಕೆ

73 comments:

ಮಲ್ಲಿಕಾರ್ಜುನ.ಡಿ.ಜಿ. said...

Shivu,
Hatts off to you. Congratulations once again.

PARAANJAPE K.N. said...

ಶಿವೂ, ಫೋಟೋ ಗಳನ್ನೂ ನೋಡಿ ನನಗಾಯ್ತು ಖುಷಿ. ನಿಮ್ಮ ಸಾಧನೆಗೆ ನಾನು ಹೆಮ್ಮೆ ಪಡುವೆ. ಅಭಿನ೦ದನೆ. ಇನ್ನಷ್ಟು ಪ್ರಶಸ್ತಿಗಳು ನಿಮ್ಮನ್ನರಸಿ ಬರಲಿ ಎ೦ದು ಹಾರೈಕೆ. ಜೊತೆಗೆ ನಮ್ಮ ಬ್ಲಾಗಿಗರ ಹಿರಿಯಣ್ಣ ಸುನಾಥ ರ ಫೋಟೋ ನಾನು ಇದುವರೆಗೂ ನೋಡಿಯೇ ಇರಲಿಲ್ಲ. ಮಾನಸಿಕವಾಗಿ ಅವರು ನನಗೆ ತು೦ಬಾ ಆಪ್ತರು. ಅವರನ್ನು ಸೆರೆ ಹಿಡಿದು ತೋರಿಸಿದ್ದೀರಿ. ಧನ್ಯವಾದ.,

shivu.k said...

ಮಲ್ಲಿಕಾರ್ಜುನ್.
ಥ್ಯಾಂಕ್ಸ್..

shivu.k said...

ಪರಂಜಪೆ ಸರ್,

ಧಾರವಾಡದಲ್ಲಿ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಅನೇಕರನ್ನು ಬೇಟಿಯಾಗುವ ಅವಕಾಶ ಸಿಕ್ಕಿತ್ತು. ನಮ್ಮ ಸುನಾಥ್ ಸರ್‍ಗೆ ಫೋನ್ ಮಾಡಿದಾಗ ಪ್ರೀತಿಯಿಂದ ಮಾತಾಡಿ ಕಾರ್ಯಕ್ರಮಕ್ಕೆ ಬಂದರು ಅವರ ಜೊತೆ ಫೋಟೊ ತೆಗೆಸಿಕೊಳ್ಳುವ ಆಸೆ ನೆರವೇರಿತು. ಅವರ ಫೋನ್ ನಂಬರ್ ಕೊಟ್ಟ ನಿಮಗೆ ಧನ್ಯವಾದಗಳು.

umesh desai said...

ಶಿವು ಧಾರವಾಡದ ಅನುಭವ ಮುಂದೆ ಅಂತ ಹೇಳಿ ನಮ್ಮನ್ನು ಭಾಳ ಕಾಯಿಸಬೇಡಿ ನಿಮಗೆ ಮತ್ತೊಮ್ಮೆ ಅಭಿನಂದನೆ
ಹೇಳುವೆ ಫೋಟೋ ಚೆನ್ನಾಗಿವೆ

ಮನಮುಕ್ತಾ said...

ಉತ್ತಮವಾದ ಕಾರ್ಯಕ್ರಮದ ಸ೦ತೋಷವನ್ನು ಫೋಟೋಗಳೊ೦ದಿಗೆ ಎಲ್ಲರೊಡನೆ ಹ೦ಚಿಕೊ೦ಡು ನಮಗೂ ಖುಶಿಕೊಟ್ಟಿದ್ದೀರಿ .ಧನ್ಯವಾದಗಳು. ಪ್ರಶಸ್ತಿ ಪಡೆದಿದ್ದಕ್ಕಾಗಿ ಮತ್ತೊಮ್ಮೆ ಅಭಿನ೦ದನೆಗಳು.

ದೀಪಸ್ಮಿತಾ said...

ಅಭಿನಂದನೆಗಳು ಸರ್

ಸವಿಗನಸು said...

ಶಿವು,
ನಿಮ್ಮನ್ನು ವೇದಿಕೆ ಮೇಲೆ ನೋಡಿ ತುಂಬಾ ಖುಷಿಯಾಯಿತು.....
ಫೋಟೋಗಳು ಚೆನ್ನಾಗಿವೆ.....
ನಿಮ್ಮ ಭಾಷಣ ಕೇಳಬೇಕು.....ವಿಡಿಯೋ ಅಪ್ ಲೋಡ್ ಮಾಡಿ....
ಅಭಿನಂದನೆಗಳು...

ಚುಕ್ಕಿಚಿತ್ತಾರ said...

Congratulations shivu sir..
nice photos

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

nice moments ..na once again congratulations

balasubramanya said...

ಸಾದನ ಕೇರಿ ಊರಿನಲ್ಲಿ ನಮ್ಮ ಶಿವುಗೆ ಸನ್ಮಾನ ನಡೆದ ಬಗ್ಗೆ ಹೆಮ್ಮೆಯಾಗಿದೆ.ಧಾರವಾಡ್ ಪೇಡ ತಿನ್ದಂಗಾಯ್ತು. ನಿಮ್ಮ ಸಾಧನೆ ಮುಂದುವರೆಯಲಿ.ಬ್ಲಾಗಿನ ಹಿರಿಯ ಸುನಾಥ್ ರವರ ಚಿತ್ರ ನೋಡಿ ಖುಷಿಯಾಯಿತು.ನಿಮಗೆ ಶುಭಾಶಯಗಳು. ಹಾಗು ಪತಿಯ ಹಿಂದೆ ನಿಂತು ಸೈಲೆಂಟಾಗಿ ಪ್ರೋತ್ಸಾಹ ನೀಡಿದ ನಿಮ್ಮ ಶ್ರೀಮತಿಯವರಿಗೂ ಶುಭಾಶಯಗಳು. ನಿಮ್ಮ ಸಂತೋಷದಲ್ಲಿ ನಾವೆಲ್ಲರೂ ಬಾಗಿಗಳು.ಎಂದು ಹೇಳಲು ಹೆಮ್ಮೆಯಾಗಿದೆ.

ಕ್ಷಣ... ಚಿಂತನೆ... said...

Abhinandanegalu Shivu. tuMba khushi aytu.

Sushrutha Dodderi said...

ಮತ್ತೊಂದ್ಸಲ ಅಭಿನಂದನೆ ಶಿವು.. ಸುನಾಥ್ ಕಾಕಾರನ್ನ ನೋಡಿ ಪುಳಕಿತನಾದೆ! :-)

ಮನಸಿನ ಮಾತುಗಳು said...

ಶಿವಣ್ಣ,
ಅಭಿನಂದನೆಗಳು..!!!

ಸುನಾಥ್ ಅಂಕಲ್ ನ ನೋಡ್ಬೇಕು ಅಂತ ತುಂಬಾ ದಿನದಿಂದ ನನ್ ಮನಸಲ್ಲೂ ಇತ್ತು..ಇವತ್ತು ನೋಡಿದ ಹಾಗಾಯಿತು.. ಖುಷಿ ಆಯ್ತು.. :-)

ನಾಗರಾಜ್ .ಕೆ (NRK) said...

I am HAPPY . . . Once again Congratulations

ಸೀತಾರಾಮ. ಕೆ. / SITARAM.K said...

ಫೋಟೋ ನೋಡಿ ಖುಷಿಯಾಯಿತು.
ತಮಗೆ ಅಭಿನಂದನೆಗಳು.

ಸಂಜು . . said...

Congrats Sir ...ತುಂಬಾನೆ ಖುಷಿ ಆಯ್ತು ..!! ಹೀಗೆ ಬರೀತಾ ಇರಿ ಸರ್...

Gubbachchi Sathish said...

Photos alone can explain the function. Congrats Shivu Sir.

ದಿನಕರ ಮೊಗೇರ said...

shivu sir...

congrats sir.... thanks for sharing all photos

Dr.D.T.Krishna Murthy. said...

ಶಿವೂ;ಕಾರ್ಯಕ್ರಮದ ಖುಷಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಅನಂತ ಧನ್ಯವಾದಗಳು.ನಿಮಗೆ ಇನ್ನಷ್ಟು,ಮತ್ತಷ್ಟು ಪ್ರಶಸ್ತಿ,ಪುರಸ್ಕಾರಗಳು ಸಿಗಲಿ ಎಂದು ನಮ್ಮೆಲ್ಲರ ಹಾರೈಕೆ.ನಮಸ್ಕಾರ.

ಮನಸು said...

kushi aytu shivuravare... nimma saadhane sada hasiraagi... uttungakkerali

ಮನದಾಳದಿಂದ............ said...

ಶಿವಣ್ಣ,
ತುಂಬಾ ಖುಶಿಯಾಯ್ತು.......
ನಿಮ್ಮ ಶ್ರಮ, ಸಾಧನೆ ನಮ್ಮಂತವರಿಗೆ ಮಾದರಿಯಾಗಲಿ,
ಅಭಿನಂದನೆಗಳು.

ಮನಸಿನಮನೆಯವನು said...

ಅಭಿನಂದನೆಗಳು..
ಸುನಾಥ್ ಅವರನ್ನು ನೋಡಿ ಸಂತೋಷವಾಯಿತು..

Manju M Doddamani said...

memorable moments :) All the best sir

Unknown said...

Shivu sir.. Nimage abhinandanegalu...

Soumya. Bhagwat said...

ಸುಂದರವಾದ ಚಿತ್ರಗಳಿಗೆ ಧನ್ಯವಾದಗಳು ಸರ್ .. ನಿಮಗೆ ಹಾರ್ದಿಕ ಅಭಿನಂದನೆಗಳು .. :)

sunaath said...

ಶಿವು,
ನಿಮಗೆ ಪ್ರಶಸ್ತಿಗಳು ಹೀಗೇ ಲಭಿಸುತ್ತಾ ಇರಲಿ; ನೀವು ಧಾರವಾಡಕ್ಕೆ ಬರ್ತಾ ಇರಲಿ ಎಂದು ಹಾರೈಸುತ್ತೇನೆ.

ಅನಂತ್ ರಾಜ್ said...

ಅಭಿನ೦ದನೆಗಳು ಶಿವು ಅವರಿಗೆ. ಕಾರ್ಯಕ್ರಮದ ಪರಿಚಯ ಮತ್ತು ಚಿತ್ರಗಳು..ಪ್ರಶಸ್ತಿಗಳು ನಿಮ್ಮನರಸಿ ಬರುತ್ತಿರಲಿ ಎ೦ದು ಹಾರೈಸುತ್ತೇನೆ.

ಶುಭಾಶಯಗಳು
ಅನ೦ತ್

Kalavatimadhisudan said...

ಶಿವುಸರ್,ನಿಮ್ಮ ಪ್ರಶಸ್ತಿ ಪ್ರಧಾನ ಸಮಾರಂಭದ ಸಂಭ್ರಮವನ್ನು ನಮ್ಮೊಂದಿಗೆ ಬ್ಲಾಗ್ ಮೂಲಕ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.ಮತ್ತು ಹಿರಿಯ
ಬ್ಲಾಗಿಗರನ್ನು ಛಾಯಾ ಚಿತ್ರದ ಮೂಲಕ ನೋಡುವ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.

Anonymous said...

Congratulations Shivu.. nimma 'belavanige' heege munduvareyali!

shivu.k said...

ಉಮೇಶ್ ದೇಸಾಯಿ ಸರ್,

ಧಾರವಾಡದ ಅನುಭವವನ್ನು ಬರಹ ಕೊನೆ ಹಂತದಲ್ಲಿದೆ. ಮುಂದಿನ ಫೋಸ್ಟಿಂಗಿಗೆ ಹಾಕುತ್ತೇನೆ. ಫೋಟೊವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಮನಮುಕ್ತ,
ಧಾರವಾಡದ ನಿಜಕ್ಕೂ ಚೆನ್ನಾಗಿತ್ತು. ಅದನ್ನು ಬರೆಯುತ್ತೇನೆ. ಫೋಟೊಗಳು ಚೆನ್ನಾಗಿದೆಯೆನ್ನುವ ನಿಮ್ಮ ಕ್ರೆಡಿಟ್ಟು ನನ್ನ ಗೆಳೆಯರಾದ ಸಲೀಂ ಮತ್ತು ಇಂದ್ರಕುಮಾರ್‍ಗೆ ಸಲ್ಲಬೇಕು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಕುಲದೀಪ್ ಸರ್,

ಥ್ಯಾಂಕ್ಸ್.

shivu.k said...

ಮಹೇಶ್ ಸರ್,

ವೇದಿಕೆ ಮೇಲೆ ಹತ್ತಿರುವುದು ಇದು ಎರಡನೇ ಭಾರಿ. ಮೊದಲನೆಯದು ಗುಬ್ಬಿ ಎಂಜಲು ಪುಸ್ತಕದ ಬಿಡುಗಡೆ ಸಮಯದಲ್ಲಿ. ವಿಡಿಯೋ ಸಿದ್ದವಾಗುತ್ತಿದೆ. ಬ್ಲಾಗಿಗೆ ಹಾಕುತ್ತೇನೆ.

shivu.k said...

ಚುಕ್ಕಿಚಿತ್ತಾರ,

ಧನ್ಯವಾದಗಳು.

shivu.k said...

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ,

ನಿಮ್ಮ ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ನಮ್ಮೊಳಗೊಬ್ಬ ಬಾಲು ಸರ್,

ಸಾಧನಕೇರಿಯ ಅನುಭವ ತುಂಬಾ ಚೆನ್ನಾಗಿದೆ. ಅದರ ಬಗ್ಗೆ ಮುಂದೆ ಬರೆಯುತ್ತೇನೆ. ಮತ್ತೆ ಧಾರವಾಡದ ಪೇಡವನ್ನು ತಂದಿದ್ದೇನೆ.
ಅನಿರೀಕ್ಷಿತ ಕಾರಣಗಳಿಂದಾಗಿ ನನ್ನ ಶ್ರೀಮತಿ ಈ ಕಾರ್ಯಕ್ರಮವನ್ನು ತಪ್ಪಿಸಿಕೊಂಡಳು. ಸುನಾಥರನ್ನು ಬೇಟಿಯಾಗಿದ್ದು ನನಗೂ ತುಂಬಾ ಖುಷಿವಿಚಾರ.
ಅವರಲ್ಲದೇ ದಿವಾಕರ್ ಹೆಗಡೆ, ಖ್ಯಾತ ಕವಿಗಳಾದ ಚೆನ್ನವೀರ ಕಣವಿ, ಸಿದ್ದಲಿಂಗ ಪಟ್ಟಣಸೆಟ್ಟಿ,...ಹೀಗೆ ಅನೇಕರನ್ನು ಬೇಟಿಯಾಗಿದ್ದು ನಿಜಕ್ಕೂ ಮರೆಯಲಾಗದ ಅನುಭವ..
ಧನ್ಯವಾದಗಳು.

shivu.k said...

ಕ್ಷಣಚಿಂತನೆ ಚಂದ್ರು ಸರ್,

ಧನ್ಯವಾದಗಳು.

shivu.k said...

ಸುಶ್ರುತ,

ಸುನಾಥರನ್ನು ಬೇಟಿಯಾಗಿದ್ದು ನನಗೂ ತುಂಬಾ ಖುಷಿ.
ಧನ್ಯವಾದಗಳು.

shivu.k said...

ದಿವ್ಯಾ,

ಅನಾರೋಗ್ಯದ ದೃಷ್ಟಿಯಿಂದಾಗಿ ಅವರು ಯಾವುದೇ ಕಾರ್ಯಕ್ರಮಕ್ಕೆ ಬರುವುದಿಲ್ಲ. ಆದರೂ ನಾನು ಧಾರವಾಡಾಕ್ಕೆ ಬಂದಿದ್ದೇನೆ ಎಂದು ತಿಳಿದು ನನ್ನ ಬೇಟಿಮಾಡಲು ಸೃಜನ ರಂಗಮಂದಿರಕ್ಕೆ ಬಂದಿದ್ದು ಮಾತ್ರ ಅವರು ನಮ್ಮ ಬ್ಲಾಗಿಗರ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ. ಅವರ ಆರೋಗ್ಯ ಚೆನ್ನಾಗಾಗಲಿ ಎಂದು ಹಾರೈಸೋಣ..
ಧನ್ಯವಾದಗಳು.

shivu.k said...

ನಾಗರಾಜ್.ಕೆ.
ಥ್ಯಾಂಕ್ಸ್.

shivu.k said...

ಸೀತಾರಾಂ ಸರ್,

ಥ್ಯಾಂಕ್ಸ್.

shivu.k said...

ಸಂಜು ಸರ್,

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..ಥ್ಯಾಂಕ್ಸ್.

shivu.k said...

ಗುಬ್ಬಚ್ಚಿ ಸತೀಶ್,

ಫೋಟೊಗಳು ನಿಮಗೆ ಕಾರ್ಯಕ್ರಮದ ಅನುಭವವನ್ನು ಕೊಡಬೇಕೆನ್ನುವುದೇ ನನ್ನ ಉದ್ದೇಶ. ಅದು ಈಡೇರಿದೆಯೆಂದು ನಿಮ್ಮ ಅಭಿಪ್ರಾಯದಿಂದ ತಿಳಿದು ಖುಶಿಯಾಯ್ತು..
ಧನ್ಯವಾದಗಳು.

shivu.k said...

ದಿನಕರ್ ಸರ್,

ಫೋಟೊಗಳನ್ನು ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಡಾ.ಕೃಷ್ಣಮೂರ್ತಿ ಸರ್,
ನಿಮ್ಮ ಪ್ರೋತ್ಸಾಹ ನನಗೆ ಮತ್ತಷ್ಟು ಬರಹಕ್ಕೆ ಫ್ರೇರಣೆ ನೀಡುತ್ತಿದೆ. ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

ಸುಗುಣಕ್ಕ,

ನಿಮ್ಮ ಪ್ರೋತ್ಸಾಹಕ್ಕೆ ಮತ್ತು ಅಭಿಮಾನಕ್ಕೆ ಥ್ಯಾಂಕ್ಸ್..

shivu.k said...

ಮನದಾಳದ ಪ್ರವೀಣ್,

ನೀವು ಹೇಳಿದ ಮಾತು ದೊಡ್ಡಮಾತು. ನನಗೆ ಎಲ್ಲರೂ ಪ್ರೇರಣೆ. ಅದಕ್ಕಾಗಿ ನಾನು ಅವರಿಗೆಲ್ಲಾ ಥ್ಯಾಂಕ್ಸ್ ಹೇಳಬೇಕು. ನಿಮ್ಮ ಅಭಿನಂದನೆಗೆ ಥ್ಯಾಂಕ್ಸ್.

shivu.k said...

ಕತ್ತಲೆಮನೆ,

ಥ್ಯಾಂಕ್ಸ್

shivu.k said...

ದೊಡ್ಡಮನಿಮಂಜು,

ನಿಜ ಅದು ಮರೆಯಲಾಗದ ಅನುಭವ. ಧನ್ಯವಾದಗಳು.

shivu.k said...

ರವಿಕಾಂತ್ ಸರ್,

ಥ್ಯಾಂಕ್ಸ್.

shivu.k said...

ಸೌಮ್ಯಮೇಡಮ್,
ನನ್ನ ಬ್ಲಾಗಿಗೆ ಅಪರೂಪಕ್ಕೆ ಬರುವ ನೀವು ಫೋಟೊಗಳನ್ನು ನೋಡಿ ಮೆಚ್ಚಿದ್ದೀರಿ. ಥ್ಯಾಂಕ್ಸ್..

shivu.k said...

ಸುನಾಥ್ ಸರ್,
ಅಲ್ಲಿ ನಿಮ್ಮನ್ನು ಬೇಟಿಯಾಗಿದ್ದು ಮರೆಯಲಾಗದ ಅನುಭವ. ಯಾವುದಾದರೂ ಕಾರಣಕ್ಕೆ ನಾನು ಧಾರವಾಡಕ್ಕೆ ಬರಲು ಇಷ್ಟಪಡುತ್ತೇನೆ. ನಿಮ್ಮ ಹಾರೈಕೆಯಂತೆ ಆದರೆ ನನಗೂ ಖುಷಿ ನೋಡೋಣ ಸರ್.
ಧನ್ಯವಾದಗಳು.

shivu.k said...

ಅನಂತರಾಜ್ ಸರ್,

ನಿಮ್ಮ ಪ್ರೋತ್ಸಾಹ ಮತ್ತು ಹಾರೈಕೆ ಹೀಗೆ ಇರಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು.

shivu.k said...

ಕಲರವ ಮೇಡಮ್,

ಬಹುಮಾನ ವಿತರಣೆ ಕಾರ್ಯಕ್ರಮದ ಫೋಟೊಗಳನ್ನು ತೆಗೆದಿದ್ದು ನನ್ನ ಗೆಳೆಯರು. ಅವರಿಲ್ಲದಿದ್ದಲ್ಲಿ ಖಂಡಿತ ಇದು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಥ್ಯಾಂಕ್ಸ್ ಅವರಿಗೇ ಸಲ್ಲಬೇಕು. ಬ್ಲಾಗಿಗರು ಹೀಗೆ ಎಲ್ಲಾ ವಿಚಾರಗಳಲ್ಲಿ ಸಹಕರಿಸುವುದು ನಿಜಕ್ಕೂ ಬೆಳವಣಿಗೆಯ ವಿಚಾರ. ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

ಸುಮನ ಮೇಡಮ್,
ಥ್ಯಾಂಕ್ಸ್. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

V.R.BHAT said...

ಪೊಗದಸ್ತಾದ ಫೋಟೋಗಳನ್ನು ನೋಡಿ ಸಂಭ್ರಮಿಸಿದೆ,ಹಿರಿಯರಾದ ಸುಧೀಂದ್ರರ ಭೇಟಿ ಕೂಡ ಆಯ್ತಲ್ಲ, ಬಹಳ ಒಳ್ಳೆಯದಾಯಿತು, ಜೈ ಹೋ ! ಶುಭವಾಗಲಿ

ಹಳ್ಳಿ ಹುಡುಗ ತರುಣ್ said...

shivu sir very nice photo... once again congratulation.. mattastu prasasti nimmanarasi barali...

Ittigecement said...

ಶಿವು ಸರ್....

ಒಂದು ಸುಂದರ ಕ್ಷಣಗಳನ್ನು ಚಂದದ ಫೋಟೊಗಳೋಡನೆ ಹಂಚಿಕೊಂಡಿದ್ದೀರಿ...
ನಾವೆಲ್ಲ ಅಲ್ಲಿ ಇರಬೇಕಿತ್ತು ಅನ್ನಿಸಿತು...

ಇರಲಿ ...
ಸಧ್ಯದಲ್ಲೆ ನಾವೆಲ್ಲ ನಿಮ್ಮನ್ನು ಅಭಿನಂದಿಸುವ ಕ್ಷಣಗಳು ಮತ್ತೆ ಬರಲಿವೆ...

ನಿಮ್ಮ ಅನುಭವಗಳನ್ನು ಬರೆಯಿರಿ...
ಕಾರ್ಯಕ್ರಮದ ವಿವರಗಳನ್ನು ತಿಳಿಸಿ...

ಸುನಾಥ ಸರ್ ನೋಡಿ ತುಂಬಾ ಖುಷಿಯಾಯಿತು...

ಜೈ ಹೋ....!!

K said...

ಮೊದಲು ನಿಮಗೆ ಅಭಿನಂದನೆಗಳು. ಚಿತ್ರಗಳನ್ನು ನೋಡಿ ತುಂಬಾ ಸಂತೋಷವಾಯ್ತು. ನಮ್ಮ ಅಣ್ಣನಿಗೆ ಯಾರೋ ಪರಿಚಯದವರು ನಿಮ್ಮ ಬ್ಲಾಗಿನ ಲಿಂಕ್ ಕಳಿಸಿದ್ದರಂತೆ... ನಮಗೆ ನಿಮ್ಮ ಬ್ಲಾಗಿನಲ್ಲಿ ನಮ್ಮ ತಂದೆಯವರ ಚಿತ್ರಗಳನ್ನು ನೋಡುವ ಖುಷಿ. ನಿಮಗೆ ಪ್ರಶಸ್ತಿ ಪ್ರದಾನದ ಹಾಗು ಅದರ ಮೊದಲನೆಯ (೧೪ ಮತ್ತು ೧೫ ನೇ) ಚಿತ್ರದ ಬಲಬದಿಯಲ್ಲಿ ಇರುವವರು ನಮ್ಮ ತಂದೆ ಡಾ. ಬಾಳಣ್ಣ ಸೀಗೀಹಳ್ಳಿ... :) ಇಷ್ಟು ದೂರ ಅಮೇರಿಕಾದಲ್ಲಿ ಇರುವ ನಾನು ಅವರಿಗೆ ಫೋನಿನಲ್ಲಿ 'ಇಂಟರ್ನೆಟ್ಟಿನಲ್ಲಿ ನಿಮ್ಮ ಫೋಟೋ ನೋಡಿದೆ, ಕಾರ್ಯಕ್ರಮ ಚೆನ್ನಾಗಿ ಆಯ್ತಂತೆ' ಎಂದಾಗ ಅವರಿಗೂ ಆಶ್ಚರ್ಯ ಆಗಿದ್ದು ಖುಷಿ ಹೆಚ್ಚಿಸಿತು. ಫೋಟೊಗಳನ್ನ ನೋಡಿ ನನ್ನೂರು ಧಾರವಾಡ ತುಂಬಾ ಮಿಸ್ ಮಾಡ್ಕೊಳ್ತಾ ಇದೀನಿ.

shivu.k said...

ಆತ್ಮೀಯ ಶಿವು,

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ], ಧಾರವಾಡ ಇವರು ನೀಡುವ ಬೇಂದ್ರೆ ಗ್ರಂಥ ಬಹುಮಾನ ಕ್ಕೆ ಪಾತ್ರರಾಗಿರುವುದಕ್ಕೆ ಅಭಿನಂದನೆಗಳು. ನಿಮ್ಮ 'ವೆಂಡರ್ ಕಣ್ಣು' ನಿಜಕ್ಕೂ ಮನಸು ತಟ್ಟುವ ಕೃತಿ. ನಿಮ್ಮ ಈ ಯಶಸ್ಸು ಇನ್ನೂ ವೃದ್ಧಿಸಲಿ. ಬರುವ ದಿನಗಳು ಮತ್ತಷ್ಟು ಗೌರವವನ್ನು ನಿಮಗೆ ತಂದುಕೊಡಲಿ. ಚೈತ್ರರಶ್ಮಿ ಬಳಗದ ಪರವಾಗಿ ನಿಮಗೆ ಆತ್ಮೀಯ ಹಾರ್ದಿಕ ಅಭಿನಂದನೆಗಳು. ಶುಭವಾಗಲಿ ನಿಮಗೆ. ....

ಶುಭ ಹಾರೈಕೆಗಳೊಂದಿಗೆ.....

ರಾಮಚಂದ್ರ ಹೆಗಡೆ ಸಿ.ಎಸ್.

shivu.k said...

ವಿ.ಅರ್ ಭಟ್ ಸರ್,

ನನಗೂ ಕೂಡ ಸುನಾಥ ಸರನ್ನು ಬೇಟಿಯಾಗಬೇಕೆಂಬ ಬಯಕೆ ಈಡೇರಿದ್ದಕ್ಕೆ ತುಂಬಾ ಖುಷಿಯಿದೆ. ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಹಳ್ಳಿ ಹುಡುಗ ತರುಣ್,

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

shivu.k said...

ಪ್ರಕಾಶ್ ಸರ್,

ಧಾರವಾಡದ ಪೂರ ಅನುಭವ ಒಂದು ಸುಂದರ ಕ್ಷಣಗಳೇ ಸರಿ. ಇನ್ನು ಒಂದೆರಡು ದಿನ ಇರಬೇಕೆನ್ನುವ ಬಯಕೆ ಇದ್ದರೂ ಕೆಲಸದ ಒತ್ತಡದಿಂದಾಗಿ ಒಂದೇದಿನಕ್ಕೆ ವಾಪಸ್ಸು ಬರಬೇಕಾಯಿತು. ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಮತ್ತಷ್ಟು ಹೊಸತನ್ನು ಕೊಡಲು ಪ್ರಯತ್ನಿಸುವಂತೆ ಮಾಡಿದೆ...
ಅದಕ್ಕಾಗಿ ಧನ್ಯವಾದಗಳು.

shivu.k said...

k.ಕಾವ್ಯರವರೆ,

ನೀವು ಅಮೇರಿಕಾದಿಂದಲೇ ಇದೆಲ್ಲಾವನ್ನು ನೋಡಿ ಅನಂದಿಸಿದ್ದೀರಿ. ನಿಮ್ಮ ತಂದೆಯವರು ನಮ್ಮ ವೇದಿಕೆಯಲ್ಲಿದ್ದುದ್ದು ನೋಡಿ ನಿಮಗೆ ಖುಷಿಯಾದಂತೆ ನನಗು ಖುಷಿಯಾಗಿದೆ. ಯಾವ ಗೆಳೆತನ ಎಲ್ಲಿಗೆ ಕರೆದೊಯ್ಯುತ್ತದೋ ಬಲ್ಲವರಾರು? ಇದೊಂದರ ಬೆಟ್ಟದ ನೆಲ್ಲಿಕಾಯಿ ಮತ್ತು ಸಮುದ್ರ ಉಪ್ಪಿನ ಗೆಳೆತನವೆನ್ನಬಹುದು. ಫೋಟೊಗಳನ್ನು ನೋಡಿ ಮೆಚ್ಚಿದ್ದಕ್ಕೆ ಮತ್ತು ಧಾರವಾಡದ ನೆನಪುಗಳು ಮರುಕಳಿಸಿದ್ದಕ್ಕೆ ಹಾಗೂ ನಮಗೆ ಅಭಿನಂದಿಸಿದ್ದಕ್ಕೆ ಥ್ಯಾಂಕ್ಸ್.

shivu.k said...

ಸಿ.ಎಸ್.ರಾಮಚಂದ್ರ ಹೆಗಡೆ ಸರ್,

ವೆಂಡರ್ ಕಣ್ಣು ಪುಸ್ತಕದ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ನಾನು ಋಣಿಯಾಗಿದ್ದೇನೆ. ನಿಮ್ಮ ಮಾತುಗಳು ನನಗೆ ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತಿವೆ. ಮತ್ತೊಮ್ಮೆ ನಿಮ್ಮ ಅಭಿನಂದನೆಗೆ ಧನ್ಯವಾದಗಳು.

Badarinath Palavalli said...

ನಮಗೆ ಪ್ರಶಸ್ತಿ ಬಂದ ವಿಷಯ ಪೇಪರ್ನಲ್ಲಿ ಬಂದ ಕೂಡಲೆ ಎಸ್.ಎಂ.ಎಸ್. ಕಳಿಸಿದ್ದೆ ಸರ್. ಅಭಿನಂದನೆಗಳು...

ನಿಮಗೆ ರಾಜ್ಯೋತ್ಸವ ಶುಭಾಶಯಗಳು...

ಸಾಗರದಾಚೆಯ ಇಂಚರ said...

Shivu sir
congrats
we proud of you

Nisha said...

Congratulations, Heege nooraru, saviraru prashastigalu nimmannu huduki kondu barali.

shivu.k said...

ಭದ್ರಿನಾಥ್ ಸರ್,

ನೀವು ಕಳಿಸಿದ ಮೆಸೇಜ್ ಓದಿದ್ದೆ. ಥ್ಯಾಂಕ್ಸ್. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu.k said...

ಗುರುಮೂರ್ತಿ ಹೆಗಡೆ ಸರ್,

ಥ್ಯಾಂಕ್ಸ್..

shivu.k said...

ನಿಷಾ,

ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.

ಜಲನಯನ said...

ಶಿವು ಚಿತ್ರಮಾಲಿಕೆ ನಿಮ್ಮ ಮೂಲಕ ನನಗೆ ಬಹಳದಿನಗಳ (ವರ್ಷಗಳೇ ಆಗಿವೆ) ನಂತರ ಧಾರವಾಡವನ್ನು ತೋರಿಸಿದರೆ, ಪ್ರಶಸ್ತಿ ಪ್ರದಾನ ಸಮಾರಂಭದ ಮೂಲಕ ಸುನಾಥಣ್ಣನ ಫೋಟೋ ನೋಡಿದಂತಾಯ್ತು...ಚನ್ನವೀರ ಕಣವಿಯವರೂ ಇದ್ದರಲ್ಲವೇ..? ಖುಷಿಯಾಯ್ತು...ಇದು ನಿಮ್ಮ ಮೂಲಕ ಬ್ಲಾಗಿಗರಿಗೆ ಸಿಗುತ್ತಿರುವ ಗೌರವ. ಇನ್ನೂ ಹಲವಾರು ಗೌರವಗಳು ನಿಮ್ಮ ಲೇಖನಗಳಿಗೆ ಸಿಗಲಿ.