Sunday, October 3, 2010

ಫೋಟೊಗ್ರಫಿ ವಿಶ್ವಕಪ್.....ಮಿಸ್ ಮಾಡಿಕೊಳ್ಳಬೇಡಿ.




  ಇದೇನಿದೂ ಫೋಟೊಗ್ರಫಿಯಲ್ಲಿ ವಿಶ್ವಕಪ್? ಅಂತ ಈ ಕ್ಷಣ ನಿಮಗನ್ನಿಸಿರಬಹುದು.  ನಿಮಗೆಲ್ಲರಿಗೂ ಪುಟ್‍ಬಾಲ್ ವಿಶ್ವಕಪ್ [ಫಿಪಾ], ಟೆನಿಸ್‍ನಲ್ಲಿ [ಡೇವಿಸ್ ಕಪ್], ಟೇಬಲ್ ಟೆನ್ನಿಸಿನಲ್ಲಿ ವಿಶ್ವಕಪ್, ಕ್ರಿಕೆಟ್ಟಿನಲ್ಲಂತೂ ಒಂದು ದಿನದ ಪಂದ್ಯಾವಳಿಯ ವಿಶ್ವಕಪ್ ಅಲ್ಲದೇ, ೨೦-೨೦ ವಿಶ್ವಕಪ್ ಕೂಡ ನಡೆಯುವುದು ಪುಟ್ಟ ಮಕ್ಕಳಿಗೂ ಗೊತ್ತು.  ಹಾಗಾದರೆ ಈ ಫೋಟೊಗ್ರಫಿ ವಿಶ್ವಕಪ್ ಅಂದರೇನು? ಅದು ಹೇಗಿರುತ್ತದೆ? ತಿಳಿದುಕೊಳ್ಳುವ ಕುತೂಹಲವೇ!  ಬನ್ನಿ ತಿಳಿದುಕೊಳ್ಳೋಣ.



  ಬೆಂಗಳೂರಿನಲ್ಲಿ ಫೋಟೊಗ್ರಫಿಯ ವಿಶ್ವಕಪ್ ನಡೆಯುತ್ತದೆ ಎನ್ನುವ ವಿಚಾರವೇ ನನಗೆ ಒಂಥರ ಥ್ರಿಲ್ ಅನ್ನಿಸಿತ್ತು.  ನಾನು ಒಬ್ಬ ಛಾಯಾಗ್ರಾಹಕನಾಗಿ ವಿದೇಶಗಳಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಫೋಟೊಗ್ರಫಿ ವಿಶ್ವಕಪ್ ಸ್ಪರ್ಧೆಗಳನ್ನು ಓದಿ ತಿಳಿದುಕೊಳ್ಳುತ್ತಿದ್ದೆ. ೨೦೦೬ರಲ್ಲಿ ಯುರೋಪಿನ ಲಕ್ಸಂಬರ್ಗ್‍ನಲ್ಲಿ ನಡೆದ ಪಿಕ್ಟೋರಿಯಲ್ ವಿಶ್ವಕಪ್  ಫೋಟೊಗ್ರಫಿಯಲ್ಲಿ ನಮ್ಮ ಭಾರತಕ್ಕೆ ಚಿನ್ನದ ಪದಕ ಲಭಿಸಿತ್ತು. ಅಲ್ಲಿ ಭಾಗವಹಿಸಿದ್ದ ಹತ್ತು ಚಿತ್ರಗಳಲ್ಲಿ ನನ್ನ "ಮೀನಿನ ಬಲೆ ಎಸೆಯುವ" ಚಿತ್ರವೂ ಸ್ಪರ್ಧಿಸಿದ್ದು ನನಗೆ ಮರೆಯಲಾಗದ ಅನುಭವ.

 
          "ಇಂಟರ್‌ನ್ಯಾಷನಲ್ ಫೆಡರೇಷನ್ ಅಫ್ ಫೋಟೊಗ್ರಫಿಕ್ ಆರ್ಟ್" [ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಲ ಆರ್ಟ್ ಫೋಟೊಗ್ರಫಿಕ್"] ಸಂಸ್ಥೆಯವರು ಎರಡು ವರ್ಷಕ್ಕೊಮ್ಮೆ ಫೋಟೊಗ್ರಫಿ ವಿಶ್ವಕಪ್ಪನ್ನು ವಿವಿದ ದೇಶಗಳಲ್ಲಿ ನಡೆಸುತ್ತಾರೆ. ಇದರ ಮುಖ್ಯ ಕಛೇರಿ ಈಗ ಪ್ಯಾರಿಸ್‍ನಲ್ಲಿದೆ. ವಿಶ್ವದ ಫೋಟೊಗ್ರಫಿಯ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ಯುನೆಸ್ಕೋದಿಂದ ಅಧಿಕೃತವಾಗಿ ಮನ್ನಣೆ ಪಡೆದುಕೊಂಡ ಏಕೈಕ ಫೋಟೊಗ್ರಫಿ ಆರ್ಗನೈಸೇಷನ್ ಇದು.   ವಿಶ್ವದ ಐದು ಖಂಡಗಳ ೮೫ಕ್ಕೂ ಹೆಚ್ಚು ರಾಷ್ಟ್ರಗಳ ಫೋಟೊಗ್ರಫಿ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿವೆ. ಮತ್ತು ಹತ್ತು ಲಕ್ಷಕ್ಕೂ ಹೆಚ್ಚು ಛಾಯಾಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

 ವಿಶ್ವಕಪ್ ಅತಿಥ್ಯವನ್ನು ವಹಿಸಿಕೊಂಡ ದೇಶಕ್ಕೆ ನಾವು ಸ್ಪರ್ಧೆಗಾಗಿ ಫೋಟೋಗಳನ್ನು ಕಳಿಸಬೇಕಲ್ಲವೇ?  ಅದು ಹೇಗೆ ಕಳುಹಿಸಬಹುದು ಎನ್ನುವುದರ ಎಲ್ಲಾ ಹಂತಗಳನ್ನು ತಿಳಿದುಕೊಳ್ಳೋಣ.



 ೨೦೧೦ರಲ್ಲಿ ನಮ್ಮ ಭಾರತ ದೇಶಕ್ಕೆ ನೇಚರ್ ವಿಭಾಗದಲ್ಲಿ ವಿಶ್ವಕಪ್ ಫೋಟೊಗ್ರಫಿ ಸ್ಪರ್ಧೆಯನ್ನು ನಡೆಸುವ ಅವಕಾಶ ಸಿಕ್ಕಿದೆ. ಅದರ ಸಂಪೂರ್ಣ ಜವಾಬ್ದಾರಿ ಮತ್ತು ನಿರ್ವಹಣೆಯನ್ನು ಪ್ರತಿಷ್ಠಿತ ಬೆಂಗಳೂರಿನ ಯೂತ್ ಫೋಟೊಗ್ರಫಿಕ್ ಸೊಸೈಟಿ ವಹಿಸಿಕೊಂಡಿದೆ.  ಮೊದಲಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಛಾಯಾಗ್ರಾಹಕರು  ತಾವು ಕ್ಲಿಕ್ಕಿಸಿದ ಅತ್ಯುತ್ತಮ ನೇಚರ್ ವಿಭಾಗದ ಛಾಯಾಚಿತ್ರಗಳನ್ನು[ಒಬ್ಬರು ಎಷ್ಟು ಚಿತ್ರಗಳನ್ನಾದರೂ ಕಳಿಸಬಹುದು ಆದ್ರೆ ಅತ್ಯುತ್ತಮವಾಗಿರಲೇಬೇಕು] ಈ ಸ್ಪರ್ಧೆಯಲ್ಲಿ ನಮ್ಮ ದೇಶದ ಹೆಸರಿನಲ್ಲಿ ಭಾಗವಹಿಸುವ ಫೋಟೊಗ್ರಫಿ ಸಂಸ್ಥೆಗೆ ಕಳಿಸಬೇಕು. ಹೀಗೆ  ದೇಶದಾದ್ಯಂತ  ಫಿಯಪ್ ಸದಸ್ಯತ್ಯ ಹೊಂದಿರುವ ಫೋಟೊಗ್ರಫಿ[೨೫ಕ್ಕೂ ಹೆಚ್ಚು ಸಂಸ್ಥೆಗಳಿವೆ]ಸಂಸ್ಥೆಗಳ ಎಲ್ಲಾ ಸದಸ್ಯರೂ ಹೀಗೆ ತಮ್ಮ ಅತ್ಯುತ್ತಮ ನೇಚರ್ ವಿಭಾಗದ ಛಾಯಾಚಿತ್ರಗಳನ್ನು ಕಳಿಸುತ್ತಾರೆ.  ದೇಶದ ಎಲ್ಲಾ ಸದಸ್ಯತ್ವ ಹೊಂದಿದ ಒಂದೊಂದು ಸಂಸ್ಥೆಯಿಂದಲೂ ನೂರಾರು ಚಿತ್ರಗಳು ಸೇರಿ ನಮ್ಮ ದೇಶವನ್ನು ಪ್ರತಿನಿಧಿಸುವ ಸಂಸ್ಥೆಗೆ ಸಾವಿರಾರು ಛಾಯಾಚಿತ್ರಗಳು ಬರುತ್ತವೆ.  ಅಷ್ಟು ಚಿತ್ರಗಳಲ್ಲಿ ಒಂದು ದೇಶವನ್ನು ಪ್ರತಿನಿಧಿಸಲು ಹತ್ತು ಚಿತ್ರಗಳಿಗೆ ಮಾತ್ರ ಅವಕಾಶ ಮತ್ತು ಒಬ್ಬ ಛಾಯಾಗ್ರಾಹಕನ ಒಂದು ಚಿತ್ರ ಮಾತ್ರ ಆಯ್ಕೆಯಾಗಲು ಸಾಧ್ಯ. ಇವೆಲ್ಲಾ ಚಿತ್ರಗಳಲ್ಲಿ ನಮ್ಮ ದೇಶಕ್ಕೆ ವಿಶ್ವಕಪ್ ಗೆದ್ದು ಕೊಡುವ ಹತ್ತು ಅತ್ಯುತ್ತಮ ಚಿತ್ರಗಳನ್ನು ಆರಿಸುವ ಜವಾಬ್ದಾರಿ ಈಗ ಆ ಸಂಸ್ಥೆಯ ಮೇಲಿರುತ್ತದೆ. ನಮ್ಮ ಶಾಲಾ-ಕಾಲೇಜು, ಗ್ರಾಮೀಣ ಮತ್ತು ನಗರ ಮಟ್ಟದಲ್ಲಿ ಪ್ರತಿನಿಧಿಸಿದ ನಮ್ಮ ಕ್ರಿಕೆಟ್ ಪ್ರತಿಭೆಗಳನ್ನು ರಾಜ್ಯಮಟ್ಟದಲ್ಲಿ ಆಯ್ಕೆ ಮಾಡಿ ಅದರೊಳಗೆ ರಾಷ್ಟ್ರಮಟ್ಟಕ್ಕೆ ನಮ್ಮ ಸಚಿನ್, ದ್ರ್‍ಆವಿಡ್, ಸೆಹ್ವಾಗ್, ದೋನಿ.................ಹನ್ನೊಂದು ಜನರು ಮಾತ್ರ ಆಯ್ಕೆಯಾದಂತೆ ಇಲ್ಲಿಯೂ ಅದೇ ರೀತಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.  ವಿಶ್ವಕಪ್‍ನಲ್ಲಿ ನಿಮ್ಮ ಒಂದು ಚಿತ್ರವೂ ಸ್ಪರ್ಧೆಗೆ ಆಯ್ಕೆಯಾಗಬೇಕಾದರೆ ಅದರಲ್ಲಿ ನಿಮ್ಮ ಸಾಧನೆ, ಶ್ರಮ ಎಂಥದಿರಬೇಕೆನ್ನುವುದು ನಿಮ್ಮ ಊಹೆಗೆ ಬಿಟ್ಟಿದ್ದು.

 ಯ್ಕೆಯಾಗುವ ಚಿತ್ರಗಳೆಲ್ಲಾ ಅತ್ಯುತ್ತಮವೆಂದುಕೊಂಡರೂ ತಂಡರೂಪದಲ್ಲಿ ಪದಕ ಗೆಲ್ಲಬೇಕಲ್ಲವೇ!  ಕ್ರಿಕೆಟ್ಟಿನಲ್ಲಿ ಅತ್ಯುತ್ತಮ ನಾಯಕ ದೋನಿ ಇದ್ದರೆ ಸಾಲದು. ಪಂದ್ಯ ಗೆಲ್ಲಲೂ ಅತ್ಯುತ್ತಮ ೫ ಬ್ಯಾಟ್ಸ್‍ಮೆನ್‍ಗಳು, ಮೂವರು ವೇಗದ ಮತ್ತು ೧-೨ ಸ್ಪಿನ್ ಬೌಲರುಗಳು, ಉತ್ತಮ ಮತ್ತು ಅನುಭವವುಳ್ಳ ವಿಕೆಟ್ ಕೀಪರುಗಳು, ಅವರೊಳಗೆ ಪ್ರತಿಭಾನ್ವಿತ ಫೀಲ್ಡರುಗಳು, ಆಲ್‍ರೌಂಡರುಗಳೆಲ್ಲಾ ಇದ್ದಲ್ಲಿ ಒಂದು ಪ್ರತಿಭಾನ್ವಿತ ಸಮತೋಲನದ ತಂಡವೆನಿಸಿಕೊಳ್ಳುವಂತೆ  ಈ ಫೋಟೊಗ್ರಫಿ ಸ್ಪರ್ಧೆಯಲ್ಲೂ  ಇದೇ ರೀತಿಯಲ್ಲಿ ಸಮತೋಲನ ಹೊಂದಿದ ಹತ್ತು ಚಿತ್ರಗಳಿರಬೇಕಾಗುತ್ತದೆ.  ಸೆಹ್ವಾಗ್ ನೂರು ಬಾಲಿನಲ್ಲಿ ಇನ್ನೂರು ಹೊಡೆದಾಗ ನಾವು ಮೆಚ್ಚಿ ಕೊಂಡಾಡಿದಂತೆ, ಇಲ್ಲಿ ಒಂದು ಛಾಯಾಚಿತ್ರವೂ ತನ್ನನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕನ ಹಲವು ವರ್ಷಗಳ ಸಾಧನೆ, ಪ್ರತಿಭೆ, ಕ್ಲಿಕ್ಕಿಸುವ ಸಮಯದಲ್ಲಿನ ತ್ವರಿತ ತಾಂತ್ರಿಕತೆ, ಆ ಸಮಯದಲ್ಲಿ ಆತನ ಮನಸ್ಥಿತಿ, ಎದುರಿಸಿದ ಗಂಭೀರ ಅಪಾಯಗಳು, ಆತನ ಕಾಯುವಿಕೆಯ ತನ್ಮಯತೆ, ಇತ್ಯಾದಿಗಳನ್ನು ಕ್ಷಣಮಾತ್ರದಲ್ಲಿ ತೀರ್ಪುಗಾರರ ಮನಸ್ಸಿನಲ್ಲಿ ಮೂಡಿಸಬೇಕು.

 ಇದರ ನಂತರದ ಹಂತವೇ ಕೋಹರೆನ್ಸ್ ಇದನ್ನು ಕನ್ನಡದಲ್ಲಿ ಸಮತೋಲನ, ವಿವಿಧ್ಯತೆಯಲ್ಲಿ ಏಕತೆ ಎನ್ನುತ್ತಾರೆ. ಅದು ಹೇಗೆ ಎಂದು ತಿಳಿದುಕೊಳ್ಳೋಣ.  ನೇಚರ್ ವಿಭಾಗದಲ್ಲಿ ಲ್ಯಾಂಡ್‍ಸ್ಕೇಪ್, ಪಕ್ಷಿಗಳು, ಕಾಡುಪ್ರಾಣಿಗಳು, ಕೀಟಲೋಕ, ಸಸ್ಯಗಳು,...........ಹೀಗೆ ಹತ್ತಾರು ವಿಭಾಗಗಳಿವೆ. ಇಷ್ಟು ವಿಭಾಗಗಳಲ್ಲಿ ನಾವು ಸ್ಪರ್ಧೆಗೆ ಕಳಿಸಲು ಒಂದು ವಿಭಾಗವನ್ನು ಮಾತ್ರ ಆಯ್ಕೆಮಾಡಿಕೊಳ್ಳಬೇಕು.  ಉದಾಹರಣೆಗೆ  ಕಾಡುಪ್ರಾಣಿಗಳ ಚಿತ್ರಗಳನ್ನು ಆಯ್ಕೆ ಮಾಡಿಕೊಂಡರೆ ಹತ್ತು ಚಿತ್ರಗಳು ಕಾಡುಪ್ರಾಣಿಗಳದೇ ಆಗಿರಬೇಕು. ಅದರಲ್ಲಿ ಚಿಟ್ಟೆಗಳ, ಪಕ್ಷಿಗಳ, ಪ್ರಕೃತಿಯ ಚಿತ್ರಗಳು ಇರುವಂತಿಲ್ಲ. ಬೇಕಾದರೆ ಹುಲಿ, ಚಿರತೆ, ಸಿಂಹ, ತೋಳ, ಕಾಡುಬೆಕ್ಕು, ಕಾಡುನಾಯಿ,...........ಹೀಗೆ ಹತ್ತು ಬಗೆಯವು ಇದ್ದರೂ ಅವೆಲ್ಲಾ ಕಾಡುಪ್ರಾಣಿಗಳೇ ಆಗಿರಬೇಕು.  ಹಾಗೆ ಹದ್ದು, ಗಿಡುಗ, ಮೈನಾ, ರಣಹದ್ದು, ಕಿಂಗ್‍ಫಿಷರ್, ಹಾರ್ನಬಿಲ್...........ಹತ್ತು ವೈವಿಧ್ಯಮಯ ಪಕ್ಷಿಗಳಿದ್ದರೂ ಅವುಗಳ ನಡುವೆ ಪ್ರಾಣಿಗಳ, ಕೀಟಗಳ ಚಿತ್ರಗಳು ಸೇರಿರಬಾರದು.  ಒಂದು ಹದ್ದು ತಾನು ಹಿಡಿದು ತಂದ ಹಾವನ್ನು ಬಾಯಲ್ಲಿ ಕಚ್ಚಿಕೊಂಡು ಕುಳಿತಿದ್ದರೇ ಉಳಿದ ಎಲ್ಲಾ ಒಂಬತ್ತು ಚಿತ್ರಗಳಲ್ಲಿರುವ ವಿವಿಧ ಹಕ್ಕಿಗಳೂ ಕೂಡ ತಮ್ಮ ಬಾಯಲ್ಲಿ ತಮಗಿಷ್ಟವಾದ ಆಹಾರವನ್ನು ಹಿಡಿದು ತಂದ ಚಿತ್ರಗಳಿರಬೇಕು.  ಮತ್ತೆ ಎಲ್ಲಾ ಚಿತ್ರಗಳ ಹಿನ್ನೆಲೆ ಬಣ್ಣಗಳು ಒಂದೇ ತೆರನಾಗಿದ್ದಲ್ಲಿ ತಂಡದ  ಅಂಕ ಹೆಚ್ಚಾಗುತ್ತದೆ. ಮತ್ತೆ ಕ್ಲಿಕ್ಕಿಸುವಾಗಿನ ತಾಂತ್ರಿಕತೆ ಒಂದೇ ಆಗಿದ್ದಲ್ಲಿ ಅದೂ ತಂಡದ ಅಂಕಗಳು ಹೆಚ್ಚಿಸುವಲ್ಲಿ ಸಹಾಯಮಾಡುತ್ತವೆ.  ಹೀಗೆ "ಚಲನೆಯಲ್ಲಿರುವ ಎರಡು ಪಕ್ಷಿಗಳು" "ಕಾಡುಪ್ರಾಣಿಯ ಬಾಯಲ್ಲಿ ಬೇಟೆ" "ಚಿಟ್ಟೆಗಳ ಪ್ರಪಂಚ"  ಹಿಮ ಆವರಿಸಿದ ಬೆಟ್ಟಗುಡ್ಡಗಳು, ಹೀಗೇ ನೂರಾರು ವಿಭಾಗದಲ್ಲಿ ಫೋಟೊಗಳನ್ನು ಕಳಿಸಬಹುದು.  ಇದೆಲ್ಲವೂ ಪ್ರಿಂಟ್ ವಿಭಾಗದ ಸ್ಪರ್ಧೆಯಾಯಿತು.


 ಮುಂದುವರಿದ ತಂತ್ರಜ್ಞಾನದ ನಿಟ್ಟಿನಲ್ಲಿ ಹೊಸದಾಗಿ ಸೇರಿಕೊಂಡ ಮತ್ತೊಂದು ವಿಭಾಗವೆಂದರೆ ಪ್ರೊಜೆಕ್ಟೆಡ್ ಇಮೇಜ್ ವಿಭಾಗ. ಇದರಲ್ಲಿ ಛಾಯಾಚಿತ್ರಗಳನ್ನು ಸಿಡಿಗಳಲ್ಲಿ ಸಾಪ್ಟ್ ಕಾಪಿಯಾಗಿ ಕಳಿಸಬೇಕು. ಇದಕ್ಕೂ ಪ್ರಿಂಟ್ ವಿಭಾಗದ ನಿಯಮಗಳೇ ಅನ್ವಯವಾದರೂ ಇದರಲ್ಲಿ ಇಪ್ಪತ್ತು ಚಿತ್ರಗಳು ಸ್ಪರ್ಧೆಗೆ ಭಾಗವಹಿಸುವುದಕ್ಕೆ ಅವಕಾಶ.  ಹಾಗೆ ಒಬ್ಬ ಛಾಯಾಗ್ರಾಹಕನಿಗೆ ಎರಡು ಚಿತ್ರಗಳನ್ನು ಸ್ಪರ್ಧೆಗೆ ಕೊಡಲು ಅವಕಾಶ.


 ಇಂಥ ಒಂದು ವಿಶ್ವಕಪ್ ಸ್ಪರ್ಧೆಯನ್ನು ಫೆಡರೇಷನ್ ಅಪ್ ಇಂಡಿಯನ್ ಫೋಟೊಗ್ರಫಿ ಸಂಸ್ಥೆಯ ವತಿಯಿಂದ ನಮ್ಮ ಬೆಂಗಳೂರಿನ ಪ್ರತಿಷ್ಟಿತ ಫೋಟೊಗ್ರಫಿ ಸಂಸ್ಥೆಯಾದ "ಯೂತ್ ಫೋಟೊಗ್ರಫಿ ಸೊಸೈಟಿ"ಗೆ ನಡೆಸುವ ಅವಕಾಶ ಸಿಕ್ಕಿತ್ತು. ವಿಶ್ವದಾದ್ಯಂತ ೩೨ ದೇಶಗಳ ೫೭೦ ಛಾಯಾಗ್ರಾಹಕರ ೮೫೦ಕ್ಕೂ ಹೆಚ್ಚು ಪ್ರಿಂಟ್ ಮತ್ತು ಸಾಪ್ಟ್‍ಕಾಪಿಯಲ್ಲಿನ ಛಾಯಾಚಿತ್ರಗಳು ಫೈನಲ್ ಅಂತಕ್ಕೆ ಆಯ್ಕೆಯಾಗಿದ್ದವು.


 ಈ ಸ್ಪರ್ಧೆಗೆ ತೀರ್ಪುಗಾರರಾಗಿ ಸೌತ್ ಆಫ್ರಿಕಾದಿಂದ ಜಿಲ್ ಸ್ನೀಸ್ಬೆ ಇಎಸ್‍ಎಫ್‍ಐಎಪಿ,  ಪ್ರಾನ್ಸಿನಿಂದ ಜಾಕಿ ಮಾರ್ಟಿನ್ ಇಎಫ್‍ಐಅಪಿ, ಇಟಲಿಯಿಂದ ರೆಕಾರ್ಡೋ ಬುಸಿ ಎಮ್‍ಎಫ್‍ಐಎಪಿ, ನಮ್ಮ ಭಾರತ ದೇಶದಿಂದ ಬೆಂಗಳೂರಿನ ಖ್ಯಾತ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ ಎಮ್‍ಎಫ್‍ಐಎಪಿ, ಟಿ.ಎನ್.ಎ.ಪೆರುಮಾಳ್ ಎಮ್‍ಎಫ್‍ಐಎಪಿ. ಆಯ್ಕೆಯಾಗಿದ್ದರು. ಸೆಪ್ಟಂಬರ್ ೧೦ ಮತ್ತು ೧೧ರಂದು ಬೆಂಗಳೂರ್‍ರಿನ ತಾಜ್ ವೆಸ್ಟೆಂಡ್ ಹೋಟಲಿನಲ್ಲಿ ಸ್ಪರ್ಧೆಯ ತೀರ್ಪುಗಾರಿಕೆ ನಡೆಯಿತು.  


 ಪ್ರಿಂಟ್ ವಿಭಾಗದಲ್ಲಿ ಇಟಲಿ ಕೂದಲೆಳೆಯ ಅಂತರದಲ್ಲಿ ವಿಶ್ವಕಪ್ ಗೆದ್ದರೆ, ನಮ್ಮ ಭಾರತ ಚಿನ್ನದ ಪದಕ, ಪ್ರಾನ್ಸಿಗೆ ಬೆಳ್ಳಿ ಪದಕ, ಸ್ಕಾಟ್‍ಲೆಂಡಿಗೆ ಕಂಚು ಲಭಿಸಿತು. ನಂತರ ಉಳಿದ ಆರು ಸ್ಥಾನಗಳನ್ನು ಸೌತ್ ಆಫ್ರಿಕ, ಐರ್‌ಲ್ಯಾಂಡ್, ಟರ್ಕಿ, ಸ್ಯಾನ್ ಮೆರಿನೋ, ಬೆಲ್ಜಿಯಂ, ಆಸ್ಟ್ರಿಯ ಪಡೆದವು.

 ಇನ್ನೂ ಪ್ರೊಜೆಕ್ಟೆಡ್ ಇಮೇಜ್ ವಿಭಾಗದಲ್ಲಿ ಭಾರತ ವಿಶ್ವಕಪ್ ಗಳಿಸಿದರೆ, ಚಿನ್ನದ ಪದಕವನ್ನು ಇಟಲಿ ಗೆದ್ದಿತು. ಇಲ್ಲೂ ಕೂಡ ಕೂದಲೆಳೆಯ ಅಂತರ ಉತ್ತಮ ಸ್ಪರ್ಧೆ ಏರ್ಪಟ್ಟಿತ್ತು.  ಮೂರನೆ ಸ್ಥಾನದಲ್ಲಿ ಸೌತ್ ಅಫ್ರಿಕಾಗೆ ಬೆಳ್ಳಿ ಪದಕ, ನಾಲ್ಕನೇ ಸ್ಥಾನದ ಪ್ರಾನ್ಸಿಗೆ ಕಂಚು ಲಭಿಸಿತು. ಉಳಿದ ಆರು ಸ್ಥಾನಗಳು ಕ್ರಮವಾಗಿ ಸ್ಕಾಟ್‍ಲ್ಯಾಂಡ್, ಆಷ್ಟ್ರೀಯ, ಜರ್ಮನಿ, ಐರ್‌ಲ್ಯಾಂಡ್, ಟರ್ಕಿ, ಮತ್ತು ಹತ್ತನೇ ಸ್ಥಾನವನ್ನು ಫಿನ್‍ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್ ಹಂಚಿಕೊಂಡವು. ನೇಚರ್ ಫೋಟೊಗ್ರಫಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಭಾರತ ಬೇರೆ ದೇಶಗಳನ್ನು ಮೀರಿಸಿ ವಿಶ್ವಕಪ್ ಮತ್ತು ಪದಕಗಳನ್ನು ಗೆಲ್ಲುತ್ತಿದೆ!  ನಮ್ಮ ದೇಶದಿಂದಲೂ ಉತ್ತಮ ನೇಚರ್ ಛಾಯಾಗ್ರಾಹಕರು ಬಹುಮಾನ ಗಳಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.

 ವೈಯಕ್ತಿಕ ವಿಭಾಗದಲ್ಲಿ ಪ್ರಾನ್ಸಿನ ಆಲ್ಬರ್ಟ್ ಫರ್ನಾಂಡ್ ತಮ್ಮ ಚಿತ್ರವಾದ "ಡ್ಯಾನ್ಸಿಂಗ್ ಬರ್ಡ್ಸ್" ಚಿತ್ರಕ್ಕೆ ಚಿನ್ನದ ಪದಕ,  ಬೈಲೋರಷ್ಯಾದ ಸಾಯಿರಿಯಾ ಗ್ರೇಜ್ ತಮ್ಮ "ಹಾರೆ" ಎನ್ನುವ ಕಾಡು ಪ್ರಾಣಿಯ ಚಿತ್ರಕ್ಕೆ ಹಾಗು ಭಾರತದ ಬಾಬಿ ನೋಬಿಸ್ ತಮ್ಮ "ಬೇಟೆಯೊಂದಿಗೆ ಚಿರತೆ" ಚಿತ್ರಕ್ಕೆ ಬೆಳ್ಳಿಯ ಪದಕ, ಭಾರತದ ಮಂದಣ್ಣ ಕೆ.ಎ. ಬೈಲೋರಷ್ಯಾದ ಸಿಯಾಗೆಜ್ ಪ್ಲೆಕೆವಿಚ್, ಸೆರ್ಬಿಯಾದ ಲಾಡನೋವಿಕ್ ಡಾರಿಂಕ ಕಂಚಿನ ಪದಕಗಳನ್ನು ಪಡೆದರು.

 ಪ್ರೊಜೆಕ್ಟೆಡ್ ಇಮೇಜ್ ವಿಭಾಗದಲ್ಲಿ ಇಟಲಿಯ ಬಿಯಾಂಚೇಡಿ ಪ್ಲಾವಿಯೋ ತಮ್ಮ ಚಿತ್ರ "ಅಲ್ಬೆನೆಲ್ಲಾ" ಕ್ಕೆ ಚಿನ್ನದ ಪದಕ,  ಪ್ರಾನ್ಸಿನ ಮ್ಯಾಗ್ನಾಲ್ಡೋ ಅಲಿಸ್ಟೇರ್ ತಮ್ಮ ಚಿತ್ರ "ಲಿಂಕ್ ಡಿ ಯುರೋಪ್" ಚಿತ್ರಕ್ಕೆ ಬೆಳ್ಳಿಪದಕ, ಬೋಸ್ನಿಯಾ ಅರ್ಜೆಗೋವಿನಾದ ಸ್ಲಿಜೀವ್ ಹುಸೇನ್ ತಮ್ಮ ಚಿತ್ರ "ಒನ್ ಇಸ್ ಎಕ್ಸಸೀವ್" ಚಿತ್ರಕ್ಕೆ ಕಂಚಿನ ಪದಕ ಪಡೆದರು.


  ಇದಲ್ಲದೇ ಕೆಲವು ವೈಯಕ್ತಿಕ ಪ್ರಶಸ್ತಿಗಳ ವಿವರ ಹೀಗಿವೆ.

 ಅತ್ಯುತ್ತಮ ಕಾಡುಪ್ರಾಣಿ ಚಿತ್ರ: "ಲೆಟ್ ಮಿ ಟ್ರೈ"  ಶ್ರೀಲಂಕಾದ  ಬಂಡುಗುಣರತ್ನೆ


ಅತ್ಯುತ್ತಮ ಪಕ್ಷಿ ಚಿತ್ರ   :  "ಮರಬು"   ಇಟಲಿಯ ಬಾರ್ತಲೋನಿ ರಾಬರ್ಟೋ



 ಅತ್ಯುತ್ತಮ ಲ್ಯಾಂಡ್‍ಸ್ಕೇಪ್ ಚಿತ್ರ: "ರಸ್"   ಸೌತ್ ಅಫ್ರಿಕಾದ ಕೋಬಸ್ ಪಿಟ್ಜಿಯೇಟರ್



  ಅತ್ಯುತ್ತಮ ಮ್ಯಾಕ್ರೋ ಕೀಟ ಚಿತ್ರ : "ಹುಳು" ಟರ್ಕಿಯ ಕಾಕಿರ್ ಮೆಹಮತ್


 ಅತ್ಯುತ್ತಮ ವಾತಾವರಣದ ಭಾವನೆಯನ್ನು ಮೂಡಿಸುವ ಕಾಡಿನ ಚಿತ್ರ: "ಚಳಿಗಾಲದ ಬೆಳಕು" ಚಿತ್ರಕ್ಕಾಗಿ ಫಿನ್‍ಲ್ಯಾಂಡಿನ ಇಲ್ಕಾ ಇಸ್ಕನೆನ್ ಪ್ರಶಸ್ತಿ ಪಡೆದರು.







 ೨೦೧೦ರ ಮರ್ಸಿಡೀಸ್ ಬೆಂಜ್ ವಿಶ್ವಕಪನ್ನು ಇಟಲಿ ದೇಶ ಗೆದ್ದಿತು.


 ಎಲ್ಲಾ ವಿಭಾಗದಲ್ಲೂ ಉತ್ತಮ ಅಂಕಗಳಿಸಿ ಸಮಗ್ರ ಪ್ರದರ್ಶನವನ್ನು ತೋರಿದ ಇಟಲಿ ೨೦೧೦ನೇ ಮರ್ಸಿಡೀಸ್ ಬೆಂಜ್ ಪೋಟೊಗ್ರಫಿ ವಿಶ್ವಕಪನ್ನು ಗೆದ್ದುಕೊಂಡಿತು.




 ವಿಶ್ವಕಪ್ ಫೋಟೊಗ್ರಫಿಯ ಉದ್ಘಾಟನೆ ಕಾರ್ಯಕ್ರಮ ಇದೇ ಆಕ್ಟೋಬರ್ ಏಳರಂದು ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ. ಬಹುಮಾನ ವಿಜೇತ ಚಿತ್ರಗಳಲ್ಲದೇ ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನವೂ ಆಕ್ಟೋಬರ್ ಏಳರಿಂದ ಹನ್ನೊಂದರವರೆಗೆ ನಡೆಯಲಿದೆ. ವನ್ಯ ಜೀವಿ ಆಸಕ್ತರೂ ಮತ್ತು ಛಾಯಾಭಿಮಾನಿಗಳಿಗೆಲ್ಲಾ ಅತ್ಯುತ್ತಮ ಚಿತ್ರಗಳನ್ನು ನೋಡುವ ಅವಕಾಶ. ಯಶಸ್ವಿಯಾಗಿ ಫೋಟೊಗ್ರಫಿ ವಿಶ್ವಕಪ್ ಕಾರ್ಯಕ್ರಮವನ್ನು ನಡೆಸುತ್ತಿರುವುದರಿಂದ ನಮ್ಮ ಬೆಂಗಳೂರಿನ ಯೂತ್ ಫೋಟೊಗ್ರಫಿ ಸಂಸ್ಥೆಗೆ ಮತ್ತೊಂದು ಹಿರಿಮೆಯ ಗರಿ.

[ಇವತ್ತು  ವಿಜಯಕರ್ನಾಟಕದ ಸಾಪ್ತಾಹಿಕ ಲವವಲಿಕೆಯ ಎರಡನೇ ಪುಟದಲ್ಲಿ ಈ ಲೇಖನ ಪ್ರಕಟವಾಗಿದೆ. ಅದಕ್ಕೆ ಮತ್ತಷ್ಟು ಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿ ಪ್ರಕಟಿಸಿದ್ದೇನೆ..]


ಚಿತ್ರಗಳು ಮತ್ತು ಲೇಖನ
ಶಿವು.ಕೆ.

51 comments:

sunaath said...

ಶಿವು,
ನಿಮ್ಮ ಲೇಖನ ಓದುತ್ತಿದ್ದಂತೆ ಹಾಗು ಚಿತ್ರಗಳನ್ನು ನೋಡುತ್ತಿದ್ದಂತೆ ಒಂದು ಅದ್ಭುತ ಲೋಕವನ್ನೇ ಪ್ರವೇಶಿಸಿದಂತಾಯಿತು. ನಿಮ್ಮ ಚಿತ್ರವು ಭಾರತದ ಚಿತ್ರಗಳಲ್ಲಿ ಆಯ್ಕೆಯಾಗಿದ್ದು ಸಂತಸದ ಸಂಗತಿ. ನಿಮಗೆ ಅಭಿನಂದನೆಗಳು.

PARAANJAPE K.N. said...

ನಿಮ್ಮ ಲೇಖನ ಇ೦ದು ಬೆಳಗ್ಗೆ ವಿ.ಕ.ದಲ್ಲಿ ಓದಿದೆ, ಖುಷಿ ಆಯ್ತು. ಈಗ ಬ್ಲಾಗಿನಲ್ಲಿ ಮತ್ತಷ್ಟು ಛಾಯಾಚಿತ್ರ ನೋಡಿ ಮುದಗೊ೦ಡೆ.

ಹಳ್ಳಿ ಹುಡುಗ ತರುಣ್ said...

shivu sir,

belagge paper alli nodidde yeno vishvakap anta.. odirlilla ivaga nim blog alli odide.. ondu uttama mahiti.. mattu 2006ralli nimma photonu india annu pratiniddisi chinada padakka padididdu ondu kushiya vichar amattu nimma saddaneya ondu mettilu... mattastu nimma saddane mudibarali... namagu photograph worl cup bagge tilisidakke danyavaada... nimma sadane munduvariyali.. all the best...

umesh desai said...

ಬೆಳಿಗ್ಗೆ ವಿಕದಲ್ಲಿ ಓದಿದೆ ನಿಮ್ಮ ಬ್ಲಾಗೂ ಈಗ ಓದುತ್ತಿರುವೆ. ನಿಮ್ಮ ಚಿತ್ರವು ಅಯ್ಖೇಯಘೀಡ್ಡೂ ಓದಿ ಖುಷಿಯಾಗಿದೆ
ಅಭಿನಂದನೆಗಳು.

shivu.k said...

ಸುನಾಥ್ ಸರ್,

ನನ್ನ ಉದ್ದೇಶ ಎಲ್ಲರೂ ಫೋಟೊಗ್ರಫಿಯ ಬಗ್ಗೆ ತಿಳಿದು ಅದನ್ನು ನೋಡಿ ಖುಷಿಪಡಬೇಕೆನ್ನುವುದು. ನಾಲ್ಕು ವರ್ಷದ ಹಿಂದೆ ನಾನು ವಿಶ್ವಕಪ್‍ಗೆ ಕಳಿಸಿದ್ದೆ. ಈ ಬಾರಿ ನಾನು ಭಾಗವಹಿಸಿಲ್ಲ. ನಿಮ್ಮ ಅನಿಸಿಕೆಗೆ ಧನ್ಯವಾದಗಳು.

shivu.k said...

ಪರಂಜಪೆ ಸರ್,
ವಿ.ಕ ಪೇಪರಿನಲ್ಲಿ ನನ್ನ ಲೇಖನ ಬಂದರೂ ಒಂದೇ ಚಿತ್ರ ಬಂದಿತ್ತಾದ್ದರಿಂದ ಬ್ಲಾಗಿನಲ್ಲಿ ಹೆಚ್ಚು ಚಿತ್ರಗಳನ್ನು ಹಾಕಿದೆ. ನೋಡಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಹಳ್ಳಿ ಹುಡುಗ ನವೀನ್,

ಪೇಪರಿನಲ್ಲಿ ಬರುವು ವಿಚಾರ ನನಗೆ ಖಚಿತವಿರಲಿಲ್ಲ. ನಿನ್ನೆ ಸಂಜೆ ಗೊತ್ತಾಯಿತು. ಮತ್ತೆ ಫೋಟೊಗಳು ಹೆಚ್ಚು ಬರಲಿಲ್ಲವಾದ್ದರಿಂದ ಬ್ಲಾಗಿನಲ್ಲಿ ಹಾಕಿದೆ. ಹಾಗೂ ಫೋಟೊಗ್ರಫಿಯ ಬಗ್ಗೆ ಯಾವ ಪತ್ರಿಕೆಗಳು ಹೆಚ್ಚಾಗಿ ಬರೆಯುವುದಿಲ್ಲ ಮತ್ತು ಮಾಹಿತಿಯನ್ನು ನೀಡುವುದಿಲ್ಲವಾದ್ದರಿಂದ ಇದೆಲ್ಲವನ್ನು ತಿಳಿಸಲು ಬ್ಲಾಗ್ ಎಷ್ಟು ಉಪಯೋಗವಲ್ಲವೇ! ನಿಮ್ಮ ಅನಿಸಿಕೆಗೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು.

shivu.k said...

ಉಮೇಶ್ ದೇಸಾಯ್ ಸರ್,

ಬೆಳಿಗ್ಗೆ ಪೇಪರಿನಲ್ಲಿ ಓದಿ ಮತ್ತೆ ಬ್ಲಾಗಿನಲ್ಲಿ ಓದಿದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

ಚಿನ್ಮಯ said...

ಲೇಖನ ತುಂಬಾ ಚೆನ್ನಾಗಿದೆ.
ವಿಶ್ವದಲ್ಲೇ ಆಯ್ದ ಚಿತ್ರಗಳು ಅಂದರೆ ಯಾವ ಮಟ್ಟದಲ್ಲಿ ಇರಬಹುದು ಅನ್ನೋದನ್ನ ಯೋಚನೆ ಮಾಡಲು ಕಷ್ಟ. ನಿಮ್ಮ ಫೋಟೋ ಕೂಡ ಆಯ್ಕೆಯಾಗಿತ್ತು ಅನ್ನೋದನ್ನ ಕೇಳಿ ತುಂಬಾ
ಸಂತೋಷವಾಯಿತು.
ಈ ಸಲದ ಇನ್ನಸ್ಟು ಫೋತೋಗಳನ್ನು ಹಾಕಿ ಪ್ಲೀಸ್!

Narayan Bhat said...

ವಿಶ್ವಕಪ್ ಫೋಟೊಗ್ರಫಿಯ ಪ್ರದರ್ಶನದಬಗ್ಗೆ ನಿಲಿಸಿದ್ದಕ್ಕೆ ಕೃತಜ್ಞತೆಗಳು. ಈ ಪ್ರದರ್ಶನವನ್ನು ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದೆಂದು ಅಂದುಕೊಂಡಿದ್ದೇನೆ.

ಸಾಗರದಾಚೆಯ ಇಂಚರ said...

ಸರ್

ಎಂಥಹ ಅದ್ಭುತ ವ್ಯಕ್ತಿಗಳಲ್ವಾ
ಅವರ ಕ್ಯಾಮೆರಾ ಮಾತಾಡುತ್ತೆ
ಫೋಟೋಗಳು ಕಣ್ಣಿಗೆ ಸೌಂದರ್ಯದ ರಾಶಿಯನ್ನೇ ನೀಡಿವೆ

AntharangadaMaathugalu said...

ಪತ್ರಿಕೆಯಲ್ಲಿ ನೋಡಿದ್ದೆ ಶಿವು ಸಾರ್. ಬ್ಲಾಗ್ ಈಗ ನೋಡ್ತಿದೀನಿ. ತುಂಬಾ ಮಾಹಿತಿಯುಕ್ತವಾಗಿದೆ ಬರಹ. ಚಿತ್ರಗಳೂ ಸೂಪರ್. ಧನ್ಯವಾದಗಳು ಇಷ್ಟೊಂದು ವಿಚಾರಗಳನ್ನು ತಿಳಿಸಿದ್ದಕ್ಕೆ.

ಶ್ಯಾಮಲ

ಮನಮುಕ್ತಾ said...

ಶಿವು ಅವರೆ,
ನೀವು ತೆಗೆದ ಫೋಟೊ ಆಯ್ಕೆಯಾಗಿದ್ದಕ್ಕೆ ಅಭಿನ೦ದನೆಗಳು.
ಉತ್ತಮ ಲೇಖನ ಹಾಗೂ ಸು೦ದರ ಚಿತ್ರಗಳನ್ನು ನೋಡಿ ಖುಶಿಯಾಯ್ತು.ಶುಭವಾಗಲಿ.

ಸೀತಾರಾಮ. ಕೆ. / SITARAM.K said...

ಲೇಖನ ವಿಕೆ ದಲ್ಲಿ ನಿನ್ನೆ ಓದಿದೆ. ಇಂದು ಇಲ್ಲಿ. ಚೆನ್ನಾಗಿದೆ.

Shashi jois said...

ನಿಮ್ಮ ಲೇಖನ ವಿಜಯ ಕರ್ನಾಟಕ ದಲ್ಲಿ ಓದಿ ಖುಷಿ ಆಯ್ತು ಸರ್..ಸುಂದರ ಚಿತ್ರಗಳು

ಪ್ರಗತಿ ಹೆಗಡೆ said...

ನಿಮ್ಮ ಬರಹದಲ್ಲಿ ಛಾಯಾ ಚಿತ್ರಗಳ ಬಗ್ಗೆ ತುಂಬಾ ಮಾಹಿತಿ ಇದೆ ಸರ್..... ಅಭಿನಂದನೆಗಳು ನಿಮಗೆ...

ದಿನಕರ ಮೊಗೇರ said...

shivu sir,
wonderful photo.... thank you very much.... big salute to all photographers...

shivu.k said...

ಚಿನ್ಮಯ್ ಸರ್,

ಖಂಡಿತ ನೀವು ಹೇಳಿದಂತೆ ಫೋಟೊಗಳ ಗುಣಮಟ್ಟ ಬದಲಾಗುತ್ತಿರುತ್ತದೆ. ನಮಗೆ ಇಲ್ಲಿ ಇವು ಸಾಮಾನ್ಯ ಚಿತ್ರಗಳಂತೆ ಕಾಣಬಹುದು. ಆದ್ರೆ ತೀರ್ಪುಗಾರರ ಮಾನದಂಡವನ್ನು ನಾವು ಸರಿಯಾಗಿ ತಿಳಿದುಕೊಂಡಾಗ ಆ ಚಿತ್ರದ ಮಹತ್ವ ಗೊತ್ತಾಗುತ್ತದೆ. ಲೇಖನವನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

shivu.k said...

ನಾರಾಯಣ್ ಭಟ್ ಸರ್,

ವಿಶ್ವಕಪ್ ಫೋಟೊಗ್ರಫಿ ಪ್ರದರ್ಶನವನ್ನು ಆಕ್ಟೋಬರ್ ಏಳರಂದು ಖ್ಯಾತ ಅನಿಲ್ ಕುಂಬ್ಲೆ ಮತ್ತು ಕೇಂದ್ರದ ಪರಿಸರ್ ಖಾತೆ ಸಚಿವರಾದ ಜೈರಾಮ್ ರಮೇಶ್‍ರವರು ಉದ್ಘಾಟನೆ ಮಾಡುತ್ತಾರೆ. ಖಂಡಿತ ಬನ್ನಿ. ನಾನು ಕೂಡ ನಿಮಗೆ ಸಿಗುತ್ತೇನೆ. ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ಪ್ರತಿಯೊಂದು ಫೋಟೊಗಳ ಹಿಂದೆ ಕ್ಲಿಕ್ಕಿಸಿದ ವ್ಯಕ್ತಿಯ ಶ್ರಮ ಮತ್ತು ಸಾಧನೆ ಇದ್ದೇ ಇರುತ್ತದೆ. ಅಂಥ ಅದ್ಬುತ ಪೋಟೊವನ್ನು ನಮಗೆ ನೀಡಿದ ಅವರ ಬಗ್ಗೆ ನಮಗೆ ಗೌರವ ಉಂಟಾಗುತ್ತದೆ. ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,

ಪತ್ರಿಕೆಯಲ್ಲಿ ನೋಡಿದರೂ ನನ್ನ ಬ್ಲಾಗಿನಲ್ಲಿ ಬಂದು ನೋಡಿದ್ದಕ್ಕೆ ಥ್ಯಾಂಕ್ಸ್..ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...
ಧನ್ಯವಾದಗಳು.

shivu.k said...

ಮನಮುಕ್ತ,

ನಾನು ಆಗ ಕಳಿಸಿದ್ದೆ. ಈ ಭಾರಿ ಕಳಿಸಲಾಗಲಿಲ್ಲ. ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಸೀತಾರಾಂ ಸರ್,

ವಿಜಯ ಕರ್ನಾಟಕ ಮತ್ತು ಬ್ಲಾಗ್ ಎರಡು ಕಡೆ ನೋಡಿದ್ದಕ್ಕೆ ಥ್ಯಾಂಕ್ಸ್.

shivu.k said...

ಶಶಿ ಮೇಡಮ್,

ವಿ.ಕ ಪೇಪರಿನಲ್ಲಿ ನೋಡಿದ್ದಕ್ಕೆ ಥ್ಯಾಂಕ್ಸ್.

shivu.k said...

ಪ್ರಗತಿ ಹೆಗಡೆ,

ಛಾಯಾಗ್ರಾಹಕರಿಗಲ್ಲದೇ ಸಾಮಾನ್ಯರಿಗೂ ಇದರ ಬಗ್ಗೆ ಮಾಹಿತಿ ತಿಳಿಯಬೇಕೆನ್ನುವುದು ನನ್ನ ಆಸೆಯಾಗಿತ್ತು ಅದು ಈಡೇರಿದೆ ಎಂದುಕೊಳ್ಳುತ್ತೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ದಿನಕರ್ ಸರ್,

ನಿಮ್ಮಂತೆ ನಾನು ಅವತ್ತು ಚಿತ್ರಗಳನ್ನು ದೊಡ್ಡಪರಧೆಯಲ್ಲಿ ನೋಡಿ ಖುಷಿಯಿಂದ ಸಲ್ಯೂಟ್ ಮಾಡಿದೆ.

ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

ಕ್ಷಣ... ಚಿಂತನೆ... said...

ಶಿವು ಅವರೆ, ಲೇಖನ ಓದಿದೆ. ಬೆಳಗ್ಗೆ ವಿ.ಕ.ದಲ್ಲಿ ನೋಡಿದ್ದೆನಾದರೂ ಪೂರ್ಣ ಬರಹ ಗಮನಿಸಲು ಆಗಿರಲಿಲ್ಲ. ಉಪಯುಕ್ತ ಮಾಹಿತಿ ಮತ್ತು ಚಿತ್ರಗಳನ್ನು ನೋಡಿದೆ. ಖುಷಿಯಾಗಿದೆ.

ವಿಶ್ವಕಪ್‌ .... ಪ್ರದರ್ಶನಕ್ಕೆ ಭೇಟಿನೀಡುತ್ತೇನೆ. ಅಲ್ಲಿ ಸಿಗೋಣ.

ಧನ್ಯವಾದಗಳು.

Ittigecement said...

ಶಿವು ಸರ್...

ಒಂದು ಅತ್ಯುತ್ತಮ ಕಾರ್ಯಕ್ರಮದ ಬಗೆಗೆ ನಮಗೆಲ್ಲ ಮಾಹಿತಿ ಒದಗಿಸಿದ್ದೀರಿ...

ಹಲವು ಅದ್ಭುತ ಛಾಯಾ ಚಿತ್ರಗಳನ್ನು ನೋಡುವ ತವಕ ಹುಟ್ಟಿಸಿಬಿಟ್ಟಿದ್ದೀರಿ..

ತುಂಬಾ ತುಂಬಾ ಥ್ಯಾಂಕ್ಸ್ ಉತ್ತಮ ಮಾಹಿತಿ ತಿಳಿಸಿದ್ದಕ್ಕೆ...

ಧನ್ಯವಾದಗಳು..

Rudramurthy said...

ಶಿವು ಸರ್,

ವಿಶ್ವಕಪ್ ಬಗ್ಗೆ ಇಷ್ಟೊಂದು ಮಹತ್ವಪೂರ್ಣ ಮಾಹಿತಿ ನಮ್ಮೆಲ್ಲರಿಗೂ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. samvaada.com ಗಾಗಿ ನಾನು ಈ ಸಂದರ್ಭಕ್ಕಾಗಿ ಶ್ರೀನಿವಾಸ್ ಸಾರ್ ಅವರನ್ನ ಸಂದರ್ಶಿಸಿದ್ದೆ, ಆ ಸಮಯದಲ್ಲಿ ಅವರು ಕೊಟ್ಟ ಮಾಹಿತಿ ನಿಜಕ್ಕೂ ದಂಗುಬಡಿಸಿತ್ತು! ನೀವೂ ಸಹ ಆ ತಂಡದಲ್ಲಿ ಇದ್ರಿ ಅನ್ನೊ ವಿಷ್ಯ ತಿಳಿದು ಹೆಮ್ಮೆ ಅನ್ನಿಸ್ತಿದೆ.

ಆ ಲೇಖನ ನೀವು ಗಮನಿಸದೇ ಇದ್ದಲ್ಲಿ ಲಿಂಕ್ ಇಲ್ಲಿದೆ. http://www.samvaada.com/themes/article/128/Srinivas%20interview%20by%20Rudramurthy.html

ಭಾಶೇ said...

WOW!!!

ಗಣೇಶ್ ಕಾಳೀಸರ said...

ಶಿವು ಸರ್,
ಉತ್ತಮ ಮಾಹಿತಿ ಹಾಗೂ ಚಿತ್ರಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.

-ಗಣೇಶ್ ಕಾಳೀಸರ

AnAnD said...

Excellent photographs sir,
All the best for all your upcoming clicks...

Gubbachchi Sathish said...

ಉತ್ತಮ ಚಿತ್ರಗಳು.
ಮಾಹಿತಿಗೆ ಧನ್ಯವಾದಗಳು.

Manju M Doddamani said...

ಫೋಟೊಗ್ರಫಿಯ ಬಗ್ಗೆ ಹೆಚ್ಚು ಮಾಹಿತಿ ಇಲ್ಲಿ ಸಿಕಷ್ಟು ಇನೆಲ್ಲು ಸಿಗೋಲ್ಲ ಅನಿಸುತ್ತೆ ತುಂಬಾ ಚಂದದ ಮಾಹಿತಿಗಳು ಶುಭವಾಗಲಿ

ಅಪ್ಪ-ಅಮ್ಮ(Appa-Amma) said...

ಶಿವು ಅವರೇ,

ಮಾಹಿತಿಪೂರ್ಣ ಲೇಖನಕ್ಕೆ ಧನ್ಯವಾದಗಳು..
ಸಾಧ್ಯವಾದರೆ ಹಿಂದೆ ಆಯ್ಕೆಯಾದ ನೀವು ತೆಗೆದ ಪೋಟೋ ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸಿ..

Unknown said...

Hearty congratulations on your success

ಚಿತ್ರಾ said...

ಶಿವೂ,
ನಿಮ್ಮ ಲೇಖನ ಓದಿ ದಂಗಾದೆ ! ತಾಂತ್ರಿಕವಾಗಿ ಕೆಲ ಅಂಶಗಳು ಉತ್ತಮ ಚಿತ್ರವನ್ನು ತೀರ್ಮಾನಿಸುತ್ತವೆ ಎಂದುಕೊಂಡಿದ್ದೆ. ತಾಂತ್ರಿಕತೆಯ ಹೊರತಾಗಿಯೂ ಇಷ್ಟೆಲ್ಲಾ ಅಂಶಗಳು , ಏನೆಲ್ಲಾ ನಿಯಮಗಳು , ಇವೆಲ್ಲವನ್ನೂ ದಾಟಿ ಪ್ರಶಸ್ತಿ ಗಳಿಸುವುದೆಂದರೆ..... ಅಬ್ಬಾ !
ಇಷ್ಟೆಲ್ಲಾ ಮಾಹಿತಿ ಕೊಟ್ಟಿದ್ದಕ್ಕಾಗಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು . ಹಾಗೂ ಅಭಿನಂದನೆಗಳು ಕೂಡಾ

shivu.k said...

ಚಂದ್ರು ಸರ್,

ನೀವು ಫೋಟೊಗ್ರಫಿ ಪ್ರದರ್ಶನ ನೋಡಿದ್ರಾ..ಕೇವಲ ಇವತ್ತು ಮತ್ತು ನಾಳೆ ಮಾತ್ರ ಇರುತ್ತದೆ. ನಂತರ ಇದೇ ಪ್ರದರ್ಶನ ಕಲ್ಕತ್ತಕ್ಕೆ ಹೋಗುತ್ತದೆ. ಅವಕಾಶ ಮಿಸ್ ಮಾಡಿಕೊಳ್ಳಬೇಡಿ..

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ನೀವು ಫೋಟೊಗ್ರಫಿ ಪ್ರದರ್ಶನವನ್ನು ನೋಡಿಲ್ಲವೆಂದರೆ ಇನ್ನೆರಡು ದಿನ ಮಾತ್ರ ಇರುತ್ತದೆ ನೋಡಿಬಿಡಿ..ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಮೂರ್ತಿ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನೀವು ಈ ಮೊದಲು ಸಂಪದದಲ್ಲಿ ಹಾಕಿದ ಬಿ.ಶ್ರೀನಿವಾಸರವರ ಸಂದರ್ಶನವನ್ನು ಓದಿದ್ದೆ. ತುಂಬಾ ಚೆನ್ನಾಗಿತ್ತು. ಕಾಮೆಂಟು ಹಾಕಿದರೂ ಅದು ಏಕೆ ಪ್ರಕಟವಾಗಲಿಲ್ಲವೆಂದು ನನಗೆ ಗೊತ್ತಿಲ್ಲ. ಮತ್ತೆ ನನ್ನ ಲೇಖನದಲ್ಲಿನ ಮಾಹಿತಿಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ...
ಧನ್ಯವಾದಗಳು.

shivu.k said...

ಭಾಶೇ,

ಥ್ಯಾಂಕ್ಸ್.

shivu.k said...

ಗಣೇಶ್ ಕಾಳೀಸರ ಸರ್,

ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ..

shivu.k said...

ಆನಂದ್ ಸರ್,’

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಬ್ಲಾಗಿನ ಫೋಟೊಗಳು ತುಂಬಾ ಚೆನ್ನಾಗಿವೆ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಗುಬ್ಬಚ್ಚಿ ಸತೀಶ್ ಸರ್,

ಥ್ಯಾಂಕ್ಸ್.

shivu.k said...

ದೊಡ್ಡಮನಿ ಮಂಜು,

ನೀವು ಹೇಳಿದಂತ ಉದ್ದೇಶವೇ ನನ್ನದೂ ಕೂಡ. ಎಲ್ಲಾ ಕಡೆಯಿಂದ ಮಾಹಿತಿಯನ್ನು ಹೆಕ್ಕಿತಂದು ಅಥವ ಅನುಭವದಿಂದ ಸರಳವಾಗಿ ಕೊಡಬೇಕೆಂದು ನನ್ನ ಉದ್ದೇಶ. ನೀವೆಲ್ಲಾ ಬಂದು ಮೆಚ್ಚುವುದು ಇನ್ನೂ ಖುಷಿಯ ವಿಚಾರ..

ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಅಪ್ಪ-ಅಮ್ಮ ಬ್ಲಾಗ್ ಒಡೆಯರೆ,
ಚಿತ್ರಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

shivu.k said...

ಕೃಷ್ಣ ಭಟ್ಟ ಸರ್,

ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಚಿತ್ರಾ,

ನೀವು ನನ್ನ ಲೇಖನವನ್ನು ಓದಿ ಅಷ್ಟೊಂದು ಸಂತೋಷಪಟ್ಟಿದ್ದಕ್ಕೆ ಥ್ಯಾಂಕ್ಸ್. ನೀವು ಬೆಂಗಳೂರಿನಲ್ಲಿದ್ದರೆ ಖಂಡಿತ ಇಂಥ ಪ್ರದರ್ಶನವನ್ನು ಮಿಸ್ ಮಾಡಿಕೊಳ್ಳೂತ್ತಿರಲಿಲ್ಲವೆಂದುಕೊಳ್ಳುತ್ತೇನೆ. ಕಳೆದ ಮೂರು ದಿನದಿಂದ ಈ ಪ್ರದರ್ಶನಕ್ಕಾಗಿ ಕುಂದಾಪುರದ ಸಂತೋಷ್ ಕುಂದೇಶ್ವರ, ಬಳ್ಳಾರಿಯ ಕಾಶಿನಾಥ್ ಬಗಳೀಮಟ್, ದಾವಣಗೆರೆಯ ಹೇಮಚಂದ್ರ ಜೈನ್, ಸಿರಸಿಯ ಶಶಿಧರ್ ಹಿರೇಮಟ್, ಮುಂಡರಗಿಯ ಸಲೀಂ, ಬಾಗಲಕೋಟದ ಇಂದ್ರಕುಮಾರ್, ಮೈಸೂರಿನ ರಾಜೇಶ್, ಜಿ.ಎಸ್.ರವಿಶಂಕರ್, ಸುನಿಲ್ ಪಾಲಹಳ್ಳಿ, ಶ್ರೀನಿವಾಸ್, ತಮಿಳುನಾಡಿನ ಮದುರೈನ ಶ್ರೀರಾಮ್,
ಚೆನೈನ ಪನ್ನೀರ್ ಸೆಲ್ವಂ, ಪೊನ್ನುಸ್ವಾಮಿ, ಹೈದರಬಾದಿನಿಂದ ಚಂದ್ರಶೇಕರ ರಾವ್, ಕ್ವಿಲಾನಿನಿಂದ ಜಯರಾಮನ್, ದೂರದ ಪಾಟ್ನದಿಂದ ಬಿ.ಕೆ.ಸಿನ್ಹಾ...[ಇವರೆಲ್ಲಾ ನನಗೆ ಸಿಕ್ಕವರು. ಪಟ್ಟಿ ಬೆಳೆಯುತ್ತಿದೆ]ಇವರೆಲ್ಲಾ ಛಾಯಾಗ್ರಾಹಕರು ಈ ಪ್ರದರ್ಶನವನ್ನು ಬಂದು ನೋಡಿದ್ದಾರೆ.

ಮತ್ತೆ ಬ್ಲಾಗಿಗರಾದ ಪಾಲಚಂದ್ರ, ಓಂಶಿವಪ್ರಕಾಶ್, ಪವಿತ್ರಾ, ಮೈಸೂರಿನ ನಮ್ಮೊಳಗೊಬ್ಬ ಬಾಲು, ಉಮೇಶ್ ದೇಸಾಯಿ ಕುಟುಂಬ.....ಈಶ್ವರ್ ಪ್ರಸಾದ್...ಇನ್ನೂ ಅನೇಕರು ಬಂದುನೋಡಿ ಸಂತೋಷಪಟ್ಟಿದ್ದಾರೆ...ಆದ್ರೆ ನಮ್ಮ ಬೆಂಗಳೂರಿನ ಅನೇಕ ಛಾಯಾಭಿಮಾನಿಗಳು, ಬ್ಲಾಗಿಗರು, ಛಾಯಾಗ್ರಾಹಕರು ಕೆಲಸದಲ್ಲಿ ಬ್ಯುಸಿಯಾಗಿ ಇಂಥ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Ashok.V.Shetty, Kodlady said...

Shivu Sir,

Jaasti enu helolla...Simply superbbbbbb..........

shivu.k said...

ಅಶೋಕ್ ಒಡಲಾಡಿಸರ್,
ಥ್ಯಾಂಕ್ಸ್..

Harish.k said...

THANKS FOR YOUR valuable information sir....