Tuesday, October 19, 2010

" ವೆಂಡರ್ ಕಣ್ಣು"ಗೆ ಬಹುಮಾನ

        ಮೊನ್ನೆ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಎದ್ದಾಗ ಏನೋ ಒಂಥರ ಉಲ್ಲಾಸ. ಏಕೆಂದರೆ ಇದು ನಮಗೆ ಮೂರನೇ ಅಧಿಕೃತ ರಜ. ನಾವು ಅಧಿಕೃತವಾಗಿ ಮತ್ತು ನೆಮ್ಮದಿಯಾಗಿ  ನಿದ್ರಿಸಿದ್ದು ಈ ವರ್ಷದಲ್ಲಿ ಮೂರನೇ ಭಾರಿ. ಅವತ್ತು ನನ್ನ ಕನಸಿನಲ್ಲೂ ಸುಖವಾಗಿ ನಿದ್ರಿಸುತ್ತಾ ಅಕಾಶದಲ್ಲಿ ತೇಲಿಹೋಗುತ್ತಿರುವ ಚಿತ್ರಗಳೇ!. ನಾನು ಮಾತ್ರವಲ್ಲ ನನ್ನ ಹುಡುಗರು, ನನ್ನ ಎಲ್ಲಾ ವೆಂಡರ್ ಗೆಳೆಯರು, ಅವರ ಹುಡುಗರೂ ಕೂಡ ಸುಖವಾಗಿ ನಿದ್ರಿಸಿದ ದಿನವದು. ಅವತ್ತು  ಭಾನುವಾರವಾಗಿತ್ತಾದ್ದರಿಂದ ಏನು ಕೆಲಸವಿರಲಿಲ್ಲ. ಇಡೀ ದಿನ ಎಲ್ಲಿಯೂ ಹೋಗದೇ ಅರಾಮವಾಗಿ ಮನೆಯಲ್ಲಿಯೇ ಕಳೆದೆ. ಒಂಥರ ಏನು ಮಾಡದೇ ಸುಮ್ಮನಿದ್ದುಬಿಡುವುದು ಅಂತಾರಲ್ಲ ಹಾಗೆ. ಮಾನಸಿಕವಾಗಿ ತುಂಬಾ ರಿಲ್ಯಾಕ್ಸ್ ಆಗಿದ್ದ ದಿನವದು.


 ಮರುದಿನ ಮುಂಜಾನೆ ನಾಲ್ಕು ಖುಷಿಯಿಂದಲೇ ಹೋದೆ.  ನನ್ನ ಒಂಬತ್ತು ಹುಡುಗರಲ್ಲಿ ಇಬ್ಬರು ತಿರುಪತಿಗೆ ಹೋಗಿಬಿಟ್ಟಿದ್ದಾರೆ, ಫೋನ್ ಮಾಡಿದರೆ ಒಬ್ಬನದು ಸ್ವಿಚ್ ಆಪ್ ಮತ್ತೊಬ್ಬ ದರ್ಶನಕ್ಕಾಗಿ ನಿಂತಿದ್ದೇವೆ ಅಂತ ಹೇಳಬೇಕೆ!  ಇನ್ನೊಬ್ಬ ಅಕ್ಕನ ಮಗನ ನಾಮಕರಣಕ್ಕೆ ಅಂತ ಚಕ್ಕರ್. ಮಗದೊಬ್ಬನ ಮೊಬೈಲ್ ಸ್ವಿಚ್ ಆಪ್.  ಆಗ ತಾನೆ ಹೊಸದಾಗಿ ಸೇರಿದ್ದ ಹುಡುಗ ಜೊತೆಗಿದ್ದರೂ ಅವನಿಗೆ ಯಾವ ರೂಟಿನ ಪೇಪರುಗಳು ಗೊತ್ತಿಲ್ಲ. ಆತ ಇದ್ದರೂ ಒಂದೇ ಇಲ್ಲದಿದ್ದರೂ ಒಂದೆ.  ಸಪ್ಲಿಮೆಂಟರಿಗಳನ್ನು ಹಾಕಿ ಸಿದ್ದಗೊಳಿಸಲು ಸಹಕರಿಸಿದನಷ್ಟೆ.  ಉಳಿದ ಐದು ಹುಡುಗರು ಬಂದಿದ್ದರಿಂದ ಏಳುರೂಟುಗಳಲ್ಲಿ ಎರಡು ರೂಟುಗಳಿಗೆ ನಾನು ಹೋಗಲೇಬೇಕಿತ್ತು.   ಇದರ ನಡುವೆ ಟೈಮ್ಸ್ ಆಪ್ ಇಂಡಿಯ ಭಾನುವಾರದ ಸಪ್ಲಿಮೆಂಟರಿಗಳು ಸೋಮವಾರ ಬಂದು ಪೇಪರುಗಳು ದಪ್ಪವಾಗಿ ಊದಿಕೊಂಡಿದ್ದವು.  ಇಷ್ಟೆಲ್ಲಾ ಟೆನ್ಷನ್ನು ಗಳ ನಡುವೆ ಉರಿಯುವ ಬೆಂಕಿಗೆ ಉಪ್ಪುಕಾರ ಹಾಕುವಂತೆ ಕನ್ನಡ ಪ್ರಭ ಮತ್ತು ಇಂಡಿಯನ್ ಎಕ್ಸ್‍ಪ್ರೆಸ್ ಪೇಪರುಗಳ ಪ್ರಿಂಟಿಂಗ್‍ನಲ್ಲಿ ತೊಂದರೆಯಾಗಿ ಆರುವರೆಯಾದರೂ ಬಂದಿರಲಿಲ್ಲ. ಕಾಲೇಜಿಗೆ ಹೋಗುವ ಹುಡುಗರೆಲ್ಲಾ "ಅಣ್ಣ ಅದು ಬಂದಮೇಲೆ ನೀವೇ ಹಾಕಿಕೊಂಡು ಬಿಡಿ" ಎನ್ನುತ್ತಿದ್ದಾರೆ. ಇಂಥ ಸಮಯದಲ್ಲಿ ನನ್ನ ಸ್ಥಿತಿ ಹೇಗಿರಬಹುದು.  ನೆನ್ನೆಯಲ್ಲಾ ಖುಷಿಯಿಂದ ಆಕಾಶದಲ್ಲಿ ತೇಲಾಡುತ್ತಿದ್ದವನನ್ನು ನೇರವಾಗಿ ನೆಲಕ್ಕೆ ಬಿಸಾಡಿದಂತೆ ಆಗಿತ್ತು.  ನಮ್ಮ ಎಲ್ಲಾ ವೆಂಡರುಗಳ ಸ್ಥಿತಿ ಹೀಗಾದರೆ, ನಮ್ಮ ಬೀಟ್ ಹುಡುಗರ ಪ್ರಕಾರ ವರ್ಷಕ್ಕೆ ಒಂದು ಹಬ್ಬ ರಜ ಅದರ ಜೊತೆಗೆ ಮತ್ತೊಂದು ದಿನ ರಜ ತೆಗೆದುಕೊಂಡು ಊರಿಗೆ ಹೋದರೆ ತಪ್ಪೇನು? ಎನ್ನುವುದು ಅವರ ಮಾತು.  ಎಂದಿನಂತೆ ರಸ್ತೆಯಲ್ಲಿ ವಾಕಿಂಗ್ ಮಾಡುವ ಜನರ ಕಣ್ಣಿಗೆ ಮತ್ತೊಂದು ಮುಂಜಾನೆ ಸಂತೆ. ಬಿಟ್ಟಿ ಸಿನಿಮಾ. ಇದೆಲ್ಲರಿಂದ ಹೊರಗೆ ಬಂದು ನನ್ನ ಪಾತ್ರ ಬದಲಾಗಿ ಒಬ್ಬ ಛಾಯಾಗ್ರಾಹಕನಾಗಿ ಅಥವ ಬರಹನಾಗಿಬಿಟ್ಟರೆ ನನಗೂ ಮತ್ತು ನಿಮಗೆಲ್ಲರಿಗೂ ಮತ್ತೊಂದು "ವೆಂಡರ್ ಕಣ್ಣು"ವಿನ ಕತೆ. 

ಕೊನೆಗೂ ಎಲ್ಲಾ ಕೆಲಸ ಮುಗಿಸಿ ಮನೆಗೆ ಬಂದಾಗ ಬೆಳಿಗ್ಗೆ ಒಂಬತ್ತು ಗಂಟೆ. ಸೋಮವಾರ ಕೆಲವು ಆಫೀಸುಗಳಿಗೆ ಹೋಗಬೇಕಾಗಿದ್ದರಿಂದ ಬೇಗ ಸಿದ್ದನಾಗಿ ಹೊರಟೆ.  ಮನೆಗೆ ಬಂದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಕೈಕಾಲು ಮುಖ ತೊಳೆದು ಊಟಕ್ಕೆ ಕುಳಿತುಕೊಳ್ಳುವಷ್ಟರಲ್ಲಿ ಬಂತು ಪೋಸ್ಟ್.  ತೆಗೆದು ಓದಿದೆ ನನ್ನ ಕಣ್ಣನ್ನು ನಾನೇ ನಂಬಲಾಗಲಿಲ್ಲ. ನನ್ನ "ವೆಂಡರ್ ಕಣ್ಣು" ಪುಸ್ತಕಕ್ಕೆ ಲಲಿತ ಪ್ರಬಂಧ ವಿಭಾಗದಲ್ಲಿ ಡಾ.ದ.ರಾ.ಬೆಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ],ಧಾರವಾಡದ ಸಂಸ್ಥೆಯಿಂದ ಬಹುಮಾನ ಬಂದಿತ್ತು. "ನನ್ನ ವೆಂಡರ್ ಕಣ್ಣು ಪುಸ್ತಕಕ್ಕೆ ಬಹುಮಾನ ಬಂದಿದೆ" ನಾನು ಜೋರಾಗಿ ಹೇಳಿದಾಗ ನನ್ನ ಕೈಯಿಂದ ಪತ್ರವನ್ನು ಕಿತ್ತುಕೊಂಡು ನಿದಾನವಾಗಿ ಓದಿದಳು ಹೇಮಶ್ರೀ. ನಮ್ಮಿಬ್ಬರ ಆನಂದಕ್ಕೆ ಪಾರವೇ ಇಲ್ಲ. ಮತ್ತೆ ಅಕಾಶ ಹಾರಿ ಮೋಡಗಳ ನಡುವೆ ತೇಲುತ್ತಿದ್ದೆ. ಊಟ ಬೇಕಿಲ್ಲವಾಗಿತ್ತು.


ಇದಕ್ಕೆಲ್ಲಾ ಕಾರಣ ಮತ್ತದೇ ನನ್ನ ಮುಂಜಾನೆ ಚುಮುಚುಮು ಬೆಳಕಿನ ಮುಂಜಾನೆ ಸಂತೆ. ಅದರಲ್ಲಿನ ಬೀಟ್ ಹುಡುಗರು. ಇವರೊಂಥರ ನೀರಿದ್ದಂತೆ. ಯಾವ ಆಕಾರಕ್ಕೆ ಬೇಕಾದರೂ ಒಗ್ಗಿಕೊಳ್ಳುತ್ತಾರೆ. ಓಲೈಸಿಬಿಟ್ಟರೆ ಮುದ್ದಿನ ಅರಗಿಣಿಗಳು, ಶಿಸ್ತಿನ ಸಿಪಾಯಿಗಳು. ಕೋಪದಿಂದ ಬೈದರೇ....ಚಕ್ಕರ್ ಮೇಲೆ ಚಕ್ಕರುಗಳು...ಲಾಂಗ್ ಲೀವುಗಳು...ಮೊಬೈಲ್ ಸ್ವಿಚ್ ಆಪ್‍ಗಳು...ನಾಟ್ ರೀಚಬಲ್ಲುಗಳು...........ಆದರೂ.......


                    ಚಳಿ ಗಾಳಿ ಮಳೆ ಎನ್ನದೇ....
                   ತಣ್ಣನೆ ಮುಂಜಾವಿನಲ್ಲಿ....
                   ಬೆಚ್ಚನೇ ಬೆಳಗು ತರುವ....
                   ಅಸಂಖ್ಯಾತ, ಅನಾಮಿಕ....
                   ದಿನಪತ್ರಿಕೆ ಹಂಚುವ....
                   ಹುಡುಗರಿಗೆ.....

 ವೆಂಡರ್ ಕಣ್ಣು ಪುಸ್ತಕಕ್ಕೆ ಬಂದ ಬಹುಮಾನ ಅರ್ಪಣೆ.


ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ಇವರೊಂಥರ ಪ್ಲಾಸ್ಟರ್ ಆಪ್ ಪ್ಯಾರಿಸ್ ಇದ್ದಂತೆ. ಬೇಕಾದ ಆಕಾರದಲ್ಲಿ ಅಚ್ಚಾಗುವ ಮೂಲ ದ್ರವ್ಯಗಳು. ಇದನ್ನೆಲ್ಲಾ ಬರಹದ ಮೂಲಕ ಹೊರಹಾಕಲು ಒಂದು ಮಾಧ್ಯಮ ಬೇಕಿತ್ತು ಮೊದಲಾದರೆ ಪೆನ್ನು ಪೇಪರ್ ಹಿಡಿದು  ನಿದಾನವಾಗಿ ಬರೆಯುವಾಗ ಈ ವೇಗವಿರಲಿಲ್ಲ. ಅದ್ಯಾವಾಗ ಜಿ.ಎನ್.ಮೋಹನ್ ನನಗೆ ತಗುಲಿಕೊಂಡರೋ ನನ್ನಲ್ಲಿ ಕಂಫ್ಯೂಟರಿನಲ್ಲಿ ಬರೆಯುವ ಉಮೇದು ಹತ್ತಿಸಿ ಬರೆದಿದ್ದನ್ನು ತೋರಿಸಲು ಬ್ಲಾಗ್ ಲೋಕವೆನ್ನುವ ವೇದಿಕೆಯ ನಡುವೆ ನಿಲ್ಲಿಸಿ ಮುಂದೆ ನೀನುಂಟು ನಿನ್ನ ಬ್ಲಾಗ್ ಬಳಗವುಂಟು ಅಂತೇಳಿ ನಡೆದೇ ಬಿಟ್ಟರು. 


ಅಮೇಲೆ ನಡೆದಿದ್ದೆಲ್ಲಾ ಇತಿಹಾಸ. ಬ್ಲಾಗ್ ನನಗೊಂದು ಹೊಸಲೋಕವನ್ನು ತೋರಿಸಿತು. ಇಲ್ಲಿ ಬರೆದಿದ್ದನ್ನು ಪ್ರೀತಿಯಿಂದ ಓದುವವರು ಇದ್ದಾರೆ. ತಪ್ಪುಗಳನ್ನು ತಿದ್ದಿ ಬೆನ್ನುತಟ್ಟುವ ಹಿರಿಯರಿದ್ದಾರೆ. ಬರಹದ ಜೊತೆಗೆ ಭಾವನೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕರಿದ್ದಾರೆ. ಬೇರೆಲ್ಲಾ ಮಾದ್ಯಮಗಳು  ಹದಗೆಟ್ಟುಹೋಗಿ ಒಳಗೊಂದು ಹೊರಗೊಂದು ಅಂತಿರುವ ಕಾಲದಲ್ಲಿ ನಮ್ಮ ಬ್ಲಾಗ್ ಲೋಕ ಪರಿಶುಧ್ಧವಾಗಿದೆ. ಅದಕ್ಕೇ ಸಾಕ್ಷಿಯಾಗಿ ಪೇಪರ್ ಹುಡುಗ ವಿಶ್ವನಾಥನ ಅಪಘಾತ ಪರಿಸ್ಥಿತಿಯಲ್ಲಿ ಸ್ಪಂದಿಸಿದ ರೀತಿ,  ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ನಮ್ಮದೇ ಮನೆಯ ಕಾರ್ಯಕ್ರಮ, ಪುಸ್ತಕವೆನ್ನುವಷ್ಟರ ಮಟ್ಟಿಗೆ ಅಪ್ಪಿಕೊಂಡು ಯಶಸ್ವಿಗೊಳಿಸಿದ್ದು, ಬ್ಲಾಗ್ ವನಕ್ಕೆ ಹೋಗಿ ಗಿಡನೆಟ್ಟಿದ್ದು...ಹೀಗೆ ಅನೇಕ ಉದಾಹರಣೆಗಳು. ಇಂಥ ಪರಿಸರದಲ್ಲಿ ನನ್ನ ಬರಹಕ್ಕೆ ಮೊದಲು ಒಂದು ಚೌಕಟ್ಟು ಹಾಕಿಕೊಟ್ಟು ಒಂದೇ ವಿಷಯದ ಬಗ್ಗೆ ಬರಿ ಅಂತ ಒಂದು ಕಡೆ ಕೂರಿಸಿ   ಪ್ರೋತ್ಸಾಹಿಸಿದವರು ಹಿರಿಯರಾದ ನಾಗೇಶ್ ಹೆಗೆಡೆ. ಅವರನ್ನು ಈ ಕ್ಷಣದಲ್ಲಿ ನಾನು ನೆನೆಯಲೇಬೇಕು. ಬಹುಮಾನ ಬಂದ ತಕ್ಷಣ "ನನ್ನ ಪುಸ್ತಕಕ್ಕೆ ಬಹುಮಾನ ಬಂದಷ್ಟು ಖುಷಿಯಾಯ್ತು" ಎಂದ ಹಾಲ್ದೊಡ್ಡೇರಿ ಸುಧೀಂದ್ರ ಸರ್, "ನೀನಿನ್ನು ಅರಾಮವಾಗಿ ಕೂರುವಂತಿಲ್ಲ" ಎಂದ ಶೇಷಾಶಾಸ್ತ್ರಿಗಳು,  ದೂರದ ಕುವೈಟಿನಿಂದ ಪೋನ್ ವಿಶ್ ಮಾಡಿದ ಗೆಳೆಯ ಡಾ.ಅಜಾದ್, ಸುಗುಣಕ್ಕ, ಮಹೇಶ್ ಸರ್, ಡಾ.ಕೃಷ್ಣಮೂರ್ತಿ, ಪರಂಜಪೆ, ಎಂ ವಿಶ್ವನಾಥ್, ಮಲ್ಲಿಕಾರ್ಜುನ್, ಶಿವಶಂಕರ್ ಎಳವತ್ತಿ..... ಇನ್ನಿತರರು ತಮ್ಮದೇ ಪುಸ್ತಕಕ್ಕೆ ಬಹುಮಾನ ಬಂದಷ್ಟು ಖುಷಿ ಪಟ್ಟಿದ್ದಾರೆ. ಇದಲ್ಲದೇ ದೂರದೂರಿನಲ್ಲಿರುವ ವನಿತಾ, ರಂಜಿತ, ಚೇತನ ಭಟ್, ಪೂರ್ಣಿಮ ಭಟ್, ಮಾನಸ ಮಾತ್ರವಲ್ಲದೇ ವಸುದೇಶ್, ಶಿವಪ್ರಕಾಶ್, ಶಶಿಅಕ್ಕ, ವಿಕಾಶ್ ಹೆಗಡೆ, ಸುಶ್ರುತ, ಸುಮನ್ ವೆಂಕಟ್, ಪ್ರಕಾಶ್ ಹೆಗಡೆ, ಚಂದ್ರುಸರ್, ಮಹೇಶ್ ಕಲ್ಲರೆ, ಪ್ರಗತಿ ಹೆಗಡೆ, ವಿಜಯಶ್ರೀ, ಚಿನ್ಮಯ್, ಬಾಲಸುಬ್ರಮಣ್ಯ ಶಾಸ್ತ್ರಿ, ವಿನಯ್, ನಾಗರಾಜ್, ಶ್ಯಾಮಲ ಮೇಡಮ್, ಶ್ರೀನಿಧಿ, ದಿವ್ಯ, ದೊಡ್ಡಮನಿ ಮಂಜು,..................ಇನ್ನೂ ಎಷ್ಟೋ ಬ್ಲಾಗ್ ಗೆಳೆಯರು ನನಗಿಂತ ಮೊದಲೇ ತಿಳಿದು ವಿಷ್ ಮಾಡುತ್ತಾ ಸಂತೋಷ ಪಟ್ಟಿದ್ದಾರೆ. "ವೆಂಡರ್ ಕಣ್ಣು" ಬರೆದಿದ್ದು ನಾನು ಎನ್ನುವ ನೆಪವಾದರೂ ಅದರಲ್ಲಿನ ಎಲ್ಲಾ ಘಟನೆಗಳು, ಪಾತ್ರಗಳು, ಅದರಲ್ಲಿ ನೋವು ನಲಿವುಗಳನ್ನು ನಮ್ಮ ಬ್ಲಾಗ್ ಗೆಳೆಯರು ತುಂಬು ಹೃದಯದಿಂದ ಅನುಭವಿಸಿದ್ದಾರೆ. ಪ್ರೋತ್ಸಾಹಿಸಿದ್ದಾರೆ.  ಬ್ಲಾಗ್ ಬಳಗ ಪ್ರೋತ್ಸಾಹಿಸದಿದ್ದಲ್ಲಿ ಇಂಥ ವೆಂಡರ್ ಕಣ್ಣು ರೂಪುಗೊಳ್ಳುತ್ತಿರಲಿಲ್ಲ.  ಇಂಥ ಸಮಯದಲ್ಲಿ ಬ್ಲಾಗ್ ಬರಹದ ಪುಸ್ತಕವಾದ "ವೆಂಡರ್ ಕಣ್ಣು"ಗೆ ಸಿಕ್ಕ ಬಹುಮಾನ ಎಲ್ಲಾ ಬ್ಲಾಗಿಗರಿಗೂ ಸಲ್ಲುತ್ತದೆ." ಬ್ಲಾಗ್ ಬರಹಕ್ಕೂ ಬಹುಮಾನ ಬಂತ?" ಈ ಪ್ರಶ್ನೆ ಮೂಡಿ ನನ್ನೊಳಗೆ ಅಚ್ಚರಿ ಮೂಡಿಸಿದಂತೆ ನನ್ನ ಇತರ ಬ್ಲಾಗ್ ಗೆಳೆಯರಲ್ಲೂ ಇದೇ ಪ್ರಶ್ನೆಯ ಜೊತೆಗೊಂದು ಆಶ್ಚರ್ಯ, ಅದರಾಚೆಗೊಂದು ಆಸೆಯೂ ಮೂಡುತ್ತಿದೆ.  ಹೀಗೆ  ನಮ್ಮ ಎಲ್ಲಾ ಬ್ಲಾಗ್ ಗೆಳೆಯರು  ತಮ್ಮದೇ ಪುಸ್ತಕಕ್ಕೆ ಬಹುಮಾನ ಬಂದಷ್ಟು ಸಂತೋಷ ಪಡುತ್ತಿರುವುದರಿಂದ ಈ ಬಹುಮಾನವನ್ನು ನಮ್ಮ ದಿನಪತ್ರಿಕೆ ಹುಡುಗರ ಜೊತೆಗೆ ಬ್ಲಾಗ್ ಲೋಕದ ಗೆಳೆಯರಿಗೂ ಅರ್ಪಿಸುತ್ತಿದ್ದೇನೆ.

ಪ್ರೀತಿಯಿಂದ..
ಶಿವು.ಕೆ.

105 comments:

PARAANJAPE K.N. said...

ಶಿವೂ
ಬೆಳಗ್ಗೆ ಕಾರ್ಗಲ್ ನಿ೦ದ ವೈದ್ಯ ಮಿತ್ರ ಕೃಷ್ಣಮೂರ್ತಿಯವರು ಫೋನ್ ಮಾಡುವ ತನಕ ನನಗೆ ವಿಷಯ ಗೊತ್ತಿರಲಿಲ್ಲ, ಅವರು ಫೋನ್ ಮಾಡಿದಾಗ ಶಿವುಗೆ ಯಾವುದೋ ಫೋಟೋಗ್ರಫಿ ಪ್ರಶಸ್ತಿ ಬ೦ದಿದೆ ಅ೦ದುಕೊ೦ಡೆ, ಆಮೇಲೆ ನೆಟ್ ಮು೦ದೆ ಕೂತಾಗ ವಿಷಯ ತಿಳೀತು. ನಿಜಕ್ಕೂ ಖುಶಿಗೊ೦ಡೆ. ನನಗೆ ಪ್ರಶಸ್ತಿ ಬ೦ದಷ್ಟು ಖುಷಿ ಆಯ್ತು. congrats . ಹೇಳಲು ಪದಗಳಿಲ್ಲ. ನಿಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. you deserve it . ಮು೦ದುವರಿಯಿರಿ. All the best .

ನಾಗರಾಜ್ .ಕೆ (NRK) said...

ಅಣ್ಣ,
ಫುಲ್ ಹ್ಯಾಪಿ . . . Congratulations. . . .
ಈ ರೀತಿಯ ಮತ್ತಷ್ಟು ಸಂತಸದ ಸುದ್ದಿಗಳು ಬರಲಿ . . .
ಪತ್ರಿಕೆ ಹಂಚುವ ನಿಮ್ಮ ಹುಡುಗರ ಆನಂದ ಮತ್ತಷ್ಟು ತೆರೆದುಕೊಳ್ಳಲಿ . . .
I Wish you ALL THE BEST

ಚುಕ್ಕಿಚಿತ್ತಾರ said...

ತು೦ಬಾ ಸ೦ತೋಶವಾಯ್ತು ಶಿವು ಸರ್..
”ಹೇಗಿದ್ದ ಹೇಗಾದ ಗೊತ್ತಾ....!!!” ಎನ್ನುವ ಟೈಟಲ್ ನಿಮಗೆ ಸರಿ ಹೊ೦ದತ್ತೆ..
ಇನ್ನಷ್ಟು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಾ ...ಆಗಸದಗಲಕ್ಕೆ ಹರಡಲಿ ನಿಮ್ಮ ಕೀರ್ತಿ..

Umesh Balikai said...

ಅಭಿನಂದನೆಗಳು ಶಿವು ಸರ್!!!,

ಧಾರವಾಡ ಪೇಡ ತಿಂದಷ್ಟೇ ಖುಷಿಯಾಯ್ತು ಸುದ್ದಿ ಕೇಳಿ.....ಪ್ರಶಸ್ತಿ ಸ್ವೀಕರಿಸಲು ಧಾರವಾಡಕ್ಕೆ ಬನ್ನಿ... :)

ಮನಮುಕ್ತಾ said...

ಶಿವು ಅವರೆ,
ಸ೦ತಸದಾಯಕ ವಿಚಾರ.. ಅಭಿನ೦ದನೆಗಳು.
ನಿಮಗೆ ಮು೦ದೆ ಇ೦ತಹ ನೂರಾರು ಪ್ರಶಸ್ತಿಗಳು ಸಿಕ್ಕಲಿ ಎ೦ದು ಹಾರೈಸುತ್ತೇನೆ.

ಸಂದೀಪ್ ಕಾಮತ್ said...

ಅಭಿನಂದನೆಗಳು ಶಿವು..

ಮನಸು said...

Congratulations... wish u all the best

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ಅಭಿನಂದನೆಗಳು ಸರ್...DO well in future:)
with best wishes
srikanth

Gubbachchi Sathish said...

Yesterday I am very happy when I got the message from avadhi regarding this. Congratulations Sir.

Dr.D.T.Krishna Murthy. said...

ಶಿವು;ಫೋನಿನ ಮೂಲಕ ನಿಮಗೆ ಅಭಿನಂದನೆಗಳನ್ನು ತಿಳಿಸಿದ್ದರೂ ಮತ್ತೊಮ್ಮೆ ಬ್ಲಾಗಿನ ಮೂಲಕ ನಿಮ್ಮನ್ನು ಅಭಿನಂದಿಸುವ ತವಕ.ನನಗೇ ಬಹುಮಾನ ಬಂದಷ್ಟು ಖುಷಿ!ನಿಮ್ಮ ಲೇಖನಿಯಿಂದ ಇನ್ನಷ್ಟು ಸತ್ವ ಪೂರ್ಣ ಲೇಖನಗಳು ಮೂಡಿ ಬರಲಿ.ನಿಮ್ಮ ಕ್ಯಾಮರಾದ ವಂಡರ್ ಕಣ್ಣಿಂದ ಮತಷ್ಟು,ಇನ್ನಷ್ಟು ಅದ್ಭುತ ಛಾಯಾ ಚಿತ್ರಗಳು ಹೊರಬಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಲಿ.ನಮೆಲ್ಲಾ ಬ್ಲಾಗಿಗ ಸ್ನೇಹಿತರ ಶುಭ ಹಾರೈಕೆ ನಿಮ್ಮೊಡನಿದೆ.ಮತ್ತೊಮ್ಮೆ ಶುಭಾಶಯಗಳು.ಜೈ ಹೋ !

Rudramurthy said...

ಅಭಿನಂದನೆಗಳು ಶಿವು ಸಾರ್,
ನಿಮ್ಮ ನೆರಳು-ಬೆಳಕಿನಾಟದ ಸುಂದರ ಸಂಯೋಜನೆಗಳಿಂದ ಮೋಡಿ ಮಾಡಿದಂತೆ
ಅಕ್ಷರಗಳಲ್ಲೂ ಕಾಮನಬಿಲ್ಲು ಮೂಡಿಸುತ್ತಿದ್ದೀರಿ.
ನಿಮ್ಮ ಈ ವಿಶಿಷ್ಟ ಪ್ರತಿಭೆ ಇನ್ನಷ್ಟು ಬೆಳಗಲಿ ಎಂಬ ಹಾರೈಕೆಗಳು.
- ಮೂರ್ತಿ.

prabhamani nagaraja said...

ಅಭಿನ೦ದನೆಗಳು ಶಿವೂ ಸರ್, ನಿಮಗೆ ಪ್ರಶಸ್ತಿ ಬ೦ದದ್ದು ತಿಳಿದು ಬಹಳ ಸಂತಸವಾಯ್ತು.

Manju M Doddamani said...

ಸಂತಸದ ವಿಷ್ಯ ..! ಅಭಿನಂದನೆಗಳು ಸರ್ ಶುಭವಾಗಲಿ

ವನಿತಾ / Vanitha said...

ಅಭಿನಂದನೆಗಳು ಶಿವು :-)

Anonymous said...

many many congratulations!

BhaShe

ಗಣೇಶ್ ಕಾಳೀಸರ said...

ಶಿವು ಸರ್..ಅಭಿನಂದನೆಗಳು.

Anonymous said...

CONGRATULATIONS SHIVU!! WISH U MANY MORE AWARDS IN FUTURE!!

ಹಳ್ಳಿ ಹುಡುಗ ತರುಣ್ said...

CONGRATULATIONS SHIVU SIR!... nimm pratibhege mattastu prasastigalu nimmanu arasi barali....

Ittigecement said...

ಶಿವು ಸರ್...

ನಿಜಕ್ಕೂ ಖುಷಿಯಾಗುತ್ತಿದೆ...

ನಿಮ್ಮ ಪರಿಶ್ರಮಕ್ಕೆ... ಪ್ರತಿಭೆಗೆ ಇದು ಸಂದ ಗೌರವ...

ನಿಮ್ಮ ಬಗೆಗೆ ಬ್ಲಾಗ್ ಲೋಕ ಹೆಮ್ಮೆ ಪಡುತ್ತದೆ...

ಜೈ ಹೋ ಶಿವು .. !!

ಸುಧೇಶ್ ಶೆಟ್ಟಿ said...

thumba kushi aaythu vishaya keLi Shivanna :) heege saagali saadhaneya patha :)

sunaath said...

ಶಿವು,
ಹೃತ್ಪೂರ್ವಕ ಅಬಿನಂದನೆಗಳು.

ಅನಂತ್ ರಾಜ್ said...

ಅಭಿನ೦ದನೆಗಳು ಶಿವು ಸರ್. ಬ್ಲಾಗಿಗರೆಲ್ಲರ ಪ್ರೀತಿ, ಅಭಿಮಾನಗಳನ್ನು ಗಳಿಸಿರುವ ನಿಮ್ಮ ವ೦ಡರ್ ಕಣ್ಣುಗಳಿಗೆ ಮತ್ತೊ೦ದು ಗರಿ...!

ಶುಭಾಶಯಗಳು

ಅನ೦ತ್

Ashwini said...

Congragulations :).Its a real motivation to others..

shivu.k said...

ಪರಂಜಪೆ ಸರ್,
ಹತ್ತು ವರ್ಷದ ಹಿಂದೆ ಬೆತ್ತಲೆಗಳು ಕವನಕ್ಕೆ ನನಗೆ ಬಹುಮಾನ ಬಂದಿತ್ತು. ಅಮೇಲೆ ಈಗ ಮೊದಲ ಬಾರಿಗೆ ನಾನು ಸ್ವಲ್ಪ ಸೀರಿಯಸ್ ಆಗಿ ಬರೆದ ಪುಸ್ತಕಕ್ಕೆ ಬಹುಮಾನ ಬಂದಿರುವುದು ನಿಜಕ್ಕೂ ಒಂಥರ ಮರೆಯಲಾಗದ ಅನುಭವ.
ಖಂಡಿತ ಜವಾಬ್ದಾರಿ ಹೆಚ್ಚಿದೆ. ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ. ಧನ್ಯವಾದಗಳು.

shivu.k said...

ನಾಗರಾಜ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಪತ್ರಿಕೆ ಹಂಚುವ ಹುಡುಗರದ್ದು ಚಿಕ್ಕ ಚಿಕ್ಕ ಆನಂದಗಳು. ಸಾಧ್ಯವಾದರೆ ಅದರ ಬಗ್ಗೆ ಎಂದಾದರೂ ಬರೆಯುತ್ತೇನೆ..

shivu.k said...

ಚುಕ್ಕಿಚಿತ್ತಾರ.,

ನಿಮ್ಮ ಪ್ರತಿಕ್ರಿಯೆಯನ್ನು ನೋಡಿದ ಹೇಮಾಶ್ರೀ ನನ್ನನ್ನು ನೋಡಿದಾಗಲೆಲ್ಲಾ "ಹೇಗಿದ್ದ ಹೇಗಾದ ಗೊತ್ತಾ" ಹಾಡುತ್ತಾಳೆ..ಅವಳಿಗಂತೂ ತುಂಬಾ ಖುಷಿಯಾಗಿದೆ.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಉಮೇಶ್ ಬಾಲಿಕಾಯ್ ಸರ್,
೨೬ರಂದು ಪ್ರಶಸ್ತಿ ಸ್ವೀಕರಿಸಲು ಮತ್ತು ಧಾರವಾಡ ಪೇಡ ತಿನ್ನಲು ಖಂಡಿತ ಬರುತ್ತಿದ್ದೇನೆ.ಸಾಧ್ಯವಾದರೆ ಬೇಟಿಯಾಗುತ್ತೇನೆ ಸರ್.
ಧನ್ಯವಾದಗಳು.

shivu.k said...

ಮನಮುಕ್ತ,

ನಿಮ್ಮ ಹಾರೈಕೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಸಂದೀಪ್ ಕಾಮತ್,
ಥ್ಯಾಂಕ್ಸ್..

shivu.k said...

ಸುಗುಣಕ್ಕ,....

ಥ್ಯಾಂಕ್ಸ್..

shivu.k said...

ನನ್ನ ಮನದ ಭಾವಕ್ಕೆ ಕನ್ನಡಿಯ ಶ್ರೀಕಾಂತ್,

ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಗುಬ್ಬಚ್ಚಿ ಸತೀಶ್,

ನಿಮ್ಮಷ್ಟೇ ನನಗೂ ಖುಷಿಯಾಯ್ತು ನನಗೆ ಪತ್ರ ಬಂದಾಗ..ಧನ್ಯವಾದಗಳು.

shivu.k said...

ಡಾ.ಕೃಷ್ಣಮೂರ್ತಿ ಸರ್,

ನೀವು ಬೆಳಿಗ್ಗೆ ಫೋನ್ ಮಾಡಿ ವಿಶ್ ಮಾಡಿದ್ರಿ..ಕಾಮೆಂಟ್ ಹಾಕಿ ಕೂಡ ಅಭಿನಂದಿಸುತ್ತಿದ್ದೀರಿ..ನನಗಿಂತ ನೀವೇ ಹೆಚ್ಚು ಸಂತೋಷ ಪಡುತ್ತಿರುವುದು ನನಗೆ ಒಂಥರ ಮರೆಯಲಾಗದ ಅನುಭವ. ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

shivu.k said...

ಮೂರ್ತಿ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನನ್ನ ಫೋಟೊಗ್ರಫಿಯನ್ನು ಚೆನ್ನಾಗಿ ನೋಡಿದ್ದೀರಿ ಅನ್ನಿಸುತ್ತೆ. ಬರಹದಲ್ಲಿ ಏನೋ ಒಂಥರ ಮಜವಿದೆಯೆನ್ನಿಸುತ್ತೆ. ಅದನ್ನು ಈ ರೀತಿ ಗುರುತಿಸಿದಾಗ ಮತ್ತಷ್ಟು ಬರೆಯುವ ಉಮೇದು ಉಂಟಾಗುತ್ತದೆ. ಇದು ನಮ್ಮ ಎಲ್ಲಾ ಬ್ಲಾಗಿಗರಿಗೂ ಸಿಗುವಂತಾಗಲಿ ಎನ್ನುವುದು ನನ್ನ ಆಸೆ.
ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಪ್ರಭಾಮಣಿ ನಾಗರಾಜ್,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಹೃದಯಪೂರ್ವಕ ಅಭಿನಂದನೆಗೆ ಧನ್ಯವಾದಗಳು.

shivu.k said...

ದೊಡ್ಡಮನಿ ಮಂಜು,

ಥ್ಯಾಂಕ್ಸ್.

shivu.k said...

ವನಿತಾ,

ಥ್ಯಾಂಕ್ಸ್.

shivu.k said...

ಅನಾನಿಮಿಯಸ್ ಬಾಶೆ,

ಥ್ಯಾಂಕ್ಸ್.

shivu.k said...

ಗಣೇಶ್ ಕಾಳಿಸರ ಸರ್,

ಥ್ಯಾಂಕ್ಸ್..

shivu.k said...

ಸುಮನಾ ಮೇಡಮ್,

ನಿಮ್ಮ ಪ್ರೋತ್ಸಾಹದಿಂದಲೇ ಇದೆಲ್ಲಾ ಆಗುತ್ತಿರುವುದು ಅಂತ ನನ್ನ ಅಭಿಪ್ರಾಯ. ನಿಮ್ಮ ಆಶಯ ಅಭಿಪ್ರಾಯಕ್ಕೆ ನನ್ನ ಧನ್ಯವಾದಗಳು.

shivu.k said...

ಹಳ್ಳಿ ಹುಡುಗ ತರುಣ್,

ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಪ್ರಕಾಶ್ ಹೆಗಡೆ ಸರ್,

ನಿಮ್ಮ ಪ್ರೋತ್ಸಾಹಕ್ಕೆ ಅಭಿನಂದನೆಗೆ ಧನ್ಯವಾದಗಳು.

shivu.k said...

ಸುಧೇಶ್,

ನನ್ನ ಎಲ್ಲ ಬರಹವನ್ನು ಓದಿರುವುವವರಲ್ಲಿ ನೀವು ಒಬ್ಬರು. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಥ್ಯಾಂಕ್ಸ್..

ಧಾರವಾಡದಲ್ಲಿ ನಿಮ್ಮನ್ನು ಬೇಟಿಯಾಗುವ ಆಸೆ. ಸಾಧ್ಯವೇ...?

shivu.k said...

ಅನಂತರಾಜ್ ಸರ್,

ಬ್ಲಾಗ್ ಲೋಕಕ್ಕೆ ಮೊದಲು ಬಂದಾಗ ನನಗೇನು ಗೊತ್ತಿರಲಿಲ್ಲ. ಈಗ ನನಗೆ ನೂರಾರು ಬ್ಲಾಗ್ ಗೆಳೆಯರು ಇರುವುದರಿಂದ ನನಗೆ ದೊಡ್ಡ ಶಕ್ತಿ ಬಂದಂತೆ ಭಾಶವಾಗುತ್ತಿದೆ...ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಆಶ್ವಿನಿ,

ನನ್ನ ಬ್ಲಾಗಿಗೆ ಸ್ವಾಗತ.

ನಿಮ್ಮ ಮಾತು ನನಗೆ ಖುಷಿ ಕೊಡುತ್ತಿದೆ. ಧನ್ಯವಾದಗಳು.

ಮನಸಿನ ಮಾತುಗಳು said...

ಶುಭಾಷಯ ಶಿವಣ್ಣ ಅವರೇ,ಕಷ್ಟ ಪಟ್ಟರೆ ಪ್ರತಿ ಫಲ ಇದ್ದೇ ಇದೆ ಅಂತ ತೋರಿಸಿಕೊಟ್ಟಿದ್ದೀರಿ ನೀವು.ನೀವು ನಮಗೆಲ್ಲ ಒಳ್ಳೆಯ ಉದಾಹರಣೆಯಾಗಿದ್ದಿರಿ.

ನಮಗೆಲ್ಲರಿಗೂ ಹೆಮ್ಮೆ ತರುವ ವಿಷಯ ಇದು. ನಂಗಂತೂ ಬಹಳ ಸಂತೋಷ ಆಯ್ತು.ಇನ್ನೂ ಇಂಥ ಬಹುಮಾನಗಳು ಮತ್ತೆ ಮತ್ತೆ ನಿಮ್ಮನ್ನು ಹುಡುಕಿಕೊಂಡು ಬರಲಿ ಅಂತ ನಾನು ಆಶಿಸುತ್ತೇನೆ.

Nempu Guru said...

ಹಾರ್ದಿಕ ಶುಭಾಶಯಗಳು ಶಿವು. ನಿಮ್ಮ ಶ್ರಮಕ್ಕೆ, ಸಾಧನೆಗೆ ಇನ್ನಷ್ಟು ಪ್ರಶಸ್ತಿಗಳು, ಪುರಸ್ಕಾರಗಳು ಬರಲಿ.

Guruprasad said...

ನನಗೂ ಫುಲ್ ಕುಷಿ ಆಯಿತು .... ಶಿವೂ,,,, ಒಳ್ಳೆಯದಾಗಲಿ.... ಈ ಪ್ರಶಸ್ತಿ ನಿಮಗೆ ಮತ್ತಷ್ಟು ಸ್ಪೂರ್ತಿ ಯನ್ನು ಕೊಟ್ಟು,,, ನಿಮ್ಮಿಂದ ಇನ್ನು ಒಳ್ಳೆಯ ಪುಸ್ತಕಗಳು ಬರುವಂತೆ ಆಗಲಿ.....
ಗುರು

shridhar said...

All the best Shivu sir .. Nice to know u got the prize ...

umesh desai said...

shivu sir congrats
and wish u all the success in ur new field--book wiriting

b.saleem said...

Congragulations

ಅಪ್ಪ-ಅಮ್ಮ(Appa-Amma) said...

ಶಿವು ಅವರೇ,

ಅಭಿನಂದನೆಗಳು !
ನಿಮ್ಮ ಯಶಸ್ಸು ಹೀಗೆ ಸಾಗಲಿ..

ಕನ್ನಡ ನುಡಿಗೆ ನಿಮ್ಮ ಅನೇಕ ಕೃತಿಗಳ ಸೇವೆ ಆಗಲಿ

balasubramanya said...

ಗೆಳೆಯ ಶಿವೂ ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ .ನಿಮಗೆ ಇನ್ನೂ ಇಂತಹ ಪ್ರಶಸ್ತಿಗಳು ಸಿಗಲಿ. ನಮ್ಮೆಲ್ಲರ ಸಂತಸ ಇಮ್ಮಡಿಸಲಿ. ಇಂತಹ ಕ್ಷಣಗಳು ನಿಮ್ಮನ್ನು ಇನ್ನಷ್ಟು ಪ್ರಕಾಶಗೊಳಿಸಿ ನಿಮ್ಮ ಪ್ರತಿಭೆ ಬೆಳಗಲಿ.ನನ್ನ ಕುಟುಂಬದ ಎಲ್ಲರಿಂದ ಶುಭ ಹಾರೈಕೆಗಳು ನಿಮಗೆ.

ಬಾಲು ಸಾಯಿಮನೆ said...

ಅಭಿನಂದನೆಗಳು; ಇನ್ನಷ್ಟು ಲೇಖನ ಸಂಗ್ರಹಗಳು ಬರಲಿ.
ಬಾಲು ಸಾಯಿಮನೆ

Pradeep said...

ಅಭಿನಂದನೆಗಳು ಸಾರ್! :) :)

Ranjita said...

Conrats shivu saar :)

Nisha said...

:-) ಹಾರ್ದಿಕ ಶುಭಾಶಯಗಳು. ಇನ್ನಷ್ಟು ಪ್ರಶಸ್ತಿಗಳು, ಪುರಸ್ಕಾರಗಳು ಬರಲಿ ಎ೦ದು ಹಾರೈಸುತ್ತೇನೆ.

KalavathiMadhusudan said...

SHIVU SIR NIMMA LEKHANA TUMBA CHENNAAGIRATTE.NIMAGE PRASHASTI SIKKIRUVUDU SANTASADA VISHAYA. "WISH YOU BEST OF LUCK"
ABHINANDANEGALU.

Shweta said...

Shivu sir,kushi aytu odi,congrats....

nimma blog nalli enaadru hosa vishaya idde eruttade endokonde naanu tappade visit maadteeni...

Laxman (ಲಕ್ಷ್ಮಣ ಬಿರಾದಾರ) said...

ಅಭಿನಂದನೆಗಳು

Anonymous said...

ಶಿವೂ ಅವರಿಗೆ ಅಭಿನಂದನೆ ಗಳು
ಸ್ವರ್ಣ

ಕ್ಷಣ... ಚಿಂತನೆ... said...

ಶಿವು ಅವರೆ, ಅಭಿನಂದನೆಗಳು. ವೆಂಡರ್‍ ಕಣ್ಣಿಗೆ ವಂಡರ್‌ಫುಲ್‌ ಆಗಿ ಪ್ರಶಸ್ತಿ ಬಂದಿದ್ದು ಸಂತಸವಾಗಿದೆ.
ಇನ್ನಷ್ಟು ಯಶ ಸಿಗಲಿ.

ಸ್ನೇಹದಿಂದ,

nagesh said...

ಶಿವು ಸರ್...

ನಿಜಕ್ಕೂ ಖುಷಿಯಾಗುತ್ತಿದೆ...

all the best.............

Shashi jois said...

ಅಭಿನಂದನೆಗಳು ಶಿವು :-)

rukminimalanisarga.blogspot.com said...

abhinandanegalu.santoshavayitu.

ಚಿತ್ರಾ said...

ಶಿವೂ ,
ಫೋಟೋಗ್ರಾಫಿ ಬಹುಮಾನಗಳ ಜೊತೆಗೆ ಇನ್ನೊಂದು ಸಾಧನೆಯ ಗರಿ ನಿಮ್ಮ ಕಿರೀಟಕ್ಕೆ ! ಹೀಗೆ ಮುಂದುವರಿಯಲಿ ಬಹುಮಾನಗಳ ಗಳಿಕೆ !! ಹೃತ್ಪೂರ್ವಕ ಅಭಿನಂದನೆಗಳು .

* ನಮನ * said...

ಅಭಿನಂದನೆಗಳು ಶಿವು ಸರ್
http://thatskannada.oneindia.in/literature/book/2010/1020-dara-bendra-grantha-award-announced.html

http://thatskannada.oneindia.in/comment/2010/10/47418.html

shivu.k said...

ದಿವ್ಯ,

ಬರಹದ ವಿಚಾರದಲ್ಲಿ ನಾನು ಕಷ್ಟಪಡುತ್ತಿಲ್ಲ. ಆದ್ರೆ ಬರೆಯುವಾಗ ಖುಷಿ ಪಡುತ್ತೀನಿ ಅದರ ಪ್ರತಿಫಲವಿರಬೇಕು. ನಿಮ್ಮೆಲ್ಲರ ಪ್ರೋತ್ಸಾಹವಿಲ್ಲದಿದ್ದಲ್ಲಿ ನಾನು ಇಷ್ಟೆಲ್ಲಾ ಬರೆಯುತ್ತಿರಲಿಲ್ಲ...ಧನ್ಯವಾದಗಳು.

shivu.k said...

Nempu guru,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಗುರು,

ನಿಮಗೆ ಪುಲ್ ಖುಷಿಯಾಗಿದ್ದು ನನಗೂ ಖುಷಿ ಇದು ಎಲ್ಲಾ ಬ್ಲಾಗಿಗರಿಗೂ ಬಂದ ಬಹುಮಾನ. ನಿಮ್ಮ ಪ್ರೋತ್ಸಾಹಕ್ಕೆ ಋಣಿ..
ಧನ್ಯವಾದಗಳು.

shivu.k said...

ಶ್ರೀಧರ್ ಸರ್,

ಧನ್ಯವಾದಗಳು.

shivu.k said...

ಉಮೇಶ್ ದೇಸಾಯ್ ಸರ್,
ನೀವು ನನ್ನನ್ನು ಸರ್ ಅನ್ನುವುದು ನನಗೆ ಮುಜುಗರವಾಗುತ್ತದೆ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಋಣಿಯಾಗಿರಬೇಕು. ಧನ್ಯವಾದಗಳು.

shivu.k said...

ಸಲೀಂ,

ಥ್ಯಾಂಕ್ಸ್...ಧಾರವಾಡದಲ್ಲಿ ನಿಮ್ಮನ್ನು ಬೇಟಿಯಾಗುತ್ತೇನೆ..

shivu.k said...

ಅಪ್ಪ-ಅಮ್ಮ ಬ್ಲಾಗ್ ಗೆಳೆಯರೆ,

ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ನಿಮ್ಮೊಳಗೊಬ್ಬ ಬಾಲು ಸರ್,

ಮೊದಲು ಫೋನ್ ಮಾಡಿ ಹಾರೈಸಿದ್ದೀರಿ. ಈಗ ಖುಷಿಯಿಂದ ಮತ್ತೆ ಕಾಮೆಂಟಿಸಿದ್ದೀರಿ..ಖುಷಿಯಿಂದಾಗಿ ನನಗೆ ಉತ್ತರಕೊಡಲು ಸಾಧ್ಯವಾಗುತ್ತಿಲ್ಲ...ನಾವೆಲ್ಲಾ ಒಟ್ಟಾಗಿ ಮತ್ತಷ್ಟು ಕೃಷಿ ಮಾಡೋಣ ಏನಂತೀರಿ..

ಧನ್ಯವಾದಗಳು.

shivu.k said...

ಬಾಲು ಸಾಯಿಮನೆ ಸರ್,

ಧನ್ಯವಾದಗಳು.

shivu.k said...

ಪ್ರದೀಪ್,

ಥ್ಯಾಂಕ್ಸ್..

shivu.k said...

ರಂಜಿತಾ,

ಥ್ಯಾಂಕ್ಯೂ...

shivu.k said...

ನಿಷಾ,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ..

shivu.k said...

ಕಲರವ,

ನನ್ನ ಲೇಖನಗಳನ್ನು ಮೊದಲಿನಿಂದಲೂ ಓದುತ್ತಿರುವುದಕ್ಕೆ ಧನ್ಯವಾದಗಳು. ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಶ್ವೇತ ಮೇಡಮ್,

ನೀವು ಹೊಸದನ್ನು ನೀರೀಕ್ಷಿಸುತ್ತೀರಿ. ಹಾಗೆ ನನಗೂ ಹೊಸತರ ಹಿಂದೆ ಬೀಳದಿದ್ದಲ್ಲಿ ಬೇಸರವಾಗಿಬಿಡುತ್ತದೆ. ಅದಕ್ಕಾಗಿ ಇಂಥ ಪ್ರಯತ್ನಗಳನ್ನು ಮಾಡುತ್ತಿರುತ್ತೇನೆ..ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಲಕ್ಷಣ ಬಿರದಾರ್ ಸರ್,

ಥ್ಯಾಂಕ್ಸ್.

shivu.k said...

ಸ್ವರ್ಣ,

ನನ್ನ ಬ್ಲಾಗಿಗೆ ಸ್ವಾಗತ. ಧನ್ಯವಾದಗಳು.

shivu.k said...

ಚಂದ್ರು ಸರ್,

ವೆಂಡರ್ ಕಣ್ಣನ್ನು ನೀವೆಲ್ಲಾ ಪ್ರೀತಿಯಿಂದ ಒಪ್ಪಿಕೊಂಡಿದ್ದೀರಿ. ಎಲ್ಲರ ಹಾರೈಕೆಯಿಂದಾಗಿ ಪ್ರೋತ್ಸಾಹದಿಂದಾಗಿ ಇದೆಲ್ಲಾ ಆಗಿದೆ. ಅದಕ್ಕಾಗಿ ಧನ್ಯವಾದಗಳು.

shivu.k said...

ನಾಗೇಶ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಶಶಿಅಕ್ಕ,

ಥ್ಯಾಂಕ್ಸ್..

shivu.k said...

ಮಾಲ ಮೇಡಮ್,

ನಿಮಗೆ ಸಂತೋಷವಾಗಿದ್ದು ನನಗೂ ಖುಷಿ ಧನ್ಯವಾದಗಳು.

shivu.k said...

ಚಿತ್ರಾ,

ಫೋಟೊಗ್ರಫಿಯ ಬಹುಮಾನ ಇತ್ತೀಚೆಗೆ ನನಗೆ ಖುಷಿಕೊಡುತ್ತಿಲ್ಲ. ಏಕೆಂದರೆ ಮೊದಲ ಬಹುಮಾನದಲ್ಲಿರುವ ಥ್ರಿಲ್ ಮುಂದಿನವುಗಳಿಗೆ ಇರುವುದಿಲ್ಲ. ಹಾಗೆ ಮೊದಲ ಪುಸ್ತಕಕ್ಕೆ ಮೊದಲ ಬಹುಮಾನ ಇದು. ನನಗೆ ಮರೆಯಲಾಗದ್ದು. ನಿಮ್ಮ ಅಭಿನಂದನೆಗೆ ಧನ್ಯವಾದಗಳು. ನೀವು ಬೆಂಗಳೂರಿಗೆ ಬಂದಾಗ ನನಗೆ ಫೋನ್ ಮಾಡಿ ವೆಂಡರ್ ಕಣ್ಣು ಪುಸ್ತಕವನ್ನು ನನ್ನಿಂದ ಪಡೆದುಕೊಂಡು ಹೋಗಿದ್ದೀರಿ. ಅದನ್ನು ಮರೆಯಲಾದಿತೇ...ನಿಮ್ಮ ಅಭಿಮಾನ ಮತ್ತು ಪ್ರೀತಿಗೆ ಧನ್ಯವಾದಗಳು.

shivu.k said...

ನಮನ ಸರ್,

ನೀವು ಹೇಳಿದಂತೆ ದಟ್ಸ್ ಕನ್ನಡದಲ್ಲಿ ನೋಡಿದೆ. ಇಂಥ ವಿಚಾರಗಳನ್ನು ಹಾಕಿ ನಮ್ಮನ್ನು ಪ್ರೋತ್ಸಾಹಿಸುವ ಪ್ರಸಾದ್ ನಾಯಕ್ ಟೀಂಗೆ ನನ್ನ ಕಡೆಯಿಂದ ಧನ್ಯವಾದಗಳು. ನನಗೆ ಮಾಹಿತಿ ನೀಡಿದ ನಿಮಗೂ ಧನ್ಯವಾದಗಳು

Malingaraya Metri said...

ಶಿವು ಅಣ್ಣ ಬಹುಮಾನ ಬಂದಿದಕ್ಕ ತುಂಬಾ ಖುಷಿಯಾಯ್ತು ,,,
ಅಭಿನಂದನೆಗಳು

shivu.k said...

Malingaraya maithri,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಅಭಿನಂದನೆಗೆ ಧನ್ಯವಾದಗಳು.

V.R.BHAT said...

ನಿಮಗೆ ಬಂದ ಪ್ರಶಸ್ತಿ, ಬಹುಶಃ ಬ್ಲಾಗಿಗರಿಗೆಲ್ಲ ಸಂದ ಪ್ರಶಸ್ತಿ, ನಿಮಗೆ ಶುಭಾಶಯಗಳು, ಅಭಿನಂದನೆಗಳು ಮತ್ತು ಧನ್ಯವಾದಗಳು

Jayalaxmi said...

ಈ ಶಿವು ಅನ್ನುವ ಪ್ಯಾಟಿ ಹುಡುಗನನ್ನು ನೋಡಿದ ದಿನದಿಂದಲೇ ಹಳ್ಳಿಯಲ್ಲಿರುವ ಚಿಕ್ಕಪ್ಪನ ಮಗನೇನೊ ಅನ್ನುವಂಥ ಆತ್ಮೀಯತೆ ಮನದಲ್ಲಿ ಮೂಡಿದ್ದು ಸುಳ್ಳಲ್ಲ. ಅಂಥ ತಮ್ಮನ ಪುಸ್ತಕಕ್ಕೆ ಪ್ರಶಸ್ತಿ ಬಂದಿರುವುದು, ವೆಂಡರ್ ಕಣ್ಣು ಬಗ್ಗೆ ಜಯಂತ್ ಕಾಯ್ಕಿಣಿ ನಾಳೆ ಮಾತಾಡುತ್ತಿರುವುದು ಸಂತಸದ ಹೆಮ್ಮೆಯ ವಿಷಯ. ಶುಭಾಶಯಗಳು ಶಿವು. ನಿಮ್ಮ ಸರಲತೆ, ನಿಮ್ಮ ಕ್ಯಾಮೆರಾದ ಸೂಕ್ಷ್ಮತೆ ಮತ್ತು ಬರಹದ ಆಪ್ತತೆ ನಿಮ್ಮನ್ನು ಇನ್ನಷ್ಟು, ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ. :)

shravana said...

Congratulations Sir :)

ಮನಸಿನಮನೆಯವನು said...

ಅಭಿನಂದನೆಗಳು...

ನನ್ನ 'ಮನಸಿನಮನೆ'ಗೂ ಬನ್ನಿ..

shivu.k said...

ವಿ.ಅರ್.ಭಟ್ ಸರ್,

ನನ್ನ ಪ್ರಶಸ್ಥಿ ಖಂಡಿತ ಎಲ್ಲಾ ಬ್ಲಾಗಿಗರಲ್ಲೂ ಸ್ಫೂರ್ತಿ ನೀಡುತ್ತಿರುವುದು ನನಗೆ ತುಂಬಾ ಖುಷಿ ವಿಚಾರ. ಒಟ್ಟಾರೆ ಇದು ಎಲ್ಲರಿಗೂ ಸಂಧ ಸಮ್ಮಾನವೆಂದು ನನ್ನ ಅಭಿಪ್ರಾಯ. ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಜಯಲಕ್ಷ್ಮಿ ಮೇಡಮ್,

ನೀವು ನನ್ನ ತಮ್ಮನೆಂದಿರುವುದು ನನಗೆ ತುಂಬಾ ಖುಷಿ ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಋಣಿ. ಕಾರ್ಯಕ್ರಮ ಮುಗಿಸಿ ಬಂದಿದ್ದೇನೆ. ನಾಲ್ಕೈದು ದಿನಗಳಲ್ಲಿ ನಮ್ಮ ಕಾರ್ಯಕ್ರಮದ ವಿಡಿಯೋ ಬರುತ್ತದೆ ಅದನ್ನು ಸಾಧ್ಯವಾದರೆ ಬ್ಲಾಗಿನಲ್ಲೋ ಅಥವ ಬಜ್‍ನಲ್ಲಿಯೋ ಹಾಕುತ್ತೇನೆ.
ಮತ್ತೊಮ್ಮೆ ನಿಮ್ಮ ಶುಭಾಶಯಗಳಿಗೆ ನನ್ನ ಧನ್ಯವಾದಗಳು.

shivu.k said...

ಶ್ರವಣ,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಕತ್ತಲೆಮನೆ,

ಧನ್ಯವಾದಗಳು. ಖಂಡಿತ ನಿಮ್ಮ ಮನಸಿನ ಮನೆಗೆ ಬರುತ್ತೇನೆ..

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ತಮ್ಮ ಸಾಧನೆಗೆ ಅಭಿನಂದನೆಗಳು. ತಮ್ಮ ಪ್ರಶಸ್ತಿ ನಮ್ಮೆಲ್ಲರ ಹೆಮ್ಮೆಯ ವಿಷಯ.
ಬ್ಲೋಗ್ಗರ್ಸ್ಗಳಿಗೆ ಜೈ ಹೋ!

shivu.k said...

ಸೀತಾರಾಂ ಸರ್,

ಬ್ಲಾಗರ್ಸ್‌ಗಳಿಗೆ ಜೈಹೋ..ನನ್ನದೂ ದ್ವನಿಯಿದೆ...

Archu said...

congratulations shivu :)

shivu.k said...

ಅರ್ಚನ ಮೇಡಾಮ್,

ಥ್ಯಾಂಕ್ಸ್..