Monday, August 23, 2010

ಟಿ.ವಿ, ಡಿವಿಡಿ ಪ್ಲೆಯರ್, ಸ್ಪೀಕರ್ ಬಾಕ್ಸ್, ಮಿಕ್ಸರ್ ಗ್ರೈಂಡರ್, ಮಿಕ್ಸಿ......


      ಕಳೆದ ಒಂದು ತಿಂಗಳಿಂದ ಇಡೀ ಕಾರ್ಯಕ್ರವನ್ನು ಒಂದು ಸಿನಿಮಾದ ಚಿತ್ರಕತೆಯಂತೆ ರೂಪರೇಷೆಗಳನ್ನು ಪಕ್ಕಾ ಮಾಡಿಕೊಂಡು ಕೊನೆಯಲ್ಲಿ ನಮ್ಮ ಹುಡುಗರಾದ ಅನಿಲ್, ನಾಗರಾಜ್, ನವೀನ್, ಪ್ರವೀಣ್, ಶಿವಪ್ರಕಾಶ್, ಉದಯ್ ಹೆಗಡೆ ಇವರೆಲ್ಲರ ಜೊತೆ ಸೇರಿ ಚರ್ಚಿಸಿದ್ದೆ.   ಚಿತ್ರಕತೆ ಚೆನ್ನಾಗಿದ್ದಿದ್ದರಿಂದ ಕಾರ್ಯಕ್ರಮವೂ ಚೆನ್ನಾಗಿ ಆಯಿತು. ಇಡೀ ಕಾರ್ಯಕ್ರಮದಲ್ಲಿ ಕುವೈಟಿನ ಮೃದುಮನಸ್ಸಿನ ಸುಗುಣಕ್ಕ ಮತ್ತು ದೆಹಲಿಯ ಮನದಾಳದ ಪ್ರವೀಣ್ ಎನ್ನುವ ಸುಂದರಾಂಗನ ನಿರೂಪಣೆ ಸೇರಿದಂತೆ ಇತರ ವ್ಯವಸ್ಥೆಗಳು ಚೆನ್ನಾಗಿದ್ದು ನಾವು ನಿರೀಕ್ಷಿಸಿದ ಎಲ್ಲರೂ  ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿಬಿಟ್ಟಿದರು. ಆ ನಂತರ ನಡೆದಿದ್ದನ್ನು ನಾನು ಈಗ ಹೇಳಲೇಬೇಕಾಗಿದೆ. ಇನ್ನೇನು ಎಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ ನಮ್ಮ ಹುಡುಗರು ತಮ್ಮ ತರಲೆ ಬುದ್ದಿಯನ್ನು ಹೊರಹಾಕಿಬಿಟ್ಟಿದ್ದರು. ಮತ್ತೆ ನನಗೆ "ದಿ ಮಿರರ್" [ಇರಾನಿ ಸಿನಿಮಾ]ನೆನಪಾಗತೊಡಗಿತು. ಏಕೆಂದರೆ ನಾನು ಆ ಚಿತ್ರದ ನಿರ್ಧೇಶಕನ ಸ್ಥಿತಿಗೆ ಬಂದುಬಿಟ್ಟಿದ್ದೆ. ಆ ಸಿನಿಮಾದ ಅರ್ಧದಲ್ಲೇ ಬಾಲನಟಿ ತನ್ನಿಂದ ಇದು ಸಾಧ್ಯವಿಲ್ಲವೆಂದು ತನ್ನ ಕೈಗೆ ಕಟ್ಟಿದ ಬ್ಯಾಂಡೇಜನ್ನು ಕಿತ್ತೆಸೆದು ನಾನು ನಟಿಸಲಾರೆ ಎಂದು ಹೊರನಡೆದಾಗ ಆ ನಿರ್ಧೇಶಕ ಜಾಫರ್ ಫನಾಯ್ ಅನುಭವಿಸಿದ ಸ್ಥಿತಿಯನ್ನು ನನಗೆ ತಂದೊಡ್ಡಿದ್ದರು.


ಇಷ್ಟಕ್ಕೂ ಅವರು ಮಾಡಿದ್ದೇನೆಂದರೆ  ನನಗೆ ಗೊತ್ತಿಲ್ಲದಂತೆ ಅವರು ಹೊಸದೊಂದು ವಿಭಿನ್ನತೆಯನ್ನು ತೋರಿಸಿದ್ದು.   ಇರಾನಿ ನಿರ್ಧೇಶಕ ಜಾಫರ್ ಫನಾಯ್‍ನಂತೆ ಮುಂದೆ ಏನಾಗುತ್ತದೆಯೆನ್ನುವುದನ್ನು ನೋಡೇ ಬಿಡೋಣ ಅಂತ ಆತ ನಿರ್ಧರಿಸಿದಂತೆ ನಾನು ಕೂಡ ಮಗುವಿನಂತೆ ಕುತೂಹಲಗೊಂಡಿದ್ದೆ. ಆ ಸಿನಿಮಾದಂತೆ ಮುಂದೆ ಆಗಿದ್ದೆಲ್ಲಾ ನನ್ನ ಮನಸ್ಸಿಗೆ, ಕನಸಿಗೆ, ಕಲ್ಪನೆಗೆ, ಮೀರಿದ್ದು. ಮತ್ತೆ ನಿಮ್ಮ ಮನಸ್ಸಿಗೆ, ಕನಸಿಗೆ, ಕಲ್ಪನೆಗೆ ಮೀರಿದ್ದು ಕೂಡ.

 ಕಾರ್ಯಕ್ರಮ ಮುಗಿದ ಮೇಲೆ ಬ್ಲಾಗ್ ಗೆಳೆಯರೆಲ್ಲರೂ ಸ್ವಲ್ಪ ಹೊತ್ತು ಇರಬೇಕು ಮತ್ತೊಂದು ಬಹುಮಾನ ವಿತರಣೆ ಕಾರ್ಯಕ್ರಮವಿದೆಯೆಂದು ಮೈಕಿನಲ್ಲಿ ಹೇಳಿದ್ದರಿಂದ ವಿದೇಶಗಳಿಂದ ಬಂದ ಬ್ಲಾಗಿಗರೂ ಸೇರಿದಂತೆ ಎಲ್ಲರೂ ಹಾಗೆ ತಮ್ಮ ತಮ್ಮ ಆಸನದಲ್ಲಿ ಕುಳಿತರು.  
   ಶುರುವಾಯಿತಲ್ಲ ಬಹುಮಾನ ವಿತರಣೆ ಕಾರ್ಯಕ್ರಮ. ಬಹುಮಾನ ವಿತರಣೆಗಾಗಿ ಮತ್ತೆ ಸುಗುಣಕ್ಕ ಮೈಕ್ ಹಿಡಿದರು. ಒಬ್ಬೊಬ್ಬರಾಗಿ ಬಂದು ಬಹುಮಾನವನ್ನು ಪಡೆದುಕೊಂಡರು. ನಾನು ನಾಲ್ಕು  ಬ್ಲಾಗಿಗರಿಗೆ ಕೊಡುವಷ್ಟರಲ್ಲಿ ಸುಸ್ತಾಗಿಬಿಟ್ಟೆ. ಏಕೆಂದರೆ ಒಂದೊಂದು ಬಹುಮಾನವೂ ಟಿ.ವಿ ಬಾಕ್ಸುಗಳಷ್ಟು ದೊಡ್ಡದಾಗಿದ್ದು ಬಾರವಾಗಿದ್ದವು.  ನನಗೆ ಸುಸ್ತಾಗಿ ನಂತರ ಬಹುಮಾನ ಕೊಡಲು ವಿ.ಅರ್.ಭಟ್ ಮತ್ತು ಡಾ.ಕೃಷ್ಣಮೂರ್ತಿಯವರನ್ನು ವೇದಿಕೆಗೆ ಕರೆದು ನಾನು ತಪ್ಪಿಸಿಕೊಂಡೆ. ಅವರಿಗೂ ಭಾರವನ್ನು ಹೊರಲಾರದೆ ಕೊನೆಗೆ ಪ್ರಕಾಶ್ ಹೆಗೆಡೆ ಬಂದರು.  ಕೊನೆಗೆ ನೋಡಿದರೆ ನಾನು ಮತ್ತು ನನ್ನ ಶ್ರೀಮತಿ ಹೇಮಾಶ್ರೀ ಸೇರಿದಂತೆ ಪ್ರತಿಯೊಬ್ಬ ಬ್ಲಾಗಿಗನೂ ಬಹುಮಾನ ವಿಜೇತ ಆಗಿದ್ದರು. ಎಲ್ಲರ ಕೈಯಲ್ಲೂ ದೊಡ್ಡ ಬಹುಮಾನದ ಬಾಕ್ಸುಗಳು.  ಇಷ್ಟು ದೊಡ್ಡದಾದ ಬಾಕ್ಸುಗಳನ್ನು ಬಹುಮಾನವಾಗಿ ಕೊಟ್ಟಿದ್ದಾರಲ್ಲ ಇದರೊಳಗೆ ಏನಿರಬಹುದು? ಟಿ.ವಿ, ಡಿವಿಡಿ ಪ್ಲೆಯರ್, ಸ್ಪೀಕರ್ ಬಾಕ್ಸ್, ಮಿಕ್ಸರ್ ಗ್ರೈಂಡರ್, ಮಿಕ್ಸಿ................ಹೀಗೆ ಎಲ್ಲರ ಕಲ್ಪನೆಗಳೂ ಆಕಾಶಕ್ಕೆ ಹಾರಾಡುತ್ತಿದ್ದವು.
     

         ನಮ್ಮ ಸಂಭ್ರಮ ಹೇಗಿತ್ತೆಂದರೆ ನಾವು ಬುಕ್ ಮಾಡಿದ್ದ ನಯನ ಸಭಾಂಗಣದ ಸಮಯ ಮುಗಿದಿದ್ದು ಗೊತ್ತಾಗಲಿಲ್ಲ. ಎಲ್ಲರೂ ಹೊರಗೆ ಬಂದೆವು.   ಹೊರಗೆ ಬಂದಾಗ ಅಲ್ಲೊಂದು ವಿಶಾಲ ಜಾಗದ ನಡುವೆ ಹತ್ತು ಮೆಟ್ಟಿಲುಗಳ ಜಾಗವೇ ನಮಗೆ ಒಂಥರ ವೇದಿಕೆಯಾಗಿಬಿಟ್ಟಿತ್ತು.  ಒಬ್ಬೊಬ್ಬರಾಗಿ ತಮಗೆ ಬಂದ ಬಾಕ್ಸುಗಳನ್ನು ಬಿಚ್ಚಿ ತಮ್ಮ ಗಿಫ್ಟುಗಳನ್ನು ಹೊರತೆಗೆಯತೊಡಗಿದರು.  ಅದನ್ನು ನಾನು ಬರೆದು ವಿವರಿಸುವುದಕ್ಕಿಂತ ನೀವೇ ಫೋಟೊಗಳನ್ನು ನೋಡಿಬಿಡಿ.  ನಕ್ಕು ನಕ್ಕು ಹೊಟ್ಟೆಯಲ್ಲಿ ಹುಣ್ಣಾದರೆ ನಾನು ಜವಾಬ್ದಾರನಲ್ಲ...........

 ಭಾರವಾದ ತಮ್ಮ ಉಡುಗೊರೆ ಬಾಕ್ಸುಗಳನ್ನು ಹೊತ್ತು ಹೊರತರುತ್ತಿರುವ ಬ್ಲಾಗಿಗರು.


 ತುಂಟ ರಾಘವೇಂದ್ರನಿಗೆ ಹುಡುಗಿಯರಿಗೆ ಲೈನ್ ಹೊಡೆಯಲು ಬಿಳಿಹಾಳೆಯ ಮೇಲೆ ಒಂದು ಸ್ಕೇಲು ಮತ್ತು ಗುರಿಯಿಡಲು ಒಂದು ಚಾಟರಬಿಲ್ಲು

  
ವಿ.ಅರ್‍.ಭಟ್ ರವರಿಗೆ ಸಿಕ್ಕಿದ್ದು ಗಣೇಶ ಬೀಡಿ ಮತ್ತು ಬೆಂಕಿಪೊಟ್ಟಣ. ಅದನ್ನು ಸೇದಲು ಜೊತೆಯಾದದ್ದು ಡಾ.ಡಿ.ಟಿ.ಕೆ ಕೃಷ್ಣಮೂರ್ತಿ ಸರ್.[ಇದೆಲ್ಲಾ ತಮಾಷೆಗಾಗಿ ಮಾಡಿದ್ದರಿಂದ ಭಟ್ಟರ ಗೆಳೆಯರು ಮತ್ತು ಅಭಿಮಾನಿಗಳು ಮತ್ತು ಡಾ.ಡಿ.ಟಿ.ಕೆ ಕೃಷ್ಣಮೂರ್ತಿಯವರ ಗೆಳೆಯರು, ಮನೆಯವರು, ಮತ್ತು ಅವರ ಗ್ರಾಹಕರು ತಪ್ಪುತಿಳಿಯಬಾರದಾಗಿ ವಿನಂತಿ]


 ಮದುಮಗ ಶಿವಪ್ರಕಾಶನಿಗೆ ಬಹ್ಮಚರ್ಯವೇ ಜೀವನ ಪುಸ್ತಕ



ಕುವೈಟಿನಿಂದ ಬಂದಿರುವ   ಮೃದುಮನಸ್ಸಿನ ಸುಗಣಕ್ಕನಿಗೆ ಪ್ಲಾಸ್ಟಿಕ್ ಬಳೆ, ಪ್ಲಾಸ್ಟಿಕ್ ಏರ್‍ಪಿನ್,  ಕಿವಿಯೋಲೆ, ಜೊತೆಗೊಂದು ಕರವಸ್ತ್ರ

 ಶಶಿ ಅಕ್ಕನಿಗೆ  ಮಗ್ಗಿ ಪುಸ್ತಕ ಮತ್ತು ಮ್ಯಾಗಿ ಪೊಟ್ಟಣ.


 ಮೇಸ್ಟು ನವೀನ್‍ಗೆ[ಹಳ್ಳಿಹುಡುಗ]  ಸಿಕ್ಕಿದ್ದು ಸೀಮೆ ಸುಣ್ಣ

 ಲಂಡನ್ನಿನ ಚೇತನ ಭಟ್ ಮತ್ತು ನಂಜುಂಡ ಭಟ್ ದಂಪತಿಗಳಿಗೆ ಸಿಕ್ಕಿದ್ದು ಮಕ್ಕಳಾಟದ ಪೀಪಿ.


ನನಗೆ ಸಿಕ್ಕಿದ್ದು ಮಕ್ಕಳಾಟದ ಪೀಪಿ

 ಉಡುಗೊರೆ ಬಾಕ್ಸ್ ಬಿಚ್ಚುತ್ತಿರುವ ಮಂಗಳೂರಿನ ದಿನಕರ್ ಮೊಗರ್ ಸರ್,


ದಿನಕರ್ ಸರ್‍ಗೆ  ಹಾಕಿಕೊಳ್ಳಲು ಶಾಂಪು, ಬಾಚಿಕೊಳ್ಳಲು ಬಾಚಣಿಕೆ.[ಆದ್ರೆ ಬಾಚಿಕೊಳ್ಳಲು ಕೂದಲೇ ಇಲ್ಲವಲ್ಲ!]


ಕುವೈಟಿನ ಮಹೇಶ್ ಸರ್‍ಗೆ ಸಿಕ್ಕಿದ್ದು ಈ ಬಫೂನ್ ಮುಖವಾಡ


ನಾವೆಲ್ಲಾ ಮನಃಪೂರ್ವಕವಾಗಿ ಆನಂದಿಸಿದ್ದು ಹೀಗೆ......


ನನ್ನ ಶ್ರೀಮತಿ ಹೇಮಾಶ್ರಿಗೆ ಸಿಕ್ಕಿದ್ದು ಯಶವಂತಪುರದ ಸೌತೆಕಾಯಿ, ಟಮೋಟೊ, ಬೆಂಡೆಕಾಯಿ........


ಸಿನಿಮಾ ಸಾಹಿತ್ಯ ಬರೆಯುತ್ತಿರುವ ಗೌತಮ್ ಹೆಗಡೆಗೆ  ರಿಫಿಲ್ ಇಲ್ಲದ ಕಾಲಿಪೆನ್ನು  ಬಹುಮಾನ.

 

ಜಲನಯನದ ಡಾ.ಅಜಾದ್‍ಗೆ ಸಿಕ್ಕಿದ್ದು  ಭಾರತ ಬಾವುಟ,. ಮತ್ಸ್ಯ ಗೊಂಬೆಗಳು.


ಹೊಸಪೇಟೆಯ ಸೀತರಾಮ್ ಸರ್‍ಗೆ ಸಿಕ್ಕಿದ್ದು ಕೂದಲಿಲ್ಲದ ತಮ್ಮ ತಲೆ ಬಾಚಿಕೊಳ್ಳಲು ಬಾಚಣಿಗೆ ಮತ್ತು ಹಾಕಿಕೊಳ್ಳಲು ಶಾಂಪು.


ತಮ್ಮ ಬ್ಲಾಗ್ ಬರಹದಲ್ಲಿ ದೊಡ್ದ ಗದ್ದಲವೆಬ್ಬಿಸಿದರೂ ನಮ್ಮ ಜೊತೆಯಲ್ಲಿದ್ದಾಗಲೆಲ್ಲಾ ಪರಂಜಪೆ ಸದಾ ಮೌನಿ. ಅದಕ್ಕಾಗಿ ಜೋರಾಗಿ ಸದ್ದು ಮಾಡಿ ಗದ್ದಲವೆಬ್ಬಿಸಲು, ಗಲಾಟೆ ಮಾಡಲು ಸಿಕ್ಕಿದ್ದು ಮಕ್ಕಳಾಟದ ಗನ್ನುಗಳು.


ದೆಹಲಿಯಿಂದ ಬಂದಿರುವ ಮನದಾಳದ ಪ್ರವೀಣ್ ಸದಾ ಶೇವಿಂಗ್ ಮಾಡಿಕೊಂಡು ಮಿಂಚುವ ಸುಂದರಾಂಗ. ಆದಕ್ಕೆ ಆತ ಮತ್ತಷ್ಟು ಮಿಂಚಲಿಕ್ಕಾಗಿ ಸಿಕ್ಕಿದ್ದು ಶೇವಿಂಗ್ ಬ್ರಶ್


ಎಪ್ಪತ್ತೈದು ವರ್ಷದ ಚಿರಯುವಕ ನಮ್ಮ ಹೆಬ್ಬಾರ್ ಸರ್‍ಗೆ ಸಿಕ್ಕಿದ್ದು ಕೊಂಪ್ಲಾನ್ ಬಾಕ್ಸ್. ಅದನ್ನು ಕಂಡು ಅವರು ಸಂಭ್ರಮಿಸಿದ್ದು ಹೀಗೆ. " I am a complan boy"


ನವದಂಪತಿಗಳಾದ ದಿಲೀಪ್ ಹೆಗಡೆ ಮತ್ತು ಪ್ರಗತಿ ಹೆಗಡೆಯವರ ಮಿಲನಕ್ಕಾಗಿ ಅವರಿಗೆ ಈ ಮಿಲನ.


                 ಹೇಗಿದೆ ನಮ್ಮ  ಬ್ಲಾಗ್ ಕುಟುಂಬ!

   
ಮತ್ತೆ ಕೆಲವು ಚಿತ್ರಗಳು ನಮ್ಮ ಸಂತೋಷದಲ್ಲಿ ಕ್ಲಿಕ್ಕಿಸಲಾಗಿಲ್ಲವಂತೆ. ಅದರಲ್ಲಿ ಮುಖ್ಯವಾಗಿ   ಪ್ರಕಾಶ್ ಹೆಗಡೆಯವರಿಗೆ  ಚಪಾತಿ ಮಣೆ ಮತ್ತು ಲಟ್ಟಾಣಿಗೆ...........ಮುಂದೆ ಕೆಲವು ಚಿತ್ರಗಳು  ಸಿಕ್ಕರೆ ಬ್ಲಾಗಿಗೆ ಹಾಕುತ್ತೇನೆ.   ಅಲ್ಲಿಯವರೆಗೆ ನಗುತ್ತಾ ಇರಿ....
                
ಚಿತ್ರಗಳು: ಕೇಶವ, ಮಲ್ಲಿಕಾರ್ಜುನ್,
ಲೇಖನ : ಶಿವು.ಕೆ

31 comments:

ಸುಧೇಶ್ ಶೆಟ್ಟಿ said...

ನಕ್ಕು ನಗಿಸಿತು...

ನನಗ್ಯಾವ ಬಹುಮಾನ ಬರುತ್ತಿತ್ತು ಅ೦ತ ಕುತೂಹಲವೂ ಆಯಿತು...:)

ತು೦ಬಾ ಖುಷಿ ಆಯಿತು ಶಿವಣ್ಣ ನಿಮ್ಮೆಲ್ಲರ ಸ೦ಭ್ರಮ ಕ೦ಡು..

ತೇಜಸ್ವಿನಿ ಹೆಗಡೆ said...

Very Funny.. :)

Many Congratulations to both of you..:)

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು

ಶಿವೂ ಸರ್ ಮತ್ತು ಅಜಾದ್ ಸರ್ ಗೆ ವಿಶೇಷ ಅಭಿನಂದನೆಗಳು

PARAANJAPE K.N. said...

ಶಿವೂ, ಕಾರ್ಯಕ್ರಮ ತು೦ಬಾನೆ ಚೆನ್ನಾಗಿತ್ತು, ನೀವು ತೆಗೆದ ಫೋಟೋ ಗಳು ಕೂಡ, ನೆನಪನ್ನು ಮತ್ತೆ ಮತ್ತೆ ಮೆಲುಕು ಹಾಕುವಲ್ಲಿ ಪೂರಕವಾಗಿವೆ.

Gubbachchi Sathish said...

ಶಿವು ಸರ್,

ಕಾರ್ಯಕ್ರಮ ಕಳೆಯೇರಿತ್ತು.
ಸುಂದರ ಪೋಟೋಗಳು. ಅಭಿನಂದನೆಗಳು.

Guruprasad said...

ಎಲ್ಲ ಬ್ಲಾಗ್ ಸ್ನೇಹಿತರನ್ನು ನೋಡಿ... ತುಂಬಾ ಅಂದ್ರೆ ತುಂಬಾನೇ ಖುಷಿ ಹಾಗು ಸಂತೋಷ ಆಯಿತು... ಇಂಥ ಅದ್ಬುತ ಸಂದರ್ಭವನ್ನು ಕಲ್ಪಿಸಿಕೊಟ್ಟ ಶಿವೂ ಹಾಗು ಆಜಾದ್ ಗೆ ನನ್ನ ಅಭಿನಂದನೆಗಳು...
ಅನ್ಯ ಕೆಲಸದ ನಿಮಿತ್ತ,, ಕಾರ್ಯಕ್ರಮ ಮುಗಿದಮೇಲೆ ತುಂಬಾ ಹೊತ್ತು ಇರಲಾಗಲಿಲ್ಲ.... ಈ ಎಲ್ಲ ಫೋಟೋಗಳನ್ನು , ನೋಡಿದಮೇಲೆ,,, ನಾನು ಇರಬೇಕಾಗಿತ್ತು ಅಂತ ಅನ್ನಿಸಿತ್ತು,,, ತುಂಬಾ ಮಿಸ್ ಮಾಡಿಕೊಂಡೆ....
ಅಂತು ಒಂದು ಸುಂದರ ಭಾನುವಾರ , ಮರೆಯಲಾರದ ಭಾನುವಾರ ಆಗಿತ್ತು,,,,

ಜೈ ಹೋ ಬ್ಲಾಗರ್ಸ್... !!

ಮನಮುಕ್ತಾ said...

:):)...
ಶಿವು ಅವರೆ, ಎಲ್ಲರ ಸ೦ತೋಷದ ಕ್ಷಣಗಳು ಹಾಗೂ ನಕ್ಕು ನಗಿಸುವ ಫೋಟೋ ಗಳನ್ನು ನೋಡಿ ತು೦ಬಾ ಖುಶಿಯಾಯ್ತು...:)ನಿಮಗೆ ನನ್ನ ಅಭಿನ೦ದನೆಗಳು.
ಅಜಾದ್ ಭಾಯಿ ಅವರಿಗೂ ಕೂಡಾ ನನ್ನ ಅಭಿನ೦ದನೆಗಳು.

ಮನಸು said...

nenapinalli uLiyuvantaha dina.... navella tumba kushi pattevu...

ಮನಸ್ವಿ said...

ನಕ್ಕು ನಕ್ಕು ಸಾಕಾಯಿತು.. :)

Dr.D.T.Krishna Murthy. said...

ಫೋಟೋಗಳು ಸಖತ್ತಾಗಿವೆ.ಖುಷಿಯಾಯಿತು.ಪ್ರಕಾಶಣ್ಣನ ಬಗ್ಗೆ ನನ್ನ ಬ್ಲಾಗಿನಲ್ಲಿ 'ಕೋಣನ ಕುಂಟೆಯ ಕಿಂದರಜೋಗಿ'ಎನ್ನುವ ಕವನ ಬರೆದಿದ್ದೇನೆ.ದಯವಿಟ್ಟು ಎಲ್ಲರೂ ಓದಿ.ನಮಸ್ಕಾರಗಳು.

umesh desai said...

ಶಿವು ಕಾರ್ಯಕ್ರಮದ ಹೈ ಲೈಟ್ ಅಂದ್ರೆ ಈ ಬಹುಮಾನ ವಿತರಣೆ ಇದು ಯಾರದೇ ಐಡಿಯಾ ಇದ್ರೂ ಅವರಿಗೆ ಹ್ಯಾಟ್ಸು ಆಫು..!
ನನಗೆ ದೊರೆತಿದ್ದುದ್ದು ಬ್ಲಾಂಕ್ ಡಿವಿಡಿ ನನ್ನ ತಲೆಯೂ ಖಾಲಿ ಹೀಗಾಗಿ ಬಹುಮಾನ ಅನ್ವರ್ಥಕ ಆತು

ಕನಸು said...

ತುಂಭಾ ಚೆನ್ನಾಗಿದೆ

Naveen ಹಳ್ಳಿ ಹುಡುಗ said...

:)

ನಾಗರಾಜ್ .ಕೆ (NRK) said...

Mattashtu photogalu barali.
nagu sadaa irali.

ವನಿತಾ / Vanitha said...

:))

ದಿನಕರ ಮೊಗೇರ said...

hhaa hhaa.... photo majavaagide.... alliruvaaga bare anubhavisidvi,,, eega adannu nodi khushiyaagtaa ide....

thank you shivu sir... adannu saadya maadiddakke....

V.R.BHAT said...

ಶಿವು, ಪರಿಚಿತರಲ್ಲದವರು ಪರಿಚಯವನ್ನು ಬ್ಲಾಗ್ ಮೂಲಕ ಪಡೆದು ಅತ್ಯಂತ ಆತ್ಮೀಯರಾಗಿ ಅನುಭವಿಸಿದ ಕ್ಷಣಗಳು, ನೀವು ತೆಗೆದ ಫೋಟೋಗಳೂ ಬಹಳ ಚೆನ್ನಾಗಿವೆ, ಸದಾ ನನಪಿನಲ್ಲುಳಿಯುವ ದಿನ, ಮತ್ತೆ ಸೇರೆಬೇಕೆಂಬ ಬಯಕೆ ತರುವ ದಿನ, ನನ್ನ ಬ್ಲಾಗಿನಲ್ಲಿ ಕಾರ್ಯಕ್ರಮವನ್ನು ಕವನದಲ್ಲೇ ಕೊಟ್ಟಿದ್ದೇನೆ, ನಿಮಗೂ ಅಜಾದ್ ಬೈಯ್ಯಾಗೂ ಅನಂತ ಶುಭಾಶಯಗಳು, ಅನೇಕ ಒಳ್ಳೆಯ ಕೃತಿಗಳು ಹೊರಬರಲಿ, ಥ್ಯಾಂಕ್ಸ್

ಕ್ಷಣ... ಚಿಂತನೆ... said...

ಶಿವು, ಆ ದಿನ ನಿಜಕ್ಕೂ ಸುಂದರವಾದ ದಿನ. ಅದೆಷ್ಟು ಜನ ಅಪರಿಚಿತರು ಚಿರಪರಿಚಿತರು ಎಂಬಂತೆ ಭಾವನೆಗಳನ್ನು ಮೂಡಿಸಿತ್ತು ಆ ಪರಿಸರ! ಸುಂದರವಾದ ಫೋಟೋಗಳನ್ನು ಕೊಟ್ಟ ಕೇಶವ್, ಮಲ್ಲಿಕಾರ್ಜುನ ಹಾಗೂ ಅದನ್ನು ನಮಗೆ ತೋರಿಸಿದ ನಿಮಗೂ ಧನ್ಯವಾದಗಳು.

ನಿಮ್ಮ ಮತ್ತು ನಿಮ್ಮಂತಹ ಬರಹಗಾರರ ಬರಹಗಳು 'ತುಂತುರು, ತುಂತುರು' ಆಗಿ ಹೊರಹೊಮ್ಮಲಿ. ನಮ್ಮಗೆಲ್ಲರ ಬರಹಗಳ ಸಿಂಚನವಾಗಲಿ.

ಅಭಿನಂದನೆಗಳು ಮತ್ತೊಮ್ಮೆ,

ಸ್ನೇಹದಿಂದ,

shridhar said...

Nija sir .. naanu begne horatu tamahsegalannu mis madkonde .. ellardnu beti madoku agilla ..

Next time full day irtini

Raghu said...

ಶಿವೂ..ಎಂಥ ದಿನ ಅದು..ನಾನಂತು ತುಂಬಾ ಖುಷಿ ಪಟ್ಟೆ. ಎಲ್ಲರ ಜೊತೆ ಬೆರೆತೆ.
ಒಂದೊಂದು ಗಿಫ್ಟ್ ತುಂಬಾ ಚೆನ್ನಾಗಿದೆ. ಒಳ್ಳೆ ಐಡಿಯಾ..ನಕ್ಕು ನಕ್ಕು ಸಾಕಾಯಿತು..
ಎಲ್ಲರೂ ಕೇಳ್ತಾ..ಕಾಯ್ತಾ ಇರೋ ಒಂದು ಫೋಟೋ ಅದು ಪಕ್ಕು ಮಾಮನ ಫೋಟೋ.
ಮಸ್ತ್ ಗಿಫ್ಟ್ ಅದು...ಬೇಗ ಹಾಕಿ..
ನಿಮ್ಮವ,
ರಾಘು.

ಶಿವಪ್ರಕಾಶ್ said...

shivu,
nammellara santhoshada dina adu...
nijakku naavu tumbaa enjoy maadidvi..
great photos.. estu saari nodidru, matte matte nodbeku ansutte...
thanks a lot for everything :)

ಸೀತಾರಾಮ. ಕೆ. / SITARAM.K said...

ಬೇರೆಯವರನ್ನ ನೋಡಿದೆವು! ನಾವು ಹೇಗೆ ಕಾಣುತ್ತಿದ್ದೆವು ಅಂಥಾ ಇದರಿಂದ ಗೊತ್ತಾಯಿತು.
ಛಾಯಾಚಿತ್ರಗಳು ಚೆನ್ನಾಗಿವೆ.

ಮನಸಿನ ಮಾತುಗಳು said...

ಶಿವೂ ಸರ್,
ನಿಮ್ಮೆಲ್ಲರ ಮುಖತಃ ಭೇಟಿಯಾಗಿ ಬಹಳ ಖುಷಿ ಆಯಿತು. ಇಂಥ ಒಂದು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ನಿಮಗೊಂದು thanks ... :-)

Manasa said...

Sooooperrrrrr Sir.... Tumbaa chennagi barediddiri.... I like it very much.... Keep up the good work :)... wish you all the best :)

ಚಿತ್ರಾ said...

ಶಿವೂ,
ಫೋಟೋ ಗಳನ್ನು ನೋಡಿ ಬಹಳ ಖುಷಿಯಾಯಿತು. ಹಾಗೆ ಸಂಭ್ರಮದಲ್ಲಿ ಭಾಗವಹಿಸಲು ಅಗದಿದ್ದಕ್ಕೆ ಬೇಸರವೂ !
ಏನಿದ್ದರೂ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಫೋಟೋಗಳೇ ಹೇಳುತ್ತಿವೆ. ಬಹಳಷ್ಟು ಸಹ ಬ್ಲಾಗಿಗರ ಮುಖ ಪರಿಚಯ ಮಾಡಿಕೊಟ್ಟಿದ್ದಕ್ಕೆ , ಬರಲಾಗದ ನಮ್ಮೊಂದಿಗೆ ನಿಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

Lahari said...

ತುಂಬಾನೆ ಮಿಸ್ ಮಾಡಕೊಂಡೆ, ಆ ಪೋಟೋಗಳನ್ನು ನೋಡಿ ತುಂಬಾ ಖುಷಿಯಾಯಿತು, ನಿಮ್ಮ ಆ ಗಿಫ್ಟ್ ಐಡಿಯ ತುಂಬಾನೆ ಚೆನ್ನಾಗಿದೆ ನಿಮ್ಮ ಚಿತ್ರಗಳೆ ಅಲ್ಲಿನ ಸಂಭ್ರಮದ ಕ್ಷಣಗಳನ್ನ ತಿಳಿಸುತ್ತಿದೆ.

Ashok.V.Shetty, Kodlady said...

ನಿಮ್ಮನ್ನು ಭೇಟಿ ಮಾಡಿ ತುಂಬಾ ಕುಶಿ ಆಯಿತು... ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು....ಧನ್ಯವಾದಗಳು..

http://ashokkodlady.blogspot.com

Jayalaxmi said...

nanage hoTTe ureetide!!! :( :( urjent anta horaTu Enella miss maaDkonDe naanu!! kelasada ottaDakkishTu...

ವಿ ಡಿ ಭಟ್ ಸುಗಾವಿ said...

ಸಮಾರಂಭಕ್ಕೆ ಬರಲಾಗದೆ ತುಂಬಾ ಬೇಜಾರಾಗಿತ್ತು.ಆದ್ರೆ ಫೋಟೊಗಳನ್ನ ನೋಡಿ ಖುಷಿಪಟ್ಟೆ ಶಿವು.

Subrahmanya said...

ಎಲ್ಲರಿಗೂ ತಕ್ಕುದಾದ ಬಹುಮಾನಗಳೆ ಸಿಕ್ಕಿವೆಯೆಂದಾಯಿತು. :). ಚಿತ್ರಗಳನ್ನು ನೋಡಿ ತುಂಬ ಖುಷಿಯಾಯ್ತು. Thanks.

ಮನಸಿನಮನೆಯವನು said...

ಆಹಾಹಾ..