Sunday, July 18, 2010

ಗಾಳಿಯಲ್ಲಿ ತೇಲಿ....ಬಿಲ್ಲಿನಂತೆ ಬಾಗಿ....

     

      ಆರು ಅಡಿ ಹಿಂದೆ ಸಾಗಿ, ಧೀರ್ಘವಾಗಿ ಉಸಿರೆಳೆದುಕೊಂಡು, ವೇಗವಾಗಿ ಮತ್ತದೇ ಆರು ಹೆಜ್ಜೆ ಮುಂದೆ ಸಾಗಿ ಕಟ್ಟೆಯ ತುದಿ ತಲುಪುತ್ತಿದ್ದಂತೆ ಕಾಲ್ಬೆರಳುಗಳ ತುದಿಗಳ ಮೇಲೆ ಬ್ಯಾಲೆ ನೃತ್ಯದಂತೆ  ದೇಹದ ಭಾರವನ್ನು ಬಿಟ್ಟು ಪುಟಿದ ಬಾಲಿನಂತೆ ದೇಹವನ್ನು ಚಿಮ್ಮಿದಾಗ,ಮರುಕ್ಷಣದಲ್ಲಿ ದೇಹ ಗಾಳಿಯಲ್ಲಿ ತೇಲಿ, ಬಿಲ್ಲಿನಂತೆ ಬಾಗಿ, ತಲೆಕೆಳಕಾಗಿ ಮೊದಲು ಕೈಗಳು ನೀರನ್ನು ಸೀಳಿ,  ತಲೆಯೂ ನೀರೋಳಗೆ ವೇಗವಾಗಿ ನುಗ್ಗಿದಾಗ ಕಣ್ಣು ತೆರೆದರೂ, ಮುಚ್ಚಿದರೂ ಏನೂ ಕಾಣುವುದಿಲ್ಲ.   ಆ ಕ್ಷಣದಲ್ಲಿ ದೇಹದೊಳಗೆ ನಾನಿಲ್ಲ.  ಮನದೊಳಗೂ ನಾನಿಲ್ಲ.  ಆಷ್ಟೇ ಏಕೆ ಇಡೀ ಪ್ರಪಂಚದ ಅರಿವಿಗೂ ನಾನಿಲ್ಲ. ನನ್ನರಿವಿಗೆ ಪ್ರಪಂಚವಿಲ್ಲ.  ಯಾರು ಇಲ್ಲ ಏನು ಇಲ್ಲ ಯಾವುದೂ ಇಲ್ಲವೆನಿಸುವ ಸ್ಥಿತಿಯಲ್ಲಿರುವಾಗಲೇ........ಅರೆರೇ......ತಳ ಸಿಕ್ಕಿತಲ್ಲ ಕೈಗಳಿಗೆ,  ಕಣ್ತೆರೆದರೆ ಕಣ್ನಿಗೂ ಕಾಣಿಸುತ್ತಿದೆ.  ಜೊತೆಗೆ ಕೈಕಾಲುಗಳಿವೆಯೆಂಬ ಭಾವ. ಹದಿನೈದು ಆಡಿ ಆಳದ ತಳದಿಂದ ನಿದಾನವಾಗಿ ಕೈಕಾಲುಗಳನ್ನು ಆಡಿಸುತಾ, ಮೇಲ್ಮುಖವಾಗಿ ತೇಲುತ್ತಿದ್ದರೆ,  ಮತ್ತೆ ನನಗೊಂದು ದೇಹ, ಅದರೊಳಗೊಂದು  ಮನಸ್ಸು ಈಜಿ ಮೇಲೇರಲು ಎಚ್ಚರಿಸುತ್ತಿದೆ.  ಈಜುತ್ತಾ ಮೇಲೆ ಬಂದರೆ  ಮತ್ತದೇ ಪ್ರಪಂಚ..........ಆ ಬದಿಯ ದಡ ಮುಟ್ಟಿ ಈ ಬದಿಗೆ ಮತ್ತದೇ  ತೇಲುತ್ತಾ, ಮುಳುಗಿತ್ತಾ ಈಜು.........



ಇದೇನಿದು ಯಾವುದೋ ಸಿನಿಮಾದ ಸನ್ನಿವೇಶವನ್ನು ಪ್ರೇಮ್ ಟು ಪ್ರೇಮ್ ಸ್ಲೋಮೇಷನ್ನಿನಲ್ಲಿ ಕುತೂಹಲದಿಂದ ನೋಡಿದಂತೆ ಅನ್ನಿಸುತ್ತಿದೆಯಲ್ಲವೇ? ಆದ್ರೆ ಇದು ಯಾವ ಸಿನಿಮಾ ದೃಶ್ಯಾವಳಿಯೂ ಅಲ್ಲ. ಕಳೆದ ಮೇ ತಿಂಗಳ ಬೇಸಿಗೆಯಲ್ಲಿ ಒಂದು ತಿಂಗಳು ಸ್ವಿಮಿಂಗ್ ಪೂಲಿಗೆ ಹೋಗಿ ನಿತ್ಯ ಒಂದು ಗಂಟೆ ಈಜಾಡಿ ಬಂದ ಅನುಭವ ತುಣುಕು. ಇಷ್ಟಕ್ಕೂ ನಾನೇನು ಈಜುಗಾರನಲ್ಲ. ಕೆರೆಯಾಗಲಿ, ಬಾವಿಯಾಗಲಿ, ಕೊನೆಗೆ ಬೆಂಗಳೂರಿನ ಸ್ವಿಮಿಂಗ್ ಪೂಲ್ ಆಗಲಿ ನೀರಿಗೆ ಇಳಿಯಲು ಭಯಪಡುತ್ತಿದ್ದೆ. ಹತ್ತು ಮೀಟರ್ ದೂರ ಈಜುವಷ್ಟರಲ್ಲಿ ಸುಸ್ತಾಗಿ ಭಯಪಟ್ಟು ವಾಪಸ್ ದಡಕ್ಕೆ ಬಂದುಬಿಡುತ್ತಿದ್ದೆ. ತಲೆಯೇನಾದರೂ ನೀರೊಳಗೆ ಮುಳುಗಿ ನೀರುಕುಡಿದುಬಿಟ್ಟರೆ ಮುಗೀತು. ಐದುಸಿರು ಬಿಡುತ್ತಾ, ಕೆಮ್ಮಿ ಕ್ಯಾಕರಿಸಿಕೊಂಡು ದಿಗಲಿನೊಂದಿಗೆ ಮತ್ತಷ್ಟು ಹೆದರಿಬಿಡುತ್ತಿದ್ದೆ. ಹೈಸ್ಕೂಲು ದಿನದ ಬೇಸಿಗೆ ರಜೆಗಳಲ್ಲಿ ಬಿಸಿಲಿನ ದಗೆ ನಿವಾರಿಸಿಕೊಳ್ಳಲು ಬೆಂಗಳೂರಿನ ಬಡಾವಣೆಯ ಈಜುಕೊಳಗಳಿಗೆ ಹೋಗಿ ಬಿದ್ದು ಒದ್ದಾಡಿ ಬರುತ್ತಿದ್ದೆ. ಹೀಗಿದ್ದರೂ ನಾನು ಈಜು ಕಲಿತಿರಲಿಲ್ಲ. ಕಲಿತಿದ್ದೆನೆಂದು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದರೂ ಸೊಂಟ ಮಟ್ಟದ ನೀರಿನಲ್ಲಿ ಹತ್ತು ಮೀಟರ್ ಅಷ್ಟೆ.



ಈ ಬಾರಿಯ ಬೇಸಿಗೆ ದಗೆ ತಡೆಯಲಾಗದಷ್ಟು ಮಟ್ಟಕ್ಕೆ ಏರಿದಾಗ ಒಂದು ದಿನ ನಾನೊಬ್ಬನೇ ಸದಾಶಿವನಗರದಲ್ಲಿರುವ ಈಜುಕೊಳದಲ್ಲಿ ಮುಳುಗೆದ್ದು ದೇಹವನ್ನು ತಂಪುಮಾಡಿಕೊಂಡು ಬಂದಿದ್ದೆ. ಅವತ್ತು ಸಂಜೆ ನಮ್ಮ ರಸ್ತೆಯಲ್ಲಿ ಬ್ಯಾಟ್‍ಮಿಂಟನ್, ಕ್ರಿಕೆಟ್ ಆಡುತ್ತಿದ್ದ ಪ್ರೈಮರಿ, ಹೈಸ್ಕೂಲ್ ಹುಡುಗರಿಗೆ ಈ ವಿಚಾರವನ್ನು ಹೇಳಿದ್ದೇ ತಡ ಮರುದಿನ ಎಲ್ಲರೂ ಉತ್ಸಾಹ ಹುರುಪಿನಿಂದ ಸಿದ್ದರಾಗಿಬಿಟ್ಟರು. ಕೆರೆ ಕಟ್ಟೆ ಭಾವಿಗಳು ಹಳ್ಳಿಗಳ ಮಕ್ಕಳಿಗೆ ಸುಲಭವಾಗಿ ಲಭ್ಯವಾಗುವುದರಿಂದ ಅವರು ಚಿಕ್ಕ ವಯಸ್ಸಿಗೆ ಈಜು ಕಲಿತುಬಿಟ್ಟಿರುತ್ತಾರೆ. ಆದ್ರೆ ನಗರದ ಮಕ್ಕಳಿಗೆ ಹೀಗೆ ಅವಕಾಶವಿರುವುದಿಲ್ಲ. ಅಷ್ಟೇ ಅಲ್ಲದೇ ಮಕ್ಕಳೆಲ್ಲಾದರೂ ಹೊರಗೆ ಅಡ್ಡಾಡಿದರೆ ನಲುಗಿಬಿಡುತ್ತಾರೆನ್ನುವ ಭಯ ಅವರ ತಂದೆತಾಯಿಗಳಿಗೆ. ಅಂತದ್ದರಲ್ಲಿ ಹೀಗೆ
ಅವರಿಗೆ ಸುಲಭವಾಗಿ ನೀರಿಗೆ ಬೀಳಲು ಬಿಡುತ್ತಾರೆಯೇ? ಅಂದುಕೊಂಡು ಸುಮ್ಮನಾದೆ. ಆದ್ರೆ ಮರುದಿನ ಐವರು ಹುಡುಗರು ಟವಲ್, ಅಂಡರ್‌ವೇರ್ ಸೋಪ್ ಇತ್ಯಾದಿಗಳೊಂದಿಗೆ ಸಿದ್ದರಾಗಿ ಬಂದುಬಿಟ್ಟಿದ್ದರು. "ನಾವೆಲ್ಲಾ ಶಿವು ಅಂಕಲ್ ಜೊತೆ ಹೋಗುತ್ತೇವೆ ಅವರಿಗೆ ಚೆನ್ನಾಗಿ ಈಜು ಬರುತ್ತೆ, ನಮಗೂ ಕಲಿಸಿಕೊಡುತ್ತಾರೆ" ಅಂತ ಅವರ ಮನೆಯವರಲ್ಲಿ ಹೇಳಿ ಒಪ್ಪಿಸಿದರಂತೆ. ಅವರ ತಂದೆತಾಯಿಯ ದೃಷ್ಟಿಯಲ್ಲಿ ನಾನೊಬ್ಬ ದೊಡ್ಡ ಈಜು ತರಬೇತುದಾರ ಅಂತೆಲ್ಲ ಹೇಳಿ ನನಗೆ ಸುಳ್ಳೇ ಕಿರೀಟವನ್ನು ತೊಡಿಸಿಬಿಟ್ಟಿದ್ದರು. ಅವರ ತಂದೆತಾಯಿಗಳು ಕೂಡ "ನೀವು ಹೋಗುತ್ತಿರುವುದಕ್ಕೆ ಕಳಿಸುತ್ತಿದ್ದೇವೇ ಜೋಪಾನ" ಅಂತ ಹೇಳಿದಾಗ ನನಗಂತೂ ದೊಡ್ಡ ಭಾರವೇ ತಲೆಮೇಲೆ ಬಿದ್ದಂತೆ ಆಗಿತ್ತು. ಕೊನೆಗೆ ಆದದ್ದಾಗಲಿ ನನಗೂ ಈಜು ಬರುವುದಿಲ್ಲ, ಪ್ರತಿದಿನ ಹೋಗಿ ದೇಹವನ್ನು ತಂಪುಮಾಡಿಕೊಂಡು ಬಂದಂತೆ ಆಗುತ್ತದೆ ಜೊತೆಗೆ ಮಕ್ಕಳ ಜೊತೆಗೆ ಹೋದರೆ ಚೆನ್ನಾಗಿರುತ್ತದೆ ಅಂತ ಒಪ್ಪಿಕೊಂಡೆ.



ಎರಡನೇ ದಿನದಿಂದ ಶುರುವಾಯಿತಲ್ಲ ನಮ್ಮ ನೀರಾಟ. ನನ್ನ ಜೊತೆಗಿದ್ದವರೆಲ್ಲರು ಸ್ವಲ್ಪ ಸ್ವಲ್ಪ ಈಜು ಬರುತ್ತದೆ ಅಂತ ಹೇಳಿದ್ದವರು ನಾಲ್ಕು ಅಡಿ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. "ಸ್ವಲ್ಪ ಇತ್ತ ಬನ್ರೋ" ಅಂತ ಕರೆದರೆ ನಮಗೆ ಭಯವಾಗುತ್ತೆ ಅಂತ ಹೇಳುತ್ತಿದ್ದರು. ಇವರಿಗೆ ನಾನು ಚೆನ್ನಾಗಿ ಈಜಾಡುತ್ತೇನೆ ಅಂತ ತೋರಿಸಿಕೊಳ್ಳಲು ಎಂಟು ಅಡಿ ಆಳದಲ್ಲಿ ದುಮುಕಿ ಹತ್ತು ಮೀಟರ್ ಈಜಾಡಿ ಮೇಲೆ ಬಂದೆನಾದರೂ ನನಗೆ ಸಮಧಾನವಾಗಿರಲಿಲ್ಲ. ನಮ್ಮ ಹುಡುಗರಿಗೆ ನಾನು ಚೆನ್ನಾಗಿ ಈಜಾಡುತ್ತೇನೆ ಅಂತ ತೋರಿಸಿಕೊಡಲು ಉದ್ದುದ್ದದ ಐವತ್ತು ಮೀಟರ್ ಹೋಗದಿದ್ದರೂ ಪರವಾಗಿಲ್ಲ, ಕೊನೇ ಪಕ್ಷ ಅಡ್ಡಡ್ದ ಇರುವ ಇಪ್ಪತೈದು ಮೀಟರ್ ದೂರವಾದರೂ ಈಜಲೇಬೇಕು ಅಂತ ತೀರ್ಮಾನಿಸಿದವನು ಧೃಡ ನಿರ್ಧಾರದಿಂದ ಧುಮಿಕಿಯೇಬಿಟ್ಟೆ. ಅರ್ಧದಾರಿ ಹೋಗುವಷ್ಟರಲ್ಲಿ ಸ್ವಲ್ಪ ನೀರು ಕುಡಿದು ಸುಸ್ತಾದರೂ ಸಾವರಿಸಿಕೊಂಡು ಮೇಲೆ ಬಂದು ಉಸಿರು ತೆಗೆದುಕೊಂಡು ನಿದಾನವಾಗಿ ಈಜತೊಡಗಿದೆ. ಇನ್ನು ಹತ್ತೇ ಮೀಟರ್ ಇದೆ ಎನ್ನುವಷ್ಟರಲ್ಲಿ ಐದುಸಿರು ಬಿಡುತ್ತಾ ಹಾಗೂ ಹೀಗೂ ಆ ಬದಿಯನ್ನು ಮುಟ್ಟಿದ್ದೆ. ಅಲ್ಲೇ ನಿಂತಿದ್ದ ನಮ್ಮ ಹುಡುಗರ ಕಣ್ಣಿಗೆ ನಾನು ಹೀರೋ ಆಗಿದ್ದೆ. ಮತ್ತೆ ಮುಂದೆ ನಾಲ್ಕು ದಿನಗಳಲ್ಲಿ ಇದು ತುಂಬಾ ಸುಲಭವೆನಿಸಿತು. ಆ ಬದಿಯಿಂದ ವಾಪಸ್ಸು ಕೂಡ ಬರುವಂತಾಗಿತ್ತು. ನನ್ನ ಹುಮ್ಮಸ್ಸು ಹುರುಪಿನಿಂದಾಗಿ ಸ್ಪೂರ್ತಿಗೊಂಡ ನಮ್ಮ ಹುಡುಗರು ಒಂದು ವಾರ ಕಳೆದ ಮೇಲೆ ನನ್ನ ಜೊತೆ ದೈರ್ಯಮಾಡಿ ಈ ಬದಿಯಿಂದ ಆ ಬದಿಗೆ ಈಜಿಯೇ ಬಿಟ್ಟರು. ನಂತರ ಪ್ರತಿದಿನ ಒಂದೊಂದು ರೌಂಡ್ ಹೆಚ್ಚಾಗಿ ಈಜತೊಡಗಿದರು.



ನಾವು ಈಜುಕೊಳಗಳಿಗೆ ಹೋಗುವಾಗ ಮೊಬೈಲು, ಕೈಗಡಿಯಾರ, ಇತ್ಯಾದಿ ದುಬಾರಿ ವಸ್ತುಗಳನು ಏನು ತೆಗೆದುಕೊಂಡು ಹೋಗುವಂತಿಲ್ಲ. ನಾನು ಎಲ್ಲವನ್ನು ಮನೆಯಲ್ಲೇ ಬಿಟ್ಟುಹೋಗುತ್ತಿದ್ದೆ. ಹಾಗೂ ಈಜುಕೊಳದ ಟಿಕೆಟ್ ಹಣ ಜೊತೆಗೆ ಚಿಲ್ಲರೆ ನಾಣ್ಯಗಳನ್ನು ಮಾತ್ರ ಜೇಬಿನಲ್ಲಿರಿಸುತ್ತಿದ್ದೆ. ನಾವೆಲ್ಲಾ ಈಜಾಡಿ ಹೊರಗೆ ಬಂದ ಮೇಲೆ ಸಹಜವಾಗಿ ಎಲ್ಲರಿಗೂ ಹಸಿವಾಗುತ್ತಿತ್ತು. ನನ್ನ ಜೊತೆಗಾರರೆಲ್ಲಾ ಓದುತ್ತಿರುವ ಹುಡುಗರಾದ್ದರಿಂದ ಅವರಿಗೆ ಟಿಕೆಟ್ ಹಣವನ್ನು ಹೊಂದಿಸಿಕೊಂಡು ಬರುವುದೇ ದೊಡ್ದ ವಿಚಾರ. ಹೊರಬಂದ ಮೇಲೆ ಯಾರ ಬಳಿಯೂ ಹಣವಿರುತ್ತಿರಲಿಲ್ಲ. ಒಬ್ಬನ ಬಳಿ ಹತ್ತು ರೂಪಾಯಿ ಇದ್ದಲ್ಲಿ ಅದರಲ್ಲೇ ಅಲ್ಲಿ ಸಿಗುವ ಕತ್ತರಿಸಿ ತುಂಡು ಮಾಡಿದ ಸೌತೆಕಾಯಿ, ಅನಾನಸ್, ಮಸಾಲೆ ಹಾಕಿದ ಮಾವಿನಕಾಯಿ ತುಂಡುಗಳನ್ನು ತಿನ್ನುತ್ತಿದ್ದೆವು. ಆಗ ಹಂಚಿಕೊಂಡು ತಿನ್ನುವ ಮಜಾ ನನಗಂತೂ ಬಾಲ್ಯದ ಸ್ಕೂಲಿನ ದಿನಗಳನ್ನು ನೆನಪಿಸಿಬಿಡುತ್ತಿದ್ದವು. ಹೀಗೆ ನಿತ್ಯವೂ ಒಬ್ಬೊಬ್ಬರು ಕೊಡಿಸುತ್ತಿದ್ದರು. ಜೇಬಿನಲ್ಲಿ ಸಾವಿರಾರು ರೂಪಾಯಿಗಳಿದ್ದರೂ ನಮ್ಮ ಕೆಲಸದ ಒತ್ತಡಗಳಲ್ಲಿ ಹೀಗೆ ನಾನು ನಿಂತು ಆರಾಮವಾಗಿ ಅನಾನಸ್, ಕಾರ ಹಾಕಿದ ಮಾವಿನ ಕಾಯಿ ತುಂಡುಗಳನ್ನು ತಿಂದಿದ್ದೇ ಇಲ್ಲ.



ಈ ಬೇಸಿಗೆಯಲ್ಲಿ ಈ ಹುಡುಗರು ನನ್ನ ಜೊತೆ ಬರದಿದ್ದಲ್ಲಿ ನಾನು ಹೀಗೆ ನನ್ನನ್ನು ಯಾರು ಗಮನಿಸುವವರು ಇಲ್ಲವೆಂದು ಸುಮ್ಮನೇ ಅಲ್ಲಿಯೇ ಬಿದ್ದು ಒದ್ದಾಡುತ್ತಿರುತ್ತಿದ್ದೆನೇನೋ. ಅವರ ಜೊತೆ ಇರುವಿಕೆಯಿಂದಾಗಿಯೇ ಈಗ ಪೂರ್ತಿ ಹತ್ತರಿಂದ ಹನ್ನೆರಡು ಸುತ್ತು ಈಜಾಡುತ್ತಿದ್ದೇನೆ. ನಮ್ಮ ಹುಡುಗರೂ ಏನು ಕಡಿಮೆಯಿಲ್ಲ ಹಟಕ್ಕೆ ಬಿದ್ದವರಂತೆ ನನ್ನ ಸಮಕ್ಕೆ ಅವರು ಎಂಟು ಹತ್ತು ಸುತ್ತು ಮುಗಿಸುತ್ತಾರೆ. ಓಡಿ ಮೀನಿನಂತೆ ಧುಮುಕುತ್ತಾರೆ. ಅವರಿಂದಾಗಿ ನಾನು ಈಜು ಕಲಿತೆನೋ ಅಥವ ನನ್ನಿಂದಾಗಿ ಅವರು ಚೆನ್ನಾಗಿ ಈಜಾಡುವುದು ಕಲಿತರೋ ಗೊತ್ತಿಲ್ಲ. ಆದ್ರೆ ಅವರಿಲ್ಲದಿದ್ದಲ್ಲಿ ನಾನು ಹತ್ತು ಮೀಟರ್ ಆಳತೆಯಲ್ಲೇ ಬಿದ್ದು ಒದ್ದಾಡುತ್ತಿದ್ದೆ. ನನ್ನ ಜೊತೆ ಕರೆದುಕೊಂಡು ಹೋಗುತ್ತಿರುವುದರಿಂದ ಮಕ್ಕಳು ಸುರಕ್ಷಿತ ಮತ್ತು ಈಜು ಚೆನ್ನಾಗಿ ಕಲಿತಿದ್ದಾರೆ ಎನ್ನುವುದು ಅವರ ಮನೆಗಳಲ್ಲಿ ತಂದೆತಾಯಿಗಳ ಅನಿಸಿಕೆ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ

51 comments:

ವಿ ಡಿ ಭಟ್ ಸುಗಾವಿ said...

ಶಿವೂ, ನೀವು ಯಾವುದೇ ಕೆಲಸಕ್ಕೆ ಧೈರ್ಯದಿಂದ ಮುನ್ನುಗ್ಗುತ್ತೀರಿ ಅಂತೆಯೇ ಸಾಧಿಸಿ ತೋರಿಸುತ್ತೀರಿ .ಈಜಿನ ಶಾಲೆ ಚೆನ್ನಾದಿದೆ

ಚುಕ್ಕಿಚಿತ್ತಾರ said...

nimma anubhava chennaagi varnisiddeeri... :)

shivu.k said...

ವಿಡಿ ಭಟ್,

ನಾನು ಚೆನ್ನಾಗಿ ಈಜು ಕಲಿತಿರುವುದು ಬಹುಶಃ ನಮ್ಮ ಓಣಿ ಹುಡುಗರಿಂದಲೇ ಅನ್ನಿಸುತ್ತೆ. ಅವರಿಲ್ಲದಿದ್ದಲ್ಲಿ ನನಗೆ ಸ್ಪೂರ್ತಿಯೇ ಇರುತ್ತಿರಲಿಲ್ಲವೇನೋ...ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಚುಕ್ಕಿಚಿತ್ತಾರ,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Unknown said...

ಚೆನ್ನಾಗಿದೆ ನಿಮ್ಮ ಅನುಭವ.. ಅಂದ ಹಾಗೆ ನನಗೂ ಈಜು ಕಳಿಸುತ್ತೀರಾ ಪ್ಲೀಸ್ :-)

ಸಾಗರಿ.. said...

ಶಿವೂ ಅವರೇ,
ಈಜುವ ಆಟದ ಖುಷಿಯೆ ಬೇರೆ. ನಾನೂ ಚಿಕ್ಕವಳಿದ್ದಾಗ ಈಜುತ್ತಿದ್ದೆ. ಈಗ ನೀರಿಗೆ ನೆಗೆದರೆ ನೆಗೆದೇ ಬೀಳ್ತೀನೋ ಅನ್ನೋವಷ್ಟು ನೀರಿನಿಂದ ದೂರವಾಗಿಬಿಟ್ಟಿದ್ದೆನೆ. ಆದರೂ ಈಜುವುದು ಅದೆಂತಹ ಮೋಜು ಅಲ್ಲವೆ??

sunaath said...

ಶಹಭಾಸ್, ಶಿವು!

shivu.k said...

ರವಿಕಾಂತ್ ಸರ್,

ನಮಗೆ ಯಾರು ಕೈಯಿಡಿದು, ಕಾಲಿಡಿದು, ಹೊಟ್ಟೆ ಕೆಳಗೆ ಕೈಕೊಟ್ಟು ಈಜು ಕಲಿಸಲಿಲ್ಲ. ಮತ್ತೆ ನಾನು ನಮ್ಮ ಹುಡುಗರಿಗೆ ಕಲಿಸಲೇ ಇಲ್ಲ. ನನ್ನನ್ನು ನೋಡಿ ಅವರು ಕಲಿತರು. ಅವರು ನನ್ನನ್ನು ನೋಡುತ್ತಿದ್ದಾರಲ್ಲ.. ನಾನು ಮತ್ತಷ್ಟು ಕಲಿತೆ.

ನೀವು ಹಾಗೆ ಕಲಿಯಬಹುದು ಎನ್ನುವುದು ನನ್ನ ಅನಿಸಿಕೆ. ಪ್ರಯತ್ನಿಸಬೇಕಷ್ಟೆ.

ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಥ್ಯಾಂಕ್ಸ್..

shivu.k said...

ಸಾಗರಿ ಮೇಡಮ್,


ಈಜು ನಿಜಕ್ಕೇ ಮೋಜನ್ನುವುದು ಸರಿ! ನಾನು ಎರಡು ತಿಂಗಳು ಅದರ ಆನಂದವನ್ನು ಅನುಭವಿಸಿದ್ದೇನೆ.

ನೀವು ಚಿಕ್ಕವರಿದ್ದಾಗ ಈಜುತ್ತಿದ್ದವರು ಈಗೇಕೆ ಸಾಧ್ಯವಿಲ್ಲ. ಒಮ್ಮೆ ನೀರಿಗೆ ಬೀಳಬೇಕಷ್ಟೆ. ನಿಮ್ಮ ಪ್ರಯತ್ನ ಮುಂದುವರಿಸಿ. all the best.

ಪ್ರಗತಿ ಹೆಗಡೆ said...

ಚೆನ್ನಾಗಿದೆ ಶಿವು ಸರ್ ನಿಮ್ಮ ಅನುಭವ...
ನನಗೆ ಅನ್ನಿಸಿದ ಹಾಗೆ ಸಿಟಿ school ಅಲ್ಲಿ ಮಕ್ಕಳಿಗೆ ಸ್ವಿಮ್ಮಿಂಗ್ ಒಂದ್ ಸಬ್ಜೆಕ್ಟ್... ಹಾಗಾಗಿ ಸ್ವಿಮ್ಮಿಂಗ್ಫೂಲಲ್ಲಿ ಈಜೋದು ಅಷ್ಟೊಂದ್ ವಿಶೇಷ ಅನ್ನಿಸ್ಲಿಕ್ಕಿಲ್ಲ..ಆದ್ರೆ ನದಿ ಅಥವ ಹೊಳೇಲಿ ಈಜೋ ಮಜಾನೆ ಬೇರೆ ಅಲ್ವಾ....

shivu.k said...

ಪ್ರಗತಿ ಮೇಡಮ್,


ನೀವು ಹೇಳಿದಂತೆ ಎಲ್ಲಾ ಸಿಟಿ ಸ್ಕೂಲಿನಲ್ಲು ಸ್ವಿಮ್ಮಿಂಗ್ ತರಗತಿ ಇರುವುದಿಲ್ಲ. ಕೆಲವು ದುಬಾರಿ ಸ್ಕೂಲುಗಳಲ್ಲಿ ಮಾತ್ರ ಇದೆ. ಮತ್ತೆ ಫೋಟೊಗ್ರಫಿ ಪ್ರವಾಸಕ್ಕೆ ಹೋದಾಗ ನಾನು ಕೆರೆ, ನದಿಗಳಲ್ಲಿ ಈಜಾಡುವುದು ಖಚಿತ. ನೀವು ಹೇಳಿದಂತೆ ಅದರ ಆನಂದವೇ ಬೇರೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Guruprasad said...

ಶಿವೂ,
ನೀವು ಪ್ರತಿ ಸರಿ,,, ಸ್ವಿಮ್ ಗೆ ಹೋಗ್ತೇನೆ ಅಂತ ಹೇಳ್ತಾ ಇರ್ಬೇಕಾದ್ರೆ,, ನಿಮಗೆ ಮೊದಲಿಂದನು ಅಭ್ಯಾಸ ಇದೆಯೇನೋ ಅಂತ ಅನ್ಕೊಂಡ್ ಇದ್ದೆ.. ಇದರ.... ಹಿಂದೆ ಇರುವ ಸ್ಟೋರಿ ಇವಾಗ ಗೊತ್ತ ಆಯಿತು

jithendra hindumane said...

ಶಿವೂ ಸರ್‍, ನಾನು ಕಳೆದುಕೊಂಡಿದ್ದೇನು ಎಂದು ನಿಮ್ಮ ಬರಹ ಓದಿದ ಮೇಲೆ ತಿಳಿಯಿತು...!
ಧನ್ಯವಾದಗಳು.

ದಿನಕರ ಮೊಗೇರ said...

shivoo sir,
congrats.... yaavudaadaroo nepadalli olleyadaayitalla..... olleya kathe helidiri....kon

Raghu said...

:) ಒಳ್ಳೆ ಕೆಲಸ...!
ನಾನು ಈಜು ಕಲಿಬೇಕು..ಕಲಿಬೇಕು ಅಂತ ತುಂಬಾ ದಿನ ಆಯಿತು.
ಈಗಲಾದರು ಕ್ಲಾಸ್ಗೆ ಹೋಗ್ಬೇಕು.
ಹೊಸ ಪ್ರಯತ್ನ ನೋಡೋಣ..ಏನಾಗುತ್ತೆ ಅಂತ..
ನಿಮ್ಮವ,
ರಾಘು .

ಕ್ಷಣ... ಚಿಂತನೆ... said...

ಶಿವು ಅವರೆ,

ಈಜಾಟದ ಬರಹ ಚೆನ್ನಾಗಿದೆ... ನಿಮ್ಮಲ್ಲಿನ ಉತ್ಸಾಹಕ್ಕೆ ಹಾಗೂ ಮಕ್ಕಳಿಗೆ ಈಜು ಕಲಿಸುವುದರೊಂದಿಗೆ ಮತ್ತಷ್ಟು ದೂರ ಸಾಗಿದ್ದು ಎಲ್ಲ ಖುಷಿಯಾಯಿತು. ಚಿತ್ರಗಳೂ ಸಹ ಚೆನ್ನಾಗಿವೆ.

ಎರಡನೇ ಚಿತ್ರ... ಅಬ್ಬಬ್ಬಾ...! ಸೂಪರ್‌ ಸ್ವಿಮ್ಮರ್‌ ಎನಿಸಿತು..

ನನಗೂ ನೀರು ಕಂಡರೆ ... ಭಯ... ಈಜುವುದು ಕಲಿಯಬೇಕು. (ಚಿಕ್ಕಂದಿನಲ್ಲಿ ಅಜ್ಜನ ಊರಿನ ಅಡ್ಡಳ್ಳದಲ್ಲಿ ನೀರಿಗೆ ಇಳಿದ ನೆನಪಷ್ಟೇ... )

ಸ್ನೇಹದಿಂದ,

ಮನಸಿನಮನೆಯವನು said...

shivu.k

ಚೆನ್ನಾಗಿದೆ ಚೆನ್ನಾಗಿದೆ..

shivu.k said...

ಗುರು,

ನೀವು ಮೇ ತಿಂಗಳಲ್ಲಿ ಫೋನ್ ಮಾಡಿದಾಗ ಮತ್ತೆ ಮನೆಗೆ ಬರುತ್ತೇನೆ ಎಂದಾಗೆಲ್ಲಾ ಆ ಸಮಯಬಿಟ್ಟು ಬೇರೆ ಸಮಯದಲ್ಲಿ ಸಿಗುತ್ತೇನೆ ಎಂದಿದ್ದ ಕಾರಣ ಇದೆ. ನನಗೆ ಮೊದಲಿಂದಲೂ ಅಬ್ಯಾಸವಿದ್ದರೂ ಈ ಮಟ್ಟಿಗೆ ಇರಲಿಲ್ಲ.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಜಿತೇಂದ್ರ ಸರ್,

ನೀವು ಕಳೆದುಕೊಂಡಿದ್ದೇನು? ಮತ್ತು ನನ್ನ ಬರಹದಿಂದ ಸಿಕ್ಕಿದ್ದೇನು? ಅಂತ ನಮಗೂ ತಿಳಿಸಿ ಸಾರ್.

ಧನ್ಯವಾದಗಳು.

shivu.k said...

ದಿನಕರ್ ಸರ್,

ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುವುದು ಇದಕ್ಕೇ ಅಲ್ಲವೇ.

ಧನ್ಯವಾದಗಳು.

shivu.k said...

ರಘುರವರೆ,

ಈಜು ಕಲಿತುಬಿಟ್ಟರೆ ಅದರ ಆನಂದವೇ ಬೇರೆ. ಬೇಗ ಕಲಿಯಿರಿ. all the best!

shivu.k said...

ಚಂದ್ರು ಸರ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಈ ಬೇಸಿಗೆಯನ್ನು ಸುಮ್ಮನೇ ವೇಷ್ಟ್ ಮಾಡಬಾರದು ಎನ್ನುವ ಕಾರಣಕ್ಕೆ ಈ ಪ್ರಯತ್ನಕ್ಕೆ ಕೈಹಾಕಿದ್ದೆ. ಅದರಿಂದ ನನಗೂ ಮತ್ತು ಆ ಮಕ್ಕಳಿಗೂ ಉಪಯೋಗವಾಯಿತು.

ನೀವು ಕಲಿತುಬಿಡಿ. ಕಲಿಯಲು ವಯಸ್ಸು ಅಡ್ಡವಲ್ಲ. ಮನಸ್ಸು ಮಾಡಬೇಕಷ್ಟೆ.

ಮತ್ತೆ ನೀರಿಗೆ ಹಾರಿರುವ ಚಿತ್ರ ನನ್ನದಲ್ಲ. ಅದು ನಮ್ಮ ಫೋಟೊಗ್ರಫಿ ಪ್ರದರ್ಶನದ ಸಮಯದಲ್ಲೇ ಜಯನಗರದಲ್ಲಿ ರಾಷ್ಟ್ರಮಟ್ಟದ ಡೈವಿಂಗ್ ಸ್ಪರ್ಧೆ ನಡೆಯುತ್ತಿತು. ಆಗ ಅಲ್ಲಿಗೆ ಹೋಗಿ ಕ್ಲಿಕ್ಕಿಸಿದ್ದು. ಅದರ ಚಿತ್ರಸಹಿತ ಲೇಖನವನ್ನು ಮುಂದಿನ ವಾರಕ್ಕೆ ಹಾಕಲು ಸಿದ್ದಮಾಡುತ್ತಿದ್ದೆ. ಹಾಗೆ ಈಜಿಗೆ ಸಂಭಂದಿಸಿದ ಲೇಖನವಾದ್ದರಿಂದ ಅದರ ಒಂದು ಫೋಟೊವನ್ನು ಇಲ್ಲಿ ಬಳಸಿಕೊಂಡಿದ್ದೇನೆ.
ಧನ್ಯವಾದಗಳು

shivu.k said...

ಜ್ಞಾನಾರ್ಪಣಮಸ್ತು.

ಥ್ಯಾಂಕ್ಸ್.

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಈಜು ಕಲಿಯಲು ನಾನು ಹಲವಾರು ಸಲ ಪ್ರಯತ್ನ ಪಟ್ಟರು ಈಸುಪೆಂಡಿ ಬಿಟ್ಟು ಈಜಲು ಕಲಿಯಲು ಧೈರ್ಯ ಮಾಡದ್ದೆ ಬಹುಶ: ನನಗೆ ಕಲಿಯಲಾರದ್ದಕ್ಕೆ ಕಾರಣ.
ತಮ್ಮ ಅನುಭವ ತುಂಬಾ ನವಿರಾಗಿ, ಕುತೂಹಲಭರಿತವಾಗಿ, ವಿಶಿಷ್ಟ ಭಾಷೆ ಮತ್ತು ಶೈಲಿಯಲ್ಲಿ ಎಂದಿನಂತೆ ಹೇಳಿದ್ದಿರಾ...
ಓದಿ ಖುಷಿಯಾಯಿತು. ಅವರಿಂದ ನಿಮಗೆ ಧೈರ್ಯ ನಿಮ್ಮಿಂದ ಅವರಿಗೆ ಧೈರ್ಯ ಹಾಗೂ ಪೋಷಕರಿಗೆ ಧೈರ್ಯ. ಒಟ್ಟಿನಲ್ಲಿ ಎಲ್ಲರೂ ಏನು ಅನಾಹುತ ಮಾಡಿಕೊಳ್ಳದೆ ಈಸು ಕಲಿತಿರಲ್ಲ! ಅಷ್ಟೇ ಸಾಕು!

Subrahmanya said...

Really inspiring. ನಾನೂ ಈಜು ಕಲಿತೆ, ಬಹಳ ತಡವಾಗಿ. ಈಗ ನಿಮ್ಮ ಲೇಖವನ್ನು ಓದಿದ ಮೇಲೆ ಸಮಾಧಾನವಾಯ್ತು. ಕಲಿಯುವಿಕೆಗೆ ವಯಸ್ಸು, ಕಾಲ, ದೇಶದ ಹಂಗೇಕೆ ಅಲ್ಲವೆ ?.

Prashanth Arasikere said...

hi shivu,nangu swim baralla nimma jothe bandre kalustira..allva..

Uday Hegde said...

Good one sir, very inspirational...shows nothing is impossible..

ಮನದಾಳದಿಂದ............ said...

ಶಿವು ಸರ್,
ತುಂಬಾ ಚನ್ನಾಗಿದೆ ನೀವು ಈಜು ಕಲಿತ ಸಾಹಸಗಾಥೆ!
ನಾನು ಸಣ್ಣವನಿದ್ದಾಗ(೬ ವರ್ಷ) ಹೊಳೆಯಲ್ಲಿ ಎಮ್ಮೆ ಬಾಲ ಹಿಡಿದುಕೊಂಡು ಈಜು ಕಲಿತಿದ್ದು ನೆನಪಿಗೆ ಬಂತು.
ವಿವರಿಸಿದ ರೀತಿ ಚೆನ್ನಾಗಿದೆ.

ನಮ್ಮ ಬ್ಲಾಗ್ ಕಡೆಗೂ ಬನ್ನಿ ಸ್ವಾಮಿ............

Anonymous said...

super agide.

ಸಾಗರದಾಚೆಯ ಇಂಚರ said...

ಮತ್ತೊಂದು ಅದ್ಭುತ ಲೇಖನ ಸರ್
ತುಂಬಾನೇ ಚೆನ್ನಾಗಿದೆ

Naveen ಹಳ್ಳಿ ಹುಡುಗ said...

ಶಿವಣ್ಣ ಹಳ್ಳಿಯ ಬಾವಿಯಲ್ಲಿ ಈಜು ಕಲೆತ ದಿನಗಳು ನೆನಪಾದವು. ಅದಕ್ಕೆ ಧನ್ಯವಾದಗಳು. ಅದರ ಮಜವೇ ಬೇರೆ ..
ಅಂದ ಹಾಗೆ ನನ್ನ ಬ್ಲಾಗ್ ವಿಳಾಸವನ್ನ ಬದಲಿಸಿರುವೆ ನೀವು ಅದನ್ನ ದಯವಿಟ್ಟು ನಿಮ್ಮ ಬ್ಲಾಗಿನಲ್ಲಿ update ಮಾಡಿಕೊಳ್ಳಿ....

hallihudugunamaathu.blogspot.com

ವನಿತಾ / Vanitha said...

ಎಷ್ಟು ಚೆನ್ನಾಗಿ ಬರೆದಿದ್ದೀರಿ ನಿಮ್ಮ ಈಜಿನ ಕಥೆಯನ್ನು:))
ನಮ್ಮನೆಯಲ್ಲಿ ಸ್ವಲ್ಪ ಮಟ್ಟಿಗೆ ಇಬ್ಬರು ಈಜುತ್ತಾರೆ,ನೀವು ಫಸ್ಟ್ ಹೇಗೆ ಈಜುತ್ತಿದ್ದರೋ ಹಾಗೆ!!)
ನನ್ನನ್ನೂ ಈಜುಕೊಳಕ್ಕೆ ಎಳೀಲಿಕ್ಕೆ ತುಂಬಾ ಟ್ರೈ ಮಾಡಿದ್ರು..ಸಾಧ್ಯವಾಗಲೇ ಇಲ್ಲ.!!
ಮತ್ತೆ ರೋಡ್ ಸೈಡ್ ಲ್ಲಿ ಸಿಗುವ ಖಾರ ಹಾಕಿದ ಮಾವಿನಕಾಯಿ, ಸೌತೆಕಾಯಿ, ಆಹಾ..ಅದರ ಟೇಸ್ಟ್ ಬೇರೇನೆ..ಮೈಸೂರಿನ ಕ್ರೌಫಾರ್ಡ್ ಹಾಲಿನ ಪಕ್ಕ ಒಬ್ಬ fruitsಗೆ ಮಸಾಲ ಹಾಕಿ ಒಂದು plateಗೆ Rs 5/-ರಂತೆ ಮಾರ್ತಿದ್ದ.(ಮೂರು ವರ್ಷದ ಹಿಂದೆ), ಅದು ನೆನಪಾಯ್ತು:))..nice write up:))

shivu.k said...

ಸೀತಾರಾಮ್ ಸರ್,

ಈಜು ಕಲಿಯುವ ವಿಚಾರವಾಗಿ ಒಬ್ಬೊಬ್ಬರದು ಒಂದೊಂದು ರೀತಿಯ ಅನುಭವ ಅಲ್ವ. ನೀವು ಈಜು ಕಲಿಯದ ಅನುಭವ ಹೇಳಿದ್ದೀರಿ. ಮತ್ತೆ ಬೇಗ ಕಲಿಯಿರಿ.

ನಾವು ಯಾವುದೇ ನಿರೀಕ್ಷೆಯಿಲ್ಲದೆ ನಾವು ಈಜು ಕಲಿಯಲು ಹೋಗಿದ್ದೇ ಎಲ್ಲರೂ ಚೆನ್ನಾಗಿ ಈಜಾಡಲು ಸಾಧ್ಯವಾಯಿತೇನೋ..

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಸುಬ್ರಮಣ್ಯ ಸರ್,

ನೀವು ಕಲಿತಿರುವ ವಿಚಾರವೂ ಬೇರೆಯದೇ ಆಗಿರುತ್ತದೆ ಅಲ್ಲವೇ? ಅದನ್ನು ಬರೆಯಿರಿ ಓದಲು ನಾವಿದ್ದೇವೆ. ನನ್ನ ಲೇಖನ ಬೇರೆಯವರಿಗೆ ಸ್ಪೂರ್ತಿ ನೀಡಿದರೆ ನನ್ನ ಬರಹಕ್ಕೆ ಸಾರ್ಥಕತೆ ದಕ್ಕುತ್ತದೆ.

ಧನ್ಯವಾದಗಳು.

shivu.k said...

ಪ್ರಶಾಂತ್,

ನಿಮಗು ಈಜು ಬರೋಲ್ಲವ? ಹಾಗಾದರೆ ನಾನು ಹೋದಾಗ ಬನ್ನಿ. ಮತ್ತೆ ನಾನು ಹೇಳಿಕೊಡುವುದಿಲ್ಲ. ನೋಡಿ ಕಲಿಯಬೇಕೆಷ್ಟೇ.

shivu.k said...

ಉದಯ್,

ನೀವು ಹೇಳಿದಂತೆ ಯಾವುದು ಅಸಾಧ್ಯವಲ್ಲ ಅಲ್ಲವಾ?

ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಪ್ರವೀಣ್ ಸರ್,

ನಿಮ್ಮ ಎಮ್ಮೆ ಬಾಲ ಹಿಡಿದು ಈಜು ಕಲಿತ ಅನುಭವ ಬರೆಯಿರಿ. ಅದು ಚೆನ್ನಾಗಿರುತ್ತೆ ಅಲ್ವಾ...ನನ್ನ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ನಿಮ್ಮ ಬ್ಲಾಗಿನ ಹೊಸ ಲೇಖನ ಓದಿದೆ ಚೆನ್ನಾಗಿದೆ.
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

Chikkichandira,

thanks...

shivu.k said...

ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ನವೀನ್,

ಹಳ್ಳಿಯಲ್ಲಿ ಈಜಾಡಿದವರು ಚೆನ್ನಾಗಿಯೇ ಈಜು ಕಲಿತಿರುತ್ತಾರೆ. ನೀವು ಚೆನ್ನಾಗಿ ಈಜಾಡಬಹುದು ಅನ್ನಿಸುತ್ತೆ...

ಮತ್ತೆ ನಿಮ್ಮ ಹೊಸ ಬ್ಲಾಗ್ ತೆರೆದುಕೊಳ್ಳುತ್ತಿಲ್ಲ..ಸ್ವಲ್ಪ ಏನಾಗಿದೆ ನೋಡಿ.

ಧನ್ಯವಾದಗಳು.

shivu.k said...

ವನಿತಾ,

ಒಂದು ತಿಂಗಳಲ್ಲಿ ನಿತ್ಯ ನಡೆಯುವ ಘಟನೆಯನ್ನು ಹಾಗೆ ಬರೆದಿದ್ದೇನೆ.

ನೀವು ನೀರಿಗೆ ಬೀಳದೆ ಈಜು ಕಲಿಯಲು ಹೇಗೆ ಸಾಧ್ಯ. ಒಮ್ಮೆ ದೈರ್ಯಮಾಡಿ ಬಿದ್ದುಬಿಡಿ. ನಂತರ ಎಲ್ಲವೂ ಸುಲಭ. ಮನಸ್ಸು ಮಾಡಿ. all the best.

ಮತ್ತೆ ನಮ್ಮ ಹುಡುಗರ ಸಹವಾಸದಿಂದಾಗಿ ರಸ್ತೆ ಬದಿಯ ಮಾವಿನಕಾಯಿ ತಿನ್ನುವಂತಾಯಿತು. ಅವರಿಗೆ ನಿಮ್ಮ ಅಭಿನಂದನೆ ಸಲ್ಲಬೇಕು.

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

ದೀಪಸ್ಮಿತಾ said...

ಮೈಸೂರಿನ ಮಾನಸ ಗಂಗೋತ್ರಿಯ ಈಜುಕೊಳಕ್ಕೆ ಹೋಗಿ ಈಜು ಕಲಿಯಲು ಹೋಗಿದ್ದು ನೆನಪಾಯಿತು

ಜಲನಯನ said...

ಶಿವು, ನೀವು ಬೇಸಿಗೆಯ ಬಿಸಿಲಲ್ಲಿ ಈಜೋ ಶಾಲೆಗೆ ಹೋಗಿ ಕಲಿಸುವಂತೆ ನಾವು ಹಳ್ಳಿಯ ನೀರಾವರಿ ಬಾವಿಗಳಲ್ಲಿ ಬಿದ್ದು ದಣಿವಾರಿಸಿಕೊಳ್ಳುತ್ತಿದ್ದುದು ನೆನಪಾಯ್ತು...ಒಳ್ಳೆ...ನೆನಪನ್ನು ತಮ್ದ ಲೇಖನ

shivu.k said...

ಕುಲದೀಪ್ ಸರ್,

ನಿಮ್ಮ ಬಾಲ್ಯದ ಈಜು ನೆನಪನ್ನು ಬರೆಯಿರಿ.

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

shivu.k said...

ಅಜಾದ್,

ಬಾವಿಗಳಲ್ಲಿ ಈಜಾಡುವುದು ಭಲೇ ಮಜವಿರುತ್ತೆ ಅಲ್ವಾ! ಚಿಕ್ಕಂದಿನಲ್ಲಿ ನಾನು ಹಳ್ಳಿಗೆ ಹೋದಾಗ ಬೇರೆಯವರು ದುಮುಕಿ ಈಜಾಡುವುದನ್ನು ಬೆರಗು ಕಣ್ಣುಗಳಿಂದ ನೋಡುತ್ತಿದ್ದೆ. ನಿಮ್ಮ ಅನುಭವವನ್ನು ಹಂಚಿಕೊಳ್ಳಿ.

ಧನ್ಯವಾದಗಳು.

Nivedita Thadani said...

ಮೊದಲ ಸಾಲುಗಳು ತುಂಬಾ ಇಷ್ಟವಾದವು.
ನಿಮ್ಮ ಬಾಳ ಸಂಗಾತಿಗೆ ನನ್ನ ಶುಭಾಶಯಗಳು.
I am not getting your updates in my blog?????

shivu.k said...

ನಿವೇದಿತ ಮೇಡಮ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

balasubramanya said...

ಶಿವೂ ಸಾರ್ ನಮಸ್ಕಾರ ನೀವು ಯಾವುದೇ ವಿಷಯವನ್ನು ಅರ್ಥ ಪೂರ್ಣವಾಗಿ ಬರೆಯುತ್ತೀರಿ . ಈಜು ಅನುಭವ ಚೆನ್ನಾಗಿ ಮೂಡಿಬಂದಿದೆ. ನಾನು ಹಳ್ಳಿಯಲ್ಲಿ ಬಾಲ್ಯ ಕಳೆದವನು ಕೆರೆ,ನಾಲೆ, ಕಪಿಲೆ ಬಾವಿ ಇವುಗಳಲ್ಲಿ ಈಜು ಕಲಿಯಲು ಪಟ್ಟ ಪಾಡುಗಳ ನೆನಪಾಯಿತು. ನಿಮಗೆ ತುಂಬಾ ಥ್ಯಾಂಕ್ಸ್ .

shivu.k said...

ನಿಮ್ಮೊಳಗೊಬ್ಬ ಬಾಲು ಸರ್,

ನನ್ನ ಈಜು ಕಲಿಕೆಯ ಬರಹವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು. ನಿಮ್ಮ ಬಾಲ್ಯದ ನೆನಪುಗಳನ್ನು ಬರೆದರೆ ನಾವು ಓದುತ್ತೇವೆ.

ಮತ್ತೊಂದು ವಿಚಾರ. ನಿಮ್ಮ ಬ್ಲಾಗ್ ತೆರೆದುಕೊಳ್ಳುತ್ತಿಲ್ಲ. ಏನೋ ತೊಂದರೆಯಿದೆ ಎನಿಸುತ್ತೆ. ಸ್ವಲ್ಪ ಸರಿಮಾಡಿ.