ಇವತ್ತು ಬೆಳಿಗ್ಗೆ ಏಳುಗಂಟೆಗೆ ಸನ್ಫೀಸ್ಟ್ ವರ್ಲ್ಡ್ ಟೆನ್ ಕೆ ಓಟ ಶುರುವಾಗುವ ಮೊದಲೇ ವಿಧಾನಸೌದದ ಮುಂದೆ ಕ್ಯಾಮೆರ ಜೊತೆಗೆ ಸಜ್ಜಾಗಿ ನಿಂತಿದ್ದರೂ ತಲೆಯೆಲ್ಲಿ ಗೊಂದಲ ಶುರುವಾಗಿತ್ತು. ಯಾವ ರೀತಿಯ ಫೋಟೊ ತೆಗೆಯಬೇಕು? ಅಂತ. ಓಟಗಾರರ ಫೋಟೊ ತೆಗೆಯೋಣವೆಂದರೆ ಎಲ್ಲ ಪತ್ರಿಕಾ ಛಾಯಾಗ್ರಾಹಕರೂ ಕೂಡ ಅದನ್ನೇ ಮಾಡುವುದು. ಅವರ ಗಮನವೆಲ್ಲಾ ಪ್ರಖ್ಯಾತ ಓಟಗಾರರ ಮೇಲೆ ಕೇಂದ್ರಿಕೃತವಾಗಿರುವುದು ಖಚಿತ. ನನಗೆ ಇವತ್ತಿನವರೆಗೆ ಪ್ರಖ್ಯಾತರ ಹಿಂದೆ ಮುಂದೆ ಕ್ಯಾಮೆರಾವನ್ನು ಹಿಡಿದುಕೊಂಡು ಓಡುವುದು ನನಗೆ ಅಭ್ಯಾಸವಿಲ್ಲ. ಮತ್ತೆ ಮಾಮೂಲಿ ನಾಗರೀಕರ ವೈವಿಧ್ಯತೆಗಳನ್ನು ಕ್ಲಿಕ್ಕಿಸೋಣವೆಂದರೆ ಅದನ್ನು ಕಳೆದ ವರ್ಷವೇ ಕ್ಲಿಕ್ಕಿಸಿ ನನ್ನ ಬ್ಲಾಗಿನಲ್ಲಿ ಹಾಕಿಬಿಟ್ಟಿದ್ದೇನೆ. ಅದಕ್ಕಿಂತ ಈಗ ಎಷ್ಟೇ ವೈವಿಧ್ಯತೆಯಿದ್ದರೂ ನಮ್ಮ ಓದುಗರೂ ಅದಕ್ಕೆ ಹೋಲಿಸಿ ಅದಕ್ಕಿಂತ ಚೆಂದವಿಲ್ಲವೆಂದು ಹೇಳಿಬಿಡುತ್ತಾರೆ. ಅವರು ಯಾಕೆ ನಾನೇ ಮೊದಲು ನೋಡಿಕೊಂಡಾಗ ಅದೆಷ್ಟೇ ಚೆನ್ನಾಗಿದ್ದರೂ ಅದು ಇಷ್ಟವಾಗುವುದಿಲ್ಲ. ನನಗೇ ಇಷ್ಟವಾಗದಿದ್ದಮೇಲೆ ಬೇರೆಯವರಿಗೆ ಹೇಗೆ ಇಷ್ಟವಾದೀತು? ಅಲ್ವಾ!
ಸರಿ ಮತ್ತೇನು ಮಾಡುವುದು! ಮತ್ತೆ ತಲೆಯಲ್ಲಿ ಗೊಂದಲ. ಅಷ್ಟರಲ್ಲಿ ಅನೇಕ ಪತ್ರಿಕಾ ಛಾಯಾಗ್ರಾಹಕರೂ ಅಲ್ಲಿ ಟಾಳಾಯಿಸತೊಡಗಿದ್ದರು. ಅವರು ಎಲ್ಲಾ ಕಡೆಯೂ ನನಗೆ ಸಿಗುತ್ತಾರೆ ಅದರಲ್ಲೇನು ವಿಶೇಷವೆಂದುಕೊಂಡು ಸುಮ್ಮನಾದೆ. ನನ್ನ ಮನಸ್ಸು ಸುಮ್ಮನಾದರೂ ನನ್ನ ಕಣ್ಣು ಮೊದಲೇ ಚಂಚಲ[ಇದು ನನ್ನ ಶ್ರೀಮತಿಯ ಅಭಿಪ್ರಾಯ]ಹಾಗೆ ನನಗೆ ಬೇಕೋ ಬೇಡವೋ ಅವರನ್ನೇ ನೋಡತೊಡಗಿತ್ತು. ಆಗ ಶುರುವಾಯಿತಲ್ಲ ಅವರ ಆಟ! ಅವರು ಯಾವ ರೀತಿಯ ಫೋಟೋ ತೆಗೆಯುತ್ತಿದ್ದಾರೋ ನನಗಂತೂ ಗೊತ್ತಿಲ್ಲ. ಅಥವ ಅವರೇ ಸ್ವಲ್ಪ ವಿಭಿನ್ನವಾಗಿ ಹೊಸತೇನನ್ನೋ ಕೊಡಬೇಕೆಂಬ ಸಂಕಲ್ಪದಿಂದ ಇಂಥವುಗಳನ್ನೆಲ್ಲಾ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಆದ್ರೆ ನನಗೆ ಅದು ವೈರೈಟಿಯೆನ್ನಿಸತೊಡಗಿತು. ಮತ್ತೇಕೆ ತಡ ಅವರನ್ನೇ ಕ್ಲಿಕ್ಕಿಸು ಅಂತ ನನ್ನ ಮನಸ್ಸು ಹೇಳಿತು. ಮರುಮಾತಿಲ್ಲದೇ ನಾನು ಮತ್ತು ನನ್ನ ಕ್ಯಾಮೆರಾ ಓಟಗಾರರ ಹಿಂದೆ ಮುಂದೆ ಹಿಂಬಾಲಿಸದೇ, ನಮ್ಮ ಛಾಯಾಗ್ರಾಹಕರನ್ನು ಹಿಂಬಾಲಿಸತೊಡಗಿದವು. ಅದರ ಪರಿಣಾಮ! ನಾನು ಮತ್ತೆ ಅದನ್ನು ಬರೆದು ನಿಮಗೆ ಬೇಸರ ತರಿಸಲಾರೆ! ನೀವೇ ನೋಡಿಬಿಡಿ!
ಗೆಲ್ಲಲೇ ಬೇಕೆಂದು ಓಡುತ್ತಿರುವ ಇಬ್ಬರೂ ಓಟಗಾರರ ನಡುವೆ ನಮ್ಮ ವಿಡಿಯೋ ಕ್ಯಾಮೆರಾ ಮ್ಯಾನ್! ನೀವೇ ಹೇಳಿ ಈಗ ಯಾರಿಗೆ ಬಹುಮಾನ!
ಸರಿ ಮತ್ತೇನು ಮಾಡುವುದು! ಮತ್ತೆ ತಲೆಯಲ್ಲಿ ಗೊಂದಲ. ಅಷ್ಟರಲ್ಲಿ ಅನೇಕ ಪತ್ರಿಕಾ ಛಾಯಾಗ್ರಾಹಕರೂ ಅಲ್ಲಿ ಟಾಳಾಯಿಸತೊಡಗಿದ್ದರು. ಅವರು ಎಲ್ಲಾ ಕಡೆಯೂ ನನಗೆ ಸಿಗುತ್ತಾರೆ ಅದರಲ್ಲೇನು ವಿಶೇಷವೆಂದುಕೊಂಡು ಸುಮ್ಮನಾದೆ. ನನ್ನ ಮನಸ್ಸು ಸುಮ್ಮನಾದರೂ ನನ್ನ ಕಣ್ಣು ಮೊದಲೇ ಚಂಚಲ[ಇದು ನನ್ನ ಶ್ರೀಮತಿಯ ಅಭಿಪ್ರಾಯ]ಹಾಗೆ ನನಗೆ ಬೇಕೋ ಬೇಡವೋ ಅವರನ್ನೇ ನೋಡತೊಡಗಿತ್ತು. ಆಗ ಶುರುವಾಯಿತಲ್ಲ ಅವರ ಆಟ! ಅವರು ಯಾವ ರೀತಿಯ ಫೋಟೋ ತೆಗೆಯುತ್ತಿದ್ದಾರೋ ನನಗಂತೂ ಗೊತ್ತಿಲ್ಲ. ಅಥವ ಅವರೇ ಸ್ವಲ್ಪ ವಿಭಿನ್ನವಾಗಿ ಹೊಸತೇನನ್ನೋ ಕೊಡಬೇಕೆಂಬ ಸಂಕಲ್ಪದಿಂದ ಇಂಥವುಗಳನ್ನೆಲ್ಲಾ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಆದ್ರೆ ನನಗೆ ಅದು ವೈರೈಟಿಯೆನ್ನಿಸತೊಡಗಿತು. ಮತ್ತೇಕೆ ತಡ ಅವರನ್ನೇ ಕ್ಲಿಕ್ಕಿಸು ಅಂತ ನನ್ನ ಮನಸ್ಸು ಹೇಳಿತು. ಮರುಮಾತಿಲ್ಲದೇ ನಾನು ಮತ್ತು ನನ್ನ ಕ್ಯಾಮೆರಾ ಓಟಗಾರರ ಹಿಂದೆ ಮುಂದೆ ಹಿಂಬಾಲಿಸದೇ, ನಮ್ಮ ಛಾಯಾಗ್ರಾಹಕರನ್ನು ಹಿಂಬಾಲಿಸತೊಡಗಿದವು. ಅದರ ಪರಿಣಾಮ! ನಾನು ಮತ್ತೆ ಅದನ್ನು ಬರೆದು ನಿಮಗೆ ಬೇಸರ ತರಿಸಲಾರೆ! ನೀವೇ ನೋಡಿಬಿಡಿ!
ಗೆಲ್ಲಲೇ ಬೇಕೆಂದು ಓಡುತ್ತಿರುವ ಇಬ್ಬರೂ ಓಟಗಾರರ ನಡುವೆ ನಮ್ಮ ವಿಡಿಯೋ ಕ್ಯಾಮೆರಾ ಮ್ಯಾನ್! ನೀವೇ ಹೇಳಿ ಈಗ ಯಾರಿಗೆ ಬಹುಮಾನ!
ಇವರೆಲ್ಲಾ ನಿಮ್ಮ ಫೋಟೋ ತೆಗೆಯುತ್ತಿದ್ದಾರೆ ಒಳ್ಳೇ ಫೋಸ್ ಕೊಟ್ಟುಬಿಡಿ!
ಅವರವರ ಕಾಯಕ ಅವರವಿಗೆ!
ಓಡುವ ಕಾಲುಗಳ ನಡುವೆ ಕ್ಯಾಮೆರಾವೋ? ಅಥವ ಕ್ಯಾಮೆರಾದೊಳಗೆ ಕಾಲುಗಳೋ! ನೀವೇ ಹೇಳಬೇಕು!
ಕಬ್ಬಿಣದ ಗೇಟಿನ ಹೊರಗೆ ಓಕೆ. ಒಳಗ್ಯಾಕೆ?!
ಅದೆಂಥ ತನ್ಮಯತೇ ಈ ಹಿರಿಯ ಛಾಯಾಗ್ರಾಹಕರಿಗೆ!
ಚುಚ್ಚುತ್ತಿರುವ ಕಬ್ಬಿಣದ ತುದಿಯಮೇಲೆ ಕುಳಿತು ಕ್ಲಿಕ್ಕಾಟ!
ಈ ಫೋಟೋದಲ್ಲಿ ಟ್ರಾಫಿಕ್ ಲೈಟಿನ ಜೊತೆಗೆ ಕ್ಯಾಮೆರಾ ಐದನೇ ಲೈಟಾದಂತೆ ಕಾಣುತ್ತದೆಯಲ್ಲವೇ!
ರಸ್ತೆ ವಿಭಜಕದ ಪಕ್ಕಾ ಕುಳಿತ ಈ ಛಾಯಾಗ್ರಾಹಕನಿಗೆ ಅದೆಂಥ ಚಿತ್ರದ ಕನಸಿರಬಹುದು!
81 comments:
ಶಿವು ...ಹಹಹ...ನಿಮ್ಮ ವ್ಯವಸಾಯದಲ್ಲೂ ..ನೀನೂ ಸಾಯಾ ನಾನೂ ಸಾಯಾ ಅನ್ನೋರೂ ಇದಾರಾ..ಅನ್ನೋ ಹಾಗೆ ,,ನಿಮ್ಮ ಲೇಖನ ನಿಜವಾಗ್ಲೂ ನಿಮ್ಮ ವ್ಯವಸಾಯ..ನೋಡೋಷ್ಟು ಸುಲಭ ಅಲ್ಲ ಅನ್ನೋದಂತೂ ತೋರಿಸುತ್ತೆ....ನಿಜಕ್ಕೂ ನಿಮಗೆಲ್ಲಾ ಹ್ಯಾಟ್ಸ ಆಫ್...
ಶಿವೂ ಅವರೇ,
ಸೂಪರ್....! ಹೇಗೂ ಓಟದ ಸ್ಪರ್ಧೆಯ ಲೈವ್ ಅನ್ನು ಟಿವಿ ಯಲ್ಲಿ ನೋಡಿದ್ದೆವು.
ಆದರೆ ಇಂತಹ ಒಂದು ವಿಶಿಷ್ಟ ಹಾಗು ವಿಚಿತ್ರ ಛಾಯಾಚಿತ್ರಗಳು ನೋಡಲು ಸಿಗುವುದು ಅಪರೂಪ!
ಎಷ್ಟಾದರೂ ನಿಮಗೆ ನೀವೇ ಸಾಟಿ....!!
ಇಂತಹ ವಿಭಿನ್ನ ಫೋಟೋಗಳಿಗಾಗಿ ಧನ್ಯವಾದಗಳು ನಿಮಗೆ.
ನನ್ನ ಬ್ಲಾಗ್ನಲ್ಲಿ ಪುಟ್ಟದೊಂದು ಕವಿತೆ(?) ಇದೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
photo thegeyuvara photogalannu nodi hotte huNNaguvastu nakkiddaitu. Thumba chennagide photogalu
super shiva, super super! liked your concept. enjoyed the photos.
keshav
ಅಜಾದ್,
ಎಲ್ಲಾ ವೃತ್ತಿಗಳಂತೆ ನಮ್ಮದೂ ಹೀಗೆ ಸರ್ಕಸ್ ಮಾಡಲೇಬೇಕು. ಇಲ್ಲಿ ತೋರಿಸಿರುವ ಅವತಾರಗಳು ಅವರನ್ನು ಹೀಯಾಳಿಸಿ ಅವಮಾನಿಸುವುದಕ್ಕಲ್ಲ. ಹಾಗೆ ಮಾಡಿದರೇ ನನಗೇ ಮಾಡಿಕೊಂಡಂತೆ. ನಾನು ಅದೇ ವೃತ್ತಿಯವನೇ ಅಲ್ಲವೇ. ಇದು ಒಂದು ರೀತಿಯಲ್ಲಿ ನನ್ನನ್ನೇ ವ್ಯಂಗ್ಯಕೊಳಪಡಿಸಿಕೊಂಡಂತೆ. ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.
ಚಂದ್ರು ಸರ್,
ಓಟದ ಸ್ಪರ್ಧೆಯಲ್ಲಿ ನೀವು ನೋಡಿದ ಲೈವ್ ಕವರೇಜ್ ಮಾಡುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಕ್ಯಾಮರಾಮೆನ್ ಇರಲಿಲ್ಲವಲ್ಲ! ಅದರ ಫೋಟೋ ಹಾಕಿದ್ದೇನೆ ನೋಡಿ. ವಿಭಿನ್ನವಾಗಿರುವುದನ್ನು ಕೊಡಬೇಕೆನ್ನುವ ನನ್ನ ಪ್ರಯತ್ನ ನಿಮಗಿಷ್ಟವಾಗಿದ್ದಕ್ಕೆ ಥ್ಯಾಂಕ್ಸ್..
ನಿಷಾ,
ಫೋಟೊ ತೆಗೆಯುವವರನ್ನು ಫೋಟೋ ತೆಗೆದರೆ ಹೇಗಿರುತ್ತೇ ಅನ್ನೋದು ಸದ್ಯದ ಹೊಸ ಕಾನ್ಸೆಪ್ಟ್ ಅದು ನಿಮಗಿಷ್ಟವಾಗಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ.
ಕುಲಕರ್ಣಿ ಸರ್,
ನನ್ನ ಕಾನ್ಸೆಪ್ಟ್ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..
ಕ್ಯಾಮೆರಾಮೇಲೆ ಕ್ಯಾಮೆರಾ ಕಣ್ಣೊ!
ನಮ್ ಶಿವು ಸ್ಪೆಷಲ್ ಕಣಣ್ಣೊ!
ವಿನೂತನ ಛಾಯಾಚಿತ್ರಗಳು ಮತ್ತು ಸು೦ದರ ಪರಿಕಲ್ಪನೆ. ಕ್ಯಾಮರಾದ ಮು೦ದಿನದನ್ನು ನಾವೂ ಸಾಮಾನ್ಯವಾಗಿ ಕಾಣುತ್ತೆವೆ. ಕ್ಯಾಮರಾದ ಹಿ೦ದಿನ ಕಸರತ್ತು ನಮಗೆ ಕಾಣಸಿಗುವದಿಲ್ಲ. ಅದನ್ನು ತೋರಿಸಿದ್ದಕ್ಕೆ ತಮಗೆ ವ೦ದನೆಗಳು ಮತ್ತು ನಮಗೆ ಅಪರೂಪದ ಛಾಯಾಚಿತ್ರಗಳನ್ನು ಕೊಡಲು ವಿಶಿಷ್ಟ ಶ್ರಮ ಪಡುವ ತಮ್ಮ ವೃತ್ತಿಭ೦ಧವರಿಗೆಲ್ಲಾ ನನ್ನ ಅಭಿನ೦ದನೆಗಳು.
ಶಿವು,
ಈ ಸಲದ ಪ್ರಯತ್ನ ಫಲ ನೀಡಿದೆ,ತುಂಬಾ ಚೆನ್ನಾಗಿದೆ.
ನೀವು ಅದ್ಯಾವ ಭಂಗಿಗಳಲ್ಲಿ ಈ ಫೋಟೋಗಳನ್ನು ಸೆರೆ ಹಿಡಿದಿರೋ !! ಅದನ್ನು ಬೇರೆ ಯಾವುದಾದರೂ ಬ್ಲಾಗ್ ಅಲ್ಲಿ ನೋಡಬಹುದೇನೋ ;)
ಅಬ್ಬಾ! ಎಷ್ಟೆಲ್ಲಾ ಸರ್ಕಸ್ ಒಳ್ಳೆ ಫೋಟೋ ತೆಗೆಯಲು!
ಅದನ್ನು ನೀವು ತೋರಿಸಿ ಒಳ್ಳೆ ತಮಾಷೆ ಮಾಡಿದ್ದೀರ
ಶಿವು,
ನಿಮ್ಮದೂ ಒಂದು ಫೋಟೋ ತೆಗೆಯುವ ಫೋಟೋ ಇಲ್ಲಿದ್ದರೆ ತುಂಬ ಚೆನ್ನಾಗಿರ್ತಿತ್ತು!
ಫೋಟೋ ತೆಗೆಯಲು ನಡೆಸುವ ಕಸರತ್ತು ಚೆನ್ನಾಗಿ ತೋರಿಸಿದ್ದೀರ...
ಶಿವು ಯಾವಾಗಲೂ ವಿಭಿನ್ನ ಅಲ್ವ....ಸಖತ್ತಾಗಿದೆ....
ಶಿವೂ ಸರ್,
ನಿಜವಾಗಿಯೂ ಮೆಚ್ಚಲೇ ಬೇಕಾದದ್ದು! ನಿಮ್ಮ ವೃತ್ತಿಯಮೇಲಿರುವ ಪ್ರೀತಿಯೇ ಇಂತಹ ಅದ್ಭುತ ಚಿತ್ರಗಳಿಗೆ ಕಾರಣ!
ಏಕತೆಯಲ್ಲೂ ವೈವಿದ್ಯತೆ ಹುಡುಕುವ ನಿಮ್ಮ ಹುಮ್ಮಸ್ಸಿಗೆ hats up!
ಶಿವಣ್ಣ ಸಕತ್ ಫೋಟೋಸ್ ಕಣಣ್ಣ :)
ಹ್ಹ ಹ್ಹ ಹ್ಹಾ... ಏನು ಭಂಗಿಗಳಪ್ಪಾ.
ಹ್ಹ ಹ್ಹ ಹ್ಹಾ :-)
Nice!
ಶಿವೂ ಅವರೇ,
ಉತ್ತಮ ಪ್ರಯತ್ನ, ಫೋಟೋ ಕ್ಲಿಕ್ಕ್ಕಿಸಲು ಇಷ್ಟೊಂದು ಕಷ್ಟ ಪಡುವುದು ನಿಮ್ಮ ಈ ಫೋಟೋ ನೋಡಿದಾಗಲೇ ತಿಳಿದಿದ್ದು.
ಅಭಿನಂದನೆಗಳು.
ಪ್ರಶಾಂತ್ ಭಟ್
ನಿಮ್ಮ ವಿಭಿನ್ನ tasteಗೊಂದು ಸಲಾಮು.
ಆನಂದ ರಾಮ ಶಾಸ್ತ್ರಿ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಸೀತಾರಾಂ ಸರ್,
ನಮ್ಮ ಕ್ಯಾಮೆರಾ ಮೆನ್ ಗಳ ಬಗ್ಗೆ ಬೆಳಕು ಚೆಲ್ಲಬೇಕು ಅಂದುಕೊಂಡಿದ್ದೆ. ಅದು ಈ ರೀತಿ ಆಗುತ್ತೆ ಅಂದುಕೊಂಡಿರಲಿಲ್ಲ. ಏನೇ ಆದರೂ ಎಲ್ಲರಿಗೂ ಒಂದಷ್ಟು ಆನಂದ ಸಿಕ್ಕರೆ ಅದಕ್ಕಿಂತ ಬೇರೆ ಏನು ಬೇಕು ಹೇಳಿ.
ನಿಮ್ಮ ಅಭಿನಂದನೆಗೆ ನನ್ನ ಧನ್ಯವಾದಗಳು.
ಸಂದೀಪ್,
ಹೌದು ಈ ಸಲ ವಿಭಿನ್ನವಾಗಿ ಹೊಸದೇನನ್ನೋ ಕೊಡಬೇಕೆನ್ನುವ ಪ್ರಯತ್ನ ಯಶಸ್ವಿಯಾಗಿದೆ.
ಮತ್ತೆ ನೀವು ಹೇಳಿದಂತೆ ನಾನು ಫೋಟೊ ತೆಗೆಯುವ ಅವತಾರಗಳನ್ನು ಕ್ಲಿಕ್ಕಿಸುವ ಛಾಯಾಗ್ರಾಹಕ ನನಗಿಂತ ಹೆಚ್ಚು ತರಲೇಯಾಗಿದ್ದರೇ ಮಾತ್ರ ನನ್ನ ಫೋಟೋಗಳನ್ಜು ಕ್ಲಿಕ್ಕಿಸಿರಬಹುದು. ಕಾದು ನೋಡಬೇಕು.
ಧನ್ಯವಾದಗಳು.
ಭಾಶೇ,
ಈ ಸರ್ಕಸ್ ನಿಮಗಿಷ್ಟವಾಯಿತೇ! ನೀವು ಇಂತವನ್ನು ಇಷ್ಟಪಟ್ಟು ಪ್ರೋತ್ಸಾಹಿಸುತ್ತಿದ್ದರೇ..ನಿಮಗೆ ಮತ್ತಷ್ಟು ತಮಾಷೆಗಳನ್ನು ತೋರಿಸಲು ನಮಗೂ ಸ್ಪೂರ್ತಿ.
ಧನ್ಯವಾದಗಳು.
ಸುನಾಥ್ ಸರ್,
ನನ್ನ ಫೋಟೊ ಇಲ್ಲವೆಂದು ಬೇಸರಿಸಬೇಡಿ. ನನ್ನ ಹಳೆಯ ಚಿಟ್ಟೆಗಳ ಬಗ್ಗೆ ಹಕ್ಕಿಗಳ ಬಗ್ಗೆ ಬರೆದ ಲೇಖನಗಳನ್ನು ನೆನಪಿಸಿಕೊಳ್ಳಿ, ಅಥವ ಮತ್ತೊಮ್ಮೆ ಓದಿಬಿಡಿ. ಆಗ ಇದಕ್ಕಿಂತ ಹೆಚ್ಚು ಅವತಾರಗಳಲ್ಲಿ ನಾನು ಫೋಟೊ ಕ್ಲಿಕ್ಕಿಸುತ್ತಿರುವ ಚಿತ್ರಗಳನ್ನು ಕಲ್ಪಿಸಿಕೊಳ್ಳಬಹುದು.
ಮೆಚ್ಚಿದ್ದಕ್ಕೆ ಧನ್ಯವಾದಗಳು.
ಸವಿಗನಸು ಮಹೇಶ್ ಸರ್,
ವಿಭಿನ್ನತೆಯ ಹಿಂದೆ ಬೀಳುವುದರ ಮಜವೇ ಬೇರೆ ಅಲ್ಲವೇ..
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಅದ್ಭುತ ಸರ್. ಒಂದು ಘಟನೆಯನ್ನು ಹೇಗೆ ವಿಭಿನ್ನವಾಗಿ ನೋಡಬಹುದು ಎಂದು ತೋರಿಸಿದ್ದೀರಿ. ಎಲ್ಲರೂ ಓಟಗಾರರ ಮೇಲೆ ಕಣ್ಣು(ಕ್ಯಾಮರಾ) ಇಟ್ಟಿದ್ದರೆ ನೀವು ಅವರ ಮೇಲೆ ಕ್ಯಾಮರಾ ಕಣ್ಣಿಟ್ಟಿರಿ. ಒಂದು ಒಳ್ಳೆಯೆ ಚಿತ್ರಕ್ಕೆ ಎಷ್ಟೆಲ್ಲ ಸರ್ಕಸ್ ಮಾಡಬೇಕು ಎಂದು ಗೊತ್ತಾಗುತ್ತದೆ
ಹ..ಹ..ಹ ಒಳ್ಳೆ ಫೋಟೊಗಳು ಸರ್
ha ha...:)
Hehe.. Sudhakar (KPN) illi target aaghogidane! :D
Maja photos shivu..
hahaha super sir!!!!!!! chennagide
ನಿಮ್ಮ ಸೃಜನಶೀಲತೆಗೆ ನಮೋನ್ನಮಃ, ತು೦ಬ ಚೆನ್ನಾಗಿವೆ, ವಿಭಿನ್ನವಾಗಿವೆ ಎಲ್ಲ ಚಿತ್ರಗಳು
ಸೂಪರ್ ಫೋಟೋಗಳು ಶಿವೂ,,,,, ಫೋಟೋ ನಲ್ಲೆ ವಿಶೇಷ creativity
ಚೆನ್ನಾಗಿದೆ.
ಕೊನೇ ಚಿತ್ರ, ಮಲಗಿರೋದು ನನ್ನವ. ಸುದಾಕರ.
ಅದನ್ನು ಕಾಪಿ ಮಾಡಿ ಅವನಿಗೆ ಕಳಿಸಿದ್ದೇನೆ.
ನಿನ್ನ ಪರ್ಮಿಷನ್ ಇದೆ ತಾನೆ?
ಸುಂದರ ಫೋಟೋಗಳು :)
ಪ್ರವೀಣ್,
ನೀವು ನನ್ನ ವೃತ್ತಿಯ ಬಗ್ಗೆ ಇಟ್ಟುಕೊಂಡಿರುವ ಗೌರವಕ್ಕೆ ನನ್ನ ಕಡೆಯಿಂದ ಧನ್ಯವಾದಗಳು. ನೀವು ನನ್ನ ಕಾನ್ಸೆಪ್ಟ್ enjoy ಮಾಡಿದ್ದಕ್ಕೆ ಧನ್ಯವಾದಗಳು.
Arya for you,
ನಿಮಗೆ ಧನ್ಯವಾದಗಳು.
ಚೈತ್ರಿಕಾ...
ಚೆನ್ನಾಗಿ ನಗು ಬಂತಾ...ಇವೆಲ್ಲಾ ನಮ್ಮ ನಿತ್ಯದ ಅವತಾರಗಳು.
ಧನ್ಯವಾದಗಳು.
ಪೂರ್ಣಿಮ ಮೇಡಮ್,
ಥ್ಯಾಂಕ್ಸ್.
ಪಾಚುಪ್ರಪಂಚದ ಪ್ರಶಾಂತ್,
ನಮ್ಮ ವೃತ್ತಿಯಲ್ಲಿ ಇನ್ನೂ ಅನೇಕ ಅವತಾರಗಳಿವೆ. ಅವುಗಳನ್ನು ಮುಂದೆ ಎಂದಾದರೂ ಬ್ಲಾಗಿಗೇರಿಸುತ್ತೇನೆ. ನಮ್ಮ ಕೆಲಸವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳೂ.
ಸುಬ್ರಮಣ್ಯ ಸರ್,
ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು.
ಕುಲದೀಪ್ ಸರ್,
ಇದು ಹಾಗೆ ಸುಮ್ಮನೆ ಒಂದು ತಮಾಷೆಗಾಗಿ ಮಾಡಿದ ಪ್ರಯತ್ನವಿದು. ಮಾರಿಕಣ್ಣು ಹೋರಿ ಮ್ಯಾಲೆ ಅಂದಾಗ ಹೋರಿಕಣ್ಣು ಯಾರ ಮೇಲೆ ಅನ್ನುವ ವಿಚಾರ ತಲೆಗೆ ಬಂದಾಗ ಇದೆಲ್ಲಾ ಅಯಿತು. ನಮ್ಮ ಶ್ರಮವನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು.
ಸುಮ ಮೇಡಮ್,
ಥ್ಯಾಂಕ್ಸ್..
ಪ್ರಮೋದ್,
ಥ್ಯಾಂಕ್ಸ್.
ಸುಶ್ರುತ,
ಆತ [KPN]ಸುಧಾಕರ್ ಅಂತ ನನಗೂ ಅಮೇಲೆ ಗೊತ್ತಾಯಿತು. ಆತನ ಮೇಲ್ ಐಡಿ ಇದ್ದರೆ ಕೊಡಿ. ಅವರ ಮತ್ತಷ್ಟು ಚಿತ್ರಗಳನ್ನು ಅವರಿಗೆ ಕಳಿಸುತ್ತೇನೆ..
ಧನ್ಯವಾದಗಳು.
ಮನಸು ಮೇಡಮ್,
ತುಂಬಾ ಧನ್ಯವಾದಗಳು.
ಪರಂಜಪೆ ಸರ್,
ನನ್ನ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಇದೊಂದು ಸಣ್ಣ ಪ್ರಯತ್ನವಷ್ಟೆ.
ಗುರು,
ಫೋಟೊಗಳಲ್ಲಿ ಕ್ರಿಯೇಟಿವಿಟಿಯನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು.
ಹೆಬ್ಬಾರ್ ಸರ್,
ಸುಧಾಕರ್ ಚಿತ್ರವನ್ನು ಕಳಿಸಲಿಕ್ಕೆ ನನ್ನ ಅನುಮತಿ ಪಡೆಯುವ ಅವಶ್ಯಕತೆಯಿಲ್ಲ. ಇಷ್ಟಾಗಿ ನಾನು ಆತನ ಫೋಟೊವನ್ನು ಬ್ಲಾಗಿನಲ್ಲಿ ಹಾಕಲಿಕ್ಕೆ ಅನುಮತಿ ಪಡೆಯಬೇಕು. ಆತನ ಮೇಲ್ ಐಡಿ ಇದ್ದರೆ ಕೊಡಿ. ಇನ್ನಷ್ಟು ಫೋಟೋಗಳನ್ನು ಕಳಿಸುತ್ತೇನೆ..
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ವನಿತಾ,
ಥ್ಯಾಂಕ್ಸ್..
ಶಿವು ಸರ್,
ಎಂದಿನಂತೆ ಹೊಸತನದಿಂದ ಕೂಡಿದ ಫೊಟೊಗಳು
ವಿಶೆಷವಾಗಿವೆ.
ಶಿವೂ,
ಹೊಸದನ್ನೇ ಹುಡುಕುವ ನಿಮ್ಮ ಉತ್ಸಾಹ ಬಹಳ ಇಷ್ಟವಾಯಿತು .
ನಿಮ್ಮ ಕ್ಯಾಮೆರಾ ತಮ್ಮ ಕಡೆ ಕಣ್ಣಿಟ್ಟಿರುವುದು ತಿಳಿದಿದ್ದರೆ ಅವರುಗಳೂ ಪೋಸ್ ಕೊಡುತ್ತಿದ್ದರೆನೋ !
ಶಿವು,
very nice. ನಿಮ್ಮ photography conceptಗಳೇ ವಿಭಿನ್ನ ಮತ್ತು ವಿಶೇಷ.
thanks
ಶಿವು ಸರ್,
ಚೆನ್ನಾಗಿದೆ ನಿಮ್ಮ ಈ ಕಾನ್ಸೆಪ್ಟ್...
kaLeda varushavaoo neevu idhara bagge yaavudo lEkhana baredha nenapu nanage....
ee baariya lekhana visheshavaagidhe shivanna :)
soopar........... soopar........ soooooopar........ no other words........
ಸಲೀಂ,
ಥ್ಯಾಂಕ್ಸ್...
ಚಿತ್ರಾ,
ನನ್ನ ಹೊಸತನವನ್ನು ನೀವು ಇಷ್ಟಪಟ್ಟಿದ್ದೀರಿ. ಥ್ಯಾಂಕ್ಸ್...ನಾವು ಯಾರ ಕಡೆಯ್ ಕ್ಯಾಮೆರವನ್ನು ತೋರಿಸುತ್ತೇವೋ ಅವರು ಕೂಡಲೇ ನೀವು ಹೇಳಿದಂತೆ ಅಲರ್ಟ್ ಆಗುತ್ತಾರೆ ಅಥವ ಅವೈಡ್ ಮಾಡುತ್ತಾರೆ. ಅದಕ್ಕೆ ನಾನು ಅವರ ಕಡೆ ಕ್ಯಾಮೆರಾವನ್ನೇ ತೋರಿಸುವುದಿಲ್ಲ. ಬೇರೆಲ್ಲೋ ಕ್ಲಿಕ್ಕಿಸುವಂತೆ ಅವರ ಗಮನವನ್ನು ಬೇರೆಡೆಗೆ ಸೆಳೆದು ಅವರನ್ನೇ ಕ್ಲಿಕ್ಕಿಸುತ್ತೇನೆ. ಇದು ಒಂಥವ ಸರ್ಕಸ್. ಎಲ್ಲಾ ಕಡೆಯೂ ಇದು ಯಶಸ್ವಿಯಾಗುವುದಿಲ್ಲ. ಆದರೆ ಹೀಗೆ ಸಿಗುತ್ತದೆ..
ವಿಕಾಶ್,
ನನ್ನ ಫೋಟೋಗ್ರಫಿ ಕಾನ್ಸೆಪ್ಟ್ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಶ್ರೀಧರ್ ಸರ್,
ಥ್ಯಾಂಕ್ಸ್..
ಸುಧೇಶ್,
ಕಳೆದ ಬಾರಿ ಇದರ ಬಗ್ಗೆ ಎರಡು ಭಾಗಗಳ ಸುಂದರ ಎಪಿಸೋಡ್ ಮಾಡಿದ್ದೆ. ಅದು ಓಟಗಾರರು ಓಡುವುದನ್ನು ಮರೆತು ಏನೇನು ಮಾಡಿದರು ಅಂತ. ಮತ್ತೆ ಅದನ್ನೇ ಮಾಡಿದರೆ ಚೆನ್ನಾಗಿರುವುದಿಲ್ಲವೆಂದು ಈ ಬಾರಿ ಹೊಸದಾಗಿ ಇದನ್ನು ಪ್ರಯತ್ನಿಸಿದೆ. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ದಿನಕರ್ ಸರ್,
ಥ್ಯಾಂಕ್ಸ್...ಥ್ಯಾಂಕ್ಸ್..............
Every attempt , and pose shows the effort behind good photos by a photographer.
Good one.. :)
ಮಸ್ತಾಗಿವೆ..
ಇವುಗಳನ್ನು ನೋಡ್ತಾ ನಂಗೂ ನನ್ ಗೆಳೆಯಂಗು ತುಂಬಾನೇ ನಗು ಬಂತು ..
ದಿವ್ಯ ಮೇಡಮ್
ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು.
ಜ್ಞಾನಾರ್ಪಣ ಮಸ್ತು,
ಚಿತ್ರಗಳನ್ನು ನೋಡಿ ನೀವು ಮತ್ತು ನಿಮ್ಮ ಗೆಳೆಯರು ಖುಷಿಪಟ್ಟಿದ್ದು ನನ್ನ ಶ್ರಮಕ್ಕೆ ಸಾರ್ಥಕವೆನಿಸುತ್ತದೆ. ಧನ್ಯವಾದಗಳು.
ಬಹಳ ಚೆನ್ನಾಗಿದೆ ಶಿವು ಅವರೆ, ಫೋಟೋಗಳು ನೂರು ಕಥೆ ಹೇಳುತ್ತವೆ...
ಮುತ್ತುಮಣಿ ಮೇಡಮ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ondu photoda inde estondu sarkas!
photo tegeyo kalavidarige nijaku hytsap helbeku. nimmanu serisi
ಪ್ರವೀಣ್ ಚಂದ್ರ ಸರ್,
ನೀವು ನಮ್ಮ ವೃತ್ತಿ ಬದುಕಿನ ಮೇಲೆ ನೀವಿಟ್ಟಿರುವ ಗೌರವಕ್ಕೆ ಧನ್ಯವಾದಗಳು.
Shivu Sir
uttama baraha
tadavaagi bandiddakke kshame irali
ಗುರುಮೂರ್ತಿ ಹೆಗಡೆ ಸರ್,
ನೀವು ಬೆಂಗಳೂರಿಗೆ ಬಂದಾಗ ನಿಮ್ಮನ್ನು ಬೇಟಿಯಾಗಿದ್ದು ನನಗಂತೂ ತುಂಬಾ ಖುಷಿಯಾಯ್ತು. ಅಷ್ಟು ದೂರದಿಂದ ಬಂದವರು ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಪಡೆದುಕೊಂಡಿದ್ದು ನನಗೆ ಮರೆಯಲಾಗದ ವಿಚಾರ.
ಈ ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಹ್ಹ ಹ್ಹಾ.. ಬೇರೆ ದೃಷ್ಟಿಕೋನದಲ್ಲಿ ಫೋಟೋ ತೆಗೆಯಲು ಏನೆಲ್ಲಾ ಸರ್ಕಸ್ ಮಾಡಬೇಕು.. ಮಲಗಿಕೊಂಡು, ಮರದ ಮೇಲೆ ಕೂತುಕೊಂಡು.. ;-)
chennagide chitra. kushi ayitu nodi.
mala
ಪ್ರದೀಪ್,
ನಮ್ಮ ವೃತ್ತಿಯ ತಾಪತ್ರಯ ಇನ್ನೂ ಇದೆ ಸರ್. ಮುಂದೆ ಎಂದಾದರೂ ಹಾಕುತ್ತೇನೆ. ಧನ್ಯವಾದಗಳು.
ಮಾಲಾ ಮೇಡಮ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
maja ide idu!
Greesma,
thanks..
Suuuuuuuuuuuuuuuuuuuuuuper Sir
Post a Comment