Sunday, April 18, 2010

ದೇವರಿಗೆ ಇರಿಸುಮುರಿಸಾಗಬಹುದು, ಬೇಡ ಸುಮ್ಮನಿರ್ರೀ.....

ಯಶವಂತಪುರ-ಮಂಗಳೂರು ರೈಲು ಹತ್ತಿ ನಮ್ಮ ಸೀಟು ಹುಡುಕುವಷ್ಟರಲ್ಲಿ ಸರಿಯಾಗಿ ಬೆಳಗ್ಗಿನ ೭.೩೦ಕ್ಕೆ ಹೊರಟೇಬಿಟ್ಟಿತ್ತು. ನನ್ನ ಸೀಟ್ ನಂಬರ್ ೧೯ ಆದರೆ ನನ್ನಾಕೆಯದು ಅದೇ ಬೋಗಿಯಲ್ಲಿ ೯೨ನೇ ನಂಬರಿನದು. ಇಡೀ ಬೋಗಿಯಲ್ಲಿ ಹೊರಟಿದ್ದವರೆಲ್ಲಾ ಕುಕ್ಕೆ ಸುಬ್ರಮಣ್ಯ ದೇವಾಸ್ಥಾನಕ್ಕೆ ಹೊರಟಿದ್ದರು. ಎಲ್ಲಾ ತರಹದ ಜನರಿದ್ದರೂ ಅರವತ್ತು ದಾಟಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನನ್ನ ಸೀಟು ಸೇರಿದಂತೆ ಮೂರು ಸೀಟಿನಲ್ಲಿ ೬೦ ಪ್ಲಸ್ ಮೂವರು ಹಿರಿಯರು ಅರಾಮವಾಗಿ ಕುಳಿತುಬಿಟ್ಟಿದ್ದಾರೆ.

"ಸರ್ ೧೯ ನನ್ನ ಸೀಟು" ಅಂತ ಟಿಕೆಟ್ಟು ತೋರಿಸಿದೆ.
ಅವರ ಮಾತುಕತೆಗೆ ಭಂಗವಾಯಿತೇನೋ, ನನ್ನನ್ನೊಮ್ಮೆ ನೋಡಿ
"ನೀವು ಫ್ಯಾಮಿಲಿ ಜೊತೆ ಬಂದಿದ್ದೀರಾ" ಅಂತ ಒಬ್ಬರು ಕೇಳಿದರು. ನಾನು "ಹೌದು" ಅಂದೆ.
"ನೋಡಪ್ಪ ಬೇಸರ ಮಾಡಿಕೊಳ್ಳಬೇಡ...ನಾವು ಮೂವರು ಬ್ಯಾಚುಲರ್ಸು, ಅರಾಮವಾಗಿ ಎಂಜಾಯ್ ಮಾಡಲು ಬಂದಿದ್ದೇವೆ.ನಮ್ಮ ಸೀಟು ಅಲ್ಲಿದೆ,ನೀವು ಸಂಸಾರಿಕರು,ಹೊಂದಾಣಿಕೆಮಾಡಿಕೊಳ್ಳುವ ಮನಸ್ಥಿತಿಯಿದೆಯೆಂದುಕೊಳ್ಳುತ್ತೇನೆ..ಸಹಕರಿಸುತ್ತೀರಾ? ಅಂದರು.

ಅರವತ್ತು ದಾಟಿದರು ಬ್ಯಾಚುಲರ್ಸು ಅಂತ ಹೇಳಿದ ಮಾತು ಕೇಳಿ ಸುತ್ತಲಿದ್ದವರೆಲ್ಲಾ ಗೊಳ್ಳೆಂದು ನಕ್ಕರು. ನನಗೂ ನಗು ತಡೆಯಲಾಗಲಿಲ್ಲ. ಕೊನೆಗೆ ಅವರ ಸೀಟು ೮೮ರಲ್ಲಿ ಹೋಗಿ ಕುಳಿತುಕೊಂಡೆ. ಅದರ ಹಿಂದೆಯೇ ನನ್ನಾಕೆ ಸೀಟು ಇತ್ತು. ನಮ್ಮ ಸಂಸಾರವನ್ನು ಕೊನೇ ಪಕ್ಷ ಅಷ್ಟು ಹತ್ತಿರವಾದರೂ ಮಾಡಿದ ಆ ಬ್ಯಾಚುರರ್ಸುಗಳಿಗೆ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುತ್ತಾ ಕುಳಿತುಕೊಂಡೆ.


ಸಿನಿಮಾ ಹಾಲಿನಲ್ಲಿ ಸೀಟು ಬದಲಾವಣೆ ಮಾಡಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಇಲ್ಲಿಯೂ ಹಾಗೇ ಅನೇಕರು ಸೀಟು ಬದಲಾಯಿಸಿಕೊಂಡು ಕುಳಿತುಕೊಳ್ಳುವ ಹೊತ್ತಿಗೆ ನಮ್ಮ ರೈಲು ಸೋಲದೇವನಹಳ್ಳಿ ದಾಟಿತ್ತು. ಈ ರೈಲಿನಲ್ಲಿ ಬೋಗಿಗಳೆಲ್ಲಾ ನಡುವೆ ಬಾಗಿಲ ಮುಖಾಂತರ ಕನೆಕ್ಟ್ ಆಗಿದ್ದರಿಂದ ಒಮ್ಮೇ ಎಲ್ಲಾ ಬೋಗಿಗಳನ್ನು ನೋಡಿಬರೋಣವೆಂದು ಹೊರಟೆ. ಮೂರನೇ ಬೋಗಿಗೆ ಹೋಗುವಷ್ಟರಲ್ಲಿ ಅಲ್ಲಲ್ಲಿ ಒಬ್ಬೊಬ್ಬರು ಪ್ರಾಯಾಣಿಕರು. ನಂತರದ ಬೋಗಿಗಳಲ್ಲಿ ಒಬ್ಬರೋ ಇಬ್ಬರೋ ಕುಳಿತಿದ್ದರು. ಇವೆಲ್ಲಾ ಕಾದಿರಿಸಿದ ಬೋಗಿಗಳಾದಾರೂ ಪ್ರಯಾಣಿಕರೇ ಇರಲ್ಲಿಲ್ಲ. ನಾವ್ಯಾಕೆ ಸುಮ್ಮನೆ ಮೊದಲನೇ ಬೋಗಿಯಲ್ಲಿ ಸೀಟಿಗಾಗಿ ರಾಜಕೀಯದವರಂತೆ ಹೊಂದಣಿಕೆ ಮಾಡಿಕೊಳ್ಳಲು ತಲೆಬಿಸಿಮಾಡಿಕೊಂಡವಲ್ಲ ಅನ್ನಿಸಿತು. ನಾನು ವಾಪಸು ಬಂದು ಈ ವಿಚಾರವನ್ನು ನನ್ನ ಶ್ರೀಮತಿಗೆ ಹೇಳಿದೆ. ಇಬ್ಬರು ಮುಂದೆ ಖಾಲಿಇರುವ ಬೋಗಿಗಳಲ್ಲಿ ಅರ್‍ಆಮವಾಗಿ ಕುಳಿತೆವು.

ನನ್ನ ಕ್ಯಾಮೆರಾ ನೋಡಿ ದೂರದಿಂದಲೇ ರೈಲ್ವೇ ನೌಕರರು ಫೋಸು ಕೊಟ್ಟಿದ್ದು ಹೀಗೆ!

ಆ ಹುಡುಗ ಕೈತುಂಬ, ಬ್ಯಾಗ್ ತುಂಬಾ ಪುಸ್ತಕಗಳನ್ನು ಹಿಡಿದು ಪ್ರತಿಸೀಟಿನಲ್ಲೂ ಅಷ್ಟಷ್ಟೂ ಪುಸ್ತಕಗಳನ್ನು ಇಟ್ಟು ಹೋಗುತ್ತಿದ್ದ. ನಮ್ಮ ಬಳಿ ಇಟ್ಟಿದ್ದ ಪುಸ್ತಕಗಳನ್ನು ಒಮ್ಮೆ ನೋಡಿದೆ. ಪಂಚತಂತ್ರ, ಈಸೋಪನಕತೆಗಳು, ಜೋಕ್ಸ್, ಆರೋಗ್ಯ ದೇವರನಾಮ, ಮಂತ್ರಗಳು ಮಕ್ಕಳ ಚಿತ್ರಕಲೆ ಹೀಗೆ ಎಲ್ಲಾ ವಿಧದ ಪುಸ್ತಕಗಳು ಇದ್ದವು ಇಂಥ ಪುಸ್ತಕಗಳನ್ನು ಓದಿ ತುಂಬಾ ದಿನವಾದ್ದರಿಂದ ಐದಾರು ಪುಸ್ತಕಗಳನ್ನು ಕೊಂಡುಕೊಂಡೆ. ನಾನು ಓದಿದ ನಂತರ ನಮ್ಮ ಓಣಿಯ ಪುಟ್ಟಮಕ್ಕಳಿಗೆ ಕೊಟ್ಟರೆ ಅವರಿಗೂ ನಮ್ಮ ಹಳ್ಳಿಕತೆಗಳು, ಜಾನಪದ ಸೊಗಡಿನ ಕತೆಗಳ ಪರಿಚಯವಾಗುತ್ತದೆ. ಈ ಮಟ್ಟಿಗಾದರೂ ನಮ್ಮ ಟಿ.ವಿ ನೋಡುವ ಚಟದಿಂದ ಸ್ವಲ್ಪಮಟ್ಟಿಗಾದರೂ ಹೊರಬರುತ್ತಾರೆನ್ನುವುದು ನನ್ನ ಪುಟ್ಟ ಆಸೆ. ಅವನಿಗೆ ಇಲ್ಲಿಂದ ಹೊರಡುವ ಪ್ರತಿಯೊಂದು ರೈಲಿನ ಸಮಯಯೂ ಗೊತ್ತಿರುವುದರಿಂದ ಎಲ್ಲಾ ರೈಲಿನ ಪ್ರಯಾಣಿಕರಿಗೂ ಬೆಳಿಗ್ಗೆಯಿಂದ ಸಂಜೆಯವರೆಗೆ ಪುಸ್ತಕವನ್ನು ಮಾರುತ್ತೇನೆ ಅಂದ.


"ಅದಾಯ ಪರ್ವಾಗಿಲ್ಲವಾ?" ನಾನು ಕೇಳಿದೆ.

"ಪರ್ವಾಗಿಲ್ಲ ಸರ್ ಆದ್ರೆ, ರೈಲ್ವೇ ಪೋಲಿಸ್, ಟೆಕೆಟ್ ಕಲೆಕ್ಟರುಗಳು ಬಂದು ನಮ್ಮ ಮೇಲೆ ಕೇಸು ಹಾಕುತ್ತಾರೆ. ನಾವು ವರ್ಷ ಪೂರ್ತಿ ದುಡಿದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಕೋರ್ಟಿನಲ್ಲಿ ದಂಡಕಟ್ಟಲಿಕ್ಕೆ ಹೋಗಿಬಿಡುತ್ತದೆ" ಅಂದ.

"ನೀನ್ಯಾಕೆ ಇದನ್ನು ಟೆಂಡರ್ ಪಡೆದು ಅಧಿಕೃತವಾಗಿಯೇ ಮಾರಾಟಮಾಡಬಾರದು?" ನಾನು ಕೇಳಿದೆ.

"ಅದೆಲ್ಲಾ ನಮ್ಮ ಕೈಲಿ ಆಗುತ್ತಾ ಸರ್, ಲಕ್ಷಾಂತರ ರೂಪಾಯಿ ಟೆಂಡರಿಗೆ ಕಟ್ಟಬೇಕು, ಅದು ನಮ್ಮಂತ ಬಡವರಿಗೆ ಸಾದ್ಯವಾ ಹೇಳಿ?" ಅಂತ ನನಗೆ ಮರುಪ್ರಶ್ನೆ ಹಾಕಿದಾಗ ನನ್ನಲ್ಲಿ ಉತ್ತರವಿರಲಿಲ್ಲ.


"ನೀನು ಏನು ಓದಿದ್ದೀಯಾ?" ಪ್ರಶ್ನೆಯನ್ನು ಬದಲಿಸಿದೆ.


"ಎಸ್.ಎಸ್.ಎಲ್.ಸಿವರೆಗೆ" ಅಂದ. ಆದನ್ನು ಹೇಳುವಾಗ ಅವನಿಗೆ ಅಳುಕಿರಲಿಲ್ಲ.

"ಮುಂದೆ ಏಕೆ ಓದಲಿಲ್ಲ"

"ಓದಬೇಕು ಅಂದುಕೊಂಡರೂ ನಮ್ಮ ಮನೆ ಪರಿಸ್ಥಿತಿ ಅದಕ್ಕೆ ಸಹಕರಿಸಲಿಲ್ಲ ಸರ್, ಅದಕ್ಕೆ ಈ ಉದ್ಯೋಗವನ್ನು ಆರಿಸಿಕೊಂಡೆ"

"ಹೋಗಲಿ ಈ ವ್ಯಾಪಾರ ಮಾಡುವುದರಲ್ಲಿ ನಿನಗೆ ಖುಷಿ ಸಿಗುತ್ತದೆಯೇ,"

"ಖಂಡಿತ ಸರ್, ಚಲಿಸುವ ರೈಲಿನಲ್ಲಿ ಚಲಿಸುವ ಸಾವಿರಾರು ಪ್ರಯಾಣರನ್ನು ಬೇಟಿಯಾಗುವ ಅನುಭವ, ಮಾತು ಚರ್ಚೆ, ಇವೆಲ್ಲಾ ನಿಜಕ್ಕೂ ಖುಷಿಕೊಡುತ್ತವೆ. ಸರ್ ಒಂದು ವಿಚಾರ ಗೊತ್ತಾ ನಿಮಗೆ, ನಿಮ್ಮೆಲ್ಲರ ಬದುಕು ನಿಂತಲ್ಲೇ ಚಲಿಸಿದರೆ, ನಮ್ಮದು ಮಾತ್ರ ಚಲಿಸುತ್ತಲೇ ಬದಕನ್ನು ಕಟ್ಟಿಕೊಳ್ಳುವ, ಕಟ್ಟಿಕೊಳ್ಳುತ್ತಲೇ ಚಲಿಸುವ ಬದುಕು. ಇಂಥವುಗಳನ್ನು ಪುಸ್ತಕಗಳು ಕಲಿಸಿಕೊಡುವುದಿಲ್ಲವೆಂದು ನನ್ನ ಭಾವನೆ ಸರ್"


"ಹತ್ತನೇ ತರಗತಿಯವರೆಗೆ ಓದಿದ ಮಾತ್ರಕ್ಕೆ ಚೆನ್ನಾಗಿ ಓದಿದವರಂತೆ, ಸಂಸ್ಕಾರವಂತರಂತೆ ನಿನ್ನ ಭಾಷೆ ಚೆನ್ನಾಗಿದೆಯಲ್ಲಾ? ಕೇಳಿದೆ.

ನನ್ನ ಮಾತಿಗೆ ಅವನು ಸುಮ್ಮನೇ ನಕ್ಕ. ನಮ್ಮ ಮಾತುಕತೆ ನಡುವೆಯೇ ತುಮಕೂರು ಬಂದೇ ಬಿಟ್ಟಿತ್ತು.

"ಸರ್, ಮತ್ತೊಂದು ರೈಲಿಗೆ ಹೋಗಬೇಕು. ವಾಪಸ್ ಬರುವಾಗ ಮತ್ತೆ ಸಿಗುತ್ತೇನೆ" ಅಂದವನೇ ಇಳಿದು ಬೇರೊಂದು ರೈಲು ಹತ್ತಿ, ನನ್ನ ಕಡೆಗೆ ಕೈಯಾಡಿಸಿದ. ನಾನು ಅವನೆಡೆಗೆ ಕೈಯಾಡಿಸಿದೆ. ಅವನ ಮಾತು, ತಿಳುವಳಿಕೆಗೆ ನನ್ನ ಮನದಲ್ಲಿ ಮೆಚ್ಚುಗೆಯಿತ್ತು. ಕೇವಲ ಐವತ್ತೇ ನಿಮಷದಲ್ಲಿ ತುಮಕೂರಿಗೆ ತಲುಪಿದ ಈ ರೈಲಿಗೊಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ ತಿಂಡಿ ತಿಂದು ಮುಗಿಸಿದೆವು.

ಎಡಕು ಮೇರಿ ಹತ್ತಿರ ಬರುತ್ತಿದ್ದಂತೆ ಎಲ್ಲೂ ಹಸಿರೋ ಹಸಿರು


ಹಸಿರು ವಾತಾರವಣವನ್ನು ಸೀಳಿಕೊಂಡು ಹೋಗುತ್ತಿರುವ ನಮ್ಮ ರೈಲು

ಸಕಲೇಶಪುರ ದಾಟಿ ಬಾಳ್ಳುಪೇಟೆ ಸಿಗುವ ನಡುವೆ ಸಿಗುವ ಹಸಿರು ದೃಶ್ಯಾವಳಿ

ರೈಲ್ವೇ ಗ್ಯಾಂಗ್ ಮೆನ್ ಈತನ ಕೆಲಸವೇ ಎಲ್ಲರಿಗಿಂತ ಮುಖ್ಯವಾದದು. ರೈಲು ಹಳಿ ಪರೀಕ್ಷೆ ಮಾಡುತ್ತಾ ಮೈಲುಗಟ್ಟಲೇ ಬಿಸಿಲು ಮಳೆ ಚಳಿ ಎನ್ನದೇ ದುಡಿಯುತ್ತಾನೆ.

ಸ್ವಲ್ಪ ಹೊತ್ತಿನಲ್ಲೇ ನಿದಾನವಾಗಿ ಕಡ್ಲೆ ಕಾಯಿ, ಚುರುಮುರಿ, ಹಣ್ಣುಗಳು, ನೀರಿನ ಬಾಟಲ್ ಪೆಪ್ಸಿ, ಕಾಫಿ ಟೀ ಒಂದೊಂದಾಗಿ ಬರತೊಡಗಿದವು. ಹೂ ಮಾರುವ ಹೆಂಗಸು ಬಂದಾಗ ನನ್ನ ಶ್ರೀಮತಿಯೂ ಸೇರಿದಂತೆ ಅಲ್ಲಿದ್ದ ಮಹಿಳಾ ಪ್ರಯಾಣಿಕರೆಲ್ಲಾ ಹೂ ಕೊಂಡುಕೊಂಡು ಕುಳಿತಲ್ಲೇ ಕಟ್ಟತೊಡಗಿದರು. ನನ್ನ ಶ್ರೀಮತಿ ಹೇಮಾಶ್ರಿ ಹೂಕಟ್ಟುವುದರ ನಡುವೆ ಮೂರ್ನಾಲ್ಕು ಮಲ್ಲಿಗೆ ಹೂವುಗಳನ್ನು ಕೆಳಕ್ಕೆ ಎಸೆದಳು.
"ಏಕೆ ಆ ಮಲ್ಲಿಗೆ ಹೂಗಳು ಚೆನ್ನಾಗಿದ್ದರೂ ಕೆಳಗೆ ಬಿಸಾಡುತ್ತಿರುವೆಯಲ್ಲ" ಕೇಳಿದೆ.

"ರೀ ಅದರೊಳಗೆ ಹುಳುಗಳಿವೆ ಕಣ್ರಿ ಅದಕ್ಕೆ ಬಿಸಾಡಿದೆ" ಅಂದಳು.

"ಹೂವಿನೊಳಗೆ ಹುಳುಗಳಿದ್ದರೇ ಏನಂತೆ, ನೀನು ಕಟ್ಟಿದ ಮೇಲೆ ದೇವಾಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೀಯಲ್ಲ ಅದನ್ನು ದೇವರ ಮೇಲೆ ಹಾಕುತ್ತಾರೆ ಅದರಿಂದ ಯಾರಿಗೆ ತೊಂದರೆಯಾಗೋಲ್ಲವಲ್ಲ ಇರಲಿಬಿಡು" ಅಂತ ಕೆಳಗೆ ಬಿದ್ದಿದ ಹೂಗಳನ್ನು ಎತ್ತಿಕೊಳ್ಳಲು ಬಗ್ಗಿದೆ.

"ರೀ ಬೇಡ ಸುಮ್ಮನಿರಿ, ದೇವರ ಮೇಲೆ ಹೂ ಹಾಕಿದಾಗ ಅದರಲ್ಲಿನ ಹುಳುಗಳು ಆಚೆಬಂದು ದೇವರ ಮೈ ಮೇಲೆಲ್ಲಾ ಹರಿದಾಡುವಾಗ ದೇವರಿಗೆ ಇರಿಸುಮುರಿಸಾಗಿ ಬೇಸರವಾಗಬಹುದು" ಅಂದಳು.

"ಹೂವಿನೊಳಗಿರುವ ಹುಳುಗಳು ದೇವರ ಸನ್ನಿದಿಗೆ ತಲುಪಿ ಅವಕ್ಕೂ ಪುಣ್ಯ ಲಭಿಸಿ ಅವುಗಳ ಜೀವನವೂ ಪಾವನವಾಗುತ್ತದಲ್ಲವೇ" ಅಂತ ನನಗನ್ನಿಸಿದರೂ ಅವಳ ಮಾತಿಗೆ ಉತ್ತರ ಕೊಡದೆ ಸುಮ್ಮನಾದೆ. ಬಹುಶಃ ಪ್ರಾಣಿ, ಪಕ್ಷಿ, ಹುಳುಗಳ ಮೇಲೆ ನನಗೆ ವಿಶೇಷ ಪರಿಸರಪ್ರೇಮವಿರುವುದರಿಂದ ಹೀಗೆ ಅನ್ನಿಸಿರಲೂಬಹುದು ಅಂದುಕೊಂಡು ಸುಮ್ಮನಾದೆ. ಅಷ್ಟರಲ್ಲಾಗಲೇ ಸಮಯ ೧೦-೩೦ ನಮ್ಮ ರೈಲು ಅರಸೀಕೆರೆ ತಲುಪಿತ್ತು.
ಇಪ್ಪತ್ತು ನಿಮಿಷಗಳ ನಂತರ ರೈಲು ಹಿಂದಕ್ಕೆ ವಾಪಸ್ಸು ಹೊರಟಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ಹಳ್ಳಿ ಹೆಂಗಸರಲ್ಲಿ ಗುಸುಗುಸು ಗಾಬರಿ ಪ್ರಾರಂಭವಾಯಿತು.

"ರೈಲು ಮತ್ತೆ ಬೆಂಗ್ಳೂರಿಗೆ ಹೋಯ್ತಾಯಿದೆಯಾ? ಏನು ತೊಂದರೆಯಂತೆ? ಮುಂದೆ ರೈಲು ಹಳಿಗೇನಾದರೂ ಹೆಚ್ಚುಕಮ್ಮಿ ಆಗವಾ? " ಅಯ್ಯೋ ಕೊನೆಗಾಲದಲ್ಲಿ ಸುಬ್ರಮಣ್ಯ ಸ್ವಾಮಿಯ ದರ್ಶನ ಮಾಡಬೇಕಂತ ಈ ರೈಲಲ್ಲಿ ಬಂದ್ರೆ ಇದು ವಾಪಸ್ ಹೋಯ್ತಾ ಇದೆಯಲ್ಲಾ? ಕೊನೆಗಾಲದಲ್ಲಿ ನನ್ನಾಸೆಯೂ ಪೂರೈಸಕಾಗದಂಗೆ ಆಯ್ತಾಲ್ಲಾ?" ಅಂತ ವಯಸ್ಸಾದ ಮುದುಕಿಯೊಬ್ಬಳು ಪಕ್ಕದಲ್ಲಿದ್ದ ಗೆಳೆತಿಗೆ ಹೇಳುತ್ತಾ ಅವಲತ್ತುಕೊಳ್ಳುತ್ತಿದ್ದಳು.

"ನೋಡಮ್ಮಿ ಎಂಥ ಕೆಲಸವಾಯ್ತು"..ಸ್ವಲ್ಪ ತಡೆದು ಅತ್ತ ಇತ್ತಾ ನೋಡಿ....."ನಾನು ಈ ಬೆಳಿಗ್ಗೆ ಈ ರೈಲು ಹತ್ತುವಾಗ ಬಾಗಿಲಿಗೆ ಅಡ್ಡವಾಗಿ ಕುಳಿತಿದ್ದ ಬಿಕ್ಷುಕ ಹೆಂಗ್ಸಿನ ಮುಖ ನೋಡಿದ್ದಕ್ಕೆ ಇಂಗಾಯ್ತೋ ಏನೋ..." ಈಕೆ ಅನುಮಾನ ವ್ಯಕ್ತಪಡಿಸಿದಳು.

"ಅದಕ್ಕೆ ನಾನು ಯೋಳದು ದೇವರ ಮುಖ ನೋಡಿ ಬರಬೇಕು ಅಂತ..."
ಹೀಗೆ ಸಾಗುತ್ತಿದ್ದ ಇವರ ಮಾತುಗಳನ್ನು ಕೇಳಿ ನನಗೆ ನಗು ಬಂದರೂ ಅದ್ಯಾರು ಬಾಗಿಲಲ್ಲಿ ಕುಳಿತಿರುವವರೋ ನೋಡಿ ಬರೋಣವೆಂದು ಕ್ಯಾಮೆರಾವನ್ನು ಹೆಗಲಿಗೇರಿಸಿ ಹೊರಟೆ. ಇವರು ಹೇಳಿದಂತೆ ಆ ಬಿಕ್ಷುಕಿ ಅಲ್ಲೇ ಕುಳಿತಿದ್ದಳು. ನಾನು ಯಾರನ್ನೇ ನೋಡಿದರೂ ಕುತೂಹಲವೆನಿಸಿದರೆ ಮಾತಾಡಿಸುವುದು ನನ್ನ ಚಟ. ಅದೇ ರೀತಿ ಆಕೆಯನ್ನು ಮಾತಾಡಿಸಿದೆ. ಅವಳಿಗೆ ನನ್ನ ಭಾಷೆ ಅರ್ಥವಾಗಲಿಲ್ಲ. ತಮಿಳು, ತೆಲುಗು, ಹಿಂದಿ ಭಾಷೆ ಪ್ರಯತ್ನಿಸಿದೆ. ಅವಳು ಹಿಂದಿಯಲ್ಲೇ ಉತ್ತರಿಸಿದಳು.
ಆಕೆಯಿಂದ ತಿಳಿದಿದ್ದೇನೆಂದರೆ, ಅವಳು ಪಶ್ಚಿಮ ಬಂಗಾಲದಿಂದ ಹೀಗೆ ಒಂದೊಂದೇ ರೈಲು ಹತ್ತಿ ಹೋಗುತ್ತಿದ್ದಾಳೆ ಅಲ್ಲಲ್ಲಿ ಬಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಳಂತೆ...

"ಮುಂದೆ ಎಲ್ಲಿಗೆ ಹೋಗುತ್ತೀಯಾ" ನಾನು ಕೇಳಿದೆ.

ನನಗೇ ಗೊತ್ತಿಲ್ಲವೆಂದು ಎರಡು ಕೈಗಳನ್ನು ಮೇಲಕ್ಕೆತ್ತಿ ತೋರಿಸಿದಳು. ಅವಳನ್ನು ಇನ್ನೂ ಮಾತಾಡಿಸಿದರೆ ಪ್ರಯೋಜನವಿಲ್ಲವೆಂದುಕೊಂಡೆ. ನಾವೆಲ್ಲಾ ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲೇ ಪ್ರಯಾಣಿಸುತ್ತಿದ್ದೇವೆಂದು ಅಂದುಕೊಂಡಿದ್ದೇವಲ್ಲ....ಆದ್ರೆ ಈಕೆಗೆ ಮುಂದಿನ ಬದುಕು, ಪ್ರಯಾಣದ ದಾರಿಯೇ ತಿಳಿದಿಲ್ಲವೆಂದುಕೊಂಡಾಗ ಮನಸ್ಸಿನಲ್ಲೇ ಒಂದು ರೀತಿಯ ವಿಷಾದ ಭಾವ ತುಂಬಿತ್ತು. ನಮ್ಮ ಬೋಗಿಗೆ ವಾಪಸ್ಸು ಬಂದೆ. ಹಳ್ಳಿ ಹೆಂಗಸರ ಚರ್ಚೆ ಹಾಗೇ ಮುಂದುವರಿದಿತ್ತು.

ರೈಲಿನಲ್ಲೇ ಗೊತ್ತುಗುರಿಯಿಲ್ಲದೇ ಸಾಗುತ್ತಿರುವ ಬೆಂಗಾಲಿ ಬಿಕ್ಷುಕಿ.
"ಅಯ್ಯೋ ಹೌದಾ....ಈ ರೈಲಿನಲ್ಲೇ ಬರಬಾರದಿತ್ತು ಕಣಮ್ಮಿ" ಕೊನೆಗೆ ಅವರಿಬ್ಬರೂ ಬೇಸರದಿಂದ ಈ ರೀತಿಯ ತೀರ್ಮಾನ ತೆಗೆದುಕೊಂಡಾಗ ನನಗೆ ನಗುಬಂತು. ಇಷ್ಟಕ್ಕೂ ಇಲ್ಲಿಂದ ಹಾಸನಕ್ಕೆ ಹೋಗಬೇಕಾದರೆ ರೈಲಿಗೆ ಮುಂಭಾಗದ ಇಂಜಿನ್ ಹಿಂಭಾಗಕ್ಕೆ ತಗುಲಿಸುವುದರಿಂದ ಆ ಹಳ್ಳಿ ಹೆಂಗಸರಿಗೆ ಹಾಗೆ ಅನ್ನಿಸಿತ್ತು.
ಮುಂದುವರಿಯುವುದು.....

ವಿಶೇಷ ಸೂಚನೆ: [ಈ ಬಾರಿಯ "ಸಖಿ" ಕನ್ನಡ ಪಾಕ್ಷಿಕ ಪತ್ರಿಕೆಯಲ್ಲಿ ಪ್ರವಾಸ ವಿಶೇಷಾಂಕ ಪ್ರಯುಕ್ತ "ಕುಕ್ಕೆ ಕ್ಲಿಕ್" ಹೆಸರಲ್ಲಿ ಈ ಚಿತ್ರಸಹಿತ ಲೇಖನ ಪ್ರಕಟವಾಗಿದೆ.]
ಚಿತ್ರಗಳು ಮತ್ತು ಲೇಖನ.
ಶಿವು.ಕೆ

66 comments:

ಕ್ಷಣ... ಚಿಂತನೆ... said...

ಶಿವು ಸರ್‍,
ರೈಲುಪ್ರಯಾಣವೇ ಒಂದು ರೀತಿಯಲ್ಲಿ ಸೋಜಿಗ, ಸೊಗಸು.
ನೀವು ರೈಲು ಪ್ರಯಾಣದಲ್ಲಿ ಕಂಡ, ಅನುಭವಿಸಿದ ಅಂಶಗಳನ್ನು ಸರಳವಾಗಿ ನಿರೂಪಿಸಿದ್ದೀರಿ.
ಆ ಹುಡುಗನ ವ್ಯಾಪಾರ, ಸಂಸ್ಕೃತಿ, ಆ ಬೆಂಗಾಲಿ ಭಿಕ್ಷುಕಿಯ ವಿಚಾರ ಹಾಗೆಯೇ ಹೂವಿನ ಮಾಲೆ, ಹಳ್ಳಿ ಹೆಂಗಳೆಯರ ಮಾತುಗಳು, ರೈಲ್ವೆ ನೌಕರರು, ಗ್ಯಾಂಗ್‌ಮನ್‌ ಕೆಲಸ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದ್ದೀರಿ.

ಚಿತ್ರಗಳೂ ಸುಂದರವಾಗಿವೆ.

ಕೆಲವೊಮ್ಮೆ ರೈಲು ನಾವು ಹೋಗಬೇಕಾದಿ ದಿಕ್ಕಿನಲ್ಲಿ ಚಲಿಸುತ್ತಿಲ್ಲ, ಮತ್ತೆ ನಾವು ಹೊರಟ ಸ್ಥಳಕ್ಕೆ ಹೋಗುತ್ತಿದೆ ಎಂಬ ಭಾವನೆ ಬರುವುದುಂಟು. ಅದರಲ್ಲಿಯೂ ಎಂಜಿನ್ಗೆ ವಿರುದ್ಧವಾಗಿ ಕುಳಿತಿರುವಾಗ ಅಥವಾ ಬರ್ಥನಲ್ಲಿ ಮಲಗಿರುವಾ ಹೀಗನ್ನಿಸುವುದು ಅಥವಾ ಪಕ್ಕದಲ್ಲಿ ಮತ್ತೊಂದು ರೈಲು ಸಂಚರಿಸಿದಲ್ಲಿ ಹೀಗಾಗುತ್ತದೆ. ಇದೊಂದು ನಿಜಕ್ಕೂ ಸೋಜಿಗ ಪ್ರಸಂಗ.

ಒಟ್ಟಿನಲ್ಲಿ ರೈಲಿನಲ್ಲಿ ನಮ್ಮನ್ನೂ ನಿಮ್ಮ ಜೊತೆಗೆ ಪ್ರವಾಸ ಕರೆದೊಯ್ಯುತ್ತಿರುವಿರಿ.
ಸ್ನೇಹದಿಂದ,

PaLa said...

ಬಂಗಾಲಿ ಭಿಕ್ಷುಕಿ ಫೋಟೋ ತುಂಬಾ ಚೆನ್ನಾಗಿದೆ

Karnataka Best said...

hi, mangalore-bangalore rail prayanadalli innu ondistu jastini photo tegibahudittu. gud article

ಭಾಶೇ said...

ದೇವರಿಗೆ ಇರಿಸು ಮುರಿಸಗುವ ಬಗೆಗಿನ ನಿಮ್ಮ ಪತ್ನಿಯ ಕಾಳಜಿ ಓದಲು ಚೆಂದೆನ್ನಿಸಿತು
ನಾನೊಮ್ಮೆ ಕುಕ್ಕೆಗೆ ಹೋಗುವ ಆಸೆ ಇಟ್ಟುಕೊಂಡಿರುವೆ. ವಿವರ ಸಿಕ್ಕರೆ ಒಳ್ಳೆಯದು

ಸೀತಾರಾಮ. ಕೆ. / SITARAM.K said...

ಚೆ೦ದದ ಪ್ರವಾಸ ಕಥನ. ಜೊತೆಗೆ ಒಳ್ಳೇ ಚಿತ್ರಗಳು....
ಮು೦ದಿನ ಭಾಗಗಳಿಗೆ ಕಾಯ್ತಾ ಇದ್ದೆವೆ....

Naveen ಹಳ್ಳಿ ಹುಡುಗ said...

Anna Superb photos...

Chaithrika said...
This comment has been removed by the author.
Chaithrika said...

ಇವು ಚಲಿಸುತ್ತಿರುವ ರೈಲಿಂದ ಕ್ಲಿಕ್ಕಿಸಿದ ಚಿತ್ರಗಳೇ? ಇಷ್ಟು ಸ್ಪಷ್ಟವಾಗಿ (shake ಆಗದೆ) ಹೇಗೆ ಬಂದವು?!!!

shivu.k said...

ಚಂದ್ರು ಸರ್,

ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು. ನನಗೆ ರೈಲು ಪ್ರಯಾಣವೆಂದರೆ ತುಂಬಾ ಇಷ್ಟ. ಇಷ್ಟ ಪಟ್ಟ ವಿಚಾರದಲ್ಲಿ ನೀವು ಹೇಳಿದ ಅನುಭವ ಹೆಚ್ಚಾಗಿ ಆಗುತ್ತಿರುತ್ತವೆ.

ಬರ್ಥ್ ನಲ್ಲಿ ಪ್ರಯಾಣ ಮಾಡುವಾಗ ನನಗೂ ಹೀಗೆ ಅನುಭವವಾಗಿದೆ. ರೈಲಿನೊಳಗಿನ ಸಂಭಾಷಣೆಯನ್ನು ಮೆಚ್ಚಿದ್ದೀರಿ. ಮುಂದಿನ ಭಾಗದಲ್ಲಿ ಮತ್ತಷ್ಟು ವೈವಿಧ್ಯತೆಗೆಳಿರುತ್ತವೆ. ಅದಕ್ಕೂ ತಪ್ಪದೇ ಬನ್ನಿ.

shivu.k said...

ಪಾಲ,

ನನಗೂ ಬೆಂಗಾಳಿ ಬಿಕ್ಷುಕಿಯ ಫೋಟೊ ತುಂಬಾ ಇಷ್ಟವಾದುದು..ಥ್ಯಾಂಕ್ಸ್..

shivu.k said...

ಪ್ರವೀಣ್ ಚಂದ್ರ ಸರ್,

ಈ ಪ್ರಯಾಣದ ರೈಲಿನಲ್ಲಿ ಅನುಭವವನ್ನು ಹೇಳಿಕೊಳ್ಳಬೇಕಾಗಿರುವುದರಿಂದ ಫೋಟೊ ಕಡಿಮೆ ಬಳಸಿಕೊಂಡಿದ್ದೇನೆ. ಮುಂದಿನ ಭಾಗಕ್ಕೆ ಹೆಚ್ಚು ಫೋಟೊಗಳನ್ನು ಬಳಸಿಕೊಳ್ಳುತ್ತೇನೆ. ಈ ಪ್ರಯಾಣದ ರೈಲಿನ ವಿಭಿನ್ನ ಫೋಟೊ ನೋಡಲು: ಕಿಟಕಿಯಲ್ಲೇನಿದೆ? ಕಿಟಕಿಯೊಳಗಿನ್ನೇನಿದೆ?
ಲೇಖನವನ್ನ ನೋಡಿ...ಅದರಲ್ಲಿ ಹೆಚ್ಚು ಫೋಟೊಗಳಿವೆ.

ಧನ್ಯವಾದಗಳು.

shivu.k said...

ಭಾಶೇ ಮೇಡಮ್,

ಈ ಲೇಖನದಲ್ಲಿ ದೇವರಿಗೆ ಮಾತ್ರ ಇರಿಸುಮುರಿಸಾಗೊಲ್ಲ...ಹಾವು ಬಂದು ಎಲ್ಲರಿಗೂ ಇರಿಸುಮುರಿಸಾಗುವ ವಿಚಾರ ಮುಂದಿನ ಭಾಗದಲ್ಲಿ ಬರುತ್ತದೆ. ತಪ್ಪದೇ ಬನ್ನಿ.
ಈ ರೈಲಿನಲ್ಲಿ ಪ್ರಯಾಣಿಸಲು ವಿವರ ಬೇಕಾದರೆ ನಿಮ್ಮ ಮೇಲ್ ಐಡಿ ಕೊಡಿ. ಅದಕ್ಕೆ ಮೇಲ್ ಮಾಡುತ್ತೇನೆ...

ಧನ್ಯವಾದಗಳು.

Unknown said...

ಬೆಂಗಳೂರು-ಮಂಗಳೂರು ರೈಲು ದಾರಿಯಲ್ಲಿ ಕಾಣಸಿಗುವ ಘಾಟ್ ಪರಿಸರದ ಸೊಬಗೆ ಬೇರೆ.. !! ಆ ಚಿತ್ರಗಳಿಲ್ಲದೆ ಬಂದ ಲೇಖನ ಸಪ್ಪೆಯೆನಿಸಿತು

Subrahmanya said...

ಎಡಕುಮರಿ ಬ್ಯೂಟಿಸ್ಪಾಟ್ ನೋಡೊದಕ್ಕೆ ಇರೋ ಕಣ್ಣುಗಳು ಸಾಲದು ಎನಿಸುತ್ತದೆ ಶಿವು ಅವರೆ. ನಾನಂತೂ ವರ್ಷದಲ್ಲಿ ಏಳೆಂಟು ಬಾರಿ ಕುಕ್ಕೆಗೆ ಹೋಗುತ್ತಲೇ ಇರುತ್ಟೇನೆ.( ನನ್ನೂರಿಗೆ ಸ್ವಲ್ಪ ಹತ್ತಿರ..ಹಾಗಾಗಿ .) ಪ್ರತಿಬಾರಿಯೂ ಒಂದೊಂದು ಹೊಸ ಅನುಭವ. ಸುಮ್ಮನೆ ನಮಗ್ಯಾಕೆ ಎಂದು ಬಿಟ್ಟು ಬಿಡುವ ವಿಷಯಗಳನ್ನೂ ಹೆಕ್ಕಿ , ನೀವು ಹೇಳುತ್ತಿರುವ ಬಗೆ superb. ಮುಂದಿನ ಲೇಖನಕ್ಕೆ ಕಾಯುತ್ತಿರುವೆ.

ಚುಕ್ಕಿಚಿತ್ತಾರ said...

ಚಿತ್ರಗಳು ತು೦ಬಾ ಚನ್ನಾಗಿದೆ. ರೈಲಿನಲ್ಲಿನ ಹಳಿ ತಪ್ಪಿದ ಬದುಕನ್ನು ಚನ್ನಾಗಿ ಚಿತ್ರಿಸಿದ್ದೀರಿ...

sunaath said...

ಶಿವು,
ನಮಗೂ ಸಹ ಒಳ್ಳೇ ರೈಲು ಪ್ರಯಾಣವಾಯಿತು. Thanks!

jithendra hindumane said...

ಶಿವು ಸಾರ್‍, ಅದ್ಭುತ ಪೋಟೋಗಳು...! ಒಳ್ಳೆ ಲೇಖನ...ಧನ್ಯವಾದಗಳು...

ವನಿತಾ / Vanitha said...

ಚೆನ್ನಾಗಿದೆ:).. ಈ ಲೇಖನದ ಫುಲ್ ಕ್ರೆಡಿಟ್ ಹೇಮಶ್ರೀ ಅವರಿಗೆ..

ಸುಮ said...

ಒಳ್ಳೆಯ ಚಿತ್ರಗಳು ಹಾಗೂ ಲೇಖನ. ಮುಂದಿನ ಭಾಗ ಬೇಗ ಬರಲಿ.

ಮನಸು said...

shivu sir,

railu prayaaNa tumba chennagide.... hema avarige full credit... mundina baaga bega barali.

tadavaada anisikegaLige kshame irali...

umesh desai said...

ಶಿವು ನಾ ಇನ್ನೂ ಆ ರೇಲಿನಲ್ಲಿ ಹೋಗಿಲ್ಲ ಹೋಗಬೇಕಾಗಿದೆ ಈಗ ನಿಮ್ಮ ಲೇಖನ/ಫೋಟೋ ನೋಡಿ
ಕೆಮರಾ ಕೆಲವರಲ್ಲಿ ಕವಿತೆ ಬರೆಯಿಸುತ್ತೆ.....

ಸವಿಗನಸು said...
This comment has been removed by the author.
ಸವಿಗನಸು said...

ಶಿವು ಸರ್,
ರೈಲಿನಲ್ಲಿ ನಮ್ಮನ್ನು ಕೊಂಡೊಯ್ದಾಗಿತ್ತು....
ಚೆನ್ನಾಗಿತ್ತು ನಿಮ್ಮ ಶೈಲಿ.....

ನಿಮ್ಮ ಕ್ಯಾಮೆರಾ ಕಣ್ಣು ನಮ್ಮ ಮರಳ ಮಲ್ಲಿಗೆಯ ವೈಶಾಖ ಸಂಚಿಕೆಯಲ್ಲಿ ...
http://kuwaitkannadakoota.org/marala_mallige.html

ಧನ್ಯವಾದಗಳು....

PARAANJAPE K.N. said...

ಚಿತ್ರ-ಲೇಖನ ಚೆನ್ನಾಗಿದೆ. ಶಿರಾಡಿ ಘಾಟಿಯ ಪ್ರಾಕೃತಿಕ ಸೌ೦ದರ್ಯದ ಚಿತ್ರಗಳು ಹಾಕಿದ್ದರೆ ಅ೦ದ ಇನ್ನಷ್ಟು ಹೆಚ್ಚುತ್ತಿತ್ತು.

balasubramanya said...

ವಾಹ್!!!! ಅದ್ಭುತ ಶಿವೂ . ನಿಮ್ಮ ಈ ತರಹದ ಟ್ರೆಂಡ್ ಎಲ್ಲರಿಗೂ ಇಷ್ಟ ಆಗುತ್ತೆ . ಬ್ಲಾಗ್ ಲೋಕದ ಉತ್ತಮ ಮಾಹಿತಿಗಳು ನಿಮ್ಮಿಂದ ಸಿಗುತ್ತಿವೆ.

b.saleem said...

ಶಿವು ಸರ್,
ಪುಸ್ತಕ ಮಾರುವ ಹುಡುಗನ ವ್ಯಾಪಾರ, ಶಿಕ್ಷಣ ಅವನ ತೋಂದರೆ ಮತ್ತು ಅವನ ಜಾಣ್ಮೆ ಮೆಚ್ಚುವಂತಹದ್ದು.
ಒಟ್ಟಾರೆ ನಿಮ್ಮ ರೇಲ್ವೆ ಪ್ರಯಾಣದ ಅನುಭವ ಮತ್ತು ವಿಶೇಷವಾಗಿ ಬೆಂಗಾಲಿ ಬಿಕ್ಷುಕಿಯ ಚತ್ರ ಅದ್ಭುತವಾಗಿದೆ.

ಸಾಗರದಾಚೆಯ ಇಂಚರ said...

ಶಿವೂ ಸರ್
ರೈಲು ಪ್ರಯಾಣದ ಸೋಜಿಗಗಳು ನಿಮ್ಮ ಕಣ್ಣಿಗೆ ಮಾತ್ರ ಗೋಚರಿಸಲು ಸಾದ್ಯ
ನೀವು ಎಲ್ಲ ವಸ್ತುಗಳಲ್ಲಿ ಹೊಸದನ್ನು ಹುಡುಕುತ್ತಿರಿ
ಅದಕ್ಕೆ ನಿಮಗೆ ಹೋದಲ್ಲೆಲ್ಲ ವಿಷಯಗಳು ಸಿಗುತ್ತವೆ
ಸುಂದರ ಫೋಟೋಗಳು
ಅದ್ಭುತ ವಿವರಣೆ

ಮನಸಿನಮನೆಯವನು said...

-->shivu.k.,

ನಾನು ರೈಲಿನಲ್ಲಿ ಪ್ರಯಾನಿಸಿರುವುದು ಒಂದೆರಡು ಸಲವೇ ಅದರೂ ಮರೆಯದ ಅನುಭವ ನೀಡಿತ್ತು..
ಇಲ್ಲಿ ನಿಮ್ಮ ಪ್ರವಾಸಕಥನ ನವಿರಾಗಿದೆ..
ಸಾಗಲಿ..

Prashanth Arasikere said...

hi shivu,

chennagide nimma pravasa lekana,nimma jothe navu idda hage ayhtu hage nimma photo saha adunna torustha ide..bengali black&white tumba chennagide

Snow White said...

nimma lekhana chennagide sir.. :)
chitragalu saha chennagide :)

ದೀಪಸ್ಮಿತಾ said...

ಪ್ರಯಾಣದ ಅನುಭವ ಸ್ವಾರಸ್ಯಕರ. ಮುಂದಿನ ಕಂತಿನ ದಾರಿ ಕಾಯುತ್ತಿದ್ದೇವೆ

ಜಲನಯನ said...

ಶಿವು, ಮಂಗಳೂರಿನ ರೈಲು ಪ್ರಯಾಣ ಅದು ಪ್ರಾರಂಭವಾದ ದಿನಗಳಲ್ಲಿ ಮಾಡಿದ ಕೆಲವೇ ಭಾಗ್ಯವಂತರಲ್ಲಿ ನಾನೂ ಒಬ್ಬ.....ಘಾಟಿನಲ್ಲಿ ಎಷ್ಟು ನಿಧಾನವಾಗಿ ಚಲಿಸುತ್ತಿತ್ತೆಂದರೆ ರೈಲಿನಿಂದ ಇಳಿದು ಮತ್ತೆ ಹತ್ತಬಹುದಿತ್ತು...ಎಂತಹ ರಮ್ಯ ಮನೋಹರ ನಿಸರ್ಗ...!!! ನಿಮ್ಮ ಕ್ಯಾಮರಾ ಕಣ್ಣಿಗೆ 2010 ರಲ್ಲಿ ಇಷ್ಟು ಸುಂದರಕಾಣುವ ದೃಶ್ಯಗಳು ...ಆಗ 1982-83 ಯಲ್ಲಿ ಹೇಗಿದ್ದಿರಬಹುದು ಅಲ್ವಾ...ಒಳ್ಲೆಯ ಪ್ರವಾಸ ಕಥನ ಚಿತ್ರಗಳು...ಶಿವೂ ತೆಗೆದದ್ದು ಎಂದರೆ ದೂಸರಾ ಮಾತೇ ಬೇಡ...

ದಿನಕರ ಮೊಗೇರ said...

shivoo sir,
nimma chitra kavanakke subhaashayagalu........... Idarallina eradu chitragalu, ee saariya ''sakhi'' vaarapatrikeyalli prakavaagive........ sundara barahakke abhinandane.........

andahaage ee vaarada ''sudhaa'' patrikeyalli banda ''chitte'' photo mattu vivarane sooooopar...........

shivu.k said...

ಸೀತಾರಾಂ ಸರ್,

ಪ್ರವಾಸ ಕಥನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಮುಂದಿನ ಭಾಗವನ್ನು ಬೇಗ ಹಾಕುತ್ತೇನೆ.

shivu.k said...

ನವೀನ್,

ಥ್ಯಾಂಕ್ಸ್...

shivu.k said...

ಚೈತ್ರಿಕಾ ಮೇಡಮ್,

ಇವು ಖಂಡಿತವಾಗಿ ಚಲಿಸುವಾಗ ಕ್ಲಿಕ್ಕಿಸಿದ ಚಿತ್ರಗಳು. ಕ್ಯಾಮೆರಾ ಉತ್ತಮ ಗುಣಮಟ್ಟದ್ದು ಇದ್ದರೇ, ಮತ್ತು ಅದರ ಬಗ್ಗೆ ತಾಂತ್ರಿಕವಾಗಿ ಸ್ವಲ್ಪ ತಿಳಿದುಕೊಂಡಿದ್ದರೆ, ಹಾಗೂ ಸ್ವಲ್ಪ ಪ್ರಯೋಗಾತ್ಮಕವಾಗಿ ಆಲೋಚಿಸಿದರೆ ಹೀಗೆ ಕ್ಲಿಕ್ಕಿಸಬಹುದು.
ಧನ್ಯವಾದಗಳು.

shivu.k said...

ರವಿಕಾಂತ್ ಸರ್,

ನೀವು ಹೇಳಿದಂತೆ ಖಂಡಿತ ಶಿರಾಡಿ ಘಾಟ್ ಚಿತ್ರಗಳು ಅದ್ಬುತವಾಗಿರುತ್ತವೆ. ಅವನ್ನೆಲ್ಲಾ ಈಗಾಗಲೇ ಲಕ್ಷಾಂತರ ಜನರು ಕ್ಲಿಕ್ಕಿಸಿಬಿಟ್ಟಿದ್ದಾರೆ. ಮತ್ತು ಅವನ್ನೆಲ್ಲಾ ಗೂಗಲ್ ಸರ್ಚ್ ಮಾಡಿ ಬ್ಲಾಗಿನಲ್ಲಿ ಹಾಕಿಬಿಡಬಹುದು. ಆದ್ರೆ ನನ್ನ ಈ ಲೇಖನದ ಉದ್ದೇಶ ಅಂಥ ಚಿತ್ರಗಳನ್ನು ಬಿಟ್ಟು ಸ್ವಲ್ಪ ವಿಭಿನ್ನವಾದ ದೃಷ್ಟಿಕೋನದಿಂದ ಚಿತ್ರ ಮತ್ತು ಲೇಖನವನ್ನು ಪ್ರಯತ್ನಿಸಿದ್ದೇನೆ. ಅಲ್ಲಿ ಕೆಲಸ ಮಾಡುವವರು..ಇತ್ಯಾದಿ..ಮುಂದಿನ ಭಾಗದಲ್ಲಿ ನಿಮ್ಮ ನಿರೀಕ್ಷೆಯ ಫೋಟೊಗಳು ಹಾಕಲು ಪ್ರಯತ್ನಿಸುತ್ತೇನೆ. ಹಾಗೂ ಈ ರೈಲಿನ ವಿಭಿನ್ನತೆ ಬೇಕಂದಲ್ಲಿ ಹಿಂದಿನ ಲೇಖನ "ಕಿಟಕಿಯಲ್ಲೇನಿದೆ" ಚಿತ್ರಗಳನ್ನು ನೋಡಿ. ನಿಮಗೆ ಇಷ್ಟವಾಗಬಹುದು.

shivu.k said...

ಸುಬ್ರಮಣ್ಯ ಸರ್,

ನಿಮ್ಮ ಎಡಕು ಮೇರಿಯ ಚಾರಣದ ಬಗ್ಗೆ ಬರೆಯಿರಿ ಸರ್, ನನಗೂ ಅಲ್ಲಿಗೆ ಚಾರಣ ಹೋಗಬೇಕೆನ್ನುವ ಆಸೆ. ಆದ್ರೆ ನನ್ನ ಶ್ರೀಮತಿ ಹೋಗಲು ಅವಕಾಶ ಕೊಡುವುದಿಲ್ಲವೆಂದು ಹೇಳಿಬಿಟ್ಟಿದ್ದಾಳೆ. ಸದ್ಯ ಈ ರೈಲಿನಲ್ಲಿ ನನ್ನಾಟಗಳನ್ನು ಅವಳಿಗೆ ಸ್ವಲ್ಪ ತಲೆಕೆಟ್ಟು ಇಂಥ ಅರ್ಡರ್ ಪಾಸ್ ಮಾಡಿಬಿಟ್ಟಿದ್ದಾಳೆ.
ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ..

shivu.k said...

ಚುಕ್ಕಿಚಿತ್ತಾರ ಮೇಡಮ್,

ನೀವು ಹೇಳಿದಂತೆ ನಿಜಕ್ಕೂ ರೈಲಿನಲ್ಲಿ ಹಳಿ ತಪ್ಪಿದ ಬದುಕು ತುಂಬಾ ಇವೆ. ನನ್ನ ದೃಷ್ಟಿಕೋನಕ್ಕೆ ನಿಲುಕಿದ್ದನ್ನು ಇಲ್ಲಿ ಕೊಟ್ಟಿದ್ದೇನೆ. ಅದನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಸುನಾಥ ಸರ್,

ರೈಲು ಇಳಿಯಬೇಡಿ. ಮುಂದಿನ ಭಾಗಕ್ಕಾಗಿ ಹಾಗೆ ಕಾಯುತ್ತಿರಿ...
ಧನ್ಯವಾದಗಳು.

shivu.k said...

ಜಿತೇಂದ್ರ ಸರ್,

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮುಂದಿನ ಭಾಗಕ್ಕೂ ಹೀಗೆ ಬರುತ್ತಿರಿ..

shivu.k said...

ವನಿತಾ,

ಕೈ ಕೆಸರು ನನ್ನದು ಬಾಯಿ ಮೊಸರು ಹೇಮಾಶ್ರೀಗಾ?[ತಮಾಷೆಗೆ]

ಧನ್ಯವಾದಗಳು.

shivu.k said...

ಸುಮಾ ಮೇಡಮ್,

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಮುಂದಿನ ಭಾಗಕ್ಕೂ ಮತ್ತೆ ಬನ್ನಿ.

shivu.k said...

ಮನಸು ಮೇಡಮ್,

ನಿಮ್ಮ ಅಭಿಪ್ರಾಯವೇನು ತಡವಿಲ್ಲಬಿಡಿ. ನಿಮಗೆ ಹೋಲಿಸಿದರೆ ನಾನು ಈಗ ತಡವಾಗಿದ್ದೇನೆ. ಮತ್ತೆ ನೀವು ಕೂಡ ನನ್ನ ಶ್ರೀಮತಿಗೆ ಪುಲ್ ಕ್ರೆಡಿಟ್ಟು ಕೊಟ್ಟುಬಿಟ್ಟರೆ ಹ್ಯಾಗೆ?

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಉಮೇಶ್ ದೇಸಾಯ್ ಸರ್,

ನೀವು ಸಾಧ್ಯವಾದಷ್ಟು ಬೇಗ ಆ ರೈಲಿನಲ್ಲಿ ಪ್ರಯಾಣ ಮಾಡಿ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

shivu.k said...

ಸವಿಗನಸು ಮಹೇಶ್ ಸರ್,

ನನ್ನ ಉದ್ದೇಶ ನನ್ನ ಜೊತೆಯಲ್ಲಿಯೇ ರೈಲಿನಲ್ಲಿ ನಿಮ್ಮನ್ನು ಕರೆದೊಯ್ಯುವ ಅನುಭವ ಬರಿಸುವುದೇ ಆಗಿತ್ತು. ಮತ್ತೆ ನಿಮ್ಮ ಮರಳ ಮಲ್ಲಿಗೆಯಲ್ಲಿ ನನ್ನ ಬಗ್ಗೆ ಮತ್ತು ನನ್ನ ಪ್ರಶಸ್ಥಿ ವಿಜೇತ ಚಿತ್ರವನ್ನು ಹಾಕಿ ಅಲ್ಲಿನವರೆಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಹೀಗೆ ಬರುತ್ತಿರಿ..

shivu.k said...

ಪರಂಜಪೆ ಸರ್,

ರೈಲಿನಲ್ಲಿ ಶಿರಾಡಿಘಾಟಿನ ಚಿತ್ರಗಳನ್ನು wide ಆಗಿ ಚಲಿಸುವ ರೈಲಿನಲ್ಲಿ ಚೆನ್ನಾಗಿ ಕ್ಲಿಕ್ಕಿಸಲು ಆಗುವುದಿಲ್ಲ. ನಿಂತ ರೈಲಿನಲ್ಲಿ ಮಾಡಬಹುದು. ಅದಕ್ಕೇ ನಾನು ಲೇಖನವನ್ನು ಬೇರೆ ರೀತಿಯಲ್ಲಿ ಕೊಡಲು ಯತ್ನಿಸಿದ್ದೇನೆ.
ಮುಂದಿನ ಭಾಗದ ಫೋಟೊಗಳು ನಿಮಗೆ ಇಷ್ಟವಾಗಬಹುದು.

shivu.k said...

ನಮ್ಮೊಳಗೊಬ್ಬ ಬಾಲು ಸರ್,

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತು ಸದ್ಯ ನನಗಾಗುವ ಅನುಭವಗಳನ್ನು ಲೇಖನದಲ್ಲಿ ಕೊಡುತ್ತಿದ್ದೇನೆ. ಅದನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಸಲೀಂ,

ಪುಸ್ತಕ ಮಾರುವವನು ಹೇಳಿದ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಹಾಗೆ ಬೆಂಗಾಲಿ ಬಿಕ್ಷುಕಿಯ ಬಗ್ಗೆ ಅದು ತುಂಬಾ ದೊಡ್ಡದಾಗುತ್ತದೆಯೆಂದು ಕೇವಲ ಚಿತ್ರವನ್ನು ಹಾಕಿದ್ದೇನೆ. ಮೊದಲು ಅದನ್ನು ಸುಮ್ಮನೇ ಕ್ಲಿಕ್ಕಿಸಿದರೂ ನಂತರ ಅದು ಸ್ಪರ್ಧಾಗುಣಮಟ್ಟಕ್ಕಿದೆಯೆಂದು ತಿಳಿದು ಆ ರೀತಿಯಲ್ಲಿ ಕ್ಲಿಕ್ಕಿಸಿದ್ದೇನೆ..

ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ನಾನು ಹೋದಲ್ಲೆಲ್ಲಾ ಹೊಸದನ್ನು ಹುಡುಕುತ್ತೇನೆ ಅಂದಿದ್ದೀರಿ. ಆದ್ರೆ ಅದನ್ನು ಎಲ್ಲರೂ ಮಾಡಬಹುದು. ನಿತ್ಯ ಗಮನಗಳಿಂದ ಸ್ವಲ್ಪ ಹೊರಗೆ ಬಂದು ಸ್ವಲ್ಪ ಬೇರೆ ರೀತಿಯ ಅಲೋಚನೆಗಳಿಂದ ಪ್ರಯತ್ನಿಸಿದರೆ ಎಲ್ಲರಿಗೂ ಇದು ಸಾಧ್ಯವಾಗುತ್ತದೆ.

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

shivu.k said...

ಜ್ಞಾನಾರ್ಪಣಮಸ್ತು,

ನೀವು ಈ ರೈಲಿನಲ್ಲಿ ಪ್ರಯಾಣ ಮಾಡಿದ್ದರೆ ನಿಮಗಾದ ಅನುಭವವನ್ನು ಬರೆಯಿರಿ. ಪ್ರತಿಯೊಬ್ಬರ ಅನುಭವವೂ ಬೇರೆಯದೇ ಆಗಿರುತ್ತದೆಯಲ್ಲವೇ...

ಲೇಖನದಲ್ಲಿನ ನವಿರುತನವನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು.

shivu.k said...

ಪ್ರಶಾಂತ್,

ಈ ರೈಲು ನಿಮ್ಮೂರಿನಲ್ಲಿ[ಅರಸೀಕೆರೆಯಲ್ಲಿ]ಅರ್ಧಗಂಟೆ ನಿಲ್ಲಿಸಿಬಿಡುತ್ತಾನೆ ಕಣ್ರೀ, ನೀವು ಒಮ್ಮೆ ಬಿಡುವುಮಾಡಿಕೊಂಡು ಹೋಗಿಬನ್ನಿ. ಎಲ್ಲವನ್ನು ಚೆನ್ನಾಗಿ enjoy ಮಾಡಬಹುದು.

ಧನ್ಯವಾದಗಳು.

shivu.k said...

snow white,

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಕುಲದೀಪ್ ಸರ್,

ಧನ್ಯವಾದಗಳು. ಮುಂದಿನ ಭಾಗವನ್ನು ಬೇಗ ಹಾಕುತ್ತೇನೆ..

shivu.k said...

ಅಜಾದ್,

ಈ ರೈಲು ಮಾರ್ಗದಲ್ಲಿ ಆಗ ನೀವು ಪಯಣಿಸಿದ ಅನುಭವ ತುಂಬಾ ವಿಭಿನ್ನವಾಗಿರಬೇಕಲ್ಲವೇ...ಸಾಧ್ಯವಾದರೆ ಅದನ್ನು ಹಂಚಿಕೊಳ್ಳಿ. ಈಗಿನ ವಾತಾವರಣಕ್ಕಿಂತ ಆಗ ತುಂಬಾ ವಿಭಿನ್ನ ವಾತಾವರಣ, ಪ್ರಕೃತಿ ಸೌಂದರ್ಯ ಚೆನ್ನಾಗಿರಬೇಕಲ್ಲವೇ...
ನಾನು ಈಗ ನನಗೆ ಸಿಕ್ಕಷ್ಟು ಕ್ಲಿಕ್ಕಿಸಿದ್ದೇನೆ..ಮುಂದಿನ ಭಾಗಕ್ಕೆ ಮರೆಯದೇ ಬರುತ್ತೀರಲ್ಲ....

ಧನ್ಯವಾದಗಳು.

shivu.k said...

ದಿನಕರ್ ಸರ್,

ಮೊದಲು ಈ ಲೇಖನ ಸಖಿ ಪಾಕ್ಷಿಕ ಪತ್ರಿಕೆಯಲ್ಲಿ ಮೊದಲು ಬಂತು. ನಂತರ ನಾನು ಬ್ಲಾಗಿನಲ್ಲಿ ಹಾಕಿದ್ದೇನೆ.

ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಈ ವಾರದ ಸುಧಾ ವಾರಪತ್ರಿಕೆಯಲ್ಲಿನ ಚಿಟ್ಟೆ ಲೇಖನವನ್ನು ಓದಿ ಇಷ್ಟಪಟ್ಟಿದ್ದಕ್ಕೂ ಮತ್ತೊಮ್ಮೆ ಧನ್ಯವಾದಗಳು.

Karnataka Best said...

k. sudadali chitte delivari story odide. realy gud. nimma talme, srudege hytsap

shivu.k said...

ಪ್ರವೀಣ್ ಚಂದ್ರ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಸುಧಾದಲ್ಲಿನ ಚಿಟ್ಟೆ ಲೇಖನವನ್ನು ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ಮೊದಲಿಗೆ "ಸಖಿ"ಯಲ್ಲಿ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು. ಚಿತ್ರಲೇಖನ ತುಂಬಾ ಇಷ್ಟವಾಯಿತು. ಅದರಲ್ಲೂ ಪುಸ್ತಕಮಾರುವ ಹುಡುಗನ ಪ್ರಬುದ್ಧ ಮಾತುಗಳು, ಉದ್ಯೋಗ ಎರಡೂ ಇಷ್ಟವಾಯಿತು. ಪೋಲಿಬಿದ್ದು, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾ ತಮ್ಮ ಬದುಕನ್ನೇ ಹಾಳುಗೆಡವುಕೊಳ್ಳುವ ಇಂತಹ ಅದೆಷ್ಟೋ ಹುಡುಗರಿಗೆ ಈತ ಮಾದರಿಯಾಗಿದ್ದಾನೆ ಅಲ್ಲವೇ?

ನಿಮ್ಮ ಬರವಣಿಗೆ ದಿನೇ ದಿನೇ ಮತ್ತಷ್ಟು ಪ್ರಬುದ್ಧತೆಯನ್ನು ಪಡೆಯಿತ್ತಿದೆ. ಬದುಕನ್ನು ಆಳವಾಗಿ, ಸೂಕ್ಷ್ಮವಾಗಿ ಗಮನಿಸುವ ನಿಮ್ಮ ಮನೋಭಾವ ಮೆಚ್ಚುಗೆಯಾಗುತ್ತದೆ. ನಿಮ್ಮ ಜೀವನಾನುಭವ ನಿಮ್ಮಿಂದ ಮತ್ತಷ್ಟು ಉತ್ತಮ ಬರಹಗಳನ್ನು ಹೊರತರಲೆಂದು ಹಾರೈಸುತ್ತೇನೆ.

ಶುಭ ಹಾರೈಕೆಗಳು.
ತೇಜಸ್ವಿನಿ.

Archu said...

Shivu,

wonderful journey to my hometown :)
photos are excellent!!

Recently read your article in Sudha. Good one!!

Cheers,
Archana

Arun Kashyap said...

ಬಂಗಾಲಿ ಭಿಕ್ಷುಕಿ ಫೋಟೋ SUPER :)
ನಿಮ್ಮ Article ಮತ್ತು ನಿಮ್ಮ Photography ತುಂಬ ಚೆನ್ನಾಗಿದೆ.

All The Best :)

UMESH VASHIST H K. said...

ರೈಲಿನ ಪ್ರವಾಸಿ ಚಿತ್ರ ಲೇಖನ ಚೆನ್ನಾಗಿದೆ, ನಿಮ್ಮ ಸಹ ಪ್ರಯಾಣಿಕರನ್ನು ಜೊತೆ ಜೊತೆ ಯಾಗಿ ಪಾತ್ರಗಳನಾಗಿಸಿದ್ದಿರಿ, ಚೆನ್ನಾಗಿದೆ ಮುಂದುವರಿಸಿ

shivu.k said...

ತೇಜಸ್ವಿನಿ ಮೇಡಮ್ ,

ಸಖಿಯಲ್ಲಿ ಇದೇ ಲೇಖನವನ್ನು ಓದಿದ್ದಕ್ಕೆ ಥ್ಯಾಂಕ್ಸ್...ರೈಲಿನಲ್ಲಿ ಪುಸ್ತಕ ಮಾರುವ ಹುಡುಗ ನಿಜಕ್ಕೂ ಅನೇಕರಿಗೆ ಮಾದರಿಯಾಗುವಂತೆ ಇದ್ದಾನೆ.

ನನ್ನ ಬರವಣಿಗೆಯನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದೀರಿ...ಅದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಇನ್ನಷ್ಟು ಉರುಪು ತರುತ್ತಿದೆ...ಮುಂದಿನ ಭಾಗಕ್ಕೂ ಮರೆಯದೇ ಬನ್ನಿ..

ಧನ್ಯವಾದಗಳು.

shivu.k said...

ಅರ್ಚನ ಮೇಡಮ್,

ರೈಲುಪ್ರಯಾಣವನ್ನು ನೀವು enjoy ಮಾಡಿದ್ದಕ್ಕೆ ಧನ್ಯವಾದಗಳು. ನೀವು ಈಗ ಹೋಗಿಬಂದರೆ ನಿಮಗೆ ವಿಭಿನ್ನ ಅನುಭವವಾಗಬಹುದು..ಸುಧಾ ಪತ್ರಿಕೆಯಲ್ಲಿ ನನ್ನ ಲೇಖನವನ್ನು ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಎರಡನೇ ಭಾಗಕ್ಕೆ ತಪ್ಪದೇ ಬನ್ನಿ..ಮತ್ತಷ್ಟು ಅನುಭವಕ್ಕಾಗಿ...

shivu.k said...

Arun kashyap sir,


ನನ್ನ ಬ್ಲಾಗಿಗೆ ಸ್ವಾಗತ.
ನನಗೂ ಆ ಬೆಂಗಾಲಿ ಬಿಕ್ಷುಕಿ ಫೋಟೊ ತುಂಬಾ ಇಷ್ಟ ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

H.K.Umesh vasishta sir,

ರೈಲು ಪ್ರಯಾಣದ ಸಮಯದಲ್ಲಿ ನೀವು ಪಾತ್ರಗಳಾಗಿ enjoy ಮಾಡಿದ್ದು ನನ್ನ ಬರಹಕ್ಕೆ ಸಾರ್ಥಕತೆಯನ್ನು ತಂದುಕೊಡುತ್ತಿದೆ...ಮುಂದಿನ ಭಾಗಕ್ಕೂ ಮರೆಯದೇ ಬನ್ನಿ...

ಧನ್ಯವಾದಗಳು.