ಅರೆರೆ! ಇದೇನಿದು ಕಿಟಕಿ ವಿಚಾರವೆಂದ ತಕ್ಷಣ ಮನಸ್ಸಿನಲ್ಲೇ ಒಂಥರ ಕಸಿವಿಸಿಯುಂಟಾಗುತ್ತದಲ್ಲವೇ? ಅದು ಸಹಜಬಿಡಿ. ನಮ್ಮನೆ ಕಿಟಕಿಯನ್ನೇ ಯಾರಾದರೂ ನೋಡಿದರೆ ನಮಗೊಂತರ ಆಗುತ್ತದೆ. ಇನ್ನೂ ಕಿಟಕಿಯೊಳಗೆ ಇಣುಕಿದರಂತೂ ಅವರ ಮೇಲೆ ಕೋಪ ಬರುವುದು ಗ್ಯಾರಂಟಿ, ಅಂತದ್ದರಲ್ಲಿ ನಾವು ಬೇರೆಯವರ ಮನೆಯ ಕಿಟಕಿ ನೋಡಿದರೆ, ಅದರೊಳಗಿ ಇಣುಕಿದರೆ ಸುಮ್ಮನೇ ಬಿಟ್ಟಾರಯೇ?
ಆದರೂ ನೀವು ಇಂಥ ಕಿಟಕಿಗಳನ್ನು ನೋಡಲೇ ಬೇಕು. ಸಾದ್ಯವಾದರೆ ಇಣುಕಿಯೂ ಬಿಡಬೇಕು. ಆಗ ನೋಡಿ ನಿಮಗೆ ಬಿನ್ನ ವಿಭಿನ್ನ ದೃಶ್ಯಾವಳಿಗಳು ಕಾಣತೊಡಗುತ್ತವೆ! ದಿಗಿಲುಪಡುವಂತದ್ದೇನಿಲ್ಲ. ದೈರ್ಯವಾಗಿ ಕಣ್ಣಗಲಿಸಿ ನೋಡಿ, ಕಣ್ಣುಚಿಕ್ಕದು ಮಾಡಿನೋಡಿ, ಕೆಲವೊಮ್ಮೆ ಓರೆನೋಟ, ಕಿರುನೋಟ ಹೇಗಾದರೂ ಸರಿ, ವಿಭಿನ್ನ ಅನುಭೂತಿಗಾಗಿ ನೋಡಲೇಬೇಕು.! ಸಾಕು ರೈಲುಬಿಡಬೇಡ ವಿಚಾರಕ್ಕೆ ಬಾರಯ್ಯ ಅಂತೀರಾ!
ಖಂಡಿತ ರೈಲುಬಿಡುತ್ತಿಲ್ಲ. ಆದ್ರೆ ಇದು ರೈಲಿನ ಸಮಾಚಾರ, ರೈಲುಕಿಟಕಿಗಳ ಸಮಾಚಾರ. ಅದರೊಳಗಿನ ಕೆಲವು ವಿಭಿನ್ನ ದೃಶ್ಯಗಳ ಸಮಾಚಾರ.
ಇಲ್ಲಿ ನಾನು ತೋರಿಸುತ್ತಿರುವ ರೈಲಿನ ಕಿಟಕಿಗಳು ನಿಮಗೂ ಗೊತ್ತು. ಅಲ್ಲಿ ನಡೆಯುವ ಚಟುವಟಿಕೆಗಳು ನಿಮಗೆ ಗೊತ್ತು. ಆದ್ರೆ ಅದನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಂಡಾಗ ಇಂಥ ಚಿತ್ರಗಳು ಸಿಗುತ್ತವೆ. ನೀವು ಬೇರೆನು ಮಾಡಬೇಕಿಲ್ಲ ನಾನು ಮಾಡಿದಂತೆ ಪ್ರತಿಯೊಂದಕ್ಕು ಒಂದೊಂದು ಪ್ರೇಮುಗಳನ್ನು ಹೀಗೆ ಹಾಕಿಬಿಟ್ಟರೆ ನಿಮಗೂ ಅವು ಹೀಗೆಕಾಣಸಿಗುತ್ತವೆ. ಅವುಗಳನ್ನು ನೋಡಿ ನೀವು ಖುಷಿಪಡಿ.
ಇನ್ನೇಕೆ ತಡ, ಬನ್ನಿ ಕಣ್ಣಲ್ಲಿ, ಅಲ್ಲಿಂದ ನೇರ ಮನಸ್ಸಿನಲ್ಲಿ ಅವುಗಳಿಗೆಲ್ಲಾ ಪ್ರೇಮು ಹಾಕೋಣ.
ಶಿರಾಡಿ ಘಾಟಿನ ಸೌಂದರ್ಯದಷ್ಟೇ ಚೆಂದ ಈ ಬಾಲೆ!
ಅಕ್ಕನ ಜೊತೆ ತಮ್ಮನೂ ಕೂಡ
ಎಲ್ಲೆಲ್ಲೂ ಶಿರಾಡಿಘಾಟ್ ಸೌಂದರ್ಯವೇ! ಅಂತ ಹಾಡುತ್ತಿರಬಹುದೇ ಈ "ಕೈ"
ನನ್ನಲ್ಲಿ ನೀನಾಗಿ......ನಿನ್ನಲ್ಲಿ ನಾನಾಗಿ....ಅಂತ ಹಾಡಿಕೊಳ್ಳುತ್ತಿರಬಹುದೇ ಈ ಕೈಗಳು!
ಊಟವಾದ ಮೇಲೆ ಕೈತೊಳೆಯಲೇ ಬೇಕಲ್ಲವೇ!
ಎಮರ್ಜೆನ್ಸಿ ಕಿಟಕಿಯಲ್ಲೊಂದು ಭೂಪಟ!
ಈತ ಸದಾ ಬಾಗಿಲ ಬಳಿ ನಿಲ್ಲುವ ಕನ್ನಡಕಧಾರಿ ಇಣುಕಪ್ಪ!
ಒಳಗಿದ್ದು ಬೇಸರವಾಯಿತೇನೋ! ಹೊರಗಡೆ ರಿಲ್ಯಾಕ್ಸ್!
ರಿಲ್ಯಾಕ್ಸ್ ನಂತರ ಕಿಟಕಿ ಕಂಬಿಗಳೊಂದಿಗೆ ಆಟ!
ಈತ ಸದಾ ಬಾಗಿಲ ಬಳಿ ನಿಲ್ಲುವ ಕನ್ನಡಕಧಾರಿ ಇಣುಕಪ್ಪ!
ಒಳಗಿದ್ದು ಬೇಸರವಾಯಿತೇನೋ! ಹೊರಗಡೆ ರಿಲ್ಯಾಕ್ಸ್!
ರಿಲ್ಯಾಕ್ಸ್ ನಂತರ ಕಿಟಕಿ ಕಂಬಿಗಳೊಂದಿಗೆ ಆಟ!
ನಾನು ಆಟಕ್ಕೆ ಬರಲಾ? ಹೊರಬಂದ ಮಗಳ ಕೈಗಳು!
ಅಪ್ಪನ ಕೈಬೆರಳುಗಳೊಂದಿಗೆ ಮಗಳ ಪುಟ್ಟ ಬೆರಳುಗಳ ಆಟ!
ಈತನಂತೆ ನಾನು ಬಾಗಿಲಲ್ಲಿ ಕುಳಿತು ರೈಲು ವೇಗವಾಗಿ ಚಲಿಸುವಾಗ ಒಂದು ಕೈಯಲ್ಲಿ ಬಾಗಿಲ ಪೈಪನ್ನು ಬೀಳದಂತೆ ಆಧಾರವಾಗಿ ಹಿಡಿದು ನಿಂತು.....ಕುಳಿತು....., ಮತ್ತೊಂದು ಕೈಯಲ್ಲಿ ಮೂರುವರೆ ಕೆಜಿ ತೂಕದ ದೊಡ್ಡಲೆನ್ಸಿನ ಕ್ಯಾಮೆರಾ ಹಿಡಿದು ಕ್ಲಿಕ್..ಕ್ಲಿಕ್..... ಮಗದೊಮ್ಮೆ ಎಮರ್ಜೆನ್ಸಿ ಕಿಟಕಿಯಿಂದ ತಲೆ, ಕ್ಯಾಮೆರಾ, ಕೆಲವೊಮ್ಮೆ ಅರ್ಧ ದೇಹವನ್ನು ಕ್ಯಾಮೆರಾ ಸಮೇತ ಹೊರಹಾಕಿ ಒಂದೇ ಕೈಯಲ್ಲಿ ಹಿಡಿದು ಕ್ಲಿಕ್ಕಾಟವಾಡಿದ್ದೇನೆ.
ಇನ್ನೂ ರೈಲು ಕಿಟಕಿಯೊಳಗೇನಿದೆ ನೋಡೋಣ ಬನ್ನಿ.
ಕೂಸುಮರಿ ಆಟ. ಮಮತೆ ವಾತ್ಸಲ್ಯದ ಆಟ
ಶ್ರಮಜೀವಿಯ ನಿದ್ರೆಯಲ್ಲಿ ಸ್ವರ್ಗಕ್ಕೆ ಮೂರೇ ಗೇಣು!
ಈ ಹುಡುಗನ ಪಾದಗಳು ನಿದ್ರಿಸುವ ಮೊದಲು ಅದೆಷ್ಟು ಸುತ್ತಾಡಿದ್ದವೋ!
ಹಾಯಾಗಿ ಮಲಗು ನನ್ನ ಪುಟ್ಟ ಕಂದ!
ಅಂಗಾಲ ತೊಳೆದೇನು ನಿದ್ರೆ ಮಾಡಿ ಬಾ ನನ ಕಂದ!
ಅಪ್ಪನ ಕೈಬೆರಳುಗಳೊಂದಿಗೆ ಮಗಳ ಪುಟ್ಟ ಬೆರಳುಗಳ ಆಟ!
ಈತನಂತೆ ನಾನು ಬಾಗಿಲಲ್ಲಿ ಕುಳಿತು ರೈಲು ವೇಗವಾಗಿ ಚಲಿಸುವಾಗ ಒಂದು ಕೈಯಲ್ಲಿ ಬಾಗಿಲ ಪೈಪನ್ನು ಬೀಳದಂತೆ ಆಧಾರವಾಗಿ ಹಿಡಿದು ನಿಂತು.....ಕುಳಿತು....., ಮತ್ತೊಂದು ಕೈಯಲ್ಲಿ ಮೂರುವರೆ ಕೆಜಿ ತೂಕದ ದೊಡ್ಡಲೆನ್ಸಿನ ಕ್ಯಾಮೆರಾ ಹಿಡಿದು ಕ್ಲಿಕ್..ಕ್ಲಿಕ್..... ಮಗದೊಮ್ಮೆ ಎಮರ್ಜೆನ್ಸಿ ಕಿಟಕಿಯಿಂದ ತಲೆ, ಕ್ಯಾಮೆರಾ, ಕೆಲವೊಮ್ಮೆ ಅರ್ಧ ದೇಹವನ್ನು ಕ್ಯಾಮೆರಾ ಸಮೇತ ಹೊರಹಾಕಿ ಒಂದೇ ಕೈಯಲ್ಲಿ ಹಿಡಿದು ಕ್ಲಿಕ್ಕಾಟವಾಡಿದ್ದೇನೆ.
ಇನ್ನೂ ರೈಲು ಕಿಟಕಿಯೊಳಗೇನಿದೆ ನೋಡೋಣ ಬನ್ನಿ.
ಕೂಸುಮರಿ ಆಟ. ಮಮತೆ ವಾತ್ಸಲ್ಯದ ಆಟ
ಶ್ರಮಜೀವಿಯ ನಿದ್ರೆಯಲ್ಲಿ ಸ್ವರ್ಗಕ್ಕೆ ಮೂರೇ ಗೇಣು!
ಬೆಳ್ಳಿಕಾಲುಂಗರ ಶ್ರೀಮತಿಗೆ ಸುಂದರ!
ಈ ಹುಡುಗನ ಪಾದಗಳು ನಿದ್ರಿಸುವ ಮೊದಲು ಅದೆಷ್ಟು ಸುತ್ತಾಡಿದ್ದವೋ!
ನಿದ್ರೆಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ....
ಹಾಯಾಗಿ ಮಲಗು ನನ್ನ ಪುಟ್ಟ ಕಂದ!
ಅಂಗಾಲ ತೊಳೆದೇನು ನಿದ್ರೆ ಮಾಡಿ ಬಾ ನನ ಕಂದ!
ಇವೆಲ್ಲಾ ಚಿತ್ರಗಳನ್ನು ರೈಲು ನಿಂತಾಗ ಹೊರಬಂದು ರೈಲು ನಿಲ್ದಾಣದಲ್ಲಿ ನಿಂತು ಕ್ಲಿಕ್ಕಿಸಿದಲ್ಲ. ಆ ರೀತಿ ಫೋಟೊ ಕ್ಲಿಕ್ಕಿಸಲು ನಮ್ಮ ದೊಡ್ಡ ಕ್ಯಾಮೆರಾ ಹೊರತೆಗೆದರೆ ನಮ್ಮನ್ನು ಉಳಿದ ಪ್ರಯಾಣಿಕರು ಸುತ್ತುವರಿಯುತ್ತಾರೆ, ತರಾವರಿ ಪ್ರಶ್ನೆಗಳನ್ನು ಕೇಳುತ್ತಾರೆ. ಅವರಿಗೆ ಉತ್ತರಿಸುವ ನಿಟ್ಟಿನಲ್ಲಿ ಇಂಥ ಚಿತ್ರಗಳು ತಪ್ಪಿಸಿಕೊಂಡುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ರೈಲ್ವೇ ಪೋಲಿಸ್ ಗಮನಿಸುತ್ತಿರುತ್ತಾರೆ. ಬಂದು ಕೇಳುತ್ತಾರೆ ಏನು ತೆಗೆಯುತ್ತಿದ್ದೀರಿ? ಏಕೆ ತೆಗೆಯುತ್ತಿದ್ದೀರಿ, ಇಲಾಖೆಯಿಂದ ಅನುಮತಿ ಪಡೆದಿದ್ದೀರಾ? ಇನ್ನೂ ಏನೇನೋ ಪ್ರಶ್ನೆಗಳು. ಅವೆಲ್ಲ ಕಿರಿಕಿರಿಗಳಿಂದಾಗಿ ನಮಗೆ ವೈವಿಧ್ಯಮಯ ಫೋಟೊಗಳು ಸಿಗುವುದಿಲ್ಲ. ಎಲ್ಲಾ ಚಿತ್ರಗಳು ರೈಲು ಚಲಿಸುತ್ತಿರುವಾಗಲೇ ಕ್ಲಿಕ್ಕಿಸಿದಂತವು. ರೈಲಿನ ಒಳಗೆ ನನ್ನ ಕ್ಯಾಮೆರಾ ಕಾಣದಂತೆ ಒಂದು ಬಟ್ಟೆ ಸುತ್ತಿಕೊಂಡು ಸಮಯನೋಡಿ ಯಾರೂ ನನ್ನಡೆಗೆ ನೋಡದಿರುವಾಗ ತೆಗೆದಂತ ಪೋಟೋಗಳಿವು.
ಇವೆಲ್ಲಾ ಚಿತ್ರಗಳಿಗೆ ಪ್ರೇಮು ಹಾಕಿದ್ದು ಬೆಂಗಳೂರು -ಮಂಗಳೂರು ಹಗಲು ರೈಲಿನಲ್ಲಿ. ಕಳೆದ ವಾರ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಈ ರೈಲಿನಲ್ಲಿ ಪ್ರಯಾಣ ಮಾಡಿದಾಗ ಸಿಕ್ಕ ಕೆಲವು ಫೋಟೊಗಳಿವು. ಇದನ್ನು ಮೀರಿ ಆ ರೈಲು ಪ್ರಯಾಣವೇ ಒಂದು ಆದ್ಬುತ ಅನುಭವ. ಸೀಟಿಗಾಗಿ ಚರ್ಚೆ, ಆ ರೈಲಿನಲ್ಲಿ ಪುಸ್ತಕ ಮಾರುವ ಹುಡುಗ, ಹೆಂಗಸರ ಮಾತು ಮತ್ತು ಚಟುವಟಿಕೆಗಳು, ಸಂಭಾಷಣೆಗಳು.... ಇಡೀ ಪ್ರಯಾಣದಲ್ಲಿ ರೈಲು ಓಡಿದ್ದು.......ಓಡಿ ಓಡಿ ಸುಸ್ತಾಗಿ....ನಡೆ ನಡೆದು ಕೊನೆಗೊಮ್ಮೆ ಎಲ್ಲಿ ಸ್ವಲ್ಪ ಹೊತ್ತು ಮಲಗಿತ್ತು ಅನ್ನುವ ವಿಚಾರ, ಸಿಗುವ ರಾಕ್ಷಸಾಕಾರದ ಸೇತುವೆಗಳು, ಸುರಂಗಗಳು..... ಅವುಗಳ ಫೋಟೋಗಳು... ಸುಬ್ರಮಣ್ಯ ರೋಡಿನಿಂದ ದೇವಸ್ಥಾನದವರೆಗೆ ಜೀಪುಗಳಲ್ಲಿ ಕರೆದೊಯ್ಯುವ ಡ್ರೈವರುಗಳು ಒಂದೇ ಕುಂಡಿಯಲ್ಲಿ ಕುಳಿತು ಜೀಪು ಓಡಿಸುವ ಪರಿ ಇತ್ಯಾದಿಗಳನ್ನು ಮುಂದಿನ ಲೇಖನದಲ್ಲಿ ಚಿತ್ರಸಹಿತ ಕಟ್ಟಿಕೊಡುತ್ತೇನೆ..
ಚಿತ್ರಗಳು ಮತ್ತು ಲೇಖನ
ಶಿವು. ಕೆ
94 comments:
ನಾನ್ ಮಾತ್ರ ಟ್ರೈನಿನಲ್ಲಿ ಹೋಗಲ್ಲ ಅಂತ ಡಿಸೈಡ್ ಮಾಡಿದೀನಿ ಶಿವು. ಟ್ರೈನಿನಲ್ಲಿ ಮಲ್ಕೊಂಡ್ರೆ ನಂಗೇನೋ ರಸ್ತೆ ಮಧ್ಯೆ ಮಲಗಿದಂತೆ ಅನ್ನಿಸುತ್ತದೆ. ಅದರಲ್ಲೂ ಎಷ್ಟೇ ರಾತ್ರಿ ಇದ್ರೂ..ಕಿವಿ ಹತ್ರ ಬಂದು "ಚಾಯಾ...ಚಾಯಾ......" ಅಂತ ಕೂಗಿದ್ರಂತೂ ಎದ್ದು ನಾಲ್ಕು ತದುಕುವ ಅನ್ನುವಷ್ಟು ಸಿಟ್ಟು ಬರುತ್ತೆ.
ಫೋಟೋಗಳು ಅದಕ್ಕೆ ಹೆಡ್ಡಿಂಗ್ ಎಂದಿನಂತೆ ಮಸ್ತ್!
ಸುಬ್ರಮಣ್ಯ ಟ್ರಾಕ್ ನಲ್ಲಿ ನಡೆದು ಹೋಗುವಾಗಿನ ನೋಟವೇ ಬೇರೆ... ರೈಲಿನಲ್ಲಿ ಹೋಗುವಾಗಿನ ನೋಟವೇ ಬೇರೆ... Nice pics...
ಕೈ ಕಾಲುಗಳೊ೦ದಿಗೆ ಚಿತ್ರ ಕಾವ್ಯ....!!!!!
ನೀಲಗಿರಿ..
ಇಷ್ಟು ದಿನ ಎಲ್ಲಿ ಹೋಗಿದ್ರಿ....ನ್ಯೂಜಿಲ್ಯಾಂಡಿನಲ್ಲಿದ್ದಿರೋ..ಅಥವ ಭಾರತದಲ್ಲೋ....
ನಿಮ್ಮ ಟ್ರೈನ್ ಅನುಭವವನ್ನು ಹಂಚಿಕೊಂಡಿದ್ದೀರಿ. ಇಷ್ಟೆಲ್ಲಾ ಫೋಟೊ ತೆಗೆಯುವುದರ ನಡುವೆ ನಾನು ಒಂದು ತಾಸು ನಿದ್ರೆ ಮಾಡಿದ್ದೇನೆ. ಆಗ ಛಾಯ್..ಕಾಫಿ..ಚುರುಮುರಿ ಏನೇ ಬಂದರೂ ಕೇಳಿಸಿದರೂ ಎಚ್ಚರವಾಗೊಲ್ಲ...ಇದು ನನ್ನ ಅನುಭವ ಹೆಡ್ಡಿಂಗ್ ಮತ್ತು ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...
ಗಿರಿ ಸರ್,
ನನ್ನ ಬ್ಲಾಗಿಗೆ ಸ್ವಾಗತ. ನೀವು ಹೇಳುವಂತೆ ಅಲ್ಲಿನ ಟ್ರಾಕ್ ಮೇಲೆ ನಡೆದು ಹೋಗುವ ಅನುಭವವೇ ಬೇರೆಯೆಂದು ನನ್ನ ಗೆಳೆಯರು ಹೇಳುತ್ತಾರೆ. ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..
ಶಿವು ಸರ್,
ಕ್ಯಾಮೆರಾ ಕಣ್ಣಿನಿಂದ, ಕಿಟಕಿಯಿಂದ (ಕ್ಯಾಮೆರಾ) ತೆಗೆದ ಈ ಚಿತ್ರಗಳು ವೈವಿಧ್ಯಮಯವಾಗಿದ್ದು, ಮನಕ್ಕೆ ಉಲ್ಲಾಸ ನೀಡುವಂತಿವೆ. ಜೊತೆಗೆ ನಿಮ್ಮ ಕ್ರಿಯೇಟಿವಿಟಿ ನೇಟಿವಿಟಿ ಜೊತೆಯಲ್ಲಿ ನಮ್ಮನ್ನೂ ರೈಲು ಪ್ರಯಾಣದಲ್ಲಿ (ಗಣಕಯಂತ್ರದ ತೆರೆಯಲ್ಲಿ) ಮಾಡಿದ್ದೀರಿ.
ಧನ್ಯವಾದಗಳು.
ಸ್ನೇಹದಿಂದ,
ಶಿವು,
ಎಂತೆಂಥಾ ಫೋಟೋಗಳನ್ನು ತೆಗಿತೀರಪ್ಪಾ! ಪ್ರತಿಯೊಂದು ಫೋಟೋನೂ ತನ್ನ ಚಿತ್ರಸೌಂದರ್ಯ ಹಾಗು ಕಾವ್ಯಮಯತೆಯಿಂದ
ನಮ್ಮನ್ನು ಬೆರಗುಗೊಳಿಸುತ್ತದೆ. ನೀವು ತೆಗೆದ ಫೋಟೋಗಳನ್ನು ನೋಡುವದು ಹಾಗು ಅವುಗಳಿಗೆ ನೀವು ಕೊಡುವ ಟಿಪ್ಪಣಿ ಓದುವದು ಅಂದರೆ ತುಂಬಾ ಖುಶಿಯ ಸಂಗತಿ. Please carry on.
wow..too good :)
yaavaaga bandidiri sir illige..... tumbaa sundara drushya kaavya..... yaarado photo tegeyuvaaga yaaraadaroo baididdaaraa sir..... mundina bhaagakke kaayuva haage maadidiri....... mundina saari mangaloorina aasu paasu bandaroo nanage tilisi sir.....
Shivu sir,
enaadru different aagirodu siguttappa nim bloganalli....
very gud collection indeed..
ತುಂಬಾ ಸಾಹಸಪಟ್ಟು ಚಿತ್ರಗಳನ್ನು ತೆಗೆದಂತಿದೆ. ರೈಲು ಪ್ರಯಾಣ ಎಲ್ಲರಿಗೂ ಸಂತೋಷಕೊಡುವಂತದ್ದು. ಬಸ್ಸಿಗಿಂತಲೂ ಆರಮದಾಯಕ ಕೂಡ. ಅದರಲ್ಲೂ ಘಾಟಿಯ ರಮ್ಯ ನೋಟಗಳನ್ನು ಕಾಣುವುದೇ ಒಂದು ಪುಣ್ಯ. ಮತ್ತಷ್ಟು ಫೋಟೋಗಳು ಬೇಗ ಹೊರ ಬರಲಿ...
Shivanna.. Super Collection and captions ;';';
ಶಿವೂ ಸರ್
ಎಂದಿನಂತೆ ಹೊಸ ವಿಷಯ, ಹೊಸ ವಿವರಣೆ, ಸುಂದರ ಫೋಟೋಗಳು
ನಿಮ್ಮ ಕಣ್ಣುಗಳಿಗೆ ಮಾತ್ರ ಗೋಚರಿಸುವ ಇಂಥಹ ವಿಷಯಗಳೇ
ನಿಮ್ಮ ಬಗ್ಗೆ ನಮಗೆ ಹೆಚ್ಚೆಚ್ಚು ಗೌರವ ಬರುವಂತೆ ಮಾಡಿವೆ
ನಿಮ್ಮ ಬರಹಗಳು ಸದಾ ಮುಂದುವರೆಯುತ್ತಿರಲಿ
ಒಹ್ಹೊಹೊಹ್ಹೊ...ಸೂಪರ್, ಸೂಪರ್..ಸೂಪರ್.
ವೈವಿಧ್ಯತೆಯೆಂದರೇನೆಂದು ನಿಮ್ಮ ಚಿತ್ರಗಳು ಹಾಗು ಬರಹಗಳನ್ನು ನೋಡಿ ತಿಳಿಯಬೇಕು.
ಪ್ರಿಯ ಶಿವು
ಮುಕ್ತದ ಟಿ.ಎನ್.ಸೀತಾರಾಂ ಅನೇಕ ವೇಳೆ ತಮ್ಮ ಪಾತ್ರಗಳನ್ನು ಕಿಟಕಿಯ ಪಕ್ಕದಲ್ಲಿ ನಿಲ್ಲಿಸಿ ಚಿತ್ರೀಕರಿಸುತ್ತಾರೆ.ಅಳುವಾಗ,ಅಂತರ್ಮುಖಿ,ಇತರರೊಡನೆ ತಮ್ಮ ಮನದ ಭಾವನೆಗಳನ್ನು ತೋಡಿಕೊಳ್ಳುವಾಗ ಕಿಟಕಿಯ ಪಕ್ಕ ನಿಂತು ನಟಿಸಿದರೆ ಆ ದೃಶ್ಯ ಪರಿಣಾಮಕಾರಿಯಾಗಿ ಮೂಡಿಬರುತ್ತೆ ಎಂಬುದು ಸೀತಾರಾಂ ಅವರ ಅಭಿಪ್ರಾಯ.ಅದು ನಿಜವೂ ಹೌದು.ನಿಮ್ಮ ಈ ಚಿತ್ರಗಳೂ ಭಾವನಾತ್ಮಕವಾಗಿದೆ.ಕಿಟಕಿಯ ಸಮೀಪ ನಿಂತು ಹಸಿರ ಸಿರಿಯನ್ನು ವೀಕ್ಷಿಸುವ ದೃಶ್ಯವಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.ಒಟ್ಟಿನಲ್ಲಿ ಚಿತ್ರಗಳು ಮಾತಾಡಿವೆ.....!
ಶಿವು ಸರ್,
ಸಾಹಸ ದೃಶ್ಯಗಳು ಇಲ್ಲದಿದ್ದರೂ ಸಾಹಸಪಟ್ಟು ಚಿತ್ರಗಳನ್ನು ತೆಗೆದಿದ್ದೀರ.......
ಹೊಸ ವಿಷಯ....ಚೆನ್ನಾಗಿದೆ
ಮತ್ತಷ್ಟು ಫೋಟೋಗಳು ಬರಲಿ..
ನಿಮ್ಮ ರೈಲಿನ ಚಿತ್ರ ನೋಡಿದೆ ಚಿತ್ರಗಳು ಬೊಂಬಾಟ್, ನಿಮ್ಮ ಸಮಯ ಪ್ರಗ್ನೆ ಚೆನ್ನಾಗಿದೆ,
ನಿಮ್ಮ ಮುಂದಿನ ಫೋಟೋ ಗಳಿಗಾಗಿ ಕಾಯುತ್ತಿದ್ದೇನೆ
sakhath photo with caption
very nice series shivu...liked the one with elderly person and child with mother in particular
ಕ್ಯಾಮರಾದಲ್ಲಿ ಕಣ್ಣಿಟ್ಟು ಯಾರಿಗೂ ಗೊತ್ತಿಲ್ಲದಂತೆ ಇಂಥ ಫೋಟೋಗಳನ್ನು ಅದೂ ರೈಲಿನಲ್ಲಿ ಎಲ್ಲರ ಕಣ್ಣು ತಪ್ಪಿಸಿ ತೆಗೆಯುವದು ಕಷ್ಟದ ಕೆಲಸವೇ ಸರಿ. ನಿಮ್ಮ ಫೋಟೋಗಳು ಒಂದಕ್ಕಿತ ಒಂದು ಅದ್ಭುತವಾಗಿವೆ. ಜೊತೆಗೆ ಅವಕ್ಕೆ ಕೊಟ್ಟಿರುವ captionಗಳು ಚನ್ನಾಗಿವೆ. It shows that how much you are interested and passionate towards photography and once again it is proved here in these photos taken by you. Keep it up!
:-) ರೈಲಿನೊಳಗೆ ಮಾತ್ರ ಕ್ಲಿಕ್ಕಿಸಿದರೇ?
ನಾನು ನಂಬಲ್ಲ... ಶಿರಾಡಿ ಘಾಟಿನ ಸೌಂದರ್ಯವನ್ನು ಯಾವಾಗ ಪ್ರಕಟಿಸುತ್ತೀರಿ ಸಾರ್ ;-)
ಅಂದ ಹಾಗೆ ಮುಂದಿನ ಸಾರಿ ಮಂಗಳೂರಿನ ಕಡಲತೀರಕ್ಕೂ ಭೇಟಿ ನೀಡಿ....
ಶಿವು ಸರ್...
ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ..
ನಿಮ್ಮ ಕ್ಯಾಮರಾ ನೋಡದ ತಾಣವಿಲ್ಲ...
ಎಲ್ಲವೂ ಮತ್ತೊಮ್ಮೆ..
ಮಗದೊಮ್ಮೆ ನೋಡುವಂತಿದೆ..
ತುಂಬಾ... ತುಂಬಾ ಸೊಗಸಾಗಿದೆ...
ಅಭಿನಂದನೆಗಳು..
ಶಿವೂ ಸಾರ್ ವಾಹ್ ಈ ಚಿತ್ರಗಳು ನನ್ನ ಮನ ಸೂರೆಗೊಂಡಿವೆ. ನಿಮ್ಮ ಕ್ಯಾಮರ ಚೆನ್ನಾಗಿ ಕಣ್ಣಾಮುಚ್ಚಾಲೆ ಆಡಿದೆ. ನೀವು ಸಹ ಹಟಕ್ಕೆ ಬಿದ್ದು ಕ್ಲಿಕ್ಕಿಸಿದ್ದಿರಿ . ರಿಸ್ಕ್ ಆದರೂ ಫಲಿತಾಂಶ ಅದನ್ನು ಮರೆಸಿದೆ ಅಲ್ವ.ನೀವು ನಿಜವಾಗಿಯೂ ನಮ್ಮ ಹೆಮ್ಮೆಯ ಶಿವೂ!!!!!!
ಅದ್ಭುತವಾದ ಛಾಯಾಚಿತ್ರಗಳು. ನವಿರು ನಿರೂಪಣೆ. ಪುಟ್ಟ ಒಪ್ಪ ಶೀರ್ಷಿಕೆ.ಇದು ತಮ್ಮ ಚಿತ್ರಲೇಖನದ ಬಗ್ಗೆ. ಇನ್ನು ತಮ್ಮ ಸಾಹಸಕ್ಕೆ ವ೦ದನೆಗಳು (HATS OFF).
ಚಂದ ಚಿತ್ರಗಳು.. ನೈಜ ಭಾವಗಳು.. ಅದಕ್ಕೆ ಪದಗಳ ಚಂದನೆ ಲೇಪ... ಒಟ್ಟಾರೆ ಈ ಲೇಖನ ಹೊಸತನದ್ದು ಅನ್ನಿಸಿತು.
ಶಿವು, ಚೆಂದದ ಫೋಟೋಗಳು ಮತ್ತು ಸುಂದರ ಕ್ಯಾಪ್ಶನ್ ಗಳು..ಒಂದೊಂದು ಫೋಟೋದ ಫ್ರೇಮುಗಳು ಕೂಡ ಅದ್ಭುತ. ಆಫೀಸಲ್ಲಿ ನೋಡ್ತಾ ಇದ್ದೆ..ಸುಬ್ರಮಣ್ಯಕ್ಕೆ ಹೀಗೊಂದು ಪಾದಸೇವೆ ಫೋಟೋ ನೋಡಿ ಗೊಳ್ ಎಂದು ನಕ್ಕೆ.. ಅಕ್ಕ-ಪಕ್ಕ ಯಾರು ಇರ್ಲಿಲ್ಲ:)
ರೈಲು ಸ್ಟಾರ್ಟ್ ಆಗುವುದು ಇವತ್ತು- ನಾಳೆ ಎಂದು ಕೊನೆಗೂ ನಾವು ೬ ವರ್ಷ ಮೈಸೂರಲ್ಲಿದ್ದಾಗ ಸ್ಟಾರ್ಟ್ ಆಗಲೇ ಇಲ್ಲ :(
Really very nice pics...
captured at the right time...
Really nim talent ge ondu hats off Shivu avare..:-)
ಸುಂದರವಾಗಿದೆ,ಮುದ್ದಾಗಿವೆ,
ಚೆಂದದಚಿತ್ರಗಳು.
ತುಂಬಾ ಇಷ್ಟವಾಯಿತು.
ಮುಂದಿನ ಕಂತು ಯಾವಾಗ??
ಶಿವು ಸೂಪರ್ ಫೋಟೋ...ಕಲೆಗಾರನ ಕೈಯ್ಯಲ್ಲಿ ಕೆಮೆರಾ ಸಿಕ್ಕರೆ ಏನೆಲ್ಲ ಸಾಧ್ಯ....
ನಿಮಗೆ ಅಥವಾ ನಿಮ್ಮ ಕ್ಯಾಮರಾಕ್ಕೆ ಅದೆಲ್ಲಿಂದ ಹೊಳೆಯುತ್ತೋ ಹೀಗೆಲ್ಲಾ ಫೋಟೋ ತೆಗೆಯಬಹುದೆಂದು!! ತುಂಬಾ ಚೆನ್ನಾಗಿವೆ.
shivu.K
ಸುಂದರವಾಗಿವೆ..
ಅದೇನೋ ಗೊತ್ತಿಲ್ಲ ನಿಮ್ಮ ಈ ಫೋಟೋಗಳನ್ನು ನೋಡಿದ ಕೂಡಲೇ ಸಣ್ಣ ನಗು ಮುಖದಲ್ಲಿ ಸುಳಿದಾಡಿತು..
ಇನ್ನೊಂದ್ ವಿಸ್ಯ: ರೈಲಿನ ಬಾಗಿಲ ಬಳಿ ಕೂರುವುದು ಅಪಾಯಕಾರಿ.. ನಮ್ಮೂರಿನ ಮೂಲಕ ಹಾದುಹೋಗುವ ರೈಲಿನ ರಸ್ತೆಯಲ್ಲಿ ಬಹಳ ತಿರುವಿದ್ದು, ಬಾಗಿಲ ಬಳಿ ಇದ್ದವರು ಹಲವು ಸಲ ಹೊರಬಿದ್ದು ಸಾವನ್ನಪ್ಪಿರುವುದುಂಟು..
ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/
ಚೆನ್ನಾಗಿದೆ! ಎಷ್ಟೊಂದು ಚಿತ್ರ ತೆಗೆದಿದ್ದೀರಿ!
ರೈಲು ಪ್ರಯಾಣದ ವೇಳೆ ನೀವು ತೆಗೆದ ಅನನ್ಯ ಚಿತ್ರಗಳ ಮಾಲಿಕೆಯನ್ನು ಅನಾವರಣಗೊಳಿಸಿದ್ದೀರಿ. "ಸುಬ್ರಹ್ಮಣ್ಯಕ್ಕೆ ಪಾದಯಾತ್ರೆ" ಬಹಳ ಖುಷಿ ಕೊಟ್ಟಿತು. ಎಲ್ಲ ಚಿತ್ರಗಳಿಗೆ ನೀವು ಕೊಟ್ಟ ಪುಟ್ಟ ಟಿಪ್ಪಣಿ ಅದೆಷ್ಟು ಸೂಕ್ತವಾಗಿದೆಯೆ೦ದರೆ ಒ೦ದಕ್ಕಿ೦ತ ಒ೦ದು ಸೂಪರ್ ಅನಿಸುತ್ತದೆ.
ಚುಕ್ಕಿಚಿತ್ತಾರ,
ಜೊತೆಗೆ ಕಿಟಕಿಯಲ್ಲಿ ಅಂತ ಸೇರಿಸೋಣವೇ!
ಧನ್ಯವಾದಗಳು.
ಚಂದ್ರು ಸರ್,
ರೈಲು ಕಿಟಕಿಯಲ್ಲಿ ಫೋಟೊಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಇದರಲ್ಲಿ ನನ್ನ ಕ್ರಿಯೇಟಿವಿಟಿ ಅನ್ನೋದು ಏನು ಇಲ್ಲ. ಒಂಬತ್ತು ಗಂಟೆಯ ಪ್ರಯಾಣದಲ್ಲಿ ಮಲಗಿಯೋ ಅಥವ ಪುಸ್ತಕವನ್ನು ಓದಿ ಸಮಯವನ್ನು ಕಳೆಯುವ ಬದಲು ಹೀಗೆ ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ...
ಸುನಾಥ್ ಸರ್,
ನೀವು ಈಗ ಫೋಟೊ ನೋಡುವಾಗ ಅದರ ಒಕ್ಕಣೆಗಳನ್ನು ನೋಡುವಾಗ ಹೇಗೆ ಖುಷಿಪಡುತ್ತೀರೋ ಅಂಥದ್ದೇ ಖುಷಿಯನ್ನು ನಾನು ಕ್ಲಿಕ್ಕಿಸುವಾಗ ಮತ್ತು ಬರೆಯುವಾಗ ಅನುಭವಿಸುತ್ತೇನೆ. ಆ ಮಟ್ಟಿನಲ್ಲಿ ನನ್ನ ಸ್ವಾರ್ಥವೂ ಇದೆ.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...
ಧನ್ಯವಾದಗಳು.
ಅರ್ಚನ ಮೇಡಮ್,
ಧನ್ಯವಾದಗಳು.
ದಿನಕರ್ ಸರ್,
ನಾನು ಈ ರೈಲಿನಲ್ಲಿ ಮಂಗಳೂರಿನವರೆಗೆ ಬರಲಿಲ್ಲ. ಸುಬ್ರಮಣ್ಯರೋಡ್ ನಿಲ್ದಾಣದವರೆಗೆ ಮಾತ್ರ ಬಂದಿದ್ದೆ. ಮತ್ತೆ ನಾನು ಈ ರೀತಿ ಫೋಟೊ ತೆಗೆಯುವಾಗ ಯಾರಿಗೂ ಗೊತ್ತಾಗಲಿಲ್ಲವಾದ್ದರಿಂದ ಇನ್ನೂ ಬೈಯ್ಯುವ ಅವಕಾಶವೆಲ್ಲಿ? ಮುಂದಿನ ಭಾಗವನ್ನು ಒಂದು ಪತ್ರಿಕೆಗೆ ಕೊಟ್ಟಿದ್ದೇನೆ. ಅದರಲ್ಲಿ ಪ್ರಕಟವಾದ ನಂತರ ಬ್ಲಾಗಿನಲ್ಲಿ ಹಾಕುತ್ತೇನೆ..
ಮತ್ತೆ ಮಂಗಳೂರಿಗೆ ಬಂದಾಗ ನಾನು ನಿಮಗೆ ಖಂಡಿತ ತಿಳಿಸುತ್ತೇನೆ...
ಧನ್ಯವಾದಗಳು.
ಶ್ವೇತ ಮೇಡಮ್,
ಛಾಯಾಕನ್ನಡಿಯಲ್ಲಿ ಹೊಸತು ವಿಶೇಷವೇನು ಇಲ್ಲದಿದ್ದಲ್ಲಿ ನನಗೆ ಖುಷಿಯಾಗುವುದಿಲ್ಲ. ಆದಕ್ಕಾಗಿ ಹೊಸತರ ತುಡಿತ ಸದಾ ಚಾಲ್ತಿಯಲ್ಲಿರುವ ಕಾರಣ ನಿಮಗೂ ಹೊಸತು ಸಿಗಬಹುದು ಅಲ್ವಾ..
ಧನ್ಯವಾದಗಳು.
ತೇಜಸ್ವಿನಿ ಮೇಡಮ್,
ರೈಲುಪ್ರಯಾಣವನ್ನು ನಾನು ತುಂಬಾ ಇಷ್ಟಪಡುತ್ತೇನೆ.ಕಾರಣ ಅರಾಮದಾಯಕ. ಸ್ವಲ್ಪ ಪ್ರಯತ್ನ ಪಟ್ಟರೇ ಇಂಥದ್ದನ್ನೆಲ್ಲ ಮಾಡಬಹುದು. ಈ ಚಿತ್ರಗಳನ್ನು ಕ್ಲಿಕ್ಕಿಸುವಾಗ ಸ್ವಲ್ಪ ಸಾಹಸ ಇದೆ. ಮುಂದಿನ ಭಾರಿಯ ಲೇಖನವನ್ನು ಬೇಗ ಚಿತ್ರಸಮೇತ ಕೊಡುತ್ತೇನೆ..
ಧನ್ಯವಾದಗಳು.
ನವೀನ್,
ಚಿತ್ರಗಳು ಮತ್ತು ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಗುರುಮೂರ್ತಿ ಹೆಗಡೆಸರ್,
ಇಂಥವು ನನಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಕಾಣಸಿಗುತ್ತವೆ. ನಿತ್ಯ ಜಂಜಡಗಳಿಂದ ಸ್ವಲ್ಪ ಹೊರಬಂದರೆ ಇಂಥವನ್ನೆಲ್ಲಾ ಕಾಣಬಹುದು ಅನ್ನೋದು ನನ್ನ ಅಭಿಪ್ರಾಯ.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...
ಧನ್ಯವಾದಗಳು.
ಸುಬ್ರಮಣ್ಯ ಸರ್,
ಚಿತ್ರಗಳು ಬರಹವನ್ನು ನೋಡಿ ನಾನು ನಿಮ್ಮಂತೆ ಹೀಗೆ enjoy ಮಾಡುತ್ತೇನೆ...ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ...
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಆಶೋಕ್ ಉಚ್ಚಂಗಿ,
ನಾನು ಟಿ.ಎನ್.ಸೀತಾರಾಮ್ರವರ ಸೀರಿಯಲ್ಲುಗಳನ್ನು ನೋಡುತ್ತೇನೆ. ಭಾವನಾತ್ಮಕ ದೃಶ್ಯಗಳನ್ನು ನವಿರಾಗಿ ಚಿತ್ರಿಸುತ್ತಾರೆ ನನಗೂ ಇಷ್ಟ. ನನ್ನ ಚಿತ್ರಗಳಲ್ಲೂ ಅಂತ ಭಾವನೆಗಳನ್ನು ನವಿರುತನವನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು. ನೀವು ನಿರೀಕ್ಷಿಸುವ ಚಿತ್ರವನ್ನು ಮುಂದಿನ ಲೇಖನದಲ್ಲಿ ಕೊಡಲು ಪ್ರಯತ್ನಿಸುತ್ತೇನೆ.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಮಹೇಶ್ ಸರ್,
ಹೊಸ ವಿಷಯದ ಹಿಂಬಾಲಿಸುವುದರಲ್ಲಿ ನನಗೂ ಒಂಥರ ಥ್ರಿಲ್ ಇದೆ. ಮತ್ತೆ ಕೆಲವು ವೈವಿಧ್ಯತೆಯ ಫೋಟೊಗಳು ಬೇಕೆಂದಾಗ ಇಷ್ಟಾದರೂ ಸಾಹಸ ಮಾಡದಿದ್ದರೆ ಹೇಗೆ ಸಾರ್?
ಮೆಚ್ಚಿದ್ದಕ್ಕೆ ಧನ್ಯವಾದಗಳು.
ಉಮೇಶ್ ವಶಿಷ್ಟ ಸರ್,
ನನ್ನ ಫೋಟೊಗ್ರಫಿ ಜೊತೆಗೆ ಸಮಯ ಪ್ರಜ್ಞೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..
ಮತ್ತಷ್ಟು ಫೋಟೊಗಳನ್ನು ಲೇಖನ ಸಮೇತ ಮುಂದಿನ ಲೇಖನದಲ್ಲಿ ಕೊಡುತ್ತೇನೆ...
ಆಲಾಪಿನಿ,
ಧನ್ಯವಾದಗಳು.
ವೇಣು ವಿನೋದ್,
ನೀವು ಇಷ್ಟಪಟ್ಟ ಚಿತ್ರಗಳು ನನಗೂ ಇಷ್ಟ. ತಾಯಿ ಮಗುವಿನ ಫೋಟೋವನ್ನು ಅವರ ಎದುರೇ ಕುಳಿತು ಅವರಿಗೇ ಗೊತ್ತಿಲ್ಲದಂತೆ ಕ್ಲಿಕ್ಕಿಸಿದ್ದೇನೆ...
ಧನ್ಯವಾದಗಳು.
ಉದಯ್ ಸರ್,
ದೊಡ್ಡ ಕ್ಯಾಮೆರಾವನ್ನು ಕುತ್ತಿಗೆ ತೂಗುಹಾಕಿಕೊಂಡು ಎಲ್ಲರ ಕಣ್ತಪ್ಪಿಸಿ ಇಂಥ ಫೋಟೋಗ್ರಫಿ ಮಾಡುವುದು ತುಂಬಾ ಕಷ್ಟ. ಅದನ್ನು ವಿವರಿಸಿದ್ದೇನೆ. ಆದ್ರೂ ಹೇಗಾದರೂ ಕೆಲವು ವಿಭಿನ್ನ ಫೋಟೋ ತೆಗೆಯಲೇಬೇಕೆಂದು ಪ್ರಯತ್ನಿಸಿದಾಗ ಏನಾದರೂ ಹೊಸ ಗಿಮಿಕ್ ಮಾಡಲೇಬೇಕಲ್ಲವೇ...ಅದಕ್ಕೆ ಸಣ್ಣ ಟವಲ್ ಸುತ್ತಿ ಆರು ಬೋಗಿಗಳ ಕಾರಿಡಾರು ಓಡಾಡಿದ್ದೇನೆ. ನನ್ನನ್ನೇ ಗಮನಿಸುತ್ತಿರುವವರನ್ನು ನೋಡಿ ಅವರ ಕಣ್ಣೋಟವನ್ನು ಬೇರೆಡೆಗೆ ತಿರುಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಕ್ಕೆ ಇಷ್ಟೇಲ್ಲಾ ಫೋಟೊಗ್ರಫಿ ಸಾಧ್ಯವಾಗಿದೆ. ಇಲ್ಲದಿದ್ದಲ್ಲಿ ಎಲ್ಲರಿಗೂ ಉತ್ತರ ಕೊಡುತ್ತಾ ಇವೆಲ್ಲ ಸಿಕ್ಕುತ್ತಿರಲಿಲ್ಲವೇನೋ...
ಮತ್ತೆ ಫೋಟೊಗ್ರಫಿ ಅನ್ನುವುದು ನನಗೆ passion ಆಗಿರುವುದು ಸತ್ಯ. ಹೊಸ ವಿಚಾರ ತಲೆಗೆ ಹೊಕ್ಕಾಗ ಅದರ ಬೇತಾಳನಂತೆ ಬಿದ್ದಾಗ ಮಾತ್ರ ಇದೆಲ್ಲಾ ಸಾಧ್ಯ. ಮತ್ತೆ ಇಂಥ ಫೋಟೊಗ್ರಫಿಗಾಗಿ ನಾನು ಆರು ತಿಂಗಳು ಕನಸು ಕಟ್ಟಿದ್ದೇನೆ...
ನಿಮ್ಮ ಅಭಿಪ್ರಾಯಕ್ಕೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.
ಪ್ರದೀಪ್,
ಇದೆಲ್ಲವನ್ನು ರೈಲಿನೊಳಗೆ ಕ್ಲಿಕ್ಕಿಸಿರುವುದನ್ನು ನೀವು ನಂಬಲೇಬೇಕು.
ಶಿರಾಡಿಘಾಟಿನ ಸೌಂದರ್ಯವನ್ನು ಮುಂದಿನ ಬ್ಲಾಗ್ ಲೇಖನಕ್ಕೆ ಸಿದ್ದಮಾಡಿದ್ದೆ. ಆದ್ರೆ ಒಂದು ಪತ್ರಿಕೆಗೆ ಪ್ರವಾಸಕಥನವಾಗಿ ಚಿತ್ರಲೇಖನವನ್ನು ಕಳಿಸಿದ್ದರಿಂದ ಅದು ಅಲ್ಲಿ ಪ್ರಕಟವಾದ ಮೇಲೆ ಬ್ಲಾಗಿನಲ್ಲಿ ಹಾಕುತ್ತೇನೆ. ಅಲ್ಲಿಯವರೆಗೆ ದಯವಿಟ್ಟು ಕಾಯಬೇಕು.
ಮಂಗಳೂರಿಗೆ ಬಂದಾಗ ಕಡಲ ತೀರಕ್ಕೆ ಬೇಟಿ ನೀಡುವುದಲ್ಲದೇ ನಿಮ್ಮನ್ನು ಸೇರಿದಂತೆ ಅನೇಕರನ್ನು ಬೇಟಿಮಾಡುವುದಿದೆ...
ಧನ್ಯವಾದಗಳು.
ಪ್ರಕಾಶ್ ಸರ್,
ಇದೊಂದು ಸಣ್ಣ ಪ್ರಯತ್ನವಷ್ಟೇ. ನೀವು ಮತ್ತೆ ನೋಡುವಷ್ಟು ಚೆನ್ನಾಗಿದೆಯೆಂದು ಹೇಳಿದ್ದು ನನಗೂ ಖುಷಿ.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನಿಮ್ಮೊಳಗೊಬ್ಬ ಬಾಲು ಸರ್,
ಚಿತ್ರಗಳು ನಿಮ್ಮ ಮನಸೂರೆಗೊಂಡಿದ್ದು ನನಗೂ ಖುಷಿ. ನನ್ನ ಕ್ಯಾಮೆರ ಕೆಲಸ ಮತ್ತು ನನ್ನ ಹಟವನ್ನು ಗುರುತಿಸಿದ್ದೀರಿ ಮತ್ತು ಮೆಚ್ಚಿದ್ದೀರಿ..ಅದಕ್ಕೆ ತುಂಬಾ ಧನ್ಯವಾದಗಳು. ಹೀಗೆ ಬರುತ್ತಿರಿ...
ಸೀತಾರಾಮ್ ಸರ್,
ಚಿತ್ರಗಳು ಅದರ ಶೀರ್ಷಿಕೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...
ಮತ್ತೆ ಇನ್ನೂ ಸಾಹಸದ ವಿಚಾರಕ್ಕೆ ಬಂದರೆ ನನ್ನ ಶ್ರೀಮತಿ ನಾನು ಬಾಗಿಲಲ್ಲಿ ನಿಂತೂ ಇಂಥ ಫೋಟೋಗ್ರಫಿ ಮಾಡುವುದಕ್ಕೆ ಒಪ್ಪಲಿಲ್ಲ.[ಯಾರಿಗೆ ತನ್ನ ಪತಿ ಇಂಥ ರಿಸ್ಕ್ ತೆಗೆದುಕೊಳ್ಳುವುದನ್ನು ಒಪ್ಪುತ್ತಾರೆ ಹೇಳಿ] ಕೊನೆಗೆ ಆಕೆ ನಿದ್ರೆ ಮಾಡಿದಾಗ ಆಕೆಯ ಕಣ್ತಪ್ಪಿಸಿ ಇದೆಲ್ಲವನ್ನು ಮಾಡಿದ್ದೇನೆ. ನಂತರ ಆಕೆಗೆ ಗೊತ್ತಾಗಿ ಅವಳು ಅಸಮಧಾನವನ್ನು ವ್ಯಕ್ತಪಡಿಸಿದ್ದು ಉಂಟು.]ಇವೆಲ್ಲವೂ ಹೊಸತನಕ್ಕಾಗಿ.
ಧನ್ಯವಾದಗಳು.
ನೀಲಿಹೂವು ರಂಜಿತ್ ಸರ್,
ಹೊಸತನ ಚಿತ್ರಗಳು ಮತ್ತು ಅದರ ಒಕ್ಕಣೆಗಳನ್ನು ಗುರುತಿಸಿ ಮೆಚ್ಚಿದ್ದಕ್ಕೆ ಧನ್ಯವಾದಗಳು.
ವನಿತಾ,
ಫೋಟೊ ಫ್ರೇಮು ಮತ್ತು ಅದರೊಳಗಿನ ಫೋಟೊಗಳನ್ನು ಇಷ್ಟಪಟ್ಟಿದ್ದೀರಿ. ನೀವು ಮೆಚ್ಚಿದ ಪಾದದ ೫೦ಕ್ಕೂ ಹೆಚ್ಚು ಫೋಟೋಗಳನ್ನು ಸುಮಾರು ಅರ್ಧಗಂಟೆಯವರೆಗೆ ಕ್ಲಿಕ್ಕಿಸಿದ್ದೇನೆ. ನೀವು ಚಿತ್ರಗಳನ್ನು ನೋಡಿ ನಿಮಗರಿವಿಲ್ಲದಂತೆ ನಕ್ಕಿರುವುದು ನನ್ನ ಪ್ರಯತ್ನಕ್ಕೆ ಬಹುಮಾನ ಕೊಟ್ಟಂತೆ.
ಮತ್ತೆ ಈ ರೈಲು ವಿಚಾರಕ್ಕೆ ಬಂದಾಗ ನಿಮ್ಮಂತೆ ನಾನು ಮೂರು ವರ್ಷ ಕಾದಿದ್ದೇನೆ. ಹೀಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದೇನೆ...ಅದೆಲ್ಲರ ಪ್ರತಿಫಲವೇ ಈ ಚಿತ್ರಲೇಖನ. ಇದರ ಉಳಿದ ಭಾಗಕ್ಕೆ ತಪ್ಪದೇ ಬನ್ನಿ.
ದಿವ್ಯ ಮೇಡಮ್,
ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದೀರಿ ಥ್ಯಾಂಕ್ಸ್.. ಚಿತ್ರಗಳನ್ನು ಕ್ಲಿಕ್ಕಿಸವಾಗ ಸ್ವಲ್ಪ ಸರ್ಕಸ್ ಖಂಡಿತ ಇತ್ತು. ಅದರ ಪಲಿತಾಂಶ ಸಿಕ್ಕಿದೆ.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ವೆಂಕಟ ಕೃಷ್ಣ ಸರ್,
ನನ್ನ ಬ್ಲಾಗಿಗೆ ಸ್ವಾಗತ...
ಚಿತ್ರಗಳು ಪುಟ್ಟಲೇಖನ, ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಉಮೇಶ್ ದೇಸಾಯ್ ಸರ್,
ಫೋಟೊಗಳನ್ನು ನೋಡಿ ಖುಷಿಪಟ್ಟು ನಿಮ್ಮ ಪ್ರೋತ್ಸಾಹ ನೀಡುತ್ತಿದ್ದೀರಿ ಅದಕ್ಕೆ ಧನ್ಯವಾದಗಳು.
ಸುಮಾ ಮೇಡಮ್,
ನಾನು ಮತ್ತು ನನ್ನ ಕ್ಯಾಮೆರ ಎರಡು ವಿಶೇಷವಲ್ಲ. ಏಕೆಂದರೆ ನಾನು ಮಾಮೂಲಿ ಮನುಷ್ಯ. ಹಾಗೆ ನನ್ನ ಕ್ಯಾಮೆರಾ ಕೂಡ ತುಂಬಾ ದುಬಾರಿಯೇನಲ್ಲ.
ಹೊಸತನ್ನು ಕಂಡತಕ್ಷಣ ಗುರುತಿಸುವುದು ಮರುಕ್ಷಣವೇ ಕಾರ್ಯಗತವಾಗುವುದು....ಇಷ್ಟೇ ನಾನು ಮಾಡಿರುವುದು..
ಧನ್ಯವಾದಗಳು.
ಗುರು ದೆಸೆ,
ಫೋಟೊಗಳನ್ನು ನಾನು ತೆಗೆಯುವಾಗಲೂ ನಿಮ್ಮಂತೆ ಒಂದು ಮುಗಳ್ನಗು ನನ್ನಲ್ಲಿ ಮೂಡುತ್ತಿತ್ತು. ನಿಮಗೂ ಮೂಡುತ್ತಿದೆಯೆಂದಮೇಲೆ ಭಾವನೆಗಳು ಒಂದೇ ಅಂತ ಆಯಿತು.
ಮತ್ತೆ ರೈಲಿನ ಬಾಗಿಲ ಕೂರುವುದು ಖಂಡಿತ ಅಪಾಯಕಾರಿಯೆನ್ನುವುದನ್ನು ಒಪ್ಪುತ್ತೇನೆ. ಅದಕ್ಕಾಗಿ ನನ್ನ ಶ್ರೀಮತಿ ನನ್ನ ಮೇಲೆ ಕೋಪಿಸಿಕೊಂಡಿದ್ದು ಉಂಟು. ಇಂಥ ಫೋಟೊಗಳನ್ನು ತೆಗೆಯುವಾಗ ತುಂಬಾ ಎಚ್ಚರದಿಂದಲೇ ಇದ್ದೇ. ನಿಮ್ಮ ಸಲಹೆಗೆ ಧನ್ಯವಾದಗಳು.
ಹೀಗೆ ಬರುತ್ತಿರಿ...
ಭಾಶೆ,
ನಾನು ಕ್ಲಿಕ್ಕಿಸಿದ್ದು ಸುಮಾರು ಆರುನೂರು ಚಿತ್ರಗಳನ್ನು ಅದರಲ್ಲಿ ಕೆಲವನ್ನು ಅಯ್ಕೆ ಮಾಡಿಕೊಂಡು ಬ್ಲಾಗಿನಲ್ಲಿ ಹಾಕಿದ್ದೀನಿ..
ಧನ್ಯವಾದಗಳು.
ಎಲ್ಲಿ ಹುಡುಕ್ತೀರ ಸರ್ ಈ ಎಲ್ಲ ಚಿತ್ರಗಳನ್ನು. ನಮಗೆಲ್ಲ ಸಾಧಾರಣ ಎನಿಸುವ ದೃಶ್ಯಗಳು ನಿಮ್ಮ ಕೈಯ್ಯಲ್ಲಿ ಅದ್ಭುತ ಚಿತ್ರಗಳಾಗಿ ಮೂಡುತ್ತವೆ. ಅದಕ್ಕೆ ತಕ್ಕಂತೆ ಬರವಣಿಗೆ
ಪರಂಜಪೆ ಸರ್,
ಇದೊಂದು ತುಂಬಾ ದಿನದ ಕನಸು ಈಗ ನನಸಾಗಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮತ್ತೆ ನೀವು ಇಷ್ಟ ಪಟ್ಟ ಚಿತ್ರದ ಮತ್ತೊಂದು ಚಿತ್ರ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಿದ್ದವಾಗುತ್ತಿದೆ...ಚಿತ್ರಗಳ ಜೊತೆಗೆ ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಟ್ರಕ್ಕಿಂಗ್ ಪ್ರವಾಸ ಯಶಸ್ವಿಯಾಗಲಿ..happy journey.
ಕುಲದೀಪ್ ಸರ್,
ನಾನು ತೆಗೆದಿರುವ ಚಿತ್ರಗಳೆಲ್ಲಾ ನಿಮಗೂ ಸೇರಿದಂತೆ ಎಲ್ಲರಿಗೂ ಕಾಣಿಸುತ್ತವೆ. ಅದರಲ್ಲೇನು ವಿಶೇಷವಿಲ್ಲ. ಸ್ವಲ್ಪ ಮನಸ್ಸು ಮತ್ತು ಕಣ್ಣನ್ನು ಅತ್ತಕಡೆಗೆ ಇಷ್ಟಪಟ್ಟು ಬೇರೆಯದೇ ರೀತಿಯಲ್ಲಿ ನೋಡಿದಾಗ ನಿಮಗೂ ಹೀಗೆ ಕಾಣಬಹುದು...
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ದೃಶ್ಯ ಕಾವ್ಯ ಬಹಳ ಚೆನ್ನಾಗಿತ್ತು.
ಮಾಲಾ
anthoo railannu bittilla neevu :)
thumba chennagidhe as usual... mundina baagakke waiting :)
ಶಿವೂ ಸರ್, ಚಂದದ ಕ್ಯಾಪ್ಶನ್ ಗಳೊಂದಿಗೆ ಚಿತ್ರ ಲೇಖನ ಸೂಪರ್ ...
ನನ್ನಂತೋರು ಅದೇ ಟ್ರೈನ್ ನಲ್ಲಿದ್ದಿದ್ರೆ ಹಾಗೆ ನಿದ್ದೆ ಮಾಡಿ ಪ್ರಯಾಣ ಮುಗಸ್ತಾ ಇದ್ವಿ .. ಕ್ಯಾಮರ ಕಣ್ಣಿಗೆ ,ಕ್ರಿಯೇಟಿವಿಟಿ ಇರೋರ್ಗೆ ಎಲ್ಲಿ ಹೋದರು ಹೊಸತನ ಕಾಣಿಸತ್ತೆ ಅಂತ ಈ ಚಿತ್ರ ಲೇಖನವೇ ಹೇಳತ್ತೆ ..ತುಂಬಾ ಚೆನ್ನಾಗಿದೆ . :)
astu photo tegudu supper nudichitra baraddakke chennagide.
hi shivu nimma photo hagu lekana tumba chennagide..mundina barahkke wait madtha idini..
ಶಿವು ನಮ್ಮ ಮರಳ ಮಲ್ಲಿಗೆ ಪತ್ರಿಕೆಯಲ್ಲಿ ನಿಮ್ಮ ಪರಿಚಯ ಹಾಕ್ಬೇಕು ಅಂತ ಸುಗುಣ ಮತ್ತೆ ಮಹೇಶ್ ಹೇಳ್ದಾಗ..ಕೂಡಲೇ ಒಪ್ಪಿ ಅದಕ್ಕಗಿ ನೀವು ಕಳುಹಿಸಿದ ಕೆಲಸಾಲುಗಳಿಗೆ ಇನ್ನೇನಾದ್ರೂ ಸೇರಿಸಬಹುದೇ ಅಂತ ನಿಮ್ಮ ಬ್ಲಾಗಿಗೆ ಬಂದ್ರೆ..ಈ ರಮ್ಯ-ವಿರಮ್ಯ ಚಿತ್ರಗಳ ಕಾಮೆಂಟರಿ ಲೇಖನ,,,,ಹಹಹ...ಈ ರೈಲಿನಲ್ಲೇ ರೈಲು ಬಿಡೋದು ಹೇಗೆ ಅಂತ ಕಲಿತಿದ್ದು ನಾವೆಲ್ಲಾ..1978 ನಾವು ಮಂಗಳೂರಿಗೆ ಎರಡನೇ ವರ್ಷದ ಬಿ.ಎಫ್.ಎಸ್ಸಿ.ಗೆ ಹೋಗಿ ಕಾಲೇಜಿಗೆ ಸೇರಿದಾಗ ಹೇಳ್ತಿದ್ದ್ರು ಬೆಂಗಳೂರು-ಮಂಗಳೂರು ಟ್ರೈನ್ ಬರುತ್ತೆ ಅಂತ...ನಮಗೋ ಖುಷಿ...(ಘಾಟ್ ಪ್ರಯಾಣ ನಮ್ಮ ಬಯಲು ಸೀಮೆಯವರಿಗೆ ದೊಡ್ಡ ತಲೆನೋವು ಅಲ್ವಾ ಅದಕ್ಕೆ). ಕೊನೆಗೆ 1980-81 ಕ್ಕೆ ಮೊದಲಿಗೆ ಈ ರೈಲು ಬಂದಾಗ ಅದರಲ್ಲಿ ಹತ್ತಿ ಬೆಂಗಳೂರಿಗೆ ಬಂದದ್ದು ಈಗಲೂ ನೆನಪಲ್ಲಿ ಹಚ್ಚ ಹಸಿರಾಗೇ ಇದೆ..ಸುಮಾರು 18 ಘಂಟೆ ಪ್ರಯಾಣ ಆಗ..ಘಾಟಿನಲ್ಲಂತೂ ಎಷ್ಟು ನಿಧಾನವಾಗಿ ಹೋಗ್ತಿತ್ತಂದ್ರೆ..ನಾವು ಚಲಿಸುವ ರೈಲಿನಿಂದ ಇಳಿದು ಮತ್ತೆ ಹತ್ತುತ್ತ ಇದ್ವಿ....ಧನ್ಯವಾದ ನೆನಪನ್ನು ಕೆದಕಿದ ಈ ಪೋಸ್ಟಿಗೆ...
ಏನ್ ಸ್ವಾಮಿ? ನಾವೆಲ್ಲಾ ನಿದ್ದೆ ಮಾಡೋಕಾಗತ್ತೆ ಅಂತಾ ಯೋಚಿಸೋ ಹೊತ್ತಿಲ್ಲಿ, ನೀವು ಇಷ್ಡು ಒಳ್ಳೆ ಪೋಟೋ ತೇಗೀತೇರಲ್ಲಾ? ನಿಮ್ಮ ಕ್ಯಾಮರಾ ಕಣ್ಣಿಗೆ ಹ್ಯಾಟ್ಸಫ್. ಕೈ, ಕಾಲಿನದೇ ಇಷ್ಟೊಂದು ಒಳ್ಳೆ ಫೋಟೋ ಅದ್ರೆ , ಆ ಶಿರಾಡಿ ಕಾಡಿಂದು ಇನ್ನು ಎಷ್ಟು ಒಳ್ಳೆ ಫೋಟೋ ಇದ್ದಿರಬಹುದು ಅಂತ ಕಾಯ್ತಾ ಇದ್ದೀನಿ.
ಮಾಲಾ ಮೇಡಮ್,
ಧನ್ಯವಾದಗಳು.
ಸುಧೇಶ್,
ರೈಲು ನನ್ನ ಫೇವರೇಟ್ ಸಬ್ಜೆಕ್ಟ್. ಅದರಲ್ಲಿ ಏನಾದರೂ ಹೊಸತು ಸಿಕ್ಕೇ ಸಿಕ್ಕುತ್ತೇ...ನೀವು ಹೊಸ ಕೆಲಸಕ್ಕೆ ಹೊಂದಿಕೊಂಡಿರಾ! ಅಲ್ಲಿನ ವಿಚಾರವನ್ನು ತಿಳಿಯಲು ಕಾಯುತ್ತಿದ್ದೇನೆ...
ಧನ್ಯವಾದಗಳು.
ರಂಜಿತ,
ನೀವು ಇನ್ನು ಮುಂದೆ ರೈಲಿನಲ್ಲಿ ನಿದ್ರೆ ಮಾಡದೆ ಇಂಥವನ್ನು enjoy ಮಾಡಿ. ನಿಮಗೂ ಇದಕ್ಕಿಂತ ಚೆನ್ನಾಗಿ ಹೊಸತು ಕಾಣಬಹುದು. ಚಿತ್ರಗಳು ಮತ್ತು ಬರಹವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...
ಆಶ್ವಥ್ ಸಂಪಾಜೆ,
ನನ್ನ ಬ್ಲಾಗಿಗೆ ಸ್ವಾಗತ. ಚಿತ್ರಗಳು ಅದರ ಕ್ಯಾಪ್ಷನ್ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..
ಪ್ರಶಾಂತ್ ಅರಸೀಕೆರೆ,
ರೈಲಿನಲ್ಲಿ ಪ್ರಯಾಣ ಮಾಡುವಾಗ ನೀವು ಇದನ್ನೆಲ್ಲಾ ಗಮನಿಸಿ ಖುಷಿಪಡಿ.
ಧನ್ಯವಾದಗಳು.
ಆಜಾದ್,
ಮರಳ ಮಲ್ಲಿಗೆ ಪತ್ರಿಕೆಯಲ್ಲಿ ನನ್ನ ಬಗ್ಗೆ ಕಿರುಪರಿಚಯವನ್ನು ಹಾಕುತ್ತಿರುವುದಕ್ಕೆ ತುಂಬಾ ಧನ್ಯವಾದಗಳು. ಈ ಮೂಲಕ ನನ್ನನ್ನೂ ಕುವೈಟಿನಲ್ಲೂ ಗುರುತಿಸುವಂತೆ ಮಾಡುತ್ತಿದ್ದೀರಿ...
ನನ್ನ ಈ ಚಿತ್ರ ಲೇಖನ ನಿಮ್ಮ ಆಗಿನ ರೈಲಿನ ಅನುಭವವನ್ನು ನೆನೆಪಿಸಿಕೊಟ್ಟಿದೆ. ಅದನ್ನು ಸಾಧ್ಯವಾದರೆ ವಿಸ್ತಾರವಾಗಿ ಬರೆಯಬಹುದೇ ನೋಡಿ...ಆಗಿನ ಕಾಲದ ಮಜವೇ ಬೇರೆ ಅಲ್ವಾ..ಅದರಲ್ಲೂ ಕಾಲೇಜು ಕತೆಯೆಂದರೆ ನಾನು ಕೇಳಬೇಕೇ...
ಧನ್ಯವಾದಗಳು.
ಬಾಲು ಸಾಯಿಮನೆ,
ಈ ಚಿತ್ರ ಲೇಖನವನ್ನು ಓದಿದ ಮೇಲೆ ನೀವು ಮುಂದೆ ಯಾವ ರೈಲಿನಲ್ಲೂ ನಿದ್ರಿಸದೇ ಕಾರ್ಯೋನ್ಮುಖರಾಗುತ್ತೀರಿ ಅನ್ನುವುದು ನನ್ನ ಭಾವನೆ. ನನ್ನ ಉದ್ದೇಶವೂ ಅದೇ ಆಗಿದೆ. ಪ್ರತಿಯೊಬ್ಬರೂ ಇಂಥವನ್ನು enjoy ಮಾಡಬೇಕೆನ್ನುವುದು ನನ್ನ ಆಸೆ.
ಮುಂದಿನ ಲೇಖನವನ್ನು ಸಾಧ್ಯವಾದಷ್ಟು ಬೇಗ ಹಾಕುತ್ತೇನೆ...
ಧನ್ಯವಾದಗಳು.
ಶಿವು ಸರ್,
ನಿಮ್ಮ ಸುಬ್ರಮಣ್ಯ ಪ್ರವಾಸ ಹೇಗಿತ್ತು ಎನ್ನೊ ಪ್ರಶ್ನೆಗೆ
ಉತ್ತರ ಪೂರ್ತಿ ಸಿಕ್ಕಿಲ್ಲ ಆದರೂ ಎಷ್ಟೋಂದು ಸುಂದರ
ಫೊಟೊಗಳನ್ನು ಕೊಟ್ಟಿದ್ದಿರಿ, ಅವಧಿ ಯಲ್ಲಿ ಒಂದು ಫೋಟೊ
ತುಂಭಾ ಖುಷಿ ಆಯ್ತು. ಹೀಗೆ ಸುಂದರ ಫೋಟೊಗಳನ್ನು
ಪ್ರಕಟಿಸಿ, ಧನ್ಯವಾದಗಳು.
ಸಲೀಂ,
ನಾನು ರೈಲಿಳಿಯುತ್ತಿದ್ದಂತೆ ನಿಮ್ಮ ಫೋನ್ ಬಂದಾಗ ನಾನು ಹೇಳಿದ್ದೆ ಅದನ್ನೆಲ್ಲಾ ಲೇಖನ ಮಾಡುತ್ತೇನೆ ಅಂತ. ಅದಕ್ಕೆ ಮೊದಲು ಒಂದಷ್ಟು ಫೋಟೋಗಳನ್ನು ತೋರಿಸಿಬಿಡೋಣವೆಂದುಕೊಂಡು ಇದನ್ನು ಹಾಕಿದ್ದೇನೆ. ಒಂದೆರಡು ವಾರದಲ್ಲಿ ಪೂರ್ತಿ ರೈಲು ಪ್ರವಾಸ ಕೊಡಲು ಪ್ರಯತ್ನಿಸುತ್ತೇನೆ...
ಧನ್ಯವಾದಗಳು.
ರೈಲಿನಲ್ಲಿ ನಿಮ್ಮ ಅನುಭವ(ಫೋಟೋಗ್ರಫಿ) ಓದಿ ಅಚ್ಹರಿಯಾಯ್ತು. ರೈಲು ಮಧ್ಯಮ ವರ್ಗದ ಡಾರ್ಲಿಂಗ್ ಆದ ಕಾರಣ, ನನಗೂ ರೈಲು ಪ್ರಯಾಣ ಎಂದರೆ ಅದೇನೋ ಖುಷಿ.
ಏಸಿ ಕೋಚ್ ನಲ್ಲಿ ನಿಮಗೆ ಇಂಥ- ಕಿಟಿಕಿಯಿಂದ ತಲೆ, ಕೈ, ಮೂತಿ ಹೊರಹಾಕುವ ಚಿತ್ರಗಳು ಸಿಗುತ್ತಿರಲಿಲ್ಲವೋ ಏನೋ.
ಮಸ್ತಾದ ಚಿತ್ರಗಳು...ಮಜವಾದ ಬರೆಹ..ನಿಮ್ಮ ಸುಬ್ರಹ್ಮಣ್ಯ ಯಾತ್ರೆಯ ಕಥನಕ್ಕೆ ನಾನೂ ಕಾದಿದ್ದೇನೆ.
ಹೊಸತನ ತೋರಿದ್ದೀರಿ, ಕಿಟಕಿ ಎಂದರೆ ಏನೋ ಹಾಗೇ ಹೊಸತನ ಹೊತ್ತು ತರುವ ಜಾಗ, ಸೆಕೆಗೆ ತಂಗಾಳಿಯನ್ನೂ, ಕಣ್ಣಿಗೆ ಹೊಸ ಹೊಸ ಛಾಯಾಕನ್ನಡಿಯನ್ನೂ, ಇಡೀ ಮೈಮನ ಪುಳಕಗೊಳ್ಳುವ ಏನೋ ತರುವ ಅಥವಾ ಏನೋ ಬರುವ ಸಣ್ಣ ಬೆಳಕಿಂಡಿ ಅದು, ಚಿತ್ರಗಳು ಚೆನ್ನಾಗಿವೆ
ಶಿವು,
ಟ್ರೈನಿನ ಅನುಭವಗಳು ಮತ್ತು ಚಿತ್ರಗಳು ಸೊಗಸಾಗಿವೆ. ಮತ್ತೆ ಟ್ರೈನಿನಲ್ಲಿ ಹೋಗಿಬಂದಂತಾಯ್ತು. ಮುಂದಿನ ನಿಮ್ಮ ಅನುಭವಗಳ ಬಗ್ಗೆ ಆಸೆ ತೋರಿಸಿದ್ದೀರಿ. ಓದಲು ಕಾತರದಿಂದಿರುವೆ.
ಹರೀಶ್,
ರೈಲಿನ ಅನುಭವ ಪ್ರತಿಭಾರಿಯೂ ವಿಭಿನ್ನವಾಗಿರುತ್ತದೆ. ಇಂಥದೊಂದು ಅವಕಾಶಕ್ಕಾಗಿ ನಾನು ಕಾಯುತ್ತಿದ್ದೆ. ಮತ್ತೆ ಖಂಡಿತ ರೈಲು ಮದ್ಯಮವರ್ಗದ ಡಾರ್ಲಿಂಗ್. ನಾನು ಹಣವಿದ್ದರೂ ರೈಲಿನಲ್ಲಿ AC coach ನಲ್ಲಿ ಹೋಗಬಾರದೆ ಹೋದರೆ ಇಂತವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ..ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ವಿ.ಅರ್.ಭಟ್ ಸರ್,
ಕಿಟಕಿಯ ಮೇಲೆ ನನಗೊಂದು ಕಣ್ಣಿತ್ತು. ಆದ್ರೆ ಈ ರೀತಿ ಅವಕಾಶ ಸಿಕ್ಕಿರಲಿಲ್ಲ.. ಇದೊಂದು ಪ್ರಯೋಗವಷ್ಟೇ. ಚಿತ್ರಗಳು ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಮಲ್ಲಿಕಾರ್ಜುನ್,
ನನ್ನ ಉದ್ದೇಶವೂ ಚಿತ್ರಗಳ ಮೂಲಕ ಮತ್ತು ಬರಹದ ಮೂಲಕ ಆ ರೈಲಿನಲ್ಲಿ ಪ್ರಯಾಣ ಮಾಡುವಂತಾಗಬೇಕು. ಮುಂದಿನ ಭಾಗವನ್ನು ಖಂಡಿತ ವಿಭಿನ್ನವಾಗಿಸಲು ಪ್ರಯತ್ನಿಸಿದ್ದೇನೆ...
ಧನ್ಯವಾದಗಳು.
ನಿಮ್ಮ ಬ್ಲಾಗಿಗೆ ಹಿಂದೆ ಬೇಟಿ ನೀಡಿದ್ದೆ.ಚೆನ್ನಾಗಿ ಬರೆಯುತ್ತಿರಿ..ನಿಮ್ಮರೈಲು ಕಿಟಕಿಯ ಒಳ ಹಾಗೂ ಹೊರ ದೃಶ್ಯ ದ ಫೋಟೋ ಹಾಗೂ ಅದರ ವಿವರಣೆಯನ್ನು ಸೊಗಸಾಗಿ ಬರೆದಿದ್ದೀರಿ.ರೈಲು ಪ್ರಯಾಣ ಅದರಲ್ಲೂ ಎಲ್ಲಾ ಒಟ್ಟಾಗಿ ಹೋಗುದು ಅದರ ಗಮ್ಮತ್ತೆ ಬೇರೆ ಆಲ್ವಾ!!??ಎಲ್ಲಾ ಫೋಟೋ ಗಳನ್ನು ಚಂದವಾಗಿ ತೆಗೆದಿದ್ದಿರಿ ಇಷ್ಟವಾಯ್ತು..
ಶಶಿ ಮೇಡಮ್,
ರೈಲು ಪ್ರಯಾಣದ ಗಮ್ಮತ್ತೇ ಬೇರೆ. ಅದನ್ನು ಪ್ರತಿಭಾರಿಯೂ ನಾನು enjoy ಮಾಡುತ್ತೇನೆ. ಇಂಥ ಫೋಟೊಗಳನ್ನು ಕ್ಲಿಕ್ಕಿಸಬೇಕೆನ್ನುವ ಕನಸು ಈಗ ನೆನಸಾಗಿದೆ. ನೀವು ಫೋಟೊಗಳನ್ನು ಮತ್ತು ಲೇಖನವನ್ನು ನೋಡಿ ಇಷ್ಟಪಟ್ಟಿದ್ದೀರಿ..ಅದಕ್ಕೆ ಧನ್ಯವಾದಗಳು.
realy very gud photos
ಪ್ರವೀಣ್ ಚಂದ್ರ ಸರ್,
ಧನ್ಯವಾದಗಳು.
Dearest Shivu.
Photos are simple supurb and nice.
train photos are so good i.e, the difficult part of taking pictures is out side the train and turnings.
I am unable to read the captions.
Keep it up forever.
Good luck
Dr.J.C.S.Rao
andhra loyola college
VIJAYAWADA
Dear Dr.JCS Rao sir,
I am happy sir. you are coming to blog and enjoyed all these train window photographs. it is realy very risky and tuff task. but I enjoyed all these. dont worry about all caption. it is just like naration. but photos tell all feelings...
thanks once again.
Post a Comment