Sunday, March 7, 2010

ಇದು ತಲೆಕೂದಲಗಳ ಪುರಾಣ

"ರೀ ಈ ಸಲ ಏನಾದ್ರು ಒಂದು ಕೂದಲು ನಿಮ್ಮ ಬಟ್ಟೆ ಮೇಲಿದ್ರೆ ನಾನು ಸುಮ್ಮನಿರೋಲ್ಲ ನೋಡಿ."

"ಯಾಕೆ ? ಏನಾಯ್ತು?"

"ತಲೆಕೂದಲು ಕಟ್ ಮಾಡಿಸಿದ ಮೇಲೆ ನಿಮ್ಮ ಅಂಗಿ ಮೇಲೆ ಉದುರಿದ ಕೂದಲು ಎಷ್ಟೇ ಚೆನ್ನಾಗಿ ಬಟ್ಟೆ ಒಗೆದರೂ ಹಾಗೆ ಕಚ್ಚಿಕೊಂಡಿರುತ್ತೆ, ಥೂ.. ನೋಡಲು ಎಷ್ಟು ಅಸಹ್ಯವೆನಿಸುತ್ತೆ, ನಿಮಗಿದೆಲ್ಲಾ ಎಲ್ಲಿ ಗೊತ್ತಾಗುತ್ತೇ,"

"ಸರಿ ನಾನು ಈಗ ಏನು ಮಾಡಬೇಕು ಹೇಳು?"

"ಮಾಡೋದೇನು, ನೀವು ಕಟಿಂಗ್ ಷಾಪ್‍ನವನಿಗೆ ದುಡ್ಡು ಕೊಡೋದಿಲ್ವಾ, ಕಟಿಂಗ್ ಮಾಡುವ ಮೊದಲು ದೊಡ್ಡದಾದ ಚೆನ್ನಾಗಿರುವ ಬಟ್ಟೆಯನ್ನು ನಿಮ್ಮ ಮೈಸುತ್ತ ಹಾಕಲಿಕ್ಕೆ ಅವನಿಗೇನು ದಾಡಿ, ನಾವು ಬ್ಯೂಟಿ ಪಾರ್ಲರಿಗೆ ಹೋಗಿ ನಮ್ಮ ಕೂದಲು ಕಟ್ ಮಾಡಿಸಿಕೊಂಡರೆ ಒಂದೇ ಒಂದು ಕೂದಲ ತುಣುಕು ಕೂಡ ಮೈಮೇಲೆ ಬೀಳದಂತೆ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಈ ವಿಚಾರವನ್ನು ಅವನಿಗೆ ಹೇಳಿ." ಅಂತ ತಾಕೀತು ಮಾಡಿದಳು.

ಕುರ್ಚಿಯ ಮೇಲೆ ಕುಳಿತೆ. ಅವನು ಸುಮಾರಾದ ಒಂದು ಬಟ್ಟೆಯನ್ನು ನನ್ನ ಸುತ್ತ ಸುತ್ತಿ ಕುತ್ತಿಗೆ ಹಿಂಬಾಗ ಒಂದು ಗಂಟು ಹಾಕಿ, ತಲೆಗೆ ನೀರು ಚಿಮುಕಿಸಿ ಒಂದು ಸಾರಿ ಬಾಚಣಿಗೆಯಿಂದ ಬಾಚಿದ. ಅದುವರೆಗೂ ಹೇಗೇಗೋ ಎತ್ತೆತ್ತಲೋ ಅಡ್ಡಾದಿಡ್ಡಿಯಾಗಿ ಸಂತೆಯೊಳಗಿನ ಜನಗಳಂತೆ ಹರಡಿಕೊಂಡಿದ್ದ ಕೂದಲುಗಳೆಲ್ಲಾ ಆತನ ಬಾಚಣಿಗೆ ಸ್ಪರ್ಶಕ್ಕೆ ಪ್ರಾಥಮಿಕ ಶಾಲಾ ಮಕ್ಕಳು ಪ್ರಾರ್ಥನೆಗೆ ಸಾಲಾಗಿ ಭಯಭಕ್ತಿಯಿಂದ ರೋಸ್ ಮತ್ತು ಕಾಲಂ ಎರಡೂ ಕಡೆಯಿಂದ ಸರಿಯಾಗಿ ಸಮವಸ್ತ್ರಸಹಿತರಾಗಿ ನಿಲ್ಲುವಂತೆ ತಲೆಬಾಗಿ ನಿಂತುಬಿಟ್ಟವು. ನಾವು ಮನೆಯಲ್ಲಿ ಸುಹಾಸನೆಬರಿತ ದುಬಾರಿ ಷಾಂಪು ಹಾಕಿ ಕೂದಲಿಗೆ ಸ್ನಾನ ಮಾಡಿಸಿ, ತುಂಬಾ ಚೆನ್ನಾದ ಒಳ್ಳೆಯ ಬಾಚಣಿಕೆಯಲ್ಲಿ ತಲೆಬಾಚಿದರೂ ನಮಗೆ ಬೇಕಾದ ಹಾಗೆ ಮುಂದೆ ಕ್ರಾಪು, ಕಿವಿಗಳ ಮೇಲೆ, ನೆತ್ತಿ ತಲೆ, ಹಿಂಭಾಗದಲ್ಲೆಲ್ಲಾ ನಮಗೆ ಬೇಕಾದ ಹಾಗೆ ಕೂರುವುದೇ ಇಲ್ಲ. ನಾವೆಷ್ಟೇ ಅದುಮಿ ಬಾಚಿದರೂ, ಮತ್ತಷ್ಟು ಎಣ್ಣೆಹಾಕಿ ಮಾಲೀಶ್ ಮಾಡಿದರೂ ನಾವಿರುದೇ ಹೀಗೆ ಅಂತ ಮೊಂಡು ಹಿಡಿದ ಮಕ್ಕಳ ಹಾಗೆ ನಿಂತುಬಿಡುತ್ತಿದ್ದ ಇದೇ ಕೂದಲುಗಳು ಈ ಕಟಿಂಗ್ ಷಾಪ್‍ನವನ ಮಾತನ್ನು ಸುಲಭವಾಗಿ ಕೇಳುತ್ತವಲ್ಲ! ಈ ವಿಚಾರ ನನಗೂ ಬಿಡಿಸಲಾಗದ ಕಗ್ಗಂಟು.

ನನ್ನ ಆಲೋಚನೆ ತುಂಡರಿಸುವಂತೆ "ಸರ್, ಟ್ರಿಮ್ಮಾ, ಮೀಡಿಯಮ್ಮಾ, " ಕೇಳಿದ.

ನಾವು ಟ್ರಿಮ್ ಅಂದುಬಿಟ್ಟರೆ ಮುಗೀತು. ಖುಷಿಯಿಂದ ಸುಮ್ಮನೆ ಒಮ್ಮೆ ತಲೆಮೇಲೆಲ್ಲಾ "ಕಚ್ ಕಚ್ ಕಚ್ ಕಚ್" ಅಂತ ಚೆನ್ನಾಗಿ ಶಬ್ದ ಬರುವಂತೆ ಕತ್ತರಿ ಆಡಿಸಿ ಶಾಸ್ತ್ರಕ್ಕೆ ನೆತ್ತಿ ಮೇಲೆ, ಕಿವಿಗಳ ಮೇಲೆ, ಹಿಂಭಾಗ ಮತ್ತು ಮುಂಭಾಗ ಚೂರೇ ಚೂರು ಕೂದಲು ಕತ್ತರಿಸಿ ಕಳಿಸಿಬಿಡುತ್ತಾನೆ. ಎರಡು ವಾರಗಳ ನಂತರ ಮತ್ತೆ ನೀವು ಅವನ ಬಳಿಗೆ ಹೋಗಲೇಬೇಕು. ಇನ್ನೂ ಮೀಡಿಯಮ್ ಅಂದರೆ ಇನ್ನೂ ಸ್ವಲ್ಪ ಹೆಚ್ಚಾಗಿ ಎಲ್ಲಾ ಕಡೆಯೂ ಕತ್ತರಿಸಿ [ಕತ್ತರಿಸಿದಂತೆ ಮಾಡಿ] ಒಂದು ತಿಂಗಳ ಒಳಗಾಗಿ ಮತ್ತೆ ಬರುವಂತೆ ನೋಡಿಕೊಳ್ಳುವುದು. ಆತನೆಂದೂ ಷಾರ್ಟ್ ಮಾಡಿಬಿಡಲಾ ಅಂತ ಕೇಳುವುದಿಲ್ಲ. ಅದು ಅವರ ವೃತ್ತಿಗೆ ಲಾಭದಾಯಕವಲ್ಲ. ಹಾಗೆ ಆತ ಕೇಳಿದಾಗ ನಾವು ಹೂ ಅಂದುಬಿಟ್ಟರೆ ಅಥವ ನಾನೇ ಷಾರ್ಟ್ ಮಾಡಿಬಿಡು ಅಂದುಬಿಟ್ಟರೆ ವಿಧಿಯಿಲ್ಲದೇ ಆತ ನುಣ್ಣಗೆ ಕತ್ತರಿಸಬೇಕಾಗುತ್ತದೆ. ಮತ್ತೆ ಕೂದಲುಗಳೆಲ್ಲಾ ಉದ್ದ ಬೆಳೆದು ಆತನ ಬಳಿಗೆ ಮತ್ತೊಮ್ಮೆ ಕಟಿಂಗ್ ಬರುವ ಹೊತ್ತಿಗೆ ಎರಡು ತಿಂಗಳು ದಾಟಿಬಿಟ್ಟಿರುತ್ತದಲ್ಲ!

ಮೀಡಿಯಮ್ಮಾಗಿರಲಿ ಅಂತ ಹೇಳಿ ನನ್ನ ಶ್ರೀಮತಿ ಹೇಳಿದ ವಿಚಾರವನ್ನು ಅವನಿಗೆ ನೆನಪಿಸಿದೆ.

" ಅಯ್ಯೋ ಬಿಡಿ ಅಣ್ಣಾ, ನಿಮಗಿದೆಲ್ಲಾ ಗೊತ್ತಾಗೊಲ್ಲ! ಈ ಕೂದಲುಗಳೆಲ್ಲಾ ಒಂಥರ! ಭಲೇ ಆಕ್ಟಿಂಗ್ ಮಾಡ್ತಾವೆ!

ಆಹಾಂ! ಕೂದಲು ಆಕ್ಟಿಂಗ್ ಮಾಡ್ತವ! ಇದೆಂಥದಪ್ಪ ಇದು ಹೊಸ ವಿಚಾರ ಅಂದುಕೊಳ್ಳುತ್ತಿದ್ದಂತೆ ಇದುವರೆಗೆ ಭಯಭಕ್ತಿಯಿಂದ ತಲೆಬಾಗಿದ್ದ ನನ್ನ ತಲೆಕೂದಲುಗಳೆಲ್ಲಾ ಗಕ್ಕನೆ ನಿಂತುಕೊಂಡವು.

"ಇದೇನಣ್ಣಾ ನೀನು ಹೇಳೋದು? ಕೂದಲು ಆಕ್ಟಿಂಗ್ ಸ್ವಲ್ಪ ಬಿಡಿಸಿ ಹೇಳಬಾರದಾ?"

"ನೋಡಣ್ಣ, ಗಂಡ್ಸು ಅಫೀಸಿಂದ ಸಂಜೆ ಮನೆಗೆ ಸುಸ್ತಾಗಿ ಬರುತ್ತಿದ್ದಂತೆ ಹೆಂಡ್ತಿ ಬಿಸಿಬಿಸಿ ಒಂದು ಲೋಟ ಕಾಫಿ ಕೊಟ್ಟು ಗಂಡನ ತಲೆಸವರಿ ತನಗೆ ಬೇಕಾದ ಎಲ್ಲವನ್ನು ವಸೂಲಿ ಮಾಡಿಕೊಂಡುಬಿಡುತ್ತಾಳೆ. ಹಿರಿಯಕ್ಕನ ಚಾಲು ಮನೆಮಕ್ಕಳಿಗೆ ಅನ್ನುವಂತೆ ಅವಳ ಇಂಥ ನಯ, ನಾಜೂಕು, ವೈಯ್ಯಾರದಂತ ಗುಣಗಳನ್ನು ದೇಹದ ಎಲ್ಲಾ ಅಂಗಾಗಗಳು ಕಲಿತುಕೊಂಡಂತೆ ಅವಳ ತಲೆಯ ಕೂದಲುಗಳು ಕೂಡ ಚೆನ್ನಾಗಿ ಕಲಿತುಬಿಡುತ್ತವೆ. ಕಲಿತ ಮೇಲೆ ನಟಿಸೋದು ಸುಲಭ ತಾನೆ! ಅವರ ಬ್ಯೂಟಿ ಪಾರ್ಲರ್‍ನಲ್ಲಿ ಕತ್ತರಿಸಿದಾಗ ಅವರ ಬಟ್ಟೆಗೆ ಅಂಟಿಕೊಳ್ಳದೇ ನಾಜೂಕಾಗಿ ಜಾರಿಬಿದ್ದುಬಿಡುತ್ತವೆ . ಆದ್ರೆ ಗಂಡಸರು ಕೆಲಸ ಕಾರ್ಯ ಅಂತ ಹೊರಗೆ ಹೋಗಿ ಸುತ್ತಾಡಿ ಜಡ್ಡು ಹಿಡಿದು ಕುಲಗೆಟ್ಟು ಹೋಗಿರುವುದರಿಂದ ಅವರ ತಲೆಕೂದಲುಗಳು ವೀಕ್ ಆಗಿಬಿಡುತ್ತವೆ. ಹೀಗಾಗಿ ಕಟಿಂಗ್ ಮಾಡಿದಾಗ ಹಾರಾಡಿ ತೂರಾಡಿ ಸುಸ್ತಾಗಿ ಹೀಗೆ ಬಟ್ಟೆಗೆ ಸಿಕ್ಕಿಹಾಕಿಕೊಳ್ಳುತ್ತವೆ. ಮತ್ತೊಂದು ವಿಚಾರ ಸರ್, ಹೆಂಗಸರು ತಲೆಕೂದಲನ್ನು ಏನೇನೋ ಹಾಕಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅನೇಕ ಎಣ್ಣೆಗಳನ್ನು ಹಾಕಿ ತಿದ್ದಿ ತೀಡಿ ನೀವಿ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಆದ್ರೆ ಗಂಡಸರು ಬೇರೆ ಎಣ್ಣೆಗಳನ್ನು ತಲೆಗಾಕದೇ ಬಾಯಿಗೆ ಹಾಕುವುದರಿಂದ ಗಂಡಸರು ಕೂದಲುಗಳಿಗೆ ಈ ಗತಿ ಬಂದಿದೆ ನೋಡಿ". ಅವನ ವಾದಕ್ಕೆ ನಾನು ಮರು ಉತ್ತರ ನೀಡಲಿಲ್ಲ. ಸುಮ್ಮನೇ ಮುಖ ನೋಡುತ್ತಿದ್ದೆ.

"ಅದ್ಯಾಕಣ್ಣ ನನ್ನ ಮುಖ ಹಾಗೆ ನೋಡ್ತಿಯಾ, ನಾನೇನಾದ್ರು ಹೇಳಿದ್ರಲ್ಲಿ ತಪ್ಪಿದಿಯಾ? ಈ ಭೂಮಿ ಮೇಲೆ ನಡೀತಿರೋ ವೈಯ್ಯಾರ, ನಾಜೂಕೆಲ್ಲಾ ಹೆಂಗಸರಿಂದ್ಲೇ ಆಗ್ತಿರೋದು, ಈ ಭೂಮಿ ನಡೀತಿರೋದು ಅವರಿಂದ್ಲೆ ಅಂದ್ರೆ ತಪ್ಪಾಗಿ ತಿಳಿಬೇಡಿ" ಅಂದ. ಓಹ್! ಇವತ್ತೇನೋ ವಿಭಿನ್ನವಾದ ಮೂಡ್‍ನಲ್ಲಿದ್ದಾನೆ ಅನ್ನಿಸುತ್ತೆ, ಇರಲಿ ಯಾವುದೋ ಹೊಸ ವಿಚಾರವನ್ನು ಹೇಳಲೆತ್ನಿಸುತ್ತಿದ್ದಾನೆ, ಮದ್ಯ ನಾನು ಮಾತಾಡಿದರೆ ಆವನ ಮಾತಿನ ದಾರಿ ದಿಕ್ಕು ತಪ್ಪಬಹುದು ಅಂತ ಸುಮ್ಮನೆ ಅವನ ಮುಖವನ್ನು ನೋಡುತ್ತಾ ಕುತೂಹಲದಿಂದ ಕಣ್ಣ ಹುಬ್ಬೇರಿಸಿದೆ. ಒತ್ತಾಗಿ ಬೆಳೆದಿದ್ದ ನನ್ನ ಕಣ್ಣ ಹುಬ್ಬು ಕಂಡರೆ ಅವನಿಗೆ ಇಷ್ಟ. ಅವನಿಗೆ ಅಷ್ಟೇ ಸಾಕಾಯಿತು. ಅದನ್ನು ನೀವುತ್ತಾ.....

"ಹೂ ಕಣಣ್ಣ.....ಅದನ್ನ ನಿಮಗೆ ಅರ್ಥವಾಗುವಂತೆ ಹೇಳ್ತೀನಿ ಇರಿ"....ಅಂದು ಸ್ವಲ್ಪ ಹೊರಗೆ ಅತ್ತ ಇತ್ತ ನೋಡಿದ. ದೂರದಲ್ಲಿ ಒಬ್ಬ ಮುವ್ವತೈದರ ಆಜುಬಾಜು ವಯಸ್ಸಿನ ವ್ಯಕ್ತಿ ಕಟ್ಟೆಯ ಮೇಲೆ ಕುಳಿತು ಬೀಡಿ ಸೇದುತ್ತಿದ್ದ. ತನ್ನ ಕತ್ತರಿ ಕೆಲಸ ನಿಲ್ಲಿಸಿ "ಅದೋ ಅಲ್ಲಿ ಕುಳಿತಿದ್ದಾನಲ್ಲ ಅವನನ್ನೊಮ್ಮೆ ನೋಡಿ, ಅವನು ಯಾವಾಗಲೂ ಹೀಗೆ ಅಲ್ಲಿ ಬಂದು ಕುಳಿತು ಬೀಡಿ ಸೇದುತ್ತಿರುತ್ತಾನೆ. ಅವ್ನ ಮನೇಲಿ ಅವನೆಂಡ್ತಿ, ಮತ್ತೆ ಅವನ ತಾಯಿ ಸೇರಿ ಮೂರೆ ಜನ ಇರೋದು. ಒಂದು ದಿನ ಅವನ ತಾಯಿ ಅರ್ಧ ಕೇಜಿ ಸೇಬು ತಗೊಂಬಾ ಮಗ ತಿನ್ನೋ ಆಸೆಯಾಗ್ತಿದೆ ಅಂತ ಕೇಳಿದ್ಲು. ಅದಕ್ಕೆ ಇವನು, ಓ ಆಸೆ ನೋಡು, ಸಾಯೋ ಮುದ್ಕಿ ನೀನು ಅದನ್ನ ತಿಂದು ಯಾವ ರಾಜ್ಯಭಾರ ಮಾಡಬೇಕಾಗಿದೆ, ಸುಮ್ನೆ ಬಿದ್ಕೋ" ಅಂತ ಬೈದುಬಿಟ್ಟ. ಆ ಯಮ್ಮ ನನ್ನ ಮಗ ಇಂಗಂದುಬಿಟ್ನಲ್ಲ ಅಂತ ಬೇಜಾರು ಮಾಡಿಕೊಂಡುಬಿಟ್ಲು. ಆದ್ರೆ ಅವನ ಹೆಂಡ್ತಿ ರೇಶ್ಮೆ ಸೀರೆ ಕೇಳಿದ್ದಕ್ಕೆ "ನೋಡಮ್ಮಿ ನೀನು ಕೇಳೋದು ಹೆಚ್ಚಾ, ನಾನು ತರೋದು ಹೆಚ್ಚಾ, ತಂದುಕೊಡ್ತೀನಿ ಆದ್ರೆ ಈಗಲ್ಲ ಮುಂದಿನ ಮಾರನವಮಿಗೆ ತಂದುಕೊಟ್ಟುಬಿಡ್ತೀನಿ" ಅಂತ ಹೇಳಿದ್ದಕ್ಕೆ ಅವಳು ಸುಮ್ಮನಾದಳು. ಇಲ್ಲೇ ಇರೋದು ನೋಡಿ ಯತ್ವಾಸ. ತಾಯಿಗೆ ಹೇಳಿದ ಹಾಗೆ ಹೆಂಡ್ತಿಗೆ ಹೇಳಲಿಕ್ಕೆ ಅವನಿಗೆ ಆಗಲಿಲ್ಲವಲ್ಲ, ಯಾಕಂದ್ರೆ ತಾಯಿ ಕೂದಲು ಬೆಳ್ಳಗಾಗಿ ಅವಳಂತೆ ಈಗಲೋ ಆಗಲೋ ಅಂತ ಸಾಯುವ ಸ್ಥಿತಿಗೆ ಬಂದುಬಿಟ್ಟಿದೆ, ಆದ್ರೆ ಹೆಂಡತಿ ಕೂದಲಲ್ಲಿ ವೈಯಾರ, ಯವ್ವನ ತುಂಬಿ ತುಳುಕಾಡುತ್ತಲ್ವಾ ಅದೇನೇ ಅದೇ ಸ್ವಾಮಿ ಆಕರ್ಷಣೆ" ಈ ಕೂದಲು ವಿಚಾರದಲ್ಲಿ ತಿಳಿದುಕೊಳ್ಳೋದು ಬಾಳ ಇದೆ. ಇದೇ ವಿಚಾರದಲ್ಲಿ ಸ್ವಲ್ಪ ಆಳಕ್ಕಿಳಿದು ನೋಡಿದ್ರೆ ಏನೇನೋ ತಿಳಿಯುತ್ತೆ" ಗೊತ್ತಾಣ್ಣ ಅಂದ.

ಅವನ ಮಾತಿಗೆ ನಾನು ಮರುಉತ್ತರ ನೀಡದೇ ಕೇಳಿಸಿಕೊಳ್ಳುತ್ತಿದ್ದೆ. "ಟರ್ರ್ ರ್ರ್... ಟಕ್ ಟಕ್...ಟಕ್ ಟಕ್."...ಎಂದು ಪಕ್ಕದಲ್ಲಿ ಚಿಕ್ಕ ಹುಡುಗನ ತಲೆಕೂದಲು ಕತ್ತರಿಸುತ್ತಿದ್ದ ಮಿಷಿನ್ ಶಬ್ದಮಾಡುತ್ತಿತ್ತು. ಇದ್ದಕ್ಕಿದ್ದಂತೆ ಡರರ್..ರ್......ಅಂತ ಸದ್ದು ಮಾಡಿ ಎಲ್ಲರ ಗಮನವನ್ನು ಸೆಳೆಯಿತು.

"ನೋಡಿದ್ರಾ, ಈ ನಮ್ಮ ಮಿಷಿನ್ ಏನು ಹೇಳ್ತು ನೋಡಿ," ಅಂದು ಅ ಹುಡುಗನ ಕಡೆ ತಿರುಗಿ "ರಾತ್ರಿ ಏನು ತಿಂದ್ಯೋ ಮರಿ" ಕೇಳಿದ. ಹುಡುಗ ಭಯಭಕ್ತಿಯಿಂದ ಹೆದರಿಕೊಂಡು "ಮೊಟ್ಟೆ ತಿಂದೆ" ಅಂದ "ನೋಡಿದ್ರಾ ನಾನು ಹೇಳಲಿಲ್ಲವಾ...ಇವನು ರಾತ್ರಿ ತಿಂದ ಮೊಟ್ಟೆಯಲ್ಲಿನ ಗ್ಯಾಸ್ ದೇಹದ ಮೂಲಕ ತಲೆಗೂ ಹತ್ತಿದೆ. ತಲೆಗೆ ಹತ್ತಿದ ಮೇಲೆ ಕೂದಲಿಗೂ ಬರಲೇಬೇಕಲ್ವಾ.........ಯಾವಾಗ ಅವನ ತಲೆಕೂದಲನ್ನು ನಮ್ಮ ಕಟಿಂಗ್ ಮಿಷಿನ್ ಕತ್ತರಿಸತೊಡಗಿತೊ, ಅದುವರೆಗೂ ಕೂದಲೊಳಗೆ ಕುಳಿತಿದ್ದ ಈ ಮೊಟ್ಟೆ ಗ್ಯಾಸ್ ಮಿಷಿನ್ನಿನ ಹಲ್ಲುಗಳಿಗೆ ತಾಗಿ ಡರರ್....ರ್.....ಅಂದ ಶಬ್ದ ಮಾಡಿದೆ. ಚಿಕನ್ ಮಟನ್ ತಿಂದಿದ್ದರೆ ಇನ್ನೂ ಬೇರೆ ತರ ಶಬ್ದ ಮಾಡುತ್ತೆ ಕಣಣ್ಣ," ಅಂತ ನಕ್ಕ. ಅವನ ಮಾತಿಗೆ ಅಲ್ಲಿ ಕುಳಿತಿದ್ದವರೆಲ್ಲಾ ಜೋರಾಗಿ ನಕ್ಕರು. ಬದುಕಿನ ಪ್ರತಿಯೊಂದು ವಿಚಾರಗಳಿಗೂ, ಆ ಕ್ಷಣದಲ್ಲಿ ನಡೆದ ಸನ್ನಿವೇಶಗಳಿಗೂ ತಲೆಕೂದಲನ್ನು ಲಿಂಕ್ ಮಾಡಿ ತನ್ನದೇ ಒಂದು ಶೈಲಿಯಲ್ಲಿ ವಿಚಾರವನ್ನು ಮಂಡಿಸುತ್ತಿದ್ದ ಅವನ ಚಾಕಚಕ್ಯತೆಗೆ ನಾನು ತಲೆದೂಗಬೇಕಾಯಿತು.

ಅಷ್ಟರಲ್ಲಿ ನನ್ನ ತಲೆಕೂದಲುಗಳೆಲ್ಲಾ ಅವನ ಹದ್ದುಬಸ್ತಿಗೆ ಬಂದು ಗಂಬೀರವಾಗಿರುವಂತೆ ನನಗೆ ಅನ್ನಿಸಿತು. ಬಹುಶಃ ಕಟಿಂಗ್ ಶಾಪ್‍ನಲ್ಲಿರುವವರೆಗೆ ಮಾತ್ರ ಹೀಗಿರಬಹುದು, ನಮ್ಮ ಮತ್ತೆ ನಮ್ಮ ಮನೆಯ ಕನ್ನಡಿಯ ಮುಂದೆ ನಿಂತು ತಲೆ ಬಾಚುವಾಗ ಆಡ್ನಾಡಿ ಬುದ್ದಿ ತೋರಿಸಬಹುದು ಅಂದುಕೊಳ್ಳುತ್ತಾ ಅವನಿಗೆ ಹಣಕೊಟ್ಟು ಹೊರಬರುವಾಗ ನನ್ನ ಬಟ್ಟೆಯನ್ನು ನೋಡಿಕೊಂಡೆ. ಒಂದು ಕೂದಲ ತುಣುಕು ಕೂಡ ಕಾಣಲಿಲ್ಲವಾದ್ದರಿಂದ ಮನಸ್ಸಿಗೆ ಸಮಾಧಾನವಾಗಿತ್ತು. ಆದರೂ ಎಲ್ಲೋ ಅನುಮಾನ. ನನಗೆ ಕಾಣಿಸದೇ ಇದ್ದ ಕೂದಲು ನನ್ನ ಶ್ರೀಮತಿಗೆ ಕಾಣಿಸಿದರೆ! ಅನ್ನಿಸುತ್ತಿದ್ದಂತೆ ಕುತ್ತಿಗೆ ಮೇಲೆ ಮುಲಮುಲವೆಂದಿತು. ಸಂಶಯವಾಗಿ ಮತ್ತೊಮ್ಮೆ ಒಳಗೋಗಿ ದೊಡ್ಡಕನ್ನಡಿಯಲ್ಲಿ ಕುತ್ತಿಗೆಯನ್ನು ನೋಡಿಕೊಂಡೆ. ಒಂದು ಕೂದಲು ಕೂಡ ಕಾಣಲಿಲ್ಲ. ಓಹ್! ಭ್ರಮೆಗೊಳಗಾಗಿರಬೇಕು ಅಂದುಕೊಳ್ಳುತ್ತಾ ಹೊರಬಂದು ಮನೆ ಕಡೆಗೆ ನಡೆಯುತ್ತಿದ್ದೆ. ನಿದಾನವಾಗಿ ಬುಜ, ತೋಳುಗಳು, ಬೆನ್ನಬಾಗವೆಲ್ಲಾ ಮುಲಮುಲ ನವೆ ಪ್ರಾರಂಭವಾಗಿತ್ತು.

ಲೇಖನ: ಶಿವು.ಕೆ

61 comments:

ಮನಸು said...

ಸರ್ ಚೆನ್ನಾಗಿದೆ ನಿಮ್ಮ ಹಾಗೂ ನಿಮ್ಮವರ ಸಂಭಾಷಣೆ ಹಾಗೆ ಕಟಿಂಗ್ ಶಾಪಿನವರ ಮಾತು ನೋಡಿ ಎಷ್ಟೋಂದು ತಿಳಿದುಕೊಂಡಿದ್ದಾರೆ ಹಹಹ... ಹೀಗೆ ಕಳೆದವಾರ ನಮ್ಮ ಮಗನನ್ನು ಕಟಿಂಗ್ ಶಾಪಿಗೆ ಬಿಟ್ಟು ಬಂದ್ರೆ, ಅವನು ಚೆನ್ನಾಗಿ ತುಂಡಗೆ ಕತ್ತರಿಸಿಬಿಟ್ಟಿದ್ದ... ನನ್ನವರು ಹೋಗಿ ಹೀಗಾ ಮಾಡೋದು ಮಗ ನೋಡು ಬೈತಾನೆ ಅಂತ ಹೇಳಿದ್ದೇ ಆ ಕಟಿಂಗ್ ಮಾಡಿದವರು ಮಗನನ್ನು ಕೇಳಿದ್ದಕ್ಕೆ ಇಲ್ಲವೆಂದನಂತೆ ಆಮೇಲೆ ಹೊರಗೆ ಬಂದವನು ಕಟಿಂಗ್ ತುಂಬಾನೇ ತುಂಡಾಗಿ ಮಾಡಿದ್ದಾರೆ ಎಂದು ಗೊಳೋ ಎಂದು ನನ್ನ ಎದುರು ಅಳುತ್ತಲಿದ್ದ . ಅದಕ್ಕೆ ನನ್ನವರು ಅವನ ಹತ್ತಿರ ಮಾತಾಡಿಲ್ಲ, ಈಗ ನಿನ್ನ ಹತ್ತಿರ ಹೇಳುತ್ತಾ ಇದ್ದಾನೆ ಅಂತ ಬೈತಾ ಇದ್ದರು. ಬೇರೆಯವರು ಏನು ಗುಂಡು ಹೊಡೆಸಿದ್ದೀರಾ ಎಂದರೆ ಇಲ್ಲ ತುಂಡಾಗಿ ಕಟ್ ಮಾಡಿಸಿದೆ ಬೇಸಿಗೆ ಅದಕ್ಕೆಂದು ಕಣ್ಣು ಸನ್ನೆ ಮಾಡುತ್ತಿದ್ದೆ ಆಗ ಅವರು ಗಜನಿ ಸ್ಟೈಲ್ ನಲ್ಲಿದೆ ಬಿಡು ಎಂದು ಸಮಾದಾನ ಮಾಡಿಸುತ್ತಲಿದ್ದರು.ನಿಮ್ಮ ಕಥೆ ಕೇಳಿ ನನ್ನ ಮಗನ ಕಥೆ ನೆನಪಾಯಿತು.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಹ್ಹ ಹ್ಹ ಹ್ಹ... ಚೆನ್ನಾಗಿದೆ. ನಿಜಕ್ಕೂ ವಾಸ್ತವತೆಯ ಅನಾವರಣ.

Chaithrika said...

ಹ್ಹ ಹ್ಹಾ...

sunaath said...

Delightful story, Shivu!

Subrahmanya said...

ಶಿವು ಸರ್,
ಸಕ್ಕತ್ತಾಗಿದೆ. ಹೇರ್ ಕಟ್ ವಿಷಯವನ್ನು ಎಷ್ಟು ಚೆಂದಗಾಣಿಸಿ
ಬರೆದಿದ್ದೀರಿ...ಕೊನೆಯಲ್ಲಿ ಮತ್ತೆ ಮುಲ..ಮುಲ..ನವೆ , ಎಂದಿರಲ್ಲಾ ..ಅದಂತೂ ಸೂಪರ್..,
ನನ್ನ ಬ್ಲಾಗೋದಲೊಮ್ಮೆ ಬನ್ನಿ..
ಧನ್ಯವಾದ

ಸಾಗರದಾಚೆಯ ಇಂಚರ said...

ಸರ್, ತಲೆಕೂದಲಿನ ಬಗೆಗೆ ಎಷ್ಟೊಂದು ಸಂಶೋಧನೆ ಮಾಡಿದ್ದಿರಿ
ತುಂಬಾ ಒಳ್ಳೆಯ ಲೇಖನ ಎಂದಿನಂತೆ
ನಿಮ್ಮ ಹಾಗೂ ನಿಮ್ಮವರ ಸಂಭಾಷಣೆಯೂ ಸೊಗಸಾಗಿದೆ

ಮನದಾಳದಿಂದ............ said...

ಶಿವು ಸರ್, ಚೆನ್ನಾಗಿದೆ ನಿಮ್ಮ hair cutting ಪುರಾಣ! ನಾನು ಇಲ್ಲಿನ ನಮ್ಮ ಸ್ನೇಹಿತರೊಬ್ಬರಿಗೆ ಹಿಂದಿಯಲ್ಲಿ ಅನುವಾದಿಸಿ ಹೇಳಿದೆ. ಅವರು ಹೊಟ್ಟೆ ಬಿರಿಯುವಸ್ತು ನಕ್ಕರು!
good one, keep it up! ನನ್ನ ಬ್ಲಾಗ್ ಕಡೆ ಒಮ್ಮೆ ಬಂದು ಹೋಗಿ ಸರ್......

ಸವಿಗನಸು said...

ಶಿವು ಸರ್,
ಚೆನ್ನಾಗಿದೆ ನಿಮ್ಮ ತಲೆಕೂದಲಿನ ಪುರಾಣ......
ಮಸ್ತ್ ಮಜಾ ಇತ್ತು...

ಸಾಗರಿ.. said...

ಕೂದಲಿನ ಕತೆ ನಮ್ಮನೆಯಲ್ಲೂ ಆಗುತ್ತಿದ್ದರಿಂದ hair cutting ಗೆ ಅಂತಾನೆ ಒಂದು ಶರ್ಟನ್ನು ಮೀಸಲಾಗಿಟ್ಟಿದ್ದೇನೆ. ನೀವು ಈ ಉಪಾಯವನ್ನು copy ಮಾಡ್ಬಹುದು

Ashok Uchangi said...

ಶಿವು ನಿಮ್ಮ ಕೂದಲ ಪುರಾಣ ಸೂಪರ್ ಆಗಿದೆ.ಲಘುವಾಗಿ ನಿಮ್ಮ ಅನುಭವವನ್ನು ಹೇಳಿದ್ದೀರಿ.....ನನಗಂತೂ ತುಂಬಾ ಇಷ್ಟವಾಯ್ತು...
ಅಶೋಕ ಉಚ್ಚಂಗಿ

Anonymous said...

ಚೆನ್ನಾಗಿದೆ ಕೂದಲ ಪುರಾಣ!

ಬಿಸಿಲ ಹನಿ said...

nimma kUdala purAna atyaMta tamASheyAgi suMdara nirUpaNeyoMdige baMdide. bahaLa divasavAda mEle hAsya barahavoMdannu Odisiddakke tuMbA thyAMks

ಸೀತಾರಾಮ. ಕೆ. / SITARAM.K said...

ಕಯ್ಟಿ೦ಗ ಶಾಪನಲ್ಲಿ ಇ೦ತಾ ಕತೆಗಳ ಕಾಲಕ್ಷೇಪ ಚೆನ್ನಾಗಿರುತ್ತೆ. ಒಳ್ಳೇ ಹಾಸ್ಯ ರಸಯನ ಉಣಬಡಿಸಿದಿರಿ. ಧನ್ಯವಾದಗಳು.

ವನಿತಾ / Vanitha said...

ಶಿವು, ಎಂದಿನಂತೆ ಒಳ್ಳೆಯ ವಿವರಣೆ.
ಇಲ್ಲಿ ಕಟ್ಟಿಂಗ್ ಶಾಪ್ ನಲ್ಲಿ ಬರೀ ಹುಡುಗೀರೆ ಇರೋದು. ಕೂದಲಿನ ಉದ್ದಕ್ಕೆ ತಕ್ಕಂತೆ, ಬೇಕಾದ ಸೈಜ್ ನ ಬ್ಲೇಡ್ ಹಾಕಿ ೫ ನಿಮಿಷದಲ್ಲಿ ಸರ್ ಅಂತ ಎಳ್ಕೊಂಡು ಹೋದ್ರೆ,ಕಟ್ಟಿಂಗ್ ಆಗೋಯ್ತು:(!!!!!!!

shivu.k said...

ಮನಸು ಮೇಡಮ್,

ನಿಮ್ಮ ಮಗನ ಕಟಿಂಗ್ ಕತೆಯೂ ಚೆನ್ನಾಗಿದೆ. ಮಕ್ಕಳನ್ನು ಈ ವಿಚಾರದಲ್ಲಿ ಸಮಾಧಾನಿಸುವುದು ತುಂಬಾ ಕಷ್ಟ. ನನಗೂ ಚಿಕ್ಕವಯಸ್ಸಿನಲ್ಲಿ ನನ್ನ ತಂದೆ ಮಾಡಿಸುತ್ತಿದ್ದ ಕಟಿಂಗ್ ನನಗೆ ಇಷ್ಟವಾಗುತ್ತಿರಲಿಲ್ಲ. ನನಗೆ ಕಾಲೇಜಿಗೆ ಹೋಗುವ ಹೊತ್ತಿಗೆ ಶಿವರಾಜಕುಮಾರ್ ತರ ಕಟಿಂಗ್ ಮಾಡಿಸುತ್ತಿದ್ದೆ.

ಕಟಿಂಗ್ ಕತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಅಗ್ನಿಹೋತ್ರಿ ಸರ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

umesh desai said...

ಸಲೂನಿನವ ನಮ್ಮ ತಲೆ ಮೇಲೆ ಮಾತ್ರ ಕೈ ಯಾಡಿಸೋದಿಲ್ಲ ನಮ್ಮ ಮನಸ್ಸನ್ನೂ ಮುಟ್ಟಿ ಬಿಡ್ತಾನೆ ನಾ ನೋಡಿದಹಾಗೆ ಅವರು
ವಾಚಾಳಿಗಳು ಮಾತು ತೆಗೆದ್ರೆ ನಿಲ್ಸೊದೆ ಇಲ್ಲ ಅಂದಹಾಗೆ ನಿಮ್ಮ ಗಾಯಾಳು ಶಿಷ್ಯ ಹೇಗಿದಾರೆ ಈಗ...

shivu.k said...

Chaithrika,

thanks....

shivu.k said...

ಸುನಾಥ್ ಸರ್,

ಥ್ಯಾಂಕ್ಸ್...

shivu.k said...

ಸುಬ್ರಮಣ್ಯ ಭಟ್ ಸರ್,

ನಾವು ವಿಚಾರದಲ್ಲಿ ಭ್ರಮೆಗೊಳಗಾದಾಗ ಹೀಗೆ ಆಗುತ್ತದಲ್ಲವೆ...ಕಟಿಂಗ್ ಪುರಾಣವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ
ನಿಮ್ಮ ಬ್ಲಾಗನ್ನು ಖಂಡಿತ ನೋಡುತ್ತೇನೆ..

shivu.k said...

ಗುರುಮೂರ್ತಿ ಹೆಗಡೆ ಸರ್,

ಈ ಲೇಖನದಲ್ಲಿ ನನ್ನ ಹೆಗ್ಗಳಿಕೆಯೇನು ಇಲ್ಲ. ಸುಮ್ಮನೆ ಅವನ ಮಾತನ್ನು ಕೃತಿಗಿಳಿಸಿದ್ದೇನೆ ಅಷ್ಟೇ. ನೀವು ಇರುವ ಸ್ವೀಡನ್ನಿನಲ್ಲಿ ಕಟಿಂಗ್ ಷಾಪ್ ಕತೆ ಹೇಗಿರಬಹುದು ಅನ್ನುವ ಕುತೂಹಲವಿದೆ...ಬರೆಯುತ್ತೀರಾ?

shivu.k said...

ಮನದಾಳದ ಪ್ರವೀಣ್ ಸರ್,

ನನ್ನ ಬ್ಲಾಗಿನ ಕಟಿಂಗ್ ಪುರಾಣವನ್ನು ಓದಿ ಖುಷಿಪಟ್ಟಿದ್ದಲ್ಲದೇ, ನಿಮ್ಮ ಗೆಳೆಯರಿಗೆ ಹಿಂದಿಯಲ್ಲಿ ಅನುವಾದಿಸಿ ಹೇಳಿದ್ದೀರಿ. ವಿಚಾರವನ್ನು ಹಂಚಿಕೊಳ್ಳುವುದಕ್ಕೆ ಭಾಷೆ ಮುಖ್ಯವಲ್ಲ. ಅದನ್ನು enjoy ಮಾಡುವ ಮನಸ್ಸಿರಬೇಕು ಅಷ್ಟೆ. ಸಾಧ್ಯವಾದರೆ ನನ್ನ ಹಳೆಯ ಹಾಸ್ಯ ಲೇಖನಗಳಾದ ಮಿರರ್ ಕತೆ, ಯಸವಂತಪುರ ಸಂತೆ, ಜಿರಲೆ ಕತೆ, ಟೂವೀಲರ್ ನೇಮ್ ಬೋರ್ಡಿಗೆ ನಾಯಿ ಉಚ್ಚೆ ಉಯ್ಯುವ ಕತೆ ಇತ್ಯಾದಿ ಓದಿ ನಿಮ್ಮ ಗೆಳೆಯರಿಗೂ ಹೇಳಿ ಖಂಡಿತ ಚೆನ್ನಾಗಿ ನಗುತ್ತೀರಿ...
ನಿಮ್ಮ ಸಹಕಾರಕ್ಕೆ ಧನ್ಯವಾದಗಳು.

shivu.k said...

ಮನದಾಳದ ಪ್ರವೀಣ್ ಸರ್,

ನಿಮ್ಮ ಬ್ಲಾಗನ್ನು ನೋಡುತ್ತಿರುತ್ತೇನೆ. ಮತ್ತೆ ಖಂಡಿತ ನೋಡುತ್ತೇನೆ...ಧನ್ಯವಾದಗಳು.

shivu.k said...

ಸವಿಗನಸು ಮಹೇಶ್ ಸರ್,

ಕೂದಲ ಪುರಾಣವನ್ನು ಓದಿ ಮಸ್ತ್ ಮಜ ಮಾಡಿದ್ದಕ್ಕೆ ಥ್ಯಾಂಕ್ಸ್..

shivu.k said...

ಸಾಗರಿ,

ಕಟಿಂಗ್ ಗಾಗಿ ಒಂದು ಷರ್ಟನ್ನೆ ಇಟ್ಟಿರುವುದು ಒಳ್ಳೆಯ ಉಪಾಯ. ನಾನು ಅದನ್ನು ಕಾಪಿ ಮಾಡುತ್ತೇನೆ. ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್..ನಿಮ್ಮ ಬ್ಲಾಗಿನ ಕವನಗಳು ಮತ್ತು ಪತ್ರಗಳು ಚೆನ್ನಾಗಿರುತ್ತವೆ.

shivu.k said...

ಆಶೋಕ್ ಉಚ್ಚಂಗಿ,

ಇಷ್ಟು ದಿನ ಎಲ್ಲಿ ಹೋಗಿಬಿಟ್ಟಿದ್ದೀರಿ. ಕಾಣೆಯಾಗಿದ್ದ ಕಾರಣಕ್ಕಾದರೂ ಹೊಸತು ನಿಮ್ಮ ಬ್ಲಾಗಿನಲ್ಲಿ ಬರುವುದನ್ನು ಕಾಯುತ್ತಿದ್ದೇನೆ. ಕೂದಲು ಪುರಾಣ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...

shivu.k said...

ರಂಜಿತ್ ಸರ್,

ಧನ್ಯವಾದಗಳು.

shivu.k said...

ಉದಯ ಸರ್,

ನೀವು ಮನಃಪೂರ್ತಿಯಾಗಿ ಬಾಯರಳಿಸಿ ನಗುವುದನ್ನು ನೋಡಿದ್ದೇನೆ. ನನ್ನ ಈ ಲೇಖನವನ್ನು ಓದುವಾಗ ಆಗಾಗ ನೀವು ನಕ್ಕಿರುವ ಚಿತ್ರವನ್ನು ಕಲ್ಪಿಸಿಕೊಳ್ಳಬಲ್ಲೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು.

shivu.k said...

ಸೀತಾರಾಂ ಸರ್,

ಇಂಥವು ಆನೇಕ ಪುರಾಣಗಳು ನನ್ನಲ್ಲಿವೆ ಸರ್. ನಿದಾನವಾಗಿ ಒಂದೊಂದನ್ನೇ ಬ್ಲಾಗಿನಲ್ಲಿ ಹಾಕುತ್ತೇನೆ...ಕೂದಲ ಪುರಾಣವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...
This comment has been removed by the author.
shivu.k said...

ವನಿತಾ,

ಅಲ್ಲಿ ಹುಡುಗಿಯರು ನಮಗೂ ಕಟಿಂಗ್ ಮಾಡುತ್ತಾರಾ! ನಾನಲ್ಲಿ ಕಟಿಂಗ್ ಮಾಡಿಸಿಕೊಳ್ಳುವ ಆಸೆಯಾಗುತ್ತಿದೆ. ಒಂದು ಹುಡುಗಿಯರಿಂದ ಕಟಿಂಗ್ ಮಾಡಿಸಿಕೊಳ್ಳುವ ಆನಂದದ ಜೊತೆಗೆ ಅವರ ಕತೆಗಳು ಇನ್ಯಾವ ರೀತಿ ಇರಬಹುದು ಅನ್ನುವುದನ್ನು ತಿಳಿದುಕೊಳ್ಳುವ ಆಸೆ.

[ನನ್ನ ಶ್ರೀಮತಿ ಬ್ಯೂಟಿ ಪಾರ್ಲರಿಗೆ ಹೋಗುವಾಗ ನಾನು ಕಟಿಂಗ್ ಮಾಡಿಸಿಕೊಳ್ಳಲು ಬರಲಾ, ಅಂದರೆ ನನ್ನನ್ನು ಅಲ್ಲಿಗೆ ಒಳಗೆ ಬಿಡೋಲ್ಲ ನಿಮಗೆಲ್ಲಾ ಮಾಡೋಲ್ಲ ಅನ್ನುತ್ತಾಳೆ]
ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಉಮೇಶ್ ದೇಸಾಯ್ ಸರ್,

ನೀವು ಹೇಳೋದು ನಿಜ, ಕಟಿಂಗ್ ಷಾಪಿನವನ ಬಳಿ ಸ್ವಲ್ಪ ಸಲುಗೆ ಇದ್ದರೆ ಇಂಥ ವಿಚಾರವನ್ನು ಕೆದಕಬಹುದು.
ಮತ್ತೆ ನಮ್ಮ ಹುಡುಗ ವಿಶ್ವ ಈಗ ಗುಣವಾಗುತ್ತಿದ್ದಾನೆ. ಸದ್ಯದಲ್ಲೇ ಅವನ ಪೋಟೋವನ್ನು ಬ್ಲಾಗಿಗೆ ಹಾಕುತ್ತೇನೆ..
ಧನ್ಯವಾದಗಳು.

ಮನಸಿನಮನೆಯವನು said...

'shivu.k' ಅವ್ರೆ..,

ಕೂದಲ ಪುರಾಣ ಹಾಸ್ಯಬೆರೆತ ಉತ್ತಮ ಲೇಖನ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

ಸುಧೇಶ್ ಶೆಟ್ಟಿ said...

ಚೆನ್ನಾಗಿತ್ತು ಕೂದಲ ಪುರಾಣ...

ಮೀಡಿಯಮ್ ಮತ್ತು ಟ್ರಿಮ್ ಬಗ್ಗೆ ನೀವು ಹೇಳಿದ ವಿಚಾರ ಸತ್ಯ...

ಸೋ ಎಲ್ಲದರಲ್ಲೂ ಏನಾದರೂ ಹುಡುಕುತ್ತೀರಾ! :)

ಮನಮುಕ್ತಾ said...

ಶಿವು ಅವರೆ,
ನಕ್ಕು ನಕ್ಕು ಸುಸ್ತಾಯ್ತು.

Unknown said...

ಚೆನ್ನಾಗಿದೆ ಕೂದಲು ಪುರಾಣ. ಕೂದಲು ಉದುರಿಸುವುದು ಬುದ್ಧಿವಂತರ ಕೆಲಸ ಎಂದುಕೊಳ್ಳಬಹುದು ಅಲ್ಲವಾ?

shivu.k said...

ಗುರುದೆಸೆ,

ಲೇಖನದಲ್ಲಿನ ಹಾಸ್ಯವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್..ನಿಮ್ಮ ಬ್ಲಾಗನ್ನು ಹಿಂಬಾಲಿಸುತ್ತಿದ್ದಾನಾದ್ದರಿಂದ ನೀವು ಹೊಸ ವಿಚಾರ ಬರೆದ ತಕ್ಷಣ ನನಗೆ ಗೊತ್ತಾಗುತ್ತದೆ. ಆಗ ಖಂಡಿತ ನೋಡುತ್ತೇನೆ..

shivu.k said...

ಸುಧೇಶ್,

ಕೂದಲು ಪುರಾಣ ಇಷ್ಟಪಟ್ಟಿದ್ದೀರಿ. ಮತ್ತೊಂದು ಹೊಸ ವಿಚಾರದ ಹಿಂದೆ ಬಿದ್ದಿದ್ದೇನೆ. ಶೀಘ್ರದಲ್ಲಿ ಅದನ್ನು ಬ್ಲಾಗಿಗೆ ಹಾಕುತ್ತೇನೆ. ಅಲ್ಲಿನವರೆಗೆ ನಿಮ್ಮ ಕೂದಲನ್ನು ಬಾಚಿಕೊಳ್ಳುತ್ತಿರಿ...
ಧನ್ಯವಾದಗಳು.

shivu.k said...

ಮನಮುಕ್ತ ರವರೆ,

ತಲೆಕೂದಲ ಲೇಖನಕ್ಕೆ ನಿಮ್ಮ ನಗುವನ್ನು ಮುಗಿಸಬೇಡಿ ಮುಂದಿನ ಲೇಖನದಲ್ಲಿ ಮತ್ತೊಂದು ಹೊಸ ವಿಚಾರಕ್ಕೂ ನಗು ಉಳಿಸಿಕೊಳ್ಳಿ...

ಧನ್ಯವಾದಗಳು.

shivu.k said...

ಸತ್ಯನಾರಾಯಣ ಸರ್,

ಕೂದಲು ಉದುರಿಸುವುದು ಅಂದರೆ ಬಾಲ್ಡ್ ಆಗಿರುವುದು ಅಂತ ನಿಮ್ಮ ಅರ್ಥವೇ? ಆಗಿದ್ದಲ್ಲಿ ಅವರೆಲ್ಲಾ ಬುದ್ದಿವಂತರೇ? ನನಗೂ ಗೊತ್ತಿಲ್ಲವಲ್ಲ ಸರ್. ಸದ್ಯ ಕೂದಲ ಲೇಖನವನ್ನು enjoy ಮಾಡುತ್ತಿರಿ. ಥ್ಯಾಂಕ್ಸ್..

ಜಲನಯನ said...

ಶಿವು, ಹಜಾಮನ ಕರಾಮತ್ತಿಗೆ ಯಾವ ಕೂದಲಾದರೂ ಚಕಾರ ಎತ್ತದೇ ಕೂತ್ಕೊಳ್ತಾವೆ...ಅಲ್ಲಾ..?? ನನಗೂ ಇದು ಒಂದು researchable matterrಉ. ಯಾಕಂದ್ರೆ..ಮನೆಗೆ ಬಂದು ಸ್ನಾನ ಮಾಡಿ ತಲೆ ಬಾಚಿಕೊಂಡರೆ...ಮುಳ್ಳ್ಹಂದಿ ಮುಳ್ಳಿನತರಹ ನಿತ್ಕೊಲ್ಲೋವು ಕೂದ್ಲು...ಈಗ ...ಆ ಸಮಸ್ಯೆಯಿಲ್ಲ.... ಯಾಕೆ ಗೊತ್ತಾ ಬೋಳಾಗಿರೋ ತಾರಸಿನ ಮುಚ್ಚೋಕೆ ಅಕ್ಕಪಕ್ಕದ ಕೂದಲು ಉದ್ದ ಬಿಡೋದ್ರಿಂದ.....ಹಹಹ...ಬಹಳ ಸ್ವಾರಸ್ಯಕರವಾಗಿ ಬರೆದಿದ್ದೀರ...

PARAANJAPE K.N. said...

ಬಹಳ ಚೆನ್ನಾಗಿದೆ ನಿಮ್ಮ ಚೌರ ಪುರಾಣ. ನಿಮ್ಮ ಬ್ಲಾಗ್ ಒದುತ್ತಿದ್ದ೦ತೆ ಕೈ ತಲೆಯತ್ತ ಹೋಯಿತು, ಆಯುಷ್ಕರ್ಮ ಶಾಲೆ ( ಕಟಿ೦ಗ್ ಶಾಪ್) ಗೆ ಹೋಗಿ ಕಟಾವು ಮಾಡಿಸಿ
ಕೊಳ್ಳ ಬೇಕಾ ದಷ್ಟು ಹುಲುಸಾಗಿ ಬೆಳೆದ ತಲೆಗೂದಲನ್ನು ಸವರುತ್ತ ಯೋಚನೆಗೆ ಬಿದ್ದೆ.

AntharangadaMaathugalu said...

ಶಿವು ಸಾರ್....

ಕೂದಲ ಪುರಾಣ ಚೆನ್ನಾಗಿದೆ.... ಅದು ಹೇಗೋ ಗೊತ್ತಿಲ್ಲ ಸಾರ್..., ಇಂತಹವರ ಹತ್ತಿರ ಕಥೆಗಳ (ಮಾತುಗಳ) ಸಿಕ್ಕಾಪಟ್ಟೆ stock ಇರತ್ತೆ... ನೀವು ಹಾಸ್ಯ ಮಿಶಿತವಾಗಿ ಚೆನ್ನಾಗಿ ಬರೆಯುತ್ತೀರಿ..

Unknown said...

Hihihi.. Chennaagittu nimma koodala puraana

Unknown said...

mast kudala purana sir , nanu lng agi kudalu bidoke shuru madida mele ,avarge kayam giraaki agi bittidini, na hod takshana , ye sahebra kudlu shape mado , jasti trm madbeda anta avare modlu helibidtare ;)

ವಿನುತ said...

ಕೂದಲೂ ಕಥೆಯಾಯಿತು! ನಮ್ಮೆಲ್ಲರ ವೃತ್ತಿಯೂ ನಮ್ಮ ಅಭಿವ್ಯಕ್ತಿ ಮಾಧ್ಯಮದಲ್ಲಿ ಹೇಗೆ ತನ್ನ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಒಳ್ಳೆಯ ಉದಾಹರಣೆ. ಚೆನ್ನಿದೆ ಸ್ವಾನುಭವದ ಕಥನ.

V.R.BHAT said...

ಕೆಲವೊಮ್ಮೆ ಹೇರ್ ಕಟ್ ಪ್ರಹಸನವೇ ಸರಿ, ಇಲ್ಲಿ ನಿಮ್ಮ ಪ್ರಹಸನವೂ ಚೆನ್ನಾಗಿದೆ !

Ashok Uchangi said...

ಪ್ರಿಯ ಶಿವು
ನನ್ನ ಬ್ಲಾಗ್ ನಲ್ಲಿ ಯುಗಾದಿಯ ಕಲ್ಪನೆಗೆ ಚಿತ್ರವನ್ನು ಹಾಕಿದ್ದೇನೆ...ನಿಮ್ಮೆಲ್ಲಾ ಬ್ಲಾಗ್ ಗೆಳೆಯರು ಇಲ್ಲಿಗೊಮ್ಮೆ ಭೇಟಿನೀಡಿ ಯುಗಾದಿಯ ಚಿಂತನೆಯನ್ನು,ನಿಸರ್ಗದ ವಿಸ್ಮಯವನ್ನು ಕಥೆ,ಕವಿತೆ,ಹಾಡು,ಪದಪುಂಜಗಳೊಂದಿಗೆ ಎಲ್ಲರೊಂದಿಗೂ ಹಂಚಿಕೊಳ್ಳಲು ಭೇಟಿ ನೀಡಲಿ ಎಂಬುದು ನನ್ನ ಆಕಾಂಕ್ಷೆ...ನೀವು ಬನ್ನಿ....ನಿಮ್ಮ ಸ್ನೇಹಿತರನ್ನೂ ಕರೆತನ್ನಿ..!!!!!
ಅಶೋಕ ಉಚ್ಚಂಗಿ
http://mysoremallige01.blogspot.com

shivu.k said...

ಆಜಾದ್,

ಹಜಾಮತ್ತಿನ ಕರಾಮತ್ತನ್ನು ಹೀಗೆ ಅನುಭವಿಸಿದಾಗ ನಿಜಕ್ಕೂ ಮಜವೆನಿಸುತ್ತೆ. ಈ ಹಿಂದೆ ಒಮ್ಮೆ ಒಂದು ಹಜಾಮತ್ತಿನ ಲೇಖನವನ್ನು ಬರೆದಿದ್ದೆ. ನಿಮ್ಮ ಹಜಾಮತ್ತಿನ ಅನುಭವವನ್ನು ಬಗ್ಗೆಯೂ ಬರೆಯಿರಿ...

ಧನ್ಯವಾದಗಳು.

shivu.k said...

ಪರಂಜಪೆ ಸರ್,

ನನ್ನ ಲೇಖನದಿಂದಾಗಿ ನೀವು ಯೋಚನೆಗೆ ಬಿದ್ದಿರಾ? ವೆರಿಗುಡ್. ಹಾಗಾದ್ರೆ ನಿಮ್ಮ ಹಳೆಯ ನೆನಪುಗಳು ಖಂಡಿತ ತೆರೆದುಕೊಳ್ಳುತ್ತವೆ. ನಿಮ್ಮಿಂದ ಅದನ್ನು ನಿರೀಕ್ಷಿಸುತ್ತೇನೆ..
ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,

ಬರೀ ಕಟಿಂಗ್ ಮಾಡುವವರ ಬಳಿ ಮಾತ್ರವಲ್ಲ ಎಲ್ಲರ ಬಳಿಯೂ ಈ ರೀತಿಯ ಕತೆಗಳು ಇದ್ದೇ ಇರುತ್ತವೆ. ಅವನ್ನು ನಾವು ಗಮನಿಸಬೇಕಷ್ಟೆ. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ರವಿಕಾಂತ್ ಸರ್,

ಥ್ಯಾಂಕ್ಸ್..

shivu.k said...

ಆರ್ಯ ಫಾರ್ ಯೂ,

ನೀವು ಕೂದಲು ಉದ್ದ ಬಿಟ್ಟಿರುವುದರಿಂದ ಖಂಡಿತ ಹಜಾಮನಿಗೆ ನೀವು ಒಳ್ಳೇ ಗಿರಾಕಿ ಆಗಿಬಿಟ್ಟಿದ್ದೀರಾ ಅನ್ನಿಸುತ್ತೆ...ಕೂದಲ ಪುರಾಣವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ವಿನುತಾ ಮೇಡಮ್,

ನಮ್ಮ ಅಭಿವ್ಯಕ್ತಿಗಳಲ್ಲಿ ವೃತ್ತಿಗಳಲ್ಲಿ ಖಂಡಿತ ಅನೇಕ ಕತೆಗಳಿರುತ್ತವೆ...ಅವನ್ನು ಗಮನಿಸಿ ಹೊರತೆಗೆದರೆ ತುಂಬಾ ಚೆನ್ನಾಗಿರುತ್ತೆ ಅಲ್ವಾ...
ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...
This comment has been removed by the author.
shivu.k said...

ವಿ.ಅರ್.ಭಟ್ ಸರ್,

ಕೂದಲ ಪ್ರಹಸನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಆಶೋಕ್,

ನಿಮ್ಮ ಬ್ಲಾಗನ್ನು ಖಂಡಿತ ನೋಡುತ್ತೇನೆ..ನೀವು ಮತ್ತೆ ಬ್ಲಾಗಿಂಗ್ ಮಾಡಲು ವಾಪಸು ಬಂದಿರುವುದು ಖುಷಿಯ ವಿಚಾರ...ಧನ್ಯವಾದಗಳು.

Prabhuraj Moogi said...

ಶಿವು ಸರ್,
"ಅಡ್ಡಾದಿಡ್ಡಿಯಾಗಿ ಸಂತೆಯೊಳಗಿನ ಜನಗಳಂತೆ ಹರಡಿಕೊಂಡಿದ್ದ ಕೂದಲುಗಳೆಲ್ಲಾ ಆತನ ಬಾಚಣಿಗೆ ಸ್ಪರ್ಶಕ್ಕೆ ಪ್ರಾಥಮಿಕ ಶಾಲಾ ಮಕ್ಕಳು ಪ್ರಾರ್ಥನೆಗೆ ಸಾಲಾಗಿ.." ಈ ಸಾಲುಗಳು ಬಹಳೆ ಇಷ್ಟವಾದವು... ನಿಜ್ ಅಲ್ವಾ ನಾವು ಏನಿ ತಿಪ್ಪರಲಾಗ ಹಾಕಿದ್ರೂ ಕೂತುಕೊಳ್ಳದ ಕೂದಲು ಕಟಿಂಗ ಅಂಗಡಿಯಲ್ಲಿ ಅವ ಕ್ಷೌರಿಕ್ ಹೇಳಿದಂತೇಯೇ ಕುಣಿಯುತ್ತವೆ... ನಿಮ್ಮ ಕ್ಷೌರಿಕ್ ಸುಪರ್ ಆಗಿ ಮಾತಾಡ್ತಾನ್ರಿ

ಚಿತ್ರಾ said...

ಶಿವೂ..
ಹಾ ಹಾ ಹಾ .. ಚೆನ್ನಾಗಿದೆ ನಿಮ್ಮ ಕೂದಲು ಪುರಾಣ ! ಅಂತೂ ಹೆಂಗಸರ ತಲೆ ಕೂದಲೂ ಅವರಂತೆಯೇ ನಾಜೂಕಿನದು ಎಂದಾಯ್ತು .
ಕಟಿಂಗ್ ಶಾಪ್ ನವನ ಜ್ಞಾನ ವನ್ನು ಮೆಚ್ಚಲೇ ಬೇಕು. ಕೊನೆಗೆ ನಿಮ್ಮ ತಲೆಗೂದಲೂ ಕೂಡ ಮಾತು ಕೇಳುವಂತೆ ಮಾಡಿದನಲ್ಲ !!

shivu.k said...

ಪ್ರಭು,

ನಿಮಗೂ ಮದುವೆಯಾದ್ರೆ ಇದೆಲ್ಲಾ ಅನುಭವವಾಗುತ್ತೆ. ನೀವು ಕಟಿಂಗ್ ಮಾಡಿಸಿಕೊಳ್ಳುವಾಗ ಅಲ್ಲಿನ ಚಟುವಟಿಕೆ ಗಮನಿಸಿದರೆ ನಿಮಗೂ ಹೊಸದು ಸಿಗಬಹುದು...

ಧನ್ಯವಾದಗಳು.

shivu.k said...

ಚಿತ್ರ ಮೇಡಮ್,

ನೀವು ಕೂಡ ಕೂದಲ ವಿಚಾರದಲ್ಲಿ ನಾನು ಮಾಡಿರುವ ರೀಸರ್ಚ್ ಒಪ್ಪಲೇಬೇಕು. ಏಕೆಂದರೆ ನಿಮಗೆ ಅನುಭವವಾಗಿರಬೇಕು ಅಲ್ವಾ.. ಕಟಿಂಗ್ ಷಾಪ್ ಮಾತುಗಳು ನಿಜಕ್ಕೂ ಖುಷಿ ಕೊಡುತ್ತವೆ.

ಧನ್ಯವಾದಗಳು.