ರು ನೇರವಾಗಿ ಐದಂಕಿ ಸಂಬಳಕ್ಕೆ ಕರೆದಾಗ ಅಲ್ಲಿಗೆ ಸೇರಿಕೊಂಡುಬಿಟ್ಟ.
ಮೊನ್ನೆ ತೆಗೆದಶರವಣನ ಫೋಟೋ
ಮುಂದೆ ಇದೇ ಶರವಣ ತನ್ನ ಕೆಲಸದಲ್ಲಿ ಎಷ್ಟು ಪರಿಣತಿ ಹೊಂದಿದನೆಂದರೆ, ಟ್ರಾವಲ್ ಏಜೆನ್ಸಿ ಗ್ರಾಹಕರ ಏರೋಪ್ಲೇನ್ ಟಿಕೆಟ್ ಬುಕಿಂಗ್ನಿಂದ ಹಿಡಿದು ಆ ಅಫೀಸಿನ ಎಲ್ಲಾ ಕೆಲಸಗಳನ್ನು ಮಾಡುವಷ್ಟು ಪರಿಣತನಾಗಿಬಿಟ್ಟಿದ್ದ. ಸಹಜವಾಗಿ ಅವನ ಕೆಲಸದ ಬದ್ಧತೆಯನ್ನು ಗುರುತಿಸಿ ಪ್ರಖ್ಯಾತ ತಾಮಸ್ ಕುಕ್ ಕಂಪನಿ ಮತ್ತಷ್ಟು ಹೆಚ್ಚಿನ ಸಂಬಳಕ್ಕೆ ಸೆಳೆದುಕೊಂಡಿತು. ನಡುವೆ ಎರಡು ಕೆಲಸ ಮಾಡಲಾಗುತ್ತಿಲ್ಲವೆಂದು ದಿನಪತ್ರಿಕೆ ವಿತರಣೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಪೂರ್ಣಮಟ್ಟದಲ್ಲಿ ಹೊಸ ಕೆಲಸದಲ್ಲಿ ತೊಡಗಿಸಿಕೊಂಡುಬಿಟ್ಟ. ಇಷ್ಟೇಲ್ಲಾ ಬೆಳವಣಿಗೆಯ ಬದಲಾವಣೆಗಳನ್ನು ನನಗೆ ಸಿಕ್ಕಿದಾಗಲೆಲ್ಲಾ ಹೇಳಿ ನನ್ನಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸುತ್ತಿದ್ದ. ಕೆಲಸದ ಎಲ್ಲಾ ಆಗುಹೋಗುಗಳನ್ನು ನನ್ನೊಂದಿಗೆ ಹಂಚಿಕೊಳ್ಳದಿದ್ದರೆ ಅವನಿಗೆ ಸಮಾಧಾನವಿರುತ್ತಿರಲಿಲ್ಲ. ಕಳೆದ ಆರುತಿಂಗಳಿಂದ ಇಬ್ಬರೂ ನಿತ್ಯವೂ ಮಲ್ಲೇಶ್ವರದ ಹಳ್ಳಿಮನೆ ಹೋಟಲಿನಲ್ಲಿ ಕಾಫಿಗಾಗಿ ಸಿಕ್ಕುತ್ತಿದ್ದೇವೆ. ಈ ನಡುವೆ ಒಂದು ದಿನ ನನಗೆ ಮಸ್ಕಾಟ್ ಕಂಪನಿಯ ಟ್ರಾವಲ್ ಸಿಟಿ ಎನ್ನುವ ಕಂಪನಿಯಲ್ಲಿ ಕೆಲಸ ಮಾಡಲು ಅಫರ್ ಬಂದಿದೆ ಏನು ಮಾಡಲಿ? ನನ್ನನ್ನು ಕೇಳಿದ. ಮತ್ತು ಈಗ ಬರುತ್ತಿರುವ ಸಂಪಾದನೆಗಿಂತ ಮೂರರಷ್ಟು ಗಳಿಸಬಹುದು ಅಂದ. ಆತನ ಸದ್ಯದ ಕೆಲಸ, ಅವನ ಮನೆಯಲ್ಲಿನ ಜವಾಬ್ದಾರಿಗಳು, ವಿದೇಶದ ಕಂಪನಿಯಲ್ಲಿ ಸೇರಿದರೆ ಆಗುವ ಅನುಕೂಲವನ್ನು ಪ್ರತಿಯೊಂದನ್ನು ನನ್ನೊಂದಿಗೆ ಚರ್ಚಿಸಿ ಕೊನೆಗೆ ವಿದೇಶಕ್ಕೆ ಕೆಲಸಕ್ಕೆ ಹೋಗುವುದೇ ಒಳ್ಳೆಯದು ಅಂತ ತೀರ್ಮಾನಿಸಿದ. ಅದಕ್ಕಾಗಿ ಬೇಕಾದ ಪಾಸ್ಪೋರ್ಟ್, ಇತ್ಯಾದಿಗಳನ್ನು ಮಾಡಿಸಿಕೊಂಡಿದ್ದಾನೆ. ಹತ್ತು ವರ್ಷಗಳ ಹಿಂದೆ ನನ್ನ ದಿನಪತ್ರಿಕೆ ಹಂಚುವ ಹುಡುಗನಾಗಿದ್ದವನು ಇವತ್ತು ವಿದೇಶದಲ್ಲಿ ದೊಡ್ಡ ಮೊತ್ತದ ಸಂಬಳಕ್ಕಾಗಿ ಇದೇ ಫೆಬ್ರವರಿ ತಿಂಗಳ ೨೮ನೇ ತಾರೀಖು ವಿಮಾನದಲ್ಲಿ ಮಸ್ಕಾಟ್ಗೆ ಹಾರುತ್ತಾನೆ. ಅವನಿಗೆ ಮೊದಲಿನಿಂದ ನನ್ನ ಕಡೆಯಿಂದಲೇ ಫೋಟೊ ತೆಗೆಸಿಕೊಳ್ಳಬೇಕೆಂದು ಆಸೆಯಿದ್ದರೂ ಕಾರಣಾಂತರಗಳಿಂದ ಆಗಿರಲಿಲ್ಲ. ಕಳೆದ ಭಾನುವಾರ ನನ್ನ ಕೈಯಿಂದ ಫೋಟೊ ತೆಗೆಸಿಕೊಂಡವನಿಗೆ ಏನು ಒಂಥರ ಸಮಾಧಾನ. ಅಲ್ಲಿಗೆ ತಲುಪಿದ ಮೇಲೆ ವಾರಕ್ಕೆ ಒಂದೆರಡು ಬಾರಿಯಾದರೂ ಚಾಟಿಂಗ್ ಸಿಗುತ್ತೇನೆ ಬಿಡುವಾದಾಗಲೆಲ್ಲಾ ಮೇಲ್ ಮಾಡುತ್ತೇನೆ ಅಂದಿದ್ದಾನೆ. ಆತ ನನ್ನ ದಿನಪತ್ರಿಕೆಯ ಬೀಟ್ ಬಾಯ್ ಆಗಿ, ನನಗಿಂತ ಚಿಕ್ಕವಯಸ್ಸಿನ ಗೆಳಯನಾಗಿ ಈ ಮಟ್ಟಕ್ಕೆ ತಲುಪಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಅವನಿಗೆ ನೀವು ಶುಭಾಶಯ ಹೇಳಿ.
ಇದು ಒಬ್ಬ ದಿನಪತ್ರಿಕೆ ಹುಡುಗನ ಬೆಳವಣಿಗೆಯ ಕತೆ. ಖುಷಿಯಾಗುತ್ತಲ್ವಾ! ಸ್ವಲ್ಪ ಇರಿ ಮತ್ತೊಂದು ಕತೆಯನ್ನು ಹೇಳಿಬಿಡುತ್ತೇನೆ.
ಶರವಣನಂತೆ ಮತ್ತೊಬ್ಬ ಹುಡುಗ ಮಂಜು ಕೂಡ ಬೆಳಗಿನ ಬೀಟ್ ಬಾಯ್ ಆಗಿ ಅದೇ ವರ್ಷ ಸೇರಿಕೊಂಡಿದ್ದ. ಇವನು ಕೂಡ ಶರವಣನಂತೆ ಮೈಬಗ್ಗಿಸಿ ದುಡಿಯುತ್ತಿದ್ದ. ನಾನಾಗ ಬೆಳಗಿನ ದಿನಪತ್ರಿಕೆಯಲ್ಲದೇ ಮದ್ಯಾಹ್ನ ಮುಂಬೈನಿಂದ ಬರುವ "ಹಿಂದಿ, ಗುಜರಾತಿ ಪತ್ರಿಕೆಗಳನ್ನು ವಿತರಿಸುತ್ತಿದ್ದೆ. ಈ ಮಂಜು ಬೆಳಗಿನ ಕೆಲಸವಲ್ಲದೇ ಮದ್ಯಾಹ್ನದ ಆ ಕೆಲಸಕ್ಕೂ ಬರುತ್ತಿದ್ದ. ಮೂರು ವರ್ಷಗಳಲ್ಲಿ ಮದ್ಯಾಹ್ನದ ದಿನಪತ್ರಿಕೆ ವಿತರಣೆ ನೋಡಿಕೊಳ್ಳಲಾಗದಷ್ಟು ದೊಡ್ಡದಾಗಿ ಮುಂಜಾನೆ ಪತ್ರಿಕೆ ಕೆಲಸ ದೊಡ್ಡದಾಗಿದ್ದರಿಂದ ಅದನ್ನು ಮಂಜುವಿಗೆ ಬಿಟ್ಟುಕೊಟ್ಟಿದ್ದೆ. ಮೂರು ವರ್ಷಗಳಲ್ಲಿ ಮಂಜು ಕೂಡ ವೆಂಡರ್ ಆಗಿ ಬೆಳಗಿನ ಮತ್ತು ಮಧ್ಯಾಹ್ನದ ದಿನಪತ್ರಿಕೆ ವಿತರಣೆಯನ್ನು ಚೆನ್ನಾಗಿ ನಿರ್ವಹಿಸುವ ಮಟ್ಟಕ್ಕೆ ಬೆಳೆದಿದ್ದ. ಆಗ ಅವನ ಬಳಿಗೆ ವಿಶ್ವ ಎನ್ನುವ ಹುಡುಗ ಬೀಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡ. ಬಡತನದಲ್ಲೇ ಬೆಳೆದ ಹುಡುಗನಾದ್ದರಿಂದ ದಿನಪತ್ರಿಕೆಯ ಕೆಲಸದಿಂದಲೇ ನನ್ನ ನೆಲೆ ಕಂಡುಕೊಳ್ಳುತ್ತೇನೆ ಅಂತ ತೀರ್ಮಾನಿಸಿದ್ದ. ಏಕೆಂದು ಕೇಳಿದರೆ ಮಂಜು, ಶರವಣ, ನನ್ನನ್ನು ಉದಾಹರಿಸಿ ನಿಮ್ಮಂತೆ ಆಗಬೇಕು ಅಂತ ಖುಷಿಯಿಂದ ಹೇಳುವಾಗ ಅವನಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿತ್ತು. ಆರು ತಿಂಗಳ ಹಿಂದೆ ಅವನು ಕೂಡ ಐವತ್ತು ದಿನಪತ್ರಿಕೆಗಳನ್ನು ವಿತರಿಸುವ ಸಣ್ಣ ವೆಂಡರ್ ಆಗಿದ್ದ. ಮಂಜುವಿನ ಜೊತೆ ಸೇರಿ ಮಧ್ಯಾಹ್ನದ ಹಿಂದಿ, ಗುಜರಾತಿ ದಿನಪತ್ರಿಕೆಗಳ ವಿತರಣೆಯನ್ನು ಮಾಡುತ್ತಿದ್ದ. ನನ್ನದು ಶೇಷಾದ್ರಿಪುರಂ ವಿತರಣೆ ಕೇಂದ್ರವಾದರೇ, ಮಂಜು ಮತ್ತು ವಿಶ್ವ ಇಬ್ಬರೂ ರಾಜಾಜಿನಗರದ ಕಡೆ ಏಜೆನ್ಸಿ ಪಡೆದುಕೊಂಡು ಅಲ್ಲಿ ವೆಂಡರ್ ಆಗಿದ್ದರು. ಅವರು ಉದ್ಯೋಗ ನಿಮಿತ್ತ ದೂರದಲ್ಲಿದ್ದರೂ ಪ್ರತಿಯೊಂದು ವಿಚಾರವನ್ನು ನನ್ನೊಂದಿಗೆ ಚರ್ಚಿಸುತ್ತಿದ್ದರು. ಆ ಮಟ್ಟಿಗೆ ನನ್ನ ಬಗ್ಗೆ ಅವರಿಗೆ ಆತ್ಮೀಯತೆ ಮತ್ತು ಗೌರವವಿತ್ತು.
ಹೀಗೆ ಎಲ್ಲಾ ಚೆನ್ನಾಗಿದೆ ಅನ್ನುವಾಗಲೇ ಒಂದು ಅನಿರೀಕ್ಷಿತ ಘಟನೆ ನಾಲ್ಕು ದಿನದ [ಶುಕ್ರವಾರ] ಹಿಂದೆ ನಡೆದುಹೋಯಿತು. ಇದೇ ವಿಶ್ವ ಎಂದಿನಂತೆ ಮುಂಜಾನೆ ಸೈಕಲೇರಿ ದಿನಪತ್ರಿಕೆ ಹಂಚುವ ಸಮಯದಲ್ಲಿ ವೇಗವಾಗಿ ನುಗ್ಗಿಬಂದ ಮೋಟರ್ ಬೈಕ್ ಇವನ ಮೇಲೆ ಹತ್ತಿ ದೊಡ್ಡ ಮಟ್ಟದ ಅಫಘಾತವಾಗಿಬಿಟ್ಟಿದೆ. ಅಂತ ಮುಂಜಾನೆಯಲ್ಲಿ ಯಾರೋ ಪರ್ಕಿ ಹುಡುಗರು ಮೈಮರೆತು ಇವನ ಮೇಲೆ ಬೈಕ್ ಹತ್ತಿಸಿದ್ದರಿಂದ ಮುಖದ ಅರ್ಧಬಾಗದ ಮೂಳೆಗಳೆಲ್ಲಾ ಪುಡಿಪುಡಿಯಾಗಿಬಿಟ್ಟಿವೆ. ಅಪಘಾತವಾದ ಮರುಕ್ಷಣದಲ್ಲಿ ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದಾನೆ. ಆಗ ಅಲ್ಲಿದ ಇತರ ಬೀಟ್ ಬಾಯ್ಸುಗಳು ಹತ್ತಿರದ ಅಸ್ಪತ್ರೆಗೆ ಸೇರಿಸಿ ಮನೆಗೆ ವಿಚಾರವನ್ನು ಮುಟ್ಟಿಸಿದ್ದಾರೆ. ಅಲ್ಲಿಂದ ನೇರವಾಗಿ ನಿಮ್ಹಾನ್ಸಿಗೆ ಹೋಗಿದ್ದಾರೆ. ಕೆನ್ನೆ, ಮೂಗು, ಮತ್ತು ಮುಖದ ಅರ್ಧಭಾಗ ಮೂಲೆಗಳು ಪುಡಿಪುಡಿಯಾಗಿಬಿಟ್ಟಿದ್ದರಿಂದ ನಮ್ಮಲ್ಲಿ ಆಗುವುದಿಲ್ಲವೆಂದು ನಿಮ್ಹಾನ್ಸ್ ನವರು ರಾಜಾಜಿನಗರದ ಪೆನೆಸಿಯ ಅಸ್ಪತ್ರೆಗೆ ಕಳಿಸಿದ್ದಾರೆ. ವಿಶ್ವನಿಗೆ ತಾಯಿಯಿಲ್ಲ. ತಂದೆ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಈಗ ಆಗಿರುವ ಅಪಘಾತದಿಂದಾಗಿ ದೊಡ್ದ ಮಟ್ಟದ್ ಆಪರೇಷನ್ ಮಾಡಬೇಕೆಂದು ಡಾಕ್ಟರುಗಳು ಹೇಳಿದ್ದಾರೆ. ಅದರ ಖರ್ಚು ಒಂದುವರೆ ಲಕ್ಷ ಆಗಬಹುದು ಅಂತ ಹೇಳಿದ್ದಾರೆ. ಏನಾಗುತ್ತೋ ಗೊತ್ತಿಲ್ಲ. ಮುಂದೆ ಅವನ ಭವಿಷ್ಯವೇನು? ನಾವು ವೆಂಡರುಗಳೆಲ್ಲಾ ಸ್ವಲ್ಪ ಹಣವನ್ನು ಕಲೆಹಾಕಿ ಕೊಟ್ಟಿದ್ದೇವೆ. ಅದರೂ ಅದು ಏನೇನು ಸಾಲದು. ವಿಶ್ವ ಆಸ್ಪತ್ರೆಯಲ್ಲಿ ಪ್ರಜ್ಞಾಸೂನ್ಯನಾಗಿ ಬಿದ್ದಿದ್ದರೆ ಒಂದೇ ಸಮನೆ ಬೆಳಿಗ್ಗೆಯಿಂದ ಸಂಜೆಯವರೆಗೆ ಗಿರಾಕಿಗಳಿಂದ ಫೋನ್ ಕಾಲ್ ಬರುತ್ತಲೇ ಬರುತ್ತಲೇ ಇತ್ತು. ಕಾರಣ ಇವತ್ತಿನ ದಿನಪತ್ರಿಕೆ ಬಂದಿಲ್ಲ ಏನೆಂದು?
ಸದ್ಯ ಈ ಚಿತ್ರದಲ್ಲಿ ತೋರಿಸಿರುವಂತೆ ವಿಶ್ವನ ಬಲಮುಖದ ಮೂಳೆಗಳೆಲ್ಲಾ ಪುಡಿಯಾಗಿದ್ದು ಎಲ್ಲೆಲ್ಲಿ ಅಫರೇಷನ್ ಮಾಡಬೇಕೆಂದು ಡಾಕ್ಟರುಗಳು ಮಾರ್ಕ್ ಮಾಡಿದ ಸ್ಲಿಪ್ ಸಿಕ್ಕಿದೆ. ಅದನ್ನೇ ಇಲ್ಲಿ ಬ್ಲಾಗಿನಲ್ಲಿ ಹಾಕಿದ್ದೇನೆ. ವಿಶ್ವನ ಫೋಟೊ ತೆಗೆಯುವ ಮಟ್ಟದಲ್ಲಿದ್ದರಿಂದ ಫೋಟೊ ತೆಗೆಯದೇ ಹಾಗೆ ಬಂದಿದ್ದೇನೆ...
್ಗೆಳೆಯರೆ, ಈಗ ಹೇಳಿ ಶರವಣನ ಕತೆ ಕೇಳಿ ಖುಷಿ ಪಡುವುದೋ, ವಿಶ್ವನ ಕತೆ ಕೇಳಿ......................
ಬ್ಲಾಗಿನ ಆತ್ಮೀಯ ಗೆಳೆಯರೆ, ನನ್ನ ಲೇಖನಕ್ಕೆ ನೀವು ಸ್ಪಂದಿಸಿದ ರೀತಿಯಿಂದಾಗಿ ನಾನು ಆಸ್ಪತ್ರೆ ಹೋಗಿ ಅಲ್ಲಿಂದ ವಿಶ್ವನ ಭ್ಯಾಂಕ್ ಅಕೌಂಟ್ ನಂಬರ್ ತಂದಿದ್ದೇನೆ.
ಆತನ ಬ್ಯಾಂಕಿನ ವಿವರ ಹೀಗಿದೆ.
VISHWANATHA.P
CORPORATION BANK. MALLESWARAM MAIN BRANCH. BENGALORE.
ACCOUNT NO: 0056/SB/01/037125
for RTGS/NEFT Mention Account Number As: SB01037125
Online account number: RTGS IFSC CODE: CORP0000056
ಆತ್ಮೀಯ ಬ್ಲಾಗ್ ಗೆಳೆಯರೆ, ಮೇಲೆ ತಿಳಿಸಿರುವ ಬ್ಯಾಂಕ್ ಅಕೌಂಟ್ ನಂಬರು ಅಪಘಾತವಾಗಿರುವ ವಿಶ್ವನಾಥನದು. ನಿಮ್ಮ ಸಹಾಯವನ್ನು ಅದರ ಮೂಲಕ ಮಾಡಬಹುದು.
ನಮ್ಮ ಮುಂಜಾನೆ ದಿನಪತ್ರಿಕೆ ವಿತರಣೆಯಲ್ಲಿದ್ದ ಎರಡು ಜೀವಗಳನ್ನು ಮತ್ತು ಜೀವನವನ್ನು ದೇವರು ಹೇಗೆ ವಿರುದ್ಧ ದಿಕ್ಕಿನಲ್ಲಿ ಸಾಗಿಸಿದ್ದಾನೆ ನೋಡಿ.
ಚಿತ್ರ ಮತ್ತು ಲೇಖನ.
ಶಿವು.ಕೆ
66 comments:
ohh God ,shivu sir ,aatana stiti hegide?
nimma bloginalli ondu manavi haaki ,aatana account number ellavannu vivara vaagi baredare ,namma blogina snehitarella kinchittu sahaaya madabahudalla ...
please try maadi
badukina horaatada vividha mukhagala parichaya maadisidiri.
manjuna chkitsege nammindaaguva sahaya maadutteve. vivar nIdi.
ಶಿವು ಸಾರ್...
ಬದುಕು ಎಷ್ಟು ವಿಚಿತ್ರ ಅಲ್ವಾ? ಒಬ್ಬೊಬ್ಬರ ಕಥೆ ಒಂದೊಂದು ಬೇರೆಯೇ ರೀತಿ... ಮಂಜುಗೆ ದೇವರ ಅನುಗ್ರಹ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ನೀವು ವಿವರಗಳನ್ನು ಹಾಕಿದರೆ, ನಮಗೆ ತೋಚಿದ ಸಹಾಯ ಮಾಡಬಹುದು....
ಶರವಣನ ಕತೆ ಓದಿ ಖುಶಿಯಾಯಿತು. Hard and honest work ಮಾಡಿದರೆ ಮನುಷ್ಯ ಎಲ್ಲಿ ಮುಟ್ಟಬಹುದೆಂದು ತಿಳಿಯುವಂತಿದೆ.
ಎರಡನೆಯ ಕತೆಯಿಂದ ಮನಸ್ಸು ಮುದುಡಿ ಹೋಯಿತು. ಬರಿ Hard and honest work ಸಾಲದು, ದೈವಬಲವೂ ಬೇಕು
ಎನಿಸಿತು.
ಶ್ವೇತಾ ಮೇಡಮ್,
ಸದ್ಯದ ಪರಿಸ್ಥಿತಿಯಲ್ಲಿ ವಿಶ್ವ ಮಾತನಾಡಲಾಗುತ್ತಿಲ್ಲ. ಅವನ ಬ್ಯಾಂಕ್ ಯಾವುದು ಅಂತ ತಿಳಿದುಕೊಂಡೆ. ದುರದೃಷ್ಟಕ್ಕೆ ಬ್ಯಾಂಕ್ ಅಕೌಂಟ್ ನಂಬರ್ ಅವನೇ ಹೇಳಬೇಕಾಗಿದೆ. ಒಂದೆರಡು ದಿನದಲ್ಲಿ ಆತ ಮಾತಾಡುವ ಸ್ಥಿತಿಗೆ ಬರುತ್ತಿದ್ದಂತೆ ಅದನ್ನು ತಿಳಿದುಕೊಂಡು ಬ್ಲಾಗಿನಲ್ಲಿ ಹಾಕುತ್ತೇನೆ. ಇಂಥ ವಿಚಾರದಲ್ಲಿ ನೀವು ಸ್ಪಂದಿಸಿದ ರೀತಿಗೆ ಧನ್ಯವಾದಗಳು.
ಸೀತಾರಾಮ್ ಸರ್,
ನಮ್ಮ ನಿತ್ಯದ ಮುಂಜಾನೆ ಬದುಕು ಎಲ್ಲಾ ರೀತಿಯ ಚಿತ್ರಗಳನ್ನು ತೋರಿಸುತ್ತಿದೆ. ಸಾಧ್ಯವಾದಷ್ಟು ಬೇಗ ಅವನ ಇನ್ನಿತರ ವಿವರಗಳನ್ನು ಪಡೆದುಕೊಳ್ಳಲೆತ್ನಿಸುತ್ತೇನೆ. ಖಂಡಿತ ಅವನಿಗೆ ನಮ್ಮೆಲ್ಲರ ಸಹಾಯದ ಅಗತ್ಯವಿದೆ.
ಧನ್ಯವಾದಗಳು.
ಶ್ಯಾಮಲ ಮೇಡಮ್,
ಬದುಕು ನಾವು ಅರಿಯಲಾಗದ ಒಂದು ಸತ್ಯ ಅಂತ ಇಂಥ ಪ್ರಸಂಗಗಳಿಂದ ತಿಳಿಯುತ್ತದೆ. ಅಪಘಾತವಾಗಿರುವುದು ಮಂಜನಿಗಲ್ಲ. ಅವನ ಶಿಷ್ಯನಾಗಿದ್ದ ವಿಶ್ವನಿಗೆ. ಬೇಗನೆ ಅವನ ಪರಿಸ್ಥಿತಿ ಹೇಗಿದೆ ಅಂತ ತಿಳಿದುಕೊಂಡು ಬ್ಯಾಂಕ್ ಅಕೌಂಟ್ ನಂಬರ್ ಪಡೆದುಕೊಳ್ಳುತ್ತೇನೆ.
ಧನ್ಯವಾದಗಳು.
ಸುನಾಥ್ ಸರ್,
ಶರವಣ ನನ್ನನ್ನು ಏರ್ಫೋರ್ಟಿಗೆ ಬನ್ನಿ ಅಂತಲೂ ಕರೆದಿದ್ದಾನೆ. ಅವನಿಗೆ ನನ್ನ ಮೇಲೆ ಅಭಿಮಾನವಿದೆ. ಅಂತಯೇ ನನಗೂ ಅವನ ಮೇಲೆ ಪ್ರೀತಿಯಿದೆ. ಇನ್ನು ವಿಶ್ವನ ಕತೆ ಹೀಗೆ ಆಗಬಾರದು ಅನ್ನಿಸುವುದು ಸಹಜ. ಏನು ಮಾಡುವುದು ಸರ್. ವಿಧಿಯ ಆಟ.
ಧನ್ಯವಾದಗಳು.
'shivu.k.' ಅವ್ರೆ..,
'ದೇವರ ಅನುಗ್ರಹ !' ಒಂದೆಡೆಯಾದರೆ.., 'ಕ್ರೂರವಿಧಿಯ ಅಟ್ಟಹಾಸ !' ಒಂದೆಡೆ!
Blog is Updated: http://manasinamane.blogspot.com
ಏನು ಹೇಳೋಕೂ ತೋಚ್ತಾ ಇಲ್ಲ..
ವಿಶ್ವ ಬೇಗ ಗುಣ ಹೊ೦ದಲಿ....
ಗುರುದೆಸೆ,
ದೇವರ ಆಟವನ್ನು ಬಲ್ಲವರಾರು?
ವಿಜಯಶ್ರಿ ಮೇಡಮ್,
ನಿಮ್ಮ ಸ್ಥಿತಿಯೇ ನನಗಾಗಿದ್ದು ಅವತ್ತು ಆತನನ್ನು ನೋಡಿದಾಗ. ವಿಶ್ವ ಬೇಗ ಗುಣವಾಗಲಿ ಅನ್ನುವುದೇ ನನ್ನ ಸದ್ಯದ ಆರೈಕೆ ಕೂಡ.
ಬದುಕೆಂಬ ಆಟದಿ, ಚೆನ್ದಂತೆ ಎಲ್ಲರೂ.. ಅವನಿಷ್ಟದಂತೆಯೇ ಆಡೋನು ದೇವರು..
ದೇವರು ಏನಾದರೊಂದು ನೋವು ಇಟ್ಟು ಬಿಡುತ್ತಾನೆ. ಆದಷ್ಟು ಬೇಗ ನಿಮ್ಮ ಸ್ನೇಹಿತರು ಗುಣಮುಖರಾಗಲೆಂದು ಆಶಿಸುತ್ತೇವೆ.
ಮೊದಲ ಘಟನೆಯನ್ನೋದುವಾಗ ಉಂಟಾದ ಸಂತೋಷಕ್ಕಿಂತ ಎರಡನೆಯದ್ದನ್ನು ಓದಿ ತುಂಬಾ ಬೇಸರವಾಯಿತು.
ನಮ್ಮ ಪ್ರಯತ್ನ ಎಷ್ಟೇ ಇದ್ದರೂ, ಆಡಿಸುವಾತನ ಕೈ ಚಳಕದಲ್ಲಿ ಇದೆಲ್ಲ ಆಗೋದು, ನಾವೆಲ್ಲಾ ಆತನ ಆಟದ ದಾಳ ಗಳು ಅನ್ನುವುದರಲ್ಲಿ ಎರಡು ಮಾತಿಲ್ಲ. ಎರಡು ವಿಭಿನ್ನ ವಿಚಾರಗಳನ್ನು ಹೇಳಿದ್ದೀರಿ. ಹೌದು, ನಮ್ಮ ಕೈಲಾದ ಸಹಾಯ ಮಾಡೋಣ ಅನ್ನುವುದು ಮಾನವೀಯತೆಯ ಒ೦ದು ಭಾಗ. ಅದಕ್ಕಿ೦ತ ಹೆಚ್ಚಿಗೆ ಏನನ್ನು ಹೇಳಲಾರೆ. ನಿಮ್ಮ ಕಳಕಳಿ ಮೆಚ್ಚುಗೆಗೆ ಪಾತ್ರ
ದೇವರು ಆದಷ್ಟು ಬೇಗ ನಿಮ್ಮ ಸ್ನೇಹಿತರನ್ನು ಗುಣಮುಖರಾಗಿಸಲೆಂದು ಆಶಿಸುತ್ತೇನೆ...
ಶಿವು ಅವರೆ, ಮೊನ್ನೆ ನೀವು ಚಾಟಿನಲ್ಲಿ ಸಿಕ್ಕಿದಾಗ ಎರಡು ಜೀವಗಳ ನೈಜ ಘಟನೆ ಹಾಕುವೆ ಎಂದಿರಿ. ಆದರೆ, ಒಂದು ಖುಷಿಯಾದರೆ, ಮತ್ತೊಂದು ದು:ಖದ ವಿಷಯ ಎಂದು ಓದುವಾಗ ತಿಳಿಯಿತು.
ಇದು ನಿಜಕ್ಕೂ ದು:ಖದ ವಿಚಾರ. ಆತನ ವಿವರ, ವೈದ್ಯಕೀಯ ವಿವರ, ಅಕೌಂಟ್ ನಂಬರ್ ಎಲ್ಲ ಹಾಕಿ, ಬ್ಲಾಗಿನ ಗೆಳೆಯರಿಗೆಲ್ಲ ಮನವಿಮಾಡಿಕೊಂಡರೆ, ಸ್ವಲ್ಪವಾದರೂ ಬ್ಲಾಗಿನ ಗೆಳೆಯರಿಂದ ಸಹಾಯವಾಗುತ್ತದೆ, ಎಂದು ಅನಿಸುತ್ತಿದೆ.
ಆತ ಬೇಗನೇ ಗುಣಮುಖನಾಗಲಿ ಎಂದು ಆಶಿಸುತ್ತೇನೆ.
ಶಿವು ಅವರೇ,
ಯಾರದ್ದೋ ತಪ್ಪಿಗೆ ಬೆಲೆ ತೆರುವ ಜೀವನದ ರೀತಿ ಯಾರಿಗೂ ಪ್ರೀತಿಯಲ್ಲ, ಆದರೂ ಅನುಭವಿಸಲೇ ಬೇಕಾದ ಪರಿಸ್ಥಿತಿ ಯಾರಿಗೂ ಬೇಡ. ಕಡೆಗೆ ಯಾವ ಜನ್ಮದ ಪಾಪವೋ ಎಂದು ನಿಟ್ಟುಸಿರು.. ಮಕ್ಕಳು ತಪ್ಪೆಸಗಿದರೆ ತಕ್ಷಣ ಶಿಕ್ಷಿಸಿದರೆ ಮಾತ್ರ ತಿಳಿಯತ್ತೆ ಯಾವ ತಪ್ಪಿಗೆ ಈ ಶಿಕ್ಷೆ ಎಂದು. ಆದರೆ ಭಗವಂತ ಮಾತ್ರ ಯಾವ್ದೋ ಜನ್ಮದ ತಪ್ಪಿಗೆ ಇನ್ಯಾವಾಗ್ಲೋ ಶಿಕ್ಷೆ ಕೊಟ್ರೆ ಇನ್ಮುಂದೆ ಆ ತಪ್ಪೆಸಗಬಾರ್ದು ಅಂತ ನಮಗೆ ಹೇಗೆ ತಿಳಿದೀತು? ಜಗದ ನಿಯಮ ಬದಲಿಸಲು ಸಾಧ್ಯವಿಲ್ಲ ಆದರೆ ವಿಶ್ವನಿಗಾಗಿ ಪ್ರಾರ್ಥಿಸಲಂತೂ ಸಾಧ್ಯವಿದೆ. ಆದಷ್ಟು ಬೇಗ ವಿಶ್ವ ಗುಣಮುಖನಾಗಲಿ ಎಂದು ಬೇಡುವೆ.
ಶಿವು ಅವರೇ,
ಯಾರದ್ದೋ ತಪ್ಪಿಗೆ ಬೆಲೆ ತೆರುವ ಜೀವನದ ರೀತಿ ಯಾರಿಗೂ ಪ್ರೀತಿಯಲ್ಲ, ಆದರೂ ಅನುಭವಿಸಲೇ ಬೇಕಾದ ಪರಿಸ್ಥಿತಿ ಯಾರಿಗೂ ಬೇಡ. ಕಡೆಗೆ ಯಾವ ಜನ್ಮದ ಪಾಪವೋ ಎಂದು ನಿಟ್ಟುಸಿರು.. ಮಕ್ಕಳು ತಪ್ಪೆಸಗಿದರೆ ತಕ್ಷಣ ಶಿಕ್ಷಿಸಿದರೆ ಮಾತ್ರ ತಿಳಿಯತ್ತೆ ಯಾವ ತಪ್ಪಿಗೆ ಈ ಶಿಕ್ಷೆ ಎಂದು. ಆದರೆ ಭಗವಂತ ಮಾತ್ರ ಯಾವ್ದೋ ಜನ್ಮದ ತಪ್ಪಿಗೆ ಇನ್ಯಾವಾಗ್ಲೋ ಶಿಕ್ಷೆ ಕೊಟ್ರೆ ಇನ್ಮುಂದೆ ಆ ತಪ್ಪೆಸಗಬಾರ್ದು ಅಂತ ನಮಗೆ ಹೇಗೆ ತಿಳಿದೀತು? ಜಗದ ನಿಯಮ ಬದಲಿಸಲು ಸಾಧ್ಯವಿಲ್ಲ ಆದರೆ ವಿಶ್ವನಿಗಾಗಿ ಪ್ರಾರ್ಥಿಸಲಂತೂ ಸಾಧ್ಯವಿದೆ. ಆದಷ್ಟು ಬೇಗ ವಿಶ್ವ ಗುಣಮುಖನಾಗಲಿ ಎಂದು ಬೇಡುವೆ.
ರವಿಕಾಂತ್ ಸರ್,
ಬದುಕೆಂಬ ಆಟ ಸದ್ಯ ನಮ್ಮಂಥ ವೆಂಡರುಗಳ ವಿಚಾರದಲ್ಲಿ ತುಂಬಾ ಕಷ್ಟದಲ್ಲಿದೆ ಅಲ್ವಾ..ಸರ್.
ಮನಸು ಮೇಡಮ್,
ದೇವರ ಆಟ ಹೇಗಿರುತ್ತೆ ಅಂತ ಬಲ್ಲವರಾರು? ನಮ್ಮ ಗೆಳೆಯನ ಬಗ್ಗೆ ನಿಮ್ಮ ಕಾಳಜಿ ಮತ್ತು ಆರೈಕೆಗೆ ಧನ್ಯವಾದಗಳು.
ತೇಜಸ್ವಿನಿ ಮೇಡಮ್,
ಇಲ್ಲಿ ನಡೆದ ಎರಡು ಘಟನೆಯಲ್ಲಿನ ಹುಡುಗರು ನನ್ನ ಶಿಷ್ಯರಾಗಿದ್ದವರು. ನನಗೂ ನಿಮ್ಮಂತೆ ಆಗಿದೆ...
ಪ್ರತಿಕ್ರಿಯೆಗೆ ಧನ್ಯವಾದಗಳು.
ಪರಂಜಪೆ ಸರ್,
ನಿತ್ಯ ನಮ್ಮ ಹುಡುಗರು ತಮ್ಮ ಸೈಕಲ್ಲುಗಳ ಮೇಲೆ ಪೇಪರುಗಳನ್ನು ಏರಿಕೊಂಡು ಹೋಗಿ ವಾಪಸ್ಸು ಬರುವವರೆಗೂ ನಮಗೆ ಒಂಥರ ದಿಗಿಲು ಇದ್ದೇ ಇರುತ್ತದೆ. ಅವರು ಮುಗಿಸಿ ಬಂದ ಮೇಲೆ ನಮಗೆ ಸಮಾಧಾನವಾಗುವುದು. ಅವರಿಂದಲೇ ನಾವು ಅಲ್ಲವೇ. ಅವರೇ ಮುಂದೆ ಏನೇನೋ ಆಗಬಹುದು ಅನ್ನುವುದಕ್ಕೆ ಮೊದಲನೇ ಉದಾಹರಣೆ. ಎರಡನೆಯದು ನಮ್ಮ ಕೈಮೀರಿದ್ದು.
ಧನ್ಯವಾದಗಳು.
ಸವಿಗನಸು ಮಹೇಶ್ ಸರ್,
ನಿಮ್ಮ ಆರೈಕೆಗೆ ಧನ್ಯವಾದಗಳು.
ಕ್ಷಣಚಿಂತನೆ ಚಂದ್ರು ಸರ್,
ಮೊನ್ನೆ ಛಾಟಿನಲ್ಲಿ ಸಿಕ್ಕಾಗ ಈ ವಿಚಾರವಾಗಿ ಸ್ವಲ್ಪ ಬ್ಯುಸಿಯಾಗಿದ್ದೆ. ನಮ್ಮ ವೃತ್ತಿಯಲ್ಲಿನ ವೆಂಡರುಗಳು, ಹುಡುಗರು ಅಂದರೆ ಒಂದು ರೀತಿಯ ವೃತ್ತಿ ಭಾಂದವ್ಯ, ಅಭಿಮಾನವಿದ್ದೇ ಇರುತ್ತದೆಯಲ್ಲವೆ.
ವಿಶ್ವನಿಗಾದ ಅಪಘಾತಕ್ಕೆ ನಮ್ಮ ಬ್ಲಾಗಿಗರು ಸ್ಪಂದಿಸಿರುವುದು ನೋಡಿ ಆ ಕೂಡಲೆ ಅಸ್ಪತ್ರೆಗೆ ಹೋಗಿ ವೆಂಡರ್ ವಿಶ್ವನಾಥನ ಅಪರೇಷನ್ ವಿವರದ ಚೀಟಿ, ಮತ್ತು ಬ್ಯಾಂಕ್ ಅಕೌಂಟ್ ನಂಬರ್ ತಂದು ತಕ್ಷಣ ಬ್ಲಾಗಿನಲ್ಲಿ ಹಾಕಿದೆ. ನಮ್ಮ ಬ್ಲಾಗಿಗರ ಕಿಂಚಿತ್ ಸಹಾಯದಿಂದ ಅವನ ಆರೋಗ್ಯ ಚೆನ್ನಾಗಲಿ ಅನ್ನುವುದೇ ನನ್ನ ಉದ್ದೇಶವೂ ಕೂಡ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಸಾಗರಿಯವರೇ,
ಹೊಟ್ಟೆಪಾಡಿಗಾಗಿ ನಮ್ಮ ವೆಂಡರ್ ವಿಶ್ವ ಮುಂಜಾನೆ ದಿನಪತ್ರಿಕೆ ಹಂಚುತ್ತಿದ್ದರೆ, ಎದುರಾಗಿ ಬಂದ ಮೋಟರ್ ಬೈಕ್ ಹುಡುಗರು ವೀಲಿಂಗ್ ಮಾಡುತ್ತಾ ವೇಗವಾಗಿ ಬರುತ್ತಿದ್ದರು. ಅವರಿಗೆ ಆಟ ಮತ್ತೊಬ್ಬರ ಪ್ರಾಣಕ್ಕೆ ಕುತ್ತು ತಂದಿರುವುದು ನಿಜಕ್ಕೂ ಬೇಸರದ ಸಂಗತಿ. ಭಗವಂತ ಕಾಣದಂತೆ ಈ ರೀತಿ ಶಿಕ್ಷೆ ಕೊಟ್ಟಾಗ ಏನು ಮಾಡುವುದು? ನಾವೆಲ್ಲ ಸದ್ಯ ವಿಶ್ವನ ಆರೋಗ್ಯ ಮೊದಲಿನಂತಾಗಲಿ ಅಂತ ತನು,ಮನ,ಧನ ಪೂರ್ವಕವಾಗಿ ಆರೈಸಬೇಕು.
ನಿಮ್ಮ ಪ್ರಾರ್ಥನೆಯೂ ನಮ್ಮ ವಿಶ್ವನ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ ಅಂತ ನಂಬಿದ್ದೇನೆ.
ಧನ್ಯವಾದಗಳು.
ಜೀವನ ಹೇಗೆ ಯಾರೂ ಕಲಿಸದ ಪಾಠ ಕಲಿಸುತ್ತೆ ಅನ್ನೋದಕ್ಕೆ...ನಿಮ್ಮ ಶರವಣ ಬಹಳ ಸುಂದರ ನಿದರ್ಶನ...ಹಾಗೇ..ಅವಕಾಶ ಸಿಗೋದು ಅಪರೂಪ..ಅದನ್ನು ಸದುಪಯೋಗಪಡಿಸಿಕೊಂಡವನೇ ಬುದ್ಧಿವಂತ..ಅವನಿಗೇ ಅದೃಷ್ಟಲಕ್ಷ್ಮಿ ಒಲಿಯೋದೂ ಸಹಾ..ಅಲ್ಲವಾ ಶಿವು...ಚನ್ನಾಗಿದೆ...ಎರಡು ಮುಖಗಳ ಪರಿಚಯ..
ಅಜಾದ್,
ಶರವಣನ ಬಗ್ಗೆ ಬರೆಯಬೇಕು ಅನ್ನಿಸಿದ್ದರೂ ಬರೆದಿರಲಿಲ್ಲ. ಇತ್ತೀಚೆಗೆ ಆತ ವಿದೇಶಕ್ಕೆ ಹೊರಡುವ ದಿನಗಳು ಹತ್ತಿರವಾಗುತ್ತಿದ್ದಂತೆ ನಿತ್ಯವೂ ನನ್ನನ್ನು ಬೇಟಿಯಾಗುತ್ತಿದ್ದಾನೆ. ಆದೇನು ಅಭಿಮಾನವೋ ಆತನಿಗೆ. ಆತನ ಶ್ರಮಕ್ಕೆ ನಾನು ಸದಾ ಬೆನ್ನು ತಟ್ಟುತ್ತೇನೆ. ಹಾಗೆ ಅಪಘಾತವಾಗಿರುವ ವಿಶ್ವನೂ ಶ್ರಮಜೀವಿಯೇ. ಅವನು ಹಗಲು ರಾತ್ರಿ ಕಷ್ಟಪಡುವ ವಿನಯವಂತ. ನನಗೆ ಇತ್ತೀಚೆಗೆ ಎರಡು ಮುಖಗಳ ಪರಿಚಯವೇ ಪ್ರತಿ ಬ್ಲಾಗಿನಲ್ಲೂ ಆಗುತ್ತಿದೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಬೇಗ ನಿಮ್ಮ ಸ್ನೇಹಿತರು ಗುಣಮುಖರಾಗಲಿ .
ಶಿವು ಅವರೆ...
ಒಂದು ಮುಂಜಾವಿನ ಬೆರಗು ಮತ್ತು ಬವಣೆ.
ಪರಿಚಯವೇ ಇರದ ನಾಳೆಗಳ ಬೆನ್ನುಹತ್ತಿ ಓಡಿದರೂ ಬದುಕು ಕೊಡುವ ಸುಖವಿಷ್ಟೇ ಇರಬಹುದ?
ಹೇಳದೇ ಕೇಳದೇ ಮಗ್ಗುಲು ಬದಲಾಯಿಸುವ ಸುಖ-ದುಃಖಗಳ ನಂಬಬಾರದು ಅಂತನ್ನಿಸಿಬಿಡುವುದು ಇಂಥದೇ ಕ್ಷಣಗಳಲ್ಲಿ. ಆದರೂ ಬದುಕು ಬೇಕು, ಬದುಕಬೇಕಷ್ಟೇ.
ಎಲ್ಲವೂ ಒಳಿತಾದರೆ ಸಾಕು.
God bless him. ಎಲ್ಲಾ ಒಳ್ಳೇದಾಗುತ್ತೆ. ನೀವು ಡೀಟೇಲ್ಸ್ ಕೊಟ್ಟಿದ್ದು ಒಳ್ಳೇದಾಯ್ತು. .Thank u
ಶಿವು, ಶರವಣ ವಿದೇಶಕ್ಕೆ ಹೋಗುತ್ತಿರುವುದು ಎತ್ತರಕ್ಕೇರಿರುವುದು ಸಂತಸದ ಸಂಗತಿ ಆತನಿಗೆ ಅಭಿನಂದನೆಗಳನ್ನು ತಿಳಿಸಿ. ವೆಂಡರುಗಳಿಗೆ ನೀವೇ ಒಂದು ಮಾದರಿಯಂತಿದ್ದೀರಿ. ಮುಂಜಾನೆಯ ಲೋಕದ ಬಗ್ಗೆ ಪುಸ್ತಕ ಬರೆದಿರುವಿರಿ, ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದೀರಿ ಮತ್ತು ಸಾಮಾಜಿಕ ಕಳಕಳಿ ತೋರಿಸುತ್ತಿರುವಿರಿ. ಇದು ಹೊಗಳಿಕೆಯ ಮಾತಲ್ಲ, ವಾಸ್ತವ.
ವಿಶ್ವನಿಗೆ ಬೇಗ ಗುಣಮುಖವಾಗಲಿ. ಇಂತಹ ಸ್ಥಿತಿ ಬೇರೆಯವರಿಗೆ ಬರದಿರಲಿ.
ಶಿವೂ,
ಮಾನವೀಯತೆಯ ಕಳಕಳಿ ಬಿಂಬಿಸುವ ಲೇಖನ,,,ನಿಮ್ಮ ಆಸಕ್ತಿ ಹಾಗು ಸಹಾಯದ ಪರಿ ತುಂಬ ಇಷ್ಟ ಆಯಿತು... ವಿಶ್ವ ಅದಸ್ಟು ಬೇಗ ಗುಣಮುಕನಾಗಲಿ ...
ನಮ್ಮ ಕೈನಲ್ಲಿ ಅದ ಸಹಾಯ ಮಾಡುತ್ತೇವೆ......
guru
sharavananige shubhashayagaL... manjuvige dhevaru olithu maadali.... kailadha sahaaya maaduttene...
ಬದುಕು ಬರೆದ ಕಾದಂಬರಿಯ ಎರಡು ಹಾಳೆ ಆದರೆಷ್ಟು ವ್ಯತ್ಯಾಸ ಇಬ್ಬರಿಗೂ ಹಾರೈಕೆ ಬೇಕು ಆದರೆ ಧಾಟಿ ಬೇರೆಯಾಗಿರಬೇಕು.
ಈ ಪರಿಯಾಗಿ ಬದುಕನ್ನ ಹತ್ತಿರದಿಂದ ನೋಡಿದ ನಿಮಗೇನು ಹೇಳಬೇಕು ನಿಮ್ಮ ಶಿಷ್ಯರಿಗೆ ಎಲ್ಲರ ಹಾರೈಕೆ ತಿಳಿಸಿರಿ...
ಶಿವೂ ಸರ್
ಎಂಥ ವಿಧಿ ನೋಡಿ
ಒಂದೆಡೆ ಸಂತೋಷ್ ಕೊಡುತ್ತದೆ
ಇನ್ನೊಂದೆಡೆ ದು:ಖ
ಬದುಕೇ ಹಾಗೆ ಅಲ್ಲವೇ
ಶಿವು ಸರ್, ಇದೆಂಥ ವಿಪರ್ಯಾಸ? ಒಂದೆಡೆ ನಿಮ್ಮ ಕೈ ಕೆಳಗೆ ಮೇಲೆದ ಹುಡುಗ ವಿದೇಶಕ್ಕೆ ಹೋಗುತ್ತಿದ್ದಾನೆ, ಇನ್ನೊಂದೆಡೆ ಇನ್ನೊಬ್ಬ ಹುಡುಗ ಆಸ್ಪತ್ರೆಯ ಹಾಸಿಗೆಯಲ್ಲಿ ನರಳುತ್ತಿದ್ದಾನೆ, ಇಲ್ಲಿ ಸರವಣನಿಗಾಗಿ ಸಂತೋಷಪಡಬೇಕೋ ಅಥವಾ ವಿಶ್ವನಿಗಾಗಿ ದುಃಖಿಸಬೇಕೋ? ಓ ದೇವರೇ, ವಿಧಿಯ ಆಟ ಯಾರು ಬಲ್ಲರು? ಖಂಡಿತ ಬ್ಲಾಗ್ ಸ್ನೇಹಿತರೆಲ್ಲರೂ ನಮ್ಮ ಕೈಲಾದ ಕಿರು ಸಹಾಯವನ್ನು ಮಾಡುತ್ತೇವೆ.
ಸರವಣನಿಗೆ ಶುಭವಾಗಲಿ.............
ವಿಶ್ವ ಬೇಗ ಮೊದಲಿನಂತಾಗಲಿ............
ಶಿವು ಸರ್,
ವಿಶ್ವ ಬೇಗ ಗುಣಮುಖನಾಗಿ ಶರಣನ ಹಾಗೆ ಸಾಧನೆ
ಮಾಡಲಿ ಎಂದು ಆಶಿಸುತ್ತೆನೆ.
ರಂಜಿತ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶಾಂತಲ ಮೇಡಮ್,
ನಿಮ್ಮ ಮಾತಿನಂತೆ ಬೆರಗು ಮತ್ತು ಬವಣೆ ಕೂಡ ನಮ್ಮ ಮುಂಜಾನೆ ವೃತ್ತಿಯಲ್ಲಿ ನಾಣ್ಯದ ಎರಡು ಮುಖಗಳಿದ್ದಂತೆ, ಒಂದು ದಿನ ಇದ್ದಂತೆ ಮತ್ತೊಂದು ದಿನ ಇರುವುದಿಲ್ಲ. ನೀವು ಹೇಳಿದಂತೆ ಕಷ್ಟ ಸುಖಗಳು ನಿತ್ಯ ಮಗ್ಗುಲು ಬದಲಾಯಿಸುತ್ತಿರುತ್ತವೆ. ಸೊಗಸಾದ ಅಭಿಪ್ರಾಯಕ್ಕೆ ಧನ್ಯವಾದಗಳು.
ಸುಬ್ರಮಣ್ಯ ಭಟ್ ಸರ್,
ನಿಮ್ಮ ಆರೈಕೆ ಮತ್ತು ಸಹಕಾರಕ್ಕೆ ತುಂಬಾ ಧನ್ಯವಾದಗಳು.
ಮಲ್ಲಿಕಾರ್ಜುನ್,
ನಮ್ಮ ಮುಂಜಾನೆ ಬದುಕಿನಲ್ಲಿ ಶರವಣನಂತವರು ಅನೇಕರಿದ್ದಾರೆ. ಆತ ಒಂದು ಉದಾಹರಣೆಯಷ್ಟೇ. ಹಾಗೆ ವಿಶ್ವನಿಗಾದ ಅಪಘಾತವೂ ಒಂದು ಉದಾಹರಣೆಯಷ್ಟೆ. ಇವೆರಡನ್ನು ನಾನು ಹೊರಜಗತ್ತಿಗೆ ತೋರಿಸುವ ಕೆಲಸ ಮಾಡಿದ್ದೇನೆ ಅಷ್ಟೆ. ನಿಮ್ಮ ಅರೈಕೆಗೆ ಧನ್ಯವಾದಗಳು.
ಗುರು,
ನಾನು ನನ್ನ ಕೆಲಸವನ್ನು ಮಾಡಿದ್ದೇನೆ ಅಷ್ಟೇ. ಇದರಲ್ಲಿ ನನ್ನದೇನು ಹೆಚ್ಚುಗಾರಿಕೆಯಿಲ್ಲ. ನಮ್ಮ ನಿತ್ಯದ ಆಗುಹೋಗುಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯವಲ್ಲವೇ..
ನಿಮ್ಮ ಸಹಕಾರಕ್ಕೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.
ಸುಧೇಶ್,
ಇಬ್ಬರಿಗೂ ನಿಮ್ಮ ಪ್ರತಿಕ್ರಿಯೆಯಿಂದ ಒಳಿತಾದರೇ ಅಷ್ಟೇ ಸಾಕು ಅಲ್ಲವೇ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
ದೇಸಾಯಿ ಸರ್,
ಬದುಕು ಎರಡು ಹಾಳೆಗಳು. ಅಹಾ! ಎಷ್ಟು ಚೆನ್ನಾಗಿದೆ ಅಲ್ವಾ...ನಾನು ನಿತ್ಯ ಒಂದಲ್ಲ ಒಂದು ಸಮಸ್ಯೆಯನ್ನು ನೋಡುತ್ತಿರುತ್ತೇನೆ. ಆದ್ರೆ ಖುಷಿ ವಿಚಾರಗಳು ತೀರ ಕಡಿಮೆಯೇ ಸರಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.
ಗುರುಮೂರ್ತಿ ಹೆಗಡೆ ಸರ್,
ಬದುಕು ನಿಜಕ್ಕೂ ಎರಡು ಮುಖಗಳ ನಾಣ್ಯವಿದ್ದಂತೆ ಅನ್ನುವುದು ಇಂಥ ಘಟನೆಗಳಿಂದ ಅರಿವಾಗುತ್ತದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಮನದಾಳದ ಪ್ರವೀಣ್ ಸರ್,
ಇಬ್ಬರೂ ನಮ್ಮ ಹುಡುಗರೇ ಆಗಿರುವುದರಿಂದ ಇಷ್ಟು ವಿವರವಾಗಿ ಬರೆಯಲು ಸಾಧ್ಯವಾಯಿತು. ನಮ್ಮ ಮುಂಜಾನೆ ಬದುಕಿನಲ್ಲಿ ಅನೇಕ ವಿಚಾರಗಳು ನಡೆಯುತ್ತಿರುತ್ತವೆ ಸರ್. ಹೊರಪ್ರಪಂಚಕ್ಕೆ ಗೊತ್ತಾಗುವುದಿಲ್ಲ. ನಮ್ಮ ಗ್ರಾಹಕರಿಗೆ ಗೊತ್ತಾಗುವುದು ಒಂದೇ ವಿಚಾರ "ಇವತ್ತು ನಿಮ್ಮ ಹುಡುಗ ಯಾಕೆ ಪೇಪರ್ ಹಾಕಿಲ್ಲ"ಅನ್ನುವುದಷ್ಟೇ. ಇವತ್ತು ಬಜೆಟ್ ದಿನ ನನಗೆ ಪೇಪರ್ ಬಂದಿಲ್ಲವೆಂದು ತುಂಬಾ ಪೋನ್ ಕಾಲುಗಳು ಬಂದಿವೆ.
ಮತ್ತೆ ಈ ವಿಷಯವನ್ನು ಪತ್ರಿಕೆಗೆ ಕೊಟ್ಟಿದ್ದರೂ ಯಾವ ಪತ್ರಿಕೆಯೂ ಇದನ್ನು ಪ್ರಕಟಿಸುವ ಮನಸ್ಸು ಮಾಡಿಲ್ಲ.
ಅವರಿಗೆ ಇದು ಹಾಟ್ ನ್ಯೂಸ್ ಅಲ್ಲವಲ್ಲ....
ಅವರೆಲ್ಲರಿಗೂ ನಮ್ಮ ಸಚಿನ್ ದ್ವಿಶತಕ, ಶಾರುಖ್ ಸಿನಿಮಾ, ಯಡಿಯೂರಪ್ಪನವರ ಹುಟ್ಟುಹಬ್ಬ ಇಂಥವೇ ಬೇಕು. ನಾವೆಲ್ಲ ದಿನಪತ್ರಿಕೆ ಹಂಚುವವರು, ವ್ಯಾನ್ ಡ್ರೈವರುಗಳು, ಒಂದು ದಿನ ಫೂರ್ತಿಯಾಗಿ ಸ್ಟ್ರೈಕು ಮಾಡಿಬಿಟ್ಟರೆ, ಅಥವ ಚಕ್ಕರ್ ಹೊಡೆದುಬಿಟ್ಟರೆ......ಬೆಂಗೂರಿನ ಯಾವ ಮನೆಗೂ ಪತ್ರಿಕೆ ತಲುಪುವುದಿಲ್ಲ. ಅಲ್ಲವೇ.......
ಅವರಿಗೆ ಹೋಲಿಸಿದರೆ ನಮ್ಮ ಗೆಳೆಯರು ಎಷ್ಟೋ ಮೇಲಲ್ಲವೇ..
ಈ ಲೇಖನಕ್ಕೆ ನಮ್ಮ ಬ್ಲಾಗ್ ಗೆಳೆಯರು ಮಾಡುತ್ತಿರುವ ಕಿರುಸಹಾಯಕ್ಕೆ ನನ್ನ ಕಡೆಯಿಂದ ಎಷ್ಟು ಧನ್ಯವಾದಗಳನ್ನು ತಿಳಿಸಿದರು ಕಡಿಮೆಯೇ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಸಲೀಂ,
ನನ್ನ ಬ್ಲಾಗಿನ ಲೇಖನವನ್ನು ಓದಿ ಫೋನಿನಲ್ಲಿ ನಿಮ್ಮ ಸಹಕಾರವನ್ನು ತಿಳಿಸಿದಿರಿ. ಅದಕ್ಕೆ ತುಂಬಾ ಧನ್ಯವಾದಗಳು.
ವಿಶ್ವ ಬೇಗನೆ ಗುಣಮುಖನಾಗಿ ಮೊದಲಿನ ಸ್ಥಿತಿಗೆ ಮರಳಲಿ.
ಶರವಣನಿಗೆ ಶುಭಾಶಯಗಳು.
ಎರಡೂ ಕಥೆ ಎಷ್ಟು ವಿಭಿನ್ನ್ ಅಲ್ವಾ... ವಿಧಿ ಅನ್ನೊದು ಏನೊ ವಿಚಿತ್ರ, ಏನೇನೊ ಮಾಡಿಬಿಡುತ್ತದೆ...
ಶಿವೂ ಸರ್,
ದ್ವಂದಕ್ಕೆ ಸಿಲುಕಿಸಿದಿರಿ ಸರ್.... ಮೊದಲನೇ ಭಾಗ ಓದುತ್ತಾ ಖುಷಿಯಾಗಿತ್ತು...... ಎರಡನೇ ಭಾಗ ತುಂಬಾ ಬೇಸರವಾಯ್ತು............ ವಿಶ್ವನ ವಿವರ ಕೊಟ್ಟಿದ್ದೀರಿ.......... ಖಂಡಿತ ನಮಗೆ ಎಷ್ಟು ಆಗತ್ತೋ ಅಷ್ಟು ಸಹಾಯ ಮಾಡೋಣ...... ಉಳಿದದ್ದು ... ದೇವರಿಗೆ ಬಿಡೋಣ..... ಮುಂದೊಂದು ದಿನ ಅವನು ಗುಣವಾದ ನಂತರದ ಫೋಟೋ, ಖಂಡಿತಬ್ಲಾಗ್ ನಲ್ಲಿ ಹಾಕಿ.....
ಶಿವೂ,
ಬದುಕಿನ ಎರಡು ಚಿತ್ರಗಳನ್ನು ನಮ್ಮೆದುರು ಇಟ್ಟಿದ್ದೀರಿ . ಒಂದೆಡೆ ಉನ್ನತಿಯತ್ತ ಉತ್ತಮ ಪಯಣ , ಇನ್ನೊಂದು ಯಾರದೋ ತಪ್ಪಿಗೆ ಬೆಲೆ ತೆರಬೇಕಾದ ಅಸಹಾಯಕತೆ .
ಏನು ಹೇಳುವುದೋ ತಿಳಿಯದು ! ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ನನ್ನ ಪ್ರಾರ್ಥನೆ !
ಶಿವು,
ಶರವಣನಿಗೆ ಅಭಿನಂದನೆಗಳನ್ನು ತಿಳಿಸಿ.
& ವಿಶ್ವ ಬೇಗ ಗುಣಮುಖವಾಗಲಿ.
Such unpredictable life!
ಶಿವೂ ಅವರೇ,
ಯಾಕೋ ವಿಶ್ವನಾಥ್ ಅವರ ಅಕೌಂಟ್ ನಂಬರ್ ನಂಗೆ ಸ್ವಲ್ಪ confusing ಇದೆ. ನಾನು ಆನ್ಲೈನ್ transfer ಮಾಡೋಣ ಅಂತಿದೀನಿ, RTGS/NFT ಮುಂದೆ ಬರ್ದಿರೋದನ್ನ ಅಕೌಂಟ್ ನಂಬರ್ ಅಂತ ಬಳಸಿಕೊಳ್ಳಬಹುದ?
ಮನಮುಕ್ತರವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರಭು,
ಎರಡು ವಿಭಿನ್ನವೆನಿಸಿದರೂ ಚಲನಚಿತ್ರದಂತೆ ಕಣ್ಣೆದುರೇ ನಡೆದುಬಿಡುತ್ತದಲ್ಲ...ಪ್ರತಿಕ್ರಿಯೆಗೆ ಧನ್ಯವಾದಗಳು.
ಚಿತ್ರ ಮೇಡಮ್,
ಬದುಕಿನಲ್ಲಿ ಏಳುಬೀಳುಗಳು ಹೀಗೆ ಅಲ್ಲವೇ ಆಗುವುದು. ದೇವರ ಇಚ್ಛೆ ಹೇಗಿರುತ್ತದೋ ಹಾಗೆ ತಾನೆ ನಡೆದುತೀರುವುದು...ನಿಮ್ಮೆಲ್ಲರ ಹಾರೈಕೆಯಿಂದಾಗಿ ವಿಶ್ವ ಸದ್ಯ ಗುಣಮುಖನಾಗುತ್ತಿದ್ದಾನೆ...ಅದೇ ಖುಷಿ ವಿಚಾರ. ಮುಂದೆ ಅವನ ಫೋಟೊ ಹಾಕಲು ಪ್ರಯತ್ನಿಸುತ್ತೇನೆ..
ಧನ್ಯವಾದಗಳು.
ವನಿತಾ,
ನಿಮ್ಮ ಹಾರೈಕೆ ಮತ್ತು ಅಭಿನಂದನೆಗಳಿಗೆ ಧನ್ಯವಾದಗಳು.
ಭಾಶೇರವರೆ,
ಧನ್ಯವಾದಗಳು.
ಗೀತಾ ಮೇಡಮ್,
ವಿಶ್ವನಾಥನ ಆಕೌಂಟ್ ನಂಬರ್ ಬಗ್ಗೆ ಅನೇಕರಿಗೆ ಗೊಂದಲವಿದೆ. ಈಗ ನೀವು ನೇರವಾಗಿ ಬೇರೆ ಕಾರ್ಪೋರೇಷನ್ ಬ್ಯಾಂಕಿನಿಂದ ಹಣ ಹಾಕಬೇಕಾದರೆ, 0056/SB/01/037125 ಈ ನಂಬರನ್ನು ನೇರವಾಗಿ ಬಳಸಬಹುದು.
ಇನ್ನಿತರ ಬ್ಯಾಂಕಿನಿಂದ ಹಣ ಕಳಿಸಬೇಕಾದರೆ ಮೊದಲು
Online account number: RTGS IFSC CODE: CORP0000056 ಮಾಡಬೇಕು. 0056 ಅಂದರೆ ಮಲ್ಲೇಶ್ವರಂ ಕಾರ್ಫೋರೇಷನ್ ಬ್ಯಾಂಕಿನ ಕೋಡ್ ನಂಬರ್. ನಂತರ ಕಷ್ಟಮರ್ ನಂಬರ್ ಬಂದಾಗ ;
"SB01037125" ಈ ನಂಬರಿಗೆ ಹಣ ಹಾಕಬಹುದು.
[ನಾನು ಇದನ್ನು ಬ್ಯಾಂಕಿನಲ್ಲಿ ವಿಚಾರಿಸಿಕೊಂಡು ಬಂದಿದ್ದೇನೆ..]
ಧನ್ಯವಾದಗಳು.
ಶಿವು.ಕೆ
ಇವು ಕೇವಲ ಮುಂಜಾವಿನ ಸತ್ಯ ಕಥೆಗಳಲ್ಲ, ಜೀವನ ದರ್ಶನ. ಇಬ್ಬರಿಗೂ ಶುಭಹಾರೈಕೆಗಳು, ಅವರವರ ಜೀವನ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿ. ಬ್ಯಾಂಕ್ ಅಕೌಂಟ್ ವಿವರಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
ವಿನುತಾ,
ನಿಮ್ಮ ಅಭಿಪ್ರಾಯ ನಿಜ. ನಿಮ್ಮ ಹಾರೈಕೆಗಳನ್ನು ತಿಳಿಸುತ್ತೇನೆ. ವಿಶ್ವನಿಗೆ ಸಹಾಯ ಮಾಡುವ ಮನಸುಳ್ಳ ನಿಮಗೆ ಧನ್ಯವಾದಗಳು.
Post a Comment