Monday, February 15, 2010

ಕೆಲವು ಖುಷಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ


ಪ್ರತಿವರ್ಷದಂತೆ 2010 ವರ್ಷವನ್ನು ಉತ್ಸಾಹದಿಂದ ಪ್ರಾರಂಭಿಸಿದ್ದೆ. ಎಂದಿನಂತೆ ನನ್ನ ದಿನಪತ್ರಿಕೆ ಕೆಲಸ ಇದ್ದರೂ ಮೊದಲಿಗಿಂತ ಸುಲಭವೆನಿಸಿ ದಿನದ ಸಮಯದಲ್ಲಿ ಮೊದಲ ವಾರ ಆರು ತಾಸು, ಇನ್ನುಳಿದ ಮೂರುವಾರಗಳಲ್ಲಿ ಕೇವಲ ಮೂರು ತಾಸು ಮಾತ್ರ ಬೇಡುತ್ತಾ ನನ್ನನ್ನು ಮತ್ತು ನನ್ನ ಕುಟುಂಬವನ್ನು ಸಾಕುತ್ತಾ ಉಳಿದ ಸಮಯವನ್ನು ಏನಾದರೂ ಮಾಡಿಕೊ ಅಂತ ನನಗೆ ಪ್ರತಿದಿನ ದಾನ ಮಾಡುತ್ತಿದೆ. ಅದಕ್ಕೆ ನನ್ನ ಮೊದಲ ಥ್ಯಾಂಕ್ಸ್.


ಕಳೆದ ಸೆಪ್ಟಂಬರ್ ನಾಲ್ಕು "ವೆಂಡರ್ಸ್ ಡೇ" ದಿನ. ಅವತ್ತು ನಾನು ಮಾಡಿಕೊಂಡ ಕಮಿಟ್‍ಮೆಂಟ್ ಪರಿಣಾಮವೋ ಏನೋ ಅಂದಿನಿಂದ ಕೈತುಂಬಾ ಮತ್ತು ಕ್ಯಾಮೆರಾ ತುಂಬಾ ಕಮರ್ಶಿಯಲ್ ಫೋಟೊಗ್ರಫಿ ಕೆಲಸ ಬರುತ್ತಿದ್ದು, ಮುಂದಿನ ಮೇ ತಿಂಗಳವರೆಗೆ ಅನೇಕ ಮದುವೆ, ಇನ್ನಿತರ ಕಾರ್ಯಕ್ರಮಗಳು ನನ್ನ ಪ್ರೋಗ್ರಾಂ ಡೈರಿಯಲ್ಲಿ ದಿನಾಂಕಗಳು ತುಂಬಿವೆ. ಇದೆಲ್ಲಾ ಹೊಟ್ಟಿಪಾಡಿನ ವಿಚಾರವಾಯಿತು.


ಇನ್ನೂ ಹವ್ಯಾಸಿ ಛಾಯಾಚಿತ್ರಗಳ ವಿಚಾರದಲ್ಲಿ 2010ರ ಪ್ರಾರಂಭದಲ್ಲಿಯೇ ನನಗೆ ಬಂಪರ್. ಮೊದಲಿಗೆ ರಾಷ್ಟ್ರಮಟ್ಟದ ಜೋದ್‍ಪುರ ಫೋಟೋಗ್ರಫಿ ಸ್ಪರ್ಧೆಯಲ್ಲಿ ಎರಡು ಅರ್ಹತ ಪತ್ರಗಳು ಸೇರಿದಂತೆ ಆರುಚಿತ್ರಗಳು ಪ್ರದರ್ಶನಕ್ಕೆ ಆಯ್ಕೆ, ಕೊಲ್ಕತ್ತದ "ನಾರ್ತ್ ಬೆಂಗಾಲ್" ಫೋಟೋಗ್ರಫಿ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಮತ್ತು ಒಂದು ಸರ್ಟಿಫಿಕೆಟ್ ಅಪ್ ಮೆರಿಟ್, ಬೆಂಗಳೂರಿನ ಯೂತ್ ಫೋಟೊಗ್ರಫಿ ಸೊಸೈಟಿಯವರ 31ನೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಪ್ಪುಬಿಳುಪಿಗೆ ಮೊದಲ ಬಹುಮಾನ ಮತ್ತು ಒಂದು ಸರ್ಟಿಫಿಕೆಟ್ ಅಪ್ ಮೆರಿಟ್, ಹೌರಾದ "ಸೊಸೈಟಿ ಅಪ್ ಫೋಟೊಗ್ರಫರ್ಸ್" ನಡೆಸಿದ ೪೨ನೇ ಅಂತರರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆಯಲ್ಲಿ "ಹಾನರಬಲ್ ಮೆನ್ಷನ್" ಬಹುಮಾನಗಳು ಸಿಕ್ಕಿದೆ. ಈ ಬಹುಮಾನಗಳು ಮತ್ತು ಪ್ರದರ್ಶನಕ್ಕೆ ಆಯ್ಕೆಯಾದ ಚಿತ್ರಗಳಿಗೆ ಒಂದಷ್ಟು ಅಂಕಗಳು ದೊರೆಯುತ್ತವೆ.

ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಹೆಚ್ಚು ಬಹುಮಾನ ಪಡೆದ ಚಿತ್ರ.



ಹೀಗೆ ನನ್ನಂತೆ ವರ್ಷಪೂರ್ತಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸಾವಿರಾರು ಹವ್ಯಾಸಿ ಛಾಯಾಗ್ರಾಹಕರ ಅಂಕಗಳನ್ನು ಗಮನಿಸಿ ಭಾರತ ಪರಮೋಚ್ಚ ಫೋಟೋಗ್ರಫಿ ಸಂಸ್ಥೆಯಾದ "ಫೆಡರೇಷನ್ ಅಫ್ ಇಂಡಿಯನ್ ಫೋಟೊಗ್ರಫಿ" Top ten Ranking ನೀಡುತ್ತದೆ. ಕಳೆದ ಭಾರಿ [2009] ನನಗೆ ದ್ವಿತೀಯ Ranking ಸಿಕ್ಕಿತ್ತು. ಈ ಭಾರಿ ಯಾವ Rank ಸಿಗುತ್ತದೋ ಮೇ ತಿಂಗಳವರೆಗೆ ಕಾದು ನೋಡಬೇಕು.
ಮತ್ತೆ ನನ್ನ "ವೆಂಡರ್ ಕಣ್ಣು" ಎನ್ನುವ ಪುಟ್ಟ ಪುಸ್ತಕ ನವೆಂಬರ್ ೧೫ರಂದು ಬಿಡುಗಡೆಯಾಗಿದ್ದು ಜನವರಿ ೨೦ರ ಹೊತ್ತಿಗೆ ಮೊದಲ ಸಾವಿರ ಪ್ರತಿಗಳು ಖರ್ಚಾಗಿಬಿಟ್ಟಿದ್ದು ಎರಡನೇ ಮುದ್ರಣವಾಗುತ್ತಿದೆ. ನನ್ನ ಅನ್ನದಾತರಾದ ದಿನಪತ್ರಿಕೆ ಕೊಳ್ಳುವ ಗ್ರಾಹಕರು ನಾಲ್ಕುನೂರಕ್ಕೂ ಹೆಚ್ಚು "ವೆಂಡರ್ ಕಣ್ಣು" ಪುಸ್ತಕವನ್ನು ಕೊಂಡು ಓದಿದ್ದು ನನಗೆ ಹೆಚ್ಚು ಖುಷಿಯ ವಿಚಾರ. ಡಿಸೆಂಬರ್, ಜನವರಿ, ಪೆಬ್ರವರಿ ತಿಂಗಳ ಮೊದಲ ಹತ್ತು ದಿನಗಳಲ್ಲಿ ನಾನು ನನ್ನ ಗ್ರಾಹಕರ ಬಳಿ ಸರಿಯಾಗಿ ಹಣ ವಸೂಲಿ ಮಾಡಲಾಗದಿದ್ದುದ್ದಕ್ಕೆ ನನ್ನ "ವೆಂಡರ್ ಕಣ್ಣು ಪುಸ್ತಕವೇ ಕಾರಣವೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಿಜಕ್ಕೂ ನಡೆದಿದ್ದೇನೆಂದರೆ, ಕಳೆದ ಎರಡು ತಿಂಗಳಲ್ಲಿ ವೆಂಡರ್ ಕಣ್ಣು ಪುಸ್ತಕವನ್ನು ಓದಿದ ಪ್ರತಿಯೊಬ್ಬ ಗ್ರಾಹಕರಲ್ಲಿ ನನ್ನನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದ್ದಾರೆ. ನಾನು ಹಣ ವಸೂಲಿಗೆ ಹೋದರೆ ಕನಿಷ್ಟಪಕ್ಷ ಹತ್ತು ನಿಮಿಷ ಪುಸ್ತಕದ ಬಗ್ಗೆ ಮಾತಾಡುತ್ತಾರೆ. ಅವರ ಅಭಿಪ್ರಾಯ ತಿಳಿಸುತ್ತಾರೆ. ಕೆಲವರು ಪುಸ್ತಕದಿಂದ ಬದಲಾಗಿರುವ ವಿಚಾರವನ್ನು ಹೇಳುತ್ತಾರೆ. ಮತ್ತಷ್ಟು ಹೊಸವಿಚಾರಗಳನ್ನು ಬರೆಯಲು ಪ್ರೋತ್ಸಾಹಿಸುತ್ತಾರೆ. ಮೊದಲಿಗಿಂತ ಹೆಚ್ಚು ತಾಳ್ಮೆಯಿಂದ ಗೌರವದಿಂದ, ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯಿಂದ ಮಾತಾಡಿಸುತ್ತಾರೆ. ಹಣವಸೂಲಿಗೆ ಅಂತ ಹೋಗಿದ್ದರೂ ಪುಸ್ತಕದ ವಿಚಾರವೇ ಮಾತಾಗಿ ಹಣವಸೂಲಿ ಈ ರೀತಿಯಾಗಿ ತಡವಾಗಿತ್ತು. ಮೊದಲು ನಮ್ಮ ಬಗ್ಗೆ ಅವರಿಗಿದ್ದ ಕಲ್ಪನೆಯೇ ಬದಲಾಗಿ ನಮ್ಮನ್ನು ತುಂಬು ಪ್ರೀತಿಯಿಂದ ಮಾತಾಡಿಸುತ್ತಾರೆ. ನಮ್ಮ ಕೆಲಸದ ಬಗ್ಗೆ ಗೌರವವಿದೆ.

ವೆಂಡರ್ ಕಣ್ಣು ಮುಖಪುಟ ಮೊದಲು ಹೀಗಿತ್ತು.

ಸದ್ಯ "ವೆಂಡರ್ ಕಣ್ಣು ಎಫೆಕ್ಟ್" ಪ್ರತಿಯೊಬ್ಬ ಗ್ರಾಹಕರಲ್ಲಿ, ಪತ್ರಿಕಾ ಪ್ರತಿನಿಧಿಗಳಲ್ಲಿ, ನನ್ನಂಥ ನೂರಾರು ವೆಂಡರುಗಳಲ್ಲಿ ಆಗಿರುವ ಬದಲಾವಣೆಯನ್ನು ಬರೆದರೆ ಅದು ಮತ್ತೆ ಹತ್ತಾರು ಪುಟಗಳ ಲೇಖನವಾಗಬಹುದು. ಅದನ್ನು ಖಂಡಿತ ಮುಂದೆ ಬರೆಯುತ್ತೇನೆ. ಮತ್ತೆ ಪುಸ್ತಕದಲ್ಲಿ ಪಾತ್ರಧಾರಿಗಳಾದ ಕೆಲವು ಗ್ರಾಹಕರು ಇದೇ ಪುಸ್ತಕದಲ್ಲಿ ತಮ್ಮದೇ ಕತೆಯನ್ನು ಓದಿದ ಮೇಲೆ ಆಗಿರುವ ಪರಿಣಾಮವನ್ನು ಖಂಡಿತ ಬರೆಯಲೇ ಬೇಕೇನಿಸಿದೆ.
ಇದೆಲ್ಲಾ ಸಾಧ್ಯವಾಗಿದ್ದು ನನ್ನ "ಛಾಯಾಕನ್ನಡಿ" ಬ್ಲಾಗಿನಿಂದಲ್ಲವೇ! ಅದನ್ನು ಪ್ರಾರಂಭಿಸಿದ್ದು 2008ರ ಆಗಷ್ಟ್ ತಿಂಗಳಲ್ಲಿ ಆದರೂ ನಾನು ಹಿಟ್ ಕೌಂಟರ್ ಸೆಟ್ ಮಾಡಿಕೊಂಡಿರಲಿಲ್ಲ. ಈಗ್ಗೆ ಸರಿಯಾಗಿ ಒಂದು ವರ್ಷದ ಹಿಂದೆ ಫೆಬ್ರವರಿ 14ರ ರ ಪ್ರೇಮಿಗಳ ದಿನದಂದೂ ಇಷ್ಟಪಟ್ಟು ಬರೆದ ಈ ದೇಹದಿಂದ ದೂರನಾದೆ ಏಕೆ ಆತ್ಮನೇ....ಈ ಸಾವು ನ್ಯಾಯವೇ ? ಪುಟ್ಟಕತೆಯನ್ನು ಬ್ಲಾಗಿಗೆ ಹಾಕಿದ್ದೆ. ಅವತ್ತೇ ನನ್ನ ಹಿಟ್ ಕೌಂಟರ್ ಅನ್ನು ಬ್ಲಾಗಿನಲ್ಲಿ ಸೆಟ್ ಮಾಡಿಕೊಂಡಿದ್ದೆ.


ಇತ್ತೀಚಿನ ಹೊಸ ಲೇಖನಗಳಲ್ಲಿ ಅತಿಹೆಚ್ಚು ಹಿಟ್ ಕೌಂಟರ್ ಪಡೆದುಕೊಂಡಿದ್ದು "ಮುನ್ನಾರು ಪ್ರವಾಸ ಸರಣಿ" ಮತ್ತು ಎರಡು ಭಾಗವಾಗಿ ಬಂದ "ರಾಷ್ಟ್ರಮಟ್ಟದ ಛಾಯಾಚಿತ್ರಗಳು" ಹಾಗೂ "ಅವತಾರ್" ಸಿನಿಮಾ ಬರಹ. ಮುನ್ನಾರು ಸರಣಿ ಲೇಖನಕ್ಕೆ ಮೊದಲು "18000" ಸಾವಿರದಷ್ಟಿದ್ದ ಹಿಟ್ ಕೌಂಟರ್ ಅವತಾರ್ ಲೇಖನದ ಹೊತ್ತಿಗೆ "25000" ಮುಟ್ಟಿದೆ. ಈ ಫೆಬ್ರವರಿ 16-2-2010ರ [ಒಂದು ವರ್ಷ ಕಳೆದು ಎರಡು ದಿನ] ಹೊತ್ತಿಗೆ ಸರಿಯಾಗಿ ನನ್ನ ಛಾಯಾಕನ್ನಡಿ ಬ್ಲಾಗ್ ವಿಶ್ವದಾದ್ಯಂತ "25000" ಬಾರಿ ತೆರೆದುಕೊಂಡಿದೆ.
ಛಾಯಾಕನ್ನಡಿ ಬ್ಲಾಗ್‍ನಿಂದಾಗಿ ವಿಶ್ವದಾದ್ಯಂತ ಗೆಳೆಯರು ಸಿಕ್ಕಿದ್ದಾರೆ. ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ಗೆಳೆಯರು ಕೈಬೆರಳುಗಳ ತುದಿಗಳು ಕೀಬೋರ್ಡ್ ಒತ್ತುತ್ತಿದ್ದಂತೆ ಸಿಕ್ಕಿಬಿಡುತ್ತಾರೆ. ಜೊತೆಗೆ ಫೋಟೊಗ್ರಫಿ ಅಸೈನ್‍ಮೆಂಟುಗಳು[ಆರೆಂಜ್ ಕೌಂಟಿ, ಸರ್ಕಾರದ ಲ್ಯಾಂಡ್ ಅರ್ಮಿ ಸಂಸ್ಥೆ, ಶಿಕ್ಷಣ ಇಲಾಖೆ, ವಾರ್ತ ಇಲಾಖೆ.... ಇತ್ಯಾದಿ] ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಫೋಟೊಗ್ರಫಿ, ವೆಂಡರ್ ಕಣ್ಣು ಪುಸ್ತಕ, ಇಷ್ಟಪಟ್ಟು ಬರೆದುದನ್ನು ಅಷ್ಟೇ ಖುಷಿಯಿಂದ ಓದಿ ಪ್ರೋತ್ಸಾಹಿಸುವ ನಿಮ್ಮಂಥ ಬ್ಲಾಗ್ ಗೆಳೆಯರು ಇಂಥ ಇನ್ನೂ ಅನೇಕ ವಿಚಾರಗಳನ್ನು "ಛಾಯಾಕನ್ನಡಿ ಬ್ಲಾಗ್ ನನಗಾಗಿ ನೀಡುತ್ತಾ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ. ಅದಕ್ಕೆ ನನ್ನ ದೊಡ್ಡ ನಮನಗಳು.
ಅಜಿತ್ ಕೌಂಡಿನ್ಯ ಇಷ್ಟಪಟ್ಟು ಬರೆದ ನನ್ನ ರೇಖಾ ಚಿತ್ರ


ಅರೆರೆ...ಇವನೇನು ಬರೀ ಖುಷಿ ವಿಚಾರಗಳನ್ನೇ ಹೇಳುತ್ತಿದ್ದಾನಲ್ಲ! ಇವನಿಗೆ ಇತ್ತೀಚಿಗೆ ನೋವು, ಬೇಸರ, ದೂರು......ಇತ್ಯಾದಿಗಳು ಆಗಲಿಲ್ಲವೇ ಅಂತ ನಿಮಗೆ ಅನಿಸಿರಬೇಕಲ್ಲವೇ? ಖಂಡಿತ ಆಗಿವೆ. ಮೊದಲಿಗೆ ನನ್ನಾಕೆ ಜೊತೆ ಆಕೆಯ ತವರೂರಿಗೆ ಆರುತಿಂಗಳಲ್ಲಿ ಒಮ್ಮೆಯೂ ಹೋಗಿಲ್ಲವೆನ್ನುವುದು, ಏನಾದರೂ ನೆಪವೊಡ್ಡಿ ವಾರಕ್ಕೊಮ್ಮೆ ಯಶವಂತಪುರ ಸಂತೆ ತಪ್ಪಿಸಿಕೊಳ್ಳುವುದು, ಮಲ್ಲೇಶ್ವರ್ ರೈಲ್ವೇ ನಿಲ್ದಾಣ ಮತ್ತು ಪ್ರಸಿದ್ಧ ಮಲ್ಲೇಶ್ವರಂ ೮ನೇ ಕ್ರಾಸಿಗೆ ಇಬ್ಬರೂ ವಾಕಿಂಗ್ ತಪ್ಪಿಸಿಕೊಳ್ಳುತ್ತಿರುವುದು, ಕಳೆದ ನಾಲ್ಕು ತಿಂಗಳುಗಳಲ್ಲಿ ಒಳ್ಳೆಯ ಸಿನಿಮಗಳನ್ನು ತೋರಿಸದಿರುವುದು.......ಇನ್ನೂ ಅನೇಕ ದೂರುಗಳು ನನ್ನ ಶ್ರೀಮತಿಯ ಕಡೆಯಿಂದ. ಜೊತೆಗೆ ನಾನು ಕೆಲಸದ ಒತ್ತಡದಿಂದಾಗಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೋಡಲಾಗದಿದ್ದುದ್ದು, ಮದುವೆ ಫೋಟೊಗ್ರಫಿಯಿಂದಾಗಿ ಆಗಾಗ ಜಿಮ್, ಪ್ರಾಣಯಾಮ ತಪ್ಪಿಸಿಬಿಡುವುದು, ವರ್ಷಕ್ಕೆ ಐದಾರು ಫೋಟೋಗ್ರಫಿ ಪ್ರವಾಸ ಹೋಗುತ್ತಿದ್ದವನು ಕಳೆದ ಆಕ್ಟೋಬರಿನಿಂದಾಚೆಗೆ ಎಲ್ಲಿಗೂ ಹೋಗದಿರುವುದಕ್ಕೆ ಬೇಸರವಿದೆ. ಈ ವರ್ಷವಾದರೂ ಜನವರಿಯಲ್ಲಿ ಹಂಪಿ ಪ್ರವಾಸ ಹೋಗಲೇಬೇಕು ಅಂತ ಅಂದುಕೊಂಡರೂ ಹೋಗಲಾಗಲಿಲ್ಲ. ಗೋದಾವರಿ ನದಿಯುದ್ದಕ್ಕೂ ಎರಡುದಿನ ಬೆಳದಿಂಗಳಲ್ಲಿ ದೋಣಿ ಪ್ರವಾಸ ಮಾಡಬೇಕೆನ್ನುವ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಇನ್ನೂ ಅಂಡಮಾನ್‍ನಲ್ಲಿ ಕ್ಯಾಮೆರಾ ಹಿಡಿದು ಆಡ್ಡಾಡಲಿಲ್ಲ. ಮಲ್ಲಿಕಾರ್ಜುನ್ ಮತ್ತು ನಾನು ಈ ಫೆಬ್ರವರಿಯಲ್ಲಿ ಒಂದು ವಿದೇಶಿ ಫೋಟೊಗ್ರಫಿ ಪ್ರವಾಸ[ವಿಯೆಟ್ನಾಮ್ ಅಥವ ಕಾಂಬೋಡಿಯಾ ಅಥವ ಥೈಲ್ಯಾಂಡ್]ಹೋಗಬೇಕೆಂದು ಯೋಜನೆ ಹಾಕಿಕೊಂಡಿದ್ದೆವು. ಅದು ಸಫಲವಾಗದಿದ್ದುದ್ದಕ್ಕೆ ಬೇಸರವಿದೆ. ಆಡುಗೋಡಿಯಲ್ಲಿ ಒಬ್ಬ ದಿನಪತ್ರಿಕೆ ಹುಡುಗ ಮುಂಜಾನೆ ಪತ್ರಿಕೆ ಹಂಚುವಾಗ ಅವನ ಮೇಲೆ ಬಸ್ ಹರಿದು ಆತ ಸತ್ತ ಘಟನೆಯ ನೋವು ಇನ್ನೂ ಮಾಸಿಲ್ಲ. ಹದಿನೈದು ವರ್ಷಗಳಿಂದ ನನ್ನಿಂದಲೇ ದಿನಪತ್ರಿಕೆ ಪಡೆದು ಓದುತ್ತಾ, ತಿಂಗಳಿಗೊಮ್ಮೆ ಹುಡುಗರ ಮೇಲೆ ದೂರು, ಆಗಾಗ ನನ್ನ ಮೇಲೆ ಸಿಟ್ಟು ಮಾಡಿಕೊಂಡರೂ ಪ್ರೀತಿಯಿಂದ ಮಾತಾಡಿಸಿ ನನ್ನ ಕಷ್ಟ ಸುಖವಿಚಾರಿಸುತ್ತಿದ್ದ ನಾಲ್ವರು ಹಿರಿಯ ಗ್ರಾಹಕರು ತೀರಿಹೋಗಿದ್ದಾರೆ. ಈಗ ಅವರ ಮನೆಗೆ ಹೋದರೆ ಗೋಡೆಮೇಲಿನ ಫೋಟೊದಲ್ಲೇ ಕೋಪಿಸಿಕೊಳ್ಳುತ್ತಾರೆ, ಬೈಯ್ಯುತ್ತಾರೆ, ನಗುತ್ತಾರೆ. ಅದೆಲ್ಲವನ್ನು ನೋಡಿದಾಗ ನೋವು ಬೇಸರ ಎರಡು ಒಟ್ಟಿಗೆ ಆಗುತ್ತದೆ. ಅಂತ ಆತ್ಮೀಯವಾದ ನಮ್ಮ ನಡುವಿನ ಸಂಭಂದವನ್ನು ಮುಂದೆ ಎಂದಾದರೂ ಬರೆಯುತ್ತೇನೆ ಎಂದು ಹೇಳುತ್ತಾ ಈ ಲೇಖನವನ್ನು ಮುಗಿಸುತ್ತೇನೆ.

ಚಿತ್ರಗಳು ಮತ್ತು ಲೇಖನ.
ಶಿವು.ಕೆ

72 comments:

Unknown said...

ವಂಡರ್ ಫುಲ್ ಶಿವು. ನಿಮ್ಮದು ವೆಂಡರ್ ಕಣ್ಣು ಮಾತ್ರವಲ್ಲ; ವಂಡರ್ ಕಣ್ಣೂ ಕೂಡಾ

ಮನಮುಕ್ತಾ said...

ಶಿವು ಅವರೆ,
ನಿಮ್ಮ ಬಹುಮುಖ ಪ್ರತಿಭೆಗಳ ಯಶಸ್ಸಿಗೆ ಹಾರ್ದಿಕ ಅಭಿನ೦ದನೆಗಳು.
ವೆ೦ಡರ್ ಕಣ್ಣು ಪುಸ್ತಕದ ಕೋಟಿ ಕೋಟಿ ಪ್ರತಿಗಳು ಹೊರಬ೦ದು ಜನರನ್ನು ಸೇರಲಿ.
ದೇವರ ದಯೆ,ಜನರ ಅಭಿಮಾನ ಸದಾ ನಿಮ್ಮ ಮೇಲಿರಲಿ.
ನಿಮ್ಮ ಸ೦ತಸದ ಕ್ಷಣಗಳನ್ನು ಎಲ್ಲರೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ
ಧನ್ಯವಾದಗಳು.

ಚುಕ್ಕಿಚಿತ್ತಾರ said...

ಶಿವು ಸರ್..
ನಿಮ್ಮ ಬರಹ ಆಪ್ತವಾಗಿದೆ..
ನಿಮ್ಮೆಲ್ಲ ಯೋಜನೆಗಳೂ ಬಹು ಬೇಗ ಸಫಲವಾಗಲಿ..
ಆಲ್ ದ ಬೆಶ್ಟ್.

umesh desai said...

ಶಿವು ಅವರೆ ನಿಮ್ಮ ಎಲ್ಲಾ ಯೋಜನೆಗಳು ಸಫಲವಾಗಲಿ.

ಕ್ಷಣ... ಚಿಂತನೆ... said...

ಶಿವು ಅವರೆ, ನಿಮ್ಮ ಆಸೆ, ಆಕಾಂಕ್ಷೆಗಳೆಲ್ಲ ಈಡೇರಲಿ, ಇನ್ನಷ್ಟು ಪ್ರಶಸ್ತಿಗಳು ನಿಮಗೂ ಶ್ರೀ ಮಲ್ಲಿಕಾರ್ಜುನ ಎಲ್ಲರಿಗೂ ಲಭಿಸಲಿ.
ಸಿಗೋಣ,

ಸ್ನೇಹದಿಂದ,

ಮನಸು said...

sir tumba chennagide chitragaLu jotege vivarane haage nimma chitra bidisida avarigu abhinandanegaLu tumba chennagide.

all the best!!!

Subrahmanya said...

ನಿಮ್ಮ ನಲಿವು-ನೋವುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು. ನಿಮ್ಮ ಎಲ್ಲಾ ಕಾರ್ಯಗಳು ಯೋಜನೆ-ಯೋಚನೆಗಳೂ ಸಫಲವಾಗಲಿ ಎಂಬುದು ನನ್ನ ಶುಭಹಾರೈಕೆ.
ದೈವಶಕ್ತಿ ನಿಮಗೆ ಇನ್ನಷ್ಟು ಚೈತನ್ಯ ತುಂಬಲಿ...:)

ಮನಸಿನಮನೆಯವನು said...

'shivu.k' ಅವರೇ..,

ನಿಮ್ಮ ಖುಷಿಯ ವಿಚಾರಗಳು ಹೆಚ್ಚುತ್ತಿರಲಿ... ಬೇಸರದ ಸಂಗತಿಗಳು ಮರೆಯಾಗುತ್ತಿರಲಿ...

ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.com

PARAANJAPE K.N. said...

ನಿಮ್ಮ ಬೆಳವಣಿಗೆ ಕ೦ಡು ಖುಷಿಯಾಗುತ್ತಿದೆ. ಇನ್ನಷ್ಟು ಎತ್ತರಕ್ಕೆ ಏರುವ ಎಲ್ಲ ಲಕ್ಷಣಗಳೂ ನಿಮ್ಮಲ್ಲಿವೆ. ಬದುಕನ್ನು, ಸುತ್ತಲಿನ ಆಗುಹೋಗುಗಳನ್ನು ಹೊಸತನದಿ೦ದ ನೋಡುವ ಅರ್ಥೈಸುವ ದೃಷ್ಟಿಕೋನ ನಿಮಗೆ ಈ ಒ೦ದುವರೆ ವರುಷದ ಅವಧಿಯಲ್ಲಿ ದಕ್ಕಿದೆಯಲ್ಲ, ಅದುವೇ ನಿಮ್ಮ ಮು೦ದಿನ ಅಭಿವೃದ್ಧಿಗೆ ಪೂರಕವಾಗಲಿದೆ. ನಿಮ್ಮ ಇನ್ನಷ್ಟು ಫೋಟೋ- ಪುಸ್ತಕ ಮಾಲಿಕೆ ಗಳು ಹೊರಬರಲಿ, ಶುಭವಾಗಲಿ.

ಸೀತಾರಾಮ. ಕೆ. / SITARAM.K said...

ತಮ್ಮದು ವ೦ಡರ್-ಫ಼ುಲ್ ಜೀವನ. ತಮಗೆ ಶುಭವಾಗಲಿ. ಅ೦ದ ಹಾಗೇ ತಮ್ಮ ವ೦ಡರ-ಕಣ್ಣು ಪುಸ್ತಕದ ಪ್ರಕಾಶನದ ಮಿ೦ಚೆ ಕಳುಹಿಸಿ. ನಾನು ವಿಪಿಎಲ್ ಸೌಲಭ್ಯದ ಮುಖಾ೦ತರ ತರಿಸಿಕೊಳ್ಳುವೆ.
ಹ೦ಪೆ ಪ್ರವಾಸಕ್ಕೆ ಬನ್ನಿ. ನಾನು ವ್ಯವಸ್ಥೆ ಮಾಡಿಸುವೆ.

ಸವಿಗನಸು said...

ಶಿವು ಸರ್,
ನಿಮ್ಮ ಯೋಜನೆಗಳೆಲ್ಲ ಬೇಗ ಸಫಲವಾಗಲಿ..
ಗುಡ್ ಲಕ್....
ನಿಮ್ಮ ವೆಂಡರ್ ಕಣ್ಣು ಮೊನ್ನೆ ಓದಿದೆ....ಚೆನ್ನಾಗಿದೆ..
ಶುಭವಾಗಲಿ...

ದಿನಕರ ಮೊಗೇರ said...

ಶಿವೂ ಸರ್,
ನಿಮ್ಮ ಪುಸ್ತಕ ಓದಿದ್ದೆ.... ತುಂಬಾ ಇಷ್ಟ ಆಗಿತ್ತು..... ನಿಮ್ಮ ಮುಂದಿನ ಪುಸ್ತಕಕ್ಕಾಗಿ ಈಗಲೇ ಕಾಯುತ್ತಿದ್ದೇನೆ.... ನಿಮ್ಮ ತೆಗೆದ ಫೋಟೋಗಳಂತೂ ಸೂಪರ್..... ಹೀಗೆ ನಿಮಗೆ ವಿಶ್ವದಲ್ಲೋ ಮಾನ್ಯತೆ ಸಿಗಲಿ.... ಜೀವನದಲ್ಲಿ ಖುಷಿ ಖುಷಿ ತುಂಬಿರಲಿ..... ನೋವು ಕಡಿಮಯಾಗಲಿ...... ಈ ಬರಹದ ಧಾಟಿ ತುಂಬಾ ಇಷ್ಟಆಯ್ತು.....

ಸುಮ said...

ನಿಮ್ಮೆಲ್ಲ ಕನಸುಗಳು ಕೈಗೂಡಿ ನಮಗೆಲ್ಲ ಇನ್ನೂ ಒಳ್ಳೆಯ ಫೋಟೊ , ಬರಹಗಳ ಔತಣ ನಿಮ್ಮಿಂದ ಸಿಗಲಿ.

sunaath said...

ತುಂಬ ಸುಂದರವಾದ ಫೋಟೋಗಳನ್ನು ತೋರಿಸಿರುವಿರಿ. ಧನ್ಯವಾದಗಳು.

Guruprasad said...

ಶಿವೂ,
ಬರಹ ತುಂಬ ಆತ್ಮೀಯವಾಗಿ ಇದೆ....ನಿಮ್ಮ ಹೊಸ ಅಸೆಗಳೆಲ್ಲವು ಇಡೇರಿ ... ಇನ್ನು ಚೆನ್ನಾಗಿ ಅಭಿವೃದ್ದಿ ಹೊಂದಲಿ ನಿಮ್ಮ ಹವ್ಯಾಸ ಹಾಗು ಕೆಲಸ....
ಅದಸ್ಟು ಬೇಗ ನಿಮ್ಮ ಪುಸ್ತಕ ಪ್ರಕಟವಾಗಲಿ.... ಎಲ್ಲರೂ ಅದಕ್ಕಾಗಿ ಕಾಯುತ್ತಿದ್ದಾರೆ....ಹಾಗೆ ಫೋಟೋಗ್ರಫಿ ನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬುದೇ ನಮ್ಮ ಹಾರೈಕೆ........
ನಿಮ್ಮವ
ಗುರು

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
wender ಶಿವು ಅಲ್ಲಲ್ಲ... wonderful ಶಿವು.
ಅಭಿನಂದನೆಗಳು ಎಲ್ಲಾ ಸಂತಸದ ಸಂಗತಿಗಳಿಗೂ ಸೇರಿಸಿ. ಇನ್ನಷ್ಟು ಸಂತಸಗಳು ನಿಮ್ಮ ಬದುಕಿಗೆ ಬಂದು ಸೇರಲಿ ಎಂದು ಹಾರೈಸುತ್ತೇನೆ. ನಿಮ್ಮ ಪುಸ್ತಕದ ಪಾತ್ರಧಾರಿಗಳ reaction ಬಗ್ಗೆ ಬರೆಯಿರಿ.

ಜಲನಯನ said...

ಶಿವು ...ಹ್ಯಾಟ್ಸ ಆಫ್...ಒಳ್ಳೆಯ ಛಾಯಾಗ್ರಹಣ ನಿಮ್ಮ ಛಾಪಾದರೂ ಬರವಣಿಗೆಯ ಪಟ್ಟು ಬಿಗಿಯಾಗ್ತಿದೆ...ಶುಭವಾಗಲಿ ಎಂದು ಹಾರೈಕೆ ನನ್ನದು.

AntharangadaMaathugalu said...

ಶಿವು ಸಾರ್...
ನಿಮ್ಮ ಗೆಳೆಯ ಬರೆದ ನಿಮ್ಮ ಚಿತ್ರ ಸೊಗಸಾಗಿದೆ. ನಿಮ್ಮ ಎಲ್ಲಾ ಖುಷಿ-ದು:ಖಗಳನ್ನೂ ಎಷ್ಟು ಸರಳವಾಗಿ ಹಂಚಿಕೊಳ್ಳುತ್ತೀರಿ.... ಬರಹ ಇಷ್ಟವಾಯಿತು. ನಿಮ್ಮ ಎಲ್ಲಾ ಕನಸುಗಳೂ ನೆರವೇರಲಿ ಎಂದು ಹಾರೈಸುವೆ...

ವನಿತಾ / Vanitha said...

ಶಿವು..ನಿಮ್ಮ ಬಹುಮುಖ ಪ್ರತಿಭೆಗೆ ಅಭಿನಂದನೆಗಳು...ಮತ್ತು ಶುಭ ಹಾರೈಕೆಗಳು:)

Keshav.Kulkarni said...

Shivu,

nice to read about 2009. I wish you win more prizes and honours this year too.

By the way, can we expect few articles about tips and techniques in photography?

- keshav

Anonymous said...

೨೦೦೯ ನಿಮ್ಮ ಒಂದು ಪುಸ್ತಕ ಬಿಡುಗಡೆ. ೨೦೧೦ ರಲ್ಲಿ ಅದು ಹತ್ತಾಗಲಿ. ಮುಂದೆ ಬರೆಯುವ ನಿಮ್ಮ ಐಡಿಯಾ ಗಳೆಲ್ಲ ಪೊಗದಸ್ತಾಗಿದೆ, ಅದು ಕಾರ್ಯರೂಪಕ್ಕೆ ಬರಲಿ ಅಂತ ಕುತೂಹಲದಿಂದ ಕಾಯ್ತಿರೋ ನಮ್ಮ ಆಸೆಯಾಗಿದೆ.

ನಿಮ್ಮ ಕಾರ್ಯ ನೀವು ಮಾಡುತ್ತಿರಿ, ಪ್ರಶಸ್ತಿಗಳು ನಿಮ್ಮ ಬೆನ್ನುಹತ್ತಲಿ.

ಛಾಯಾಕನ್ನಡಿ ಅನ್ನುವುದು ಭೂಮಿ, ಅದ ನೋಡಲು ಜಿಗಿಜಿಗಿ ತಾರೆಗಳ ಗಿಜಿಗಿಜಿ ಸಂತೆ. ನೂಕುನುಗ್ಗಲು. ಲೆಕ್ಕ ೨೫ ಆಗಿದ್ಯಲ್ಲ, ಬಲು ಬೇಗ ನೂರಾಗಲಿ...

ತೇಜಸ್ವಿನಿ ಹೆಗಡೆ said...

ತುಂಬಾ ಆಪ್ತವಾಗಿದೆ ಬರಹ. ಸಂತೋಷ ಹಂಚಿಕೊಳ್ಳುವುದರಿಂದ ಅದರ ಸಂಭ್ರಮ ದುಪ್ಪಟ್ಟಾದರೆ, ದುಃಖವನ್ನು ಹಂಚಿಕೊಂಡಾಗ ಅದರ ತೀವ್ರತೆ ಕಡಿಮೆಯಾಗುವುದಂತೆ. ನೀವು ಇದೆರಡನ್ನೂ ಮಾಡಿದ್ದೀರ.

ಸುಂದರವಾಗಿವೆ ಚಿತ್ರಗಳು.

ಚಿತ್ರಾ said...

ಶಿವೂ,
ನಿಮ್ಮೆಲ್ಲ ಸಾಧನೆಗಳಿಗೆ ಅಭಿನಂದನೆಗಳು ! ಈ ನಿಮ್ಮ ಸಾಧನೆಗಳು ನಮ್ಮಲ್ಲೂ ಹೆಮ್ಮೆ ಮೂಡಿಸುತ್ತಿವೆ. ೨೦೧೦ರಲ್ಲಿ ಈ ಪಟ್ಟಿಗೆ ಇನ್ನೂ ಬಹಳ ಪ್ರಶಸ್ತಿಗಳು ಸೇರಲಿ ಎನ್ನುವುದು ನಮ್ಮ ಹಾರೈಕೆ.
ಇನ್ನು, ಮಾಡಲಾಗದೆ ಉಳಿದುಹೋದ ವಿಷಯಗಳಿಗೆ ಬೇಸರ ಬೇಡ . ಈ ವರ್ಷದಲ್ಲಿ ಅವೆಲ್ಲ ಈಡೇರುತ್ತವೆ ಎನ್ನುವ ಭರವಸೆ ಯಿರಲಿ.
ಹಾರ್ದಿಕ ಅಭಿನ೦ದನೆಗಳು !

Unknown said...

ಶಿವೂ.. ನೀವು ಅಂದುಕೊಂಡಿದ್ದೆಲ್ಲ ಬೇಗನೆ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತೇನೆ..

Chaithrika said...

ಮೊತ್ತ ಮೊದಲಿಗೆ ನಿಮಗೆ ಅಭಿನಂದನೆಗಳು.

ಎಷ್ಟೋ ಬಾರಿ ನಮಗೆ ನಮ್ಮ ಬಗ್ಗೆ ಹೇಳಿಕೊಳ್ಳಬೇಕೆನಿಸುತ್ತದೆ. ಅದು ಅನೇಕ ಸಲ ಸ್ವಪ್ರಶಂಸೆಯಾಗುವ ಆತಂಕವೂ ಇರುತ್ತದೆ. ಆದರೆ ಇಲ್ಲಿ ನೀವು ನಿಮ್ಮ ಬಗ್ಗೆ ಬರೆದಿದ್ದರೂ ಅದು ಸ್ವಲ್ಪವೂ ಸ್ವಪ್ರಶಂಸೆಯಂತೆ ಕಾಣಲಿಲ್ಲ. ಒಳ್ಳೆಯ ವಿಚಾರ ಬರೆದಿದ್ದೀರಿ. ನೋಡಿ ಖುಷಿಯಾಯಿತು.

ನಿಮ್ಮ ಈ ಬರಹ ಓದಿದ ಮೇಲೆ ನನಗೂ ಹಿಟ್ ಕೌಂಟರ್ ಇಡಬೇಕನಿಸಿದೆ. ಹೇಗೆ ಮಾಡಬೇಕೆಂದು ತಿಳಿದಿಲ್ಲ. ಪುರುಸೊತ್ತಾದಾಗ ಹೇಳಿ.
ನಿಮ್ಮ ಬ್ಲಾಗ್ ನಲ್ಲಿ ಕೆಲವು ವಿಷೇಶ ಅಂಶಗಳಿವೆ.
ನೀವು ನನ್ನಂತೆ ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ಬರೆಯದೆ ಆಗಾಗ ಬರೆಯುತ್ತಿರುತ್ತೀರಿ. ಹಾಗಾಗಿ ಪ್ರತಿ ಬಾರಿ ಬ್ಲಾಗ್ ನೋಡಿದಾಗಲೂ ಏನಾದರೂ ಹೊಸತು ಓದಲು ಸಿಗುತ್ತದೆ.
ಅದಕ್ಕೆ ನಿಮ್ಮ blog ಗೆ ಬಹಳಷ್ಟು ಜನ visit ಮಾಡುವುದಿರಬೇಕು.
ಬರಹಗಳಲ್ಲಿ ಪ್ರತಿ ಬಾರಿಯೂ ಏನಾದರೂ ಹೊಸ ವಿಚಾರಗಳಿರುತ್ತವೆ. ನನಗೆ ಮಾಮೂಲೆನಿಸದ ವಿಷಯಗಳು.
ನನಗೆ ಫೋಟೊ ತೆಗೆಯುವುದು ಮತ್ತು ನೋಡುವುದೆಂದರೆ ಇಷ್ಟ. ಹಾಗಾಗಿ ಫೊಟೊಗ್ರಫಿಗೆ ಸಂಬಂಧಿಸಿದ ಸುದ್ದಿಗಳು ಓದಲು ಚೆನ್ನಾಗಿಯೂ, informative ಆಗಿಯೂ ಅನ್ನಿಸುತ್ತವೆ. ನಿಮ್ಮ ಬರಹ ಓದಿದ ನಂತರ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಫೋಟೊ ಪ್ರದರ್ಶನ ನೋಡುವ ಮನಸಿತ್ತು. ನನ್ನ ಯಜಮಾನರ ಅನಾರೋಗ್ಯದ ಕಾರಣ ಹೋಗಲಾಗಲಿಲ್ಲ.
ಹೀಗೇ ಬರೆಯುತ್ತಿರಿ. ನನಗೆ ಓದಲು ಖುಷಿಯಾಗುತ್ತದೆ.
ನಿಮ್ಮ ಪುಸ್ತಕದ ಮರುಮುದ್ರಣವಾದಮೇಲೆ ಒಂದು ಪ್ರತಿ ನಾನು ಕೊಳ್ಳಲಿದ್ದೇನೆ.

shivu.k said...

ಸತ್ಯನಾರಾಯಣ ಸರ್,

ಮೊದಲು ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu.k said...

ಮನಮುಕ್ತ ರವರೆ,

ನಿಮ್ಮ ಹಾರೈಕೆಗೆ ಧನ್ಯವಾದಗಳು. ನೀವು ನಿರೀಕ್ಷಿಸಿದಷ್ಟು ನನ್ನ ವೆಂಡರ್ ಕಣ್ಣು ಖರ್ಚಾಗದಿದ್ದರೂ ದಾಖಲೆ ನಿರ್ಮಿಸಲಿ ಅನ್ನುವ ಆಸೆ ನನ್ನದು ಕೂಡ. ಹೀಗೆ ಬರುತ್ತಿರಿ..

shivu.k said...

ವಿಜಯಶ್ರಿ ಮೇಡಮ್,

ನನ್ನ ಯೋಜನೆಗಳು ದೊಡ್ಡದಿವೆ. ಅದು ಬೆಳೆಯುತ್ತಲೇ ಇರುತ್ತವೆ. ಬರಹವನ್ನು ಮೆಚ್ಚಿದ್ದಕ್ಕೆ, ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು.

shivu.k said...

ಉಮೇಶ್ ದೇಸಾಯಿ ಸರ್,

ಧನ್ಯವಾದಗಳು.

shivu.k said...

ಚಂದ್ರು ಸರ್,

ನೀವು ಸದಾ ನನ್ನನ್ನು ಬೆನ್ನು ತಟ್ಟುತ್ತಾ ಪ್ರೋತ್ಸಾಹಿಸುತ್ತೀರಿ..
ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು.

shivu.k said...

ಮನಸು ಮೇಡಮ್,

ಚಿತ್ರಗಳು ಮತ್ತು ಬರಹವನ್ನು ಮೆಚ್ಚಿದ್ದೀರಿ. ನನ್ನ ರೇಖಾ ಚಿತ್ರ ಬಿಡಿಸಿದವರು ಗೆಳೆಯ ಅಜಿತ್. ಆತನಿಗೆ ನಿಮ್ಮ ಅಭಿನಂದನೆಗಳನ್ನು ತಿಳಿಸುತ್ತೇನೆ..

ಧನ್ಯವಾದಗಳು.

shivu.k said...

ಸುಬ್ರಮಣ್ಯ ಭಟ್ ಸರ್,

ನಾವು ಸಾಗುವ ದಾರಿಯಲ್ಲಿ ಏರುಪೇರುಗಳ ಒಂದು ಪುಟ್ಟ ವಿವರಣೆಯನ್ನು ಕೊಟ್ಟಿದ್ದೇನೆ ಅಷ್ಟೆ. ನೀವು ಹೇಳಿದಂತೆ ದೇವರ ಆಶೀರ್ವಾದ ಖಂಡಿತ ಬೇಕು. ಜೊತೆಗೆ ನಿಮ್ಮೆಲ್ಲರ ಪ್ರೋತ್ಸಾಹ ಕೂಡ ಹೀಗೆ ಇರಲಿ...ಧನ್ಯವಾದಗಳು.

shivu.k said...

ಗುರುದೆಸೆ ರವರೆ,

ನಿಮ್ಮ ಬ್ಲಾಗನ್ನು ನೋಡುತ್ತಿರುತ್ತೇನೆ. ಮುಂದೆಯೂ ನೋಡುತ್ತೇನೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಪರಂಜಪೆ ಸರ್,

ಇದೆಲ್ಲಾ ಛಾಯಾಕನ್ನಡಿ ಬ್ಲಾಗಿನಿಂದಾಗಿ ಆಗಿದ್ದು. ಒಂದುವರೆ ವರ್ಷದ ಹಿಂದೆ ನಾನು ಹೀಗೆಲ್ಲಾ ಬರೆಯುತ್ತೇನೆ ಅಂದುಕೊಂಡಿರಲಿಲ್ಲ. ಸುಮ್ಮನೇ ಫೋಟೊತೆಗೆಯುತ್ತಿದ್ದೆ. ಆದ್ರೆ ಅದರ ನಂತರ ಇಷ್ಟು ವೇಗ ಹೇಗೆ ಬಂತೋ ನನಗೆ ಗೊತ್ತಿಲ್ಲ. ಆದ್ರೆ ಏನೋ ಒಂಥರ ಖುಷಿ ಖಂಡಿತ ಸಿಗುತ್ತಿದೆ.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..
ಧನ್ಯವಾದಗಳು.

ದೀಪಸ್ಮಿತಾ said...

ಶಿವು ಸರ್, ಈ ವರ್ಷ ನಿಮ್ಮೆಲ್ಲರ ಆಸೆ ಕನಸುಗಳು ನನಸಾಗಲಿ. ಇನ್ನಷ್ಟು ಪ್ರಶಸ್ತಿಗಳು ಬರಲಿ. ನಿಮ್ಮ ಛಾಯಾಗ್ರಹಣ ನನ್ನಂತಹವರಿಗೆ ಸ್ಫೂರ್ತಿದಾಯಕ. YPS ದಿನ ಛಾಯಾಗ್ರಹಣದ ಬಗ್ಗೆ ಅನೇಕ ಸಂದೇಹಗಳನ್ನು ಕೇಳಬೇಕೆಂದಿದ್ದೆ, ಆದರೆ ಸಮಯದ ಅಭಾವದಿಂದ ಆಗಲಿಲ್ಲ

shivu.k said...
This comment has been removed by the author.
shivu.k said...

ಸವಿಗನಸು ಮಹೇಶ್ ಸರ್,

ನನ್ನ ವೆಂಡರ್ ಕಣ್ಣು ಓದಿಮುಗಿಸಿದಿರಲ್ಲ...ಥ್ಯಾಂಕ್ಸ್..ನಿಮ್ಮ ಅಭಿಪ್ರಾಯವನ್ನು ವಿವರವಾಗಿ ನನಗೆ ಮೇಲ್ ಮಾಡಿ.
ನನ್ನ ಮೇಲ್ id: shivuu.k@gmail.com

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಸೀತಾರಾಂ ಸರ್,

ನನ್ನದು ಮಾತ್ರವಲ್ಲ ಪ್ರತಿಯೊಬ್ಬರದೂ ಜೀವನ ವಂಡರ್‍ಪುಲ್ ಆಗಿರುತ್ತದೆ ಎನ್ನುವುದು ನನ್ನ ಭಾವನೆ. ಅವರು ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಖಂಡಿತ ಕಾಣಸಿಗುತ್ತದೆ. ಮತ್ತೆ ನಿಮ್ಮ ವಿಳಾಸವನ್ನು ನನಗೆ ಮೇಲ್ ಮಾಡಿ.
ನನ್ನ ಮೇಲ್ id: shivuu.k@gmail.com

ನಿಮಗೆ ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಪೋಸ್ಟ್ ಮಾಡುತ್ತೇನೆ. ಮುಂದೆ ಖಂಡಿತ ಹಂಪಿ ಪ್ರವಾಸಕ್ಕೆ ಪ್ಲಾನ್ ಮಾಡಿಕೊಳ್ಳುವಾಗ ನಿಮಗೆ ತಿಳಿಸುತ್ತೇವೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Ranjita said...

ಶಿವೂ ಸರ್ ನಿಮ್ಮ ಫೋಟೊಗಳನ್ನ ನೋಡಿದಸ್ತು ಸಾಲದು ...
ಎಷ್ಟು ಹುಚ್ಚ್ಚು ಹಿಡಿಸಿದೆ ಅಂದರೆ ಇಗಲೇ ನಾನು ಫೋಟೋಗ್ರಫಿ ಸ್ಕೂಲ್ ಗೆ ಸೇರ್ಕೊಂಡು ಬಿಡೋಣ ಅನ್ನೋವಸ್ಟು
ನಿಮ್ಮ ವಿದೇಶಿ ಫೋಟೋಗ್ರಫಿ ಪ್ರಯಾಣಕ್ಕೆ ಶುಭವಾಗಲಿ ...

ವಿನೋದ್ ಕುಮಾರ್ said...

ನಮಸ್ಕಾರ ಶಿವು ಅವರೇ, ನಿಮ್ಮ ಲೇಖನ ನೋಡಿ ತುಂಬಾ ಖುಷಿ ಆಯಿತು. ನೀವಂತೂ ಈಗ ತುಂಬಾ ಜನಪ್ರಿಯರಾಗಿದ್ದೀರ. ನಿಮ್ಮ ಟ್ಯಾಲೆಂಟ್ ಮತ್ತು ಪರಿಶ್ರಮ ಎರಡು ಇದರಲ್ಲಿ ಇದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈ ಬ್ಲೋಗ್ ಲೋಕ ಪ್ರಪಂಚವನ್ನ ತುಂಬನೆ ಚಿಕ್ಕದಾಗಿಸಿದೆ. ಶುಭಾಶಯಗಳೊಂದಿಗೆ...ವಿನೋದ್ (ಟೆಕ್ಸಸ್ ನಿಂದ).

Devaraj said...

ಶುಬೋಧಯ ಶಿವು.
ವರ್ಷವನ್ನು ಹೇಗೆಲ್ಲ ಉಪಯೋಗಿಸಿಕೊಡಿರಿ, ನಿಮ್ಮ ಖುಷಿ ಮತ್ತು ಬೇಸರವನು ಸಕರಾತ್ಮಕವಾಗಿ ಬರೆದ್ದಿರಿ.
ಹೊಸ ವರ್ಷ ನಿಮ್ಮ ಕ್ರಿಯಶಿಲಥೆಗೆ ಮೆರಗನು ಕೊಡಲಿ.
ಡಾ. ದೇವರಾಜ್

Ittigecement said...

ಶಿವು ಸರ್...

ನಾನು ನಿಮ್ಮ ಫೋಟೊಗಳ ಫ್ಯಾನ್... !
ತುಂಬಾ ಸೊಗಸಾಗಿರುತ್ತವೆ..
ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ...

ಹೃದಯಪೂರ್ವಕ ಅಭಿನಂದನೆಗಳು..

shivu.k said...

ದಿನಕರ್ ಸರ್,

ನನ್ನ ವೆಂಡರ್ ಕಣ್ಣು ಇಷ್ಟಪಟ್ಟು ಓದಿದವರಲ್ಲಿ ನೀವು ಒಬ್ಬರು. ನಮ್ಮ ಮುಂದಿನ ಪುಸ್ತಕವನ್ನು ಖಂಡಿತ ಕೊಡುತ್ತೇನೆ. ಆದ್ರೆ ಆತುರದಿಂದ ನಾನು ಎಂದೂ ಬರೆಯೊಲ್ಲ. ನಿದಾನವಾಗಿ ಬರೆಯುತ್ತಿದ್ದೇನೆ. ಮತ್ತೆ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಹಾರೈಕೆ ಹೀಗೆ ಇರಲಿ.

shivu.k said...

ಸುಮಾ ಮೇಡಮ್,

ಬರಹ ಔತಣ ಮತ್ತು ಒಳ್ಳೆಯ ಫೋಟೊಗಳನ್ನು ಮುಂದೆಯೂ ಕೊಡಲು ಪ್ರಯತ್ನಿಸುತ್ತೇನೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..ಧನ್ಯವಾದಗಳು.

shivu.k said...

ಸುನಾಥ್ ಸರ್,

ಧನ್ಯವಾದಗಳು.

shivu.k said...

ಗುರು,

ನನ್ನ ಮುಂದಿನ ಪುಸ್ತಕದ ವಿಚಾರವನ್ನು ನಿಮಗೆ ತಿಳಿಸದೇ ಇರುತ್ತೇನಾ? ಬರಹ ಮತ್ತು ಫೋಟೋಗಳನ್ನು ಮೆಚ್ಚುತ್ತಾ ನನ್ನನ್ನು ಮತ್ತಷ್ಟು ಪ್ರೋತ್ಸಾಹಿಸುವುದರಲ್ಲಿ ನೀವು ಒಬ್ಬರು. ಮುಂದೆಯೂ ನಿಮ್ಮನ್ನು ನಿರಾಸೆಗೊಳಿಸೊಲ್ಲವೆಂದು ಭರವಸೆ ಕೊಡುತ್ತೇನೆ...
ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು. ಮತ್ತಷ್ಟು ಖುಷಿ ವಿಚಾರಗಳು ಸಿಕ್ಕರೆ ಮುಂದೆಯೂ ಹಂಚಿಕೊಳ್ಳುತ್ತೇನೆ. ಸದ್ಯದಲ್ಲೇ ದಿನಪತ್ರಿಕೆ ಗ್ರಾಹಕರ ಬಗ್ಗೆ ಬರೆಯುತ್ತೇನೆ.

shivu.k said...

ಆಜಾದ್,

ಬರವಣಿಗೆ ನಿಮಗೆ ಚೆಂದ ಮತ್ತು ಬಿಗಿಯೆನಿಸಿದರೆ ಅದು ನಿಮ್ಮ ಪ್ರೋತ್ಸಾಹದಿಂದ. ನಿಮ್ಮ ಮಾತಿನ ಟಾನಿಕ್ ಹೀಗೆ ಸಿಗುತ್ತಿದ್ದರೇ ಇನ್ನಷ್ಟು ಖುಷಿಯಿಂದ ಬರೆದೇನು. ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,

ನನ್ನ ಚಿತ್ರ ಬರೆದ ಅಜಿತ್‍ಗೆ ನಿಮ್ಮ ಅಭಿನಂದನೆಗಳನ್ನು ತಿಳಿಸುತ್ತೇನೆ. ಮತ್ತೆ ನಡೆದಿದ್ದನ್ನು ಹಾಗೆ ನೇರವಾಗಿ ಹೇಳುವುದು ಸುಲಭವೆಂದು ನನ್ನ ಭಾವನೆ. ಧನ್ಯವಾದಗಳು.

shivu.k said...

ವನಿತಾ,

ದೂರದ ಟೆಕ್ಸಾಸ್‍ನಿಂದ ಪ್ರೋತ್ಸಾಹ ನೀಡುತ್ತಿದ್ದೀರಿ. ಧನ್ಯವಾದಗಳು. ನನ್ನ ಗೆಳೆಯರಾದ ರಮಾಕಾಂತ್ ಅತ್ರೇಯ ಮತ್ತು ಅವರ ತಂದೆ ವಿದ್ವಾನ್ ಆರ್.ಕೆ.ಶ್ರೀಕಂಠನ್ ಅವರು ಸುಮಾರು ಒಂದುವರೆ ತಿಂಗಳು[ಮಾರ್ಚ್ ಕೊನೆ ವಾರದಿಂದ ಮೇ ಮೊದಲ ವಾರದವರೆಗೆ] ಅಮೇರಿಕಾದಲ್ಲಿ ಸಂಗೀತ ಕಚೇರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನೀವು ಅವರನ್ನು ಬೇಟಿಯಾಗುವುದಾದರೆ ನನ್ನ ಪುಸ್ತಕವನ್ನು ಅವರ ಬಳಿ ಕೊಡುತ್ತೇನೆ. ಪ್ರಯತ್ನಿಸಿ...

ಧನ್ಯವಾದಗಳು.

shivu.k said...

ಕುಲಕರ್ಣಿ ಸರ್,

ಬರಹ ಮೆಚ್ಚುಗೆಯಾಗಿದ್ದಕ್ಕೆ ಮತ್ತು ನಿಮ್ಮ ಶುಭಹಾರೈಕೆಗೆ ಧನ್ಯವಾದಗಳು. ಮತ್ತೆ ಸರ್, ನೀವು ನಿರೀಕ್ಷಿಸಿದಂತೆ ಫೋಟೊಗ್ರಫಿ ಬಗ್ಗೆ ಬರೆಯುತ್ತೇನೆ ವಿನಃ ಅದರ ತಾಂತ್ರಿಕತೆಯನ್ನು ನನಗೆ ಬರೆಯಲು ತಾಳ್ಮೆಯಿಲ್ಲ. ಅದೊಂದನ್ನು ನನ್ನಿಂದ ನಿರೀಕ್ಷಿಸಬೇಡಿ. ಮುಂದೆ ಎಂದಾದರೂ ತಾಳ್ಮೆಯಿಂದ ಬರೆಯಲು ಪ್ರಯತ್ನಿಸುತ್ತೇನೆ..ಬೇಸರಿಸಿಕೊಳ್ಳಬೇಡಿ ಸರ್.

shivu.k said...

ನೀಲಿಹೂವು ರಂಜಿತ್ ಸರ್,

ನೀವು ಅಪರೂಪವಾಗಿಬಿಟ್ಟಿರಿ. ಆದ್ರೂ ಬಂದು ಹಾರೈಸಿದ್ದೀರಿ. ಧನ್ಯವಾದಗಳು. ೨೦೦೯ ಒಂದು ಪುಸ್ತಕ. ಅದೇ ರೀತಿ ೨೦೧೦ಕ್ಕೂ ಒಂದೇ ಪುಸ್ತಕ. ನನಗಷ್ಟೇ ಬರೆಯಲು ಸಾಧ್ಯ ಮತ್ತು ನಾನೇನು ಪುಲ್ ಟೈಂ ಬರಹಗಾರನಲ್ಲ. ಮತ್ತೆ ನನ್ನ ಚಟುವಟಿಕೆಗಳ ಬಗ್ಗೆ ಕುತೂಹಲದಿಂದ ನೋಡುವುದರಲ್ಲಿ ನೀವು ಒಬ್ಬರು ಅಂತ ಹೇಳಿದ್ದೀರಿ. ಥ್ಯಾಂಕ್ಸ್..

ನನ್ನ ಛಾಯಾಕನ್ನಡಿ ಬಗ್ಗೆ ತುಂಬಾ ಹೊಗಳಿದ್ದೀರಿ. ಅಷ್ಟು ಹೊಗಳಿಕೆ ಅದು ಪಾತ್ರವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಮುಂದೆ ಹೊಗಳಿಕೆಯಿಂದ ಹಿಗ್ಗಿ ಮೆರೆದು ಕಾಲಿಜೋಳಿಗೆಯಾಗುವ ಅಪಾಯವಿರುವುದರಿಂದ ಹೆಚ್ಚು ಹೊಗಳದೆ ಪ್ರೋತ್ಸಾಹಿಸಿ. ಧನ್ಯವಾದಗಳು.

shivu.k said...

ತೇಜಸ್ವಿನಿ ಮೇಡಮ್,

ಖಂಡಿತ ಸಂತೋಷ ಹಂಚಿಕೊಳ್ಳುವುದರಿಂದ ಅದು ದುಪ್ಪಟ್ಟು ಆಗುವುದು ಮತ್ತು ದುಖಃ ಹಂಚಿಕೊಳ್ಳುವುದರಿಂದ ಕಡಿಮೆಯಾಗುವುದು ಎಷ್ಟು ಒಳ್ಳೆಯ ಲೆಕ್ಕಚಾರವಲ್ಲವೇ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಸುಧೇಶ್ ಶೆಟ್ಟಿ said...

ಸ೦ತೋಷದ ಸ೦ಗತಿಗಳು ಸ೦ತಸ ತ೦ದಿತು... ದುಃಖದ ವಿಷಯಗಳು ದುಃಖ ಬರಿಸಿತು...

ಹೀಗೆ ನಡೆಯಲಿ ಶಿವಣ್ಣ ನಿಮ್ಮ ಸಾಧನೆಗಳ ತೇರು...

ಸುಧೇಶ್ ಶೆಟ್ಟಿ said...

ಸ೦ತೋಷದ ಸ೦ಗತಿಗಳು ಸ೦ತಸ ತ೦ದಿತು... ದುಃಖದ ವಿಷಯಗಳು ದುಃಖ ಬರಿಸಿತು...

ಹೀಗೆ ನಡೆಯಲಿ ಶಿವಣ್ಣ ನಿಮ್ಮ ಸಾಧನೆಗಳ ತೇರು...

b.saleem said...

ಶಿವು ಸರ್,
ಮೊದಲೆಗೆ ಈ ವರ್ಷ ನಿವು ಫೊಟೊಗ್ರಾಫಿಯಲ್ಲಿ ಮಾಡಿದ ಸಾಧನೆಗೆ ಅಭಿನಂದನೆಗಳು.
ಬರಹ ಇಡಿ ಒಂದು ವರ್ಷದ ವಾರ್ಷಿಕ ಪತ್ರಿಕೆಯ
ಹಾಗಿದೆ. ನಿಮ್ಮ ಸಂತೊಷ ದುಃಖ ಎರಡನ್ನು ಹಂಚಿಕೊಂಡ
ರಿತಿ ಅನನ್ಯವಾದದ್ದು.ನಿಮ್ಮ ಯಶಸ್ಸು ಹೀಗೆ ಮುಂದುವರೆಯಲಿ
ಅದನ್ನು ಕಂಡು ನಾವೂ ಖುಷಿ ಪಡುವ ಅವಕಾಶ ನಮ್ಮದಾಗಲಿ.

ಸಾಗರದಾಚೆಯ ಇಂಚರ said...

ಶಿವೂ ಸರ್
ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ
ನಿಮ್ಮ ಸಾಧನೆಗಳಿಗೆ ಮೂಕನಾಗಿದ್ದೇನೆ
ಹತ್ತು ಹಲವು ರಂಗದಲ್ಲಿನ ನಿಮ್ಮ ಸಾಧನೆ ಮೆಚ್ಚತಕ್ಕದ್ದೇ
ಇನ್ನೂ ಹೆಚ್ಚೆಚ್ಚು ಸಾಧನೆ ನೀವು ಮಾಡುವಂತಾಗಲಿ ಎಂಬ ಹಾರೈಕೆ
ಇದೆ ಪೋಸ್ಟ್ ಗೆ ಮೊದಲು ಕಾಮೆಂಟಿಸಿದ್ದೆ ಆದರೆ ಕಾಮೆಂಟು ಹೋಗಿರಲಿಲ್ಲ\
ಯಾಕೆ ಎಂದು ಗೊತ್ತಿಲ್ಲ
ಶುಭ ಹಾರೈಕೆಗಳು

shivu.k said...

ಚಿತ್ರ ಮೇಡಮ್,

ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು. ನಿಮ್ಮ ಹಾರೈಕೆ ಮತ್ತು ಪ್ರೋತ್ಸಾಹ ಹೀಗೆ ಇರಲಿ.

shivu.k said...

ರವಿಕಾಂತ್ ಸರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

Chaithrika ಸರ್,

ಲೇಖನದಲ್ಲಿ ನನ್ನ ಈ ಸಾಧನೆಯನ್ನು ಹೇಳಿಕೊಳ್ಳಬೇಕೋ ಬೇಡವೋ ಅನ್ನುವ ಮುಜುಗರವಂತೂ ಇದ್ದೇ ಇತ್ತು. ನನಗೆ ಈ ಹಿಟ್ ಕೌಂಟರ್ ಸೆಟ್ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದು ಗೆಳೆಯ ರಾಜೇಶ್ ಮಂಜುನಾಥ್. ಮತ್ತು ಅನೇಕ ವಿಚಾರಗಳಲ್ಲಿ ಸಹಕರಿಸುವ ರಾಜೇಶ್‍ಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಕಡಿಮೆಯೇ..
ಮತ್ತೆ ನನಗೆ ಈಗ ಬರೆಯುವ ಹವ್ಯಾಸ ಹೇಗೆ ಮೂಡಿತೋ ಗೊತ್ತಿಲ್ಲ. ವಾರಕ್ಕೊಂದು ಲೇಖನವೆನ್ನುವುದು ನನ್ನ ನಿಯಮ. ಮತ್ತು ನಾನು ಎಂದೂ ಆತುರವಾಗಿ ಬರೆಯುವವನಲ್ಲ. ಬರೆದಿದ್ದು ನನಗಿಷ್ಟವಾಗಬೇಕು. ಅದರ ಅನುಭವ ಗಾಡವಾಗಿ ಕಾಡಿರಬೇಕು. ಆಗ ಮಾತ್ರ ಅದನ್ನು ಬರೆಯುತ್ತಾ enjoy ಮಾಡುತ್ತೇನೆ. ಬಹುಶಃ ಇದೆಲ್ಲಾ ನನ್ನ ಫೋಟೊಗ್ರಫಿ ದೃಷ್ಟಿಕೋನ ಸಹಕರಿಸಬಹುದೇನೋ.
ಮತ್ತೆ ಹೊಸತು ಕೊಡಬೇಕೆನ್ನುವುದು ನನಗೆ ನಾನೇ ಹಾಕಿಕೊಂಡ ನಿಯಮ. ಹಾಗೂ ಪ್ರತಿ ವಿಚಾರವೂ ವೈವಿಧ್ಯಮಯವಾಗಿರಲೇಬೇಕು ವಿಚಾರಗಳು ಸಿಗದಿದ್ಡಾಗ ಬರೆಯದೇ ಸುಮ್ಮನಿದ್ದುಬಿಡುತ್ತೇನೆ. ಸುಮ್ಮನೇ ಬ್ಲಾಗ್ ತುಂಬಿಸುವುದು ನನಗಿಷ್ಟವಿಲ್ಲ. ಅದಕ್ಕೆ ನಿಮಗೂ ಇಷ್ಟವಾಗಬಹುದು.

ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ. ಪ್ರೋತ್ಸಾಹ ನೀಡುತ್ತಿರಿ.

shivu.k said...

ದೀಪಸ್ಮಿತ ಕುಲದೀಪ್ ಸರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನನಗೆ ಮುಖತಃ ಸಿಕ್ಕಿದ್ದು ಖುಷಿಯಾಯ್ತು. ಹೀಗೆ ಬರುತ್ತಿರಿ..

shivu.k said...

ರಂಜಿತಾ,

ನನ್ನ ಫೋಟೊ ತುಂಬಾ ಇಷ್ಟಪಡುವವರಲ್ಲಿ ನೀವು ಒಬ್ಬರು ಅನ್ನುವುದು ನನಗೆ ಖುಷಿ ವಿಚಾರ. ನೀವು ಬೇಗ ಒಂದು ಫೋಟೋಗ್ರಫಿ ಕ್ಲಾಸ್ ಸೇರಿಕೊಂಡು ನಮ್ಮ ಗುಂಪಿಗೆ ಬಂದುಬಿಡಿ.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಮಂಗಳೂರಿಯನ್ ವಿನೋದ್ ಕುಮಾರ್ ಸರ್,

ನೀವು ನನ್ನ ಛಾಯಾಕನ್ನಡಿ ಬ್ಲಾಗನ್ನು ತಪ್ಪದೇ ನೋಡುತ್ತೀರಿ ಅಂತ ಗೊತ್ತಾಗಿ ಖುಷಿಯಾಯ್ತು. ನಿಮ್ಮ ಪ್ರೊತ್ಸಾಹ ಹೀಗೆ ಇರಲಿ...ಬಹುಷಃ ಕಾಮೆಂಟ್ ಹಾಕದಿದ್ದರೂ ನನ್ನ ಬ್ಲಾಗನ್ನು ನಿಮ್ಮಂತೆ ತಪ್ಪದೇ ನೋಡುವವರು ನೂರಾರು ಜನರಿರಬಹುದು. ಅದರಿಂದಾಗ ಇಷ್ಟು ಬೇಗ ೨೫೦೦೦ ಕ್ಲಿಕ್ಕಿಂಗ್ಸ್ ಆಗಿರಬೇಕೆಂದು ನನ್ನ ಭಾವನೆ.

ಹೀಗೆ ಬರುತ್ತಿರಿ..ಧನ್ಯವಾದಗಳು.

shivu.k said...

ಡಾ.ದೇವರಾಜ್,

ನೀವು ಒಂದು ಬ್ಲಾಗ್ ಮಾಡುವ ಮನಸ್ಸು ಮಾಡಿದ್ದೀರಿ. ಅದಕ್ಕೆ ಸಂತೋಷ. ಆದ್ರೆ ಇನ್ನು ಏನು ಬರೆದಿಲ್ಲವೇಕೆ. ನೀವು ನನ್ನ ಬ್ಲಾಗನ್ನು ನೋಡುವವರಲ್ಲಿ ಒಬ್ಬರು ಅನ್ನುವ ವಿಚಾರ ನನಗೆ ಸಂತೋಷವನ್ನು ಕೊಡುತ್ತದೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಸುಧೇಶ್,

ಸಂತೋಷದ ವಿಚಾರಗಳನ್ನು ಮತ್ತು ಬೇಸರದ ವಿಚಾರಗಳನ್ನು ಹೇಳಿಕೊಳ್ಳುವುದರಿಂದ ಮನಸ್ಸು ಹಗುರಾಗುತ್ತದಂತೆ. ಅದಕ್ಕೆ ಇದೆಲ್ಲಾ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸಲೀಂ,

ನನ್ನ ಈ ಲೇಖನವನ್ನು ಒಂದು ವಾರ್ಷಿಕ ಪತ್ರಿಕೆಗೆ ಹೋಲಿಸಿದ್ದೀರಿ..ಇದು ಸಣ್ಣ ಪ್ರಯತ್ನವಷ್ಟೇ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ನೀವು ತಡವಾಗಿ ಬಂದಿರುವುದಕ್ಕೆ ಬೇಸರವಿಲ್ಲ. ನಾನು ಇತ್ತೀಚೆಗೆ ಕೆಲಸದ ಒತ್ತಡದಿಂದಾಗಿ ಎಲ್ಲರ ಬ್ಲಾಗಿಗೂ ತಡವಾಗಿ ಹೋಗುತ್ತಿದ್ದೇನೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ...

Prabhuraj Moogi said...

Congratulation sir, well deserved...

ಹಾಗೇ ಅವತಾರ್ ಲೇಖನ ಬಹಳ ಚೆನ್ನಾಗಿತ್ತು, ಹಿಂದೊಮ್ಮೆ ಐಸ್ ಏಜ್ ಬಗ್ಗೆ ಬರೆದಿದ್ದ ಇಂಥ್ ಸಿನಿಮಾಗಳನ್ನು ಹೇಗೆ ತಯ್ಯಾರಿಸುತ್ತಾರೆ... ಲೇಖನ ಈ ಡಿಜಿಟಲ್ ಫಿಲಂಗಳ ಬಗ್ಗೆ ಒಳ್ಳೇ ಮಾಹಿತಿ ಕೊಟ್ಟಿದ್ದು ನೆನಪಾಗಿ ಮತ್ತೆ ಓದಿದೆ... ಹಾಗೆ ಈ ಫಿಲ್ಮ್, ಫೋಟೊಗ್ರಾಫಿ ತಂತ್ರಜ್ಞಾನದ ಬಗ್ಗೆ ಮತ್ತೆ ಸಾಧ್ಯವಾದಾಗ ಬರೀತಾ ಇರಿ...

shivu.k said...

ಪ್ರಭು,

ಅವತಾರ್ ಸಿನಿಮಾ ಬಗೆಗಿನ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ನನಗು ಹೀಗೆ ಅನೇಕ ಸಿನಿಮಾಗಳ ಬಗ್ಗೆ ಅವುಗಳ ತಂತ್ರಜ್ಞಾನದ ಬಗ್ಗೆ ಬರೆಯಲು ಇಷ್ಟ. ಆದ್ರೆ ಸಮಯವಿಲ್ಲ. ನೋಡೋಣ ಆಗಾಗ ಹೀಗೆ ಪ್ರಯತ್ನಿಸುತ್ತೇನೆ.

dhanu said...

ನಿಮ್ಮಗೆ ಮತ್ತಷ್ಟು ಪ್ರಶಸ್ತಿಗಳು ಸಿಗಲಿ.....
ನಿಮ್ಮದು ಖಂಡಿತ ನಿಮ್ಮದು "ವಂಡರ್ ಕಣ್ಣಾಗಲ್ಲಿ"
ಎಂದು ಹಾರೈಸುತ್ತಾ....
ಮತ್ತಷ್ಟು ಒಳ್ಳೆಯ ಬರಹಗಳ ನೀರಿಕ್ಷೆಯಲಿ.................

dhanu said...

ನಿಮ್ಮಗೆ ಮತ್ತಷ್ಟು ಪ್ರಶಸ್ತಿಗಳು ಸಿಗಲಿ.....
ನಿಮ್ಮದು ಖಂಡಿತ ನಿಮ್ಮದು "ವಂಡರ್ ಕಣ್ಣಾಗಲ್ಲಿ"
ಎಂದು ಹಾರೈಸುತ್ತಾ....
ಮತ್ತಷ್ಟು ಒಳ್ಳೆಯ ಬರಹಗಳ ನೀರಿಕ್ಷೆಯಲಿ.................