Monday, November 16, 2009

ಧನ್ಯವಾದಗಳು!

ನಿನ್ನೆ ಬಿಡುಗಡೆಯಾದ ನಮ್ಮ ಮೂರು ಪುಸ್ತಕಗಳಿಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಸೇರಿದ್ದ ಗಣ್ಯರು, ಬ್ಲಾಗ್ ಗೆಳೆಯರು, ಬಂಧುಮಿತ್ರರು, ವೃತ್ತಿಭಾಂದವರು, ಪುಟ್ಟಮಕ್ಕಳು, ಅವರಿಂದ ಬಂದ ಹಾರೈಕೆಗಳು! ಇವೆಲ್ಲಾ ನಡೆಯುತ್ತಿದೆಯಾ! ಅನ್ನುವ ಭ್ರಮೆಯಲ್ಲಿಯೇ ನಾನಿದ್ದೆ. ಇದೊಂದು ನಿರೀಕ್ಷೆ ಮೀರಿ ಯಶಸ್ವಿಯಾದ ಕಾರ್ಯಕ್ರಮ ನಾನು ಎಂದಿನಂತೆ ಅನೇಕ ಪುಸ್ತಕ ಕಾರ್ಯಕ್ರಮಗಳಿಗೆ ಹೋಗಿದ್ದಾಗ ಹೊಸಬರ ಪುಸ್ತಕಗಳಿಗೆ ನೂರಕ್ಕಿಂತ ಕಡಿಮೆ ಜನರು ಸೇರಿರುತ್ತಿದ್ದರು. ಇಲ್ಲಿ ನಾನು ಮತ್ತುಪ್ರಕಾಶ್ ಹೆಗಡೆಯವರಿಬ್ಬರಿಗೂ ಇದು ಚೊಚ್ಚಲ ಪುಸ್ತಕ ಸಂಭ್ರಮ. ಕೆಲ ಕಾರ್ಯಕ್ರಮಗಳಲ್ಲಂತೂ ಮುವತ್ತು, ನಲವತ್ತು, ಐವತ್ತು ದಾಟುತ್ತಿರಲಿಲ್ಲ. ನಾವು ನಮ್ಮ ಪುಸ್ತಕಗಳ ಬಿಡುಗಡೆಗೆ ನಮ್ಮ ಮೂರು ಜನರಿಂದ ಸೇರಿ ಒಟ್ಟಾರೆ ನೂರರಿಂದ ನೂರೈವತ್ತು ಗೆಳೆಯರು ಬರಬಹುದು ಅಂದುಕೊಂಡಿದ್ದೆವು. ಮತ್ತು ಪುಸ್ತಕಗಳು ಅಲ್ಲೇ ಏನೇ ಡಿಸ್ಕೌಂಟ್ ಕೊಟ್ಟರೂ ಒಬ್ಬೊಬ್ಬರದೂ ಐವತ್ತು ಮೀರಿ ಮಾರಲಾಗದು ಅಂದುಕೊಂಡಿದ್ದೆವು. ನಮ್ಮ ಪ್ರಕಾಶಕರಾದ ಸೀತಾರಾಮ ಹೆಗಡೆಯವರು ಅಷ್ಟು ಮಾರಾಟವಾದರೆ ಅಡ್ಡಿಯಿಲ್ಲ ಒಬ್ಬೊಬ್ಬರದು ನೂರು ಮಾರಾಟವಾದರೆ ನನಗದು ಬಂಪರ್ ಅಂದಷ್ಟೇ ಹೇಳಿದ್ದರು.

ಬೆಳಿಗ್ಗೆ ನಾನು ಸ್ವಲ್ಪ ತಡವಾಗಿ ಬಂದೆನಾದರೂ ದಿವಾಕರ್ ಹೆಗಡೆ ಮತ್ತು ಪ್ರಕಾಶ್ ಹೆಗಡೆ, ಮತ್ತು ಬಂಧುಗಳು ಮೊದಲೇ ಬಂದು ಕೆಲವು ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದರು.

ನಂತರ ಮುಖ್ಯ ಅತಿಥಿಗಳು, ಗೆಳೆಯರು ಬರಲಾರಂಭಿಸಿದರು. ಕಾರ್ಯಕ್ರಮ ಶುರುವಾಯಿತು. ಅದರ ವಿವರಗಳನ್ನು ಬರೆಯಲು ನಾನು ಇಷ್ಟಪಡುವುದಿಲ್ಲ. ಅದೆಲ್ಲ ಬರೆದರೆ ಅದು ವರದಿಯಾಗಿಬಿಡುತ್ತದೆ. ಅದೆಲ್ಲಾ ಬಿಟ್ಟು ಬೇರೆ ಕೆಲವೊಂದು ವಿಚಾರಗಳನ್ನು ಹೇಳಲಿಚ್ಚಿಸುತ್ತೇನೆ.

ಮೊದಲಿಗೆ ನಾನು ದಿವಾಕರ್ ಹೆಗಡೆ, ಪ್ರಕಾಶ್ ಹೆಗಡೆ ಮೂವರು ವೇದಿಕೆ ಮೇಲೆ ಕೂರಬಾರದು ಅಂತ ತೀರ್ಮಾನಿಸಿದ್ದೆವು. ಮತ್ತು ಮೂರು ಜನರ ಪರವಾಗಿ ದಿವಾಕರ ಹೆಗಡೆ ಚುಟುಕಾಗಿ ಮಾತಾಡಬೇಕೆಂದು ಹೇಳಿದ್ದರಿಂದ ಅವರಷ್ಟೇ ಮಾಡಿದ್ದು. ಮತ್ತೆ ನಮ್ಮ ಪುಸ್ತಕಗಳು ಎಂದಿನ ಸಂಪ್ರಧಾಯದಂತೆ ಒಟ್ಟಿಗೆ ಬಿಡುಗಡೆಯಾದವು. ಬಿಡುಗಡೆಯ ಸಮಯದಲ್ಲಿ ನಾಗೇಶ್ ಹೆಗಡೆಯವರು ಅವರಿಗಿಂತ ಸ್ವಲ್ಪ ದೂರ ನಿಂತಿದ್ದ ನನಗೆ ನನ್ನ ವೆಂಡರ್ ಕಣ್ಣು ಪುಸ್ತಕವನ್ನು "ಶಿವು ಕ್ಯಾಚ್" ಅಂದು ಪಟ್ಟಂತ ಎಸೆದೇ ಬಿಟ್ಟರು. ನನಗೆ ಅನಿರೀಕ್ಷಿತವಾಗಿ ಬಂದ ಅವರ ಮಾತು ಕೇಳುವಷ್ಟರಲ್ಲಿ ನನ್ನ ಪುಸ್ತಕ ನನ್ನೆಡೆಗೆ ಹಾರಿಬಂತು. ತಕ್ಷಣ ನಾನು ಅಷ್ಟೇ ವೇಗವಾಗಿ ಅದನ್ನು ಕ್ಯಾಚ್ ಹಿಡಿದಿದ್ದೆ.[ನಾನು ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಒಳ್ಳೆ ಕ್ರಿಕೆಟರು ಆಗಿದ್ದರಿಂದ]. ಅದನ್ನು ವೇದಿಕೆಯಲ್ಲಿದ್ದ ಎಲ್ಲರು ಸಿನಿಮಾ ದೃಶ್ಯದಂತೆ ನೋಡುತ್ತಿರುವುದನ್ನು ಮಲ್ಲಿಕಾರ್ಜುನ್ ಕ್ಯಾಮೆರಾದಲ್ಲಿ ಸೆರೆಹಿಡಿದೇ ಬಿಟ್ಟಿದ್ದರು. ನಂತರ "ಶಿವು ನೀವು ನಿತ್ಯ ದಿನಪತ್ರಿಕೆಗಳನ್ನು ಮಹಡಿ ಮನೆಗಳಿಗೆ ಎಸೆದು ಬಿಡುಗಡೆ ನ್ಯೂಸುಗಳನ್ನು ಬಿಡುಗಡೆ ಮಾಡುತ್ತೀರಲ್ವ. ಹಾಗೆ ನಾನು ನಿಮ್ಮ ವೆಂಡರ್ ಕಣ್ಣು ಪುಸ್ತಕವನ್ನು ಹಾಗೆ ಸಾಂಕೇತಿಕವಾಗಿ ಎಸೆದು ಲೋಕಾರ್ಪಣೆ ಮಾಡಿದೆ ಅಂದರು.

ನಡುವೆ ದೂರದ ಲಿಬಿಯದಿಂದ ಬಿಸಿಲಹನಿ ಬ್ಲಾಗಿನ ಉದಯ್ ಸರ್ ಫೋನ್ ಮಾಡಿ ನನಗೂ ಮತ್ತು ಪ್ರಕಾಶ್ ಹೆಗಡೆಯವರಿಗೂ ಅಭಿನಂದಿಸಿದ್ದು ಮರೆಯಲಾಗದ ಕ್ಷಣಗಳು. ಇದರ ನಡುವೆ ನನ್ನಕಡೆಯಿಂದ ದಿನಪತ್ರಿಕೆ ಕೊಳ್ಳುವ ಗ್ರ್‍ಆಹಕರೂ ನನ್ನ ಮೇಲಿನ ಪ್ರೀತಿಯಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕಗಳನ್ನು ಖರೀದಿಸಿದರೂ ನಡುವೆ ಗುಜರಾತಿ ಗ್ರ್‍ಆಹಕನೊಬ್ಬ ನನ್ನ ನಾನು ಬರೆದ ವೆಂಡರ್ ಕಣ್ಣು ಪುಸ್ತಕವನ್ನು ಖರೀದಿಸಲು ಬಂದಿದ್ದು ವಿಶೇಷ. ಆತನನ್ನು ಅನೇಕರಿಗೆ ಪರಿಚಯಿಸಿದಾಗ ಆತ ಕನ್ನಡವನ್ನು ಒಂದೊಂದೆ ಆಕ್ಷರವನ್ನು ಕೂಡಿಸಿ ಓದುತ್ತೇನೆ ಅರ್ಥಮಾಡಿಕೊಳ್ಳುತ್ತೇನೆ. ಶಿವುರವರ ಬ್ಲಾಗಿನ ಲೇಖನಗಳನ್ನು ಓದಿ ಅರ್ಥಮಾಡಿಕೊಳ್ಳುತ್ತೇನೆ. ಓದುವಾಗ ತುಂಬಾ ನಗುಬರುತ್ತದೆ ಅಂದಾಗ ನನಗಂತೂ ತುಂಬಾ ಖುಷಿಯಾಗಿತ್ತು. ಒಬ್ಬ ಗುಜರಾತಿ ಗ್ರಾಹಕ ಕನ್ನಡ ಬ್ಲಾಗ್ ಲೇಖನಗಳನ್ನು ಓದಿ ಇಷ್ಟಪಟ್ಟು ಕನ್ನಡ ಪುಸ್ತಕವನ್ನು ಖರೀದಿಸಲು ಬಂದಿದ್ದು ನಮ್ಮ ಕಾರ್ಯಕ್ರಮದ ವಿಶೇಷವೇ ಸರಿ.

ಇನ್ನೂರು ಜನಕ್ಕೆ ತಿಂಡಿಯ ವ್ಯವಸ್ಥೆಯಾಗಿದ್ದರೂ ನಮ್ಮೂರ ಹೋಟಲಿನವರು ೨೨೫ ಪ್ಲೇಟ್ ತಂದಿದ್ದರಂತೆ. ಅಷ್ಟು ಪ್ಲೇಟುಗಳು ಹನ್ನೊಂದು ಮುವತ್ತರ ಹೊತ್ತಿಗೆ ಕಾಲಿಯಾಗಿಬಿಟ್ಟವಂತೆ. ಅದರ ನಂತರ ಸುಮಾರು ಜನರು ಬಂದರು ಬಾಗಿಲಲ್ಲೇ ನಿಂತು ಕಾರ್ಯಕ್ರಮವನ್ನು ಪೂರ್ತಿಯಾಗಿ ವೀಕ್ಷಿಸಿದರು. ಕೊನೆಯಲ್ಲಿ ದೂರದ ಗದಗದಿಂದ ಬ್ಲಾಗ್ ಗೆಳೆಯ ಶಿವಶಂಕರ ಯಳವತ್ತಿ ಬರುವ ಹೊತ್ತಿಗೆ ಸಮಯ ಒಂದುಗಂಟೆ ಇಪ್ಪತ್ತು ನಿಮಿಷ. ಅವರು ಫೋನ್ ಮಾಡಿದಾಗ ಅಷ್ಟು ದೂರದಿಂದ ನಮ್ಮ ಪುಸ್ತಕ ಕಾರ್ಯಕ್ರಮಕ್ಕೆ ಬಂದಿರುವುದು, ದೂರದ ಸಿರಸಿ ಸಿದ್ಧಾಪುರ, ಧಾರವಾಡದಿಂದ ಪುಸ್ತಕಪ್ರೇಮಿಗಳು ಬಂದಿದ್ದನ್ನು ನೋಡಿ ನನಗಾದ ಆನಂದವನ್ನು ಪದಗಳಲ್ಲಿ ವರ್ಣಿಸಲಾರೆ. ಒಟ್ಟಾರೆ ನಾನೂರಕ್ಕೂ ಹೆಚ್ಚು ಪುಸ್ತಕಪ್ರ್‍ಏಮಿಗಳು ಹೊಸಬರ ಪುಸ್ತಕ ಬಿಡುಗಡೆ ಸಂಭ್ರಮದಲ್ಲಿ ಭಾಗಿಯಾಗಿದ್ದಂತೂ ನನಗೆ ಅಚ್ಚರಿ ಉಂಟು ಮಾಡಿತ್ತು.

ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ’ ನೂರೈವತ್ತಕ್ಕೂ ಹೆಚ್ಚು ಮಾರಾಟವಾಗಿತ್ತು. ಪ್ರಕಾಶ್ ಹೆಗಡೆಯವರ ಇನ್ನೂರೈವತ್ತಕ್ಕೂ ಹೆಚ್ಚು ಪುಸ್ತಕಗಳು ಬಿಸಿದೋಸೆಯಂತೆ ಮಾರಾಟವಾಗಿದ್ದು ಮತ್ತೆ ಅವರ ಬಂದ ಈಮೇಲ್ ಪ್ರಕಾರ ನೂರ ಎಪ್ಪತೈದು ಪುಸ್ತಕಗಳು ಬೇರೆ ಊರಿನವರಿಗೆ ಬೇಕಿವೆಯೆಂದು ಹೇಳಿದ್ದಾರೆ. ಮತ್ತೆ ನನ್ನ "ವೆಂಡರ್ ಕಣ್ಣು" ಕೂಡ ಇನ್ನೂರ ಎಂಬತ್ತು ಪುಸ್ತಕಗಳು ಅಲ್ಲೇ ಮಾರಾಟವಾಗಿದೆಯೆಂತೆ. ಅದಲ್ಲದೇ ಇವತ್ತು ಬೆಳಿಗ್ಗೆಯಿಂದ ಈ ಲೇಖನ ಬರೆಯುವವರೆಗೆ ನನ್ನ ವೃತ್ತಿಭಾಂದವರು, ಗ್ರಾಹಕರು, ಗೆಳೆಯರು ಇಷ್ಟಪಟ್ಟು ಖರೀದಿಸಿರುವುದರಿಂದ ಇದುವರೆಗೆ ಮುನ್ನೂರ ಮುವತ್ತು "ವೆಂಡರ್ ಕಣ್ಣು" ಪ್ರತಿಗಳು ಮಾರಾಟವಾಗಿಬಿಟ್ಟಿವೆ. ಮತ್ತೆ ನನಗೆ ಮೇಲ್ ಮಾಡಿ ವಿಳಾಸ ಕೊಟ್ಟ ಹೊರ ಊರಿನವರಿಗೆ ಕಳಿಸಬೇಕಾದ ಪ್ರತಿಗಳು ಸದ್ಯ ೨೦ ದಾಟಿದೆ.

ನಮ್ಮ ಪುಟ್ಟಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರಾದ ಪ್ರಕಾಶಕರಾದ ಸೀತಾರಾಮ್ ಹೆಗಡೆಯವರಿಗೂ, ನಮ್ಮೂರ ಹೋಟಲ್ ಮಾಲೀಕರಾದ ಕೃಷ್ಣ ಹೆಗಡೆಯವರಿಗೂ, ಕಾರ್ಯಕ್ರಮದ ಪ್ರಾಯೋಜಕರಾದ ಸತ್ಯಹೆಗಡೆಯವರಿಗೂ, ನನಗಿಂತ ಮೊದಲೇ ಬಂದು ಫೋಟೊಗಳನ್ನು ತೆಗೆಯಲಾರಂಭಿಸಿ ಇಡೀ ಕಾರ್ಯಕ್ರಮದಲ್ಲಿ ಯಾರು ತಪ್ಪಿಸಕೊಳ್ಳದಂತೆ ಕ್ಯಾಮೆರಾದಲ್ಲಿ ಸೆರೆಯಿಡಿದ ಮಲ್ಲಿಕಾರ್ಜುನ್‍ಗೂ, ಸೊಗಸಾಗಿ ನಿರೂಪಣೆ ಮಾಡಿದ ಭಾರತಿಹೆಗಡೆಯವರಿಗೂ, ಅಚ್ಚುಕಟ್ಟಾದ ದ್ವನಿವ್ಯವಸ್ಥೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಷ್ಟು ಚೆನ್ನಾದ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟ ಕಾರ್ಯಕತ್ರರಿಗೂ, ಮತ್ತು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪುಸ್ತಕಪ್ರೇಮಿಗಳಿಗೆ ನನ್ನ ಅನಂತಾನಂತ ಧನ್ಯವಾದಗಳು.

ಇಲ್ಲಿ ಕೆಲವು ಫೋಟೊಗಳನ್ನು ಮಾತ್ರ ಹಾಕಿದ್ದೇವೆ. ಮತ್ತಷ್ಟು ಫೋಟೊಗಳನ್ನು ಪ್ರಕಾಶ ಹೆಗಡೆಯವರು ಅವರ ಇಟ್ಟಿಗೆ ಸಿಮೆಂಟು ಬ್ಲಾಗಿನಲ್ಲಿ ಹಾಕುತ್ತಾರೆ.

ನೀವು ಒಳಗೆ ಕೂತು ಬರೆದು ಪ್ರಿಂಟ್ ಮಾಡಿ ಕಳಿಸಿದ್ದನ್ನು ನಾನು ಹೊರಗೆಲ್ಲಾ ಹಂಚುತ್ತೇವೆ. ನನ್ನ ದಿನಪತ್ರಿಕೆ ವಿತರಕರ ಜೊತೆ ಶ್ರೀದೇವಿ ಕಳಸದ.

ಪರಂಜಪೆ ಮತ್ತು ಡಾ.ಬಿ.ವಿ.ರಾಜಾರಾಂ ಪುಸ್ತಕಗಳ ಲೋಕದಲ್ಲಿ

ಪ್ರಕಾಶ್ ಹೆಗಡೆಯವರ ಜೊತೆ ಕ್ಷಣಚಿಂತನೆ ಚಂದ್ರು ಸರ್, ನವೀನ್.

ಬ್ಲಾಗ್ ಗೆಳೆಯರಾದ ಡಾ. ಸತ್ಯನಾರಯಣ ರಾವ್ ಗೆಳೆಯರೊಂದಿಗೆ


ಗಣ್ಯರ ನಡುವಿನ ಮಾತುಕತೆ.

ಬ್ಲಾಗ್ ಗೆಳೆಯರ ಜೊತೆ ಫೋಟೊಗ್ರಫಿ ಗೆಳೆಯರು.

ವಸುದೇಂಧ್ರರವರ ಜೊತೆ ನಾನು ಮತ್ತು ಪ್ರಕಾಶ್ ಹೆಗಡೆ.

"ಶಿವು, ನಿನ್ನ ವೆಂಡರ್ ಕಣ್ಣು ಕ್ಯಾಚ್"
ಹೆಸರೇ...ಬೇಡ ಮತ್ತು ಉದ್ಧಾರ ಮತ್ತು ಸಂತೆ ಪುಸ್ತಕಗಳಿಗೆ ಸುಂದರವಾದ ಮುಖಪುಟಗಳನ್ನು ರಚಿಸಿಕೊಟ್ಟ ಅಪಾರರವರಿಗೆ ಸನ್ಮಾನ.

ನನ್ನ ವೆಂಡರ್ ಕಣ್ಣಿನ ಕೆಲವು ಚಿತ್ರಗಳು ಮತ್ತು ಪ್ರಕಾಶ್ ಹೆಗಡೆಯವರ ಹೆಸರೇ ಬೇಡ ಪುಸ್ತಕಕ್ಕೆ ತನ್ನದೇ ಶೈಲಿಯ ಚಿತ್ರಗಳನ್ನು ಬರೆದುಕೊಟ್ಟ ಅಜಿತ್ ಕೌಂಡಿನ್ಯಗೆ ಸನ್ಮಾನ.
ನನ್ನ ವೆಂಡರ್ ಕಣ್ಣು ಚಿತ್ರಕ್ಕೆ ಮುಖಪುಟ ಚಿತ್ರದ ಜೊತೆಗೆ ಒಳಚಿತ್ರಗಳನ್ನು ರಚಿಸಿದ ಪಿ.ಟಿ.ಪ್ರಮೋದ್‍ರಿಗೆ ಸನ್ಮಾನ.

ಪ್ರಕಾಶ ಹೆಗಡೆಯವರ ಹೆಸರೇ..ಬೇಡ ಪುಸ್ತಕದ ಬಗ್ಗೆ ಮಾತಾಡುತ್ತಿರುವ ಜಿ.ಎನ್.ಮೋಹನ್.

ಫೋಟೊ ತೆಗೆಯುತ್ತಲೇ ಅತಿಥಿಗಳ ಮಾತು ಕೇಳಲು ಕುಳಿತ ಮಲ್ಲಿಕಾರ್ಜುನ್.

ಒಂದೂ ಸೀಟು ಖಾಲಿಯಿಲ್ಲ!

ದಿವಾಕರ ಹೆಗಡೆಯವರ ಮಾತುಗಾರಿಕೆ.

ಯಶವಂತ್ ಸರದೇಶ್ ಪಾಂಡೆಯವರ ಮಾತಿನ ಶೈಲಿ.

ಸೀತಾರಾಂ ಹೆಗಡೆಯವರಿಂದ ಸ್ವಾಗತ ಭಾಷಣ.

ಪ್ರಕಾಶಕರಾದ ಸೀತಾರಾಮ ಹೆಗಡೆಯವರಿಂದ ಡಾ.ಬಿ.ವಿ ರಾಜರಾಂರವರಿಗೆ ಸನ್ಮಾನ.
ಪ್ರಕಾಶ್ ಹೆಗಡೆಯವರ ಪರಿವಾರ.
ಈಗ ಸದ್ಯ ನಮ್ಮ ಪುಸ್ತಕಗಳು ನವಕರ್ನಾಟಕದ ಎಲ್ಲಾ ಮಳಿಗೆಗಳಲ್ಲಿ ಸಿಗುತ್ತವೆ. ನಂತರ ಮೇಪ್ಲವರ್ ಮೀಡಿಯಾ ಹೌಸ್‍ನಲ್ಲಿ ಕೂಡ ನಾಳೆಯಿಂದ ಸಿಗುತ್ತವೆ.
ಚಿತ್ರಗಳು ಮಲ್ಲಿಕಾರ್ಜುನ್.
ಲೇಖನ. ಶಿವು.ಕೆ

89 comments:

Anveshi said...

ಶಿವು,
ಹ್ಯಾಟ್ಸಾಫ್... ಶುಭಾಶಯಗಳು... ಇದೇ ಥರಾ ನಿಮ್ಮ ಸಾಹಿತ್ಯ ಕೃಷಿ ಮುಂದುವರಿಯಲಿ...

Guruprasad said...

ಇಂತಹ ಅದ್ಬುತ ಪ್ರತಿಕ್ರಿಯೆ ನೀವು ನೀರಿಕ್ಷಿಸಿರಲಿಲ್ಲವೇನೋ....ಅಲ್ವ.... ನನಗಂತು ನಿಮ್ಮ ಕಾರ್ಯಕ್ರಮಕ್ಕೆ ಬಂದು , ಎಲ್ಲರನ್ನು ಬೇಟಿ ಮಾಡಿ, ಅಲ್ಲಿ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ... ನಿಜಕ್ಕೂ,, ಕಾರ್ಯಕ್ರಮ ತುಂಬ ಚೆನ್ನಾಗಿ ಮೂಡಿ ಬಂತು,, ಸಣ್ಣಗೆ ಬೀಳುತಿದ್ದ ಮಳೆಯಲ್ಲೂ,, ನಿಮ್ಮ ಬ್ಲಾಗ್ ಸ್ನೇಹಿತರು. ಪುಸ್ತಕ ಪ್ರಿಯರು ಅಸ್ತೊಂದ್ ಸಂಕೆಯಲ್ಲಿ ಬಂದಿದ್ದು,, ನಿಮ್ಮ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನಕ್ಕೆ ಸಾಕ್ಷಿ...
ಶುಭವಾಗಲಿ.. ನಿಮ್ಮ ಮೂರು ಜನರ ಪುಸ್ತಕಗಳು ಇನ್ನು ಹೆಚ್ಚು ಮಾರಾಟವಾಗಿ,, ನಿಮಗೆ ಮತ್ತಷ್ಟು ಪುಸ್ತಕ ಬರೆಯುವುದಕ್ಕೆ ಸ್ಪೂರ್ತಿ ಕೊಡಲಿ ಎಂದು ಹಾರೈಸುತ್ತೇನೆ..
ಗುರು

ಕ್ಷಣ... ಚಿಂತನೆ... said...

ಶಿವು ಅವರೆ, ಪುಸ್ತಕ ಬಿಡುಗಡೆ ಸಮಾರಂಭ. ಅಲ್ಲಿನ ವಾತಾವರಣ ಎಲ್ಲದರ ಬಗ್ಗೆ ಸರಳವಾಗಿ ನಿರೂಪಿಸಿದ್ದೀರಿ. ಅಪರೂಪದ ಫೋಟೋಗಳನ್ನು ಕಂಡು ಖುಷಿಯಾಯಿತು.
(ಅದ್ಭುತ ಕ್ಷಣಗಳನ್ನು ಸೆರೆಹಿಡಿದ ಮಲ್ಲಿಕಾರ್ಜುನ ಅವರಿಗೆ ಧನ್ಯವಾದಗಳು). ಪುಸ್ತಕ ಪ್ರೀತಿಗೆ ಅಷ್ಟೊಂದು ಜನ ಸೇರಿದ್ದು, ಬೇಡಿಕೆ ಇವೆಲ್ಲ ಅಚ್ಚರಿಯೇಹೌದು.

ರವೆ ವಾಂಗೀಭಾತ್, ಸಿಹಿತಿನಿಸು ಇವೆಲ್ಲ ತುಂಬಾ ರುಚಿಯಾಗಿದ್ದವು.

ನಿಮ್ಮ ಹಸ್ತಾಕ್ಷರ ಕೇಳಿದಾಗ, ನೀವು ಇದು ಭ್ರಮೆಯೋ, ಕನಸೋ,ನನಸೋ ಒಂದೂ ತಿಳಿಯುತ್ತಿಲ್ಲ ಎಂದಿರಿ. ಆದರೆ ಅದು ವಾಸ್ತವ, ಕನಸು ನನಸಾಗಿದ್ದು ಎಲ್ಲವೂ ಇದೆ ಎಂದು ನಿಮಗೆ ತಿಳಿಸಿದೆ.

ಇನ್ನಷ್ಟು ಹೊಸ ವಿಚಾರದ, ನಿಮ್ಮ ವೃತ್ತಿ-ಪ್ರವೃತ್ತಿ ಯ ವಿಚಾರಗಳೊಂದಿಗೆ ಮತ್ತಷ್ಟು ಪುಸ್ತಕಗಳು ಬರಲಿ ಎಂದು ಆಶಿಸುತ್ತೇನೆ.

ಧನ್ಯವಾದಗಳು.

ಸ್ನೇಹದಿಂದ,
ಚಂದ್ರು

ಶಿವಪ್ರಕಾಶ್ said...

ಶಿವು,
ನಮಗೆ ಕಾರ್ಯಕ್ರಮ ತುಂಬಾ ಕುಶಿಕೊಟ್ಟಿತು.
ಜಿ.ಎನ್.ಮೋಹನ್ ಹಾಗು ಯಶವಂತ್ ಸರದೇಶ್ ಪಾಂಡೆಯವರ ಮಾತುಗಳು ಸೂಪರ್

sunaath said...

ಸ್ವತಃ ಬರಲಾಗದಿದ್ದರೂ ಸಹ ಫೋಟೋಗಳನ್ನು ನೋಡಿ ಹಾಗೂ ನಿಮ್ಮ ವಿವರಣೆ ಓದಿ ಸಂತೋಷಪಟ್ಟೆ. ಇಂತಹ ನಿಮ್ಮ ಕಾರ್ಯಕ್ರಮಗಳು ಇನ್ನಷ್ಟು ಜರುಗಲಿ ಎಂದು ಹಾರೈಸುತ್ತೇನೆ.

ಅಂತರ್ವಾಣಿ said...

shivanna,

kaaraanaantaagaLinda baralu aagalilla. aadaroo TV9 li haagu illi nimma karyakrama nodide, odide.

mattomme abhinandanegalu

AntharangadaMaathugalu said...

ಶಿವು ಸಾರ್...
ಕಾರಣಾಂತರಗಳಿಂದ ಬರಲಾಗದಿದ್ದರೂ, ಇಲ್ಲಿ ಚಿತ್ರಗಳನ್ನು ನೋಡಿ, ನಿಮ್ಮ ವಿವರಣೆ ಓದಿ ಬಹಳ ಸಂತಸ ಪಟ್ಟೆ. ಪುಸ್ತಕವನ್ನೂ ಖಂಡಿತಾ ಕೊಂಡು ಓದುತ್ತೇನೆ... ಮತ್ತೊಮ್ಮೆ ನಿಮಗೆ, ನಿಮ್ಮ ಯಶಸ್ಸಿಗೆ ಅಭಿನಂದನೆಗಳು.....

ಶ್ಯಾಮಲ

ಸಾಗರದಾಚೆಯ ಇಂಚರ said...

Hearty Congratulations,
I am so happy for you, will take your book once i am there
Tumba tumba hemme enista ide

ದೀಪಸ್ಮಿತಾ said...

ಶಿವು ಸರ್,ಊರಲ್ಲಿ ಇಲ್ಲದ ಕಾರಣ ಬರಲಾಗಲಿಲ್ಲ. ತುಂಬಾ ಒಳ್ಳೆ ಛಾನ್ಸ್ ಕಳೆದುಕೊಂಡೆ ಅನಿಸುತ್ತಿದೆ. ಬಂದಿದ್ದರೆ ಅನೇಕ ಬ್ಲಾಗ್ ಮಿತ್ರರನ್ನು ಭೇಟಿ ಮಾಡಬಹುದಿತ್ತು, ಮತ್ತು ನಾನು ಯಾವಾಗಲೂ ಮೆಚ್ಚಿಕೊಳ್ಳುತ್ತಿದ್ದ ನಾಗೇಶ್ ಹೆಗಡೆ ಅಂತಹ ಹಿರಿಯ ಲೇಖಕ,ವಿಜ್ಞಾನಿಯನ್ನು ಮಾತಾಡಿಸಬಹುದಿತ್ತು. ಇರಲಿ, ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಲಿವೆ ಎಂದು ನನ್ನ ಆಶಾಭಾವನೆ. ಆಗ ಇದೆಲ್ಲ ಸಾಧ್ಯವಾಗಬಹುದು. ಕಾರ್ಯಕ್ರಮಕ್ಕೆ ಅಭಿನಂದನೆಗಳು

ಕೃಷಿಕನ ಕಣ್ಣು said...

Shivuuuuuu....
Abhinandanegaluuuuuu....(ondu ton!)
Ee "Habba"kke khandita baraleebeeku endukondiddenaadaruu
anivaaryavaagi saadhyavaagale illa. Baralu aagalillavallaa endukolluttiddante illi, "Habba"da bagge nimma vivarane & Mlliya photos!...Oh!,"Habba" miss maadikonda beesaravannu.........
mattashtu hechchisibittavu!!!.
"Shivu catch" kshnavannu sariyaagi catch maadi illi nammatta 'throw' maadida Malliguu thanks.
'Vender Kannu' kannadadamattige ondu aparuupada vastuvannolagonda
pustakave sari.
Pustaka noodalu utsukanaagiruvenu.
Preetiyinda...
Nagendra Muthmurdu.

Ashok Uchangi said...

ಶಿವು ಅಭಿನಂದನೆಗಳು!!!

ಕ್ಷಮಿಸಿ....ಎಷ್ಟೇ ಪ್ರಯತ್ನ ಪಟ್ಟರೂ ಬರಲಾಗಲಿಲ್ಲ...ನಾನು ಕೆಸುವಿನಮನೆ ಇಬ್ಬರೂ ಹೊರಟಿದ್ದೆವು

ನಿಮಗೆ (ನಿಮ್ಮ ಹುಡುಗರಿಗೆ)(ಪೇಪರ್) ಕ್ಯಾಚ್ ಹಾಕಿ ಅಭ್ಯಾಸವಲ್ಲವೇ?ಆದ್ರೆ ನಿಮ್ಮ ವೆಂಡರ್ ಕಣ್ಣನ್ನು ನಿಮಗೇ ಕ್ಯಾಚ್ ಹಾಕಿ ನಾಗೇಶ್ ಹೆಗಡೆಯವರು ಬಿಡುಗಡೆ ಮಾಡಿದ ಪರಿಯಂತೂ ಅಮೋಘ!

ನಿನ್ನೆ ರಾತ್ರಿಯಿಂದಲೇ ನಿಮ್ಮ ಬ್ಲಾಗನ್ನು ನೋಡುತ್ತಿದ್ದೆ.ಪುಸ್ತಕ ಬಿಡುಗಡೆಯ ವಿಷಯ ತಿಳಿಯಲು

ಪ್ರಕಾಶ್ ಹೆಗಡೆ ಹಾಗೂ ದಿವಾಕರ್ ಹೆಗಡೆಯವರಿಗೂ ನನ್ನ ಅಭಿನಂದನೆ ತಿಳಿಸಿ
ಅಶೋಕ ಉಚ್ಚಂಗಿ
ಮೈಸೂರು

Ashok Uchangi said...

ಪ್ರಿಯ ಶಿವು

ನಿಮ್ಮೆಲ್ಲರ ಪುಸ್ತಕವೂ ದಿನಪತ್ರಿಕೆಗಳಂತೆ ಬಿಸಿಬಿಸಿಯಾಗಿ ಖರ್ಚಾಗಲಿ!
ಮನೆಮನೆ-ಮನಮನ ತಲುಪಲಿ

ಅಶೋಕ ಉಚ್ಚಂಗಿ
ಮೈಸೂರು

ವನಿತಾ / Vanitha said...

ಶಿವು,
ನಿಮ್ಮ ಫೋಟೋಗಳು ಮತ್ತು ವಿವರಣೆಗಳಿಂದ ನಾವೇ ಅಲ್ಲಿದ್ದ ರೀತಿ ಖುಷಿಯಾಯಿತು..ಅಂದ ಹಾಗೆ ಟಿವಿ ೯ ರಲ್ಲಿ ಬಂದ ಕಾರ್ಯಕ್ರಮ ಕೂಡ ನೋಡಿದೆ..ನಿಮ್ಮ ಯಶಸ್ಸಿಗೆ ಮತ್ತೊಮ್ಮೆ ಅಭಿನಂದನೆಗಳು.

Dileep Hegde said...

ಶಿವು ಸರ್..
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ನಿಮ್ಮೆಲ್ಲರನ್ನೂ ಭೇಟಿಯಾಗಿದ್ದು, ನಾಗೇಶ್ ಹೆಗಡೆ, ಜೀ ಎನ್ ಮೋಹನ್, ಬೀ ವೀ ರಾಜಾರಾಂ ಮತ್ತು ಯಶವಂತ್ ಸರದೇಶಾಪಾಂಡೆ ಅವರ ಮಾತುಗಳನ್ನು ಕೇಳಿದ್ದು ಅದ್ಭುತ ಮತ್ತು ಮರೆಯಲಾಗದ ಅನುಭವ...
ಹಾರ್ದಿಕ ಅಭಿನಂದನೆಗಳು... :)

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ನಿಮ್ಮ ಹಾಗೂ ಪ್ರಕಾಶಣ್ಣರ ಯಶಸ್ಸನ್ನು ಓದಿ, ನೋಡಿ ತುಂಬಾ ಸಂತೋಷವಾಯಿತು. ಹಾರ್ದಿಕ ಅಭಿನಂದನೆಗಳು. ಮತ್ತಷ್ಟು ಪುಸ್ತಕಗಳು ನಿಮ್ಮಿಂದ ಇದೇ ರೀತಿ ಲೋಕಾರ್ಪಣೆಯಾಗಲೆಂದು ಹಾರೈಸುವೆ.

ಚಂದಿನ | Chandrashekar said...

ಶಿವು ಅವರೆ,

ಕಾರ್ಯಕ್ರಮದ ವಿವರಗಳನ್ನು ಚಿತ್ರಗಳೊಂದಿಗೆ ಸೊಗಸಾಗಿ ಬಿಂಬಿಸಿದ್ದೀರಿ...ದೂರದಲ್ಲಿರುವ ನನ್ನಂಥಹವರಿಗೆ ಬಹಳ ನೆರವಾಗುತ್ತದೆ.

ನಿಮ್ಮ ಪುಸ್ತಕಗಳು ಆದಷ್ಟು ಬೇಗ ಮುಗಿದು ಬಹಳಷ್ಟು ಮರುಮುದ್ರಣ ಕಾಣಲಿ ಎಂದು ಹಾರೈಸುವೆ.

ಸವಿಗನಸು said...

ಶಿವು ಸರ್,
ನಿಮ್ಮ ಫೋಟೋಗಳು ಮತ್ತು ವಿವರಣೆ ನಾವೇ ಅಲ್ಲಿದ್ದ ರೀತಿ ಅನಿಸಿತು....
ಬಹಳ ಖುಷಿಯಾಯಿತು......
ಅಭಿನಂದನೆಗಳು

Pramod P T said...

ಶೀವು,
ಮೊದಲ ಬಾರಿಗೆ ನಿಮ್ಮನ್ನ ಭೇಟಿಯಾದ ಖುಷಿ.
ವೆಂಡರ್ ಕಣ್ಣಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿ ಅಂತ ಹಾರೈಸುತ್ತೇನೆ.

ಪ್ರಮೋದ್

ರಾಜೀವ said...

ಶಿವು ಅವರೇ,

ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಫೋಟೋಗಳು ಚೆನ್ನಗಿ ಮೂಡಿಬಂದಿದೆ.
ನಿಮ್ಮ ವಂಡರ್ ಕಣ್ಣು, ವಂಡರ್ಫುಲ್ಲಾಗಿ ಮಾರಾಟವಾಗಲಿ ಎಂದು ಆಶಯಿಸುತ್ತೇನೆ.
ನಾನು ಕೂಡ ಪುಸ್ತಕ ಕೊಂಡು ಓದುತ್ತೇನೆ.

Naveen ಹಳ್ಳಿ ಹುಡುಗ said...

ನಮಸ್ತೆ ಶಿವಣ್ಣ.. ಇದುವರೆಗೂ ಸುಮಾರು ೪೦೦ಕ್ಕೂ ಹೆಚ್ಚು ಪುಸ್ತಕಗಳ್ಳನ್ನು ಓದಿರುವೆ.. ಆದರೆ ಒಂದೇ ಸಿಟ್ಟಿಂಗ್ನಲ್ಲಿ ಓದಿಸಿಕೊಂಡ ಹೆಗ್ಗಳಿಕೆಗೆ ನಿಮ್ಮ "ವೆಂಡರ್ ಕಣ್ಣು" ಪುಸ್ತಕ ಪಾತ್ರವಾಗುತ್ತದೆ.. ಇರುವ೧೫ ಲೇಖನಗಳಲ್ಲಿ ಒಂದೊಂದನ್ನು ಬಹಳ ಅದ್ಭುತವಾಗಿ ಬರೆದ್ದಿದಿರಿ. ೨ ನೆ ಲೇಖನ "ಹಿರಿಯಜ್ಜ" ಮನ ಕಲುಕುತ್ತದೆ.

ಎಲೆ ಮರೆಯ ಕಾಯಿಗಳಂತೆ ದುಡಿಯುತ್ತಿರುವ ಎಲ್ಲ ವೆಂಡರ್ ಗಳಿಗೆ ಹಾಗು ಬೀಟ್ ಬಾಯ್ಸ್ ಗೆ ಅನಂತ ಕೋಟಿ ಪ್ರಣಾಮಗಳು...
ಮಾತೊಂದು ಪುಸ್ತಕ ನಿಮ್ಮಿಂದ ನಿರೀಕ್ಷಿಸುತ್ತ...
ಶುಭವಾಗಲಿ....

Unknown said...

ಕಾರ್ಯಕ್ರಮ ಚೆನ್ನಾಗಿ ಆಯಿತು. ನಿಮ್ಮ ಪುಸ್ತಕ ಓದುತ್ತ ಇದ್ದೀನಿ.

Ranjita said...

ಕ೦ಗ್ರಾಜುಲೆಶನ್ ಶಿವು ಸರ್ .. ಕಾರ್ಯಕ್ರಮ ಚೆನ್ನಾಗಾಯ್ತು ಅನ್ಸತ್ತೆ .. ಫೋಟೋಸ್ ನೋಡಿ ಖುಷಿ ಆಯ್ತು .

Keshav.Kulkarni said...

ಶಿವು,
ನಿಮ್ಮ ಬರಹ ಓದಿ ಅಲ್ಲಿ ಬಂದು ಕೂತಷ್ಟೇ ಖುಷಿಯಾಯಿತು. ಇನ್ನು ಭಾರತಕ್ಕೆ ಬಂದಾಗ ಖಂಡತ ನಿಮ್ಮ ಪುಸ್ತಕ ಕೊಳ್ಳೂತ್ತೇನೆ.
- ಕೇಶವ

ಕನಸು said...

ಶಿವು ಸರ್
ನಿಮ್ಮ ವಂಡರ್ ಕಣ್ಣು ಮತ್ತು ಹೆಸರೆ ಬೇಡ
ಪುಸ್ತಕಗಳ ಮಾಹಿತಿ ಸಿಕ್ಕಿದ್ದು ವಿಜಯ ಕರ್ನಾಟಕ
ಪತ್ರಿಕೆಯಲ್ಲಿ
ಬಿಡುಗಡೆ ಸಮಾರಂಭಕ್ಕೆ ಹೇಳಲಿಲ್ಲ
ಆದರೂ ಬ್ಲಾಗನಲ್ಲಿ ಓದಿ ಆನಂದ ವಾಯ್ತು
ಪುಸ್ತಕ ಬೇಕು ಅಡ್ರೆಸ್ ಪ್ಲೀಸ್
ಕನಸು

Unknown said...

ಪ್ರಕಾಶ್ ಮತ್ತು ಶಿವು,
ಇತ್ತೀಚಿನ ದಿನಗಳಲ್ಲಿ ಇಂತಹುದೊಂದು ಪುಸ್ತಕ ಬಿಡುಗಡೆಯ ಸಮಾರಂಭವನ್ನು ನಾನು ಕಂಡಿರಲೇ ಇಲ್ಲ. ಸಮಾರಂಭ ಅನ್ನುವುದಕ್ಕಿಂತ ಅದನ್ನು ಸಂಭ್ರಮ ಎಂದು ಕರೆಯುವುದೇ ಮೇಲು. ಅಷ್ಟು ಚೆನ್ನಾ ಗಿತ್ತು, ಅಚ್ಚುಕಟ್ಟಾಗಿತ್ತು. ಪುಸ್ತಕಗಳು ಖರ್ಚಾಗುತ್ತಿದ್ದುದನ್ನು ನೋಡಿ ನನಗೆ ಕನ್ನಡ ಪುಸ್ತಕೋದ್ಯಮಕ್ಕೆ ಇಂತಹ ಪುಸ್ತಕಗಳು, ಬಿಡುಗಡೆಯ ಸಂಭ್ರಮ ಸಹಾಯಕವಾಗಲಬಲ್ಲವು ಎನ್ನಿಸಿತು.
ಇನ್ನು ನೀವು ವಿರಮಿಸುವಂತಿಲ್ಲ. ಈಗ ನಿಮ್ಮ ಜವಾಬ್ದಾರಿ ಇನ್ನೂ ಹೆಚ್ಚಿದೆ ಜೊತೆಗೆ ನಮ್ಮ ನಿರೀಕ್ಷೆಯೂ ಕೂಡಾ!
ಮುಂದೆಯೂ ಇನ್ನೂ ಒಳ್ಳೊಳ್ಳೆಯ ಪುಸ್ತಕಗಳು ಬರಲಿ.

ಸೀತಾರಾಮ. ಕೆ. / SITARAM.K said...

ಶಿವುರವರೇ,
ತಮ್ಮ ಪುಸ್ತಕ ಬಿಡುಗಡೆಯ ಸಮಾರ೦ಭ ಅದ್ದೂರಿಯಿ೦ದ ನಡೆದದ್ದು ಕೇಳಿ ಸ೦ತೋಷವಾಯಿತು. ಕೆಲಸದ ಪ್ರವಾಸದಲ್ಲಿದ್ದರಿ೦ದ ಸಮಾರ೦ಭಕ್ಕೆ ಬರಲಾಗದಕ್ಕೆ ಬೇಸರವಿದೆ. ಸಮಾರ೦ಭದ ಬಗ್ಗೆ ತಮ್ಮ ಹಾಗು ಪ್ರಕಾಶ ಹೆಗಡೆಯವರ ಲೇಖನಗಳನ್ನು ಓದಿ ಹಾಗೂ ಸಮಾರ೦ಭದ ಚಾಯಚಿತ್ರ ನೋಡಿ ಸಮಾರ೦ಭ ತಪ್ಪಿಸಿಕೊ೦ಡ ಬಗ್ಗೆ ವಿಷಾದ ಇಮ್ಮಡಿಯಾಯಿತು.
ಪುಸ್ತಕ ಪಡೆದು ಓದಿದ ಮೇಲೆ ಅಭಿಪ್ರಾಯ ತಿಳಿಸುತ್ತೇನೆ.
ಧನ್ಯವಾದಗಳು

shivu.k said...

ಅನ್ವೇಷಿ ಸರ್,

ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu.k said...

ಗುರು,

ನಿಮ್ಮನ್ನು ಮೊದಲ ಬಾರಿ ಬೇಟಿಯಾಗಿದ್ದು ಸಂತೋಷ. ನೀವು ಹೇಳಿದಂತೆ ಖಂಡಿತ ಇಂಥ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ಪುಸ್ತಕ ಪ್ರಿಯರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಅನ್ನುವುದು ಅವತ್ತು ಗೊತ್ತಾಯಿತು. ಸದ್ಯ ಎಲ್ಲಾ ಪುಸ್ತಕಗಳು ಚೆನ್ನಾಗಿ ಮಾರಾಟವಾಗುತ್ತಿವೆ.

ಧನ್ಯವಾದಗಳು.

shivu.k said...

ಕ್ಷಣ ಚಿಂತನೆ ಚಂದ್ರು ಸರ್,

ನೀವು ನಮ್ಮ ಕಾರ್ಯಕ್ರಮದಲ್ಲಿ ಬೇಗನೆ ಬಂದು ಕೊನೆಯವರೆಗೂ ಇದ್ದದ್ದು ತುಂಬಾ ಖುಷಿಯ ವಿಚಾರ. ಸಮಾರಂಭ ಚೆನ್ನಾಗಿ ಆಗಲು ಕಾರಣ ಅನೇಕ ಜನರ ಶ್ರಮವಿತ್ತು.

ಮಲ್ಲಿಕಾರ್ಜುನ್ ತುಂಬಾ ಚೆನ್ನಾಗಿ ಕೆಲವು ಅಪರೂಪದ ಫೋಟೊಗಳನ್ನು ತೆಗೆದಿದ್ದಾರೆ. ಅವರಿಗೂ ಧನ್ಯವಾದಗಳು.

ತಿಂಡಿ ಚೆನ್ನಾಗಿದ್ದರೆ ಅದು ಕೃಷ್ಣ ಹೆಗಡೆಯವರಿಗೆ ಅಭಿನಂದನೆ ಸಲ್ಲಬೇಕು.

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ಧನ್ಯವಾದಗಳು.

shivu.k said...

ಶಿವಪ್ರಕಾಶ್,

ಮೊದಲ ಬಾರಿಗೆ ನಿಮ್ಮನ್ನು ಬೇಟಿಯಾಗಿದ್ದು ಸಂತೋಷ. ಕಾರ್ಯಕ್ರಮದಲ್ಲಿ ನೀವು ಕೊನೆಯವರೆಗೂ ಇದ್ದು ನಮ್ಮ ಜೊತೆಗೆ ಹೊರಟಿದ್ದು ಅಲ್ವೇ.

shivu.k said...

ಸುನಾಥ್ ಸರ್,

ನೀವು ದೂರದಿಂದಲೇ ನಮ್ಮನ್ನು ಆಶೀರ್ವಾದಿಸಿದ್ದೀರಿ. ಧನ್ಯವಾದಗಳು.

shivu.k said...

ಜಯಶಂಕರ್,

ನೀವು ಕಾರ್ಯಕ್ರಮ ತಪ್ಪಿಸಿಕೊಂಡರೂ TV9 ನಲ್ಲಿ ನೋಡಿದ್ದಿರಲ್ಲ. ಅದೇ ಸಂತೋಷ. ಮತ್ತೆ ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಅಂದ ಹಾಗೆ ಪುಸ್ತಕಗಳು ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತವೆ.
ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,

ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು. ಪುಸ್ತಕವನ್ನು ಓದಿದ ನಂತರ ನಿಮ್ಮ ಅಭಿಪ್ರಾಯವನ್ನು ತಿಳಿಸಿ..

ಧನ್ಯವಾದಗಳು.

shivu.k said...

ಡಾ.ಗುರುಮೂರ್ತಿ ಸರ್,

ನೀವು ದೂರದ ಊರಿನಿಂದ ನಮ್ಮನ್ನು ಅಭಿನಂದಿಸುತ್ತಿದ್ದೀರಿ. ಧನ್ಯವಾದಗಳು. ನೀವು ಬೆಂಗಳೂರಿಗೆ ಬಂದಾಗ ಬೇಟಿಯಾಗುತ್ತೇನೆ. ಬರುವಾಗ ತಿಳಿಸಿ.

ಧನ್ಯವಾದಗಳು.

shivu.k said...

ಡಾ.ಗುರುಮೂರ್ತಿ ಸರ್,

ನೀವು ದೂರದ ಊರಿನಿಂದ ನಮ್ಮನ್ನು ಅಭಿನಂದಿಸುತ್ತಿದ್ದೀರಿ. ಧನ್ಯವಾದಗಳು. ನೀವು ಬೆಂಗಳೂರಿಗೆ ಬಂದಾಗ ಬೇಟಿಯಾಗುತ್ತೇನೆ. ಬರುವಾಗ ತಿಳಿಸಿ.

ಧನ್ಯವಾದಗಳು.

shivu.k said...

ದೀಪಸ್ಮಿತ ಸರ್,

ನಮ್ಮ ಬ್ಲಾಗ್ ಗೆಳೆಯರು ಅನೇಕರು ಬಂದಿದ್ದರು ಅವತ್ತು ಖಂಡಿತ ಹಬ್ಬದ ವಾತಾವರಣವಿತ್ತು. ನಾಗೇಶ್ ಹೆಗಡೆಯವರು ತುಂಬಾ ಚೆನ್ನಾಗಿ ಮಾತಾಡಿದರು. ಮತ್ತೆ ನಿಮ್ಮ ಅನಿಸಿಕೆಯಂತೆ ಖಂಡಿತ ಇಂಥ ಕಾರ್ಯಕ್ರಮಗಳು ಮುಂದೆ ಹೆಚ್ಚಾಗಲಿವೆ.
ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು. ಹೀಗೆ ಬರುತ್ತಿರಿ.

ಚುಕ್ಕಿಚಿತ್ತಾರ said...

ಶಿವು ಅವರೆ... ಕಾರ್ಯಕ್ರಮ ಚೆನ್ನಾಗಾಯಿತೆ೦ದು ಕೇಳಿ,ಓದಿ, ಫೋಟೋಗಳನ್ನು ನೋಡಿ ಸ೦ತೋಷವಾಯಿತು. ವ೦ದನೆಗಳು.

shivu.k said...

ನಾಗೇಂದ್ರ,

ಒಂದು ಟನ್ ಅಭಿನಂದನೆ ಸಲ್ಲಿಸಿದ್ದೀರಿ. ಅದನ್ನು ಈ ಸಮಾರಂಭದಲ್ಲಿ ಕೈಜೋಡಿಸಿದ ಎಲ್ಲರಿಗೂ ಹಂಚುತ್ತೇನೆ.
ನೀವು ಮತ್ತು ವಿ.ಡಿ.ಭಟ್ ಬರಲಾಗದ ಕಾರಣವನ್ನು ವಿ.ಡಿ.ಭಟ್ ಹೇಳಿದರು. ತೊಂದರೆಯಿಲ್ಲ. ಫೋಟೊಗಳನ್ನು ನೋಡಿ ಖುಷಿಪಟ್ಟಿದ್ದೀರಿ. ಕಾರ್ಯಕ್ರಮದ ವಿಡಿಯೋ DVD ಸಿದ್ಧವಾದ ಮೇಲೆ ಖಂಡಿತ ಕಳಿಸುತ್ತೇನೆ.

ಪುಸ್ತಕದ ಕ್ಯಾಚ್ ಪ್ರಸಂಗ ಅನಿರೀಕ್ಷಿತವಾದ್ದದ್ದು ಮತ್ತು ಅಚ್ಚರಿಯುಂಟು ಮಾಡಿದ್ದಂತೂ ನಿಜ. ಅದು ನಾಗೇಶ್ ಹೆಗಡೆಯವರ ಶೈಲಿ. ಅದನ್ನು ಸೆರೆಯಿಡಿದ ಮಲ್ಲಿಗೂ ಥ್ಯಾಂಕ್ಸ್..

ಮತ್ತೆ ನಿಮಗೂ ಮತ್ತು ವಿಡಿ ಭಟ್‍ರಿಗೂ ಪುಸ್ತಕವನ್ನು ಕಳಿಸುತ್ತೇನೆ. ಅದಕ್ಕಾಗಿ ನಿಮ್ಮ ವಿಳಾಸವನ್ನು ಮತ್ತೊಮ್ಮೆ ಮೇಲ್ ಮಾಡಿಬಿಡಿ..

ಧನ್ಯವಾದಗಳು.

shivu.k said...

ಆಶೋಕ್,

ಧನ್ಯವಾದಗಳು.

ನಾನು ನಿಮ್ಮನ್ನು ಮೈಸೂರಿನಲ್ಲಿ ಬೇಟಿಯಾದ ಮೇಲೆ ಮತ್ತೆ ಇಲ್ಲಿ ಬೇಟಿಯಾಗಲು ಕಾಯುತ್ತಿದ್ದೆ. ರಾಘವೇಂದ್ರ ಕೆಸವಿನಮನೆಯವರನ್ನು ಬೇಟಿಯಾಗಬಯಸಿದ್ದೆ. ತೊಂದರೆಯಿಲ್ಲ ಮತ್ತೊಮ್ಮೆ ಖಂಡಿತ ಬೇಟಿಯಾಗೋಣ.
ನಾಗೇಶ್ ಹೆಗಡೆಯವರ ಶೈಲಿ ನನಗೂ ಇಷ್ಟವಾಯಿತು.

ಬ್ಲಾಗ್ update ಬೇಗ ಮಾಡದಿರಲು ಕಾರಣ ಕೆಲಸದ ಒತ್ತಡ. ಪುಸ್ತಕ ಬಿಡುಗಡೆ ಕಾರ್ಯಕ್ರಮದಿಂದಾಗಿ ರಾಶಿ ಕೆಲಸ ಉಳಿದುಬಿಟ್ಟಿದೆ. ಅದನ್ನೆಲ್ಲಾ ಮಾಡುತ್ತಿದ್ದೇನೆ.
ನಿಮ್ಮ ಅಭಿನಂದನೆಗಳನ್ನು ದಿವಾಕರ್ ಹೆಗಡೆ ಮತ್ತು ಪ್ರಕಾಶ್ ಹೆಗಡೆಯವರಿಗೆ ತಿಳಿಸುತ್ತೇನೆ.

ಮತ್ತೆ ಸಧ್ಯಕ್ಕೆ ನೀವು ಹೇಳಿದ ಹಾಗೆ ಪುಸ್ತಕಗಳು ಬಿಸಿದೋಸೆಯಂತೆ ಖರ್ಚಾಗುತ್ತಿವೆ. ಇಲ್ಲಿಯವರೆಗೆ ಸುಮಾರು ನಾಲ್ಕುನೂರಕ್ಕೂ ಹೆಚ್ಚು ಮಾರಾಟವಾಗಿವೆಂಬ ಅಂದಾಜಿದೆ. ಮತ್ತೆ ಮೈಸೂರಿನ ನವಕರ್ನಾಟಕ ಪ್ರಕಾಶನದ ಮಳಿಗೆಗಳಲ್ಲಿ ಸಿಗಬಹುದು ಪ್ರಯತ್ನಿಸಿ.

ಧನ್ಯವಾದಗಳು.

shivu.k said...

ವನಿತಾ,

ನಮ್ಮ ಕಾರ್ಯಕ್ರಮದ ಫೋಟೊಗಳನ್ನು ನೋಡಿ ನೀವೆ ಭಾಗವಹಿಸಿದಂತೆ ಅಂದುಕೊಂಡಿದ್ದು ತುಂಬಾ ಸಂತೋಷ. ರಾತ್ರಿ TV9 ನಲ್ಲಿ ಬಂದಿದ್ದು ಕೂಡ ನಮಗೂ ಅಚ್ಚರಿ ವಿಚಾರವೇ ಆಗಿತ್ತು. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.

shivu.k said...

ವನಿತಾ,

ನಮ್ಮ ಕಾರ್ಯಕ್ರಮದ ಫೋಟೊಗಳನ್ನು ನೋಡಿ ನೀವೆ ಭಾಗವಹಿಸಿದಂತೆ ಅಂದುಕೊಂಡಿದ್ದು ತುಂಬಾ ಸಂತೋಷ. ರಾತ್ರಿ TV9 ನಲ್ಲಿ ಬಂದಿದ್ದು ಕೂಡ ನಮಗೂ ಅಚ್ಚರಿ ವಿಚಾರವೇ ಆಗಿತ್ತು. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.

shivu.k said...

ದಿಲೀಪ್,

ನೀವು ಕಾರ್ಯಕ್ರಮಕ್ಕೆ ಬಂದಿದ್ದು ನನಗೆ ಗೊತ್ತಾಗಲಿಲ್ಲ. ಗೊತ್ತಾಗಿದ್ದರೆ ಖಂಡಿತ ಮಾತಾಡಿಸುತ್ತಿದ್ದೆ. ಬಹುಶಃ ತಡವಾಗಿ ಬಂದಿರಬಹುದು ಅಲ್ವಾ....ಕಾರ್ಯಕ್ರಮವನ್ನು ನೋಡಿ ಸಂತೋಷಪಟ್ಟಿದ್ದೀರಿ ಧನ್ಯವಾದಗಳು.

shivu.k said...

ತೇಜಸ್ವಿನಿ ಮೇಡಮ್,

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ಪುಸ್ತಕ ಓದಿದ ನಂತರ ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ..

shivu.k said...

ಚಂದಿನ ಸರ್,

ದೂರದ ಹೈದರಬಾದಿನಲ್ಲಿದ್ದುಕೊಂಡೆ ಪುಸ್ತಕ ಕಾರ್ಯಕ್ರಮದ ಫೋಟೊಗಳನ್ನು ನೋಡಿ ಖುಷಿ ಪಟ್ಟಿದ್ದೀರಿ.

ನಮ್ಮ ಪುಸ್ತಕಗಳ ಮರುಮುದ್ರಣ ಕಾಣಲಿ ಎಂದು ಹಾರೈಸಿದ ನಿಮಗೆ ಥ್ಯಾಂಕ್ಸ್..

shivu.k said...

ಮಹೇಶ್ ಸರ್[ಸವಿಗನಸು]

ದೂರದ ಕುವೈಟಿನಲ್ಲಿದ್ದುಕೊಂಡೇ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಧನ್ಯವಾದಗಳು. ನಿಮ್ಮ ೨೫ನೇ ರಜತ ಮಹೋತ್ಸವ ಕಾರ್ಯಕ್ರಮ ಹೇಗಾಯಿತು. ಬಿಡುವು ಮಾಡಿಕೊಂಡು ಎಲ್ಲಾ ನೋಡುತ್ತೇನೆ.

ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.

shivu.k said...

ಪ್ರಮೋದ್,

ಕಳೆದೊಂದು ವರ್ಷದಿಂದ ನಿಮ್ಮನ್ನು ಫೋನ್ ಅಥವ ಚಾಟಿಂಗ್ ಮೂಲಕ ಮಾತ್ರ ಬೇಟಿಯಾಗುತ್ತಿದ್ದೆ. ಭಾನುವಾರ ಬೇಟಿಯಾಗಿದ್ದು ಖುಷಿ. ನಿಮ್ಮಂಥ ಕಲಾವಿದರು ನಮಗೆ ಬೇಕು. ಧನ್ಯವಾದಗಳು.

shivu.k said...

ರಾಜೀವ್ ಸರ್,

ಕಾರ್ಯಕ್ರಮ ಚೆನ್ನಾಗಿತ್ತು. ಪರ್ವಾಗಿಲ್ಲ. ನೀವು ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಸದ್ಯಕ್ಕೆ ನನ್ನ ಮತ್ತು ಪ್ರಕಾಶ್ ಹೆಗಡೆಯವರ ಪುಸ್ತಕ ನಿಮ್ಮ ಅನಿಸಿಕೆಯಂತೆ ಮಾರಾಟಾವಾಗುತ್ತಿದೆ.

ಧನ್ಯವಾದಗಳು.

Unknown said...

ಅಭಿನಂದನೆಗಳು... ಇಂತಹ ಅನೇಕ ಕೃತಿಗಳು ನಿಮ್ಮ ಲೇಖನಿಯಿಂದ ಮೂಡಿಬರಲಿ... ಅಂದ ಹಾಗೆ ಈ ಪುಸ್ತಕ ನನಗೂ ಕಳಿಸುತ್ತೀರಾ?? ಅದರ ಖರ್ಚು ನಾನು ನಿಮ್ಮ ಅಕೌಂಟ್ ಗೆ ತುಂಬುವೆ...

shivu.k said...

ನವೀನ್,

ನಿಜಕ್ಕೂ ನನ್ನ ಪುಸ್ತಕ ಹಾಗೆ ಒಂದೇ ಸಿಟ್ಟಿಂಗ್‍ನಲ್ಲಿ ಓದಿಸಿಕೊಂಡುಬಿಡ್ತಾ? ಆಶ್ಚರ್ಯ. ಮತ್ತು ಥ್ಯಾಂಕ್ಸ್... ನಿಮ್ಮ ಅಭಿಪ್ರಾಯ ನನಗೆ ತುಂಬಾ ಅನಿಸುತ್ತಿದೆ.

ಹಿರಿಯಜ್ಜ ಕತೆ ನನಗೂ ತುಂಬಾ ಇಷ್ಟವಾದುದು. ಮತ್ತೆ ಅದೇ ಹಿರಿಯಜ್ಜನನ್ನು ನೋಡಬೇಕಾದರೆ ಬೆಳಗಿನ ಅರುಗಂಟೆಗೆ ಬಂದರೆ ಖಂಡಿತ ತೋರಿಸುತ್ತೇನೆ.

ಮತ್ತೆ ನಿಮ್ಮ ನಮಸ್ಕಾರಗಳನ್ನು ನನ್ನ ಏಜೆಂಟ್ಸುಗಳಿಗೂ ಮತ್ತು ಬೀಟ್ ಹುಡುಗರಿಗೂ ತಿಳಿಸುತ್ತೇನೆ..
ಧನ್ಯವಾದಗಳು.

shivu.k said...

ಸುಧೀಂದ್ರ,

ಕಾರ್ಯಕ್ರಮಕ್ಕೆ ನೀವು ಬಂದಿದ್ದು ನನಗೆ ಗೊತ್ತಾಗಲಿಲ್ಲ. ಸಂತೋಷಪಟ್ಟಿದ್ದಕ್ಕೆ ಬಂದಿದ್ದಕ್ಕೆ ಥ್ಯಾಂಕ್ಸ್...
ಪುಸ್ತಕ ಓದಿದ ನಂತರ ನಿಮ್ಮ ಪ್ರತಿಕ್ರಿಯೆ ತಿಳಿಸಿ.

shivu.k said...

ರಂಜಿತಾ,

ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು.

ಮತ್ತಷ್ಟು ಫೋಟೊಗಳನ್ನು ಆರ್ಕುಟ್ ನಲ್ಲಿ ಹಾಕುತ್ತೇನೆ.
ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.

shivu.k said...

ಕುಲಕರ್ಣಿ ಸರ್,

ದೂರದ ಇಂಗ್ಲೆಂಡಿನಲ್ಲಿದ್ದುಕೊಂಡೆ ನಮ್ಮ ಕಾರ್ಯಕ್ರಮದ ಫೋಟೊಗಳನ್ನು ಸಂತೋಷಪಟ್ಟಿದ್ದೀರಿ. ಬೆಂಗಳೂರಿಗೆ ಬಂದಾಗ ಬೇಟಿಯಾಗುವ.

ಧನ್ಯವಾದಗಳು.

shivu.k said...

ಕನಸು,

ಸಾವಿರ ಕನಸು,

ನಮ್ಮಪುಸ್ತಕಗಳ ಬಗ್ಗೆ ನಿಮಗೆ ವಿಜಯ ಕರ್ನಾಟಕದಿಂದ ತಿಳಿದಿದ್ದು ಸಂತೋಷ. ನಾವು ತಿಳಿಸೋಣವೆಂದರೆ ನಿಮ್ಮ email ವಿಳಾಸವಿಲ್ಲವಲ್ಲ. ಮತ್ತೆ ಕಳೆದ ವಾರ ನನ್ನ ಮತ್ತು ಪ್ರಕಾಶ್ ಹೆಗಡೆಯವರ ಬ್ಲಾಗಿಗೆ ಬಂದಿದ್ದರೇ ಅದರ ವಿವರವೆಲ್ಲಾ ಗೊತ್ತಾಗುತ್ತಿತ್ತು.

ಇರಲಿ. ತೊಂದರೆಯಿಲ್ಲ. ನಿಮಗೆ ಪುಸ್ತಕವನ್ನು ಕಳಿಸಲು ನಿಮ್ಮ ವಿಳಾಸವನ್ನು ನನಗೆ ಮೇಲ್ ಮಾಡಿ.
ನನ್ನ ಮೇಲ್ ಐಡಿ
shivuu.k@gmail.com

ಧನ್ಯವಾದಗಳು.

ಕ್ಷಣ... ಚಿಂತನೆ... said...

ಶಿವು ಅವರೆ,

ನಿಮ್ಮ ವೆಂಡರ್‍ ಕಣ್ಣು ಪುಸ್ತಕ ಪೂರ್ತಿ ಓದಿದೆ. ಕಣ್ಣಿಗೆ ಕಟ್ಟುವಂತೆ ನಿಮ್ಮ ಬೆಳಗಿನ ೨-೩ ತಾಸಿನ ವಿದ್ಯಮಾನಗಳನ್ನು ಬರೆದಿದ್ದೀರಿ. ಎಲ್ಲವೂ ಸೊಗಸಾಗಿದೆ.

ಜೊತೆಗೆ, ಇದೀಗ ನಾನು ಪೇಪರ್‍ ತಡವಾಗಿ ಬಂದಾಗ, ತಿಂಗಳ ಪತ್ರಿಕೆ ದುಡ್ದು ಕೊಡುವಾಗ ಯೋಚಿಸಿಬಹುದಾಗಿದೆ. ಮೊದಲೆಲ್ಲ, ನಮ್ಮ ಮನೆಗೆ ಪತ್ರಿಕೆ ಹಾಕುವಾಗ ಸುಮಾರು ೮.೦೦ ಘಂ. ವರೆಗೂ ತಡಮಾಡಿದ್ದಿದೆ. ಅಕ್ಕಪಕ್ಕದ ಮನೆಗೆ ಪೇಪರ್‌ ಬಂದರೂ ನಮಗೆ ಬರುತ್ತಿರಲಿಲ್ಲ. ಒಬ್ಬನೇ ಎಲ್ಲರಗೂ ಪತ್ರಿಕೆ ಹಂಚಿದರೂ ಹೀಗಾಗುತ್ತಿತ್ತು. ದುಡ್ದಿನ ವಿಚಾರದಲ್ಲು ಸರಿಯಾದ ಲೆಕ್ಕವಿಡದೇ ಬಿಲ್ಲು ಬರುತ್ತಿತ್ತು.

ಈಗ ಪರ್ವಾಗಿಲ್ಲ. ಎರಡೂ ಕಡೆಯಿಂದ ಎಚ್ಚರಿಕೆಯಿದೆ.

ಇನ್ನೂ ಬರಹಗಳು ಪುಸ್ತಕರೂಪದಲ್ಲಿ ಬರಲಿ ಎಂದು ಆಶಿಸುವೆ.

ಧನ್ಯವಾದಗಳು.

ಸ್ನೇಹದಿಂದ,
ಚಂದ್ರು

shivu.k said...

ಡಾ.ಸತ್ಯನಾರಾಯಣ ಸರ್,

ನೀವು ಹೇಳಿದಂತೆ ಕಾರ್ಯಕ್ರಮಕ್ಕೆ ಸೇರಿದ ಗೆಳೆಯರನ್ನು ಕಂಡು ನಮಗಂತೂ ತುಂಬಾ ಅಚ್ಚರಿಯುಂಟಾಗಿತ್ತು.

ನಿಮ್ಮ ಮಾತಿನಂತೆ ನಾವು ಖಂಡಿತ ಸಂಭ್ರಮಿಸಿದೆವು. ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಎಲ್ಲರ ಕೈಗಳು, ಮನಸ್ಸುಗಳು ಉತ್ಸಾಹದಿಂದ ಇಷ್ಟಪಟ್ಟು ತೊಡಗಿಸಿಕೊಂಡಿದ್ದೇ ಕಾರಣ.
ಮತ್ತೆ ಪುಸ್ತಕಗಳು ನಮ್ಮ ನಿರೀಕ್ಷೆ ಮೀರಿ ಖರ್ಚಾಗಿವೆ. ಸದ್ಯ ನಾಲ್ಕುನೂರು ಪ್ರತಿಗಳು ಮಾರಾಟವಾಗಿವೆಯಂತೆ.
ನಿಮ್ಮ ಪ್ರೋತ್ಸಾಹದಿಂದ ನಮಗೆ ತುಂಬಾ ಖುಷಿಯಾಗಿದೆ. ಮತ್ತು ಜವಾಬ್ದಾರಿಯೂ ಹೆಚ್ಚಾಗಿದೆ..
ಕಾರ್ಯಕ್ರಮಕ್ಕೆ ಬಂದು ಖುಷಿಪಟ್ಟಿದ್ದಕ್ಕೆ ನಮ್ಮೊಂದಿಗೆ ಜೊತೆಯಾಗಿದ್ದಕ್ಕೆ ಧನ್ಯವಾದಗಳು.

shivu.k said...

ಸೀತಾರಾಮ್ ಸರ್,

ಕೆಲಸ ಒತ್ತಡದಿಂದಾಗಿ ನಿಮ್ಮಂತೆ ಅನೇಕರು ಬರಲಾಗಲಿಲ್ಲ. ನಮ್ಮ ಕಾರ್ಯಕ್ರಮದ ಪೋಟೊಗಳು ಮತ್ತು ವಿವರವನ್ನು ನಮ್ಮಿಬ್ಬರ ಬ್ಲಾಗ್ ನೋಡಿ ಸಂತೋಷಪಟ್ಟಿದ್ದೀರಿ.
ಪುಸ್ತಕವನ್ನು ಓದಿ. ನಿಮ್ಮ ಪ್ರತಿಕ್ರಿಯೆಗಾಗಿ ನಿರೀಕ್ಷಿಸುತ್ತೇನೆ.

ಧನ್ಯವಾದಗಳು.

shivu.k said...

ವಿಜಯಶ್ರಿಯವರೆ,

ಕಾರ್ಯಕ್ರಮ ನಮ್ಮ ನಿರೀಕ್ಷೆ ಮೀರಿ ಚೆನ್ನಾಗಿ ನಡೆಯಿತು.
ಫೋಟೊಗಳನ್ನು ನೋಡಿ, ವಿವರಗಳನ್ನು ಓದಿ ಅಭಿನಂದಿಸಿದ್ದೀರಿ. ಧನ್ಯವಾದಗಳು.

shivu.k said...

ರವಿಕಾಂತ್ ಸರ್,

ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.

ಪುಸ್ತಕಕ್ಕಾಗಿ ನಿಮ್ಮ ವಿಳಾಸವನ್ನು ನನಗೆ ಮೇಲ್ ಮಾಡಿ.
ಪುಸ್ತಕವನ್ನು ಕಳಿಸುತ್ತೇನೆ.

ಧನ್ಯವಾದಗಳು.

shivu.k said...

ಕ್ಷಣಚಿಂತನೆ ಸರ್,

ಪುಸ್ತಕವನ್ನು ಪೂರ್ತಿ ಓದಿ ಮುಗಿಸಿದ್ದೀರಿ. ಪ್ರತಿಕ್ರಿಯಿಸಿದ್ದೀರಿ.

ಈಗ ಬೆಳಗಿನ ನಮ್ಮ ಕೆಲಸ ಅವಲೋಕಿಸುವಂತೆ ಆಗಿದೆಯೆಂದು ಹೇಳಿದ್ದೀರಿ. ಧನ್ಯವಾದಗಳು. ಓದಿದ ನಂತರ ನಿಮ್ಮ ಏಜೆಂಟನಿಗೂ ಪುಸ್ತಕದ ವಿಚಾರವನ್ನು ತಿಳಿಸಿ ಓದಲು ಹೇಳಿ. ಅವನಿಗೆ ಈ ಪುಸ್ತಕ ವಿಜಯಕರ್ನಾಟದ ವಿತರಕರ ಬಳಿ ಸಿಗುತ್ತದೆಯೆಂದು ಹೇಳಿ.

ಒಟ್ಟಾರೆ ಪುಸ್ತಕಪ್ರಯತ್ನ ಒಳ್ಳೆಯದಾಗುತ್ತಿದೆ ಅನ್ನುವುದೇ ಸಂತೋಷ.

ಧನ್ಯವಾದಗಳು.

ದಿನಕರ ಮೊಗೇರ said...

ಶಿವೂ ಸರ್,
ಫೋಟೋ ನೋಡಿ ತುಂಬಾ ಬೇಸರವಾಯಿತು ಯಾಕಂದ್ರೆ ನಾನು ಮಿಸ್ ಮಾಡ್ಕೊಂಡೆ ಅಂದು.... ನಿಮ್ಮೆಲ್ಲರ ಇನ್ನೊಂದು ಪುಸ್ತಕ ಬಿಡುಗಡೆಗೆ ನಾನು ಈಗಲೇ ಸೀಟು ಕಾದಿರಿಸುತ್ತೇನೆ.... ನಾನು ಈಗಾಗಲೇ ಹಣ ಕಳಿಸಿದ್ದೇನೆ, ನಿಮ್ಮ ಹಸ್ತಾಕ್ಷರದ ಜೊತೆ ಕಳಿಸಿ....ಕಾಯುತ್ತಿದ್ದೇನೆ....

shivu.k said...

ದಿನಕರ್ ಸರ್,

ನೀವು ದೂರದ ಊರಿನಲ್ಲಿದ್ದರೂ ನಮ್ಮ ಕಾರ್ಯಕ್ರಮಕ್ಕೆ ಭಾಗವಹಿಸಲು ತೋರಿಸಿದ ಕುತೂಹಲ ಮತ್ತು ಕಾತುರಕ್ಕೆ ತುಂಬಾ ಧನ್ಯವಾದಗಳು.

ಮುಂದಿನ ಬಾರಿ ಬನ್ನಿ. ಹಾಗೆ ನೋಡಿದರೆ ಶಿವಶಂಕರ್ ಯಳವತ್ತಿಯವರು ನಮ್ಮ ಕಾರ್ಯಕ್ರಮಕ್ಕೆ ದೂರದ ಗದಗದಿಂದ ಬಂದಿರುವುದು ಅವರ ಪುಸ್ತಕ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.

ಮತ್ತೆ ನಾನು ನಿಮ್ಮ ವಿಳಾಸಕ್ಕೆ ಹಸ್ತಾಕ್ಷರ ಸಹಿತ "ವೆಂಡರ್ ಕಣ್ಣು" ಪುಸ್ತಕವನ್ನು ಇವತ್ತು ಕಳಿಸಿದ್ದೇನೆ.
ನಾಲ್ಕೈದು ದಿನಗಳಲ್ಲಿ ಸಿಗಬಹುದು.

ಧನ್ಯವಾದಗಳು.

ಜಲನಯನ said...

ಕಣ್ಣಿಂದ ಕಂಡ ಅಂದ ಲೆನ್ಸಿನಮೂಲಕ ಬಿಂಬಿಸುವಷ್ಟೇ ಅಂದವಾಗಿ ಲೇಖನಿಯ ಚಾಕಚಕ್ಯತೆಗೆ ನಿಮ್ಮ ಕ್ಯಾಮರಾ ಮರುಳಾಗಿರ್ಬೇಕು , ನಾವು ಇಲ್ಲಿ ರಜತ ಸಂಭ್ರಮದಲ್ಲಿ ನೀವು ಮತ್ತು ಪ್ರಕಾಶ್ ಪುಸ್ತಕ ಬಿಡುಗಡೆ ಸಂಭ್ರಮದಲ್ಲಿ ಅಂತ ನಾನು, ಮಹೇಶ್ ಮತ್ತು ಅವರ ಮಿಸೆಸ್ ಮಾತನಾಡಿಕೊಂಡ್ವಿ ಇಲ್ಲಿ... ಅವ್ರಿಗಂತೂ ನಿಮ್ಮ ಕಾರ್ಯಕ್ರಮಕ್ಕೆ ಬರ್ಬೇಕು ಅನ್ನೋ ಹಂಬಲ ತುಂಬಾ ಇತ್ತು..ನನ್ನದು ಡಿಸೆಂಬರ್ ಒಂದು ಚಿಕ್ಕ ವಿಸಿಟ್ ಫಿಕ್ಸ್ ಆಗಿದ್ದರಿಂದ..ಈಗ ಬರೋ ಸಾಧ್ಯತೆ ಇರ್ಲಿಲ್ಲ...ಮಿಸ್ ಮಾಡ್ಕೊಂಡ್ವಿ ಅನ್ನಿಸುತ್ತೆ.. ನಿಮಗೆ ಪ್ರಕಾಶ್ ಗೆ ನಮ್ಮ ಅಭಿನಂದನೆಗಳು...

umesh desai said...

ಶಿವು ಅವರೆ ಸಂಭ್ರಮದ ಸಮಾರಂಭ ಸೊಗಸಾಗಿತ್ತು. ನೀವು ಲೇಖಕರು ವೇದಿಕೆ ಮೇಲೆ ಕುಳಿತುಕೊಳ್ಳದೇ ಹೊಸ ಸಂಪ್ರದಾಯ
ಹಾಕಿದ್ದಿರಿ ಪುಸ್ತಕ ಅದೇ ಮಾತಾಡ್ಬೇಕು ಲೇಖಕ ಅಲ್ಲ. ಈಗ ಓದುತ್ತಿರುವೆ ಓದಿದಮೇಲೆ ಇದರಬಗ್ಗೆ ಚರ್ಚಿಸುವ ಆಶಾ ಅದ.

ಗೋಪಾಲ್ ಮಾ ಕುಲಕರ್ಣಿ said...

ಅಭಿನಂದನೆಗಳು ಕಾರ್ಯಕ್ರಮಕ್ಕೆ ನಾನು ಬಂದಿದ್ದೆ. ತುಂಬಾ ಚೆನ್ನಾಗಿತ್ತು ಪುಸ್ತಕ ಖರಿದಿಸಿದ್ದೇನೆ. ಹೀಗೆ ಇನ್ನಷ್ಟು ಪುಸ್ತಕಗಳು ಹೊರಬರಲಿ ಎಂದು ಆಶಿಸುತ್ತೇನೆ. ಮುಂದಿನ ಸಾರಿ ದೊಡ್ಡ ಹಾಲ್ ಬುಕ್ ಮಾಡಿ ಸರ್. ಶುಭಾಶಯಗಳು

Me, Myself & I said...

ಆತ್ಮೀಯ

ಸಮಾರಂಬಕ್ಕೆ ಬಂದಷ್ಟೇ ಖುಶಿಯಾಯ್ತು ಈ ಚಿತ್ರಗಳನ್ನ ನೋಡಿ.
ಮತ್ತೊಮ್ಮೆ ಅಭಿನಂದನೆಗಳು ಹಾಗೂ ಧನ್ಯವಾದಗಳು

ಹರೀಶ ಮಾಂಬಾಡಿ said...

ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ಅಲ್ಲಿಗೆ ಹೋದಂತಾಯಿತು. ಶಿವಣ್ಣ, ನಿಮಗೆ ಅಭಿನಂದನೆ

ಚಕೋರ said...

ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಆದರೆ ಫೋಟೋಸ್ ನೋಡಿ ಹೊಟ್ಟೆ ಉರಿಯಿತು. ಬರಬೇಕಾಗಿತ್ತು ಅನ್ನಿಸಿತು.

ಎನಿವೇ, ಕಂಗ್ರಾಟ್ಸ್ ಸರ್. ಕನ್ನಡ ಪುಸ್ತಕಲೋಕಕ್ಕೆ ಹೊಸ ರುಚಿ ಉಣಿಸಿದ್ದೀರಿ.

ಅಹರ್ನಿಶಿ said...

ಶಿವೂ,
ಕ೦ಗ್ರಾಟ್ಸ್,ಪರದೇಶದಲ್ಲಿದ್ದುಕೊ೦ಡು ಈ ಎಲ್ಲಾ ರಸ ನಿಮಿಷಗಳನ್ನು ಮಿಸ್ ಮಾಡ್ಕೊಳ್ತಾ ಇದೀನಿ ಅನ್ಸುತ್ತೆ,ಏನ್ಮಾಡೋದು ಹೊಟ್ಟೆಪಾಡು.ಕಾರ್ಯಕ್ರಮ ಸುಗಮವಾಗಿ ನೆಡೆದಿದ್ದಕ್ಕೆ ಮತ್ತೊಮ್ಮೆ ಶುಭಾಶಯ.

ಸುಧೇಶ್ ಶೆಟ್ಟಿ said...

ಬರಲಾಗದಿದ್ದುದಕ್ಕೆ ತು೦ಬಾ ಬೇಸರ ಇದೆ...ಪುಸ್ತಕ ಓದಿ ಸಮಧಾನ ಮಾಡಿಕೊಳ್ಳುತ್ತೇನೆ ಶಿವಣ್ಣ...

ಕಾರ್ಯಕ್ರಮ ತು೦ಬಾ ಚೆನ್ನಾಗಿ ಬ೦ತೆ೦ದು ತಿಳಿದು ಸ೦ತೋಷ ಆಯಿತು....

ಮ೦ಗಳೂರಿನ ನನ್ನ ಗೆಳೆಯ ಫೋನ್ ಮಾಡಿ ನಿಮ್ಮ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಟಿ.ವಿ.ಯಲ್ಲಿ ನೋಡಿ ಖುಶಿ ಪಟ್ಟೆ ಅ೦ದ....

ಆನಂದ said...

ಅಭಿನಂದನೆಗಳು ಶಿವೂ ಅವರೇ. ಇತ್ತೀಚಿಗೆ ಯಾವುದೇ ಪುಸ್ತಕ ಮಳಿಗೆಗೂ ಭೇಟಿ ನೀಡಲಾಗಿಲ್ಲ. ಈ ವಾರ ಖಂಡಿತಾ ಮೂರೂ ಪುಸ್ತಕಗಳನ್ನು ಓದುವೆ.

shivu.k said...

ಆಜಾದ್ ಸರ್,

ಖಂಡಿತ ನೀವು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದರೇ, ನಾವು ಪುಸ್ತಕ ಬಿಡುಗಡೆಯ ಸಂಭ್ರಮದಲ್ಲಿದ್ದೆವು. ಕಾರ್ಯಕ್ರಮ ಚೆನ್ನಾಗಿಯೇ ಅಯಿತು. ಪುಸ್ತಕ ಮಾರಾಟವೂ ಚೆನ್ನಾಗಿಯೇ ಇದೆ. ನೀವು ಬೆಂಗಳೂರಿಗೆ ಬಂದಾಗ ಖಂಡಿತ ಬೇಟಿಯಾಗೋಣ. ನಿಮಗಾಗಿ ಪುಸ್ತಕವನ್ನು ಎತ್ತಿಟ್ಟಿರುತ್ತೇನೆ.
ನಿಮ್ಮ ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆಗಳು.

shivu.k said...

ಉಮೇಶ್ ದೇಸಾಯಿ ಸರ್,

ಕಾರ್ಯಕ್ರಮಕ್ಕೆ ಅದರ ಸಂಭ್ರಮವನ್ನು ಆಸ್ವಾದಿಸಿದ್ದು ನಮಗೂ ಖುಷಿ. ನಾವು ಬೇಕಂತಲೇ ವೇದಿಕೆ ಮೇಲೆ ಕೂರಬಾರದು ಅಂತ ಮಾತಾಡಿಕೊಂಡಿದ್ದೆವು. ಕಾರಣವಿಷ್ಟೇ ಎಲ್ಲರನ್ನೂ ಖುದ್ದಾಗಿ ಮಾತಾಡಿಸಬಹುದಲ್ವಾ ಅಂತ ಅದು ಯಶಸ್ವಿಯೂ ಆಯಿತು. ಮತ್ತೆ ಅದರಲ್ಲೇನು ವಿಶೇಷವಿಲ್ಲ. ಪುಸ್ತಕವನ್ನು ನಿಮ್ಮ ಅಭಿಪ್ರಾಯ ತಿಳಿಸಿ.

ಧನ್ಯವಾದಗಳು.

shivu.k said...

ಗೋಪಾಲ್ ಮಾ ಕುಲಕರ್ಣಿ ಸರ್,

ನಿಮ್ಮನ್ನು ಕಾರ್ಯಕ್ರಮದಲ್ಲಿ ಬೇಟಿಯಾಗಿದ್ದು ಖುಷಿಯ ವಿಚಾರ. ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಮತ್ತೆ ನಾವು ಕೂಡ ಅಷ್ಟೊಂದು ಗೆಳೆಯರು ಸೇರುತ್ತಾರೆಂದು ನಿರೀಕ್ಷಿಸಿರಲಿಲ್ಲ. ಖಂಡಿತ ಮುಂದಿನ ಬಾರಿ ದೊಡ್ಡ ಹಾಲನ್ನು ಬುಕ್ ಮಾಡುತ್ತೇವೆ.

ಧನ್ಯವಾದಗಳು.

shivu.k said...

ಲೋದ್ಯಾಶಿ ಸರ್

ಕಾರ್ಯಕ್ರಮದ ಫೋಟೊಗಳನ್ನು ನೋಡಿ ಸಂತೋಷಪಟ್ಟಿದ್ದೀರಿ. ಧನ್ಯವಾದಗಳು.

shivu.k said...

ಹರೀಶ್,

ಕಾರ್ಯಕ್ರಮದ ಫೋಟೊಗಳನ್ನು ನೋಡಿ ಇಷ್ಟಪಟ್ಟಿದ್ದೀರಿ. ಧನ್ಯವಾದಗಳು.

shivu.k said...

ಚಕೋರ ಸರ್,

ಬೇಸರಿಸಬೇಡಿ. ಮುಂದಿನ ಬಾರಿ ಖಂಡಿತ ಬನ್ನಿ. ಮತ್ತೆ ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

shivu.k said...

ಆಹರ್ನಿಶಿ ಶ್ರೀಧರ್ ಸರ್,

ಬದುಕು ಕರೆದುಕೊಂಡು ಹೋದ ಜಾಗಕ್ಕೆ ನಾವು ಹೋಗಬೇಕಲ್ವ. ದೂರದಲ್ಲಿದ್ದೇ ನಮ್ಮನ್ನೆಲ್ಲಾ ವಿಷ್ ಮಾಡುತ್ತಿದ್ದೀರಿ.
ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.

shivu.k said...

ಸುಧೇಶ್,

ಕಾರ್ಯಕ್ರಮ ಚೆನ್ನಾಗಿ ಆಯ್ತು. ಮತ್ತು TV9 ನಲ್ಲಿಯೂ ಪ್ರಸಾರವಾಯಿತು. ಅದನ್ನೆಲ್ಲಾ ಸಾಧ್ಯವಾದಷ್ಟು ಬೇಗ ಬ್ಲಾಗಿಗೇರಿಸುತ್ತೇನೆ. ನೀವು ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..

ಧನ್ಯವಾದಗಳು.

shivu.k said...

ಆನಂದ್,

ನನ್ನ ಬ್ಲಾಗಿಗೆ ಸ್ವಾಗತ. ನಮ್ಮ ಪುಸ್ತಕಕ್ಕಾಗಿ ನವಕರ್ನಾಟಕ ಪುಸ್ತಕದ ಅಂಗಡಿಗಳಿಗೆ ಬೇಟಿಕೊಡಿ. ಓದಿ ಅಭಿಪ್ರಾಯ ತಿಳಿಸಿ.

ಧನ್ಯವಾದಗಳು.

ಮಿಥುನ ಕೊಡೆತ್ತೂರು said...

shubhashayagalu

shivu.k said...

ಮಿಥುನ,

ಥ್ಯಾಂಕ್ಸ್...

b.saleem said...

Shivu Si,
pustaka bidugade yasasviyagi mugisidderi, ade reti innastu pustakagalu niminnda mudi barali.
karyakramakke baralagalilla kshameyirali.
pustakagalannu nane bandu nimma
sahi padedu kodukolluttene.

ವಿನುತ said...

ಸವಿವರವಾದ ವರದಿಗೆ ಧನ್ಯವಾದಗಳು ಶಿವು ರವರೇ. ಸಮಾರಂಭವೇ ಕಣ್ಣಮುಂದೆ ಬಂದಂತಾಯಿತು. ಕಾರಣಾಂತರಗಳಿಂದ ಬರಲಾಗಲಿಲ್ಲ, ಅದಕ್ಕಾಗಿ ವಿಷಾದವಿದೆ. ಕ್ಷಮೆಯಿರಲಿ. ಮತ್ತೊಮ್ಮೆ ಅಭಿನಂದನೆಗಳು.

ದಿನಕರ ಮೊಗೇರ said...

ಶಿವೂ ಸರ್,
ನಿಮ್ಮ ಹಸ್ತಾಕ್ಷರ ಹೊತ್ತು ತಂದ ವೆಂಡರ್ ಕಣ್ಣು ನನಗೆ ಬಂದು ತಲುಪಿದೆ ಸರ್, ಓದಿಯೂ ಮುಗಿಸಿದೆ...... ಕೊನೆಯ ಅಧ್ಯಾಯ ಓದಿ, ನಮ್ಮ ಮನೆಯ ಪೇಪರ್ ಹಾಕೋ ಹುಡುಗ, ಒಂದೆರಡು ದಿನ ಪೇಪರ್ ಹಾಕದೆ ಇದ್ದರು ಪೂರ ಹಣ ಕೊಡಲು ನಾವು ನಿರ್ಧರಿಸಿದ್ದೇವೆ..... ತುಂಬಾ ಚೆನ್ನಾಗಿದೆ....... ಪ್ರೀತಿಯ ಎಲ್ಲ ಓದುಗರಿಗೂ ವಿನಂತಿ ಏನೆಂದರೆಎಲ್ಲರೂ ಪುಸ್ತಕ ಖರೀದಿಸಿ ಓದಿ.......................

shivu.k said...

ಸಲೀಂ,

ಪುಸ್ತಕ ಬಿಡುಗಡೆ ಚೆನ್ನಾಗಿ ಆಗಿದೆ. ನೀವು ಬೆಂಗಳೂರಿಗೆ ಬಂದಾಗ ಖಂಡಿತ ಪುಸ್ತಕವನ್ನು ನಿಮಗಾಗಿ ಕಾದಿರಿಸಿ ಕೊಡುವೆನು. ನಿಮ್ಮ ಆರೈಕೆ ಸದಾ ಹೀಗೆ ಇರಲಿ.
ಧನ್ಯವಾದಗಳು.

shivu.k said...

ವಿನುತಾ,


ಪುಸ್ತಕ ಕಾರ್ಯಕ್ರಮದ ಫೋಟೊಗಳನ್ನು ಇಷ್ಟಪಟ್ಟಿದ್ದೀರಿ. ಕಾರ್ಯಕ್ರಮ ಚೆನ್ನಾಗಿ ಆಯಿತು. ನಿಮ್ಮ ಆರೈಕೆಗೆ
ಧನ್ಯವಾದಗಳು.

shivu.k said...

ದಿನಕರ್ ಸರ್,

ವೆಂಡರ್ ಕಣ್ಣು ಓದಿ ಮುಗಿಸಿದ್ದೀರಿ. ದಿನಪತ್ರಿಕೆ ಹಾಕುವ ಹುಡುಗರ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಿರುವುದು ನನಗೆ ಖುಷಿಯ ವಿಚಾರ.

ಪುಸ್ತಕವನ್ನು ಎಲ್ಲ ಓದುಗರೂ ಓದಬೇಕೆಂದು ವಿನಂತಿಸಿದ್ದೀರಿ. ನನ್ನ ಕೆಲಸವನ್ನು ನೀವು ಮಾಡುತ್ತಿರುವುದಕ್ಕೆ ಮತ್ತು ನಿಮ್ಮ ಪ್ರೋತ್ಸಾಹಕ್ಕೆ ಅನಂತ ನಮನಗಳು.

ಕೃಪಾ said...

ನಮಸ್ತೆ......... ಶಿವಣ್ಣ....
ಅಭಿನಂದನೆಗಳು........
ನಿಮ್ಮ ಪುಸ್ತಕ ಬಿಡುಗಡೆ ಲೇಖನ ಮತ್ತು ಫೋಟೋಗಳು ಅಧ್ಭುತವಾಗಿತ್ತು.
ಆರೆಂಜ್ ಕೌಂಟಿ ಯವರ ಲ್ಯಾಂಡ್ ಸ್ಕೇಪ್ ನಲ್ಲಿ ಹಾಕಿದ್ದ ನಿಮ್ಮ ಚಿತ್ರ ಸಹ
ತುಂಬಾ ಚೆನ್ನಾಗಿದೆ....... ಅಲ್ಲಿಂದ ನಮ್ಮೋರಿಗೆ ಕೇವಲ ೮ ಕಿ ಮಿ ಅಷ್ಟೇ
ಗೊತ್ತ ನಿಮಗೆ....

shivu.k said...

ಕೃಪಾ ಅಕ್ಕ,

ತುಂಬಾ ದಿನಗಳ ನಂತರ ಬ್ಲಾಗಿಗೆ ಬಂದಿದೀರಿ. ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮವಂತೂ ಚೆನ್ನಾಗಿ ಆಯಿತು. ಮತ್ತೆ ಆರೆಂಜ್ ಕೌಂಟಿಯವರ ವೆಬ್‍ಸೈಟಿನಲ್ಲಿ ನನ್ನ ಚಿತ್ರವನ್ನು ನೋಡಿ ಮೆಚ್ಚಿದ್ದೀರಿ..ನಿಮ್ಮ ಊರು ಅಲ್ಲಿಗೆ ತುಂಬಾ ಹತ್ತಿರವಿರಬೇಕೆಂದರೆ ಅದು ಆರೆಂಜ್ ಕೌಂಟಿಯಷ್ಟೇ ಸೊಗಸಾಗಿರಬೇಕಲ್ವೇ...
ಮತ್ತೆ ನನ್ನ ಪುಸ್ತಕದ ಪ್ರತಿಗಳು ಇಷ್ಟವರಗೆ ಸುಮಾರು 550 ಪ್ರತಿಗಳು ಮಾರಾಟವಾಗಿಬಿಟ್ಟಿವೆ. ನನ್ನ ಬಳಿಯೂ ಕಾಲಿಯಾಗಿಬಿಟ್ಟಿವೆ. ಹೊರ ಊರಿನವರಿಗೆ ಅಂಚೆ ಮೂಲಕ ಹೆಚ್ಚು ಪುಸ್ತಕಗಳನ್ನು ಕಳಿಸಿದ್ದೇನೆ. ಮತ್ತೆ ನಮ್ಮ ಪ್ರಕಾಶಕರ ಬಳಿ ಹೋಗಿ ನಾಳೆ ತೆಗೆದುಕೊಳ್ಳಬೇಕಿದೆ.

ಧನ್ಯವಾದಗಳು.