Monday, October 12, 2009

ಕೊಂಡಿ ಇಲ್ಲದ ಜೇನು ಹುಳುಗಳ ಕತೆ

ಅದೊಂದು ಏಳುಸುತ್ತಿನ ಕೋಟೆ. ಕೋಟೆಯೊಳಗೊಂದು ಭವ್ಯ ಅರಮನೆ. ಅದರೊಳಗೊಂದು ಮಹಾರಾಣಿ. ಅವಳ ಸುತ್ತ ನೂರಾರು, ಸಾವಿರಾರು ಸೇವಕರು, ಕೆಲಸಗಾರರು. ರಾಣಿ ಗತ್ತಿನಿಂದ ಅಲ್ಲಿ ಜೋಳದ ರಾಶಿಯ ಹಾಗೆ ಇದ್ದು ಒಂದಕ್ಕೊಂದು ಅಂಟಿಕೊಂಡಿರುವ ಆ ಕಣಗಳನ್ನು[ಸೆಲ್ಸ್] ಪರೀಕ್ಷಿಸುತ್ತಿದ್ದಾಳೆ! ನಂತರ ಕೆಲಸಗಾರರಿಗೆ ಆದೇಶ ನೀಡುತ್ತಿದ್ದಾಳೆ. ರಾಣಿಯ ಆದೇಶದಂತೆ ಅವು ಜೋಳದ ಕಣಗಳಿಗೆ ಆಹಾರವನ್ನು ಅದರ ಅರ್ಧದಷ್ಟು ತುಂಬುತ್ತಿವೆ. ಮರುಕ್ಷಣವೇ ರಾಣಿ ತನ್ನ ಸುಂದರ ನೀಳದೇಹವನ್ನು ಬಿಲ್ಲಿನಂತೆ ಬಗ್ಗಿಸಿ ಅದರೊಳಗೆ ಮೊಟ್ಟೆ ಇಡುತ್ತಾಳೆ. ನಂತರ ಅವಳು ವೈಯ್ಯಾರದಿಂದ ಮುಂದೆ ಸಾಗುತ್ತಿದ್ದರೆ ಕೆಲಸಗಾರರು ಆ ಕಣಗಳನ್ನು ಸಮರೋಪಾದಿಯಲ್ಲಿ ಮುಚ್ಚುತ್ತಿದ್ದಾರೆ. ಅಷ್ಟರಲ್ಲಿ ರಾಣಿ ಮತ್ತೊಂದು ಕಣವನ್ನು ಆಯ್ಕೆಮಾಡಿಕೊಂಡು ಮತ್ತೊಂದು ಮೊಟ್ಟೆಯಿಡುತ್ತಾಳೆ. ಅದರ ಹಿಂದೆಯೇ ಕೆಲಸಗಾರರ ಆಹಾರ ತುಂಬುವ ಕೆಲಸ. ಇದು ಪ್ರತಿನಿಮಿಷ, ಪ್ರತಿಗಂಟೆ, ಪ್ರತೀದಿನ ನಡೆಯುತ್ತಾ ದಿನದ ೨೪ ಗಂಟೆಗಳೂ ನಿರಂತರವಾಗಿ ನಡೆಯುತ್ತಿದೆ! ರಾಣಿಯ ಆಜ್ಞಾಪಾಲನೆಯನ್ನು ಕೆಲಸಗಾರರು ಶಿರಸಾವಹಿಸಿ ಎಷ್ಟು ಶ್ರದ್ಧೆ ಭಕ್ತಿಯಿಂದ ಚುರುಕಾಗಿ ಮಾಡುತ್ತಿದ್ದಾರೆಂದರೆ ನಾನು ನನ್ನ ಮ್ಯಾಕ್ರೋ ಲೆನ್ಸ್ ಮೂಲಕ ನೋಡುತ್ತಾ ಬೆರಗಾಗಿ ಅವುಗಳ ಚಿತ್ರಗಳನ್ನು ಕ್ಲಿಕ್ಕಿಸುವುದನ್ನೇ ಮರೆತುಬಿಟ್ಟಿದ್ದೆ. ಮನುಷ್ಯನ ಇಂದಿನ ಗುಣಗಳಾದ ಸ್ವಾರ್ಥ, ಒಬ್ಬಂಟಿ ಜೀವನ, ತನಗೇ ಎಲ್ಲಾ ಬೇಕು ಎನ್ನುವ ಹುಂಬತನಗಳಿಗೆ ಇವುಗಳ ನಿಸ್ವಾರ್ಥ, ಒಗ್ಗಟ್ಟು, ದಣಿವರಿಯದ ದುಡಿಮೆ ಮೊದಲಾದವುಗಳು ನನಗೆ ಆಚ್ಚರಿಯೆನಿಸಿತ್ತು.


ಇಷ್ಟಕ್ಕೂ ಈಗ ನಾನು ಬಾಲಮಿತ್ರ, ಚಂದಮಾಮದ ಮಾಯಾಲೋಕದ ಕತೆಯನ್ನು ಹೇಳುತ್ತಿದ್ದೇನೆ ಅಂದುಕೊಳ್ಳಬೇಡಿ. ಇದು ನಾನೇ ಕಣ್ಣಾರೆ ಕಂಡು ಫೋಟೊಗಳನ್ನು ಕ್ಲಿಕ್ಕಿಸಿದ ಕೊಂಡಿಯಿಲ್ಲದ ಜೇನು ಕುಟುಂಬದ ಕತೆ.

ಮೊಟ್ಟೆಕಣಗಳು[cells]


ಜೇನುಕುಲಗಳಲ್ಲೇ ಮೊದಲ ತಳಿ ಹಾಗೂ ಆದಿ ಕಾಲದ ಜೇನು ಪ್ರಭೇದವಾದ ರಾಳ ಜೇನಿನ ಕತೆ. ಇವಕ್ಕೆ ಮುಜಂಟಿ ಜೇನು, ತುಡವೆ ಜೇನು, ಮಿಶ್ರ ಜೇನು, ನಸುರು ಜೇನು, ಸೊಳ್ಳೆ ಜೇನು ಎನ್ನುವ ಹೆಸರುಗಳು ಇವೆ. ಇತರೆ ಜೇನು ಪ್ರಭೇದಗಳಿಗಿಂತ ತೀರ ಚಿಕ್ಕದಾಗಿದ್ದು ಹೆಜ್ಜೇನಿಗಿಂತ ೧/೫ ಭಾಗದಷ್ಟು ಚಿಕ್ಕವು. ಇವು ಉಳಿದ ನಾಲ್ಕು ಬಗೆಯ ಜೇನು ಹುಳುಗಳಂತೆ ಹೆಚ್ಚು ಜೇನುತುಪ್ಪ ಸಂಗ್ರಹಿಸುವುದಿಲ್ಲ ಹಾಗೂ ವೈರಿಗಳಿಂದ ರಕ್ಷಿಸಿಕೊಳ್ಳಲು, ಆಕ್ರಮಣ ಮಾಡಿ ಚುಚ್ಚಲು ಮುಳ್ಳಿನ ಕೊಂಡಿಗಳಿಲ್ಲ. ಬಾಯಿಂದಲೇ ಸ್ವಲ್ಪ ಮಟ್ಟಿಗೆ ಕಚ್ಚುವುದರ ಮೂಲಕ ಕುಟುಂಬದ ಹಾಗೂ ತಮ್ಮ ರಕ್ಷಣೆ ಮಾಡಿಕೊಳ್ಳುತ್ತವೆ. ಇವು ಅಪ್ರಿಕಾ, ದಕ್ಷಿಣ ಅಮೇರಿಕಾ, ಏಷ್ಯಾ, ಆಸ್ಟ್ರೇಲಿಯ, ನ್ಯೂಗಿನಿಯ ಮತ್ತು ಸಾಲೋಮನ್ ದ್ವೀಪಗಳು, ಭಾರತದ ಉಷ್ಣವಲಯ ಪ್ರದೇಶಗಳಲ್ಲಿ ಕಂಡುಬರುತ್ತವೆ.


ಏಳುಸುತ್ತಿನ ಕೋಟೆಯಂತಿರುವ ಕೊಂಡಿಯಿಲ್ಲದ ಜೇನು ಹುಳುವಿನ ಕಾಲೋನಿ.

ಇವು ಗೂಡುಗಳನ್ನು ಕಟ್ಟುವ ಪರಿಯೇ ಬೇರೆ ಜೇನುಗಳಿಗಿಂತ ವಿಭಿನ್ನ. ಅದೊಂತರ ಏಳು ಸುತ್ತಿನ ಕೋಟೆಯೇ ಸರಿ.[ಚಿತ್ರ ನೋಡಿ ಹೇಗೆ ಪಿಲ್ಲರುಗಳ ಮೇಲೆ ತಮ್ಮ ಗೂಡುಗಳನ್ನು ಕಟ್ಟಿಕೊಂಡಿವೆ] ತಮ್ಮ ಗೂಡುಗಳನ್ನು ಅತ್ಯಂತ ಗೋಪ್ಯ ಸ್ಥಳಗಳಾದ ಮಣ್ಣಿನ ಗೋಡೆ, ಕಲ್ಲಿನ ಸೇತುವೆ ಸಂದುಗಳು, ಮರದ ಪೊಟರೆಗಳು ಮತ್ತು ಕಲ್ಲು ಬಂಡೆಗಳ ಸಂದುಗಳಲ್ಲಿ ಕಟ್ಟುತ್ತವೆ. ಎರಿಗಳ ರಚನೆಗೆ ಮೇಣ ಮತ್ತು ಮಣ್ಣಿನ ಮಿಶ್ರಣದಿಂದ ತಯಾರಾದ ಕಪ್ಪಾದ ಅಂಟು ಪದಾರ್ಥ[ಸೆರುಮನ್]ವನ್ನು ಬಳಸುತ್ತವೆ. ತಮ್ಮ ಕುಟುಂಬದ ರಕ್ಷಣೆಗಾಗಿ ಸುಮಾರು ೫-೬ ಮಿ.ಮೀ. ಅಗಲದ ಮತ್ತು ೧೦-೧೫ ಸೆಂ.ಮೀ. ಉದ್ದದ ಕೊಳವೆಯಾಕಾರದ ಪ್ರವೇಶದ್ವಾರವನ್ನು ಮಾಡಿಕೊಂಡಿರುವುದನ್ನು ನೋಡಿ ನನಗಂತೂ ಆಶ್ಚರ್ಯವಾಗಿತ್ತು. ಕೊಳವೆಯ ಹೊರತುದಿ ಅಂಟಿನಿಂದ ಕೂಡಿದ್ದು ಇರುವೆ ಮುಂತಾದ ಶತ್ರುಕೀಟಗಳಿಂದ ರಕ್ಷಿಸಿಕೊಳ್ಳಲು ಅನುಕೂಲವಾಗಿವೆ. ಇವು ಕಡಲೆಕಾಳು ಗಾತ್ರದ [ಪಾಟ್ಸ್]ಕಣಗಳಲ್ಲಿ ಪರಾಗ ಮತ್ತು ಜೇನುತುಪ್ಪ ಸಂಗ್ರಹಿಸಿದರೆ, ಜೋಳದ ಕಾಳಿನ ಗಾತ್ರದ [ಸೆಲ್ಸ್]ಕಣಗಳಲ್ಲಿ ಮೊಟ್ಟೆ ಮತ್ತು ಮರಿಗಳನ್ನು ಬೆಳೆಸುತ್ತವೆ. ಇವುಗಳ ಜೇನು ಸಂಗ್ರಹಣ ಸಾಮರ್ಥ್ಯ ಅತ್ಯಂತ ಕಡಿಮೆಯಿದ್ದು ವರ್ಷಕ್ಕೆ ಪ್ರತಿಕುಟುಂಬದಿಂದ ಕೇವಲ ೩೦೦ ಗ್ರ್‍ಆಂನಿಂದ ೭೦೦ ಗ್ರ್‍ಆಂ ಮಾತ್ರ ಇರುತ್ತದೆ. ಈ ಕೆಲಸಗಾರ ಜೇನುಹುಳುಗಳು ಸುಮಾರು ಅರ್ಧ ಕಿ.ಮೀ. ಸುತ್ತ ಸುತ್ತಾಡಿ ತಮ್ಮ ಕುಟುಂಬಕ್ಕೆ ಬೇಕಾದ ಪರಾಗ, ಜೇನು ಹಾಗು ಮರಗಳಿಂದ ಅಂಟನ್ನು ಸಂಗ್ರಹಿಸಿಕೊಂಡು ಬರುತ್ತವೆ.

ಲಾರ್ವೆ[Larve]



ಮೊಟ್ಟೆ ಮತ್ತು ಇತರೇ ಮೊಟ್ಟೆಯ ಕಣಗಳು.



ಪ್ಯೂಪ ಮತ್ತು ಪ್ಯೂಪದಿಂದ ಆಗತಾನೆ ಹೊರಬಂದ ಜೇನುಹುಳು.


ರಾಳ ಜೇನು ಕುಟುಂಬ ಸಾಮಾನ್ಯವಾಗಿ ಬೆಳಕು ಮತ್ತು ಗಾಳಿಯನ್ನು ಇಷ್ಟಪಡುವುದಿಲ್ಲ. ರಾಣಿಜೇನು ತನ್ನ ಮೇಲೆ ಬೆಳಕು, ಗಾಳಿ ಸೋಕಿದರೆ ತಕ್ಷಣ ಗೂಡಿನ ಒಳಗೆ ಹೋಗಿಬಿಡುತ್ತದೆ. ಸದಾ ಬಿಡುವಿಲ್ಲದ ಕಾಯಕದಲ್ಲಿ ತೊಡಗಿರುವ ಕೆಲಸಗಾರ ಜೇನುಹುಳುಗಳು ಅಲ್ಲಿಂದ ಹಾರಿಬಂದು ಸುತ್ತಮುತ್ತ ತಮಗೆ, ತಮ್ಮ ಕುಟುಂಬಕ್ಕೆ, ಗೂಡಿಗೆ ಏನಾದರೂ ತೊಂದರೆ ಇದೆಯೆ ಎಂದು ಸತತವಾಗಿ ಪರೀಕ್ಷಿಸುವ ರೀತಿ ನಮ್ಮ ಪೋಲೀಸ್ ವ್ಯವಸ್ಥೆಗೆ ಮಾದರಿಯಾಗಬಹುದು. ಇವುಗಳನ್ನು ನಾನು ಕಣ್ಣಾರೆ ನೋಡುತ್ತಾ ಬೆರಗಾಗಿದ್ದೆ. ಕೆಲಸಗಾರ ಜೇನುಹುಳು ತನ್ನ ಮೂರನೇ ಕಾಲಿನಿಂದ ಅಂಟನ್ನು ಹಾಗೂ ಪರಾಗವನ್ನು[ಪೋಲನ್]ಹಾಗೆ ಬಾಯಿಂದ ಜೇನನ್ನು ತರುತ್ತವೆ.
ಜೇನು ಹುಳುಗಳ ಕಾಲೋನಿ.

ತನ್ನ ದೇಹದಿಂದಲೇ ಉತ್ಪತಿಯಾಗುವ ಮೇಣ ಹಾಗೂ ಹೊರಗಿನಿಂದ ತಂದ ಅಂಟಿನಿಂದ ಅತ್ಯದ್ಭುತವೆನಿಸುವ ವಾಸ್ತು ಹಾಗೂ ತಂತ್ರಜ್ಞಾನದಿಂದ ಕಟ್ಟುವ ಎರಿಗಳ ಕಣಗಳು, ಮೊಟ್ಟೆಯಾಕಾರದಲ್ಲಿದ್ದು[ಒವೆಲ್] ನಮ್ಮ ಗಣಿತ ಶಾಸ್ತ್ರಜ್ಞರು ಮತ್ತು ವಾಸ್ತುಶಿಲ್ಪ ತಜ್ಞರು ಇತ್ತೀಚೆಗೆ ಬಳಸುವ ತಾಂತ್ರಿಕತೆಯನ್ನು ಬಹಳ ಹಿಂದೆ ಈ ಜೇನುನೊಣಗಳು ಕಲಿತಿರುವುದು ಸೋಜಿಗವೆನಿಸುತ್ತದೆ. ಈ ಗುಂಪಿನಲ್ಲಿ ಡ್ರೋನ್ ಎಂಬ ಹೆಸರಿನ ಗಂಡು ಜೇನು ಹುಳು ಕೇವಲ ಸಂತಾನೋತ್ಪತಿ ಕೆಲಸಕ್ಕೆ ಮಾತ್ರ ಮೀಸಲು. ಕೆಲಸಗಾರ ಜೇನುಹುಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕಣಗಳನ್ನು ಕಟ್ಟುವುದು, ಮರಿಗಳು ಮತ್ತು ರಾಣಿಯ ಪೋಷಣೆ, ಗೂಡಿನ ರಕ್ಷಣೆ, ಜೇನು ಮತ್ತು ಪರಾಗ ತರುವುದು, ಆಹಾರದ ಗುಣಮಟ್ಟ, ಅದು ಸಿಗುವ ದೂರ ದಿಕ್ಕು ಅರಿಯುವುದು ಮುಂತಾದವುಗಳನ್ನು ಮಾಡುತ್ತವೆ.


ಪೋಲನ್[ಪರಾಗ]ಸಂಗ್ರಹಿಸುವ ಕಡಲೇ ಕಾಳಿನ ಗಾತ್ರದ ಹಳದಿ ಮಿಶ್ರಿತ ಕಂದು ಬಣ್ಣದ ಕಣಗಳು



ಜೇನು ಸಂಗ್ರಹಿಸುವ ಕಡಲೇಕಾಳು ಗಾತ್ರದ ಕಂದು ಬಣ್ಣದ ಕಣ[cells]ಗಳು

ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ[ಬೆಂಗಳೂರು]ಉಪನ್ಯಾಸಕಿಯಾಗಿದ್ದು ಈ ರಾಳಜೇನಿನ ಜೀವನದ ಬಗ್ಗೆ ಅಧ್ಯಯನ ಮಾಡುತ್ತಿರುವ ವಿಜಯಾ ಅವರು ಹೇಳುವಂತೆ "ರಾಣಿಜೇನು ರಾತ್ರಿ ವೇಳೆಯಲ್ಲೂ ಮೊಟ್ಟೆಯಿಡುತ್ತವೆ. ಇದರ ಮೊಟ್ಟೆಗಳು ಕಂದು ಬಿಳಿಬಣ್ಣದಿಂದ ಕೂಡಿದ್ದು ಆಕಾರದಲ್ಲಿ ಉದ್ದವಾಗಿರುತ್ತವೆ. ಇವು ಬರಿಕಣ್ಣಿಗೆ ಸುಲಭದಲ್ಲಿ ಕಾಣುವುದಿಲ್ಲ. ಕೇವಲ ಮೈಕ್ರೋಸ್ಕೋಪ್‍ನಿಂದ ನೋಡಲು ಸಾಧ್ಯ ಅನ್ನುತ್ತಾರೆ.


ರಾಣಿ ಜೇನು ಮೊಟ್ಟೆಯಿಟ್ಟ ನಂತರ ಕೆಲಸಗಾರ ಜೇನುಗಳು ಜೋಳದ ಕಾಳಿನ ಗಾತ್ರದ ಕಣ[cells]ಗಳಿಗೆ ಅಹಾರವನ್ನು ತುಂಬುತ್ತಿರುವುದು.


ಮೊಟ್ಟೆಯನ್ನು ಕಣದೊಳಗೆ ಇಟ್ಟ ರಾಣಿಜೇನು ನಂತರ ತನ್ನ ಕೆಲಸಗಾರರಿಗೆ ಕಣದ ಮೇಲ್ಬಾಗವನ್ನು ಮುಚ್ಚಲು ಆದೇಶಿಸುತ್ತದೆ. ರಾಣಿಯ ಆಜ್ಞೆಯನ್ನು ಅವು ಚಾಚು ತಪ್ಪದೆ ಪಾಲಿಸುತ್ತವೆ. ಅಮೇಲೆ ಅದು ಭ್ರೂಣವಾಗಿ ಪರಿವರ್ತನೆಯಾಗಿ ಬಳಿಕ ಲಾರ್ವ, ಕೋಶಾವಸ್ಥೆಗೆ ಬದಲಾಗುತ್ತದೆ. ನಂತರ ವಯಸ್ಕ ಜೇನು ಪ್ಯೂಪದಿಂದ ಹೊರಬರುತ್ತದೆ. ಇದು ಕೆಲವಿಚಾರಗಳಲ್ಲಿ ಚಿಟ್ಟೆಯ ಜೀವ ಸೃಷ್ಟಿಯನ್ನೇ ಹೋಲುತ್ತದೆ. ಇದರಲ್ಲಿ ೫೦೦ ಪ್ರಭೇದಗಳಿದ್ದು ಹೆಚ್ಚಾಗಿ ಉತ್ತರ ಅಮೇರಿಕ, ಬ್ರೆಜಿಲ್, ಮೆಕ್ಸಿಕೊದಲ್ಲಿ ಕಂಡುಬರುತ್ತವೆ. ಇದರ ಜೇನನ್ನು ಕೇರಳ ಮತ್ತು ನಮ್ಮ ಮಲೆನಾಡಿನ ಕಡೆ ಆಯುರ್ವೇದ ಔಷದಿಯನ್ನು ತಯಾರಿಸಲು ಉಪಯೋಗಿಸುತ್ತಾರೆ ಹಾಗೂ ಇದು ಇತರೆಲ್ಲಾ ಜೇನಿಗಿಂತ ತುಂಬಾ ದುಬಾರಿ" ಎನ್ನುತ್ತಾರೆ ಡಾ. ವಿಜಯ.


ಕೆಲಸಗಾರ ಜೇನು ನೆಲದ ಮೇಲೆ ಕುಳಿತಿದ್ದಾಗ



Macro Lens ಮೂಲಕ ಕ್ಲಿಕ್ಕಿಸಿದ ರಾಣಿ ಜೇನು ಮತ್ತು ಕೆಲಸ ಗಾರ ಜೇನು

ಈ ಪ್ರಭೇದದಲ್ಲಿ ರಾಣಿಜೇನಿನ ಆಯಸ್ಸು ೫-೬ ವರ್ಷಗಳು. ಆದ್ರೆ ಕೆಲಸಗಾರ ಜೇನುಹುಳುಗಳ ಆಯಸ್ಸು ಕೇವಲ ೪೦-೬೦ ದಿನಗಳು ಮಾತ್ರ. ಇಷ್ಟು ಚಿಕ್ಕ ಆಯಸ್ಸಿನಲ್ಲಿ ಎರಿಗಳನ್ನು ಕಟ್ಟಲು ಬಳಸುವ ತಂತ್ರಜ್ಞಾನ, ಕಣಗಳಿಗೆ[ಬೋರ್ಡ್ ಸೆಲ್ಸ್] ಮುಚ್ಚಳ ಹಾಕುವುದು, ದ್ವಾರಪಾಲನೆ, ಮರಿಗಳ ಮತ್ತು ರಾಣಿಯ ಪೋಷಣೆ, ಪರಾಗ ಹಾಗೂ ಮಕರಂದಗಳ ಶೇಕರಣೆ. ಕುಟುಂಬದ ಅರೋಗ್ಯ ಇತ್ಯಾದಿಗಳನ್ನು ಅವುಗಳಲ್ಲಿರುವ ಒಗ್ಗಟ್ಟು ತನ್ನ ಜೀವನವೆಲ್ಲಾ ತನ್ನ ಗುಂಪಿಗಾಗಿ ಮೀಸಲು ಎಂದು ದುಡಿಯುವುದು, ವೈಯಕ್ತಿಕವಾಗಿ ಏನನ್ನು ಬಯಸದೆ ಇರುವುದು ಮುಂತಾದವು ಮನುಷ್ಯರಾದ ನಾವು ನಮ್ಮ ಜೀವಿತಾವಧಿ ಸರಾಸರಿ ೧೦೦ ವರ್ಷಗಳಲ್ಲಿ ಏನು ಸಾಧಿಸದೆ ಸೋಮಾರಿತನದಲ್ಲಿದ್ದು ಸ್ವಾರ್ಥಗಳಾಗಿದ್ದು ಎಲ್ಲವೂ ತನಗೆ ಬೇಕು ಎಂದುಕೊಂಡು ಕದ್ದುಮುಚ್ಚಿ ಕೂಡಿಡುವುದು ಇಂಥವೆಲ್ಲಾ ನೋಡಿದಾಗ ಈ ಜೇನುನೊಣಗಳ ಜೀವನ ನಿಜಕ್ಕೂ ಮಾದರಿ ಹಾಗೂ ಅನುಕರಣಿಯ ಎನ್ನುವುದಂತೂ ಸತ್ಯ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ.

67 comments:

ಕ್ಷಣ... ಚಿಂತನೆ... said...

ಶಿವು, ಸರ್‍,

ಕೊಂಡಿ ಇಲ್ಲದ ಜೇನು ಹುಳುಗಳ ಕತೆ ಓದಿದೆ. ತುಂಬ ಕುತೂಹಲಕಾರಿಯಾಗಿದೆ.ಇದೊಂದು ಒಳ್ಳೆಯ ಸಂಶೋಧನಾ ಲೇಖನದಂತಿದೆ. ದಿನಪತ್ರಿಕೆಗೆ ಕಳಿಸಿರಿ.

ಸ್ನೇಹದಿಂದ,

ಚಂದ್ರು

shivu.k said...

ಚಂದ್ರು ಸರ್,

ಇದು ಹಳೆಯ ಜೇನುಹುಳುವೇ ಆದರೂ ಎಲ್ಲರಿಗೂ ಗೊತ್ತಿರಲಿಲ್ಲವಾದ್ದರಿಂದ ಇದರ ಹಿಂದೆ ಬಿದ್ದಿದ್ದೆ. ನಿಮಗೆ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್...
ಮತ್ತೆ ಇದು ಮೂರು ವರ್ಷಗಳ ಹಿಂದೆ ಸುಧಾ ವಾರಪತ್ರಿಕೆಯಲ್ಲಿ ಚಿತ್ರಸಹಿತ ಪ್ರಕಟವಾಗಿತ್ತು.

ಧನ್ಯವಾದಗಳು.

ಹಿತ್ತಲಮನೆ said...

ಲೇಖನ ಚೆನ್ನಾಗಿದೆ ಸರ್. ಮಿಸ್ರಿ ಜೇನು ಅನ್ನುತ್ತೇವಲ್ಲ... ಅದು ಇದೇನಾ ?

shivu.k said...

ಹಿತ್ತಲ ಮನೆ ಸರ್,

ಮಿಸ್ರಿ ಜೇನು ಅನ್ನುವ ವಿಚಾರ ನನಗೆ ಗೊತ್ತಿಲ್ಲ. ನೀವೆ ಪ್ರಯತ್ನಿಸಿ....ಲೇಖನವನ್ನುಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

Rajesh Manjunath - ರಾಜೇಶ್ ಮಂಜುನಾಥ್ said...

ಶಿವು ಸರ್,
ತುಂಬಾನೆ ಉಪಯುಕ್ತ ಮಾಹಿತಿ, ಮತ್ತು ಆಸಕ್ತಿಕರ ವಿಷಯ. ಛಾಯಾಚಿತ್ರಗಳು ಅಷ್ಟೇ ಚೆನ್ನಾಗಿವೆ.

shivu.k said...

ರಾಜೇಶ್ ಧನ್ಯವಾದಗಳು

ಹೀಗೆ ಬರುತ್ತಿರಿ...

shridhar said...

ಶಿವು ಸರ್,
ತುಂಬಾ ಉಪಯುಕ್ತ ಮಾಹಿತಿಯುಳ್ಳ ಚಿತ್ರ ಲೇಖನ. ನಮ್ಮ ರಜಾ ದಿನಗಳಲ್ಲಿ ಜೇನು ಹಿಡಿಯುವುದು ಒಂದು ಕೆಲ್ಸವಾಗಿತ್ತು.
ಯಾವುದೆ ಜೇನು ಹುಳಗಳನ್ನು ತಂದಿಡಬೇಕೆಂದರೆ ಮೊದಲು ರಾಣಿ ಜೇನನ್ನು ಹಿಡಿಯಬೇಕು . ಉಳಿದ ಜೇನುಗಳು ತಾನೆ ತಾನಾಗಿ ರಾಣಿ ಜೇನನ್ನು ಹಿಂಬಲಿಸುತ್ತವೆ. ಜೇನಿನೊಂದಿನ ಸರಸ ಆ ನೋವು ಎಂದು ಮರೆಯುವಂತಿಲ್ಲ. ಅಜ್ಜಿ ಊರಿಗೆ ಹೊದಾಗ ಒಮ್ಮೆ ನಮ್ಮ ಹಳೆ ಜೇನು ಪೆಟ್ಟಿಗೆಯನ್ನು ನೋಡಿಯೆ ಬರುತ್ತೇನೆ. ಆದರೆ ಮುಂಚಿನಂತೆ ಜೇನು ಹುಳಗಳು ಇದ್ದೆ ಬಿಟ್ಟಾವು ಅನ್ನುವಂತಿಲ್ಲ.

ಹಿತ್ತಲಮನೆಯವ್ರೆ,
ನೀವು ಹೇಳಿದಂತೆ ಇದು ಉತ್ತರ ಕನ್ನಡದಲ್ಲಿ ಮಿಸ್ರಿ ಜೇನು ಎಂದು ಕರೆಯಲ್ಪಡುತ್ತದೆ.
ಶಿವು ತಿಳಿಸಿದಂತೆ ಇವುಗಳನ್ನು ಮರದ ಪೊಟರೆಯಲ್ಲಿ , ಗೋಡೆಯ ಸಂದುಗಳಲ್ಲಿ ಕಾಣಬಹುದು.
ಇದರಲ್ಲಿಯೂ ಹಲವು ಪ್ರಭೇದಗಳಿವೆ. ಮಿಸ್ರಿ ಮೇಣ ಹಾಗು ಮಿಸ್ರಿ ತುಪ್ಪವನ್ನ ಔಷದವಾಗಿ ಉಪಯೋಗಿಸುತ್ತಾರೆ.

ಬಾಲು said...

ಚೆನ್ನಾಗಿದೆ ವಿವರಣೆ ಮತ್ತೆ ಫೊಟೊಗಳು. ನನಗೆ ಕರ್ವಾಲೊ ಕಾದ೦ಬರಿ ನೆನಪಿಗೆ ಬ೦ತು.

PaLa said...

ಚಿತ್ರ ಸಹಿತ ಲೇಖನಕ್ಕೆ ಧನ್ಯವಾದ ಶಿವು..

Unknown said...

ವಿಸ್ಮಯಗಳ ಬೆನ್ನು ಹತ್ತಿದ ಶಿವು
ಅದ್ಭುತವಾದ ಹುಡುಕಾಟ ನೆಡೆಸಿದ್ದೀರಿ. ಮಾಹಿತಿ ಲೇಖನ ಪರಸ್ಪರ ಪೂರಕ. ಖಂಡಿತಾ ಈ ಮಾದರಿಯ ಹುಡುಕಾಟವನ್ನು ನೀವು ಮುಂದುವರೆಸಿ. ನಿಮ್ಮಿಂದ ನಮ್ಮ ನಿರೀಕ್ಷೆ ದೊಡ್ಡದು.

ಸಾಗರದಾಚೆಯ ಇಂಚರ said...

ಶಿವೂ ಸರ್,
ನಿಮ್ಮ ಲೇಖನ ಯಾವಾಗಲೂ ಕುತೂಹಲ ಭರಿತವಾಗಿರುತ್ತದೆ. ಬರೆಯುವ ಶ್ರದ್ದೆ, ವಿಷಯ ಸಂಗ್ರಹದಲ್ಲಿರುವ ಕಾಳಜಿ, ಫೋಟೋಗಳ ಸೌಂದರ್ಯ, ಇವೆಲ್ಲ ಸೇರಿ ಒಂದು ಅನುಭವಪೂರ್ಣ ಸಂಶೋಧನ ಲೇಖನವೇ ಕಣ್ಣೆದುರಿಗೆ ನಿಲ್ಲುತ್ತದೆ.
ಜೇನಿನ ಬಗೆಗೆ ಬಹಳಷ್ಟು ಮಾಹಿತಿ ತಿಳಿಸಿದ್ದಿರಿ
ಸುಂದರ ಬರಹ

AntharangadaMaathugalu said...

ಶಿವು ಸಾರ್......
ಮಾಹಿತಿ ಪೂರ್ಣ ಲೇಖನ ತುಂಬಾ ಚೆನ್ನಾಗಿದೆ. ಇದರ ಕಥೆ ನನಗೆ ಗೊತ್ತಿರಲಿಲ್ಲ. ಧನ್ಯವಾದಗಳು......

ಶ್ಯಾಮಲ

sunaath said...

ಶಿವು,
ಎಂಥಾ ಅದ್ಭುತವಾದ photography ಮಾಡಿದ್ದೀರಿ! ಅಷ್ತೇ ವಿಸ್ಮಯಕರ ಮಾಹಿತಿಯನ್ನೂ ನೀಡಿದ್ದೀರಿ. ಜೇನುಗಳನ್ನು ಅನುಸರಿಸಿದ ನಿಮ್ಮ ತಾಳ್ಮೆ ಹಾಗೂ ಪರಿಶ್ರಮ ಮೆಚ್ಚುವಂಥಾದ್ದು. ನಮಗೆಲ್ಲರಿಗೂ ಜೇನುತುಪ್ಪ ಕುಡಿಸಿದ್ದೀರಿ ಎಂದು ಹೇಳಬಲ್ಲೆ.

ಶಿವಪ್ರಕಾಶ್ said...

ಅಬ್ಬಬ್ಬಾ.. ಎಷ್ಟು ವಿಸ್ಮಯಕಾರಿಯಾಗಿದೆ ಇ ಜೇನುಗಳ ವಿಚಾರ...
ಮಾಹಿತಿಯುಕ್ತ ಚಿತ್ರಲೇಖನಕ್ಕೆ ಧನ್ಯವಾದಗಳು...

ಸುಮ said...

ಜೇನು ಹುಳುಗಳಲ್ಲಿ ಅಪಾಯಕಾರಿಯಲ್ಲದ ರಾಳ ಜೇನುಗಳ (ನಮ್ಮ ಕಡೆ ನುಸ್ರಿ ಜೇನು ಎನ್ನುತ್ತಾರೆ)ಬಗ್ಗೆ ತುಂಬಾ ಉಪಯುಕ್ತ ವಿಚಾರಗಳನ್ನು ತಿಳಿಸಿದ್ದೀರಿ. ಅವುಗಳ ಮೊಟ್ಟೆ, ಗೂಡುಗಳನ್ನು ನೋಡಿರಲಿಲ್ಲ. ನಿಮ್ಮ ಫೋಟೊಗಳಿಂದ ಅವುಗಳನ್ನು ನೋಡಿದಂತಾಯಿತು. ಜೇನುಹುಳುಗಳ ಸಮುದಾಯ ಚಿಂತನೆ, ಶಿಸ್ತು,ಕೆಲಸಗಳ ಹಂಚಿಕೆ ಅನುಕರಣಾಯೋಗ್ಯ.

ಸವಿಗನಸು said...

ಶಿವು ಸರ್,
ಬಹಳ ಉಪಯುಕ್ತ ಮಾಹಿತಿಯುಳ್ಳ ಲೇಖನ ಹಾಗೂ ಚಿತ್ರಗಳು ಸಹ ಸೂಪರ್....ನಿಮ್ಮ ತಾಳ್ಮೆ ಮೆಚ್ಚಲೇಬೇಕು....
ಜೇನು ಸವಿದಷ್ಟೆ ಖುಷಿ ಆಯಿತು......
ಅಭಿನಂದನೆಗಳು....

ಜಲನಯನ said...

ನಿಮ್ಮ ನವೀನ ಪ್ರಸ್ತಾವನೆಗೆ ಅಭಿನಂದನೆಗಳು, ನಿಮ್ಮ ಕ್ಲಿಕ್ಕಿಸಿದ ವಿಷಯದ ಮತ್ತು ವಿವರಿಸಿದ ದೃಶ್ಯದ ಬಗ್ಗೆ ಏನ ಹೇಳಲಿ.??
ಜೇನು ಗೂಡು ತುಂಬಿನಿಂತ ಕುಟುಂಬಕ್ಕೆ ಒಂದು ಮಾದರಿಯಂತೆ..ಮನೆ-ಮಂದಿ ಇದ್ದರೆ ಜೇನುಗೂಡಿನಂತಿರಬೇಕು ಅಂತಾರೆ ಕವಿಗಳು. ಇಲ್ಲಿ ಕೊಂಡೀ ಇಲ್ಲದ ಜೇನು ಅಂದ್ರೆ ಇವು ಕಡಿದರೆ ಊತ-ಆತ ಎಣೂ ಇರೋಲ್ಲವೇ..?? ಹಂಗಾದ್ರೆ ಅವುಗಳ ಜೇನು ತುಪ್ಪ..? ಅಷ್ಟೆ ಸಿಹಿನಾ....??
ಚನ್ನಾಗಿದೆ ಲೇಖನ ಶಿವು.

vijayasheela said...

ಕೊಂಡಿ ಇಲ್ಲದ ಜೇನು

ಕೆ ಶಿವು, ನಿಮಗೆ ಗಳಿಸಿದೆ ಪ್ರಬುದ್ಧ ಲೇಖನ
ಅದಕೆ ನಾವು ಅರ್ಪಿಸುವೆವು ಪ್ರಮಾಣ ನಮನ.
ಕೊಂಡಿ ಇಲ್ಲದ ಜೇನು ಜೀವನ ಪ್ರಾಣಿಶಾಸ್ತ್ರ
ಕೊಂಡಾಡಿ ಓದಿದೆ ತುಂಬಿ ಶಿರಗಣಿ ಪ್ರಶಸ್ತ.
*
ಮುಗ್ಧ ಸವಿಗನ್ನಡ ತುಂಬಿತುಳುಕಿದೆ ವಿಶಿಷ್ಟ
ಉದ್ಭೋದ ಕೂಡಿ ಜೇನಿನ ಚರಿತೆ ಪ್ರತಿಷ್ಟ.
ಉಗ್ಗಿ ಉದ್ಭವಿಸಲಿ ಲೇಖನಸರಾವಳಿ ವೈಶಿಷ್ಟ
ನುಗ್ಗಿ ಜಯಗಳಿಸಲಿ ಲೇಖನದಾಳಿ ಕನ್ನಡರಾಷ್ಟ್ರ!.
- ವಿಜಯಶೀಲ, ಬೆರ್ಲಿನ್, ೧೪.೧೦.೨೦೦೯
*

ದಿನಕರ ಮೊಗೇರ said...

ತುಂಬಾ ಚೆನ್ನಾಗಿದೆ.... ಚಿತ್ರ ಸಹಿತ ಲೇಖನ..... ಜೆನಿನಿಂದ ತುಂಬಾ ಕಲಿಯೋದು ಇದೆ.... ಧನ್ಯವಾದ..... ನಿಮ್ಮ ಬ್ಲಾಗ್ ಗೆ ಕಾಯೋದು ಇದಕ್ಕೆ, ನಿಮ್ಮ ಎಲ್ಲಾ ಲೇಖನಗಳೂ ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ....

ದಿನಕರ ಮೊಗೇರ said...
This comment has been removed by the author.
Unknown said...

ಶಿವು ಸರ್ ,
ಚಿತ್ರ ಸಹಿತ ಲೇಖನ ತುಂಬಾ ಚೆನ್ನಾಗಿದೆ. ತು೦ಬಾ ವಿಷಯ ತಿಳಿದ೦ತೆ ಆಯಿತು . ನಮಗೆ ಬರಿ ಸಿಹಿಯಾದ ಜೇನು ತಿ೦ದು ಗೊತ್ತೇ ಹೊರತು ಅದು ಆ ಜೇನನ್ನು ಮಾಡಲು ಪಡುವ ಕಷ್ಟ ಹಾಗು ಆ ಸಿಹಿ ಜೇನಿನ ಹಿ೦ದೆ ಇರುವ ಕೆಲಸಗಳು ಈಗ ಗೊತ್ತಾದ೦ತೆ ಆಯಿತು ವ೦ದನೆಗಳು .

shivu.k said...

ಶ್ರೀಧರ್,

ನನ್ನ ಚಿತ್ರ ಬರಹಕ್ಕೆ ನಿಮ್ಮ ಪ್ರತಿಕ್ರಿಯೆ ನನಗೆ ತುಂಬಾ ಇಷ್ಟವಾಯಿತು.
ರಾಣಿ ಜೇನನ್ನು ಹಿಡಿದು ಅದನ್ನು ಪಳಸಿಗಿದ ರೀತಿಯನ್ನು ನಿಮ್ಮ ಬಾಲ್ಯದ ಆನುಭವದ ಮೂಲಕ ಚೆನ್ನಾಗಿ ಪ್ರತಿಕ್ರಿಯಿಸುವುದಲ್ಲದೆ, ಹಿತ್ತಲಮನೆಯವರ ಪ್ರಶ್ನೆಗೆ ಉತ್ತರಿಸಿದ್ದೀರಿ. ಅದು ನನಗೂ ಗೊತ್ತಿಲ್ಲವಾದ್ದರಿಂದ ನನಗೂ ಗೊತ್ತಾದಂತೆ ಆಯಿತು. ಮತ್ತೆ ಅದರ ಮತ್ತಷ್ಟು ಉಪಯೋಗಗಳನ್ನು ತಿಳಿಸಿದ್ದೀರಿ..
ಒಂದು ಲೇಖನ ಈ ರೀತಿ ಎಲ್ಲರಿಗೂ ತೆರೆದುಕೊಳ್ಳಬೇಕು. ಅಲ್ಲಿಗೆ ನನ್ನ ಶ್ರಮ ಸಾರ್ಥಕ.

ಧನ್ಯವಾದಗಳು.

shivu.k said...

ಬಾಲು ಸರ್,

ಕರ್ವಾಲೋ ನನ್ನ ಮೆಚ್ಚಿನ ಕಾದಂಬರಿ. ಚಿತ್ರಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಕರ್ವಾಲೋ ನೆನಪಿಸಿದ್ದಕ್ಕೆ ಧನ್ಯವಾದಗಳು.

shivu.k said...

ಪಾಲಚಂದ್ರ,

ಧನ್ಯವಾದಗಳು. ಹೀಗೆ ಬರುತ್ತಿರಿ..

shivu.k said...

ಸತ್ಯನಾರಾಯಣ ಸರ್,

ವಿಸ್ಮಯಗಳ ಹುಡುಕಾಟವೆಂದು ದೊಡ್ಡ ಪದ ಬಳಸಿದ್ದೀರಿ..ಆದ್ರೆ ಇಂಥ ಹೊಸತನ್ನು ಹುಡುಕುವಾಗಿನ ಆನಂದವೇ ಬೇರೆ. ಅದರ ಪ್ರತಿಕ್ಷಣಗಳನ್ನು ಅನುಭವಿಸುತ್ತೇನೆ. ಅದನ್ನು ನೀವು ನೋಡಿ ಓದಿ ಸಂತೋಷಪಟ್ಟರೆ ನನ್ನ ಶ್ರಮ ಸಾರ್ಥಕ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu.k said...

ಗುರುಮೂರ್ತಿ ಸರ್,

ಲೇಖನ, ಚಿತ್ರಗಳ ಬಗ್ಗೆ ಶ್ರಧ್ದೆ, ಕಾಳಜಿ ಅಂತೆಲ್ಲಾ ಹೇಳಿ ನನ್ನ ಹೊಗಳಿ ಅಟ್ಟಕೇರಿಸುತ್ತಿದ್ದೀರಿ. ಆದ್ರೆ ನನಗೆ ಇದಕ್ಕಿಂತ ಬೇರೆ ಹಕ್ಕಿಗಳ ಕೀಟಗಳ ಹಿಂದೆ ಬಿದ್ದಾಗ ಆದ ಆನುಭವಕ್ಕೆ ಹೋಲಿಸಿದರೆ ಇದರದು ಏನು ಇಲ್ಲ.

ಜೇನಿನ ಲೇಖನವನ್ನು ಮತ್ತು ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,

ಜೇನುಹುಳು ಚಿತ್ರ ಲೇಖನವನ್ನು ಮೆಚ್ಚಿದ್ದೀರಿ. ನನಗೂ ನಿಮ್ಮಂತೆ ಇದರ ಕತೆ ಗೊತ್ತಿರಲಿಲ್ಲ. ಹಿಂದೆ ಬಿದ್ದಾಗ ಗೊತ್ತಾಯಿತು...

ಧನ್ಯವಾದಗಳು.

shivu.k said...

ಸುನಾಥ್ ಸರ್,

ಇದರ ಹಿಂದೆ ಬಿದ್ದಾಗ ಫೋಟೋಗ್ರಫಿ ಮಾಡಲು ಕಷ್ಟವಾಗಿದ್ದಂತು ನಿಜ. ಅವು ಕಚ್ಚಿದರೂ ನೋವಾಗೊಲ್ಲವೆಂದು ಗೊತ್ತಾದ ಮೇಲೆ ಸ್ವಲ್ಪ ದೈರ್ಯ, ತಾಳ್ಮೆಯಿಂದ ಕ್ಲಿಕ್ಕಿಸುತ್ತಿದ್ದೆ. ಆದ್ರೂ ಅದರ ಪ್ರವೇಶ ದ್ವಾರವನ್ನು ಕ್ಲಿಕ್ಕಿಸಲು ಆಗಲಿಲ್ಲವೆನ್ನುವ ಕೊರಗು ಇದೆ.
ಆದ್ರೂ ಲೇಖನ ನಿಮಗೆ ಜೇನುತುಪ್ಪ ತಿಂದಂತೆ ಆಯಿತು ಅಂದಿದ್ದೀರಿ. ನಿಮ್ಮ ಮಾತು ಕೇಳಿ ನನಗೂ ಜೇನು ಸವಿದಂತೆ ಆಯಿತು...
ಧನ್ಯವಾದಗಳು.

shivu.k said...

ಶಿವಪ್ರಕಾಶ್,

ನಾನು ಇದನ್ನು ಮೊದಲು ಕ್ಯಾಮೆರಾದಲ್ಲಿ ನೋಡುತ್ತಿದ್ದಾಗ ವಿಸ್ಮಯವೆನಿಸಿತ್ತು.

ಧನ್ಯವಾದಗಳು.

shivu.k said...

ಸುಮ ಮೇಡಮ್,

ಈ ಜೇನುಹುಳುಗಳಿಗೆ ನುಸ್ರಿ ಜೇನು ಅನ್ನುವ ಹೆಸರನ್ನು ತಿಳಿಸಿದ್ದೀರಿ.

ಅವುಗಳ ಬದುಕು ನಮಗೆಲ್ಲಾ ಅನುಕರಣೀಯವೆನ್ನುವುದು ಸತ್ಯ. ಫೋಟೊದಲ್ಲಿನ ಗೂಡು, ಮೊಟ್ಟೆ ಇತ್ಯಾದಿಗಳನ್ನು ನೋಡಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಮಹೇಶ್ ಸರ್,

ಚಿತ್ರಗಳನ್ನು ಮತ್ತು ಲೇಖನವನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದು ನನಗು ಜೇನು ಸವಿದಂತೆ ಆಯಿತು..

ಧನ್ಯವಾದಗಳು.

Keshav.Kulkarni said...

ಬೊಂಬಾಟ್! ತುಂಬ ಚಂದದ ಬರಹ ಮತ್ತು ಚಿತ್ರಗಳು!!

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಎಲ್ಲರಿಗೂ ಜೇನಿನ ಸವಿ ಉಣಿಸಿದ್ದೀರಿ. ಈ ನಸುರು ಜೇನು ಲಾಂಟಾನ ಗಿಡದಿಂದ ಮಧು ಸಂಗ್ರಹಿಸಿ ಪಾಯ ಅಥವಾ ಕಲ್ಲಿನ ಸಂದುಗಳಲ್ಲಿ ಗೂಡುಕಟ್ಟುವುದನ್ನು ನೋಡಿದ್ದೇನೆ. ಇದರ ಜೇನು ಸ್ವಲ್ಪ ಒಗರು. ಅಷ್ಟೋಂದು ರುಚಿ ಇರದು. ಆದರೆ ಆಯುರ್ವೇದದಲ್ಲಿ ಬಳಸುತ್ತಾರೆ.

umesh desai said...

ನನಗೆ ಇಷ್ಟಆಯಿತು ನಾ ಈ ಜೇನುಹುಳ ಅಂದ್ರೆ ವಿಪರೀತ ಹೆದರಿಕೆ ಅಂಥಾದರಲ್ಲಿ ನೀವು ಲೆನ್ಸನಲ್ಲಿ ಅದರ ಜೀವಜಾಲ ಹಿಡಿದು
ಕೊಟ್ಟಿರುವಿರಿ ಮಾಹಿತಿಪೂರ್ಣ ಲೇಖನ.

ಮನಸು said...

tumba chennagide sir vivaraNe haagu photogaLu.. istavayitu...

oLLeya samshodane!!!

Ittigecement said...

ಶಿವು ಸರ್.....

ಮಿಸ್ರಿ... ಹುಳದ ಬಗೆಗೆ ಬಹಳ ಚೆನ್ನಾಗಿ ಬರೆದಿದ್ದೀರಿ...
ಅದರ ತುಪ್ಪ ಹಳ್ಳಿ ಔಷಧದಲ್ಲಿ ಬಳಸುತ್ತಾರೆ...
ಮಲೆನಾಡಿನಲ್ಲಿ ಇವು ಜಾಸ್ತಿ ಇರುತ್ತವೆ...

ಬಿದಿರಿನ ಅಂಡೆಗಳಲ್ಲಿ ಇವುಗಳನ್ನು ಸಾಕುತ್ತಾರೆ...
(ಬಿದಿರಿನ ಎರಡು ಗಣ್ಣುಗಳ ತುಂಡಿನಲ್ಲಿ ತೂತು ಮಾಡಿ..
ರಾಣಿ ಜೇನನ್ನು ಒಳಗೆ ಬಿಟ್ಟರೆ..
ಇಡಿ ಜೇನು ಪಡೆ ಅದರ ಒಳಗಡೆ ಇರುತ್ತವೆ...)
ಮಕ್ಕಳೂ ಸಹ ಇವುಗಳ ತುಪ್ಪವನ್ನು ಬಿಡಿಸಿ ತಿನ್ನುತ್ತಿರುತ್ತಾರೆ...
ಇವು ನಿರುಪದ್ರವಿಗಳು...

ನಾನು ಸಣ್ಣವನಿದ್ದಾಗ ಇದನ್ನು ಸಾಕಿದ್ದೆ..

ಚಂದವಾದ ಫೋಟೊಗಳ ಸಂಗಡ..
ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು...

Unknown said...

ಉತ್ತಮ ಲೇಖನ... ನಮ್ಮ ಮನೆಯಲ್ಲೂ ಈ ಮುಜಂಟಿ ಜೇನನ್ನು ಬಿದಿರಿನ ಕೊಳವೆಯಲ್ಲಿ ಸಾಕುತ್ತಿದ್ದೆವು... ಇದರ ಜೇನು ಔಷಧಕ್ಕೆ ತುಂಬಾ ಒಳ್ಳೆಯದು... ಆಯುರ್ವೇದ, ಹೋಮಿಯೋಪತಿ ಮುಂತಾದ ಚೂರ್ನಗಳನ್ನು ಈ ಮುಜಂಟಿ ಜೇನುತುಪ್ಪದ ಜೊತೆ ಸೇವಿಸಿದರೆ ಉತ್ತಮ ಎಂದು ಎಲ್ಲೊ ಓದಿದ ನೆನಪು...

ರೂpaश्री said...

ಶಿವು ಅವರೆ ,
ನಿಮ್ಮೆಲ್ಲರ ಬ್ಲಾಗ್ ನೋಡಿ ತಿಂಗಳೇ ಆಯ್ತೇನೋ, ಇತ್ತೀಚೆಗೆ ಮನೆ/ಹೊರಗೆ ಎರಡೂ ಕೆಲ್ಸ ಜಾಸ್ತಿಯಾಗಿದೆ:(

ಚಿತ್ರ ಸಹಿತ ಜೇನು ಹುಳುಗಳ ಈ ಲೇಖನ ತುಂಬಾ ಚೆನ್ನಾಗಿದೆ. ತು೦ಬಾ ವಿಷಯ ತಿಳಿದುಕೊಂಡ೦ತೆ ಆಯಿತು. ವ೦ದನೆಗಳು!!

Naveen ಹಳ್ಳಿ ಹುಡುಗ said...

ನಮಸ್ತೆ ಶಿವಣ್ಣ.... ಲೇಖನ ಮಾಹಿತಿ ಪೂರ್ಣವಾಗಿದೆ.. ಧನ್ಯವಾದಗಳು...

ವಿನುತ said...

ಮಾಹಿತಿ ಭರಿತ ಸುಂದರ ಸಚಿತ್ರ ಲೇಖನ. ಧನ್ಯವಾದಗಳು
ಹಾಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

Me, Myself & I said...

ಶಿವೂ ಸಾರ್,
ನಾವಿದಕ್ಕೆ ತೊಡ್ವೆ ಅಂತೀವಿ. ನಮ್ಮ ತೆಂಗಿನ ತೋಟದಲ್ಲಿ ಅತೀ ಎತ್ತರದ ಒಂದು ಮರ ಇತ್ತು. ಅದ್ರಲ್ಲಿ ಕಾಯಿ ಬಿಟ್ತಿರ್ಲಿಲ್ಲ...ಆದ್ರೆ ಒಂದು ಪೊಟ್ರೆ ಇತ್ತು. ಅದ್ರಲ್ಲಿ ಒಂದು ತೊಡ್ವೆ ಜೇನಿತ್ತು. ಇದನ್ನ ದಿನಾ ಬೆಳಗ್ಗೆ ತೋಟಕ್ಕೆ ಹೋಗ್ತಿದ್ದಾಗ ನೋಡಿ ಬರ್ತಿದ್ದೆ.

ತುಂಬಾನೇ ಮಾಹಿತಿ ಕೊಟ್ಟಿದ್ದೀರ.
ತೊಡ್ವೆ ಜೇನು ಮತ್ತೆ ಚಿಟ್ಟೆಯ ಸಂತಾನೋತ್ಪತ್ತಿ ಹೆಚ್ಚು ಕಮ್ಮಿ ಒಂದೇ ತರ ಇದೇ ಅಂತ ಹೇಳಿದ್ದೀರ. ಇದು ಗೊತ್ತಾದ್ಮೇಲೆ ನಂಗೆ ಇದೆಷ್ಟು ಸತ್ಯ ಅಂತ ಪರೀಕ್ಷೆ ಮಾಡ್ಬೇಕು ಅನ್ನಿಸ್ತಿದೆ. ಆದ್ರೆ ನೀವು ಈಗಾಗ್ಲೇ ಸಾಕಷ್ಟು ಮಾಹಿತಿ ಇಟ್ಕೊಂಡೇ ಬರ್ದಿದ್ದೀರ ಅಂತ ಗೊತ್ತು.

ಉದ್ದುದ್ದಾ ಪ್ರತಿಕ್ರಿಯ್ಗೆ ಕ್ಷಮೆ ಇರ್ಲಿ.

Anonymous said...

shivu sir,
information tumbaa chennagide.... very useful.. and photos are also very beautiful
-Inchara

Prashanth Arasikere said...

hi shivu,

Enadru hosa vishya heltha irthira jenu gala bagge enu gottirlilla tumba chennagi ide nimma baraha..istondu hattira dinda jenu nodrlilla ,yake andre adu hatra bidadu illa..

shivu.k said...

ಡಾ.ಆಜಾದ್ ಸರ್,

ಜೇನುಹುಳುಗಳ ನಡುವಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಇಷ್ಟವಾಯಿತು. ಈ ಜೇನು ಕಚ್ಚುವುದಿಲ್ಲ. ಕಚ್ಚಿದರೂ ನೋವಾಗುವುದಿಲ್ಲ. ಮತ್ತೆ ಇದರ ಜೇನುತುಪ್ಪ ಅಷ್ಟೇನು ರುಚಿಕರವಲ್ಲ. ಇದನ್ನು ಔಷದಿಗೆ ಬಳಸುತ್ತಾರೆ...

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

Prabhuraj Moogi said...

ಒಳ್ಳೆ ಮಾಹಿತಿಯ ಲೇಖನ, ಒಂಥರಾ ಈ ಜೇನುಗಳದ್ದೂ ಇರುವೆಗಳ ಹಾಗೇ ಜೀವನವೇನೊ...
ಈ ಕೊಂಡಿಯಿಲ್ಲದ ಜೇನಿನ ಬಗ್ಗೆ ಇದೇ ಮೊದಲು ಕೇಳಿದ್ದು. ಜೇನುಗಳನ್ನು ನಿಮ್ಮ ಛಾಯಾಕನ್ನಡಿಯಲ್ಲಿ ಹತ್ತಿರದಿಂದ ನೋಡಲಾಯ್ತು, ಇಲ್ಲದಿದ್ದರೆ ಎಲ್ಲಿ ಕಚ್ಚಿಬಿಟ್ಟಾವೊ ಅನ್ನೊ ಭಯ ಇದ್ದೇ ಇರುತ್ತದೆ.
ಹಿಂದಿನ್ ಲೇಖನದಲ್ಲಿ ಬರೆದಿದ್ದ iceage ಫಿಲ್ಮ್ ನೋಡಿದೆ ಸೂಪರ ಆಗಿತ್ತು, ಮರಗಳ ನೆರಳು, ಹುಲಿಯ ಓಟ ಎಲ್ಲ ನೋಡುವಾಗ ಇಲ್ಲಿ ಓದಿದ ತಾಂತ್ರಿಕ ಅಂಶಗಳೆ ನೆನಪಿಗೆ ಬರುತ್ತಿದ್ದವು.

shivu.k said...

ವಿಜಯ್ ಶೀಲ,

ನೀವು ನನ್ನ ಚಿತ್ರಲೇಖನವನ್ನು ಓದಿ ಒಂದು ಸೊಗಸಾದ ಕವನವನ್ನೇ ಬರೆದಿದ್ದೀರಿ...ಧನ್ಯವಾದಗಳು.

ಮತ್ತು ಲೇಖನವನ್ನು ಇಷ್ಟಪಟ್ಟು ದೂರದ ಬರ್ಲಿನ್‍ನಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

shivu.k said...

ದಿನಕರ್ ಸರ್,

ನಿಮ್ಮ ಅಭಿಪ್ರಾಯ ಸರಿ ಜೇನಿನಿಂದ ಕಲಿಯೋದು ತುಂಬಾ ಇದೆ. ಮತ್ತು ನನ್ನ ಹೊಸ ಲೇಖನಕ್ಕಾಗಿ ನನ್ನ ಬ್ಲಾಗಿಗೆ ಕಾಯುತ್ತಿರುತ್ತೇನೆ ಎಂದಿದ್ದೀರಿ..ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu.k said...

ರೂಪರವರೆ,

ನನಗೂ ಮೊದಲು ಜೇನು ತಿನ್ನೋದು ಗೊತ್ತಿತ್ತು. ಈಗ ಅದರ ಹಿಂದೆ ಬಿದ್ದಾಗ ಅವುಗಳ ಕಷ್ಟ ಸುಖಗಳೇನು ಅಂತ ಗೊತ್ತಾಯ್ತು. ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ನಿಮಗಿಷ್ಟವಾಗಿದ್ದಕ್ಕೆ ಧನ್ಯವಾದಗಳು.

ಹೀಗೆ ಬರುತ್ತಿರಿ...

shivu.k said...

ಕೇಶವ ಕುಲಕರ್ಣಿ ಸರ್,

ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ನಸುರು ಜೇನನ್ನು ನೋಡಿದ ಅನುಭವವನ್ನು ಹಂಚಿಕೊಂಡಿದ್ದೀರಿ. ಈ ಲೇಖನವನ್ನು ಬರೆಯುವಾಗಲು ನನಗೆ ಜೇನು ಸವಿದಂತೆ ಆಗಿತ್ತು.

ಧನ್ಯವಾದಗಳು.

shivu.k said...

ಉಮೇಶ್ ದೇಸಾಯಿ ಸರ್,

ಜೇನು ಹುಳುಗಳನ್ನು ಕಂಡರೆ ಭಯಪಡಬೇಡಿ. ನಾವೇನಾದ್ರು ಅವುಗಳಿಗೆ ತೊಂದ್ರೆ ಕೊಟ್ರೆ ಅವು ನಮಗೆ ತೊಂದರೆ ಕೊಡುತ್ತವೆ. ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಮನಸು ಮೇಡಮ್,

ಚಿತ್ರ ಲೇಖನದ ವಿವರಣೆ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ಬಿದಿರಿನಲ್ಲಿ ರಾಣಿ ಜೇನು ಬಿಟ್ಟರೆ ಉಳಿದ ಜೇನುಗಳು ಸರಾಗವಾಗಿ ಅಲ್ಲಿ ಬರುತ್ತವೆ. ಅಹಾ..! ಇದು ನನಗೆ ಗೊತ್ತೇ ಇರಲಿಲ್ಲ. ಒಂದು ವಿಚಾರವಾಗಿ ನಾನು ಹಿಂದೆ ಬಿದ್ದು ದೊರೆತ ಮಾಹಿತಿಯನ್ನು ಇಲ್ಲಿಹಾಕಿದರೆ ಅದಕ್ಕೆ ಹೀಗೆ ಮತ್ತಷ್ಟು ಮಾಹಿತಿಗಳು ನಿಮ್ಮಂತೆ ಹಂಚಿಕೊಂಡಾಗ ಎಲ್ಲರಿಗೂ ಅನೇಕ ಹೊಸ ವಿಚಾರಗಳು ತಿಳಿದಂತೆ ಆಗುತ್ತದೆ. ಅಲ್ಲಿ ಈ ಬ್ಲಾಗ್ ಲೋಕ ಯಶಸ್ವಿಯಾದಂತೆ ಎನ್ನುವುದು ನನ್ನ ಅಭಿಪ್ರಾಯ...

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ರವಿಕಾಂತ್ ಸರ್,

ನಿಮ್ಮ ಮನೆಯಲ್ಲೂ ಈ ಜೇನಹುಳನ್ನು ಸಾಕುತ್ತಿದ್ದೀರಾ? ಮತ್ತೆ ಅದನ್ನು ಬಳಸುವ ಬಗ್ಗೆ ಮಾಹಿತಿ ನೀಡಿದ್ದೀರಿ..

ಚಿತ್ರ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ರೂಪಾಶ್ರಿ,

ನೀವು ಏಕೆ ಇತ್ತೀಚಿಗೆ ಕಾಣೆಯಾಗಿದ್ದೀರಿ ಅಂದುಕೊಂಡೆ. ಕೆಲಸ ಒತ್ತಡದಲ್ಲಿಯೂ ಬಿಡುವು ಮಾಡಿಕೊಂಡು ನನ್ನ ಚಿತ್ರ ಲೇಖನವನ್ನು ಓದಿ ಇಷ್ಟಪಟ್ಟಿದ್ದೀರಿ.

ಧನ್ಯವಾದಗಳು.

shivu.k said...

ನವೀನ್,

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ವಿನುತಾ,

ಜೇನುಹುಳುಗಳ ಚಿತ್ರ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು.

shivu.k said...

ಲೋದ್ಯಾಶಿ ಸರ್,

ಈ ಲೇಖನವನ್ನು ಓದಿ ಪ್ರತಿಯೊಬ್ಬರು ಒಂದೊಂದು ಹೆಸರನ್ನು ಹೇಳುತ್ತಾ ಮಾಹಿತಿಯನ್ನು ನೀಡುತ್ತಿದ್ದೀರಿ. ಹಾಗೆ ನಿಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡಿದ್ದೀರಿ.

ಮತ್ತೆ ಚಿಟ್ಟೆಗೂ ಮತ್ತು ಈ ಜೇನು ಹುಳುವಿನ ಸಂತಾನೊತ್ಪತಿ ಒಂದೇ ಅಲ್ಲ. ಚಿಟ್ಟೆಗಳಂತೆ ಹೊರಗೆ ಇವು ಹಾರಿ ಪರಾಗ, ಆಹಾರ, ಜೇನನ್ನು ಸಂಗ್ರಹಿಸಿದರೂ ಮೊಟ್ಟೆಯನ್ನು ರಾಣಿಜೇನು ಮಾತ್ರ ಇಡುತ್ತದೆ. ಮತ್ತು ಈ ಮೊಟ್ಟೆಗಳು ಅವುಗಳದೇ ಕಾಲೋನಿಯಲ್ಲಿ ಸುರಕ್ಷಿತವಾಗಿರುತ್ತವೆ. ಆದ್ರೆ ಚಿಟ್ಟೆಗಳಿಗೆ ಹಾಗೆ ಸುರಕ್ಷತೆಯಿಲ್ಲ. ಅವುಗಳು ಹೊರಗೆ ಮರದ ಎಲೆಗಳ ಕೆಳಗೆ ಮೊಟ್ಟೆಯಿಟ್ಟ ನಂತರ ಹುಳುವಾಗಿ ಹೊರಬಂದು ಎಲೆಯನ್ನು ತಿಂದು ಬೆಳೆಯುತ್ತವೆ. ಅ ಸಮಯದಲ್ಲ್ಲಿ ಬೇರೆ ಕೀಟಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಆದ್ರೆ ಜೇನುಹುಳು ಮರಿಗಳು ಹಾಗೆ ಬಲಿಯಾಗುವುದಿಲ್ಲ.

ಮುಂದೆ ಪ್ಯೂಪ ಹೊರಬರುವ ಪ್ರಕ್ರಿಯೆ ಎಲ್ಲವೂ ಚಿಟ್ಟೆಗಳಂತೆ ಇರುತ್ತದೆ.

ನನಗೆ ತಿಳಿದ ಮಾಹಿತಿ[ತೆಗೆಯುವಾಗಿನ ಅನುಭವದಿಂದ]ಯನ್ನು ನೀಡಿದ್ದೇನೆ.
ಚಿಟ್ಟೆಗಳ ಬಗೆಗೆ ಮಾಹಿತಿಗಾಗಿ ನನ್ನ ಬ್ಲಾಗಿನಲ್ಲಿನ ಈ ಲಿಂಕನ್ನು ಕ್ಲಿಕ್ ಮಾಡಿ..

http://chaayakannadi.blogspot.com/2009/03/blog-post_15.html

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಇಂಚರ,

ಚಿತ್ರ ಲೇಖನದ ಮಾಹಿತಿಯನ್ನು ಮತ್ತು ಚಿತ್ರಗಳನ್ನು ಮೆಚ್ಚಿದ್ದೀರಿ..

ಧನ್ಯವಾದಗಳು. ಹೀಗೆ ಬರುತ್ತಿರಿ..

shivu.k said...

ಪ್ರಶಾಂತ್,

ನನಗೂ ಸುಮ್ಮನಿರಲಾಗದೇ ಏನಾದ್ರು ಹೊಸ ವಿಚಾರದ ಹಿಂದೆ ಬೀಳುತ್ತೇನೆ.

ಮತ್ತೆ ಈ ಜೇನು ಹುಳುಗಳನ್ನು ಹತ್ತಿರದಿಂದ ತೆಗೆಯಲು ಒಂದು ತಂತ್ರವಿದೆ. ಅದನ್ನು ರೂಡಿಸಿಕೊಂಡರೆ ಸುಲಭವಾಗಿ ತೆಗೆಯಬಹುದು.

ಚಿತ್ರ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಪ್ರಭು,

ಜೇನು ಹುಳುಗಳ ಮತ್ತು ಇರುವೆಗಳ ಜೀವನ ಒಂದೇ ತರವಿರುವುದಿಲ್ಲ. ವ್ಯತ್ಶಾಸವಿದೆ. ಈಗ ಇರುವೆಗಳ ಬಗ್ಗೆ ಲೇಖನ ಸಿದ್ದವಾಗುತ್ತಿದೆ. ಅದನ್ನು ಮುಂದೆ ಬ್ಲಾಗಿನಲ್ಲಿ ಹಾಕುತ್ತೇನೆ. ಛಾಯಾಕನ್ನಡಿಯಲ್ಲಿ ಹೊಸದನ್ನು ನಿರೀಕ್ಷಿಸುವವರ ಸಂಖ್ಯೆ ದೊಡ್ಡದು. ಅವರಿಗೆ ನಿರಾಶೆಯಾಗಬಾರದೆನ್ನುವುದು ನನ್ನ ಆಶಯ ಮತ್ತು ಜವಾಬ್ದಾರಿ.
ನನ್ನ ಅನಿಮೇಶನ್ ಲೇಖನವನ್ನು ಓದಿದ ನಂತರ ಐಸ್ ಏಜ್ ೩ ನೋಡಿದ್ದೀರಿ. ಆಗ ಆಗುವ ಆನಂದವೇ ಬೇರೆ. ಇನ್ನುಳಿದ ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.
ಧನ್ಯವಾದಗಳು.

ಸುಧೇಶ್ ಶೆಟ್ಟಿ said...

ತು೦ಬ ಇಷ್ಟ್ ಆಯಿತು ಶಿವು ಅವರೇ ಈ ಲೇಖನ...
ಬೆಳಗ್ಗೆ ಬೆಳಗ್ಗೆ ಈ ಲೇಖನ ಓದಿ ತು೦ಬಾ ಉತ್ಸಾಹ ಬ೦ತು :)

ಬಿಸಿಲ ಹನಿ said...

ರಾಣಿ ಜೇನಿನ ಕಾರ್ಯ ವೈಖರಿಯನ್ನು ತುಂಬಾ ವಿವರವಾಗಿ ಪ್ರಸ್ತುತ ಪಡಿಸಿದ್ದೀರಿ. ಅದನ್ನು ನಿಮ್ಮ ಸುಂದರ ಚಿತ್ರಗಳು ಮತ್ತಷ್ಟು ಪುಷ್ಟಿಕರಿಸುತ್ತವೆ. ನನಗೆ ಹಿಂದೆ ಯಾರೋ ಹೇಳಿದ್ದು ಜ್ಞಾಪಕಕ್ಕೆ ಬಂತು "ಹೆಣ್ಣನ್ನು ನಡೆಸಿಕೊಳ್ಳುವ ಕಲೆಯನ್ನು ಈ ಜೇನಿನ ಸಂಸಾರದಿಂದ ಕಲಿಯಬೇಕೆಂದು" ಉತ್ತಮವಾದ ಲೇಖನಕ್ಕೆ ಅಭಿನಂದನೆಗಳು. ಹಾಗೆಯೇ ದೀಪಾವಳಿಯ ಶುಭಾಶಯಗಳು.

ಬಿಸಿಲ ಹನಿ said...

ರಾಣಿ ಜೇನಿನ ಕಾರ್ಯ ವೈಖರಿಯನ್ನು ವಿವರಿಸುವ ನಿಮ್ಮ ಲೇಖನ ತುಂಬಾ ಚನ್ನಾಗಿ ಮೂಡಿಬಂದಿದೆ. ಅದನ್ನು ನಿಮ್ಮ ಸುಂದರ ಚಿತ್ರಗಳು ಮತ್ತಷ್ಟು ಪುಷ್ಟಿಕರಿಸುತ್ತವೆ. ಉತ್ತಮವಾದ ಲೇಕನಕ್ಕೆ ಅಭಿನಂದನೆಗಳು ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು.

ರಜನಿ. ಎಂ.ಜಿ said...

ಫೋಟೊದಲ್ಲಿ ನೋಡುವುದುಕ್ಕೇ ಅದ್ಭುತ, ಇನ್ನು ನಿಜವಾಗಿಯು ಅವುಗಳ ಕಾರ್ಯ ವೈಖರಿ ಹೇಗಿದ್ದೀತು?

shivu.k said...

ಉದಯ್ ಸರ್,

ನೀವು ಹೇಳಿದಂತೆ ಜೇನಿನಿಂದ ಕಲಿಯುವುದು ತುಂಬಾ ಇದೆ. ಕೊಂಡಿಯಿಲ್ಲದ ಜೇನುಹುಳುವಿನ ಬಗೆಗಿನ ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತು ದೀಪಾವಳಿಹಬ್ಬದ ಶುಭಾಶಯಗಳು.

shivu.k said...

ರಜನಿ ಎಂ.ಜಿ.

ನನ್ನ ಬ್ಲಾಗಿಗೆ ಸ್ವಾಗತ. ಈ ಜೇನುಹುಳುಗಳ ಕಾರ್ಯವೈಖರಿಯನ್ನು ಕ್ಯಾಮೆರಾ ಕಣ್ಣಿಂದ ನೋಡಿದಾಗ ಅದ್ಬುತವೆನಿಸಿತ್ತು.

ಧನ್ಯವಾದಗಳು.