Tuesday, January 26, 2010

31 ನೇ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ.

ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರಿನ ಪ್ರತಿಷ್ಠಿತ "ಯೂತ್ ಫೋಟೊಗ್ರಫಿಕ್ ಸೊಸೈಟಿ" 31ನೇ ರಾಷ್ಟ್ರಮಟ್ಟದ ಬಹುದೊಡ್ಡ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ಕಪ್ಪುಬಿಳುಪು, ವರ್ಣಮಯ, ಪ್ರಾಕೃತಿಕ, ಪ್ರವಾಸ ವಿಭಾಗಗಳ ಜೊತೆಗೆ ಡಿಜಿಟಲ್ ಪ್ರೊಜೆಕ್ಟ್ ವಿಭಾಗದಲ್ಲಿ ಪ್ರಕೃತಿಕ, ಮತ್ತು ಸೃಜನಶೀಲ ಫೋಟೊಗ್ರಫಿ ವಿಭಾಗವನ್ನು ಸೇರಿಸಿದ್ದು ಈ ಬಾರಿಯ ವಿಶೇಷ. ಈ ಭಾರಿ ದೇಶದಾದ್ಯಂತ ೨೮೫ ಛಾಯಾಗ್ರಾಹಕರು ಭಾಗವಹಿಸಿದ್ದು ಒಟ್ಟಾರೆ ಎರಡು ಸಾವಿರದ ಐದುನೂರಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಗೆ ಬಂದಿದ್ದು ದಾಖಲೆ. ಅವುಗಳಲ್ಲಿ ಈಗ ಬಹುಮಾನ ವಿಜೇತ ಚಿತ್ರಗಳ ಸೇರಿದಂತೆ ಒಟ್ಟು ೪೭೨ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಖ್ಯಾತ ಹಿರಿಯ ಛಾಯಾಗ್ರಾಹಕರಾದ ಬೆಂಗಳೂರಿನ ಟಿ.ಎನ್.ಪೆರುಮಾಳ್, ಎಚ್.ವಿ.ಪ್ರವೀಣ್ ಕುಮಾರ್, ಜಿ.ಹರಿನಾರಾಯಣ, ಸಿ.ಅರ್.ಸತ್ಯನಾರಾಯಣ, ಹೈದರಬಾದಿನ ರಾಜನ್‍ಬಾಬು ತೀರ್ಪುಗಾರರಾಗಿ ಕಾರ್ಯನಿರ್ವಾಹಿಸಿದ್ದಾರೆ.
ಛಾಯಾಚಿತ್ರಗಳ ಪ್ರದರ್ಶನವೂ ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿರುವ "ವೆಂಕಟಪ್ಪ ಆರ್ಟ್ ಗ್ಯಾಲರಿ"ಯಲ್ಲಿ ಮುಂದಿನ ತಿಂಗಳು ಪೆಬ್ರವರಿ ೪ರಿಂದ ೭ರವರೆಗೆ ನಡೆಯುತ್ತದೆ. ಸಮಯ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಏಳುಗಂಟೆಯವರೆಗೆ.
ಬಹುಮಾನ ವಿತರಣೆ ಕಾರ್ಯಕ್ರಮ ದಿನಾಂಕ ಫೆಬ್ರವರಿ ಏಳನೇ ತಾರೀಖು ಭಾನುವಾರ ಸಂಜೆ ಐದುಗಂಟೆಗೆ.
ಕಾರ್ಯಕ್ರಮದ ಉದ್ಘಾಟನೆ: ಸಂಜೆ 5-30ಕ್ಕೆ. ದಿನಾಂಕ: 4-2-2010.
ಬಹುಮಾನ ವಿತರಣೆ ಕಾರ್ಯಕ್ರಮ: ಸಂಜೆ 4-30ರಿಂದ ದಿನಾಂಕ:7-2-2010.

ಬಹುಮಾನ ವಿಜೇತ ಕೆಲವು ಚಿತ್ರಗಳನ್ನು ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿ ಖುಷಿಪಡಿ.


೧. ಪ್ರವಾಸ ಫೋಟೊಗಳ ವಿಭಾಗ

ಮೊದಲ ಬಹುಮಾನ ವಿಜೇತ ಚಿತ್ರ: " ಮರಳುಗಾಡಿನ ದೃಶ್ಯ".
ಛಾಯಾಗ್ರಾಹಕ: ಮುಂಬೈನ "ಉಮಾಕಾಂತ್ ವಿಜಯ್ ಮದನ್"


ಎರಡನೇ ಬಹುಮಾನ ವಿಜೇತ ಚಿತ್ರ: " ಮರಳುಗಾಡಲ್ಲಿ ಉತ್ಸವ"
ಛಾಯಾಗ್ರಾಹಕ: ಕೊಲ್ಕತ್ತದ ದೇಬಸಿಸ್ ತರಫ್ದಾರ್"

ಮೂರನೇ ಬಹುಮಾನ ಪಡೆದ ಚಿತ್ರ: "ಕೈಲಾಸ"

ಛಾಯಾಗ್ರಾಹಕ: ಜೋದ್‍ಪುರದ ವ್ಯಾಸ್ ರಾಮಜಿ"



ಅತ್ಯುತ್ತಮ ಪ್ರವಾಸ ಚಿತ್ರ: " ರೊಲಾಂಗ್ ಮನಾಷ್ಟ್ರಿ"

ಛಾಯಾಗ್ರಾಹಕ: ಕೊಲ್ಕತ್ತದ "ರಾಜೇಶ್ ಧರ್"



ಅರ್ಹತ ಪತ್ರ ಪಡೆದ ಚಿತ್ರ: " ಅದ್ಭುತ ಪರಂಪರೆ"
ಛಾಯಾಗ್ರಾಹಕ: ಬೆಂಗಳೂರಿನ ಆರ್.ಎಸ್. ರಮಕಾಂತ್

ಎರಡನೇ ಅರ್ಹತ ಪತ್ರ ಪಡೆದ ಚಿತ್ರ: "ಆಭಿಶೇಕಮ್"
ಛಾಯಾಗ್ರಾಹಕ: ಆಂದ್ರಪ್ರದೇಶದ "ಜಯಶಿವರಾಮರಾವ್"


ಮೂರನೇ ಅರ್ಹತ ಪತ್ರ ಪಡೆದ ಚಿತ್ರ: " ಚಿತ್ರದುರ್ಗ ಕೋಟೆ"
ಛಾಯಾಗ್ರಾಹಕ: ಬೆಂಗಳೂರಿನ ಕೆ.ಎಸ್.ಶ್ರೀನಿವಾಸ್"



೨. ಡಿಜಿಟಲ್ ನೇಚರ್ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.

ಮೊದಲ ಬಹುಮಾನ : "ಕಾಪರ್ ಸ್ಮಿತ್ ಹಕ್ಕಿ ಮರಿಯ ಜೊತೆ"
ಛಾಯಾಗ್ರಾಹಕ : "ಎಸ್.ಲೋಕೇಶ್. ಬೆಂಗಳೂರು.
ದ್ವಿತೀಯ ಬಹುಮಾನ: "ಆಶಿರೆನ್ ವಾರ್ಬಲರ್ ಹಕ್ಕಿ ಆಹಾರದ ಜೊತೆ"
ಛಾಯಾಗ್ರಾಹಕ: "ಕೆ.ಪಿ. ಮಾರ್ಟಿನ್". ಬೆಂಗಳೂರು.

ಮೂರನೇ ಬಹುಮಾನ: "ಗೋಲ್ಡನ್ ಓರಿಯಲ್ ಆಹಾರದ ಜೊತೆಯಲ್ಲಿ"
ಛಾಯಾಗ್ರಾಹಕ: "ವಿ.ಡಿ.ಭಟ್ ಸುಗಾವಿ. ಸಿರಸಿ.

ಅರ್ಹತ ಪತ್ರ ಪಡೆದ ಚಿತ್ರ: "ಮೂಳೆಯಿಲ್ಲದ ಹದ್ದು ಬೇಟೆಯ ಜೊತೆ
ಛಾಯಾಗ್ರಾಹಕ: "ವಿಧ್ಯಾದರ ಶಿಲ್ಕೆ" ಬೆಳಗಾಂ ಕರ್ನಾಟಕ.
ಅತ್ಯುತ್ತಮ ಚಲನೆಯ ಚಿತ್ರ: "ಮೊಸಳೆಯ ಬಾಯಲ್ಲಿ ಬೇಟೆ"
ಛಾಯಾಗ್ರಾಹಕ: ಎಚ್.ಬಿ.ರಾಜೇಂದ್ರ" ಬೆಂಗಳೂರು.

ಅರ್ಹತ ಪತ್ರ ಪಡೆದ ಚಿತ್ರ: ಕಾಗೆ ಕೋಗಿಲೆ ಮರಿಗೆ ಊಟ ಕೊಡುತ್ತಿರುವುದು"
ಛಾಯಾಗ್ರಾಹಕ: ಎನ್.ಕೆ.ಅರುಣ್‍ಕುಮಾರ್. ಬೆಂಗಳೂರು.


೩. ಡಿಜಿಟಲ್ ಸೃಜನಶೀಲತೆ ವಿಭಾಗದ ಬಹುಮಾನ ವಿಜೇತ ಛಾಯಾಚಿತ್ರಗಳು

ಮೊದಲ ಬಹುಮಾನದ ಚಿತ್ರ "Body language.
ಛಾಯಾಗ್ರಾಹಕ ಕೊಲ್ಕತ್ತದ "ಅನೂಪ್ ಪಾಲ್"


ದ್ವಿತೀಯ ಬಹುಮಾನದ ಚಿತ್ರ :"ಪಾಸ್ಚರಿಂಗ್"
ಛಾಯಾಗ್ರಾಹಕ: "ಅನ್ಶುಮನ್ ರಾಯ್ ಕೊಲ್ಕತ್ತ

ಮೂರನೇ ಬಹುಮಾನ. "ಕ್ಯಾಂಪಿಂಗ್"
ಛಾಯಾಗ್ರಾಹಕ: ಮುಂಬೈನ ನಫೆ ರಾಮ್ ಯಾದವ್"

ಅತ್ಯುತ್ತಮ ಸೃಜನಶೀಲತೆಯ ಚಿತ್ರ: "ಕನಸಿನ ಪರಂಪರೆ"
ಛಾಯಾಗ್ರಾಹಕ: ಕೊಲ್ಕತ್ತದ "ಎಸ್.ಪಿ.ಮುಖರ್ಜಿ"


ಮತ್ತೆ ನಾಲ್ಕು ದಿನಗಳ ನಂತರ ವರ್ಣ ಚಿತ್ರ, ಕಪ್ಪುಬಿಳುಪು ಮತ್ತು ಪ್ರಕೃತಿಕ ಪ್ರಿಂಟ್ ವಿಭಾಗದ ಚಿತ್ರಗಳನ್ನು ಬ್ಲಾಗಿನಲ್ಲಿ ಹಾಕುತ್ತೇನೆ.
ವಿಶೇಷ ಸೂಚನೆ: ಇಲ್ಲಿರುವ ಬಹುಮಾನ ವಿಜೇತ ಚಿತ್ರಗಳ ಹಕ್ಕು ಅದನ್ನು ಕ್ಲಿಕ್ಕಿಸಿದವರದ್ದೇ ಆಗಿರುತ್ತದೆ. ಮತ್ತು ಈ ಚಿತ್ರಗಳು ಪತ್ರಿಕೆ ಪ್ರಚಾರಕ್ಕೆ, ಪ್ರದರ್ಶನಕ್ಕೆ ಮತ್ತು ಪ್ರದರ್ಶನ ನಂತರ ಪ್ರದರ್ಶನ ಪುಸ್ತಕ[ಸವನೇರ್]ದಲ್ಲಿ ಬಳಸಲಿಕ್ಕೆ ಮಾತ್ರ ಅನುಮತಿಯಿರುವುದರಿಂದ, ಯಾರು ಇದನ್ನು ತಮ್ಮ ವೈಯಕ್ತಿಕ ವಿಚಾರಗಳಿಗೆ ಬಳಸಬಾರದಾಗಿ ವಿನಂತಿಸುತ್ತೇನೆ. ಬಳಸಬೇಕೆಂದರೆ ಛಾಯಾಗ್ರಾಹಕರ ಅನುಮತಿ ಪಡೆದುಕೊಳ್ಳಬಹುದು.
ಧನ್ಯವಾದಗಳು
ಶಿವು.ಕೆ

66 comments:

PARAANJAPE K.N. said...

ಚಿತ್ರ-ಮಾಹಿತಿ ತು೦ಬ ಚೆನ್ನಾಗಿದೆ

ಸೀತಾರಾಮ. ಕೆ. / SITARAM.K said...

ಚೆ೦ದದ ಛಾಯ ಚಿತ್ರಗಳು. ಮಾಹಿತಿಗೆ ವ೦ದನೆಗಳು.

ಸಾಗರದಾಚೆಯ ಇಂಚರ said...

ಶಿವೂ ಸರ್

ತುಂಬಾ ಚೆಂದದ ಚಿತ್ರಗಳು
ನೋಡಿ ಮನಸ್ಸಿಗೆ ಎಷ್ಟೋ ಖುಷಿಯಾಯಿತು
ವಿಜೇತರಿಗೆ ಅಭಿನಂದನೆಗಳು

ಚುಕ್ಕಿಚಿತ್ತಾರ said...

nice photos...
thanks.

Ittigecement said...

ಶಿವು ಸರ್...

ನನಗೆ ಛಾಯಾಪ್ರದರ್ಶನಕ್ಕೆ ಹೋಗಲಿಕ್ಕೆ ಆಗಲಿಲ್ಲ..
ಅಲ್ಲಿನ ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್...!

ಎಲ್ಲವೂ ಮನಮೋಹಕವಾಗಿವೆ..

ನನ್ನ ಗೆಳೆಯ ವಿ.ಡಿ. ಭಟ್ ಅವರಿಗೆ ಇಲ್ಲಿಂದಲೇ.. ಅಭಿನಂದನೆ ಸಲ್ಲಿಸುವೆ...

Unknown said...

Sundara chitragalu!! ..

umesh desai said...

ಶಿವು ಕವಿತಾ ಹೇಳೂದಾದ್ರ "ಫೋಟೋಗಳು ಸಂಗೀತವ ಹಾಡಿವೆ..." ಅಂತ ಹೇಳಬಹುದೇನೋ ಒಂದಕ್ಕಿಂತ ಒಂದು ಸೂಪರ್ರಾಗಿದೆ

sunaath said...

ತುಂಬಾ ಸುಂದರವಾದ ಚಿತ್ರಗಳು. ನಿಮಗೆ ಅನೇಕ ಧನ್ಯವಾದಗಳು.

ಮನಸಿನಮನೆಯವನು said...

ನಮಸ್ತೆ.,

ಡಿಜಿಟಲ್ ನೇಚರ್ ವಿಭಾಗದ ಚಿತ್ರಗಳು ತುಂಬಾನೇ ಚೆನ್ನಾಗಿವೆ..

ನನ್ನ ಮನಸಿನಮನೆಗೊಮ್ಮೆ :http://manasinamane.blogspot.com/

ಮನಮುಕ್ತಾ said...

ತು೦ಬಾ ಸು೦ದರ ಛಾಯಾಚಿತ್ರಗಳು...
ನೋಡಿ ಸ೦ತೋಷವಾಯಿತು.
ಧನ್ಯವಾದಗಳು.

ಬಿಸಿಲ ಹನಿ said...

ಒಂದಕಿಂತ ಒಂದು ಚೆಂದವಿರುವ ಚಿತ್ರಗಳು ಮನಸ್ಸಿಗೆ ಮುದ ನೀಡುತ್ತವೆ. ವಿಜೇತರಿಗೆ ಅಭಿನಂದನೆಗಳು.

ಬಾಲು said...

ondakintha ondu chanda ide. :)

Unknown said...

ಎಲ್ಲವೂ ತುಂಬಾ ಚೆನ್ನಾಗಿದೆ , ಎಂದಿನಂತೆ ಉತ್ತಮ ಚಿತ್ರಗಳ ಊಟ ಬಡಿಸಿದ್ದಿರಿ

ದಿನಕರ ಮೊಗೇರ said...

ಶಿವೂ ಸರ್,
ತುಂಬಾ ಅತ್ಯುತ್ತಮ ಫೋಟೋಗಳ ಸಂಗ್ರಹ ಕೊಟ್ಟಿದ್ದೀರಿ.... ನಮಗೆ ಪ್ರದರ್ಶನಕ್ಕೆ ಬಂದ ಅನುಭವ ಆಯಿತು........ ಒಂದೊಂದು ಫೋಟೋ ಅದ್ಭುತ ಸರ್....... ಧನ್ಯವಾದ......

ಗಣೇಶ್ ಕಾಳೀಸರ said...

ಶಿವು ಸರ್,
ಸುಂದರ ಫೋಟೋಗಳನ್ನ ತೋರಿಸಿದ್ದೀರಿ.
ತುಂಬಾ ಧನ್ಯವಾದಗಳು.

-ಗಣೇಶ್ ಕಾಳೀಸರ

ಆನಂದ said...

ತುಂಬಾ ಸುಂದರವಾದ ಫೋಟೋಗಳು ಶಿವು ಸರ್

ರಾಜೀವ said...

ಶಿವು ಅವರೆ,

ಚಿತ್ರಗಳನ್ನು ಒಂದು ಸಲ ನೋದಿದಮೇಲೆ ತೃಪ್ತಿಯೇ ಆಗಲಿಲ್ಲ. ಮತ್ತೊಮ್ಮೆ ಮರುದೊಮ್ಮೆ ನೋಡಬೇಕೆನಿಸಿತು.
ಹದ್ದಿನ ಚಿತ್ರ ತುಂಬಾ ಇಷ್ಟವಾಯಿತು.
ಹಂಚಿಕೊಂಡಿದ್ದಕ್ಕೆ ಧನ್ಯವಾದ.

ಜಲನಯನ said...

ಶಿವು ಚಿತ್ರಗಳ ಅಂದ ಚೆಂದ ನೋದುತ್ತಲೇ ತಿಳಿಯುತ್ತೆ..ಇವುಗಳನ್ನು ಪರಿಚಯಿಸಿದ ನಿಮ್ಮ ಪ್ರಯತ್ನಕ್ಕೆ ನಾವು ಆಭಾರಿ....

ದೀಪಸ್ಮಿತಾ said...

ಅತ್ಯುತ್ತಮ ಚಿತ್ರಗಳು. ಪ್ರದರ್ಶನಕ್ಕೆ ಹೋಗಲು ಪ್ರಯತ್ನಿಸುವೆ. ಬಹುಮಾನ ಪಡೆದ ನಿಮಗೂ ಅಭಿನಂದನೆಗಳು

Ranjita said...

ಶಿವೂ ಸರ್ .
ಚಂದದ ಚಿತ್ರಗಳು
ಬಹುಮಾನ ಪಡೆದವರಿಗೆ ಅಭಿನಂದನೆಗಳು ..
Nice post thanks ಸರ್

shivu.k said...

ಪರಂಜಪೆ ಸರ್,

ಧನ್ಯವಾದಗಳು.

shivu.k said...

ಸೀತಾರಾಂ ಕೆ,ಸರ್,

ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ಚಿತ್ರಗಳನ್ನು ಮನಸ್ಸಿಗೆ ಸಂತೋಷವಾಗಿದ್ದಕ್ಕೆ ಧನ್ಯವಾದಗಳು.

shivu.k said...

ವಿಜಯಶ್ರಿ ಮೇಡಮ್,

ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ಪ್ರಶಸ್ಥಿ ವಿಜೇತ ಚಿತ್ರಗಳನ್ನು ನೋಡಿ ಖುಷಿಪಟ್ಟಿದ್ದಕ್ಕೆ ಧನ್ಯವಾದಗಳು.
ವಿ.ಡಿ.ಭಟ್ ಎರಡು ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಆಗ ನನ್ನ ಮನೆಗೆ ಬಂದು ರಾತ್ರಿ ಹೋದರು.

ಮತ್ತೆ ನೀವು ಈ ಚಿತ್ರ ಲೇಖನವನ್ನು ಸರಿಯಾಗಿ ಓದಲಿಲ್ಲವೆಂದು ಕಾಣುತ್ತದೆ. ಏಕೆಂದರೆ ಈ ಕಾರ್ಯಕ್ರಮವಿನ್ನು ನಡೆದಿಲ್ಲ. ಈಗಷ್ಟೆ ಪತ್ರಿಕೆಗಳಲ್ಲಿ ಬರುತ್ತಿದೆ. ಮತ್ತೆ ಪ್ರದರ್ಶನ ಮುಂದಿನ ತಿಂಗಳು ಫೆಬ್ರವರಿ ೪ರಿಂದ ಪ್ರಾರಂಭವಾಗಿ ಫೆಬ್ರವರಿ ೭ಕ್ಕೆ ಮುಗಿಯುತ್ತದೆ.
ಆಗ ಬಿಡುವು ಮಾಡಿಕೊಂಡು ಕುಟುಂಬ ಸಮೇತ ಹೋಗಿ ನೋಡಿ ಬನ್ನಿ. ಸಂಜೆ Digital Image ವಿಭಾಗಗಳ ಛಾಯಾಚಿತ್ರಗಳ ಪ್ರೊಜೆಕ್ಷನ್ ಇರುತ್ತದೆ. ಅದು ಕೂಡ ತುಂಬಾ ಖುಷಿಕೊಡುತ್ತದೆ.

ಧನ್ಯವಾದಗಳು.

shivu.k said...

ರವಿಕಾಂತ್ ಗೋರೆ ಸರ್,
ಧನ್ಯವಾದಗಳು.

shivu.k said...

ದೇಸಾಯ್ ಸರ್,

ಮತ್ತಷ್ಟು ಇಂಥ ನೂರಾರು ಫೋಟೊಗಳ ಸಂಗೀತ ಕೇಳಲು ಪ್ರದರ್ಶನಕ್ಕೆ ಬನ್ನಿಸರ್..

ಧನ್ಯವಾದಗಳು.

shivu.k said...

ಸುನಾಥ್ ಸರ್,

ಧನ್ಯವಾದಗಳು.

shivu.k said...
This comment has been removed by the author.
shivu.k said...

ಗುರುದೆಸೆ,

ಡಿಜಿಟಲ್ ನೇಚರ್ ವಿಭಾಗದ ಇನ್ನೂ ಹೆಚ್ಚು ಫೋಟೋಗಳನ್ನು ನೋಡಲು ಪ್ರದರ್ಶನಕ್ಕೆ ಬನ್ನಿ. ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗ್ ನೋಡುತ್ತೇನೆ.

ಧನ್ಯವಾದಗಳು.

shivu.k said...

ಮನಮುಕ್ತ,

ಈ ಚಿತ್ರಗಳನ್ನು ನೋಡಿದ ಖುಷಿ ಮತ್ತಷ್ಟು ಹೆಚ್ಚಾಗಬೇಕೆ. ಹಾಗದರೆ ಪ್ರದರ್ಶನಕ್ಕೆ ತಪ್ಪದೆ ಬನ್ನಿ.
ಧನ್ಯವಾದಗಳು.

shivu.k said...

ಉದಯ್ ಸರ್,

ನೀವು ಹೇಳಿದಂತೆ ಒಂದಕ್ಕಿಂತ ಒಂದು ನಿಜಕ್ಕೂ ಮನಕ್ಕೆ ಮುದನೀಡುತ್ತವೆ. ಮುಂದಿನ ಬಾರಿ ಮತ್ತಷ್ಟು ಬಹುಮಾನ ವಿಜೇತ ಚಿತ್ರಗಳನ್ನು ಹಾಕುತ್ತೇನೆ. ನೋಡಲು ಬನ್ನಿ.

shivu.k said...

ಬಾಲು ಸರ್,

ಥ್ಯಾಂಕ್ಸ್..

shivu.k said...

arya for you,

ಈ ಚಿತ್ರಗಳನ್ನು ನೋಡಿದಕ್ಕೆ ರಸದೌತಣವೆಂದು ಹೇಳಿದ್ದೀರಿ. ಇನ್ನು ಪ್ರದರ್ಶನದಲ್ಲಿಡುವ ಇವೇ ದೊಡ್ಡ ದೊಡ್ಡ ಫೋಟೋಗಳನ್ನು ಓಡಿದರೆ ನಿಮಗೆ ಏನನ್ನಿಸಬಹುದು?

ಅದಕ್ಕಾಗಿ ಪ್ರದರ್ಶನಕ್ಕೆ ಬನ್ನಿ.

shivu.k said...

ದಿನಕರ್ ಸರ್,

ಇವೆಲ್ಲಾ ಪ್ರಶಸ್ತಿ ವಿಜೇತ ಚಿತ್ರಗಳು ಅವುಗಳನ್ನು ನಾನು ಪಟ್ಟ ಸಂತೋಷ ನಿಮಗೂ ಸಿಗಬೇಕು ಅನ್ನುವ ಉದ್ದೇಶದಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮುಂದಿನ ತಿಂಗಳು ನಡೆಯುವ ಈ ಪ್ರದರ್ಶನದಲ್ಲಿ ಛಾಯಾಚಿತ್ರಗಳನ್ನು ನೋಡಲು ದೂರದ ಕೊಪ್ಪಳ, ಸಿರಸಿ, ಉಡುಪಿ, ಮುಂಬೈ, ಹೈದರಬಾದ್, ವಿಜಯವಾಡ,....ಹೀಗೆ ಎಲ್ಲಾ ಕಡೆಯಿಂದ ಛಾಯಾಗ್ರಾಹಕರು, ಅಭಿರುಚಿಯುಳ್ಳವರು ಬರುತ್ತಿದ್ದಾರೆ ಸರ್...

ಧನ್ಯವಾದಗಳು.

shivu.k said...

ಗಣೇಶ್ ಕಾಳಿಸರ ಸರ್,

ಫೋಟೋಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ..

shivu.k said...

ಆನಂದ ಸರ್,

ಧನ್ಯವಾದಗಳು.

shivu.k said...

ರಾಜೀವ್ ಸರ್,

ಒಮ್ಮೆ ನೋಡಿದ ಮೇಲೆ ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆಯಲ್ಲವೇ..ನನಗೂ ಹಾಗೆ ಅನ್ನಿಸುವುದು. ಅದಕ್ಕಾಗಿ ಮುಂಬರುವ ಪ್ರದರ್ಶನಕ್ಕೆ ಕಾಯುತ್ತಿದ್ದೇನೆ. ನೀವು ಬನ್ನಿ. ಇಂಥ ನೂರಾರು ಪೋಟೊ ಕಲಾಕೃತಿಗಳನ್ನು ನೋಡಿ ಆನಂದಿಸಬಹುದು.

ಧನ್ಯವಾದಗಳು.

shivu.k said...

ಡಾ.ಆಜಾದ್,

ಚಿತ್ರಗಳನ್ನು ನೋಡಿ ನಿಮಗೆಲ್ಲಾ ಸಂತೋಷವಾದರೆ ನನಗಷ್ಟೇ ಸಾಕು. ಇದರಲ್ಲಿ ನನ್ನ ಹೆಗ್ಗಳಿಕೆಯೇನಿಲ್ಲ.

ಮುಂದಿನ ಬಾರಿ ಮತ್ತಷ್ಟು ಚಿತ್ರಗಳನ್ನು ಕೊಡುತ್ತೇನೆ. ಧನ್ಯವಾದಗಳು.

shivu.k said...

ಕುಲದೀಪ್ ಸರ್,

ಚಿತ್ರಗಳನ್ನು ನೋಡಿ ಖುಶಿಯಾಗಿದ್ದೀರಿ. ಪ್ರದರ್ಶನಕ್ಕೆ ಬರಲು ಪ್ರಯತ್ನಿಸುತ್ತೇನೆ ಎನ್ನುವ ಮಾತಿಲ್ಲ. ನಿಮ್ಮಂಥ ಛಾಯಾಸಕ್ತರು ಬರಲೇ ಬೇಕು. ಅಲ್ಲಿ ನಿಮಗಾಗಿ ಕಾಯುತ್ತೇನೆ.

ಧನ್ಯವಾದಗಳು.

shivu.k said...

ರಂಜಿತ,

ಚಿತ್ರಗಳನ್ನು ಖುಷಿಪಟ್ಟಿದ್ದಿರಿ. ನಿಮ್ಮ ಅಭಿನಂದನೆಗಳನ್ನು ಪ್ರಶಸ್ಥಿ ವಿಜೇತರು ಪ್ರದರ್ಶನದಲ್ಲಿ ಸಿಕ್ಕರೆ ತಿಳಿಸುತ್ತೇನೆ..

ಧನ್ಯವಾದಗಳು.
ಮುಂದಿನ ಭಾಗಕ್ಕೂ ಬನ್ನಿ.

ಮನಸು said...

chitragaLu tumba chennagive sir, ella vijetarige namma abhinantanegaLu...

Subrahmanya said...

ಶಿವು ಸರ್ ,
ಎಲ್ಲಾ ಚಿತ್ರಗಳೂ ಮನಸೂರೆಗೋಳ್ಳುತ್ತವೆ....ನಮ್ಮ ಜೊತೆ ಹಂಚಿಕೊಂಡ್ಡಿದ್ದಕ್ಕೆ ತುಂಬಾ ಧನ್ಯವಾದಗಳು. "ಕನ್ನಡಪ್ರಭ" ಪತ್ರಿಕೆಯಲ್ಲಿ ಕೆಲವು ಚಿತ್ರಗಳನ್ನು ಮಾತ್ರ ನೋಡಿದ್ದೆ.
Monochrome ( ಏಕವರ್ಣ ) ವಿಭಾಗದಲ್ಲಿ ’ಶಿವು .ಕೆ’ ಅನ್ನೋರಿಗೆ ಮೊದಲ ಪ್ರಶಸ್ತಿ ಬಂದಿದೆ ಅಂತಾ ಪತ್ರಿಕೆಯಲ್ಲಿತ್ತು.....ಅದ್ಯಾರು ಅಂತ ಸ್ವಲ್ಪ ತಿಳಿಸಿಕೊಡ್ತೀರಾ Plzzz... :) :)
ಕಣ್ಣು ತಂಪಾಗಿಸಿದ್ದಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು

V.R.BHAT said...

ರಮ್ಯ, ಮನಮೋಹಕ, ದೃಶ್ಯ-ಕಾವ್ಯ

Unknown said...

ಖಂಡಿತ ಬರಲು ಪ್ರಯತ್ನಿಸುತ್ತೇನೆ , ಹಾಗೆ ನನ್ನ ಹೆಸರು ವಿನಯ :)

ಅಂತರ್ವಾಣಿ said...

ಶಿವಣ್ಣ,

ಇದರಲ್ಲಿ ಹಕ್ಕಿಗಳ ಚಿತ್ರಗಳು ತುಂಬಾ ಇಷ್ಟವಾಯಿತು.

shivu.k said...

ಮನಸು ಮೇಡಮ್,

ಪ್ರದರ್ಶನದ ಸಮಯದಲ್ಲಿ ಸಿಗುವ ಬಹುಮಾನ ವಿಜೇತರಿಗೆ ನಿಮ್ಮ ಅಭಿನಂದನೆಗಳನ್ನು ಖಂಡಿತ ತಿಳಿಸುತ್ತೇನೆ. ಧನ್ಯವಾದಗಳು.

shivu.k said...

ಸುಬ್ರಮಣ್ಯ ಭಟ್ ಸರ್,

ಇದು ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲವೇ ಸರ್. ಪ್ರತಿಯೊಬ್ಬರಿಗೂ ಅವರ ಪ್ರತಿಭೆಯನ್ನು ತೋರಿಸಲು ಅವಕಾಶವಿರುವುದರಿಂದ ಎಲ್ಲರ ಚಿತ್ರಗಳು ತುಂಬಾ ಚೆನ್ನಾಗಿರುತ್ತವೆ. ಮತ್ತೆ ಕೆಲವು ಅತ್ಯುತ್ತಮ ಚಿತ್ರಗಳು ಕೇವಲ ಒಂದೆರಡು ಅಂಕಗಳಿಂದ ಬಹುಮಾನ ವಂಚಿತವಾಗಿರುತ್ತವೆ. ಅವುಗಳನ್ನು ನೋಡಲು ಪ್ರದರ್ಶನಕ್ಕೆ ಬನ್ನಿ.
ಮುಂದಿನ ಭಾಗದಲ್ಲಿ ನೀವು ಕೇಳಿದ ಚಿತ್ರ ಮತ್ತು ಅದನ್ನು ತೆಗೆದವರ ಹೆಸರನ್ನು ಹಾಕುತ್ತೇನೆ. ಆಗ ನೀವೆ ನೋಡಿ..

ಧನ್ಯವಾದಗಳು.

shivu.k said...

ವಿ.ಅರ್.ಭಟ್ ಸರ್,

ಧನ್ಯವಾದಗಳು.

shivu.k said...

ವಿನಯ್ ಸರ್,

ಪ್ರದರ್ಶನದಲ್ಲಿ ನಿಮ್ಮನ್ನು ಬೇಟಿಯಾಗುತ್ತೇನೆ..ಧನ್ಯವಾದಗಳು.

shivu.k said...

ಜಯಶಂಕರ್.
ಧನ್ಯವಾದಗಳು.

shivu.k said...
This comment has been removed by the author.
ಮಲ್ಲಿಕಾರ್ಜುನ.ಡಿ.ಜಿ. said...

ಶಿವು, YPS judgingಗೆ ಬರಲಾಗಲಿಲ್ಲ. ಖಂಡಿತ ಪ್ರದರ್ಶನ ನೋಡಲು ಬರುವೆ.

ಶಿವಪ್ರಕಾಶ್ said...

wow.. beautiful photos...

shivu.k said...

ಮಲ್ಲಿಕಾರ್ಜುನ್,

ಬನ್ನಿ. ಈ ಬಾರಿ ಕಪ್ಪು ಬಿಳುಪಿನಲ್ಲಿ ಉತ್ತಮ ಚಿತ್ರಗಳು ಇವೆ.

shivu.k said...

ಶಿವಪ್ರಕಾಶ್.

ಧನ್ಯವಾದಗಳು.

Narayan Bhat said...

ಕಣ್ಣಿಗೆ, ಮನಸಿಗೆ ಮುದ ನೀಡುವ ಸುಂದರ ಛಾಯಾಚಿತ್ರಗಳು ... ನೋಡೋ ಅವಕಾಶ ಒದಗಿಸಿದ್ದಕ್ಕಾಗಿ ನಿಮಗೆ ಋಣಿ.

Narayan Bhat said...

ಈ ತಿಂಗಳು ಬೆಂಗಳೂರಿನ ಚಿತ್ರ ಸಂತೆ. ಈ ಸಂತೆಯಲ್ಲಿ ಪ್ರದರ್ಶನಗೊಳ್ಳುವ ಕಲಾಕೃತಿಗಳ ಬಗ್ಗೆ ಮಾಹಿತಿ ನೀಡಲು ತಮಗೆ ಸಾಧ್ಯವಾಗಬಹುದೇ?

shivu.k said...

ನಾರಯಣ್ ಭಟ್ ಸರ್,

ಬಹುಮಾನ ವಿಜೇತ ಚಿತ್ರಗಳನ್ನು ಖುಷಿ ಪಟ್ಟಿದ್ದೀರಿ. ಪ್ರದರ್ಶನಕ್ಕೆ ಬಂದರೆ ಇನ್ನೂ ನೂರಾರು ಚಿತ್ರಗಳನ್ನು ನೋಡಬಹುದು.

ಮತ್ತೆ ಈ ಬಾರಿ ಚಿತ್ರಸಂತೆ ಜನವರಿ ೩೧ನೇ ತಾರೀಖು. ಚಿತ್ರಕಲಾ ಪರಿಷತ್ ಮುಂದಿನ ಕುಮಾರಕೃಪ ರಸ್ತೆಯಲ್ಲಿ ನಡೆಯುತ್ತದೆ. ನನ್ನದೂ ಒಂದು ಫೋಟೊಗ್ರಫಿ ಸ್ಟಾಲ್ ಇಡುತ್ತಿದ್ದೇನೆ. ನಿಮಗೆ ಇಷ್ಟವಾದ ಫೋಟೊಗಳನ್ನು ಕೊಳ್ಳಬಹುದು. ಸಮಯ ಬೆಳಿಗ್ಗೆ ಹತ್ತುಗಂಟೆಯಿಂದ ಸಂಜೆ ಏಳುಗಂಟೆಯವರೆಗೆ ಇರುತ್ತದೆ. ನೋಡಿ ಆನಂದಿಸಿ.

Uma Bhat said...

ತುಂಬಾ ಸೊಗಸಾದ ಚಿತ್ರಗಳು.
ಮಾಹಿತಿಗಾಗಿ ಧನ್ಯವಾದಗಳು.

Narayan Bhat said...

ಬೆಂಗಳೂರಿನ ಚಿತ್ರಸಂತೆಯಲ್ಲಿ ನಿಮ್ಮ ಫೋಟೋಗ್ರಫಿ ಸ್ಟಾಲ್ ಇರುವ ವಿಷಯ ತಿಳಿದು ತುಂಬಾ ಸಂತಸವಾಯ್ತು. Wish you all the best. ನಮ್ಮ ಸಹ-ಬ್ಲಾಗಿಗರೆಲ್ಲ ನಿಮ್ಮ ಫೋಟೋಗ್ರಫಿ ಸ್ಟಾಲ್' ಗೆ ಭೇಟಿ ನೀಡಿ ಖುಷಿಪಡುವ ಅವಕಾಶವನ್ನು ಉಪಯೋಗಿಸಿಕೊಳ್ಳಲಿ.

ವನಿತಾ / Vanitha said...

ಚೆಂದದ ಫೋಟೋಗಳು..ಅಭಿನಂದನೆಗಳು ನಿಮಗೆ ಮತ್ತು ಅವರೆಲ್ಲರಿಗೂ,,

shivu.k said...

ನಾರಾಯಣ್ ಭಟ್ ಸರ್,

ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು. ನಿಮ್ಮನ್ನು ಅಲ್ಲಿ ಬೇಟಿಯಾಗಲು ಕಾಯುತ್ತೇನೆ. ಸಾಧ್ಯವಾದರೆ ಇವತ್ತೆ ಒಂದು ಪುಟ್ಟ ಲೇಖನವನ್ನು ಚಿತ್ರ ಸಂತೆ ಬಗ್ಗೆ ಬರೆಯಲೆತ್ನಿಸಿ ನಮ್ಮ ಬ್ಲಾಗ್ ಗೆಳೆಯರಿಗೆ ತಿಳಿಯಪಡಿಸುತ್ತೇನೆ.

shivu.k said...

ವನಿತಾ,

ಧನ್ಯವಾದಗಳು.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ತುಂಬಾ ಸೊಗಸಾದ ಚಿತ್ರಗಳು.
ಮಾಹಿತಿಗಾಗಿ ಧನ್ಯವಾದಗಳು.
ಅಭಿನಂದನೆಗಳು...

shivu.k said...

ವೆಂಕಟಕೃಷ್ಣ ಸರ್,

ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.