Sunday, July 26, 2009

ಇವು ಎಲ್ಲಿ ಕಾಣಿಸಿದ್ರೂ ನಾಯಿಗಳು ಅಲ್ಲೇ ಕಾಲೆತ್ತಿಬಿಡುತ್ತವೆ ಸರ್.....

ನಾನು ಸಡನ್ನಾಗಿ ಬ್ರೇಕ್ ಹಾಕಿ "ಏನ್ರಿ ಗೊತ್ತಾಗೊಲ್ವ....ನಾನು ಯಾವ ಕಡೆ ತಿರುಗಿಸಿದ್ರೂ ಆಕಡೆಯೇ ಬರ್ತಿರಲ್ರೀ...ಒಳ್ಳೇ ಕನ್‌ಪ್ಯೂಸ್ ಗಿರಾಕಿ ಕಣ್ರಿ"...ಆತನನ್ನು ದಬಾಯಿಸಿದ್ದೆ.

ಆತ ನನ್ನ ಮಾತಿಗೆ ಏನು ಉತ್ತರ ಕೊಡಲಿಲ್ಲ. ಸುಮ್ಮನೇ ಮುಖ ನೋಡುತ್ತಾ ಯಾವ ಕಡೆ ಹೋಗಲಿ ಅಂತ ಮತ್ತಷ್ಟು ಭಯಮಿಶ್ರಿತ ಗೊಂದಲದಲ್ಲಿದ್ದ.

ಇಂದು ಬೆಳಿಗ್ಗೆ ಬೇಗನೆ ದಿನಪತ್ರಿಕೆ ಕೆಲಸ ಮುಗಿದಿದ್ದರಿಂದ ಮನೆಕಡೆ ಬರುತ್ತಿದ್ದೆ. ಇನ್ನೇನು ನನ್ನ ಟೂವೀಲರನ್ನು ರಸ್ತೆಯಿಂದ ನಮ್ಮ ಮನೆಯ ಕಾಂಪೊಂಡಿನ ಕಡೆ ತಿರುಗಿಸಬೇಕೆನ್ನಿವಷ್ಟರಲ್ಲಿ ಆ ವ್ಯಕ್ತಿ ನನ್ನ ಸ್ಕೂಟಿಗೆ ಅಡ್ಡ ಬಂದು ಈ ರೀತಿ ಅವನು ಕನ್‌‍ಪ್ಯೂಸ್ ಆಗಿ ನನ್ನನ್ನು ಗೊಂದಲಕ್ಕೀಡುಮಾಡಿದ್ದ.

ಗಾಡಿ ನಿಲ್ಲಿಸಿ ಕಾಂಪೊಂಡ್ ಗೇಟ್ ತೆಗೆಯಬೇಕು, ಅಷ್ಟರಲ್ಲಿ "ಸಾರ್" ದ್ವನಿಯೊಂದು ಕೇಳಿತು.

ನಾನು ಹಿಂದೆ ತಿರುಗಿ ನೋಡಿದೆ. ಅವನೇ ಕರೆದಿದ್ದು. "ಏನ್ರೀ" ಕೇಳಿದೆ.

"ಸರ್ ನಿಮ್ಮ ಗಾಡಿಯ ನಂಬರ್ ಪ್ಲೇಟಿನ ನಂಬರುಗಳೆಲ್ಲಾ ಹೋಗಿಬಿಟ್ಟಿದೆಯಲ್ಲ, ಹೊಸದಾಗಿ ಬರೆದುಕೊಡ್ಲ..." ಕೇಳಿದ.

ಅವನ ಮುಖವನ್ನು ನೋಡಿದೆ. ವಯಸ್ಸು ೪೦ ದಾಟಿದೆ. ಕೃಶದೇಹ, ಸುಕ್ಕುಗಟ್ಟಿದ ಮುಖ, ಪ್ರಪಂಚದ ಎಲ್ಲಾ ನೋವುಗಳು ತನ್ನವೇ ಏನೋ ಅನ್ನುವಂತ ಪ್ರೇತಕಳೆ, ಸ್ನಾನಮಾಡಿ ಎಷ್ಟೋ ದಿನವಾಗಿದೆ ಅನ್ನಿಸುವಂತೆ ಕೆದರಿದ ಕೂದಲು, ಹಳೇ ಪ್ಯಾಂಟು, ಶರ್ಟಿನ ಮೇಲೆ ದೊಗಳೆ ಜಾಕೆಟ್ ಹಾಕಿದ್ದಾನೆ.ಹೆಗಲಿಗೆ ನೇತುಬಿದ್ದ ಟ್ರಾವಲ್ ಬ್ಯಾಗು, ಕಾಲಿಗೆ ಮಾತ್ರ ಪಾಲಿಶ್ ಮಾಡಿದ ಶೂಗಳನ್ನು ಧರಿಸಿದ್ದಾನೆ.

ಸಮಯ ನೋಡಿದೆ, ಇನ್ನೂ ೭-೩೦ ಇಷ್ಟು ಬೆಳಿಗ್ಗೆ ಇವನ್ಯಾವನಪ್ಪ ಗಂಟುಬಿದ್ದ ಅನಿಸಿತು. ನನ್ನ ಗಾಡಿಯನ್ನೊಮ್ಮೆ ನೋಡಿದೆ. ಹಿಂದೆ ಮುಂದೆ ಎರಡು ಕಡೆ ನಂಬರುಗಳು ಅಳಿಸಿಹೋಗಿವೆ. ಒಮ್ಮೆ ಟ್ರಾಫಿಕ್ ಪೋಲಿಸಪ್ಪ ಕೈ ತೋರಿ ನಿಲ್ಲಿಸಿ ದಂಡ ಕಟ್ಟಲು ಕಾರಣಗಳು ಸಿಕ್ಕದೇ ಅಳಿಸಿಹೋದ ನಂಬರುಗಳನ್ನು ನೋಡಿ ದಂಡ ಹಾಕಿದ್ದ. ಆ ನಂತರವೂ ನಾನು ಆ ವಿಚಾರದಲ್ಲಿ ಸೋಮಾರಿಯಾಗಿ ಹೊಸದಾಗಿ ನಂಬರ್ ಬರೆಸಿರಲಿಲ್ಲ. ಈಗ ಇವನ್ಯಾವನೋ ತಾನಾಗೆ ನಂಬರ್ ಬರೆಯುತ್ತೇನೆ ಅನ್ನುತ್ತಿದ್ದಾನೆ ಬರೆಸಿಬಿಡೋಣವೆನ್ನಿಸಿ "ಎಷ್ಟಾಗುತ್ತೆ" ಅಂದೆ.

"ಸರ್, ಬಿಳಿಬಣ್ಣವನ್ನು ಹೊಡೆದು, ಹೊಸದಾಗಿ ಬರೆದರೆ ೮೦ ರೂಪಾಯಿ, ಈಗ ಇರುವುದನ್ನೇ ರಿ ಟಚ್ ಮಾಡಿದರೇ ೪೦ ರೂಪಾಯಿ" ಅಂದ.

ಅವನು ಹೇಳಿದ ರೇಟು ಬೇರೆ ಕಡೆ ಹೋಲಿಸಿದರೇ ಹೆಚ್ಚೆನಿಸಲಿಲ್ಲ, ಅದಕ್ಕೆ ಚೌಕಾಸಿ ಮಾಡಬೇಕೆನಿಸಲಿಲ್ಲ. "ಆಯ್ತು ನನಗೇ ರೀ ಟಚ್ ಮಾಡಿಕೊಡಿ" ಸಾಕು ಅಂದೆ.

ನನ್ನ ಮಾತು ಕೇಳಿದ್ದೆ ತಡ ಖುಷಿಯಿಂದ ಹೆಗಲ ಮೇಲಿದ್ದ ಬ್ಯಾಗನ್ನು ಕೆಳಗಿಳಿಸಿ ಅದರೊಳಗಿಂದ ಸಣ್ಣ ಕಪ್ಪು ಬಣ್ಣದ ಪೇಂಟ್ ಡಬ್ಬ, ಒಂದು ಬ್ರಶ್,ತಿನ್ನರ್ ಬಾಟಲ್ ಎಲ್ಲವನ್ನೂ ನೆಲದಮೇಲೆ ಇಡತೊಡಗಿದ.

" ಧೂಳು ತುಂಬಿದೆ ಅದರ ಮೇಲೆ ಬರೆಯಬೇಡ್ರಿ ಅದನ್ನು ಚೆನ್ನಾಗಿ ಒರಸಿ" ಅಂದೆ

"ಇಲ್ಲ ಸರ್, ಮೊದಲು ಚೆನ್ನಾಗಿ ಸಾಪ್ ಮಾಡಿ ಅಮೇಲೆ ಬರೆಯುತ್ತೇನೆ" ಅಂದ.

ನನ್ನ ಗಾಡಿಯನ್ನು ಪುಟ್‌ಪಾತಿನ ಒಂದು ಕಡೆ ನಿಲ್ಲಿಸಿ, ಮನೆಗೆ ಹೋಗಿ ನನ್ನ ಬ್ಯಾಗುಗಳನ್ನೆಲ್ಲಾ ಇಟ್ಟು ಬರುವ ಹೊತ್ತಿಗೆ ಆತ ಅಚ್ಚುಕಟ್ಟಾಗಿ ಫುಟ್‍ಪಾತ್ ಮೇಲೆ ಕುಳಿತು ತನ್ನ ಕೆಲಸ ಶುರು ಹಚ್ಚಿಕೊಂಡಿದ್ದ. ಆತನ ಬಟ್ಟೆ, ಇನ್ನಿತರ ಅವತಾರಗಳೇನೇ ಇದ್ದರೂ ಅವನೊಳಗಿನ ಕಲಾವಿದ ಕ್ರಿಯಾಶೀಲನಾಗಿದ್ದು ಅವನ ಕೈಚಳಕವನ್ನು ನೋಡಿದಾಗಲೇ.

ನಾವು ಹೊಸದಾಗಿ ವಾಹನಗಳನ್ನು ಕೊಂಡುಕೊಂಡಾಗ ಕಂಪನಿಯವರೇ ನಂಬರ್ ಬರೆಸಿಕೊಡುತ್ತಾರೆ. ಅಮೇಲೆ ಕೆಲವು ದಿನಗಳ ನಂತರ ಅಳಿಸಿಹೋದರೇ ನಂಬರ್ ಬರೆಯುವ ಅಂಗಡಿಗಳನ್ನಿಟ್ಟುಕೊಂಡ ಕಲಾವಿದರಿರುತ್ತಾರೆ ಅವರ ಬಳಿ ಹೋದರೆ ನೂರು ಇನ್ನೂರು ಕೊಟ್ಟು ಬರೆಸಬೇಕು. ಆದ್ರೆ ಈತ ಊರೂರು ಅಲೆಯುತ್ತಾ ರಸ್ತೆಗಳಲ್ಲಿ ಸಿಕ್ಕ ವಾಹನಗಳಿಗೆ ನಂಬರ್ ಬರೆದುಕೊಟ್ಟು ಜೀವನ ಸಾಗಿಸುತ್ತಾನಲ್ಲ, ಇವನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆಯಾಯಿತು.

"ನೀವು ಈ ರೀತಿ ಬರೆಯುವ ಬದಲು ಯಾವುದಾದರೂ ಅಂಗಡಿ ಸೇರಬಹುದಲ್ವ"

"ನನಗೆ ಯಾರ ಕೈಕೆಳಗೂ ಕೆಲಸ ಮಾಡಲು ಇಷ್ಟವಿಲ್ಲ ಸರ್, ಹೀಗೆ ಸ್ವತಂತ್ರವಾಗಿವಾಗಿರಲು ಇಷ್ಟ., ಒಮ್ಮೆ ಬರೆದುಕೊಟ್ಟ ನಂತರ ಅವರ ವಿಸಿಟಿಂಗ್ ಕಾರ್ಡ್ ತೆಗೆದುಕೊಳ್ಳುತ್ತೇನೆ. ಆರು ತಿಂಗಳು-ಒಂದು ವರ್ಷದ ನಂತರ ಅವರ ಮನೆ, ಅಥವ ಅಫೀಸಿನ ಕಡೆ ಹೋದರೆ ಮತ್ತೆ ಅಷ್ಟು ಹೊತ್ತಿಗೆ ಮೊದಲು ಬರೆದ ಬಣ್ಣ ಅಳಿಸಿಹೋಗಿರುತ್ತದಲ್ವಾ ಸರ್, ಆಗ ಅವರನ್ನು ಕೇಳಿದರೆ ಮತ್ತೆ ಖಂಡಿತ ಬರೆಸುತ್ತಾರೆ."

"ಹಾಗಾದರೆ ನೀವು ಬರೆದು ಕೊಟ್ಟ ನಂಬರುಗಳ ಆಯುಸ್ಸು ಅರೇ ತಿಂಗಳು ಅನ್ನಿ"

"ನಾನು ಬರೆದುಕೊಟ್ಟಿದ್ದು ಮಾತ್ರವಲ್ಲ ಸಾರ್, ಕಂಪನಿಯಿಂದ ತಂದ ಹೊಸಗಾಡಿಯ ನಂಬರುಗಳೂ ಒಂದು ವರ್ಷದಲ್ಲಿ ಅಳಿಸಿಹೋಗುತ್ತವೆ ಸರ್,"

"ಅದ್ಯಾಗ್ರಿ ಹೇಳ್ತೀರಿ"

"ನೋಡಿ ಈ ಬೀದಿ ನಾಯಿಗಳಿರುವವರೆಗೂ ನಮಗೆ ಈ ಕೆಲಸ ಆಗಾಗ ಸಿಕ್ಕೇ ಸಿಕ್ಕುತ್ತೆ ಸರ್,"

ಅರೆರೆ..ಬೀದಿನಾಯಿಗೂ ಈತನ ಕೆಲಸಕ್ಕೂ ಏನು ಸಂಬಂಧ." ನನ್ನ ಕಿವಿ ನೆಟ್ಟಗಾಯಿತು.

"ಸರ್ ಈ ನಂಬರ್ ಪ್ಲೇಟುಗಳಿಗೂ ಬೀದಿನಾಯಿಗಳಿಗೂ ಒಂಥರ ಆಟ್ಯಾಚ್‍ಮೆಂಟು ಸರ್, ಅವು ಬೆಳಿಗ್ಗಿನ ಹೊತ್ತು ಯಾವುದೇ ಟೂ ವೀಲರ್ ನಿಂತಿದ್ರೂ ಹುಡುಕಿಕೊಂಡು ಹೋಗಿ ತನ್ನ ಕಾಲನ್ನೆತ್ತಿ ಸರಿಯಾಗಿ ನಂಬರ್ ಪ್ಲೇಟಿನ ಮೇಲೆ ಉಚ್ಚೇ ಹುಯ್ದುಬಿಡ್ತವೆ, ದೊಡ್ಡನಾಯಿಗಳಾದರೇ ಮುಂದಿನ ನಂಬರ್ ಪ್ಲೇಟಿನ ಮೇಲೆ ಉಚ್ಚೆ ಹುಯ್ದುಬಿಡ್ತವೆ ಸರ್, ಕೆಲವೊಮ್ಮೆ ಕಾರಿನ ನಂಬರ್ ಪ್ಲೇಟಿಗೂ ಇದೇ ಗತಿ, ಈ ನಾಯಿ ಉಚ್ಚೆ ಅನ್ನೋದು ಬಾರಿ ಡೇಂಜರ್ ಸರ್, ಅದರ ಕೆಮಿಕಲ್ ರೆಯಾಕ್ಷನ್‌ನಿಂದಾಗಿ ಎಂಥ ದೊಡ್ಡ ನಂಬರಿದ್ರೂ ಅಳಿಸಿಹೋಗಿಬಿಡ್ತದೆ."

ಅತನ ಮಾತನ್ನು ಕೇಳಿ ನನಗೆ ನಗು ತಡೆಯಲಾಗಲಿಲ್ಲ. ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಸಂಭಂದ ಕಲ್ಪಿಸುವ ಹಾಗೆ, ಇಲ್ಲಿ ಈತನ ಕಲೆಗೂ ನಾಯಿಗಳ ಮೂತ್ರಕ್ಕೂ ದೇವರು ಎಂಥ ಸಂಭಂದವನ್ನು ಕಲ್ಪಿಸಿದ್ದಾನೆ ಅನ್ನಿಸಿತು.

"ಇದೊಂದರಿಂದಲೇ ನಿಮ್ಮ ಜೀವನ ನಡೆಯುತ್ತೋ ಅಥವ ಬೇರೇನಾದ್ರು ಮಾಡುತ್ತೀರೋ..."

"ಇಲ್ನೋಡಿ ಸರ್ ಇದು ನಮಗೆ ಪಾರ್ಟ್ ಟೈಮ್ ಕೆಲಸ, ದೇವಯ್ಯ ಪಾರ್ಕಿನಿಂದ ನವರಂಗ್ ವರೆಗೆ ಮೆಟ್ರೋ ಕೆಲಸಕ್ಕಾಗಿ ಬಿಲ್ಡಿಂಗ್ ಹೊಡದಿದ್ದಾರಲ್ವ, ಅಲ್ಲಿ ಮೆಟ್ರೋ ಬಂದಮೇಲೆ ಮತ್ತೆ ರಸ್ತೆಯುದ್ದಕ್ಕೂ ಅಂಗಡಿಗಳು ಬರುತ್ತಿರುತ್ತವೆ. ನಾವು ಅಲ್ಲಿಗೆ ಹೋಗಿ ಅವರ ನೇಮ್ ಬೋರ್ಡುಗಳನ್ನು ಬರೆದುಕೊಡುತ್ತೇವೆ."

"ನೀವು ಅವರನ್ನು ಕೇಳಿದ ತಕ್ಷಣ ಕರೆದು ಕೆಲಸ ಕೊಡುತ್ತಾರಾ?"

"ಖಂಡಿತ ಸರ್, ಯಾಕಂದ್ರೆ ಅವರಿರುವ ಜಾಗಕ್ಕೆ ಹೋಗಿ ಅವರಿಗೆ ಬೇಕಾದ ಹಾಗೆ ಚೆನ್ನಾಗಿ ಬರೆದುಕೊಡುತ್ತೇವಲ್ವ, ಮತ್ತೆ ನಮ್ಮ ರೇಟು ಕಡಿಮೆಯಿರುತ್ತೆ ನೋಡಿ. ಅವರಿಗೆ ಬೋರ್ಡನ್ನು ಎಲ್ಲಿಗೋ ಎತ್ತಿಕೊಂಡು ಹೋಗಿ ಬರೆಸಿಕೊಂಡು ತರುವ ತಲೆನೋವು ತಪ್ಪಿಸುತ್ತೇವಲ್ಲ".

"ಅದು ಮುಗಿದು ಹೋದಮೇಲೆ ಏನುಮಾಡ್ತೀರಿ."

"ಇದೇನ್ ಸರ್, ನೀವು ಹೀಗೆ ಹೇಳ್ತೀರಿ, ಬೆಂಗಳೂರು ಬೆಳೀತಾನೆ ಇರೋದ್ರಿಂದ ಈ ರಸ್ತೆ ಮುಗೀತು ಅಂದ್ರೆ ಮತ್ತೊಂದು ರಸ್ತೆ ಅಗಲ ಮಾಡ್ತಾರೆ, ಅಂಗಡಿಗಳನ್ನು ಬೀಳಿಸುತ್ತಾರೆ. ಹೀಗೆ ಒಂದಲ್ಲ ಒಂದು ನಡೀತಾನೆ ಇರುತ್ತೆ, ಅದರಿಂದ ನಮಗೆ ಕೆಲಸ ಸಿಕ್ಕೇ ಸಿಗುತ್ತೇ. ಜೊತೆಗೆ ಈ ರೀತಿ ಹಳಿಸಿಹೋದ ನಂಬರ್ ಪ್ಲೇಟಿನ ಕೆಲಸ ದಿನಕ್ಕೆ ಒಂದೆರಡಾದ್ರು ಸಿಕ್ಕೇ ಸಿಗುತ್ತೆ. ಇಷ್ಟಕ್ಕೂ ಹುಟ್ಟಿಸಿದ ದೇವರು ಹುಲ್ಲು ಮೇಯುಸುತ್ತಾನ ಹೇಳಿ"

ಆತನ ಆತ್ಮವಿಶ್ವಾಸದ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ.

"ಸರ್ ನಿಮ್ಮ ಕಾರ್ಡ್ ಕೊಡಿ"

"ಯಾಕ್ರಿ...ಮತ್ತೆ ಆರು ತಿಂಗಳು ನಂತರ ಬರಲಿಕ್ಕಾ, ನಿಮ್ಮ ಕಲೆಯ ಬೆಲೆ ಅಷ್ಟೇನಾ?"

"ಸರ್, ನನ್ನ ಕಲೆಯ ಅಯಸ್ಸು ನಿಮ್ಮ ಬೀದಿನಾಯಿಗಳ ಮೇಲೆ ಆಧಾರವಾಗಿದೆ" ಎಂದು ನಗುತ್ತಾ ನನ್ನಿಂದ ವಿಸಿಟಿಂಗ್ ಕಾರ್ಡು, ಹಣ ಪಡೆದುಕೊಂಡು ಹೋದ.

ಲೇಖನ: ಶಿವು.ಕೆ ARPS.

76 comments:

VENU VINOD said...

ಹಹ್ಹಹ್ಹ...
ಸೂಪರ‍್ ನಿರೂಪಣೆ ಮಾರಾಯ್ರೆ...
ಆತನ ಆತ್ಮವಿಶ್ವಾಸ, ಬದುಕಿನಲ್ಲಿರೋ ಆಶಾವಾದಕ್ಕೆ ಸಲಾಂ..

shivu.k said...

ವೇಣು ವಿನೋದ್,

ಬ್ಲಾಗಿಗೆ ಹಾಕಿದ ತಕ್ಷಣ ಪ್ರತಿಕ್ರಿಯಿಸಿದ್ದೀರಿ...

ಇದು ನನಗೆ ನಿನ್ನೆ ಆದ ಅನುಭವ...ಅದನ್ನು ಹಾಗೆ ಬರೆದಿದ್ದೇನೆ...

ಧನ್ಯವಾದಗಳು.

Unknown said...

ಈಗ ಸ್ಟಿಕರ್ ಬಳಸುವವರೇ ಹೆಚ್ಚು-ಪೈಂಟರ್ಸ್ ಕಂಗೆಡುವ ಪರಿಸ್ಠಿತಿ. :(

Guruprasad said...

ಹಾ ಚೆನ್ನಾಗಿ ಇದೆ... ಆತನ ಆತ್ಮ ವಿಶ್ವಾಸಕ್ಕೆ ನಿಜಕ್ಕೂ ಸಲಾಂ......ಒಳ್ಳೆ ನಿರೂಪಣೆ.. ಹಾಗೆ ನಿಮ್ಮ ಫೋಟೋ ಕೈಚಳಕ ಇದ್ದಿದ್ದರೆ ಚೆನ್ನಾಗಿ ಇರುತ್ತಾ ಇತ್ತು ....
ಗುರು

shivu.k said...

ಆಶೋಕ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನೀವು ಹೇಳಿದಂತೆ ಸ್ಟಿಕ್ಕರ್ ಕಟಿಂಗ್‌ನಲ್ಲಿ ಮಾಡಿಸುತ್ತಾರೆ. ಆದ್ರೂ ಈ ರೀತಿ ಪೈಂಟರ್ಸ್[ನಾನು ಕಲಾವಿದರು ಅನ್ನುತ್ತೇನೆ]ಅಲ್ಲಲ್ಲಿ ಇರುತ್ತಾರೆ ಸರ್,
ಧನ್ಯವಾದಗಳು.

shivu.k said...

ಗುರು,

ಕೆಲವರು ಯಾವುದೇ ಕೆಲಸ ಮಾಡಲಿ ಆವರ ಆತ್ಮವಿಶ್ವಾಸ ನಮಗೆ ಅನುಕರಣೀಯವೆನಿಸುತ್ತದೆ...ಅಲ್ಲವೇ...

ನನಗೆ ಈ ಲೇಖನಕ್ಕೆ ಫೋಟೊ ಬೇಡವೆನಿಸಿತ್ತು. ಅದಕ್ಕೆ ಹಾಕಲಿಲ್ಲ...[ಫೋಟೊ ಮುಖ್ಯವಾಗದೆ ವಿಚಾರ ಮುಖ್ಯವೆನಿಸಬೇಕೆಂದು ನಾನು ಫೋಟೊ ಹಾಕಲಿಲ್ಲ.]
ಧನ್ಯವಾದಗಳು.

ಹರೀಶ ಮಾಂಬಾಡಿ said...

ನಿರೂಪಣೆ, ಅನುಭವ chennaagide

shivu.k said...

ಹರೀಶ್ ಸರ್,

ಧನ್ಯವಾದಗಳು. ಹೀಗೆ ಬರುತ್ತಿರಿ...

AntharangadaMaathugalu said...

ನಿರೂಪಣೆ ತುಂಬಾ ಚೆನ್ನಾಗಿದೆ ಶಿವು ಸಾರ್.....

ಶ್ಯಾಮಲ

Annapoorna Daithota said...

ಚೆನ್ನಾಗಿದೆ :-)

ಆತನ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನ ಇಷ್ಟವಾಯ್ತು !

shivu.k said...

ಶ್ಯಾಮಲ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಅನ್ನಪೂರ್ಣ ಮೇಡಮ್,

ಆತನ ಆತ್ಮ ವಿಶ್ವಾಸ ನನಗೂ ಇಷ್ಟವಾಯಿತು...

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನಾವು ಗಮನಿಸಿಯೇ ಇರುವುದಿಲ್ಲ ನೋಡಿ. ನಂಬರ್ ಪ್ಲೇಟಿನ ಮೇಲಿನ ಬಣ್ಣಗಳು ಕರಗಲು ಕಾರಣ ಕಂಡುಕೊಂಡಿದ್ದೀರ. ಹಾಗೆಯೇ ಆ ಕಲಾವಿದನನ್ನು ಮಾತನಾಡಿಸಿ ಅವನ ಆತ್ಮವಿಶ್ವಾಸ, ವ್ಯವಹಾರ ಚಾಕಚಕ್ಯತೆ ನಮಗೆಲ್ಲ ಹಂಚಿದ್ದೀರ. ಸುಂದರ ನಿರೂಪಣೆ. ಬೆಳೆಯುವ ಬೆಂಗಳೂರನ್ನು ನಂಬಿ ಬದುಕುವ ಇಂತಹ ಎಷ್ಟೊಂದು ವಿವಿಧ ಕೆಲಸಗಳಿವೆಯೋ? ಇದೊಂಥರಾ ಮಾಯಾಬಜಾರ್ ಅಲ್ವಾ?

SSK said...

ಶಿವೂ ಅವರೇ,
ನೈಜ ಕಥೆಯ ನಿರೂಪಣಾ ಶೈಲಿ ಇಷ್ಟವಾಯಿತು.
ಆತನ ಸ್ಥಿತಿ ಮತ್ತು ವಿಚಾರಗಳು ಮನ ಮುಟ್ಟುವಂತೆ ಇವೆ!
ಲೇಖನ ಓದುತ್ತಾ, 'ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಎನ್ನುವ ದಾಸರ ಪದ ನೆನಪಿಗೆ ಬಂತು!!

ನಿಮ್ಮ ರೇಡಿಯೋ ಸಂವಾದ ಕೇಳಲಾಗಲಿಲ್ಲ, ಕ್ಷಮೆಯಿರಲಿ. ಇದಕ್ಕಾಗಿ ವಿಷಾದಿಸುತ್ತೇನೆ.
ಮತ್ತೆ ಇನ್ನೊಂದು ವಿಷಯ: ನೀವು ನನ್ನ ಬ್ಲಾಗಿಗೆ ಬರಲೇ ಇಲ್ಲ......, ನಾನೂ ಕಾದೆ ನೀವು ಬಂದು ಲೇಖನಗಳನ್ನು ಓದಿ ನನ್ನನ್ನು ಪ್ರೋತ್ಸಾಹಿಸುತ್ತೀರೆಂದು. ಆದರೆ ನೀವು ಬರಲಿಲ್ಲ.
ನನ್ನ ಲೇಖನಗಳು, ವಿಷಯಗಳು ಅಂತಹ ಕುತೂಹಲಕರ ವಿಷಯಗಳನ್ನೇನೂ ಒಳಗೊಂಡಿರುವುದಿಲ್ಲ.
ಆದರೂ ನೀವೆಲ್ಲಾ ಬಂದು ಪ್ರೋತ್ಸಾಹಿಸಿದರೆ ಖುಷಿಯಾಗುತ್ತದೆ ಮತ್ತು ಇನ್ನಷ್ಟು ಬರೆಯಲು ಸ್ಫೂರ್ತಿ ಸಿಗುತ್ತದೆ.
ಬರಲು ಪ್ರಯತ್ನಿಸುತ್ತೀರಲ್ಲಾ........?

ಸಂದೀಪ್ ಕಾಮತ್ said...

ಪಾಪ ನಾಯಿಯ ಈ ದುರಭ್ಯಾಸದಿಂದ ಕೆಲವರಿಗೆ ಹೊಟ್ಟೆ ತುಂಬುತ್ತಲ್ಲ!

Prabhuraj Moogi said...

ಅಯ್ಯೊ ಹೀಗಾ ವಿಷಯ ನನ್ನ ಬೈಕ ನಂಬರು ಪ್ಲೇಟೂ ಅಳಿಸಿಹೋಗಿದೆ, ನಾನೆಲ್ಲೊ ಪೇಂಟು ಸರಿಯಾಗಿ ಬಳಸಿಲ್ಲ ಏನೊ ಅಂದುಕೊಂಡಿದ್ದೆ... ಮ್.. ಯಾವದೇ ವಿಷ್ಯ ಬಹಳ ಹಾಸ್ಯಮಯವಾಗಿ ಬರೆದುಬಿಡುತ್ತೀರಿ... ಚೆನ್ನಾಗಿದೆ. ಸಂದರ್ಶನ ಕೇಳಲಾಗಲಿಲ್ಲ, ಇಲ್ಲಿ ನನ್ನ ಡೇಟಕಾರ್ಡ ಕನೆಕ್ಷನನಲ್ಲಿ ಡೌನ ಲೋಡ ಆಗದೆ ಮಧ್ಯ ನಿಲ್ಲುತ್ತಿದೆ, ಆಪೀಸಿನಲ್ಲಿ ಒಪೆನ್ ಆಗಲ್ಲ. :( ಮತ್ತೆ ಪ್ರಯತ್ನಿಸುತ್ತೇನೆ ಆಗ ಪ್ರತಿಕ್ರಿಯಿಸುತ್ತೇನೆ.

ಸುಧೇಶ್ ಶೆಟ್ಟಿ said...

ನಿರೂಪಿಸಿದ ರೀತಿ ತು೦ಬಾ ಇಷ್ಟವಾಯಿತು ಪ್ರಕಾಶಣ್ಣ.... ಬದುಕುವ ದಾರಿಗಳು ಎಷ್ಟೆಷ್ಟಿವೆಯೋ....

Ittigecement said...

ಶಿವು ಸರ್....

ನಿಮ್ಮ ಈ ಲೇಖನ ಓದಿ ತೇಜಸ್ವಿಯವರು ನೆನಪಾದರು....

ಸಣ್ಣಗೆ ಕಚಗುಳಿ ಇಡುವ,...
ಒಂದು ಚಿಕ್ಕ ಸಂದೇಶ ಕೊಡುವ ನಿಮ್ಮ ಲೇಖನ
ಬಹಳ ... ಬಹಳ ಇಷ್ಟವಾಯಿತು....

ಹೆಚ್ಚಿಗೆ ಓದಿರದ ಆತನ..
ಆಶಾವಾದಿತನ ಇಷ್ಟವಾಗುತ್ತದೆ....

ಅಭಿನಂದನೆಗಳು...

Prashanth Arasikere said...

hi..shivu..hegidira

jana hegella jeevana madbahudu annodikke nimma barha ne sakshi..kelsa illa antha esto jana irtare..yav reethi jeevana madbahdu antha toruskottidira..lekna tumba chennagide..hage nanna number plate kuda alsi hogide..nanu madusbeku shivu..nanna maglu nimma manege hogbeku antha nennustha irtale..chitte photo torusdralla anti manege hogana antha irtale...

sunaath said...

ಶಿವು,
ತುಂಬ ಹೃದಯಸ್ಪರ್ಶಿ interview. ಬೀದಿ ಪೇಂಟರುಗಳ ಪಾಡನ್ನು ವಿವರವಾಗಿ, ಆಪ್ತವಾಗಿ ವರ್ಣಿಸಿದ್ದೀರಿ. ನಿಮಗೆ ಅಭಿನಂದನೆಗಳು.

Unknown said...

ಶಿವು, ಒಳ್ಳೆಯ ಬರವಣಿಗೆ, ಶಯಲಿ ಇಷ್ಟವಾಯಿತು. ಆದರೆ ಒಂದು ಕೊರತೆಯೇನು ಗೊತ್ತಾ? ನಿಮ್ಮ ಬ್ಲಾಗಿಗೆ ಬಂದು, ಬರವಣಿಗೆಗೆ ತಕ್ಕನಾದ ಒಂದು ಫೋಟೋ ನೋಡಲಿಲ್ಲವಲ್ಲ ಅದು! ಹೌದು ಆ ಶ್ವಾನಗಳು ನಮಗೆ ಬೇಕಾದಾಗ ಬಂದು ಯಾವ್ಯಾವುದೋ ಗಾಡಿಗಯ ನಂಬರ್ ಪ್ಲೇಟಿಗೆ ಕಾಲೆತ್ತಿ ಒಂದು ಮಾಡುವುದಿಲ್ಲ. ಆದರೆ ಯಾವುದೇ ಹೊಸ ಜಾಗಕ್ಕೆ ಹೋಗಿ ನಿಮ್ಮ ಗಾಡಿ ನಿಲ್ಲಿಸಿ ಒಂದತ್ತು ನಿಮಿಷ ಕಾಯ್ದರೆ ಸಾಕು. ಬೆಳಗಿನ ಹೊತ್ತಾದರೆ ಒಂದತ್ತು ನಿಮಿಷದಲ್ಲಿ ಬಂದು ಕಾಲೆತ್ತಿಬಿಡುತ್ತವೆ. ಅವುಗಳ ಬೌಂಡರಿಯೊಳಗೆ ಯಾವುದೇ ಹೊಸ ಮನುಷ್ಯ, ವಾಹನ ಬಂದರೂ ಅವು ಸುಸು ಮಾಡಿ ಆ ವಸ್ತುಗಳಿಗೆ ತಮ್ಮ ಬೌಂಡರಿಯೊಳಗೆ ಬರಲು ಅನುಮತಿ ನೀಡುತ್ತವೆ. ಮತ್ತೊಮ್ಮೆ ಹೋದಾಗ ಅವು ಕೇವಲ ವಾಹನವನ್ನುಮೂಸಿ ನೋಡಡುತ್ತವೆ ಸುಸ ಮಾಡುವುದಿಲ್ಲ! ಹೇಗಿದೆ ಜೀವ ಜಗತ್ತು!

ರಾಜೀವ said...

ಹಹಾ. ನಂಬರುಗಳ ಅಳಿವೇ ಇಂತಹ ಕಲಾವಿದರ ಉಳಿವು. ಸಕ್ಕತ್ತಾಗಿ ತಿಳಿಸಿದ್ದೀರ.

ನನ್ನ ಬೈಕಿನ ನಂಬರ್ ಪ್ಲೇಟು ಚೆನ್ನಾಗೇ ಇದೆ. ಪೈಂಟು ಹೊಡೆಸಿ ಸುಮಾರು ೫ ವರುಷಗಳೇ ಆಯಿತು. ಇವಾಗ ಗೊತ್ತಾಯಿತು ಅದು ಹೇಗೆ ಅಂತ. ನಾನು ಬೈಕನ್ನು ಹೊರಗೆ ಎಲ್ಲೂ ನಿಲ್ಲಿಸುವುದೇ ಇಲ್ಲ. ಮನೆಯ ಗೇಟಿನೊಳಗೆ ಅಥವಾ ಆಫೀಸಿನ ಪಾರ್ಕಿಂಗ್ ಲಾಟ್ನಲ್ಲಿ ನಿಲ್ಲಿಸ್ತೀನಿ.

shivu.k said...

juಮಲ್ಲಿಕಾರ್ಜುನ್,

ನೋಡಲು ಪೆಕರು ತರ ಇದ್ದರೂ ಆತನ ಮಾತಿನ ಚಾಕಚಕ್ಯತೆಗೆ ನಾನು ಬೆರಗಾಗಿದ್ದೆ. ಬೆಂಗಳೂರಿನಲ್ಲಿ ನೂರಾರು ಜನರ ಚೆನ್ನಾಗಿ ನಡೆಯುತ್ತಿರುವ ಅಂಗಡಿಗಳು ನಾಶವಾಗಿ ಅವರ ಮುಂದಿನ ಬದುಕು ಹೇಗೆ ಅಂತ ನಾವು ಚಿಂತಿಸುತ್ತಿರುತ್ತೇವೆ. ಆದ್ರೆ ಅದಕ್ಕೆ ಉತ್ತರವಾಗಿ ಹೀಗೆ ನೂರಾರು ಜನರಿಗೆ ಬೇರೆ ರೀತಿಯ ಉದ್ಯೋಗ ಪರೋಕ್ಷವಾಗಿ ದೊರಕುವುದು. ಒಂದು ಬದಲಾವಣೆಯ ಹಿಂದೆ ಮತ್ತೊಂದು ಕಾರಣವಿದ್ದೇ ಇರುತ್ತದೆ ಅನ್ನುವುದು ಇದಕ್ಕೆ ಅಲ್ಲವೇ...ಅದಕ್ಕೇ ಇದು ನೀವು ಹೇಳಿದಂತೆ ಮಾಯಾ ಬಜಾರ್ ಹೌದು...

ಈ ಲೇಖನದ ಪ್ರತಿಕ್ರಿಯೆಗಳಿಂದಾಗಿ ನಾನು ಒಮ್ಮೆ ಸಾಧ್ಯವಾದರೆ ಮೆಟ್ರೋ ಕೆಲಸ ಮಾಡುವ ನಾನಾ ತರಹದ ಜನರ ಒಳಸುಳಿಗಳನ್ನು ತಿಳಿದುಕೊಳ್ಳುವ ಆಸೆಯಾಗುತ್ತಿದೆ...

ಧನ್ಯವಾದಗಳು.

shivu.k said...

SSK ಸರ್,

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಆತನ ನಡುವಳಿಕೆಯೇ ನನ್ನ ಕುತೂಹಲಕ್ಕೆ ಕಾರಣ. ಬಹುಶಃ ಪ್ರತಿಯೊಬ್ಬರ ನಡುವಳಿಕೆಯೂ ಏನೋ ಒಂದು ವಿಶೇಷವಿರುತ್ತದೆ ಎನ್ನುವುದು ಅನಿಸಿಕೆ.

ಮತ್ತೆ ನನ್ನ ರೇಡಿಯೋ ಸಂದರ್ಶನವನ್ನು ಅನೇಕರು ಕೇಳಲಾಗಲಿಲ್ಲವೆಂದು ಮೇಲ್ ಮಾಡಿದ್ದಾರೆ. ಬಹುಶಃ ತಾಂತ್ರಿಕ ತೊಂದ್ರೆ ಇರಬಹುದು. ಅದಕ್ಕಾಗಿ ನಿಮಗೆ ಆಡಿಯೋ ಪೈಲ್ ಮೇಲ್ ಮಾಡುತ್ತೇನೆ. ಅದನ್ನು ನೀವು download ಮಾಡಿಕೊಂಡು winamp ನಲ್ಲಿ ಕೇಳಬಹುದು.

ಮತ್ತೆ ಸರ್ ನಾನು ನಿಮ್ಮ ಬ್ಲಾಗಿಗೆ ಬರಿದಿರುವುದಕ್ಕೆ ಕಾರಣ ನಿಮ್ಮ ಬ್ಲಾಗನ್ನು ನಾನು ಲಿಂಕಿಸಿಕೊಂಡಿರದ ಕಾರಣ ನಿಮ್ಮ ಹೊಸ ಲೇಖನಗಳು ನನಗೆ ಗೊತ್ತಾಗುತ್ತಿರಲಿಲ್ಲವಾದ್ದರಿಂದ ಬಂದಿರಲಿಲ್ಲ. ಈಗ ಲಿಂಕಿಸಿಕೊಂಡು ಹಿಂಬಾಲಿಸುತ್ತಿದ್ಡೇನೆ. ಖಂಡಿತ ನಿಮ್ಮ ಬ್ಲಾಗಿಗೆ ಇನ್ನು ಮುಂದೆ ಬರುತ್ತೇನೆ. ಲೇಖನಗಳನ್ನು ಓದುತ್ತೇನೆ. ಗೊತ್ತಾಗದೇ ಇದ್ದುದ್ದಕ್ಕೆ ಕ್ಷಮೆಯಿರಲಿ.

shivu.k said...

ಸಂದೀಪ್,

ನಾಯಿಯ ಇನ್ನಷ್ಟು ದುರಾಬ್ಯಾಸಗಳನ್ನು ನಾನು ಗಮನಿಸಬೇಕೆಂದಿದ್ದೇನೆ...

shivu.k said...

ಪ್ರಭು,

ವಿಷಯ ಅಂಗೇಯಾ...ನಿಮ್ಮ ಬೈಕಿನ ನಂಬರ್ ಪ್ಲೇಟಿನ ಹತ್ತಿರ ಹೋಗಿ ಪರೀಕ್ಷಿಸಿ. ರಸಾಯನಿಕ ಪ್ರಕ್ರಿಯೆಯ ವಿವಿಧ ಹಂತಗಳು ಗಮನಕ್ಕೆ ಬರಬಹುದು...ಮತ್ತೆ ಈ ನನ್ನ ಲೇಖನದಲ್ಲಿ ನನ್ನದೇನು ಹೆಗ್ಗಳಿಕೆಯಿಲ್ಲ. ಬೆಳಿಗ್ಗೆ ಆದ ಘಟನೆಯನ್ನು ಹಾಗೆ ನೇರವಾಗಿ ಬರೆದಿದ್ದೇನೆ ಅಷ್ಟೇ. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಮತ್ತೆ ನಿಮಗೆ ಸಂದರ್ಶನದ ಆಡಿಯೋ ಪೈಲ್ ಮೇಲ್ ಮಾಡಿದ್ದೇನೆ. ನೋಡಿ.

shivu.k said...

ಸುಧೇಶ್,

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತೆ ನಾನು ಪ್ರಕಾಶಣ್ಣ ಅಲ್ಲ ಶಿವು.

shivu.k said...

ಪ್ರಕಾಶ್ ಸರ್,

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ನನ್ನೆಲ್ಲಾ ಲೇಖನಗಳಿಗೂ ತೇಜಸ್ವಿಯವರು ಸ್ಪೂರ್ತಿ.
ಪೇಂಟರ್‌ನ ನಿಷ್ಟಾವಂತಿಕೆ, ನಂಬಿಕೆ ಆತ್ಮವಿಶ್ವಾಸ ಇಷ್ಟವಾಯಿತು..

shivu.k said...

ಪ್ರಶಾಂತ್.,

ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ. ನಿಮ್ಮ ಶ್ರೀಮತಿಯವರು ಮತ್ತು ಮಗಳು ಅಧಿತಿ ಹೇಗಿದ್ದಾರೆ?

ಲೇಖನದ ಬಗೆಗೆ ನಿಮ್ಮ ಅಭಿಪ್ರಾಯ ಇಷ್ಟವಾಯಿತು. ನಿಮ್ಮ ಬೈಕಿನ ನಂಬರ್ ಪ್ಲೇಟ್ ಅಳಿಸಿಹೋಗಿದ್ದರೇ ಬೇಗನೇ ಬರೆಸಿ. ಇಲ್ಲ ಫೋಲಿಸ್ ಮಾಮ ಕಾಯುತ್ತಿರುತ್ತಾನೆ.

ಮತ್ತೆ ನನ್ನ ಮತ್ತು ಶ್ರೀಮತಿಯನ್ನು ಚಿಟ್ಟೆ ಆಂಟಿ-ಮಾಮ ಅಂತ ಗುರುತಿಸುತ್ತಿರುವ ಆಧಿತಿಗೆ ಧನ್ಯವಾದ ತಿಳಿಸಿ. ಮತ್ತೆ ಅವಳನ್ನು ನಮ್ಮ ಮನೆಗೆ ಕರೆದುಕೊಂಡು ಬನ್ನಿ. ಅವಳಿಗೆ ಮತ್ತಷ್ಟು ಹೊಸ ಫೋಟೊಗಳನ್ನು ತೋರಿಸುತ್ತೇನೆ...

ನೀವು ಮೇಲ್‌ನಲ್ಲಿ ಕಳಿಸಿದ ಆಟೋ ಕತೆ ತುಂಬಾ ಚೆನ್ನಾಗಿತ್ತು.

ಧನ್ಯವಾದಗಳು.

Santhosh Rao said...

ಶಿವೂ ಸರ್ ,
ಲೇಖನ ತುಂಬಾ ಚೆನ್ನಾಗಿದೆ ... ಇಂತಹ ಸೂಕ್ಷ್ಮ ವಿಚಾರಗಳನ್ನು ತುಂಬಾ ಚೆನ್ನಾಗಿ ಬರಿತೀರ

ಬಾಲು said...

ಇಗ ಎಲ್ಲರು ಸ್ಟಿಕ್ಕರ್ ಅನ್ತಿಸುವವರೇ, ಪೇಯಿಂಟ್ ಮಾಡಿಸುವವರು ಕಡಿಮೆ. ಇಂತ ಟೈಮ್ ನಲ್ಲಿ ನಾಯಿ ಉಚ್ಚೆ, ಮೆಟ್ರೋ ರೈಲು, ರಸ್ತೆ ಅಗಲ... ಮುಂತಾದವುಗಳ ಮೇಲೆ ನಂಬಿಕೆ ಇಟ್ಟು ಸ್ವತಂತ್ರ ವಾಗಿ ಕೆಲಸ ಮಾಡೋರನ್ನ ಪರಿಚಯ ಮಾಡಿಸಿದ್ದಿರಿ.

ಇನ್ನು ಮುಂದೆ ನಿಮ್ಮ ಗಾಡಿ ನಿಲ್ಲಿಸ ಬೇಕಾದರೆ ಸ್ವಲ್ಪ ಜೋಪಾನ, ಅಕ್ಕ ಪಕ್ಕ ಸ್ವಲ್ಪ ಕಣ್ಣು ಹಾಕಿ ಸ್ಟ್ಯಾಂಡ್ ಹಾಕಿ.

shivu.k said...

ಸುನಾಥ್ ಸರ್,

ಪೇಂಟರ್ ಗಳ ಜೊತೆ ಕೆಲವೊಮ್ಮೆ ನಾಯಿಗಳು ಇಷ್ಟವಾಗುತ್ತಲ್ವ ಸರ್, ಏಕೆಂದರೆ ಅವು ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂಥ ಕೆಲಸ ಮಾಡಿದಾಗಲೇ ನಮಗೆಲ್ಲಾ ಇದು ವಿಶೇಷವೆನಿಸುವುದು...ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಚಿತ್ರಾ said...

ಶಿವೂ,
ತುಂಬಾ ಚೆನ್ನಾಗಿ ಬರೆದಿದೀರಾ . ಕೆಲಸ ಸಿಗಲ್ಲ ಅಂತ ಸೋಮಾರಿಗಳಾಗಿ ಅಲೆಯೋ ಜನರು ಇಂಥವರಿಂದ ಕಲಿಯಬೇಕು.
ಅಂದಹಾಗೆ, ನಾಯಿಗಳೂ ಸಹ ಕೆಲಸ ಕೊಡಿಸುತ್ತವೆ ಅಂತಾಯ್ತು ! ಇದನ್ನ ಇಂಗ್ಲಿಷ್ ಗೆ ಅನುವಾದಿಸಿ , ಮನೇಕಾ ಗಾಂಧಿಯವರಿಗೆ ಕಳಿಸಿ. ಬೀದಿ ನಾಯಿಗಳನ್ನ ರಕ್ಷಣೆ ಮಾಡೋದಕ್ಕೆ ಇನ್ನು ಒಂದು ಕಾರಣ ಸಿಕ್ಕತ್ತೆ ಅಲ್ವಾ?
ಮತ್ತೆ ಆಡಳಿತ ಪಕ್ಷದವರಿಗೆ ಗೊತ್ತಾದ್ರೆ, " ನಾಯಿ ರೋಜಗಾರ್ ಯೋಜನೆ " ಅಂತಾನೂ ಶುರು ಮಾಡಬಹುದು ನೋಡಿ !

ಪಾಚು-ಪ್ರಪಂಚ said...

ಶಿವೂ ಸರ್,

ನಿಮ್ಮ ಅಚ್ಚುಕಟ್ಟಾದ ತಿಳಿ ಹಾಸ್ಯದ ನಿರೂಪಣೆ ತುಂಬಾ ಇಷ್ಟವಾಯಿತು, ಆತ್ಮವಿಶ್ವಾಸದಿಂದ ದುಡಿಯುತ್ತಿರುವ ಆ ಕಲಾವಿದನಿಗೆ hatts-off.
ಅದನ್ನ ಅವರಿಗೆ ತಿಳಿಸಲು ನೀವು ಇನ್ನ ೬ ತಿಂಗಳು ಕಾಯಬೇಕೆನೋ...!! :-)

ಕ್ಷಣ... ಚಿಂತನೆ... said...

ಶಿವು ಸರ್‍, ಲೇಖನದ ಶೀರ್ಷಿಕೆಯನ್ನು ನೋಡಿ ಇದೇನಪ್ಪ ಎಂದು ಒಳಗೆ ಇಣುಕಿದರೆ ಇಷ್ಟಲ್ಲಾ ಘಟನೆಯಿದೆಯೆಂದು ತಿಳಿಯಿತು. ಆತನ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ದುಡಿದು ಬದುಕುವ ಹಾಗೂ ಸಿಕ್ಕ ಕೆಲಸದಲ್ಲಿ ಸಂತೃಪ್ತಿಕಾಣುವ ಸ್ವಭಾವ ಇಷ್ಟವಾಯಿತು. ಸರಳ ನಿರೂಪಣೆ ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಧನ್ಯವಾದಗಳು.

ಚಂದ್ರಶೇಖರ ಬಿಎಚ್.

Umesh Balikai said...

ಹ್ಹ ಹ್ಹ ಹ್ಹಾ.. ನಾಯಿಗಳು ಬರೀ ವಿದ್ಯುತ್ ಕಂಬಗಳನ್ನು ನೋಡಿದಾಗ ಮಾತ್ರ ಕಾಲೆತ್ತುತ್ತವೆ ಅಂದ್ಕೊಂಡಿದ್ದೆ.. ವಾಹನಗಳ ನಂಬರ್ ಪ್ಲೇಟ್ ಕಂಡ್ರೂ ಹಾಗೇ ಮಾಡ್ತಾವ.. ಅವು ಹಾಗೆ ಮಾಡೋದ್ರಿಂದ ನಾಲ್ಕು ಜನರ ಹೊಟ್ಟೆ ತುಂಬುತ್ತೆ ಅಂತ ಕೇಳಿ ಬದುಕು ಎಷ್ಟು ವಿಚಿತ್ರ ಅನ್ನಿಸ್ತು.

shivu.k said...

ಸತ್ಯನಾರಾಯಣ ಸರ್,

ನನ್ನ ಲೇಖನದಲ್ಲಿ ಪ್ರತಿಬಾರಿ ಫೋಟೋ ಇದ್ದೇ ಇರುತ್ತಿತ್ತು. ಫೋಟೊ ಹಾಕಿದಾಗ ನಮ್ಮ ಕಲ್ಪನೆ ಫೋಟೋದ ಚೌಕಟ್ಟಿನಲ್ಲಿಯೇ ಇರುತ್ತಿತ್ತು. ಅದಕ್ಕೇ ಈ ಬಾರಿ ಈ ಲೇಖನದ ಸಂಭಾಷಣೆಯ ಪ್ರತಿಹಂತವೂ ಒಂದೊಂದು ಚಿತ್ರವಾಗಿ ಕಲ್ಪನೆಯಲ್ಲಿ ತೆರೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಫೋಟೋವನ್ನು ಈ ಲೇಖನದ ಮಟ್ಟಿಗೆ ಹೊರಗೆ ನಿಲ್ಲಿಸಿದ್ದೇನೆ. ಮುಂದಿನ ಲೇಖನದಲ್ಲಿ ಪೋಟೋಗಳು ಇದ್ದೇ ಇರುತ್ತವೆ.

ನನ್ನ ಲೇಖನ ಮೆಚ್ಚಿದ್ದೀರಿ..ಅದಕ್ಕಿಂತ ಮುಖ್ಯವಾಗಿ ನಿಮ್ಮ ಅಭಿಪ್ರಾಯದಲ್ಲಿ ಒಂದು ಕುತೂಹಲಕಾರಿ ಮಾಹಿತಿಯನ್ನು ನಾಯಿಯ ನಡುವಳಿಕೆ ಬಗ್ಗೆ ವಿವರಿಸಿದ್ದೀರಿ. ಅದು ಇಷ್ಟವಾಯಿತು. ಈ ಜೀವ ಜಗತ್ತು ಖಂಡಿತ ಒಂದು ವಿಶ್ಮಯಲೋಕವೇ ಸರಿ.

ಧನ್ಯವಾದಗಳು.

shivu.k said...

ರಾಜೀವ್ ಸರ್,'

ನಿಮ್ಮ ಮಾತು ನಿಜ "ಒಬ್ಬರ ಅಳಿವು ಇನ್ನೊಬ್ಬರ ಬದುಕಿನ ಉಳಿವು". ನನ್ನ ಲೇಖನದ ಒಟ್ಟರ್ಥವನ್ನು ಸೊಗಸಾದ ವಾಕ್ಯದಲ್ಲಿ ಹೇಳಿದ್ದೀರಿ....

ಮತ್ತೆ ನಿಮ್ಮ ಬೈಕನ್ನು ಹೊರಗೆ ನಿಲ್ಲಿಸಲಿಲ್ಲವಾದ್ದರಿಂದ ನಂಬರ್ ಪ್ಲೇಟ್ ಆಳಿಸಿಹೋಗದೇ ಇರಬಹುದು. ಆದ್ರೆ ಒಳಗಡೆ ನಿಂತಿದ್ದರೂ ಏನಾದರೂ ಬದಲಾವಣೆ ಖಂಡಿತ ಆಗಿರುತ್ತದೆ. ಒಮ್ಮೆ ಪರೀಕ್ಷಿಸಿ ನೋಡಿ. ನಂತರ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಧನ್ಯವಾದಗಳು.

shivu.k said...

ಸಂತೋಷ್,

ನೀವೆಲ್ಲಾ ನೀಡುವ ಸ್ಪೂರ್ತಿಯಿಂದ ನನಗೆ ಇಂಥ ವಿಚಾರಗಳ ಹಿಂದೆ ಬೀಳುತ್ತೇನೆ. ಅದರ ಆನಂದವನ್ನು ಆನುಭವಿಸಿ ನಿಮ್ಮೊಂದಿಗೂ ಹಂಚಿಕೊಳ್ಳುತ್ತೇನೆ. ಹೀಗೆ ಬರುತ್ತಿರಿ..ಧನ್ಯವಾದಗಳು.

shivu.k said...

ಬಾಲು ಸರ್,

ನಮ್ಮ ಬದುಕಿನಲ್ಲಿ ಹಾಗೂ ಹೊರ ಜಗತ್ತಿನಲ್ಲಿ ಏನೇ ಬದಲಾವಣೆಗಳಾಗುತ್ತಿದ್ದರೂ ಇನ್ನಷ್ಟು ಅಭಿವೃದ್ಧಿಹೊಂದುತ್ತಿದ್ದರೂ ಅದಕ್ಕೆ ತಕ್ಕಂತೆ ಪೂರಕವಾಗಿ ಹೀಗೆಲ್ಲಾ ಆಗೇ ತೀರುತ್ತದೆ ಅಲ್ವ...ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ ಅಭಿವೃದ್ದಿಗೆ ಸರಿಸಮನಾಗಿ ಇಂಥವರು ಹುಟ್ಟಿಕೊಳ್ಳುತ್ತಾರೆ ಅನ್ನುವುದು ನನ್ನ ಅನಿಸಿಕೆ.

ನಿಮ್ಮ ಮಾತನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ ಸರ್.

ಧನ್ಯವಾದಗಳು.

shivu.k said...

ಚಿತ್ರಾ ಮೇಡಮ್,

ಇಂಥವರಿಂದ ಕಲಿಯುವುದು ನಮ್ಮ ಬದುಕಿನಲ್ಲಿ ತುಂಬಾ ಇದೆ ಅಲ್ವಾ...ಮತ್ತೆ ನೀವು ಹೇಳಿದಂತೆ ನಾನು ಪ್ರಯತ್ನಿಸುತ್ತೇನೆ. ಹಾಗೆ ನನಗೇ ಇದೇ ರೀತಿ ರಸ್ತೆಯಲ್ಲಿ ಕೊಡೆ ರಿಪೇರಿ ಮಾಡುವವರು, ಬೀಗ ರಿಪೇರಿ ಮಾಡುವವರು, ಪ್ಲಾಸ್ಟಿಕ್ ರಿಪೇರಿಯವರು, ಮೊರ ಸಾರಿಸುವ ಹೆಂಗಸರು ಇವರ ಬಗ್ಗೆ ನನಗೇ ಕುತೂಹಲವಿದೆ. ನೋಡೋಣ ಮುಂದೊಂದು ದಿನ ಅವರೇ ನನಗೆ ಎಡತಾಕಬಹುದು...

ಧನ್ಯವಾದಗಳು.

shivu.k said...

ಪ್ರಶಾಂತ್ ಭಟ್,

ಲೇಖನವನ್ನು ಮೆಚ್ಚಿದ್ದಲ್ಲದೇ ಆ ವ್ಯಕ್ತಿಯ ಬಗ್ಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ.

ಮತ್ತೆ ನೀವು ಹೇಳಿದಂತೆ ಆತನ ಬಣ್ಣ ಆರು ತಿಂಗಳಲ್ಲಿ ಹೋಗುವುದಿಲ್ಲ. ಕಾರಣ ನಾವಿರುವ ಮನೆಯ ರಸ್ತೆಗಳಲ್ಲಿ ನಾಯಿಗಳಿಲ್ಲ. ಆದ್ರೆ ಮೊದಲಿದ್ದ ಹಳೆ ಮನೆಯಲ್ಲಿ ನಮ್ಮ ಮುಂದಿನ ರಸ್ತೆಯೇ ಮೂರ್ನಾಲ್ಕು ನಾಯಿಗಳಿಗೆ ಮನೆಯಾಗಿದ್ದರಿಂದ ನಂಬರ್ ಪ್ಲೇಟ್ ಅಳಿಸಿಹೋಗಿತ್ತು.

ಧನ್ಯವಾದಗಳು.

Naveen ಹಳ್ಳಿ ಹುಡುಗ said...

ಶಿವಣ್ಣ ಕಲೆಗೆ ಬೆಲೆ ಕಟ್ಟುವ ನಿಮ್ಮಂತಹವರು ಇರುವರೆಗೂ ಯಾವುದೇ ಕಲೆ ಜೀವಂತವಗಿರುತ್ತೆ...

umesh desai said...

ರೀ ಶಿವು ಅದೇಗ್ರಿ ನಿಮಗೆ "ಸಾಮಾನ್ಯರಲ್ಲಿ ಅಸಾಮಾನ್ಯರು" ಯಾವಾಗಲೂ ಭೇಟಿಯಾಗ್ತಾರೆ ನಿಮ್ಮದು ವಂಡರ್ ಗಣ್ಣು ಇರಬೇಕು ನೋಡ್ರಿ

ಜಿ.ಎಸ್.ಬಿ. ಅಗ್ನಿಹೋತ್ರಿ said...

ha ha ha... must :)

Pramod said...

ಲೇಖನ ಸೂಪರ್. ನರೇಷನ್ ನೈಸ್.
ಕೆಲವೊ೦ದು ಟೈಪಿ೦ಗ್ ದೋಷಗಳಿವೆ ಅನಿಸಿದೆ. ಉದಾ: ದೂಳು(ಧೂಳು), ಹೊರಸಿ(ಒರಸಿ), ಸಂಬಂದ(ಸ೦ಬ೦ಧ) ಮತ್ತು ಹುಚ್ಚೆ(ಉಚ್ಚೆ).

ಬರೀತಾ ಇರ್ರಿ :)

b.saleem said...

ಶಿವು ಸರ್,
ಕೆಲಸವಿಲ್ಲದೆ ತಿರುಗಾಡುವ ನಿರುದ್ಯೋಗಿ ಕಲಾವಿದರಿಗೆ ನಿವು ಪರಿಚಯಿಸಿದ ಕಲಾವಿದನೆ ಸ್ಪೂರ್ತಿ.
ನಿಮ್ಮ ರೇಡಿಯೊ ಸಂದರ್ಶನ ತುಂಬಾ ಚನ್ನಾಗಿದೆ

ಸುಧೇಶ್ ಶೆಟ್ಟಿ said...

ಅಯ್ಯೋ...!

ನಾನು ಪ್ರಕಾಶಣ್ಣ... ಶಿವಣ್ಣ... ಅ೦ತ ಯಾವಾಗಲೂ ಕಮೆ೦ಟು ಮಾಡುವುದರಿ೦ದ ಅಭ್ಯಾಸ ಬಲದಿ೦ದ ಪ್ರಕಾಶಣ್ಣ ಎ೦ದು ಬರೆದುಬಿಟ್ಟೆ... ತಪ್ಪು ತಿಳಿದುಕೊಳ್ಳಬೇಡಿ ಶಿವಣ್ಣ...

PARAANJAPE K.N. said...

ಶಿವೂ
ಚೆನ್ನಾಗಿದೆ. ನಮ್ಮ ಸುತ್ತ ದೈನ೦ದಿನ ಜೀವನದಲ್ಲಿ ನಡೆಯುವ ಪ್ರಸಂಗವನ್ನೇ ರಸವತ್ತಾಗಿ ತೇಜಸ್ವಿಯವರು ಬರೆವ೦ತೆ ನೀವು ಬರೆದಿದ್ದೀರಿ. ಒ೦ದು ಹೊಸ ವಿಚಾರ ತಿಳಿದ೦ತಾಯಿತು. ಇನ್ನಷ್ಟು ಬರೆಯಿರಿ.

shivu.k said...

ಕ್ಷಣ ಚಿಂತನೆ ಸರ್,

ಶೀರ್ಷಿಕೆ ಕ್ಯಾಚಿಯಾಗಿರಲಿ ಅಂತ ಆ ಸಾಲು ಬರೆದೆ.

ಆತನ ಸ್ವಾಭಿಮಾನ ನನಗೂ ಇಷ್ಟವಾಯಿತು. ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...

shivu.k said...

ಉಮೇಶ್ ಸರ್,

ನಾಯಿಗಳಿಂದ ಯಾರಿಗೆ ಏನು ಉಪಯೋಗವೋ ಅದನ್ನು ಮಾತ್ರ ಅವರು ಗಮನಿಸುತ್ತಿರುತ್ತಾರೆ ಅನ್ನುವುದಕ್ಕೆ ಇದು ಉದಾಹರಣೆ ಅಲ್ವಾ..

ನಾಯಿಗಳು ಎಲ್ಲೆಲ್ಲಿ ಕಾಲೆತ್ತುತ್ತವೆ ಅನ್ನುವುದು ನನಗೂ ಸರಿಯಗಿ ಗೊತ್ತಿರಲಿಲ್ಲ.

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ನವೀನ್,

ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

shivu.k said...

ದೇಸಾಯಿ ಸರ್,

"ಸಾಮಾನ್ಯರಲ್ಲಿ ಅಸಾಮಾನ್ಯರು" ಈ ಪದಗಳೇ ಚೆನ್ನಾಗಿದೆಯಲ್ಲಾ ಸರ್, ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಆಗ್ನಿಹೋತ್ರಿ ಸರ್,

ಧನ್ಯವಾದಗಳು.

shivu.k said...

ಪ್ರಮೋದ್,

ನೀವು ನನ್ನ ಬರವಣಿಗೆಯ ದೋಷಗಳನ್ನು ಗುರುತಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್...ಖಂಡಿತ ತಿದ್ದುತ್ತೇನೆ. ಮತ್ತೆ ಲೇಖನವನ್ನು ಮೆಚ್ಚಿದ್ದಕ್ಕೂ ಮತ್ತೊಮ್ಮೆ ಥ್ಯಾಂಕ್ಸ್...

shivu.k said...

ಸಲೀಂ

ಈತ ಅನೇಕರಿಗೆ ಖಂಡಿತ ಸ್ಪೂರ್ತಿ. ಲೇಖನವನ್ನು ಮೆಚ್ಚಿದ್ದಕ್ಕೆ ಮತ್ತೆ ನನ್ನ ರೇಡಿಯೋ ಸಂದರ್ಶನ ಕೇಳಿದ್ದಕ್ಕೆ ಧನ್ಯವಾದಗಳು

shivu.k said...

ಸುಧೇಶ್,

ನೀವು ಹೇಳಿರುವುದು ಅಭ್ಯಾಸಬಲದಿಂದ ಅಂತ ನನಗೆ ಗೊತ್ತು. ಅವರ ಬ್ಲಾಗಿಗೆ ಹೋಗಿ ನಂತರ ನನ್ನ ಬ್ಲಾಗಿಗೆ ಅದೇ ಗುಂಗಿನಲ್ಲಿ ಬಂದಾಗ ಹೀಗೆ ಆಗುವುದುಂಟು. ಮತ್ತೆ ನಾನು ಖಂಡಿತ ತಪ್ಪು ತಿಳಿದುಕೊಳ್ಳಲ್ಲ...

ಮತ್ತೊಮ್ಮೆ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.

shivu.k said...

ಪರಂಜಪೆ ಸರ್,

ನೀವು ಹೇಳುವುದು ನಿಜ ಸರ್, ದೈನಂದಿನ ಜೀವನದಲ್ಲಿ ಕೆಲವು ಸೂಕ್ಷ್ಮಗಳನ್ನು ಗಮನಿಸಿದರೇ ಬಲು ಮಜವಿರುತ್ತೆ ಸರ್. ಅದನ್ನು ನಾನು enjoy ಮಾಡುತ್ತಿರುತ್ತೇನೆ. ನಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ಪ್ರೋತ್ಸಾಹದಿಂದ ನಾನು ಇನ್ನಷ್ಟು ಖಂಡಿತ ಬರೆಯುತ್ತೇನೆ..ಧನ್ಯವಾದಗಳು.

Keshav.Kulkarni said...

ಸೂಪರ್ ಶಿವು!

ಸವಿಗನಸು said...

ನಾಯಿಗಳಿಂದ ನೌಕರಿಗಳು ಸಿಗುತ್ತಿವೆಯಲ್ಲ..... ಆ ಕಲಾವಿದನ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನ ಮೆಚ್ಚಲೆಬೇಕು...ಚೆನ್ನಾಗಿ ನಿರೂಪಿಸಿದ್ದೀರಾ ಶಿವು...

Unknown said...

ಶಿವೂ ಸಾರ್,
ನಿಮ್ಮ ಅನುಭವಗಳು ಸಕತ್ತು... ನನ್ನ ಬೈಕ್ ನ ನಂಬರ್ ಕೂಡ ಅಳಿಸಿ ಹೋಗಿದೆ... ಸಿಕ್ಕರೆ ಆ ಕಲಾವಿದನ ಕೈಯಲ್ಲೇ ಬರೆಸಿಕೊಳ್ಳುವೆ :)...

RAMU said...

ಅದಕ್ಕೆ ದೊಡ್ಡವರು ಹೇಳುತ್ತಾರೆ ನಾಯಿ ನಾರಾಯಣ ಸಮಾನ ಅಂತ. ಆ ನಾರಾಯಣನೇ ನಾಯಿಯ ರೂಪದಲ್ಲಿ ಬಂದು ಈ ಕಲಾವಿದನಿಗಾಗಿ ಬಂದಿದ್ದಾನೆ.
'ಹುಟ್ಸಿದ ದೇವರು ಹುಲ್ಲು ಮೇಯಿಸದೇ ಇರ್ಥಾನ' ಅ ದೇವರೇ ನಾನಾ ರೂಪದಲ್ಲಿ ಬಂದು ಈ ರೀತಿ ನೆರವಾಗುತ್ತಾನೆ
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರಿತಿಸಲಾದೆನು ನಮ್ಮೊಳಗೆ......
ಹಾಗೆ ಶಾಲೆಯಲ್ಲಿ ಓದಿದ ಈ ಪದ್ಯ ನೆನಪಿಗೆ ಬಂತು.
ನೆನಪಿಸದ್ದಕ್ಕೆ ಧನ್ಯವಾದಗಳು.

--
RAMU M
9480427376

ಸಾಗರದಾಚೆಯ ಇಂಚರ said...

Super Sir,
chennagide niroopane, late agiddakke kshamisi

ಶರಶ್ಚಂದ್ರ ಕಲ್ಮನೆ said...

ಶಿವು ಸರ್,
ಲೇಖನ ಹಾಸ್ಯಮಯವಾಗಿದೆ. ಹಾಸ್ಯವನ್ನು ಬದಿಗಿಟ್ಟು ಸೀರಿಯಸ್ ಆಗಿ ಆ ವ್ಯಕ್ತಿಯ ಬಗ್ಗೆ ಯೋಚನೆ ಮಾಡಿದರೆ ಮನ ನೋಯುತ್ತದೆ. ಅವನ ಕಷ್ಟ ನೆನೆಸಿಕೊಂಡು ಮನ ಮರುಗಿತು. ಒಳ್ಳೆಯ ಲೇಖನಕ್ಕೆ ವಂದನೆಗಳು..

shivu.k said...

ಕುಲಕರ್ಣಿ ಸರ್,

ಧನ್ಯವಾದಗಳು.

shivu.k said...

ಮಹೇಶ್ ಸರ್,

ನಿಮ್ಮ ಮಾತು ನಿಜ ನಾಯಿಗಳಿಂದಲೂ ನೌಕರಿ ಸಿಗುತ್ತಲ್ವ...
ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ..

shivu.k said...

ರವಿಕಾಂತ್ ಸರ್,

ಆ ಕಲಾವಿದ ಸಿಕ್ಕರೆ ನಿಮ್ಮಲ್ಲಿಗೆ ಕಳಿಸುತ್ತೇನೆ...

ಧನ್ಯವಾದಗಳು.

shivu.k said...

ರಾಮು,

ನಾಯಿ ನಾರಯಣ ನಿಮ್ಮ ನಿಜ ಕಣ್ರಿ...ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಹೊಸತೆನಿಸುತ್ತೆ. ಮತ್ತೆ ನೀವು ಹೇಳಿದ ಎಲ್ಲೋ ಹುಡುಕಿದೆ....ಕವನ ನನಗಂತೂ ತುಂಬಾ ಇಷ್ಟ.
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ತಡವಾಗಿದ್ದಕ್ಕೆ ನನಗೆ ಬೇಸರವಿಲ್ಲ. ಮತ್ತೆ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಶರತ್,

ತುಂಬ ದಿನಗಳ ನನ್ನ ಬ್ಲಾಗಿಗೆ ಬಂದಿದ್ದೀರಿ. ಸ್ವಾಗತ.

ವಿಚಾರ ಗಂಭೀರವಾಗಿದ್ದರೂ ಅದರೊಳಗಿನ ಹಾಸ್ಯವೆನ್ನುವುದು ಬದುಕಿನ ಭಾಗವಾಗಿಬಿಡುತ್ತದೆ. ಆತನಿಗೆ ಇದು ಗೊತ್ತೋ ಇಲ್ಲವೋ ಅವನ ಮಾತು ಕೇಳಿ ನನಗೆ ಹಾಗೆ ಅನ್ನಿಸಿತು.

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ.

Anonymous said...

ಹೀಗೆ ನನ್ನ ಕಾರ್ಯಕಾರಿ ಒತ್ತಡಗಳ ಕಾರಣ ನಿಮ್ಮ ಬ್ಲಾಗ್ ಕಡೆ ಬರದೆ ಸುಮಾರು ದಿನಗಳಾಗಿತ್ತು.. ಇವತ್ತು ಬಂದೆ... ಎಲ್ಲವೂ ಭಿನ್ನ ನಿಮ್ಮ ಬ್ಲಾಗಲ್ಲಿ.. ಇಷ್ಟವಾಗುತ್ತವೆ ಒಂದೇ ನೋಟಕ್ಕೆ..

shivu.k said...

ಶಮ,

ನನ್ನ ಬ್ಲಾಗಿಗೆ ಬಿಡುವು ಮಾಡಿಕೊಂಡು ಬಂದಿದ್ದೀರಿ. ಬ್ಲಾಗಿನ ಲೇಖನಗಳು ವಿಭಿನ್ನವೆಂದಿದ್ದಕ್ಕೆ ಧನ್ಯವಾದಗಳು.

ವನಿತಾ / Vanitha said...

ಶಿವೂ, ಎಷ್ಟು ಚೆನ್ನಾಗಿ ವಿವರಿಸಿದ್ದೀರಿ..ಹಾಸ್ಯದೊಂದಿಗೆ ಒಳ್ಳೆಯ ನಿರೂಪಣೆ. ಕಲಾವಿದನ ಮಾತುಗಳು ಇಷ್ಟವಾದುವು..ಹಾಗೇನೆ ನಿಮಗೂ ನಿಮ್ಮ ಮನೆಯವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು..

shivu.k said...

ವನಿತಾ,

ನನ್ನ ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ, ಕಲಾವಿದನನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತೆ ನಿಮಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ವಿನುತ said...

ಬದುಕಿನಲ್ಲಿ ದುಡಿದೇ ಸ್ವಾಭಿಮಾನದಿ೦ದ ಬದುಕಬೇಕೆ೦ದಿದ್ದರೆ ಅವಕಾಶಗಳಿಗೇನು ಕೊರತೆಯಿಲ್ಲ ಎನ್ನುವುದನ್ನು ಒ೦ದು ನೈಜ ಉದಾಹರಣೆಯೊ೦ದಿಗೆ ಸೊಗಸಾಗಿ ವಿವರಿಸಿದ್ದೀರಿ ಶಿವು. ಧನ್ಯವಾದಗಳು.

shivu.k said...

ವಿನುತಾ,

ನೈಜ ಉದಾಹರಣೆಗಳ ಬಗ್ಗೆ ಬರೆಯುವುದಕ್ಕೆ ನನಗೆ ತುಂಬಾ ಇಷ್ಟ. ಮತ್ತೆ ಅದರಲ್ಲಿ ನಡೆದಿದ್ದನ್ನು ಬರೆಯುವಲ್ಲಿ ನಮ್ಮ ಹೆಚ್ಚುಗಾರಿಕೆಯೇನು ಇರುವುದಿಲ್ಲ. ಆದಕ್ಕೆ ಆ ಸನ್ನಿವೇಶವನ್ನು enjoy ಮಾಡುವುದು ಮುಖ್ಯ. ಅದನ್ನು ನಾನು ಖಂಡಿತ ಮಾಡುತ್ತೇನೆ.

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.