Tuesday, July 21, 2009

ಆಕಾಶವಾಣಿ ರೇಡಿಯೋದಲ್ಲಿ ARPS ಬಗ್ಗೆ ಸಂದರ್ಶನ.

ಆತ್ಮೀಯ ಬ್ಲಾಗ್ ಗೆಳೆಯರೆ,

ಲಂಡನ್ನಿನ ರಾಯಲ್ ಫೋಟೋಗ್ರಫಿ ಸೊಸೈಟಿಯ ಅಂತರರಾಷ್ಟ್ರೀಯ ಮನ್ನಣೆ ವಿಚಾರವಾಗಿ ಬೆಂಗಳೂರಿನ ಆಕಾಶವಾಣಿಯ ಯುವವಾಣಿ ಕಾರ್ಯಕ್ರಮದಲ್ಲಿ ಸುಮಂಗಲ ಮುಮ್ಮಿಗಟ್ಟಿ ಅವರು ನನ್ನನ್ನು ಸಂದರ್ಶಿಸಿದರು ಈ ರೇಡಿಯೋ ಸಂದರ್ಶನವನ್ನು ನಿಮ್ಮೊಂದಿಗೆ ಹಂಚಿಕೊಳ್ಳವ ಆಸೆ. ಸಂದರ್ಶನವನ್ನು download ಮಾಡಿಕೊಂಡು ಕೇಳಲು ಈ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ.

http://rapidshare.com/files/258304806/Shivu__Radio_interview_.mp3.html

ನಾನು ಕಳಿಸಿಕೊಟ್ಟ ಆಡಿಯೋ ಪೈಲನ್ನು ಅಂತರಜಾಲದಲ್ಲಿ ನಮಗೆಲ್ಲರಿಗೂ ತಲುಪುವಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಟ್ಟ ಗೆಳೆಯ ರಾಜೇಶ್ ಮಂಜುನಾಥ್‌ಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ.

ಇದೇ ಸಂದರ್ಶನವನ್ನು ನೇರವಾಗಿ ಕೇಳಲು ಈ ಕೆಳಗಿನ [shivu_radio_interview]ಲಿಂಕ್ ಕ್ಲಿಕ್ಕಿಸಿ

Title: shivu_radio_interview
Artist: shivu
Description: - Interview for ARPS Distinction
Tags: Audio
Rating Played: ( 4 ) Duration: ( 18-00 ) Uploaded: 22-07-09

ಹೀಗೆ ನೇರವಾಗಿ ಕೇಳಲು ಲಿಂಕ್ ಒದಗಿಸಿಕೊಟ್ಟ ರೂಪಶ್ರೀಯವರಿಗೆ ಧನ್ಯವಾದಗಳು.

ಸಂದರ್ಶನ ಕೇಳಿದ ನಂತರ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ಪ್ರತಿಕ್ರಿಯಿಸಿ...

ಶಿವು.ಕೆ ARPS.

28 comments:

ರೂpaश्री said...

ಶಿವೂ ಅವರೆ,
ಆಕಾಶವಾಣಿಯಲ್ಲಿ ನಿಮ್ಮ ಸಂದರ್ಶನ ಕೇಳಿ ಬಹಳ ಖುಷಿ ಆಯಿತು. ಬಹಳಷ್ಟು ಒಳ್ಳೆಯ ಟಿಪ್ಸ್ ಕೂಡ ಕೊಟ್ಟಿದ್ದೀರಿ.
ಮುಂದೆಯೂ ಹೀಗೆ ಹತ್ತು ಹಲವು ಪ್ರಶಸ್ತಿ ಗಳಿಸಿ, ನಿಮ್ಮೆಲ್ಲಾ ಆಸೆಗಳು ಈಡೇರಲೆಂದು ಹಾರೈಸುತ್ತೇನೆ.

shivu.k said...

ರೂಪಶ್ರೀ,

ರೇಡಿಯೋ ಸಂದರ್ಶನವನ್ನು ಕೇಳಿದ್ದಕ್ಕೆ ಧನ್ಯವಾದಗಳು...ನಿಮ್ಮ ಆಶಯಗಳು ನನಗೆ ಸ್ಪೂರ್ತಿ...

Unknown said...

Olleya sandarshana. chennagi matanadidderi
dhanyavadagalu

Ittigecement said...

ಶಿವು ಸರ್...

ತುಂಬಾ ಚೆನ್ನಾಗಿತ್ತು...

ನಿಮ್ಮ ಮಾಹಿತಿ ತುಂಬ ಉಪಯುಕ್ತವಾಗಿವೆ...

ನಿಮ್ಮ ಪ್ರತಿಭೆಯನ್ನು ಸರಿಯಾಗಿ ಗುರುತಿಸಿಲ್ಲ ಅನ್ನುವದು ನನ್ನ ಭಾವನೆ...

ನಿಮಗೆ ಇನ್ನಷ್ಟು ಯಶಸ್ಸನ್ನು ಕೋರುತ್ತೇನೆ...

shivu.k said...

Shreeshum sir,

ಸಂಧರ್ಶನವನ್ನು ಕೇಳಿದಕ್ಕೆ ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ಇರುವ ಕಡಿಮೆ ಸಮಯಾವಕಾಶದಲ್ಲಿ ನಾನು ಕಲಿತ ಅನುಭವವನ್ನು ಹೇಳಿದ್ದೇನೆ...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

Unknown said...

ಶಿವು ನಿಮ್ಮ ಸಂದರ್ಶನವನ್ನು ಕೇಳುತ್ತಲೇ ಇದನ್ನು ಟೈ ಪ್ ಮಾಡುತ್ತಿದ್ದೇನೆ. ರೇಡಿಯೋದಲ್ಲಿ ನಿಮ್ಮ ಧ್ವನಿ ಕೇಳಲು ಬಹಳ ಚೆನ್ನಾಗಿದೆ. ಇದರರ್ಥ ನೇರವಾಗಿ ಕೇಳಲು ಚೆನ್ನಾಗಿಲ್ಲ ಎಂದಲ್ಲ ಮತ್ತೆ! ನಿಜವಾಗಲೂ ಒಳ್ಳೆಯ ಸಂದರ್ಶನ. ಫೋಟೋಗ್ರಾಫಿಕ್ ಬಗ್ಗೆ ಕೆಲವೊಂದು ತಾಂತ್ರಿಕ ಅಂಶಗಳನ್ನು, ಪಾರಿಭಾಷಿಕ ಪದಗಳನ್ನು ಸರಳವಾಗಿ ತಿಳಿಸಿಕೊಡುತ್ತಿದ್ದೀರ. ನಿಮಗೆ ಮಾರ್ಗದರ್ಶನ ನೀಡಿದ ಹಿರಯರನ್ನು ನೆನಪು ಮಾಡಿಕೊಂಡಿದ್ದು ಅರ್ಥಪೂರ್ಣವಾಗಿತ್ತು. ಥ್ಯಾಂಕ್ಸ್.

Unknown said...

ಶಿವೂ ಸಾರ್,
ತುಂಬಾ ತುಂಬಾ ಕೆಲಸದ ಒತ್ತಡದ ನಡುವೆ ಈಗ್ಗೆ ಕೆಲವು ದಿನಗಳಿಂದ ಬ್ಲಾಗ್ ಬರೆಯಲು ಅಥವಾ ಓದಲು ಸಮಯ ಸಿಕ್ಕಿರಲಿಲ್ಲ... ಕ್ಷಮೆಯಿರಲಿ.. :-) ... ನಿಮ್ಮ ಸಂದರ್ಶನದ ವಿಷಯ ಕೇಳಿ ಖುಷಿಯಾಯಿತು...ಅಭಿನಂದನೆಗಳು ... ಇನ್ನೂ ಹಲವಾರು ಪ್ರಶಸ್ತಿ ಗಳಿಸಿ... ನಿಮ್ಮ ಕನಸುಗಳು ನನಸಾಗಲಿ... ಹೀಗೆ ಜೀವನದಲ್ಲಿ ಉನ್ನತಿ ಸಾಧಿಸಿ ಎಂದು ಪ್ರೀತಿಯಿಂದ ಹಾರೈಸುವೆ...

shivu.k said...

ಸತ್ಯನಾರಾಯಣ ಸರ್,

ರೇಡಿಯೋ ಸಂದರ್ಶನದಲ್ಲಿ ನನ್ನ ದ್ವನಿಯನ್ನು ಮೆಚ್ಚಿದ್ದೀರಿ. ನಿಜಕ್ಕೂ ನನ್ನ ದ್ವನಿ ಸುಮಾರಾಗಿದೆ. ಸಂದರ್ಶನಕ್ಕೆ ಮೊದಲು ಏನು ಮಾತಾಡುವುದು ಅನ್ನಿಸಿತ್ತು. ಸುಮಂಗಲ ಮುಮ್ಮಿಗಟ್ಟಿಯವರು ನಿರೂಪಕಿಯಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದವರು. ಅವರು ನನಗೆ ಧೈರ್ಯವನ್ನು ತುಂಬಿ ಪ್ರೋತ್ಸಾಹಿಸಿದರು. ನಾನು ಸಹಜವಾಗಿ ಮಾತಾಡಿದ್ದರೇ ಅದಕ್ಕೆ ಕಾರಣ ನಿರೂಪಕರಾದ್ದರಿಂದ ಇದರ ಯಶಸ್ಸು ಅವರಿಗೇ ಸಲ್ಲಬೇಕು...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ರವಿಕಾಂತ್ ಗೋರೆ ಸರ್,

ಕೆಲಸದ ಒತ್ತಡದ ನಡುವೆವೂ ನನ್ನ ಬ್ಲಾಗಿಗೆ ಬಂದಿದ್ದೀರಿ...ರೇಡಿಯೋ ಸಂದರ್ಶನ ವಿಚಾರ ಕೇಳಿ ಅನಂದಿಸಿದ್ದು ನನಗೆ ಖುಷಿ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

NiTiN Muttige said...

ರೆಡಿಯೊ ಕೇಳಲು ಆಗಿರಲಿಲ್ಲ...ಕೇಳಿಸಿದಕ್ಕೆ, ಉತ್ತಮ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು..

shivu.k said...

ನಿತಿನ್,

ಸಂದರ್ಶನ ಕೇಳಿ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಸವಿಗನಸು said...

ಅಭಿನಂದನೆಗಳು ಶಿವು....ನಿಮ್ಮ ರೇಡಿಯೋ ಸಂದರ್ಶನದ ವಿಷಯ ಕೇಳಿ ಸಂತೋಷವಾಯಿತು!!!!!!! ಇನ್ನೂ ಹಲವಾರು ಪ್ರಶಸ್ತಿಗಳು ನಿಮ್ಮ ಪಾಲಾಗಲಿ... ನಿಮ್ಮ ಕನಸುಗಳು ನನಸಾಗಲಿ, ಜೀವನದಲ್ಲಿ ಉನ್ನತಿ ಸಾಧಿಸಿ ಎಂದು ತುಂಬು ಹೃದಯದಿ ಹಾರೈಸುವೆ.....

ಕ್ಷಣ... ಚಿಂತನೆ... said...

ಸರ್, ನಮಸ್ಕಾರ, ರೇಡಿಯೋ ಸಂದರ್ಶನ ಚೆನ್ನಾಗಿತ್ತು. ಅದರಲ್ಲಿನ ನಿಮ್ಮ ಸಾಧನೆ ಮತ್ತು ಫೋಟೋಗ್ರಫಿ ಕಲಿಯವವರಿಗೆ ಬೇಕಾದ ಟಿಪ್ಸ್ ಕೊಟ್ಟಿದ್ದೀರಿ. ಧನ್ಯವಾದಗಳು. ನಿಮ್ಮ ಮುಂದಿನ ಗುರಿಗಳು ಯಶಸ್ವಿಯಾಗಲಿ.

ವಿಶ್ವಾಸದೊಂದಿಗೆ,
ಚಂದ್ರಶೇಖರ ಬಿ.ಎಚ್.

PARAANJAPE K.N. said...

ಶಿವೂ, ಚೆನ್ನಾಗಿದೆ, ಅಭಿನಂದನೆಗಳು. ನಿಮಗೆ ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ಸಿಗಲಿ, ನಿಮ್ಮ ಪ್ರತಿಭೆಯ ಹೊಳಪು ಹೆಚ್ಚಲಿ, ಅದು ಇತರರಿಗೆ ಮಾರ್ಗದರ್ಶಿಯಾಗಲಿ ಎಂದು ಹಾರೈಸುವೆ.

shivu.k said...

ಮಹೇಶ್ ಸರ್,

ಸಂದರ್ಶನವನ್ನು ಕೇಳಿ ಪ್ರೋತ್ಸಾಹಿಸುತ್ತಿದ್ದೀರಿ...ಧನ್ಯವಾದಗಳು.

shivu.k said...

ಕ್ಷಣ ಚಿಂತನೆ ಸರ್,

ರೇಡಿಯೋ ಸಂದರ್ಶನ ಕೇಳಿದ್ದೀರಿ..ನಿಮ್ಮ ಪ್ರೋತ್ಸಾಹದ ಮಾತುಗಳು ನನಗೆ ಇನ್ನಷ್ಟು ಸ್ಪೂರ್ತಿ ನೀಡುತ್ತವೆ...

ಧನ್ಯವಾದಗಳು.

shivu.k said...

ಪರಂಜಪೆ ಸರ್,

ರೇಡಿಯೋ ಸಂದರ್ಶನ ಕೇಳಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ ಪ್ರೋತ್ಸಾಹ ನೀಡುತ್ತಿರಿ..

umesh desai said...

ಶಿವು ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ಲಭಿಸಲಿ ಇದು ನನ್ನ ಹಾರೈಕೆ

ರಾಜೀವ said...

ಶಿವು ಸರ್,

ಅಭಿನಂದನೆಗಳು. ಮತ್ತಷ್ಟು ಪ್ರಶಸ್ತಿಗಳು ನಿಮ್ಮದಾಗಲಿ.

ಸಂದರ್ಶನ ಕೇಳಿ ಸಂತೋಷವಾಯಿತು. ಚಿತ್ರಗಳನ್ನು ಸ್ವಯಂ ತೆಗೆಯುವ ಮುಂಚೆ ಬೇರೆಯವರು ತೆಗೆದ ಚಿತ್ರಗಳನ್ನು ನೋಡಿ ಆನಂದಿಸಬೇಕು, ಎಂದು ನೀವು ಹೇಳಿದ್ದು ಇಷ್ಟವಾಯಿತು.

ಹರೀಶ ಮಾಂಬಾಡಿ said...

nimma yashassige shubha haaraike

shivu.k said...

ದೇಸಾಯಿ ಸರ್,

ಧನ್ಯವಾದಗಳು.

shivu.k said...

ರಾಜೀವ್ ಸರ್,

ನನ್ನ ಸಂದರ್ಶನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...

shivu.k said...

ಹರೀಶ್ ಮಾಂಬಾಡಿ ಸರ್,

ಧನ್ಯವಾದಗಳು.

sunaath said...

ಶಿವು,
ನಿಮ್ಮ ಸಂದರ್ಶನ ಕೇಳಿ ತುಂಬಾ ಖುಶಿಯಾಯ್ತು.
ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

ವನಿತಾ / Vanitha said...

nimma sandarshana thumba chennagittu..olleya maahitiyannu kottiddeeri..abhinandanegalu..

ಜಲನಯನ said...

ಶಿವು
ನಿಮ್ಮ ಸಂದರ್ಶನ ಕೇಳಿದೆ, ವಿವರಣೆ ಚಿಗುರು ಪ್ರತಿಭೆಗಳಿಗೆ ಟಿಪ್ಸ್ ಚನ್ನಾಗಿ ಕೊಟ್ಟಿದ್ದೀರಿ...
ನಿಮಗೆ ಇನ್ನೂ ಉನ್ನತ ಪ್ರಶಸ್ತಿಗಳು ಸಿಗಲಿ..ಎಲ್ಲದಕ್ಕೂ ಮುಂಚೆ ಕನ್ನಡಿಗರು ನಿಮ್ಮ ಚಿತ್ರಗಳನ್ನು ನೋಡಬೇಕು...ಪ್ರದರ್ಶನ ಏನಾದರೂ ಮಾಡಿದ್ದೀರಾ..? ಇಲ್ಲವೆನ್ನುವುದಾದರೆ
ಈ ಬಗ್ಗೆ ಸ್ವಲ್ಪ ಗಂಭೀರವಾಗೇ ಯೋಚಿಸಿ.

ವಿನುತ said...

ಅಭಿನ೦ದನೆಗಳು ಶಿವು. ನಿಮ್ಮ ಯಶೋಗಾಥೆಯನ್ನು ಕೇಳಿ ತು೦ಬಾ ಸ೦ತೋಷವಾಯಿತು. ಹೆಮ್ಮೆಯೆನಿಸಿತು.ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗಲಿ.