Thursday, January 8, 2009

ನಿಮ್ಮೆಂಗುಸ್ರೂ.......ಪಕ್ಕದ ಮನೆ ಹೆಂಗಸ್ರೂ..........

"ಬನ್ನಿ ಬನ್ನಿ.......ಎಲ್ಲರೂ ಬನ್ನಿ.....ಕೈ ತೊಳೆದುಕೊಳ್ಳಿ.....ನಿಮೆಂಗುಸ್ರೂ............. ಪಕ್ಕದ ಮನೆ ಹೆಂಗಸ್ರೂ ಕಾಯ್ತಿದ್ದಾರೆ.... ಬನ್ನಿ..... "!!

ಮೂರ್ತಿ ಕರೆದಾಗ ಅಂತ ಕೆಮ್ಮಣುಗುಂಡಿ ಗಿರಿಧಾಮದ ಕಡೆಗೆ ಹೋಗುವ ದಾರಿಯಲ್ಲಿ ಸಿಕ್ಕುವ ಹೊನ್ನಮ್ಮನ ಹಳ್ಳದ ಬಳಿ ಇಬ್ಬನಿ ತಬ್ಬಿದ ಚಳಿಯ ವಾತಾವರಣದಲ್ಲೂ ನಮಗೆಲ್ಲಾ ಮೈ ಬಿಸಿಯಾಯಿತು....

ಅದೇನೆಂದು ನೋಡಲು ಹೋದರೆ ಮೂರ್ತಿ ಒಬ್ಬಬ್ಬರಿಗೆ ಒಂದೊಂದು ಕವರ್ ಕೊಡುತ್ತಾ .,

"ನೋಡಿ ಇದರಲ್ಲಿ ಇಬ್ಬರೂ ಇದ್ದಾರೆ ನಿಮಗ್ಯಾವುದು ಬೇಕೊ ಅದನ್ನು ತಿನ್ನಿ........ "

ತೆಗೆದು ನೋಡಿದರೆ ಅದರಲ್ಲಿ ಉಪ್ಪಿಟ್ಟು ಮತ್ತು ಕೇಸರಿ ಬಾತಿನ ಪಟ್ಟಣವಿತ್ತು...

ಹೊಸ ಜಾಗದಲ್ಲಿ ಹೊಸವಿಚಾರವಿರುವ ಹಾಗಿದೆಯಲ್ಲ .....

ನಿಮ್ಮೆಂಗಸ್ರೂ......ಪಕ್ಕದಮನೆ ಹೆಂಗಸ್ರೂ.....ತಿನ್ನುತ್ತಿರುವ ಘನಶ್ಯಾಮ್ ಮತ್ತು ಕಿಶೋರ್‍


ನಮ್ಮ ಕುತೂಹಲವನ್ನು ತಣಿಸಲಿಕ್ಕಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ವರದಿಗಾರರಾದ ತಿಪ್ಪೆರುದ್ರಪ್ಪ ವಿವರಣೆ ಕೊಟ್ಟರು.

ನಿಮ್ಮ ಕೈಲಿರುವ ಉಪ್ಪಿಟ್ಟು ನಿಮ್ಮೆಂಗುಸ್ರೂ....... ಅದನ್ನು ಹೇಗಿದ್ರು ಸಹಿಸಿಕೊಂಡು ತಿನ್ನುತ್ತೀರಿ.....ಅದರೆ ಅದೇ ಕೇಸರಿ ಬಾತ್ ಪಕ್ಕದ ಮನೆಯ ಹೆಂಗಸರಿದ್ದ ಹಾಗೆ ನೋಡಿಕೊಂಡು ತಿನ್ನುತ್ತೇವಲ್ಲ.... ಅಂದಾಗ ನಮ್ಮ ಕುತೂಹಲ ತಣಿದಿತ್ತು...

ಕಾರ್ಯಗಾರದಲ್ಲಿ ಭಾಗವಹಿಸಿದ್ದ ಒಟ್ಟು ಹನ್ನೆರಡು ಜನ ಛಾಯಾಗ್ರಾಹಕರು.


ಚಿಕ್ಕಮಗಳೂರಿನ ಪತ್ರಿಕಾ ಛಾಯಾಗ್ರಾಹಕರಿಗೆ ಒಂದು ದಿನದ ಫೋಟೋಗ್ರಫಿ ಕಾರ್ಯಗಾರ ನಡೆಸಿಕೊಡುವಂತೆ ಚಿಕ್ಕಮಗಳೂರಿನ ಪತ್ರಿಕಾ ಛಾಯಾಗ್ರಾಹಕರ ಸಂಘ ನನಗೆ ಮತ್ತು ಮಲ್ಲಿಕಾರ್ಜುನ್‌ಗೆ ಆಹ್ವಾನ ನೀಡಿದ್ದರಿಂದ ಇಬ್ಬರೂ ಹೊರಟಿದ್ದೆವು. ಕಡೂರಿನವರೆಗೆ ಪ್ರಯಾಣ ಚೆನ್ನಾಗಿದ್ದು ಅಲ್ಲಿಂದ ಚಿಕ್ಕಮಗಳೂರಿಗೆ ತಲುಪುವ ಹೊತ್ತಿಗೆ ರಸ್ತೆ ತುಂಬಾ ಗಾಯಗಳಾಗಿದ್ದರಿಂದ ನಮ್ಮ ದೇಹದ ನಟ್ಟು ಬೋಲ್ಟುಗಳು ಸಡಿಲಗೊಂಡಿದ್ದವು.

ನಮ್ಮ ಕ್ಯಾಮೆರಾ ಬ್ಯಾಗನ್ನು ಮೊದಲೇ ನಮ್ಮ ತೊಡೆಯ ಮೇಲೆ ಇರಿಸಿದ್ದರಿಂದ ಅವುಗಳು ಆರೋಗ್ಯವಾಗಿದ್ದವು.

ಮರುದಿನ ಬೆಳಿಗ್ಗೆ ಆರು ಗಂಟೆಗೆ ಆಗಲೇ ನಮ್ಮನ್ನು ಕರೆದೊಯ್ಯುವ ಮಿನಿಬಸ್ ನಮಗಿಂತ ಮೊದಲೆ ಎದ್ದು ಸಿದ್ದವಾಗಿಬಿಟ್ಟಿದೆ. ಅದರ ಉತ್ಸಾಹಕ್ಕೆ ಬೆರಗಾಗಿ ನಾವು ಬೇಗನೆ ಸಿದ್ದರಾಗಿ ಬಂದು ಮಿನಿಬಸ್ಸಲ್ಲಿ ಕುಳಿತೆವು.

ಮುಂಜಾನೆ ಮಂಜಿನ ವಾತಾವರಣದಲ್ಲಿ ಎಲ್ಲರೂ ಫೋಟೋ ತೆಗೆಯುವ ಹುರುಪಿನಲ್ಲಿ !

ಈ ಕಾರ್ಯಗಾರಕ್ಕೆ ಚಿಕ್ಕಮಗಳೂರಿನ ಪ್ರಜಾವಾಣಿ ವರದಿಗಾರ ಘನಶ್ಯಾಮ್, ಛಾಯಾಗ್ರಾಹಕ ಎ.ಎನ್. ಮೂರ್ತಿ, ಜಿಲ್ಲೆ ಸುದ್ದಿಗಾರ ಪತ್ರಿಕೆಯ ವರದಿಗಾರ ಮತ್ತು ಛಾಯಾಗ್ರಾಹಕ ಜಗದೀಶ್ ಭಕ್ತನಕಟ್ಟೆ, ಕಲಾವಿದ-ಛಾಯಾಗ್ರಾಹಕ ದಯಾನಂದ್, ಜಿಲ್ಲಾ ಸಮಾಚಾರ ಪತ್ರಿಕೆಯ ಉಪ ಸಂಪಾದಕ ಶಂಕರಗೌಡ ಪಾಟೀಲ, ಟಿ.ವಿ. ೯ ಛಾಯಾಗ್ರಾಹಕ ಎಸ್.ಅನಿಲ್, ಹೆಗ್ಗುರುತು ಪತ್ರಿಕೆಯ ಛಾಯಾಗ್ರಾಹಕ ಎಸ್.ವಿ.ಗಜೇಂದ್ರ, ಕನ್ನಡಪ್ರಭ ಛಾಯಾಗ್ರಾಹಕ ಕೆ.ಎನ್. ಕಿಶೋರ್‍ ಕುಮಾರ್, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ವರದಿಗಾರರಾದ ಬಿ. ತಿಪ್ಪೆರುದ್ರಪ್ಪ, ಹೊಸದಿಗಂತ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕ ಸಿ. ಸುರೇಶ್ ಭಾಗವಹಿಸಿದ್ದರು.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ಸಿನ ಹಿರಿಯ ವರದಿಗಾರ ತಿಪ್ಪೆರುದ್ರಪ್ಪನವರು ತಿಳಿಬೆಳಕಿನಲ್ಲಿ ನನ್ನ ಕ್ಯಾಮೆರಾಗೆ ಸೆರೆಸಿಕ್ಕಿದ್ದು ಹೀಗೆ !!


ನಮಗಿಂತ ಹಿರಿಯರು ಅಂಥ ಚಳಿಯಲ್ಲೂ ಮುಂಜಾನೆ ಬೇಗನೆ ಸಿದ್ದವಾಗಿ ಹೊಸದೇನೊ ಕಲಿಯುವ ಉತ್ಸಾಹದಲ್ಲಿದ್ದುದ್ದು ನಮಗಂತೂ ಹೊಸ ಹುರುಪು ಬಂದಿತ್ತು. ಚಿಕ್ಕಮಗಳೂರಿನಿಂದ ಕೆಮ್ಮಣ್ಣುಗುಂಡಿಗೆ ಹೋಗುವ ದಾರಿಯುದ್ದಕ್ಕೂ ಪರಿಚಯ, ಛಾಯಾಚಿತ್ರಗಳ ಬಗ್ಗೆ ಮಾತುಕತೆ, ಚಿಕ್ಕಮಗಳೂರಿನಲ್ಲಿರುವ ಛಾಯಾಗ್ರಾಹಣದ ಅವಕಾಶಗಳು, ಪಿಕ್ಟೋರಿಯಲ್ ಫೋಟೋಗ್ರಫಿ, ಲ್ಯಾಂಡ್‌ಸ್ಕೇಪ್, ಹಿಮದ ವಾತಾವರಣದಲ್ಲಿ ಫೋಟೋ ತೆಗೆಯುವ ತಾಂತ್ರಿಕ ವಿಚಾರಗಳು, ಪತ್ರಿಕಾ ಛಾಯಾಗ್ರಹಣದ ಸವಾಲುಗಳು ಮತ್ತು ಅವಕಾಶಗಳು, ಕುರುಕುಲು ತಿಂಡಿಗಳು, ಹರಟೆ, ಅನುಭವ ಪ್ರಯಾಣದ ಜೊತೆಯಲ್ಲೇ ನಡೆದಿತ್ತು.

ಕೆಮ್ಮಣ್ಣುಗುಂಡಿಯ ಒಂದು ಮುಂಜಾವಿನ ಲ್ಯಾಂಡ್ ಸ್ಕೇಪ್ ಚಿತ್ರ !


ಹೀಗೊಂದು ಪಿಕ್ಟೋರಿಯಲ್ ಚಿತ್ರವೂ ನಮ್ಮ ಕ್ಯಾಮೆರಾದ ಒಡಲಲ್ಲಿ !!


ಮತ್ತೊಂದು ಲ್ಯಾಂಡ್‌ಸ್ಕೇಪ್ ಚಿತ್ರ "ಒಂಟಿ ಮರ ಮುಂಜಾನೆಯ ತಿಳಿಬಿಸಿಲಲ್ಲಿ" !
ಹೋಗುವ ದಾರಿಯಲ್ಲಿ ಅಲ್ಲಲ್ಲಿ ಲ್ಯಾಂಡ್ ಸ್ಕೇಪ್‌ಗಳು, ಪಿಕ್ಟೋರಿಯಲ್ ಫೋಟೋಗಳು, ನಮ್ಮೆಲ್ಲರ ಕ್ಯಾಮೆರಾಗಳಿಗೆ ಸೆರೆಯಾದವು.
ಕೆಮ್ಮಣ್ಣುಗುಂಡಿ ಗಿರಿದಾಮ ತಲುಪಿದಾಗ ೧೧ ಗಂಟೆಯಾಗಿತ್ತು. ಅಲ್ಲಿ ಒಂದಷ್ಟು ಹೂವು, ಪಕ್ಷಿಗಳು, ಮಕ್ಕಳ ಫೋಟೋಗಳು ಸಿಕ್ಕವು. ನಂತರ ನಡೆದ ಸಂವಾದದಲ್ಲಿ ನಾವು ತೆಗೆದ ಪಿಕ್ಟೋರಿಯಲ್, ವೈಲ್ಡ್ ಲೈಪ್, ಚಿಟ್ಟೆ ಮತ್ತು ಇತರ ಕೀಟಗಳು, ಜರ್ನಲಿಸಂ ಚಿತ್ರಗಳನ್ನು ಪ್ರದರ್ಶಿಸಿದೆವು. ಅವುಗಳ ಬಗ್ಗೆ ಒಂದಷ್ಟು ಆರೋಗ್ಯಕರ ಚರ್ಚೆಯೂ ಮನಸ್ಸಿಗೆ ಮುದ ನೀಡಿತ್ತು.

ಲ್ಯಾಪ್ ಟಾಪ್‌ನಲ್ಲಿ ಚಿತ್ರಗಳ ಪ್ರದರ್ಶನ ಮತ್ತು ಸಂವಾದದ್ದಲ್ಲಿ ಮಲ್ಲಿಕಾರ್ಜುನ್ ಮತ್ತು ನಾನು.
ಊಟ ಮುಗಿಸಿ ಚಿಕ್ಕಮಗಳೂರಿಗೆ ಬರುವ ದಾರಿಯುದ್ದಕ್ಕೂ ಎಲ್ಲಾ ಛಾಯಾಗ್ರಾಹಕರು ಮತ್ತಷ್ಟು ಹುರುಪಿನಿಂದ ತಮ್ಮ ಕ್ಯಾಮೆರಾಗಳಿಗೆ ಕೆಲಸ ಕೊಟ್ಟಿದ್ದರು.

ಕೆಮ್ಮೆಣ್ಣು ಗುಂಡಿ ಗಿರಿಧಾಮದಲ್ಲಿ ಹೀಗೊಂದು ಸ್ಕೂಲ್ ಮಕ್ಕಳ ಪ್ರವಾಸ ಮತ್ತು ಪ್ರಕೃತಿ ಜೊತೆಯಲ್ಲಿ ಊಟ! ಇದು ನಮ್ಮ ಬಾಲ್ಯದ ಪ್ರಾಥಮಿಕ ಶಾಲಾ ಪ್ರವಾಸವನ್ನು ನೆನಪಿಸಿತ್ತು.


ನಾನು ಮತ್ತು ಮಲ್ಲಿಕಾರ್ಜುನ್ ಇಬ್ಬರನ್ನು ಈ ಛಾಯಾಗ್ರಹಣ ಕಾರ್ಯಗಾರಕ್ಕೆ ಫ್ಯಾಕಲ್ಟಿಯಾಗಿ ಕರೆದಿದ್ದರೂ ನಾವು ಅವರಿಗೆ ಏನು ಹೇಳಿಕೊಟ್ಟೆವೋ, ಅವರೇನು ಕಲಿತುಕೊಂಡರೋ ಗೊತ್ತಿಲ್ಲ. ಆದರೆ ನಮಗಂತೂ ಹೊಸ ಗೆಳೆಯರು ಸಿಕ್ಕರು. ಚಿಕ್ಕಮಗಳೂರಿನ ಮತ್ತು ಕೆಮ್ಮಣ್ಣುಗುಂಡಿ ಗಿರಿಧಾಮದಲ್ಲಿ ಸುಂದರ ಪ್ರಕೃತಿ ಚಿತ್ರಗಳು ನಮ್ಮ ಕ್ಯಾಮೆರಾಗಳಿಗೆ ಸಿಕ್ಕವು.

ಸೂರ್ಯಾಸ್ತದ ಸಮಯದಲ್ಲಿ ಕೆಮ್ಮಣ್ಣುಗುಂಡಿಯ ಇನ್ನೊಂದು ಲ್ಯಾಂಡ್‌ಸ್ಕೇಪ್ ಚಿತ್ರ

ಗಿರಿಧಾಮದ ಸುತ್ತಮುತ್ತಲ ಕಾಡುಗಳು ಅಲ್ಲಲ್ಲಿ ಬೋಳಾಗಿದ್ದುದ್ದು ನಮ್ಮ ಕುತೂಹಲ ಕೆರಳಿಸಿತು......

ಇದ್ಯಾಕೆ ಹೀಗೆ ಅಲ್ಲಲ್ಲಿ ಹೀಗೆ ಕೇಕ್ ಕತ್ತರಿಸಿದ ಹಾಗೆ ಕಾಡು ಕಡಿದಿದ್ದಾರಲ್ಲ ಅಂತ ಮಲ್ಲಿಕಾರ್ಜುನ್ ಕೇಳಿದರು. ತಕ್ಷಣ ಮೂರ್ತಿ "ಶೋಲಾ ಕಾಡು ಧಗ ಧಗ ಧಗ ಧಗ " ಅಂದರು.

ಗಣಿಗಾರಿಕೆಯಿಂದಾಗಿ ಮೇಲ್ಬಾಗದಲ್ಲಿ ಕಾಡು ನಾಶವಾಗಿರುವ ಚಿತ್ರ.


ಗಣಿಗಾರಿಕೆಯಿಂದಾಗಿ ಒಂದಷ್ಟು ಕಾಡುಗಳು, ಮತ್ತು ಅದಕ್ಕಾಗಿ ಮಾಡುವ ರಸ್ತೆಗಳಿಗಾಗಿ ಮತ್ತಷ್ಟು ಕಾಡುಗಳು, ನಂತರ ನಡೆವ ಗಣಿಗಾರಿಕೆಯ ದೂಳಿನಿಂದಾಗಿ ಇನ್ನೂಳಿದ ಕಾಡುಗಳು ನಾಶವಾಗುತ್ತಿರುವುದರ ದುರಂತವನ್ನು ಮೂರ್ತಿ ನಮಗೆಲ್ಲ ಮನದಟ್ಟು ಮಾಡಿಕೊಟ್ಟರು.

ರಾತ್ರಿ ಘನಶ್ಯಾಮ್ ಮಲ್ಲಿಕಾರ್ಜುನ್ ಮತ್ತು ನನ್ನನ್ನು ಚಿಕ್ಕಮಗಳೂರಿನ ಜಿಲ್ಲಾ ಅರಣ್ಯಾದಿಕಾರಿಗಳಾದ ಎಸ್.ಎಸ್.ಲಿಂಗರಾಜುರವರ ಮನೆಗೆ ಹೋದಾಗ ಅವರ ಮನೆ ತುಂಬಾ ಇದ್ದ ಪುಸ್ತಕಗಳು ಅವರೊಬ್ಬ ಸಾಹಿತ್ಯ ಪ್ರೇಮಿಯೆಂದು ಗೊತ್ತಾಯಿತು. ಅಷ್ಟೇ ಅಲ್ಲದೇ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕರು ಆಗಿರುವ ಅವರು ನಮೆಗೆಲ್ಲಾ ಕೆಲವು ಅಪರೂಪದ ವನ್ಯಜೀವಿಗಳ, ಪಕ್ಷಿಗಳ, ಲ್ಯಾಂಡ್ ಸ್ಕೇಪ್ ಫೋಟೊಗಳನ್ನು ತೋರಿಸಿದರು. ಮತ್ತು ನಮ್ಮ ಚಿತ್ರಗಳನ್ನು ನೋಡಿ ಸಂತೋಷ ಪಟ್ಟರು.

ಕೊನೆಯಲ್ಲಿ " ನನ್ನನ್ನೂ ಕರೆದಿದ್ದರೆ ನಾನು ಬರುತ್ತಿದ್ದೆನಲ್ಲಾ " ಎಂದರು.

ಮರುದಿನ ವಾಪಸ್ಸು ಬರುವಾಗ "ಕಡೂರು ಎರಡು ಕೊಡಿ " ನಾನು ಬಸ್ ನಿರ್ವಾಹಕನನ್ನು ಕೇಳಿದೆ.

ಕಡೂರು ಒಂದೇ ಇರೋದು...............ಬೇಕಿದ್ರೆ ನಿಮಗೆ ಎರಡು ಬಸ್ ಟಿಕೆಟ್ ಕೊಡುತ್ತೇನೆ............

ಆತ ಹೇಳಿದಾಗ ಆತನ ಹಾಸ್ಯ ಪ್ರಜ್ಞೆಗೆ ಮನಪೂರ್ತಿ ನಕ್ಕಿದ್ದೆವು. ಮತ್ತೆ ಚಿಕ್ಕಮಗಳೂರಿನಿಂದ ಕಡೂರಿಗೆ ಅದೇ ರಸ್ತೆಯಲ್ಲೇ ಹೋಗಬೇಕಾದ್ದರಿಂದ ನಮ್ಮ ದೇಹದ ನಟ್ಟು ಬೋಲ್ಟುಗಳು ಖಂಡಿತ ಸಡಿಲಗೊಳ್ಳುತ್ತವೆ ಎಂದು ಮನವರಿಕೆಯಾಗಿ ಮಾನಸಿಕವಾಗಿ ಅದಕ್ಕೆ ಸಿದ್ದರಾದೆವು.

------------------------------------


ಈ ಮದ್ಯೆ ಈ ಕಾರ್ಯಗಾರದ ಯಶಸ್ಸಿನ ಸ್ಪೂರ್ತಿಯಿಂದಾಗಿ ಘನಶ್ಯಾಮ್, ಪ್ರವೀಣ್ ಕುಮಾರ್, ನಾನು ಮಲ್ಲಿಕಾರ್ಜುನ್ ಒಂದು "ಇ-ಕನ್ನಡ ಛಾಯಾಗ್ರಹಣ ಪತ್ರಿಕೆ" ಮಾಡಿದರೆ ಹೇಗೆ ಎಂದು ಚರ್ಚೆ ಮಾಡಿದೆವು.

ಇದು ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ದೃಶ್ಯಮಾದ್ಯಮದಲ್ಲಿ ಕಟ್ಟಿಕೊಡುವ ಪ್ರಯತ್ನ. ಚಿತ್ರಕಲೆ ಮತ್ತು ಛಾಯಾಚಿತ್ರಕಲೆಯ ನಡುವಿನ ಸಂವಾದ, ಹಿರಿಯ ಛಾಯಾಗ್ರಾಹಕರ ಅನುಭವಗಳು ಮತ್ತು ಅವರ ಅಪರೂಪದ ಚಿತ್ರಗಳು. ಛಾಯಾಗ್ರಾಹಣದ ತಂತ್ರ ಮತ್ತು ತಾಂತ್ರಿಕತೆ ಬಗ್ಗೆ ತಿಳಿವಳಿಕೆ. ಈ ಕಲೆಯಲ್ಲಿ ಹೊಸ ಹೊಸ ವಿಧಾನಗಳ ಅಳವಡಿಕೆಯ ಸಾಧ್ಯತೆ. ಇನ್ನೂ ಅನೇಕ ವಿಚಾರಗಳು ಇದರಲ್ಲಿ ಒಳಗೊಂಡಿವೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಎಲ್ಲಾ ಛಾಯಾಗ್ರಾಹಕರನ್ನು ಬೆಸೆಯುವ ಇ-ಕೊಂಡಿ.

ಇದು ಬ್ಲಾಗಿನ ರೂಪದಲ್ಲಿರದೇ ಪಕ್ಕ ನಿಯತಕಾಲಿಕದ ಹಾಗೆ ಇರುತ್ತದೆ. ಹಾಗೂ ಇದು ಅಂತರ್ಜಾಲದಲ್ಲಿ ಮಾದ್ಯಮದಲ್ಲಿ ಇರುತ್ತದೆ.

ಯಾವುದೇ ಲಾಭದ ಆಥವ ವ್ಯಾಪಾರಿ ದೃಷ್ಟಿಯಿಟ್ಟುಕೊಳ್ಳದೆ ಎಲ್ಲರಿಗೂ ಛಾಯಾಗ್ರಾಹಣ ಭಾಷೆಯನ್ನು " ಕನ್ನಡ ಇ- ಮಾದ್ಯಮದ" ಮೂಲಕ ತಲುಪಿಸುವ ಆಶಯ.

ಹದಿನೈದು ದಿನಕ್ಕೊಮ್ಮೆ ಬರುವ ಇದು ಹೇಗಿರಬೇಕು. ಓದುಗರಾಗಿ ಮತ್ತು ಛಾಯಾಗ್ರಾಹಕರಾಗಿ ನೀವು ಇದರಲ್ಲಿ ಇನ್ನೂ ಏನೇನು ಬಯಸುತ್ತೀರಿ ? ಹೇಗಿರಬೇಕೆಂದು ಬಯಸುತ್ತೀರಿ ? ಸಾಧ್ಯವಾದರೆ ಇದಕೊಂದು ಹೆಸರನ್ನು ಸೂಚಿಸಿ ! ನಿಮ್ಮ ಸಲಹೆ ಮತ್ತು ಸೂಚನೆಗಳಿಗೆ ಎದುರು ನೋಡುತ್ತಿರುತ್ತೇವೆ.

ಫೋಟೊ ಮತ್ತು ಲೇಖನ
ಶಿವು.

57 comments:

Santhosh Rao said...

sir.. nim ella photos.. articles.. masterpiece..neev ene bardrunu chennagirutte..

shivu.k said...

ಸಂತೋಷ್,

ಇದೇನಿದು ಇಷ್ಟು ಬೇಗ ನೋಡಿಬಿಟ್ರ...ನಾನಿನ್ನು edit ಮಾಡುತ್ತಿದ್ದೆ......

ಮತ್ತೆ ಒಂದು ಹೊಸ ಕನ್ನಡ "ಇ-ಕನ್ನಡ ಛಾಯಾಗ್ರಾಹಣ ಪತ್ರಿಕೆ" ಮಾಡೋಣ ವೆಂದುಕೊಂಡಿದ್ದೇವೆ. ಅದರ ಬಗ್ಗೆ ಇದೇ ಲೇಖನದ ಕೊನೆಯಲ್ಲಿ ಬರೆದ್ದಿದ್ದೇನೆ.. ನೀವು ಮತ್ತೊಮ್ಮೆ ಓದಿ ದಯವಿಟ್ಟು ನಿಮ್ಮ ಅಭಿಪ್ರಾಯ ಸಲಹೆಗಳನ್ನು ತಿಳಿಸಿ....

ತಿಳಿಸುತ್ತೀರಲ್ಲಾ.....ನಾವೆಲ್ಲಾ ಕಾಯುತ್ತಿದ್ದೇವೆ....

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಒಳ್ಳೆಯ ಯೋಚನೆ, ಪಲ್ಲವಿಯವರು ಬ್ಲಾಗಿಗರ ಆಯ್ದ ಲೇಖನಗಳ ಪುಸ್ತಕ ಹೊರ ತರುವ ಬಗ್ಗೆ ಮಾತನಾಡಿದ್ದರು, ನೀವು ಛಾಯಚಿತ್ರಗಳ ಇ-ಪತ್ರಿಕೆ ತರುವ ವಿಚಾರದ ಬಗ್ಗೆ ಮಾತನಾಡುತ್ತಿದೀರಿ. ಒಳ್ಳೆಯ ಆಲೋಚನೆ, ನಿಮ್ಮಗಳ ಕ್ರಿಯಾಶೀಲತೆಗೆ ಸಹಸ್ರ ನಮಸ್ಕಾರಗಳು.
-ರಾಜೇಶ್ ಮಂಜುನಾಥ್

shivu.k said...

ರಾಜೇಶ್,
ಪ್ರತಿಕ್ರಿಯೆಗೆ ಧನ್ಯವಾದಗಳು. ಇ-ಛಾಯಾ ಪತ್ರಿಕೆ ಹೇಗಿರಬೇಕೆಂದು ಸಲಹೆ ಕೊಡಿ...ಮತ್ತು ಅದಕ್ಕೊಂದು ಸುಂದರ ಹೆಸರು ಸೂಚಿಸಿ...

Lakshmi Shashidhar Chaitanya said...

shivu sir,

nanage photography kalibekendu aase. adu nimma e-patrike mulakave aagali :). nanna protsaaha mattu sahakaara khanditaa iruttade.

photos zabardast:)

ಮಹೇಶ್ ಪುಚ್ಚಪ್ಪಾಡಿ said...

ಏನ್ ಸಾರ್ Photography... ಸೂಪರ್ ಆಗಿದೆ.ನಂಗೂ ಒಂಚೂರು ಹೇಳ್ಕೊಡ್ತೀರಾ?

shivu.k said...

ಲಕ್ಷ್ಮಿ ಮೇಡಮ್, ಮಹೇಶಣ್ಣ,

ನಾವು ಫೋಟೊಗ್ರಫಿ ಹೇಳಿಕೊಡುತ್ತಿಲ್ಲ. ಮೊದಲಿಗೆ ಫೋಟೋಗ್ರಫಿ ಬಗ್ಗೆ ಕನ್ನಡದಲ್ಲಿ ಒಂದು ಅಂತರ್ಜಾಲ ಛಾಯಾಗ್ರಹಣ ಪತ್ರಿಕೆ ಮಾಡುವ ವಿಚಾರವಿದೆ...

ಅದಕ್ಕೆ ತಕ್ಕಂತೆ ನಿಮಗೇನು ಬೇಕೆಂದು ನಿಮ್ಮ ಸಲಹೆ ಕೊಡಿ. ಮತ್ತು ಅದಕೊಂದು ಸೂಕ್ತ ಹೆಸರು ಸೂಚಿಸಿ...

ನಂತರ ಅದರಲ್ಲಿ ಹಿರಿಯ ಛಾಯಾಗ್ರಾಹಕರ
ಫೋಟೋಗ್ರಫಿ ಬಗ್ಗೆ, ತಂತ್ರದ ವಿಚಾರ, ತಾಂತ್ರಿಕತೆ , ಕಲಿಯುವ, ಕಲಿಸುವ ವಿಚಾರ , ಅನುಭವ ಎಲ್ಲಾ ಇರುತ್ತದೆ...

Ittigecement said...

ಶಿವು ಸರ್....

"ನಿಮ್ಮೆಂಸ್ರೂ..ಪಕ್ಕದ್ಮನೆ ಹೆಂಗಸ್ರೂ," ಲೇಖನ ತುಂಬಾ ಚೆನ್ನಾಗಿದೆ...

ಫೋಟೊಗಳೂ ಸಕತ್ತಾಗಿವೆ...
ನೀವು , ಮಲ್ಲಿಕಾರ್ಜುನ್..ನಿಮ್ಮ ಪ್ರತಿಭೆಯನ್ನು ಬೇರೆಯವರೊಡನೆ ಹಂಚಿಕೊಳ್ಳುವ ರೀತಿ ನನಗಿಷ್ಟವಾಯಿತು....

ನಿಮ್ಮ ಏ ಪತ್ರಿಕೆಗೆ ನಾನಂತೂ ಎದುರು ನೋಡುತ್ತಿದ್ದೇನೆ...

ಲೇಖನ ಓದಿ ನನ್ನ ಮಡದಿಯವರು ಉಪ್ಪಿಟ್ಟು, ಕೇಸರಿ ಬಾತ್ ಬಾತ್ ಗೆ.." ಧನ್ಯವಾದ " ತಿಳಿಸಿದ್ದಾರೆ...

ನನ್ನ ದೂ ಸಹ...
ಅಭಿನಂದನೆಗಳು.....

shivu.k said...

ಪ್ರಕಾಶ್ ಸರ್,

ಸರಸತ್ತೆ ಬಿಸಿಬೇಳೆ ಬಾತ್ ಮತ್ತು ದೋಸೆ ಪ್ರಿಡ್ಜಿನ ಚಟ್ನಿ ಮರೆಯಲು ಕೊನೆಗೂ ಚಿಕ್ಕಮಗಳೂರಿನಲ್ಲಿ ನಮ್ಮಗೊಂದು ನಿಮ್ಮೆಂಗುಸ್ರೂ....ಪಕ್ಕದಮನೆ ಹೆಂಗಸ್ರೂ....ಸಿಕ್ಕಿತ್ತು....ಏನಂತೀರಿ.....

ಮತ್ತೆ ನೀವು ನಿಮ್ಮ ಮನೆಯವರೆಲ್ಲಾ ಸೇರಿ ಚರ್ಚಿಸಿ ನಮ್ಮ ಇ-ಛಾಯ ಪತ್ರಿಕೆಗೆ ಒಂದು ಹೆಸರು ಕೊಡಿ. ಅದು ಸಂಪ್ರದಾಯವಾಗಿರುವುದು ಬೇಡ ಕ್ಯಾಚಿಯಾಗಿರಲಿ...ಮತ್ತು ಸಲಹೆಗಳಿಗೆ ಸ್ವಾಗತ ...ಕಾಯುತ್ತಿರುತ್ತೇವೆ....ಬೇಗ ಕಳಿಸುವ ಜವಾದ್ಗಾರಿ ನಿಮ್ಮದು...

ಪಲ್ಲವಿ ಎಸ್‌. said...

ಬರಹ ಹಾಗೂ ಫೊಟೊ ಚೆನ್ನಾಗಿವೆ ಶಿವು. ಆದರೆ, ಇಂತಹ ಚಿತ್ರಗಳಿರುವ ಬರಹಕ್ಕೆ ಈಗಿರುವ ಟೆಂಪ್ಲೆಟ್‌ ಸಾಕಾಗದು. ಇಡೀ ಸ್ಕ್ರೀನ್‌ ಆವರಿಸಿಕೊಳ್ಳುವಂತಹ ಟೆಂಪ್ಲೆಟ್‌ ಹಾಕಿಕೊಂಡರೆ, ನಿಮ್ಮ ಫೊಟೊಗಳು ಈಗಿರುವುದಕ್ಕಿಂತ ದೊಡ್ಡದಾಗಿ ಕಾಣುತ್ತವೆ. ಲೇಖನದ ಸೊಬಗೂ ಹೆಚ್ಚುತ್ತದೆ. ನಾನು ಛಾಯಾಗ್ರಾಹಕಳಲ್ಲವಾದರೂ ದೊಡ್ಡ ಟೆಂಪ್ಲೆಟ್‌ನ್ನೇ ಬ್ಲಾಗ್‌ಗೆ ಬಳಸಿಕೊಂಡಿದ್ದೇನೆ.

ನಿಮ್ಮ ಇ-ಛಾಯಾಪತ್ರಿಕೆ ಐಡಿಯಾ ಚೆನ್ನಾಗಿದೆ. ಅಂಥ ಪತ್ರಿಕೆಗಳುಗೆ ಬೇಕಿವೆ. ಆದರೆ, ತುಂಬ ತಾಂತ್ರಿಕ ಮಾಹಿತಿಯನ್ನೇ ಪತ್ರಿಕೆ ತುಂಬ ತುಂಬಿಸಬೇಡಿ. ಕವಿತೆ ಹೇಗಿರಬೇಕು ಎಂಬ ಚರ್ಚೆಗಿಂತ, ಚೆನ್ನಾಗಿರುವ ಕವಿತೆಯ ಉದಾಹರಣೆಯ ಮೂಲಕ ಉತ್ತಮ ಕವಿತೆಯ ಲಕ್ಷಣಗಳನ್ನು ವರ್ಣಿಸಿದಂತೆ ನಿಮ್ಮ ಪತ್ರಿಕೆ ಇರಲಿ. ಕೇವಲ ಛಾಯಾಗ್ರಾಹಕರು ಮಾತ್ರ ಬರೆದರೆ, ಇತರ ವೃತ್ತಿಯ ಜನ ದೂರ ಸರಿದಾರು. ಈ ಕುರಿತು ಸುಮಾರು ವಿಚಾರಗಳಿವೆ. ಅವುಗಳನ್ನು ನಿಮ್ಮ ಮೇಲ್‌ಗೆ ಕಳಿಸುತ್ತೇನೆ.

ನಿಮ್ಮ ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ. ಯಶಸ್ಸು ಸಿಗುವಂತೆ ನಿಮ್ಮ ಪ್ರಯತ್ನ ನಡೆಯಲಿ.

- ಪಲ್ಲವಿ ಎಸ್‌.

ಚಂದ್ರಕಾಂತ ಎಸ್ said...

ಅಂತೂ ವಿಷಯವನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದಿರಿ. ಶೀರ್ಶ್ಃಇಕೆ ಚೆನ್ನಾಗಿದೆ. ಆದರೆ ಸಕ್ಕರೆ ಖಾಯಿಲೆಯವರಿಗೆ ಈ ಶೀರ್ಷಿಕೆ ಹೊಟ್ಟೆಕಿಚ್ಚು ತರಿಸಬಹುದು.

ಫೋಟೊಗಳು ಚೆನ್ನಾಗಿವೆ. ಆದರೆ ಪಲ್ಲವಿಯವರು ಅಭಿಪ್ರಾಯ ಪಟ್ಟಂತೆ zoom ಮಾಡಿ ನೋಡುವಂತಿದ್ದರೆ ಅದ್ಭುತವಾಗಿರುತ್ತದೆ. ನನಗೆ ತಕ್ಷಣ ನೆನಪಿಗೆ ಬರುವುದು ಸಾಟಿಯಾರು ಮತ್ತು ಜೀವಜಾಲ ಚಿತ್ರಗಳು.

ಇದಕ್ಕಾಗಿಯೇ ಒಂದು ನಿಯತಕಾಲಿಕೆ ತರುವ ಯೋಚನೆ ತುಂಬಾ ಚೆನ್ನಾಗಿದೆ. ಬೇಗನೆ ಪ್ರಾರಂಭವಾಗಲಿ

shivu.k said...

ನಾಗೇಶ್ ಹೆಗಡೆ ಸಾರ್ ಹೇಳಿದರು,

ಪ್ರಿಯ ಶಿವೂ,

ನಿಮ್ಮೆಂಗಸ್ರೂ......ಪಕ್ಕದಮನೆ ಹೆಂಗಸ್ರೂ ಚೆನ್ನಾಗಿದ್ದವು. ನೀವು ಹೆಂಗಸ್ರ ಕುರಿತು ಹೆಂಗೇ ಬರೆದರೂ ಚೆನ್ನಾಗಿರುತ್ತದೆ ಬಿಡಿ.
ಈ-ಫೊಟೊಗ್ರಫಿ ಪತ್ರಿಕೆಯ ಐಡಿಯಾ ಕೂಡಾ ಒಳ್ಳೆಯದೇ. ತುಂಬಾ ಓದುಗರಿಗೆ ಹಾಗೂ ತೆವಲುಛಾಯಾಗ್ರಾಹಕರಿಗೆ ಕೂಡ ಸಹಾಯವಾಗುತ್ತದೆ. ಅದಕ್ಕಿಡಬಹುದಾದ ಉತ್ತಮ ಹೆಸರನ್ನು ನೀವು ಆಗಲೇ 'ಛಾಯಾಕನ್ನಡಿ' ಅಂತ ಇಟ್ಕೊಂಡಿದೀರಲ್ಲ?

ಇನ್ನೇನು 'ಬಣ್ಣದ ಕನ್ನಡಿ' ಅಂತ ಇಡಬಹುದು.

ಅಥವಾ 'ಕನ್ನಡಕ್ಯಾಮರಾ' ಅಂತಿಟ್ಕೊಂಡ್ರೆ ಲೊಕೇಟ್ ಮಾಡೋಕೆ ಸುಲಭವಾಗುತ್ತದೆ.

ಅಥವಾ 'ಕನ್ನಡಕನ್ನಡಿ', 'ಕ್ಲಿಕ್ ಕ್ಲಿಕ್ ಗೆಳೆಯ' ಅಥವಾ 'ಕ್ಲಿಕ್ಕಬುಕ್ಕ' ಎಂಥದೊ ಇಡಿ. ತೀರ ಸಾಂಪ್ರದಾಯಿಕ ಹೆಸರು ಬೇಡ. ಇಂಗ್ಲಿಷ್ ನಲ್ಲಿ ಹುಡುಕುವವರಿಗೂ ಸಿಗಬೇಕೆಂದರೆ photokannada ಅಂತಿದ್ರೂ ಆದೀತು. ನೀವು ಏನೇ ಹೆಸರಿಟ್ಟರೂ
ಚಂದವಿರುತ್ತದೆ ಬಿಡಿ. ಈಗಿನ ಕಾಲದ ಯುವಕರನ್ನು ಕೇಳಿ.

ಆಲ್ ದ ಬೆಸ್ಟ್.

shivu.k said...

ಪಲ್ಲವಿ ಮೇಡಮ್,

ನನ್ನ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಟ್ಯಾಂಪ್ಲೆಟ್ ಬದಲಾವಣೆಯ ವಿಚಾರದಲ್ಲಿ ನಿಮ್ಮ ಅಭಿಪ್ರಾಯವನ್ನು ಖಂಡಿತ ಪರಿಗಣಿಸುತ್ತೇನೆ.....ನನಗೂ ಬದಲಿಸಿಕೊಳ್ಳುವ ಅಲೋಚನೆಯಿದೆ.....

ಈ-ಛಾಯಾ ಪತ್ರಿಕೆಯ ಬಗ್ಗೆ ನಿಮ್ಮ ಅಮೂಲ್ಯ ಸಲಹೆಗಳನ್ನು ನಾವು ಖಂಡಿತ ಗಮನದಲ್ಲಿ ಇಟ್ಟುಕೊಳ್ಳುತ್ತೇವೆ. ಇನ್ನೂಳಿದ ಸಲಹೆಗಳನ್ನು ಮೇಲ್ ಮಾಡಿ.....ಕಾಯುತ್ತಿರುತ್ತೇವೆ...

shivu.k said...

ಚಂದ್ರ ಕಾಂತ ಮೇಡಮ್,

ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....

ನಿಮ್ಮ ಅಭಿಪ್ರಾಯಗಳು ಮತ್ತು ಪ್ರೋತ್ಸಾಹಗಳೇ ನಮ್ಮ ಮುಂದಿನ ಜವಾಬ್ದಾರಿಗಳಿಗೆ ಆಧಾರಗಳು....ಮತ್ತಷ್ಟು ಸಲಹೆಗಳನ್ನು ನಿರೀಕ್ಷಿಸುತ್ತೇವೆ...

ನನ್ ಮನೆ said...

ಸ್ವಾಮಿ ನನನ್ಗೆ ನಿಮ್ಮೆಂಗುಸ್ರು ಬೇಡ ನನ್ಗೆ ಪಕ್ಕದ ಮನೆ ಹೆಂಗಸ್ರು ಬೇಕು.. ಹೋಲಿಕೆ ತುಂಬಾ ಚೆನ್ನಾಗಿದೆರಿ.. ನಾನಂತೂ ಉಪ್ಪಿಟ್ಟು ತಿನ್ನೋಲ್ಲ.. ಆದರೆ ಮದುವೆ ಆದ್ಮೇಲೆ.. ನಮ್ಮೆಂಗ್ರ ಮುಂದೆ ಇದೇ ಡೈಲಾಗ್ ಹೊಡೆದ್ರೆ ಕಷ್ಟ ಆಗಬಹುದೇನೋ..

ಒಳ್ಳೆ ಪರಿಸರದಲ್ಲಿ ಕಾರ್ಯಾಗಾರ ಇದ್ದದ್ದು ಖುಶಿ ಆಯ್ತು.. ನಿಮ್ಮೆಲ್ಲ ಕ್ಯಾಮೆರಾಗಳಿಗೆ ಒಳ್ಳೆ ಹೆಂಗುಸ್ರು ಸಿಕ್ಕಿರಬೇಕು..

shivu.k said...

ವೀರೇಶ್,
ಪ್ರತಿಕ್ರಿಯೆಗೆ ಥ್ಯಾಂಕ್ಸ್...

ನಾನು ಮನೆಯಲ್ಲಿ ನಮೆಂಗುಸ್ರೂರನ್ನು[ಉಪ್ಪಿಟ್ಟು]ಇಷ್ಟಪಡಲ್ಲ. ನನಗೆ ಪಕ್ಕದ ಮನೆಹೆಂಗಸ್ರೂ[ಕೇಸರಿಬಾತ್]ತುಂಬಾ ಇಷ್ಟ! ನಮ್ಮ ಮನೆಯಲ್ಲಿ ನನ್ನಾಕೆ ಮೊದಲನೆಯದು ಮಾಡುತ್ತೇನೆ ಅಂದಾಗ "ಇವತ್ತು ತುಂಬಾ ಕೆಲಸವಿದೆ ಟಿಫನ್ನಿಗೆ ಬರೊಲ್ಲ ಅನ್ನುತ್ತೇನೆ. ಅದಕ್ಕವಳು " ಹೋಗಿಬಿಡಿ ಎರಡನೆಯದು ಮಾಡುತ್ತೇನೆ" ಅಂದಾಗ ಕೆಲಸ ಅರ್ದಕ್ಕೆ ನಿಲ್ಲಿಸಿ ಬರುತ್ತೇನೆ....

ಮತ್ತೆ ಕಾರ್ಯಗಾರದಲ್ಲಿ ನಮ್ಮ ಕ್ಯಾಮೆರಾಗೆ ಒಳ್ಳೇ ಊಟ ಖಂಡಿತ ಸಿಕ್ಕಿದೆ...

sunaath said...

ವಿನೋದ, ಉತ್ತಮ ಚಿತ್ರಗಳು, ಉತ್ತಮ ನಿರೂಪಣೆ ಇವೆಲ್ಲಾ
ಕೂಡಿದ ಲೇಖನದ ಬಗೆಗೆ ಹೆಚ್ಚಿಗೇನು ಹೇಳಲಿ?

ಅಂತರ್ವಾಣಿ said...

ಶಿವಣ್ಣ,
ನನಗೆ ಎರಡು ನಮ್ಮೆಂಗಸರು.. ಎರಡೂ ಇಷ್ಟ... :)

ನಿಮ್ಮ ಹೊಸ "ಇ-ಕನ್ನಡ ಛಾಯಾಗ್ರಾಹಣ ಪತ್ರಿಕೆ" ಗೆ ನನ್ನ ಶುಭಾಶಯಗಳು. ಬೇಗ ಹೊರ ತನ್ನಿ.. ಅಂತರ್ಜಾಲದಲ್ಲಿ ಒಳ್ಳೆ ಹೆಸರು ಪಡೆಯಲಿ.. :)

b.saleem said...

namaskara shivu sir
E kannada chaayagrahana patrike prarambhisuva vichara odi tumba khushi aaitu. blog adbhutavagi baruttide

PaLa said...

ಶಿವು,
ಎಂದಿನಂತೆಯೇ ಲಘು ಹಾಸ್ಯದಿಂದ ಕೂಡಿದ ನಿಮ್ಮ ಬರಹ ಹಾಗೂ ಚಿತ್ರಗಳು ಸೊಗಸಾಗಿದೆ.

ನಿಮ್ಮ ಇ-ಪತ್ರಿಕೆ ಹೊರ ತರುವ ವಿಚಾರ ಸಂತೋಷ ತಂದಿತು. ನನ್ನ ಅನಿಸಿಕೆಯನ್ನು ಇ-ಅಂಚೆಯ ಮೂಲಕ ತಿಳಿಸುತ್ತೇನೆ.
--
ಪಾಲ

Nesara said...

ಶರಣು ಶಿವು, ನಿಮ್ಮ ಬ್ಲಾಗ್ ನಾನು ಇದೆ ಮೊದಲನೆಯ ಬಾರಿ ನೋಡುತ್ತಿರುವುದು, ಪಾಲ ಅವರು ಸಂಪದದಲ್ಲಿ ಈ ಕೊಂಡಿ ಕೊಟ್ಟಿದ್ದಕ್ಕೆ ನನ್ನಿ. ನೀವು ಹಾಗು ನಿಮ್ಮ ಸ್ನೇಹಿತರು ಹೊರತರಬೇಕು ಅಂತ ಅಂದುಕೊಂಡಿರುವ ಛಾಯಾಗ್ರಹಣಕ್ಕೆ ಸಂಬಂಧಪಟ್ಟ ಈ-ಪತ್ರಿಕೆಗೆ ನನ್ನ ಪೂರ್ಣ ಸಹಕಾರ ಹಾಗು ಬೆಂಬಲವಿದೆ. ಒಬ್ಬ ಫೋಟೋಗ್ರಫಿ ಕಲಿಯೂ ಯುವಕನಾಗಿ ನಾನು ನಿಮ್ಮ ಪತ್ರಿಕೆಯಿಂದ ಬಯಸೊ ಸಂಗತಿಗಳು ಈ ರೀತಿ ಇವೆ: ೧) ಒಳ್ಳೆ ಛಾಯಾಗ್ರಾಹಕರು ತೆಗೆದಂಥ ಚಿತ್ರಗಳು ಹಾಗು ಅವರು ಅವನ್ನ ತೆಗೆಯುವಾಗ ಅವರ ಅನುಭವಗಳ ಬಗ್ಗೆ ಒಂದಿಷ್ಟು ಲೇಖನ ೨) ಕೆಲವು ಚಿತ್ರಗಳು ಹಾಗು ಅವನ್ನು ಸೆರೆ ಹಿಡಿದಿದ್ದರ ಬಗ್ಗೆ ಅರ್ಥ ಆಗೋ ಥರ ತಾಂತ್ರಿಕ ಮಾಹಿತಿ ೩) ಕ್ಯಾಮೆರ, ಲೆನ್ಸ್ ಗಳ ಬಗ್ಗೆ ಮಾಹಿತಿ ೪) ಆದರೆ ಫೋಟೋಗ್ರಫಿ ಕಲಿಯೋರಿಗೆ ೨ ಅಥವ ೩ ತಿಂಗಳಿಗೊಮ್ಮೆ ಒಂದು ವರ್ಕ್ ಶಾಪ್ ಆಯೋಜಿಸಿದರೆ ಇನ್ನು ಚೆನ್ನ ಅನ್ನೋದು ನನ್ನ ಅನಿಸಿಕೆ. ಇನ್ನು ಇದಕ್ಕೆ ಹೆಸರು 'ಕನ್ನಡಕನ್ನಡಿ' ಅಂತ ಇಡಬಹುದೇನೋ. ಎಲ್ಲವು ಒಳ್ಳೆಯದಾಗಲಿ. ಚಲಪತಿ ರಾವ ಶಾನವಾಸಪುರ.

Ashok Uchangi said...

ಪ್ರಿಯ ಶಿವು
ಯಾವಾಗ ಹೋಗಿದ್ದಿರಿ ಕೆಮ್ಮಣ್ಣುಗುಂಡಿಗೆ?ಹೇಳಲೇ ಇಲ್ವಲ್ಲ.
ತುಂಬಾ ಚೆನ್ನಆಗಿದೆ.ಚಿತ್ರ,ಬರಹ ಹಾಗು ಈ ಪತ್ರಿಕೆಯ ವಿಚಾರ.ಮೊದಲೇ ಪ್ರತಿಕ್ರಿಯಿಸೋಣ ಎಂದುಕೊಂಡೆ.ಆದರೆ ಹೆಸರು ಸೂಚಿಸಲು ಯೋಚಿಸುತ್ತಿದ್ದೆ.ಈ ನೋಟ,ಈ ಛಾಯೆ,ದರ್ಪಣ,ಕನ್ನಡ ಕ್ಲಿಕ್ಸ್.ಇವು ನನಗೆ ಸಧ್ಯಕ್ಕೆ ತೋಚಿದ್ದು.ಇನ್ನೊಮ್ಮೆ ಇನ್ನೊಂದಿಷ್ಟು.
ಈ ವಾರ ಎಲ್ಲರ ಬ್ಲಾಗ್ ಗಳು ಮನಸೆಳೆದವು.ಓದಲು ಪುರುಸೊತ್ತಿಲ್ಲದಂತೆ!
ಸುಂದರ ಬರಹದ ನಿರೀಕ್ಷೆಯಲ್ಲಿ
ಅಶೊಕ ಉಚ್ಚಂಗಿ
http://mysoremallige01.blogspot.com/

Anonymous said...

ನಿಮ್ಮ "ಇ-ಕನ್ನಡ ಛಾಯಾಗ್ರಾಹಣ ಪತ್ರಿಕೆ" ಯ ಉಪಾಯ ಚೆನ್ನಾಗಿದೆ. ಆದರೆ, ಇದು ಕೇವಲ ಅಂತರ್ಜಾಲಕ್ಕೆ ಸೀಮಿತವಾಗಿರದೇ, ಪತ್ರಿಕೆಯಲ್ಲೂ ಮೂಡಿ ಬಂದರೆ ಒಳ್ಳೆಯದು. ಏನಿದ್ರೂ, ಒಳ್ಳೆಯ ಉಪಾಯವೇ! ನಮ್ಮ ಕನ್ನಡ ನಾಡ ಅಂದವನ್ನು ಜಗಕೆಲ್ಲ ತಿಳಿಸಲು ಇದಕ್ಕಿಂತ ಸೂಕ್ತ ಉಪಾಯ ಬೇರಾವುದು ಹೇಳಿ? ಸೂಕ್ತವಾದ ಹೆಸರು ಸಧ್ಯ ಹೊಳೆಯುತ್ತಿಲ್ಲ... ಅಂತೂ ಕೆಮ್ಮಣ್ಣುಗುಂಡಿಯಲ್ಲಿ ಮಜಾ ಮಾಡಿದ್ರಿ ಅಂತಾಯ್ತು! ;-)

Hema Powar said...

ಶಿವ್,

ಲೇಖನ ಚೆನ್ನಾಗಿದೆ. ಲೇಖನಕ್ಕಿಂತ ನಿಮ್ಮ ಚಿತ್ರಗಳು ಮನಸಿಗೆ ಹಿಡಿಸಿತು. ಪತ್ರಿಕೆ ಮಾಡುವ ವಿಚಾರ ಒಳ್ಳೆಯದೇ, ಅದರ ಬಗ್ಗೆ ಅಭಿಪ್ರಾಯ ಸಲಹೆ ಕೊಡುವಷ್ಟು ಜ್ಞಾನವಿಲ್ಲ,ನಿಮ್ಮ ಪ್ರಯತ್ನ ಯಶಸ್ವಿಯಾಗಲೆಂದು ಹಾರೈಸುವೆ!! :)

ಹೇಮ ಪವಾರ್

shivu.k said...

ಸುನಾಥ್ ಸಾರ್,

ಧನ್ಯವಾದಗಳು.......


ಜಯಶಂಕರ್,

ಲೇಖನ ಮತ್ತು ಇಬ್ಬರೂ ಹೆಂಗಸರನ್ನೂ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಸಲೀಂ,

ನೀವು ನನ್ನ ಬ್ಲಾಗನ್ನು ಪ್ರತಿನಿತ್ಯ ನೋಡುವವರಲ್ಲಿ ನೀವು ಒಬ್ಬರು ಅಂತ ನನಗೆ ಗೊತ್ತು....ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್......

ನೀವೊಂದು ದಿನ ನನ್ನ ಮನೆಗೆ ಬಂದಾಗ ನಿಮ್ಮ ಫೋಟೊಗ್ರಫಿಯ ಉತ್ಸಾಹ ನೋಡಿ ನನಗೆ ಖುಷಿಯಾಗಿತ್ತು....ನಿಮ್ಮ ಫೋಟೋಗ್ರಫಿ ಚೆನ್ನಾಗಿ ನಡೆಯಲಿ.....

hEmAsHrEe said...

good thought of e-magazine on photography.
all the best.

shivu.k said...

ನೇಸರ,
ಮೊದಲನೆ ಬಾರಿ ನೀವು ನನ್ನ ಬ್ಲಾಗಿಗೆ ಬಂದಿದ್ದು ನನಗೆ ಖುಷಿಯಾಯಿತು....ನಿಮ್ಮ ಆಮೂಲ್ಯ ಸಲಹೆಗಳನ್ನು ನಮ್ಮ ಖಂಡಿತ ಗಣನೆಗೆ ತೆಗೆದುಕೊಳ್ಳುತ್ತದೆ...ಥ್ಯಾಂಕ್ಸ್..

Hemashre medam, Thanks....

shivu.k said...

ಆಶೋಕ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....

ನಾನು ಮೈಸೂರಿಗೆ ಬಂದಾಗ ನಿಮಗೆ ಚಿಕ್ಕ ಮಗಳೂರಿನ ಕಾರ್ಯಗಾರದ ವಿಚಾರ ಹೇಳಿದ ನೆನಪು.

ನಿಮ್ಮ ಸಲಹೆಗಳನ್ನು ನಾವು ಖಂಡಿತ ಪರಿಗಣಿಸುತ್ತೇವೆ....ಮತ್ತು ನಿಮ್ಮಿಂದ ಇನ್ನೂ ಸಹಾಯವನ್ನು ನಿರೀಕ್ಷಿಸುತ್ತೇವೆ....

shivu.k said...

ಪ್ರಕವಿ...

ಕೆಮ್ಮಣ್ಣುಗುಂಡಿಯಲ್ಲಿ ನಾನು ಮತ್ತು ನನ್ನ ಕ್ಯಾಮೆರಾ ಚೆನ್ನಾಗಿ ಮಜಾ ಮಾಡಿದೆವು...

ಈ-ಪತ್ರಿಕೆವಿಚಾರ ಕೇವಲ ಅಂತರ್ಜಾಲ ಮಟ್ಟಕ್ಕೆ ಸೀಮಿತವಾಗಿರುತ್ತದೆ. ಕಾರಣ ಇದರಲ್ಲಿ ಇರುವವರು ಯಾರು ಇದನ್ನೇ ಪುಲ್ ಟೈಮ್ ತೆಗೆದುಕೊಂಡಿಲ್ಲ... ಎಲ್ಲರಿಗೂ ಅವರದೇ ಆದ ಉದ್ಯೋಗಗಳಿವೆ....ನಮ್ಮ ಉಳಿದ ಸಮಯವನ್ನು ಇದಕ್ಕಾಗಿ ಮೀಸಲಿಡುತ್ತೇವೆ....

ಥ್ಯಾಂಕ್ಸ್...

shivu.k said...

ಹೇಮ ಮೇಡಮ್,

ಮೊದಲಿಗೆ ನನ್ನ ಬ್ಲಾಗಿಗೆ ಸ್ವಾಗತ....ಮತ್ತು ನನ್ನ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್......ಹೀಗೆ ಬರುತ್ತಿರಿ....

ಚಿತ್ರಾ said...

ಅಯ್ಯೋ ಶಿವಾ..

ಏನ್ರಿ ಇದು? ನಿಮ್ಮೆಂಗುಸ್ರೂ ಪಕ್ಕದ ಮನೆ ಹೆಂಗಸ್ರೂ ....ಇದನ್ನ ಓದಿ ಯಾರಾದ್ರೂ ಹೋಟೆಲ್ ಗೆ ಹೋಗಿ ಹೀಗೇ ಆರ್ಡರ್ ಮಾಡಿದ್ರೆ ಏನಾಗಬಹುದು ಯೋಚನೆ ಮಾಡಿದೀರಾ? :))

ಚೆನಾಗಿದೆ ಲೇಖನ. ಕೆಮ್ಮಣ್ಣು ಗುಂಡಿಯ ಪರಿಸರ ಹಾಳಾಗುತ್ತಿರುವುದು ನಿಜಕ್ಕೂ ನೋವು ತರುತ್ತದೆ ಅಲ್ಲ? ನಮ್ಮಲ್ಲಿ ಎಲ್ಲ ಕಡೆಗೂ ಇದೇ ಹಾಡು ! ಪರಿಸರವನ್ನು ಕಾಯ್ದುಕೊಳ್ಳುವುದನ್ನು ಯಾವಾಗ ಕಲಿಯುತ್ತೇವೆ ?

ಅಂದ ಹಾಗೇ , ’ ಕಡೂರು ಒಂದೇ ಇರೋದು ... " ಚೆನಾಗಿದೆ ಕಂಡಕ್ಟರಣ್ಣನ ಡೈಲಾಗ್ !

shivu.k said...

ಚಿತ್ರಾ ಮೇಡಮ್,

ಈಗಿನ ಕಾಲದ ಹೋಟಲ್ ಮಾಣಿಗಳು ಹಾಸ್ಯಪ್ರಿಯರು.....ಅವರು ಇದನ್ನು enjoy ಮಾಡುತ್ತಾರೆ !! ನನ್ನ ಲೇಖನದಲ್ಲಿ ಪರಿಸರದ ಬಗೆಗಿನ ಕಾಳಜಿ ನೀವು ಗುರುತಿಸಿದ್ದಕ್ಕೆ ಥ್ಯಾಂಕ್ಸ್...
ಮತ್ತೆ ಕೇವಲ ಕಂಡಕ್ಟರನಲ್ಲದೇ ನಮ್ಮ ಗೆಳೆಯರ ನಡುವೆ ಸಿಕ್ಕಿಹಾಕಿಕೊಂಡ ಹಾಸ್ಯದ ತುಣುಕುಗಳು ತುಂಬಾ ಇದ್ದವು. ಅವುಗಳಲ್ಲಿ ಎರಡನ್ನೂ ಮಾತ್ರ ಬ್ಲಾಗಿಗೆ ಹಾಕಿದ್ದೇನೆ......ಹೀಗೆ ಬರುತ್ತಿರಿ......

Madivala Venkatesh/ಮಡಿವಾಳ ವೆಂಕಟೇಶ said...

ಸೂಪರ್ ಗುರೂ .....
ನಿಮ್ಮ ಎಲ್ಲ ಚಿತ್ರಗಳು ಮತ್ತು ಲೇಖನ ಸುಪೆರ್ಬ್.... ಈಗ ನೀವು ಇಟ್ಟಿರುವುದಕ್ಕಿಂತ ಇನ್ನ್ಯಾವ ಹೆಸರು ಇದಕ್ಕೆ ಒಗ್ಗೊಲ್ಲ...... ಕೀಪ್ ಇಟ್ ಅಪ್ ...


venkatb83@yahoo.co.in

www.kannadahanigalu.com
www.sampada.net i request all members to look at this both good kannada websites...

shivu.k said...

ಗುರುವೇ....

ನಿಮಗೂ ನನ್ನಂತೆ ಫೋಟೋಗ್ರಫಿ ಹುಚ್ಚು ಇದೆ...ವೆರಿಗುಡ್.... ಮುಂದುವರಿಯಲಿ....

ನೀವು ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ.....ನನ್ನೆಲ್ಲಾ ಪೋಷ್ಟಿಂಗ್ ಓದಿರಿ...ನಿಮಗೆ ಖುಷಿಯಾಗಬಹುದು....

NilGiri said...

ಉಪ್ಪಿಟ್ಟಿಗೆ ಮತ್ತೊಂದು ಹೆಸರು ಸಿಕ್ಕಿತು! ನೀವೇನೋ " ಆ ಮನೆ ಹೆಂಗುಸ್ರೂ, ಈ ಕಡೆ ಮನೆ ಹೆಂಗಸ್ರೂ" ಅಂತ ಹೇಳ್ತೀರಾ, ಆದರೆ ನಾವೇನು ಹೇಳಬೇಕು?????

ಇ-ಛಾಯಾಗ್ರಹಣದ ಪತ್ರಿಕೆಯ ಬಗ್ಗೆ ನಂಗೆ ಕೇಳಿದ್ರೆ,

೧. ತಿಂಗಳಿಗೊಮ್ಮೆ, ಯಾವುದಾದರೂ ಒಂದು ವಿಷಯ ಕೊಟ್ಟು, ಅದರ ಬಗ್ಗೆ ಓದುಗರು ಫೋಟೋ ಕಳಿಸುವ ಸ್ಪರ್ಧೆ ನಡೆಸಿ.

೨. ಕ್ಯಾಮೆರಾ ಕೆಟ್ಟರೆ, ಸಣ್ಣ ಪುಟ್ಟ ರಿಪೇರಿ ಮಾಡುವ ಸುಲಭೋಪಾಯಗಳನ್ನು ತಿಳಿಸಿಕೊಡಿ ( ಎರಡು ಸಲ ಕ್ಯಾಮೆರಾ ಎತ್ತಾಕಿ ಬಯ್ಸಿಕೊಂಡಿದ್ದೇನೆ).

೩. ಕ್ಯಾಮೆರಾದಿಂದ ಕೇವಲ ಫೋಟೋ ತೆಗೆಯುವುದು ಮಾತ್ರವಲ್ಲ, ಯಾವ ಯಾವ ರೀತಿಗಳಲ್ಲಿ ಅದನ್ನು ಉಪಯೋಗಿಸಬಹುದೆಂಬುದನ್ನು ತಿಳಿಸಿಕೊಡಿ. (for eg.photo stitch)

೪. ಮಾರುಕಟ್ಟೆಯಲ್ಲಿ ಸಿಗುವ ಕ್ಯಾಮೆರಗಳಲ್ಲಿ, ಯಾವುದು ಬೇಕು, ಯಾವುದು ಬೇಡ ಎಂಬುದರ ಬಗ್ಗೆ ಮಾಹಿತಿ ಕೊಡಿ.


...... ನನ್ನ " ಬೇಡಿಕೆಗಳು" ಉದ್ದವಾಯಿತು ;) ಸದ್ಯಕ್ಕೆ ಇಷ್ಟು ಸಾಕು.

shivu.k said...

ಗಿರಿಜಕ್ಕ,
ಪ್ರತಿಕ್ರಿಯೆಗೆ ಧನ್ಯವಾದಗಳು.....

ನಮ್ಮ ಈ ಹೊಸ[ಉಪ್ಪಿಟ್ಟು ಕೇಸರಿಬಾತಿನ] ಹೆಸರನ್ನು ಪೇಟೆಂಟ್ ಮಾಡಿಸುವ ಐಡಿಯಾ ಇದೆ....ನೀವೇನಂತೀರಿ....

ಮತ್ತೆ ನಮ್ಮ ಹೊಸ ಪತ್ರಿಕೆ ಬಗ್ಗೆ ನಿಮ್ಮ ಅತ್ಯಮೂಲ್ಯ ಸಲಹೆಗಳನ್ನು ಖಂಡಿತವಾಗಿ ಪರಿಗಣಿನೆಗೆ ತೆಗೆದುಕೊಳ್ಳುತ್ತೇವೆ......ಥ್ಯಾಂಕ್ಸ್....

ಚಿತ್ರಾ ಸಂತೋಷ್ said...

ಶಹಭಾಸ್...ಬರಲಿ 'ಇ-ಛಾಯಾಗ್ರಹಣ ಪತ್ರಿಕೆ' ನನ್ ಕಡೆಯಿಂದ ಶುಭಹಾರೈಕೆಗಳು. ಜಪ್ಪಯ್ಯ ಅಂದ್ರೂ ಹೆಸರು ಗೊತ್ತಾಗ್ಲಿಲ್ಲ...ಡಿಜಿಟಲ್ ಕಣ್ಣು, ದೃಶ್ಯಕಾವ್ಯ, ಭಾವಕ್ಕೊಂದು ಚೌಕಟ್ಟು, ಡಿಜಿಟಲ್ ಪ್ಯಾರಾಡೈಸ್, ಚಿತ್ರದರಮನೆ, ಚಿತ್ತಾರಲೋಕ-ಒಳಗೂ,ಹೊರಗೂ!..ಇಷ್ಟೇ ಹೊಳೆದಿದ್ದು ಹೆಸ್ರು.
-ಚಿತ್ರಾ

shivu.k said...

ಚಿತ್ರಾ....

ಹೆಸರಿಡುವುದಕ್ಕೆ ಜಪ್ಪಯ್ಯ ಅಂದು ಗೊತ್ತಿಲ್ಲ ಅಂದುಬಿಟ್ಟು ಎಷ್ಟೊಂದು ಸೊಗಸಾದ ಹೆಸರು ಕೊಟ್ಟಿದ್ದಿಯಲ್ಲ ಮಹರಾಯತಿ...ಥ್ಯಾಂಕ್ಸ್....ಕೆಲವು ನಿಜಕ್ಕೂ ಚೆನ್ನಾಗಿವೆ...

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ಮೊದಲಿಗೆ ಎಲ್ಲಾ ಚಿತ್ರಗಳೂ ತುಂಬಾ ಚೆನ್ನಾಗಿ ಬಂದಿರುವುದಕ್ಕೆ ಅಭಿನಂದನೆಗಳು. ಆದರೆ ಅರಣ್ಯರೋದನದ ಚಿತ್ರ ತುಂಬಾ ಬೇಸರ ತಂದಿತು :-(

ಉತ್ತಮ ಮಾಹಿತಿಗಳೊಡನೆ ಹದವಾಗಿ ಬೆರೆತ ಹಾಸ್ಯ, ಲೇಖನಕ್ಕೆ ಮೆರುಗನ್ನು ಕೊಟ್ಟಿದೆ. ಹೀಗೇ ಬರೆಯುತ್ತಿರಿ. ನಿಮ್ಮ ಹೊಸ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು.
ಅಂದಹಾಗೆ ಬ್ಲಾಗ್ ಶೀರ್ಷಿಕೆಗೆ "ಬಿಂಬ-ಪ್ರತಿಬಿಂಬ" ಹೆಸರು ತೋಚಿತು ನೋಡಿ....ನನಗೆ ಈ ಫೋಟೋಗ್ರಾಫಿಯ ಕುರಿತು ಏನೂ ಮಾಹಿತಿಯಿಲ್ಲ. ಹಾಗಾಗಿ ನಾನು ತಪ್ಪದೇ ಓದುವೆ. :)
ವಂದನೆಗಳು.

ಅನಿಲ್ ರಮೇಶ್ said...

ಶಿವು,
ಚಿತ್ರಗಳು, ಲೇಖನ ತುಂಬಾ ಚೆನ್ನಾಗಿದೆ.

ನಿಮ್ಮ ಇ-ಛಾಯಾಗ್ರಹಣ ಪತ್ರಿಕೆ ವಿಚಾರ ತಿಳಿದು ತುಂಬಾ ಖುಷಿ ಆಯ್ತು.


----------------------

ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರಲಿ.

shivu.k said...

ತೇಜಸ್ವಿನಿ ಮೇಡಮ್,

ಲೇಖನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್....ನೀವು ಸೂಚಿಸಿದ ಹೆಸರು ಚೆನ್ನಾಗಿದೆ...ಅದನ್ನು ನಮ್ಮ ತಂಡ ಗಮನಕ್ಕೆ ತೆಗೆದುಕೊಳ್ಳುತ್ತದೆ......ಹೊಸ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ.....


ಅನಿಲ್ ರಮೇಶ್ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....

ರಾಘವೇಂದ್ರ ಕೆಸವಿನಮನೆ. said...

ಶಿವು,
ಕನ್ನಡ ಛಾಯಾಗ್ರಾಹಣ ಪತ್ರಿಕೆಯ ವಿಷಯ ಓದಿದೆ. ಒಳ್ಳೆ ಆಲೋಚನೆ. ನಿಮಗೆ ನಮ್ಮ ಸಹಕಾರ ಖಂಡಿತ ಇದೆ. ಆ ಕುರಿತು ನನ್ನ ಕೆಲವು ಸಲಹೆಗಳನ್ನು ಸಧ್ಯದಲ್ಲಿಯೇ ಮೇಲ್ ಮಾಡುತ್ತೇನೆ.
ಅಂತೂ ನಮ್ಮ ಉಪ್ಪಿಟ್ಟು ವಿರೋಧಿ ಸಂಘಕ್ಕೆ ನೀವೂ ಸೇರಿದ್ದೀರಿ ಅಂತಾಯಿತು.!!!!! ಕನ್ನಡ ಛಾಯಾಗ್ರಾಹಣ ಪತ್ರಿಕೆ ಆರಂಭಿಸುವ ದಿನವೇ ಅಖಿಲ ಭಾರತ ಉಪ್ಪಿಟ್ಟು ವಿರೋಧಿಗಳ ಸಂಘ (ಅ.ಭಾ.ಉ.ವಿ.ಸಂ.)ವನ್ನು ಅಧಿಕೃತವಾಗಿ ಆರಂಭಿಸೋಣ..!!!ಏನಂತೀರಿ!!?
ಸಂಕ್ರಾಂತಿಯ ಶುಭಾಷಯಗಳೊಂದಿಗೆ,
- ರಾಘವೇಂದ್ರ ಕೆಸವಿನಮನೆ.

shivu.k said...

ರಾಘವೇಂದ್ರ,

ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....ಈ-ಪತ್ರಿಕೆಗೆ ನಿಮ್ಮ ಸಹಕಾರ ಆಗತ್ಯ..

ಉಫ್ಪಿಟ್ಟಿನ ವಿಚಾರದಲ್ಲಿ ನನ್ನನ್ನೂ ಸಂಪೂರ್ಣ ಅರ್ಥ ಮಾಡಿಕೊಂಡವರು ನೀವೆ ! ಆ ಸಂಘಕ್ಕೆ ನಾನು ಮೊದಲನೆ ಸದಸ್ಯ. ಬೇಗನೆ ಪ್ರಾರಂಬಿಸಿ...ನನ್ನ ಸಂಪೂರ್ಣ ಸಹಕಾರವಿದೆ.....

ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.....

shivu.k said...

ರಾಘವೇಂದ್ರ ಮತ್ತೊಂದು ವಿಚಾರ! ಉಪ್ಪಿಟ್ಟಿನ ಸಂಘದ ವಿಚಾರ ನಮ್ಮಲ್ಲೇ ಇರಲಿ.....ಶ್.........ಮೆಲ್ಲಗೆ ಪ್ರಾರಂಬಿಸೋಣ....

ಏಕೆಂದರೆ ನನ್ನಾಕೆ ಉಫ್ಪಿಟ್ಟು ಅಂದರೆ ಪಂಚಪ್ರಾಣ.!! ಬಹುಶಃ ಎಲ್ಲಾ ಗೃಹಣೀಯರಿಗೂ ಪಂಚಪ್ರಾಣ, ಆರುಪ್ರಾಣ ಏಳುಪ್ರಾಣ...ಹೀಗೆ....ಇರಬಹುದು....ಅವರಿಗೆ ತಿಳಿಯಬಾರದು......ಓಕೆ.....

ರಾಘವೇಂದ್ರ ಕೆಸವಿನಮನೆ. said...

@ ಶೀವು,
ನನಗೇನೂ ಸಧ್ಯಕ್ಕೆ ಆ ಸಮಸ್ಯೆ ಇಲ್ಲ.!!! ಆದರೆ ನಿಮ್ಮ ವಿಷಯ ತಿಳಿದು ನಿಮ್ಮ ಮನೆಯ ಲಟ್ಟಣಿಗೆಗೆ ಜೀವ ಬಂದರೆ ಆಮೇಲೆ ನಿಮಗೆ ಕಷ್ಟ. ಸಂಘದ ಸದಸ್ಯರ ಹಿತದೃಷ್ಟಿಯಿಂದ ಈ ವಿಷಯ ಗುಟ್ಟಾಗಿಡುತ್ತೇನೆ ಬಿಡಿ.!!!
- ರಾಘವೇಂದ್ರ ಕೆಸವಿನಮನೆ.

ಮಲ್ಲಿಕಾರ್ಜುನ.ಡಿ.ಜಿ. said...

ಕನ್ನಡ ಕ್ಯಾಮೆರಾ, ಕಣ್ಣಲ್ಲಿ ಕ್ಯಾಮೆರಾ, ಫೋಟೋಕನ್ನಡ, ಕ್ಲಿಕ್ ಕನ್ನಡ, ಛಾಯಾಕನ್ನಡ....ಹೇಗೆ?!

shivu.k said...

ಮಲ್ಲಿಕಾರ್ಜುನ್,

ಚೆನ್ನಾಗಿದೆ.....

ಸುಧೇಶ್ ಶೆಟ್ಟಿ said...

ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆಯಿರಲಿ ಶಿವಣ್ಣ.

ಎಲ್ಲಿ೦ದಲೋ ಪ್ರಾರ೦ಬಿಸಿ ಎಲ್ಲಿಗೋ ತ೦ದು ನಿಲ್ಲಿಸಿ ಬಿಟ್ರಿ ಶಿವಣ್ಣ. ಲೇಖನ ಎ೦ದಿನ೦ತೆ............................................................ಚೆನ್ನಾಗಿದೆ:)

ಆನಲೈನ್ ಪತ್ರಿಕೆಗೆ ಹೆಸರು ಹೊಳೆಯುತ್ತಿಲ್ಲ ಈಗ. ಸ್ವಲ್ಪ ಯೋಚಿಸಿ ನಿಮಗೆ ಮೇಲ್ ಮಾಡುತ್ತೇನೆ....

ಗುಡ್ ಲಕ್ಕು.

shivu.k said...

ಸುಧೇಶ್,
ತೊಂದರೆಯಿಲ್ಲ. ನೀವು ಬ್ಯುಸಿಯಾಗಿದ್ದೀರೆಂದು ನಿಮ್ಮ ಬ್ಲಾಗ್ ನೋಡಿದಾಗ ಗೊತ್ತಾಗಿತ್ತು.....ಲೇಖನ ಮೆಚ್ಚಿದ್ದಕ್ಕೆ.........................

ನಮ್ಮ ಹೊಸ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ......

ಭಾರ್ಗವಿ said...

ಲೇಖನ ತುಂಬಾ ಚೆನ್ನಾಗಿದೆ.ಫೋಟೋಗಳು ನನಗೆ ಒಮ್ಮೆ ೧೧ ವರ್ಷದ ಹಿಂದಿನ ಕೆಮ್ಮಣ್ಣುಗುಂಡಿ ಟ್ರಿಪ್ ನೆನಪಿಸಿಕೊಳ್ಳುವಂತೆ ಮಾಡಿದವು. ಇ ಛಾಯಾಗ್ರಹಣ ಪತ್ರಿಕೆ ತರುತ್ತಿರುವುದು ಸಂತಸದ ಸುದ್ದಿ.ಅದರಲ್ಲೂ ಕನ್ನಡದಲ್ಲಿ ಅಂತ ತಿಳಿದು ತುಂಬಾ ತುಂಬಾಸಂತೋಷವಾಯ್ತು.ಅಭಿನಂದನೆಗಳು.

shivu.k said...

ಭಾರ್ಗವಿ ಮೇಡಮ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.....

Harisha - ಹರೀಶ said...

>> ಬೇಕಿದ್ರೆ ನಿಮಗೆ ಎರಡು ಬಸ್ ಟಿಕೆಟ್ ಕೊಡುತ್ತೇನೆ..
ಎರಡು ಬಸ್ ಬೇಡ.. ಒಂದೇ ಬಸ್ಸಿನ ಎರಡು ಟಿಕೆಟ್ ಕೊಡಿ ಸಾಕು ಅಂತ ಹೇಳಬೇಕಿತ್ತು!

ಛಾಯಾಂತರಂಗ ಅಂತಲೂ ಹೆಸರಿಡಬಹುದು..

shivu.k said...

ಹರೀಶ್,

ಪ್ರತಿಕ್ರಿಯಿದ್ದಕ್ಕೆ ಥ್ಯಾಂಕ್ಸ್......ನಿಮ್ಮ ಸಲಹೆ ಆ ಸಮಯದಲ್ಲಿ ನಮಗೆ ಹೊಳೆದಿರಲಿಲ್ಲ...

ಆಲಾಪಿನಿ said...

ತುಂಬಾ ದಿನ ಆಗಿತ್ತು ನಿಮ್ಮ ಬ್ಲಾಗ್ ನೋಡಿ. ಖುಷಿಯಾಯ್ತು. ಆ ಕಳ್ಳ ಶ್ಯಾಮನ್ನೂ ಹಿಟ್ಕೊಂಡ್ಬಂದಿದಿರಾ ಛಾಯಾಕನ್ನಡಿಗೆ? ಬೆಂಗಳೂರು ಮರೆತೇ ಬಿಟ್ಟಿದಾನೆ ಅವನು ಮದುವೆಯಾದಮೇಲೆ. ಅದ್ರಲ್ಲೂ ಮುಳ್ಳಯ್ಯನಗಿರಿ ಏರಿದಮೇಲಂತೂ....

shivu.k said...

ಶ್ರೀದೇವಿ ಮೇಡಮ್,

ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....ಘನಶ್ಯಾಮ್ ಬಗ್ಗೆ ನಿಮ್ಮದು ಒಳ್ಳೆ ಅಭಿಪ್ರಾಯ! ಇದನ್ನು ಅವನಿಗೆ ಫಾರ್ವಡ್ ಮಾಡುತ್ತೇನೆ....ಮತ್ತೆ ಈ ಲೇಖನದ ನಂತರದ "ತಂಗಿ...ಇದೊ ನಿನಗೊಂದು ಪತ್ರ" ಲೇಖನ ಓದಿ..ಅದು ನನ್ನ ಇದುವರೆಗಿನ ಲೇಖನಗಳಲ್ಲೇ ಅತ್ಯಂತ ಭಾವಪೂರ್ಣವಾದದ್ದು....ಮರೆಯದೆ ಓದುತ್ತಿರಲ್ಲಾ!!

Unknown said...

ನಿಮ್ಮ ಬ್ಲಾಗ್ ಇದೀಗ ನೋಡಿದೆ ,ತುಂಬ ಚನ್ನಾಗಿದೆ,ಭವಿಷ್ಯದ ಯೋಚನೆಗಳು ಎಲ್ಲರಿಗೂ ತಲುಪಲಿ
ಶುಭೇಚ್ಚೆಗಳು