Tuesday, December 30, 2008

ಹೊಸ ವರ್ಷಕ್ಕೆ ಹೊಸ ಟೋಪಿಗಳು !!

ಹೊಸ ವರ್ಷದ ಶುಭಾಶಯಗಳು.


ವರ್ಷದ ಮೊದಲ ದಿನ ಯಾವ ವಿಚಾರವನ್ನು ಬ್ಲಾಗಿಗೆ ಹಾಕೋಣವೆಂದುಕೊಂಡಾಗ ನನ್ನ ಆಯ್ಕೆಗಳು ಮೂರು ಇದ್ದವು. ಮೊದಲನೆಯದು ಆಸ್ಸಾಮಿ ಬಿಹು ನೃತ್ಯದ ಸಹೋದರಿಯರಿಯರ ಎರಡನೆ ಭಾಗ. ಎರಡನೆಯದು ನಾನು ತುಂಬಾ ವರ್ಷಗಳಾದ ಮೇಲೆ ಬರೆದ ಕವನ. ಮೂರನೆಯದು ಟೋಪಿಗಳು.

ಕೊನೆಗೆ ಮೂರನೆಯದನ್ನೇ ಆಯ್ಕೆ ಮಾಡಿಕೊಂಡೆ. ಯಾವ ರೀತಿಯ ಟೋಪಿಗಳನ್ನು ಹಾಕುವುದು ? ಮತ್ತೆ ಹೊಸ ಪ್ರಶ್ನೆ ? ಏಕೆಂದರೆ ನನಗೆ ಟೋಪಿ ಹಾಕುವ ಅಲ್ಲಲ್ಲ.......... ಟೋಪಿ ಫೋಟೊ ತೆಗೆಯುವ ಹುಚ್ಚು ಯಾವಾಗ ಹಿಡಿಯಿತೊ ಅಂದಿನಿಂದ ಇವತ್ತಿನವರೆಗೆ ಕಡಿಮೆಯೆಂದರೂ ೮೦ಕ್ಕೂ ಹೆಚ್ಚು ಟೋಪಿಗಳು ನನ್ನ ಖಜಾನೆಯಲ್ಲಿವೆ.

ಅವತ್ತಿನಿಂದ ಇವತ್ತಿನವರೆಗೆ ದಿನಕೊಂದು ಟೋಪಿ ಫೋಟೊ ಕ್ಲಿಕ್ಕಿಸಬೇಕೆಂದು ನಾನು ಹಾಕಿಕೊಂಡ ನಿಯಮವನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದೇನೆ.

ಸರಿ ಹೊಸ ವರ್ಷದ ಕೊಡುಗೆಯಾಗಿ ನಮ್ಮದೇ ರಾಜ್ಯದ, ಇತರೆ ರಾಜ್ಯದ ಜಾನಪದ ಕಲೆಯ ಪ್ರಕಾರಗಳಲ್ಲಿ ಬಳಸುವ ಟೋಪಿಗಳನ್ನು ಹಾಕಿದರೆ ಚಂದ ಕಾಣುತ್ತದೆ ಅಂತನ್ನಿಸಿತು.

ಮತ್ತೇ ಈ ಟೋಪಿಗಳ ಬಗ್ಗೆ ಏನಾದರೂ ಬರೆಯಬೇಕಲ್ಲ ? ಏನನ್ನು ಬರೆಯವುದು ? ಬರೆಯಲು ಏನಾದರೂ ತಲೆಯಲ್ಲಿ ಇದ್ದರೆ ತಾನೆ ! ಹುಡುಕಿದೆ ಸಿಕ್ಕಲಿಲ್ಲ. ಕೊನೆಗೆ ಏನೋ ಬರೆದು ಕೊರೆಯುವುದಕ್ಕಿಂತ ಸುಮ್ಮನೆ ಟೋಪಿ ಹಾಕುವುದು ಮೇಲು ಎನ್ನಿಸಿತು.

ರಾತ್ರೋ ರಾತ್ರಿ ನನ್ನ ಟೋಪಿಗಳ ಮೂಟೆಯಲ್ಲಿ ಎಂದೆಂದೋ ಕ್ಲಿಕ್ಕಿಸಿದ್ದ ನಮ್ಮ ಜನಪದ ಕಲೆಯ ಟೋಪಿಗಳನ್ನು ಒಟ್ಟು ಮಾಡಿ ನಿಮಗಿಲ್ಲಿ ಅರ್ಪಿಸುತ್ತಿದ್ದೇನೆ.....

ಪ್ರೀತಿಯಿಂದ ಒಪ್ಪಿಸಿಕೊಳ್ಳಿ..................

೧. ಪಾಳೆಯಗಾರನ ಟೋಪಿ !


೨. ಕಿತ್ತೂರು ಚೆನ್ನಮ್ಮ ಟೋಪಿ !


೩. ಜಡೆ ಟೋಪಿ !

೪. ಡೊಲ್ಲು ಕುಣಿತಗಾರರ ಟೋಪಿ !


೫. ಒಂಟಿ ನಗಾರಿಕಾರರ ಟೋಪಿ !

೬. ಜಂಟಿ ನಗಾರಿಕಾರರ ಟೋಪಿ !


೭. ಕರಡಿ ಗೊರವಯ್ಯನವರ ಟೋಪಿ !


೮. ಚುನರಿ ಜನಪದ ಕಲೆಗಾರರ ಟೋಪಿ !


೯. ಜಾನಪದ ತುತ್ತೂರಿಯವರ ಟೋಪಿ !


೧೦. ಜನಪದ ತಾಳ ಮತ್ತು ಹಾಡುಗಾರರ ಟೋಪಿ !


೧೧. ದೊಡ್ಡ ನಗಾರಿ ಬಾರಿಸುವವರ ಟೋಪಿ !


೧೨. ಜನಪದ ಕೀಲು ಕುದುರೆಗಾರನ ಟೋಪಿ !


೧೩. ಪಟ ಕುಣಿತಗಾರನ ಟೋಪಿ !


೧೪. ಆಸ್ಸಾಮಿ ಬಿಹು ನೃತ್ಯಗಾರ್ತಿಯರ ಟೋಪಿ !
ಕೇರಳ ಕಥಕ್ಕಳಿ ಟೋಪಿ !
ಫೋಟೊ ಮತ್ತು ಲೇಖನ
ಶಿವು.

38 comments:

ranjith said...

ನಿಮ್ಮ ಟೋಪಿ ಫೋಟೋಗಳ ಬತ್ತಳಿಕೆ ಖಾಲಿಯಾಯಿತೆಂದುಕೊಂಡಿದ್ದೆ. ಭಾರಿ ಭಾರಿ ಬ್ರಹ್ಮಾಸ್ತ್ರಗಳೇ ಇವೆಯಲ್ಲ ಇಲ್ಲಿಯೂ..:)

ಅಂದ ಹಾಗೆ ನಿಮ್ಮ ಕವಿತೆಯ ಮಾತು ಕುತೂಹಲ ಹುಟ್ಟಿಸಿತು.
ಯಾವಾಗ ಅದು ಬ್ಲಾಗ್ ಗೆ?

Guruprasad said...

ಹಾಯ್ ಶಿವೂ,
ನಿಮ್ಮ ಟೋಪಿ ಪುರಾಣನ ಹೊಸ ವರ್ಷದಲ್ಲೂ ಹಾಗೆ ಮುಂದುವರಿಯುವುದ? ಒಳ್ಳೆ ಕ್ರಿಯೇಟಿವಿಟಿ ಗುಡ್ ಹಾಗೆ ಮುಂದುವರಿಸಿ..... ನಮಗೂ ಎಲ್ಲ ಟೋಪಿಗಳ ಪರಿಚಯವಾಗಲಿ .
ಟೋಪಿ ಹಾಕುವವರಿಗೂ ಮತ್ತು ಹಾಕಿಸಿಕೊಳ್ಲುವವರಿಗೂ ಒಳ್ಳೆ ಟಿಪ್ಸ್....

Santhosh Rao said...

ನಿಮ್ಮ ಟೋಪಿ ಫೋಟೋಗಳನ್ನು ನೋಡೋದಿಕ್ಕೇ ಒಂದು ಚೆಂದ ... ಬರಲಿ ಮತ್ತಷ್ಟು ಟೂಪಿಗಳು

shivu.k said...

ರಂಜಿತ್ ಸಾರ್,

ನನ್ನ ಟೋಪಿ ಬತ್ತಳಿಕೆ ಖಾಲಿಯಾಗಿಲ್ಲ. ಇನ್ನೂ ಒಂದೆರಡು ಬಾರಿಗೆ ಆಗಬಹುದು. ಮತ್ತೆ ಕೆಲವು ಹೊಸತು ಸೇರಲುಬಹುದು.[ಈ ವಿಚಾರದಲ್ಲಿ ನನ್ನದು ನಿರಂತರ ಕೃಷಿಯಿರುತ್ತದೆ] ಮುಂದಿನ ಬಾರಿ ಖಂಡಿತ ಕವಿತೆ ! ನೀವು ಸಹಿಸಿಕೊಳ್ಳಲು ಸಿದ್ದರಾಗಬೇಕು !

shivu.k said...

ಗುರು,

ನನ್ನ ಟೋಪಿ ಪುರಾಣ ಹೊಸ ವರ್ಷದಲ್ಲೂ ಮುಂದುವರಿಯುತ್ತದೆ. ಜೊತೆಗೆ ಮತ್ತಷ್ಟು ಹೊಸ ಖಯಾಲಿಗಳು ಬರಬಹುದು.

shivu.k said...

ಸಂತೋಷ್,

ಪ್ರತಿಕ್ರಿಯಿಸಿ ಟೋಪಿ ಹಾಕಿಕೊಂಡಿದ್ದಕ್ಕೆ ಥ್ಯಾಂಕ್ಸ್. ಮುಂದೆಯೂ ವೈವಿದ್ಯಮಯ ಟೋಪಿಗಳು ಬರುತ್ತಿವೆ !

sunaath said...

ಶಿವು,
ಹೊಸ ಟೋಪಿಗಳನ್ನು ತೋರಿಸುತ್ತಲೆ, ವೈವಿಧ್ಯಮಯ ಜನಗಳನ್ನು ತೋರಿಸುತ್ತಿರುವಿರಿ. ಟೋಪಿಗಳಷ್ಟೇ ಈ ವ್ಯಕ್ತಿಗಳೂ
ಆಸಕ್ತಿಕರರಾಗಿದ್ದಾರೆ.
ಹೊಸ ವರ್ಷಕ್ಕೆ ಮತ್ತೆ ಹೊಸ ಟೋಪಿ ತರ್ರೆಪಾ.
ನಿಮಗೆ ಹೊಸ ವರ್ಷದ ಶುಭಾಶಯಗಳು.

ದೀಪಸ್ಮಿತಾ said...

ತುಂಬಾ ಜನರಿಗೆ ಟೋಪಿ ಹಾಕಿದ್ದೀರ ಎಂದು ಕಾಣುತ್ತದೆ :)
ಇರಲಿ, ಒಳ್ಳೆಯ ಸಂಗ್ರಹ

PaLa said...

ಶಿವು,

ಸಕ್ಕತ್ತಾಗಿದೆ ಚಿತ್ರಗಳು.

--
ಪಾಲ

shivu.k said...

ಸುನಾಥ್ ಸಾರ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಮುಂದಿನ ಬಾರಿ ಮತ್ತಷ್ಟು ನಿಮ್ಮ ಅನಿಸಿಕೆಯಂತೆ !


ದೀಪಸ್ಮಿತ,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.. ಟೋಪಿ ಹಾಕಿಸಿಕೊಂಡಿರುವವರಲ್ಲಿ ನೀವು ಒಬ್ಬರು !

ಪಾಲ ಚಂದ್ರ, ಥ್ಯಾಂಕ್ಸ್.......

Ittigecement said...

ಶಿವು ಸರ್...

ಟೊಪ್ಪಿಗಳು ಸಕತ್ತಾಗಿದೆ...
ವೈವಿಧ್ಯಮಯ ಜನರು..
ಅವರ ಟೊಪ್ಪಿಗಳು...

ಹೊಸವರ್ಷ...
ಹರ್ಷಗಳ..
ಹೊಳೆಯನ್ನೇ ಹರಿಸಲಿ....

ಅಂತರ್ವಾಣಿ said...

ಹೊಸ ವರ್ಷದ ಶುಭಾಶಯಗಳು :)

ಈ ಸಲ ಟೋಪಿಗಳು ಚೆನ್ನಾಗಿ ಹಾಕಿದ್ದೀರ...

ಅನಿಲ್ ರಮೇಶ್ said...

ಶಿವು,

ಟೋಪಿಗಳು ಸೂಪರ್‍...

ಹೊಸ ವರ್ಷಕ್ಕೆ ಶುಭ ಹಾರಯ್ಕೆಗಳು...

shivu.k said...

ಪ್ರಕಾಶ್ ಸಾರ್, ಅನಿಲ್ ರಮೇಶ್, ಜಯಶಂಕರ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ನಿಮಗೂ ಹೊಸ ವರ್ಷದ ಶುಭಾಶಯಗಳು.

Archu said...

good one!! nodi tumbaa khushi aaytu..
regards,
archana

shivu.k said...

ಅರ್ಚನ,

ಮತ್ತೊಮ್ಮೆ ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಮತ್ತು ಟೋಪಿ ಹಾಕಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....

ಮಹೇಶ್ ಪುಚ್ಚಪ್ಪಾಡಿ said...

ಚೆನ್ನಾಗಿದೆ.

shivu.k said...

ಮಹೇಶಣ್ಣ, ಥ್ಯಾಂಕ್ಸ್.....

ಪಲ್ಲವಿ ಎಸ್‌. said...

ಶಿವು, ಟೋಪಿ ಚಿತ್ರಗಳು ಚೆನ್ನಾಗಿವೆ. ಎಷ್ಟೊಂದು ವೈವಿಧ್ಯತೆ ಇದೆಯಲ್ವಾ? ಎಲ್ಲವನ್ನೂ ನೋಡಿದ್ದರೂ, ಮನಸ್ಸು ಅಚ್ಚರಿಪಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ.

ಟೋಪಿ ಪುರಾಣ ಚೆನ್ನಾಗಿ ಮೂಡಿಬರುತ್ತಿದೆ. ಮುಂದುವರೆಸಿ.

- ಪಲ್ಲವಿ ಎಸ್‌.

ಚಿತ್ರಾ ಸಂತೋಷ್ said...

ಹಾಯ್ ಶಿವಣ್ಣ..ಹೊಸ ವರುಷವನ್ನು ಸ್ವಾಗತ ಮಾಡೋದೇ.."ಟೋಪಿ ಹಾಕೋದ್ರಿಂದ್ಲಾ..".ಯಪ್ಪಾ..ಯಾರು ಯಾರಿಗೆ ಟೋಪಿ ಹಾಕ್ತಿರೋ..ನಾವೂ ನೋಡ್ಕೋತಿವಿ..ನಂಗೂ ಒಂದು ಟೋಪಿ ಹಾಕಬೇಕು.
ನಮ್ಮ ರಾಜ್ಯದ ಜಾನಪದ ಕಲೆಗಳಲ್ಲಿ ಬಳಸುವ ಟೋಪಿಗಳ ಬಗ್ಗೆ ಬರೆದಿರುವುದು ಸಂತೋಷ..ಒಳ್ಳೆ ವಿಚಾರ. ಇನ್ನಷ್ಟು ಬರೆಯಿರಿ..ಶುಭವಾಗಲಿ.
-ತುಂಬುಪ್ರೀತಿ,
ಚಿತ್ರಾ

shivu.k said...

ಪಲ್ಲವಿಯವರೇ,

ಟೋಪಿಯನ್ನು ಹಾಕಿಸಿಕೊಂಡಿದ್ದಕ್ಕೆ ಅಲ್ಲಲ್ಲ......ನೋಡಿದ್ದಕ್ಕೆ ಮತ್ತು ಪುರಾಣವನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್.....

shivu.k said...

ಹಾಯ್ ಚಿತ್ರಾ,

ನೀನು ಹೊಸ ವರ್ಷದಲ್ಲಿ ಇನ್ನೂ ಯಾಕೆ ಟೋಪಿ ಹಾಕಿಸಿಕೊಳ್ಳಲಿಕ್ಕೆ ಸಾರಿ.....ನೋಡಲಿಕ್ಕೆ ಬರಲಿಲ್ಲ ಅಂದುಕೊಂಡಿದ್ದೆ. ಬಂದೆಯಲ್ಲ...ನಾನು ಹೊಸ ವರ್ಷವನ್ನು ಈ ರೀತಿ ಸ್ವಾಗತ ಮಾಡೋಣವೆನಿಸಿತ್ತು. ಮತ್ತೆ ನಿನಗೆ ಒಂದು ಟೋಪಿ ಮನೆಯಲ್ಲಿದೆ. ನೀನು ಬಂದರೆ ಕೊಡುತ್ತೇನೆ...ಯಾವುದು ಅಂತ ಕೇಳಬೇಡ...ಸಸ್ಪೆನ್ಸ್.....

ಮತ್ತೆ ಹೊಸ ವರ್ಷದಲ್ಲಿ ನಿನಗೆ ಒಳ್ಳೆಯದಾಗಲಿ...

ಪ್ರತಿಕ್ಷಣದ ಪ್ರ್ತೀತಿಗಾಗಿ

ತುಂಬಾ ಥ್ಯಾಂಕ್ಸ್...

ರಾಘವೇಂದ್ರ ಕೆಸವಿನಮನೆ. said...

ಶಿವು,
ಈ ಬಾರಿಯ ಟೋಪಿಗಳೂ ಸಖತ್!!!ನಿಮ್ಮ (ಫೋ)ಟೋಪಿ ಬತ್ತಳಿಕೆ ಖಾಲಿಯಾಗುವುದೇ ಬೇಡ, ಅಕ್ಷಯವಾಗಿರಲಿ.!!!
ಹೊಸ ವರ್ಷದ ಶುಭಾಷಯಗಳೊಂದಿಗೆ
- ರಾಘವೇಂದ್ರ ಕೆಸವಿನಮನೆ.

shivu.k said...

ರಾಘವೇಂದ್ರ ,

ಹೊಸ ವರ್ಷದಲ್ಲು ಟೋಪಿ ಹಾಕಿಕೊಂಡಿದ್ದಕ್ಕೆ ಥ್ಯಾಂಕ್ಸ್....
ನಿಮಗೆ ಹೊಸ ವರ್ಷದ ಶುಭಾಶಯಗಳು.

ಸುಧೇಶ್ ಶೆಟ್ಟಿ said...

Super topigalu...

heege topi haakuththa iri :)

ಮಲ್ಲಿಕಾರ್ಜುನ.ಡಿ.ಜಿ. said...

ಶಿವು, ನಿಮ್ಮ ಚಿತ್ರ ಲೇಖನದ ಪ್ರಭಾವದಿಂದ ಓದುಗರ ದೃಷ್ಟಿ ಹೋದಲ್ಲೆಲ್ಲಾ ತಲೆ ಕಡೆಯೇ ಗಮನಹರಿಸುತ್ತದೆ. ಈ ರೀತಿ ಹೊಸ ಆಲೋಚನೆಗೆ ನಿಮ್ಮ ಲೇಖನಗಳು ನಮ್ಮನ್ನು ಕರೆದೊಯ್ಯಲಿ.ನಾವದನ್ನು ಆನಂದದಿಂದ ಸ್ವಾಗತಿಸುವೆವು.

Lakshmi Shashidhar Chaitanya said...

shivu sir,

naanu ondh second mookaLaagi hode photos nodi. enthenthaa muttu ratnagaLanna nimma khajaaneyalli iTkonDiddeeri ? ondondu sakhattaagide. tumbaa tumbaa tumbaa chennaagide. heege haaktiri topi na :)

Anonymous said...

"ಮತ್ತೇ ಈ ಟೋಪಿಗಳ ಬಗ್ಗೆ ಏನಾದರೂ ಬರೆಯಬೇಕಲ್ಲ ? ಏನನ್ನು ಬರೆಯವುದು ? ಬರೆಯಲು ಏನಾದರೂ ತಲೆಯಲ್ಲಿ ಇದ್ದರೆ ತಾನೆ ! ಹುಡುಕಿದೆ ಸಿಕ್ಕಲಿಲ್ಲ. ಕೊನೆಗೆ ಏನೋ ಬರೆದು ಕೊರೆಯುವುದಕ್ಕಿಂತ ಸುಮ್ಮನೆ ಟೋಪಿ ಹಾಕುವುದು ಮೇಲು ಎನ್ನಿಸಿ"
ಅಂದ್ರಲ್ಲಾ... ತಲೆಯಲ್ಲಿ ಟೋಪಿ ಇತ್ತಲ್ಲಾ... ಅದ್ರಿಂದಾಗಿ ಒಳಗಿನದೇನೂ ಕಾಣಿಸಲಿಲ್ಲ ಅಂತ ಯೋಚಿಸ್ಬಹುದು..

ಫೋಟೋಗಳು ಸಖತ್ತಾಗಿವೆ...

Ramesh BV (ಉನ್ಮುಖಿ) said...

ನಿಮ್ಮ ಟೋಪಿ ಕಲೆಕ್ಶನ್ ತುಂಬಾ ಚೆನ್ನಾಗಿದೆ.. ನೋಡಿ ಸಂತೋಷ ಆಯ್ತು.

Anonymous said...

ಹೊಸ ವರ್ಷದ್ಲ್ಲೂ ನಿಮ್ಮ ಕೈಲಿ ಟೋಪಿ ಹಾಕಿಸ್ಕೊಳ್ಳೋದು ತಪ್ಪಿಲ್ಲವಲ್ಲಾ! ;-) ಚೆನ್ನಾಗಿವೆ, ಟೋಪಿ ಪುರಾಣ! ;-)

shivu.k said...

ಸುಧೇಶ್, ಥ್ಯಾಂಕ್ಸ್....

ಮಲ್ಲಿಕಾರ್ಜುನ್,

ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಮತ್ತು ನಿಮ್ಮ ಮತ್ತಷ್ಟು ಆಡ್ಡದಾರಿಗೆಳೆಯಲು ನನ್ನಲ್ಲಿ ನಾನಾ ಆಲೋಚನೆಗಳಿವೆ.....ಕಾಯುತ್ತಿರಿ....

shivu.k said...

ಲಕ್ಷ್ಮಿ ಮೇಡಮ್,

ನಿಮ್ಮ ಪ್ರತಿಕ್ರಿಯೆ ನನಗೆ ಜವಾಬ್ದಾರಿ ಹೆಚ್ಚಿಸಿದೆ....

shivu.k said...

ಅವಿನಾಶ್ ಸಾರ್,

ನೀವು ನನ್ನ ಬ್ಲಾಗಿಗೆ ಬಂದಿದ್ದು ಖುಷಿಯಾಯಿತು...ಫೋಟೊ ಮತ್ತು ಬರವಣಿಗೆ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ.....

shivu.k said...

ರಮೇಶ್, ಥ್ಯಾಂಕ್ಸ್....

ಪ್ರಕವಿ,

ಇನ್ನೂ ಇವೆ.....ಕಾಯುತ್ತಿರಿ.....

NilGiri said...

ಇಷ್ಟೆಲ್ಲಾ ಜಾನಪದ ಕಲಾವಿದರ ಟೋಪಿಗಳು ನಂಗೆ ಗೊತ್ತೇ ಇರಲಿಲ್ಲ. ಹೊಸಾ ತರ ಟೋಪಿ ಹಾಕಿದ್ದಕ್ಕೆ ಥ್ಯಾಂಕ್ಸು.

shivu.k said...

ಗಿರಿಜಕ್ಕ,
ನೀವೊಬ್ಬರೂ ಉಳಿದಿದ್ದಿರಿ...ಕೊನೆಗೂ ಬಂದಿರಲ್ಲ...ಥ್ಯಾಂಕ್ಸ್...

ಭಾರ್ಗವಿ said...

ವೈವಿಧ್ಯಮಯ ಟೋಪಿಗಳು ತುಂಬಾ ಚೆನ್ನಾಗಿವೆ. ನಿಮ್ಮ ಕವನ ಸಧ್ಯದಲ್ಲೇ ನಿರೀಕ್ಷಿಸಬಹುದೇ?ಎಷ್ಟೋ ತರಹದ ಟೋಪಿಗಳು ಗೊತ್ತಿರಲಿಲ್ಲ. ಗೊತ್ತುಮಾಡಿದ್ದಕ್ಕೆ ಥ್ಯಾಂಕ್ಸ್.

shivu.k said...

ಭಾರ್ಗವಿ ಮೇಡಮ್.

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...

ನಿಮ್ಮ ಪ್ರತಿಕ್ರಿಯೆ ಬಂದಾಗ ನಾನು ಹೊಸ ಕವನವನ್ನು ಬ್ಲಾಗಿಗೆ ಹಾಕುತ್ತಿದ್ದೆ. ಈಗ ನೀವು ನೋಡಬಹುದು ಮತ್ತು ನೋಡಿ ಸಹಿಸಿಕೊಳ್ಳಬಹುದು...ಥ್ಯಾಂಕ್ಸ್...