Monday, October 6, 2008

ಚಂದ್ರ ಮಕುಟ ಹಕ್ಕಿಯ ದಿನಚರಿ

ಮನುಷ್ಯ ತನ್ನ ಜೀವನಪೂರ್ತಿ ಸೋಮಾರಿಯಾಗಿ ಕಳೆಯುವುದೇ ಹೆಚ್ಚು. ಆದರೆ ಪ್ರಾಣಿ, ಪಕ್ಷಿ, ಕೀಟಗಳು ಹಾಗಲ್ಲ. ಹುಟ್ಟಿದ ಮರುಕ್ಷಣದಿಂದಲೇ ಚಟುವಟಿಕೆ ಪ್ರಾರಂಭಿಸುತ್ತವೆ.

ಅದಕ್ಕೊಂದು ತಾಜಾ ಉದಾಹರಣೆ ಈ ಚಂದ್ರಮಕುಟ ಹಕ್ಕಿ. ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಕೇವಲ ಒಂದು ನಿಮಿಷದಲ್ಲಿ ಅದೆಷ್ಟು ಭಂಗಿಗಳಲ್ಲಿ ಕಾಣಿಸಿಕೊಂಡಿತು ನೋಡಿ!


ನನ್ನ ಮಕ್ಕಳಿಗೆ ಪ್ರೀತಿಯಿಂದ ಊಟ ಕೊಡ್ತೀನಿ.....

ತತ್!...... ಈ ಕಾಗೆ ಹದ್ದುಗಳು ಕೆಳಗೆ ಗೂಡಿನ ಹತ್ತಿರವೇ ಹೊಂಚು ಹಾಕುತ್ತಿವೆಯಲ್ಲಾ!
{ಬಲಗಡೆ ತಿರುಗಿ] ನೋಡ್ರೋ ಹದ್ದುಗಳಾ! ನನ್ನ ರಾಕ್ಷಸ ರೂಪವನ್ನು, ನನ್ನ ಪುಟ್ಟಮರಿಗಳ ತಂಟೆಗೆ ಬಂದರೆ ಹುಷಾರ್!!.

ಹೇ ದರಿದ್ರಾ ಕಾಗೆಗಳಾ ನೋಡಿದ್ರಾ? ನನ್ನ ರೌದ್ರಾವತಾರವನ್ನು! ನನ್ನ ಗೂಡಿನ ಕಡೆ ಬಂದ್ರೇ ಹುಷಾರ್!!.'
ಸದ್ಯ ತೊಲಗಿದವು ಪೀಡೆಗಳು, ಒಮ್ಮೆ ಮೈ ಕೊಡವಿಕೊಳ್ಳೋಣ!.
ಗಡಿಯಾರದ ಮುಳ್ಳುಗಳ ಮೇಲೆ ಒಂದು ಕಣ್ಣು ಮತ್ತು ಚಂದ್ರ ಮಕುಟ ಹಕ್ಕಿಯ ಮೇಲೆ ಇನ್ನೊಂದು ಕಣ್ಣು ನೆಟ್ಟಿದ್ದೆ. ಸರಿಯಾಗಿ ಅರವತ್ತು ಸೆಕೆಂಡಿನಲ್ಲಿ ಅದು ಎಷ್ಟು ಚಟುವಟಿಕೆಯಿಂದ ಇರುತ್ತದೆ. ಎಂಬುದನ್ನು ಕಂಡುಂಡಾಗ ಮೈ ಜುಮ್ಮೆಂದಿತು.

ಹೇಗಿದೆ ನನ್ನ ಬ್ಯಾಲೆ ಸ್ಟೈಲ್?
ಕುತ್ತಿಗೆ ಕೆಳಗೆ ತಾಳಲಾರದ ಕಡಿತ!.

ಬೆನ್ನಗರಿಗಳ ಕೆಳಗೆ ಕೆರೆತ.

ಗರಿಗಳಿಗೊಮ್ಮೆ ನಯವಾದ ಮಾಲಿಶ್.
ಓಹ್, ಒಂದು ಸಣ್ಣ ಮೈ ಮುರಿತ.
ಛೇ!.... ಗುದದ್ವಾರದಲ್ಲಿ ಎಂಥದೋ ನವೆ[ನಾಚಿಕೆಯಾಗುತ್ತೆ!!........ನೋಡಬೇಡಿ ಕಣ್ಣು ಮುಚ್ಚಿಕೊಳ್ಳಿ!] ಚಳಿಗಾಲ ಬಂತೆಂದರೆ ಇದು ಸಹನೀಯ ಹವೆ ಇರುವೆಡೆಗೆ ವಲಸೆ ಹೋಗುತ್ತದೆ. ಕ್ಷಣಾರ್ಧದಲ್ಲಿ ಕೀಟಗಳನ್ನು ಹಿಡಿಯುವುದರಲ್ಲಿ ಇದು ನಿಸ್ಸೀಮ. ಮರಿಗಳನ್ನು ಜತನ ಮಾಡುವ ರೀತಿ ಆಹಾರ ತಂದು ಕೊಡುವ ಪರಿ, ಮರಿಗಳನ್ನು ನೋಡಿಕೊಳ್ಳುವ ಕಾಳಜಿ ಅದ್ಬುತ.

ಶಿವು.ಕೆ

11 comments:

ಚಿತ್ರಾ ಸಂತೋಷ್ said...

ಅಬ್ಬಬ್ಬಾ! ಚಿತ್ರಗಳು ಹೃದಯಸ್ಪರ್ಶಿ...
-ಚಿತ್ರಾ

ಹರೀಶ ಮಾಂಬಾಡಿ said...

beautiful..

Ittigecement said...

WAAW!! AMAZING...

NEEVU BORN ARTIST!!

ಸಂದೀಪ್ ಕಾಮತ್ said...

ಪ್ರಿಯ ಶಿವು,

ಒಂದು ಚಿತ್ರ ಸಾವಿರ ಶಬ್ದಗಳಿಗಿಂತ ಪರಿಣಾಮಕಾರಿ ಅನ್ನೋದು ಚೆನ್ನಗಿ ತೋರಿಸಿಕೊಟ್ಟಿದ್ದೀರಾ .ಧನ್ಯವಾದಗಳು:)

ಹಳ್ಳಿಕನ್ನಡ said...

ತುಂಬಾ ಚೆನ್ನಾಗಿವೆ ಫೋಟೋಗಳು. ಅಪರ್ಚರ್ ಮತ್ತು ಶಟರ್ ಸ್ಪೀಡ್ ಮಾಹಿತಿ ಇದಿದ್ದರೆ ಚೆನ್ನಾಗಿತ್ತು.
- ಮಂಜುನಾಥ ಸ್ವಾಮಿ

shivu.k said...

ಮಂಜುನಾಥ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಈ ಫೋಟೊ ತೆಗೆಯುವಾಗ ಅಪಾರ್ಚರ್ ೧೧ ಇಟ್ಟುಕೊಂಡು ಷಟ್ಟರ್ ಸ್ಪೀಡನ್ನು ಆಟೋಗೆ ಸೆಟ್ ಮಾಡಿದ್ದೆ. ತೆಗೆದ ಸಮಯ ಬೆಳಗಿನ ೭-೩೦ರ ಸಮಯ.

ಶಿವು.ಕೆ

Harisha - ಹರೀಶ said...

ಮನುಷ್ಯನೇ ಇರ್ಬೇಕು ಸೋಮಾರಿಗಳಲ್ಲಿ ಸೋಮಾರಿ.. ಚೆಂದದ ಚಿತ್ರಗಳು :-)

VENU VINOD said...

ಶಿವು...
ಹಕ್ಕಿಯ ಚಿತ್ರಗಳನ್ನು ತೆಗೆಯುವ ಕಷ್ಟ ನನಗೆ ಚೆನ್ನಾಗಿ ಗೊತ್ತು. ಅದೆಷ್ಟೋ ಬಾರಿ ಚೆಂದದ ಹಕ್ಕಿ ಇದೆಯೆಂದು ಕ್ಯಾಮೆರಾ ತರುವಾಗ ಅದು ಮಾಯವಾಗಿದ್ದುಂಟು...ಇನ್ನು ಕೆಲವೊಮ್ಮೆ ಲೆನ್ಸ್‌ ಫುಲ್ ಙೂಮ್‌ ಮಾಡುವ ಹೊತ್ತಿಗೆ ಹಕ್ಕಿಗೆ ಅನುಮಾನ ಬಂದು ಹಾರಿಹೋಗುವುದೂ ಉಂಟು...ಹಾಗಿರುವಾಗ ಇಷ್ಟು ಸುಂದರ ಚಿತ್ರ ಸೆರೆ ಹಿಡಿದ ನಿಮಗೆ ಹ್ಯಾಟ್ಸಾಫ್!

ಶ್ರೀನಿಧಿ.ಡಿ.ಎಸ್ said...

yaake water mark na side ge haakbardu? photos ge disturb madthave avu anta nanna anisike.

shivu.k said...

ಶ್ರೀನಿಧಿಯವರೆ,

ನಾನು ಚಿತ್ರಗಳಿಗೆ ಯಾಕೆ watermark ಹಾಕ್ತೀನಿ ಅಂದ್ರೆ ನನ್ನ ಚಿತ್ರ ಯಾರು ದುರ್ಬಳಕೆ ಮಾಡಬಾರದು ಅಂತ. ಭೇರೇನು ಉದ್ದೇಶವಿಲ್ಲ. Thanks.

ಮುತ್ತುಮಣಿ said...

ನಾನು ಇನ್ನೂ ಈ ಲೇಖನವನ್ನು ಓದಿಲ್ಲ, ಆದರೆ ನಿಮ್ಮ ಫೋಟೋಗಳು ಮನಸೂರೆಗೊಳ್ಳುತ್ತವೆ.