














ಅಲ್ಲಲ್ಲ....ಕ್ಯಾಮೆರಾ ಮನಸಿನ ಮಿಡಿತ!



















ಯಾರೇ ನೀನು ಚೆಲುವೇ................ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...................................

೬. ಚೆಲುವೆಯಾ ನೋಟ ಚೆನ್ನಾ...........ಒಲವಿನ ಮಾತು ಚೆನ್ನಾ.............
೭. ಕಣ್ಣು ರೆಪ್ಪೆ ಒಂದನೊಂದು ಮರೆವುದೇ..........ಅದು ಎಂದಾದರೂ ಬೇರೆ ಬೇರೆ ಇರುವುದೇ............
೮. ಮೌನವೇ ಆಭರಣಾ.............ಮುಗುಳ್ನಗೇ ಶಶಿಕಿರಣಾ................
೧೧. ನನ್ನ ಕಣ್ಣ ಕನ್ನಡಿಯಲ್ಲಿ.......ಕಂಡೇ ನಿನ್ನ ರೂಪ............
೧೦. ಕಣ್ಣು ಕಣ್ಣು ಕಲೆತಾಗ.............ಮನವೂ ಉಯ್ಯಾಲೆ ಆಡಿದೆ ಈಗ.............. 
೯. ಮೆಲ್ಲುಸುರೇ..........ಸವಿಗಾನ............. ಎದೆ ಝಲ್ಲನೇ............ಹೂವಿನ ಬಾಣ.............. 
೧೨. ನಗು ನಗುತಾ....ನಲಿ ನಲಿ................ ಏನೇ ಆಗಲಿ...............
೧೩. ನೋಟದಾಗೇ ನಗೆಯಾ ಮೀಟಿ......ಮೋಜಿನಾಗೆ ಎಲ್ಲೆಯ ದಾಟಿ..............
೧೪. ಇವಳು ಯಾರು ಬಲ್ಲೆ ಏನು........ಇವಳ ಹೆಸರ ಹೇಳಲೇನು.......... ಇವಳ ದನಿಗೆ ಕರಗಲೇನು 
೧೫. ನೀರಿನಲ್ಲಿ ಅಲೆಯೋ ಉಂಗುರಾ.................... ಮನಸೆಳೆದನಲ್ಲಾ....... ಕೊಟ್ಟನಲ್ಲಾ.......ಕೆನ್ನೆ ಮೇಲೆ ಪ್ರೇಮದುಂಗುರಾ......... 
೧೬. ಒಲವಿನ..... ಪ್ರಿಯಲತೆ......ಅವಳದೇ ಚಿಂತೇ......... ಅವಳ ಮಾತೆ........ಮಧುರ ಗೀತೆ... ಅವಳೇ ನನ್ನ ದೇವತೇ........
ಮುಂದಿನ ಬಾರಿ ಇದೇ ಸಹೋದರಿಯರ " ಈ ಸಂಭಾಷಣೆ.....ನಮ್ಮ ಈ ಪ್ರೇಮ ಸಂಭಾಷಣೆ........
ಚಿತ್ರ ಮತ್ತು ಲೇಖನ
ಶಿವು.



ಒಂದು ವಾರದ ನಂತರ ನೋಡಿದರೆ ಅದರ ಗೂಡು ಸಿದ್ದವಾಗಿದೆ. ಆ ಗೂಡಿಗೆ ಒಮ್ಮೆ ಗಂಡು ಮತ್ತೊಮ್ಮೆ ಹೆಣ್ಣು ಎರಡು ಬಂದು ಹೋಗುವುದು ನಡೆದೇ ಇತ್ತು. ಇತ್ತ ನಾವು ಗಣೇಶ ಹಬ್ಬಕ್ಕೆ ತುಮಕೂರಿಗೆ ಅಣ್ಣನ ಮನೆಗೆ ಹೋಗಿದ್ದವರು ವಾಪಸು ಬಂದು ನೋಡುತ್ತೇವೆ, ಆಗಲೇ ಎರಡು ಮೊಟ್ಟೆ!.
ಕೊನೆಗೆ ನಾನೆ ತೀರ್ಮಾನಿಸಿದೆ. ಮೂರು ದಿನಕೊಮ್ಮೆ ಮಾತ್ರ ಹೋಗಿ ನೋಡುವುದು ಅಥವಾ ಫೋಟೋ ತೆಗೆಯುವುದು ಅಂತ. ಅವು ಪಾಪ ಏನು ಮಾಡುತ್ತವೆ? ಹೇಳಿ! ನಾವಾದರೂ ಯಾರಮನೆಯಲ್ಲಾದರೂ ಬಸುರಿ ಹೆಣ್ಣು ಇದ್ದರೆ ಡೆಲಿವರಿ ಆಗುವವರೆಗೂ ಮನೆ ಖಾಲಿಮಾಡುವಂತಿಲ್ಲವಲ್ಲ! ಹಾಗೆ ಇಲ್ಲೂ ನನ್ನಂತ ತೊಂದರೆ ಕೊಡುವ ಓನರ್ ಇದ್ದರೂ ಮೊಟ್ಟೆ ಇಟ್ಟಾಗಿದೆ ಅದು ಒಂದು ಲೆಕ್ಕದಲ್ಲಿ ಬಸುರಿಯಾದಂತೆಯೇ...!
ಇದು ಸರಿ ಸುಮಾರು ೨೧ ದಿನ ಕಳೆದಿರಬಹುದು. ನಾನು ಆಗಾಗ ಅವುಗಳ ದಿನಚರಿಗಳನ್ನೆಲ್ಲಾ ಕ್ಲಿಕ್ಕಿಸುತ್ತಿದ್ದೆ. ಇವನೇನಾದ್ರು ಮಾಡಿಕೊಂಡು ಸಾಯಲಿ ಎಂದು ಆ ಪಾರಿವಾಳಗಳು ತಮ್ಮ ಪಾಡಿಗೆ ತಾವು ಇದ್ದವು.
ನಾನು ಮತ್ತು ನನ್ನ ಶ್ರೀಮತಿ ಇಬ್ಬರೂ ಧಾರಾಳವಾಗಿ ಹಕ್ಕಿ, ರಾಗಿ, ಗೋದಿ, ಬಿಸಾಡುವ ಸೊಪ್ಪು, ಸಿಪ್ಪೆಗಳು, ಎಲ್ಲವನ್ನೂ ಹಾಕತೊಡಗಿದವು. ನಾನು ಹಾಕಿದ್ದನ್ನು ಇದುವರೆಗೂ ಮುಟ್ಟದಿದ್ದ ಈ ಹಕ್ಕಿಗಳು, ನಾನು ಇಲ್ಲದಿರುವಾಗ ಅವನ್ನು ತಾವು ತಿಂದು ಮರಿಗಳಿಗೂ ಕೊಕ್ಕಿನಲ್ಲಿ ತೆಗೆದುಕೊಂಡು ಹೋಗಿ ಗುಟುಕು ಕೊಡಲಾರಂಭಿಸಿದವು.
ಒಂದು ದಿನ ನಾನು ಪಾರಿವಾಳಗಳಿಗೆ ಟೆರಸಿನಲ್ಲಿ ಗೋದಿಯನ್ನು ಹಾಕಿ ಅಲ್ಲೇ ಹತ್ತಿರದಲ್ಲಿ ಕುಳಿತು ಇವುಗಳ ಬಗ್ಗೆ ಲೇಖನ ಬರೆಯಲಾರಂಭಿಸಿದೆ. ಸ್ವಲ್ಪ ಹೊತ್ತಿನಲ್ಲೇ ಗಂಡು ಪಾರಿವಾಳ ಬಂದು ಟೆರಸ್ ಕಂಬಿಯ ಮೇಲೆ ಕುಳಿತುಕೊಂಡಿತು. ಅದರ ಕಡೆ ಗಮನಿಸಿದರೂ ನೋಡದಂತೆ ಬರೆಯುತ್ತಿದ್ದೆ.
ಇರಬಹುದು. ಇವು ಹೇಳಿಕೇಳಿ ಸಿಟಿ ಪಾರಿವಾಳಗಳು, ಸಿಟಿ ಜನರ ಹಾಗೆ ಇಲ್ಲಿ ಬದುಕಲು ನಾಚಿಕೆ ಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟರೆ ಹಾಗೂ ಆಗಾಗ ನಮ್ಮ ಹಕ್ಕನ್ನೂ ನೆನಪಿಸುತ್ತಿದ್ದರೇ ಮಾತ್ರ ಇಲ್ಲಿ ಬದುಕಲು ಸಾಧ್ಯ ಅಂತ ಇವಕ್ಕೂ ಅನ್ನಿಸಿರಬೇಕು. ಅದಕ್ಕೇ ನಾನು ಹಾಕಿದನ್ನೆಲ್ಲಾ ಖಾಲಿ ಮಾಡಿ ಇನ್ನಷ್ಟು ತಂದು ಹಾಕುತ್ತಾನೇನೋ ಅಂತ ಕಾಯುತ್ತಿರಬಹುದು ಅನ್ನಿಸಿತ್ತು.
ಮುಗಿಯಿತಲ್ಲ ಹಬ್ಬ. ಬಂದು ಹೋಗುವವರ ನಡುವೆ ಮತ್ತು ನನ್ನ ಕೆಲಸದಲ್ಲಿ ನಿರತನಾಗಿ ನನ್ನ ಗಮನ ಈ ಪಾರಿವಾಳಗಳ ಕಡೆ ಹರಿಯುವಷ್ಟರಲ್ಲಿ ಹತ್ತು ದಿನಗಳು ಕಳೆದು ಹೋಗಿತ್ತು. ಸ್ವಲ್ಪ ಬಿಡುವು ಮಾಡಿಕೊಂಡು ಕ್ಯಾಮೆರಾ ಸೆಟ್ ಮಾಡಿಕೊಂಡು ಮತ್ತೆ ಟೆರೆಸ್ಸಿನಲ್ಲಿ ಕೂತೆ.
ಮರಿಗಳು ನಾನು ಬರುತ್ತಿರುವುದು ಗೊತ್ತಾಗುತ್ತಿದ್ದಂತೆ ಗೂಡಿನ ಪಕ್ಕದ ಸ್ಯಾನಿಟರಿ ಪೈಪಿನ ಮರೆಗೆ ಹೋಗಿ ನನ್ನ ಕ್ಯಾಮೆರಾ ಕಡೆಗೆ ತಮ್ಮ ಹಿಂಬಾಗವನ್ನು ತೋರಿಸುತ್ತಾ ನಿಂತುಬಿಡುತ್ತಿದ್ದವು. ಫೋಟೊ ತೆಗೆಯುವುದಾದರೇ ನಮ್ಮ ಹಿಂಬಾಗದ [ಮರ್ಮಾಂಗವನ್ನು ಸೇರಿದಂತೆ]ಫೋಟೊ ಹೊಡ್ಕೊ ಹೋಗ್! ಅಂತ ನನ್ನನ್ನೂ ಅಣಕಿಸಿದಂತಾಯಿತು.
ಮತ್ತೆರಡು ದಿನ ನಾನು ಮರಿಗಳ ಫೋಟೊಗಳನ್ನು ಧಾರಾಳವಾಗಿ ತೆಗೆದೆ. ಆವುಗಳು ದೊಡದಾಗುತ್ತಾ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನುವುದನ್ನು ಗಮನಿಸತೊಡಗಿದವು. ಅದು ಅವುಗಳ ಹಾವಭಾವ ಚಟುವಟಿಕೆಗಳನ್ನು ನಾನು ಕ್ಯಾಮೆರಾದ ವ್ಯೂಫೈಂಡರಿನಿಂದ ನೋಡುವಾಗ ತಿಳಿಯುತ್ತಿತ್ತು.
ನಾನು ತಕ್ಷಣ ಕ್ಯಾಮೆರಾವನ್ನು ಸ್ಟ್ಯಾಂಡಿನಿಂದ ತೆಗೆಯದೆ ನೋಡೋಣ ಏನು ಮಾಡುತ್ತದೆ ಅಂತ ಹಾಗೆ ಕ್ಯಾಮೆರಾ ಕಿಂಡಿಯಿಂದ ನೋಡತೊಡಗಿದೆ. ಮತ್ತೊಂದು ವಿಷಲ್ ಕುಕ್ಕರಿನಿಂದ ಬಂತಲ್ಲ! ಎದ್ದು ನಿಂತಿದ್ದ ಅದು ಅದರ ಆಳತೆಯ ನಾಲ್ಕು ಹೆಜ್ಜೆ ಮುಂದೆ ಬಂದು ಕೆಳಗೆ ಬಗ್ಗಿ ನೋಡತೊಡಗಿತು. ನಾನು ಅದು ಆಡಿಗೆ ಮನೆ ಕಡೆಗೆ ನೋಡುವುದನ್ನು ಫೋಟೊ ತೆಗೆದೆ. ಮೂರನೇ ಬಾರಿ ಕೂಗಿದಾಗಲೂ ಅಲ್ಲೇ ನಿಂತು ಇಣುಕಿತ್ತು. ಅದು ಕುಕ್ಕರಿನಿಂದ ಹೊರಬಂದ ಹಬೆಗಾಳಿಯಲ್ಲಿರುವ ಮಸಾಲೆ ವಾಸನೆಯನ್ನು ಎಂಜಾಯ್ ಮಾಡುತ್ತಿದೆಯಾ? ಅಥವಾ ಆಡುಗೆ ಮನೆ ಕಿಟಕಿಯ ಒಳಗಿರುವವರನ್ನು[ನನ್ನ ಶ್ರೀಮತಿ]ಗಮನಿಸುತ್ತಿದೆಯಾ? ಗೊತ್ತಿಲ್ಲ.
ಮತ್ತೊಂದು ಮರಿ ಮೂಲೆಯಲ್ಲಿ ಕುಳಿತು ಇದನ್ನೇ ಗಮನಿಸುತ್ತಿತ್ತು. ಐದು ನಿಮಿಷ ಕಳೆದಿರಬಹುದು. ಅದಕ್ಕೇನನ್ನಿಸಿತೊ ಏನೋ ! ಇದ್ದಕ್ಕಿದ್ದಂತೆ ಹಿಂದಕ್ಕೆ ತಿರುಗಿ ತನ್ನ ಗುದದ್ವಾರದಿಂದ ಪಚಕ್ಕನೆ ಹಿಕ್ಕೆ ಹಾಕಿತಲ್ಲ! ಅದೇ ಕ್ಷಣಕ್ಕೆ ನಾನು ಕ್ಲಿಕ್ಕಿಸಿ ಆ ದೃಶ್ಯವನ್ನು ಸೆರೆಹಿಡಿದೆನಲ್ಲ! ಎಲ್ಲವೂ ಮಿಂಚಿ ಮರೆಯಾದಂತೆ ಆಗಿಹೋಯಿತು.
ಕೊನೆಗೊಂದು ದಿನ ಇವುಗಳನ್ನು ಏಮಾರಿಸಿ ಹೇಗಾದರೂ ಫೋಟೊ ತೆಗೆಯಬೇಕಲ್ಲ ಅಂದು ಒಂದು ಉಪಾಯ ಮಾಡಿದೆ. ರಾತ್ರಿ ಎಂಟು ಗಂಟೆಯ ಕತ್ತಲಿನಲ್ಲಿ ಯಾರು ನೋಡುವುದಿಲ್ಲವೆಂದು ಗೂಡಿನಿಂದ ಹೊರಬಂದಾಗ ನಾನು ಫೋಟೊ ತೆಗೆಯುವುದೆಂದುಕೊಂಡು ಕತ್ತಲಲ್ಲಿ ಸ್ಟ್ಯಾಂಡಿಗೆ ಕ್ಯಾಮೆರಾ ಮತ್ತು ಪ್ಲಾಶ್ ಸೆಟ್ ಮಾಡಿದೆ. ಕತ್ತಲಲ್ಲಿ ಏನು ಕಾಣುತ್ತಿರಲಿಲ್ಲ. ಫೋಕಸ್ ಕೂಡ ಆಗುತ್ತಿರಲಿಲ್ಲ. ಕ್ಯಾಮೆರಾ ಕೂಡ ಕಂಡ ವಸ್ತುವನ್ನು ಮನನ ಮಾಡಿಕೊಳ್ಳಲು ಅದಕ್ಕೂ ಬೆಳಕು ಬೇಕಲ್ಲವೆ? ಕೊನೆಗೆ ನಾನೇ ನನಗೆ ತಿಳಿದಂತೆ ಕತ್ತಲಿಗೆ ನನ್ನ ಕಣ್ಣು ಹೊಂದಿಸಿಕೊಂಡು ನಿದಾನವಾಗಿ ಅಂದಾಜಿನ ಮೇಲೆ ಮ್ಯಾನ್ಯೂವಲ್ ಫೋಕಸ್ ಮಾಡುತ್ತಾ ಐದಾರು ಕ್ಲಿಕ್ ಮಾಡಿದ್ದೆ.
ತತ್!...... ಈ ಕಾಗೆ ಹದ್ದುಗಳು ಕೆಳಗೆ ಗೂಡಿನ ಹತ್ತಿರವೇ ಹೊಂಚು ಹಾಕುತ್ತಿವೆಯಲ್ಲಾ!
{ಬಲಗಡೆ ತಿರುಗಿ] ನೋಡ್ರೋ ಹದ್ದುಗಳಾ! ನನ್ನ ರಾಕ್ಷಸ ರೂಪವನ್ನು, ನನ್ನ ಪುಟ್ಟಮರಿಗಳ ತಂಟೆಗೆ ಬಂದರೆ ಹುಷಾರ್!!.
ಹೇ ದರಿದ್ರಾ ಕಾಗೆಗಳಾ ನೋಡಿದ್ರಾ? ನನ್ನ ರೌದ್ರಾವತಾರವನ್ನು! ನನ್ನ ಗೂಡಿನ ಕಡೆ ಬಂದ್ರೇ ಹುಷಾರ್!!.
'
ಸದ್ಯ ತೊಲಗಿದವು ಪೀಡೆಗಳು, ಒಮ್ಮೆ ಮೈ ಕೊಡವಿಕೊಳ್ಳೋಣ!.
ಗಡಿಯಾರದ ಮುಳ್ಳುಗಳ ಮೇಲೆ ಒಂದು ಕಣ್ಣು ಮತ್ತು ಚಂದ್ರ ಮಕುಟ ಹಕ್ಕಿಯ ಮೇಲೆ ಇನ್ನೊಂದು ಕಣ್ಣು ನೆಟ್ಟಿದ್ದೆ. ಸರಿಯಾಗಿ ಅರವತ್ತು ಸೆಕೆಂಡಿನಲ್ಲಿ ಅದು ಎಷ್ಟು ಚಟುವಟಿಕೆಯಿಂದ ಇರುತ್ತದೆ. ಎಂಬುದನ್ನು ಕಂಡುಂಡಾಗ ಮೈ ಜುಮ್ಮೆಂದಿತು.
ಹೇಗಿದೆ ನನ್ನ ಬ್ಯಾಲೆ ಸ್ಟೈಲ್? 
ಕುತ್ತಿಗೆ ಕೆಳಗೆ ತಾಳಲಾರದ ಕಡಿತ!.
ಬೆನ್ನಗರಿಗಳ ಕೆಳಗೆ ಕೆರೆತ.
ಗರಿಗಳಿಗೊಮ್ಮೆ ನಯವಾದ ಮಾಲಿಶ್.
ಓಹ್, ಒಂದು ಸಣ್ಣ ಮೈ ಮುರಿತ.
ಛೇ!.... ಗುದದ್ವಾರದಲ್ಲಿ ಎಂಥದೋ ನವೆ[ನಾಚಿಕೆಯಾಗುತ್ತೆ!!........ನೋಡಬೇಡಿ ಕಣ್ಣು ಮುಚ್ಚಿಕೊಳ್ಳಿ!]
ಚಳಿಗಾಲ ಬಂತೆಂದರೆ ಇದು ಸಹನೀಯ ಹವೆ ಇರುವೆಡೆಗೆ ವಲಸೆ ಹೋಗುತ್ತದೆ. ಕ್ಷಣಾರ್ಧದಲ್ಲಿ ಕೀಟಗಳನ್ನು ಹಿಡಿಯುವುದರಲ್ಲಿ ಇದು ನಿಸ್ಸೀಮ. ಮರಿಗಳನ್ನು ಜತನ ಮಾಡುವ ರೀತಿ ಆಹಾರ ತಂದು ಕೊಡುವ ಪರಿ, ಮರಿಗಳನ್ನು ನೋಡಿಕೊಳ್ಳುವ ಕಾಳಜಿ ಅದ್ಬುತ.
ಶಿವು.ಕೆ