Sunday, June 24, 2012

ನೋಡಿ ಇದೆಲ್ಲಾ ತಮಾಷೆಗಾಗಿ: ಬ್ಲಾಗರ್ಸ್ ಪ್ರವಾಸ




ದಿನಾಂಕ 23ರ ಶನಿವಾರ ನಾವು ಬ್ಲಾಗ್ ಮತ್ತು ಪೇಸ್‍ಬುಕ್ ಗೆಳೆಯರೆಲ್ಲಾ ಒಂದು ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟಕ್ಕೆ ಒಂದು ದಿನದ ಪ್ರವಾಸಕ್ಕೆ ಹೋಗಿದ್ದೆವು.  ಬಸ್ಸಿನ ಪ್ರಯಾಣ ನಡುವೆ ಎಲ್ಲರ ಕಿರುಪರಿಚಯ, ಹಾಡು ಅಂತ್ಯಾಕ್ಷರಿ, ಬಿಡದಿಯ ಸೂಪರ್ ತಟ್ಟೆ ಇಡ್ಲಿ, ಮದ್ದೂರು ಕಾಫಿ, ಕರಿಘಟ್ಟದ ಬೆಟ್ಟದ ವೆಂಕಟೇಶ್ವರ ಸ್ವಾಮಿ ದರ್ಶನ, ನಂತರ ಭರ್ಜರಿ ಊಟ, ಊಟದ ನಂತರ ಅದ್ಬುತ ಆಟಗಳಾದ ಒಲವಿನ ಚೆಂಡು, ಎಳನೀರು ಕುಡಿಯುವ ಪೈಪಿನಲ್ಲಿ ಮನೆ ಕಟ್ಟುವುದು, ಚಿತ್ರವನ್ನು ನೋಡಿ ಅದರಲ್ಲಿರುವ ವಿಶೇಷಗಳನ್ನು ಗುರುತಿಸುವುದು, ನಡುವೆ ಹಲ್ಕಟ್ ಜ್ಯೋತಿಷಿಯ ತಮಾಷೆ, ಕೊನೆಯಲ್ಲಿ ಬಹುಮಾನ ವಿಜೇತರಿಗೆ ಬಹುಮಾನ ಒಟ್ಟಾರೆ ಒಂದು ಅದ್ಬುತವಾದ ಅನುಭವವನ್ನು ಕೊಟ್ಟ ಪ್ರವಾಸದ ಕೆಲವು ಚಿತ್ರಗಳು ನಿಮಗಾಗಿ. ಚಿತ್ರಗಳ ಕೆಳಗಿರುವ ತುಂಟ ಶೀರ್ಷಿಕೆಗಳು ಕೇವಲ ತಮಾಷೆಗಾಗಿ....

ನಾನು ಹೇಳುವ ತತ್ವಪದಗಳನ್ನು.....

ನೀವು ನಂಬಿಬಿಟ್ರಾ....

ನೋಡಿದ್ರಾ...ನಾನು ಹೆಂಗೆ ಯಾಮಾರಿಸಿದೆ ಅಂತ..

ಆದ್ರೂ ನಾನು ಏನು ಹೇಳ್ತೀನಿ ಅಂದ್ರೆ....

ನಾನು ಹೇಳುವ ಈ ಪದಗಳು ಆಕಾಶದಲ್ಲಿ ತೇಲುತ್ತಿರುತ್ತವೆ...[ನಮ್ಮ ಅಜಾದ್]

ಯಾವುರವ್ವ...ಇವ್ಳು ಯಾವುರವ್ವ.....ಏನ್ ಚೆಂದ ಕಾಣಿಸ್ತಾಳೆ...

ಹೋಗಿ ಅಂಕಲ್ ನನಗೆ ಸಂಕೋಚವಾಗುತ್ತೆ....[ಜ್ಯೋತಿ ಬಸು ಮಗಳು]

ನಾನು ಹೇಳೋದು ಏನು ಅಂದ್ರೆ....ಈ ನಗು ಅನ್ನೋದು...
ನನಗೆ ಗೊತ್ತು ಬಿಡಪ...ನಾನು ಮಾರಿಷಸ್ ಗೇ ಹೋಗ್ ಬಂದೀನಿ...[ನಗುಮೊಗದ ಉಮೇಶ್ ದೇಸಾಯ್]
ನಾನು ಹೋಗ್ತೀದ್ದೀನಲ್ಲ.. [ಸದಾ ನಗುತ್ತಿರುವ ನವೀನ್]
ನಮ್ಮ ಆಶಕ್ಕ....ಮಗುವಿನಂತ ನಗು....
ನಾನು ಧ್ಯಾನ ಮಾಡ್ತಿಲ್ಲಪ್ಪ...ಅಂತ್ಯಾಕ್ಷರಿ ಹಾಡು ನೆನಪು ಮಾಡಿಕೊಳ್ತೀದ್ದೀನಿ..
ನಯನ...ನಯನ......[ರೂಪ ಸತೀಶ್]
ಗುಬ್ಬಚ್ಚಿಯಂತೆ ಕೂತು ಕಿಟಕಿಯತ್ತ ನೋಡುತ್ತಿದ್ದ...ಸಂಧ್ಯಾ...

ಕರಿಘಟ್ಟ ಬೆಟ್ಟಕ್ಕೆ ನಮ್ಮ ಪ್ರಯಾಣ ಸಾಗಿತ್ತು. ಅಲ್ಲಿ ದೇವರ ದರ್ಶನ ನಮಸ್ಕಾರ...ನಂತರ ಎಲ್ಲರಿಗೂ ಭೂರಿ ಬೋಜನ.
ಚೆನ್ನಾಗಿ ಊಟ ಮಾಡಿ ಆದ್ರೆ ನಿದ್ರೆ ಮಾತ್ರ ಮಾಡಬೇಡಿ....ಬಾಲು ಸರ್.

                          

                     ಹೀಗೆ ಸಾಲಿನಲ್ಲಿ ಕುಳಿತು ಉಣ್ಣುವ ಸುಖವೇ ಬೇರೆ....
    ಊಟವಾದ ನಂತರ ಎಲ್ಲರು ಗೋಲ್ ಘರ್ ನಲ್ಲಿ ಆಸೀನ....
 ಮುಂದೆ ಬಂತಲ್ಲ ಹಲ್ಕಟ್ ಜ್ಯೋತಿಷಿ ಪ್ರಸಂಗ....
 ಹಲ್ಕಟ್ ಜ್ಯೋತಿಷಿಗೆ ತಕ್ಕ ಜ್ಯೋತಿಷಿ ಹ್ಯಾಂಕರು....
ಈಗ ಒಲವಿನ ಚೆಂಡಾಟ ಸುರು.....
ಚೆಂಡಾಟದ ಜೊತೆಗೆ ಕ್ಯಾಮೆರದಲ್ಲಿ ಸೆರೆಯಿಡಿಯುವ ಆಟ..
ಸಕ್ಕತ್ ಮಜವಿದೆ ಅಲ್ವಾ....
ಇದನ್ನು ವಿಡಿಯೋ ಮಾಡುವುದರಲ್ಲಿ ಎಂಥ ಮಜವಿದೆ ಗೊತ್ತಾ...
ಇದು ಖಂಡಿತ ಡ್ಯಾನ್ಸ್ ಅಲ್ಲ ಕಣ್ರಿ...ಒಂಥರ ಹೊಸ ಆಟ...
ನಗು ನಗುತಾ...ನಲಿ ನಲಿ....


ನೀವು ಮನೆಕಟ್ಟಿಕೊಳ್ಳಿ...ನಾನು ಬಾಡಿ ಕಟ್ತೀನಿ...ಕರಿಘಟ್ಟ ತಂಡ.
ಪ್ರಕಾಶ್ ಹೆಗಡೆಯವರ ಎಡಿಯೂರಪ್ಪ ತಂಡ ಮನೆಕಟ್ಟುವಲ್ಲಿ ತಲ್ಲೀನ...
ಇದರಿಂದ ಮನೆ ಕಟ್ಟಲು ಸಾಧ್ಯವೇ...ನಮ್ಮ ಹಲ್ಕಟ್ ತಂಡ...



   ಆಟ ಮುಗಿದ ಮೇಲೆ ಒಂದು ಕಾಫಿ ಪಕೋಡ ಬಂತು. ನಂತರ ಬಹುಮಾನ ವಿತರಣೆ...ಕಾರ್ಯಕ್ರಮ...
          ಆಜಾದ್‍ಗೆ ಗಿಟಾರು.....
 ನವದಂಪತಿಗಳಿಗೆ ಸಿಕ್ಕಿದು......ಇದು.
ಪ್ರಕಾಶ್ ಹೆಗಡೆಗೆ ಸಿಕ್ಕಿದ್ದು ಸೆಂಟ್ ಬಾಟಲ್...
ಮಹೇಶ್ ಗೌಡ್ರ ಬಹುಮಾನ...ಇದು ಬಸ್ಸಿನಲ್ಲಿ ನಿದ್ರೆ ಮಾಡುತ್ತಿದ್ದ ಸುಧೇಶ್‍ನನ್ನು ಬೆದರಿಸಿ ಎಚ್ಚರಿಸಿದ್ದಕ್ಕೆ...
ನಮ್ಮ ಬಹುಮಾನ ಸಕ್ಕತ್ ಆಗಿದೆ...ರೂಪ ಸತೀಶ್ ಮತ್ತು ಅವರ ಮಗಳು.
ಬಾಲು ಸರ್ ಕತ್ತಿ ಪ್ರಕಾಶ್ ಹೆಗಡೆ ಸರ್ ಕಡೆಗೆ...ಇದು ಕಾರ್ಯಕ್ರಮ ಚೆನ್ನಾಗಿ ಆಯೋಜಿಸಿದ್ದಕ್ಕೆ ಶಿಕ್ಷೆನಾ...
ನಮ್ ಬಹುಮಾನ ನೋಡ್ರಿ....ಜ್ಯೋತ ಬಸು
ಶ್ರೀಕಾಂತ್ ಮಂಜುನಾಥ್ ದಂಪತಿಗಳು..
ಪ್ರಕಾಶ್ ಹೆಗಡೆ ಕುಟುಂಬಕ್ಕೆ ಸಿಕ್ಕ ಬಹುಮಾನ...
ಇವರೆಲ್ಲಾ...ಬೀಡಿ ಪಂಟರುಗಳು....ವಿಶೇಷ ಬಹುಮಾನಗಳು.
 ಓಂ ಶಿವಪ್ರಕಾಶ್ ಕುಟುಂಬ...
ನವೀನ್ ಮೇಷ್ಟ್ರು ಮತ್ತು ಗಿರೀಶ್ ಗೆ ಬಹುಮಾನ..
ಉಮೇಶ್ ದೇಸಾಯಿ ಕುಟುಂಬಕ್ಕೆ ಸಿಕ್ಕ ಬಹುಮಾನ.

   ಈ ಪ್ರವಾಸದಲ್ಲಿ ಮೊದಲನೆಯವನಾಗಿ ನಾನು ಬಸ್ ಹತ್ತಿದ್ದೆ. ಖುಷಿ ಆನಂದವೆನ್ನುವುದು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿದಷ್ಟೂ ಇಮ್ಮಡಿಯಾಗುತ್ತದೆಯೆನ್ನುವ ಅದ್ಬುತ ಅನುಭವವನ್ನು ಪಡೆದುಕೊಂಡು ಪ್ರವಾಸದ ಸವಿನೆನಪುಗಳೊಂದಿಗೆ ಕೊನೆಯವನಾಗಿ ಬಸ್ ಇಳಿದಿದ್ದೆ...


  ಮತ್ತೊಂದು ವಿಶೇಷ ಸುದ್ಧಿ ಇದೆ. ಅದು ನಮ್ಮ ಪ್ರವಾಸದ ಸಮಯದಲ್ಲಿ ಆಗಿದ್ದು. ಅದಂತೂ
 ನಮ್ಮ ಜೀವಮಾನದಲ್ಲೇ ಮರೆಯಲಾಗದ ಅನುಭವವೊಂದು ಅವತ್ತು ಆಯ್ತು.  ಅದೇನೆಂದು ತಿಳಿದುಕೊಳ್ಳಲು  ನೀವು ಮುಂದಿನ ಗುರುವಾರದವರೆಗೆ  ಕಾಯಲೇ ಬೇಕು. 
 ಚಿತ್ರಗಳು: ಶಿವು ಮತ್ತು ನವೀನ್.
 

23 comments:

ಮನಸು said...

ಶಿವು, ಚೆನ್ನಾಗಿದೆ ಒಳ್ಳೆ ಮಜ ಮಾಡಿದ್ದೀರಿ ಎಲ್ಲಾ, ಹಾಗೆ ಪ್ರತಿ ಪೋಟೋಗು ಒಳ್ಳೋಳ್ಳೆ ಕ್ಯಪ್ಷನ್ ಕೊಟ್ಟಿದ್ದೀರಿ. ಎಲ್ಲಿ ಹೇಮ ಕಾಣ್ತಾ ಇಲ್ಲ ಬಂದಿರಲಿಲ್ಲ್ವೇ .

shivu.k said...

ಸುಗುಣಕ್ಕ,
ಹೌದು ಸಕ್ಕತ್ ಮಜ ಮಾಡಿದ್ವಿ...ಹೇಮಾಳ ತಾಯಿಗೆ ಮೈಗೆ ಹುಶಾರಿರಲಿಲ್ಲವಾದ್ದರಿಂದ ಅವಳು ಅವತ್ತೆ ಊರಿಗೆ ಹೋದಳು. ಧನ್ಯವಾದಗಳು.

Srikanth Manjunath said...

ಶಿವೂ ಸರ್...ಕೆಲವು ಪ್ರವಾಸಗಳು ಲೈಲ್ಯಾಂಡ್ ಲಾರಿಗಳ ತರಹ ನಿಧಾನಕ್ಕೆ ಶುರುವಾಗಿ...ನಂತರ ಲಯ ಕೊಂದುಕೊಳ್ಳುತ್ತೆ..ಆದ್ರೆ ಈ ಪಯಣ...ಶುರುವಿನಿಂದಲೇ ಜೆಟ್ ವೇಗ ಪಡೆದುಕೊಂಡಿತು..ಬಾಲು ಹೇಳಿದಂತೆ...ನಗೆ ಬಾಂಬರ್ಸ್ಗಳು ದಾಳಿ ನೆಡೆಸುತಿದ್ದವು...ಒಬ್ಬರಿಗಿಂತ ಒಬ್ಬರು ಅರ್.ಡಿ.ಎಕ್ಸ್.....ಸೂಪರ್ ಆಗಿತ್ತು..ನಿಮ್ಮ ನಿರೂಪಣೆ...ಛಾಯಾಚಿತ್ರಗಳು ಈ ಪ್ರವಾಸದ ಕನ್ನಡಿಗಳು...ಸೂಪರ್..

ಸವಿಗನಸು said...

ಶಿವು,
ಸಕ್ಕತ್ ಮಜ ಮಾಡಿದ್ದೀರಿ ಎಲ್ಲಾ..,
ಪೋಟೋ ಕ್ಯಪ್ಷನ್ ಚೆನ್ನಾಗಿದೆ....
ಸೂಪರ್..

Dr.D.T.Krishna Murthy. said...

ಶಿವು;ಮಜಾ ನಿಮ್ಮದು.ಖುಶಿನಮ್ಮದು!!!ಫೋಟೋಗಳು ಮತ್ತು ನಿಮ್ಮ ಲೇಖನ ಚೆನ್ನಾಗಿ ಮೂಡಿ ಬಂದಿವೆ.ಅಭಿನಂದನೆಗಳು.

ಚುಕ್ಕಿಚಿತ್ತಾರ said...

channaagide...:))

Ittigecement said...

ಶಿವು ಸರ್....

ಫೋಟೊಗಳು...
ನಿಮ್ಮ ಅಡಿ ಬರಹಗಳು ಎಲ್ಲವೂ ಮಜಾ ಕೊಟ್ಟಿತು....

ಮತ್ತೊಮ್ಮೆ ಪ್ರವಾಸದ ನೆನಪನ್ನು ಹಸಿರು ಮಾಡಿತು.... ಜೈ ಹೊ !

ಜಲನಯನ said...

ಚನ್ನಾಗಿವೆ ಫೊಟೋಗಳು...ಅವಕ್ಕೆ ಸೆಡ್ಡು ಹೊಡೆಯೋ ಕಾಮೆಂಟಿನ ಹಪ್ಪಳದ ಸಪ್ಪಳ....

Keshav.Kulkarni said...

ಮತ್ತೆ ಬ್ಲಾಗಿಸಲು ಶುರುಮಾಡಿದ್ದಕ್ಕೆ ಖುಷಿಯಾಯಿತು. ಫೋಟೋ ತುಂಬ ಚೆನ್ನಾಗಿವೆ.

Badarinath Palavalli said...

ಶಿವೂ ಸಾರ್,

ಉತ್ತಮ ಬರಹ ಮತ್ತು ಅಮೋಘ ಚಿತ್ರಗಳು. ಕೊಟ್ಟ ಕ್ಯಾಪ್ಷನ್ಗಳು ನಿಮ್ಮ ಕಲಾವಂತಿಕೆಗೆ ಸಾಕ್ಷಿ.

ಒಳ್ಳೆಯ ಟ್ರಿಪ್ ಮಿಸ್ ಮಾಡಿಕೊಂಡೆನಲ್ಲಾ ಎಂಬ ಕೊರಗು ನನಗೆ ನಿರಂತರ.

ನನ್ನ ಬ್ಲಾಗಿಗೂ ಬನ್ನಿರಿ.

Anitha Naresh Manchi said...

chennaagi hotte ursidri :))))

ಗೆಳತಿ said...

ತಮ್ಮ ಎಲ್ಲಾ ಪೋಟೋಗಳು, ಪೋಟೊಗೆ ತಕ್ಕ ತಲೆಬರಹ, ಬ್ಲಾಗ್ ನಲ್ಲಿ ಪ್ರವಾಸದ ಬಗ್ಗೆ ನಿಮ್ಮ ನಿರೂಪಣೆ ಎಲ್ಲವೂ ತುಂಬಾ ಚೆನ್ನಾಗಿವೆ.

ರೂಪಕ್ಕ, ರೂಪಕ್ಕನ ಕಣ್ಣುಗಳು, ಹಾಗೂ ಸಂಧ್ಯಾರವರ ಪೋಟೋಗಳನ್ನು ವಿಭಿನ್ನವಾಗಿ ತೆಗೆದಿರುವ ನಿಮ್ಮ ಚಾಕ ಚಾಕ್ಯತೆ ಮೆಚ್ಚುಗೆಯಾಯಿತು.

sunaath said...

ಶಿವು,
ನಿಮ್ಮ ಮಜಾವನ್ನು ಫೋಟೋಸಹಿತವಾಗಿ ನಮ್ಮೊಡನೆ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು.

shivu.k said...

ಶ್ರಿಕಾಂತ್ ಮಂಜುನಾಥ್ ಸರ್:
ನಮ್ಮ ಪ್ರವಾಸಗಳು ಯಾವಾಗಲೂ ಹೀಗೆ...ಎಲ್ಲಾ ವಿಚಾರಗಳು ವ್ಯವಸ್ಥಿತವಾಗಿ ಸಿದ್ಧಪಡಿಸುವುದರಿಂದ ಹೊಸದಾಗಿ ಬರುವವರಿಗೆ ಅಚ್ಚರಿಯುಂಟಾಗುವುದು ಖಚಿತ.ಲೇಖನ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಮಹೇಶ್ ಸರ್:
ಥ್ಯಾಂಕ್ಸ್.

shivu.k said...

ಡಾ.ಕೃಷ್ಣಮೂರ್ತಿ ಸರ್,
ನಮ್ಮ ಮಜ ನಿಮಗೂ ಸಿಗಲಿ ಅಂತ...ಧನ್ಯವಾದಗಳು.

shivu.k said...

ಚುಕ್ಕಿ ಚಿತ್ತಾರ,

ಥ್ಯಾಂಕ್ಸ್

shivu.k said...

ಪ್ರಕಾಶ್ ಹೆಗಡೆ ಸರ್,

ಇದೆಕ್ಕೆಲ್ಲಾ ನೀವು ಮತ್ತು ಮೈಸೂರಿನ ಬಾಲು ಸರ್ ಕಾರಣ...ಇಬ್ಬರಿಗೂ ಧನ್ಯವಾದಗಳು.

shivu.k said...

ಅಜಾದ್,
ಫೋಟೊಗಳು ಮತ್ತು ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಬದರಿನಾಥ ಪಾಲವಳ್ಳೀ ಸರ್:

ಚಿತ್ರಗಳು ಮತ್ತು ಉಪಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮುಂದಿನ ಬಾರಿ ತಪ್ಪಿಸಿಕೊಳ್ಳಬೇಡಿ...

shivu.k said...

Anitha Naresh Manchi :

ಹೊಟ್ಟೆ ಉರಿದುಕೊಳ್ಳಬೇಡಿ...ಮುಂದಿನ ಟ್ರಿಪ್ಪಿಗೆ ಸಿದ್ದರಾಗಿಬಿಡಿ..

shivu.k said...

ಗೆಳತಿ:

ನನ್ನ ಬ್ಲಾಗಿಗೆ ಸ್ವಾಗತ,ಲೇಖನ, ಚಿತ್ರಗಳು ಅದಕ್ಕೆ ಉಪಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಚಲಿಸುತ್ತಿರುವ ಬಸ್ಸಿನಲ್ಲಿ ನನಗೆ ಕ್ಲಿಕ್ಕಿಸಲು ಸಾಧ್ಯವಾಗಿದ್ದು ಇಷ್ಟೇ. ರೂಪ ಮೇಡಮ್, ಮತ್ತು ಸಂಧ್ಯ ಫೋಟೋಗಳು ಅಜಾನಕ್ಕಾಗಿ ಸಿಕ್ಕಿದ್ದು ಅಷ್ಟೇ..ಬೇರೆಯವರು ಓಡಾಡುತ್ತಿದ್ದರಲ್ಲ..ಅದಕ್ಕೇ ಅವರ ಫೋಟೊ ತೆಗೆಯಲಿಕ್ಕಾಗಲಿಲ್ಲ...
ಮತ್ತೆ ಇದೇ ಪ್ರವಾಸದಲ್ಲಿ ಪಡೆದುಕೊಂಡ ಒಂದು ವಿಶೇಷ ಅನುಭವವನ್ನು ಚಿತ್ರಸಹಿತ ನೋಡಲು ನಾಳೆ ಬೆಳಿಗ್ಗೆ ಗುರುವಾರ ನನ್ನ ಛಾಯಕನ್ನಡಿ ಬ್ಲಾಗ್ ಮಾತ್ರವಲ್ಲದೇ ಅನೇಕ ಬ್ಲಾಗುಗಳಲ್ಲಿ ಅದೇ ವಿಚಾರವೂ breaking news ತರ ಬರುತ್ತದೆ...ತಪ್ಪಿಸಿಕೊಳ್ಳಬೇಡಿ..ಧನ್ಯವಾದಗಳು.

shivu.k said...

ಸುನಾಥ್ ಸರ್:

ಧನ್ಯವಾದಗಳು. ನಾಳೆ ಬೆಳಿಗ್ಗೆ ಪ್ರವಾಸದಲ್ಲಿ ಆದ ಒಂದು ವಿಶೇಷ ಅನುಭವದ ವಿಚಾರವಾಗಿ ಪ್ರವಾಸ ಹೋಗಿದ್ದವರ ಬ್ಲಾಗುಗಳನ್ನು ನೋಡಲು ಮರೆಯದಿರಿ.