Friday, March 23, 2012

ತರಂಗ ಉಗಾದಿ ವಿಶೇಷಾಂಕದಲ್ಲಿ ನನ್ನ ಹೊಸ ಫೋಟೊಗಳು.


                ಈ ಚಿತ್ರದಲ್ಲಿರುವವರು ನನ್ನ ಅಕ್ಕನ ಮಕ್ಕಳಾದ ಚೇತನ ಮತ್ತು ವರ್ಷಿಣಿ. ಕಳೆದ ವರ್ಷ  ಇದೇ ಸರಣಿಯ ಚಿತ್ರಗಳನ್ನು ಕ್ಲಿಕ್ಕಿಸುವ ಸಮಯದಲ್ಲಿ ಕೈಕಾಲುಗಳಿಗೆ ಒಂದಿಂಚು ಉದ್ದವಿರುವ ಹತ್ತಾರು ಈಚಲ ಮರದ ಚುಚ್ಚಿಸಿಕೊಂಡಿದ್ದೆ.  ಒಂದು ಮುಳ್ಳಂತೂ ಹದಿನೈದು ದಿನ ನನ್ನ ಕಾಲಿನಲ್ಲೇ ಇದ್ದು ಸಕ್ಕತ್ ನೋವು ಕೊಟ್ಟಿತ್ತು.  ಅದೆಲ್ಲದರ ಪ್ರತಿಫಲ ಇವತ್ತು ಸಿಕ್ಕಿದೆ. ಇವತ್ತು ಮಾರುಕಟ್ಟೆಗೆ ಬಂದ  ಈ ಕೆಳಗಿನ ಚಿತ್ರವೂ ತರಂಗ ಉಗಾದಿ ವಿಶೇಷಾಂಕದಲ್ಲಿ ಸಂಧ್ಯಾ ಪೈರವರ ಸಂಪಾದಕೀಯ ಬರಹದ ಜೊತೆಗೆ ಪ್ರಕಟವಾಗಿದೆ.[ಪುಟ 20]

   
      ಇಲ್ಲಿರುವ ಎರಡು ಚಿತ್ರಗಳು ಕೂಡ ತರಂಗ ಉಗಾದಿ ವಿಶೇಷಾಂಕದೊಳಗೆ ವೀಣಾ ಬನ್ನಂಜೆಯವರ "ಏನು ಹೊಸತೆಂದರೆ..." ಕವನದ ಜೊತೆ  ಪ್ರಕಟವಾಗಿವೆ. [ಪುಟ 25 ಮತ್ತು 26]
   
            ಇದಲ್ಲದೇ ನನ್ನದೇ ಒಂದು ಪುಟ್ಟ ಕತೆ "ಕಣ್ಣಿಲ್ಲದವರು" ಕೂಡ ಪ್ರಕಟವಾಗಿದೆ. ಅದನ್ನು ನೀವು ಓದಿ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ.
    
         ಹುಟ್ಟು ಕುರುಡನಾದ ವಾಜಿದ್ ಕೈಯನ್ನು ಹಿಡಿದು ಪೋಲಿಯೋ ಪೀಡಿತಳಾದ ಫಾತಿಮ ರೈಲು ನಿಲ್ದಾಣದಲ್ಲಿ  ನೂರಾರು ಜನರ ನಡುವೆ ನಿಂತಿದ್ದರು.  ರೈಲು ಬಂದು ನಿಲ್ಲುತ್ತಿದ್ದಂತೆ ನೂರಾರು ಜನರು ಹತ್ತಿದರು. ಅಷ್ಟೇ ಜನ ಪ್ರಯಾಣಿಕರು ಇಳಿದರು. ಅವರೆಲ್ಲರ ನಡುವೆಯೇ ಫಾತಿಮಾಲ ಸಹಾಯದಿಂದ ವಾಜಿದ್ ಕೂಡ ರೈಲು ಹತ್ತಿಕೊಂಡ. ರೈಲು ಹೊಅಟಿತು. ಪ್ರಯಾಣಿಕರು ತಮ್ಮದೇ ಕೈಂಕರ್ಯದಲ್ಲಿ ತೊಡಗಿಕೊಂಡರು. ಒಬ್ಬ ಪುಸ್ತಕವನ್ನು ತೆಗೆದುಕೊಂಡರೆ, ಎದುರಿಗಿದ್ದವ ತನ್ನ ಜೇಬಿನಲ್ಲಿ  ಮೊಬೈಲ್ ಫೋನಿನ ಇಯರ್ ಫೋನನ್ನು ಕಿವಿಗೆ ಹನಿಸಿ ತನಗಿಷ್ಟವಾದ ಸಿನಿಮಾ ಹಾಡುಗಳನ್ನು ಕೇಳತೊಡಗಿದ್ದ. ಅವನ ಹಿಂದಿನ ಸೀಟಿನ ಹುಡುಗಿಯರಿಗೆ ತಮ್ಮ ಕಾಲೇಜಿನ ಹುಡುಗರ ಪೆಕರಾಟಗಳೇ ಅವರ ಚರ್ಚೆಯ ವಸ್ತು. ಕಿಟಕಿಯ ಬಳಿ ಸ್ಕೂಲ್ ಮಾಸ್ತರ್ ಚಲಿಸುವ ಹೊರಜಗತ್ತನ್ನು ಸುಮ್ಮನೇ ನೋಡುತ್ತಿದ್ದರು.


       "ಈ ದೇಹದಿಂದ ದೂರನಾದೆ ಏಕೆ ಆತ್ಮನೇ.... ಸುಶ್ರಾವ್ಯವಾದ ಹಾಡು ತೇಲಿ ಬಂದು ತಕ್ಷಣ ರೈಲು ಬೋಗಿಯಲ್ಲಿದ್ದವರೆಲ್ಲರ ಗಮನ ಅತ್ತ ಕಡೆಗೆ ಹರಿಯಿತು. ತನ್ನ ಕೈಗಳಲ್ಲಿ ಎರಡು ಮರದ ಚಪ್ಪಟೆ ತುಂಡುಗಳಿಂದ ತಾಳವನ್ನು ಹಾಕುತ್ತಾ ಈ ಹಾಡು ಹೇಳುತ್ತಿದ್ದವನು ಕಣ್ಣಿಲ್ಲದ ವಾಜಿದ್.


       ಎರಡು ನಿಮಿಷ ಎಲ್ಲರೂ ತನ್ಮಯರಾಗಿ ಹಾಡು ಕೇಳಿದರು. ಹಾಡು ಮುಗಿಯುತ್ತಿದ್ದಂತೆ ಅವನೊಂದಿಗಿದ್ದ ಫಾತಿಮಾ ತನ್ನ ಕಾಲೆಳೆದುಕೊಂಡು, "ಅಮ್ಮ ತಾಯಿ ಕಣ್ಣಿಲ್ಲ. ಕಾಲಿಲ್ಲ ದಾನ ಧರ್ಮ ಮಾಡಿ" ಅಂತ ಕೈಯೊಡ್ಡಿದಳು. ಹಾಡು ಕೇಳಿ ಕೆಲವು ಮಕ್ಕಳು ಮತ್ತು ಮಕ್ಕಳ ಮನಸ್ಸಿನವರು ಪ್ರೀತಿಯಿಂದ,, ಇನ್ನೂ ಕೆಲ ದೊಡ್ಡಮನಸ್ಸಿನವರು ಕರುಣೆಯಿಂದ, ತಮ್ಮ ಗಂಭೀರ ಚರ್ಚೆಗೆ ತೊಂದರೆಯಾಯಿತೆಂದು ಬೇಸರದಿಂದ ಕೆಲವರು ಪುಡಿಗಾಸು ಹಾಕಿದರೆ, ಇನ್ನೂ ಕೆಲವರು ಹಾಕಬೇಕೆಂದು ಕೈಯನ್ನು ಜೇಬಿಗಿಳಿಸಿ ಮುಂದಿನ ನಿಲ್ದಾಣದಲ್ಲಿ ಸಿಗರೇಟಿಗೆ ಬೇಕಾಗುತ್ತದೆ ಅಂತ ಸುಮ್ಮನಾದರು....ಬರಿಗೈ ಹೊರತೆಗೆದರೆ ಕೈಗೆ ನಾಜಿಕೆಯಾಗುತ್ತದೆಯೆಂದು ಕೈಯನ್ನು ಜೇಬಿನಲ್ಲೇ ಬಿಟ್ಟರು.

      ನಿಮಗೆಲ್ಲರಿಗೂ ನಂದನ ನಾಮ ಸಂವತ್ಸರ ಸುಖ ಸಮೃದ್ಧಿ ಕರುಣಿಸಲಿ ಎಂದು ಹಾರೈಸುತ್ತ ಬ್ಲಾಗ್ ಗೆಳೆಯರಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು.
           
ಚಿತ್ರಗಳು ಮತ್ತು ಲೇಖನ:
ಶಿವು.ಕೆ

      
   

13 comments:

ಚುಕ್ಕಿಚಿತ್ತಾರ said...

nice photos..

Dr.D.T.Krishna Murthy. said...

ಆತ್ಮೀಯ ಶಿವು ಅವರಿಗೆ ಯುಗಾದಿ ಹಬ್ಬದ ಶುಭಾಶಯಗಳು.

Dr.D.T.Krishna Murthy. said...

ಆತ್ಮ್ಮೆಯ ಸ್ನೇಹಿತ ಶಿವು ಅವರಿಗೆ ಹಬ್ಬದ ಶುಭಾಶಯಗಳು.ವರ್ಡ್ ವೆರಿಫಿಕೇಶನ್ ತೆಗೆದರೆ ಒಳ್ಳೆಯದು.ತುಂಬಾ ತೊಂದರೆ ಕೊಡುತ್ತಿದೆ.

sunaath said...

ಶಿವು,
ಫೋಟೋಗಳು ತುಂಬಾ ಚೆನ್ನಾಗಿವೆ. ಕತೆ ಕೂಡ ಮಾರ್ಮಿಕವಾಗಿದೆ. ಹೊಸ ಸಂವತ್ಸರ ನಿಮಗೆ ಹೆಚ್ಚಿನ ಯಶಸ್ಸು ಸುಖ ಹಾಗು ಶಾಂತಿಯನ್ನು ತರಲಿ.

shridhar said...

Tumba Artha Garbhita kathe ... and Nice Photos .. saw it in you facebook page as well ...

Ugadi Habbada Shubhashayagalu ....

Uma Bhat said...

ಚಂದದ ಫೋಟೋಗಳು......

ಸಾಗರದಾಚೆಯ ಇಂಚರ said...

Great photos sir
we proud of you

Happy Ugaadi

and keep going

ಚಿನ್ಮಯ ಭಟ್ said...

ಶಿವು ಸರ್..ಆ ಚಿತ್ರಗಳು ತುಂಬಾ ಚೆನ್ನಾಗಿದೆ,ಅದರಲ್ಲಿ ನನಗೇನೋ ಒಂದು ಸ್ವಾತಂತ್ರ್ಯ,ಉತ್ಸಾಹ ಕಾಣುತ್ತಿದೆ...ದೊಡ್ಡವರಾದಂತೆ ಆ ಸ್ವಚ್ಛಂದತೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೋ ಎನಿಸುತ್ತಿದೆ.ಆ ಹಿಂಬದಿಯ ಹುಲ್ಲು ಮನಸ್ಸಿಗೇನೋ ಹಿತ ಕೊಡುತ್ತದೆ. ಒಟ್ಟಿನಲ್ಲಿ, ನೋಡುತ್ತಲೇ
ಇರಬೇಕು ಎನಿಸುವ ಚಿತ್ರಗಳವು.....ಧನ್ಯವಾದಗಳು.

ಆ ಕಥೆಯ ಮುಂದಿನ ಭಾಗ ತರಂಗದಲ್ಲಿದೆಯೋ ಎನೋ ಗೊತ್ತಿಲ್ಲ,ಆದರೆ ಈ ಬ್ಲಾಗಿನ್ನಲ್ಲಿದ್ದಷ್ಟೇ ಕಥೆಯಾದರೆ,ನನ್ನದೊಂದು ಚಿಕ್ಕ ಕೋರಿಕೆ..ಅದನ್ನು ದಯವಿಟ್ಟು ಮುಂದುವರೆಸಿ,ಅದರಲ್ಲೇನೋ ಒಂದು ಆಕರ್ಷಣೆಯಿದೆ..

ಸರಿ,ಬಿಡುವು ಮಾಡಿಕೊಂಡು ಬನ್ನಿ ನಮ್ಮನೆಗೂ ..ಏನೋ ಬರೆಯುವ ಪ್ರಯತ್ನದಲ್ಲಿದ್ದೇನೆ,ನನ್ನನ್ನು ತಿದ್ದಿ ತೀಡಿ

ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್
http://chinmaysbhat.blogspot.com/

ಕ್ಷಣ... ಚಿಂತನೆ... said...

ಶಿವು ಅವರೆ, ಅದ್ಭುತವಾದ ಕಲ್ಪನೆ ಮತ್ತು ಚಿತ್ರಗಳನ್ನು ತೆಗೆದಿದ್ದೀರಿ. ಅಭಿನಂದನೆಗಳು.
ಸ್ನೇಹದಿಂದ,

Unknown said...

ಚಿತ್ರಗಳು ತುಂಬಾ ಚೆನ್ನಾಗಿದೆ, ಸರ್..

ವನಿತಾ / Vanitha said...

nice :)

Unknown said...

moody photos

Siegelgitf said...

ಚಿತ್ರಗಳು ತುಂಬಾ ಚೆನ್ನಾಗಿದೆ, ಸರ್..