Thursday, October 13, 2011

ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ


   
     ಛಾಯಾಸಕ್ತರೇ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ

    ನೆನ್ನೆಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ  ಛಾಯಾ ವಿಶಿಷ್ಟ ಎನ್ನುವ ಅದ್ಬುತ ಛಾಯಚಿತ್ರ ಪ್ರದರ್ಶನ ಪ್ರಾರಂಭವಾಗಿದೆ.  ಇದು ಅಂತಿಂತ ಛಾಯಾಚಿತ್ರಗಳ ಪ್ರದರ್ಶನವಲ್ಲ. ಕಲಾತ್ಮಕ ಛಾಯಾಗ್ರಾಹಣದಲ್ಲಿ ಮಾಸ್ಟರ್ ಮತ್ತು ಫಿಲೋಶಿಫ್ ಪಡೆದ ಕರ್ನಾಟಕದ ಎಂಟು ಜನ ಸಾಧಕರ ಛಾಯಾಚಿತ್ರಗಳನ್ನು ನೋಡುವ ಅವಕಾಶ.  ಈ ಕಲಾತ್ಮಕ ಛಾಯಾಗ್ರಹಣದಲ್ಲಿ  ಲಂಡನ್ನಿನ "ರಾಯಲ್ ಫೋಟೊಗ್ರಫಿ ಸೊಸೈಟಿ" ಯವರು ARPS ಮತ್ತು FRPS ಎನ್ನುವ ಎರಡು ಅತ್ಯುನ್ನತ ಮನ್ನಣೆಗಳನ್ನು ನೀಡುತ್ತಾರೆ.  ಅದೇ ರೀತಿ ಪ್ಯಾರಿಸ್ಸಿನ "ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಲ ಅರ್ಟ್ ಫೋಟೊಗ್ರಫಿಕ್" AFIAP, EFIAP, MFIAP ಎನ್ನುವ ಮನ್ನಣೆಯಗಳನ್ನು ನೀಡುತ್ತಾರೆ.  ಮತ್ತೊಂದು "ಅಮೇರಿಕನ್ ಫೋಟೊಗ್ರಫಿಕ್ ಅಷೋಷಿಯೇಷನ್"  ನೀಡುವ ಸ್ಟಾರ್ ರೇಟಿಂಗ್ ಮನ್ನಣೆ.   ಈ ಮೂರು ಸಂಸ್ಥೆಗಳು ಫೋಟೊಗ್ರಫಿ ಕ್ಷೇತ್ರದಲ್ಲಿ ವಿಶ್ವವಿಖ್ಯಾತವೆನಿಸುವ ಅತ್ಯುನ್ನತ ವಿಶ್ವವಿದ್ಯಾಲಯಗಳು ಇದ್ದಂತೆ. 

          ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿಯವರ "FRPS ಅಥವ "fellowship Rayal photography society"  ಹಾಗೂ ಪ್ಯಾರಿಸ್ಸಿನ "ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಲ ಅರ್ಟ್ ಫೋಟೊಗ್ರಫಿಕ್"  MFIAP ಅಥವ Master of Federation International De la Art photographic" ಇವೆರಡು ಕಲಾ ಛಾಯಾಗ್ರಹಣ ಕ್ಷೇತ್ರದ ಅತ್ಯುಚ್ಚ ಪ್ರಶಸ್ತಿ ಮತ್ತು ಮನ್ನಣೆಗಳು. ಇಂಥ  ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯುವುದು ಸುಲಭವಲ್ಲ.   FRPS ಗಳಿಸುವ ಮೊದಲು ARPS ಗಳಿಸಬೇಕು, ಹಾಗೆ MFIAP ಗಳಿಸುವ ಮೊದಲು EFIAP [Exelense of  Federation International De la Art photographic] ಮನ್ನಣೆ ಗಳಿಸಬೇಕು.  ಅದಕ್ಕೂ ಮೊದಲು AFIAP[Asociateship of  Federation International De la Art photographic] ಪಡೆಯಬೇಕು. ಇವೆಲ್ಲವನ್ನು ಗಳಿಸದೆ ನೇರವಾಗಿ FRPS ಆಗಲಿ MFIAP ಆಗಲಿ ಪಡೆಯಲು ಸಾಧ್ಯವಿಲ್ಲ.  ಶಿಕ್ಷಣ ಕ್ಷೇತ್ರ ಅಥವ ಇನ್ನಿತರ ಕ್ಷೇತ್ರಗಳಲ್ಲಿ ಪಡೆಯುವ ಡಾಕ್ಟರೇಟ್ ನಂತೆ ಈ FRPS ಮತ್ತು MFIAP. ಡಾಕ್ಟ್ರರೇಟುಗಳನ್ನು ನಮ್ಮ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಶ್ವ ವಿದ್ಯಾಲಯಗಳು ನೀಡಿದರೆ ಮೇಲೆ ವಿವರಿಸಿದ ಫೋಟೊಗ್ರಫಿ ಮನ್ನಣೆಗಳನ್ನು ಪ್ಯಾರಿಸ್, ಲಂಡನ್, ಅಮೇರಿಕಾದ ಈ ವಿಶ್ವವಿದ್ಯಾಲಯದಂತ ಸಂಸ್ಥೆಗಳಿಂದಲೇ ಪಡೆಯಬೇಕು.  ಮತ್ತೆ ಪ್ರತಿಯೊಂದು ದೇಶಗಳಲ್ಲಿ ಸಾವಿರಾರು ಅಥವ ಅದಕ್ಕಿಂತ ಹೆಚ್ಚು ಡಾಕ್ಟರೇಟು ಪಡೆದ ಸಾಧಕರಿದ್ದಾರೆ.  ಆದ್ರೆ ನಮ್ಮ ಭಾರತದಲ್ಲಿ 1943 ರಿಂದ 2011 ರ ಸೆಪ್ಟಂಬರ್ ವರೆಗೆ ಕೇವಲ ಹದಿನೈದು ಜನರು ಮಾತ್ರ ಇಂಥ ಮನ್ನಣೆಗಳನ್ನು ಸಾಧಿಸಿದ್ದಾರೆ.  ಅಂತ ತಿಳಿದಾಗ ಇವುಗಳನ್ನು ಪಡೆಯುವುದು ಎಷ್ಟು ಕಷ್ಟ ಮತ್ತು ಅದರ ಹಿಂದೆ ಎಂಥ ಸಾಧನೆ ಶ್ರಮ ಬೇಕು ಎಂದು ಅರ್ಧೈಸುವುದು ನಿಮಗೆ ಬಿಟ್ಟಿದ್ದು.

              ಮೊದಲಿಗೆ AFIAP ಪಡೆಯಬೇಕಾದರೆ ನಾವು ಹತ್ತಾರು ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳಲ್ಲಿ ನಮ್ಮ ಚಿತ್ರಗಳು ಪ್ರಶಸ್ತಿ ಗಳಿಸಬೇಕು ಅಥವ ಕನಿಷ್ಟ ಪಕ್ಷ ಪ್ರದರ್ಶನಕ್ಕೆ ಆಯ್ಕೆಯಾಗಬೇಕು.  ಇದಕ್ಕಿಂತ ಮೊದಲು ನೂರಾರು ರಾಷ್ಜ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ನಿಮ್ಮ  ಚಿತ್ರಗಳು  ಪ್ರಶಸ್ತಿ ಗಳಿಸಬೇಕು ಅಥವ ಕನಿಷ್ಟ ಪಕ್ಷ ಪ್ರದರ್ಶನಕ್ಕೆ ಆಯ್ಕೆಯಾಗಬೇಕು.   ರಾಷ್ಟ್ರಮಟ್ಟದ ಗುಣಮಟ್ಟ ತಿಳಿಯುವ ಮೊದಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ನಿಮ್ಮ ಆಯ್ಕೆಯಾಗಬೇಕು.


ಹೀಗೆ ಮೇಲಿನಿಂದ ಕೆಳಮುಖವಾಗಿ ವಿವರಿಸಿರುವ ಇಷ್ಟೆಲ್ಲಾ ಹಂತಗಳಲ್ಲಿ ಸ್ಪರ್ಧಿಸಲು Pictorial, Black and white, Nature,  Photo travel, Wild life, Creative, ಹೀಗೆ ಹತ್ತಾರು ವಿಭಾಗಗಳಿವೆ. ಈ  ವಿಭಾಗದಲ್ಲಿ  ಯಾವ ರೀತಿಯ ಚಿತ್ರಗಳಿರಬೇಕು. ಅವುಗಳ ಗುಣಮಟ್ಟ ಹೇಗಿರಬೇಕು, ಈ ಗುಣಮಟ್ಟ ಎಂದರೇನು, ಅದನ್ನು ಅರಿತುಕೊಳ್ಳುವುದು ಹೇಗೆ ಇವೆಲ್ಲವುಗಳ ಹಿನ್ನೆಲೆಯನ್ನು ಒಂದು photo appriciation ಮಾಡುವುದು ಹೇಗೆ? ಇದನ್ನೇ ಕನ್ನಡದಲ್ಲಿ ಫೋಟೊವನ್ನು ಮೆಚ್ಚುವುದು ಎನ್ನುವುದಕ್ಕಿಂತ ಫೋಟೊವನ್ನು ಓದುವುದು ಹೇಗೆ  ಅದರ ವಿಧಿ ವಿಧಾನಗಳೇನು ನಿಯಮಗಳೇನು?  ಹೀಗೆ ಕೆಳಗಿನಿಂದ ಮೇಲಿನ ಅತ್ಯುಚ್ಚ ಅಂತದ ವರೆಗೆ  ಹಂತ ಹಂತವಾಗಿ ತಲುಪುವುದು ಹೇಗೆ ಎನ್ನುವ ಸಂಪೂರ್ಣ ವಿವರಪೂರ್ಣ ವಿಚಾರವನ್ನು ನನ್ನ ಮುಂದಿನ ಫೋಟೊಗ್ರಫಿ ಲೇಖನದಲ್ಲಿ ಬರೆಯುತ್ತೇನೆ.

      ಮತ್ತೆ ಈಗ ನಡೆಯುತ್ತಿರುವ ಸ್ಪರ್ಧೆಗೆ ಬರೋಣ.  ಭಾರತದಾದ್ಯಂತ MFIAP ಮನ್ನಣೆ ಮತ್ತು ಗೌರವ ಪಡೆದಿರುವ 15 ಪ್ರಖ್ಯಾತ ಛಾಯಾಗ್ರಾಹಕರಲ್ಲಿ  ನಮ್ಮ ಕರ್ನಾಟಕದವರೇ 7 ಜನರಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ.  ಹಾಗೆ ಭಾರದಾದ್ಯಂತ FRPS ಮನ್ನಣೆ ಮತ್ತು ಗೌರವ ಪಡೆದಿರುವ 27 ಪ್ರಖ್ಯಾತ ಛಾಯಾಗ್ರಾಹಕರಲ್ಲಿ  ನಮ್ಮ ಕರ್ನಾಟಕದವರೇ 13 ಜನರಿದ್ದಾರೆ ಎನ್ನುವುದು ಹೆಮ್ಮೆಯ ಮತ್ತು ಸಂತೋಷದ ವಿಚಾರ.  ನಿನ್ನೆ ಪ್ರಾರಂಭವಾದ ಈ "ಛಾಯಾವಿಶಿಷ್ಟ" ಎನ್ನುವ ಛಾಯಾಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿತವಾಗುತ್ತಿರುವುದು ಈ ನಮ್ಮ ಕರ್ನಾಟಕದ 13 ಮಹಾನ್ ಛಾಯಾಗ್ರಾಹಕರ ಅದ್ಬುತ ಚಿತ್ರಗಳು.  ಇವುಗಳಲ್ಲಿ ಹೆಚ್ಚಿನವು ಡಿಸ್ಟಿಂಕ್ಷನ್ ಪಡೆಯಲು ಕಳಿಸಿದ ಚಿತ್ರಗಳೇ ಆಗಿರುವುದು ವಿಶೇಷ.  ಮತ್ತೆ ಭಾರತದ ಮೊದಲಿಗೆ 1943ರಲ್ಲಿ ARPS ಅಂತರರಾಷ್ಟ್ರೀಯ ಮನ್ನಣೆ ಪಡೆದ ಡಾ. ಜಿ.ಥಾಮಸ್ ರವರ ಆಗಿನ ನೆಗೆಟಿವ್ ಕಪ್ಪುಬಿಳುಪಿನ ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನವಾಗುತ್ತಿವೆ. ಇವನ್ನು ನೋಡುವುದು ಈಗ ಅದರಲ್ಲೂ ಬೆಂಗಳೂರಿನ ಛಾಯಾಸಕ್ತರಿಗೆ ಸೌಭಾಗ್ಯವೇ ಸರಿ.

           ಇದಲ್ಲದೇ 1943 ರಿಂದ 2011 ರ ವರೆಗೆ ಕರ್ನಾಟಕದ 115 ಛಾಯಾಗ್ರಾಹಕರು ARPS, AFIAP, EFIAP, MFIAP ಮನ್ನಣೆ ಮತ್ತು ಗೌರವವನ್ನು ಗಳಿಸಿದ್ದಾರೆ.  ಅವರೆಲ್ಲರ ಹೆಸರುಗಳನ್ನು ಈ ಪ್ರದರ್ಶನದಲ್ಲಿ ಹಾಕಿದ್ದಾರೆ.  ಅದನ್ನು ನಿಮಗಾಗಿ ಇಲ್ಲಿ ಕೊಡುತ್ತಿದ್ದೇನೆ.
     
  
              
        ದಿನಾಂಕ 13-10-2011 ರಿಂದ 17-10-2011 ರವರೆಗೆ ನಡೆಯುವ ಈ ಅದ್ಬುತ ಛಾಯಾಚಿತ್ರ ಪ್ರದರ್ಶನವನ್ನು ಮಿಸ್ ಮಾಡಿಕೊಳ್ಳಬೇಡಿ. ಮತ್ತೊಂದು ವಿಷಯ.: ದಿನಾಂಕ 15-10-2011 ರಂದು ಸಂಜೆ 5 ಗಂಟೆಗೆ ಈ ಪ್ರಖ್ಯಾತರು ತಮ್ಮ ಫೋಟೊಗ್ರಫಿ ಬದುಕಿನ ಅನುಭವಗಳನ್ನು ಹಂಚಿಕೊಳ್ಳುವ ಸಂವಾದವಿದೆ. ಅದನ್ನಂತೂ ಮಿಸ್ ಮಾಡಿಕೊಳ್ಳಲೇಬೇಡಿ

ಶಿವು.ಕೆ

8 comments:

ಕ್ಷಣ... ಚಿಂತನೆ... said...

Shivu sir,
maahitigaagi dhanyavaadagalu.

snehadinda,

Anuradha said...

I feel so proud to see my father Dr.D.V.Rao's name in the list of Distinction holders of Karnataka

Badarinath Palavalli said...

Thanks for this post sir. I will visit the exhibitation and comment u back. :-)

pl. Visit my blog.

ಜಲನಯನ said...

ಶಿವು, ನಾಡಿಗರಿಗೆ ಇದು ಸುವರ್ಣಾವಕಾಶ ಉತ್ತಮ ಚಿತ್ರಗಳನ್ನು ನೋಡಿ ಆನಂದಿಸೋಕೆ...ನಮಗೆ...ಈ ಭಾಗ್ಯ ಇಲ್ಲ...

shivu.k said...

ಚಂದ್ರು ಸರ್,
ನೀವು ನೋಡಿ ಆನಂದಿಸಿ..

shivu.k said...

Anuradha,

ನೀವು ಅವರ ಮಗಳು ಅನ್ನುವ ವಿಚಾರ ತಿಳಿದು ಖುಷಿಯಾಯಿತು. ಹೂವಿನ ಜೊತೆ ನಾರು ಸ್ವರ್ಗ ಸೇರುವಂತೆ ನಾನು ಡಿಸ್ಟಿಂಕ್ಷನ್ ಸಾಲಿನಲ್ಲಿದ್ದೇನೆ ಎನ್ನುವುದು ನನಗೆ ಸಂತೋಷದ ವಿಚಾರ.

shivu.k said...

ಬದರಿನಾಥ್ ಸರ್,
ಫೋಟೊಗ್ರಫಿ ಪ್ರದರ್ಶನವನ್ನು ನೋಡಿ...ನಿಮ್ಮ ಅಭಿಪ್ರಾಯವನ್ನು ತಿಳಿಸಿ..

shivu.k said...

ಆಜಾದ್,
ನಿಮ್ಮ ಮಾತು ನೂರಕ್ಕೆ ನೂರು ನಿಜ. ಆದ್ರೆ ನೀವು ದೂರದಲ್ಲಿದ್ದು ಇಂಥ ಅವಕಾಶ ಮಿಶ್ ಮಾಡಿಕೊಳ್ಳುತ್ತಿದ್ದೆವಲ್ಲ ಅಂತ ಚಿಂತಿಸುತ್ತಿದ್ದರೆ...ನನಗೆ ತಿಳಿದ ಮಾಹಿತಿ ಪ್ರಕಾರ ನಮ್ಮ ಬ್ಲಾಗ್ ಮತ್ತು ಫೇಸ್ ಬುಕ್ ಛಾಯಾಸಕ್ತರಲ್ಲಿ ಯಾರೊಬ್ಬರು ಒಬ್ಬರೂ ಬೇಟಿನೀಡಿಲ್ಲದಿರುವುದು ಮತ್ತು ಇದರ ಬಗ್ಗೆ ಕುತೂಹಲವನ್ನು ತೋರಿಸದಿರುವುದು ನಿಜಕ್ಕೂ ವಿಪರ್ಯಾಸ. ನಿಜಕ್ಕೂ ಫೋಟೋಗ್ರಫಿ ಕಲೆಯನ್ನು ಗಂಭೀರವಾಗಿ ಕಲಿಯಬೇಕೆನ್ನುವವರು ಇಂಥ ಅದ್ಬುತ ಪ್ರದರ್ಶನವನ್ನು ನೋಡದೆ ತಪ್ಪಿಸಿಕೊಂಡರೆ ನಿಜಕ್ಕೂ ಅವರಿಗೆ ನಷ್ಟ.
ಪ್ರತಿಕ್ರಿಯೆಗೆ ಧನ್ಯವಾದಗಳು.