Thursday, July 14, 2011

ಗೆಳೆಯನಿಗೊಂದು ಅವಾರ್ಡು

          ಈಗ ನನ್ನ ವಾಸ ಮಾರುತಿ ಬಡಾವಣೆ ಮಲ್ಲೇಶ್ವರಂ ರೈಲ್ವೇ ನಿಲ್ದಾಣಕ್ಕೆ ಮಗ್ಗಲು. ಈ ಬಡಾವಣೆಯ ಕಾಲು ದೇವಯ್ಯ ಪಾರ್ಕ್. ಹಬ್ಬ ಹರಿದಿನಗಳಿಗೆ ಒಮ್ಮೆ ನಾನು ದೇವಯ್ಯ ಪಾರ್ಕಿನ ಗಣೇಶ ದೇವಸ್ಥಾನಕ್ಕೆ ಹೋಗುತ್ತೇನೆ ನನ್ನ ಶ್ರೀಮತಿಯ ಒತ್ತಾಯದ ಮೇರೆಗೆ.  ದೇವಸ್ಥಾನಕ್ಕಿಂತ ನನಗೆ ತುಂಬಾ ಇಷ್ಟವಾಗುವುದು ಮಲ್ಲೇಶ್ವರಂ ರೈಲ್ವೇ ನಿಲ್ದಾಣ. ನಿತ್ಯ ಒಮ್ಮೆ ಬೇಟಿ ನೀಡಿದಿದ್ದರೆ ನನಗೆ ಸಮಾಧಾನವೇ ಆಗುವುದಿಲ್ಲ. ಅದೆಲ್ಲ ಈಗಿನ ಮಾತು. ಆದ್ರೆ ಹದಿಮೂರು ವರ್ಷಗಳ ಹಿಂದೆ ನನ್ನ ಮನೆ ಒಂದು ಮೈಲಿ ದೂರದ ಶ್ರೀರಾಮಪುರಂನಲ್ಲಿದ್ದರೂ ಫೇವರೇಟ್ ಜಾಗ ದೇವಯ್ಯ ಪಾರ್ಕ್ ಆಗಿತ್ತು. ಅಲ್ಲಿ ಗಣೇಶ ದೇವಸ್ಥಾನವಿದೆ ಅಂತ ಅಲ್ಲ. ಅಲ್ಲಿ  ಏಳೆಂಟು ಹುಡುಗರ ಒಂದು ಗುಂಪು ಸಂಜೆ ಆರು ಗಂಟೆಗೆ ಸೇರುತ್ತಿತ್ತು. ಏಕೆ ಸೇರುತ್ತಿತ್ತು ಅಂತ ಮುಂದೆ ವಿವರಿಸುತ್ತೇನೆ ಮೊದಲಿಗೆ ಅವರೆಲ್ಲರ ಪರಿಚಯ.

 ೨೦-೨೫ ವಯಸ್ಸಿನ ಆಗತಾನೆ ಪದವಿ ಮುಗಿಸಿದವರು ಕೆಲವರು. ಇನ್ನೂ ಕೆಲವರು ಎಂ ಎ ಮಾಡುತ್ತಿರುವವರು ಇದ್ದರು. ಅವರ ಗುಂಪಿನಲ್ಲಿ ನಾನು ಇದ್ದೆ.  ನಾನು ಸೇರಿದಂತೆ ಎಲ್ಲರೂ  ತಾತ್ಕಾಲಿಕ ಉದ್ಯೋಗಗಳನ್ನು ಮಾಡುತ್ತಿದ್ದೆವು.  ಒಬ್ಬ ಶಿವಶಂಕರ್ ಅಂತ. ಆತ ಆಗತಾನೆ ಕಾಲೇಜು ಮುಗಿಸಿ ಮೈಕೊ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದರು.  ಆತ ಮೌನಿ. ಆದರೆ ಮಹಾ ತಿಳಿವಳಿಕಸ್ತ.  ನಮ್ಮ ಹತ್ತು ಮಾತಿಗೆ ಒಂದು ಮಾತಾಡುತ್ತಿದವರು. ಈತ ಲಕ್ಷ್ಮಿ ನಾರಾಯಣ.  ನಾವು ಸೇರುವ ವೇಳೆಗೆ ಎಂ. ಎ ಮಾಡುತ್ತಿದ್ದರು. ಇವರಿಬ್ಬರೂ ಮೊದಲಿನಿಂದಲೇ ಗೆಳೆಯರು. ಆ ವಯಸ್ಸಿನ ಉತ್ಸಾಹ ಹೇಗಿರುತ್ತದೆಯೆಂದರೆ ಪ್ರಪಂಚದಲ್ಲಿ ನಾವು ಏನಾದರೂ ಸಾಧಿಸಬೇಕು ಅನ್ನುವ ಮಹತ್ವಾಕಾಂಕ್ಷೆ. ಇವನ್ನೊಬ್ಬ ಮಂಜುನಾಥ. ಈಗ ಹಳ್ಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದವನು ಕಾಲೇಜಿನಲ್ಲಿ ಪರಿಚಯವಾಗಿದ್ದಾನೆ. ಕಾಲೇಜು ಮುಗಿದಮೇಲೆ ಏನಾದರೂ ಹೊಸದನ್ನು ಮಾಡೋಣ ಎನ್ನುವ ಇವರಿಬ್ಬರ ಮಾತಿಗೆ ಈತನೂ ಅವರ ಜೊತೆಗೂಡಿದ್ದಾನೆ. ಆತ ರಮೇಶ್  ಶಿವಶಂಕರ್ ಗೆಳೆಯ.  ಆಟೋ ಓಡಿಸುತ್ತಿದವನು. ಆದರೂ ಆತನ ಮನಸ್ಸಿನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಹಂಬಲ. ಇವನೊಬ್ಬ ರಾಘವೇಂದ್ರ ಕಾಮತ್. ಆಗ ಸಂಜೆ ಕಾಲೇಜಿನಲ್ಲಿ ಕೊನೇ ವರ್ಷದ ಬಿ.ಕಾಂ ಓದುತ್ತಿದ್ದ.  ಮತ್ತೊಬ್ಬನಿದ್ದ  ಭದ್ರಾವತಿ ಶ್ರೀನಿವಾಸ ಆಂತ. ಭದ್ರಾವತಿ ಇವನ ಹುಟ್ಟೂರಾದರೂ ಓದಿನಲ್ಲಿ ಇವರ ಜೊತೆಯಾಗಿದ್ದ. ಇಂಥವರ ಜೊತೆ ಸೇರಿದ ಮೇಲೆ ಅವನಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಅನ್ನುವ ಆಸೆ ಉಂಟಾಗುತ್ತದೆಯಲ್ಲವೇ...ಹಾಗೆ ಈತ ಅದ್ಬುತ ಮಿಮಿಕ್ರಿ ಕಲಾವಿದ. ಮಗದೊಬ್ಬ ನನಗೆ ನನ್ನ ಗೆಳೆಯರ ಮೂಲಕ ಪರಿಚಯವಾದವನು. ಓಹಿಲೇಶ್ವರ್. ಕಾಲೇಜಿನಲ್ಲಿ ಇವರಿಗೆ  ಗೆಳೆಯನಾದವನು ಆಗ ಅದ್ಬುತವಾಗಿ ಕವನ ಬರೆಯುತ್ತಿದ್ದ. ಇವರೆಲ್ಲರ ಜೊತೆಗೆ ಪರಿಚಯವಾದವರು ನಾಗೇಂದ್ರ ಪ್ರಸಾದ್ ಮತ್ತು ಶಿವಪ್ರಕಾಶ್. ನಮ್ಮೆಲ್ಲರ ಗುರಿ ಒಂದೇ ಆಗಿತ್ತು ನಾನು ಆಗ ಕವನ ಮತ್ತು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುತ್ತಿದ್ದರಿಂದ ಓಹಿಲೇಶ್ವರ್ ಮೂಲಕ ಇವರಿಗೆ ಪರಿಚಯವಾಗಿದ್ದೆ. ನಮ್ಮ ತಂಡಕ್ಕೆ  ಇಷ್ಟಪಟ್ಟು ಇಟ್ಟುಕೊಂಡಿದ್ದ ಹೆಸರು  "ಸುಪ್ತ."   ನಾವು ಏಳೆಂಟು ಹುಡುಗರು ನಿತ್ಯ ಸಂಜೆ ಆರುಗಂಟೆಗೆ ದೇವಯ್ಯಪಾರ್ಕಿನಲ್ಲಿ ಸೇರುತ್ತಿದ್ದೆವು.


    ಒಟ್ಟಿಗೆ ಸೇರಿದ ಮೇಲೆ ಏನಾದರೂ ಮಾಡಬೇಕಲ್ಲ. ಮೊದಲಿಗೆ ಒಂದು ನಾಟಕವನ್ನು ಮಾಡಬೇಕೆಂದು ತೀರ್ಮಾನಿಸಿದೆವು.  ನಾಗೇಂದ್ರ ಪ್ರಸಾದ್ ಆಗ ಬರೆದಿದ್ದ ಒಂದು ನಾಟಕದ ಹೆಸರು "ಶ್ವೇತಾರ್ಕ" ಅದನ್ನು ನಿತ್ಯ ಅಭ್ಯಾಸ ಮಾಡಲು ದೇವಯ್ಯ ಪಾರ್ಕಿನ ಸಭಾಂಗಣವನ್ನು ಹತ್ತಿರದ ಕೌನ್ಸಿಲರ್ ಬಳಿ ರಿಕ್ವೆಸ್ಟ್ ಮಾಡಿ ಪಡೆದುಕೊಂಡಿದ್ದೆವು.  ಅದೊಂತರ ತುಂಬಾ ವಿಭಿನ್ನವಾದ ನಾಟಕ.  ಐದು ಹುಡುಗರು ಪ್ರೀತಿಯ ಬಗ್ಗೆ ಮಾಡಿದ ಒಂದು ನಾಟಕ. ಈ ಐದು ಜನ ಹುಡುಗರು ಪ್ರೀತಿ ಪ್ರೇಮದ ಬಗ್ಗೆ ಅಭಿಪ್ರಾಯಗಳು ಬೇರೆ  ಬೇರೆ ಆಗಿರುವುದೇ ಈ ನಾಟಕದ ವಸ್ತು.   ಪ್ರೀತಿಯ ಬಗ್ಗೆ ಪಕ್ಕಾ ತರಲೇ ಅಭಿಪ್ರಾಯವನ್ನು ಹೊಂದಿದ್ದ ವ್ಯಕ್ತಿತ್ವದ್ದಾಗಿತ್ತು ನನ್ನ ಪಾತ್ರ. ನಾಗೇಂದ್ರ ಪ್ರಸಾದ್ ಬರೆದ ಆ ನಾಟಕ ಪೂರ್ತಿ ವಿವರವನ್ನು ಎಂದಾದರೂ ಮುಂದೆ ವಿವರವಾಗಿ ಬರೆಯುತ್ತೇನೆ.  ನಾವು ಈ ನಾಟಕವನ್ನು ಅದ್ಯಾವ ಮಟ್ಟಿಗೆ ಅಭ್ಯಾಸ ಮಾಡಿದೆವೆಂದರೆ  ನಮ್ಮ ತಂಡ ಮಂಡ್ಯ, ಬೆಂಗಳೂರಿನ  ರವೀಂದ್ರ ಕಲಾಕ್ಷೇತ್ರ. ಮುಂಬೈ.ಹೀಗೆ ಹತ್ತಾರು ಕಡೆ ಪ್ರಯೋಗ ಮಾಡಿದ್ದೆವು. 

     ಆಗಲೇ ನಾನು ಪದವಿ ಮುಗಿಸಿ ದಿನಪತ್ರಿಕೆ ವಿತರಣೆ ಪಡೆದುಕೊಂಡಿದ್ದರೆ ಈ ಗುಂಪಿನಲ್ಲಿ ರಾಘವೇಂದ್ರ್ ಕಾಮತ್ ಎನ್ನುವ ಮಂಗಳೂರಿನ ಹುಡುಗ ನರ್ಸಿಂಗ್ ಹೋಂಗಳಲ್ಲಿ ಕಾಫಿ ಮೆಸಿನ್ ಇಟ್ಟು ಕೊಂಡು ಕಾಫಿ ಮಾರುತ್ತಿದ್ದ. ಬಿಡುವಿನ ವೇಳೆಯಲ್ಲಿ ನನ್ನಂತೆ ಈ ತಂಡವನ್ನು ಸೇರುತ್ತಿದ್ದ.  ಈ ನಡುವೆ ಅದ್ಯಾಕೋ ನನಗೆ ಹೊಸ ವಿಚಾರವಾದ ಫೋಟೊಗ್ರಫಿ ಬಗ್ಗೆ ಒಲವು ಮೂಡಿತು. ನಾನು ಸಹಜವಾಗಿ ಈ ತಂಡವನ್ನು ಬಿಟ್ಟೆ.  ಒಬ್ಬಬ್ಬರಾಗಿ ಎಲ್ಲರೂ ಬೇರೆಯಾಗಿ ತಮ್ಮ ಬದುಕಿನ ಕಡೆಗೆ ಗಮನ ಹರಿಸಿದರು. ಆದ್ರೆ ಎಲ್ಲರೂ ವೈಯಕ್ತಿಕವಾಗಿ ತಮ್ಮ ಕಲೆಯನ್ನು ಎಲೆಮರೆಕಾಯಿಯಂತೆ ಮುಂದುವರಿಸಿದೆವು.  ನಾಗೇಂದ್ರ ಪ್ರಸಾದ್ ಈಗ ದೊಡ್ಡ ಸಿನಿಮಾ ಹಾಡಿನ ಸಾಹಿತ್ಯ ಕವಿ ಮತ್ತು ನಿರ್ಧೇಶಕನಾಗ ಹೆಸರು ಮಾಡಿದ್ದಾರೆ. ಅವರ ಆಗಿನ ಕೆಟ್ಟ ಮತ್ತು ಒಳ್ಳೆಯ ಗುಣಗಳನ್ನು ಎಂದಾದರೂ ಬರೆಯುತ್ತೇನೆ.. ಇವರ ನಡುವೆ ನನ್ನಂತೆ ರಾಘವೇಂದ್ರ ಕಾಮತ್ ಕೆಲಸದ ನೆಪವೊಡ್ಡಿ ಹೊರಬಂದರೂ ಆತನ ಮನಸ್ಸಿನೊಳಗಿನ ಕವಿ ಮನಸ್ಸು ಸದಾ ಎಚ್ಚರವಾಗಿತ್ತು. ಅಲ್ಲೊಂದು ಇಲ್ಲೊಂದು  ಸಿನಿಮಾ ಹಾಡಿಗೆ ಸಾಹಿತ್ಯ ಬರೆದಿದ್ದರೂ ಅದು ಗಮನಿಸುವಂತಿರಲಿಲ್ಲ. ಮುಂದೆ ನಾನು ಆತನನ್ನು ಸೇರಿದಂತೆ ಇಡೀ ಸುಪ್ತತಂಡವನ್ನು ಮರೆತೆ. ನನ್ನ ಕೆಲಸದಲ್ಲಿ ತೊಡಗಿಕೊಂಡೆ. ಹಾಗೆಂದ ಮಾತ್ರಕ್ಕೆ ನಾವ್ಯಾರು ನಮ್ಮ ಗೆಳೆತನವನ್ನು ಮರೆತಿರಲಿಲ್ಲ.  ಪತ್ರಿಕೆಯಲ್ಲಿ ನಾನು ಬರೆದ ಲೇಖನವನ್ನು ಓದಿ ಯಾರಾದರೂ ಮೆಚ್ಚುಗೆ ಸೂಚಿಸಿ ಪೋನ್ ಮಾಡುತ್ತಿದ್ದರು. ಹಾಗೆ ನಾನು ಅವರ ಮನೆಯ ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗಿಬರುತ್ತಿದ್ದೆ.

        ಅದೊಂದು ದಿನ ಸುಧೀಪ್ ನಿರ್ಧೇಶನದ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಹಾಡಗಳನ್ನು ಕೇಳಿದಾಗ ಮೊದಲ ಬಾರಿಗೆ ಒಂದು ಹಾಡು ತುಂಬಾ ಕಾಡುವಂತಿದೆಯಲ್ಲಾ ಅನ್ನಿಸುತ್ತು.  ನಾನು ತುಂಬಾ ಇಷ್ಟಪಡುವ ಸುಧೀಪ್ ಸಿನಿಮಾಗಳಲ್ಲಿ ಮೊದಲಿಗೆ "ಆಟೋಗ್ರಾಫ್"  ಆಗಿದ್ದರೂ ಅದು ರಿಮೇಕ್ ಆಗಿದ್ದರಿಂದ ಸುಧೀಪ್ ಎಂದಾದರೂ ಒಂದು ಸ್ವಂತ ಅತ್ಯುತ್ತಮ ಸಿನಿಮ ಕೊಡುತ್ತಾರೆಂಬ ನಂಬಿಕೆಯಿತ್ತು.  "ಜಸ್ಟ್ ಮಾತ್ ಮಾತಲ್ಲಿ"  ನಾನು ತುಂಬಾ ಇಷ್ಟಪಡುವ ಸುಧೀಪ್ ಸಿನಿಮ. ಅದ್ಬುತವಾದ ಫೋಟೊಗ್ರಫಿ, ನಟನೆ, ಕೊನೆಯವರೆಗೂ ಉಳಿಸಿಕೊಳ್ಳುವ ಕುತೂಹಲ..ಇವೆಲ್ಲದರ ಜೊತೆಗೆ ರಘು ದೀಕ್ಷಿತ್  ಸಂಗೀತ ಅದ್ಯಾಕೊ ವಿಭಿನ್ನವೆನಿಸಿತ್ತು. ಅದರಲ್ಲೂ "ಮುಂಜಾನೆ ಮಂಜಲ್ಲಿ"  ಗೀತೆಯನ್ನು  ಕೇಳಿದಾಗ ನನಗೆ ಅರಿವಿಲ್ಲದಂತೆ ಒಂದು ವಿಷಾದ ಕಾಡಲಾರಂಭಿಸಿತ್ತು. ಆ ಹಾಡನ್ನು ಕೇಳಿದ ನಂತರವೂ ಮತ್ತೆ ಮತ್ತೆ ಮನಸ್ಸಿನಲ್ಲಿ ಗುನುಗಿಕೊಳ್ಳುವಂತೆ ಕಾಡುತ್ತಿತ್ತಲ್ಲ...ಆಗ ಅದನ್ನು ಬರೆದವರಾರು ಅಂತ ಹುಡುಕಿದೆ. ಹೆಸರು ರಾಘವೇಂದ್ರ ಕಾಮತ್ ಅಂತ ಇತ್ತು.  ಯಾರೋ ಹೊಸಬ ಇರಬೇಕು ಅಂದುಕೊಂಡಿದ್ದೆ.
                                                   ರಾಘವೇಂದ್ರ ಕಾಮತ್

   ಕೆಲವೇ ದಿನಗಳಲ್ಲಿ ಇದೇ ರಾಘವೇಂದ್ರ ಕಾಮತ್‍ನಿಂದ ಫೋನ್ ಕರೆ ಬಂತು. ನಾನು ಮರೆತರೂ ಆತ ಮರೆತಿರಲಿಲ್ಲ. ತನ್ನ ತಮ್ಮನ ಮದುವೆಗೆ ಅಹ್ವಾನಿಸಲು ಆತ ಫೋನ್ ಮಾಡಿದ್ದ.  ನಾನು ಮದುವೆಗೆ ಹೋಗಿಬಂದಿದ್ದೆ. ಅಲ್ಲಿ ಸಹಜವಾಗಿ ಮಾತಾಡುವಾಗ ಈ ಹಾಡು ಬರೆದಿದ್ದು ಆತನೆಂದು ಗೊತ್ತಾ ಅದು ನನ್ನ ಮೆಚ್ಚಿನ ಹಾಡು ಅಂತ ಹೇಳಿ  ಅಭಿನಂದಿಸಿದ್ದೆ.

       ಫೋಟೊ ಟುಡೆ ಕಾರ್ಯಕ್ರಮವನ್ನು ಮುಗಿಸಿ ಸುಸ್ತಾಗಿ  ಅವತ್ತು ಟೀವಿ ನೋಡೋಣವೆಂದು ಟೀವಿ ಹಚ್ಚಿದರೆ ಸಿನಿಮಾದವರಿಗೆ ಸುವರ್ಣದವರು ನೀಡುವ ಅವಾರ್ಡ್ ಕಾರ್ಯಕ್ರಮ ಬರುತ್ತಿತ್ತು. ಕಾರ್ಯಕ್ರಮವನ್ನು ಎಂಜಾಯ್ ಮಾಡುತ್ತಿದ್ದಂತೆ ಅತ್ಯುತ್ತಮ ಹಾಡಿನ ಸಾಹಿತ್ಯದ ನಾಮಿನಿಗಳನ್ನು ಅನೌನ್ಸ್ ಮಾಡಿದಾಗ ಇದರಲ್ಲಿ ಕನ್ನಡದ ಅತಿರಥ ಮಹರಥರ ಹೆಸರಿನ ಜೊತೆಗೆ ಈ "ರಾಘವೇಂದ್ರ ಕಾಮತ್"  ಹೆಸರು ಜಸ್ಟ್ ಮಾತಲ್ಲಿ ಸಿನಿಮಾದ ಜೊತೆಗೆ ಬಂತಲ್ಲ. ನನ್ನ ಕುತೂಹಲ ಇಮ್ಮಡಿಯಾಯಿತು. ಮೊದಲೇ ನನಗೆ ಆ ಹಾಡು ಫೇವರೇಟ್ ಆಗಿತ್ತು.  ಈತ ಜಯಂತ್ ಕಾಯ್ಕಿಣಿ, ಕವಿರಾಜ್, ಯೋಗರಾಜ್ ಭಟ್, ನಾಗೇಂದ್ರಪ್ರಸಾಧ್ ಇವರನ್ನೆಲ್ಲಾ ಮೀರಿಸಿ ಈತ ಈ ವರ್ಷದ ಅತ್ಯುತ್ತಮ ಸಿನಿಮಾ ಹಾಡಿನ ಸಾಹಿತ್ಯಕ್ಕಾಗಿ ಸುವರ್ಣ ವಾಹಿನಿಯವರ ಪ್ರಶಸ್ತಿಯನ್ನು ಪಡೆದಾಗ ನನಗಂತೂ ನಾನೇ ಪಡೆದಷ್ಟು ಖುಷಿಯಿಂದ ಕುಣಿದಾಣಿದೆ. ಪೋನ್ ಮಾಡಿ ವಿಷ್ ಮಾಡಿದೆ.  ಆತನಿಗೆ ಇದು ಮೊದಲ ಅವಾರ್ಡ್. ನನ್ನ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆಂದು ಆತನನ್ನು ಕೇಳಿದಾಗ ಖುಷಿಯಿಂದ ತನ್ನ ಫೋಟೊ ಕಳಿಸಿಕೊಟ್ಟ.  ನೀವು ಅವನಿಗೆ ವಿಷ್ ಮಾಡಿ ಅಭಿನಂದನೆ ತಿಳಿಸಿ..ಹಾರೈಸಿ.

   ನಿಮಗಾಗಿ ಅವನು ಬರೆದ ಹಾಡಿನ ವಿಡಿಯೋವನ್ನು ಹಾಕಿದ್ದೇನೆ. ನೀವು ನೋಡಿ ಸಂತೋಷದಿಂದ ಗೆಳೆಯನಿಗೆ ಆಶೀರ್ವಾದಿಸಿ..
     ರಾಘವೇಂದ್ರ ಕಾಮತ್ ಬರೆದ ಹಾಡಿನ ವಿಡಿಯೋ ನೋಡಲು  ಈ ಕೆಳಗಿನ ಲಿಂಕ್  ಕ್ಲಿಕ್ಕಿಸಿ      http://www.youtube.com/watch?v=TcwUH_nZxno&feature=related


ಲೇಖನ
ಶಿವು. ಕೆ.

14 comments:

ಭಾಶೇ said...

heartly congratulations to your friend.

ಜಲನಯನ said...

ರಾಘವೇಂದ್ರ ಕಾಮತರಿಗೆ ನಮ್ಮೆಲ್ಲರ ಹಾರ್ದಿಕ ಶುಭಕಾಮ್ನೆಗಳು ಮತ್ತು ಪ್ರಶಸ್ತಿಗಾಗಿ ಅಭಿನಂದನೆಗಳು

Deep said...

abhinandanegalu sir.

heege olle kelasa munduvareeli ...

Prashanth Arasikere said...

Hi shivu,

Nimma geleyarige namma shubashaya talupisi..hage ollle manassige hitavaguva hadugalannu hige kodtha irli antha bayasathivi..kannada da ella nirdeshakaru saha namma tanavanna torusli antha kelkothini..nivu en anthira..

Nisha said...

abhinandanegalu

ಸಾಗರದಾಚೆಯ ಇಂಚರ said...

Congratulations Avrige, nimma snehitara balaga nodi khushi agta ide

prabhamani nagaraja said...

ರಾಘವೇಂದ್ರ ಕಾಮತರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಪರಿಚಯಿಸಿದ ನಿಮಗೆ ಧನ್ಯವಾದಗಳು.

ಮನಸು said...

ಅಭಿನಂದನೆಗಳು ರಾಘವೇಂದ್ರರವರಿಗೆ...

Raghu said...

ಶಿವೂ ಅವರೇ..
ನಿಮ್ಮ ಲೇಖನ ತುಂಬಾ ಇಷ್ಟವಾಯಿತು..ನಾನು ನೆಟ್ ನಲ್ಲಿ ಇವರಬಗ್ಗೆ ತುಂಬಾ ಸರ್ಚ್ ಮಾಡಿದೆ..ಜಾಸ್ತಿ ಉತ್ತರ ಸಿಗಲಿಲ್ಲ...ನಾನು ಅವರ ಹಾಡುಗಳನ್ನು ಕೇಳಿದ ದಿನದಿಂದ ಅವರ ಬಗ್ಗೆ ವಿಚಾರಿಸುತ್ತಿದ್ದೆ..ಇವತ್ತು ಒಳ್ಳೆಯ ಸುದ್ದಿ ಕೊಟ್ಟಿದ್ದಿರಿ.
ಒಳ್ಳೆಯದಾಗಲಿ ರಾಘವೇಂದ್ರ ಕಾಮತ್..

ಶಿವೂ ಅವರೇ ತುಂಬಾ ತುಂಬಾ ಥ್ಯಾಂಕ್ಸ್..

ನಿಮ್ಮವ,
ರಾಘು.

sunaath said...

ರಾಘವೇಂದ್ರ ಕಾಮತರಿಗೆ ಹಾರ್ದಿಕ ಅಭಿನಂದನೆಗಳು.

ಗಿರೀಶ್.ಎಸ್ said...

Many congragulations to R.Kamath and thank you for introducing him !!!

shivu.k said...

ನನ್ನ ಗೆಳೆಯನನ್ನು ಅಭಿನಂದಿಸಿದ
ಭಾಶೇ, ಅಜಾದ್, ದೀಪ್, ಪ್ರಶಾಂತ್, ನಿಶಾ, ಡಾ.ಗುರುಮೂರ್ತಿ ಹೆಗಡೆ, ಪ್ರಭಾಮಣಿ ನಾಗರಾಜ, ಸುಗುಣಕ್ಕ, ರಘು, ಸುನಾಥ್ ಸರ್, ಗಿರೀಶ್ ಎಸ್.
ನಿಮಗೆಲ್ಲರಿಗೂ ಧನ್ಯವಾದಗಳು.

Sudha Bhat said...

abhinandanegalu

ಸೀತಾರಾಮ. ಕೆ. / SITARAM.K said...

ನಿನ್ನೆ ಮೊನ್ನೆ ಅವರು ಸಭೆಯಲ್ಲಿ ಪ್ರಶತಿ ಪಡೆಯುವದನ್ನು ನೋಡಿದೆ. ಬಹುಶ ಮರುಪ್ರಸರವಿರಬಹುದು. ತುಂಬಾ ವಿನಯತೆಯಿಂದ ಜಯಂತ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ಟರನ್ನು ನೆನಪಿಸಿ ವಂದಿಸಿದ ಇವರು ನಿಗರ್ವಿ ಮತ್ತು ಸರಳ ಜೀವಿ.
ಅವರ ಬಗ್ಗೆ ಬರೆದಿದ್ದುದ್ದಕ್ಕೆ ಮತ್ತು ಅವರು ತಮ್ಮ ಮಿತ್ರರೆಂದು ತಿಳಿದು ಖುಷಿಯಾಯಿತು.