Friday, May 20, 2011

ಮೋನಾಲಿಸ


        ಬಿಡುವಿಲ್ಲದ ಕೆಲಸದ ಒತ್ತಡದಿಂದಾಗಿ ಫೋಟೊಗ್ರಫಿ ಲೇಖನಕ್ಕೆ ನಾಲ್ಕೈದು ದಿನದ ಮಟ್ಟಿಗೆ ಬ್ರೇಕ್.  ಅದಕ್ಕಾಗಿ ಒಂದು ಕವನವನ್ನು ಬ್ಲಾಗಿಗೆ ಹಾಕುವ ಆಸೆಯಾಯ್ತು.   ಮತ್ತೆ ಈ ಕವನ ಈಗ ಬರೆದಿದ್ದಲ್ಲ. ಹತ್ತು ವರ್ಷಗಳ ಹಿಂದೆ ಬರೆದಿದ್ದು ಮತ್ತು ಆಗಲೇ ಕರ್ಮವೀರದಲ್ಲಿ ಪ್ರಕಟವಾಗಿತ್ತು.  ಅದು ಈಗ ನಿಮಗಾಗಿ.

ಕ್ಯಾನ್ವಸ್ಸಿಗೆ ಸ್ಕೆಚ್ ಹಾಕುವ
ಬಣ್ಣ ಹಚ್ಚುವ ಚಿತ್ರಕಲೆಗಾರ ನಾನು
ಬೇಸತ್ತಿದ್ದೆ ಬದುಕಿನ ವಾಸ್ತವ
ಸಂಕೀರ್ಣ ಕೃತಿ ರಚನೆಗಳಿಂದ
ಬರೆಯಲು ಸಿದ್ಧವಾಯ್ತು ಕುಂಚ, ಬಣ್ಣ, ಮನಸ್ಸು
ಬೇಷ್ ಎನಿಸಿಕೊಳ್ಳುವ ಮೋನಾಲಿಸಳನ್ನು.

ಅರೆರೆ....ಇದೇನಿದು! ಆಗ್ತಿಲ್ಲವಲ್ಲ!!?
ನುಣುಪು ಕೆನ್ನೆಗಾಗಿ ಕುಂಚ ಆಡಿಸಿದರೆ
ಇದ್ಯಾಕೆ ಮೂಡುತ್ತಿವೆ ಮುಖದ ಮೇಲೆ
ಅಲ್ಲಲ್ಲಿ ಮೊಡವೆಗಳು
ನಮ್ಮ ದೇಶದ ರೋಗಗಳಂತೆ

ಸಂಪಿಗೆಯಂಥ ಮೂಗು ಮೂಡಲಿಲ್ಲ
ನೂರಾರು ಮೂಢನಂಬಿಕೆಗಳ ಗೊಂದಲದಲ್ಲಿ

ಗುರಿ ಆಕಾಂಕ್ಷೆ ಇಲ್ಲದ ಯುವ ಜನಾಂಗದ್ದೆ!
ಸತ್ವಹೀನ ಸರ್ಕಾರಿ ಯೋಜನೆಗಳೇ!
ಈ ಹೊಳಪಿಲ್ಲದ ಕಣ್ಣುಗಳು  ಯಾವುದರ ಸಂಕೇತ?
 ಭವ್ಯ ನಾಡಿನ ಭವಿಷ್ಯವನ್ನು
ಅಧೋಗತಿಗೆಳೆಯುತ್ತಿರುವ ಸರ್ಕಾರಗಳ ಗುರುತೇ!

ಬಿಳಿ ಜಾಳುಜಾಳು ಕೇಶರಾಶಿ
ಅಪಘಾತಕ್ಕೆ ಆಹ್ವಾನ ಕೊಡೋ ರಸ್ತೆಗಳೇ
ಹಣೆ ಕಣ್ಣುಬ್ಬುಗಳಂತೂ ಥೇಟ್!

ತುಟಿಗಳಂತೂ ನಗುವನ್ನೇ ಮರೆತ ನಾಗರಿಕರ ಗುರುತು.
ಭಯೋತ್ಪಾದನೆ, ತೆರಿಗೆ ಉತ್ಪಾದನೆ ಭಯದಲ್ಲಿ.

ಕೊನೆಗೂ ಮೂಡಿದ ಮಂದಹಾಸ
ರಾಜಕಾರಣಿಗಳ ಅಶ್ವಾಸನೆಯಂತೆ ಕಾಣಬೇಕೇ!

ತೋರುತ್ತಿದೆಯಲ್ಲ ವ್ಯವಸ್ಥೆಯ ಚಿತ್ರ
ರೋಗಿಷ್ಟ ಮುದುಕಿಯ ಮುಖ

ಇದೇನಿದು ಮೊನಾಲಿಸ ಬದಲಿಗೆ
ಹೆಚ್ಚಾಗುತ್ತಿವೆಯಲ್ಲ ಗೋಜಲುಗಳು
ಮತ್ತೆ ತಿದ್ದಿ ತೀಡಲೋದರೆ

ಕೈ ಚೆಲ್ಲಿದ್ದೆ ಪರಿಹಾರ ಕಾಣದೆ
ದೊಡ್ದ ಬಹುಮಾನ ಗಳಿಸಿದವನಿಂದು
ಬಿಡಿಸಲಾಗಲಿಲ್ಲ ಮಂದಹಾಸದ ಮೋನಲಿಸಳನ್ನು.

ಶಿವು.ಕೆ.

        

11 comments:

ಸಾಗರದಾಚೆಯ ಇಂಚರ said...

ಸುಂದರ ಕವನ ಸರ್

ವಾಸ್ತವತೆಯೊಂದೆ ಕೂಡಿದೆ

ವರ್ಷ ಹತ್ತಾದರೂ

ನಿನ್ನೆಯ ಸೊಗಸು ಇದೆ

shivu.k said...

ಗುರುಮೂರ್ತಿ ಹೆಗಡೆ ಸರ್,
ಧನ್ಯವಾದಗಳು.

ದಿನಕರ ಮೊಗೇರ said...

hattu varshada kavanavu indigU prastuta sir....

tumbaa chennaagide sir...

monalisaaLa soudarya bhaaratadalli idE gati enisatte...
hha hha

shivu.k said...

ದಿನಕರ್ ಸರ್,

ಆಗಿನ ಪರಿಸ್ಥಿತಿ ಬದಲಾಗಿಲ್ಲದಿರುವುದಕ್ಕೆ ಈ ಕವನ ಪ್ರಸ್ತುತವೆನಿಸುತ್ತಿದೆ ಅಲ್ವಾ ಸರ್?. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...
This comment has been removed by the author.
ಗುಬ್ಬಚ್ಚಿ ಸತೀಶ್ said...

ಚೆನ್ನಾಗಿದೆ ಸರ್.

sunaath said...

ಶಿವು,
ಮೋನಾಲಿಸಾಳ ಚಿತ್ರದ ಬದಲು, ನಮ್ಮ ಸಮಾಜದ ಚಿತ್ರವನ್ನೇ ಬಿಡಿಸಿ ಇಟ್ಟಿದ್ದೀರಿ. ಉತ್ತಮ ಕವನ.

shivu.k said...

ಗುಬ್ಬಚ್ಚಿ ಸತೀಶ್ ಸರ್,
ಥ್ಯಾಂಕ್ಸ್.

shivu.k said...

ಸುನಾಥ್ ಸರ್,
ಆಗಿನ ಪರಿಸ್ಥಿತಿಯಲ್ಲಿ ಅನ್ನಿಸಿದ್ದು ಈಗಿನ ಪರಿಸ್ಥಿತಿಗೂ ಹೊಂದಿಕೊಂಡಿತ್ತು. ಅದಕ್ಕೆ ಅದನ್ನೇ ಬ್ಲಾಗಿಗೆ ಹಾಕಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ಚುಕ್ಕಿಚಿತ್ತಾರ said...

chitrada chitraNa sundaravaagide.

ಸವಿಗನಸು said...

ಕವನ ತುಂಬ ಚೆನ್ನಾಗಿದೆ.....
ಹತ್ತು ವರ್ಷದ ಹಿಂದಿನ ಕವನ ಆದರೂ....