Sunday, May 3, 2009

ಆ ಮೂಗು ಆರ್ಡರ್ ಕೊಟ್ಟು ಮಾಡಿಸಿದಂತಿದೆಯಲ್ವೇ ಸರ್........



ಕಳೆದೊಂದು ತಿಂಗಳಿಂದ ಮದುವೆ ಫೋಟೋ ತೆಗೆಯುವುದರಲ್ಲಿ ನಿರತನಾಗಿದ್ದ ನನಗೆ ಈ ಸಮಯದಲ್ಲಿ ನಮ್ಮದೇ ವೃತ್ತಿಯಲ್ಲಿನ ಜೊತೆಗಾರರ ಮಾತುಕತೆಗಳು ಬಲು ಸೋಜಿಗವೆನಿಸಿ ತುಂಬಾ ಎಂಜಾಯ್ ಮಾಡಿದ್ದೇನೆ...ಅವುಗಳಲ್ಲಿ ಕೆಲವನ್ನು ನಿಮ್ಮೊಂದಿಗೂ ಹಂಚಿಕೊಳ್ಳುವ ಆಸೆ. ಇಲ್ಲಿ ಕೆಲವನ್ನು ಸಂದರ್ಭೋಚಿತವಾಗಿ ನಡೆಯುವ ಸನ್ನಿವೇಶಗಳಲ್ಲಿ ನಮ್ಮ ನಡುವೆ ನಡೆಯುವ ಮಾತಿನ ತುಣುಕುಗಳನ್ನು ತೆರೆದಿಡುತ್ತಿದ್ದೇನೆ...



ಮದುವೆ ಹೆಣ್ಣಿನ ಅಲಂಕಾರ ರೂಮಿನಲ್ಲಿ ಭರ್ಜರಿಯಾಗಿ ನಡೆಯುತ್ತಿತ್ತು.. ಮದುಮಗಳು ಹೇಗೇ ಇರಲಿ ಅವಳನ್ನು ರಾಜಕುಮಾರಿಯಂತೆ ಇನ್ನಷ್ಟು ಚೆಂದವಾಗಿ ಸುಂದರವಾಗಿ, ಸಹಜವಾಗಿ ಫೋಟೋ ಮತ್ತು ವಿಡಿಯೋ ತೆಗೆಯುವುದು ಮದುವೆಯಲ್ಲಿ ನಮಗಿರುವ ದೊಡ್ಡ ಜವಾಬ್ದಾರಿ ಆಷ್ಟೇ ರಿಸ್ಕು ಕೂಡ.




ಮೊದಲಿಗೆ ಅವರು ಹೇಗಿರುತ್ತಾರೆ ನೋಡಬೇಕು. ಇದರಲ್ಲಿ ಎರಡು ವಿಧ. ವಿದ್ಯೆ ಬುದ್ಧಿಯ ಜೊತೆಗೆ ಸಹಜ ಸೌಂದರ್ಯವಿರುವವರು ಮಗುವಿನಂತೆ ಮುಗ್ದತೆಯಿದ್ದರೆ ನಮ್ಮ ಕೆಲಸ ನೀರು ಕುಡಿದಷ್ಟು ಸುಲಭ. ಅವರನ್ನು ಸುಲಭವಾಗಿ ರಾಜಕುಮಾರಿಯನ್ನಾಗಿ ಮಾಡಬಹುದು.


ಅವರ ಜೊತೆ ನಮ್ಮ ಮಾತುಕತೆ ಹೀಗೆ ಸಾಗುತ್ತದೆ.


"ಮೇಡಮ್, ಹೇಗಿದ್ದೀರಿ........ನಿಮಗೆ ಈ ಕಲ್ಯಾಣಮಂಟಪ ಇಷ್ಟವಾಯಿತಾ"...ನಮ್ಮ ಕುತ್ತಿಗೆಯಲ್ಲಿನ ಕ್ಯಾಮೆರಾವನ್ನು ನೋಡಿ ನಮ್ಮ ಮಾತಿಗೆ ಖಂಡಿತ ಒಂದು ಮುಗುಳ್ನಗು ಚಿಮ್ಮಿರುತ್ತದೆ.


"ಹೇಗಿದ್ದರೂ ನಾವೆಲ್ಲಾ ಇರುವುದು ಕೇವಲ ೨೪ ಗಂಟೆ ಇಲ್ಲಿರುತ್ತೇವೆ ಅಲ್ವೇ.....ನೀವೇನು ಇಲ್ಲಿ ಸಂಸಾರ ಮಾಡಬೇಕಿಲ್ಲವಲ್ಲ.....ಹೊಂದಿಕೊಂಡರೇ ಆಯ್ತು.....


ನಮ್ಮ ಮಾತಿಗೆ ಮತ್ತೊಂದು ಸುಂದರ ಮುಗ್ದ ಮುಗಳ್ನಗು ಮದುಮಗಳಿಂದ.


ಇಷ್ಟು ಸಾಕು ನಾವು ಮುಂದುವರಿಯಲು......ಆಕೆಯ ವಿದ್ಯೆಯೆಲ್ಲಾ ಮದುವೆ ಕಾರ್ಡಿನಲ್ಲಿರುತ್ತದೆ. ಬುದ್ಧಿ ಇನ್ನು ಸ್ವಲ್ಪ ಹೊತ್ತಿನಲ್ಲೇ ಗೊತ್ತಾಗುತ್ತದೆ.


" ಆರೆರೆ...ಮೇಡಮ್, ನಿಮಗ್ಯಾರು ಮೇಕಪ್ ಮಾಡಿದ್ದು ?"


ಆಕೆಯ ಮುಖದಲ್ಲಿ ತಕ್ಷಣ ಆಶ್ಚರ್ಯ...ಗೊಂದಲ ಉಂಟಾಗುತ್ತದೆ...


ಪಕ್ಕದಲ್ಲಿರುವವರ ಕಡೆ ಕೈ ತೋರಿಸುತ್ತಾಳೆ. ಅವರ ಕಡೆ ನೋಡಿ "ಅಯ್ಯೋ ನೀವು ಯಾಕೆ ಮೇಕಪ್ ಮಾಡಿದ್ರಿ"........ಆಕೆಗೂ ಕೂಡ ನನ್ನ ಮಾತಿನಿಂದ ಆಶ್ಚರ್ಯ..


ಅವರು ಮಾತಿಗೆ ಅವಕಾಶ ಕೊಡದೇ... " ನೀವು ಇವರಿಗೆ ಮೇಕಪ್ ಮಾಡಬೇಕಾಗಿಲ್ಲ...ಹಾಕಿದ ಪೌಡರನ್ನು ನಿದಾನವಾಗಿ ಒರೆಸುತ್ತಾ ಬಂದರೆ ಸಾಕು. ಅದೇ ನಿಜವಾದ ಮೇಕಪ್. ಮೇಕಪ್ ಅನ್ನೋದು ಇವರಿಗಲ್ಲ....ರಾಜಕುಮಾರಿಗೆ ಯಾರಿದ್ರು ಮೇಕಪ್ ಮಾಡಲಿಕ್ಕೆ ಸಾದ್ಯವೇ....ಆವರಿಗೆ ಅವಮಾನ....."

ಇಷ್ಟು ಹೇಳುತ್ತಿದ್ದಂತೆ ಮೇಕಪ್ ಹಾಕಿದವಳ ಮುಖದಲ್ಲಿ ಇರಿಸು ಮುರಿಸು....ಮತ್ತು ಮದುಮಗಳ ಮುಖದಲ್ಲಿ ಚಂದ್ರನಷ್ಟು ಕಾಂತಿ ಹೊರಹೊಮ್ಮಿರುತ್ತದೆ....ಆ ಕ್ಷಣದಲ್ಲೇ ಒಂದೆರೆಡು ಫೋಟೊ ಅವರಿಗರಿವಿಲ್ಲದಂತೆ ಕ್ಲಿಕ್ಕಿಸಿರುತ್ತೇನೆ.... ಆಕೆಯ ಗೆಳತಿಯರು ಇದ್ದರಂತೂ ನಮ್ಮ ಕೆಲಸ ಮತ್ತಷ್ಟು ಸುಲಭ. ನಮ್ಮ ಮಾತಿಗೆ ಅವರು ಮಾತು ಬೆರೆಸುತ್ತಾರೆ...ಇದರಿಂದ ಮದುಮಗಳ ಮುಖದಲ್ಲಿ ಎಲ್ಲಾ ರೀತಿಯ ಭಾವನೆಗಳು ಹೊರಹೊಮ್ಮುತ್ತಿರುತ್ತವೆ....ಜೊತೆಗೆ ನಮ್ಮ ಕ್ಯಾಮೆರಾ ಕೂಡ ಅವರಿಗೆ ಗೊತ್ತಾಗದಂತೆ ಕ್ಲಿಕ್ ...ಕ್ಲಿಕ್ ಅನ್ನುತ್ತಿರುತ್ತದೆ. ಅಲ್ಲಿಗೆ ಒಂದು ಜವಾಬ್ದಾರಿ ಮುಗಿದಂತೆ.


ಮತ್ತೆ ವಿದ್ಯೆ ಬುದ್ಧಿ ಎರಡು ಕಡಿಮೆಯಿರುವ ಮದುಮಗಳನ್ನು ಕೂಡ ನಾವು ಸುಂದರ ರಾಜಕುಮಾರಿಯನ್ನಾಗಿ ಕ್ಲಿಕ್ಕಿಸಬಹುದು. ಏಕೆಂದರೆ ಅವರಲ್ಲಿ ಖಂಡಿತ ಮುಗ್ದತೆಯಿರುತ್ತದೆ.. ಯಾವುದೇ ಬಣ್ಣವಿದ್ದರೂ ಅದೊಂದು ಗುಣವಿದ್ದರೇ ಸಾಕು...ಅವರಿಗೂ ಬೇರೆ ಬೇರೆ ರೀತಿಯ ಮಾತುಗಳನ್ನಾಡಿ ಮತ್ತಷ್ಟು ಪ್ರಕೃತಿ ಸಹಜ ಮುಗ್ದನಗು ಹೊರಹೊಮ್ಮಿಸಿ ಫೋಟೋದಲ್ಲಿ ಚಂದವಾಗಿಸಬಹುದು....


ವಿದ್ಯೆ ಬುದ್ಧಿ ಎರಡೂ ಇದ್ದು ಮುಗ್ದತೆ ಇಲ್ಲದ ಹೆಣ್ಣಿನ ಫೋಟೋ ಕ್ಲಿಕ್ಕಿಸುವುದು. ನಮಗಂತೂ ಕಷ್ಟಸಾಧ್ಯವೇ ಸರಿ....ನಾವು ಏನೇ ಪ್ರಯತ್ನ ಪಟ್ಟರೂ ಅವರಿಂದ ಅದಕ್ಕೆ ವಿರುದ್ಧವಾದ ಭಾವನೆಗಳೇ ಹೊರಹೊಮ್ಮುತ್ತವೆ.. ಎಷ್ಟು ಪ್ರಯತ್ನಿಸಿದರೂ ನಗುಮುಖವಿರುವುದಿಲ್ಲ. ನಕ್ಕರೂ ಅದರಲ್ಲಿ ತೋರಿಕೆಯ ನಗುವಿರುತ್ತದೆ...ನಡುವೆ ಮೊಬೈಲು ಫೋನ್ ಮಾತುಗಳು ಸತತವಾಗಿ ನಡೆದಿರುತ್ತವೆ. ಅವರಿಂದ ಬೈಸಿಕೊಳ್ಳುವುದು ಉಂಟು....ಇವರು ಎರಡನೇ ವಿಧಕ್ಕೆ ಸೇರುತ್ತಾರೆ.


----------- ---------------- ------------


ಕಳೆದ ವಾರ ಮೈಸೂರಿನಲ್ಲಿ ಹೆಣ್ಣಿನ ಫೋಟೋ ತೆಗೆಯುವಾಗ ನನ್ನ ವಿಡಿಯೋ ಗ್ರಾಫರ್ ಸುಮ್ಮನಿರಲಾರದೇ...

" ಮೇಡಮ್, ನಿಮ್ಮ ಮೂಗು ಆರ್ಡರ್ ಕೊಟ್ಟು ಮಾಡಿಸಿದಂತಿದೆ" ಅಂದುಬಿಟ್ಟ.

ಆಷ್ಟಕ್ಕೆ ಆ ಹುಡುಗಿಯ ಮುಖದಲ್ಲಿ ಗುಲಾಬಿಯಂತ ಕಾಂತಿ. ನಂತರ ಪೂರ್ತಿ ಮದುವೆಯಲ್ಲಾ ಅವಳಿಗೆ ಅದೇ ಕಾಂತಿಯಿತ್ತು....ಕೊನೆಯಲ್ಲಿ ನಾನು ವಾಪಸ್ಸು ಬರುವಾಗ ನವಜೋಡಿಗೆ ಶುಭಾಶಯ ತಿಳಿಸುವುದು ನನ್ನ ಪದ್ದತಿ....ಆಗ ನಾನು ಅದೇ ಮಾತನ್ನು ಹೇಳಿ ಅದನ್ನು ಮುಂದಿನ ನಿಮ್ಮ ಇಪ್ಪತ್ತೈದನೇ ಮದುವೆ ವಾರ್ಷಿಕೋತ್ಸವದವರೆಗೆ ನಿಮ್ಮ ಮೂಗಿನ ಅಂದವನ್ನು ಹೀಗೆ ಕಾಪಾಡಿಕೊಳ್ಳಿ ಅಂದೆ. ಅವಳ ಮುಖವಂತೂ ನೂರು ಕ್ಯಾಂಡಲ್ ಲೈಟಿನಷ್ಟು ಅರಳಿತ್ತು.


----------- ------------- --------------


ಮದುವೆ ಮನೆಯಲ್ಲಿ ನಮ್ಮ ಫೋಟೊ ಮತ್ತು ವಿಡಿಯೋ ಕ್ಯಾಮೆರಾಗಳಿಗೆ ಆಡ್ಡ ಬರುವವರನ್ನು ಕಂಡರೇ ನಮಗೆಲ್ಲಾ ಸಿಟ್ಟು ಬರುತ್ತದೆ...ಸ್ವಲ್ಪ ಸಮಯದ ನಂತರ ಹೊಂದಿಕೊಂಡುಬಿಡುತ್ತೇವೆ...ಅದರಲ್ಲೂ ಪುರೋಹಿತ ಯಾವಾಗಲೂ ಅಡ್ಡ ಬರುವುದರಿಂದ ಅವನ ಮೇಲೆ ನಮಗೇ ಸದಾ ಸಿಟ್ಟಿರುತ್ತದೆ.... ನಾವು ಏನು ಹೇಳಿದರೂ ಅದಕ್ಕೆ ವಿರುದ್ಧವಾಗಿ ಮಾಡುವುದೇ ಅವನಿಗೆ ಇಷ್ಟ. ಅದೇ ನಮಗೇ ಕಷ್ಟ. ಪ್ರತಿ ನಿಮಿಷವೂ ಅವನ ಕೈಕಾಲು ಮತ್ತು ತಲೆ ನಮ್ಮ ಫೋಟೊದೊಳಗೆ ನುಸುಳುತ್ತಿರುತ್ತವೆ. ಅದಕ್ಕೆ ನಮ್ಮ ವಿಡಿಯೋಗ್ರಾಫರುಗಳು ಹೇಳುವುದು ಹೀಗೆ "ಸಾರ್ ಮದುವೆ ಮನೆಯಲ್ಲಿ ಖರ್ಚಿಲ್ಲದೇ ತುಂಬಾ ದಾರಾಳವಾಗಿ ಬೇಸರವಾಗುವಷ್ಟು ಸಿಗೋದು ಇದೊಂದೇ ನೋಡಿ..."


------------- ------------- --------------


ಮದುವೆ ಮನೆಗಳಲ್ಲಿ ಮಂಗಳಾರತಿಗೆ ಮಹಾನ್ ಸ್ಥಾನ. ಒಂದು ಮದುವೆಯಲ್ಲಿ ಕನಿಷ್ಟ ೨೫ ಆರತಿ ಎತ್ತುತ್ತಾರೆ. ನಂತರ ಆರತಿ ಎತ್ತಿಸಿಕೊಂಡವರು ಹಣ ಹಾಕಲೇ ಬೇಕು....ಇದಕ್ಕೆ ನಾವುಗಳು " ಪಾರ್ಕಿಂಗ್ ಅನ್ನುತ್ತೇವೆ.... ನಾವು ನಮ್ಮ ಗಾಡಿಯಲ್ಲಿ ಎಲ್ಲೇ ಸುತ್ತಾಡಿದರು ಅಲ್ಲಿಲ್ಲಿ ಪಾರ್ಕಿಂಗ್ ಮಾಡುತ್ತೇವಲ್ಲ....ಮತ್ತೆ ಅಲ್ಲಲ್ಲಿ ಅದಕ್ಕೆ ಪಾರ್ಕಿಂಗ್ ಶುಲ್ಕವನ್ನು ತೆರಬೇಕಲ್ವ....ಹಾಗೇ ಮದುವೆಮನೆಯಲ್ಲೂ ಸುಮಾರು ಪಾರ್ಕಿಂಗು...ಶುಲ್ಕ ವಸೂಲಿ ನಡೆಯುತ್ತಿರುತ್ತದೆ....


------------- --------------- ------------


ಸಮಯ ರಾತ್ರಿ ಹನ್ನೊಂದು ಗಂಟೆ. ಮೈಸೂರಲ್ಲಿ ರೆಸೆಪ್ಷನ್ ಮುಗಿಯುವ ಹಂತದಲ್ಲಿತ್ತು. ತಕ್ಷಣ ಅಲ್ಲೊಂದು ಆರತಿ ಎತ್ತುವ ಹೆಂಗಳೆಯರ ಗುಂಪು ಬಂತು. ನಾನು ಕೇಳಿದೆ.. " ರೆಸೆಪ್ಷನ್ ಅನ್ನುವುದು ವಿದೇಶಿ ಶೈಲಿ ಇದಕ್ಕೂ ಆರತಿ ಎತ್ತಿ ಮುಗಿಸುತ್ತಾರಲ್ಲ...ಇದನ್ನೂ ಫೋಟೊ ತೆಗೆಯಬೇಕಾ ?" ಅಂದೆ... ತಕ್ಷಣ ವಿಡಿಯೋ ಗ್ರಾಪರ್


"ಶಿವು.... ನಿಮಗೆ ಬೇಕಾದ್ರೆ ಕ್ಲಿಕ್ ಮಾಡಬಹುದು...ಬೇಡದಿದ್ದಲ್ಲಿ ಬಿಡಬಹುದು.....ಇದೊಂದರ ಸರ್ಕಾರದ ಸಿ.ಎಲ್[ಬೇಕಾದರೆ ಹಾಕಿಕೊಳ್ಳುವ ರಜೆ] ರಜೆ ತೆಗೆದುಕೊಂಡಂತೆ." ಅನ್ನಬೇಕೆ...






ಈ ಲೇಖನ ನಿಮಗಿಷ್ಟವಾದಲ್ಲಿ ನಗುವೇ ಗೊತ್ತಿರದ ಮದುವೆಗಂಡು, ಮತ್ತು ಸದಾ ನಗುತ್ತಿರುವ ಮಧುಮಗನ ಬಗ್ಗೆ, ಅವನ ಗೆಳೆಯರು, ಬಂದುಹೋದ ಜನಗಳು....ಪುರೋಹಿತನ ಹಾವಭಾವಗಳು, ಆಡಿಗೆ ಭಟ್ಟರ ಮಾತಿಲ್ಲದ ನವರಸಗಳು..... ಜೊತೆ ಜೊತೆಯಲ್ಲಿ ನಮ್ಮ ಮಾತುಕತೆಗಳ ಬಗ್ಗೆ ಇನ್ನೂ ಅನೇಕ ವಿಚಾರಗಳನ್ನು ಮುಂದಿನ ಸಂಚಿಕೆಗಳಲ್ಲಿ ಬರೆಯುತ್ತೇನೆ...


ಚಿತ್ರ ಮತ್ತು ಲೇಖನ
ಶಿವು.ಕೆ ARPS.

81 comments:

ಮನಸು said...

ಬಹಳ ಚೆನ್ನಾಗಿ ತಿಳಿಸಿದ್ದೀರಿ ಮದುವೆ ಮನೆಯ ಮಾತು ಕತೆ...ನಿಮ್ಮ ಇರಿಸು ಮುರುಸು ಎಲ್ಲ ಹ ಹ ಹ ಮದುವೆ ಮನೆಗೆ ಹೋದರೆ ಮದುವೆ ಹೆಣ್ಣನ್ನು ಹೋಗಳಿ ಫೋಟೋ ತೆಗೆಯೋದೆ ಕೆಲಸವೇ ಹ ಹ .....
ಮದುವೆ ಮನೆ ಎಂದು ನೀವು ಹೇಳುತ್ತಲಿದ್ದರೆ ನಮಗೆ ಮದುವೆ ಮನೆ ನೋಡಬೇಕೆನಿಸಿದೆ ಇಲ್ಲಿ ಇದ್ದು ಯಾವ ಮದುವೆನೊ ಇಲ್ಲ ಏನೊ ಇಲ್ಲ.... ರಜೆಗೆ ಹೋದಾಗ ಯಾರದೇ ಮದುವೆ ಆಗಿರಲಿ ನಮ್ಮನ್ನು ಕರೆಯದೇ ಇರಲಿ ನಾವಂತು ಹೋಗಿ ಬರುತ್ತೇವೆ ಹ ಹ ಹ ...
ಸರ್ ಅಲ್ಲಿನ ಮದುವೆ ಮನೆಯ ಅನುಭವ ಎಲ್ಲವನ್ನು ತೆರೆದಿಡಿ ನಮಗೊ ತಿಳಿಯಲಿ...ಒಂದೊಂದು ಮದುವೆಯಲ್ಲೊ ಒಂದೊಂದು ಅನುಭವ ಆಗಿರುತ್ತದೆ ಅಲ್ಲವೇ...? ನಿಮಗೆ ಇಷ್ಟವಾದ್ದು ಕೆಲವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಧನ್ಯವಾದಗಳು...

shivu.k said...

ಮನಸು ಮೇಡಮ್,

ಬ್ಲಾಗಿಗೆ ಈ ಲೇಖನವನ್ನು ಹಾಕಿದ ತಕ್ಷಣ ನೀವು ಪ್ರತಿಕ್ರಿಯಿಸಿದ್ದೀರಿ...

ನಮ್ಮ ಕಣ್ಣಿಗೆ ಕಂಡಂತೆ ಮದುವೆ ಮನೆಯ ಕತೆ ತುಂಬಾ ದೊಡ್ಡದಿದೆ...ನಮ್ಮ ಇರಿಸು ಮುರಿಸು ಬೇಸರದ ಬಗ್ಗೆ ಬರೆದರೆ ಓದುಗರಿಗೆ ಬೇಜಾರಾಗಬಹುದಾದ್ದರಿಂದ ಕೆಲವು ಹೊಸ ವಿಚಾರವನ್ನು ಕೊಡಲೆತ್ನಿಸಿದ್ದೇನೆ...

ನಿಮ್ಮ ಪ್ರೋತ್ಸಾಹದಿಂದಾಗಿ ಮತ್ತಷ್ಟು ವಿಚಾರವನ್ನು ಬರೆಯಲು ಸ್ಪೂರ್ತಿ ಸಿಕ್ಕಿದಂತಾಗಿದೆ...

ಧನ್ಯವಾದಗಳು...

ಸುಧೇಶ್ ಶೆಟ್ಟಿ said...

ಶಿವಣ್ಣ....

ಒ೦ದು ಮದುವೆಯ ಹಿ೦ದೆ ಏನೆಲ್ಲಾ ಕಥೆಗಳಿವೆ ಎ೦ಬುದನ್ನ ಚೆನ್ನಾಗಿ ಬಿಡಿಸಿಟ್ಟಿದ್ದೀರಿ... ಚತುರರು ನೀವು.... ಬೇರೊಬ್ಬರ ಮುಖದಲ್ಲಿ ನಗುಮೂಡಿಸುವುದು ಎಷ್ಟು ಕಷ್ಟ ಅಲ್ವಾ.. ಆ ಕೆಲಸವನ್ನು ನೀವು ಲೀಲಾಜಾಲವಾಗಿ ಮಾಡ್ತ ಇದ್ದೀರಾ...

shivu.k said...

ಸುಧೇಶ್,

ಮದುವೆಯ ಹಿಂದನ ಕತೆಗಳನ್ನು ಕೊಡಬೇಕೆಂದು ನನ್ನ ಬಹುದಿನದ ಆಸೆ...ಇಂದು ಕೈಗೂಡಿದೆ...ಇತ್ತೀಚೆಗೆ ಅದೇ ಕೆಲಸದ ಒತ್ತಡದಲ್ಲಿದ್ದಾಗ ಆಗಿರುವ ಅನುಭವಗಳಲ್ಲಿ ಕೆಲವನ್ನು ಹಂಚಿಕೊಳ್ಳುತ್ತಿದ್ದೇನೆ...ನಿಮಗಿಷ್ಟವಾದಲ್ಲಿ ಇನ್ನಷ್ಟು ಬರೆಯುವ ಆಸೆ...

ಹೀಗೆ ಬರುತ್ತಿರಿ...ಧನ್ಯವಾದಗಳು...

ಶರಶ್ಚಂದ್ರ ಕಲ್ಮನೆ said...

ಬಹಳ ಚಂದವಾಗಿದೆ ನಿಮ್ಮ ಈ ಬರಹ... ಮದುವೆಗಳಲ್ಲಿ ಫೋಟೋ ತೆಗೆಯುವುದು ಬಹಳ ಕಷ್ಟದ ಕೆಲಸ ಎಂದು ಕೇಳಿದ್ದೆ, ಯಾರೂ ಬೇಸರವಾಗದಂತೆ ಎಲ್ಲರನ್ನು ಸಂಭಾಳಿಸಿಕೊಂಡು ಹೋಗುವ ಭಾರಿ ಜವಾಬ್ದಾರಿ ಫೋಟೋಗ್ರಾಫರ್ ಮೇಲಿರುತ್ತದೆ...

ಶರಶ್ಚಂದ್ರ ಕಲ್ಮನೆ

shivu.k said...

ಶರತ್,

ಮದುವೆಯಲ್ಲಿ ಫೋಟೋಗ್ರಫಿ ಮಾಡುವುದು ಕಷ್ಟವೂ ಹೌದು...ಮತ್ತು ಸುಲಭವೂ ಹೌದು....ಅದೆಲ್ಲಾ ನಮ್ಮ ಮನಸ್ಸಿನ ಸ್ಥಿತಿಗತಿಯ ಮೇಲೆ ನಿರ್ದಾರವಾಗುತ್ತದೆ....

ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...

ವನಿತಾ / Vanitha said...

ತುಂಬಾ ಚೆನ್ನಾಗಿದೆ ನಿಮ್ಮ ಲೇಖನ...But really missing all those fun..ಕಾಯ್ತಾ ಇದೀನಿ, ಮದುವೆ ಮನೆ ಸಂಭ್ರಮಕ್ಕೆ & to attend the same...ಹಾಗೆಯೇ ಕೆಲವು ಪುರೋಹಿತರು ಫೋಟೋಗ್ರಾಫರ್ ಗಳನ್ನು ಬಯ್ಯೋದು ಕೇಳಿದ್ದೇನೆ..!!!!!

Prabhuraj Moogi said...

ಚೆನ್ನಾಗಿತ್ತು ಮದುವೆ ಮನೆ ಮಾತುಕತೆ... ಮದುಮಗಳ ಮಾತಾಡಿಸಿ ಫೋಟೊಗೆ ಪೋಸು ಕೊಡಲು ನೀವು ಪಳಗಿಸುವ ರೀತಿಯಂತೂ ಬಹಳ ಹಿಡಿಸಿತು, ನೀವ್ಯಾಕೆ ಇಷ್ಟು ಒಳ್ಳೆ ಫೊಟೊಗ್ರಾಫರ ಆಗಿದ್ದೀರೆನ್ನಲು ಅದೇ ಕಾರಣ, ಕ್ಯಾಮರಾದಲ್ಲೇನು ಕ್ಲಿಕ್ಕಿಸಬಹುದು ಆದರೆ ಆ ಮುಖದಲ್ಲಿ ನಿಜಾವಾದ ಭಾವನೆಗಳನ್ನು ಹುಟ್ಟಿಸುವುದಿದೆಯಲ್ಲ ಅದು ಮಹತ್ವದ್ದು...

SSK said...

ಮದುವೇ ಎಂದರೆ ಒಂದು ರೀತಿ ಅರ್ಥ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ, ಮದುವೇ, ಮದುಮಗಳ ಬಗ್ಗೆ ಮತ್ತು ಅಲ್ಲಿನ ಕಷ್ಟ, ಸುಖಗಳ ಬಗ್ಗೆ ಒಂದು ಚಂದದ ಲೇಖನ ಬರೆದಿದ್ದೀರಿ.
ಇದರ ಬಗ್ಗೆ ಇನ್ನಷ್ಟು ಬರೆಯುತ್ತೀರೆಂದು ಆಶಿಸುತ್ತೇನೆ!

(SSK)
ಮಿಸೆಸ್. ಶೋಭಾಶಿವಕುಮಾರ್.

Keshav.Kulkarni said...

I wish you were there to catch our wedding photos!

Keshav

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಯಾವುದೇ ವೃತ್ತಿಯಿರಲಿ, ಅದರಲ್ಲಿ ಪಳಗಿದವರ ಅನುಭವದ ಮಾತುಗಳು ಕೇಳಲು ಚೆನ್ನ. ಅದರಿಂದ ಎಷ್ಟೊಂದು ವಿಷಯಗಳನ್ನು ಕೇಳಬಹುದು ಮತ್ತು ತಿಳಿಯಬಹುದು. ಭಾವನೆಗಳನ್ನು ಫೋಟೋಗಳಲ್ಲಿ ತೋರಿಸುವುದಿದೆಯಲ್ಲ ಅದು ನಿಜಕ್ಕೂ challenging. ಅದನ್ನು ತೆಗೆಯುವಾಗ ನೀವು ಮಾತನಾಡುವುದು, ವಧುವಿನ ಪ್ರತಿಕ್ರಿಯೆ...ಎಲ್ಲ ಅದ್ಭುತವಾಗಿ ಬರೆದಿದ್ದೀರಿ.
ಇನ್ನೂ ನಿಮ್ಮ ಬತ್ತಳಿಕೆಯಲ್ಲಿ ಮದುವೆ ಮನೆಯ ಸ್ವಾರಸ್ಯಕರ ಪ್ರಸಂಗಗಳಿವೆ ಅಂತ ನಂಗೊತ್ತು. ಬರೆಯಿರಿ. ಚೆನ್ನಾಗಿರುತ್ತದೆ.

ಗಿರೀಶ್ ರಾವ್, ಎಚ್ (ಜೋಗಿ) said...

ಸಕತ್ತಾಗಿದೆ ಶಿವು. ಖುಷಿಯಿಂದ ಓದಿದೆ. ಇಡೀ ದಿನಕ್ಕೆ ಸಾಕು.
ಜೋಗಿ

Unknown said...

ಚೆನ್ನಾಗಿದೆ ಶಿವೂ ಸಾರ್... ಅಷ್ಟೊಂದು ಪರಿಣತಿ ಇಲ್ಲದ ಫೋಟೋಗ್ರಾಫರ್ ಒಬ್ಬ ಮದ್ಧ್ಯೆ ಪದೇ ಪದೇ ತಲೆತೂರಿಸಿ (ಫೋಟೋ ತೆಗೆಯಲು) ಪುರೋಹಿತರ ಕೈಯಿಂದ ಚೆನ್ನಾಗಿ ಉಗಿಸಿಕೊಂಡಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ... :-)

Anonymous said...

ಶಿವು ಸರ್,

ಚಂದದ ಬರಹ.ಮದುವೆ ಮನೆಗೆ ಬಂದವರು ನಾಲ್ಕು ಅಕ್ಷತೆ ಕಾಳು ಹಾಕಿ ಚಂದಗೆ ಉಂಡು ತೇಗಿ ಹೊರಡುತ್ತಾರೆ.
ಅತ್ತ ಹುಡುಗನ ಕಡೆಯೂ ಅಲ್ಲದೇ, ಇತ್ತ ಹುಡುಗಿಯ ಕಡೆಯೂ ಅಲ್ಲದೇ ಇದ್ದರೂ ಇಡೀ ಕುಟುಂಬಕ್ಕೆ ಮದುವೆಮನೆಯ ಸಡಗರದ ನೆನಪು ಉಳಿಸಿಕೊಳ್ಳಲು ಇದೇ ಫೋಟೋಗ್ರಾಫರ್ ಬೇಕಾಗುವುದು ಒಂದು ಅನನ್ಯ ಸಂಬಂಧದ ಕುರುಹು.
ದುಃಖ ಏನೆಂದರೆ ಫೋಟೋಕ್ಕೆ ಮುಖ ಕೊಡುವಾಗ ನಗುತ್ತಾ ಮೇಕಪ್ ಸರಿ ಮಾಡಿಕೊಳ್ಳುವ ನಾರಿಯರು, ಇಡೀ ಮದುವೆಮನೆಯ ಜವಾಬ್ದಾರಿ ಬೆನ್ನ ಮೇಲೆ ಹೊತ್ತಂತೆ ನಟಿಸುವ ಪುರುಷರು ಫೋಟೋಗ್ರಾಫರ್ ಗೆ ಊಟವಾಯ್ತಾ ಅಂತ ಕೇಳಿದ ಚಿತ್ರ ಮನಸ್ಸಲ್ಲಿಲ್ಲವೇ ಇಲ್ಲ..

shivu.k said...

ವನಿತಾ,

ಮದುವೆಗೆ ಹೋದರೂ ಅಲ್ಲಿ ನಡೆಯುವ ವಿಧ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇನ್ನೂ ಅನೇಕ ಸಂಗತಿಗಳು ಅರಿವಿಗೆ ಬರುತ್ತವೆ...ಅದನ್ನು ಮುಂದೆ enjoy ಮಾಡಿ..

ಪುರೋಹಿತರು ನೇರವಾಗಿ ಫೋಟೋಗ್ರಾಫರುಗಳನ್ನು ಬೈಯ್ಯುವುದನ್ನು, ಹಾಗೇ ಯಾರಿಗೂ ಕಾಣದಂತೆ ಕೇಳದಂತೆ ಪುರೋಹಿತನಿಗೆ ಫೋಟೋಗ್ರಾಫರುಗಳು ಬೈಯ್ಯುವುದನ್ನು ಮುಂದೆ ಬರೆಯುತ್ತೇನೆ..

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..

shivu.k said...

ಪ್ರಭುರಾಜ್,

ಮದುಮಗಳ ಒಂದು ಗುಣವನ್ನು ಮಾತ್ರ ಬರೆದಿದ್ದೇನೆ...ಸಾಧ್ಯವಾದರೆ ಇದಕ್ಕೆ ವಿರುದ್ಧವಾದ ನಾವು ಪ್ರತಿ ಫೋಟೋ ಕ್ಲಿಕ್ಕಿಸಲು ಹರಸಾಹಸ ಮಾಡಬೇಕಾದ, ಏನೇ ಮಾಡಿದರೂ ಫೋಸ್ ಕೊಡದ, ಜಪ್ಪಯ್ಯ ಅಂದ್ರೂ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದ ಹೆಣ್ಣಿನ ಬಗ್ಗೆಯು ಮುಂದೆ ಬರೆಯುತ್ತೇನೆ.....
ಮದುವೆ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...

shivu.k said...

ಶೋಭ ಮೇಡಮ್,

ಮದುವೆಯ ಅನೇಕ ಮುಖಗಳನ್ನು ತೋರಿಸಬೇಕೆಂದು ನನಗೂ ಆಸೆ. ಅದ್ರೆ ಯಾರಾದ್ರು ತಪ್ಪು ತಿಳಿದಾರು ಅನ್ನುವ ಭಯವೂ ಇದೆ...ಸಾಧ್ಯವಾದಷ್ಟು ಯಾರಿಗೂ ನೋವಾಗದ ಹಾಗೆ ಮತ್ತು ನಾನು ಪೂರ್ವಗ್ರಹ ಪೀಡಿತನಾಗದೆ ಹೊರನಿಂತು ಬರೆಯಲು ಪ್ರಯತ್ನಿಸುತ್ತೇನೆ...

ಹೀಗೆ ಬರುತ್ತಿರಿ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಕುಲಕರ್ಣಿ ಸರ್,

ನಿಮ್ಮ ಹಾರೈಕೆಯಂತೆ ಆಗಲಿ...ಧನ್ಯವಾದಗಳು..

shivu.k said...

ಮಲ್ಲಿಕಾರ್ಜುನ್,

ಪಕ್ಕಾ ವೃತ್ತಿಪರ ಕೆಲಸಗಾರರಿಗೆ ಕೆಲಸ ನೀರು ಕುಡಿದಷ್ಟು ಸುಲಭವೆನ್ನುವುದು ನಿಜ. ಇದು ವಸ್ತುಗಳ [product] ಮೇಲೆ ಸರಿ...ಅದ್ರೆ ಯಾವುದೇ ವೃತ್ತಿಪರನಿಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸುವುದಿದೆಯಲ್ಲ...ಅಲ್ಲಿದೆ...ಎಲ್ಲಾ ನವರಸಗಳು.

ಮದುಮಗಳ ಫೋಟೋಗ್ರಫಿಯ ಖುಷಿಯ ವಿಚಾರವನ್ನು ಬರೆದು ನಿಮ್ಮೆಲ್ಲರ ಮೆಚ್ಚಿಗೆ ಗಳಿಸಿದ್ದೇನೆ...ಮುಂದೆ ಅದಕ್ಕೆ ವಿರುದ್ಧವಾದ ವಿಚಾರ ಬರೆದಾಗ ಏನೇಳುತ್ತೀರೆಂಬ ಕುತೂಹಲ ನನಗೂ ಇದೆ...ನೋಡೋಣ...
ಮುಂದೆ ಇನ್ನಷ್ಟು ಬರೆಯುತ್ತೇನೆ...

ಧನ್ಯವಾದಗಳು...

shivu.k said...

ಗಿರೀಶ್ ಸರ್,

ಮದುವೆ ಲೇಖನವನ್ನು ಮೆಚ್ಚಿದವರಲ್ಲಿ ನೀವು ಒಬ್ಬರಾಗಿರುವುದು ನನಗೆ ಖುಷಿಯ ವಿಚಾರ...ನಿಮ್ಮ ಇಡೀ ದಿನ ಆಹ್ಲಾದಕರವಾಗಿರಲಿ...

ಧನ್ಯವಾದಗಳು...

shivu.k said...

ರವಿಕಾಂತ್ ಸರ್,

ಫೋಟೋಗ್ರಾಫರ್ ಒಬ್ಬ ಪುರೋಹಿತನಿಂದ ಬೈಸಿಕೊಂಡಿದ್ದು ನೋಡಿದ್ದೀರಿ....ಅದಕ್ಕೆ ವಿರುದ್ಧವಾದ ಚಿತ್ರಗಳನ್ನು ನಾನು ಮುಂದೆ ಬರೆಯುತ್ತೇನೆ...ಆಗ ತಪ್ಪದೇ ಓದಿ ನಿಮ್ಮ ಅಭಿಪ್ರಾಯ ತಿಳಿಸಿ...

ಧನ್ಯವಾದಗಳು..

shivu.k said...

ರಂಜಿತ್ ಸರ್,

ಮದುವೆ ಮನೆಯಲ್ಲಿ ನಡೆಯುವ ಸನ್ನಿವೇಶಗಳನ್ನು ನೀವು ಚೆನ್ನಾಗಿ ಗಮನಿಸಿದ್ದೀರಿ...

ಮದುವೆ ಪ್ರಾರಂಭಕ್ಕೆ ಮೊದಲು ಬರುವವರು ನಾವು ಮತ್ತು ಕೊನೆಯಲ್ಲಿ ಹೋಗುವವರು ನಾವೇ...ಅನೇಕ ಮದುವೆಗಳಲ್ಲಿ ನಾವು ಕೊನೆಯಲ್ಲಿ ಊಟ ಮಾಡುವುದರಿಂದ ಊಟ ಸಿಕ್ಕಿರುವುದಿಲ್ಲ...ಅದಕ್ಕೆ ಬೇಸರವು ನಮಗಾಗುವುದಿಲ್ಲ...ಅಲ್ಲಿಂದ ತಪ್ಪಿಸಿಕೊಂಡರೆ ಸಾಕು ಅನ್ನುವ ಮಟ್ಟಿಗೆ ಕೆಲವೊಮ್ಮೆ ಬೇಸರವೂ ಆಗಿರುತ್ತದೆ..
ಇಷ್ಟೆಲ್ಲಾ ಅದರೂ ಮದುವೆಯಾದ ಜೋಡಿಗೆ ಅವರ ೫೦ ವರ್ಷಗಳ ನಂತರ ತಮ್ಮ ಮದುವೆ ನೆನಪು ಮೆಲುಕುಹಾಕಲು ನಾವು ತೆಗೆದ ಫೋಟೋಗಳೇ ಬೇಕಲ್ಲವೇ..

ಧನ್ಯವಾದಗಳು.

ಮುತ್ತುಮಣಿ said...

ಎರಡು ಲೇಖನಕ್ಕೆ ಒಟ್ಟಿಗೆ ಬರೆಯುತ್ತಿದ್ದೇನೆ,

ಆ ಹಕ್ಕಿಗಳ ಫೋಟೋ ಬಹಳ ಚೆನ್ನಾಗಿತ್ತು.

ಮತ್ತು ಈ ಮದುವೆ ಮನೆಯ ’ಫೋಟೊಗ್ರಾಫರ್ ಪುರಾಣ’ ಮನಸ್ಸಿಗೆ ಮುದ ನೀಡಿತು.

Naveen ಹಳ್ಳಿ ಹುಡುಗ said...

ಅಣ್ಣ ಲೇಖನ ಚೆನ್ನಾಗಿದೆ...

shivu.k said...

ಮುತ್ತುಮಣಿ ಮೇಡಮ್,

ನೀವು ನನ್ನ ಬ್ಲಾಗಿಗೆ ಬರುವುದೇ ಅಪರೂಪವಾಗಿತ್ತು. ಕೊನೆಗೂ ಬಂದಿರಲ್ಲ. ನಿಮಗೆ ಸ್ವಾಗತ.

.ಎರಡು ಲೇಖನಕ್ಕೂ ಒಟ್ಟಿಗೆ ಪ್ರತಿಕ್ರಿಯಿಸಿದ್ದೀರಿ...ಧನ್ಯವಾದಗಳು..

shivu.k said...

ನವೀನ್,

ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನೀವು ನನಗೆ ಫೋನ್ ಮಾಡಿದಾಗ ನಾನು ಮದುವೆ ಫೋಟೋಗ್ರಫಿಗೆ ಹೋಗುತ್ತಿದ್ದೆ..

ಧನ್ಯವಾದಗಳು...

Unknown said...

ಶಿವು
ನನಗೆ ಪೋಟೋ ತೆಗೆಯುವುದರಲ್ಲಿ ರಿಉವ ಆಸಕ್ತಿ ತೆಗೆಸಿಕೊಳ್ಳುವುದರಲ್ಲಿ ಇಲ್ಲ. ಮದುವೆ ಮನೆಯಲ್ಲಿ ವಿನಾಕಾರಣ ತಡಮಾಡಿಸುವುದರಲ್ಲಿ ಈ ಫೋಟೋಗ್ರಾಫರುಗಳದ್ದೇ ಮೇಲುಗೈ ಎಂದು ನಾನು ಭಾವಿಸಿದ್ದೆ. ನೆನ್ನೆ ಕೂಡಾ ಹಿರಿಸಾವೆಯಲ್ಲಿ ಒಂದು ಮದುವೆಗೆ ಹೋಗಿದ್ದೆ. ಅಲ್ಲಿನ ವೊಡೊಯೋ/ಫೋಟೋಗ್ರಾಫರ್ ಅವರ ತಡ ಮಾಡುವ ಗುಣದಿಂದಾಗಿ ನಾನು ಬೆಂಗಳೂರು ಸೇರುವುದು ಎರಡು ಗಂಟೆ ತಡವಾಯಿತು! ಅಲ್ಲದೆ ಅಲ್ಲಿ ಕಾಯುತ್ತಿದ್ದ ಜನ ಈ ಫೋಟೋಗ್ರಾಫರುಗಳಿ ತಮ್ಮ ಟಾರ್ಗೆಟ್ ರೀಚ್ ಆಗದೆ ಫೋಟೋ ತೆಗೆಯುವುದು ನಿಲ್ಲಿಸೋಲ್ಲ ಎಂದು ಮಾತನಾಡಿಕೊಂಡರು. ನಿಜ ಹೇಳುತ್ತೇನೆ ಶಿವು, ಅದರಲ್ಲಿ ನಾನು ಭಾಗಿಯಾಲ್ಲ!
ನನ್ನ ಮದುವೆಯಲ್ಲಿ ನಾನು ಫೋಟೋಗ್ರಾಫರನಿಗೆ 'ಪೋಸು ಕೊಡುವುದಿಲ್ಲ. ಅದು ಹೇಗೆ ಬರುತ್ತದೋ ಹಾಗೇ ತೆಗೆಯಿರಿ ನ್ಯಾಚುರಲ್ ಆಗಿ' ಎಂದು ಹೇಳಿಬಿಟ್ಟಿದ್ದೆ! ಅದೇನೇ ಇರಲಿ, ನಿಮಗೂ ಈ ಪರಿ ಕಷ್ಟ ಗಳಿರುತ್ತವೆ ಎಂದು ಗೊತ್ತಾಗಿದ್ದೇ ನಿಮ್ಮ ಬರಹದಿಂದ. ನಿಮ್ಮೊಂದಿಗೆ ನನ್ನನ್ನೂ ಒಂದು ಮದುವೆಗೆ ಕರೆದುಕೊಂಡು ಹೋಗಿ, ನಿಮ್ಮ ಸಹಾಯಕನಾಗಿ ಬರುತ್ತೇನೆ. ನೋಡೋಣ ಅದರ ತಮಾಷೆಯನ್ನೂ!

ಕ್ಷಣ... ಚಿಂತನೆ... said...

ಶಿವು ಸರ್‍, ಮದುವೆ ಮನೆಯ ಫೋಟೋ ಬಗೆಗಿನ ಲೇಖನ ಚೆನ್ನಾಗಿದೆ.

ನಿಜಕ್ಕೂ ಅದು ಸಾಹಸದ ಕೆಲಸವೇ ಹೌದು. ಭಾವನೆಗಳನ್ನು ಸೆರೆ ಹಿಡಿಯುವ ಕಲೆಯ ಜೊತೆಗೆ ಮಾತುಗಾರಿಕೆಯ ಕಲೆಯೂ ಇಲ್ಲಿ ಕೆಲಸಕ್ಕೆ ಹಚ್ಚುತ್ತದೆ. ಒಮ್ಮೊಮ್ಮೆ ಅಭಾಸವಾಗುವಂತಹ ಸಂದರ್ಭಗಳೂ ಇಲ್ಲದಿಲ್ಲ. ಅದನ್ನೆಲ್ಲಾ ನಿಭಾಯಿಸುವ ನಿಮ್ಮಂತಹವರಿಗೆ ಧನ್ಯವಾದಗಳು.

ಮತ್ತಷ್ಟು ಫೋಟೋ-ಬರಹಗಳ ನಿರೀಕ್ಷೆಯಲ್ಲಿ...

shivu.k said...

ಸತ್ಯನಾರಯಣ ಸರ್,

ಮದುವೆ ಫೋಟೋಗ್ರಾಫರುಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಾನು ಪ್ರಾಮಾಣಿಕವಾಗಿ ಒಪ್ಪುತ್ತೇನೆ...ಎಲ್ಲರೂ ಹಾಗೆ ಇರುವುದಿಲ್ಲ..ನಿಮಗೆ ಆದ ಅನುಭವ ನೂರಕ್ಕೆ ಒಂದು ಬಾರಿ ಮಾತ್ರ...ಇನ್ನುಳಿದ ಸಮಯದಲ್ಲಿ ಬೇರೆಯವೇ ಆಗುತ್ತವೆ....

ಮತ್ತೆ ನೀವು ಮದುವೆಗೆ ಫೋಸು ಕೊಟ್ಟಿಲ್ಲವೆಂದಿರಿ...ಇದೇ ರೀತಿ ನನ್ನ ಅನೇಕ ಗೆಳೆಯರು ತುಂಬಾ ಸಹಜವಾಗಿ[ಫೋಸ್ ಕೊಡಬೇಕೆಂದು ನಾವು ಕೇಳಬಾರದೆಂದು ಅವರ ಆದೇಶ] ಫೋಟೋಬೇಕೆಂದು ನಿಮ್ಮ ರೀತಿಯೇ ಹೇಳಿದ್ದರಿಂದ ಅವರಿಷ್ಟದಂತೆ ಕ್ಲಿಕ್ಕಿಸಿದ್ದೇನೆ...ಅದರಲ್ಲೂ ಅದ್ಭುತವೆನಿಸುವಂತ ಫೋಟೋಗ್ರಫಿ ಮಾಡಬಹುದು...ಆ ರೀತಿ ಮಾಡಿದ ಒಂದು ಮದುವೆ ಆಲ್ಬಂ ಅನ್ನು ಮಲ್ಲಿಕಾರ್ಜುನ್‌ಗೆ ತೋರಿಸಿದ್ದೇನೆ...ಅವರು ತುಂಬಾ ಇಷ್ಟಪಟ್ಟಿದ್ದಾರೆ....ಮತ್ತು ಆ ರೀತಿ ಮಾಡಿಸಿಕೊಂಡವರು ತುಂಬಾ ಇಷ್ಟಪಟ್ಟಿದ್ದಾರೆ....

ಇಲ್ಲಿ ಒಂದೇ ಟೆಕ್ನಿಕ್ ಇದೆ...ನೀವು ಫೋಸು ಕೊಡದಿದ್ದರೂ ಭಾವನೆಗಳನ್ನು ವ್ಯಕ್ತಪಡಿಸುತ್ತೀರಲ್ಲ...ಅಷ್ಟು ಸಾಕು ಅದರಿಂದ ನಾವು ಮದುವೆ ಮನೆಯನ್ನೇ ಆಳಬಹುದು..

ಸಾರ್, ನಾನಿಲ್ಲಿ ಬರೆಯಲೆತ್ನಿಸಿರುವುದು ಫೋಸು ಕೊಡದೇ..ಭಾವನೆಗಳನ್ನು ವ್ಯಕ್ತಪಡಿಸದಿರುವ ವ್ಯಕ್ತಿಗಳ ಬಗ್ಗೆ ...

ಸುಂದರವಾದ ಕಾಮೆಂಟಿಗೆ...ಮತ್ತೊಮ್ಮೆ ಧನ್ಯವಾದಗಳು..

guruve said...

ನಿಮ್ಮ ವೃತ್ತಿಯ ರಸ ಘಳಿಗೆ ಗಳನ್ನು ಚೆನ್ನಾಗಿ ಬರೆದಿದ್ದೀರಿ... ಓದಿ ಆನಂದಿಸಿದೆ...

ಜಿ.ಎಸ್.ಬಿ. ಅಗ್ನಿಹೋತ್ರಿ said...

ಚೆನ್ನಾಗಿದೆ ಲೇಖನ. ಪ್ರಾದೇಶಿಕ ಭಿನ್ನತೆಯ ಬಗ್ಗೆ ವಿವರ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

PARAANJAPE K.N. said...

ಶಿವೂ
ಮದುವೆ ಫೋಟೋ ತೆಗೆಯುವಾಗ ಹೆಣ್ಣನ್ನು ಹೊಗಳಿ ಅವಳ ಮುಖದಲ್ಲಿ ಕಾ೦ತಿ ಹೊಮ್ಮುವ೦ತೆ ಮಾಡಿ ಫೋಟೋ ಕ್ಲಿಕ್ಕಿಸುವ ನಿಮ್ಮ ಚಾತುರ್ಯ ಮೆಚ್ಚಬೇಕಾದ್ದೆ. ನಿಮ್ಮ ಬರಹ, ಬರಹದೊಳಗಿನ ನವಿರುಹಾಸ್ಯ, ಘಟನೆಗಳ ಜೋಡಣೆ, ಚೆನ್ನಾಗಿದೆ. ಕೆಲವೊಮ್ಮೆ ಮದುವೆಮನೆಯಲ್ಲಿ ಪುರೋಹಿತರು ಮತ್ತು ಫೋಟೋಗ್ರಾಫರುಗಳು ಬದ್ಧ ವೈರಿಗಳ೦ತಾಡುತ್ತಾರೆ. ಪುರೋಹಿತರಿಗೆ ಸ೦ಪ್ರದಾಯ ಬದ್ಧವಾಗಿ ಮದುವೆಯ ವಿಧಿವಿಧಾನಗಳನ್ನು ನಡೆಸಿಕೊಡುವ ಧಾವ೦ತವಾದರೆ, ನಿಮಗೆ ಆ ಅಪರೂಪದ ಕ್ಷಣಗಳನ್ನು ಸೆರೆಹಿಡಿಯುವ ಆತುರ. ಇವೆರಡರ ತಾಕಲಾಟದಲ್ಲಿ ನಿಮ್ಮ ನಡುವೆ ಸಣ್ಣಮಟ್ಟಿನ ಶೀತಲ ಸಮರ ಆಗಾಗ ನಡೆಯು ವುದನ್ನು ನಾನು ನೋಡಿದ್ದೇನೆ. ಇಲ್ಲಿ ಯಾರನ್ನು ದೂರು ವ೦ತಿಲ್ಲ. ಪರಸ್ಪರ ಸಹಕರಿಸಿ ನಡೆವವರು ಬಹಳ ಕಡಿಮೆ.

ವಿನುತ said...

ಚೆನ್ನಾಗಿದೆ ನಿಮ್ಮ ಅನುಭವಗಳು. ಸ೦ಭ೦ದಿಕರೊಬ್ಬರ ಮದುವೆಯಲ್ಲಿ, ಮುಹೂರ್ತ ಮೀರುತ್ತಿದೆ ಮದುಮಗಳನ್ನು ಕರೆದುಕೊ೦ಡು ಬನ್ನಿ ಎ೦ದು ಪುರೋಹಿತರು ಕೂಗುತ್ತಿದ್ದರೂ, ಅಲ೦ಕಾರ ಮಾಡುವವಳು ಇನ್ನೂ ಮುಗಿದಿಲ್ಲ ಎನ್ನುವುದಕ್ಕೂ, ಫೋಟೋಗ್ರಾಫರ್ ಇನ್ನೊ೦ದು ಫೋಸು ಮೇಡಂ ಎನ್ನುತ್ತಿರುವುದಕ್ಕು, ನಮ್ಮ ತ೦ದೆಗೆ ಸಿಟ್ಟು ಬ೦ದು ಎಲ್ಲರ ಮೇಲೂ ರೇಗಿಬಿಟ್ಟಿದ್ದ ಸ೦ದರ್ಭ ನೆನಪಾಯಿತು :)

ಅನಿಲ್ ರಮೇಶ್ said...

ಶಿವು, ತುಂಬಾ ಚೆನ್ನಾಗಿ ಬರೆದಿದ್ದೀರ!
ಮುಂದಿನ ಸಂಚಿಕೆಯ ನಿರೀಕ್ಷೆಯಲ್ಲಿದ್ದೇನೆ.

-ಅನಿಲ್

ಧರಿತ್ರಿ said...

ಶಿವಣ್ಣ...
ನಿಮ್ಮ ಲೇಖನ ಓದಿ ಒಂದ್ಸಲ ಮದುವೆ ಮನೇಲಿ ಸಂಭ್ರಮಪಟ್ಟಂಗೆ ಆಯಿತು. ಫೋಟೋಗ್ರಾಫರ್ ಗಳು ಇಷ್ಟೆಲ್ಲಾ ಖತರ್ ನಾಕ್ ಇರ್ತಾರೆ ಅನ್ನೋದು ಗೊತ್ತಿರಲಿಲ್ಲ. ನಿಮ್ಮ ಈ ಲೇಖನದ ಜೊತೆಗೆ ಮದುಮಗಳ ಒಂದೆರಡು ಫೋಟೋಸ್ ಹಾಕ್ತಾ ಇರ್ತಾ ಇದ್ರೆ...ಇನ್ನೂ ಮೆರುಗು ಹೆಚ್ಚಾಗುತ್ತಿತ್ತಲ್ವಾ?ಸುಂದರ ಲೇಖನಕ್ಕೆ ಅಭಿನಂದನೆಗಳು.

ಅದ್ದರಿ ನನ್ ಮದುವೆಗೆ ನಿಮ್ಮನ್ನೇ ಕರಿಯೋಣ ಅಂತ ಇದ್ದೀನಿ ಬರ್ತಿರಲ್ಲಾ...

-ಧರಿತ್ರಿ

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ಮೂಗಿನ ವಿಷ್ಯ ಸಕತ್ ಆಗಿತ್ತು...
ಧನ್ಯವಾದಗಳು...

ಬಾಲು said...

vrutti pararu haagu nipuna mathu kelalu chanda.
madumagala moga dalli nagu tharalu kashta nimage mathra thiliyuttade.

nanu kaleda shukravaara upanayanada photography madide. mavana maga atha. purohitharu sikkapatte kashta kotru. elladakku adda barodu, homa da hoge bere kashta kodtha ittu. avaga photo thegeyora kashta swalpa thilithu!!!

adange CL tharadde bere yaava code galu nim bali ive?

shivu.k said...

ಕ್ಷಣ ಚಿಂತನೆ ಸರ್,

ನಮ್ಮ ಕೆಲಸವನ್ನು ದೊಡ್ಡ ಸಾಹಸವೆಂದು ವರ್ಣಿಸಿದ್ದು ನನಗೆ ಖುಷಿಯಾಯಿತು....ಮದುವೆ ಮನೆಯಲ್ಲಿ ನಮಗೆ ಬೇಕಾದ ಭಾವನೆಗಳನ್ನು ವ್ಯಕ್ತಪಡಿಸುವಂತೆ ಮಾಡಲು ನಾವು ಅನೇಕ ಸರ್ಕಸ್ ಮಾಡಬೇಕಾಗುತ್ತೆ....ಭಾವನೆಗಳಿಲ್ಲದೇ ಫೋಟೋ ತೆಗೆಯಬಹುದು...ಅದರೆ ಮನಸ್ಸು ಮತ್ತು ವೃತ್ತಿಧರ್ಮ ಒಪ್ಪುವುದಿಲ್ಲ...ಮಾಡುವ ಕೆಲಸವನ್ನು ಮನಸ್ಸಿಟ್ಟು ಶ್ರದ್ಧೆಯಿಂದ ಮಾಡು...ಅಂತ ಅಂದುಕೊಳ್ಳುವುದು ನನ್ನ ಪಾಲಿಸಿ....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು....

ಸಾಗರದಾಚೆಯ ಇಂಚರ said...

ಶಿವೂ ಸರ್,
ತುಂಬಾ ಸುಂದರವಾಗಿ ವರ್ಣಿಸಿದ್ದೀರಿ, ಕಣ್ಣಿಗೆ ಕಟ್ಟಿದಂತಿದೆ ನಿಮ್ಮ ವರ್ಣನೆ, ಮದುವೆಯ ಮನೆಯ ಸಂಭ್ರಮವೇ ಒಂದು ಸಂತಸದ ಕ್ಷಣ, ಇಂಥಹ ಸಂಸ್ಕ್ರತಿ ನಮ್ಮ ದೇಶದ ಅವಿಭಾಜ್ಯ ಅಂಗ ಕೂಡಾ. ಸಂಸಾರದ ಒಗ್ಗಟ್ಟಿಗೆ ಇಂಥಹ ಮದುವೆಗಳೇ ಭದ್ರ ಬುನಾದಿ , ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ

shivu.k said...

ಗುರುಪ್ರಸಾದ್,

ಲೇಖನ ಓದಿ ಆನಂದಿಸಿದ್ದಕ್ಕೆ ಧನ್ಯವಾದಗಳು...

shivu.k said...

ಆಗ್ನಿಪ್ರಪಂಚ ಸರ್,

ಈ ಲೇಖನದಲ್ಲಿ ಸಾಮಾನ್ಯ ವಿಚಾರವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದ್ದೇನೆ...ಮುಂದಿನ ಲೇಖನದಲ್ಲಿ ನಿಮ್ಮ ಮಾತಿನಂತೆ ಪ್ರಯತ್ನಿಸುತ್ತೇನೆ...

ಬ್ಲಾಗಿಗೆ ಬಂದು ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

shivu.k said...

ಪರಂಜಪೆ ಸರ್,

ಹೆಣ್ಣಿನ ಮುಖದಲ್ಲಿ ರಾಜಕುಮಾರಿಯ ಕಳೆ ಮತ್ತು ಭಾವನೆಗಳನ್ನು ವ್ಯಕ್ತವಾದಾಗ ನಮ್ಮ ಕೆಲಸಕ್ಕೆ ಸಾರ್ಥಕತೆ ಬಂದಂತೆ...ಅದಕ್ಕಾಗಿ ನಾವು ಮಾಡುವ ಅನೇಕ ಲಗಾಟಿಗಳನ್ನು ಇದೊಂದನ್ನು ಮಾತ್ರ ಬರೆದಿದ್ದೇನೆ...
ಕೆಲವರಿಗೆ ನಗುವಿನ ಬಗ್ಗೆ ವಿವರಿಸಿ..ಹೊಗಳುತ್ತೇವೆ...
"ಅರ್ಧ ಸೆಂಟಿಮೀಟರ್ ಡಿಂಪಲ್ ಇಟ್ಟುಕೊಂಡು ನಿಮ್ಮ ಹುಡುಗನನ್ನು ಬುಟ್ಟಿಗೆ ಹಾಕಿಕೊಂಡು ಬಿಟ್ಟಿರಲ್ಲ...ಅಂತ ಡಿಂಪಲ್ ಇರುವವರನ್ನು ಹೊಗಳಿದರೆ ಸಾಕು ನಮ್ಮ ಮುಂದಿನ ಕೆಲಸ ಸರಾಗ....ಹೀಗೆ ಅನೇಕ ಹೊಗಳಿಕೆಗಳು ಬರುತ್ತಲೇ ಇರುತ್ತವೆ...ಇಷ್ಟುಕ್ಕೂ ಒಬ್ಬರನ್ನು ಹೊಗಳಿದರೆ ನಾವು ಕಳಿದುಕೊಳ್ಳುವುದೇನಿದೆ...ಅವರಿಗೂ ಖುಷಿಯಾಗುತ್ತೆ...ಅಲ್ವ ಸರ್...

ಮತ್ತೆ ಪುರೋಹಿತನ ಕೆಲಸವನ್ನು ನಾವು ಗೌರವಿಸುತ್ತೇವೆ..ಅವರಿಗೂ ನಮ್ಮ ಮೇಲೆ ಗೌರವವಿರುತ್ತೆ...ಅದ್ರೆ ಯಾವುದೋ ಒಂದು ಕ್ಷಣದಲ್ಲಿ ಅವರಿಗೆ identity crysis ಬಂದುಬಿಟ್ಟರೆ...ಅವರು ಗೊತ್ತಾಗಿಯೋ ಗೊತ್ತಿಲ್ಲದೆಯೋ ನಮಗೆ ತೊಂದರೆ ಕೊಡಲಾರಂಬಿಸುತ್ತಾರೆ...ಅದಕ್ಕೆ ಮುಖ್ಯ ಕಾರಣ ಅವರನ್ನು ಯಾರು ಕಡೆಗಾಣಿಸಬಾರದೆಂಬ ಆಸೆ...

ಅದರೂ ಎರಡು ವೃತ್ತಿಯವರು ಹೊಂದಿಕೊಂಡು ಹೋಗುವ[ಸಮ್ಮಿಶ್ರ ಸರ್ಕಾರದಂತೆ]ರೀತಿ ಅನೇಕ ಅನುಭವಗಳು ಆಗಿವೆ...

ಧನ್ಯವಾದಗಳು...

NiTiN Muttige said...

ಶಿವು ಈ ಮೂಗಿನ ಬಗ್ಗೆ ಬರೆದರೆ ಲೇಖನವೇ ಆಗಬಲ್ಲದು!! :) ನೀವು ನೋಡಿ, ಒಬ್ಬರು ಎಷ್ಟೇ ಬೆಳ್ಳಗೆ ಇದ್ದರೂ ಕಪ್ಪಗೇ ಇದ್ದರೂ ಮತ್ತಷ್ಟು ಅವರನ್ನೇ ನೋಡ ಬೇಕು ಎಂದು ನಮ್ಮ ಮನಸ್ಸನ್ನು ಎಳೆಯುವುದು ಆ ಮೂಗೇ!!! :)
ನಿಮ್ಮ ಈ ಬರಹ ನನಗಂತೂ ತುಂಬ ತುಂಬ ಇಷ್ಟವಾಯಿತು. ನಿಮ್ಮ ಮದುವೆಯಲ್ಲಿನ ತಾಪತ್ರಯವನ್ನು ಚೆನ್ನಾಗಿ ಬಟ್ಟಿ ಇಳಿಸಿದ್ದಿರಾ!!! :) ಆದರೂ ನಿಮ್ಮ ಕೆಲಸ ಸಾಮಾನ್ಯದೆನಲ್ಲ ಬಿಡಿ...:)

shivu.k said...

ವಿನುತಾ ಮೇಡಮ್,

ಮದುವೆ ಅನುಭವ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ನೀವು ಹೇಳಿದ ಅನುಭವ ನಮಗೆ ತುಂಬಾ ಚೆನ್ನಾಗಿ ಆಗಿದೆ...

ಕಳೆದ ವಾರ ಇದೇ ರೀತಿ ಆದಾಗ ನಾನು ಮೇಕಪ್ ಮಾಡುವವರ ಮೇಲೆ ರೇಗಿದ್ದು ಉಂಟು...ಅವರು ಬೇಕಂತಲೇ ನಿದಾನ ಮಾಡುತ್ತಾರೋ...ನನಗಂತೂ ಗೊತ್ತಿಲ್ಲ....ಕೊನೆಯಲ್ಲಿ ಅವರಿಗೆ ನಾನು ಹೇಳಿದ್ದು ಇಷ್ಟು...

"ನೀವು ಇಷ್ಟು ಹೊತ್ತು ಮೇಕಪ್ ಮಾಡಿದ್ದು ವೇಷ್ಟು...ಏಕೆಂದರೆ ಅಲ್ಲಿ ನೋಡಿ ಎಲ್ಲಾ ಅರ್ಜೆಂಟ್ ಮಾಡುತ್ತಿದ್ದಾರೆ...ನನಗೆ ಒಂದು ಫೋಟೋ ತೆಗೆಯುವ ಅವಕಾಶವಿಲ್ಲ..ಈ ರೀತಿ ಸಮಯವನ್ನು ತಿಂದು ಹಾಕಲಿಕ್ಕೆ ನಿಮ್ಮನ್ನು ಯಾಕೆ ಕರೆಸುತ್ತಾರೋ ನನಗಂತೂ ಗೊತ್ತಿಲ್ಲ." ಅಂದೆ...ಅವರಿಂದ ಉತ್ತರವೇ ಬರಲಿಲ್ಲ...

ಅಂದು ರಾತ್ರಿ ನಾನು ಮೇಕಪ್ ಮಾಡಿದ ಹೆಣ್ಣಿನ ಫೋಟೋ ತೆಗೆಯಲಿಕ್ಕೆ ಆಗಲಿಲ್ಲ..ಅದರ ಬರಲಿಗೆ ಮರುದಿನ ಮೇಕಪ್ ಇಲ್ಲದಿದ್ದಾಗ ಸೊಗಸಾದ ಫೋಟೊಗಳನ್ನು ಕ್ಲಿಕ್ಕಿಸಿದ್ದೆ...ಕೊನೆಯಲ್ಲಿ ಮೆಚ್ಚಿಗೆಯಾದದ್ದು ಅದೇ...

ಧನ್ಯವಾದಗಳು...

Godavari said...

ಹ ಹ.. ತುಂಬಾ ಚೆನ್ನಾಗಿ ಬರೆದಿದ್ದೀರಿ..

shivu.k said...

ಆನಿಲ್,

ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ಸೊಗಸಾದ ಅನುಭವಗಳನ್ನು ಬರೆಯುತ್ತೇನೆ...
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

shivu.k said...

ಧರಿತ್ರಿ...

ಈ ಲೇಖನವನ್ನು ನಾನು ಬರೆಯಬೇಕಾದರೆ ಯಾವುದೇ ಪೂರ್ವಗ್ರಹ ಪೀಡಿತನಾಗದೇ...ಆಗಿರುವ ಸತ್ಯ ಅನುಭವವನ್ನು ಮಾತ್ರ ಬರೆದಿದ್ದೇನೆ...ಇಲ್ಲಿ ಯಾರನ್ನು ಕಾಲೆಳೆಯಲು, ಹೀಯಾಳಿಸಲು ಬರೆದಿಲ್ಲ. ಅದರೂ ನಾವುಗಳು[ಫೋಟೋಗ್ರಾಫರುಗಳು]ಖತರ್‌ನಾಕ್ ಅಂತ ನಿನಗೆ ಹೇಗನ್ನಿಸಿತೋ...ನಾ ಅರಿಯೇ...ಇರಲಿ...ಲೇಖನ ಓದಿ ಸಂಭ್ರಮಿಸಿದ್ದಕ್ಕೆ ಥ್ಯಾಂಕ್ಸ್...

ಮತ್ತೆ ಮದುವೆ ಹೆಣ್ಣುಗಳ ಫೋಟೋಗಳನ್ನು ನಾನು ಇಲ್ಲಿ ಹಾಕಬಾರದು...ಏಕೆಂದರೆ ಅವರಿಗೂ ಪ್ರವೈಸಿ ಇರುತ್ತಲ್ಲವೇ...ಜೊತೆಗೆ ಅವರ ಅನುಮತಿ ಪಡೆಯಬೇಕಾದ್ದು ಅಗತ್ಯ...ಹಾಗೆ ಕೇಳಿದರೂ ಯಾರು ಕೊಡುವುದಿಲ್ಲ...ಮತ್ತ್ತೆ ಹೀಗೆ ಫೋಟೋ ಹಾಕಿ ಅವರ ನವಜೀವನವನ್ನು ಸಾರ್ವಜನಿಕಗೊಳಿಸಲು ನನಗೂ ಇಷ್ಟವಿಲ್ಲ...

ಧನ್ಯವಾದಗಳು...

shivu.k said...

ಶಿವಪ್ರಕಾಶ್,

ಮೂಗಿನ ವಿಚಾರವನ್ನೇನೋ ಮೆಚ್ಚಿದ್ದೀರಿ...ಅದ್ರೆ ಇನ್ನೂ ಡಿಂಪಲ್, ಮುಂಗುರುಳು, ನಗು, ಇತ್ಯಾದಿಗಳ ಬಗ್ಗೆ ಇನ್ನೂ ಬರೆದಿಲ್ಲ ಸರ್...
ಧನ್ಯವಾದಗಳು...

Umesh Balikai said...

ಶಿವು ಸರ್,

ಮದುವೆ ಮನೆಯಲ್ಲಿ ಸುಮ್ಮನೇ ಫೋಟೋ ತೆಗೆಯಬೇಕು ಎಂದು ಕಂಡದ್ದನ್ನೇ ಸುಮ್ಮನೇ ಕ್ಲಿಕ್ಕಿಸುವ ಎಷ್ಟೋ ಫೊಟೋಗ್ರಾಫರ್ ಗಳು ಇರ್ತಾರೆ. ಇರುವುದೇ ಇನ್ನಷ್ಟು ಸುಂದರವಾಗಿ ಮೂಡಿ ಬರುವಂತೆ ವಧು ವರರಿಂದ ಒಳ್ಳೆಯ ಭಾವನೆಗಳನ್ನು ಹೊಮ್ಮಿಸುತ್ತಾ ಖುಷಿಯ ಮಾತನಾಡುತ್ತಾ ಫೋಟೋಗಳನ್ನು ಕ್ಲಿಕ್ಕಿಸುವ ನಿಮ್ಮಂತವರ ಜಾಣ್ಮೆ ಮೆಚ್ಚಬೇಕಾದ್ದೆ. ಮದುವೆ ಮನೆಯ ಚಿತ್ರಣ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಮುಂದುವರೆಸಿ, ನಾವೆಲ್ಲ ಓದಲು ತುಂಬಾ ಉತ್ಸುಕರಾಗಿದ್ದೇವೆ.

-ಉಮೇಶ್

shivu.k said...

ಬಾಲು ಸರ್,

ನೀವು ಉಪನಯನ ಫೋಟೋ ತೆಗೆದಾಗ ಪುರೋಹಿತನ ಹಿತಾನುಭವ ನಿಮಗಾಗಿದೆಯೆಲ್ಲಾ ಆಷ್ಟುಸಾಕು. ನಮ್ಮ ಬ್ಲಾಗ್ ಗೆಳೆಯರನೇಕರು ಪುರೋಹಿತನ ವಿಚಾರವಾಗಿ ಕೇಳಿದ್ದಾರೆ. ನಾನು ವೃತ್ತಿಪರ.ನನ್ನ ಮಾತನ್ನು ನಂಬದಿದ್ದರೂ ನಿಮ್ಮ ಮಾತನ್ನು ಖಂಡಿತ ನಂಬುತ್ತಾರೆ. ನೀವು ಹವ್ಯಾಸಿಯಾಗಿದ್ದು ಉಪನಯನ ಚಿತ್ರ ಕ್ಲಿಕ್ಕಿಸಿದ್ದೀರಿ...ನಿಮ್ಮ ಅನುಭವವೇ ನಮ್ಮ ನಿತ್ಯದ ಕಷ್ಟಗಳನ್ನು ಹೇಳುತ್ತದೆ....

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು..

shivu.k said...

ಬಾಲು ಸರ್,

ಮರೆತಿದ್ದೆ. ನೀವು ಕೇಳಿದ CL ತರಹದ ಅನೇಕ ಮಾತುಕತೆಗಳು ನಮ್ಮದೇ ಶೈಲಿಯಲ್ಲಿ ಮುಂದೆ ಬರುತ್ತವೆ...
ಧನ್ಯವಾದಗಳು..

shivu.k said...

ಗುರುಮೂರ್ತಿ ಹೆಗಡೆ ಸರ್,

ಮದುವೆಯ ಅನುಬಂದದ ಬಗೆಗೆ ನಿಮ್ಮ ಅಭಿಪ್ರಾಯವೇ ನನ್ನದೂ ಕೂಡ...ಅದರೇ ಅದರಲ್ಲಿ ನಡೆಯುವ ಇಂಥ ವಿಚಾರವನ್ನು ನಾನು ಹೇಳಬಾರದೆಂದುಕೊಂಡರೂ..ಸತ್ಯ ಗೊತ್ತಾಗಲೇ ಬೇಕಲ್ಲವೇ...ಭ್ರಮೆಯಿಂದ ನಾವೆಲ್ಲಾ ಹೊರಬರಲೇಬೇಕಲ್ಲವೇ..

ಇಂಥವನ್ನೂ enjoy ಮಾಡಿದ್ದಕ್ಕೆ ಧನ್ಯವಾದಗಳು..

shivu.k said...

ನಿತಿನ್,

ಮದುವೆಮನೆಯಲ್ಲಿ ಕಪ್ಪು ಬಿಳುಪಿಗಿಂತ ವ್ಯಕ್ತಿತ್ವ ಮುಖ್ಯ. ಅದು ಚೆನ್ನಾಗಿದ್ದಲ್ಲಿ ಕಪ್ಪು ಕಸ್ತೂರಿಯಲ್ಲೂ ಸೌಂದರ್ಯ ಕಾಣಬಹುದು.

ಮೂಗಿನ ಬಗ್ಗೆ ಬರೆದರೇ ಅದೇ ಒಂದು ದೊಡ್ಡ ಲೇಖನವಾಗುವುದು. ಮತ್ತೆ ನನಗೂ ಹುಮ್ಮಸ್ಸು ಬಂದು ಬರೆದು ಎಲ್ಲರಿಗೂ ಬೋರಾಗಿ...ಬೇಡ ಬೇಡ...ಅವೆಲ್ಲಾ ಈ ರೀತಿ ಊಟಕ್ಕೆ ಉಪ್ಪಿನಕಾಯಿ ಇದ್ದಂತೆ ಇದ್ದರೆ ಚೆನ್ನ ಅಲ್ವೆ....

ನಮ್ಮ ಕೆಲಸದ ಬಗ್ಗೆ ನಿಮಗಿರುವ ಅಭಿಪ್ರಾಯ ನಮ್ಮೆಲ್ಲಾ ಗಂಡು ಹೆಣ್ಣಿನ ತಂದೆ ತಾಯಿಯರಿಗೆ ಬಂದರೆ ಅದೇ ನಮ್ಮ ಪುಣ್ಯ...ಧನ್ಯವಾದಗಳು..

shivu.k said...

ಗೋದಾವರಿ ಮೇಡಮ್,

ಲೇಖನವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್...

ನಿಮ್ಮ ಹೆಸರು ನನಗಿಷ್ಟ..ಏಕೆಂದರೆ ಅದೇ ಹೆಸರಿನ ಒಂದು ಸಿನಿಮಾ ತೆಲುಗಿನಲ್ಲಿ ಬಂದಿದ್ದೆ..ನನ್ನ ಫೇವರೇಟ್ ಸಿನಿಮಾಗಳಲ್ಲಿ ಅದು ಒಂದು...ಅದರ ಬಗ್ಗೆ ಲೇಖನ ಬರೆಯುತ್ತಿದ್ದೇನೆ..ಬ್ಲಾಗಿಗೆ ಹಾಕಿದಾಗ ಖಂಡಿತ ಬನ್ನಿ...

ಧನ್ಯವಾದಗಳು.

shivu.k said...

ಉಮೇಶ್ ಸರ್,

ಮದುವೆ ಮನೆಯಲ್ಲಿ ನಮ್ಮ ಕೆಲಸವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ನಿಮ್ಮೆಲ್ಲರ ಪ್ರೋತ್ಸಾಹದಿಂದ ಈ ವಿಚಾರವಾಗಿ ಇನ್ನಷ್ಟು ಬರೆಯುವ ಉತ್ಸಾಹ ಮೂಡುತ್ತಿದೆ. ನಿದಾನವಾಗಿ ಬರೆಯುತ್ತೇನೆ..

ಧನ್ಯವಾದಗಳು..

ಅಂತರ್ವಾಣಿ said...

shivanna,

chennagi maathaaDisteeera vadhuvannu.. aadaru avarige gottillada haage photo tegeyOdu mosa ree

Guruprasad said...

ಶಿವೂ...
ಫೋಟೋಗ್ರಾಫರ್ ಕಷ್ಟ. ಅವರ ಪಜೀತಿ,, ಎಲ್ಲವನ್ನು ಚೆನ್ನಾಗಿ ವಿವರಿಸಿದ್ದಿರ....ತುಂಬ ಚೆನ್ನಾಗಿ ಸಿಂಪಲ್ ಆಗಿ ಮೂಡಿ ಬಂದಿದೆ ನಿಮ್ಮ ಈ ಲೇಖನ... ಕೆಲವೊಮ್ಮೆ ನೀವು ಜೋಕರ್ ಆಗಬೇಕಾಗಿ ಬಂದಿರುವದು ವಿಪರ್ಯಾಸ... ಫೋಟೋ ತೆಗೆಯೋದಲ್ಲದೆ ಫೋಟೋ ತೆಗೆಯುವವರನ್ನು ನಗಿಸ ಬೇಕು ಕೂಡ... ಗುಡ್... ಇದರಲ್ಲಿ ಸ್ವಲ್ಪ ನಗುತ್ತ ಖುಷಿ ಇಂದ ಮಾತನಾಡುವ ತಾಳ್ಮೆಯು ಇರಬೇಕಾಗುತ್ತದೆ..
ನನಗು ಸ್ವಲ್ಪ ಫೋಟೋಸ್ ನಲ್ಲಿ ಫೋಟೋಗ್ರಫಿ ನಲ್ಲಿ ಇಂಟರೆಸ್ಟ್ ಇದೆ.. ಕೆಲವೊಮ್ಮೆ ಮದ್ವೆ ಮನೆಯಲ್ಲಿ,, ಫೋಟೋ ತೆಗೆಯುವವರ ಹತ್ರ ಹೋಗಿ ತಲೆ ತಿಂತ ಇರ್ತೇನೆ... ಯಾವ ಮಾಡೆಲ್ ಫೋಟೋ ಇದು.. ಏನ್ ಲೆನ್ಸ್ use ಮಾಡ್ತಿರ.. ಅಂತ. ಪಾಪ ಅವರ ಕೆಲಸ ಮಾಡುವುದಲ್ಲದೆ ನಮ್ಮತವರಿಗೂ ತಾಳ್ಮೆ ಇಂದ answer ಮಾಡಬೇಕು... ಅಲ್ವ.
ಫೋಟೋಗ್ರಾಫರ್ ಅವರ ಕಷ್ಟ ವನ್ನು ನಗು ನಗಿಸುತ್ತ ತಿಳಿಸಿದ್ದೀರ... ಧನ್ಯವಾದಗಳು....

Guru

ಕೃಪಾ said...

ನಮಸ್ತೆ... ಶಿವಣ್ಣ....

ಮದುವೆಯಲ್ಲಿ ಫೋಟೋ...... ತೆಗೆಯುವುದು..... ನಿಮ್ಮ ಬರಹ ತುಂಬಾ ಚೆನ್ನಾಗಿತ್ತು...
ನನಗೆ ತುಂಬಾ ಇಷ್ಟ ವಾದದ್ದು.....ನಿಮ್ಮ ವಿಶ್ಲೇಷಣೆ...

" ವಿದ್ಯೆ ಬುದ್ಧಿಯ ಜೊತೆಗೆ ಸಹಜ ಸೌಂದರ್ಯ ಜೊತೆ.....ಮುಗ್ದತೆಯಿದ್ದರೆ .....
ಮತ್ತೆ ವಿದ್ಯೆ ಬುದ್ಧಿ ಎರಡು ಕಡಿಮೆಯಿರುವ ಮದುಮಗಳನ್ನು ಕೂಡ ನಾವು ಸುಂದರ ರಾಜಕುಮಾರಿಯನ್ನಾಗಿ ಕ್ಲಿಕ್ಕಿಸಬಹುದುಏಕೆಂದರೆ ಅವರಲ್ಲಿ ಖಂಡಿತ ಮುಗ್ದತೆಯಿರುತ್ತದೆ..
ವಿದ್ಯೆ ಬುದ್ಧಿ ಎರಡೂ ಇದ್ದು ಮುಗ್ದತೆ ಇಲ್ಲದ ಹೆಣ್ಣಿನ ಫೋಟೋ ಕ್ಲಿಕ್ಕಿಸುವುದು. ನಮಗಂತೂ ಕಷ್ಟಸಾಧ್ಯವೇ ಸರಿ....ನಾವು ಏನೇ ಪ್ರಯತ್ನ ಪಟ್ಟರೂ ಅವರಿಂದ ಅದಕ್ಕೆ ವಿರುದ್ಧವಾದ ಭಾವನೆಗಳೇ ಹೊರಹೊಮ್ಮುತ್ತವೆ.. ಎಷ್ಟು ಪ್ರಯತ್ನಿಸಿದರೂ ನಗುಮುಖವಿರುವುದಿಲ್ಲ. ನಕ್ಕರೂ ಅದರಲ್ಲಿ ತೋರಿಕೆಯ ನಗುವಿರುತ್ತದೆ..."
ಶಿವಣ್ಣ ನೀವು ಯಾಕೆ ಈ ವಿಷಯdalli maada baaradu....?

ಕೃಪಾ said...

neevu yaake ee vishayadalli PHD maada baaradu?

shivu.k said...

ಜಯಶಂಕರ್,

ಯಾರಿಗೂ ನೋವಾಗದಂತೆ, ತೊಂದರೆಯಾಗದಂತೆ, ಮತ್ತು ಅವರಿಗೂ ಅದೇ ಬೇಕಿರುವಾಗ ಅದನ್ನು ಪಡೆದುಕೊಳ್ಳಲು ಈ ಮಟ್ಟದ ಮೋಸ ಮಾಡಿದರೇ ನಡೆಯುತ್ತದೆ...

ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

shivu.k said...

ಗುರು,

ಫೋಟೋಗ್ರಾಫರುಗಳ ಕಷ್ಟವನ್ನು ಅರಿತಿರುವುದಕ್ಕೆ ಥ್ಯಾಂಕ್ಸ್....ನಾವು ನಮಗೆ ಬೇಕಾದ[ಅವರಿಗೂ ಅದೇ ಬೇಕಾದ]ಫೋಟೋ ಕ್ಲಿಕ್ಕಿಸಬೇಕಾದಾಗ ಜೋಕರ್ ಸೇರಿದಂತೆ ಎಲ್ಲಾ ಪಾತ್ರಗಳಾಗಬೇಕಾಗುತ್ತದೆ...

ಹೆಣ್ಣಿನ ಗಂಡಿನ ಫೋಟೋ ತೆಗೆಯಲು ಸಿಗುವ ಸಮಯ ತುಂಬಾ ಕಡಿಮೆಯಾದ್ದರಿಂದ ಆ ಸಮಯದಲ್ಲಿ ಯಾರು ಮದ್ಯ ಬಂದರೂ ಅವೈಡ್ ಮಾಡಿಬಿಡುತ್ತೀವಿ..

ಮತ್ತೆ ನಿಮ್ಮಂಥವರನ್ನು[ಫೋಟೋ ತೆಗೆಯುವಾಗ ತೊಂದರೆ ಕೊಡುವವರನ್ನು]ನಾವು ಆ ಸಮಯದಲ್ಲಿ ಸಂಪೂರ್ಣವಾಗಿ ಅವೈಡ್ ಮಾಡಿಬಿಡುತ್ತೀವಿ...ಅದರಿಂದ ಸುಮ್ಮನೆ ನಮ್ಮ ಕೆಲಸವಾಗುವುದಿಲ್ಲವಲ್ಲ..ಬೇಸರಿಸಿಕೊಳ್ಳಬೇಡಿ...ನಿಮಗೆ ಬೇಕಾದ ಕ್ಯಾಮೆರಾ ವಿಚಾರ ತಿಳಿದುಕೊಳ್ಳಲು ಬೇರೆ ಸಮಯವಿರುತ್ತದೆ.

ಧನ್ಯವಾದಗಳು..

shivu.k said...

ಕೃಪಾ ಅಕ್ಕ,

ನೀವು ನನ್ನ ಬರಹದ ವಿಶ್ಲೇಷಣೆಯನ್ನು ಮೆಚ್ಚಿದ್ದೀರಿ...ಇವೆಲ್ಲಾ ಮನಸ್ಸಿಗೆ ಸಂಭಂದಿಸಿದ ವಿಚಾರ ನಾವು ಅವನ್ನು ಮೊದಲು ಗುರುತಿಸಿದರೆ ನಮ್ಮ ಕೆಲಸ ಸುಲಭ. ನಂತರ, ಅವರ ಡಿಂಪಲ್, ಮೂಗು, ಮುಂಗುರುಳು, ಒಟ್ಟಾರೆ ಮುಖಲಕ್ಷಣ ನೋಡಬೇಕಾಗುತ್ತದೆ...ಫೋಟೋಗಾಗಿ ನಾವು ಅವರನ್ನು ಹೊಗಳುವ ಒಂದೆರಡು ಮಾತುಗಳನ್ನು ಮಾತ್ರ ಇಲ್ಲಿ ಬರೆದಿದ್ದೇನೆ...ಪೂರ್ತಿ ಬರೆದರೆ ಅದು ದೊಡ್ಡ ಲೇಖನವಾಗುತ್ತದೆ...ಓದಲು ನಿಮಗೂ ಬೋರ್ ಆಗಬಾರದಲ್ವ...

ಮತ್ತೆ ಈ ವಿಚಾರದಲ್ಲಿ Phd ನಾ...?

ಎಲೆಮರೆಕಾಯಿಯಂತಿರುವ [ನಾನು ಸಿಕ್ಕಾಪಟ್ಟೆ ಖತರನಾಕ್ ಅಂತ ಬೇರೆಯವರ ಅಭಿಪ್ರಾಯ] ನನಗೆ ಇಲ್ಲದ ಆಸೆ ಹುಟ್ಟಿಸುತ್ತೀರಲ್ಲ...

ಧರಿತ್ರಿ said...

ಶಿವಣ್ಣ..
ಖತರ್ ನಾಕ್ ಅನ್ನೋ ಪದವನ್ನು ಕಳಸಿದವರು ನೀವೇ..! ನೀವೇ ಹೇಳಿಕೊಟ್ಟಿರೋದು ಕೂಡ..ಖತರ್ ನಾಕ್ ಅಂದ್ರೆ ಮಹಾ ತರ್ಲೆ ಅಂತ ಅರ್ಥವೆಂದು ಹಿಂದೊಮ್ಮೆ ನೀವೇ ಹೇಳಿದ್ದೀರಿ. ನೀವು ಪೂರ್ವಾಗ್ರಹ ಪೀಡಿತರಾಗಿದ್ದೀರಿ ಅನ್ನೋದು ನಾನೆಲ್ಲೂ ಹೇಳಿಲ್ಲ..ಹೀಯಳಿಸಿದ್ದೀರಿ, ಕಾಲೆಳೆದಿರಿ ಅನ್ನೋದು ಕೂಡ ನಾನು ಹೇಳಿಲ್ಲ. ಹಾಗೇ ಹೇಳುವ ಅವಕಾಶವೂ ಅಲ್ಲಿಲ್ಲ. ಅದ್ರ ಅಗತ್ಯನೂ ನಂಗಿಲ್ಲ. ಅದ್ಯಾಕೋ ಪೂರ್ವಗ್ರಹದ ಪೀಡೆ ನಿಮ್ ತಲೆಗೆ ಹೋಯಿತೋ ನಾ ಕಾಣೆ ಶಿವಣ್ಣ. ಖತರ್ ನಾಕ್ ಅನ್ನೋದನ್ನು ಅನ್ಯಥಾ ಭಾವಿಸದೆ ನಿಮ್ಮ ಕ್ರಿಯಾಶೀಲತೆ, ತಮಾಷೆ-ತರ್ಲೆಗೆ ನಾನಲ್ಲಿ ಬಳಸಿದ್ದು ಅನ್ನೋದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ. ನೋವಾಗಿದ್ದರೆ ಕ್ಷಮಿಸಿ.

ಮದುವೆ ಫೋಟೋಗಳ ಪ್ರೈವೆಸಿ ಬಗ್ಗೆ ನಂಗೆ ಗೊತ್ತಿರಲಿಲ್ಲ..ನಾರ್ಮಲ್ ಆಗಿ ನೀವು ಎಲ್ಲಾ ರೀತಿಯ ಫೋಟೋಗಳನ್ನು ಇಲ್ಲಿ ಹಾಕುತ್ತಿದ್ದರಿಂದ (ಮಗು, ಟೋಪಿ) ಈ ಲೇಖನದ ಜಜೊತೆಗೆ ಫೋಟೋ ಇರ್ತಾ ಇದ್ರೆ..ಅಂಥ ನನ್ನ ವೈಯಕ್ತಕ ಅಭಿಪ್ರಾಯವನ್ನು ಬಿಚ್ಚಿಟ್ಟೆ ಅಷ್ಟೇ.

-ಧರಿತ್ರಿ

ಧರಿತ್ರಿ said...

ಸೂಚನೆ:-

----ಖತರ್ ನಾಕ್ ಅನ್ನೋ ಪದವನ್ನು 'ಕಳಸಿದವರು 'ಅಂತ ಆಗಿದೆ..ಅದು 'ಕಲಿಸಿದವರು 'ಅಂತ ಆಗಬೇಕು.
-ಧರಿತ್ರಿ

ಬಿಸಿಲ ಹನಿ said...

ಶಿವು,
ನಿಮ್ಮ ಲೇಖನದಲ್ಲಿ ವ್ಯಕ್ತವಾದ ನವಿರು ನವಿರಾದ ಹಾಸ್ಯ ನಮ್ಮನ್ನು ಕಚುಗುಳಿಯಿಡುತ್ತಾ ಸಾಗುತ್ತದೆ. ಇನ್ನಷ್ಟು ಇಂಥ ಅನುಭವಗಳನ್ನು ಓದಲು ಕಾಯುತ್ತಿರುತ್ತೇನೆ.

ರೂpaश्री said...

ಶಿವು ಅವರೆ,
ಸೊಗಸಾದ ಲೇಖನ!! ಮದುಮಗಳು ಹೇಗೇ ಇರಲಿ ಅವಳನ್ನು ನಕ್ಕು ನಲಿಸಿ ರಾಜಕುಮಾರಿಯಂತೆ ಕಾಣುವಂತೆ ಫೋಟೋ ತೆಗೆಯುವುದರ ಹಿಂದೆ ಇಷ್ಟೆಲ್ಲಾ ಟ್ರಿಕ್ಸ್ ಇದೆ ಅಂತ ಈಗ ಗೊತ್ತಾಯ್ತು:)
ಮದ್ವೆಮನೆಗೆ ಬರೋವ್ರೆಲ್ಲ ಊಟ ಮುಗಿಸಿ ಮನೆಗೆ ಹೋದ್ಮೇಲೆ ಅದರ ಬಗ್ಗೆ ಮರತೇ ಬಿಡ್ತಾರೆ, ಆದ್ರೆ ನೀವು ಅದೆಲ್ಲವನ್ನೂ ಸುಂದರವಾಗಿ ಸೆರೆಹಿಡಿದು ಆ ಎಲ್ಲ ಸವಿನೆನಪುಗಳು ನೂರಾರು ವರ್ಷಗಳ ಕಾಲ ಉಳಿವಂತೆ ಮಾಡ್ತೀರ, ಹಾಟ್ಸ್ ಆಫ್ !!

ದೀಪಸ್ಮಿತಾ said...

ಶಿವು ಸರ್,

ನಿಮ್ಮ ಮದುವೆ ಲೇಖನ ಓದಿದೆ. ಮದುವೆ ಅಂತಹ ಗೌಜು ಗದ್ದಲದ ಜನರ ನೂಕು ನುಗ್ಗಲು ಇರುವ ಜಾಗಗಳಲ್ಲಿ ಸುಂದರವಾದ ಫೋಟೋ ತೆಗೆಯುವುದು ನಿಜಕ್ಕೂ ಸವಾಲೇ ಸರಿ. ಜನ ಅಡ್ಡ ಬರುತ್ತಿರುತ್ತಾರೆ, ಅಲ್ಲದೆ ಫೋಟೋಗ್ರಾಫರೇ ಬೇರೆಯವರಿಗೆ ಅಡ್ಡ ಬರದಂತೆ ಜಾಗ್ರತೆ ವಹಿಸುವುದು, ಇದೆಲ್ಲ ಕಷ್ಟ. ಮದುವೆ ವೀಡಿಯೋ edit ಮಾಡುವುದು ಕೆಟ್ಟ ಬೋರ್ ಕೆಲಸ. ನಾನೂ ಗೃಹಪ್ರವೇಶದ ವೀಡಿಯೋ (ನಾನೇ ತೆಗೆದಿದ್ದು) edit ಮಾಡಲು ಕೂತೆ. ಅಬ್ಬ, ಒಂದೇ ಥರದ ದೃಶ್ಯಗಳು ಮುಗಿಯುವುದೇ ಇಲ್ಲ, ತಲೆ
ಚಿಟ್ಟು ಹಿಡಿಯಿತು. ಸಮಾರಂಭಕ್ಕೆ ಸಂಬಂಧಿಸಿದ್ದ ನನಗೇ ಇಷ್ಟು ಬೇಸರವಾದರೆ, ಇನ್ನು ಸಂಬಂಧ ಇರದ ಫೋಟೋ-ವೀಡಿಯೋಗ್ರಾಫರ್ ಗೆ ಎಷ್ಟು ಬೋರಾಗಬಹುದು. ಇರಲಿ, ಅದು ವೃತ್ತಿ, ಮಾಡಲೇ ಬೇಕು. ನೀವು ಬರೆದಂತೆ, ಇಂತಹ ಸಮಾರಂಭಗಳಲ್ಲಿ ಸ್ವಾರಸ್ಯ್ಕರ ಘಟನೆ ಗಳು ತುಂಬಾ ಇರುತ್ತವೆ, enjoy ಕೂಡ ಮಾಡಬಹುದು

ರಜನಿ. ಎಂ.ಜಿ said...

ಹಾಸ್ಯ ಎಲ್ಲಾ ಕಡೆ ಇರತ್ತೆ. ಹೆಕ್ಕಿ ಕೊಡೋದು ಮುಖ್ಯ.

shivu.k said...

ಧರಿತ್ರಿ,

ಖತರ್ ನಾಕ್ ಪದದ ಅರ್ಥ ಸಂಧರ್ಭೋಚಿತವಾಗಿ ಬದಲಾಗುತ್ತದೆ. ನೀನು ಮತ್ತೊಮ್ಮೆ ಕೊಟ್ಟ ಉತ್ತರದಿಂದ ನನಗೆ ಈಗ ಸಮಾಧಾನವಾಗಿದೆ.

ಮತ್ತೆ ಫೋಟೋಗಳನ್ನು ಹಾಕುವ ಬಗ್ಗೆ ನಾನು ಮೊದಲೇ ಕಾಮೆಂಟಿಸಿದ್ದೇನೆ...

ಮತ್ತೊಮ್ಮೆ ಬಂದಿದ್ದಕ್ಕೆ ಧನ್ಯವಾದಗಳು..

shivu.k said...

ಉದಯ್ ಸರ್,

ಲೇಖನವನ್ನು ಇಷ್ಟಪಟ್ಟಿದ್ದೀರಿ...ಪ್ರೋತ್ಸಾಹದ ಎರಡು ಮಾತುಗಳು ನನಗೆ ಹೊಸ ಕೃಷಿಗೆ ಸೂರ್ತಿ ನೀಡುತ್ತಿರುತ್ತವೆ...

ಧನ್ಯವಾದಗಳು..

shivu.k said...

ರೂಪಾಶ್ರಿ ಮೇಡಮ್,

ಮದುವೆಯಲ್ಲಿ ಮದುಮಗಳ ಫೋಟೋ ಚೆನ್ನಾಗಿ ಬರಲು ಸುಮಾರು ತಂತ್ರಗಳೀವೆ...ಅವುಗಳಲ್ಲಿ ಒಂದೆರಡನ್ನು ನನ್ನ ಬ್ಲಾಗ್ ಗೆಳೆಯರ ಪ್ರತಿಕ್ರಿಯೆಗೆ ಉತ್ತರಿಸುತ್ತಾ ಹೇಳೀದ್ದೇನೆ...

ಮತ್ತೆ ನಾವು ಕ್ಲಿಕ್ಕಿಸುವ ಒಂದೊಂದು ಫೋಟೋಗಳು ಅವರಿಗೆ ದಾಖಲಾಗಿ ಇರುತ್ತವೆ...

ಧನ್ಯವಾದಗಳೂ

shivu.k said...

ರಜನಿ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಲೇಖನಗಳನ್ನು ವಿ.ಕ ದಲ್ಲಿ ಓದಿದ್ದೇನೆ...ಲೇಖನದ ಹಾಸ್ಯವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.... ಹೀಗೆ ಬರುತ್ತಿರಿ...

ಧನ್ಯವಾದಗಳು.

shivu.k said...

ಕುಲದೀಪ್ ಸರ್,

ಮದುವೆ ವಿಡಿಯೋ ತೆಗೆದ ಮೇಲೆ ನಂತರದ ನಿಜಕ್ಕೂ ಬೋರ್ ಆಗಿಬಿಡುತ್ತದೆ...ಸದ್ಯ ನಾನು ಮಾಡುತ್ತಿರುವುದು ಅದನ್ನೇ. ಎಲ್ಲಿ ಕತ್ತರಿಸುವುದು ಮತ್ತು ಅಂಟಿಸುವುದು ಅನ್ನೋದು ದೊಡ್ಡ ತಲೆನೋವಿನ ಕೆಲಸ. ನಮ್ಮ ಕೆಲಸವನ್ನು ಎಲ್ಲರು ಹೊರಗೆ ನಿಂತು ನೋಡಿದಾಗ ಅದರ ಸಂಬ್ರಮವೇ ಬೇರೆ. ನಾವೇ ಕೆಲಸದ ಒಳಹೊಕ್ಕಾಗ ಏನಾಗುತ್ತದೆ ಅನ್ನೋದು ನಿಮಗೆ ಈಗ ಅನುಭವವಾಗಿದೆಯೆಲ್ಲಾ...

ಅದರೂ ಅದರಲ್ಲಿನ ಇಂಥ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಸಂತೋಷಪಡುತ್ತೇವೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ...

Prashanth Arasikere said...

madve mane endare adu kushiya vatavarna irutte hagu adunna gamnusta hodre tumbs vishya gottagtha hogutte,so nivu adunna hage kannamunde tandiddira,nanna cousin madve nennanpu bartha ide..ok matte beti agona..bai

shivu.k said...

ಪ್ರಶಾಂತ್,

ಮದುವೆ ಮನೆಯ ಅನುಭವವನ್ನು ಹದಿನೈದು ದಿನದ ಹಿಂದೆ ನೀವು ಅನುಭವಿಸಿದ್ದೀರಲ್ಲ....ಆಗ ನಾನು ನಿಮ್ಮ ಜೊತೆ ಇದ್ದೆ...ನಿಮ್ಮ ಸಂಭಂದಿ ಮದುವೆಯಲ್ಲಿ ನೀವು ನಿಮ್ಮ ಕುಟುಂಬ ಎಲ್ಲರದೂ ಸಂಬ್ರಮ. ನಾನು ಅದನ್ನು ನೋಡುತ್ತಾ ನಿಮ್ಮೆಲ್ಲರಾ ಫೋಟೊ ತೆಗೆದಿದ್ದೆ. ಫೋಟೋ ಆಲ್ಬಂ ನೋಡಿದಾಗ ನಿಮಗಿದ್ದ ಅಭಿಪ್ರಾಯಕ್ಕೂ ಮತ್ತು ಈ ಲೇಖನ ಓದಿದ ಮೇಲೆ ನಿಮ್ಮ ಅಭಿಪ್ರಾಯಕ್ಕೂ ವ್ಯತ್ಯಾಸವಿದೆಯಲ್ಲವೇ...

ಧನ್ಯವಾದಗಳು...

ಮಿಥುನ ಕೊಡೆತ್ತೂರು said...

ಚೆಂದದ ಬರೆಹ.
ಅಂದ ಹಾಗೆ ಬಂಟ್ವಾಳದಲ್ಲಿ ಇತ್ತೀಚಿಗೆ ಒಂದು ಮದುವೆ ನಡೆಯುತ್ತಿತ್ತು.
ಮದುವೆ ಹುಡುಗಿ ವರನಿಗೆ ಮಾಲೆ ಹಾಕುವ ಬದಲು, ಫೊಟೋ ತೆಗೆಯುತ್ತಿದ್ದ ಛಾಯಾಗ್ರಾಹಕನಿಗೇ ಮಾಲೆ ಹಾಕಿ ಮದುವೆ ಾದ ಕತೆ ಗೊತ್ತಿದೆಯಲ್ಲ?!

shivu.k said...

ಮಿಥುನ,

ಮದುವೆ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ವಧು ಮಾಲೆ ಬೇರೆಯವರಿಗೆ ಹಾಕಿದ್ದು ಆಸಕ್ತಿಕರವಾಗಿದೆ...

ಧನ್ಯವಾದಗಳು...

PaLa said...

ಚೆನ್ನಾಗಿದೆ ಶಿವು ಮದುವೆಯ ಮನೆಯಲ್ಲಿನ ನಿಮ್ಮ ಅನುಭವಗಳು. ನೀವು ಆತ್ಮೀಯವಾಗಿ ಸಂವಾದ ಬೆಳೆಸಿ ಫೋಟೋ ತೆಗೆಯುವುದನ್ನು ನೋಡಿ ಸಂತೋಷ ಆಯ್ತು. ಅದಕ್ಕೆ ನಿಮ್ಮ ಚಿತ್ರದಲ್ಲಿ ಎಕ್ಸ್-ಪ್ರೆಶನ್ ಸಹಜವಾಗಿರುತ್ತೆ.

shivu.k said...

ಪಾಲಚಂದ್ರ,

ಮದುವೆ ಮನೆಯ ಅನುಭವಗಳನ್ನು ಬರೆಯುತ್ತಾ ಹೋದರೆ ದೊಡ್ಡ ಪುಸ್ತಕವೇ ಆಗುತ್ತದೆ...ಮತ್ತು ಸತ್ಯವಾಗಿ ಬರೆಯುತ್ತಾ ಹೋದರೆ ಅನೇಕರಿಗೆ ಸಿಟ್ಟು ಬರಬಹುದು...
ಆದರೂ ನಮ್ಮ ವೃತ್ತಿಯ ಬಗ್ಗೆ ಮಾತ್ರ ಬರೆದಿದ್ದೇನೆ...ಸಾಧ್ಯವಾದರೆ ಇನ್ನುಳಿದದನ್ನು ಬರೆಯಲು ಯತ್ನಿಸುತ್ತೇನೆ....

ನನ್ನ ಫೋಟೊಗಳಲ್ಲಿನ ಭಾವನೆಗಳನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಈ ವಿಚಾರದಲ್ಲಿ ನನ್ನದು ಇದೇ ಅನುಭವ...
ಈಗ ಇದನ್ನು ಓದಿ ಎಲ್ಲಾ ನೆನಪಾಯ್ತು, ಅದೆಷ್ಟು ಚೆನ್ನಾಗಿರುತ್ತೆ ಅಲ್ವ...

Karla Brady said...

Among the most popular include dwarf versions of Zinnia haageana , specifically "Persian Carpet" and "Old Mexico" and the 8-15-inch Z. I kept my seating charts on my desk or on my podium. Additional Details: Bonanzle, an Ebay alternative, recently bought 1000 Markets, renaming it Bonanza.