ಕಂಟೀರವ ಕ್ರೀಡಾಂಗಣದಿಂದ ಕಸ್ತೂರ್ಬಾ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಕ್ವೀನ್ಸ್ ರಸ್ತೆ ಮುಖಾಂತರ ಜಿಪಿಒ ಬಳಿ ಬರುವವರೆಗೆ ಪ್ರತಿಯೊಬ್ಬ ಓಟಗಾರನೂ ತನ್ನ ಮನಸ್ಸಿನಲ್ಲಿ ಅಂದುಕೊಂಡಂತೆ ಗೆದ್ದೇ ಗೆಲ್ಲುವ, ಆರೋಗ್ಯ ಸುಧಾರಿಸಿಕೊಳ್ಳುವ, ದೇಹ ತೂಕ ಇಳಿಸಿಕೊಳ್ಳುವ, ಅನೇಕ ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡೇ ಓಡಿಬರುತ್ತಾರೆ. ಅಲ್ಲಿಂದ ಮುಂದಕ್ಕೆ ವಿಧಾನ ಸೌಧದ ಮುಂದಿನ ರಸ್ತೆಗೆ ಬರಬೇಕು.
"ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳ" ಅನ್ನುವ ಗಾಧೆಯಂತೆ ಇಲ್ಲಿಗೆ ಬಂದವರ ಮನಸ್ಥಿತಿ ಬದಲಾಗಲೇಬೇಕು ಅನ್ನುವುದು ನನ್ನ ಲೆಕ್ಕಾಚಾರ. ವಿಧಾನ ಸೌಧದ ಪ್ರಭಾವವೋ ಅಥವ ಅದರೊಳಗೆ ಸೇರಿರುವವರ ಪ್ರಭಾವದ ಪರಿಣಾಮವೋ..... ಎಷ್ಟೇ ಓಳ್ಳೇ ಉದ್ದೇಶವಿಟ್ಟುಕೊಂಡಿದ್ದರೂ, ಓಡುತ್ತಿರುವವರ ಮನಸ್ಥಿತಿ ಇಲ್ಲಿ ಬದಲಾಗಿ ಅವರ ನಿಜವಾದ ಅವತಾರಗಳು ಇಲ್ಲಿಯೆ ಅನಾವರಣಗೊಳ್ಳುತ್ತವೆಂಬ ಖಚಿತ ನಂಬಿಕೆಯಿಂದಲೇ ಈ ಜಾಗವನ್ನು ಆರಿಸಿಕೊಂಡಿದ್ದೆ. ಹಾಗೇ ನನ್ನ ನಿರೀಕ್ಷೆ ಕೂಡ ಹುಸಿಯಾಗಲಿಲ್ಲವಾದ್ದರಿಂದ ಅದರ ಕೆಲವು ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಮೊದಲಿಗೆ ಕೆಲವು ವಿಧೇಶದ ಪ್ರಸಿದ್ಧ ಓಟಗಾರರು ಈ ರಸ್ತೆಗೆ ಬರುತ್ತಿದ್ದಂತೆ ಮತ್ತಷ್ಟು ಚುರುಕಾಗಿ ವೇಗವಾಗಿ, ಸ್ಪೂರ್ತಿಯಿಂದ ಓಡುತ್ತಿದ್ದರು. ಬಹುಶಃ ಅವರಿಗೆ ಇದನ್ನು ಕಟ್ಟಿದ ಕೆಂಗಲ್ ಹನುಮಂತಯ್ಯನವರ ಮಹತ್ವಾಕಾಂಕ್ಷೆ, ಮುಂದಾಲೋಚನೆಯ ಪ್ರಭಾವದಿಂದಾಗಿ ಕೆಲವು ವಿದೇಶಿ ಓಟಗಾರರು ಈ ರಸ್ತೆಗೆ ಬಂದಾಗ ಮತ್ತಷ್ಟು ಹುರುಪಿನಿಂದ, ವೇಗವಾಗಿ, ಓಡುತ್ತಿದ್ದರು. ಜೊತೆಗೆ ನಮ್ಮ ಅಂಗವಿಕಲ ಗಾಲಿ ಕುರ್ಚಿಯ ಓಟಗಾರರು ನಮ್ಮನ್ನೆಲ್ಲಾ ನೋಡಿ ನಮ್ಮೆಡೆಗೆ ವಿಷ್ ಮಾಡುತ್ತಾ, ನಮ್ಮ ಹುರಿದುಂಬಿಸುವಿಕೆಯಿಂದ ಮತ್ತಷ್ಟು ವೇಗವಾಗಿ ಸಾಗುತ್ತಿದ್ದರು..
ಇವರ ನಂತರ ದೂರದಲ್ಲಿ ವೇಗವಾಗಿ ಜಿಪಿಒದಿಂದ ಓಡಿ ಬರುತ್ತಿದ್ದಾರೆ ನಲವತ್ತು ದಾಟಿದವರು. ನಾನು ಅವರ ವೇಗಕ್ಕೆ ಖುಷಿಪಟ್ಟು ಕ್ಯಾಮೆರಾ ಮತ್ತು ಟೆಲಿಲೆನ್ಸ್ ಎಲ್ಲಾ ಸಿದ್ಧಮಾಡಿಕೊಂಡು ಕ್ಲಿಕ್ಕಿಸತೊಡಗಿದೆ. ಭಲೇ ಭಲೇ.. ಪರ್ವಾಗಿಲ್ಲ... ಇದಪ್ಪ ಜೀವನೋತ್ಸಹವೆನ್ನುತ್ತಾ ಹೊಸ ಹುರುಪಿನಿಂದ ಕ್ಲಿಕ್ಕಿಸತೊಡಗಿದೆ. ಅರೆರೆ....ಇದೇನಿದೂ ಕ್ಲಿಕ್ಕಿಸಲೇ ಆಗುತ್ತಿಲ್ಲವಲ್ಲ....ಏನಾದ್ರು ಟೆಕ್ನಿಕಲ್ ಪ್ರಾಬ್ಲಂ ಕ್ಯಾಮೆರಾದಲ್ಲಿ...? ನೋಡಿದೆ, ಕ್ಯಾಮೆರಾದಲ್ಲಿ ಯಾವುದೇ ತೊಂದರೆಯಿಲ್ಲ....ಮತ್ತೆ ತೊಂದರೆ ಎಲ್ಲಿದೆ... ಇರಲಿ ಎಂದು ಮತ್ತೊಮ್ಮೆ ಪ್ರಯತ್ನಿಸಿದೆ....ಆಗುತ್ತಿಲ್ಲ...
ಅವರೆಲ್ಲಾ ಓಡಿಬರುತ್ತಿದ್ದರೇ ತಾನೆ ನನ್ನ ಕ್ಯಾಮೆರಾ ಕ್ಲಿಕ್ ಆಗುವುದು ? ಅವರು ಆರಾಮವಾಗಿ ಹರಟುತ್ತಾ ನಡೆದು ಬರುತ್ತಿರುವುದು ಕ್ಯಾಮೆರಾಕಣ್ಣಿನಿಂದ ಕಾಣಿಸಿತ್ತು. ಅದು ಮೆದುಳಿಗೆ ಗೊತ್ತಾಗಿ ಅಲ್ಲಿಂದ ನೇರವಾಗಿ ನನ್ನ ತೋರುಬೆರಳಿಗೆ ಕ್ಲಿಕ್ಕಿಸಬೇಡವೆಂದು ಆರ್ಡರ್ ಪಾಸ್ ಆಗಿದೆ... ನನಗೆ ಗೊತ್ತಾಗದಂತೆ ನಡೆದ ಈ ಕ್ರಿಯೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು.
ಆಗ ನನಗನ್ನಿಸಿತು ಓಹೋ! ಇದು ವಿಧಾನಸೌದದ ಪ್ರಭಾವ....ಈ ರಸ್ತೆಗೆ ಬರುತ್ತಿದ್ದಂತೆ ಓಡುವುದನ್ನು ಮರೆತಿದ್ದಾರಲ್ಲ!. ಮತ್ತೇನು ಮಾಡುತ್ತಾರೋ ನೋಡೇಬಿಡೋಣ ಅಂದುಕೊಂಡ ಮೇಲೆ ಮತ್ತೆ ನನ್ನ ಬೆರಳು ಕ್ರಿಯಾಶೀಲವಾಗತೊಡಗಿತು. ಆಷ್ಟರಲ್ಲಿ ನನ್ನ ಮುಂದೆಯೇ ಆ ದೊಡ್ಡ ಗುಂಪು ಸಾಗಿ ಹೋಗಿತ್ತು.
ಅದೋ..... ಮತ್ತೊಂದು ಹೆಂಗಳೆಯರ ತಂಡ ಓಡುತ್ತಾ... ನಡೆದುಕೊಂಡು ಬರುತ್ತಿದೆ. ಎಲ್ಲರ ಮುಖದಲ್ಲೂ ನಗು, ಹತ್ತಿರ ಬರುತ್ತಿದ್ದಂತೆ ಅವರ ಮಾತುಗಳು ಕೇಳಿಸುತ್ತಿವೆ..!
"ಮದುರಾ ಪಿಸುಮಾತಿಗೆ...ಅದರ ಸವಿಪ್ರೀತಿಗೆ.".....ನಲವತ್ತು ಪ್ಲಸ್ ಆಂಟಿ ಹಾಡು ಆಡುತ್ತಿದ್ದಾರೆ...
"ಗಣೇಶ ನಿನ್ನ ಮಹಿಮೆ ಅಪಾರ....ಭಕ್ತವತ್ಸಲ.."....ಮತ್ತೊಬ್ಬ ಆಂಟಿಯಿಂದ ಮುಂದುವರಿಕೆ..
"ಲಾಲಿ ಲಾಲಿ ಸುಕುಮಾರ..ಲಾಲಿ ಮುದ್ದು ಬಂಗಾರ....".
ವಾಹ್! ಎಂಥ ಅಂತ್ಯಾಕ್ಷರಿ....ನೋಡಿ.....
ಓಹ್ ಇಲ್ಲಿ ಅಂತ್ಯಾಕ್ಷರಿ ನಡೆಯುತ್ತಿದೆ.. ನಾನು ಅವರ ಜೊತೆ ಅವರ ಫೋಟೊ ಕ್ಲಿಕ್ಕಿಸುತ್ತಾ ನಡೆಯಲು ಪ್ರಾರಂಭಿಸಿದೆ...ಅವರು ನನ್ನ ಕ್ಯಾಮೆರಾ ನೋಡಿ ಮತ್ತಷ್ಟು ಎತ್ತರಿಸಿದ ಧ್ವನಿಯಿಂದ ಹಾಡುತ್ತಾ ಮುಂದೆ ನಡೆದರು. ಅವರು ಮುಂದೆ ಹೋಗುತ್ತಿದ್ದಂತೆ ದೂರದಲ್ಲಿ ಮತ್ತೊಂದು ಗುಂಪು ಬರುತ್ತಿದೆ. ಅದರಲ್ಲಿ ಮಹಿಳೆಯರು ಮತ್ತು ಮಹನಿಯರು ಒಟ್ಟಿಗೆ ಇದ್ದಾರೆ...!
"ಆಹ...ಅಹಾ..ಅಹ...ಒಹೋ.... ಒಹೋ.....ಹಿ..ಹೀ....ಹಿ......".
ನಗುವುದೇ ಸ್ವರ್ಗ...!
"ಹುಅಹ... ಯುಅಹ.....ಏಒಹೋ..".........ಅವರಲ್ಲೇ ಒಬ್ಬರಾದ ಮೇಲೆ ಒಬ್ಬರಂತೆ ನಗುವ ಸ್ಪರ್ದೆ ನಡೆಯುತ್ತಿದೆ. ನಮ್ಮ ಹತ್ತಿರ ಬಂದಾಗಲಂತೂ ಮತ್ತೊಷ್ಟು ಜೋರಾಗಿ ಗಹಗಹಿಸಿ ನಕ್ಕು ದೊಡ್ಡ ದೊಡ್ಡ ಫೋಸ್ ಕೊಟ್ಟು ಮುಂದೆ ನಡೆದರು...ಅವರಿಂದಾಗಿ ನಮಗೂ ನಗು ಬಂತು.
ನಂತರ ಇಬ್ಬರು ಕಾಲೇಜು ಹುಡುಗಿಯರು ಮತ್ತು ಒಬ್ಬ ಹುಡುಗ ಬರುತ್ತಿದ್ದರು.
"ಯು ನೊ..ಅವಳು ನನ್ನ ಇವತ್ತು ಮಾತಾಡಿಸಲೇ ಇಲ್ಲ" ..ಆ ಹುಡುಗಿಯ ಮಾತು ಹುಸಿಮುನಿಸಿನಿಂದ.
"ಅವಳಿಗೆ ಹೊಸ ಪ್ರೆಂಡ್ ಸಿಕ್ಕಿದ್ದಾನಲ್ಲ ಈಗ ನಿನ್ನ ಅವಶ್ಯಕತೆ ಅವನಿಗಿಲ್ಲ ಬಿಡು".....ಬೆಂಕಿಗೆ ತುಪ್ಪ ಹಾಕಿದಂತೆ ಮತ್ತೊಬ್ಬಳ ಮಾತು.
"ನೀನು ಇದೆಲ್ಲಾ ಬಿಟ್ಟು ಗಂಭೀರವಾಗಿ ಓದು"...ಅವರಿಬ್ಬರ ಜೊತೆಯಲ್ಲಿದ್ದ ಹುಡುಗನ ಉತ್ತರ....
ಓಡೋದು ಬಿಟ್ಟು ಇದೆಲ್ಲಾ ಯಾಕೆ ?
ಹೀಗೆ ಮೂವರ ಮದ್ಯೆ ಮಾತು ಕತೆ ಸಾಗಿತ್ತು. ನಾನು ಏನು ಕಾಲೇಜು ಹುಡುಗರೋ...ಓಡೋದು ಬಿಟ್ಟು ಇಲ್ಲೂ ಇದೆಲ್ಲಾ ಬೇಕಾ ಅಂದುಕೊಂಡೆ.
"ನೀನು ಏನೇ ಹೇಳಿ ಇಟ್ ಈಸ್ ನಾಟ್ ಫಾಸಿಬಲ್, ಆ ಸೆನ್ಸೆಕ್ಸ್ ಇಷ್ಟು ವರ್ಷ್ಟ್ ಆಗಬಾರದಿತ್ತು,
ಯಾಕ್ರಿ ಏನಾಯ್ತು...."
ಓಟದ ನಡುವೆಯೂ ಶೇರು ವ್ಯವಹಾರದ ಮಾತೇ!
"ಎಷ್ಟು ಲಾಸ್ ಆಯ್ತು....."
"ಇಷ್ಟು ಲಕ್ಷ".......ಹೀಗೆ ಮಾತಾಡಿಕೊಂಡು ನಡೆಯುತ್ತಿದ್ದ ಮದ್ಯವಯಸ್ಕ ಗೆಳೆಯರು ನನ್ನ ಕ್ಯಾಮೆರದೊಳಗೆ ಸೆರೆಯಾದರು.
ಮತ್ತೊಂದು ಗುಂಪು ಬರುತ್ತಿದೆ. ನನ್ನ ಟೆಲಿ ಲೆನ್ಸ್ನಿಂದ ನೋಡಿದೆ. ಅವರೆಲ್ಲಾ ಹಣೆಗೆ ದೊಡ್ಡದಾಗಿ ಕುಂಕುಮವಿಟ್ಟುಕೊಂಡಿದ್ದಾರೆ. ಪಕ್ಕಾ ಸಂಪ್ರಾದಾಯಸ್ತ ಗೃಹಿಣಿಯರಿರಬಹುದು. ಅವರಲ್ಲೊಬ್ಬರು ಹೂ ಕಟ್ಟುತ್ತಿರುವಂತಿದೆಯಲ್ಲ... ಓಡುತ್ತಾ....ಅಲ್ಲಲ್ಲ ನಡೆಯುತ್ತಾ..ಇದು ಸಾಧ್ಯವೇ...ಚಕಚಕನೇ ಕ್ಲಿಕ್ಕಿಸಿದೆ. ಅಷ್ಟರಲ್ಲಿ ಹತ್ತಿರಬಂದರಲ್ಲ ಅವರ ಮಾತುಗಳು ಕೇಳಿಸತೊಡಗಿತು...
"ಅಲ್ಲಾ ದಾಕ್ಷಾಯಿಣಿ.... ಈ ಓಟ ಸರಿಬರಲಿಲ್ಲ ನೋಡು..."
"ಯಾಕ್ ಅಂಗಂತೀರಿ ಪಾರ್ವತಿಯವರೇ...."
"ಅಲ್ಲಾ...ಈ ಓಟದ ದಾರಿಯನ್ನು ಸಿಟಿ ಮಾರ್ಕೆಟ್ ಕಡೆ ಮಾಡಿದ್ರೆ ಎಂಗೂ ಇವತ್ತು ಭಾನುವಾರ ಒಂದಷ್ಟು ತರಕಾರಿಗಳನ್ನು ತಗೊಂಡು ಬಂದುಬಿಡಬಹುದಾಗಿತ್ತು..".
ಹೂವ ನೋಡು ಆಹಾ ಎಂಥಾ ಚೆಂದವಾಗಿದೆ..!
"ಹೂ ಕಣ್ರೀ.....ವಿಶಾಲಾಕ್ಷಮ್ಮನವರೇ, ಈಗ ಟಮೋಟೊ ಬೆಲೆ ಗಗನಕ್ಕೇರಿದೆಯಂತೆ.."
"ಓಹ್! ಆಂಗಾದ್ರೆ ಟಮೋಟೋ ಇಲ್ದೇ ಮಾಡೋ ಆಡಿಗೆ ಅದೆಂಥ ಅಡಿಗೆ ದಾಕ್ಷಾಯಿಣಿ...".
"ಅಯ್ಯೋ ಅದಕ್ಯಾಕೆ ಚಿಂತೆ., ಇದೆಯಲ್ಲಾ ಹುಣಸೇ ಹಣ್ಣು. ಚೆನ್ನಾಗಿ ಕಿವುಚಿ ಹಾಕಿಬಿಡ್ತೀನಲ್ಲಾ...".
ಹೀಗೆ ದಾರಿಯುದ್ದಕ್ಕೂ ಸಾಗುತ್ತಿತ್ತು ಅವರ ಮಾತುಕತೆ....ತಕ್ಷಣ ನನಗೆ ಯಶವಂತ ಪುರ ಸಂತೆಯಲ್ಲಿ ನನ್ನಾಕೆ ವ್ಯಾಪಾರ ಮಾಡುತ್ತಿದ್ದ ಚಿತ್ರ ಕಣ್ಣಮುಂದೆ ಸಾಗಿ ಹೋಗಿತ್ತು.
ದೂರದಲ್ಲಿ ಏನನ್ನೋ ಕೈಯಲ್ಲಿ ಹಿಡಿದುಕೊಂಡು ಅಜ್ಜಿ ಬರುತ್ತಿದ್ದಾರೆ.. ನನ್ನ ಕ್ಯಾಮೆರಾ ಜೂಮ್ ಮಾಡಿದೆ. ಯಾವುದೋ ಸರದಂತಿದೆಯಲ್ಲ....ಇನ್ನು ಸ್ವಲ್ಪ ಹತ್ತಿರ ಬಂದ. ಈಗ ಸ್ವಷ್ಟವಾಗಿ ಕಾಣುತ್ತಿದೆ. ಅದೆಂತದೋ ರುದ್ರಾಕ್ಷಿ ಮಣಿಯಿರುವಂತಿದೆ. ಅದನ್ನಿಡಿದು ಅಜ್ಜಿ ಏನು ಮಾಡುತ್ತಿದ್ದಾರೆ ? ಮತ್ತಷ್ಟು ಹತ್ತಿರ ಬಂದರು. ಕೇಳಿಸುತ್ತಿದೆ.... ಯಾವುದೋ ಮಂತ್ರ ಹೇಳುತ್ತಿದ್ದಾರಲ್ಲ...ಅವರ ಪಕ್ಕದಲ್ಲೇ ಅವರ ಫೋಟೊ ತೆಗೆಯುತ್ತಾ ನಡೆದು ಮಾತಾಡಲೆತ್ನಿಸಿದೆ. ಅಜ್ಜಿ ಒಮ್ಮೆ ಮುಗುಳ್ನಕ್ಕೂ ತನ್ನ ಬಾಯಿಯ ಮೇಲೆ ತೋರುಬೆರಳು ಇಟ್ಟು "ಶೂ."......ಅನ್ನುವಂತೆ ಸನ್ನೆ ಮಾಡಿತು. ಓಹ್ ಅವರಿಗೆ ತೊಂದರೆಕೊಡಬಾರದೆಂದು ಹೇಳುತ್ತಿದ್ದಾರೆ.. ಇವತ್ತೇ ಆ ಮಂತ್ರವನ್ನು ಓಟ ಪೂರ್ತಿ ಹೇಳುತ್ತೇನೆ ಅಂತ ಎಷ್ಟು ದಿನದಿಂದ ಮಾಡಿಕೊಂಡ ಹರಕೆಯೋ ಅಂದುಕೊಂಡು ಸುಮ್ಮನಾದೆ.
ಓಟದುದ್ದಕ್ಕೂ ಮಂತ್ರಗಳ ಉಚ್ಚಾರ...ಹೀಗೂ ಉಂಟೆ...!
ಅಯ್ಯೋ ಇಲ್ಲಿಗೆ ಬಂದ ಉದ್ದೇಶವೇ ಎಕ್ಕುಟ್ಟಿ ಹೋಗುತ್ತಿದೆಯಲ್ಲಾ ಅಂದುಕೊಂಡು ಹೋಗಲಿ ಒಂದಷ್ಟು ಭೂಪಟಗಳನ್ನಾದರೂ ಕ್ಲಿಕ್ಕಿಸೋಣವೆಂದು ನನ್ನ ಫೋಟೊಗ್ರಫಿ ಶೈಲಿಯನ್ನು ಬದಲಿಸಿಕೊಳ್ಳತೊಡಗಿದೆ. ಎದುರಿಗೆ ಬರುತ್ತಿದ್ದವರಿಗೆಲ್ಲಾ ಮುಗುಳ್ನಗೆ ಬೀರಿ ಅವರು ಮುಂದೆ ಹೋಗುತ್ತಿದ್ದಂತೆ ಅವರೆಡೆಗೆ ಕ್ಯಾಮೆರಾ ಹಿಡಿಯುತ್ತಿದ್ದುದನ್ನು ನೋಡಿ, ಅದನ್ನರಿತ ಒಬ್ಬ ಮಾಧ್ಯಮ ಮಿತ್ರ "ಇಲ್ಲೂ ಅವರನ್ನು ನೆಮ್ಮದಿಯಾಗಿ ಓಡಲಿಕ್ಕೆ ಬಿಡೋಲ್ವ " ಅಂದು ಮುಗಳ್ನಕ್ಕ. ಗೊತ್ತಿಲ್ಲದವರು ನನ್ನೆಡೆಗೆ ಅಚ್ಚರಿಯಿಂದ ನೋಡತೊಡಗಿದರು. ಸ್ವಲ್ಪ ಹೊತ್ತು ಹೀಗೆ ಮಾಡುತ್ತಿದ್ದುದನ್ನು ನೋಡಿ ಓಡಿ ಅಲ್ಲಲ್ಲ ನಡೆದು ಬರುತ್ತಿದ್ದ ಹಿರಿಯ ಭೂಪಟ ತಲೆಯವರು ಕೇಳಿಯೇ ಬಿಟ್ಟರು.
"ಅದೇನ್ರಿ......ಮುಖವನ್ನು ತೆಗೆಯುವುದನ್ನು ಬಿಟ್ಟು ಹಿಂಬಾಗ ಏನ್ ತೆಗೆಯುತ್ತಿದ್ದೀರಿ..".
"ಇಲ್ಲ ಸರ್ ಮುಂದೆ ಓಡುತ್ತಿರುವ ಇತಿಯೋಪಿಯ ದೇಶದ ಮಹಿಳಾ ಸ್ಪರ್ಧಿಗಳನ್ನು ಕ್ಲಿಕ್ಕಿಸುತ್ತಿದ್ದೇನೆ...."
"ಓಹ್ ! ಹೌದಾ.....ಸರಿ ಸರಿ.....ತೆಗೀರಿ.....ಅಂದು ಮರುಕ್ಷಣವೇ..".
"ಅವರನ್ನು ಯಾಕ್ರೀ ಹಿಂಬದಿ ತೆಗೀತಿದ್ದೀರಿ..."
ಈ ಪ್ರಶ್ನೆಗೆ ನನ್ನಲ್ಲಿ ತಕ್ಷಣ ಉತ್ತರವಿರಲಿಲ್ಲ. ಏನೋ ಒಂದು ಹಾರಿಕೆ ಉತ್ತರಕೊಟ್ಟು ಮುಂದೆ ಕಳುಹಿಸಿದ್ದೆ. ನನ್ನ ಪರದಾಟ ನೋಡಿ ಪಕ್ಕದಲ್ಲಿದ್ದ ಗೆಳೆಯರು ಮುಸಿ ಮುಸಿ ನಗುತ್ತಿದ್ದರು.
ಮಧುರ ಪಿಸುಮಾತಿಗೆ.....
ಇವೆಲ್ಲದರ ನಡುವೆ ಅದೆಷ್ಟೋ ಜನರು ಮೊಬೈಲಿನಲ್ಲಿ ಮಾತಾಡಿಕೊಂಡು ಹೋಗುತ್ತಿದ್ದರು. ನವ ಜೋಡಿಗಳ, ಪ್ರೇಮಿಗಳ ಮಾತುಗಳನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿದರೂ ಅವರದು ಪಿಸುಪಿಸು ಗುಸುಗುಸು ಮಾತುಗಳಾದ್ದರಿಂದ ಏನು ಮಾತನಾಡಿಕೊಳ್ಳೂತ್ತಿರಬಹುದು ಅಂತ ಗೊತ್ತಾಗಲಿಲ್ಲ.
ಓಟಕ್ಕಿಂತ ಮೊಬೈಲ್ ಮಾತೇ ಹೆಚ್ಚಾಯಿತು.....
ಈ ನಡುವೆ ಒಬ್ಬ ವಿಕಲಾಂಗ ಗಾಲಿ ಕುರ್ಚಿ ಓಟಗಾರ್ತಿಯೂ ನನ್ನ ಬಳಿ ಬಂದು ತನ್ನ ಸಣ್ಣ ಕ್ಯಾಮೆರಾಗೆ ಶೆಲ್[ಬ್ಯಾಟರಿ]ಹಾಕಿಕೊಡಿ ಅಂತ ಹೇಳಿ ನಾನು ಹಾಕಿಕೊಟ್ಟಾಗ ನನ್ನ ಕೈಗೆ ಅದೇ ಕ್ಯಾಮೆರಾ ಕೊಟ್ಟು ಆಕೆ ಫೋಟೊ ತೆಗೆಸಿಕೊಂಡಿದ್ದು ಆಯಿತು.
ಆರೆರೆ...ಇದೇನಿದು...ವ್ಯಕ್ತಿ ದಿನಪತ್ರಿಕೆ ಓದುತ್ತಾ ಬರುತ್ತಿದ್ದಾನಲ್ಲ...ಅದಕ್ಕೆ ಮನೆಯಲ್ಲಿ ಜಾಗವಿರಲಿಲ್ಲವೇ...ಅಂದುಕೊಂಡು ಕ್ಲಿಕ್ಕಿಸತೊಡಗಿದೆ. ಆತನಂತೂ ಅಕ್ಕ ಪಕ್ಕದವರ ಪರಿವೆಯೋ ಇಲ್ಲದಂತೆ ಸುಮ್ಮನೇ ಓದುತ್ತಾ ನಡೆಯುತ್ತಲೇ...ಇದ್ದ..
ಓಟದ ಮದ್ಯೆ ಹಿರಿಯಜ್ಜನ ಸಂದರ್ಶನ..
ಇದೆಲ್ಲಾ ಚಟುವಟಿಕೆಗಳ ನಡುವೆ ಅಲ್ಲಲ್ಲಿ ಫೋಟೋ ತೆಗೆಸಿಕೊಳ್ಳುವವರು, ಓಡುತ್ತಾ ನೃತ್ಯ ಮಾಡಿಕೊಂಡು ಹೋಗುವವನು, ಮಾದ್ಯಮದವರು ಸಂದರ್ಶನ ಮಾಡುವುದು, .....ಹೀಗೆ ಅವರ ಓಟ ಸಾಗಿತ್ತು.
ಇವರ ನಡುವೆಯೇ ನಿಜಕ್ಕೂ ಓಡಿದವರು, ಗೆಲ್ಲಲೆಂದೇ ಓಡುತ್ತಿದ್ದವರು ನನ್ನ ಕ್ಯಾಮೆರಾಗೆ ಸೆರೆಯಾದರು.
ಶಿವು.ಕೆ. ARPS.
84 comments:
ಶಿವು ಓಟದ ನೋಟ ಚನ್ನಾಗಿದೆ ಅದರ ತಕ್ಕ ಪಾಠವೂ ಇದೆಯಲ್ಲ..ಅರೆರೇ..ಏನಿದು...Angle ಓಟಕ್ಕೆ..ಆಟಕ್ಕೆ..ಪಾಠಕ್ಕೆ...
ಉಘೇ...ಶಿವು
ಜಲನಯನ ಸರ್,
ಬ್ಲಾಗಿಗೆ ಮೊದಲಿಗೆ ಬಂದು..ಓಟ ಆಟ ಪಾಠ ಎಲ್ಲವನ್ನೂ ನೋಡಿ ಅನಂದಿಸಿದ್ದಕ್ಕೆ ಧನ್ಯವಾದಗಳು..
ಶಿವು ಅವರೆ...
ಬೆಳ ಬೆಳಿಗ್ಗೆ ನಗಿಸಿದ್ದಕ್ಕೆ, ಚೆಂದದ ಫೋಟೋಗಳಿಗೆ, ಲೇಖನಕ್ಕೆ ಥ್ಯಾಂಕ್ಸು.
ಶಾಂತಲ ಮೇಡಮ್,
ನನ್ನ ಚಿತ್ರ ಲೇಖನ ನಿಮ್ಮ ಮುಂಜಾವನ್ನು ಚೆಂದಗೊಳಿಸಿದ್ದು ನಾನು ಇದನ್ನು ಬರೆದದ್ದು ಸಾರ್ಥಕವೆನಿಸುತ್ತೆ...
ಇದರ ಮತ್ತಷ್ಟು ಖುಷಿ ಅನುಭವಿಸಲು ಇದೇ ಲೇಖನದ ಮೊದಲ ಸರಣಿ ನೋಡಿ...
ಹೀಗೆ ಬರುತ್ತಿರಿ...
ಧನ್ಯವಾದಗಳು.
ಶಿವು,
ಹೊಸದೃಷ್ಟಿಕೋನದಿಂದ ಬೆಂಗಳೂರಿನಲ್ಲಿ ನಡೆದ ಓಟದ ಚಿತ್ರಣವನ್ನು ಕೊಟ್ಟಿದ್ದೀರಿ. ಎಷ್ಟು ತರತರದ ಜನಮನಗಳು. ಹೂಕಟ್ಟುವವರು, ಪೇಪರ್ ಓದುವವರು, ಮೊಬೈಲು, ನಗೆಗಾರರು, ಅಂತ್ಯಾಕ್ಷರಿ.... Simply Superb.
ಕೊನೆಯಲ್ಲಿ ಪ್ಲಾಸ್ಟಿಕ್ ಹಾವಳಿ ಬಗ್ಗೆಯೂ ಎಚ್ಚರಿಸಿದ್ದೀರಿ. ಎಲ್ಲವೂ ಇಲ್ಲಿದೆ. ಇನ್ನು ನಾನೇನು ಬರೆಯಲಿ?
ಶಿವೂ ಸರ್,
ಸೊಗಸಾದ ಚಿತ್ರ-ಲೇಖನ ಸರಣಿ...
ಪ್ರತಿಯೊಂದು ಫೋಟೋ ಮತ್ತು ಅದರ ಬಗೆಗಿನ ವಿವರಣೆ ರಂಜನೀಯವಾಗಿದೆ.
ಆಹಾ ಚೆನ್ನಾಗಿದೆ!
ಫೋಟೋಗಳು ಚೆನ್ನಾಗಿವೆ.
ಆದರೆ ಪ್ಲಾಸ್ಟಿಕ್ ಫೋಟೋ ನೋಡಿದ್ರೆ ಬೇಜಾರಾಗತ್ತೆ.
"ಇವರ ನಡುವೆಯೇ ನಿಜಕ್ಕೂ ಓಡಿದವರು, ಗೆಲ್ಲಲೆಂದೇ ಓಡುತ್ತಿದ್ದವರು ನನ್ನ ಕ್ಯಾಮೆರಾಗೆ ಸೆರೆಯಾದರು."
ತಲೆಬರಹದಡಿಯಲ್ಲಿಯ ಮೊದಲ ಚಿತ್ರ ತುಂಬಾ ಚೆನ್ನಾಗಿದೆ. ಪ್ಯಾನಿಂಗ್, ಹಿನ್ನೆಲೆಯ ವಿಧಾನ ಸೌಧ ಸಕ್ಕತ್
ವೆರಿ ನೈಸ್ !! "ಓಟಕ್ಕೆ ಕಾಲುಗಳು ಎಷ್ಟು ಮುಖ್ಯ ಅಲ್ಲವೇ" ಆ ಚಿತ್ರ ತುಂಬಾ ಇಷ್ಟ ಆಯ್ತು:) ಹಾಗೇ ಕೊನೆಯ ಫೋಟೋ ನೋಡಿ ಬೇಸರನೂ ಆಯ್ತು..
ಶಿವು,
ಶಿವನಿಗೆ ಶಿವನೇ ಸಾಟಿ, ದೂಸ್ರಾ ಮಾತೇ ಇಲ್ಲ ಶಿವಾ!
- ಕೇಶವ
ಶಿವು ಸರ್....
ತುಂಬಾ... ತುಂಬಾ ಚೆನ್ನಾಗಿದೆ...
ಹೆಚ್ಚಿಗೆ ಏನೂ ಹೇಳಲಿಕ್ಕೆ ಗೊತ್ತಾಗ್ತಾ ಇಲ್ಲ...
ಸೂಪರ್....!!
ಸಾರ್ ಒಳ್ಳೆಯ ಚಿತ್ರ ಸಂಗ್ರಹ. ಜೊತೆಗೆ ಅದ್ಭುತ ಶೀರ್ಷಿಕೆ ಹಾಗೂ ವಿವರಣೆ. ತುಂಬಾ ಚೆನ್ನಾಗಿವೆ.
ಮಲ್ಲಿಕಾರ್ಜುನ್,
ಮೊದಲು ನನ್ನ ಉದ್ದೇಶ ಏನಾದರೂ ಸ್ಪರ್ಧಾತ್ಮಕ ಚಿತ್ರಗಳಿಗೆ ಇಲ್ಲಿ ಅವಕಾಶವಿದೆಯೇ ಅಂತ. ಅಲ್ಲಿನ ವಾತಾವರಣ ನೋಡಿದಾಗ ಅದರ ಸಾಧ್ಯತೆ ಕಡಿಮೆಯೆಂದು ಗೊತ್ತಾದಾಗ ಇಡೀ ಓಟದ ಚಿತ್ರಣವನ್ನೇ ಹೊಸ ದೃಷ್ಟಿಕೋನದಿಂದ ನೋಡಲೆತ್ನಿಸಿದೆ. ಅದರ ಪರಿಣಾಮವೇ ಇದು. ಇನ್ನೂ ವೈವಿದ್ಯತೆಯ ಫೋಟೋಗಳಿದ್ದವು. ಬ್ಲಾಗಿನಲ್ಲಿ ಎಲ್ಲವನ್ನೂ ಹಾಕಲು ಸಾದ್ಯವಿಲ್ಲದ ಕಾರಣ ಇಷ್ಟು ಮಾತ್ರ ಹಾಕಿದ್ದೇನೆ.
ಕೊನೆಯಲ್ಲಿ ಪ್ಲಾಸ್ಟಿಕ್ ಬಾಟಲ್ ಸನ್ನಿವೇಶಗಳು ಬೇಸರವಾಗಿದ್ದಂತೂ ನಿಜ...
ಧನ್ಯವಾದಗಳು.
ರಾಜೇಶ್,
ಓಟದ ವೈವಿದ್ಯತೆಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಸಂದೀಪ್,
ಥ್ಯಾಂಕ್ಸ್...ನಿಮ್ಮ ಹೊಸ ಗಂಭೀರ ಲೇಖನ [ಮೇಪ್ಲವರ್-ನಾಗೇಶ್ ಹೆಗಡೆ]ಇಷ್ಟವಾಯಿತು...
ಜ್ಯೋತಿ ಮೇಡಮ್,
ಪ್ಲಾಸ್ಟಿಕ್ ಬಗ್ಗೆ ನನಗೂ ಹಾಗೆ ಅನ್ನಿಸಿತು. ಇದರ ಮೊದಲ ಲೇಖನದಲ್ಲಿ ಯಾರು ಯಾರು ಓಡಿದರು ಅನ್ನುವ ಬಗೆಗಿನ ಲೇಖನವನ್ನು ನೋಡಿದರೆ ಇನ್ನಷ್ಟು ಖುಷಿಯಾಗಬಹುದು...
ಧನ್ಯವಾದಗಳು.
ಪಾಲಚಂದ್ರ,
ನಿಮ್ಮಂಥ ಫೋಟೋಗ್ರಫಿ ಇಷ್ಟಪಡುವವರಿಗಾಗಿಯೇ ಆಂಥ ಫೋಟೋಗಳನ್ನು ಹಾಕಿದ್ದು. ನೀವು ಅದನ್ನು ಗುರುತಿಸುತ್ತೀರೆಂದು ನನಗೆ ಗೊತ್ತಿತ್ತು....
ಧನ್ಯವಾದಗಳು.
ರೂಪ,
ನೀವು ಇಷ್ಟ ಪಟ್ಟ ಕಾಲುಗಳ ಫೋಟೋಗಳು ತುಂಬಾ ಇವೆ. ಅವು ಒಂದಕ್ಕಿಂತ ಒಂದು ವಿಭಿನ್ನವಾಗಿವೆ....ಇದನ್ನು ನಾನು ಕ್ಯಾಮೆರಾವನ್ನು ರಸ್ತೆಯ ಮೇಲಿಟ್ಟು ಕ್ಕಿಟ್ಟು ನಾನು ಮಲಗಿ ಕ್ಲಿಕ್ಕಿಸಿದ್ದೆ...ನನಗೂ ಇವು ತುಂಬಾ ಇಷ್ಟವಾದ ಫೋಟೋಗಳು.
ಹೀಗೆ ಬರುತ್ತಿರಿ...ಧನ್ಯವಾದಗಳು.
ಕುಲಕರ್ಣಿ ಸರ್,
ನೀವು ನನ್ನನ್ನು ಈ ಮಟ್ಟಕ್ಕೆ ಹೊಗಳಿದರೆ ನಾನು ಅದರ ಖುಷಿಯಲ್ಲಿ ಬೀಗಿ ಸೋಮಾರಿಯಾಗುವುದರ ಜೊತೆಗೆ ನನ್ನ ಆಹಂ ಹೆಚ್ಚಾಗಿಬಿಡುವುದೆಂಬ ಭಯ.
ಪ್ರಕಾಶ್ ಸರ್,
ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...
ಶಿವಾನಂದ ಗಾವಲ್ಕರ್ ಸರ್,
ನನ್ನ ಬ್ಲಾಗಿಗೆ ಸ್ವಾಗತ. ಚಿತ್ರಗಳು,ಶೀರ್ಷಿಕೆಗಳು, ಬರಹ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...
ಶಿವು ಫೋಟೋಗಳು ಒಂದಕ್ಕಿಂತ ೊಂದು ಚೆನ್ನಾಗಿವೆ. ಅವುಗಳಿಗಿಂತ ಮುಖ್ಯವಾಗಿ ನಿಮ್ಮ ರನ್ನಿಂಗ್ ಕಾಮೆಂಟರಿ ಅದ್ಭುತವಾಗಿದೆ. ನಿಮ್ಮ ಹುಡುಕಾಟ ಸೃಜಶೀಲತೆಗೆ ಕೋಡು ಮೂಡಿಸಿದಂತಿದೆ.
ಕೊನೆಯ ಸಾಲುಗಳು ತುಂಬ ಮಾರ್ಮಿಕವಾಗಿ ಇದೆ. ಶಿವೂ. ಇವತ್ತು ವಿಶ್ವ ಪರಿಸರ ದಿನ. ಅದಕ್ಕೆ ಕೊಡುಗೆ ಆಗಿ ಬೆಂಗಳೂರಿನ ಮರಗಳನ್ನು ಕಡಿಯ ಲಾಗಿದೆ ಹಾಗು ಕಂಡ ಕಂಡಲ್ಲಿ ಪ್ಲಾಸ್ಟಿಕ್ ಬಾಟಲಿ ಗಳನ್ನು ಎಸೆಯಲಾಗಿದೆ.
ಫೋಟೋ ಗಳ ಬಗ್ಗೆ ನೋ ದೂಸ್ರಾ ಮಾತು, ಎಲ್ಲ ಬಂಬಾಟು.
ಶಿವೂ,
ಮೊದಲ ಪೋಸ್ಟಿ೦ಗ್ ಓಟದ ಬಗ್ಗೆ ಕುತೂಹಲ ಕೆರಳಿಸಲಿಲ್ಲ.ಅದಕ್ಕೇ ಕಾಮೆ೦ಟಿಸಲಾಗಲಿಲ್ಲ.ಆದರೆ ಸೆಕೆ೦ಡ್ ಹಾಫ್ ಸೂಪರ್.ಇಲ್ಲಿ ವ್ಯ೦ಗ್ಯವಿದೆ,ಹಾಸ್ಯವಿದೆ,ಪ್ರೀತಿಯಿದೆ,ಆಧ್ಯಾತ್ಮವೂ ಇದೆ.ಬೇಜಾವಾಬ್ದಾರಿಯೂ ಇದೆ.ವಿಶ್ವ ಪರಿಸರ ದಿನದ೦ದು ರಸ್ತೆ ಪಕ್ಕದಲ್ಲಿ ಬಿದ್ದ ಪ್ಲಾಸ್ಟಿಕ್ ಬಾಟಲುಗಳನ್ನು ಕ೦ಡು ಇದು ಭಾರತದಲ್ಲಲ್ಲದೇ ಇನ್ನೆಲ್ಲಿ ಸಾಧ್ಯ ಅ೦ತ ನನ್ನ ಮನಸು ಹೇಳುತ್ತಿದೆ.ಹ್ಯಾಟ್ಸ್ ಆಫ್ ಟು ಯುವರ್ ಡೆಡಿಕೇಷನ್ ಶಿವೂ.
The last photo is disgusting.
ಪರಿಸರ ಕಾಳಜಿ ಎಳ್ಳಷ್ಟೂ ಇರದ ಜನ ಎಷ್ಟು ದೂರ ಯಾವ ಉದ್ದೇಶ ಇಟ್ಟುಕೊಂಡು ಓದಿದರೂ ಅಷ್ಟೇ. ಅವರಿಗೆ ಬೇಕಾಗಿದ್ದಿದ್ದು ಕೇವಲ ಪ್ರಚಾರ ಹಾಗೂ ಪ್ರಾಯೋಜಕರದ್ದು ಅಪ್ಪಟ ವ್ಯಾಪಾರಿ ಬುದ್ದಿ.
ಬಾಟಲಿಗಳ ಚಿತ್ರ ನೋಡಿ ಸಂಕಟವಾಯ್ತು. ನಿಮ್ಮ ವ್ಯಂಗ್ಯವೂ ಶಾರ್ಪಾಗಿದೆ -ಫೋಟೋದಂತೆ.
ಫೋಟೋಗಳು ಚೆನ್ನಾಗಿವೆ...
ಅಣ್ಣ ಲೇಖನ ಮತ್ತು ಚಿತ್ರಗಳು ಎಂದಿನಂತೆ ಚೆನ್ನಾಗಿವೆ...
ಶಿವೂ
ಫೋಟೋ ಮತ್ತು ಲೇಖನ ಎರಡು ಚೆನ್ನಾಗಿವೆ.
ಸತ್ಯ ನಾರಾಯಣ ಸರ್,
ಓಟದ ಎರಡನೆ ಸರಣಿ ಸ್ವಲ್ಪ ಉದ್ದವಾಗಿದೆಯೆನಿಸಿತ್ತು. ಅದರೂ ಅದಕ್ಕೂ ಮೂರನೆಯದಕ್ಕೆ ಮಾಡದೇ ಎರಡರಲ್ಲೇ ಮುಗಿಸಬೇಕೆಂದು ಮಾಡಿದ್ದೇನೆ. ರನ್ನಿಂಗ್ ಕಾಮೆಂಟರಿ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...
ಬಾಲು ಸರ್,
ಬಾಟಲಿಯನ್ನು ಎಸೆಯುವುದನ್ನು ನೋಡಿದಾಗ ಫೋಟೋ ತೆಗೆಯುವುದನ್ನು ಬಿಟ್ಟು ಅವರಿಗೆ ಎಸೆಯಬೇಡಿರೆಂದು ಹೇಳಿದೆ. ಆದರೆ ಅವರಿಗೆ ನನ್ನ ಮಾತನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ. ಅದರ ಪರಿಣಾಮವೇ ಇದು...
ಧನ್ಯವಾದಗಳು.
ಅಹರ್ನಿಶಿ ಶ್ರೀಧರ್,
ನನ್ನ ಈ ಚಿತ್ರದಲ್ಲಿ ಎಲ್ಲವನ್ನೂ ಗುರುತಿಸಿದ್ದೀರಿ...
ಇಷ್ಟಕ್ಕೂ ಇವೆಲ್ಲಾ ನನಗೆ ಗೊತ್ತೇ ಇಲ್ಲ. ಮೊದಲಿಗೆ ಆ ಕ್ಷಣದಲ್ಲಿ ನಡೆಯುವ ಘಟನೆಗಳನ್ನು enjoy ಮಾಡುತ್ತಾ ಫೋಟೋ ತೆಗೆಯುತ್ತೇನೆ. ನಂತರ ಅದನ್ನೇ ಬ್ಲಾಗಿನಲ್ಲಿ ಬರೆಯುತ್ತೇನೆ. ಬಾಟಲಿ ವಿಚಾರ ನನಗೂ ಕೊನೆಯಲ್ಲಿ ಬೇಸರ ತಂದಿತ್ತು. ಹೀಗೆ ಬರುತ್ತಿರಿ...
ಧನ್ಯವಾದಗಳು.
ವಿಕಾಶ್,
ಇಡೀ ಓಟದಲ್ಲಿ ನಾನು ಬರೆದಿರುವುದು ಮತ್ತು ಕ್ಲಿಕ್ಕಿಸಿರುವುದು ಬಿಟ್ಟರೆ ಉಳಿದೆಲ್ಲವೂ ಕೇವಲ ಪ್ರಚಾರ ನಿಮಿತ್ತವಾಗಿದ್ದುದ್ದು ಖಚಿತವಾಗಿತ್ತು. ವ್ಯವಸ್ಥಾಪಕರಿಗೆ ಪರಿಸರದ ಬಗ್ಗೆ ಕಾಳಜಿಯಿರಲಿಲ್ಲವಾದ್ದರಿಂದ ಇನ್ನೂ ಸಾರ್ವಜನಿಕರಿಗೆ ಎಲ್ಲಿ ಬರಲು ಸಾಧ್ಯ....ಮತ್ತೆ ಇದು ಇಲ್ಲಿ ಬಿಟ್ಟರೆ ಬೇರೆಲ್ಲಿ ಆಗಲು ಸಾಧ್ಯ ಹೇಳಿ....
ಧನ್ಯವಾದಗಳು.
ಶಿವೂ ಸರ್,
ತುಂಬಾ ಸುಂದರ ಫೋಟೋಗಳು,
ಅದಕ್ಕೆ ಒಪ್ಪುವ ಬರಹ, ನಮಗೆ ಅಲ್ಲಿ ಹೋದಂತೆ ಅನಿಸಿತು, ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ಸುಶ್ರುತ,
ಬಾಟಲಿ ಬಗೆಗಿನ ವ್ಯಂಗ್ಯ ನನ್ನ ಉದ್ದೇಶವಾಗಿರಲಿಲ್ಲ. ಎಲ್ಲಾ ಸೊಗಸಾದ ಆನಂದದ ನಡುವೆ ಇದು ಬೇಸರದ ವಿಚಾರವಾಗಿದ್ದರಿಂದ ಹೇಳಲೇಬೇಕಾಗಿತ್ತು...
ಧನ್ಯವಾದಗಳು.
ರವಿಕಾಂತ್ ಸರ್,
ಧನ್ಯವಾದಗಳು.
ನವೀನ್,
ಬ್ಲಾಗಿಗೆ ನೀವು ಇತ್ತೀಚೆಗೆ ಪ್ರತಿನಿತ್ಯ ಬಂದು ಪ್ರೋತ್ಸಾಹ ನೀಡುತ್ತಿದ್ದೀರಿ...ಧನ್ಯವಾದಗಳು.
ಪರಂಜಪೆ ಸರ್,
ಧನ್ಯವಾದಗಳು.
ಗುರುಮೂರ್ತಿ ಹೆಗಡೆ ಸರ್,
ನೀವು ತಡವಾಗಿ ಬಂದಿಲ್ಲವಾದ್ದರಿಂದ ಬೇಸರಗೊಳ್ಳವ ಅಗತ್ಯವಿಲ್ಲ. ನಾನು ಈ ಲೇಖನವನ್ನು ನಿನ್ನೆ ರಾತ್ರಿ ಹಾಕಿದ್ದೆ.
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶಿವು ಸರ್,
ಎಂದಿನಂತೆ ತಡವಾಗಿ ಬಂದಿದ್ದೇನೆ.. ಅದಕ್ಕೋಸ್ಕರ ಹಲ್ಲು ಕಿರಿದು ಪೋಸು ಕೊಡ್ತಾ ಇದೀನಿ, ಬೇಜಾರ್ ಮಾಡ್ಕೊಬೇಡಿ :)
ಇವರನ್ನೆಲ್ಲ ನೋಡಿದರೆ ಓಡ ಬೇಕು ಅನ್ನೋ ಉದ್ದೇಶಕ್ಕಿಂತ ಟೈಮ್ ಪಾಸ್ ಮಾಡೋಕೆ, ನಾನೂ ಅಲ್ಲಿದ್ದೆ ಅನ್ನಿಸ್ಕೊಳ್ಳೋದಕ್ಕೆ ಮಾತ್ರ ಅಲ್ಲಿಗೆ ಬಂದಿದ್ರು ಅನ್ಸುತ್ತೆ.. ಟೈಮ್ ಪಾಸ್ ಮಾಡೋಕೆ ಬೇರೆ ಸಾಕಷ್ಟು ಜಾಗಗಳಿವೆ; ಪಾರ್ಕುಗಳು, ನಿರ್ಜನ ರಸ್ತೆಗಳು... ಪಕ್ಕಾ ಓಟಕ್ಕೆಂದೇ ಏರ್ಪಡಿಸುವ ಇಂಥ ಸಂದರ್ಭಗಳನ್ನೂ ಟೈಮ್ ಪಾಸ್ ಗೆ ದುರುಪಯೋಗ ಪಡಿಸಿಕೊಳ್ಳೋದು, ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ, ಬಿಸಾಡಿ ಪರಿಸರ ಹಾಳುಮಾಡುವುದು ತುಂಬ ಬೇಸರದ ಸಂಗತಿ. ಇಂಥವರೆಲ್ಲ ಅಲ್ಲಿಗೆ ಬರುವುದನ್ನು ನಿಲ್ಲಿಸಿದರೆ ನಿಜವಾದ ಕ್ರೀಡಾ ಮನೋಭಾವದೊಂದಿಗೆ ಅಲ್ಲಿಗೆ ಬರುವವರಿಗೆ ಸ್ವಲ್ಪ ನೆಮ್ಮದಿಯೂ ಸಿಗುತ್ತೆ, ಪರಿಸರವೂ ಸ್ವಚ್ಛವಾಗಿರುತ್ತೆ, ಅಲ್ಲವೇ.
ಚಂದದ ಫೋಟೋಗಳಿಗೆ ಮತ್ತು ಕಣ್ತೆರೆಸುವ ಬರಹಕ್ಕಾಗಿ ಧನ್ಯವಾದಗಳು.
-ಉಮೀ
ಶಿವು ಅವರೆ,
ಪ್ರತಿಯೊಂದು ಕೆಲಸದಲ್ಲೂ ಸೃಜನಶಿಲತೆಯನ್ನು ಹುಡುಕಿ ಹೊರಡುವ ನೀವು ನಿಜಕ್ಕೂ ತುಂಬಾ creative. ಅದು ಹೇಗೆ ನಿಮ್ಮ ಎಲ್ಲ ಕೆಲಸವನ್ನು ನೀವು ಅಷ್ಟೊಂದು ಚನ್ನಾಗಿ enjoy ಮಾಡುತ್ತೀರ? ಮದುವೆ ಮನೆಯಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ನಡೆದ ಘಟನೆಗಳ ಬಗ್ಗೆ ಫೋಟೋ ಕ್ಲಿಕ್ಕಿಸುತ್ತಲೇ ಅದರ ನಡುವೆ ನಿಮ್ಮ ಆಸಕ್ತಿಯನ್ನು apply ಮಾಡುವ ರೀತಿ ಮತ್ತು ಅದನ್ನು ಬರಹದಲ್ಲಿ ಅಭಿವ್ಯಕ್ತಿಸುವ ರೀತಿ ನನಗೆ ತುಂಬಾ ಖುಶಿ ಕೊಡುತ್ತೆ. ಹಾಗೆಯೇ ನಿಮ್ಮ ಈ ಆಸಕ್ತಿ ನನಗಿಲ್ಲವಲ್ಲ ಎಂಬ ಬೇಸರವೂ ಇದೆ. So I must meet you to draw inspiration from you, when I come to Bangalore this time.
Thanks for your nice photos and article.
ಉಮೇಶ್ ಸರ್,
ನೀವೇನು ತಡವಾಗಿ ಬಂದಿಲ್ಲವಾದ್ದರಿಂದ ಬೇಸರಪಟ್ಟುಕೊಳ್ಳಬೇಡಿ...ಒಟ್ಟಾರೆ ಈ ಮ್ಯಾರಾಥಾನ್ ಓಟ ಟೈಮ್ ಪಾಸ್ ಮಾಡುವವರಿಗೆ, ಪರಿಸರ ಕಾಳಜಿ ಇಲ್ಲದಿರುವವರಿಗೆ ಇದ್ದಿದ್ದೆಂದು ಕಾಣುತ್ತೆ. ಕೊನೇ ಪಕ್ಷ ಎಲ್ಲರಲ್ಲೂ ಆ ಕಾಳಜಿ ಮೂಡಲಿ ಅನ್ನೋದೆ ನನ್ನ ಅನಿಸಿಕೆ.
ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಚೆನಾಗಿದೆ ಸರ್ ! ಒಳ್ಳೆ location ನ select ಮಾಡಿದೀರ.
ಪ್ಲಾಸ್ಟಿಕ್ ಲೋಟಗಳನ್ನ ನೋಡಿ ಬೇಜಾರ್ ಆಯ್ತು.
ಉದಯ್ ಸರ್,
ನನಗೆ ನನ್ನ ssy[ಸಿದ್ಧ ಸಮಾಧಿ ಯೋಗ]ಗುರುಗಳು ಕಲಿಸಿಕೊಟ್ಟ ಮೊದಲ ವಿಧ್ಯೆಯೆಂದರೆ ಮಾಡುವುದನ್ನು ಇಷ್ಟಪಟ್ಟು ಮಾಡುವುದು, ಮತ್ತು ಅದನ್ನು enjoy ಮಾಡುವುದು...ಅದನ್ನು ಪಾಲಿಸುತ್ತಿದ್ದೇನೆ ಸರ್...ಮತ್ತೇನಿಲ್ಲ...ನನಗೂ ನಿಮ್ಮನ್ನು ಬೇಟಿಯಾಗಬೇಕೆಂಬ ಆಸೆಯಿದೆ.
ನೀವು ಬೆಂಗಳೂರಿಗೆ ಬಂದಾಗ ನಿಮ್ಮನ್ನು ಖಂಡಿತ ಬೇಟಿಯಾಗುತ್ತೇನೆ...ಮತ್ತೆ ನನ್ನ ಫೋನ್ ನಂಬರ್ ಮತ್ತು ವಿಳಾಸವನ್ನು ನಿಮಗೆ ಮೇಲ್ ಮಾಡುತ್ತೇನೆ...
ಚಿತ್ರ-ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಹೀಗೆ ಬರುತ್ತಿರಿ...
ಗ್ರೀಷ್ಮ ಮೇಡಮ್,
ಮತ್ತೆ ಬಿಡುವು ಮಾಡಿಕೊಂಡು ಬ್ಲಾಗಿಗೆ ಬಂದಿದ್ದೀರಿ...
ನಾನು ತಮಾಷೆಗಾಗಿ ಆ ಸ್ಥಳವನ್ನು ಆಯ್ಕೆ ಮಾಡಿಕೊಂಡೆ. ಪರಿಣಾಮ ಈಗಿರುತ್ತದೆ ಅನ್ನುವ ಕಲ್ಪನೆ ನನಗಿರಲಿಲ್ಲ...ಪ್ಲಾಸ್ಟಿಕ್ ವಿಚಾರ ನನಗೂ ಬೇಸರವಾಯಿತು..
ಧನ್ಯವಾದಗಳು.
ಶಿವು ಅವರೆ,
ವರ್ಲ್ಡ್ ಕೆ-೧೦ ಓಟದ ವಂಡರ್ಫುಲ್ ಫೋಟೋಗಳು, ಶೀರ್ಷಿಕೆಗಳು ಮೆಚ್ಚೆಕೆಯಾಯಿತು. ನನಗೆ ಬಹಳ ಖುಷಿ ಕೊಟ್ಟಿದ್ದು ವಿಧಾನಸೌಧ ಎದುರು ಓಡುತ್ತಿರುವ ವಿದೇಶೀಯನು ಮತ್ತು ಗಾಲಿಕುರ್ಚಿಯಲ್ಲಿ ಹುರುಪಿನಿಂದ ಇರುವ ವ್ಯಕ್ತಿಯದು. ಒಟ್ಟಿನಲ್ಲಿ ಎಲ್ಲ ಚಿತ್ರಗಳೂ ಅದ್ಭುತವಾಗಿವೆ.
ಧನ್ಯವಾದಗಳು.
ಸಸ್ನೇಹಗಳೊಂದಿಗೆ,
ಕ್ಷಣ ಚಿಂತನೆ ಸರ್,
ನೀವು ಮೆಚ್ಚಿದ ಚಿತ್ರಗಳೇ ನನಗೂ ಇಷ್ಟವಾಗಿವೆ..ಅವು ಸ್ಪರ್ಧೆಗೆ ಕಳುಹಿಸುವ ಗುಣಮಟ್ಟ ಹೊಂದಿವೆಯೆಂದು ನನ್ನ ಭಾವನೆ.
ಹೀಗೆ ಬರುತ್ತಿರಿ...ಧನ್ಯವಾದಗಳು.
ಒಳ್ಳೆಯ ಚಿತ್ರಗಳ ಜೊತೆಗೆ ಉತ್ತಮ ಲೇಖನ...
ಶಿವು,
ಎಂದಿನಂತೆ ಸೊಗಸಾದ ಚಿತ್ರಗಳನ್ನು ಹಾಗೂ ಸೊಗಸಾದ ಕಮೆಂಟರಿಯನ್ನು ಕೊಟ್ಟಿದ್ದೀರಿ. ಕೊನೆಯ ಚಿತ್ರವಂತೂ ನಮ್ಮ
ಸಮಾಜದ civil sensitivityಗೆ ಹಿಡಿದ ಕನ್ನಡಿಯಾಗಿದೆ.
ಶಿವಪ್ರಕಾಶ್,
ಧನ್ಯವಾದಗಳು. ಹೀಗೆ ಬರುತ್ತಿರಿ...
ಸುನಾಥ್ ಸರ್,
ಎರಡನೇ ಸರಣಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...ಕೊನೆಯ ಚಿತ್ರವನ್ನು ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಬ್ಲಾಗಿಗೆ ಹಾಕಿದೆ ಸರ್...
ಹೀಗೆ ಬರುತ್ತಿರಿ.....
ಬೆಳಗ್ಗೆಯೇ ನೋಡಿದನಾದರೂ ತಾಂತ್ರಿಕ ಕಾರಣಗಳಿಂದ ಕಾಮೆಂಟ್ ಮಾಡಲಾಗಲಿಲ್ಲ.
ಫೋಟೋಸ್ ತುಂಬಾ ಚೆನ್ನಾಗಿವೆ . ಅವುಗಳಿಗೆ ನೀವು ಕೊಟ್ಟ ಶೀರ್ಷಿಕೆಗಳು ಮತ್ತು ವಿವರಣೆಗಳು ತುಂಬಾ ಹಿಡಿಸಿದವು.
antoo bhoopatada photo tegeeta sik-hakondri! ;)
ಶಿವೂ...
ಸಿಂಪ್ಲಿ ಸೂಪರ್..... ಒಳ್ಳೆಯ ಫೋಟೋ ಸಹಿತ ಕಾಮೆಂಟರಿ ....ತುಂಬ ಇಷ್ಟ ಆಯಿತು ಎಲ್ಲ ಫೋಟೋ ಗಳು ಹಾಗು ನಿಮ್ಮ ವಿವರಣೆ,,,ಕೊನೆಯಲ್ಲಿ ಒಂದು ಒಳ್ಳೆ ಸಂದೇಶ ಕೂಡ. ತಡವಾಗಿ ಬಂದೆ ಅಂತ ಕಾಣುತ್ತೆ,, ಆಗಲೇ ಇಸ್ಟೊಂದು ಕಾಮೆಂಟ್ಸ್....
ಗುರು
ಶ್ರೀನಿಧಿ,
ಭೂಪಟಗಳೊಂದೆ ಅಲ್ಲ ಎಲ್ಲ ವಿಚಾರದಲ್ಲೂ ಸಿಕ್ಕಿಹಾಕಿಕೊಂಡು ತಪ್ಪಿಸಿಕೊಳ್ಳುವುದು ನಡೆಯುತ್ತಿದೆ...
ಇವತ್ತು ಜೋರು ಮಳೆ ಬಿತ್ತಲ್ಲ. ಆಗ ಮಳೆ ಫೋಟೋ ತೆಗೆಯಲು ಹೋಗಿ ಫೋಲಿಸ್ ಕೈಯಲ್ಲಿ ಸಿಕ್ಕಿಹಾಕಿಕೊಂಡು ತಪ್ಪಿಸಿಕೊಂಡಿದ್ದು ಮಜವಾಗಿತ್ತು...
ರೂಪ,
ಫೋಟೋಗಳು, ಜೊತೆಗೆ ಬರವಣಿಗೆ ಮತ್ತು ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಗುರು,
ಎರಡನೇ ಸರಣಿಯನ್ನು ನೋಡಿ ಇಷ್ಟಪಟ್ಟಿದ್ದೀರಿ...ಬಹುಶಃ ನಿಮ್ಮ ಫೋಟೋ ಕ್ಲಿಕ್ಕಿಸಿ ಇದೇ ಲೇಖನದಲ್ಲಿ ಹಾಕಿಬಿಟ್ಟಿದ್ದರೆ ಒಂದು ಸಂಪೂರ್ಣ [package]ಲೇಖನವಾಗುತ್ತಿತ್ತು ಅನ್ನುವುದು ನನ್ನ ಅನಿಸಿಕೆ..
ಕೊನೆಯಲ್ಲಿ ಸಂದೇಶವೆಂದಿರಿ...ಆದರೆ ಇಷ್ಟೆಲ್ಲಾ ಖುಷಿಗಳ ಜೊತೆ ಅದು ಬೇಕಿಲ್ಲವಾಗಿತ್ತು ಅನ್ನುವುದು ನನ್ನ ಅಭಿಪ್ರಾಯ...ಅದರೂ ಅದನ್ನೇ ಇಷ್ಟಪಡುತ್ತಿದ್ದಾರೆನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ...
ಧನ್ಯವಾದಗಳು.
ಶಿವೂ ಅವರೇ,
ಓಡುವುದನ್ನು ಬಿಟ್ಟು ಏನೇನು ಮಾಡಿದರು ಎಂದು ಎಲ್ಲ ವಿವರಿಸಿ, ಫೋಟೋ ಸಮೇತ ತೋರಿಸಿದ್ದೀರ!
ಇವನ್ನೆಲ್ಲ ಓದಿ, ನೋಡಿ ಒಂದು ಕಡೆ ನಗು ಬಂದರೆ, ಇನ್ನೊದು ಕಡೆ ವಿಷಾದವೂ ಉಂಟಾಗುತ್ತದೆ!!
ನಮ್ಮ ದೇಶದ ಜನರಿಗೆ ಯಾವಾಗ ಒಳ್ಳೆ ಬುದ್ದಿ ಬರುತ್ತೋ ಆ ಶಿವನೆ ಬಲ್ಲ!!!
ಎಂದಿನಂತೆ ನಿಮ್ಮ ಲೇಖನ ಮತ್ತು ಫೋಟೋಗಳು, ಅದಕ್ಕೆ ಪೂರಕವಾದ ವಿವರಣೆಗಳು ತುಂಬಾ ಸೊಗಸಾಗಿವೆ.
ಓಟದ ನೋಟ ಚೆನ್ನಾಗಿದೆ. ಓಡಿದವರಿಗಿಂತ ಉಂಡಾಡಿ ತಿರುಗಿದವರೇ ಜಾಸ್ತಿ.
ಈ ಚಿತ್ರ-ಲೇಖನ, ಒಟ್ಟಾರೆ ಚಿತ್ರ ಬಿಂಬಿಸುವಲ್ಲಿ
ಪರಿಣಾಮಕಾರಿಯಾಗಿದೆ.
ದೂರದಲ್ಲಿರುವ ನನ್ನಂಥವರಿಗೆ, ಆ ಕ್ಷಣಗಳನ್ನು ಆಸ್ವಾದಿಸುವ ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳು.
Nice pics and nice information :-):-)
ತುಂಬಾ ಚೆನ್ನಾಗಿದೆ.
ಉತ್ತಮ ಬರಹ. ಅತ್ಯುತ್ತಮ ನಿದರ್ಶನ, ಚಿತ್ರಗಳ ಸಹಿತ. . . :-)
ಶಿವೂ ಸರ್,
ಪ್ರತಿಯೊಂದು ಫೋಟೋ,
ಶೀರ್ಷಿಕೆ ಹಾಗೂ ವಿವರಣೆ,
ತುಂಬಾ ಚೆನ್ನಾಗಿವೆ.
SSK ಮೇಡಮ್
ಓಟದ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಕೊನೆಯಲ್ಲಿ ಪ್ಲಾಸ್ಟಿಕ್ ವಿಚಾರ ಬೇಸರವಾಗಿತ್ತು. ಅದರೂ ಇದನ್ನು ತೋರಿಸದೇ ಇರಲು ಮನಸ್ಸು ಒಪ್ಪಲಿಲ್ಲ..
ಹೀಗೆ ಬರುತ್ತಿರಿ...
ಮತ್ತೊಮ್ಮೆ ಧನ್ಯವಾದಗಳು.
ಅಗ್ನಿಹೋತ್ರಿ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಚಂದಿನ ಸರ್,
ನನ್ನ ಬ್ಲಾಗಿಗೆ ಸ್ವಾಗತ....ದೂರದಲ್ಲಿದ್ದು ನನ್ನ ಓಟದ ಲೇಖನವನ್ನು ನೋಡಿ ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು...ಹೀಗೆ ಬರುತ್ತಿರಿ...
ರೂಪ,
ಧನ್ಯವಾದಗಳು..ಹೀಗೆ ಬರುತ್ತಿರಿ...
ಒಪ್ಪಣ್ಣ,
ನನ್ನ ಬ್ಲಾಗಿಗೆ ಸ್ವಾಗತ. ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ನಿಮ್ಮ ಬ್ಲಾಗಿಗೆ ಹೋಗಿದ್ದೆ...ಹವ್ಯಕದಲ್ಲಿ ಬರೆದ ಬ್ಲಾಗು ಗೊತ್ತಾಗಲಿಲ್ಲ. ಮತ್ತೊಂದು ಬ್ಲಾಗಿನಲ್ಲಿ ಚೆನ್ನಾಗಿ ಬರೆದಿದ್ದೀರಿ..
ಸಲೀಂ,
ಓಟದ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನೀವು ಹೀಗೆ ಬಂದು ಕಾಮೆಂಟು ಹಾಕಿ ಹೋಗುತ್ತಿರೋ...ಅಥವ ನಿಮ್ಮದೊಂದು ಬ್ಲಾಗ್ ತೆರೆಯುತ್ತೀರೋ...
ನೀವು ಚೆನ್ನಾಗಿ ಫೋಟೋ ತೆಗೆಯುವುದ ಜೊತೆಗೆ ಬರೆಯುತ್ತೀರಿ...ಬೇಗ ಬ್ಲಾಗ್ ತೆರೆಯಿರಿ...
ಧನ್ಯವಾದಗಳು.
ಮ್ಯಾರಥಾನ ಅಂದ್ರೆ ಬರೀ ಓಡೋದಲ್ಲ ಅಲ್ಲಿ ಇನ್ನು ಏನೇನು ಮಾಡ್ತಾರೆ ಅನ್ನೊಡನ್ನ ಚೆನ್ನಾಗಿ ತಿಳಿಸಿದ್ದೀರಿ, ಪ್ರತೀ ಫೊಟೊ ವಿಭಿನ್ನ ಅದರ ಅಡಿ ಶೀರ್ಷಿಕೆಗಳು ಕೂಡ...
ಪ್ರಭು,
ಓಟಕ್ಕಿಂತ ಬೇರೆ ಆಟದ ಮಜ ಏನು ಅಂತ ನಾನು enjoy ಮಾಡಿದ್ದೆ. ನೀವು enjoy ಮಾಡಿದ್ದಕ್ಕೆ ಧನ್ಯವಾದಗಳು.
ಶಿವು ಅವರೇ,
ಸನ್ಫೀಸ್ಟ್ ಓಟದ ಚಿತ್ರ ಲೇಖನ ಬಹಳ ಸೊಗಸಾಗಿದೆ. ದಿನ ಪತ್ರಿಕೆಗಳ ಯೋಚನೆಗೆ ನಿಲುಕದ ಹಲವು ಹೊಳಹುಗಳು ನಿಮ್ಮ ಬರಹದಲ್ಲಿವೆ. ಯಾವುದೇ ದೃಷ್ಟಿಕೋನವಿಲ್ಲದೆ, ಚಿಂತನೆ ಇಲ್ಲದೆ, ಯಾಂತ್ರಿಕವಾಗಿ ಫೋಟೋ ಕ್ಲಿಕ್ಕಿಸುವ ಛಾಯಾಗ್ರಾಹಕರ ನಡುವೆ ನೀವು ಭಿನ್ನವಾಗಿ ಕಾಣುತ್ತೀರಿ.
ರಾಘವೇಂದ್ರ ಗಣಪತಿ,
ನನ್ನ ಬ್ಲಾಗಿಗೆ ಸ್ವಾಗತ. ಓಟದ ಲೇಖನ ಎಲ್ಲಾ ವಿಭಿನ್ನತೆಗಳನ್ನು ಬರವಣಿಗೆಯಲ್ಲಿ ಗುರುತಿಸಿದ್ದೀರಿ...ಧನ್ಯವಾದಗಳು. ಹೀಗೆ ಬರುತ್ತಿರಿ...
ಶಿವಶಂಕರ್ ವಿಷ್ಣು ಸರ್,
ಧನ್ಯವಾದಗಳು ಹೀಗೆ ಬರುತ್ತಿರಿ...
ಸ್ವಾರಸ್ಯಕರವಾಗಿದೆ ಸಾರ್! ಒಳ್ಳೇ ವರದಿ ನೀಡಿದ್ದೀರ! :-)
ಪ್ರದೀಪ್,
ಧನ್ಯವಾದಗಳು...ಹೀಗೆ ಬರುತ್ತಿರಿ...
shivu uncle,
your article is nice you have written really superb in this article i think u could have written still more funny....
but it is good u have pasted few pictures that no one can do it..
shivu uncle please write still more articles funny.......
i like this article very much it is nice
ಯಶೂ,
ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಲೇಖನಗಳೂ ಯುವ ವಯಸ್ಸಿನವರಿಗೆ ಮತ್ತು ಹಿರಿಯರಿಗೆ ಇಷ್ಟವಾಗಬಹುದು ಅಂದುಕೊಂಡಿದ್ದೆ. ಆದ್ರೆ ೯ನೇ ತರಗತಿ ಓದುತ್ತಿರುವ ನೀನು ಇಷ್ಟಪಡುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ. ಮತ್ತೆ ಇನ್ನಷ್ಟು ಇಂಥವನ್ನು ಬರೆಯಲು ನನಗೆ ಪ್ರೋತ್ಸಾಹ ನೀಡುತ್ತಿದ್ದೀಯಾ...
ಎಲ್ಲರಿಗೂ ಇಷ್ಟವಾಗುವಂತ ಲೇಖನವನ್ನು ಹೀಗೆ ಬರೆಯಲು ಪ್ರಯತ್ನಿಸುತ್ತೇನೆ....ನಿನ್ನ ಪ್ರೋತ್ಸಾಹ ಹೀಗೆ ಇರಲಿ...
ಧನ್ಯವಾದಗಳು..
ಭಲೇ ಶಿವಣ್ಣ...
ಬರಹ, ಫೋಟೊಗಳು ಎಂದಿನಂತೆ ಸೂಪರ್ರು. ನನಗೆ ತುಂಬಾ ಇಷ್ಟವಾದುವು. ಈ ಮೊದಲೇ ಓದಿದ್ರೂ ನಾನು ಪ್ರತಿಕ್ರಿಯೆ ತಡವಾಯಿತು..ಕ್ಷಮೆ ಇರಲಿ. ನಿಮ್ಮ ಹಾಸ್ಯಮಿಶ್ರಿತ ನೈಜ ಬರಹವನ್ನು ಓದೋದೇ ಖುಷಿ..ಶುಭವಾಗಲಿ.
-ನಿರೀಕ್ಚೆಯಲ್ಲಿ
ಧರಿತ್ರಿ
ಧರಿತ್ರಿ,
ನೀನು ಈ ಲೇಖನವನ್ನು ಮೊದಲೇ ಓದಿರುತ್ತೀಯ ಅಂತ ನನಗೆ ಗೊತ್ತು. ನಿನ್ನ ಕೆಲಸದ ಒತ್ತಡ ನನಗೆ ಗೊತ್ತು. ಆದರೂ ಬಿಡುವು ಮಾಡಿಕೊಂಡು ನಿನ್ನ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು..
Post a Comment