"ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು, ನಿನಗೆ ಮಾಡಿಸ್ತೀನಿ" ಮಣೆಯಂತ ಉದ್ದ ಹಲಗೆಯ ಮೇಲೆ ನನಗಿಂತ ದಪ್ಪನಾಗಿ ಪಕ್ಕ ಕುಳಿತಿದ್ದ ಹರೀಶ ಸೀಮೆಸುಣ್ಣವನ್ನು ಕಿತ್ತುಕೊಂಡಾಗ ಹೀಗೆ ಅಂದಿದ್ದೆ. ನನಗೆ ನೆನಪಿರುವಂತೆ ಆಗ ಎರಡನೇ ತರಗತಿಯಲ್ಲಿ ಓದುತ್ತಿದ್ದೆ. ನಮಗಾಗ ಕ್ಲಾಸ್ ಅನ್ನುವುದು ಬರದೇ ಒಂದು ಗ್ಲಾಸ್, ಎರಡು ಗ್ಲಾಸ್ ಅನ್ನುತ್ತಿದ್ದೆವು. ಪ್ರತಿಯೊಂದಕ್ಕೂ ಆಗ ಅಪ್ಪ ಬೇಕಾಗಿತ್ತು.
ಪಕ್ಕದ ಮನೆಯ ಆನಂದನಿಗೆ ಅವನಪ್ಪ ಮಿಣಮಿಣ ಮಿನುಗಿ, ಸೊಯ್ ಸೊಯ್.....ಅಂತ ಓಡುವ ಆಟದ ಕಾರನ್ನು ತಂದಾಗ ನಾನು ಅಪ್ಪನಿಗೆ ಅಂತದ್ದೇ ತಂದುಕೊಡು ಅಂತ ಯಾಕೆ ಹಟ ಹಿಡಿಯಲಿಲ್ಲವೋ ಗೊತ್ತಿಲ್ಲ. ಆದರೆ ಮುರಿದು ಆಟ್ಟದ ಮೇಲೆ ಬಿಸಾಡಿದ್ದ ಕೊಡೆಯ ಒಂದು ಕಂಬಿಯನ್ನು ತೆಗೆದುಕೊಂಡು, ಅದರಲ್ಲಿ ಒಂದು ಕಡೆ "ವಿ" ಆಕಾರದಲ್ಲಿ ಬಗ್ಗಿಸಿಕೊಡಲು ಹಟ ಮಾಡುತ್ತಿದ್ದೆ. ಆಷ್ಟು ಮಾಡಿಕೊಟ್ಟರೆ, ಎಲ್ಲೋ ಹೊಂಚಿಕೊಂಡಿದ್ದ ಕುಕ್ಕರಿನ ಗ್ಯಾಸ್ಕೆಟ್ ರಬ್ಬರನ್ನು ವಿ ಅಕಾರದ ನಡುವೆ ಚಕ್ರ ಮಾಡಿಕೊಂಡು ರಸ್ತೆಯಲ್ಲಿ ಓಡಿಸಿಕೊಂಡು ಓಡುತ್ತಿದ್ದೆ.
ಯಾಕೋ ಆಗ ಅಪ್ಪನಿಗೆ ಕತೆ ಹೇಳು ಅಂತ ಗಂಟು ಬೀಳಲಿಲ್ಲ. ಆಗ ಮನೆಯಲ್ಲಿ ವಟ ವಟ ಅನ್ನುತ್ತಿದ್ದ ಅಜ್ಜಿಗೆ ದುಂಬಾಲು ಬೀಳುತ್ತಿದ್ದೆ. ಬೆಳೆದು ದೊಡ್ಡವನಾದ ಮೇಲೆ ಅದೇ ಅಜ್ಜಿಯನ್ನು ಕಾಡಿಸಿದ್ದು ಬೇರೆ ವಿಷಯ. ಐದು-ಆರನೇ ತರಗತಿಗೆ ಬರುತ್ತಿದ್ದಂತೆ ಯಾಕೋ ಅಪ್ಪನ ಮಡಿಲು ಬೇಕೆನಿಸುತ್ತಿರಲಿಲ್ಲ. ಆತನ ಬಿಡುವಿಲ್ಲದ ದುಡಿತ ಮುಖದಲ್ಲಿ ಕಾಣತೊಡಗಿದಾಗ ಆತನ ಮಡಿಲಿಗಿಂತ ಬೇರೇನೋ ಕಾಣತೊಡಗಿತ್ತು. ನಂತರ ನನಗೆ ಹತ್ತಿರವಾದವರು ಅಜ್ಜಿ, ಅಮ್ಮ, ಅಕ್ಕ ಕೊನೆಯಲ್ಲಿ ತಂಗಿ.
ಪಕ್ಕದ ಮನೆಯ ಆನಂದನಿಗೆ ಅವನಪ್ಪ ಮಿಣಮಿಣ ಮಿನುಗಿ, ಸೊಯ್ ಸೊಯ್.....ಅಂತ ಓಡುವ ಆಟದ ಕಾರನ್ನು ತಂದಾಗ ನಾನು ಅಪ್ಪನಿಗೆ ಅಂತದ್ದೇ ತಂದುಕೊಡು ಅಂತ ಯಾಕೆ ಹಟ ಹಿಡಿಯಲಿಲ್ಲವೋ ಗೊತ್ತಿಲ್ಲ. ಆದರೆ ಮುರಿದು ಆಟ್ಟದ ಮೇಲೆ ಬಿಸಾಡಿದ್ದ ಕೊಡೆಯ ಒಂದು ಕಂಬಿಯನ್ನು ತೆಗೆದುಕೊಂಡು, ಅದರಲ್ಲಿ ಒಂದು ಕಡೆ "ವಿ" ಆಕಾರದಲ್ಲಿ ಬಗ್ಗಿಸಿಕೊಡಲು ಹಟ ಮಾಡುತ್ತಿದ್ದೆ. ಆಷ್ಟು ಮಾಡಿಕೊಟ್ಟರೆ, ಎಲ್ಲೋ ಹೊಂಚಿಕೊಂಡಿದ್ದ ಕುಕ್ಕರಿನ ಗ್ಯಾಸ್ಕೆಟ್ ರಬ್ಬರನ್ನು ವಿ ಅಕಾರದ ನಡುವೆ ಚಕ್ರ ಮಾಡಿಕೊಂಡು ರಸ್ತೆಯಲ್ಲಿ ಓಡಿಸಿಕೊಂಡು ಓಡುತ್ತಿದ್ದೆ.
ಯಾಕೋ ಆಗ ಅಪ್ಪನಿಗೆ ಕತೆ ಹೇಳು ಅಂತ ಗಂಟು ಬೀಳಲಿಲ್ಲ. ಆಗ ಮನೆಯಲ್ಲಿ ವಟ ವಟ ಅನ್ನುತ್ತಿದ್ದ ಅಜ್ಜಿಗೆ ದುಂಬಾಲು ಬೀಳುತ್ತಿದ್ದೆ. ಬೆಳೆದು ದೊಡ್ಡವನಾದ ಮೇಲೆ ಅದೇ ಅಜ್ಜಿಯನ್ನು ಕಾಡಿಸಿದ್ದು ಬೇರೆ ವಿಷಯ. ಐದು-ಆರನೇ ತರಗತಿಗೆ ಬರುತ್ತಿದ್ದಂತೆ ಯಾಕೋ ಅಪ್ಪನ ಮಡಿಲು ಬೇಕೆನಿಸುತ್ತಿರಲಿಲ್ಲ. ಆತನ ಬಿಡುವಿಲ್ಲದ ದುಡಿತ ಮುಖದಲ್ಲಿ ಕಾಣತೊಡಗಿದಾಗ ಆತನ ಮಡಿಲಿಗಿಂತ ಬೇರೇನೋ ಕಾಣತೊಡಗಿತ್ತು. ನಂತರ ನನಗೆ ಹತ್ತಿರವಾದವರು ಅಜ್ಜಿ, ಅಮ್ಮ, ಅಕ್ಕ ಕೊನೆಯಲ್ಲಿ ತಂಗಿ.
ಒಮ್ಮೆ ಸ್ಕೂಲಿನಲ್ಲಿ ನಾನು ಸರಿಯಾಗಿ ಓದುತ್ತಿಲ್ಲವೆಂದು ಅಪ್ಪನನ್ನು ಬರಹೇಳಿದ್ದರು. ಜೊತೆಯಲ್ಲಿ ನಾನು ಹೋದೆ. ಆಟ ಜಾಸ್ತಿಯಾಗಿ ಸರಿಯಾಗಿ ಓದುದೇ ಅಂಕ ಕಡಿಮೆ ತೆಗೆದಿದ್ದಾನೆಂದು ಮೇಷ್ಟ್ರು ಹೇಳಿದಾಗ ಅಲ್ಲಿ ಬೇರೇನು ಹೇಳದೆ ಮನೆಗೆ ಕರೆದುಕೊಂಡು ಬಂದಿದ್ದರು.
ಬೆಂಕಿಪೊಟ್ಟಣ, ಸಿಗರೇಟು ಪ್ಯಾಕಿಗೆ ರಬ್ಬರ್ ಚಕ್ರಗಳನ್ನು ಹಾಕಿ ಲಾರಿ, ಬಸ್ಸು ಮಾಡುವುದು, ರೈಲುಗಳನ್ನು ಮಾಡುವುದು ನಂತರ ಅದಕ್ಕೊಂದು ದಾರಕಟ್ಟಿ ಮನೆತುಂಬಾ ಎಳೆದಾಡುವುದು ನನಗಾಗ ತುಂಬಾ ಇಷ್ಟದ ವಿಚಾರವಾಗಿತ್ತು. ಅದಕ್ಕಾಗಿ ಗ್ಯಾಸ್ಕೆಟ್ ರಬ್ಬರ್ ಚಕ್ರ ಓಡಿಸುತ್ತಾ ರಸ್ತೆಗಳಲ್ಲಿ ಸಿಗರೇಟು ಪ್ಯಾಕ್, ಮತ್ತು ಬೆಂಕಿಪಟ್ಟಣ, ಕ್ಲಿನಿಕ್‌ಗಳಲ್ಲಿ ಇಂಜೆಕ್ಷನ್ ಕೊಟ್ಟ ನಂತರ ಬಿಸಾಡಿದ ಸಣ್ಣಬಾಟಲಿಗೆ ಹಾಕಿರುತ್ತಿದ್ದ ರಬ್ಬರ್ ಮುಚ್ಚಳವನ್ನು[ಅದರಿಂದ ಚಕ್ರಗಳನ್ನು ಮಾಡುತ್ತಿದ್ದೆ] ಆರಿಸುತ್ತಿದ್ದೆ. ಅಪ್ಪ ಅದನ್ನು ನೋಡಿಬಿಟ್ಟರು. ನಾನು ಮನೆಗೆ ಬರುತ್ತಿದ್ದಂತೆ ನಾನು ಮನೆಯಲ್ಲಿ ಮಾಡಿಟ್ಟಿದ್ದ ಲಾರಿ, ಬಸ್ಸು, ರೈಲು ಇತ್ಯಾದಿಗಳನ್ನು ಹರಿದೆಸೆದು, ಆವರೇ ಮಾಡಿಕೊಟ್ಟಿದ್ದ ಕೊಡೆಕಂಬಿಯನ್ನು ಕಿತ್ತುಕೊಂಡು ಗ್ಯಾಸ್ಕೆಟ್ ರಬ್ಬರನ್ನು ತುಂಡು ತುಂಡು ಮಾಡಿದ್ದರು. ಅಂಕ ಕಡಿಮೆ ಬಂದಿದ್ದ ಕಾರಣವೂ ಸೇರಿ ಚೆನ್ನಾಗಿ ಬಡಿದ್ದಿದ್ದರು.
ಬೆಂಕಿಪೊಟ್ಟಣ, ಸಿಗರೇಟು ಪ್ಯಾಕಿಗೆ ರಬ್ಬರ್ ಚಕ್ರಗಳನ್ನು ಹಾಕಿ ಲಾರಿ, ಬಸ್ಸು ಮಾಡುವುದು, ರೈಲುಗಳನ್ನು ಮಾಡುವುದು ನಂತರ ಅದಕ್ಕೊಂದು ದಾರಕಟ್ಟಿ ಮನೆತುಂಬಾ ಎಳೆದಾಡುವುದು ನನಗಾಗ ತುಂಬಾ ಇಷ್ಟದ ವಿಚಾರವಾಗಿತ್ತು. ಅದಕ್ಕಾಗಿ ಗ್ಯಾಸ್ಕೆಟ್ ರಬ್ಬರ್ ಚಕ್ರ ಓಡಿಸುತ್ತಾ ರಸ್ತೆಗಳಲ್ಲಿ ಸಿಗರೇಟು ಪ್ಯಾಕ್, ಮತ್ತು ಬೆಂಕಿಪಟ್ಟಣ, ಕ್ಲಿನಿಕ್‌ಗಳಲ್ಲಿ ಇಂಜೆಕ್ಷನ್ ಕೊಟ್ಟ ನಂತರ ಬಿಸಾಡಿದ ಸಣ್ಣಬಾಟಲಿಗೆ ಹಾಕಿರುತ್ತಿದ್ದ ರಬ್ಬರ್ ಮುಚ್ಚಳವನ್ನು[ಅದರಿಂದ ಚಕ್ರಗಳನ್ನು ಮಾಡುತ್ತಿದ್ದೆ] ಆರಿಸುತ್ತಿದ್ದೆ. ಅಪ್ಪ ಅದನ್ನು ನೋಡಿಬಿಟ್ಟರು. ನಾನು ಮನೆಗೆ ಬರುತ್ತಿದ್ದಂತೆ ನಾನು ಮನೆಯಲ್ಲಿ ಮಾಡಿಟ್ಟಿದ್ದ ಲಾರಿ, ಬಸ್ಸು, ರೈಲು ಇತ್ಯಾದಿಗಳನ್ನು ಹರಿದೆಸೆದು, ಆವರೇ ಮಾಡಿಕೊಟ್ಟಿದ್ದ ಕೊಡೆಕಂಬಿಯನ್ನು ಕಿತ್ತುಕೊಂಡು ಗ್ಯಾಸ್ಕೆಟ್ ರಬ್ಬರನ್ನು ತುಂಡು ತುಂಡು ಮಾಡಿದ್ದರು. ಅಂಕ ಕಡಿಮೆ ಬಂದಿದ್ದ ಕಾರಣವೂ ಸೇರಿ ಚೆನ್ನಾಗಿ ಬಡಿದ್ದಿದ್ದರು.
ಏಟು ಬಿದ್ದಿದ್ದಕ್ಕಿಂತ ನಾನು ಮಾಡಿದ್ದೆಲ್ಲಾ ಹೋಯ್ತಲ್ಲ ಅಂತ ಕೆಲವು ದಿನ ಮಂಕಾಗಿಬಿಟ್ಟಿದ್ದೆ. ಕೊನೆಗೊಂದು ದಿನ ಅಪ್ಪನೇ ಹೋಗಿ ನನಗಿಷ್ಟವಾದ ಸಿಗರೇಟುಪ್ಯಾಕ್‌ಗಳು, ಬೆಂಕಿಪೊಟ್ಟಣಗಳು, ಇಂಜೆಕ್ಷನ್ ರಬ್ಬರುಗಳು, ಇವುಗಳನ್ನೆಲ್ಲಾ ಕತ್ತರಿಸಿ ಅಂಟಿಸಲು ಬೇಕಾಗುವ ಕತ್ತರಿ, ಬ್ಲೇಡು, ಗಮ್ ಇತ್ಯಾದಿಗಳನ್ನು ತಂದುಕೊಟ್ಟಿದರು. ಮತ್ತೆ ಬೋನಸ್ ಆಗಿ ಮತ್ತೊಂದು ಇಷ್ಟದ ವಸ್ತು ಥರ್ಮಕೋಲ್[ಅದರಿಂದ ಇನ್ನಷ್ಟು ಕೆಲವು ಕುಸುರಿ ಕೆಲಸಗಳನ್ನು ಮಾಡುತ್ತಿದ್ದೆ.]ಕೂಡ ತಂದುಕೊಟ್ಟಾಗ ಅಂದು ನನಗೆ ಆಕಾಶವೇ ಕೈಗೆಟುಕಿದಂತಾಗಿತ್ತು.
ಆ ನಂತರ ಒಮ್ಮೆ ಕದ್ದು ಮುಚ್ಚಿ ಸೈಕಲ್ ಕಲಿಯುವಾಗ ಸಿಕ್ಕಿಬಿದ್ದು ಏಟು ತಿಂದಿದ್ದೇ ಕೊನೆ. ನಂತರ ಅವರು ನನಗೆ ಹೊಡೆದಿದ್ದು ನೆನಪಿಲ್ಲ.
ಅಪ್ಪ ನಿವೃತ್ತಿಯಾದ ಮೇಲೆ ಗೆಳೆಯನಂತೆ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಲು ಇಷ್ಟಪಡುತ್ತಿದ್ದರು.. ಆದರೆ ಆಗ ಯುವ ವಯಸ್ಸಿನ ಅಮಲು ಹೆಚ್ಚಿದ್ದರಿಂದ ಅವರ ಮಾತು ನನ್ನ ಕಿವಿಗೆ ಕೇಳುತ್ತಿರಲಿಲ್ಲ. ನಾನು ಸ್ವಲ್ಪ ದುಡಿಯುವಂತಾಗಿದ್ದು ಮತ್ತು ಅವರಿಗೆ ವಯಸ್ಸಾಗಿದ್ದು ಎರಡು ಸೇರಿ ಅವರನ್ನು ನಿರ್ಲಕ್ಷ ಮಾಡುವಂತ ಆಹಂ ಬಂದುಬಿಟ್ಟಿತ್ತು. ಆವರ ವಯಸ್ಸು ೬೫ ದಾಟುತ್ತಿದ್ದಂತೆ ಕಾಯಿಲೆಗಳು ಅವರಿಸಿಕೊಂಡುಬಿಟ್ಟಿದ್ದವು. ಆ ಸಮಯದಲ್ಲಿ ತಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಒಬ್ಬ ಗೆಳೆಯ ಬೇಕಿತ್ತೋನೋ...ಮಗುವಿನಂತೆ ಮಾತಾಡುತ್ತಿದ್ದರು. ಊರಿನ ವಿಚಾರವಾಗಿ, ಹೊಲ ಗದ್ದೆ, ಮನೆಯ ವಿಚಾರವಾಗಿ ಅಲ್ಲಿ ತಾವು ಮಾಡಿಸಿದ ಕೆಲಸವನ್ನು ಹೇಳಿಕೊಂಡು ನಾನು ಮೆಚ್ಚಿದರೇ ಅವರಿಗೆ ಸಂತೋಷವಾಗುತ್ತಿತ್ತು. ಅವರಿಗೆ ಪ್ಯಾರಲೈಸ್ ಸ್ಟ್ರೋಕ್ ತಗುಲಿದಾಗ ಮಾತನಾಡಲಾಗದೇ ನನ್ನ ಕೈಯಿಡಿದು ಅತ್ತುಬಿಟ್ಟಿದ್ದರು. ಅಂತ ಅಪ್ಪ ಈಗ ಇಲ್ಲ.
ಆ ನಂತರ ಒಮ್ಮೆ ಕದ್ದು ಮುಚ್ಚಿ ಸೈಕಲ್ ಕಲಿಯುವಾಗ ಸಿಕ್ಕಿಬಿದ್ದು ಏಟು ತಿಂದಿದ್ದೇ ಕೊನೆ. ನಂತರ ಅವರು ನನಗೆ ಹೊಡೆದಿದ್ದು ನೆನಪಿಲ್ಲ.
ಅಪ್ಪ ನಿವೃತ್ತಿಯಾದ ಮೇಲೆ ಗೆಳೆಯನಂತೆ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಲು ಇಷ್ಟಪಡುತ್ತಿದ್ದರು.. ಆದರೆ ಆಗ ಯುವ ವಯಸ್ಸಿನ ಅಮಲು ಹೆಚ್ಚಿದ್ದರಿಂದ ಅವರ ಮಾತು ನನ್ನ ಕಿವಿಗೆ ಕೇಳುತ್ತಿರಲಿಲ್ಲ. ನಾನು ಸ್ವಲ್ಪ ದುಡಿಯುವಂತಾಗಿದ್ದು ಮತ್ತು ಅವರಿಗೆ ವಯಸ್ಸಾಗಿದ್ದು ಎರಡು ಸೇರಿ ಅವರನ್ನು ನಿರ್ಲಕ್ಷ ಮಾಡುವಂತ ಆಹಂ ಬಂದುಬಿಟ್ಟಿತ್ತು. ಆವರ ವಯಸ್ಸು ೬೫ ದಾಟುತ್ತಿದ್ದಂತೆ ಕಾಯಿಲೆಗಳು ಅವರಿಸಿಕೊಂಡುಬಿಟ್ಟಿದ್ದವು. ಆ ಸಮಯದಲ್ಲಿ ತಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಒಬ್ಬ ಗೆಳೆಯ ಬೇಕಿತ್ತೋನೋ...ಮಗುವಿನಂತೆ ಮಾತಾಡುತ್ತಿದ್ದರು. ಊರಿನ ವಿಚಾರವಾಗಿ, ಹೊಲ ಗದ್ದೆ, ಮನೆಯ ವಿಚಾರವಾಗಿ ಅಲ್ಲಿ ತಾವು ಮಾಡಿಸಿದ ಕೆಲಸವನ್ನು ಹೇಳಿಕೊಂಡು ನಾನು ಮೆಚ್ಚಿದರೇ ಅವರಿಗೆ ಸಂತೋಷವಾಗುತ್ತಿತ್ತು. ಅವರಿಗೆ ಪ್ಯಾರಲೈಸ್ ಸ್ಟ್ರೋಕ್ ತಗುಲಿದಾಗ ಮಾತನಾಡಲಾಗದೇ ನನ್ನ ಕೈಯಿಡಿದು ಅತ್ತುಬಿಟ್ಟಿದ್ದರು. ಅಂತ ಅಪ್ಪ ಈಗ ಇಲ್ಲ.
"ಬಲಭಾಗದಲ್ಲಿ ನಾನು, ನನ್ನ ಹಿಂದೆ ನನ್ನಕ್ಕ, ನಂತರ ಆವಳ ಗೆಳತಿಯರು ಇರುವ ಈ ಕಪ್ಪು-ಬಿಳುಪು ಫೋಟೋವನ್ನು ಅಪ್ಪ ಸ್ಟುಡಿಯೋಗೆ ಕರೆದುಕೊಂಡು ಹೋಗಿ ತೆಗೆಸಿದ್ದರು. ಅಮ್ಮ ಜೋಪಾನವಾಗಿ ಇಟ್ಟಿದ್ದ ಈ ಫೋಟೋವನ್ನು ಈಗ ನಿಮಗೆ ತೋರಿಸಬೇಕಿನಿಸಿತು."
"ಜೂನ್ ೧೯ ಅಪ್ಪಂದಿರ ದಿನ" ನನ್ನ ಅಪ್ಪನ ಜೊತೆಗೆ ಎಲ್ಲಾ ಅಪ್ಪಂದಿರನ್ನು ನೆನಸಿಕೊಳ್ಳುತ್ತಾ.....ರಸ್ತೆಯಲ್ಲಿ, ಜಾತ್ರೆಯಲ್ಲಿ, ಉತ್ಸವಗಳಲ್ಲಿ, ಕೆಲವು ಅಪ್ಪ-ಮಕ್ಕಳ ನಿಶ್ಕಲ್ಮಶ ಪ್ರೀತಿಯ ಮಧುರ ಕ್ಷಣಗಳನ್ನು ಕ್ಲಿಕ್ಕಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ...
ಮತ್ತು ಆ ಫೋಟೋಗಳಿಗೆ ಮಾತಿನ ಅವಶ್ಯಕತೆ ಇಲ್ಲವೆನಿಸಿ ಯಾವುದೇ ವಿವರಣೆಯನ್ನು ಕೊಡಲೆತ್ನಿಸಿಲ್ಲ. ನಿಮಗನ್ನಿಸಿದ ವಿವರಣೆಯನ್ನು ನೀವು ಪ್ರತಿಕ್ರಿಯಿಸಬಹುದು....
ನೀವು ನೋಡಿ. ನೋಡದಿದ್ದಲ್ಲಿ "ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ...."
ಮತ್ತು ಆ ಫೋಟೋಗಳಿಗೆ ಮಾತಿನ ಅವಶ್ಯಕತೆ ಇಲ್ಲವೆನಿಸಿ ಯಾವುದೇ ವಿವರಣೆಯನ್ನು ಕೊಡಲೆತ್ನಿಸಿಲ್ಲ. ನಿಮಗನ್ನಿಸಿದ ವಿವರಣೆಯನ್ನು ನೀವು ಪ್ರತಿಕ್ರಿಯಿಸಬಹುದು....
ನೀವು ನೋಡಿ. ನೋಡದಿದ್ದಲ್ಲಿ "ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ...."
ಚಿತ್ರ-ಲೇಖನ.
ಶಿವು.ಕೆ. ARPS.
87 comments:
ಶಿವು,
ಅಪ್ಪಂದಿರಿಗೂ ಒಂದು ದಿನವಾ?
ಬಾಲ್ಯದಲ್ಲಿ ರಕ್ಷಕ, ಬೆಳೆದಾಗ ಸ್ನೇಹಿತ ಮತ್ತು ನಮಗೆ ಜವಾಬ್ದಾರಿ ಬರುವಾಗ ಗುರುವಾಗುವ ಅಪ್ಪ ಪ್ರತಿಯೊಬ್ಬರಿಗೂ ಮೊದಲ ರೋಲ್ ಮಾಡೆಲ್.
ನೀವು ಬರೆದಂತೆ ಈ ಅದ್ಭುತ ಚಿತ್ರಗಳಿಗೆ ವಿವರಣೆ ನೋಡುಗರ ಮನಸ್ಸೇ ಕೊಟ್ಟುಕೊಳ್ಳುತ್ತೆ ತಮ್ಮ ಬಾಲ್ಯಕ್ಕೆ ಜೀಕುತ್ತ.
ಅದ್ಭುತವಾದ ತಂದೆ ಮಕ್ಕಳ ಚಿತ್ರಗಳು.
ಬರಿ ಚಂದ ಅಂದರೆ ಸಾಕೆ?
ನಿಮ್ಮ ಬಾಲ್ಯದ ಅನುಭವ ಓದಿ ನನ್ನ ಬಾಲ್ಯ ನೆನಪಾಯಿತು.
ಶಿವೂ ಅವರೇ,
ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲಾ! (ಶುಭಮಂಗಳ ಚಿತ್ರದ್ದು). ಅನ್ನುವ ಹಾಗೆ ನಿಮ್ಮ ಬಾಲ್ಯವನ್ನು ನೆನಪಿಸಿಕೊಂಡು, ನಮಗೂ ಸಹ ಬಾಲ್ಯದ ಆಟಗಳು ನೆನೆಪಾಗುವಂತೆ ಈ ಲೇಖನವನ್ನು ಬರೆದಿದ್ದೀರಿ.
ಚಂದದ ಫೋಟೋಗಳು ಮತ್ತು ಲೇಖನ, ಮನಸ್ಸಿಗೆ ಮುದ ನೀಡಿತು. ನಾಳೆ ತಪ್ಪದೆ ಅಪ್ಪನಿಗೆ ವಿಶ್ ಮಾಡಬೇಕು!
ನೆನಪಿಸಿದ್ದಕ್ಕೆ ಧನ್ಯವಾದಗಳು!!! ಅಂದಹಾಗೆ ಈ ಫೋಟೋಗಳಲ್ಲಿ ನೀವೂ ಇದ್ದೀರಾ?
ಬಾಲ್ಯದಲ್ಲಿ ನಿಮ್ಮ ತಂದೆಯೊಂದಿಗಿನ ಮಧುರ ಕ್ಷಣಗಳನ್ನು ನೆನೆಯುತ್ತಾ ಬರೆದ ನಿಮ್ಮೀ ಲೇಖನ ಓದಿ ನನ್ನ ಬಾಲಯದ ದಿನಗಳು ಕಣ್ಣ್ ಮುಂದೆ ಬಂತು.
ನಿಮ್ಮ ಮತ್ತು ನಿಮ್ಮ ತಂದೆಯವರ ಫೋಟೋ ಯಾಕಿಲ್ಲ?
ಅಮ್ದ ಹಾಗೆ ಇಲ್ಲಿ USನಲ್ಲಿ ಜೂನ್ ಮೂರನೆ ಭಾನುವಾರ ’ಅಪ್ಪನ ದಿನ’! ಮಲ್ಲಿಕಾರ್ಜುನ ಅವರ ಕಮೆಂಟ್ ಓದಿ ನನಗೆ ಇದು ನೆನಪಾಯ್ತು...
HOW A SON/DAUGHTER THINKS OF HIS/HER DADDY AT DIFFERENT AGES:
At 4 Years
My daddy is great.
At 6 Years
My daddy knows everybody.
At 10 Years
My daddy is good but is short tempered
At 12 Years
My daddy was very nice to me when I was young.
At 14 Years
My daddy is getting fastidious.
At 16 Years
My daddy is not in line with the current times.
At 18 Years
My daddy is becoming increasingly cranky.
At 20 Years
Oh! Its becoming difficult to tolerate daddy. Wonder how Mother puts up with him.
At 25 Years
Daddy is objecting to everything.
At 30 Years
It's becoming difficult to manage my son. I was so scared of my father when I was young.
At 40 Years
Daddy brought me up with so much discipline.. Even I should do the same.
At 45 Years
I am baffled as to how my daddy brought us up.
At 50 Years
My daddy faced so many hardships to bring us up. I am unable to manage a single son.
At 55 Years
My daddy was so far sighted
and planned so many things for us. He is one of his kind and unique.
At 60 Years
My daddy is great.
Thus, it took 56 years to complete the cycle and come back to the 1st. stage. Realize the true value of your parents before its too late
ಶಿವು,
ಅಪ್ಪನ ದಿನ ಅಮ್ಮನ ದಿನ ಯಾವುದಾದರೂ ಇರಲಿ. ನಿಮ್ಮ ಫೋಟೋಗಳು ತುಮ್ಭ ಚಂದ. ತಂದೆಯಂದಿರ ಮತ್ತು ಮಕ್ಕಳ ಮುಖಗಳ ಭಾವಗಳು ನೂರಾರು ಕವಿತೆ ಹಾಡುತ್ತವೆ.
- ಕೇಶವ
ಶಿವು ಸರ್...
ಜೀವನದಲ್ಲಿ ಅಪ್ಪನನ್ನೇ ನೋಡದ ನನಗೆ ಗೊತ್ತು ...
ಅಪ್ಪ ಮಹತ್ವ ಸ್ಥಾನ ಏನೆಂಬುದು...
ಒಬ್ಬ ಮಗನಿಗೆ ಅಪ್ಪನಾಗಿದ್ದರೂ..
ಈಗಲೂ..
ಈ ವಿಷಯ ನನ್ನನ್ನು ಭಾವುಕನನ್ನಾಗಿ ಮಾಡಿ ಬಿಡುತ್ತದೆ...
ಮರೆಯಲಾಗ..
ಕಾಣದ ಅಪ್ಪನನ್ನು..
ಕ್ಷಣಕ್ಷಣಕ್ಕೂ ಜ್ಞಾಪಿಸಿಕೊಳ್ಳುತ್ತೇನೆ....
ಹೆಚ್ಚಿಗೆ ಹೇಳಲರೆ...
ಕೊನೆ ಪಕ್ಷ ನೀವು ಅವರ ಸಂಗಡ
ಕೆಲವು ಕ್ಷಣಗಳನ್ನು ಕಳೆದಿದ್ದೀರಲ್ಲ...
ನೀವೇ ಧನ್ಯರು...
ಮಲ್ಲಿಕಾರ್ಜುನ್ ,
ಪ್ರತಿವರ್ಷ ಜೂನ್ ಮೂರನೆ ಭಾನುವಾರ ಅಪ್ಪಂದಿರ ದಿನವೆಂದು ಅಮೇರಿಕಾದಲ್ಲಿ ಘೋಷಣೆಯಾದರೂ, ಅಧಿಕೃತದಿನ ಜೂನ್ ೧೯.
ಅಮ್ಮನನ್ನು ಕಳೆದುಕೊಂಡ ನಂತರ ಅಪ್ಪನಲ್ಲೇ..ಸರ್ವಸ್ವವನ್ನು ಕಂಡುಕೊಂಡ ಹುಡುಗಿ Sonora Smart. ತನ್ನ ತಂದೆ Henry Jackson Smartನಲ್ಲಿ ದೈರ್ಯ, ನಿಸ್ವಾರ್ಥ, ಪ್ರೀತಿಯನ್ನು ಕಂಡುಕೊಂಡಳು. ನಂತರ ಅವಳಿಂದ ಮೊದಲ ಅಪ್ಪಂದಿರ ದಿನ ಆಚರಣೆಯಾಗಿ ಇಂದಿಗೂ ಚಾಲ್ತಿಯಲ್ಲಿದೆ.. ಸಾಧ್ಯವಾದಷ್ಟು ಕಡಿಮೆ ಬರೆದು ಚಿತ್ರಗಳ ಮೂಲಕ ಈ ಚಿತ್ರ-ಲೇಖನವನ್ನು ಬ್ಲಾಗಿಸಿದ್ದೇನೆ.
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಶಿವೂ ಅಪ್ಪಂದಿರಿಗೂ ಒಂದು ದಿನ ಅಂತ ಅದ ಆದ್ರೇನು ಅಪ್ಪಂದಿರು ರಿಲಾಕ್ಸ ಆಗೋ ಹಂಗಿಲ್ಲ..ದುಡಿತ ಬೆನ್ನಿಗೆ ಅಂಟಿಸಿಕೊಂಡು
ಬಿಎಮ್ ಟಿಸಿ ಪಯಣಿಗ ನಾನೂ ಒಬ್ಬ ಅಪ್ಪ ಖರೆ..ವಿಶ್ ಮಾಡು ಅಂದ್ರ ಮಗಳು ಮಾರಿ ತಿರುವಿ ಹೋಗಬಹುದೆಂಬ ಹೆದರಿಕೆ......!
ಶಿವೂ
ನೀವು ಅಪ್ಪನನ್ನು ನೆನೆಸಿಕೊಂಡ ಪರಿ ಚೆನ್ನಾಗಿದೆ. ಅದು ಬಹುಶ್ಃ ಪ್ರತಿ ಮಗುವಿನ ಭಾವನೆಯೂ ಹೌದು.ಬದುಕಿರುವಾಗ ಅಥವಾ ಸಮೀಪವಿಲ್ಲದಿರುವಾ ಆ ವಸ್ತು ಅಥವಾ ವ್ಯಕ್ತಿಯ ಬೆಲೆ ನಮಗಾಗುತ್ತದೆ.ನೀವು ಆಡುತ್ತಿದ್ದ ಬಾಲ್ಯದ ಆಟಗಳು ಪ್ರತಿಯೊಬ್ಬ ಗಂಡುಮಗುವಿನ ಮೆಚ್ಚಿನ ಆಟಗಳೆನಿಸುತ್ತವೆ. ಏಕೆಂದರೆ ನನ್ನ ಮಗನೂ ಇದೇ ರೀತಿ ಚಕ್ರದಂತಿರುವುದನ್ನೆಲ್ಲಾ ಗುಡ್ಡೇ ಹಾಕಿ ತನ್ನ ಕಲ್ಪನೆ ಹರಿಯಬಿಡುತ್ತಿದ್ದ.
ಚಿತ್ರಗಳು ಬಲು ಸುಂದರವಾಗಿವೆ.
ರೂಪಶ್ರೀಯವರು ಕೊಟ್ಟಿರುವ ತಂದೆ ಮಕ್ಕಳ ಸಂಬಂಧಮಾಲೆ ಆಯಾ ವಯಸ್ಸಿನಲ್ಲಿ ಬದಲಾದ ಬಗೆಯನ್ನು ಚೆನ್ನಾಗಿ ಹೇಳುತ್ತದೆ.
ಪ್ರಕಾಶ್ ಅವರು ತಮ್ಮ ಅಗಲಿದ ತಂದೆಯನ್ನು ನೆನಸಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ ಅಪ್ಪ ಇದ್ದವರೂ ಪ್ರಕಾಶ್ ಅವರಷ್ಟು ತಮ್ಮ ತಂದೆಯನ್ನು ಸ್ಮರಿಸುವುದಿಲ್ಲ/ಗಮನಿಸುವುದಿಲ್ಲವೇನೋ?
SSK ಸರ್,
ಶುಭಮಂಗಳ ಚಿತ್ರದ ಹಾಡು ನನಗೂ ತುಂಬಾ ಇಷ್ಟ. ಇಂದಿನ ಎಲ್ಲಾ ಮಕ್ಕಳಿಗೂ ಅಪ್ಪ ಗುರಿ ತೋರುವ ಗುರು ಆಗುವುದು ಕಡಿಮೆ. ಗುರುವಿನಂತ ಅಪ್ಪನನ್ನು ಪಡೆದ ಮಗು ಅದೃಷ್ಟವಂತನೇ ಸರಿ....
ನೀವು ನಿಮ್ಮ ತಂದೆಗೆ ಇವತ್ತು ವಿಷ್ ಮಾಡಿದ್ರಾ...?
ಮತ್ತೆ ಮೊದಲಿಗೆ ಹಾಕಿರುವ ಫೋಟೋಗಳಲ್ಲಿ ನಾನಿಲ್ಲ....ಅದಕ್ಕಾಗಿ ಬಾಲ್ಯದಲ್ಲಿ ಅಪ್ಪ ತೆಗೆಸಿದ್ದ ನನ್ನ ಫೋಟೊವನ್ನು ಈಗ ಮತ್ತೆ ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿ..
ನನ್ನ ಆನುಭವದ ಬರಹದಿಂದ ನಿಮ್ಮ ಬಾಲ್ಯದಲ್ಲಿ ಜೀಕಿದ್ದಕ್ಕೆ, ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ರೂಪ,
ಅಪ್ಪಂದಿರ ದಿನದ ಲೇಖನದಿಂದಾಗಿ ನಿಮ್ಮ ಬಾಲ್ಯದ ನೆನಪುಗಳು ಮರುಕಳಿಸಿದ್ದಕ್ಕೆ ನಾನು ಬರೆದಿದ್ದು ಸಾರ್ಥಕವೆನಿಸುತ್ತೆ....
ಇಲ್ಲಿ ನನ್ನ ತಂದೆಯ ಫೋಟೋವನ್ನು ಹಾಕಿಲ್ಲ...ಆದರೆ ಅವರು ಬಾಲ್ಯದಲ್ಲಿ ಅಪ್ಪ ತೆಗೆಸಿದ ನನ್ನ ಫೋಟೋವನ್ನು ಮತ್ತೆ ಬ್ಲಾಗಿನಲ್ಲಿ ಹಾಕಿದ್ದೇನೆ...ನೋಡಿ...
ಮತ್ತೆ ಮಗುವಾಗಿದ್ದಾಗಿನಿಂದ ಮುದುಕರಾಗುವವರೆಗೆ ಅಪ್ಪನ ಬಗೆಗೆ ಮಗನಲ್ಲಿ ಬದಲಾವಣೆಯಾಗುವ ಭಾವನೆಗಳನ್ನು ಬರೆದಿದ್ದೀರಿ....ತುಂಬಾ ಖುಷಿಯಾಯಿತು...ಇದನ್ನು ಮೊದಲೆಲ್ಲೋ ಓದಿದ್ದಾ ನೆನಪು....ಮತ್ತೆ ಅದನ್ನು ಓದಿ...ಮನಸ್ಸು ಮಗುವಂತಾಯಿತು...
ಧನ್ಯವಾದಗಳು...
ಕುಲಕರ್ಣಿ ಸರ್,
ಫೋಟೋದಲ್ಲಿರುವ ಅಪ್ಪ-ಮಕ್ಕಳ ಭಾವನೆಗಳನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು.
ಶಿವೂ ಅವರೇ ಚೆನ್ನಾಗಿದೆ.
ನಾನು ಬಾಲ್ಯಕ್ಕೆ ಹೋಗಿ ಬಂದೆ, ನಿಮ್ಮ ನಿಮ್ಮ ಚಿತ್ರ ಲೇಖನ ಓದಿ.
ನಾನು ಚಿಕ್ಕವನಿದ್ದಾಗ ಇಂಜೆಕ್ಷನ್ ಸಿರಿಂಜ್ ಇಟ್ಟುಕೊಂಡು ಆಡ್ತ ಇದ್ದೆ, ಅಪ್ಪ ಬಂದ ಕೂಡಲೇ ಎಲ್ಲ ಬಚ್ಚಿಡುತ್ತ ಇದ್ದೆ. ಚಕ್ರ ಗಳು, ಥೆರ್ಮೊಕೂಲ್ ನನ್ ಮೆಚ್ಚಿನ ಆಟಿಕೆ ಗಳು.
ಮೊದಲು ತುಂಬ ಹೆದರುತ್ತ ಇದ್ದೆ, ಆದರೆ ಇಗ ತುಂಬ ಒಳ್ಳೆಯ ಸ್ನೇಹಿತ ರ ಹಾಗೆ ಇದಿವಿ.
ರೂಪ ಅವರ ರಿಪ್ಲೈ ಚೆನ್ನಾಗಿದೆ.
Dear Shivu,
ಎಂದಿನಂತೆ ಈ ಬಾರಿಯೂ ಫೊಟೊ ಲೇಖನ ಎರಡೂ ಚೆನ್ನಾಗಿವೆ. ಅಪ್ಪನ ದಿನದ ನೆನಪಿನಲ್ಲಿ
ಮಕ್ಕಳ ವಯಸ್ಸಿನ ತುಂಟತನವನ್ನು, ಅಪ್ಪಂದಿರ ಗುಣವನ್ನು ಸರಿಯಾಗಿ ಸೆರೆ ಹಿಡಿದಿದ್ದೀರಿ.
ನಿಮ್ಮ ಮಗುವಿಗೆ ನೀವೇನು ಮಾಡಿದಿರಿ ಎಂಬ ಹೋಲಿಕೆಯನ್ನೂ ಕೊಟ್ಟಿದ್ದಿದ್ದರೆ ಇನ್ನೂ ಜಾಸ್ತಿ ಇಷ್ಟವಾಗುತ್ತಿತ್ತೇನೊ.
-ನಾಗೇಶ್ ಹೆಗಡೆ.
ಅಪ್ಪ-ಮಕ್ಕಳ ನಿಶ್ಕಲ್ಮಶ ಪ್ರೀತಿಯ ಮಧುರ ಕ್ಷಣಗಳು ಚೆನ್ನಾಗಿವೆ ಸಾರ್.. ಆದರೆ, ಮಲ್ಲಿಕಾರ್ಜುನರವರು ಹೇಳಿದಂತೆ, ತಂದೆಗೆಂದು ಒಂದೇ ದಿನವೇ? ಈ ವಿಷಯ ಸರಿಯಾಗಿ ತೋರುತ್ತಿಲ್ಲ ಸ್ವಾಮಿ. ಈಗೀಗ ನಮ್ಮಲ್ಲೂ "ತಂದೆಯ ದಿನ" "ತಾಯಿಯ ದಿನ" ಎಂದೆಲ್ಲ ಕೇಳಿಬರುತ್ತಿದೆ. ದಿನನಿತ್ಯವೂ ಹೆತ್ತವರಿಗೆ ನಮಸ್ಕರಿಸುವ ನಮ್ಮ ನಾಡಲ್ಲಿ ಈ ಪಾಶ್ಚಾತ್ಯ "ದಿನಗಳು" ಸರಿತೋರುತ್ತಿಲ್ಲ...
ಪ್ರಕಾಶ್ ಸರ್,
ಜೀವನದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಂದು ಸಿಗುವಂತೆ ದೇವರು ಮಾಡಿರುತ್ತಾನಾದರೂ ಕೆಲವೊಂದು ಜೀವನಪೂರ್ತಿ ಮರೀಚಿಕೆಯಾಗಿಬಿಡುತ್ತವೆ. ಇಂದು ಅಪ್ಪಂದಿರ ದಿನದಲ್ಲಿ ಅದನ್ನು ಆನುಭವಿಸದ ನಿಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತದೆ..
ನಿಮ್ಮ ಮಗನಿಗೆ ಪ್ರೀತಿಯ ಅಪ್ಪ....
ಇವತ್ತು ನಿಮಗೆ ನಿಮ್ಮ ಮಗನ ಪರವಾಗಿ ಅಭಿನಂದನೆಗಳು..
ಉಮೇಶ್ ದೇಸಾಯಿ ಸರ್,
ಅಪ್ಪಂದಿರ ದಿನದಂದೂ ನೀವು ಕೆಲಸ ಮಾಡುತ್ತಿರುವುದು ನಿಜಕ್ಕೂ ಕಾಯಕವೇ ಕೈಲಾಸವೆಂದು ಅರಿತಿರುವವರು ನೀವು. ಇವತ್ತು ನಿಮ್ಮ ಮಗಳಿಗೆ ನಿಮ್ಮ ದಿನವೆಂದು ಗೊತ್ತಾದರೇ ಅವರು ಖಂಡಿತ ವಿಷ್ ಮಾಡುತ್ತಾರೆ...
ಧನ್ಯವಾದಗಳು...
ನಿಮ್ಮ ಮತ್ತು ಮಲ್ಲಿಕಾರ್ಜುನ ರವರ ಬಗ್ಗೆ ಕೇಳಿದ್ದೆ ಮತ್ತು ಓದಿದ್ದೆ.
ಇವತ್ತು ನಿಮ್ಮ ಬ್ಲಾಗ್ ದರ್ಶನ ವಾಯಿತು.
ಕ್ಷಣಗಳನ್ನ ಚೆನ್ನಾಗಿ ಸೆರೆ ಹಿಡಿದಿದ್ದೀರಾ.
ರವಿ.
ಚಂದ್ರಕಾಂತ ಮೇಡಮ್,
ನನ್ನ ಬಾಲ್ಯದ ಆನುಭವವನ್ನು ಇಷ್ಟಪಟ್ಟಿದ್ದಕ್ಕೆ, ಮತ್ತು ನಿಮ್ಮ ಮಗನ ಅಭಿರುಚಿಗಳನ್ನು ಇಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ರೂಪಶ್ರೀಯವರು ಅಪ್ಪನ ಬಗೆಗೆ ಬದಲಾಗುವ ಭಾವನೆಗಳನ್ನು ಇಲ್ಲಿ ಚೆನ್ನಾಗಿ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ...
ಪ್ರಕಾಶ್ ಹೆಗಡೆಯವರು ಒಬ್ಬ ಭಾವಜೀವಿ...ಅವರ ಭಾವನೆಯನ್ನು ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ...
ಚಿತ್ರ-ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...
ಬಾಲು ಸರ್,
ಲೇಖನವನ್ನು ನಿಮ್ಮ ಬಾಲ್ಯದ ನೆನಪು ಮರುಕಳಿಸಿದ ವಿಚಾರವನ್ನು ಬರೆದಿದ್ದೀರಿ....
ನಾನು ಇಂಜೆಕ್ಷನ್ ರಬ್ಬರನ್ನು ಚಕ್ರವಾಗಿ ಮಾಡಲು ಉಪಯೋಗಿಸುತ್ತಿದ್ದೆ. ನೀವು ಇಂಜೆಕ್ಷನ್ ಇಟ್ಟು ಕೊಂಡು ಏನು ಮಾಡುತ್ತಿದ್ದೀರಿ ಅನ್ನುವುದನ್ನು ಹೇಳಿದ್ದರೇ ಚೆನ್ನಾಗಿತ್ತು...
ಧನ್ಯವಾದಗಳು..
ಪ್ರದೀಪ್,
ಅಪ್ಪ-ಮಕ್ಕಳ ಪ್ರೀತಿಯೇ ಹಾಗಲ್ಲವೇ ಸರ್...
ನಾವು ಈಗ ಎಲ್ಲದಕ್ಕೂ ಪಾಶ್ಚಿಮಾತ್ಯರನ್ನು ಅನುಕರಿಸುವುದು ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರಿಗೂ ಹೀಗೆ ದಿನಗಳು ಅಂತಾ ಆಗಿಬಿಟ್ಟಿವೆ. ಆದ್ರೂ ಇದು ಒಂಥರ ಚೆಂದವಲ್ಲವೇ...ದಿನವೂ ಸಿಹಿ ತಿನ್ನುವುದಕ್ಕಿಂತ ಅಪರೂಪಕ್ಕೆ ಸಿಹಿ ತಿನ್ನುವ ಪರಿ ಅದನ್ನು ವರ್ಣಿಸುವ ಪರಿಯೂ ಈಗಿನ ಕಾಲದಲ್ಲಿ ಟ್ರೆಂಡ್ ಆಗಿಬಿಟ್ಟಿದೆಯಲ್ಲವೇ.....
ಧನ್ಯವಾದಗಳು..
ರವಿ ಹೆಗಡೆ ಸರ್,
ನನ್ನ ಬ್ಲಾಗಿಗೆ ಸ್ವಾಗತ...ನಿಮ್ಮ ಬಗ್ಗೆ ಕನ್ನಡ ಬ್ಲಾಗರ್ಸ್ ನಲ್ಲಿ ಓದಿದ್ದೇನೆ....
ಫೋಟೋಗಳನ್ನು ನೋಡಿ ಇಷ್ಟಪಟ್ಟಿದ್ದೀರಿ...ಸಾಧ್ಯವಾದರೆ ಉಳಿದ ಲೇಖನಗಳಲ್ಲಿರುವ ಚಿತ್ರಗಳನ್ನು ನೋಡಿ ಸರ್..ನಿಮಗೆ ಇಷ್ಟವಾಗಬಹುದು...
ಹೀಗೆ ಬರುತ್ತಿರಿ...ಧನ್ಯವಾದಗಳು...
ಇವತ್ತು ಬೆಳಗ್ಗೆ ತಾನೇ ಅಪ್ಪನ ಜೊತೆ ವಾದ ಮಾಡಿ ಕಚೀರಿಗೆ ಬಂದಿದ್ದೆ. ಈ ಬ್ಲಾಗು ನನಗೆ ಒಳ್ಳೆಯ ಪಾಠವನ್ನೇ ಕಲಿಸಿತು. ಧನ್ಯವಾದಗಳು.
ಶಿವೂ,
ಅಪ್ಪ ಪ್ರತಿ ದಿನ ನೆನಪಾಗ್ತಾರೆ.ನೀವು ನಿಮ್ಮ ಅಪ್ಪನನ್ನು ನೆನೆಸಿಕೊ೦ಡ ಪರಿ ತು೦ಬಾ ಇಷ್ಟ ಆಯ್ತು.ನ೦ಗೊತ್ತು ನೀವು ಏನೇ ಬರೆದ್ರು ವಿಷೇಶವಾಗೇ ಇರುತ್ತೆ ಅ೦ತೆ.ಚಿತ್ರಗಳೇ ಮಾತಾಡ್ತಾ ಇದಾವೆ.
ಮೊದಲ ಚಿತ್ರ ಬಹಳ ಮೆಚ್ಚಿಗೆಯಾಯ್ತು.
ಮೊದಲ ಚಿತ್ರದಲ್ಲಿ ಕ೦ಡ೦ತೆ
ಅಪ್ಪ ನೆಡೆಸಿದ ದಾರಿಯಲ್ಲಿ
ಕಲ್ಲಿಲ್ಲ.
ಅಪ್ಪ ನೆಡೆಸಿದ ದಾರಿಯಲ್ಲಿ
ಮುಳ್ಳಿಲ್ಲ.
ಅಪ್ಪ ನೆಡೆಸಿದ ದಾರಿಯಲ್ಲಿ
ಕೆಸರಿಲ್ಲ.
ಅಪ್ಪ ನೆಡೆಸಿದ ದಾರಿಯಲ್ಲಿ
ದೂಳಿಲ್ಲ.
ಅಪ್ಪನ ಪ್ರೀತಿಗೆ ಕೊನೆಯಿಲ್ಲ.
ನಮ್ಮಪ್ಪನ ನೆನಪಾಯಿತು.ಬ್ಲಾಗಿನಲ್ಲಿ ವಿವರವಾಗಿ ಬರೀತೀನಿ.
ಅಪ್ಪ-ಮಕ್ಕಳ ಮಧುರ ಬಾಂಧವ್ಯದ ಸುಂದರ ಚಿತ್ರಗಳನ್ನು ಕೊಟ್ಟಿದ್ದೀರಿ. ನಿಮ್ಮ ಬಾಲ-ಚಿತ್ರವೂ ಚೆನ್ನಾಗಿದೆ!
ರಾಜೀವ್ ಸರ್,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ತಂದೆಯವರಿಗೆ ವಿಷ್ ಮಾಡಿ ಅವರು ಖುಷಿಯಾಗುತ್ತಾರೆ...
ಧನ್ಯವಾದಗಳು..
ಶ್ರೀಧರ್ ಸರ್,
ನೀವು ದೂರದಲ್ಲಿರುವುದರಿಂದ ನಿಮಗೆ ನಿಮ್ಮ ತಂದೆಯ ನೆನಪು ಕಾಡುತ್ತದೆ ಅಲ್ಲವೇ...
ನನ್ನ ಲೇಖನ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
ನೀವು ನನ್ನ ಲೇಖನಕ್ಕಾಗಿ ಬರೆದ ಕವನ ಚೆನ್ನಾಗಿದೆ...ನನಗೇ ಇಷ್ಟವಾಯಿತು...
ಮತ್ತೆ ನಿಮ್ಮ ತಂದೆಯವರ ಬಗ್ಗೆ ನಿಮ್ಮ ಬ್ಲಾಗಿನಲ್ಲಿ ಬರೆಯುತ್ತೇನೆಂದು ಹೇಳಿದ್ದೀರಿ ಬೇರ ಬರೆಯಿರಿ..ಓದಲು ಕಾಯುತ್ತಿರುತ್ತೇನೆ...
ಸುನಾಥ್ ಸರ್,
ಸಹಜ ಪ್ರೀತಿಯ ಫೋಟೋಗಳನ್ನು ತೆಗೆಯುವಾಗ ಆಗುವ ಆನಂದವೇ ಬೇರೆ....ನನ್ನ ಬಾಲ್ಯದ ಫೋಟೋವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...
ಶಿವು ಸರ್..
ಅಪ್ಪಂದಿರ ದಿನದಂದು ಎಲ್ಲ ಅಪ್ಪಂದಿ ರಿಗೆ ಹಾರ್ದಿಕ ಶುಭಾಶಯಗಳು. ಅಪ್ಪ ಅಂದ ತಕ್ಷಣ ಶ್ರಮಜೀವಿ ನನ್ನಪ್ಪನ ಮುಖ ಕಣ್ಮುಂದೆ ಬಂದು ಭಾವುಕನಾಗುತ್ತೇನೆ. ಪ್ರತಿ ದಿನ ಅಪ್ಪನೊಂದಿಗೆ ಫೋನಿನಲ್ಲಿ ಮಾತನಾಡದಿದ್ದರೆ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ನಿಮ್ಮ ಬಾಲ್ಯದ ಫೋಟೋದಲ್ಲಿ ನೀವು ನಿಂತ ಅಟೆನ್ಶನ್ ಭಂಗಿ ನೋಡಿದ್ರೇನೆ ಗೊತ್ತಾಗುತ್ತೆ ನಿಮ್ಮ ಅಪ್ಪ ನಿಮ್ಮನ್ನು ಎಷ್ಟು ಶಿಸ್ತಿನಿಂದ ಬೆಳೆಸಿದ್ದಾರೆ ಅಂತ :)
ಅಪ್ಪನ ನೆನಪು ತರಿಸಿದ್ದಕ್ಕೆ ಮತ್ತು ಅಪ್ಪ ಮಕ್ಕಳ ನಿಷ್ಕಲ್ಮಶ ಪ್ರೀತಿ ಪ್ರತಿಬಿಂಬಿಸುವ ಅದ್ಭುತ ಫೋಟೋಗಳಿಗೆ ವಂದನೆಗಳು.
- ಉಮೀ
ಸಕ್ಕತ್, ಚೆನ್ನಾಗಿದೆ ಅಪ್ಪನೊಂದಿಗಿನ ನಿಮ್ಮ ಬಾಲ್ಯದ ನೆನಪು. ನಿಮ್ಮ ಹಳೇ ಫೋಟೋ ತೋರಿಸಿದ್ದಕ್ಕೆ ಧನ್ಯವಾದ. ಬರಹಕ್ಕೆ ಹೊಂದಿವಂತ ಚಿತ್ರಗಳು, ಅದರಲ್ಲೂ ಮೊದಲ, ಕೊನೇಯ ಚಿತ್ರ ಸೂಪರ್
ಉತ್ತಮ ಚಿತ್ರಸಹಿತ ನುಡಿನಮನ ಸಲ್ಲಿಸಿದ್ದೀರಿ ನಿಮ್ಮ ತ೦ದೆಯವರಿಗೆ. ತ೦ದೆಯ ದಿನ, ತಾಯಿಯ ದಿನ.. ಈ ರೀತಿ ಒ೦ದು ದಿನದ ಆಚರಣೆಗಳ ವಿರೋಧಿಯಾದರೂ, ನಿಮ್ಮ ಬರಹ ಸಕಾಲಿಕವಾಗಿದೆ ಅನ್ನಿಸಿತು. ನಮ್ಮ ತ೦ದೆ, ನಮ್ಮ ತಾತ ತೀರಿಕೊ೦ಡಾಗ ಮಗುವಿನ೦ತೆ ಅಳುತ್ತಿದ್ದ ದೃಶ್ಯ ಕಣ್ಣಮು೦ದೆ ಬ೦ತು. ಹೆಚ್ಚು ಕಡಿಮೆ ತಿ೦ಗಳು, ಅವರು ನನ್ನ ತ೦ದೆಯಾ ಎನ್ನುವಷ್ಟರ ಮಟ್ಟಿಗೆ ಅನ್ಯಮನಸ್ಕರಾಗಿದ್ದರು. ಆ ಬಾ೦ಧವ್ಯವೇ ಅ೦ತದ್ದು...
ಅಪ್ಪನ ಪ್ರೀತಿ ಬಗೆಗಿನ ಲೇಖನ ಉತ್ತಮವಾಗಿದೆ. ಅಮ್ಮ ಮಗುವನ್ನು ತೊಡೆಯ ಮೇಲೆ ಕೂರಿಸಿ ತಾನು ನೋಡುವ ಪ್ರಪಂಚವನ್ನು ಮಗು ನೋಡುವಂತೆ ಮಾಡಿದರೆ, ಅಪ್ಪ ಮಗುವನ್ನು ಹೆಗಲ ಮೇಲೆ ಕೂರಿಸಿ ತಾನು ನೋಡುವ ಜೊತೆಗೆ ತನಗೆ ಕಾಣದ ಪ್ರಪಂಚವನ್ನು ಮಗುವಿಗೆ ತೋರಿಸುತ್ತಾರಂತೆ.
ನನ್ನ ಬ್ಲಾಗಿಗೆ ಆಗಮಿಸಿದಕ್ಕೆ ಧನ್ಯವಾದಗಳು.
ಅಪ್ಪಂದಿರ ದಿನ, ಅಮ್ಮಂದಿರ ದಿನ... ಏನಿದೆಲ್ಲಾ?? ಹೆತ್ತವರು ದೇವರು ಎಂದು ಭಾವಿಸುವ , ದಿನವೂ ಪೂಜಿಸುವ ನಮಗೆ ಬೇಕೆ ಇಂಥ ಪಾಶ್ಚಾತ್ಯ ಸಂಸ್ಕೃತಿ?? ಏನೆ ಇರಲಿ... ದೇವರುಗಳಾದ ರಾಮ ನಿಗೆ ರಾಮನವಮಿ, ಕೃಷ್ಣ ನಿಗೆ ಕ್ರಿಶ್ನಾಸ್ತಮಿ , ಶಿವನಿಗೆ ಶಿವರಾತ್ರಿ, ಗಣೇಶನಿಗೆ ಚೌತಿ ಅಂತ ಇರಬೇಕಾದ್ರೆ ಅಪ್ಪ, ಅಮ್ಮ ದೇವರುಗಳಿಗೂ ಇರಲಿ ಒಂದೊಂದು ದಿನ...ಆದರೆ ನಾವು ನಿತ್ಯವೂ ದೇವರನ್ನು ನೆನೆಯುವಂತೆ ಅಪ್ಪ , ಅಮ್ಮನನ್ನು ನೆನೆಸಿಕೊಂಡು ಅವರನ್ನು ಚೆನ್ನಾಗಿ ಪ್ರೀತಿಯಿಂದ ನೋಡಿಕೊಂಡರೆ ashte ಸಾಕು.... ಬರಹ ಫೋಟೋ ಚೆನ್ನಾಗಿತ್ತು...
ಶಿವೂ,
ನಿಮ್ಮ ಬ್ಲಾಗಿನ ಚಿತ್ರಗಳೂ ಮಾತನಾಡುತ್ತವೆ. ಅಪ್ಪ ಮಕ್ಕಳ ಸ೦ಬ೦ಧದ ಬಗ್ಗೆ, ನಿಮ್ಮ ನೆನಪುಗಳನ್ನು, ಅಪ್ಪ೦ದಿರ ದಿನದ ಸ೦ದರ್ಭದಲ್ಲಿ ಬರವಣಿಗೆ ಮೂಲಕ ಕಟ್ಟಿಕೊಟ್ಟಿದ್ದೀರಿ. ಪುಟ್ಟ ಮಗುವಿನ ದೃಷ್ಟಿಯಲ್ಲಿ ಅಪ್ಪನೊಬ್ಬ ಸೂಪರ್ ಮ್ಯಾನ್ ಆಗಿರ್ತಾನೆ. ವರುಷ ಕಳೆದ೦ತೆ ಮಗನಿಗೆ ಅಪ್ಪನೂ ಎಲ್ಲರ೦ತೆ ಒಬ್ಬ ಸಾಮಾನ್ಯ ಎ೦ಬ ಅರಿವು ಉ೦ಟಾಗುತ್ತದೆ. ಅ೦ತಹ ಅಭಿಪ್ರಾಯ ಮಗನಲ್ಲಿ ಬಾರದ೦ತೆ ನೋಡಿಕೊಳ್ಳುವ ಅಪ್ಪ ನಿಜವಾಗಿ ಗ್ರೇಟ್. ನಿಮ್ಮ ಬರಹ-ಚಿತ್ರ ಮಾಲಿಕೆ ಬಹಳ ಚೆನ್ನಾಗಿದೆ.
ಶಿವು ಸರ್
ಅಪ್ಪನ ದಿನಕ್ಕೆ ಉತ್ತಮ ಲೇಖನ ಪ್ರಕಟಿಸಿದ್ದಿರಿ,ಬ್ಲಾಗ್ ನೊಡೊಕೆ
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳಿ...
ಶಿವು ಅವರೆ ಮೊದಲಿಗೆ ನನ್ನ ಬ್ಲಾಗ್ ಓದಿದ್ದಕ್ಕೆ ಧನ್ಯವಾದಗಳು. ನಿಮ್ಮ ಈ ಲೇಖನ ಓದಿ ನನ್ನ ಬಾಲ್ಯ ನೆನಪಾಯಿತು. ಚಿಕ್ಕ ಪುಟ್ಟ ವಸ್ತುಗಳು ನೀಡುವ ಸಂತೋಷ ಬಹುಃಶ ನಾವು ದೊಡ್ಡವರಾದ ಮೇಲೆ ನಮಗೆ ಸಿಕ್ಕೊದಿಲ್ಲ. ಏನೇ ಆಗಲಿ ನಮ್ಮ family members ಜೋತೆ ಒಂದು intimacy ಇರಬೇಕು. ನಮಗೆ ಎಂಥಾ ಸಂದರ್ಭ ಬಂದರು ಅವರೆ ನಮ್ಮ ಜೋತೆ ನಿಲ್ಲುತ್ತಾರೆ. ಲೇಖನದ ಜೋತೆ ಇರೊ photos super.
ಬರಹ ತುಂಬಾ ಇಷ್ಟವಾಯಿತು ಶಿವು
~ಅಪಾರ
ನಮ್ಮ ಕಿರುಬೆರಳನ್ನು ಪುಟ್ಟ ಹಿಡಿಯೊಳಗೆ ಇರಿಸುವುಕ್ಕಾಗಿ;
ಹೆಗಲ ಮೇಲೇರಿಸಿಕೊಂಡು ಜಾತ್ರೆಯಲ್ಲಿ ಪಲ್ಲಕ್ಕಿಯ ದೇವರನ್ನು ಕಾಣಿಸುವುದಕ್ಕಾಗಿ;
ತೋಟದ ಕೆರೆಯಲ್ಲಿ ಈಜು ಹೊಡೆವಾಗ ಎಳೆ ಹೊಟ್ಟೆಯ ಕೆಳಗೆ ಕೈಯಿಟ್ಟು ಧೈರ್ಯ ಕೊಡುವುದಕ್ಕಾಗಿ;
ತೊರೆಯ ದಾಟುವಾಗ ಮರದ ಸೇತುವೆಯಲ್ಲಿ ಬೆನ್ನ ಹಿಂದೆಯೇ ಮೆಲ್ಲನೆ ಬರುವುದಕ್ಕಾಗಿ;
ಯಕ್ಷಗಾನದ ರಕ್ಕಸವೇಷ ನೋಡಿ ಬೆದರಿದಾಗ ಸಾಂತ್ವನ ಹೇಳುವುದಕ್ಕಾಗಿ;
ಗೇರು, ಮಾವು, ಹಲಸುಗಳನ್ನು ನಾಜೂಕಾಗಿ ಬಿಡಿಸಿ ತಿನಿಸುವುದಕ್ಕಾಗಿ ಬರುವ ಅಪ್ಪನ ಪ್ರೀತಿಯನ್ನು ನೆನಪಿಸಿದ್ದಿರಿ..
ಅಪ್ಪನ ಬಗೆಗೆ ನಿಮ್ಮ ಪ್ರೀತಿಯನ್ನು ತುಂಬಾ ಸೊಗಸಾಗಿ ಹೇಳಿದ್ದಿರಿ...
ಶಿವೂ ಸರ್,
ಅಪ್ಪ ಧೈರ್ಯದ ಸಂಕೇತ, ಆಂತರ್ಯದ ಎಲ್ಲಾ ನೋವಿಗೂ ಸಮಾಧಾನ ಹೇಳುವ ಮೂರ್ತ ಸ್ವರೂಪಿ. ಈ ಬರಹ ಮನಸ್ಸಿಗೆ ತುಸು ಹೆಚ್ಚು ಅನ್ನಿಸುವಷ್ಟು ಆಪ್ತವಾಗುತ್ತದೆ. ನಿಮ್ಮ ಬಾಲ್ಯದ ನೆನಪುಗಳನ್ನು ಕಟ್ಟಿ ನಮ್ಮೆದುರು ಹರವಿಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು.
ಕೊನೆಯಲ್ಲಿ ನಿಮ್ಮ ಬಾಲ್ಯದ ಫೋಟೋ ಚೆನ್ನಾಗಿದೆ.
ಲೇಖನ ಮನಕ್ಕೆ ತಟ್ಟುವಂತಿತ್ತು, ನಮ್ಮ ಅಪ್ಪ ನೆನಪಿಗೆ ಬಂದ್ರು, ನಿನ್ನೆ ಪ್ರತಾಪ ಸಿಂಹ ಅವರ ಶನಿವಾರದ ಅಂಕಣ ಓದಿ ಅವರು ಹೇಳಿದಂತೆ ಅದೋಂಥರ ಥ್ಯಾಂಕಲೆಸ್ಸ ಜಾಬ್ ಅಂತ ಅನಿಸಿತ್ತು... ಆಗಲೇ ಅಪ್ಪನಿಗೆ ಫೋನು ಮಾಡಿ ಮಾತಾಡಿದ್ದೆ, ಆದರೂ ನನಗೆ ಥ್ಯಾಂಕ್ಸ ಹೇಳಲೇಬೇಕೆನಿಸಲಿಲ್ಲ, ಅವರ ಮುಂದೆ ಅದು ಅಷ್ಟೊಂದು ಚಿಕ್ಕ ಪದವಾಗಿ ಕಂಡುಬಿಟ್ಟಿತು. ಅಂದಹಾಗೆ ಕಡ್ಡಿಪೆಟ್ಟಿಗೆಯಲ್ಲಿ ನಾನು ದಾರ ಕಟ್ಟಿ ಟೆಲಿಫೊನು ಮಾಡ್ತಿದ್ದೆ, ಈಗ ಟೆಲಿಕಂ ಇಂಜನೀಯರು ಆಂದಾಗ ನಗು ಬರತ್ತೆ...
ಉಮೇಶ್ ಸರ್,
ಪ್ರತಿದಿನ ಅಪ್ಪನಿಗೆ ಫೋನ್ ಮಾಡದಿದ್ದರೇ ಸಮಾಧಾನವಾಗುವುದಿಲ್ಲವೆಂದಿರಿ..ಅವರು ಶ್ರಮಜೀವಿಯೆಂದಿರಿ...ಅವರಿಗೊಂದು ಅಭಿನಂದನೆಗಳನ್ನು ತಿಳಿಸಿಬಿಡಿ..ಅವರು ತುಂಬಾ ಖುಷಿಯಾಗುತ್ತಾರೆ...
ಮತ್ತೆ ನನ್ನಪ್ಪ ಸ್ವಲ್ಪ ಶಿಸ್ತು ಕಲಿಸಿದ್ದರು. ಆದ್ರೆ ಫೋಟೋದಲ್ಲಿ ಆ ಭಂಗಿ ಇದ್ದಿದ್ದು ಅಪ್ಪನ ಶಿಸ್ತಿನಿಂದಲ್ಲ...ಸ್ಕೂಲಲ್ಲಿ ಮೊದಲು ಕಲಿಸುತ್ತಿದ್ದುದ್ದೇ ಆಟೆಂಷನ್ ಅಲ್ಲವೇ ನಾನು ಎಲ್ಲಿ ನಿಂತರೂ ಹೀಗೆ ನಿಲ್ಲುತ್ತಿದ್ದೆ...ಅದನ್ನು ನೋಡಿದರೇ ನಗು ಬರುತ್ತದೆ...ಈ ಫೋಟೋ ನಮ್ಮ ಅಮ್ಮನಿಗೆ ತುಂಬಾ ಇಷ್ಟ..
ಚಿತ್ರಗಳ ಜೊತೆಗೆ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..
ಪಾಲಚಂದ್ರ...
ಬಾಲ್ಯದ ನೆನಪುಗಳು ತುಂಬಾ ಇವೆ. ಅವುಗಳಲ್ಲಿ ಈ ದಿನ ನೆನಪಿಸಿಕೊಳ್ಳಬೇಕೆನಿಸಿತು...ಚಿತ್ರಗಳನ್ನು ಮೆಚ್ಚಿದ್ದೀರಿ..
ಧನ್ಯವಾದಗಳು.
ವಿನುತಾ,
ನೀವು ಹೇಳಿದಂತೆ ಅಪ್ಪ, ಅಮ್ಮ, ಇತ್ಯಾದಿ ದಿನಗಳು ನಮ್ಮವಲ್ಲದಿದ್ದರೂ ನಾವು ಈಗ ವಿದೇಶಿಯರನ್ನು ಅನುಸರಿಸುತ್ತಿರುವುದು ಹೆಚ್ಚಾಗಿ, ನಮ್ಮ ಮೊದಲಿನ ಅವಿಭಕ್ತ ಕುಟುಂಬಗಳು ಇಲ್ಲವಾಗಿ ಎಲ್ಲರೂ ಬೇರೆ ಬೇರೆಯಾಗಿ ಬದುಕುವುದು ಆಗಿಬಿಟ್ಟಿದೆ. ಅದಕ್ಕಾಗಿ ಈ ಆಚರಣೆಗಳೆಲ್ಲಾ ಬಂದುಬಿಟ್ಟಿವೆ....
ನಿಮ್ಮ ಬಾಲ್ಯವನ್ನು ಹಂಚಿಕೊಂಡಿದ್ದಕ್ಕೆ ಮತ್ತು ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...
ವೀ...
ನನ್ನ ಬ್ಲಾಗಿಗೆ ಸ್ವಾಗತ...
ಅಪ್ಪನ ಬಗೆಗೆ ನಿಮ್ಮ ಎರಡು ಅಭಿಪ್ರಾಯಗಳು ನನಗಿಷ್ಟವಾದವು...
ನೀವು ಹೇಳಿದಂತೆ ಅಪ್ಪ ನಿಜಕ್ಕೂ ಕೆಲವೊಂದು ವಿಸ್ಮಯ ತೋರಿಸುವ ಗುರು.
ಹೀಗೆ ಬರುತ್ತಿರಿ...ಧನ್ಯವಾದಗಳು
ರವಿಕಾಂತ್ ಗೋರೆ ಸರ್,
ನೀವು ಹೇಳಿದಂತೆ ಅಪ್ಪ, ಅಮ್ಮ, ಇತ್ಯಾದಿ ದಿನಗಳು ನಮ್ಮವಲ್ಲದಿದ್ದರೂ ನಾವು ಈಗ ವಿದೇಶಿಯರನ್ನು ಅನುಸರಿಸುತ್ತಿರುವುದು ಹೆಚ್ಚಾಗಿ, ನಮ್ಮ ಮೊದಲಿನ ಅವಿಭಕ್ತ ಕುಟುಂಬಗಳು ಇಲ್ಲವಾಗಿ ಎಲ್ಲರೂ ಬೇರೆ ಬೇರೆಯಾಗಿ ಬದುಕುವುದು ಆಗಿಬಿಟ್ಟಿದೆ. ಅದಕ್ಕಾಗಿ ಈ ಆಚರಣೆಗಳೆಲ್ಲಾ ಬಂದುಬಿಟ್ಟಿವೆ....
ವಿನುತಾರವರಿಗೆ ಕೊಟ್ಟ ಅಭಿಪ್ರಾಯವನ್ನೇ ನಿಮಗೂ ಹೇಳಬೇಕೆನಿಸಿದೆ...
ಧನ್ಯವಾದಗಳು.
ನಿಮ್ಮ ಬಾಲ್ಯವನ್ನು ಹಂಚಿಕೊಂಡಿದ್ದಕ್ಕೆ ಮತ್ತು ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...
ಪರಂಜಪೆ ಸರ್,
ಪುಟ್ಟ ಮಗುವಿನ ಕಣ್ಣಲ್ಲಿ ಅಪ್ಪ ಸೂಪರ್ ಮ್ಯಾನ್, ಬೆಳೆದಂತೆ ಆತನು ಸಾಮಾನ್ಯ ವ್ಯಕ್ತಿ...ಖಂಡಿತ ನಿಮ್ಮ ಈ ಮಾತು ಎಲ್ಲರ ಆನುಭವ...
ಚಿತ್ರಗಳು ಮಾತಾಡುತ್ತವೆ ಅಂದಿರಿ...ಲೇಖನವನ್ನು ಇಷ್ಟಪಟ್ಟಿದ್ದೀರಿ...ಧನ್ಯವಾದಗಳು.
ಸಲೀಂ,
ಬ್ಲಾಗ್ ಚಿತ್ರ ಲೇಖನವನ್ನು ನೋಡಲಿಕ್ಕೆ ನಿಮ್ಮ ಅಪ್ಪಜಾನ್ ರನ್ನು ಕರೆದುಕೊಂಡು ಬಂದಿರಾ...
ಶ್ರವ್ಯಾ.,
ನನ್ನ ಬ್ಲಾಗಿಗೆ ಸ್ವಾಗತ....ನನ್ನ ಲೇಖನವನ್ನು ಓದಿ ನಿಮ್ಮ ಬಾಲ್ಯದ ನೆನಪಿಸಿಕೊಂಡಿದ್ದೀರಿ...ಚಿಕ್ಕ ಚಿಕ್ಕ ಸಂತೋಷಗಳಲ್ಲಿ ಸಿಗುವ ಆನಂದವೇ ಬೇರೆ ಎನ್ನುವ ನಿಮ್ಮ ಮಾತು ಖಂಡಿತ ಸರಿ...ಅದರ ಬಗ್ಗೆಯೂ ಇಷ್ಟಪಟ್ಟು ಬರೆದ ಲೇಖನವಿದೆ..
http://chaayakannadi.blogspot.com/2009/02/blog-post.html ಇದನ್ನು ಕ್ಲಿಕ್ಕಿಸಿ...
ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...
ಅಪಾರ...
ಧನ್ಯವಾದಗಳು...
ಜ್ಞಾನಮೂರ್ತಿ ಸರ್,
ಸೂಪರ್...ವಾಹ್! ಎನ್ನಬೇಕೆನಿಸುತ್ತಿದೆ ನಿಮ್ಮ ಪ್ರತಿಕ್ರಿಯೆಯನ್ನು ನೋಡಿ....
ನನ್ನ ಬರಹಕ್ಕಿಂತ ನಿಮ್ಮ ಕಾಮೆಂಟು ತುಂಬಾ ಚೆನ್ನಾಗಿದೆ...ನೀವು ಹೇಳಿದ್ದನ್ನೆಲ್ಲಾ ನೆನಸಿಕೊಂಡು ಜೊತೆಯಲ್ಲಿ ಅಪ್ಪನನ್ನು ನೆನೆಸಿಕೊಳ್ಳುವುದಿದೆಯಲ್ಲ....
ನೀವು ಒಂದು ಸೊಗಸಾದ ಲೇಖನವನ್ನು ಬರೆಯುವಷ್ಟು ವಿಚಾರಗಳು ನಿಮ್ಮ ಕಾಮೆಂಟಿನಲ್ಲಿವೆ...ಹೀಗೆ ಬರುತ್ತಿರಿ...
ಧನ್ಯವಾದಗಳು..
ರಾಜೇಶ್,
ಅಪ್ಪನ ಬಗೆಗಿನ ನಿಮ್ಮ ಅಭಿಪ್ರಾಯ ನನಗೆ ಇಷ್ಟವಾಗುತ್ತದೆ...ಚಿತ್ರಲೇಖನವನ್ನು ಮೆಚ್ಚಿದ್ದೀರಿ...ಧನ್ಯವಾದಗಳು ಹೀಗೆ ಬರುತ್ತಿರಿ...
ಪ್ರಭು,
ನಾವು ಹೇಳುವ ಅಭಿನಂದನೆಗಳು, ಧನ್ಯವಾದಗಳು ಅಪ್ಪನ ಮುಂದೆ ಎಷ್ಟು ಕುಬ್ಜವೆನಿಸುತ್ತವೇ ಅಲ್ವಾ...
ಪ್ರತಾಪ್ ಸಿಂಹರ ಲೇಖನವನ್ನು ನಾನು ಓದಿದೆ...
ನಿಮ್ಮ ಬಾಲ್ಯದ ನೆನಪುಗಳನ್ನು ನಿಮ್ಮ ಬ್ಲಾಗಿನಲ್ಲಿ ಬರೆಯಿರಿ...ಚೆನ್ನಾಗಿರುತ್ತೆ....ಓದಲು ನಾನು ಬರುತ್ತೇನೆ...
ಧನ್ಯವಾದಗಳು.
ನಮಸ್ತೆ ಶಿವಣ್ಣ.,
ಕ್ಷಮಿಸಿ ನನಗೆ ಎಷ್ಟೋ ದಿನದಿಂದ ಬರಲಾಗಲಿಲ್ಲ ನಿಮ್ಮ ಬ್ಲಾಗ್ಗೆ!
ಏಕೋ ನಾನು ಅಪ್ಪನಿಗೆ ಅಂಟಿ ಕೊಳ್ಳಲೆ ಇಲ್ಲ. ಆದ್ರೆ ಈಗಲೂ ಅಮ್ಮನ ಜೊತೆ ಮುನಿಸಿಕೊಂಡಾಗ ಮಾತ್ರ ಅಪ್ಪನ ಹತ್ರ ವಾಲ್ತೀನಿ. ನನ್ನಪ್ಪನ ಸುಮಾರು ಜನ ಅಣ್ಣನನ? ಅಂತ ಕೇಳ್ತಾರೆ.
ನನ್ನ ಮಗ ಮಾತ್ರ, ಅವನ ಅಪ್ಪನ ಬಗ್ಗೆ ತುಂಬಾ ನಂಬಿಕೆ ಇತ್ತು ಕೊಂಡಿದ್ದಾನೆ.... "ನನ್ನಪ್ಪ" ಅಂದ್ರೆ ಅವನಿಗೆ ಜಗತ್ತಲ್ಲಿ ನಂಬರ್ ಒನ್. ಬಹುಶ ರೂಪಶ್ರಿ ಅವರು ಬರೆದ ಮೊದಲನೇ ಸ್ಟೇಜ್ ಕಾಣುತ್ತೆ.
ಕೃಪಾ ಅಕ್ಕಾ,
ನೀವು ಬಿಡುವಿಲ್ಲವೆಂದು ನನಗೆ ಗೊತ್ತು...ಆದ್ರೂ ಅಪ್ಪನ ಬಗೆಗಿನ ಲೇಖನ ನೋಡಲು ಬಂದಿರಿ...
ವಿವಿಧ ಜನರು ವಿವಿಧ ಅಭಿಪ್ರಾಯಗಳನ್ನು ಅಪ್ಪನ ಬಗ್ಗೆ ಇಟ್ಟಿರುವಂತೆ ನೀವು ನಿಮ್ಮ ಅನುಭವವನ್ನು ಹೇಳಿದ್ದೀರಿ....
ನಿಮ್ಮ ಮಗ ತನ್ನ ಅಪ್ಪನನ್ನು ನಂಬಿಕೆಯಿಡಲು ಕಾರಣ ಆವರ ನಡುವಳಿಕೆ ಕಾರಣ.
ರೂಪಶ್ರೀಯವರ ಮೊದಲ ಅಭಿಪ್ರಾಯದಂತೆ ಉಳಿದ ಅಭಿಪ್ರಾಯಗಳನ್ನು ಆತ ರೂಪಿಸಿಕೊಳ್ಳುವುದನ್ನು ನೀವು ನೋಡುತ್ತಿರಲ್ಲ...ಆಗ ನಮಗೆ ಹೇಳುತ್ತಿರಿ....
ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...
ಶಿವಶಂಕರ್ ವಿಷ್ಣು ಯಳವತ್ತಿ ಸರ್,
ಅಪ್ಪನ ಬಗೆಗಿನ ಎರಡು ಅಭಿಪ್ರಾಯವನ್ನು ಹೇಳೀದ್ದೀರಿ...ಬಹುಶಃ ಅವೆರಡು ನಿಮಗೇ ಆಗಿರಬೇಕೆಂದು ನನಗನ್ನಿಸುತ್ತೆ...ಹೀಗೆ ಬರುತ್ತಿರಿ...ಧನ್ಯವಾದಗಳು...
ಶಿವು.,
ಇಂದು ಜೂನ್ ೧೯ ಅಪ್ಪಂದಿರ ದಿನ ಆಚರಣೆ ಬಹು ಸೊಗಸು ಮತ್ತು ಎಲ್ಲಾ ಅಪ್ಪಂದಿರಿಗೆ ಆನಂದ ದಾಯಕ ದಿನವಾಗಿದೆ .
ತಮ್ಮ ವಿವಾಹ ಜೀವನ ಮೆಲುಕು ಹಾಕಿ ಪ್ರಥಮ ಬಾರಿಗೆ ಮಗು ಹುಟ್ಟಿ ಅದರ ಜೊತೆ ಸರಸ /ಮಗುವಿನ ಚೆಸ್ಟೆ /ತುಂಟತನ ಗಳ
ಸಂಪೂರ್ಣ ಅನುಭವ ಮತ್ತೆ ಯೋಚಿಸಿದಾಗ ಅಲ್ಲದೆ ಅದರ ಅರೋಗ್ಯ ಸ್ವಲ್ಪ ಏರು ಪೆರು ಆದಾಗ ಮನೆಯಲ್ಲಿ ಭಯದ ವಾತಾವರಣ ಮತ್ತು ಚೇತರಿಕೆ ಆದಾಗ ನಿಟ್ಟುಸಿರು ಬಿಟ್ಟು ಭಗವಂತನ ಜೊತೆ ಪ್ರಾರ್ಥನೆ ಇತ್ಯಾದಿ ಗಳನ್ನೂ ನೆನಪು ಮಾಡಿಕೊಂದಾಗ ಅಪ್ಪನ ಸ್ಥಾನ ಎಷ್ಟು ಅಮೂಲ್ಯ /ಕಷ್ಟ ತರವಾಗಿದೆ ಎನ್ನುವುದು ಅರಿವಾಗುವುದು .ಇದು ಇಲ್ಲಿಗೆ ಪೂರ್ಣ ವಾಗಿಲ್ಲ .ಮಕ್ಕಳ ವಿಧ್ಯಾಭ್ಯಾಸ ಜವಾಬ್ದಾರಿ ಶಿಸ್ತಿನಜೀವನ ,ಸಮಯ ಪರಿಪಾಲನೆ ಉತ್ತಮ ನಾಗರಿಕ ನಾಗಿ ಭವ್ಯ ಭಾರತದ ಪ್ರಜೆ ಯಾಗಿ ಮಾಡುವ ಜವಾಬ್ದಾರಿ ಎಲ್ಲಾ ಅಪ್ಪಂದಿರಿಗೆ /ಅಮ್ಮಂದಿರಿಗೂ ಸಮ ಪಾಲು ಇರುವುದನ್ನು ಇಲ್ಲಿ ಮರೆಯ ಬಾರದು.
ಇತ್ತೀಚೆಗಿನ ಅಪರಾಧ ಪ್ರಕರಣ ಗಳನ್ನೂ ನೋಡಿದರೆ ಅಪ್ಪಂದಿರು ಯಾವುದೊ ತಪ್ಪು ಮಾಡಿರುವರೋ ಎನ್ನುವ ಪ್ರಶ್ನೆ ಸ್ವಾಭಾವಿಕ ವಾಗಿ ಉಧ್ಭವ ವಾಗುತ್ತದೆ .
ಸಮಯ ಪ್ರಜ್ಞೆ ಜೀವನ ದಲ್ಲಿ ಬಹು ಮುಖ್ಯವಾಗಿದೆ .
ಅಶಿಸ್ತು/ಅಶಾಂತಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ತಂದೆ /ತಾಯಿ ಮತ್ತು ಗುರುಗಳ ಸ್ಥಾನಕ್ಕೆ ಕುಂದು ಬರದಂತಹ ಆದರ್ಶ ಸಮಾಜ ರಚನೆ ಯಾಗಲಿ ಮತ್ತು ಎಲ್ಲಾ ಅಪ್ಪಂದಿರಿಗೆ ಸುಖ ಶಾಂತಿ ಮತ್ತು ನೆಮ್ಮದಿಯ ಬದುಕು ನೀಡಲಿ ಎಂದು ನಾವೆಲ್ಲರೂ ಪರಮಾತ್ಮ ನನ್ನು ಪ್ರಾರ್ತಿಸೋಣ ಬನ್ನಿ .
ನಾಗೇಶ್ ಪೈ
ಭವ್ಯ ಭಾರತ ನವ ನಿರ್ಮಾಣ ವೇದಿಕೆ .ಮೈಸೂರು .
ಜೈ ಕರ್ನಾಟಕ
ಸರ್, ಈ ಲೇಖನ ಚೆನ್ನಾಗಿತ್ತು. ನಮ್ಮಪ್ಪನ ನೆನಪನ್ನೂ ತರಿಸಿದ್ದಕ್ಕೆ ಧನ್ಯವಾದಗಳು.
ವಿಶ್ವಾಸದೊಂದಿಗೆ,
ಶಿವೂ
ಅಪ್ಪನ ಬಗ್ಗೆ ಅವರ ಪ್ರೀತಿಯ ಬಗ್ಗೆ,,, ಎಷ್ಟು ಚೆನ್ನಾಗಿ ಬರೆದಿದ್ದೀರ... ಹಾಗೆ ನಿಮ್ಮ ಬಾಲ್ಯವನ್ನು ನೆನಪಿಸಿ,, ನಮ್ಮನ್ನು ಅ ಲೋಕಕ್ಕೆ ಕರೆದುಕೊಂಡು ಹೋಗಿದ್ದಿರಾ....ತುಂಬ ಚೆನ್ನಾಗಿ ಇದೆ....ಫೋಟೋ ಗಳಂತು ಅದ್ಬುಥ , ಅದರ ಭಾವನೆ ಇಂದಾನೆ ಗೊತ್ತಾಗುತ್ತೆ....ಅಪ್ಪನ ಪ್ರೀತಿ ಎಂಥದು ಅಂತ.....ಗಂಡು ಮಕ್ಕಳಿಗಿಂದ , ಹೆಣ್ಣು ಮಕ್ಕಳು ಅಪ್ಪನನ್ನು ಹೆಚ್ಚು ಇಷ್ಟ ಪಡುತ್ತಾರೆ...ಇದು ಯಾಕೆ ಅಂತ ನನಗೆ ಗೊತ್ತಾಗಲಿಲ್ಲ... ನಾನು ಅಸ್ತೆ... ಅಮ್ಮನನ್ನು ತುಂಬ ಇಷ್ಟ ಪಡ್ತೇನೆ,, ಅಪ್ಪ ಅಂದ್ರೆ ಏನೋ ಒಂದು ಥರ ಗೌರವ.. ಭಯ,,, ಬಕ್ತಿ,,,, ಅವರ ವಿರುದ್ದ ನಡೆಯಬಾರದು ಅಂತ ಒಂದು ಭಾವನೆ,,, ಇವೆಲ್ಲ ಇದ್ದರು,, ಅವರು ನಮ್ಮನ್ನು ಓದಿಸಲು, ಬಟ್ಟೆ ಆಟದ ಸಾಮಾನು ತೆಗೆದು ಕೊಡಲು, ನಮ್ಮನ್ನು ಈ ಸ್ಥಾನದಲ್ಲಿ ನಿಲ್ಲಿಸಲು ಪಟ್ಟ ಕಷ್ಟ ಅಸ್ಟಿಸ್ತಲ್ಲ.... ನಿಜವಾಗ್ಲೂ Dady is Simply great.
ಅಪ್ಪಂದಿರ ಬಗ್ಗೆ ಒಂದು ನವಿರಾದ ಚಿತ್ರ ಸಹಿತ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು.....
ಗುರು
the photographs are really good!! filled with emotions! :)
Tumba chennagide sir...i love my dad...
Really hats of you for this great article...
keep on...
ಶಿವು,
ಅಪ್ಪಂದಿರ ದಿನಕ್ಕಾಗಿ ನೀವು ಬರೆದ ಲೇಖನ, ಚಿತ್ರಮಾಲೆ ಚೆನ್ನಾಗಿದೆ. ಅಪ್ಪನನ್ನು ಆಪ್ತವಾಗಿ ನೆನಪಿಸಿಕೊಂಡಿದ್ದೀರಿ.
ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಶ್ರೀ ಜ್ಞಾನಮೂರ್ತಿಗಳವರು ನನ್ನ ಸಾಲುಗಳನ್ನು ಹಾಗೆ ಹಾಗೆಯೇ ಬಳಸಿ ಪ್ರತಿಕ್ರಿಯಿಸಿದ್ದು ನೋಡಿ ಇನ್ನಷ್ಟು ಖುಷಿಯಾಗಿದೆ. ನನ್ನ ಅಕ್ಷರಗಳ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆಯೆನಿಸಿದೆ.
ಥ್ಯಾಂಕ್ಯೂ, ಇಬ್ಬರಿಗೂ.
http://suptadeepti.blogspot.com/2009/06/blog-post_20.html
ಶಿವು,
ಲೇಖನ ಮತ್ತು ಚಿತ್ರಗಳು ತುಂಬಾ, ತುಂಬಾ ಚನ್ನಾಗಿದೆ.
ನಿಮ್ಮ ಚಿಕ್ಕಂದಿನ ಫೋಟೋ ಕೂಡ ಸೂಪರ್.
ಚೆಂದದ ಲೇಖನ ಶಿವು. ಹೆಚ್ಚು ಕಡಿಮೆ ಎಲ್ಲರೂ ಹಾಗೇ, ಹರೆಯದಲ್ಲಿ ಅಪ್ಪ, ಅಮ್ಮನೊಡನೆ ಒಡನಾಡಲು, ಎಂಥದೋ ಮುಜುಗರ..ಅಪ್ಪ ಅಮ್ಮನ ಜೊತೆ ಸಿನಿಮಾಗೆ ಹೋಗಲು ಹಿಂಜರಿಯುತ್ತಿದ್ದೆ ನಾನು, ಕಾರಣ ಸಿನಿಮಾದಲ್ಲಿ ಬರೊ ಪ್ರೀತಿ ಪ್ರೇಮದ ಸನ್ನಿವೇಶಗಳನ್ನು ಅವರ ಜೊತೆ ಕೂತು ನೋಡುವುದು ಹೇಗೆ ಅನ್ನುವುದು. ಹೀಗೆ ಅಂತ ಅವರೊಡನೆ ಹೇಳಲೂ ಸಂಕೋಚ(ಆಗೆಲ್ಲ ಎಲ್ಲವೂ ಕಲಾವಿದರು ಮಾತಿನಲ್ಲೆ ಸೂಚ್ಯ ಹಾಗು ಸೌಮ್ಯವಾಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರಾದರೂ ಅದೇ ಹೆಚ್ಚೆನಿಸುತ್ತಿತ್ತು ನಮಗೆ ಆಗ).
ಅಪ್ಪ ಮಗುವಿನ ಚಿತ್ರಗಳು ಚೆನ್ನಾಗಿವೆ.
ನಾಗೇಶ್ ಹೆಗಡೆ ಸರ್,
ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...
ನಾಗೇಶ್ ಪೈ ಸರ್,
ನನ್ನ ಚಿತ್ರ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಅಪ್ಪಂದಿರ ದಿನದಂತೂ ದೊಡ್ಡ ಪ್ರತಿಕ್ರಿಯೆಯನ್ನೇ ನೀಡಿದ್ದೀರಿ...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....ಧನ್ಯವಾದಗಳು..
ಕ್ಷಣ ಚಿಂತನೆ ಸರ್,
ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...
ಗುರು,
ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಅಪ್ಪನ ಬಳಿ ಹೆಚ್ಚು ಹತ್ತಿರಾಗುತ್ತಾರೆ ಎನ್ನುವ ಮಾತು ನಿಮ್ಮ ಆನುಭವವಾದರೂ ನನ್ನ ಅನುಭವ ಬೇರೇನೇ ಆಗಿದೆ...ನನಗೆ ಇಬ್ಬರು ಹತ್ತಿರಾಗಿದ್ದರು. ಚಿತ್ರ ಲೇಖನವನ್ನು ನಿಮ್ಮ ಬಾಲ್ಯದ ನೆನಪುಗಳನ್ನು ಜ್ಞಾಪಿಸಿಕೊಂಡಿದ್ದೀರಿ... ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಅಪ್ಪ ನಿಜಕ್ಕೂ great..ಅಲ್ವಾ...
ಲೇಖನದ ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಕನಸು,
ಧನ್ಯವಾದಗಳು..ಹೀಗೆ ಬರುತ್ತಿರಿ...
ರಾಕೇಶ್,
ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...ನಿಮ್ಮ ಬ್ಲಾಗಿನ ಟ್ರಕ್ಕಿಂಗ್ ಫೋಟೋಗಳು ಚೆನ್ನಾಗಿರುತ್ತವೆ...
ಆರೆರೆ... ಜ್ಯೋತಿ ಮೇಡಮ್,
ನೀವು ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದಾಗಲೇ ಗೊತ್ತಾಗಿದ್ದು. ನೀವು ಬರೆದ ಸಾಲುಗಳನ್ನು ಜ್ಞಾನಮೂರ್ತಿಯವರು ಪ್ರತಿಕ್ರಿಯೆಗೆ ಬಳಸಿದ್ದಾರೆ ಅಂತ...
ಸೂಪರ್...ವಾಹ್! ಎನ್ನಬೇಕೆನಿಸುತ್ತಿದೆ
ನನ್ನ ಬರಹಕ್ಕಿಂತ ನಿಮ್ಮ ಈ ಪುಟ್ಟ ಸಾಲುಗಳು ತುಂಬಾ ಚೆನ್ನಾಗಿದೆ...ನೀವು ಹೇಳಿದ್ದನ್ನೆಲ್ಲಾ ನೆನಸಿಕೊಂಡು ಜೊತೆಯಲ್ಲಿ ಅಪ್ಪನನ್ನು ನೆನೆಸಿಕೊಳ್ಳುವುದಿದೆಯಲ್ಲ....
ಒಂದು ದೊಡ್ಡ ಲೇಖನಕ್ಕಿಂತ ನಿಮ್ಮ ನಾಲ್ಕೈದು ಸಾಲುಗಳು ಸಾಕೆನೆಸುತ್ತದೆ....
ಧನ್ಯವಾದಗಳು...
ಶಿವಪ್ರಕಾಶ್,
ನನ್ನ ಬಾಲ್ಯದ ಫೋಟೋ ಇಷ್ಟವಾಯಿತಾ! ಥ್ಯಾಂಕ್ಸ್...
ಮತ್ತೆ ಚಿತ್ರಗಳ ಜೊತೆಗೆ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..
ಜಯಲಕ್ಷ್ಮಿ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ....
ನನ್ನ ಚಿತ್ರ ಲೇಖನವನ್ನು ಮೆಚ್ಚಿ ನಿಮ್ಮ ಬಾಲ್ಯದ ನೆನಪುಗಳು, ಅಪ್ಪ ಅಮ್ಮನ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದೀರಿ....ನೀವು ಕವನವನ್ನು ಚೆನ್ನಾಗಿ ಬರೆಯುತ್ತೀರಿ....ಆಗಾಗ ಓದಲು ಬರುತ್ತೇನೆ...ಧನ್ಯವಾದಗಳು....
monne nanna magaLu avarappanige wish maaDidaaga, illada appanannu nenedu kambani miDididde. indu nimma lekhana Odi samaadhana sigabahudu endu nODidare mattade nenapugaLa keNakuvike. Appa kaalavaagi 9 varshagaLE kaLedaru avara saangatya mareyaagilla. lEkhana chennagide.
ಹೃದಯಸ್ಪರ್ಶಿ ಲೇಖನ ಮತ್ತು ಚಿತ್ರಗಳು. ತಂದೆಯ ಬಗ್ಗೆ ನನ್ನ ಹೆಂಡತಿ 2004ರಲ್ಲಿ ಬರೆದ ಕವನ ಇಲ್ಲಿದೆ - http://thatskannada.oneindia.in/literature/poem/2004/180604smitha.html
ಇದೂ ತಂದೆಯರ ದಿನದ ಬಗ್ಗೆಯೇ ಬರೆದಿದ್ದು.
ಮೇಲಿನ ಪತ್ರದಲ್ಲಿ ಪೂರ್ತಿ link ಇಲ್ಲ.
- http://thatskannada.oneindia.in/literature/poem/2004/180604smitha.html
/2004/180604smitha.html
ದೀಪಸ್ಮಿತ ಸರ್,
ನನ್ನ ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಮತ್ತೆ ನೀವು ಕೊಟ್ಟ ಲಿಂಕ್ ಮೂಲಕ ದಟ್ಸ್ ಕನ್ನಡಾಗೆ ಹೋಗಿ ಸ್ಮಿತ ಅವರು ಬರೆದ ತಂದೆಯ ಬಗೆಗಿನ ಕವನ ಓದಿದೆ. ತುಂಬಾ ಚೆನ್ನಾಗಿದೆ...ಧನ್ಯವಾದಗಳು.
ಜಯಲಕ್ಷ್ಮಿ ಮೇಡಮ್,
ನಿಮ್ಮ ಮತ್ತು ನಿಮ್ಮ ತಂದೆಯ ಭಾವನಾತ್ಮಕ ಆನುಭವ ನನಗೂ ಅರ್ಥವಾಗುತ್ತದೆ. ನಿಮ್ಮ ತಂದೆ ೯ ದಿಂದ ಇಲ್ಲವಾದರೇ ನನ್ನ ತಂದೆ ಈಗ ಕಳೆದೆರಡು ವರ್ಷದಿಂದ ಇಲ್ಲ. ಏನೇ ಆದರೂ ನೆನಪುಗಳು ನಮ್ಮನ್ನು ತುಂಬಾ ಕಾಡುತ್ತವೆ ಅಲ್ವಾ....
ಮತ್ತೊಮ್ಮೆ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು...
ಚಿತ್ರ ಲೇಖನ ಎರಡು ತುಂಬಾ ಚೆನ್ನಾಗಿ ಬಂದಿವೆ.ಹಿಂದೆ ಸ್ಟುಡಿಯೋಗೆ ಹೋಗಿ ತೆಗೆಸಿಕೊಂಡು ಬರುತ್ತಿದ್ದ ಫೋಟೋ ಎಷ್ಟೆಲ್ಲ ನೆನಪುಗಳನ್ನು ಹೊತ್ತು ಮನೆಯಲ್ಲೂ ಎಷ್ಟು ಜೋಪಾನವಾಗಿರುತ್ತಿತ್ತು. ಡಿಜಿಟಲ್ ಬಂದ್ಮೇಲೆ ಸಾವಿರಾರು ಫೋಟೋಗಳು.ಯಾವಾಗ ?ಯಾವುದು ? ಅಂತಾನೆ ನೆನಪಿರೋದು ಕಷ್ಟ.ಅಲ್ಲವೇ?
ತಡವಾಗಿ ನಿಮ್ಮ ಬರಹ ನೋಡಿದೆ...ಬರಹ, ಫೋಟೋಗಳು ಕಣ್ತುಂಬಿಸಿದವು. ಹೆಚ್ಚೇನೂ ಹೇಳಲಾರೆ..ಹೇಳಕ್ಕಾಗಲ್ಲ....ನಂಗೂ ಅಪ್ಪನ ನೆನಪಾಯಿತು ಅಣ್ಣ.
-ಧರಿತ್ರಿ
ಭಾರ್ಗವಿ ಮೇಡಮ್,
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....ಹಳೆ ನೆನಪುಗಳಷ್ಟು ಮಜ ಡಿಜಿಟಲ್ ಬಂದ ಮೇಲೆ ಖಂಡಿತ ಇಲ್ಲ...ನಿಮ್ಮ ಮಾತು ನಾನು ಒಪ್ಪುತ್ತೇನೆ...
ಧನ್ಯವಾದಗಳು..
ಧರಿತ್ರಿ,,
ನೀನು ತುಂಬಾ ಬ್ಯುಸಿಯಾಗಿದ್ದೀಯಾ ಅಂತ ನನಗೆ ಗೊತ್ತು...ಅಪ್ಪನ ಲೇಖನವನ್ನು ಓದುವಾಗ ನಿನಗಾದ ಅನುಭವ ನಾನು ಬರೆಯುವಾಗ ಆಗಿತ್ತು....
ಧನ್ಯವಾದಗಳು..
shivu,
nimma bhalyadha bhagge nivu bharedhidhannu vodhi santhosha vayithu.
ಯಶು,
ನನ್ನ ಬಾಲ್ಯದ ಜೀವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..
ಸಾರ್, ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರ, ಚಿತ್ರಗಳ ಪರಿಷೇಯೂ ಮನ ಮುಟ್ಟಿತು. ನಿಮಗೆ ಬುದ್ಧಿ ಬರುವವರೆಗೂ ಅಪ್ಪ ಜೊತೆಗೆ ಇದ್ದರೂ ಎಂದರೆ ಅವರ ರೂಪು ತಾಕು ಮತ್ತು ದನಿ ನಿಮಗೆ ಸದಾ ನೆನಪಿರುತ್ತದೆ. ಅವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ.
ಆದರೆ, ಬಾಲ್ಯದಲ್ಲೇ ಅಪ್ಪನನ್ನ ಕಳೆದುಕೊಂಡ ನನಗೆ 'ಪಿತೃ ಶೋಕಮ್ ನಿರಂತರಂ'
Post a Comment