Sunday, May 31, 2009

ಓಡಿದರು.. ಓಡಿದರು......ಆದ್ರೆ ಯಾರು ಯಾರು ಓಡಿದರು...?


ಓಡಿದರು....ಓಡಿದರು...ಓಡಿದರು...ಇಂದು ಬೆಳಿಗ್ಗೆ[೩೧-೫-೨೦೦೯] ವರ್ಲ್ಡ್ ಟೆನ್ ಕೆ ಎನ್ನುತ್ತಾ ಬೆಂಗಳೂರಿನಲ್ಲಿ ಜನ ಓಡಿದರು.....

ನಾನು ಮುಂಜಾನೆ ಇವರ ಜೊತೆ ಓಡಬೇಕಿತ್ತು. ನನ್ನ ದಿನಪತ್ರಿಕೆ ಕೆಲಸದ ತೊಂದರೆಯಿಂದಾಗಿ ಓಡಲಾಗಲಿಲ್ಲ. ಹೋಗಲಿ ಫೋಟೋ ತೆಗೆಯೋಣವೆಂದು ವಿಧಾನ ಸೌಧದ ಮುಂದಿನ ರಸ್ತೆಯಲ್ಲಿ ಬೆಳಿಗ್ಗೆ ಏಳುವರೆಯ ಹೊತ್ತಿಗೆ ಕಾದು ನಿಂತಿದ್ದೆ. ಆಗ ಪ್ರಾರಂಭವಾಯಿತಲ್ಲ ಓಟ....

ಮೊದಲು ಯಾವುದಾದರೂ ಸ್ಪರ್ಧಾತ್ಮಕ ಚಿತ್ರಗಳನ್ನು ಕ್ಲಿಕ್ಕಿಸಬಹುದು ಅಂತ ಸೀರಿಯಸ್ಸಾಗಿ ಕ್ಲಿಕ್ಕಿಸತೊಡಗಿದೆ....ಸ್ವಲ್ಪ ಹೊತ್ತಿನ ನಂತರ ಆ ಸೀರಿಯಸ್‌ನೆಸ್ ಹೊರಟೇ ಹೋಯಿತು...ಕಾರಣ "ರನ್ ಮಾಡಿ ರನ್" ಅನ್ನುವುದನ್ನು ಬಿಟ್ಟು ಬೇರೆ ಏನೇನು ಮಾಡಿದರು ಅನ್ನುವುದು ಫೋಟೋ ಸಮೇತ ದಾಖಲಾಗತೊಡಗಿತು. ಎಲ್ಲಾ ತಮಾಷೆಯಾಗತೊಡಗಿತು. ವಿಧಾನಸೌಧದ ಮುಂದೆ ನಾನು ಕ್ಲಿಕ್ಕಿಸುತ್ತಿದ್ದಾಗ ಓಡುವುದನ್ನು ಬಿಟ್ಟು ಬೇರೆ ಏನೇನು ಮಾಡಿದರು ಅನ್ನುವ ತಮಾಷೆಯನ್ನು ಮುಂದಿನ ಭಾಗದಲ್ಲಿ ಚಿತ್ರ ಸಮೇತ ಬರೆಯುತ್ತೇನೆ.

ಈಗ ಅದಕ್ಕಿಂತಲೂ ಆಸಕ್ತಿಕರ ವಿಚಾರವನ್ನು ಇದೇ ಓಟದಲ್ಲಿ ನಾನು ಕಂಡೆನು. ಅದೇನೆಂದರೇ ಯಾರು ಯಾರು ಓಡಿದರು.?

ಅದನ್ನು ಗಮನಿಸಿದರೆ ದೊಡ್ಡ ಪಟ್ಟಿಯೇ ಆಗುತ್ತದೆ. ಅದಕ್ಕಾಗಿ ಕೆಲವನ್ನು ಮಾತ್ರ ತಿಳಿಸುತ್ತೇನೆ. ಫೋಟೋಗಳನ್ನು ನೋಡುತ್ತಾ ಓದಿಕೊಂಡು ಓದಿ.

ಮೊದಲು ವಿದೇಶಿ ಪಕ್ಕಾ ಓಟಗಾರರಿದ್ದರು, ಅವರ ಹಿಂದೆ ಅಂಗವಿಕಲ ವ್ಹೀಲ್ ಚೇರ್ ಓಟಗಾರರು, ಜೊತೆಗೆ ನಮ್ಮ ಸ್ವದೇಶಿ ಸ್ಪರ್ಧಾತ್ಮಕ ಓಟಗಾರರು, ನಂತರ ಬಂದರಲ್ಲ.....ಎಂಬತ್ತಕ್ಕೂ ಹೆಚ್ಚು ವಯಸ್ಸಾದ ವಯಸ್ಕರು ಅದಕ್ಕೆ ತದ್ವಿರುದ್ದವಾಗಿ ೧೦ ವರ್ಷದ ಮಕ್ಕಳು, ಹತ್ತು ಕಿಲೋ ಮೀಟರ್ ಸೀರಿಯಸ್ಸಾಗಿ ಓಡಿ ಇವತ್ತೇ ಹತ್ತು ಕೇಜಿ ತೂಕ ಇಳಿಸುವ ಧೃಡ ಸಂಕಲ್ಪ ಮಾಡಿದ ಸೀರಿಯಸ್ ಬೆವರಿನ ಮುಖಿಗಳು, ಅಯ್ಯೋ ಎನೋ ಓಡಿದರಾಯಿತು ಅಂದುಕೊಂಡ ಹಸನ್ಮುಖಿಗಳು, ಹತ್ತು ಕಿಲೋ ಮೀಟರ್ ಮುಗಿಯವವರೆಗೂ ಒಂದು ತೊಟ್ಟು ನೀರು ಕುಡಿಯೊಲ್ಲವೆಂದು ಸಫತಗೈದವರ ನಡುವೆಯೇ ನಿಮಿಷಕ್ಕೊಂದು ಗುಟುಕು ನೀರನ್ನು ಓಟದುದ್ದಕ್ಕೂ ಕುಡಿದವರು, ಇವರೆಲ್ಲಾ ಸೀರಿಯಸ್ಸ್ ಓಟಗಾರರು.

ಇವರ ನಡುವೆ ಮುಗುತಿಧಾರಿ ಸುಂದರ ಹುಡುಗಿಯರು, ಯುವತಿಯರು ಅವರನ್ನು ನೋಡುತ್ತಾ ಓಡಲಿಕ್ಕೆ ಬಂದ ಪಡ್ಡೆ ಹೈಕಳು, ಓಡುತ್ತಲೇ "ಕಣ್ಸನ್ನೆ ಕೈಕಾಲ್ ಸನ್ನೇಗಳನ್ನು" ಪಾಸ್ ಮಾಡುತ್ತಿದ್ದ ಕಾಲೇಜು ಯುವಕ ಯುವತಿಯರು, ಯುವ ಪ್ರೇಮಿಗಳು, ನವಜೋಡಿಗಳು, ವಿರಹಿಗಳು, ಗಟ್ಟಿ ಮಾತಿನ ಗಟ್ಟಿಗಿತ್ತಿ ಗೃಹಿಣಿಯರು, ಅವರ ಪಕ್ಕ ತಮ್ಮದೇ ಲೋಕದಲ್ಲಿ ಓಡುತ್ತಾ ವಿವರಿಸುತ್ತಿದ್ದ ಅಜ್ಜಂದಿರು ಓಡುತ್ತಿದ್ದಾರೆ.


ನೋಡಿ ಎಂಥೆಂಥವರು ಓಡುತ್ತಿದ್ದಾರೆ.!!
ಓಟ-ಬದುಕು ಎರಡರಲ್ಲೂ ಗೆಲ್ಲಬೇಕೆಂಬ ಛಲ...!!ಓಟಕ್ಕೆ ವಯಸ್ಸಿನ ಅಂತರವಿದೆಯೇ?


ಆದೋ ಬಂದರು ತರಾವರಿ ಟೋಪಿದಾರರು, ಅವರ ಹಿಂದೆ ಮಗನನ್ನು ಹೆಗಲಮೇಲೆ ಕೂರಿಸಿಕೊಂಡ ಅಪ್ಪ, ನಾನೇನು ಕಮ್ಮಿಯಿಲ್ಲವೆಂದು ಮತ್ತೊಬ್ಬ ಅಪ್ಪ ಪುಟ್ಟಮಗುವನ್ನು ಹೊಟ್ಟೆಯ ಮೇಲೆ ಕೂರಿಸಿಕೊಂಡು ಓಡುತ್ತಿದ್ದಾರೆ. ಒಟ್ಟೊಟ್ಟಿಗೆ ಓಡುತ್ತಿದ್ದಾ ಅಪ್ಪ ಮಗಳು, ಫ್ರೆಂಚ್ ಗಡ್ಡದಾರಿಗಳು ಕಂಡರು......ಹಿಂದೆಯೇ ಬಂದಳಲ್ಲ ಕುದುರೆ ಬಾಲದಷ್ಟೇ ಸೊಗಸಾಗಿದ್ದ ಕೆಂಚುಕೂದಲನ್ನು ಹೊಂದಿದ್ದ ವಿದೇಶಿ ಯುವತಿ. ಅವಳು ಓಡುವಾಗ ಕೂದಲ ಹಾರಾಟ ನನ್ನ ಕ್ಯಾಮೆರದಲ್ಲಿ ಸೆರೆಯಾಯಿತು. ಆಷ್ಟರಲ್ಲಿ ಅಯ್ಯೋ ಅದನ್ನೇನು ತೆಗೆಯುತ್ತೀಯಾ ಇಲ್ಲಿ ನೋಡು ಅದಕ್ಕಿಂತ ಸಕ್ಕತ್ತಾಗಿದೆ ಅನ್ನುವ ಹಾಗೆ ಹೆಣ್ಣಿನಷ್ಟೆ ಉದ್ದ ಕೂದಲು ಹೊಂದಿದ್ದ ವ್ಯಕ್ತಿಯೊಬ್ಬ ಓಡಿಬಂದ.

ಮಕ್ಕಳನ್ನು ಇನ್ನೂ ಎಲ್ಲೆಲ್ಲಿ ಕೂರಿಸಿಕೊಂಡು ಓಡುತ್ತೀರಿ ಸ್ವಾಮಿ.!!

ಓಟ..ಓಟ...ಓಟಾನೋ... ಅಪ್ಪ ಮಗಳ ಓಟನೋ......


ಎಲೇ ಹೆಣ್ಣೇ ನಿನ್ನ ಕೂದಲಿಗೆ ನನ್ನ ಕೂದಲು ಸವಾಲ್..!!ಅದೆಷ್ಟು ಕುಳ್ಳಗಿದ್ದಾನೆ ಈತ ಅಂದುಕೊಳ್ಳುವಷ್ಟರಲ್ಲಿಯೆ, ದೂರದಲ್ಲಿ ಏಳು ಆಡಿಗಿಂತ ಎತ್ತರವಿರುವ ವಿದೇಶಿ ಓಟಗಾರನೊಬ್ಬ ಬರುತ್ತಿದ್ದಾನೆ. ಒಂದು ಕ್ವಿಂಟಾಲ್ ತೂಕದ ಯುವತಿಯ ಹಿಂದೆಯೇ ತೆಳ್ಳನೆ ಓಟಗಾತಿಯೂ ನನ್ನ ಕ್ಯಾಮರಾದಲ್ಲಿ ದಾಖದಾದರು.


ಓಟಕ್ಕೆ ಎತ್ತರ-ಗಿಡ್ಡತನದ ತಡೆಯುಂಟೇ..!!

ನೀನೆಷ್ಟೇ ತೆಳ್ಳಗಿದ್ರೂ ನಿನಗಿಂತ ಜೋರಾಗಿ ನಾನು ಓಡ್ತೀನಿ...!


ಅದೋ ನೋಡಿ ಪಂಜಾಬಿನ ಸಿಂಗ್ ಬರುತ್ತಿದ್ದಾನೆ. ಅದಕ್ಕೆ ಮೊದಲೇ ಕ್ಲಿಕ್ಕಿಸಿದ್ದು ಮೇಘಾಲಯದ ರಾಜಧಾನಿ ಷಿಲ್ಲಾಂಗ್ ನಿಂದ ಒಂದು ಮಗುವಿನ ಸಮೇತ ಬಂದ ದಂಪತಿಗಳನ್ನು. ನಡುವೆ ಸಣ್ಣ ಕಣ್ಣಿನ ಚಪ್ಪಟೆ ಮೂಗಿನ ಟೆಬೆಟ್ ಜನರು ಅವರ ಜೊತೆಗೆ ಚೀನಾ ಮಲೇಶಿಯಾ ಸಿಂಗಪೂರದವರು,

ಭೂತದ ಮುಖವಾಡದಾರಿಗಳು, ಆಶೋಕ ಮರದ ಎಲೆಗಳನ್ನೇ ಬಟ್ಟೆಗಳನ್ನಾಗಿ ಪರಿವರ್ತಿಸಿಕೊಂಡ ಪರಿಸರವಾದಿಗಳು, ಎಡಭಾಗ ಅರ್ಧಪ್ಯಾಂಟು ಶರ್ಟು, ಬಲಭಾಗ ಚೂಡಿಧಾರದಂತ ವಸ್ತ್ರ ಧರಿಸಿದ್ದ ಆಧುನಿಕ ಅರ್ಧನಾರೀಶ್ವರೀ, ಪೈರೈಟ್ಸ್ ಆಪ್ ದಿ ಕೆರೆಬಿಯನ್ ಚಿತ್ರದ ಜಾನಿ ಡೆಫ್ ಚಿತ್ರನಟನಂತೆ ವೇಷ ತೊಟ್ಟವನೊಬ್ಬ ಓಡಿಬರುತ್ತಿದ್ದಾನೆ. ಇಲ್ಲೊಬ್ಬಳು ಆಧುನಿಕ ಮತ್ಸ್ಯಕನ್ಯೆಯಾಗಿದ್ದರೇ ಅವಳ ಜೊತೆ ಅದೆಂತದೋ ಮುಖವಾಡವನ್ನು ಹಾಕಿಕೊಂಡವಳು ಜೊತೆಗಾರ್ತಿಯಾಗಿದ್ದಾಳೆ. ಭಾರತದೇಶದ ಭೂಪಟವನ್ನೇ ಬೆನ್ನಿಗಾಕಿಕೊಂಡು ಈತನೊಬ್ಬ ಓಡುತ್ತಿದ್ದಾನೆ ಇವನ ಉದ್ದೇಶ ದೇಶವನ್ನು ಮುನ್ನಡೆಸುವುದೋ ಅಥವ ದೇಶವನ್ನು ಬೆನ್ನ ಹಿಂದೆ ಹಾಕಿ ಓಡಿಹೋಗುವುದೋ ತಿಳಿಯುತ್ತಿಲ್ಲ.


ಕೊಡಗಿನ ವೀರ ನೀನೆಲ್ಲೇ ಓಡು, ನಿನ್ನನ್ನು ಹಿಡಿಯಲು ನಾನು ಹಿಂದೆನೇ ಇದ್ದೇನೆ...


ನೀನು ಜಾನಿಢೆಫ್ ಆದರೆ ನಾನು ಆಧುನಿಕ ಅರ್ಧನಾರಿಶ್ವರಿ...ನಾನು ಪರಿಸರವಾದಿ...


ಮಸ್ತ್ಯ ಕನ್ಯೆಯ ಜೊತೆ ನನ್ನ ಬೆಕ್ಕಿನ ಮುಖವಾಡ ಹೇಗಿದೇ...!!


ಇಡೀ ಭಾರತದ ಜವಾಬ್ದಾರಿ ನನ್ನದೇ...!!, ಬಲು ಅಪರೂಪ ನಮ್ ಕುಟುಂಬ[ಮೇಘಾಲಯದಿಂದ ಬಂದವರು]


ಆಹಾ! ಈ ಗುಂಪಿನಲ್ಲಿ ಕಾಲಬೈರವ, ದೆವ್ವದಂತ ಮೂಳೆ ಮನುಷ್ಯ, ಬುಡಕಟ್ಟು ಜನಾಂಗ, ಇತ್ಯಾದಿ ವೇಷಗಳೊಂದಿಗೆ ಸಂಸ್ಕೃತಿ ಉಳಿಸಿ ಅಂತ ಓಡುತ್ತಿದ್ದಾರೆ. ಇಲ್ಲೊಂದು ಮಗು ಮೀರಬಾಯಿಯಾಗಿ ಓಡುತ್ತಿದ್ದರೆ, ಅದೋ ಅಲ್ಲಿ ಕಥಕ್ಕಳಿ ವೇಷಧಾರಿಯೊಬ್ಬ ಓಡಿಬರುತ್ತಿದ್ದಾನೆ. ಇವರ ನಡುವೆ ನಮ್ಮ ಮೆಟ್ರೋ ರೈಲನ್ನು ಹೊತ್ತ ಹುಡುಗರು ಬರುತ್ತಿದ್ದಾರೆ. ಅದೋ ನೋಡಿ ಆತ ಭಾಯಿಯ ಬಳಿ ಕೈಯಿಡಿದುಕೊಂಡೇ ಓಡಿಬರುತ್ತಿದ್ದಾನೆ...ನನಗೆ ಕುತೂಹಲ ತಡೆಯಲಾರದೇ ಕೇಳೀಯೇ ಬಿಟ್ಟೆ ಅದಕ್ಕೆ ಅವನು ಕೊಟ್ಟ ಉತ್ತರ ಹಲ್ಲುನೋವು. ಅಂತ ನೋವಿನಲ್ಲಿ ಓಟದಲ್ಲಿ ಭಾಗವಹಿಸಿದ್ದ ಅವನ ಬಗ್ಗೆ ಹೆಮ್ಮೆಯೆನಿಸಿತು. ಆಷ್ಟೇ ಅದೇ ರೀತಿ ಪೂರ್ತಿ ಬಲಗೈ, ಎಡಗೈ, ಇಲ್ಲದ ಓಟಗಾರರು ಅವರ ಚಲದ ಬಗ್ಗೆ ನನಗೆ ಅಭಿಮಾನ ಉಂಟಾಯಿತು.

೨೦೨೦ರ ವರೆಗೂ ಇದು ನಮ್ಮ ತಲೆಮೇಲೆ ಇರುತ್ತೆ...[ಅಲ್ಲಿವರೆಗೂ ಮೆಟ್ರೋ ಬರಲ್ಲ]

ನಾವೆಲ್ಲಾ ಈ ವಿಧಾನಸೌಧದ ಮುಂದೆ ಓಡಬೇಕಾದ ಗತಿ ಬಂತಲ್ಲ...!!


ಮೀರಾ ನಿನ್ನ ಭಜನೆಯನ್ನು ಕೇಳುತ್ತಾ ನಾನು ಓಡುತ್ತಿದ್ದೇನೆ. ನಾನೇ ಗೆಲ್ಲೋದು...!!
ಹಲ್ಲುನೋವಿರಲಿ...ಕೈಗಳೇ ಇಲ್ಲದಿರಲಿ..ನಾವೂ ಓಡಿ ಗೆಲ್ಲುತ್ತೇವೆ....


ಅರೆರೆ...ಇಲ್ಲಿ ನೋಡಿ ನಮ್ಮ ಕೊಡಗಿನ ವೀರದಂಪತಿಗಳ ಜೊತೆಗೆ, ಮೈಸೂರು ಪೇಟಧಾರಿಗಳು, ನೇಪಾಳಿ ಟೋಪಿಧಾರರು, ಕವ್ವಾಲಿ ಹಾಡುವವರು, ನಮ್ಮದೇ ಸಂಸ್ಕೃತಿಯ ಪ್ರತೀಕದಂತ ವಸ್ತ್ರ ಧರಿಸಿದಂತ ಪುಟ್ಟ ಹುಡುಗಿಯೊಬ್ಬಳು ಅವರ ಜೊತೆ ಓಡುತ್ತಿದ್ದಾಳೆ. ನಡುವೆ ಮುಖಕ್ಕೆ ಬಣ್ಣ ಬಳಿದುಕೊಂಡ ಹುಡುಗರು, ನಮ್ಮ ಸಂಸ್ಕೃತಿಯ ಬಿಂಬಿಸುವ ವಸ್ತ್ರಗಳನ್ನು ತೊಟ್ಟಿದ್ದ ಕಿರುತೆರೆ ಕಲಾವಿದರು......ಹೀಗೆ ವಿವರಿಸಿದರೆ ನಿಮಗೆಲ್ಲಾ ಬೋರ್ ಆಗಿಬಿಡಬಹುದು ಅಂತ ನಿಲ್ಲಿಸಿದ್ದೇನೆ.


ನಾವೆಲ್ಲಾ ಭಾರತೀಯ ಸಂಷ್ಕೃತಿಯ ಪ್ರತೀಕಗಳು...


ನಟನೆಗೆ ವಿಶ್ರಾಂತಿ...ಈಗೇನಿದ್ದರೂ ಓಟ..

ಕ್ಲಿಕ್ಕಿಸಿದ್ದು ನೂರಾರಿದ್ದರೂ ಕೆಲವನ್ನು ಆಯ್ಕೆ ಮಾಡಿಕೊಂಡು ಬ್ಲಾಗಿಗೆ ಹಾಕಿದ್ದೇನೆ. ಇದರ ಜೊತೆಗೆ ಆನೇಕ ವೈವಿಧ್ಯತೆಯ ಟೋಪಿಗಳು ಸಿಕ್ಕಿವೆ. ಹಾಗೇ ಓಡುತ್ತಿರುವ ಭೂಪಟಗಳನ್ನು ಕ್ಲಿಕ್ಕಿಸುವಾಗ ಆದ ಅನುಭವಗಳೆಲ್ಲಾ ಮುಂದಿನ ಭಾರಿ.
ನಿಮಗೆ ಇಷ್ಟವಾದರೆ ಮುಂದಿನ ಬಾರಿ ಓಡುವುದಕ್ಕೆ ಬಂದವರು ಓಡುವುದನ್ನು ಬಿಟ್ಟು ಬೇರೆ ಏನೇನು ಮಾಡಿದರು ಬರೆಯುತ್ತೇನೆ...


ಚಿತ್ರ ಲೇಖನ
ಶಿವು.ಕೆ ARPS.

87 comments:

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಸಕತ್ತಾಗಿದೆ ಫೋಟೋಗಳು ಮತ್ತು ಅವುಗಳ ಶೀರ್ಷಿಕೆಗಳು.
ಮ್ಯಾರಥಾನ್ ನಲ್ಲಿ ಓಡಿದ ಅನುಭವವನ್ನು ನಮಗೆ ನೀಡಿದ್ದೀರಿ. ಧನ್ಯವಾದಗಳು.

SSK said...

ಶಿವೂ ಅವರೇ,
ಈ ಭಾರಿಯ ಓಟದ ಸ್ಪರ್ಧೆಯ ಲೇಖನ ಮತ್ತು ಫೋಟೋ ಗಳು ತುಂಬಾ ತುಂಬಾ ತುಂಬಾ ಚೆನ್ನಾಗಿವೆ!!!
ಮತ್ತು ಲೇಖನದ ಸ್ವಾರಸ್ಯ, ವಿವರಣೆಗಳು ಇತ್ಯಾದಿ is very very very interesting!!!!!
ನನಗಂತೂ ಲೇಖನ ಓದುವಾಗ ಎಷ್ಟು ನಗು ಬಂತೆಂದರೆ, ಅದರ credit ನಿಮಗೆ ಸಲ್ಲುತ್ತದೆ. ಅಷ್ಟು ಚೆನ್ನಾಗಿ lively ಆಗಿ ವಿವರಿಸಿದ್ದೀರ!!
ಇದರ ಮುಂದಿನ ಭಾಗ ಆದಷ್ಟು ಬೇಗ ಬರಲಿ ಎಂದು ಕುತೂಹಲದಿಂದ ಕಾಯುತ್ತಿದ್ದೇನೆ. ಬೇಗ ಪ್ರಕಟಿಸುತ್ತೀರಲ್ಲ ಪ್ಲೀಸ್!

Guru's world said...

ಶಿವೂ.....
ನಾನು ಮೊದಲೇ guess ಮಾಡಿದ್ದೆ ... ಇವೊತ್ತಿನ ಮಜಗಳೆಲ್ಲ ನಿಮ್ಮ ಬ್ಲಾಗಿನಲ್ಲಿ ಬರುತ್ತೆ ಅಂತ...... ಅದು ಇಷ್ಟು ಬೇಗ ಹಾಕಿಬಿಟ್ ಇದ್ದೀರಾ... ವೆರಿ ನೈಸ್.... ಸಕತ್ ಇದೆ ಸರ್ ನಿಮ್ಮ ಎಲ್ಲ ಫೋಟೋಗಳು......... ಆದರೆ ಇದರಲ್ಲಿ ನನ್ನ ಫೋಟೋನೇ ಇಲ್ಲ :-)

ಗುರು

Deepasmitha said...

ಶಿವು ಸರ್, ಎಂದಿನಂತೆ ನಿಮ್ಮ ಲೇಖನ, ಫೋಟೋಗಳು ಸೂಪರ್!

Prabhuraj Moogi said...

ಓಡಿದರೊ ಇಲ್ಲ ಓಡಿಸಿದರೊ, ಭಾರಿ ತಲೆ ಓಡಿಸಿ ವೇಷ ಭೂಷಣ ಧರಿಸಿ ಬಂದದ್ದಂತೂ ಸತ್ಯ, ನೀವು ಕ್ಯಾಮರಾ ರೀಲೌ ಚೆನ್ನಾಗಿಯೇ ಓಡಿಸಿದ್ದೀರಿ ಬಿಡಿ... ಒಂದೊಂದು ಫೊಟೊ ಕೂಡ ವಿಭಿನ್ನ, ಅದರಲ್ಲಿ ಆ ಪೇರಗಳನ್ನು(ತದ್ವಿರುದ್ಧ) ಆರಿಸಿದ್ದು ಚೆನ್ನಾಗಿದೆ...

ಹರೀಶ ಮಾಂಬಾಡಿ said...

ಬೆಂಗಳೂರಿಗೆ ಬಂದು ಇಡೀ ಮ್ಯಾರಥಾನ್ ನೋಡಿದಂತೆಯೇ ಆಯಿತು. ಅವರು ಓಡಿದ ಉದ್ದೇಶ ಈಡೇರಿತೋ ಗೊತ್ತಿಲ್ಲ. ಆದರೆ ಚಿತ್ರ ವೈಚಿತ್ರಗಳ ಚಿಕಿತ್ಸಕ ನೋಟದೊಂದಿಗೆ ಇಡೀ ವ್ಯವಸ್ಥೆಯನ್ನು ನಿಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸಿದ ನಿಮ್ಮ ರೀತಿ ಕಂಡು ಖುಶಿಯಾಯ್ತು. ಉತ್ತಮ ಫೋಟೋ ಜೊತೆಗೆ ವೈವಿಧ್ಯಮಯ ವಿಚಾರ ನೀಡಿದ ನಿಮಗೆ ಥ್ಯಾಂಕ್ಸ್

ಸಂದೀಪ್ ಕಾಮತ್ said...

ತುಂಬಾ ಚೆನ್ನಾಗಿದೆ ಶಿವು ಲೇಖನ.

ಜಲನಯನ said...

ಶಿವು, ನೀವು ಓಡಲಿಲ್ಲವೇ..?
ನನಗೆ ನಾವು ಸ್ನಾತಕೋತ್ತರ ಪದವಿಯ ಸಮ್ಯದಲ್ಲಿ ಆಡಿದ್ದ ಡುಂಡಿಯವ ಓಡುವವರು ನೆನನ್ಪಿಗೆ ಬರುತ್ತೆ...
ಇದೂ ಹಾಗೇನೇ...ಚನ್ನಾಗಿದೆ ನಿಮ್ಮ ಕ್ಲಿಕ್ಕಿಸುವ ಪರಿ ಮತ್ತು ಅದನ್ನು ಪೋಣಿಸಿ ಪಸ್ತುತಿಸಿದ ಲೇಖನ

ರೂpaश्री said...

ಫೋಟೋಗಳು ಮತ್ತು ಅದಕ್ಕೆ ಪೂರಕವಾಗಿರೋ ನಿಮ್ಮ ಶೀರ್ಷಿಕೆಗ್ಳು ಎರಡೂ ಸೂಪರ್!! ಕೂತಲ್ಲೇ ಮ್ಯಾರಾಥಾನ್ ದರ್ಶನ ಮಾಡಿಸಿದಕ್ಕೆ ಧನ್ಯವಾದಗಳು:)

Keshav Kulkarni said...

ನೀವೂ ಓಡಿ ಓಡೀ ತುಂಬ ದಣಿದ ಹಾಗಿದೆ, ಇನ್ನೂ ಹೆಚ್ಚು ಚಿತ್ರಗಳು ಬೇಕಿತ್ತು ಅನಿಸಿತು.
- ಕೇಶವ

shreeshum said...

Adbhuta lekhana hagu photogaLu

Bhahala andre bahala chennagittu SHIVU

Shyam Sajankila said...

Shivoo,
Needless to say... as ever... Very nice photos and concept.

I just wanted to draw you to one mistake, in the title of Wheel chair", just take a look at the title...the word 'chala' should be changed.

Regards
Dr. Shyama Prasad Sajankila

ರವಿಕಾಂತ ಗೋರೆ said...

ಲೇಖನ, ಫೋಟೋಗಳು ಚೆನ್ನಾಗಿವೆ... ಆದರೆ ಕೆಲವೊಂದು ಪದಗಳ ಉಚ್ಛಾರ ತಪ್ಪಾಗಿದ್ದಿದ್ದು ಸಿಟ್ಟು ಬರಿಸಿತು.. :-) (ಛಲ ಅನ್ನೋದು ಚಲ ಆಗಿದೆ).. ಉತ್ತಮ ಫೋಟೋಗಳು ... ಮುಂದಿನ ಕಂತಿಗೆ ಕಾಯುತ್ತಿದ್ದೇನೆ...

Dr. B.R. Satynarayana said...

ಶಿವು ನಿಮ್ಮ ಫೋಟೋಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಅದಕ್ಕಿಂತ ನನಗೆ ಇಷ್ಟವಾಗುವುದು, ಅವುಗಳನ್ನು ಇಟ್ಟುಕೊಂಡು ನೀವು ಆಡುವ ಸೃಜನಾತ್ಮಕ ಆಟ. ಅವುಗಳನ್ನು ಒಂದೊಕ್ಕೊಂದು ಜೋಡಿಸಿ ಅದಕ್ಕೆ ನೀಡುವ ವಿವರಣೆ ನಿಮ್ಮ ಬ್ಲಾಗಿನ ತೂಕವನ್ನು ಹೆಚ್ಚಿಸಿವೆ. ನಾನು ನೆನ್ನೆ ಅಂದುಕೊಂಡಿದ್ದೆ 'ಬಹುಶಃ ಶಿವು ಇಲ್ಲೆಲ್ಲೋ ಫೋಟೋ ತೆಗಿತಿರಬಹುದು' ಎಂದು. ಮಧ್ಯಾಹ್ನ ಹಲವಾರು ಫೋಟೋಗ್ರಾಫರುಗಳು ಬಸ್ ಮೇಲಿಂದ ಬಿದ್ದ ಸುದ್ದಿ ಟೀವಿಯಲ್ಲಿ ಬಂದಾಗ ಆತಂಕಗೊಂಡಿದ್ದೆ. ಅಲ್ಲಿ ನಿಜವಾಗಿ ಏನು ನಡೆಯಿತೋ? ಆದರೆ ಒಂದೊಂದು ಟೀವಿಯವರು ಒಂದೊಂದು ರೀತಿಯಲ್ಲಿ ತೋರಿಸಿದರು!

ವಿಕಾಸ್ ಹೆಗಡೆ said...

super.. ollolle chitragaLa jote hadavaagi beretha baraha.

ಕೆ. ರಾಘವ ಶರ್ಮ said...

Nice collections...wonderful effort.

Thank u very much for making us to have a greater view of the overwhelmingly impressive
occasion.

PARAANJAPE K.N. said...

ಶಿವೂ
ನಾನು ಊರಿಗೆ ಹೋಗಿದ್ದರಿ೦ದ ಈ ಓಟದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಮನೆಯಲ್ಲಿ ವಿಶೇಷ ಕಾರ್ಯಕ್ರಮವಿದ್ದ ಕಾರಣ ಟಿ.ವಿ.ಕೂಡ ನೋಡಲಾಗಿರಲಿಲ್ಲ. ನಾನು ಐದು ದಿನ ಬ್ಲಾಗಿನ ತ೦ಟೆಗೆ ಬರುವುದಿಲ್ಲವೆ೦ದು ಹೇಳಿ ಹೋಗಿದ್ದೆ, ಆದರೆ ಮೂರೇ ದಿನಕ್ಕೆ ನನ್ನ ಮನಸ್ಸು ಅ೦ತರ್ಜಾಲಾಡುವತ್ತ ತುಡಿಯುತ್ತಿತ್ತು. ಹಾಗಾಗಿ ಮೊದಲಿಗೆ ಬ೦ದವನೇ ನನ್ನ ಬ್ಲಾಗನು ತೆರೆಯದೆ ನಿಮ್ಮ ಬ್ಲಾಗಿಗೇ ಬ೦ದೆ. ನೀವು ಹೊಸ ಬ್ಲಾಗ್ ಪೋಸ್ಟ್ ಹಾಕದೆ ಇದ್ದರೂ, ನಿಮ್ಮ ಬ್ಲಾಗಿಗೆ ಬ೦ದರೆ ಅನೇಕ ಮಿತ್ರರ ಬ್ಲಾಗಿಗೆ ಹೋಗುವ link ಸುಲಭದಲ್ಲಿ ಸಿಗುತ್ತದೆನ್ನುವ ಕಾರಣಕ್ಕೆ ಬ೦ದೆ, ನೋಡಿದರೆ ನಿಮ್ಮ ಹೊಸ ಸಚಿತ್ರ ಲೇಖನ ರಾರಾಜಿಸುತ್ತಿತ್ತು. ಒಳಹೊಕ್ಕು ನೀವು ಅನಾವರಣಗೊಳಿಸಿದ ಓಟದ ಮಾಹಿತಿ ನೋಡಿದಾಗ ಸಚಿತ್ರವಾಗಿ ಎಲ್ಲ ಕಣ್ಮು೦ದೆ ಹಾದುಹೋದ ಅನುಭವ ವಾಯಿತು. ಫೋಟೋ-ಲೇಖನ ಎರಡೂ ಚೆನ್ನಾಗಿವೆ. ಕೆಲವೆಡೆ ಅಕ್ಷರಗಳು ಎಡಿಟ್ ಮಾಡುವ ಅಗತ್ಯವಿದೆ. ಆ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ನಿಮ್ಮ ಬರಹವು ಸೂಪರ್.

ಮನಸು said...

ತುಂಬಾ ತುಂಬಾ ಒಳ್ಳೆಯ ಸಂಗ್ರಹ!!!! ನಾವೆಲ್ಲಾ ನೋಡಿ ಖುಷಿ ಪಟ್ಟೆವು, ಇನ್ನುಳಿದ ತೋಪಿ, ಭೊಪಟ ಎಲ್ಲವನ್ನು ಹೊರತನ್ನಿ ನಾವೆಲ್ಲರು ಕಾದಿದ್ದೇವೆ.
ವಂದನೆಗಳು.

ರೂಪಾ said...

ಚೆನ್ನಾಗಿದೆ ಶಿವು
ಓದುತ್ತಿದ್ದಂತೆ ನಾನೇ ಮ್ಯಾರಾಥಾನ್‌ನಲ್ಲಿ ಓಡ್ತಾ ಇದ್ದೀನೇನೋ ಎನ್ನುವ ಅನುಭವವಾಯ್ತು
ಜೊತೆಗೆ ಫೋಟೊಗಳಿಗೆ ನೀಡಿದ ಶೀರ್ಷಿಕೆಗಳಂತೂ ಸಕ್ಕತ್.
ಅಂದ ಹಾಗೆ ಫೋಟೋ ತೆಗೆಯುವುದಕ್ಕೆ ಕೈಚಳಕ ಬೇಕಿದೆಯೇ . ನಾನೂ ಒಮ್ಮೊಮ್ಮೆ ನಿಸರ್ಗದ ಭಾವಚಿತ್ರ ತೆಗೆಯುತ್ತೇನೆ.ಆದರೆ ಅವಾವುದೂ ನೀವುಗಳು ತೆರೆದಷ್ಟು ಕ್ಲಿಯರ್ ಆಗಿ ಇರೋದಿಲ್ಲ

Ashok Uchangi said...

ಮ್ಯಾರಥಾನ್ ಫೋಟೋಗಳು ತುಂಬಾ ಚೆನ್ನಾಗಿವೆ.

all the best
ashok uchangi

sunaath said...

ಶಿವು,
ಇದು ನಿಜವಾಗಿಯೂ RUNning commentary.
ನಿಮಗೆ ಎಷ್ಟು ಅಭಿನಂದನೆ ಹೇಳಿದರೂ ಸಾಲದು!

shivu said...

ರಾಜೇಶ್,

ಮತ್ತೆ ನನ್ನ ಬ್ಲಾಗಿನ ಲೇಖನಕ್ಕೆ ಮೊದಲೇ ಬಂದಿದ್ದೀರಿ..ಓಟವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu said...

SSK ಮೇಡಮ್,

ಮ್ಯಾರಥಾನ್ ಓಟದ ಫೋಟೋಗಳು ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ನಾನು ಕ್ಯಾಮೆರಾ ತೆಗೆದುಕೊಂಡು ಹೋಗದಿದ್ದಲ್ಲಿ ಇನ್ನೆಷ್ಟು ಮಜಾ ಮಾಡುತ್ತಿದ್ದೆನೋ ಗೊತ್ತಿಲ್ಲ...ಅಲ್ಲಿನ ನಡೆಯುತ್ತಿದ್ದ ಸನ್ನಿವೇಶಗಳು ಓಡುವ ಉದ್ದೇಶವನ್ನು ಬೇರೇನು ಮಾಡಿದರು ಅಂತ ತಿಳಿದರೆ ನೀವು ಅದರಲ್ಲಿ ಒಂದು ಭಾಗವಾಗಬೇಕೆನಿಸುವುದು ಖಂಡಿತ....ಅದು ಮುಂದಿನ ಪೋಸ್ಟಿಂಗ್ ನಲ್ಲಿ ಖಂಡಿತ ಚಿತ್ರ ಸಹಿತ ಇರುತ್ತೆ..
ಹೀಗೆ ಬರುತ್ತಿರಿ...

shivu said...

ಗುರು,

ನಾನು ಇದರಲ್ಲಿ ಭಾಗವಹಿಸಲು ಮೂರು ತಿಂಗಳ ಹಿಂದೆಯೆ ಮೊಬೈಲಿನಲ್ಲಿ ರಿಮೈಂಡರ್ ಹಾಕಿ ಇಟ್ಟು ಕೊಂಡು ಬಿಟ್ಟಿದ್ದೆ. ಅದ್ದರಿಂದ ಅದನ್ನು ಮೊದಲೇ ಪ್ಲಾನ್ ಮಾಡಿ ಎಲ್ಲವನ್ನು ಕ್ಲಿಕ್ಕಿಸಿದ್ದು. ನೀವು ಯಾವುದಾದರೂ ವೈರೈಟಿ ವೇಷದಲ್ಲಿದ್ದರೇ ನನ್ನ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಳ್ಳುತ್ತಿರಲಿಲ್ಲವೇನೋ..

ನೋಡೋಣ ಮುಂದಿನ ಭಾರಿ....

ಓಟ-ಲೇಖನ-ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu said...

ದೀಪಸ್ಮಿತ ಸರ್,

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಪ್ರಭು,

ಇಂಥ ಕಾರ್ಯಕ್ರಮಗಳಲ್ಲಿ ಎಲ್ಲಾ ಜನರ ತಲೆಗಳು ಚೆನ್ನಾಗಿ ಓಡುತ್ತವೆ...ನಾನು ಈಗ ನೆಗಟೀವ್ ರೋಲ್ ಕ್ಯಾಮೆರಾ ಉಪಯೋಗಿಸುವುದನ್ನು ನಿಲ್ಲಿಸಿ ಡಿಜಿಟಲ್ ಕ್ಯಾಮೆರಾದಿಂದ ಕ್ಲಿಕ್ಕಿಸುತ್ತಿದ್ದೇನೆ. ಹಾಗೂ ತೆಗೆದ ಐನೂರಕ್ಕೂ ಹೆಚ್ಚು ಫೋಟೋಗಳಲ್ಲಿ ಇಲ್ಲಿ ಹಾಕಿರುವುದು ಕಡಿಮೆ..ಪ್ರತಿಯೊಂದು ಫೋಟೋ ಕೂಡ ಒಂದೊಂದು ಕತೆ ಹೇಳುವಂತಿದೆ...ಬ್ಲಾಗಿನಲ್ಲಿ ಓದುವವರಿಗೆ ಬೇಸರವಾಗಬಾರದೆಂದು ಕೆಲವೇ ಫೋಟೋಗಳು ಮತ್ತು ಅದಕ್ಕೆ ಸಂಭಂದಿಸಿದ ಲೇಖನವನ್ನು ಮಾತ್ರ ಬರೆದಿದ್ದೇನೆ...

ಧನ್ಯವಾದಗಳು.

shivu said...

ಹರೀಶ್,

ಈ ಓಟದ ಚಿತ್ರಗಳು ಬೆಂಗಳೂರಿನ ಹೊರಗಿರುವವರಿಗೂ ಸಿಕ್ಕಲಿ ಅನ್ನುವ ಉದ್ದೇಶವಿತ್ತು. ಮತ್ತು ಎಲ್ಲಿ ಹೋದರೂ ಇಂಥ ಹೊಸದನ್ನು ಹುಡುಕುವತ್ತಲೇ ನನ್ನ ಗಮನವಿರುತ್ತದೆ.
ಮತ್ತೆ ಬರೆದಿದ್ದೂ ತುಂಬಾ ಇತ್ತು. ಅದನ್ನು ಕತ್ತರಿಸಿ ಅರ್ಜೇಂಟ್ ಆಗಿ ಹಾಕಿದ ಲೇಖನವೆಂದರೇ ಇದೇ ಇರಬೇಕು.

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಸಂದೀಪ್,

ಓಟ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಜಲನಯನ ಸರ್,

ನಮ್ಮ ಓಟದ ಲೇಖನದಿಂದ ನಿಮ್ಮ ಸ್ನಾತಕೋತ್ತರ ಪದವಿಯ ಓಟ ನೆನಪಿಸಿಕೊಂಡಿದ್ದೀರಿ..ಚಿತ್ರಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

b.saleem said...

ಶಿವು ಸರ್
ಮ್ಯಾರಥಾನ್ ಓಟವನ್ನು ಸಂಸ್ಕ್ರುತಿಕವಾಗಿ ತೊರಿಸಿದ್ದಿರಿ ಬೆಂಗಳೂರಿಗೆ ಬಂದು ಇಡೀ ಮ್ಯಾರಥಾನ್ ನೋಡಿದಂತೆಯೇ ಆಯಿತು.ಚಿತ್ರಗಳು ತುಂಬಾ ಚನ್ನಾಗಿದೆ.

shivu said...

ರೂಪ,

ಕೂತಲ್ಲೇ ಮ್ಯಾರಥಾನ್ ಮಜ ಅನುಭವಿಸಿದ್ದಕ್ಕೆ ಧನ್ಯವಾದಗಳು...ಹೀಗೆ ಬರುತ್ತಿರಿ...

ವಿನುತ said...

ಒ೦ದು ಮ್ಯಾರಥಾನ್ ನಲ್ಲಿಯೂ ಎಷ್ಟೊ೦ದು ವೈವಿಧ್ಯಗಳು!! ನಿಮ್ಮ ಕುತೂಹಲಕಾರಿ ಪ್ರವೃತ್ತಿಗೆ ಅಭಿನ೦ದನೆಗಳು. ಚಿತ್ರಗಳು, ಜೊತೆಗೆ ವಿವರಣೆಗಳು ಎಲ್ಲವೂ ತು೦ಬಾ ಸೊಗಸಾಗಿವೆ.

shivu said...

ಕುಲಕರ್ಣಿ ಸರ್,

ನಾನು ಓಡಿರಲಿಲ್ಲವಾದ್ದರಿಂದ ನನಗೆ ಸುಸ್ತಾಗಿರಲಿಲ್ಲ. ಫೋಟೋ ತೆಗೆಯುತ್ತಾ ಇದೆನೆಲ್ಲಾ ಮಜ ಮಾಡುತ್ತಾ ಮನೆ ತಲುಪಿದಾಗ ಮದ್ಯಾಹ್ನ ಒಂದು ಗಂಟೆ. ಬೆಳಗಿನ ಉಪಹಾರ ಮತ್ತು ಕಾಫಿ ಕಟ್. ಮತ್ತೆ ಇದೊಂದು ಲೇಖನಕ್ಕೆ ಸುಮಾರು ನಲವತ್ತು ಚಿತ್ರಗಳು ಎಲ್ಲಾ ಚೆನ್ನಾಗಿದ್ದವು. ಬ್ಲಾಗಿನಲ್ಲಿ ದೊಡ್ಡದಾಗಬಾರದು ಅಂತ ಅದನ್ನು ಕಡಿಮೆ ಮಾಡಿದೆ.

ಧನ್ಯವಾದಗಳು.

shivu said...

ಶ್ರೀಶಂ ಸರ್,

ಓಟದ ಲೇಖನಗಳು ಮತ್ತು ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..ಇದರದೇ ಮುಂದಿನ ಲೇಖನಕ್ಕೆ ಖಂಡಿತ ಬನ್ನಿ ಅದು ಮತ್ತಷ್ಟು ಮಜವಾಗಿದೆ...

ಧನ್ಯವಾದಗಳು.

shivu said...

ಶ್ಯಾಮ್ ಸಾಜನ್‌ಕಿಲ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಫೋಟೊ ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್....ಮತ್ತೆ ನೀವು ಹೇಳಿದ ಪದಗಳ ತಪ್ಪುಗಳನ್ನು ತಿದ್ದಿಕೊಳ್ಳುತ್ತೇನೆ. ಮೊದಲ ಬಾರಿಗೆ ಒಂದೇ ಉಸುರಿಗೆ ಬರೆದು ಬ್ಲಾಗಿಗೆ ಹಾಕಿದ್ದರಿಂದ ಹೀಗೆ ಆಗಿರಬಹುದು...ತಪ್ಪುಗಳನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್...
ಇದರದೇ ಮುಂದಿನ ಲೇಖನಕ್ಕೆ ಖಂಡಿತ ಬನ್ನಿ.

shivu said...

ರವಿಕಾಂತ್ ಸರ್,

ನಾನು ಯಾವ ಲೇಖನವನ್ನು ಇಷ್ಟ ಅವಸರವಾಗಿ ಸಿದ್ದಪಡಿಸಿದವನಲ್ಲ...ಥೇಟ್ ವರದಿಗಾರನ ಹಾಗೆ ಇದರಲ್ಲಿ ತೊಡಗಿಸಿಕೊಂಡಿದ್ದರಿಂದ ಪದಗಳಲ್ಲಿ ತಪ್ಪುಗಳಾಗಿವೆ. ಮತ್ತು ನಾನು ಯಾವುದೇ ಲೇಖನವನ್ನು ಬರೆದರೂ ಅದನ್ನು ಮೂರ್ನಾಲ್ಕು ಸಲ ಓದಿ ತಿದ್ದಿ ತೀಡಿದ ನಂತರವೇ ಬ್ಲಾಗ್ ಅಥವ ಪತ್ರಿಕೆಗೆ ಕಳಿಸುವುದು ನೀವು ಗುರುತಿಸಿದ ತಪ್ಪುಗಳನ್ನು ತಿದ್ದುತ್ತೇನೆ...ಮತ್ತೆ ಫೋಟೋಗಳನ್ನು ಮೆಚ್ಚಿಕೊಂಡಿದ್ದಕ್ಕೆ ಮತ್ತು ಆಗುವ ತಪ್ಪುಗಳನ್ನು ಗುರುತಿಸಿ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು.

RAMU said...

ಶಿವು,
ನಾನು ಇಲ್ಲಿಯವರೆವಿಗೂ ಯಾವುದೇ ಮ್ಯಾರಥಾನ್ ನೋಡಿಯೇ ಇಲ್ಲ. ಇಂದು ನಿಮ್ಮ ಬರವಣಿಗೆಯಲ್ಲಿ ಮ್ಯಾರಥಾನ್ ನೋಡಿದ ಅನುಭವವಾಯಿತು.
ಫೋಟೋ ಮತ್ತು ಅದರ ಶೀರ್ಷಿಕೆಗಳು ತುಂಬಾ ಚೆನ್ನಾಗಿದೆ.
ಧನ್ಯವಾದಗಳು
--
RAMU M
9480427376

shivu said...

ಸತ್ಯ ನಾರಯಣ ಸರ್,

ನಾನು ಇಲ್ಲೇ ಎಲ್ಲೋ ಫೋಟೋ ತೆಗೆಯುತ್ತಿರಬಹುದು ಅಂತ ಸುಮಾರು ಜನರಿಗೆ ಅನ್ನಿಸಿದೆ ಓಡುತ್ತಾ ಬಂದು ಅನೇಕರು ಮಾತಾಡಿಸಿದರು...ಮತ್ತೆ ನನಗೆ ಫೋಟೋ ತೆಗೆಯುವುದಕ್ಕಿಂತ ಅದರಲ್ಲಿ ಭಾಗಿಯಾಗುವುದಕ್ಕೆ ತುಂಬಾ ಇಷ್ಟ. ಕಾರಣಾಂತರಗಳಿಂದ ತಪ್ಪಿಸಿಕೊಂಡೆ. ನನ್ನ ಇಂಥ ತರಲೇ ತಮಾಷೆ ಕೆಲಸಗಳನ್ನು ಸೃಜನಶೀಲತೆ ಅಂದಿದ್ದೀರಿ...ಧನ್ಯವಾದಗಳು. ಮತ್ತೆ ಮಾಧ್ಯಮ ಗೆಳಯರು ಲಾರಿಯಿಂದ ಬಿದ್ದ ವಿಚಾರ ನನಗೂ ಮರುದಿನ ಪತ್ರಿಕೆ ನೋಡಿದಾಗಲೇ ಗೊತ್ತಾಯಿತು.

ಚಿತ್ರಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು
ಇದರ ಮುಂದಿನ ಲೇಖನಕ್ಕೂ ಹೀಗೆ ಬನ್ನಿ

ಕ್ಷಣ... ಚಿಂತನೆ... Thinking a While.. said...

ಶಿವು ಸರ್‍,

ಫೋಟೋಗಳು ಅದ್ಭುತವಾಗಿವೆ ಮತ್ತು ಅವುಗಳಿಗೆ ನೀವಿತ್ತ ಶೀರ್ಷಿಕೆಗಳೂ ವಿಶಿಷ್ಟವಾಗಿವೆ. ನಿಮ್ಮ ಶ್ರಮಕ್ಕೆ ಅಭಿನಂದನೆಗಳು. ಮತ್ತಷ್ಟು ವಿಶೇಷ ಫೋಟೋಗಳು ಮುಂದಿನ ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ತರಲೆಂದು ಆಶಿಸುತ್ತಾ...

ಸ್ನೇಹದೊಂದಿಗೆ,

shivu said...

ವಿಕಾಶ್,

ಓಟದ ಚಿತ್ರಗಳ ಜೊತೆಗೆ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu said...

ರಾಘವ ಶರ್ಮ,

ದೆಹಲಿಯಲ್ಲಿ ಕುಳಿತುಕೊಂಡೇ ಇದನ್ನೆಲ್ಲಾ enjoy ಮಾಡಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ...

shivu said...

ಪರಂಜಪೆ ಸರ್,

ಈ ಬ್ಲಾಗ್ ಮಹೀಮೆಯೇ ಹಾಗೆ ಹೊರಗೆ ಕೆಲಸ ಮುಗಿಸಿ ಬಂದು ಯಾರದಾದರೂ ಲೇಖನವನ್ನು ಓದಿದರೆ ಮನಸ್ಸು ಉಲ್ಲಾಸಗೊಳ್ಳುತ್ತದೆ. ನಿಮಗೂ ಹಾಗೆ ಆಗಿರಬೇಕು ಅದಕ್ಕೇ ಬೇಗ ಬಂದಿದ್ದೀರಿ...

ಮತ್ತೆ ನನ್ನ ಬ್ಲಾಗನ್ನು ಜಂಕ್ಷನ್ ತರ ಉಪಯೋಗಿಸುತ್ತಿರುವುದಕ್ಕೆ ಧನ್ಯವಾದಗಳು.

ಮತ್ತೆ ಇದೊಂದೆ ಲೇಖನವನ್ನು ಮಾತ್ರ ಹಾಟ್ ನ್ಯೂಸ್ ಅನ್ನುವ ಹಾಗೆ ನಾನು ಒಂದೆ ಸಮನೆ ಬರೆದು ಚಿತ್ರಗಳನ್ನು ಎಡಿಟ್ ಮಾಡಿ ಬ್ಲಾಗಿಗೆ ಹಾಕಿದ್ದೇನೆ. ಅದಕ್ಕೆ ಪದಗಳಲ್ಲಿ ತಪ್ಪಾಗಿದೆ. ಅದನ್ನು ಸರಿಪಡಿಸುತ್ತೇನೆ.

ಆದರೂ ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದೀರಿ ಧನ್ಯವಾದಗಳು

shivu said...

ಮನಸು ಮೇಡಮ್,

ಓಟವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಟೋಪಿಗಳು, ಭೂಪಟಗಳನ್ನು ಅವುಗಳದೇ ಸರಣಿಯಲ್ಲಿ ಹಾಕುತ್ತೇನೆ. ಮತ್ತು ಇಲ್ಲಿ ಭೂಪಟಗಳ ಹಿಂದೆ ಬಿದ್ದಾಗ ಆದ ಅನುಭವವನ್ನು ಮುಂದಿನ ಲೇಖನದಲ್ಲಿ ಬರೆಯುತ್ತೇನೆ..
ಹೀಗೆ ಬರುತ್ತಿರಿ..

shivu said...

ರೂಪ,

ನಾನಂತೂ ಓಡಲಿಲ್ಲ...ಅದಕ್ಕೇ ಇದನ್ನು ಓದಿದವರರಾದರೂ ಅದರ ಆನುಭವವಾಗಲಿ ಅನ್ನುವ ಉದ್ದೇಶವಿಟ್ಟುಕೊಂಡೇ ಚಿತ್ರ ಸಹಿತ ಕೊಡಲೆತ್ನಿಸಿದ್ದೇನೆ. ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

ಹಾಡುತ್ತಾ ಹಾಡುತ್ತಾ ರಾಗ ಅನ್ನುವ ಹಾಗೆ ನೀವು ಸುಮ್ಮನೇ ಫೋಟೋ ತೆಗೆಯುತ್ತಿರಿ....ಒಂದಷ್ಟು ಅನುಭವವಾದರೆ ಜೊತೆಗೆ ಸ್ವಲ್ಪ ಇಚ್ಚಾಶಕ್ತಿಯು ಇದ್ದರೆ ಕಲಿಯುವುದು ಸುಲಭ.

all the best.

ಸಾಗರದಾಚೆಯ ಇಂಚರ said...

ಶಿವೂ ಸರ್,
ಸಿಂಪ್ಲಿ ಸುಪೆರ್ಬ್,
ಫೋಟೊಗಳಂತೋ ಅದ್ಭುತ

shivu said...

ಆಶೋಕ್,

ತುಂಬಾ ದಿನಗಳ ನಂತರ ಬ್ಲಾಗಿಗೆ ಬಂದಿದ್ದೀರಿ....ಧನ್ಯವಾದಗಳು. ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಬ್ಲಾಗ್ ಬರೆಯಿರಿ...ನಿಲ್ಲಿಸಬೇಡಿ...
ನಿಮ್ಮ ಹೊಸ ಲೇಖನದ ನಿರೀಕ್ಷೆಯಲ್ಲಿದ್ದೇನೆ...
ಧನ್ಯವಾದಗಳು.

shivu said...
This comment has been removed by the author.
shivu said...

ಸುನಾಥ್ ಸರ್,

ಚಿತ್ರ ಲೇಖನವನ್ನು ರನ್ನಿಂಗ್ ಕಾಮೆಂಟರಿಗೆ ಹೋಲಿಸಿದ್ದೀರಿ...ಧನ್ಯವಾದಗಳು

shivu said...

ಸಲೀಂ

ಮತ್ತೆ ನಿಮ್ಮ ಬಿಡುವಿನ ಕೆಲಸದ ನಡುವೆ ಬ್ಲಾಗ್ ನೋಡಿದ್ದೀರಿ..ಲೇಖನವನ್ನು ಇಷ್ಟಪಟ್ಟಿದ್ದೀರಿ ಧನ್ಯವಾದಗಳು...

ಈ ಬಾರಿ ನಿಮಗೆ ಸೀಜನ್ ಚೆನ್ನಾಗಿರಬೇಕಲ್ಲ...ಮತ್ತಷ್ಟು ಬ್ಯುಸಿಯಾಗಿರಿ ಅಂತ ಆರೈಸುತ್ತೇನೆ.
ಹೀಗೆ ಬರುತ್ತಿರಿ...

shivu said...
This comment has been removed by the author.
shivu said...

ವಿನುತಾ,

ನಮ್ಮ ಬೆಂಗಳೂರಿನ ಮ್ಯಾರಥಾನ್ ಹಾಗೆ ಇದೊಂದೆ ಅಲ್ಲ..ಇಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ವೈವಿಧ್ಯಮಯವೇ...ಓಟದ ಚಿತ್ರ-ಲೇಖನಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu said...

ರಾಮು,

ನೀವು ಮಾಧ್ಯಮದಲ್ಲಿದ್ದು ಹೊಸ ಕ್ಯಾಮೆರಾ ಇಟ್ಟುಕೊಂಡು ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇದ್ದರೇ ಹೇಗೆ. ಇಂಥವನ್ನೆಲ್ಲಾ ತಪ್ಪಿಸಿಕೊಳ್ಳಬಾರದು...ಮುಂದಿನ ಬಾರಿ ಖಂಡಿತ ತಪ್ಪಿಸಿಕೊಳ್ಳಬೇಡಿ...

ಚಿತ್ರ ಲೇಖನವನ್ನು ಇಷ್ಟಪಟ್ಟ್ಟಿದ್ದಕ್ಕೆ ಥ್ಯಾಂಕ್ಸ್...

shivu said...

ಕ್ಷಣ ಚಿಂತನೆ ಸರ್,

ಓಟದ ಫೋಟೋಗಳನ್ನೆಲ್ಲಾ ಅವಸರದಲ್ಲಿ ಎಡಿಟ್ ಮಾಡಿದ್ದೇನೆ. ಮತ್ತು ಲೇಖನವೂ ಅದೇ ಅವಸರದಲ್ಲಿ ಸಿದ್ದವಾಗಿದೆ...ಆದರೂ ಇಷ್ಟಪಟ್ಟಿದ್ದೀರಿ..

ಮತ್ತೆ ಖಂಡಿತ ನಾನು ನಿರೀಕ್ಷಿಸಿದ್ದ ಸ್ಪರ್ಧಾತ್ಮಕ ಫೋಟೋಗಳು ಸಿಕ್ಕಿವೆ. ದನ್ಯವಾದಗಳು.

shivu said...

ಗುರುಮೂರ್ತಿ ಹೆಗಡೆ ಸರ್,

ಓಟದ ಫೋಟೊಗಳು ಮತ್ತು ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಜ್ಞಾನಮೂರ್ತಿ said...

ಬೆಂಗಳೂರುನಲ್ಲಿ ನಡೆದ ಮ್ಯಾರಥಾನ್ ಓಟವು ತುಂಬಾ ಖುಷಿಯಾ ವಿಚಾರವಾದರೂ ಓಟದ ಸಮಯದಲ್ಲಿ ಅಪಘಾತದಿಂದ ಛಾಯಾಗ್ರಾಹಕರು ಗಾಯಗೊಂಡಿದು ದುಃಖಕರ ಸಂಗತಿ..

ಧರಿತ್ರಿ said...

ಶಿವಣ್ಣ.....
ಕ್ರಿಯಾಶೀಲತೆಯೂ ಒಂದು ಅಮೂಲ್ಯ ಕಲೆಯಾದರೆ, ಅದನ್ನೆ ಹಾಸ್ಯಮಯವಾಗಿ ನಿರೂಪಿಸಿ ಎಲ್ಲಾ ರೀತಿಯಿಂದಲೂ ಓದುಗರ ಮನಗೆಲ್ಲುವುದೂ ಕೂಡ ಅದ್ಭುತ ಕಲೆ. ಫೋಟೋಗಳು ಸುಂದರವಾಗಿವೆ ಎನ್ನುವುದು ಮಾಮೂಲಿ ಬಿಡಿ...ಅದವು ಚೆನ್ನಾಗೇ ಇರ್ತಾವೆ..ಆದರೆ ಅದಕ್ಕೆ ನೀಡಿದ ಶೀರ್ಷಿಕೆಗಳು ತುಂಬಾ ಚೆನ್ನಾಗಿವೆ..ಒಂದೇ ಸಲಕ್ಕೆ ನಮ್ಮನ್ನು ಸೆಳೆದುಬಿಡುತ್ತವೆ. ಕೆಲ ಬರಹಗಳ ನಂತರ ನಾನು ಮೆಚ್ಚಿದ ಇನ್ನೊಂದು ಉತ್ತಮ ಬರಹ. ಧನ್ಯವಾದಗಳು..ಮುಂದುವರೆಯಲಿ..ಓಡುವವರು ಏನು ಮಾಡಿದರು ಅನ್ನೋದನ್ನು ನಿಮ್ಮ ಮಾತಿನಿಂದಲೇ ಕೇಳಲು ಕಾಯ್ತಾ ಇದ್ದೀನಿ.

-ಧರಿತ್ರಿ

shivu said...

ಜ್ಞಾನ ಮೂರ್ತಿ ಸರ್,

ನನ್ನ ಮಾಧ್ಯಮ ಮಿತ್ರರು ಇಂಥ ಕೆಲಸಗಳನ್ನು ಅದೆಷ್ಟು ಅರ್ಪಣ ಮನೋಭಾವನೆಯಿಂದ ಇರುತ್ತಾರೆಂದರೆ ಅವರಿಗೆ ಅತ್ಯುತ್ತಮವಾದುದನ್ನು ಕೊಡಬೇಕೆಂಬ ಅರೋಗ್ಯಕರ ಸ್ಪರ್ಧೆ ಎಲ್ಲರ ಮನಸ್ಸಿನಲ್ಲಿಯೂ ಇರುತ್ತದೆ. ಇಂಥ ಸ್ಪರ್ಧಾತ್ಮಕ ಕೆಲಸಗಳಲ್ಲಿ ಆಗುವ ಅನಿರೀಕ್ಷಿತಗಳನ್ನು ಅನುಭವಿಸಲೇಬೇಕು.
ನನಗೂ ಇದು ಅಮೇಲೆ ಗೊತ್ತಾಯಿತು...ಬೇಸರವಾಯಿತು..

shivu said...

ಧರಿತ್ರಿ,

ಕ್ರಿಯಾಶೀಲತೆ, ಹಾಸ್ಯ ಇತ್ಯಾದಿ ಏನೋನೋ ಹೊಗಳಿದ್ದೀಯ...ನಾನು ಆ ಸಮಯದಲ್ಲಿ ಆಗುವ ಎಲ್ಲಾ ಆನಂದ, ಮಜವನ್ನು ಎರಡು ಕೈಗಳಿಂದ ಬಾಚಿಕೊಳ್ಳುಲು ಯತ್ನಿಸುತ್ತೇನೆ. ಮೊದಲ ಗುರಿ ಅದೇ ಆಗಿರುತ್ತದೆ...ನಾನು enjoy ಮಾಡಿದರೆ ತಾನೆ ಅದನ್ನು ಇಲ್ಲಿ ಹಂಚಿಕೊಳ್ಳಲು ಸಾಧ್ಯ....ಜೊತೆಯಲ್ಲೇ ಫೋಟೋಗ್ರಫಿ ಸಾಗಿರುತ್ತದೆ.

ಮತ್ತೆ ಅವಸರವಾಗಿ ಬರೆದ ಲೇಖನ ಇದೊಂದೆ ಇರಬೇಕು... ಅದನ್ನು ನೀನು ಮೆಚ್ಚಿ ಹೊಗಳಿದ್ದೀಯಾ...ಬೇರೆ ಗೆಳೆಯರು ಅಕ್ಷರಗಳಲ್ಲಾದ ತಪ್ಪುಗಳನ್ನು ತಿದ್ದಿಕೊಳ್ಳಲು ಹೇಳಿದ್ದಾರೆ..ಇದೇ ಲೇಖನದ ಮುಂದಿನ ಸರಣಿಯನ್ನು ಬರೆಯುತ್ತಿದ್ದೇನೆ. ಮುಂದಿನ ಫೋಸ್ಟಿಂಗ್‌ನಲ್ಲಿ ಹಾಕುತ್ತೇನೆ....

ಧನ್ಯವಾದಗಳು.
ಮುಂದಿನ ಲೇಖನವನ್ನು

ಶಿವಪ್ರಕಾಶ್ said...

shivu,
superb photos.

shivu said...

ಶಿವಪ್ರಕಾಶ್,

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್....

ಚಿತ್ರ ಲೇಖನ ಓದುತ್ತಿದ್ದ ಹಾಗೆ ..
ನಾವೂ ಕೂಡ ಓಡಿದ ಹಾಗಾಯ್ತು...

ಒಂದು ಘಟನೆಯನ್ನು ನಿಮ್ಮ ಕೈಗೆ ಸಿಕ್ಕರೆ..
ಫೋಟೊಗಳಿಂದ.....
ಲೇಖನದಿಂದ ಚಂದವಾಗಿ ಬಣ್ಣಿಸ ಬಲ್ಲೀರಿ...
ನಿಮ್ಮ ಆ ಸಾಮರ್ಥ್ಯಕ್ಕೆ...
ಹ್ರದಯ ಪೂರ್ವಕ ಅಭಿನಂದನೆಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಜೋಡಿ, ತ್ರಿವಳಿ ಚಿತ್ರಗಳು ಸೂಪರ್. ದಪ್ಪ-ಸಣ್ಣ, ಉದ್ದ-ಗಿಡ್ಡ, ಜಡೆರಾಯರು, ತಂದೆ-ಮಗಳು, ವೇಷಧಾರಿಗಳು... ಒಂದಕ್ಕಿಂತ ಒಂದು ಸೊಗಸಾಗಿವೆ. ಯಾವ ಟಿವಿ ಛಾನಲ್ ನಲ್ಲೂ ಇಷ್ಟೊಂದು ವಿಸ್ತೃತ ಫೋಟೋ ವಿವರಣೆ ಸಿಗಲಿಲ್ಲ. ಇನ್ನೂ ಓಡದೆ ಏನೇನು ಮಾಡಿದರು ಅಂತ ತೋರಿಸುವೆ ಎಂದು ಕುತೂಹಲ ಹುಟ್ಟಿಸಿದ್ದೀರಿ. ಅದಕ್ಕಾಗಿ waiting...

umesh desai said...

ಓಡದೇ ಮನೆಯಲ್ಲಿ ಉಳಿದ ನನ್ನಂತಹ ಸೋಮಾರಿಗಳಿಗೆ ಜೈ ...!
ಫೋಟೋ ಒಂದೊಂದು ಸೂಪರ್ ನಮ್ಮ ಬೆಂಗಳೂರಿನವರ ಮುಖದಲ್ಲಿ ಈ ಪಾಟಿ ನಗು ಐತಲ್ಲ ಅದೇ ಸೋಜಿಗ....!

Naveen...ಹಳ್ಳಿ ಹುಡುಗ said...

ಅಣ್ಣ ಲೇಖನ ಮತ್ತು ಚಿತ್ರಗಳು ಚೆನ್ನಾಗಿವೆ...
ಬರೆಯುತ್ತಿರಿ....

ಬಾಲು said...

chitra lekhana super ide!!! really wonderfull... ulida ashtu photo galannu nammondige hanchikolli.

shivu said...

ಪ್ರಕಾಶ್ ಸರ್,

ನನ್ನ ಓಟದ ಲೇಖನದಿಂದ ನಿಮಗೂ ಓಡಿದ ಅನುಭವವಾಗಿದ್ದಕ್ಕೆ ನನ್ನ ಕ್ಲಿಕ್ ಮತ್ತು ಬರವಣಿಗೆ ಸಾರ್ಥಕ
ಧನ್ಯವಾದಗಳು.

shivu said...

ಮಲ್ಲಿಕಾರ್ಜುನ್,

ಅಂದು ಬೆಳಿಗ್ಗೆ ನಾನು ಇವರೆಲ್ಲರ ಫೋಟೊ ತೆಗೆಯುತ್ತಿದ್ದಾಗ ನಿಮ್ಮ ಫೋನ್ ಬಂತು. ಆಗ ಅಲ್ಲಿ ನಡೆಯುತ್ತಿರುವ ಘಟನೆಗಳನ್ನೆಲ್ಲಾ ರನ್ನಿಂಗ್ ಕಾಮೆಂಟರಿ ತರ ಹೇಳುತ್ತಾ ಕ್ಲಿಕ್ಕಿಸುತ್ತಿದ್ದೆ. ಎಲ್ಲವನ್ನು ರಾಶಿಹಾಕಿ ಈ ರೀತಿ ಆರಿಸುವ ಹೊತ್ತಿಗೆ ಸಂಜೆಯಾಗಿಬಿಟ್ಟಿತ್ತು. ಉಳಿದ ವಿಚಾರವನ್ನು ಬರೆಯುತ್ತಿದ್ದೇನೆ. ಸಾಧ್ಯವಾದಷ್ಟು ಬೇಗ ಬ್ಲಾಗಿಗೆ ಹಾಕುತ್ತೇನೆ.

ಧನ್ಯವಾದಗಳು.

shivu said...

ಉಮೇಶ್ ದೇಸಾಯಿ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಈ ಲೇಖನ ಅಂದು ಓಡದೇ ನೋಡದೆ ಬೇರೆ ಕೆಲಸದಲ್ಲಿ ತೊಡಗಿರುವವರಿಗಾಗಿ. ಅದರಲ್ಲಿ ನೀವು ಸೇರಿಕೊಂಡಿದ್ದೀರಿ...ಮತ್ತೆ ಈ ಫೋಟೋದಲ್ಲಿರುವ ನಗುವನ್ನೇ ಸೂಪರ್ ಅನ್ನುತ್ತಿರಲ್ಲಾ...ಮುಂದಿನ ಸರಣಿಯಲ್ಲಿ ಹಾಕುವ ಫೋಟೋಗಳನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ...

ಧನ್ಯವಾದಗಳು.

shivu said...

ನವೀನ್ ಥ್ಯಾಂಕ್ಸ್...ಹೀಗೆ ಬರುತ್ತಿರಿ...

pradeep said...

ಚೆನ್ನಾಗಿದೆ ಸಾರ್... ಆದರೆ, ಅದೇ ರವಿವಾರ ರಾತ್ರಿ ಮಳೆಯಲ್ಲಿ ನಮ್ಮ "ಓಟ"ದ ಎದುರು ಈ ಓಟ ಏನೂ ಇಲ್ಲ!!! ;-)

- ಪ್ರದೀಪ್
http://prakavi.wordpress.com/

shivu said...

ಬಾಲು ಸರ್,

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಅನಿಸಿಕೆಯಂತ ಎಲ್ಲಾ ಫೋಟೋಗಳನ್ನು[ಐನೂರಕ್ಕೂ ಹೆಚ್ಚು]ಬ್ಲಾಗಿಗೆ ಹಾಕಲು ಸಾಧ್ಯವೇ.? ಅದರಲ್ಲಿ ಕೆಲವನ್ನು ಮಾತ್ರ ಹಾಕಿದ್ದೇನೆ.

ಧನ್ಯವಾದಗಳು.

shivu said...

ಪ್ರದೀಪ್,

ನೀವು ಹೇಳೋದು ನಿಜ ಕಣ್ರಿ....ನನ್ನ ಲೇಖನದಲ್ಲಿರುವುದೆಲ್ಲಾ ಸುಖದ, ಆನಂದದ ಓಟಗಳು. ನಿಜಕ್ಕೂ ನೀವು ಹೇಳಿದಂತೆ ಮಳೆಯಲ್ಲಿ ನೆನೆಯುತ್ತಾ ಓಡುವ ಕಷ್ಟದ ಓಟವನ್ನು ಅನುಭವಿಸಿವರಿಗೆ ಗೊತ್ತು ಅದರ ಕಷ್ಟ. ಅದನ್ನು ಅದನ್ನು ಮುಂದೆಂದಾದರೂ ಸೆರೆಯಿಡಿಯಲು ಪ್ರಯತ್ನಿಸುತ್ತೇನೆ...ಹೊಸ ಐಡಿಯಾ ಕೊಟ್ಟ ನಿಮಗೆ ಧನ್ಯವಾದಗಳು...ಹೀಗೆ ಬರುತ್ತಿರಿ..

rakesh holla said...

Ow..! Article tumba chennagi mudibndide...
Kanmunde banda hagaytu...

shivu said...

ರಾಕೇಶ್,

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ..

ಉಮೇಶ ಬಾಳಿಕಾಯಿ said...

ಆಹಾ...ಶಿವು ಸರ್, ಈ ಮ್ಯಾರಥಾನ್ ಗಳಲ್ಲಿ, ಓಟಗಳಲ್ಲಿ ಒಂದು ವೈವಿಧ್ಯಮಯ ಲೋಕವೇ ಇರುತ್ತದೆ ಅಂತ ಗೊತ್ತೇ ಇರ್ಲಿಲ್ಲ... ಎಷ್ಟೊಂದು ಬಗೆಯ ಜನ, ಏನವರ ವೇಷ ಭೂಷಣ.. ನಯನ ಮನೋಹರ...

ಪ್ರತಿ ಫೋಟೋ ಅದ್ಭುತವಾಗಿ ಮೂಡಿ ಬಂದಿವೆ.. ದೀಪಿಕಾ ಪಡುಕೋಣೆ ಫೋಟೋ ಇರುತ್ತೇನೋ ಅಂದ್ಕೊಂಡಿದ್ದೆ ;).. ಅವ್ಳು ನಿಮ್ಗೆ ನೋಡೋಕೆ ಸಿಕ್ಲಿಲ್ವ ಸರ್..

ಆಂ..ಏನಂದ್ರೀ.. ಅಲ್ಲಿ ಓಡೋದನ್ನು ಬಿಟ್ಟು ಬೇರೆ ಕೆಲಸಗಳನ್ನೂ ಮಾಡ್ತಾರಾ.. ಬೇಗ ಅವುಗಳ ಬಗ್ಗೆಯೂ ಬರೆಯಿರಿ ..

NiTiN Muttige said...

Photos chennagide.. alli hogalu aagiralilla.. chendaneya photo kke dhanyavaada..

Annapoorna Daithota said...

otavannu nodisiddakke dhanyavadagalu :)

ಬಿಸಿಲ ಹನಿ said...

ನಾನು ದೂರದ ಲಿಬಿಯಾದಲ್ಲಿದ್ದರೂ ಬೆಂಗಳೂರುನಲ್ಲಿ ನಡೆದ ಓಟವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಿರಿ. ನಾನೂ ಆ ಓಟದಲ್ಲಿ ಭಾಗವಹಿಸಿದಂಥ ಅನುಭವವಾಯಿತು. ಲೇಖನ ಮತ್ತು ಫೋಟೋಗಳು ಚನ್ನಾಗಿ ಬಂದಿವೆ. ಇದೇ ಘಟನೆಗೆ ಸಂಬಂಧಿಸಿದ ಮತ್ತಷ್ಟು ತಮಾಷೆಯ ವಿಷಯಗಳಿಗಾಗಿ ಕಾಯುತ್ತಲಿರುವೆ.

shivu said...

ಉಮೇಶ್ ಸರ್,

ಮ್ಯಾರಥಾನ್ ಓಟದಲ್ಲಿ ತುಂಬಾ ವೈವಿದ್ಯತೆಗಳಿತ್ತು ಅವುಗಳಲ್ಲಿ ಕೆಲವೊಂದು ಮಾತ್ರ ಬ್ಲಾಗಿಗೆ ಬಂದಿವೆ. ಮತ್ತೆ ನಾನಿದ್ದ ಕಡೆ ದೀಪಿಕ ಪಡುಕೋಣೆ ಬರಲಿಲ್ಲ. ಬಹುಶಃ ಆಕೆ ಸ್ಟೇಡಿಯಂ ಬಿಟ್ಟು ಹೊರಗೆ ಬರಲೇ ಇಲ್ಲವೇನೋ.,..

ಮತ್ತೆ ಮುಂದಿನ ಪೋಸ್ಟಿಂಗ್‌ನಲ್ಲಿ ನೀವು ನಿರೀಕ್ಷಿಸಿದ್ದು ಬರುತ್ತದೆ. ಅದರ ಫೋಟೋಗಳನ್ನು ಅಯ್ಕೆ ಮಾಡಿ ಬರೆಯುತ್ತಿದ್ದೇನೆ. ಹೀಗೆ ಬರುತ್ತಿರಿ...

ಓಟ ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

shivu said...

ನಿತಿನ್,

ಓಟದಲ್ಲಿ ಭಾಗವಹಿಸದಿದ್ದರೂ ಇದನ್ನು ನೋಡಿ enjoy ಮಾಡಿದ್ದಕ್ಕೆ ಧನ್ಯವಾದಗಳೂ.

shivu said...

ಅನ್ನಪೂರ್ಣ ಮೇಡಮ್,

ಬ್ಲಾಗಿಗೆ ಬಂದು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu said...

ಉದಯ್ ಸರ್,


ನೀವು ದೂರದ ಲಿಬಿಯದಲ್ಲಿದ್ದರೂ ಓಟದ ಅನುಭವವನ್ನು ನನ್ನ ಲೇಖನದಿಂದ ಪಡೆದುಕೊಂಡಿರುವುದು ನಾನು ಬರೆದದ್ದಕ್ಕೂ ಸಾರ್ಥಕವೆನಿಸುತ್ತದೆ. ಇನ್ನೂ ತಮಾಷೆಯ ವಿಚಾರಗಳು ಮುಂದಿನ ಭಾರಿ ಹಾಕುತ್ತೇನೆ...

ಧನ್ಯವಾದಗಳು.

Godavari said...

ಶಿವೂ ಅವರೇ,

ಬೆಂಗಳೂರಿನ ಓಟದ ಇಷ್ಟೆಲ್ಲಾ ವೈವಿಧ್ಯವನ್ನು ನೋಡಿ ಅಚ್ಚರಿಯಾಯಿತು...
ನಾನು ಓದಿದ ಯಾವ ದಿನಪತ್ರಿಕೆಯಲ್ಲೂ ಈ ಓಟದ ಸುದ್ದಿ ಇಷ್ಟು ವಿವರವಾಗಿ ಮೂಡಿಬಂದಿರಲಿಲ್ಲ.. ನಿಮ್ಮ ಕ್ಯಾಮೆರಾ ಕಣ್ಣು ಇವನ್ನೆಲ್ಲ ಸೆರೆಹಿಡಿದು ಸಚಿತ್ರ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು..

-ಗೋದಾವರಿ

shivu said...

ಗೋದಾವರಿ ಮೇಡಮ್,

ನಿಮ್ಮ ಅಭಿಪ್ರಾಯವೇ ನನ್ನ ಉದ್ದೇಶವೂ ಆಗಿತ್ತು. ಆ ಕೆಲಸ ಯಶಸ್ವಿಯಾಗಿದೆ ಅಂತ ಈಗ ನನಗನ್ನಿಸಿದೆ. ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಅಂತರ್ವಾಣಿ said...

ಶಿವಣ್ಣ,
ಅಲ್ಲೊಂದಿ ಭೂಪಟ್ ಇತ್ತು.. ಗಮನಿಸಿದ್ದೀರಾ?

shivu said...

ಜಯಶಂಕರ್,

ಭೂಪಟವನ್ನು ಗಮನಿಸಿ ಅದರ ಫೋಟೋವನ್ನು ತೆಗೆದಿದ್ದೇನೆ...ಅದನ್ನು ಮ್ಯಾಚ್ ಮಾಡುವ ಕೆಲಸವಷ್ಟೆ ಬಾಕಿ ಇರುವುದು...ಧನ್ಯವಾದಗಳು.

Madivala Venkatesh/ಮಡಿವಾಳ ವೆಂಕಟೇಶ said...

ಅಬ್ಬಬ್ಬ ,,...!!
ಒಳ್ಳೆಯದು ವಿಶಿಸ್ತವಾದುದು ವಿಶೇಷವಾದುದು ಜನರನ್ನು ಖಂಡಿತ ಸೆಳೆವದು-ಅದು ನಾ ಹೇಳಿದ್ದು ಆ ಓಟದ ಬಗ್ಗೆ ಅಲ್ಲ ನಿಮ್ಮ ಬ್ಲಾಗ್ ಫಾಲೋ ಆಗುವವರ ಸಂಖ್ಯೆ ಬಗ್ಗೆ- ಈಗ ಹೆಚ್ಚು ಕಡಿಮೆ 1 ಲಕ್ಷ 80 ಸಾವಿರ ದಾಟಿದೆ ಭೇಟಿ ಇತ್ತವರ ಸಂಖ್ಯೆ -ಶೀಘ್ರದಲ್ಲಿ ಅದು 2 ಲಕ್ಷ ದಾಟಿ ಮುನ್ನುಗ್ಗಲಿ ಎಂದು ಹಾರೈಸುವೆ... ಉತ್ತಮ ಬ್ಲಾಗ್...ಕೆಲ ದಿನಗಳ ನಂತರ ಭೇಟಿ ಇತ್ತೇ... ಸಖತ್ ಬರಹ ಮಾರಾಯರೆ..
ಉತ್ತಮ ಸಚಿತ್ರ ಸಹಿತ ಮಾಹಿತಿ ಲೇಖನ.
ಶುಭವಾಗಲಿ.