ಇದೇನು ನನ್ನ ಮೆಚ್ಚಿನ Titanic ..ಅಥವ Tom hanks ನ Cast away, ಅಥವ The Terminal ಸಿನಿಮಾನ?
ಆದ್ರೂ ನನಗೆ ಯಾಕಿಷ್ಟು ಕಾಡುತ್ತಿದೆ ಅಂತ ಅನೇಕ ಭಾರಿ ಪ್ರಶ್ನಿಸಿಕೊಂಡರೂ ಉತ್ತರ ಸಿಗುತ್ತಿಲ್ಲ. ಈ ವಿಚಾರ ತಲೆಗೆ ಹೊಕ್ಕಮೇಲಂತೂ ಒಂದೆರಡು ದಿನ ರಾತ್ರಿ ಸರಿಯಾಗಿ ನಿದ್ರೆಯೇ ಬರಲಿಲ್ಲ. ನಿದ್ರೆಯ ಕನಸಲ್ಲೂ ಅದೇ ಮರುಕ್ಷಣ ಎಚ್ಚರಗೊಂಡ ಮನಸಲ್ಲೂ ಅದೇ. ಮರುದಿನ ದಿನಾಂಕ ಜೂನ್ ೧ ನನ್ನ ದಿನಪತ್ರಿಕೆಯ ಹಣ ವಸೂಲಿ ಪ್ರಾರಂಭಿಸುವ ದಿನ. ಜೊತೆಗೊಂದಷ್ಟು ಬಿಳಿ ಕಾಗದ ಹಾಳೆಗಳನ್ನು ತೆಗೆದು ಜೇಬಿಗಿಟ್ಟು ನನ್ನ ಹಣ ವಸೂಲಿ ಕೆಲಸ ಪ್ರಾರಂಭಿಸಿದ್ದೆ. ಒಂದೆರಡು ಮನೆಗಳ ವಸೂಲಿ ಆಗುತ್ತಿದ್ದಂತೆ ಅದ್ಯಾಕೋ ಆ ನೈಜ ಕತೆ ನನ್ನನ್ನೂ ತುಂಬಾ ಕಾಡತೊಡಗಿತ್ತು. ವಿಧಿಯಿಲ್ಲದೇ ಜೇಬಿನಿಂದ ಬಿಳಿ ಪೇಪರನ್ನು ಹೊರತೆಗೆದು ಒಂದೆರಡು ಸಾಲುಗಳನ್ನು ಬರೆದೆ. ಅಲ್ಲಿಂದ ಮತ್ತೊಂದು ಮನೆಗೆ. ದಿನಪತ್ರಿಕೆ ಗ್ರಾಹಕರು ನನ್ನಿಂದ ಬಿಲ್ ಪಡೆದು ಹಣ ತರಲು ಒಳಗೆ ಹೋಗಿ ಬರುವ ಐದು-ಹತ್ತು ನಿಮಿಷಗಳಲ್ಲಿ ಮತ್ತಷ್ಟು ಸಾಲುಗಳನ್ನು ಗೀಚಿಕೊಳ್ಳುತ್ತಿದ್ದೆ. ಹೀಗೆ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ನನ್ನ ವಸೂಲಿ ಕೆಲಸ ಮುಗಿಯುವ ಹೊತ್ತಿಗೆ ನಾನು ತಂದಿದ್ದ ಬಿಳಿಹಾಳೆಗಳು ತುಂಬಿಹೋಗಿತ್ತು.
ತುಂಬಾ ಕಾಡುತ್ತಿದ್ದ ನನ್ನ ಹೊಸ ಕಿರುಚಿತ್ರದ ಕತೆಯ ಚಿತ್ರಕತೆಯನ್ನು ಬರೆದಿದ್ದು ಹೀಗೆ. ನಂತರ ಅದನ್ನು ಸಂಪೂರ್ಣವಾಗಿ ಪ್ರತಿಯೊಂದು ದೃಶ್ಯವನ್ನು ಬರೆದುಕೊಂಡು ಪಕ್ಕಾ ಮಾಡಿಕೊಂಡು ಎಲ್ಲರನ್ನು ಹೊಂದಿಸಿಕೊಂಡು ನಾನು ಶೂಟಿಂಗ್ ಪ್ರಾರಂಭಿಸಿದ್ದು ಹದಿನೈದು ದಿನಗಳ ನಂತರ.
ಎಲ್ಲಾ ಸರಿ ಈ ಕಿರುಚಿತ್ರ ತೆಗೆಯುವ ಹುಚ್ಚು ನನಗೆ ಯಾವಾಗ ತಗುಲಿಕೊಂಡಿತ್ತು ಎನ್ನುವ ವಿಚಾರವನ್ನು ಸ್ವಲ್ಪ ವಿವರಿಸಿಬಿಡುತ್ತೇನೆ. ಅದು ಏಪ್ರಿಲ್ ತಿಂಗಳ ೨೬ನೇ ತಾರೀಖು. ಸಂವಾದ.ಕಾಂನ ರವಿ ಅರೇಹಳ್ಳಿ ನನಗೆ ಅನಿರೀಕ್ಷಿತವಾಗಿ ಫೋನ್ ಮಾಡಿ "ಶಿವು ನಾವೊಂದು ಕಿರುಚಿತ್ರವನ್ನು ಚಿತ್ರೀಕರಿಸುತ್ತಿದ್ದೇವೆ. ನೀವು ಬಂದರೇ ಚೆನ್ನಾಗಿರುತ್ತೆ. ಅಂದರು. "ನಾನು ಅಲ್ಲಿ ಬಂದು ಏನು ಮಾಡಲಿ, ಫೋಟೊ ತೆಗೆಯಲು ಬರುತ್ತದೆ ಹೊರತು, ಸಿನಿಮಾಟೋಗ್ರಫಿಯಾಗಲಿ ಅಥವ ಇನ್ನಿತರ ಚಿತ್ರೀಕರಣದ ಪಾತ್ರವಾಗಲಿ ನನಗೆ ಗೊತ್ತಿಲ್ಲ" ಎಂದೆ. " ಅಯ್ಯೋ ಅದಕ್ಕ್ಯಾಕೆ ಚಿಂತಿಸುತ್ತೀರಿ, ನಮಗೇನು ಗೊತ್ತಿದೆಯಾ? ನಾವು ಎಲ್ಲಾ ಹೊಸಬರೇ. ನಿರ್ಧೇಶಕ, ಕ್ಯಾಮೆರ ಮನ್, ಪಾತ್ರಧಾರಿಗಳು, ಸಹಾಯಕ ನಿರ್ಧೇಶಕ, ಇತ್ಯಾದಿ ಯಾರು ಕೂಡ ವೃತ್ತಿಪರರಲ್ಲ. ಯಾರಿಗೂ ಒಂಚೂರು ಅನುಭವವಿಲ್ಲ. ಅದರೂ ಏನಾದರೂ ಮಾಡಬೇಕೆನ್ನುವ ಹಂಬಲ ಎಲ್ಲರಲ್ಲೂ ಇರುವುದರಿಂದ ನೀವು ನಮ್ಮ ತಂಡವನ್ನು ಸೇರಿಕೊಂಡರೆ ಚೆನ್ನಾಗಿರುತ್ತೆ" ಅಂದರು. ಹೀಗೆ ಯಾರಾದರೂ ನನ್ನನ್ನು ಕರೆದುಬಿಟ್ಟರೆ ಸಾಕು ಏನೋ ಹೊಸತು ಸಿಗುತ್ತದೆ ಎನ್ನುವ ಆಸೆಯಲ್ಲಿ ಇರುವ ಕೆಲಸವನ್ನು ಬಿಟ್ಟು ಹೋಗಿಬಿಡುವ ದುರ್ಬಲ ಗುಣ ನನ್ನದು. ಹೋಗಿ ಅವರೊಂದಿಗೆ ಸೇರಿಕೊಂಡೆ.
ಆ ಕಿರುಚಿತ್ರದ ಅವಧಿ ಎಂಟು ನಿಮಿಷ. ಚಿತ್ರೀಕರಣಕ್ಕಾಗಿ ನಿಗದಿಪಡಿಸಿದ್ದು ಎರಡು ದಿನಗಳು. ನಾನು ಅಲ್ಲಿಗೆ ಹೋಗುತ್ತಿದ್ದಂತೆ ನಾನೇನೋ ದೊಡ್ಡ ಸಿನಿಮಾಟೋಗ್ರಾಫರ್ ಇರಬಹುದು ಎನ್ನುವ ಭಾವನೆಯಲ್ಲಿ ತಕ್ಷಣ ನನ್ನ ಕೈಗೆ ಕ್ಯಾಮೆರವನ್ನೇ ಕೊಟ್ಟುಬಿಟ್ಟರು. ತಮಾಷೆಯೆಂದರೆ ನನಗೆ ಫೋಟೊ ತೆಗೆಯಲು ಮಾತ್ರ ಬರುತ್ತೆ ಅಂತ ಈ ಮೊದಲೇ ಹೇಳಿದ್ದೆನಲ್ಲ, ವಿಡಿಯೋ ರೆಕಾರ್ಡಿಂಗ್ ಮಾಡುವುದು ಹೇಗೆ ಎಂದು ತಿಳಿಯಲು ಕ್ಯಾಮರ ಹಿಂಭಾಗದಲ್ಲಿರುವ ಹತ್ತಾರು ಗುಂಡಿಗಳನ್ನು ಹುಡುಕತೊಡಗಿದೆ. ಸಿಗಲಿಲ್ಲ. ಮತ್ತೆ ನನಗೆ ಕಲಿಯುವ ವಿಚಾರದಲ್ಲಿ ಯಾವುದೇ ಸಂಕೋಚವಿರಲಿಲ್ಲವಾದ್ದರಿಂದ ಈ ಮೊದಲು ಸೂಟಿಂಗ್ ಮಾಡುತ್ತಿದ್ದ ಮುರಳಿ ಎನ್ನುವವರ ಬಳಿ ವಿಡಿಯೋ ರೆಕಾರ್ಡಿಂಗ್ ಬಟನ್, ಆನ್-ಅಪ್ ಫೋಕಸ್,....ಇತ್ಯಾದಿಗಳನ್ನು ಕೇಳಿ ತಿಳಿದುಕೊಂಡು ಹೇಗೆ ಅಪರೇಟ್ ಮಾಡಬೇಕೆಂದು ಅವರಿಂದ ಹೇಳಿಸಿಕೊಂಡೆ. ಈ ವಿಚಾರದಲ್ಲಿ ನಾನು ಆ ಮಟ್ಟದ ಹೊಸಬ ಮತ್ತು ದಡ್ಡನಾದರೂ ಅವರು ನನ್ನ ಕಡೆಯಿಂದಲೇ ಯಾಕೆ ಚಿತ್ರೀಕರಿಸಬೇಕೆಂದು ಕರೆದರೋ ನನಗೆ ಗೊತ್ತಿಲ್ಲ. ಮುರಳಿ ಮತ್ತು ನಾನು ಇಬ್ಬರೂ ಕ್ಯಾಮೆರ ಮ್ಯಾನುಗಳು. ಒಂದೆರಡು ಶಾಟ್ ಮುಗಿದ ನಂತರ ಅದ್ಯಾಕೋ ನನಗೆ ಹೊಸ ಹೊಸ ಕ್ಯಾಮೆರ ಯಾಂಗಲ್ಲುಗಳು ಹೊಳೆಯತೊಡಗಿದವು. ಅವುಗಳನ್ನು ಅವರಿಗೆ ವಿವರಿಸಿ ಹೀಗೆ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ ಬೇಕಾದರೆ ಪ್ರಯತ್ನಿಸಿ ನೋಡಿ ಎಂದೆನಲ್ಲ ಅಲ್ಲಿಗೆ ಮುಗೀತು. ಹತ್ತು ನಿಮಿಷಕ್ಕೊಂದು ಶಾಟ್ ಅಂತ ಚಿತ್ರೀಕರಿಸುತ್ತಿದ್ದ ಅವರು ನನ್ನ ಅನೇಕ ಪ್ರೇಮಿಂಗ್, ಯಾಂಗಲ್ಸುಗಳಿಂದಾಗಿ ಅರ್ಧಗಂಟೆಗೆ ಒಂದು ಶಾಟ್ ಕೂಡ ತೆಗೆಯಲು ಸಾಧ್ಯವಾಗದಂತಾಯಿತು. ಅವರ ಶೂಟಿಂಗ್ ಶೆಡ್ಯೂಲ್ ಎರಡು ದಿನವಿದ್ದಿದ್ದು ನನ್ನ ಪ್ರವೇಶದಿಂದಾಗಿ ಅದು ಆರು ದಿನಕ್ಕೆ ಎಳೆದುಕೊಂಡು ಹೋಗಿಬಿಟ್ಟಿತ್ತು. ಹಾಗೂ ಹೀಗೂ ಶೂಟಿಂಗ್ ಮುಗಿಸಿ ಚಿತ್ರೀಕರಣದ ನಂತರದ ಕೆಲಸಗಳನ್ನು ಪ್ರಾರಂಭಿಸುವ ಹಂತದಲ್ಲಿ ಎಲ್ಲರೂ ಅವರವರ ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು. ಈ ಕಿರುಚಿತ್ರದಲ್ಲಿ ಕ್ಯಾಮೆರ ಮೆನ್ ಆಗಿ ಚಿತ್ರೀಕರಿಸುವಲ್ಲಿನ ಅನೇಕ ಅನುಭವಗಳು, ಪ್ರೇಮಿಂಗು, ಸಹಜ ಬೆಳಕನ್ನು ಚಿತ್ರೀಕರಣಕ್ಕೆ ಬಳಸಿಕೊಂಡ ರೀತಿ, ನಡುವೆ ಬಂದ ಮಳೆಯನ್ನು ಚಿತ್ರೀಕರಣದಲ್ಲಿ ಪಾತ್ರವಾಗಿಸಿದ ರೀತಿ, ಇತ್ಯಾದಿಗಳೆಲ್ಲಾ ನನ್ನ ಮರೆಯಲಾಗದ ನೆನಪುಗಳಾಗಿ ಆ ಕಿರುಚಿತ್ರ ಬೇಗನೇ ಸಿದ್ದವಾಗಿಬಿಟ್ಟರೆ ಹೊರಪ್ರಪಂಚಕ್ಕೆ ತೋರಿಸುವ ಆಸೆ ತುಂಬಾ ಕಾಡತೊಡಗಿತ್ತು. ಆ ಸಿನಿಮಾದ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕನಿಗೆ ಮದುವೆ ಗೊತ್ತಾಗಿ ಅವರು ಬ್ಯುಸಿಯಾಗಿಬಿಟ್ಟರು. ಉಳಿದವರು ಕೂಡ ಅವರವರ ವೈಯಕ್ತಿಕ ಕೆಲಸದ ಒತ್ತಡಗಳಿಂದಾಗಿ ಕೊನೆಗೆ ಆ ಸಿನಿಮಾ ಸಿದ್ದವಾಗಲೇ ಇಲ್ಲ.
ಆದರೂ ನಾನು ಚಿತ್ರೀಕರಿಸಿದ ಕೆಲವು ಶಾಟುಗಳು, ಪ್ರೇಮುಗಳು, ತಾಂತ್ರಿಕತೆಯಲ್ಲಿ ವಿಭಿನ್ನವೆನಿಸುವ ಫೋಕಸಿಂಗ್ ವಿಚಾರಗಳು ಇದ್ದ ಕೆಲವು ದೃಶ್ಯಗಳನ್ನು ನನ್ನ ಮನೆಯಲ್ಲಿ ಮತ್ತೆ ಮತ್ತೆ ನೋಡುವಾಗ ನನಗೆ ಗೊತ್ತಿಲ್ಲದಂತೆ ಅದೊಂತರ ಆತ್ಮವಿಶ್ವಾಸ ನನ್ನಲ್ಲಿ ಮೂಡತೊಡಗಿತ್ತು. ಎಲ್ಲರೂ ಒಟ್ಟುಗೂಡಿ ಮಾಡಿದ ಸಿನಿಮಾ ಸಿದ್ದವಾಗದಿರುವುದು ನನ್ನದೇ ಕೂಸು ಗರ್ಭದೊಳಗೆ ಇದ್ದು ಹೊರಬರಲಾಗದ ಪರಿಸ್ಥಿತಿ ಎನ್ನುವಂತೆ ನನ್ನನ್ನು ಕಾಡತೊಡಗಿತ್ತು. ಅದೇ ಗುಂಗಿನಲ್ಲಿದ್ದ ನನಗೆ ಕೆಲವೇ ದಿನಗಳ ಹಿಂದೆ ನಡೆದ ಒಂದು ನೈಜ ಘಟನೆಯನ್ನು ಆದರಿಸಿದ ಕಿರುಚಿತ್ರವನ್ನು ನಾನೇ ಏಕೆ ಮಾಡಬಾರದು ಅನ್ನಿಸತೊಡಗಿತ್ತು. ಅಷ್ಟು ಸಾಕಾಯಿತು. ಒಂದಾದ ಮೇಲೆ ಒಂದು ದೃಶ್ಯಗಳು ನನ್ನ ಮನಸ್ಸಿನ ಪಟಲದ ಮೂಡತೊಡಗಿದವು. ಪ್ರತಿಯೊಂದು ದೃಶ್ಯಗಳು ಕೊಂಡಿಗಳಂತೆ ಜೋಡಿಸಿಕೊಳ್ಳುತ್ತಾ ಚಲಿಸತೊಡಗಿದವು. ಇಷ್ಟೇಲ್ಲಾ ಆದ ಮೇಲೆ ನನಗೆ ನಿದ್ರೆ ಬರದಂತಾಗಿ ಮರುದಿನ ದಿನಪತ್ರಿಕೆ ವಸೂಲಿ ಸಮಯದಲ್ಲಿ ಮನೆ ಮನೆಗಳ ಬಾಗಿಲುಗಳ ಮುಂದೆ, ಅಪಾರ್ಟುಮೆಂಟಿನ ಮೆಟ್ಟಿಲುಗಳ ನಡುವೆ, ಲಿಫ್ಟುಗಳಲ್ಲಿ ಚಲಿಸುತ್ತಾ, ಅಲ್ಲಲ್ಲಿ ರಸ್ತೆ ಪಕ್ಕ ಸ್ಕೂಟಿಯನ್ನು ನಿಲ್ಲಿಸಿ ಕೈಗಾಡಿ ಅಂಗಡಿಯ ಟೀ ಕುಡಿಯುತ್ತಾ, ನನ್ನ ಕಿರುಚಿತ್ರದ ಚಿಕ್ಕ ದೃಶ್ಯಗಳನ್ನು ಬರೆದಿದ್ದೆ.
ಮೊದಲೇ ಕ್ಲೈಮ್ಯಾಕ್ಸ್ ದೃಶ್ಯಗಳು ಸಿದ್ದವಾಗಿತ್ತಲ್ಲ, ಉಳಿದ ದೃಶ್ಯಗಳಿಗಾಗಿ ಜೇಬಿನಲ್ಲಿಟ್ಟ ಪೇಪರುಗಳಲ್ಲಿ ಆತುರಾತುರವಾಗಿ ಗೀಚಿಕೊಂಡಿದ್ದ ದೃಶ್ಯಗಳನ್ನು ಜೋಡಿಸಿಕೊಳ್ಳುತ್ತಾ ಒಂದು ಪಕ್ಕಾ ಚಿತ್ರಕತೆಯನ್ನು ಸಿದ್ಧ ಮಾಡಿದೆ. ಈ ಕಿರುಚಿತ್ರದಲ್ಲಿ ಒಟ್ಟು ಹತ್ತು ದೃಶ್ಯಗಳು ಅಂತ ಯೋಜನೆ ಹಾಕಿಕೊಂಡು ಪ್ರತಿಯೊಂದು ದೃಶ್ಯದಲ್ಲೂ ಕ್ಯಾಮೆರ ಪ್ರೇಮಿಂಗ್, ಒಂದು ದೃಶ್ಯದ ಹತ್ತಾರು ಯಾಂಗಲ್ಲುಗಳು, ಟೇಕಿಂಗ್ಸ್, ಯಾವ ದೃಶ್ಯದಲ್ಲಿ ಮೂವಿಂಗ್ ಶಾಟ್, ಯಾವ ದೃಶ್ಯದಲ್ಲಿ ಕ್ಯಾಮೆರ ತಾಂತ್ರಿಕತೆ ಮೇಲುಗೈ ಸಾಧಿಸಬೇಕು, ಮತ್ಯಾವ ದೃಶ್ಯದಲ್ಲಿ ಮಾತು, ಭಾವನೆಗಳು ಮುಂದಿರಬೇಕು ಇತ್ಯಾದಿಗಳನ್ನು ಪಕ್ಕಾ ಆಗಿ ಪೇಪರ್ ವರ್ಕ್ ಮಾಡಿಕೊಂಡೆ. ಒಂದು ವಾರ್‍ಅ ಪೂರ್ತಿ ಈ ಪೇಪರ್ ವರ್ಕ್ ಮುಗಿಸಿದಾಗ ಅದರಲ್ಲಿ ವಿಧವಿಧವಾದ ದಿಕ್ಕುಗಳ ಪ್ರೇಮಿಂಗುಗಳು, ಕ್ಯಾಮೆರ ಯಾಂಗಲ್ಲುಗಳು, ತಾಂತ್ರಿಕ ವಿವರಗಳು, ದೃಶ್ಯದ ಹಿನ್ನೆಲೆ ಮುನ್ನಲೆಗಳು, ಪಾತ್ರಧಾರಿಗಳು, ಸಂಭಾಷಣೆ, ಚಿತ್ರೀಕರಣದ ಸಮಯ, ಬೆಳಕು...........ಹೀಗೆ ಎಲ್ಲಾ ತಾಂತ್ರಿಕ ವಿವರಗಳನ್ನು ಹೊಂದಿದ ಮುನ್ನೂರು ಪುಟ್ಟ ಪುಟ್ಟ ದೃಶ್ಯಗಳು ಸಿದ್ದವಾಗಿಬಿಟ್ಟವು.
ಓಹ್! ಸ್ವಲ್ಪ ತಡೆಯಿರಿ, ಟಿವಿ ೯ ಛಾನಲ್ಲಿನವರು ಮನೆಗೆ ಬಂದೇ ಬಿಟ್ಟರು. ಪೂರ್ತಿ ಸಿದ್ದವಾದ ಈ ಕಿರುಚಿತ್ರವನ್ನು ನೋಡಿ ನನ್ನನ್ನು ಮತ್ತು ನಮ್ಮ ಹುಡುಗರನ್ನು ಮಾತಾಡಿಸಲು ಬಂದಿದ್ದಾರೆ. ಸಿನಿಮ ವಸ್ತುವಿನ ಹಿನ್ನೆಲೆ, ಅದರ ಸೂಟ್ ಮಾಡಿದ ಕ್ಯಾಮೆರ ಬಗ್ಗೆ, ಏಕೆ ಈ ವಸ್ತುವನ್ನೆ ಕತೆಯನ್ನಾಗಿ ಚಿತ್ರ ಮಾಡಿದೆ ಎನ್ನುವುದರ ಬಗ್ಗೆ ಕೇಳಲು ಬಂದಿದ್ದಾರೆ. ಅವರ ಜೊತೆ ಮಾತಾಡಿ, ನೀವೆಲ್ಲಾ ನೋಡುವಂತೆ ಟಿವಿ ೯ ಛಾನಲ್ಲಿನಲ್ಲಿ ಒಂದಷ್ಟು ಫೋಸು ಕೊಟ್ಟು ಬಂದುಬಿಡುತ್ತೇನೆ.
ಅಮೇಲೆ ನಮ್ಮ ಕಿರುಚಿತ್ರ ಪ್ರಾರಂಭವಾದ ಬಗೆ, ಅದಕ್ಕೆ ಹೊಂದಿಸಿಕೊಂಡ ಕ್ಯಾಮೆರ, ಎಲ್ಲಿ ಶೂಟಿಂಗ್ ಮಾಡಿದೆವು, ಆ ಜಾಗದ ಹುಡುಕಾಟ, ತಡಕಾಟ, ಒಂದು ಬುಟ್ಟಿಯಲ್ಲಿ ಹಾಕಿದರೆ ಒಂದು ಕ್ಷಣ ಒಂದು ಕಡೆ ನಿಲ್ಲದ ಹಾಗೆ ನೆಗೆದಾಡುವ ಕಪ್ಪೆಗಳಂತ ನಮ್ಮ ಪಾತ್ರಧಾರಿ ಹುಡುಗರು, ಸೂಟಿಂಗ್ ಸಮಯದಲ್ಲಿ ಅವರು ಕೈ ಕೊಟ್ಟ ಬಗೆಗಳು, ಕದ್ದು ಮುಚ್ಚಿ ಅವರಿಗೆ ಗೊತ್ತಿಲ್ಲದ ಹಾಗೆ ಸೂಟ್ ಮಾಡಿದ ದೃಶ್ಯಗಳು, ನಂತರದ ಸಂಕಲನ ಕೆಲಸ, ನಮಗೆಲ್ಲಾ ಧ್ವನಿ ಮರುಮುದ್ರಣವೆನ್ನುವ ಕಬ್ಬಿಣದ ಅಗಿಯಲು ಪ್ರಯತ್ನಿಸಿದ್ದು ಅದರಲ್ಲಿ ಯಶಸ್ವಿಯಾದೆವಾ?, ಪೂರ್ತಿ ಸಿದ್ಧವಾದ ಸಿನಿಮಾಗೆ ಮೊದಲು ಮಾಡಿದ ನಂತರ ಅದನ್ನು ಬದಲಾಯಿಸುವ ಸಲುವಾಗಿ ನನ್ನ ಗೆಳೆಯ ಮಹೇಶ್‍ಗೆ ನಾನು ಕೊಟ್ಟ ಕಾಟ,...............ಒಂದೇ ಎರಡೇ ಬರೆಯಲು ತುಂಬಾ ದೊಡ್ಡದಾದ ಸಾಲುಗಳಿವೆ....ಮುಂದಿನ ಭಾಗದಲ್ಲಿ ಬರೆಯುತ್ತೇನೆ.
ಅಂದಹಾಗೆ ಈ ಬರಹದ ನಡುವೆ ಟಿವಿ ೯ ಛಾನಲ್ಲಿನವರು ಕ್ಯಾಮೆರ ಹಿಡಿದುಕೊಂಡು ನಮ್ಮನ್ನು ಸೆರೆಯಿಡಿಯಲು ಬಂದರು ಅಂತ ನಿಲ್ಲಿಸಿದೆನಲ್ಲ...ಅದು ಗಿಮಿಕ್ ಏನೂ ಅಲ್ಲ. ಸತ್ಯ. ಇವತ್ತು [ದಿನಾಂಕ ೨೮-೮-೨೦೧೧]ಸಂಜೆ ಬಂದು ನಮ್ಮ ಕಿರುಚಿತ್ರದ ಬಗ್ಗೆ ನನ್ನನ್ನು ಮತ್ತು ನನ್ನ ಹುಡುಗರನ್ನು ಮಾತಾಡಿಸಿ ಹೋಗಿದ್ದಾರೆ. ಅದು ಪ್ರಸಾರವಾಗುವ ದಿನಾಂಕವಿನ್ನು ಗೊತ್ತಾಗಿಲ್ಲ. ಗೊತ್ತಾದ ತಕ್ಷಣ ನಿಮಗೆಲ್ಲಾ mail, massage, facebook, bazz...ಎಲ್ಲಾ ಕಡೆ ತಿಳಿಸುತ್ತೇನೆ. ತಪ್ಪದೇ ನೋಡಿ
ನಮ್ಮ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸಿ.
ಅಂದಹಾಗೆ ನಮ್ಮ ಕಿರುಚಿತ್ರದ ಹೆಸರು..
ಬೆಳಗಾಯ್ತು....
Tag line : ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ?
ಸಮಯದ ಅವಧಿ : ಹದಿನೆಂಟು ನಿಮಿಷಗಳು...
ನಮ್ಮ ಕಿರುಚಿತ್ರದಲ್ಲಿ ಹೆಚ್ಚು ಇಲ್ಲಗಳು ಇವೆ.
ನಾನು ನಿರ್ಧೇಶಕನಲ್ಲ. ನಟನಲ್ಲ.
ಸಿನಿಮಾಟೋಗ್ರಾಫರ್ ಅಂತೂ ಅಲ್ಲವೇ ಅಲ್ಲ
ನನಗೆ ಸಿನಿಮಾ ಸಾಹಿತ್ಯ ಗೊತ್ತಿಲ್ಲ.
ಸಂಗೀತ ನೀಡಿರುವ ಮಹೇಶ್ ಸಂಗೀತ ಗಾರನಲ್ಲ.
ನಾವು ಕಿರುಚಿತ್ರಕ್ಕೆ ಬಳಸಿರುವ ಕ್ಯಾಮೆರಾ ಸಿನಿಮಾ ಸಿನಿಮಾಟೋಗ್ರಫಿ ಕ್ಯಾಮೆರ ಅಲ್ಲ
ಬೆಳಗಿನ ದಿನಪತ್ರಿಕೆ ಹಾಕುವ ಪಾತ್ರಧಾರಿ ಹುಡುಗರು ನಟರಲ್ಲ.
ಮೇಕಪ್ ಅಂತೂ ಯಾರಿಗೂ ಇಲ್ಲವೇ ಇಲ್ಲ.
ಈ ಎಲ್ಲಾ ಇಲ್ಲಗಳ ನಮ್ಮ ಕಿರುಚಿತ್ರ ಸಿದ್ದವಾಗಿದೆ.
ನಮ್ಮ ಕಿರುಚಿತ್ರದ ಚಿತ್ರೀಕರಣ ಸಮಯದಲ್ಲಿನ ಕೆಲವು ಫೋಟೊಗಳು.
ಪ್ರಾರಂಭದ ಹಂತದ ಚಿತ್ರೀಕರಣ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಿದೆ ಈ ಕ್ಯಾಮೆರದ ಚಿತ್ರೀಕರಣ ಪಲಿತಾಂಶ
ನಮ್ಮ ಚಿತ್ರದ ಕೆಲವು ಹೀರೋಗಳು
ಮಹೇಶ್ ಮತ್ತು ಶಿವಪ್ರಕಾಶ್ ಜೊತೆ ಚಿತ್ರೀಕರಣದ ನಡುವೆ ದೃಶ್ಯಗಳ ಚರ್ಚೆ
ಆಗಾಗ ಸ್ವಲ್ಪ ರಿಲ್ಯಾಕ್ಸ್..
ಇವರು ಕೂಡ ನಮ್ಮ ಕಿರುಚಿತ್ರದ ಹೀರೊಗಳು........ಸೂಟಿಂಗ್ ಸಮಯದಲ್ಲಿ ನನಗೆ ಸಕ್ಕತ್ ಕಾಟ ಕೊಟ್ಟ ವಿಲನ್ನುಗಳು.
ಅಷ್ಟೆಲ್ಲಾ ಹೀರೋಗಳಿದ್ದರೂ....ಇಲ್ಲಿ ಕತೆ ಮತ್ತು ಚಿತ್ರಕತೆಯೇ ನಿಜವಾದ ಹೀರೋ....
ಚಿತ್ರಗಳು ಮತ್ತು ಲೇಖನ.
ಶಿವು. ಕೆ
54 comments:
All the best, adastu bega namagu nimma chitra thorsi.
Congratulations to your complete team.
ವಿಚಾರ ತಿಳಿದು ಬಹಳ ಖುಷಿಯಾಗ್ತಿದೆ. ನಿಮ್ಮ ಮೊದಲ ಪ್ರಯತ್ನವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ನೋಡುವ ಕುತೂಹಲ ಖಂಡಿತಾ ಇದೆ.
ನನ್ನ ಪಾಲ್ಗೊಳ್ಳುವಿಕೆ ಇದ್ದ ನಿಮ್ಮ ಮೊದಲ ಚಿತ್ರ ಆದಷ್ಟು ಬೇಗ ಬಿಡುಗಡೆ ಭಾಗ್ಯ ಕಾಣಲಿ. ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಲಿ. ನನ್ನ ಬಲವಂತದ/ಈ ಕ್ಷಣದ ಅಸಹಾಯಕತೆಗೆ ಕ್ಷಮೆ ಇರಲಿ. ಮೊದಲ ಚಿತ್ರವೇ ನಾನು ನಿಭಾಯಿಸಲಾಗದ ಕ್ಲಿಷ್ಟ ವಿಷಯವಾಗಿ ಉಳಿದಿದೆ.
ಶುಭಾಶಯ
ರವಿ ಅರೇಹಳ್ಳಿ
shivu;all the best for your new venture.
nice one. congrats sir.
ಶಿವೂ ಸಾರ್, ನಿಮ್ಮ ಪ್ರಯತ್ನ ಯಶಸ್ವಿಯಾಗಲಿ.
ಇದರ ಬಗ್ಗೆ ನಾನೇ ಒಮ್ಮೆ ನಿಮ್ಮನ್ನು ಮುಖಾಮುಖಿ ಭೇಟಿಯಾಗಿ ಮಾತನಾಡುತ್ತೇನೆ.
All the best :) Yashasviyaagali nimma kiruchitra :) Telecast date & Time hELi
all the best.
Please let us know the time on blog too :)
Swarna
ಖುಷಿಯಾಯ್ತು... :)
ನನಗೆ ವೀಡಿಯೋ ನೋಡುವ ಕುತೂಹಲ ಇದೆ....ನಿಮ್ಮ ಫೋಟೋ ನೋಡಿ ಆ ಕುತೂಹಲ ಇನ್ನೂ ಜಾಸ್ತಿಯಾಯ್ತು...ಯಾವಾಗ ಬಿಡುಗಡೆ...??
ಯೋಗಿ ಸರ್,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಖಂಡಿತ ತೋರಿಸುತ್ತೇನೆ. ಸರ್..
ರವಿ ಆರೆಹಳ್ಳಿ,
ಖಂಡಿತ ನಿಮಗೆ ಚಿತ್ರವನ್ನು ತೋರಿಸುತ್ತೇನೆ. ಈ ಚಿತ್ರ ಮೂಲ ಕಾರಣ ನೀವು. ಅವತ್ತು ಕರೆಯದಿದ್ದಲ್ಲಿ ಇದೆಲ್ಲಾ ಇಷ್ಟು ಮುಂದುವರಿಯುತ್ತಿರಲಿಲ್ಲವೇನೋ. ಸಾಧ್ಯವಾದಷ್ಟು ಬೇಗ ನಮ್ಮ ಆ ಮೊದಲ ಚಿತ್ರವೂ ಸಿದ್ಧವಾಗಲಿ. ಅದಕ್ಕೆ ನನ್ನ ಸಹಕಾರ ಇದ್ದೇ ಇರುತ್ತದೆ.
ಧನ್ಯವಾದಗಳು.
ಡಾಕ್ಟರ್ ಕೃಷ್ಣಮೂರ್ತಿ ಸರ್,
ಧನ್ಯವಾದಗಳು.
ಗುಬ್ಬಚ್ಚಿ ಸತೀಶ್ ಸರ್,
ಥ್ಯಾಂಕ್ಸ್.
ಬದರೀನಾಥ ಪಾಲವಳ್ಳಿ ಸರ್,
ನನ್ನ ಈ ಕಿರುಚಿತ್ರದ ಬಗ್ಗೆ ಫೋನಿನಲ್ಲಿ ನಾನು ಸುಮಾರು ಹೊತ್ತು ಮಾತಾಡಿದ್ದೆ. ನೀವು ಕುತೂಹಲವನ್ನು ವ್ಯಕ್ತಪಡಿಸಿದ್ದೀರಿ. ನಿಮ್ಮ ಬೇಟಿಗಾಗಿ ನಾನು ಕಾಯುತ್ತಿದ್ದೇನೆ.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..
ತೇಜಸ್ವಿನಿ ಮೇಡಮ್,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಸದ್ಯದಲ್ಲಿಯೇ ಪ್ರಸಾರವಾಗುವ ದಿನಾಂಕ ಮತ್ತು ಸಮಯ ತಿಳಿಸುತ್ತೇನೆ.
Gold 13 ಸ್ವರ್ಣ,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಖಂಡಿತ ತಿಳಿಸುತ್ತೇನೆ.
ಶಿವಪ್ರಕಾಶ್,
ಈ ಕಿರುಚಿತ್ರದಲ್ಲಿ ನಿಮ್ಮ involvement ದೊಡ್ಡದು. ಅದರ ಪ್ರತಿಫಲ ಮತ್ತು credit ನಿಮಗೂ ಖಂಡಿತ ಸಿಗುತ್ತದೆ..
ಧನ್ಯವಾದಗಳು.
ಅಜಾದ್,
ನಿಮಗೆ ತೋರಿಸದೇ ಇರುತ್ತೇನೆಯೇ! ಸಮಯ ಹೊಂದಿಕೊಂಡಿದ್ದರೆ ನೀವು ಈ ಕಿರುಚಿತ್ರದ ಒಂದು ಪಾತ್ರದಲ್ಲಿರುತ್ತಿದ್ರಿ. ಆ ಪಾತ್ರ ನನ್ನ ಮತ್ತೊಬ್ಬ ಫೋಟೊಗ್ರಫಿ ಗೆಳೆಯ ನಾಗೇಂದ್ರ ಮುತ್ಮರ್ಡು ಮಾಡಿದ್ದಾರೆ. ಬಿಡುಗಡೆ ಇತ್ಯಾದಿ ವಿಚಾರಗಳನ್ನು ನಿಮಗೆ ತಿಳಿಸುತ್ತೇನೆ.
ಧನ್ಯವಾದಗಳು.
Nimmma ellla hosa prayatna galigu shubashayagalu..nimma kiru chitra nodalu kayutta irrutteve..
ಶಿವೂ ಸರ್
ಮೊದಲ ಕಿರು ಚಿತ್ರದ ಸಂಭ್ರಮ ..
ಶುಭಾಶಯಗಳು
ಇರುವ ಸಾಧನ ಸಲಕರಣೆ ಗಳಲ್ಲಿಯೇ ನೀವು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ
ಕುತೂಹಲದಿಂದ ಕಾಯುತ್ತಿರುವೆವು
ನಮಸ್ಕಾರ ಶಿವೂ
ನಿಮ್ಮ ಉತ್ಸಾಹ , ಸಾಹಸ, ಜೀವನ ಪ್ರೀತಿ ನೋಡಿದರೆ...ನನಗೆ ಯಾಕೆ ಏನೂ ಮಾಡಲು ಆಗದ ಆಲಸ್ಯ ಅಂತ ಬೇಜಾರಾಗುತ್ತದೆ. ಬರೇ ಫೋಟೋಗ್ರಫಿ ಬಗ್ಗೆ ಬರೀರಿ...ಇಲ್ಲ ಅಂದ್ರೆ ನಮ್ಮೊಂತೋರು ಹೊಟ್ಟೆ ಉರ್ಕೊತಾರೆ :)
ನಿಮ್ಮ ಪ್ರತಿ ಸಾಹಸಕ್ಕೆ ಯಶಸ್ಸು ಸಿಗಲಿ
ನಿಮ್ಮ
ಕೃಷ್ಣಾನಂದ್
Shivu avre, nimma ee prayatnakke yashassu sigali.
Gauri-Ganesha Habbada shubhaashayagalu.
snehadinda,
santoshavaaytu nimma prayatna kELi . All the best Shivu sir
ಶಿವೂ,
ನೀವು ಇದರ ಬಗ್ಗೆ ಹೇಳಿದಾಗಲೇ , ತುಂಬಾ ಚೆನ್ನಾಗಿ ಇರಬೇಕು ಅಂತ ಅಂದುಕೊಂಡಿದ್ದೆ, ಇವಾಗ ನಿಮ್ಮ ಲೇಖನ ಫೋಟೋ ಗಳನ್ನ ನೋಡಿ... ತುಂಬಾ ಕುತೂಹಲ ಜಾಸ್ತಿ ಆಗ್ತಾ ಇದೆ.... ಬಿಡುಗಡೆಯ ದಿನಾಂಕ ವನ್ನು ತಿಳಿಸಿ ಹೇಳಿ .....
Abhinanadanegalu Shivu sir !!!
ಸ್ವಾರಸ್ಯಕರವಾಗಿದೆ... ನಿಮ್ಮ ಕಿರುಚಿತ್ರವನ್ನು ಯಾವಾಗ ನೋಡಬಹುದು??!
ಶಿವು,
ಶುಭಾಶಯಗಳು. ಚಿತ್ರಕ್ಕಾಗಿ ಎದುರು ನೋಡುತ್ತಿರುವೆ.
ಅಭಿನ೦ದನೆಗಳು ಶಿವು...ಶುಭವಾಗಲಿ.
ಅನ೦ತ್
ಯಾವಾಗಲೂ ಬರ್ತಿತ್ತು ಬರೀ ADVERTISMENT ಮೆಸ್ಸು. ಆಕಸ್ಮಿಕವಾಗಿ ಬಂತು ನಿಮ್ಮ SMS. ಆಗ ಅಮೃತಾನೂ ಅತಿಯಾದ್ರೆ ವಿಷ ಅನ್ನೋ ಮಾತು ನಿಜ ಅನ್ನಿಸ್ತು.
ನಿಮ್ಮ ಗಿರೀಶ್
ನನ್ನ ಹೃತ್ಪೂರ್ವಕ ಶುಭಾಕಾಂಕ್ಷೆಗಳು.
ನಿಮ್ಮ ಮೊದಲನೇ ಪ್ರಯತ್ನಕ್ಕೆ ಶುಭಾಶಯ ಮತ್ತೆ ಅಭಿನಂದನೆ. :)ಚೆನ್ನಾಗಿ ಬರಲಿ.
ಹಬ್ಬದ ಶುಭಾಶಯಗಳು.
ಅಭಿನಂದನೆಗಳು, ಶಿವು
ಅಭಿನಂದನೆಗಳು ಶಿವು, ನೀವು ಬಹುಮುಖ ಪ್ರತಿಭೆ ಉಳ್ಳವರು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ. ಚಿತ್ರ ತೋರಿಸಿ ಬೇಗ. ಛಾಯಾಗ್ರಹಣ ಮತ್ತು ಚಲನಚಿತ್ರ (film, documentary, social activities, wildlife, ಜಾನಪದ etc) ದಲ್ಲಿ ನನಗೂ ತುಂಬಾ ಆಸಕ್ತಿ ಇದೆ. ಇಂಥ ಅವಕಾಶ ಏನಾದರು ಮತ್ತೆ ಬಂದರೆ ದಯವಿಟ್ಟು ನನಗೂ ತಿಳಿಸಿ, ನನ್ನ ಈ-ಮೇಲ್ ವಿಳಾಸದಲ್ಲಿ. ಅದರ ಬಗ್ಗೆ ಅನುಭವವಿಲ್ಲದಿದ್ದರೂ, ನಿಮ್ಮ ಹಾಗೆ ಕಲಿಯಲು ನನಗೆ ಆಸಕ್ತಿ ಇದೆ
best
All the best, adastu bega full movie thorsi :)
ಪ್ರಶಾಂತ್ ಥ್ಯಾಂಕ್ಸ್. ಸಾಧ್ಯವಾದಷ್ಟು ಬೇಗ ಚಿತ್ರವನ್ನು ತೋರಿಸುತ್ತೇನೆ.
Deep,
ನಿಮ್ಮ ಊಹೆ ಸರಿ..ಇರುವ ಸಲಕರಣೆಗಳಲ್ಲಿ ಒಂದು ಪ್ರಯತ್ನ. ಕೆಲವೊಂದು ಶಾಟ್ ಟೇಕಿಂಗ್ ನಲ್ಲಿ ನಾನು ಮತ್ತು ನನ್ನೆದುರಿಗೆ ನಟಿಸುವ ನಟ ಇಬ್ಬರೇ ಇದ್ದಂತ ಪರಿಸ್ಥಿತಿಯೂ ಇದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಕೃಷ್ಣನಂದ್ ಸರ್,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ಏನು ಮಾಡಿಲ್ಲ ಅಂತ ಬೇಸರಿಸಬೇಡಿ. ಮನಸ್ಸಿದ್ದರೆ ಮಾರ್ಗ ಮೈಕೊಡವಿ ಎದ್ದು ನಿಂತುಬಿಟ್ಟರೆ ಯಾವುದೂ ಅಸಾಧ್ಯವಲ್ಲ...
ಚಂದ್ರು ಸರ್,
ನಿಮ್ಮ ಪ್ರತಿಕ್ರಿಯೆ ಧನ್ಯವಾದಗಳು. ಮತ್ತು ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಸುಮ ಮೇಡಮ್,
ಧನ್ಯವಾದಗಳು.
ಗುರು,
ನಿಮ್ಮ ಚಿತ್ರವನ್ನು ತೋರಿಸದೇ ಇರುತ್ತೇನೆಯೇ? ಸದ್ಯದಲ್ಲಿಯೇ ಅದರ ವ್ಯವಸ್ಥೆಗಾಗಿ ಸಿದ್ಧವಾಗುತ್ತಿದೆ..ಹೇಳುತ್ತೇನೆ.
ಗಿರೀಶ್ ಎಸ್.
ಥ್ಯಾಂಕ್ಸ್.
ಪ್ರದೀಪ್..
ಥ್ಯಾಂಕ್ಸ್...ಮತ್ತೆ ಸದ್ಯದಲ್ಲೇ..
ಸುನಾಥ್ ಸರ್,
ಧನ್ಯವಾದಗಳು.
ಅನಂತ್ ರಾಜ್ ಸರ್,
ಥ್ಯಾಂಕ್ಸ್.
ಗಿರೀಶ್ ಜೆ.ಎ
ಟಿವಿಯವರು ಬಂದು ಸಂದರ್ಶನ ಮಾಡಿ ಹೋದರು. ಮತ್ತೆ ಪ್ರಸಾರವಾಗುತ್ತದೆ ಅಂತಲೂ ಹೇಳುತ್ತಾರೆ. ಆದ್ರೆ ಇಂಥ ಪ್ರಯತ್ನಗಳಿಗಿಂತ ಅವರಿಗೆ ಕ್ರೈಮ್,ಯಡ್ಡಿ, ಕುಮ್ಮಿ, ರೆಡ್ಡಿ, ಇಂಥ ಐಟಮ್ಮಗಳಲ್ಲಿ ಒಲವು ಹೆಚ್ಚು. ಹೊಸಬರ ಪ್ರಯತ್ನಕ್ಕೆ ಯಾವಾಗಲೂ ಹೀಗೆ ಅಡ್ಡಿ ಇರುತ್ತದೆ..ಇರಲಿ ನಮಗೂ ಒಂದು ಕಾಲ ಬರುತ್ತೆ ಅಲ್ವಾ...
ಧನ್ಯವಾದಗಳು.
ಈಶ್ವರ ಭಟ್ ಕೆ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಜಿ.ಎಸ್.ಶ್ರೀನಾಥ್ ಸರ್.
ಥ್ಯಾಂಕ್ಸ್.
ದೀಪಸ್ಮಿತ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಚಿತ್ರವನ್ನು ಖಂಡಿತ ತೋರಿಸುತ್ತೇನೆ.
ಮತ್ತೆ ನನ್ನ ಮುಂದಿನ ಪ್ರಾಜೆಕ್ಟಿಗೆ ನನಗೂ ಆಸಕ್ತಿಯಿದೆ ಅಂದಿದ್ದೀರಿ. ಆದ್ರೆ ತಪ್ಪು ತಿಳಿಯಬೇಡಿ. ಈ ಕಿರುಚಿತ್ರದ ಪ್ರಾರಂಭದಲ್ಲಿ ನನ್ನ ಬ್ಲಾಗ್ ಮತ್ತು ಬಜ್ ಗೆಳೆಯರು ಹೀಗೇ ಹೇಳಿದ್ದರು. ಆದ್ರೆ ನಾನು ಶುರುಮಾಡಿದ ಮೇಲೆ "ನಾನು ಊರಿಗೆ ಹೋಗಬೇಕು, ಕೆಲಸವಿದೆ, ರಜವಿಲ್ಲ,,...ಹೀಗೆ ಅನೇಕ ಕಾರಣಗಳನ್ನು ಹೇಳಿ ಬರಲಿಲ್ಲ. ಇಂಥ ಪ್ರಾಜೆಕ್ಟುಗಳಿಗೆ ಪಕ್ಕ ವೃತ್ತಿಪರತೆ ಬೇಕು. ಅದಿಲ್ಲದಿದ್ದಲ್ಲಿ ಇದೆಲ್ಲಾ ಸಾಧ್ಯವಾಗುವುದಿಲ್ಲ. ನನಗೂ ಹತ್ತಾರು ಕೆಲಸಗಳಿದ್ದರೂ ಅವೆಲ್ಲವನ್ನು ಬಿಟ್ಟು ಪಕ್ಕಾ ಪ್ರೊಫೆಶನಲ್ ಆಗಿ ಕಮಿಟ್ ಆಗಿದ್ದರಿಂದ ಮಾತ್ರ ಈ ಪ್ರಾಜೆಕ್ಟ್ ಚೆನ್ನಾಗಿ ಬಂದಿರಬಹುದು. ಕೊನೆಗೆ ಆ ಸಮಯದಲ್ಲಿ ತೊಡಗಿಸಿಕೊಂಡರವರನ್ನು ಬಳಸಿಕೊಳ್ಳುವ ಸಲುವಾಗಿ ಕೆಲವು ಕಾಂಪ್ರಮೈಸ್ ಮಾಡಿಕೊಳ್ಳಬೇಕಾಯಿತು. ಮತ್ತೆ ಇಲ್ಲಿ ಹಣ ಮಾಡುವ ಉದ್ದೇಶಕ್ಕಿಂತ ಏನಾದರೂ ಸಾಧಿಸುವ ಹಂಬಲವೇ ಮುಖ್ಯ. ಮತ್ತೆ ಇಂಥ ವಿಚಾರಗಳಲ್ಲಿ ಹಣ ಮಾಡಲು ಸಾಧ್ಯವಾಗುವುದಿಲ್ಲ.
ಆದ್ರೂ ಮುಂದಿನ ಪ್ರಾಜೆಕ್ಟಿಗೆ ಕರೆಯುತ್ತೇನೆ.ಧನ್ಯವಾದಗಳು.
ಆರಾಧ್ಯ,
ಥ್ಯಾಂಕ್ಸ್.
ವನಿತಾ,
ಥ್ಯಾಂಕ್ಸ್. ನೀವು ಸಿನಿಮ ನೋಡಲು ಆಜಾರನ್ನು ಬೇಟಿಯಾಗಿ...
ಶಿವು, ನಿಮ್ಮ ಮಾತು ಒಪ್ಪುತ್ತೇನೆ. ಪ್ರಾರಂಭದಲ್ಲಿ ತೋರಿಸುವ ಉತ್ಸಾಹ ಆಮೇಲೆ ಅನೇಕರು ತೋರಿಸುವುದಿಲ್ಲ. ಇಲ್ಲಿ ಹಣದ ಪ್ರಶ್ನೆ ಇಲ್ಲ, ನಮ್ಮ ಪ್ರತಿಭ್ಹೆಯನ್ನು ಹೊರತರುವದಷ್ಟೇ ಮುಖ್ಯ. ಈ ಮೂಲಕ ಸಮಾಜಕ್ಕೆ ನಮ್ಮ ಅಲ್ಪ ಕೊಡುಗೆ ಸಾಧ್ಯ. ಅದರ ಬಗ್ಗೆ ವೃತ್ತಿಪರತೆ ಮುಖ್ಯ, ಹವ್ಯಾಸವಾಗಿ ತೊಡಗಿಸಿಕೊಂಡಿದ್ದರೂ
ಅಭಿನಂದನೆಗಳು ಶಿವು.
ಚಿತ್ರವನ್ನ ಎಲ್ಲಿ ನೋಡಬಹುದು ಅಂತ ಹೇಳಿ, ಕುತೂಹಲವಿದೆ :)
ದಯವಿಟ್ಟು ಸೂಟ್ ಇರುವಲ್ಲಿ 'ಶೂಟ್ ' ಎಂದು ಬದಲಾಯಿಸಿಕೊಳ್ಳಿ ..
Post a Comment