ಹೌದು. ಮತ್ತೆ ನಮ್ಮ ಬ್ಲಾಗಿಗರು ಸಂಭ್ರಮಿಸುವ ಕಾಲ ಬಂದಿದೆ. ನಾವೆಲ್ಲ ಒಟ್ಟಿಗೆ ಸೇರಿ ನಲಿಯುವ ಕಾಲ ಬಂದಿದೆ.
ಇದೇ ಆಗಸ್ಟ್ 21ರ ಭಾನುವಾರ ಚಾಮರಾಜ ಪೇಟೆಯಲ್ಲಿರುವ "ಕನ್ನಡ ಸಾಹಿತ್ಯ ಪರಿಷತ್ತ್ "ನಲ್ಲಿ ನಮ್ಮ ಬ್ಲಾಗಿಗರ ಮೂರು ವಿಭಿನ್ನ ಪುಸ್ತಕಗಳು ಲೋಕಾರ್ಪಣೆಯಾಗುತ್ತಿವೆ.
ಇದು ನಮ್ಮ ಅಹ್ವಾನ ಪತ್ರಿಕೆ ನಿಮಗೆಲ್ಲಾ ಆತ್ಮೀಯವಾದ ಸ್ವಾಗತ
ಸುಧೇಶ್ ಶೆಟ್ಟಿ ನಮ್ಮೆಲ್ಲರ ಮೆಚ್ಚಿನ ಯುವ ಬರಹಗಾರ. ಬ್ಲಾಗಿರರ ಸ್ಪೂರ್ತಿ ಮತ್ತು ಒತ್ತಾಸೆಯಿಂದ ಆತ "ಹೆಜ್ಜೆ ಮೂಡದ ಹಾದಿ" ಕಾದಂಬರಿ ಬರೆದಿದ್ದಾರೆ ಈಗ ಅವರ ಬರಹ ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಇವರ ಪುಸ್ತಕದ ಕುರಿತು ನಮ್ಮೆಲ್ಲರ ಮೆಚ್ಚಿನ ಖ್ಯಾತ ಸಾಹಿತಿ ಕು.ವೀರಭದ್ರಪ್ಪನವರು ಮಾತನಾಡಲಿದ್ದಾರೆ.
ಸುಧೇಶ್ ರ ಕಾದಂಬರಿ "ಹೆಜ್ಜೆ ಮೂಡದ ಹಾದಿ"
ಮತ್ತೊಬ್ಬ ಬ್ಲಾಗ್ ಬರಹಗಾರ್ತಿ ರೂಪ ರಾವ್[ "ತೆರೆದ ಮನ" ಬ್ಲಾಗಿನ ಒಡತಿ]ರವರ ಸಣ್ಣಕತೆಗಳು ಪುಸ್ತಕವೂ ಬಿಡುಗಡೆಯಾಗುತ್ತಿದೆ. ಈ ಪುಸ್ತಕದ ಬಗ್ಗೆ ಮಾತನಾಡುವವರು ಖ್ಯಾತ ಸಾಹಿತಿ, ವಿಜ್ಞಾನಿ, ವಾಸ್ತುತಜ್ಞರಾದ ಡಾ.ರಮೇಶ್ ಕಾಮತ್‍ರವರು.
ರೂಪಾ ರಾವ್ ರವರ ಸಣ್ಣ ಕಥಾ ಸಂಕಲನ "ಪ್ರೀತಿ ಏನನ್ನಲಿ ನಿನ್ನ"
ಹಾಗೆ ಇನ್ನೊಬ್ಬ ಗೆಳೆಯ ದೊಡ್ಡಮನಿ ಮಂಜು. ಮೂರ್ತಿ ಚಿಕ್ಕದಾದರೂ ಆತನ ಚಟುವಟಿಕೆ ಚುರುಕು. ಆತನ ಕವನ ಸಂಕಲನವನ್ನು ಖ್ಯಾತ ಸಿನಿಮಾ ಸಾಹಿತಿ ಹೃದಯಶಿವರವರು ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ.
ದೊಡ್ಡ ಮನಿ ಮಂಜುರವರ ಕವನ ಸಂಕಲನ "ಮಂಜು ಕರಗುವ ಮುನ್ನ"
ಮೂರು ಬೇರೆ ಬೇರೆ ಪ್ರಕಾರದ ನಮ್ಮ ಬ್ಲಾಗಿಗರ ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವುದು ಒಂದು ವಿಶೇಷವಾದರೆ, ಇದು ಸೃಷ್ಠಿ-ತುಂತುರು ಪ್ರಕಾಶನಗಳ ಸಂಯೋಗದಲ್ಲಿ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ. ಈ ಕಾರ್ಯಕ್ರಮಕ್ಕಾಗಿ ದೂರದ ನಾಡಾದ ಕುವೈಟಿನಿಂದ ಡಾ.ಆಜಾದ್, ಸುಗುಣಕ್ಕ,[ಮೃದು ಮನಸ್ಸು ಬ್ಲಾಗ್] ಮಹೇಶ್ ಸರ್, ಅವರ ಮಗ ಮನುವಚನ್, ದೆಹಲಿಯಿಂದ ಪ್ರವೀಣ್ [ಮನದಾಳದಿಂದ....ಬ್ಲಾಗ್], ಪೂನದಿಂದ ಚಿತ್ರಾಂಜಲಿ ಹೆಗಡೆ[ಮನಸ್ಸೆಂಬ ಹುಚ್ಚು ಹೊಳೆ]ಯವರು ಬರುತ್ತಿದ್ದಾರೆ. ಗೆಳೆಯರಿಗೆ ಪ್ರೋತ್ಸಾಹಿಸುವುದಕ್ಕಾಗಿ ಅವರೊಂದಿಗೆ ಸಂಭ್ರಮಿಸುವುದಕ್ಕಾಗಿ ಆಷ್ಟು ದೂರದಿಂದ ಅವರೇ ಬರುತ್ತಿರಬೇಕಾದರೆ ಹತ್ತಿರದಲ್ಲಿರುವ ನಾವೆಲ್ಲರೂ ಕೂಡ ಹೋಗೋಣ ಅಲ್ವಾ....
ಇತರ ವಿವರಗಳಿಗೆ ಮೇಲೆ ಹಾಕಿರುವ ಅಹ್ವಾನ ಪತ್ರಿಕೆಯನ್ನು ನೋಡಿ.
ಕಾರ್ಯಕ್ರಮಕ್ಕೆ ಮೊದಲು ಬೆಳಗಿನ ಉಪಹಾರ ಮತ್ತು ಕಾಫಿ ಟೀ ವ್ಯವಸ್ಥೆಯಿದೆ.
ಖಂಡಿತ ಬರುತ್ತೀರಿ ಅಲ್ವಾ!
ಚಿತ್ರಗಳು ಮತ್ತು ಲೇಖನ
ಶಿವು.ಕೆ
10 comments:
Congrats to all of them
ಸಮಾರಂಭಕ್ಕೆ ಶುಭಾಶಯಗಳು.
dodmani manju, roopa, sudhesh elrigu all the best... Jai ho
Ellarigu Subhashayagalu...
Naanu barteeni...
ಮೂವರಿಗೂ ಹಾರ್ದಿಕ ಶುಭಾಶಯಗಳು....
ಶ್ಯಾಮಲ
ಜೈ ಹೋ
ಶುಭಾಶಯಗಳು
Wishs to all the writers and wish for the functions
ellarigoo shubaashayagalu.
ಎಲ್ಲರಿಗೂ ಶುಭವಾಗಲಿ,,,, ಖಂಡಿತ ನಾನು ಬರುತ್ತೇನೆ...
ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು.
Post a Comment