Wednesday, September 7, 2011

ಈ ಬದುಕು ಯಾವ ದಿಕ್ಕಿನತ್ತ ಸಾಗುತ್ತಿದೆಯೋ ನನಗಂತೂ ಗೊತ್ತಿಲ್ಲ.


  
         ಮೊನ್ನೆ ಸೋಮವಾರ ಮಧ್ಯಾಹ್ನ ಸುಸ್ತಾಗಿ ವಿಶ್ರಾಂತಿಗಾಗಿ ಮಲಗಿದ್ದೆ. ನನ್ನ ಮೊಬೈಲ್ ರಿಂಗ್ ಆಗಿ ಎಚ್ಚರಿಸಿತು.

         "ನಾನು ಡಿ.ಪಿ.ಪರಮೇಶ್ವರ್ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅದ್ಯಕ್ಷರು. ನಿಮ್ಮ ಜೊತೆ ಮಾತಾಡಬಹುದಾ?

         "ಮಾತಾಡಿ" ಅಂದೆ. 

          "ನೀವು ನಮ್ಮ ಫೋಟೊ ಜರ್ನಲಿಸಂ ವಿದ್ಯಾರ್ಥಿಗಳಿಗೆ ಗೆಸ್ಟ್ ಲೆಕ್ಚರ್ ಆಗಿ ಬರಬೇಕು"

          "ಏನ್ ಮತ್ತೊಮ್ಮೆ ಹೇಳಿ, ನಾನು ನಿಮ್ಮ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾ?"

          "ಹೌದು ಸಾರ್,  ಇಲ್ಲ ಅನ್ನಬಾರದು.  ನೀವು ಒಪ್ಪಿಕೊಳ್ಳಲೇಬೇಕು."

           ಈ ಮಾತಿನಿಂದ ನನಗೆ ಸಂಪೂರ್ಣ ಎಚ್ಚರವಾಗಿತ್ತು.

           "ಸರ್ ತಪ್ಪು ತಿಳಿಯಬೇಡಿ, ನಾನು ಯಾವತ್ತು ಯಾರಿಗೂ ಪಾಠ ಮಾಡಿಲ್ಲ. ನನಗೆ ಅದು ಬರುವುದು ಇಲ್ಲ. ನನಗೆ ಅಂತ ಯೋಗ್ಯತೆಯಿಲ್ಲ"

           "ಸರ್ ನಿಮ್ಮ ಬಗ್ಗೆ ನಮಗೆಲ್ಲಾ ಗೊತ್ತಿದೆ ಸರ್, ರೇಡಿಯೋ, ಟಿವಿಯಲ್ಲಿ ಪೇಪರಿನಲ್ಲಿ ನಿಮ್ಮ ಲೇಖನಗಳನ್ನು ಓದಿದ್ದೇವೆ. ನಿಮ್ಮ ಪುಸ್ತಕ, ಫೋಟೊಗ್ರಫಿ, ಇತ್ತೀಚಿನ ಕಿರುಚಿತ್ರ ಇದೆಲ್ಲವನ್ನು ನೋಡಿದ ಮೇಲೆ ನೀವು ಸರಿಯಾದರು ಅಂತ ತೀರ್ಮಾನಿಸಿದ್ದೇವೆ."

            "ನೋಡಿ ಸರ್, ನನಗಿಂತ ಪಕ್ಕಾ ಅಕಾಡೆಮಿಕ್ ಆಗಿ ಈ ಫೋಟೊ ಜರ್ನಲಿಸಂ ಹೇಳಿಕೊಡಲು ಖ್ಯಾತ ಛಾಯಾಗ್ರಾಹಕರಾದ ಸಗ್ಗೆರೆ ರಾಮಸ್ವಾಮಿ, ಹಿಂದೂ ಪತ್ರಿಕೆಯ ಹಿರಿಯ ಛಾಯಾಗ್ರಾಹಕರಾದ ಗೋಪಿನಾಥನ್,...ಹೀಗೆ ಇನ್ನೂ ಅನೇಕರಿದ್ದಾರೆ. ಅವರಿಂದ ನಿಮ್ಮ ವಿದ್ಯಾರ್ಥಿಗಳಿಗೆ ಉಪಯೋಗವಾಗಬಹುದು, ನನ್ನಿಂದ ಏನು ಉಪಯೋಗವಿಲ್ಲ ಸರ್"

            "ಅವರೆಲ್ಲಾ ಅಕಾಡೆಮಿಕ್ ಆಗಿ ಒಂದು ಸುತ್ತು ಬಂದು ಹೋಗಿದ್ದಾರೆ. ಆದ್ರೆ ಪ್ರಾಕ್ಟಿಕಲ್ ಮತ್ತು ವಿಭಿನ್ನ ಶೈಲಿಯ ಫೋಟೊ ಜರ್ನಲಿಸಂಗೆ ನೀವೇ ಸೂಕ್ತ ನಾವು ಆಯ್ಕೆ ಮಾಡಿಕೊಂಡಿದ್ದೇವೆ"

            "ಆದ್ರೆ ಸರ್, ನಾನು ಈ ಮೊದಲು ನಿಮ್ಮನ್ನು ಬೇಟಿಯಾಗಿಲ್ಲ, ಮಾತಾಡಿಸಿಲ್ಲ, ಆದ್ರೂ ನನ್ನ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದೀರಿ, ಫೋನ್ ನಂಬರ್ ಬೇರೆ ಸಿಕ್ಕಿದೆ ಇದೆಲ್ಲ ಹೇಗೆ?"

           "ನಿಮ್ಮ ಬಗ್ಗೆ ಇದೆಲ್ಲ ಹೇಳಿದ್ದು ನಾಗೇಶ್ ಹೆಗಡೆ. ಅವರೇ ನಿಮ್ಮನ್ನು ರೆಕಮಂಡ್ ಮಾಡಿದರು. ಫೋನ್ ನಂಬರ್ ಪೇಪರಿನಲ್ಲಿ ಬಂದಿತ್ತಲ್ಲ.."

           ಇನ್ನು ತಪ್ಪಿಸಿಕೊಳ್ಳುವಂತಿಲ್ಲ. ಒಪ್ಪಿಕೊಳ್ಳಲೇಬೇಕಾಯಿತು.

           "ಬುಧವಾರ ಮಧ್ಯಾಹ್ನ ಮೂರುಗಂಟೆಯಿಂದ ನಾಲ್ಕು ಗಂಟೆಯವರೆಗೆ ಮೊದಲ ಕ್ಲಾಸ್ ಇರುತ್ತೆ. ನಮ್ಮ ಹುಡುಗರಿಗೆಲ್ಲಾ ಹೇಳಿಬಿಡುತ್ತೇನೆ ಸರ್" ಅಂದರು.

          "ಆಯ್ತು ಸರ್" ಒಪ್ಪಿಕೊಂಡೆ.

            ಮರುಕ್ಷಣವೇ ನಾಗೇಶ್ ಹೆಗಡೆಯವರಿಗೆ ಫೋನ್ ಮಾಡಿ,  "ಸರ್ ನನ್ನ ಸಬ್ಜೆಕ್ಟ್ ಫೋಟೊ ಜರ್ನಲಿಸಂ ಅಲ್ಲ. ಅದ್ರೆ ನೀವು ಈ ವಿಚಾರದಲ್ಲಿ ನನಗೆ ಲೆಕ್ಚರ್ ಕೊಡಲಿಕ್ಕೆ ರೆಕಮೆಂಡ್ ಮಾಡಿಬಿಟ್ಟಿದ್ದೀರಲ್ಲ "

           "ಯಾರು ಹೇಳಿದ್ದು ನೀವು ಫೋಟೊ ಜರ್ನಲಿಸ್ಟ್ ಅಲ್ಲ ಅಂತ?  ಪತ್ರಿಕೆಗಳಲ್ಲಿ ನಿಮ್ಮ ಲೇಖನಗಳು ಮತ್ತು ಬರಹಗಳು ಪ್ರಕಟವಾಗಿರುವಷ್ಟು ಪತ್ರಿಕೋದ್ಯಮದಲ್ಲಿ ಕೆಲಸಮಾಡುವವರದೂ ಕೂಡ ಆಗಿಲ್ಲವಲ್ಲ, ಮತ್ತೆ ನಿಮ್ಮ ಅಷ್ಟೂ ಲೇಖನಗಳನ್ನು ಸುಮ್ಮ ಸುಮ್ಮನೇ ಹಾಕಲಿಕ್ಕೆ ಸಂಪಾದಕರುಗಳಿಗೆ ಬುದ್ಧಿಯಿಲ್ಲವೇ...ಅದರಲ್ಲೇನೋ ಸ್ವಾರಸ್ಯವಿರುವುದರಿಂದಲೇ ಪ್ರಕಟ ಮಾಡಿದ್ದಾರೆ.  ಹೊಸಬರಿಗೆ ಈಗ ಬೇಕಿರುವುದು ಅಂತದ್ದೆ.  ನೀವು ಏನು ಚಿಂತಿಸಬೇಡಿ. ದೈರ್ಯವಾಗಿ ಹೋಗಿಬನ್ನಿ" ಅಂತ ಕೆಲವು ಟಿಪ್ಸ್ ಕೊಟ್ಟರು. 

            ಅದನ್ನೆಲ್ಲಾ ನೋಟ್ ಮಾಡಿಕೊಂಡು, ನಮ್ಮ ಹಿರಿಯ ಛಾಯಾಗ್ರಾಹಕರಾದ ಸಿ.ಅರ್.ಸತ್ಯನಾರಯಣರವರಲ್ಲಿ ಈ ವಿಚಾರ ತಿಳಿಸಿ ಅವರಿಂದಲ್ಲೂ ನಮ್ಮ ಫೋಟೊಗ್ರಫಿ, ಮತ್ತು ಉಪನ್ಯಾಸದ ಬಗ್ಗೆ ಟಿಪ್ಸ್ ಪಡೆದುಕೊಂಡೆ. 

          ಬುಧವಾರ ಬಂದೇ ಬಿಡ್ತಲ್ಲ.  ನಾಗೇಶ್ ಹೆಗಡೆ ಮತ್ತು ಸತ್ಯನಾರಯಣರವರು ಕೊಟ್ಟ ಟಿಪ್ಸುಗಳ ಸಹಾಯದಿಂದ ಉಪನ್ಯಾಸಕ್ಕೆ ಬೇಕಾದ ಎಲ್ಲಾ ವಿಚಾರವನ್ನು ಬರೆದುಕೊಳ್ಳುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆ.  ಊಟ ಮುಗಿಸಿ ಕೆ.ಅರ್ ಸರ್ಕಲ್ಲಿನ ಬಳಿ ಇರುವ ಸರ್ಕಾರಿ ಕಲಾ ಕಾಲೇಜು ಸೇರುವ ಹೊತ್ತಿಗೆ ಮೂರುಗಂಟೆ.
                        


          ನನ್ನ ಪರಿಚಯ ಮತ್ತು ವಿದ್ಯಾರ್ಥಿಗಳ ಪರಿಚಯವಾಗಿ ನನ್ನ ಲೆಕ್ಚರ್ ಪ್ರಾರಂಭವಾಗಿ ಮುಗಿಯುವ ಹೊತ್ತಿಗೆ ನಾಲ್ಕುಮುಕ್ಕಾಲು ಆಗಿಹೋಗಿತ್ತು.  ಒಂದು ಗಂಟೆಯ ಉಪನ್ಯಾಸ ಮತ್ತು ವಿಚಾರವಿನಿಮಯ ಒಂದುಮುಕ್ಕಾಲು ಗಂಟೆಯವರೆಗೆ ಆಗಿಹೋಗಿತ್ತು.  ನಾನೇನು ಹೇಳಿಕೊಟ್ಟೆನೋ, ಆದ್ರೆ ಅಷ್ಟೂ ವಿದ್ಯಾರ್ಥಿಗಳು ಪೂರ್ತಿ ಖುಷಿಯಾಗಿದ್ದರು. ಮತ್ತೆರಡು ಕ್ಲಾಸ್ ನಿಮ್ಮದು ಬೇಕೇ ಬೇಕು ಅಂತೇಳಿ ಗೌರವ ಸಂಭಾವನೆ ಅಂತ ಕೈಗೊಂದು ಕವರ್ ಕೊಟ್ಟರು.   ಆಯ್ತು ಮಾಡೋಣ ಅಂತ ಹೇಳಿ ಅಲ್ಲಿಂದ ಮನೆಗೆ ಬಂದಾಗ ಆರುಗಂಟೆ. ಜೇಬಿನಲ್ಲಿದ ಕವರ್ ತೆಗೆದು ಅದರಲ್ಲಿದ್ದ ನೋಟುಗಳನ್ನು ನೋಡಿದಾಗ ಒಂದುವರೆ ಗಂಟೆಗೆ ಇಷ್ಟೊಂದು ಸಂಭಾವನೆಯೇ ಅಂತ ಆಶ್ಚರ್ಯವಾಗಿತ್ತು.

ಈ ಬದುಕು ಯಾವ ದಿಕ್ಕಿನತ್ತ ಸಾಗುತ್ತಿದೆಯೋ ನನಗಂತೂ ಗೊತ್ತಿಲ್ಲ.

ಶಿವು.ಕೆ
    

54 comments:

Unknown said...

Good Luck...:)

ಬದುಕು ಅನ್ನೋದು ಹಾಗೇ..!
ಅದನ್ನ ಬಂದ ಹಾಗೇ.. ಸ್ವೀಕರಿಸಿ.. ಬಂದ ಅವಕಾಶಗಳನ್ನ ಸ್ವೀಕರಿಸಿ.. ಮುಚ್ಚುತ್ತಿರೋ ದ್ವಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೇ, ತೆರೆದ ಬಾಗಿಲಗಳ ಗಮನ ನೀಡಿ, ಮುದ ನೀಡೋ ಸಾಹಸಗಳನ್ನ, ಮಾಮೂಲಿಯಾಗಿಸಬೇಕಾಗಿರುವದೇ.. ಈ ಬದುಕಿನ ರೀತಿ.. !!

ಒಳ್ಳೇಯದಾಗಲಿ.. ಇಂತಹ ಅನೇಕ ಉತ್ತಮ ಆಶ್ಚರ್ಯಗಳು ನಿಮ್ಮದಾಗಲಿ..
ಆಗಾಗ್ಗೆ... ಹಿಂದೆ ತಿರುಗಿ ನೋಡುತ್ತಿರಿ.. ಅದನ್ನ ನೆನಪಿಸಿಕೊಳ್ಳುತ್ತಾ... ನಿಮ್ಮ ನಿಜವನ್ನ ಮರೆಯದಂತೆ ಜೋಪಾನವಾಗಿಸಿ.. ಅದು ನಿಮ್ಮನ್ನ ಎಡವದಂತೆ ಕಾಪಿಡುತ್ತೆ..!

ನಿಮ್ಮೊಲವಿನ,
ಸತ್ಯ.. :)

Manasa said...

All the best Sir... Happy to see you happy :)

PARAANJAPE K.N. said...

ಶುಭಾಶಯಗಳು ಶಿವೂ, ಓದಿ ತಿಳಿದು ಖುಷಿಯಾಯ್ತು. ಉಜ್ವಲ ಭವಿಷ್ಯ ನಿಮ್ಮದಾಗಲಿ.

ಮನಸು said...

ಶುಭವಾಗಲಿ, ಈ ವಿಷಯ ಕೇಳಿ ಬಹಳ ಸಂತೋಷವಾಯ್ತು...

ಮನಸಿನ ಮಾತುಗಳು said...

We are all proud of you Shivanna..:-) All the best for future endeavors..

G S Srinatha said...

ಶುಭಾಷಯಗಳು, ತುಂಬಾ ಸಂತೋಷ

ತೇಜಸ್ವಿನಿ ಹೆಗಡೆ said...

Tumba SantOSha.. AbhinandanegaLu :)

minchulli said...

its great shivu... congrats & good luck too

ಸಾಗರದಾಚೆಯ ಇಂಚರ said...

Shivu sir,
all the best
nimma achievement ge khushi agatte

ವನಿತಾ / Vanitha said...

Great..Shivu :))

Wishing u more & more success.

Ambika said...

Great! Good Luck!
Ella kelasadallu nimage yashassu sigali..

Swarna said...

All the best. Nice to know this.
Congratulations.

ಸಿಂಧು sindhu said...

ಹಾಯ್ ಶಿವು,

ವಿಷ್ಯ ಓದಿ ತುಂಬ ಸಂತೋಷವಾಯಿತು.
ನಿಮ್ಮ ಫೋಟೋ ಕ್ಷಣಗಳು ಕರೆಯದೆ ಬರುತ್ತಲ್ಲಾ ಬದುಕಿನ ರೀತಿಯೂ ಹಾಗೆ. ಕ್ಯಾಮೆರೆ ತಯಾರಿಟ್ಟುಕೊಂಡೇ ಬೇರೆ ಕೆಲಸ ಮಾಡುವ ಮಧ್ಯೆ ಒಂದು "ದೃಶ್ಯ ಕಾವ್ಯ" ಕಂಡ ಕೂಡಲೇ ಕ್ಲಿಕ್ ಮಾಡ್ತೀರಲ್ವಾ.. ಅಷ್ಟೇ ಸಹಜವಾಗಿ ಇದು ನಿಮಗೊಲಿಯುವ ಹಾದಿ. ಒಳ್ಳೆಯದಾಗಲಿ. ನಿಮ್ಮ ಪ್ರತಿಭೆ ಇನ್ನೂ ಪ್ರಖರವಾಗಿ ಮಿಂಚಲಿ.
-ಪ್ರೀತಿಯಿಂದ,ಸಿಂಧು

ಕ್ಷಣ... ಚಿಂತನೆ... said...

ಶಿವೂ ಅವರೆ, ಅಭಿನಂದನೆಗಳು. ನಿಮಗೆ ದೂರವಾಣಿ ಕರೆ ಬಂದಿದ್ದು ಸೋಮವಾರ. ಅಂದರೆ, ೫ನೇ ಸೆಪ್ಟೆಂಬರ್‌ ೨೦೧೧. ಶಿಕ್ಷಕರ ದಿನಾಚರಣೆ. ಅದಕ್ಕೆ ನಿಮ್ಮಿಂದ ಪಾಠ ಮಾಡಿಸಲಿಕ್ಕೆ ಪ್ರೇರಣೆ ಬಂದಿರಬಹುದು.

ಶುಭವಾಗಲಿ.

ಸ್ನೇಹದಿಂದ,

ಮನದಾಳದಿಂದ............ said...

ಶಿವಣ್ಣ,
ಬದುಕು ನಾವಂದುಕೊಳ್ಳುವುದಕ್ಕಿಂತಲೂ ವಿಭಿನ್ನವಾಗೆ ಇರುತ್ತದೆ. ನಿಮ್ಮ ಪರಿಶ್ರಮ, ಫೋಟೋಗ್ರಫಿಯ ಮೇಲಿನ ಪ್ರೀತಿ ನಿಮ್ಮನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುವುದರಲ್ಲಿ ಯಾವುದೇ ಶಂಕೆ ಇಲ್ಲ. ನಿಮಗೆ ದೊರೆಯುವ ಪುರಸ್ಕಾರಗಳು, ಗೌರವಗಳು ನಮ್ಮಂತ ಎಷ್ಟೋ ಸ್ನೇಹಿತರಿಗೆ ಖಂಡಿತಾ ಸಂತೋಷದ ಸಂಗತಿ.
ಒಳ್ಳೆಯದಾಗಲಿ............

Dr.D.T.Krishna Murthy. said...

ವಿಷಯ ತಿಳಿದು ತುಂಬಾ ಸಂತಸವಾಯಿತು.ನಿಮ್ಮ ಪರಿಚಯ ನಮಗೂ ಇದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದು.ಹೊಸ ಹೊಸ ಅವಕಾಶಗಳು ನಿಮಗೆ ಕೀರ್ತಿ ಮತ್ತು ಯಶಸ್ಸನ್ನು ತಂದುಕೊಡಲಿ.

ಜಲನಯನ said...

ಅರೆ ಈ ಚಿತ್ರದಲ್ಲಿರೋ ಕ್ಲಾಸ್ ರೂಂ ಬಹು ಪರಿಚಿತವಾಗಿದೆಯಲ್ಲಾ...??? ತಲೆ ಕೆರ್ಕೊಂಡೆ, ಹಾಂ!!! ಹೌದು ಇದು ಗ್ಯಾಸ್ ಕಾಲೇಜ್ ಗ್ಯಾಲರಿ ಕ್ಲಾಸು....!!!! ಶಿವೂ...ನಿಮ್ಮ ಬಜ್ ಚಿತ್ರ ನೋಡಿ ಮತ್ತೆ ನಿಮ್ಮ ಬ್ಲಾಗಿಗೆ ಬಂದಾಗ ಖಾತ್ರಿ ಆಯ್ತು..ಹೌದು ಎರಡು ವರ್ಷ ಪ್ರಮುಖವಾಗಿ ಕನ್ನಡದ ಪಠ್ಯ ಮತ್ತು ನಾಟಕ ಕ್ಲಾಸ್ ಗಳಿಗೆ ಇದೇ ಕ್ಲಾಸ್ ರೂಮಲ್ಲಿ ಕೂತ್ಕೋತಾ ಇದ್ವಿ...ಬಾಲ್ಕನಿ ಅಂತ ಮೇಲೆ ಕೂತ್ಕೋಳ್ಳೋ ತವಕ ಕೆಲವ್ರಿಗೆ ಆದರೆ ನನಗೆ ನನ್ನ ಮೆಚ್ಚಿನ ಡಾ. ಓಂಕಾರಪ್ಪನವರು ತೆಗೆದುಕೊಳ್ಳುತ್ತಿದ್ದ ರನ್ನನ ಗಧಾಯುದ್ಧ ಅನುಭವಿಸೋಕೆ ಕೆಳಗಡೇ ಸಾಲೇ ಇಷ್ಟ ಆಗ್ತಿತ್ತು..

ನನ್ನ ನೆನಪುಗಳನ್ನು ಹಸಿರುಮಾಡಿದ್ದು ನಿಮ್ಮ ಚಿತ್ರಗಳಾದರೆ ಸ್ನೇಹಿತರಾದ ನಿಮಗೆ ನಿಮ್ಮ ಅರ್ಹತೆಗೆ ಉತ್ತೇಜನ ಮಾನ್ಯತೆ ಸಿಗುತ್ತಿರುವುದನ್ನು ಪರಿಚಯಿಸಿದ್ದು ನಿಮ್ಮ ಲೇಖನ.. ನಿಮಗೆ ಹತ್ತು ಹಲವು ಮಾನ್ಯತೆ ಪುರಸ್ಕಾರಗಳು ಇನ್ನೂ ಹರಿದು ಬರಲಿ ಎಂದು ಹಾರೈಸುತ್ತೇನೆ.

Prabhakar. H.R said...

abhinandanegalu...nimage shubhavaagali...mattashtu..saadane nimmindaagali....

sunaath said...

ಶಿವು,
ಪ್ರತಿಭೆಗೆ ಸಮ್ಮಾನ ಸಿಕ್ಕಲೇ ಬೇಕು. ಅಭಿನಂದನೆಗಳು ಹಾಗು ಶುಭಾಶಯಗಳು.

balasubramanya said...

- ಶಿವೂ ಒಳ್ಳೆ ದಿಕ್ಕಿನೆಡೆಗೆ ನಡೆದಿದೆ ನಿಮ್ಮ ನಡಿಗೆ , ಸಂತೋಷವಾಗಿದೆ ಎಲ್ಲರಿಗೂ ಹೀಗೆ ಸಾಗುತ್ತಿರಿ ಮುಂದೆ ನಿಮಗೆ ಶುಭವಾಗಲಿ

Harisha - ಹರೀಶ said...

ಏನೋ ಒಂಥರಾ ಖುಷಿಯಾಗ್ತಿದೆ :-)

ಅಭಿನಂದನೆಗಳು ಮತ್ತು ಶುಭಾಶಯಗಳು..

createam said...

ಶುಭಾಶಯಗಳು!

ದೀಪಸ್ಮಿತಾ said...

ಪತ್ರಿಕೆ ವೆಂಡರ್, ಛಾಯಾಗ್ರಾಹಕ, ಬ್ಲಾಗಿಗ, ಲೇಖಕ, ನಿರ್ದೇಶಕ, ಈಗ ಅಧ್ಯಾಪಕ. ನಾವು ಒಂದು ಕೆಲಸ ಮಾಡಲು ಸುಸ್ತಾಗುತ್ತೇವೆ. ಇರಲಿ, ಇದು ನಿಮ್ಮ ಛಾಯಾಗ್ರಹಣ ಜ್ಞಾನಕ್ಕೆ ಸಿಕ್ಕ ಮನ್ನಣೆ

Chaithrika said...

ಓ... ಒಳ್ಳೆಯದು.

ಓ ಮನಸೇ, ನೀನೇಕೆ ಹೀಗೆ...? said...

ನೀವು ಹತ್ತುತ್ತಾ ಇರುವ ಸಾಧನೆಯ ಮೆಟ್ಟಿಲುಗಳನ್ನು ನೋಡಿ ಕುಶಿಯಾಯ್ತು ಶಿವು ಅವರೇ...ಅಭಿನಂದನೆಗಳು. ಸಾಧನೆಯ ಪಯಣ ಹೀಗೆ ಮುಂದುವರೆಯಲಿ.

Anonymous said...
This comment has been removed by a blog administrator.
AntharangadaMaathugalu said...

ಶುಭ ಹಾರೈಕೆಗಳು ಶಿವೂ ಸಾರ್..

ಅನಿರೀಕ್ಷಿತ ತಿರುವುಗಳನ್ನು ತೋರಿಸುವುದೇ ಬದುಕಿನ ಸೌಂದರ್ಯ ಅಲ್ಲವೇ...? ದೇವರು ಒಳ್ಳೆಯದು ಮಾಡಲಿ.

ಶ್ಯಾಮಲ

KalavathiMadhusudan said...

shivu sir baduku annodu
namage gottilladante tiruvu padedukollutte.adanne
vidhiniyama annodu.prayatna nammadu.ashte.nimage mangalavaagali.

shivu.k said...

ಸತ್ಯಚರಣ್,
ನಿಮ್ಮ ಮಾತಿನಂತೆ ಬದಕನ್ನು ಹಾಗೆ ಸ್ವೀಕರಿಸಿದ್ದೇನೆ. ಮತ್ತೆ ನಿಮ್ಮ ಸಲಹೆಗಳು ಇಷ್ಟವಾಯಿತು. ಮತ್ತೆ ನೀವು ಹೇಳಿದಂತೆ ನಾನು ಹಳೆಯದನ್ನು ಮರೆತೇ ಇಲ್ಲ ರೇಡಿಯೋ ಕಾರ್ಯಕ್ರಮವನ್ನು ಕೇಳಿ.
ಧನ್ಯವಾದಗಳು.

shivu.k said...

ಮಾನಸ ಮೇಡಮ್,
ಥ್ಯಾಂಕ್ಸ್.

shivu.k said...

ಪರಂಜಪೆ ಸರ್,
ಥ್ಯಾಂಕ್ಸ್.

shivu.k said...

ಸುಗುಣಕ್ಕ,

ಥ್ಯಾಂಕ್ಸ್..

shivu.k said...

ದಿವ್ಯಾ...

ಪ್ರೀತಿಯಿಂದ ವಿಶ್ ಮಾಡುತ್ತಿರುವ ನಿನಗೆ ಧನ್ಯವಾದಗಳು.

shivu.k said...

ಜಿ.ಎಸ್ ಶ್ರೀನಾಥ್ ಸರ್,
ಥ್ಯಾಂಕ್ಸ್.

shivu.k said...

ತೇಜಸ್ವಿನಿ ಮೇಡಮ್,

ಥ್ಯಾಂಕ್ಸ್.

shivu.k said...

ಪ್ರಶಾಂತ್ ಥ್ಯಾಂಕ್ಸ್.

shivu.k said...

ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ವನಿತಾ..
ಥ್ಯಾಂಕ್ಸ್. ನಿಮ್ಮ ಕ್ಯಾಮೆರ ಸಕ್ಕತ್ ಚುರುಕಾಗಿದೆಯಾ?

shivu.k said...

ಕವಿತಾ,

ನಿಮ್ಮ ಆರೈಕೆಗಳಿಗೆ ಧನ್ಯವಾದಗಳು.

shivu.k said...

Gold 13,

thanks for your wishes

shivu.k said...

ಸಿಂಧೂ ಮೇಡಮ್,
ಫೋಟೊ ಕ್ಷಣಗಳನ್ನು ಬದುಕಿಗೆ ನೀವು ಹೋಲಿಸಿದ ರೀತಿ ತುಂಬಾ ಇಷ್ಟವಾಯಿತು. ಬಹುಶಃ ನಿಮ್ಮ ಈ ಅನಿಸಿಕೆಯೇ ನನ್ನ ಬದುಕಾಗಿರಬಹುದು ಅಂತ ಈಗ ಅನ್ನಿಸುತ್ತಿದೆ...
ಇಂಥ ಸೊಗಸಾದ್ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಚಂದ್ರು ಸರ್,
ನಿಮ್ಮ ಮಾತು ಸತ್ಯ. ಅವತ್ತು ಶಿಕ್ಷಕರ ದಿನಾಚರಣೆ. ಎಂಥ ಅದೃಷ್ಟ ನನ್ನದು.
ಅದನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸ್.

shivu.k said...

ಪ್ರವೀಣ್,

ಬದುಕಿನ ರೀತಿಯನ್ನು ಅರಿಯುವುದಕ್ಕಿಂತ ಅದು ಹರಿದ ರೀತಿಗೆ ನಾವು ತೇಲುವುದು ಒಳ್ಳೆಯದು. ನನ್ನ ಪ್ರಯತ್ನ ನನ್ನದು. ಅದು ಸಾಗುವ ದಿಕ್ಕಿಗೆ ನಮ್ಮ ಪ್ರಯಾಣ..ಏನಂತೀರಿ..ನಿಮ್ಮೆಲ್ಲರ ಪ್ರೋತ್ಸಾಹದಿಂದ ಇದೆಲ್ಲಾ ಸಾಧ್ಯವಾಯಿತು ಅಂತ ಹೇಳಿಕೊಳ್ಳೋಕೆ ಖುಷಿಯಾಗುತ್ತೆ...ಧನ್ಯವಾದಗಳು.

shivu.k said...

ಡಾಕ್ಟರ್ ಕೃಷ್ಣಮೂರ್ತಿ ಸರ್,
ನನಗೆ ಎಂಥೆಂಥಾ ಗೆಳೆಯರಿದ್ದಾರೆ ಅಂತ ಹೇಳಿಕೊಳ್ಳುವುದು ನನಗೆ ಹೆಮ್ಮೆಯ ವಿಷಯ.

shivu.k said...

ಆಜಾದ್,
ನೀವು ಹೇಳಿದ ಕ್ಲಾಸ್ ರೂಮ್ ಅದೇ.
ನಾನು ಮೊದಲು ಈ ಪದವಿ ಕ್ಲಾಸಿನ ವಿದ್ಯಾರ್ಥಿಗಳ ಮುಂದೆ ನಿಂತಾಗ ಒಮ್ಮೆ ದಿಗಿಲಾದರೂ ನಂತರ ಎಲ್ಲಾ ನೀರು ಕುಡಿದಂತೆ ಆಗಿಹೋಯ್ತು..
ನನಗೆ ಈ ವಿಚಾರವಾಗಿ ಫೋನ್ ಬಂದಿದ್ದು ಶಿಕ್ಷಕರ ದಿನಾಚರಣೆಯಂದು.
ಈಗ ಅದೇ ಹುಡುಗರ ಒತ್ತಾಯದ ಮೇರೆಗೆ ನಿನ್ನೆ [ಶನಿವಾರ]ಮತ್ತೆ practical class ಅನ್ನು ಕಬ್ಬನ್ ಪಾರ್ಕಿನಲ್ಲಿ ತೆಗೆದುಕೊಂಡಿದ್ದೆ. ವಿದ್ಯಾರ್ಥಿಗಳು ಸಕತ್ ಎಂಜಾಯ್ ಮಾಡಿದರು. ಅವರಿಗೆಲ್ಲಾ ಒಂದು ಅಸೈನ್ ಮೆಂಟ್ ಕೊಟ್ಟಿದ್ದೇನೆ. ನಾಳೆ ಸೋಮವಾರ ಮಧ್ಯಾಹ್ನ ಮೂರು ಗಂಟೆಗೆ ನನ್ನ ಮೂರನೆ ಅತಿಥಿ ಉಪನ್ಯಾಸ. ಆಗ ಅವರೆಲ್ಲಾ ನಾನು ಕೊಟ್ಟ ಅಸೈನ್‍ಮೆಂಟ್ ಫೋಟೊಗ್ರಫಿ ತೋರಿಸಿ ಮಾತಾಡಬೇಕಿದೆ. ಅದು ಒಂಥರ ಮಜ ಕೊಡುವ ಕ್ಲಾಸ್.
ಮತ್ತೆ ಇದೇ ಅಕಾಡಮಿಯವರು ನನ್ನಿಂದ ಈ ವಿಚಾರವಾಗಿ ಒಂದು ಕಿರುಚಿತ್ರವನ್ನು ಮಾಡಿಸುವ ಆಶಯ ಹೊಂದಿದ್ದಾರೆ.
ನೋಡಿ ಅಜಾದ್ ಏನೆಲ್ಲಾ ಆಗಿಹೋಯ್ತು..ಅಲ್ವ...
ಧನ್ಯವಾದಗಳು.

shivu.k said...

ಪ್ರಭಾಕರ್ ಹೆಚ್.ಅರ್.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಬಾಲು ಸರ್,
ನಿಮ್ಮ ಅಭಿಪ್ರಾಯ ಸರಿ. ನೋಡೋಣ ಇದು ಎಲ್ಲಿಗೆ ಕರೆದೊಯ್ಯುತ್ತದೆಯೆಂದು..
ಧನ್ಯವಾದಗಳು.

shivu.k said...

ಹರೀಶ್,

ನೀವು ಸಂತೋಷ ಪಡುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ..

shivu.k said...

Creatam
thanks..

shivu.k said...

ಕುಲದೀಪ್ ಸರ್,
ಅದೇನೋ ಗೊತ್ತಿಲ್ಲ. ಇದೆಲ್ಲಾ ಹೇಗಂತಲೂ ಗೊತ್ತಿಲ್ಲ..ಎಲ್ಲಾ ಆಗುತ್ತಿದೆಯೆಂದುಕೊಳ್ಳುತ್ತಿದ್ದೇನೆ. ಧನ್ಯವಾದಗಳು.

shivu.k said...

ಚೈತ್ರಿಕಾ..
ಥ್ಯಾಂಕ್ಸ್.

shivu.k said...

ಓ ಮನಸೇ ನೀನೇಕೆ ಹೀಗೆ..
ನಿಮ್ಮ ಪ್ರೀತಿಪೂರ್ವಕ ಆರೈಕೆಗೆ ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,
ನಿಮ್ಮ ಅಭಿಪ್ರಾಯ ನೂರಕ್ಕೆ ನೂರರಷ್ಟು ಸರಿ. ಇಂಥ ಬದುಕು ತುಂಬಾ ಖುಷಿಕೊಡುತ್ತಿದೆ...ಧನ್ಯವಾದಗಳು.

shivu.k said...

ಕಲರವ,

ನಿಮ್ಮ ಮಾತು ನಿಜ. ಈ ಬದುಕು ಮುಂದೆ ಹೇಗೋ ಅನ್ನುವುದಕ್ಕಿಂತ ಗೊತ್ತಿಲ್ಲದ ಸಸ್ಪೆನ್ಸ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ...ಧನ್ಯವಾದಗಳು.