ಒಂದು ವರ್ಷದಲ್ಲಿ ನಾನು ತಪ್ಪಿಸಕೊಳ್ಳಲೇಬಾರದೆಂದು ಪ್ಲಾನ್ ಮಾಡುವ ಹತ್ತು ಕಾರ್ಯಕ್ರಮಗಳ ಪಟ್ಟಿಮಾಡಿದರೆ ಮೊದಲ ಸ್ಥಾನ ಚಿತ್ರಸಂತೆಗೆ. ಎರಡನೇಯದು ಎರಡು ವರ್ಷಕ್ಕೊಮ್ಮೆ ನಡೆಯುವ "ಏರ್ ಷೋ"[ಮುಂದಿನ ತಿಂಗಳ 9 ರಿಂದ 13ರವರೆಗೆ ಬೆಂಗಳೂರಿನಲ್ಲಿ ನಡೆಯುತ್ತದೆ.] ನಂತರ ಫೋಟೊಗ್ರಫಿ ಪ್ರವಾಸಗಳು,.....ಹೀಗೆ ಮುಂದುವರಿಯುತ್ತವೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ಚಿತ್ರಸಂತೆಯಲ್ಲಿ ನನ್ನದು ಕೆಲವು ಫೋಟೊಗಳನ್ನು ತರಕಾರಿ, ಸೊಪ್ಪುಗಳಂತೆ ಮಾರಾಟಕ್ಕೆ ಇಟ್ಟಿದ್ದೆ. ವ್ಯಾಪಾರದಲ್ಲಿ ಚೆನ್ನಾಗಿ ಲಾಭವೆ ಆಯ್ತು. ಇನ್ನುಳಿದಂತೆ ಚಿತ್ರ ಕಲಾವಿದರೂ, ನನ್ನಂಥ ಛಾಯಾ ಕಲಾವಿದರಲ್ಲಾ ಹೀಗೆ ಚೌಕಾಸಿ ವ್ಯಾಪರದಲ್ಲಿ ತೊಡಗಿ ಕೊನೆಗೆ ನೀಟ್ ಆಗಿ ಪೇಪರ್ ಅಥವ ಕವರಿನಲ್ಲಿ ಕವರಿನಲ್ಲಿ ಹಾಕಿ ಪ್ಯಾಕ್ ಮಾಡಿ ಕೊಡುತ್ತಿದ್ದರು. ಅಲ್ಲದೆ ಕೊಳ್ಳಲು ಬಂದ ಕಲಾಸ್ತಕರು, ಬರೀ ಕಲೆಯನ್ನೇ ನೋಡಿ ಖುಷಿಪಡಲು ಬಂದ ಕಲಾಸಕ್ತರು, ಇವರನ್ನೆಲ್ಲಾ ಸೆರೆಯಿಡಿಯಲು, ಹಿಡಿದು ಬರೆಯಲು ಬಂದಿದ್ದ ಟಿವಿ ಕ್ಯಾಮೆರಾಮ್ಯಾನುಗಳು, ಪತ್ರಕರ್ತರು, [ಸಣ್ಣಕ್ಯಾಮೆರಾದಲ್ಲಿ ನನ್ನ ಚಿತ್ರಗಳ ಫೋಟೊ ತೆಗೆಯತ್ತಿದ್ದ ಪ್ರಜಾವಾಣಿ ಪತ್ರಕರ್ತರಿಗೆ "ಸಾರ್ ಫೋಟೊ ತೆಗೆಯಬೇಡಿ ಸರ್ ಅದರ ಉಪಯೋಗವಿಲ್ಲ" ಅಂದೆ ಅದಕ್ಕೆ ಅವರು ನಮ್ಮ ಜರ್ನಲಿಸ್ಟ್ ಬುದ್ದಿ ಸರ್ ಎಲ್ಲಾ ಫೋಟೊ ತೆಗೆಯಬೇಕೆನಿಸುತ್ತದೆ ಅಷ್ಟೇ": ಅಂದರು, ಅದಕ್ಯಾಕೆ ಸರ್ ಹೀಗೆ ಫೋಟೊ ತೆಗೀತೀರಿ, ನಿಮ್ಮ ಪ್ರಜಾವಾಣಿಅಫೀಸಿನಲ್ಲೇ ಯಾರನ್ನಾದರೂ ಕೇಳಿದರೆ ನನ್ನ ಚಿತ್ರಗಳು ಹೈ ರೆಸಲ್ಯೂಷನಲ್ಲಿ ಸಿಗುತ್ತದೆ" ಅಂದೆ] ಜೊತೆಗೆ ಸುತ್ತಾಡಲು ಬಂದ ಸುಂದರ ಹುಡುಗಿಯರು, ಅವರನ್ನು ನೋಡಲು ಬಂದ ಹುಡುಗರು, ಅವರ ಜೇಬು ಕಾಲಿಮಾಡಲೆಂದೇ ಸಿದ್ದರಾಗಿದ್ದ ಐಸ್ಕ್ರೀಮ್, ಟೀ, ಕಡ್ಲೇಬೀಜ, ಚುರುಮುರಿ, ಕೈಗಾಡಿ ಹೋಟಲ್ಲುಗಳು[ಇವರೆಲ್ಲಾ ನೆನ್ನೆ ತಿನ್ನುವ ಪದಾರ್ಥಗಳನ್ನು ನ್ನು ದುಬಾರಿಬೆಲೆಗೆ ಮಾರಿದರು] , ಹಿತವಾದ ಬಿಸಿಲು ಇದೆಲ್ಲವೂ ಪ್ರತಿವರ್ಷವೂ ಇರುತ್ತದೆಯಾದ್ದರಿಂದ ಇವು ಯಾವುದು ನನಗೆ ವಿಶೇಷವೆನಿಸಲಿಲ್ಲ. ಇಂಥ ಸಮಯದಲ್ಲಿ ನನ್ನ ಕಣ್ಣಿಗೆ ವಿಶೇಷವೆನಿಸಿದ್ದೇ ಪುಟ್ಟ ಮಕ್ಕಳು.
ಚಿತ್ರಸಂತೆಯಲ್ಲಿ ಕಲಾವಿದರಿಗೆ ತಮ್ಮ ಕಲಾಕೃತಿಯನ್ನು ಉತ್ತಮಬೆಲೆಗೆ ಮಾರಬೇಕೆನ್ನುವ ಆಸೆಯಿದ್ದರೆ,. ಅದನ್ನು ಕೊಳ್ಳುವವರಿಗೆ ಅತೀ ಕಡಿಮೆಬೆಲೆಯಲ್ಲಿ ಉತ್ತಮ ಕಲಾಕೃತಿಯನ್ನು ಕೊಳ್ಳುವ ತವಕ, ಉಳಿದಂತೆ ಪತ್ರಕರ್ತರು, ಕ್ಯಾಮರಾಮೆನ್ನುಗಳು, ಹುಡುಗ-ಹುಡುಗಿಯರು, ದಂಪತಿಗಳು, ವ್ಯಾಪರಿಗಳು ಇವರೆಲ್ಲಾರಿಗೂ ಒಂದಲ್ಲ ಒಂದು ಉದ್ದೇಶ ಚಿತ್ರಸಂತೆಯಲ್ಲಿ ಇದ್ದೇ ಇರುತ್ತದೆ. ಆದ್ರೆ ಅವರ ಸೊಂಟದ ಮೇಲೆ, ಹೆಗಲಮೇಲೆ, ಹೊಟ್ಟೆಯ ಮೇಲೆ[ಬಸುರಿ ಹೊಟ್ಟೆಯಲ್ಲ ಗಂಡಸರ ಹೊಟ್ಟೆಯ ಮೇಲೆ ನೇತಾಡುವ ಮಕ್ಕಳು. ಮತ್ತೆ ಐದಾರು ಬಸುರಿ ಹೆಂಗಸರು ಬಂದಿದ್ದರು ಅನ್ನಿ] ಇದ್ದ ಮಕ್ಕಳಿಗೆಲ್ಲಾ ಏನು ಉದ್ದೇಶವಿರಬಹುದು? ಇಂಥ ಒಂದು ಪ್ರಶ್ನೆ ಆ ಕ್ಷಣದಲ್ಲಿ ಮೂಡಿತಲ್ಲ! ಅದನ್ನು ತಿಳಿಯುವ ಉದ್ದೇಶವಾಗಿ ಅವರ ಫೋಟೊ ತೆಗೆಯಲು ಪ್ರಯತ್ನಿಸಿದೆ. ಕೆಲವೊಂದರ ಉದ್ದೇಶವನ್ನು ನಾನು ನನಗನ್ನಿಸಿದಂತೆ ಕೊಟ್ಟಿದ್ದೇನೆ. ನೀವು ಆ ಮಕ್ಕಳ ಚಿತ್ರಗಳನ್ನು ನೋಡಿದಾಗ ಅದನ್ನು ಮೀರಿದ ಬೇರೆ ಭಾವನೆಗಳು ನಿಮಗೆ ಬರಬಹುದು ಅಂದುಕೊಂಡಿದ್ದೇನೆ. ಈಗ ಚಿತ್ರಸಂತೆಯಲ್ಲಿನ ಮಕ್ಕಳ ಚಿತ್ರಗಳನ್ನು ನೋಡೋಣ ಬನ್ನಿ.
ನಾನು ಮನೆಯಲ್ಲೇ ಚೆನ್ನಾಗಿ ನಿದ್ದೆ ಮಾಡುತ್ತಿದ್ದೆ, ಇದರ ಮದ್ಯೆ ನಮ್ಮಪ್ಪ ಮೊಬೈಲ್ ಬೇರೆ
ಇಲ್ಲಿರುವ ಕಲಾವಿದರಿಗೆಲ್ಲಾ ನನ್ನ ಕಡೆಯಿಂದ ಹ್ಯಾಟ್ಸಪ್!
ಯಾರೋ ನನ್ ಫೋಟೊ ತೆಗಿತಾವರಲ್ಲ!
ವಾಹ್! ಈ ಚಿತ್ರ ಸೂಪರ್!
ಯಾರದು!
ಅಯ್ಯೋ, ನಮ್ಮ ಅಪ್ಪ ಅಮ್ಮನಿಗೆ ಬುದ್ದಿಯಿಲ್ಲ, ಇಲ್ಲೆಲ್ಲೋ ಕರೆದುಕೊಂಡು ಬಂದಿದ್ದಾರೆ, ಮನೆಯಲ್ಲಿದ್ದಾರೆ ಮೊಬೈಲಿನಲ್ಲಿ ಗೇಮ್ ಅಥ್ವ ಕಾರ್ಟೂನ್ ಚಾನಲ್ ನೋಡಬಹುದಿತ್ತು!
ಚಿತ್ರಪಟ ತಗೊಳ್ಳಕ್ಕೆ ಬಂದ ನಮ್ಮಪ್ಪನಿಗೆ ಅಲ್ಲಿರುವ ಐಸ್ ಕ್ರೀಮ್ ಕೊಡಿಸಬೇಕು ಅನ್ನಿಸುತ್ತಿಲ್ಲವಲ್ಲ!
ನೀನು ಎಲ್ಲಿಗೆ ಕರೆದುಕೊಂಡು ಹೋದ್ರೂ ನಾನು ನಿದ್ರೆ ಮಾಡೋದು ಹೀಗೇನೇ
ನಾನು ಚೆನ್ನಾಗಿ ಕಾಣುತ್ತಿದ್ದಿನಲ್ವಾ? ಬೇಗ ಫೋಟೊ ತೆಗಿ
ಕುರಿ ಓಡಿಸಿಕೊಂಡು ಹೋಗುವ ಈ ಚಿತ್ರ ಸಕ್ಕತ್ ಆಗಿದೆ!
ಈ ರೀತಿ ಮೇಲೆ ಕುಳಿತುಕೊಂಡು ಲಾಲಿಪಪ್ ತಿನ್ನುತ್ತಿದ್ದರೇ......
ನಾನು ಬೀಳದಂತೆ ಗಟ್ಟಿಯಾಗಿ ಅಪ್ಪನ ತಲೆಯನ್ನು ಹೀಗೆ ಹಿಡಿದುಕೊಳ್ಳಬೇಕು
ನನ್ನ ತರ ಇರೋ ಆ ಪಾಪು ಫೋಟೊ ಎಷ್ಟು ಚೆನ್ನಾಗಿದೆ!
ಕೊನೆಯಲ್ಲಿ ಮತ್ತೊಂದು ವಿಚಾರ ನನ್ನ ಹಾಸನದ ಗೆಳೆಯನಾದ ಚಿತ್ರಕಲಾವಿಧ ಆರುಣ್ ಒಂದು ವರ್ಷದ ಹಿಂದೆ ನಮ್ಮ ಮನೆಗೆ ಬಂದು ನಾನು ತೆಗೆದ ಅನೇಕ ಹಳ್ಳಿ ಜೀವನದ ಚಿತ್ರಗಳನ್ನು ತೆಗೆದುಕೊಂಡು ಹೋಗಿದ್ದ. ಅದರಲ್ಲಿ ಈ ಬಾರಿ ಚಿತ್ರಿಸಿದ್ದ ಮೇಕೆಗಳನ್ನು ಓಡಿಸಿಕೊಂಡು ಬರುತ್ತಿರುವ ಹುಡುಗನ ಚಿತ್ರ "ಗೋಧೂಳಿ" ಮುವತ್ತೊಂದು ಸಾವಿರಕ್ಕೆ ಮಾರಾಟವಾಗಿದ್ದು ನಿಜಕ್ಕೂ ಖುಷಿಯ ವಿಚಾರ ಆತನಿಗೆ ಅಭಿನಂದನೆಗಳು.
ಹಾಸನದ ಗೆಳೆಯ ಮತ್ತು ಚಿತ್ರಕಲೆಗಾರ ಬಿಡಿಸಿದ "ಗೋಧೂಳಿ ಚಿತ್ರ"
ಮುಂದಿನ ಲೇಖನದಲ್ಲಿ ಚಿತ್ರಸಂತೆ ವಿಭಿನ್ನ ಕ್ಯಾಮೆರಾಗಳ ಆಟಗಳನ್ನು ಬ್ಲಾಗಿನಲ್ಲಿ ಹಾಕುತ್ತೇನೆ.
ಚಿತ್ರಗಳು ಮತ್ತು ಲೇಖನ
ಶಿವು.ಕೆ
59 comments:
ಚೆನ್ನಾಗಿದೆ ಮಕ್ಕಳ ಚಿತ್ರ ಸ೦ತೆ. ನಾನು ನನ್ನ ಮಗನ ಜೊತೆ ಬ೦ದಿದ್ದೆ. ಬಿಸಿಲಲ್ಲಿ ಮಗ ಸುಸ್ತಾಗಿದ್ದ. ಎಲ್ಲೋ ಕಣ್ತಪ್ಪಿ ನಿಮ್ಮ ಸ್ಟಾಲ್ ಗಮನಿಸದೇ ದಾಟಿ ನಾವು ಬ೦ದಾಗಿತ್ತು. ಮತ್ತೆ ನೀವು ಫೋನಿಗೆ ಸಿಕ್ಕಾಗ ನಾನು ಶಿವಾನ೦ದ ಸರ್ಕಲ್ ಹತ್ತಿರವಿದ್ದೆ. ನೀವು ಅಲ್ಲೆಲ್ಲೋ ಓಡಾಡ್ತಾ ಫೋಟೋ ತೆಗೆಯುತ್ತಿದ್ದಿರಿ ಅನಿಸುತ್ತೆ. ಹಾಗಾಗಿ ಮತ್ತೆ ವಾಪಾಸು ನಾವು ಬರಲಿಲ್ಲ. ಚಿತ್ರಗಳು ಅದ್ಭುತವಾಗಿದ್ದವು.
"ಚಿತ್ರಸಂತೆ"ಯನ್ನು ಮಕ್ಕಳ ಚಿತ್ರಸಂತೆಯಾಗಿ ಕಂಡ ನಿಮಗೆ ಅಭಿನಂದನೆ. ನಮಗೂ ಕಾಣಿಸಿದ್ದಕ್ಕೆ ವಂದನೆ. ಚೆನ್ನಾದ ಚಿತ್ರಗಳು ಅದಕ್ಕೊಪ್ಪುವ ಟೈಟಲ್ಗಳು..
nice captures..
good photos i was not able to come because of some other works. u have captured some fine emotions. congrats shivu sir..!
also please free to visit my new blog..http://vartamaana.blogspot.com/
ಸರ್ ನಿಮ್ಮ
ಚಿತ್ರಗಳು ತುಂಭಾ ಚೆನ್ನಾಗಿವೆ.
ಧನ್ಯವಾದಗಳು
ಶಿವೂ ಅವರೇ,
ನಿಮ್ಮನ್ನು ಚಿತ್ರ ಸಂತೆಯಲ್ಲಿ ಭೇಟಿಯಾದದ್ದು ಬಹಳ ಸಂತೋಷ. ಎಂದಿನಂತೆ ಸೂಪರ್ ಚಿತ್ರ ಲೇಖನ !
ಪ್ರೀತಿಯಿಂದ,
ಅರ್ಚನಾ
ಶಿವು ಸಾರ್...
ಚಂದದ ಫೋಟೊಗಳು.. !
ತುಂಬಾ ಖುಷಿ ಆಯಿತು.. ಅಭಿನಂದನೆಗಳು...
ನಿನ್ನೆ ನಾನೂ ಕೂಡ ಮೊದಲ ಬಾರಿಗೆ ಚಿತ್ರ ಸಂತೆ ವೈಭವ ನೋಡಿದೆ..
ನೀವು ಸಿಗಲಿಲ್ಲ..
ನಿಮ್ಮ ಸಹೋದರ ಸಿಕ್ಕಿದ್ದರು..
ಇಲ್ಲಿ ನಾನು ತೆಗೆದ ಕೆಲವು ಫೋಟೊಗಳಿವೆ ನೋಡಿ...
http://picasaweb.google.com/kash531/ChitraSanthe
ತುಂಬಾ ಲೈವ್ ಆಗಿದೆ.. ಫೋಟೋ ಮತ್ತೆ ಅದರ ಶೀರ್ಷಿಕೆಗಳು !! ಧನ್ಯವಾದಗಳು
mast photos!!!
Event photoಗಳನ್ನು ನಿಮ್ಮ ಹಾಗೆ ನಮಗೆ ತೋರಿಸುವವರು ಯಾರೂ ಇರಲಿಕ್ಕಿಲ್ಲ! ತುಂಬ ಸೊಗಸಾದ ಫೋಟೋಗಳು. ಕೊನೆಯ ಗೋಧೂಳಿ ತುಂಬ ಚೆನ್ನಾಗಿದೆ.
hi shivu nimma photo santhe bagge gottirlilla...gottidre try madtha idde barodikke...bandidre nan maglu nimmanna bidtha irllilla..
ಶಿವೂ ನೀವು ಕ್ಲಿಕ್ಕಿಸಿರುವ ಮಕ್ಕಳ ಚಿತ್ರಸಂತೆ ವಾವ್ ಚೆನ್ನಾಗಿದೆ.ಮಕ್ಕಳ ನೈಜ ಭಾವನೆಗಳನ್ನು ಸುಂದರವಾಗಿ ಸೆರೆಹಿಡಿದಿದ್ದೀರಿ. ನಾನು ತುಂಬಾ ಇಷ್ಟಪಟ್ಟು ಎಲ್ಲಾ ಚಿತ್ರಗಳನ್ನು ನೋಡಿದೆ.ಚಿತ್ರಗಳಿಗೆ ನೀಡಿದ ಶೀರ್ಷಿಕೆಗಳು ಆಸಕ್ತಿ ಕೆರಳಿಸುತ್ತವೆ.ನಿಮಗೆ ಹಾಗು ಸುಂದರ ಚಿತ್ರಗಳಿಗೆ ಜೈ ಹೋ.
ಶಿವು;ಸುಂದರ ಚಿತ್ರಗಳು,ಸುಂದರ ಟೈಟಲ್ ಗಳು.ತುಂಬಾ ತುಂಬಾ ಚೆನ್ನಾಗಿವೆ.ಅಭಿನಂದನೆಗಳು.
Thumab chennagidde makkala photogaLu.....
godhooLiya photo thumba chennagide... worth for Rs. 31000 :)
shivu sir..... nimma photos tumba chennagiiddde.. nannu kuda modala bari ninne chitra santhe nodide tumba ista ayitu adre swalp late aagi hogidde so light ilade iro karana dinda sari aginodoke agale illa :(:( adare next time nannu miss madikollabardu antha decide madidini
waav... nimma chitradalli makkaLu tumbaa muddaagi kaaNtaa iddaru... tumbaa chennaagive sir....
ವಿಭಿನ್ನವಾಗಿ ಯೋಚಿಸುತ್ತೀರಿ ಎನ್ನುವುದಕ್ಕೆ ಈ ಚಿತ್ರಗಳೇ ಸಾಕ್ಷಿ. ಈ ಸಲ ನನಗೆ ಚಿತ್ರಸಂತೆಗೆ ಬರಲಾಗಲಿಲ್ಲ
ಸ್ವಾಮಿ,
ನೀವು ಆರಿಸಿಕೊಂಡ ವಿಷಯ,ಮನಮೋಹಕ ಛಾಯಾ ಚಿತ್ರಗಳು, ಸೂಕ್ತ ಶೀರ್ಷಿಕೆಗಳು ಎಲ್ಲವೂ ಚೆನ್ನಾಗಿವೆ. ಚಿತ್ರ ಸಂತೆಯ ನಿಮ್ಮ ಸ್ಟಾಲ್'ನಲ್ಲಿ ನಿಂತು ನೀವು ಎಡೆಬಿಡದೇ ಶೂಟ್ ಮಾಡ್ತಿದ್ದದ್ದನ್ನು ನೋಡಿದಾಗಲೇ ನಮಗೆ ಹೊಸದು ಸಿಗುತ್ತದೆ ಅಂತ ಅಂದ್ಕೊಂಡಿದ್ದೆ.
wow... nice photos...
Nice pics
photos anthu hottekichchu baro astu adbhutavagide....
ಶಿವೂ ಸರ್
ಸದಾ ವಿಭಿನ್ನತೆ ಬಯಸುವ ನಿಮ್ಮ ಕ್ಯಾಮೆರಾ ಕಣ್ಣುಗಳಿಗೆ ಒಂದು ಸಲಾಮು
ನಮ್ಮ ಚಿಂತನೆ ವಿಭಿನ್ನ ಆಗಿದ್ದರೆ ಎಷ್ಟೊಂದು ಸುಂದರವಾಗಿ ಹೊಸತನ ಹುಡುಕಬಹುದು ಅನ್ನೋದಕ್ಕೆ ನಿಮ್ಮ ಫೋಟೋಗಳೇ ಸಾಕ್ಷಿ
ಸಾಧಾರಣವಾಗಿ ಚಿತ್ರ ಸಂತೆಗೆ ಹೋದವರು ಚಿತ್ರಗಳ ಫೋಟೋ ತೆಗೆಯುವಲ್ಲಿ ನಿರತರಾದರೆ ನಿಮ್ಮಂತ ಕೆಲವೇ ಕೆಲವು ಕ್ಯಾಮೆರಾ ಕಣ್ಣುಗಳಿಗೆ
ಅಲ್ಲಿಯೇ ಹೊಸತನ ಮೂಡುತ್ತದೆ
ಸುಂದರ ಫೋಟೋಗಳು
ನಿಮ್ಮ ಚಿತ್ರಗಳಲ್ಲಿ ಯಾವುದಾದರು ಒಂದನ್ನು ನನಗೆ ತೆಗೆದಿಡಿ, ಹಣ ತೆಗೆದುಕೊಳ್ಳುವುದಾದರೆ ಮಾತ್ರ :)
ಕಳೆದ ಬಾರಿ ನೀವು ನೀಡಿದ ಪಕ್ಷಿಯ ಚಿತ್ರ ಮನೆಯ ಗೋಡೆಯ ಮೇಲೆ ಕುಳಿತು, ಸದಾ ನಿಮ್ಮ ಕಲೆಯನ್ನು ನೆನಪಿಸುತ್ತದೆ
ಅಭಿನಂದನೆಗಳು ನಿಮ್ಮ ಕಲೆಗೆ, ನಿಮ್ಮ ಚಿಂತನೆಗೆ
Nice and Different clicks
Very creative mind, nice pics
ಶಿವು ಸರ್, ತುಂಬಾ ಒಳ್ಳೆಯ ಫೋಟೋಗಳು. ಒಳ್ಳೆಯ ನಿರೂಪಣೆ ಕೂಡಾ. ಇಷ್ಟವಾಯಿತು ಸಚಿತ್ರ ಲೇಖನ.
mast photos sir.. :)
ಫೋಟೋಗಳು ಬಹಳ ನೈಜವಾಗಿ ಅದ್ಭುತವಾಗಿ ಮೂಡಿ ಬ೦ದಿವೆ. ಕೆಳಗಿನ ಸಾಲುಗಳೂ ಅದಕ್ಕೊಪ್ಪುವ೦ತೆ ಇವೆ. ಮಕ್ಕಳ ಸ೦ತೆ ತೋರಿಸಿದ್ದಕ್ಕಾಗಿ ಧನ್ಯವಾದಗಳು! ನನ್ನ ಬ್ಲಾಗ್ ನಲ್ಲಿ ಒ೦ದು ಹಾಸ್ಯ ಬರಹ ಹಾಕಿದ್ದೇನೆ. ಬಿಡುವು ಮಾಡಿಕೊ೦ಡು ಒಮ್ಮೆ ಬನ್ನಿ.
ಶಿವು ಸರ್, ಚಿತ್ರ ಸಂತೆಯಲ್ಲಿ 'ಮಕ್ಕಳ ಚಿತ್ರ ಸಂತೆ' ಮತ್ತು ಅಡಿಬರಹಗಳು ಚೆನ್ನಾಗಿವೆ.
ಮತ್ತಷ್ಟು ಚಿತ್ರಗಳು, ಅಂದರೆ, ಇನ್ನೂ ವಿಶೇಷವಾದದ್ದನ್ನು ನಿಮ್ಮ ಕ್ಯಾಮೆರಾ ಸೆರೆಹಿಡಿದುರುತ್ತೆ ಅನಿಸುತ್ತೆ...
ಇಂತಹ ಚಿತ್ರಗಳನ್ನ ನಮಗೂ ತೋರಿಸಿದ್ದಕ್ಕೆ ಧನ್ಯವಾದಗಳು.
ಸ್ನೇಹದಿಂದ,
ಮಕ್ಕಳ ಚಿತ್ರಸಂತೆ ಚೆನ್ನಾಗಿದೆ, ಮಕ್ಕಳೇ ಮನಮೋಹಕ ಇನ್ನು ಚಿತ್ರಗಳನ್ನು ಕೇಳಬೇಕೇ? ಮಕ್ಕಳ ಚಿತ್ರಗಳು ಹೇಗಿದ್ದರೂ ಚಂದ, ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದ.
ಪರಂಜಪೆ ಸರ್,
ಮಕ್ಕಳ ಚಿತ್ರ ಸಂತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಅವತ್ತು ನಾನು ಫೋಟೊ ತೆಗೆಯುವುದರಲ್ಲಿ ಬ್ಯುಸಿಯಾಗಿದ್ದರಿಂದ ನನಗೆ ನಿಮ್ಮನ್ನು ಬೇಟಿಯಾಗಲು ಆಗಲಿಲ್ಲ.
ಪಾಲಚಂದ್ರ,
ಚಿತ್ರಸಂತೆಯನ್ನು ಸ್ವಲ್ಪ ವಿಭಿನ್ನವಾಗಿ ನೋಡಬೇಕೆನಿದಾಗ ನನಗೆ ಹೊಳೆದಿದ್ದು ಇದು. ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಕಾಂತಿ,
ಥ್ಯಾಂಕ್ಸ್.
ಉಮೇಶ್ ಸರ್,
ಈ ಬಾರಿ ತಪ್ಪಿಸಿಕೊಂಡರೂ ಮುಂದಿನ ಭಾರಿ ತಪ್ಪಿಸಿಕೊಳ್ಳಬೇಡಿ..ಚಿತ್ರಗಳಲ್ಲಿನ ಭಾವನೆಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮತ್ತೆ ನಿಮ್ಮ ಹೊಸ ಬ್ಲಾಗನ್ನು ಬಿಡುವಾದಾಗ ನೋಡುತ್ತೇನೆ.
ಕನಸು...ಥ್ಯಾಂಕ್ಸ್.
ಅರ್ಚನ ಮೇಡಮ್,
ನಾನು ನಿಮ್ಮನ್ನು ಚಿತ್ರಸಂತೆಯಲ್ಲಿ ಬೇಟಿಯಾಗಿದ್ದು ಖುಷಿ. ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಪ್ರಕಾಶ್ ಸರ್,
ಚಿತ್ರಸಂತೆಯನ್ನು ಎಲ್ಲರೂ ನೋಡಬೇಕೆನ್ನುವುದು ನನ್ನ ಆಸೆ. ನೀವು ಅದನ್ನು ಆನಂದಿಸಿದ್ದೀರಿ..ಮತ್ತೆ ಚಿತ್ರಸಂತೆಯ ನಿಮ್ಮಫೋಟೊಗಳನ್ನು ನೋಡಿದೆ ಚೆನ್ನಾಗಿದೆ..
ಮುಂದಿನಭಾರಿಗೆ ಈಗಿನಿಂದಲೇ ಪ್ಲಾನ್ ಮಾಡಿಕೊಳ್ಳಿ...
IBK,
ಚಿತ್ರಗಳು ಮತ್ತು ಅದರ ಶೀರ್ಷಿಕೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..
ವಿಚಲಿತ,,ಥ್ಯಾಂಕ್ಸ್.
ಸುನಾಥ್ ಸರ್,
ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಪ್ರಶಾಂತ್,
ಚಿತ್ರಸಂತೆ ಬಗ್ಗೆ ಪತ್ರಿಕೆಗಳಲ್ಲಿ ಬಂದಿತ್ತು. ಮುಂದಿನ ಭಾರಿ ಮಿಸ್ ಮಾಡಿಕೊಳ್ಳಬೇಡಿ. ಮತ್ತೆ ನಿಮ್ಮ ಮಗಳು ಅಧಿತಿ ನನಗೆ ಬೆಸ್ಟ್ ಪ್ರೆಂಡ್ ಅಲ್ಲವ..ಅವಳು ಬಂದರೆ ನೋ ಪ್ರಾಬ್ಲಂ..
ಬಾಲು ಸರ್,
ಚಿತ್ರಸಂತೆಯಲ್ಲಿ ಸ್ವಲ್ಪ ವಿಶೇಷವೇನಾದರೂ ಕಾಣುತ್ತದೆಯಾ ಅಂತ ನೋಡಿದಾಗ ಕಂಡಿದ್ದು ಹೀಗೆ...ಚಿತ್ರಗಳ ಜೊತೆಗಿನ ಭಾವನೆಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..
ಡಾ.ಕೃಷ್ಣಮೂರ್ತಿ ಸರ್,
ಚಿತ್ರಗಳು ಮತ್ತು ಅವುಗಳ ಟೈಟಲ್ಲುಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಸುಧೇಶ್,
31000 ಕ್ಕೆ ಮಾರಾಟವಾದ ಆ ಚಿತ್ರವನ್ನು ಫೋಟೊಗಿಂತ ಹಾಗೆ ನೋಡುವುದರ ಖುಷಿಯೇ ಬೇರೆ. ಮಕ್ಕಳಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಮಂಜು,
ಫೋಟೊಗಳನ್ನು ಮತ್ತು ಚಿತ್ರಸಂತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮುಂದಿನ ಭಾರಿ ಬೇಗ ಬನ್ನಿ...
ದಿನಕರ್ ಸರ್,
ಚಿತ್ರಗಳಲ್ಲಿ ಮುದ್ದಾದ ಮಕ್ಕಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಕುಲದೀಪ್ ಸರ್,
ಈ ಭಾರಿ ಚಿತ್ರಸಂತೆ ಮಿಸ್ ಮಾಡಿಕೊಂಡಿರಾ...ಮುಂದಿನ ಭಾರಿ ತಪ್ಪಿಸಿಕೊಳ್ಳಬೇಡಿ..
ನಾರಾಯಣ್ ಭಟ್ ಸರ್,
ಚಿತ್ರಸಂತೆಯಲ್ಲಿ ನಿಮ್ಮ ಬೇಟಿಯಾಗಿದ್ದು ಸಂತೋಷ. ನಿಮ್ಮ ಅನಿಸಿಕೆಗೆ ತಕ್ಕಂತೆ ಚಿತ್ರಗಳು ಸಿಕ್ಕಿದ್ದು ನನ್ನ ಪ್ರಯತ್ನ ಸಾರ್ಥಕವೆಂದುಕೊಳ್ಳುತ್ತೇನೆ...ಧನ್ಯವಾದಗಳು.
ಚುಕ್ಕಿ ಚಿತ್ತಾರ ಮೇಡಮ್,
ಥ್ಯಾಂಕ್ಸ್..
ಜ್ಯೋತಿ ಮೇಡಮ್,
ಥ್ಯಾಂಕ್ಸ್.
Nuthan sir,
ನನ್ನ ಬ್ಲಾಗಿಗೆ ಸ್ವಾಗತ. ಮತ್ತು ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..
ಗುರುಮೂರ್ತಿ ಹೆಗಡೆ ಸರ್,
ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದಗಳು. ನೀವು ನನ್ನ ಫೋಟೊಗ್ರಫಿ ಬಗ್ಗೆ ಹೊಗಳುತ್ತಿದ್ದೀರಿ..ಆದ್ರೆ ನಿಮ್ಮನ್ನು ಬೇಟಿಯಾದಾಗ ಸ್ವೀಡನ್ನಿನಲ್ಲಿ ನಿಮ್ಮ ಸಾಧನೆ, ಸಂಶೋಧನೆ ಮತ್ತು ನೀವು ಬರೆದ ಆ ದೊಡ್ಡ ಶೈಕ್ಷಣಿಕ ಪುಸ್ತಕಗಳನ್ನೆಲ್ಲಾ ನೋಡಿದಾಗ ನಾನು ಬದುಕಿನಲ್ಲಿ ಮಾಡಬೇಕಾದ್ದುದ್ದು ತುಂಬಾ ಇದೆಯೆನಿಸಿತ್ತು. ನಿಮ್ಮ ಬೇಟಿ ನನಗೆ ತುಂಬಾ ಖುಷಿಯನ್ನು ಕೊಟ್ಟಿತು. ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಶ್ರೀಧರ್ ಸರ್,
ಥ್ಯಾಂಕ್ಸ್.
Posavanike,
ನನ್ನ ಬ್ಲಾಗಿಗೆ ಸ್ವಾಗತ. ಫೋಟೊಗಳಲ್ಲಿ ಸೃಜನಶೀಲತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ವಿದ್ಯಾ ರಮೇಶ್ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ. ಫೋಟೊಗಳು ಮತ್ತು ನಿರೂಪಣೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಶಿವಪ್ರಕಾಶ್,
ಧನ್ಯವಾದಗಳು.
ಪ್ರಭಾಮಣಿ ನಾಗಾರಾಜ,
ಮಕ್ಕಳ ಚಿತ್ರಸಂತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಬ್ಲಾಗಿಗೆ ಬಿಡುವು ಮಾಡಿಕೊಂಡು ಬಂದು ಓದುತ್ತೇನೆ..
ಚಂದ್ರು ಸರ್,
ಮಕ್ಕಳ ಚಿತ್ರ ಸಂತೆ ಚಿತ್ರಸಂತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮತ್ತೆ ಖಂಡಿತ ನಿಮ್ಮ ಅನಿಸಿಕೆಯಂತೆ ಚಿತ್ರಸಂತೆಯಲ್ಲಿ ಕ್ಯಾಮೆರಗಳ ವೈವಿಧ್ಯಮಯ ಫೋಸುಗಳ ಫೋಟೋ ಸೀರಿಸ್ ಇದೆ. ಅದನ್ನು ಮುಂದಿನ ಭಾಗದಲ್ಲಿ ಬ್ಲಾಗಿಗೆ ಹಾಕುತ್ತೇನೆ..
ವಿ.ಅರ್.ಭಟ್ ಸರ್,
ಮಕ್ಕಳ ಫೋಟೊಗಳು ಮತ್ತು ನನ್ನ ಹೊಸ ಪ್ರಯತ್ನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಶಿವು,ಮಕ್ಕಳ ಚಿತ್ರಗಳನ್ನು ನೋಡ್ತಿದ್ರೆ ನಾನೂ ಮತ್ತೆ ಮಗುವಾಗಿ ನನ್ನಪ್ಪ ನನ್ನನ್ನೂ ಹಾಗೆ ಹೆಗಲ ಮೇಲೆ ಹೊತ್ತು ಚಿತ್ರಸಂತೆಗೆ ಬಂದಿದ್ದರೆ ಎಷ್ಟ ಮಜವಾಗಿರ್ತಿತ್ತು ಅನಿಸಿತು! :) :)
ಮೂವತ್ತೊಂದು ಸಾವಿರ!!! ಅಭಿನಂದನೆ ಶಿವು, ಸಾವಿರ ಲಕ್ಷವಾಗಲಿ, ಲಕ್ಷ ಕೋಟಿಯಾಗಲಿ, ನಮ್ಮ ಶಿವು ಎಂಬ ಹೆಮ್ಮೆ ನಮಗಿರಲಿ. :) :)
Post a Comment