Sunday, August 30, 2009

ಟೋಪಿ ಬೇಕಾ ಟೋಪಿ.



ರಂಜಾನ್ ಹಬ್ಬವೋ ಅಥವಾ ಬಕ್ರೀದ್ ಸಂಭ್ರಮವೋ-ಸಾವಿರಾರು ಮುಸಲ್ಮಾನ ಬಂಧುಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಚಿತ್ರ ಅದ್ಭುತ ಕಲಾಕೃತಿಯಂತೆ ಕಾಣಿಸುತ್ತದೆ. ನೆಲಕ್ಕೆ ಬಾಗಿದ ಅವರ ತಲೆಗಳು ಅಕಾಶಕ್ಕೆ ಕಣ್ಣು ಮಿಟುಕಿಸುವಂತೆ ಕಾಣಿಸುತ್ತವೆ. ಟೋಪಿ ಎಂದಾಗಲೆಲ್ಲಾ ತಕ್ಷಣ ನನಗೆ ನೆನಪಾಗುವುದು ಈ ಸಾಲುಟೋಪಿಗಳ ಕಲಾಕೃತಿಯೇ!

ಟೋಪಿಯ ಸಹವಾಸಕ್ಕೆ ಬಿದ್ದುದು ಯಾವಾಗ ಎಂದು ನಿಶ್ಚಿತವಾಗಿ ಹೇಳಲಾರೆ. "ಟೋಪಿ ಬೇಕೆ ಟೋಪಿ, ಬಣ್ಣದ ಟೋಪಿ" ಎಂದು ಚಿಕ್ಕಂದಿನಲ್ಲಿ ಆಡಿದ ಆಟ ಈಗಲೂ ನೆನಪಿದೆ. ಈ ನೆನಪೇ ಇವತ್ತಿನ ಟೋಪಿ ವ್ಯಾಮೋಹಕ್ಕೆ ಕಾರಣವಿರಬಹುದೇ? ಗೊತ್ತಿಲ್ಲ. ಈಗ, ಟೋಪಿ ಬೇಕೆ ಟೋಪಿ ಎಂದು ಯಾರಾದರೂ ಕೇಳಿದರೆ ಮಾತನಾಡುವುದು ನಾನಲ್ಲ. ನನ್ನ ಕ್ಯಾಮೆರಾ! ಈ ಟೋಪಿಗಳಿಗಾಗಿ ಕತ್ತಿಗೆ ಕ್ಯಾಮೆರಾ ನೇತುಹಾಕಿಕೊಂಡು ಎಲ್ಲೆಲ್ಲಿ ಅಲೆದಿರುವೆನೋ?

ಹಾಂ, ನಾನೀಗ ಹೇಳಹೊರಟಿರುವುದು ನನ್ನ ಟೋಪಿ ಸಾಹಸಯಾತ್ರೆ ಬಗ್ಗೆ ಅಲ್ಲ.[ಟೋಪಿ ಚಿತ್ರಗಳಿಗಾಗಿ ಯಾವ ಟ್ರೋಫಿಯನ್ನು ನಿರೀಕ್ಷಿಸುತ್ತಿಲ್ಲ]. ನನ್ನ ಆಸಕ್ತಿ ಏನಿದ್ದರೂ ಟೋಪಿ ಬೆನ್ನು ಹತ್ತಿದ ನಾನು ಅವುಗಳ ಕುರಿತು ಕಲೆಹಾಕಿದ ಸ್ವಾರಸ್ಯಕರ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಗೆಗೆ.

ಪ್ರಾಚೀನ ಕಾಲದ ಜನ ಪ್ರಾಣಿಗಳ ಚರ್ಮ ತೆಗೆದು ತಮ್ಮ ತಲೆಯ ಮೇಲೆ ಹಾಕಿಕೊಳ್ಳುತ್ತಿದ್ದರಂತೆ. ಇದು ಇತರ ಪ್ರಾಣಿ ಅಥವ ಮನುಷ್ಯನಿಂದ ರಕ್ಷಿಸಿಕೊಳ್ಳಲು ಮಾಡಿಕೊಂಡ ವಿಧಾನವಾಗಿತ್ತು. ಪ್ರಾಚೀನ ಗ್ರೀಸ್ ಮತ್ತು ರೋಮ್‌ನಲ್ಲಿ ಗುಲಾಮರನ್ನು ಬಿಡುಗಡೆ ಮಾಡಿದಾಗ ವಿಮುಕ್ತಿಯ ಸೂಚನೆಯಾಗಿ ಅವರ ತಲೆಗೊಂದು ಟೋಪಿಯನ್ನು ಹಾಕಿ ಕಳಿಹಿಸುತ್ತಿದ್ದರಂತೆ. ಅದು ಸ್ವತಂತ್ರದ ಟೊಪ್ಪಿ! ಹಾಗೆಯೇ ಹೆಂಗಸರು ತಮ್ಮ ತಲೆಯನ್ನು ಮುಚ್ಚಿಕೊಳ್ಳಲು ಬಿದಿರಿನ ವಸ್ತುಗಳು, ಎಲೆಗಳಿಂದ ಮಾಡಿದ ಆಕೃತಿಗಳನ್ನು ಬಳಸುತ್ತಿದ್ದರು. ಹದಿನೇಳನೇ ಶತಮಾನದ ಕೊನೆಯಲ್ಲಿ, ಪುರುಷರ ಟೊಪ್ಪಿಗಳ ಅನುಕರಣೆಬಿಟ್ಟು ಮಹಿಳೆಯರಿಗೆಂದೇ ಟೋಪಿಗಳನ್ನು ರೂಪಿಸಲಾಯಿತು. ಮಿಲ್ಲಿನರ್ ಎಂಬಾತ ೧೮೦೦ರ ಮದ್ಯದಲ್ಲಿ ಕೊಳವೆಗಳನ್ನು ಬಳಸಿ ಕಾಗದ, ಕಾರ್ಡ್‌ಬೋರ್ಡ್, ಹುಲ್ಲು, ಕುದುರೆ ರೋಮಗಳಿಂದ ಮಹಿಳೆಯರ ಟೋಫಿ ತಯಾರಿಸುತ್ತಿದ್ದನು. ನಂತರ ವೆಲ್ವೆಟ್ ಟೋಪಿಗಳು ಬಳಕೆಗೆ ಬಂದವು.

ಹತ್ತೊಂಬತ್ತನೇ ಶತಮಾನದ ಮದ್ಯದಲ್ಲಿ ಮಹಿಳೆಯರ ಟೋಪಿಗಳು ಹೂವು, ಗರಿಗಳು, ರಿಬ್ಬನ್, ಇತ್ಯಾದಿಗಳಿಂದ ಅಲಂಕೃತಗೊಂಡವು. ಮಹಿಳೆಯರು ಕೂದಲು ಕತ್ತರಿಸಿಕೊಳ್ಳುವುದು ಫ್ಯಾಶನ್ ಆಗತೊಡಗಿದಾಗ ಅದಕ್ಕೆ ತಕ್ಕಂತೆ ಟೋಪಿಗಳು ಬದಲಾಗಿವೆ.

೧೯೧೪ರಿಂದ ೧೯೧೮ರವರೆಗೆ ಯುದ್ಧಕಾಲದಲ್ಲಿ ಟೋಪಿಗಳ ಬೇಡಿಕೆ ಮತ್ತು ಬಳಕೆ ಕಡಿಮೆಯಾಗಿತ್ತು. ಯುದ್ಧಾನಂತರ ಮಿಲಿಟರಿಗೆ ಸಂಭಂದಿಸಿದಂತೆ ಸುರಕ್ಷತೆಗಾಗಿ ಟೋಪಿಗಳು ತಯಾರಾದವು. ೧೯೬೦ರ ನಂತರ ಪುರುಷರ ಮತ್ತು ಮಹಿಳೆಯರ ತಲೆಯ ಕೂದಲನ್ನು ಅನೇಕ ಆಕಾರದಲ್ಲಿ ಶ್ರದ್ಧೆಯಿಂದ ಅಲಂಕರಿಸುವ ಬೆಳವಣಿಗೆ ಉಂಟಾಯಿತು. ವಸ್ತ್ರಗಳೊಂದಿಗೆ ಟೋಪಿಯೂ ಒಂದು ಸ್ವಾಭಾವಿಕ ಧಿರಿಸಾಗಿ ಬೆಳವಣಿಗೆ ಕಂಡಿತು. ೮೦-೯೦ರ ದಶಕದಲ್ಲಂತೂ ಟೋಪಿಗಳ ಸಾಮ್ರಾಜ್ಯ ಅತ್ಯುನ್ನತ ಸ್ಥಾನಕ್ಕೇರಿತು. ವೇಲ್ಸ್ ರಾಜಕುಮಾರ ಹೊಸ ಬಗೆಯ ಟೋಪಿ ಧರಿಸುವುದರಲ್ಲಿ ಉತ್ಸಾಹಿಯಾಗಿದ್ದ ಕಾರಣ ತಯಾರಕರು ಸಾವಿರಾರು ಹೊಸ ಶೈಲಿಯ ಟೋಪಿಗಳನ್ನು ಮಾರುಕಟ್ಟೆಗೆ ತಂದರು.

ಸಮವಸ್ತ್ರವಾಗಿ, ಅಲಂಕಾರಿಕ ವಸ್ತುವಾಗಿ ಘನತೆಯ ಗುರುತಾಗಿ, ಆಟೋಟಗಳ ತಲೆದಿರಿಸಾಗಿ ಮತ್ತು ಸುರಕ್ಷತೆಯ ಗುರಾಣಿಯಾಗಿ ಟೋಪಿಗಳ ಸ್ವರೂಪವಿದೆ. ಗಣಿಗಳಲ್ಲಿ ಕೆಲಸ ಮಾಡುವ ಕೂಲಿಯವನಿಗೆ ಸಿಗುವ ಸಂಬಳದ ನೂರು ಪಟ್ಟು ಬೆಲೆಯ ಹೆಲ್ಮೆಟ್ಟನ್ನು ಅವನು ಧರಿಸಿರುವ ಉದಾಹರಣೆ ಇದೆ. ಹೆಲ್ಮೆಟ್ಟಿಗೆ ಅಂಟಿಕೊಂಡ ದೊಡ್ಡ ಲೈಟ್ ಈ ಕಾಲಮಾನದ ಬೆರಗೇ ಹೌದು.

ರಾಜ-ಮಹಾರಾಜರ ಕಾಲದಲ್ಲಿ ಕಿರೀಟದ ಸ್ವರೂಪವೇ ಅವರವರ ಹುದ್ದೆಗೆ ಕನ್ನಡಿ ಹಿಡಿಯುತ್ತಿತ್ತು. ಜೋಕರ್‌‍ಗೆ ತ್ರಿಕೋನಾಕಾರದ ಟೋಪಿ, ಸಾಂತಕ್ಲಾಸ್‌ಗೆ ವಾಲಾಡುವ ವಿಚಿತ್ರವಾದ ಬಿಳಿ ಟೋಪಿ. ಟೋಪಿಗೆ ಅಲಂಕಾರ ಮಾಡುವುದೇ ಇಂದು ದೊಡ್ಡ ಉದ್ಯಮ.

ಈಗಲೂ ಕರಾವಳಿ ಕಡೆ ನೋಡಿ; ಅಡಿಕೆಪಟ್ಟೆಯ ಟೋಪಿ ತೊಡುವ ಕೂಲಿ ಕಾರ್ಮಿಕರಿದ್ದಾರೆ. ಅದೇ ಆಡಿಕೆಪಟ್ಟೆಯ ಟೋಪಿಗೆ ಅಧುನಿಕ ರೂಪಕೊಟ್ಟು, ಕೌಬಾಯ್ ಟೋಪಿಯ ಆಕರಕ್ಕೆ ತಂದು ಮಾರುಕಟ್ಟೆ ಅಂಗಡಿಗೆ ತಂದಿಟ್ಟಿದ್ದೂ ಆಗಿದೆ. ಅಡಿಕೆ ಟೋಪಿ ನೆತ್ತಿಗೆ ತಂಪು ಎನ್ನುವುದು ಮಾರಾಟದ ತಂತ್ರ.

ರಾಜನ ಕಿರೀಟ, ಗಾಂಧಿ ಟೋಪಿ, ತಿಲಕರ ಟೋಪಿ, ಶಿವಾಜಿ ಟೋಪಿ, ಕೌಬಾಯ್ ಟೋಪಿ, ವಿಷ್ಣುವರ್ಧನ್ ಟೋಪಿ, ರವಿಚಂದ್ರನ್ ಟೋಪಿ,[ಅದರೊಳಗೆ ಐಸ್ ಗಡ್ಡೆಗಳನ್ನು ಹಾಕಿ ಮಂಡೆಯನ್ನು ತಣ್ಣಗೆ ಮಾಡಿಕೊಳ್ಳಬಹುದು]. ಮಂಕಿ ಟೋಪಿ, ದೊಡ್ಡ ದೊಡ್ಡ ಕಂಪನಿಗಳ ಡಿಸೈನರ್ ಟೋಪಿ....ಟೋಪಿ ನಾಗರಿಕತೆ ಹೇಗೆಲ್ಲಾ ರೂಪಾಂತರಗೊಂಡಿದೆ ನೋಡಿ.

ಹೆದ್ದಾರಿಯಲ್ಲಿ ಬರ್ರನೆ ಸಾಗುವ ವಾಹನಗಳಲ್ಲಿ ಓಡಾಡುವವರ ಟೋಪಿ ಆಗೀಗ ಹಾರುತ್ತಲೇ ಇರುತ್ತದೆ. ಒಮ್ಮೆ ಟೋಪಿ ಹಾರಿದರೆ, ಮತ್ತೆ ಅದು ಸಿಗುವುದು ಕಷ್ಟ. ಅಂಥ ಟೋಪಿಗಳನ್ನೆಲ್ಲಾ ಕಲೆಹಾಕಿ ಪುಟ್‌ಪಾತ್ ಬದಿಯಲ್ಲಿ ಮಾರುವ ಹುಡುಗರು ನಮ್ಮ ನಡುವೆ ಇದ್ದಾರೆನ್ನುವುದು ಸೋಜಿಗ. "ಟೋಪಿ ಹಾಕುವುದು" ಎಂಬ ನುಡಿಗಟ್ಟಿಗೆ ಏನೆಲ್ಲಾ ಅರ್ಥವಿದೆ ಅಲ್ಲವೇ?.

ಗೆಳೆಯರೆ, ಜುಲೈ ೨೦೦೯ ತಿಂಗಳ ಮಯೂರ ಮಾಸಪತ್ರಿಕೆಯಲ್ಲಿ ಟೋಪಿ ಚಿತ್ರಗಳ ಜೊತೆಗೆ ಈ ಲೇಖನ ಪ್ರಕಟವಾಗಿತ್ತು. ಲೇಖನ ಓದಿಲ್ಲದವರಿಗಾಗಿ ಮತ್ತೆ ಅದನ್ನೇ ಇಲ್ಲಿ ಹಾಕಿದ್ದೇನೆ. ಹಾಗೂ ಹೊಸದಾಗಿ ಇನ್ನೊಂದು ಸುತ್ತಿನ ಹೊಸ ಟೋಪಿಗಳನ್ನು ನಿಮಗಾಗಿ ಕೊಡುತ್ತಿದ್ದೇನೆ. ಛಾಯಾಕನ್ನಡಿ ಮೊದಲ ವರ್ಷ ಮುಗಿದು ಎರಡನೆ ವರ್ಷ ಪ್ರಾರಂಬಿಸುವ ಹಂತದಲ್ಲಿ ಮೊದಲಿಗೆ ಟೋಪಿಗಳಿಂದ ಪ್ರಾರಂಭಿಸುತ್ತಿದ್ದೆನೆಂದು ಬೇಸರಿಸಬೇಡಿ, ಇಷ್ಟವಿದ್ದವರು ಟೋಪಿ ಹಾಕಿಕೊಳ್ಳಬಹುದು.


ಸ್ಕೇಟಿಂಗ್ ಟೋಪಿ..



ಸ್ಕೇಟಿಂಗ್ ಟೋಪಿ ಹಾಕಿಕೊಂಡ ಮಕ್ಕಳು ಸಂಜೆ ಸಮಯದಲ್ಲಿ ಎಷ್ಟು ಹುರುಪಿನಿಂದ ಅಭ್ಯಾಸ ಮಾಡುತ್ತಿದ್ದಾರೆ ನೋಡಿ...



ವಿವೇಕನಂದ ಟೋಪಿ.


ನೇಪಾಳಿಗಳ ಟೋಪಿ.!



ಮಿಲಿಟರಿ ಟೋಪಿ...!


ತುಪ್ಪಳದ ಈ ಟೋಪಿಯೊಳಗೆ ನಮ್ಮ ಪ್ರಸ್ತುತ ಸಚಿವರ ತಲೆಯೂ ಸೇರಿದೆ...ಯಾರ ತಲೆಯೆಂದು ನೀವೆ ಹೇಳಿ!


ಸ್ವದೇಶಿ ಮತ್ತು ಚೀನಿ ಆಡುಗೆ ಟೋಪಿ..


ಈ ಟೋಪಿಯನ್ನು ಬೆಂಗಳೂರಿನ ವರ್ಲ್ಡ್ ಟೆನ್ ಕೆ ನಲ್ಲಿ ಕ್ಲಿಕ್ಕಿಸಿದ್ದು. ಇದು ಜೋಕರ್ ಟೋಪಿ ಇರಬಹುದೇ?

ನಾನು ಕ್ಲಿಕ್ಕಿಸಿದ ವೈವಿಧ್ಯಮಯ ಟೋಪಿಗಳನ್ನು ಹಿಂದಿನ ಸರಣಿಯಲ್ಲಿ ನೋಡುವ ಆಸೆಯಿದ್ದರೇ ನೀವು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ....
ನೋಡಿದ ಮೇಲೆ ಇಷ್ಟವಾದರೆ ಒಂದು ಪ್ರತಿಕ್ರಿಯೆ ತಿಳಿಸಿ.
ಚಿತ್ರ ಮತ್ತು ಲೇಖನ.
ಶಿವು.ಕೆ ARPS.

67 comments:

ಸವಿಗನಸು said...

ಶಿವು ಸರ್,
ಟೋಪಿಯ ಬಗೆ ಒಳ್ಳೆ ಮಾಹಿತಿ ಹಾಗೂ ಪೋಟೋಗಳನ್ನು ಕೊಟ್ಟಿದ್ದೀರಾ....
ಬಾಲ್ಡಿ ತಲೆ ಹುಡುಕಿದ ಮೇಲೆ ಟೋಪಿ ತಲೆಗಳು ಸಹ ಚೆನ್ನಾಗಿದೆ...
ಇನ್ನಷ್ಟು ಟೋಪಿಗಳು ನಿಮ್ಮ ಕ್ಯಾಮರಾ ಕಣ್ಣಿಗೆ ಸಿಗಲಿ...
ಹಾಗೆ ಎಲ್ಲರಿಗೂ ಟೋಪಿನೂ ಹಾಕಿ ಹಹಾಹಹಾ...

shivu.k said...
This comment has been removed by the author.
Ittigecement said...

ಶಿವು ಸರ್...

ಟೋಪಿಗಳ ಅಟಾಟೋಪ ಮುಂದುವರೆಯಲಿ...
ಎಲ್ಲವೂ ಒಂದಕ್ಕಿಂತ ಒಂದು ಸುಂದರವಾಗಿವೆ...
ವೈವಿಧ್ಯಮಯವಾಗಿದೆ....

ನಿಮ್ಮ ತಾಳ್ಮೆ. ಪರಿಶ್ರಮಕ್ಕೊಂದು ನನ್ನ ಸಲಾಮ್....!

ನಿಮ್ಮ ಬ್ಲಾಗ್‍ಗೆ ಬಂದರೆ ಒಮ್ಮೆ ನಮ್ಮ ಮೂಡ್ ಫ್ರೆಷ್ ಆಗುವದು....

ಅಭಿನಂದನೆಗಳು....

shivu.k said...

ಮಹೇಶ್ ಸರ್,

ಟೋಪಿಗಳ ಚಿತ್ರ ಮತ್ತು ಲೇಖನವನ್ನು ನೀವು ಮೊದಲ ಬಾರಿ ಓದುತ್ತಿರುವಿರಿ ಅಲ್ಲವೇ....
ಇದು ಟೋಪಿ ಸರಣಿಯಲ್ಲಿ ಏಳನೆಯದು. ಹಳೆಯ ಸರಣಿಗಳನ್ನು ನೋಡಲು ನಾನು ಕೆಳಗೆ ಕೊಟ್ಟಿರುವ ಲಿಂಕುಗಳನ್ನು ಕ್ಲಿಕ್ಕಿಸಿಕೊಂಡು ನೋಡಿ ಸುಮಾರು ೮೦ ಕ್ಕೂ ಅಧಿಕ ವೈವಿದ್ಯಮಯ ಟೋಪಿಗಳು ನೋಡಲು ಸಿಗುತ್ತವೆ.
ಜೊತೆಗೊಂದಿಷ್ಟು ಮಾಹಿತಿಗಳು ಖಂಡಿತ.
ಲಿಂಕುಗಳನ್ನು ಕ್ಲಿಕ್ಕಿಸಿ....

ತಮಾಷೆಯಲ್ಲ! ಇದು ಟೋಪಿಗಳ ವಿಚಾರ!!

ಮತ್ತೆ ಬಂದವು ಹೊಸ ಟೋಪಿಗಳು !!

ಬಂತಲ್ಲ ಮತ್ತೆ ಹೊಸ ಟೋಪಿಗಳ ಮೆರವಣಿಗೆ !

ಹೊಸ ವರ್ಷಕ್ಕೆ ಹೊಸ ಟೋಪಿಗಳು !!

ಮತ್ತೆ ಟೋಪಿಗಳು ಬಂದವು ದಾರಿಬಿಡಿ !!

ನಿಮಗೆ ಗೊತ್ತೆ...ಇವು ಪರಿಸರ ಪ್ರೇಮಿ ಟೋಪಿಗಳು...!

ನೋಡಿದ ಮೇಲೆ ಇಷ್ಟವಾದರೆ ಒಂದು ಪ್ರತಿಕ್ರಿಯೆ ತಿಳಿಸಿ.

ಮತ್ತೆ ಈ ಟೋಪಿ ಸರಣಿಯನ್ನು ಭೂಪಟಗಳ ಸರಣಿಗೆ ಮೊದಲೇ ಪ್ರಾರಂಭಿಸಿದ್ದೆ. ಇನ್ನೂ ಮೂರು ಸರಣಿಗೆ ಆಗುವಷ್ಟು ಟೋಪಿಗಳು ಸಂಗ್ರಹವಾಗಿವೆ. ಮುಂದಿನ ದಿನಗಳಲ್ಲಿ ಹಾಕುತ್ತೇನೆ.
ಹೊಸ ಟೋಪಿ ಸರಣಿ ಮತ್ತು ಮಾಹಿತಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಗಣೇಶ್ ಕಾಳೀಸರ said...

ಶಿವು ಸರ್,
ಟೋಪಿಯ ಇತಿಹಾಸವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ.
ನಿಮ್ಮಲ್ಲಿರುವ ಟೋಪಿಗಳ ಸಂಗ್ರಹ ಸೂಪರ್.

ಬಿಡುವಿದ್ದಾಗ ನನ್ನ ಬ್ಲಾಗ್ ಗೂ ಒಮ್ಮೆ ಬನ್ನಿ.

ನನ್ನ ಬ್ಲಾಗ್-
chigurele.blogspot.com

sunaath said...

ಶಿವು,
ಮೊದಲಿಗೆ, ಟೋಪಿಗಳ ಬಗೆಗೆ ನೀವು ಬರೆದ ಮಾಹಿತಿ-ಲೇಖನಕ್ಕಾಗಿ ನಿಮ್ಮನ್ನು ಅಭಿನಂದಿಸಬೇಕು. ತುಂಬಾ ಲಲಿತವಾಗಿ ಬರೆದಿದ್ದೀರಿ. ಆಬಳಿಕ ನೀವು ಕೊಟ್ಟ ಟೋಪಿಗಳ ಸುಂದರ ಚಿತ್ರಗಳು. CAP ART ಎಂದು ಇದನ್ನು ಪ್ರಶಂಸಿಸುವದೇ ಸರಿ.
By the way, ಫರ್ ಟೋಪಿ ಹಾಕಿಕೊಂಡ ಮಂತ್ರಿಗಳು: ನಮಗೆಲ್ಲರಿಗೂ ಫರ್ ಟೋಪಿ ಹಾಕುವ ಕ..ಸು..ನಾ?

umesh desai said...

ಶಿವೂ ನಾವು ಟೊಪಿಗಿ ಅನತೆವಿ ದಿಪವಳಿಗೆ ಆರತಿ
ಮಾಡಿಸಿಕೋಬೇಕಾದರ ಅದನ್ನ ಹಳೆ ಪೆಟ್ಟಿಗಿಯಿಂದ
ತಗಿತಿದ್ವೆ.. ನಮ್ಮ ಅಪ್ಪ ಖಾದಿ ಟೊಪಿಗಿ ಹಾಕ್ತಿದ್ರು

umesh desai said...

ಶಿವೂ ನಾವು ಟೊಪಿಗಿ ಅನತೆವಿ ದಿಪವಳಿಗೆ ಆರತಿ
ಮಾಡಿಸಿಕೋಬೇಕಾದರ ಅದನ್ನ ಹಳೆ ಪೆಟ್ಟಿಗಿಯಿಂದ
ತಗಿತಿದ್ವೆ.. ನಮ್ಮ ಅಪ್ಪ ಖಾದಿ ಟೊಪಿಗಿ ಹಾಕ್ತಿದ್ರು

Prabhuraj Moogi said...

ಮತ್ತೆ ಹೊಸ ಟೋಪಿಗಳನ್ನು ತೆಗೆದುಕೊಂಡು ಟೋಪಿ ಹಾಕಲು ಬಂದಿದ್ದೀರಾ :), ಟೊಪಿಗಳಷ್ಟೆ, ಟೊಪಿಗಳ ಲೇಖನ ಚೆನ್ನಾಗಿತ್ತು, ರಾಜ ಮಹರಾಜರ ಕಿರೀಟಗಳ ಮಾಹಿತಿ ಇಷ್ಟವಾಯಿತು. ಬಾಣಲಿ ಬಕ್ಕ ತಲೆಗಳನ್ನು ತೋರಿಸಿ ಅವನ್ನ್ ಮುಚ್ಚಲು ವಿಧವಿಧದ ಟೊಪೀ ತೋರಿಸುತ್ತೀರಾ...:)

Guruprasad said...

ಶಿವೂ,
ಟೋಪಿ ಇತಿಹಾಸ ತುಂಬ ಇದೆ... ಗೊತ್ತೇ ಇರಲಿಲ್ಲ.... ಎಸ್ತೊಂದ್ ವಿಚಾರ ತಿಳಿದು,,,ಯೋಚಿಸುವಂತೆ ಮಾಡಿದಿರಿ.. ಧನ್ಯವಾದಗಳು,,,
ಇನ್ನು ನಿಮ್ಮ ಟೋಪಿ ಪುರಾಣ,,, ಅದು ಯಾವಾಗ ಇ ಟೋಪಿ ಹಿಂದೆ ಬಿದ್ದಿರೋ....ಅಂತು, ಒಳ್ಳೆ ಕಾನ್ಸೆಪ್ಟ್.....ತುಂಬ ಚೆನ್ನಾಗಿ ಇರುತ್ತೆ,,, ಎಸ್ತೊಂದ್ ವೈವಿದ್ಯಮಯ ಟೋಪಿಗಳು ನಮ್ಮ ಪಕ್ಕದಲ್ಲೇ ಇದ್ದರು,, ಗೊತ್ತಿರುವುದಿಲ್ಲ.....ಇದನ್ನೆಲ್ಲಾ ನಿಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು,, ನಮಗೂ ತೋರಿಸಿ ತಿಳಿಸಿತಿರುವುದಕ್ಕೆ ತುಂಬ ಧನ್ಯವಾದಗಳು.....
ಮುಂದುವರಿಯಲಿ... ನಿಮ್ಮ ಟೋಪಿ ಪುರಾಣ,,,,,

ಮನಸು said...

ತುಂಬಾ ಚೆನ್ನಾಗಿವೆ ಟೋಪಿ ಚಿತ್ರಗಳು ಹಾಗು ಮಾಹಿತಿ... ಮುಂದುವರಿಯಲಿ ಮತ್ತಷ್ಟು ಟೋಪಿ, ಭೂಪಟಗಳು ಹಹ ಹ ಹ ನಿಮ್ಮ ಕ್ಯಾಮರಾ ಕಣ್ಣಿಗೆ ಬೀಳುತ್ತಲಿರಲಿ ಬ್ಲಾಗಿಗೆ ಬರುತ್ತಲಿರಲಿ

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನೀವು ಟೋಪಿ ಬಗ್ಗೆ ಕಲೆಹಾಕಿರುವ ಮಾಹಿತಿ ತುಂಬಾ ಚೆನ್ನಾಗಿದೆ. ಎಷ್ಟೊಂದು ತಿಳಿದಿರದ ವಿಷಯಗಳು ತಿಳಿಯಿತು. ಜೊತೆಯಲ್ಲಿ ಟೋಪಿಗಳ ಚಿತ್ರಗಳೂ ಚೆನ್ನಾಗಿವೆ. ನಿಮ್ಮ ಟೋಪಿಗಳ ಸಂಗ್ರಹಕ್ಕೆ ನನ್ನ Hat's(ಟೋಪಿ) Off !

Unknown said...

ಟೋಪಿ ಚೆನ್ನಾಗಿ ಹಾಕಿದ್ದೀರ! ಬ್ಲಾಗಿಗೆ.

Prashanth Arasikere said...

hi shivu,

Nimma topi lekana chennagide..adare topi photo kammi aythu annsutte..

AntharangadaMaathugalu said...

ಶಿವು ಸರ್...
ಟೋಪಿ ಲೇಖನ ಚೆನ್ನಾಗಿದೆ. ನಾನೂ ಕೂಡ ಈ ದಿನವೇ ಹಳೆಯ ಕೊಂಡಿಗಳನ್ನೂ ಚಿಟುಕಿಸಿ ನೋಡಿದೆ. ನಿಮ್ಮ ಬರವಣಿಗೆ ಅದ್ಭುತವಾಗಿರತ್ತೆ. ಬಕ್ಕ ತಲೆ, ಟೋಪಿ.... ಹೀಗೆ ವಿಷಯಗಳ ಮೇಲೆ ಸರಣಿಯಂತೆ ಬರೆಯುವ, ಜೊತೆಗೆ ಅತ್ಯಂತ ಸುಂದರ ಚಿತ್ರಗಳನ್ನು ಲಗತ್ತಿಸುವ ನಿಮ್ಮ ಪರಿ ಓದುಗರ ಮೇಲೆ ವಿಶೇಷವಾದ ಮೋಡಿಯ ಟೋಪಿ ಹಾಕತ್ತೆ.
ಬಿಡುವಿದ್ದಾಗ ದಯವಿಟ್ಟು ನನ್ನ ಬ್ಲಾಗ್ ಗು ಒಮ್ಮೆ ಭೇಟಿಕೊಟ್ಟು, ನಿಮ್ಮ ಅಪೂರ್ವ ಸಲಹೆಗಳನ್ನು ಕೊಡಿ.

ಶ್ಯಾಮಲ

Umesh Balikai said...

ಶಿವು ಸರ್,

ಆಹಾ! ಮತ್ತಷ್ಟು ಬಣ್ಣ ಬಣ್ಣದ, ವಿಧ ವಿಧದ ಟೋಪಿಗಳು!.. ಸಖತ್ತಾಗಿವೆ...ಮನ್ಸಲ್ಲೇ ಎಲ್ಲಾ ಟೊಪೀನೂ ಹಾಕಿಕೊಂಡು ಟ್ರೈ ಮಾಡಿ ನೋಡಿದೆ.. :) .. ಸೂಪರಾಗಿತ್ತು. ಎಲ್ಲಾ ಟೊಪೀಬಗ್ಗೇನೂ ಬರೀತೀರಾ.. ರಾಜಕಾರಣಿಗಳು ಜನರಿಗೆ ಹಾಕೋ ಟೋಪಿ ಬಗ್ಗೆನೇ ಬರ್ದಿಲ್ಲ ಅನ್ಸುತ್ತಲ್ಲ !

PARAANJAPE K.N. said...

ಭೂಪಟದ ಫೋಟೋ ತೆಗೀತಿರಿ, ನಿಮ್ಮನ್ನ avoid ಮಾಡೋಣ ಅ೦ತ ಜನ ತಲೆಗೆ ಟೋಪಿ ಹಾಕ್ಕೊ೦ದು ತಿರುಗಾಡಿದರೆ, ನೀವು ಅದನ್ನು ಬಿಡೋದಿಲ್ವಲ್ರೀ. ಚೆನ್ನಾಗಿದೆ ಟೋಪಿ ಪುರಾಣ.

Unknown said...

ಶಿವು ಸರ್ ,
ಸೂಪರ್ ನಿಮ್ಮ ತರ ತರಹದ ಟೋಪಿ ಪುರಾಣ ..

ಮೂರ್ತಿ ಹೊಸಬಾಳೆ. said...

Sivu sir,
bahaLa dinagaLa naMtara matte TOpi haakalu ShurumaaDiddeeri.
haaraikegaLu.

ಬಾಲು said...

ಶಿವು ಅವರೆ,
ಮಾಹಿತಿ ಚೆನ್ನಾಗಿದೆ. ತಲೆ ಬಾಣಲೆ ತರ ಆದರೆ ಅದನ್ನು ಮುಚ್ಚಿಕೊಳ್ಳಲು ಟೊಪಿಯ ಅಗತ್ಯ ಇದೆ!! :)
ಒಟ್ಟಾರೆ ನೀವು ಕುತ್ತಿಗೆ ಮೇಲೆ ಏನೇ ಇದ್ರು, ಕೂದಲಿದ್ರು, ಇಲ್ಲದೆ ಇದ್ರು, ಟೋಪಿ ಹಾಕಿದ್ರು... ನಿಮ್ಮ ಕ್ಯಾಮೆರ ಕಣ್ಣಲ್ಲಿ ಅಧ್ಬುತವಾಗಿ ಸೆರೆ ಹಿಡೀತೀರಿ.

ರಾಜಕಾರಣಿಗಳ ಟೊಪಿ ಬಗ್ಗೆ ಸ್ವಲ್ಪ ಸ೦ಶೋದನೆ ನಡೆಸಿ. ವಾಟಲ್ ಟೊಪಿ, ಕಟ್ಟಾ ಸುಬ್ರಹ್ಮಣ್ಯ ಟೊಪಿ.... ಇತ್ಯಾದಿ ಇತ್ಯಾದಿ..

ರಾಜೀವ said...

ಟೋಪಿಗಳ ವೈವಿಧ್ಯ ಚೆನ್ನಾಗಿದೆ. ಟೋಪಿಗಳ ಸರಣಿ ಇನ್ನು ಓದಿಲ್ಲ. ಸಮಯವಾದಾಗ ಓದುತ್ತೇನೆ.

ಹಾಗೆ, ದೇವರಿಗೆ ಹಾಕುವ ಟೋಪಿಗಳ ಬಗ್ಗೆಯೂ ಬರೆಯಿರಿ. ಮೇಲುಕೋಟೆಯ ವೈರಮುಡಿಯನ್ನು ನೋಡುವುದಕ್ಕೆ ಈಗಲೂ ಸಹಸ್ರಾರು ಜನ ಹೋಗ್ತಾರೆ. ವೈರಮುಡಿ, ರಾಜಮುಡಿ, ರತ್ನಮುಡಿ, ವಜ್ರಮುಡಿ - ದೇವರಿಗೂ ಎಷ್ಟೆಲ್ಲಾ ಟೋಪಿ ಹಾಕ್ತಾರೆ ನೋಡಿ.

Anonymous said...

ಶಿವು,
ಹೆಚ್ಚೇನು ಹೇಳಲಾಗದು.. ನಿಮ್ಮ ಪ್ರತಿಭೆಗೆ ನಮೋ ನಮಃ.... ನಿಮ್ಮ ಬ್ಲಾಗ್ ಪ್ರತಿ ಬಾರಿ ನನಗೆ ವಿಸ್ಮಯ

ಹರೀಶ ಮಾಂಬಾಡಿ said...

ಮತ್ತೆ ಟೋಪಿ ಚಿತ್ರಗಳು!
ತುಂಬಾ ಖುಷಿಯಾಯ್ತು.
ನಮ್ಮೊರಲ್ಲಿ ಅಡಕೆ ಹಾಳೆಯ ಟೋಪಿಗೆ ಮುಟ್ಟಾಳೆ ಅಂತಾರೆ.

ವಿನುತ said...

ಟೋಪಿಗಳ ಇತಿಹಾಸದೊ೦ದಿಗೆ ಸಚಿತ್ರ ಲೇಖನ ಚೆನ್ನಾಗಿದೆ. ಹಿ೦ದಿನ ಕೊ೦ಡಿಗಳು ನೀಡಿದ್ದು ಇನ್ನೂ ಸಹಾಯವಾಯಿತು. ಧನ್ಯವಾದಗಳು. ನಿಮ್ಮ ತಾಳ್ಮೆ ಹಾಗೂ ಪರಿಶ್ರಮಕ್ಕೆ ಅಭಿನ೦ದನೆಗಳು.

ದೀಪಸ್ಮಿತಾ said...

ಶಿವು ಸರ್, ಭೂಪಟ ಅಯಿತು. ಈಗ ಟೋಪಿ. ಅಂತೂ ಜನರ 'ತಲೆ ತಿನ್ನುವ' ಕೆಲಸ ಚೆನ್ನಾಗಿ ಮಾಡುತ್ತೀರಿ ಎಂದಾಯಿತು.

ಈ ವಾರದ ಸುಧಾರದಲ್ಲಿ ಬಂದ ಕೇರಳದ ದೋಣಿ ಸ್ಪರ್ಧೆ ಬಗ್ಗೆ ಬರೆದ್ದು ನೀವೆ?

ನನ್ನ ಹೊಸ ಲೇಖನ ಬರೆದಿದ್ದೇನೆ, ಸಮಯವಿದ್ದಾಗೆ ಓದಿ ಪ್ರತಿಕ್ರಿಸಿ.

shivu.k said...

ಪ್ರಕಾಶ್ ಸರ್,

ಟೋಪಿಗಳ ಸರಣಿ ಭೂಪಟಗಳು, ಮಳೆಯ ಚಿತ್ರಗಳ ಭರಾಟೆಯಲ್ಲಿ ನಿಂತು ಹೋಗಿತ್ತು. ಇದು ಮೊದಲೇ ಸಿದ್ಧವಾಗಿದ್ದರೂ ಯಾಕೋ ಹಾಕಲು ಮನಸ್ಸಾಗುತ್ತಿರಲಿಲ್ಲ.

ನನ್ನ ಬ್ಲಾಗಿಗೆ ಬಂದರೆ ನಿಮ್ಮ ಮನಸ್ಸು ಪ್ರೆಷ್ ಆಗುತ್ತದೆಂದರೆ ನನಗೆ ಅದಕ್ಕಿಂತ ಖುಷಿ ಬೇರೊಂದಿಲ್ಲ.
ಮುಂದಿನ ಸರಣಿಯಲ್ಲಿ ಇನ್ನಷ್ಟು ಟೋಪಿಗಳು ಬರಲಿವೆ ಸರ್, ಆಗಲೂ ಹೀಗೆ ಪ್ರೋತ್ಸಾಹಿಸಿ...
ಧನ್ಯವಾದಗಳು.

shivu.k said...

ಗಣೇಶ್ ಕಾಳಿಸರ,

ನನ್ನ ಬ್ಲಾಗಿಗೆ ಸ್ವಾಗತ. ಟೋಪಿಗಳ ಇತಿಹಾಸವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ...

ನಿಮ್ಮ ಬ್ಲಾಗಿಗೆ ಹೋಗಿದ್ದೆ. ನಿಮ್ಮ ಮಳೆಹನಿ ಫೋಟೋಗಳು ತುಂಬಾ ಚೆನ್ನಾಗಿವೆ...

shivu.k said...

ಸುನಾಥ್ ಸರ್,

ಟೋಪಿಗಳ ಇತಿಹಾಸವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಜಕ್ಕೂ ಈ ಲೇಖನವನ್ನು ಮಯೂರ ಮಾಸಪತ್ರಿಕೆಗಾಗಿ ಬರೆದಿದ್ದು.ಅದಕ್ಕಾಗಿ ಬರವಣಿಗೆ ಶೈಲಿಬದಲಾಯಿಸಿಕೊಂಡು ಬರೆದಿದ್ದೇನೆ. ಟೋಪಿಗಳನ್ನು ಮೆಚ್ಚಿದ್ದೀರಿ.

ಮತ್ತೆ ನಿಮ್ಮ ಊಹೆ ಸರಿಯಿದೆ ಸರ್, ತುಪ್ಪಳ ಟೋಪಿಯವರು ಅವರೇ...ಕ.ಸು.ನಾ...ಖಚಿತ.
ಗುರುತಿಸಿದ್ದಕ್ಕೆ ನಿಮಗೆ ಅಭಿನಂದನೆಗಳು.

shivu.k said...

ದೇಸಾಯಿ ಸರ್,

ನನ್ನ ಟೋಪಿ ಲೇಖನದಿಂದ ನಿಮ್ಮ ದೀಪಾವಳಿ ಆರತಿ ಎತ್ತಿಸಿಕೊಳ್ಳುವಾಗಿನ ಟೋಪಿ ನೆನಪುಮಾಡಿಕೊಂಡಿದ್ದೀರಿ...

ನಿಮ್ಮ ತಂದೆಯವರು ಹಾಕುತ್ತಿದ್ದ ಖಾದಿ ಟೋಪಿ ನಾನು ಕೊಟ್ಟ ಟೋಪಿ ಸರಣಿಯಲ್ಲಿ ಇದೆ ನೋಡಿ...

ಧನ್ಯವಾದಗಳು.

shivu.k said...

ಪ್ರಭು,

ಟೋಪಿ ಸರಣಿ ಮತ್ತೆ ಪ್ರಾರಂಭವಾಗಿದೆ. ಹಳೆಯ ಇತಿಹಾಸ ರಾಜರ ಕಿರೀಟ ಇವೆಲ್ಲಾ ಓದಿ ಖುಷಿಯಾಯಿತೆ...ಟೋಪಿ ಹಾಕಿದರೂ, ತೆಗೆದರೂ[ಬೊಕ್ಕತಲೆ]ಫೋಟೊ ಕ್ಲಿಕ್ಕಿಸುತ್ತಲೇ ಇರುವುದರಿಂದ ಬ್ಲಾಗಿಗೆ ಏನಾದರೂ ಆಹಾರ ಸಿಗುತ್ತಲೇ ಇರುತ್ತೆ.

ಧನ್ಯವಾದಗಳು.

shivu.k said...

ಗುರು,

ಟೋಪಿಗಳ ಇತಿಹಾಸ ಮತ್ತು ಅದರ ಮಾಹಿತಿಯನ್ನು ಮೆಚ್ಚಿದ್ದೀರಿ.

ಮತ್ತೆ ಟೋಪಿಗಳ ಹಿಂದೆ ಬಿದ್ದಿದ್ದು ಭೂಪಟಗಳನ್ನು ಕ್ಲಿಕ್ಕಿಸುವುದಕ್ಕೆ ಮೊದಲು. ಅದನ್ನೆಲ್ಲಾ ನೋಡಲು ಅಲ್ಲೇ ಇರುವ ಲಿಂಕುಗಳನ್ನು ಕ್ಲಿಕ್ಕಿಸಿದರೇ ನೂರಕ್ಕೂ ಹೆಚ್ಚು ವಿಭಿನ್ನ, ಜಾತಿ, ಮತ, ಧರ್ಮ, ಸಂಸ್ಕೃತಿ, ಕೆಲಸಗಾರರು, ಹೀಗೆ ಎಲ್ಲಾ ಜನರ ಟೋಪಿಗಳನ್ನು ನೋಡಬಹುದು..

ಹೀಗೆ ಬರುತ್ತಿರಿ...ಧನ್ಯವಾದಗಳು.

shivu.k said...

ರೂಪಶ್ರಿ,

ಟೋಪಿಗಳ ಇತಿಹಾಸ, ಮಾಹಿತಿ ಮತ್ತು ಹೊಸ ಟೋಪಿಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ವರ್ಲ್ಡ್ ಟೆನ್ ಕೆ ಟೋಪಿ ಅಮೇರಿಕಾ ಸ್ವತಂತ್ರ ಟೋಪಿ ಎಂದು ತಿಳಿಸಿದ್ದೀರಿ ತುಂಬಾ ಥ್ಯಾಂಕ್ಸ್...
ನಾನು ಕೊಟ್ಟಿರುವ ಎಲ್ಲಾ ಲಿಂಕ್ ಟೋಪಿಗಳನ್ನು ಖುಷಿ ಪಟ್ಟರೆ ನನ್ನ ಶ್ರಮ ಸಾರ್ಥಕ.

ನೀವು ಹೇಳಿದ ರಮ್‍ದಾನ್ ಟೋಪಿಗಳನ್ನು ಕ್ಲಿಕ್ಕಿಸಲು ನನಗೂ ಆಸೆಯಿದೆ.ಅದಿನ್ನು ಕಾರ್ಯಗತವಾಗಿಲ್ಲ. ಶೀಘ್ರದಲ್ಲಿಯೇ ಅದನ್ನು ತೋರಿಸುತ್ತೇನೆ.

ನಿಮ್ಮ ಮಗಳ ಟೋಪಿ ಬೇಕೇ ಟೋಪಿ ನೋಡಿದೆ ಖುಷಿಯಾಯ್ತು...ಧನ್ಯವಾದಗಳು.

shivu.k said...

ಮನಸು ಮೇಡಮ್,

ಟೋಪಿ ಫೋಟೊಗಳು ಮೆಚ್ಚಿದ್ದೀರಿ. ನಿಮ್ಮ ನಿರೀಕ್ಷೆಯಂತೆ ಭೂಪಟಗಳು ಬರುತ್ತವೆ.

ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ಟೋಪಿಗಳ ಈ ಲೇಖನಕ್ಕೆ ಮೊದಲ ಬಾರಿ ಸ್ವಲ್ಪ ಗಂಭೀರವಾಗಿ[ಮಯೂರಗಾಗಿ]ಬರೆದಿದ್ದರಿಂದ ಮಾಹಿತಿಯನ್ನು ಕೊಡಲು ಸಾಧ್ಯವಾಯಿತು...

ಧನ್ಯವಾದಗಳು.

shivu.k said...

ಸತ್ಯನಾರಯಣ ಸರ್,

ಬ್ಲಾಗಿನ ಟೋಪಿ ಹಾಕಿಕೊಂಡಿದ್ದಕ್ಕೆ ಥ್ಯಾಂಕ್ಸ್..

shivu.k said...

ಪ್ರಶಾಂತ್,

ಟೋಪಿ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಟೋಪಿಗಳು ನೀವು ಹೇಳಿದಂತೆ ಕಡಿಮೆಯೆನಿಸಿದವು. ಬೇರೆ ಫೋಟೊಗಳನ್ನು ಹಾಕಬಹುದಿತ್ತು. ಆದರೆ ಅವು ಈ ಸರಣಿಗೆ ಹೊಂದಿಕೊಳ್ಳುತ್ತಿರಲಿಲ್ಲವಾದ್ದರಿಂದ ಕಡಿಮೆ ಟೋಪಿ ಫೋಟೊಗಳನ್ನು ಹಾಕಿದ್ದೇನೆ.

shivu.k said...

ಶ್ಯಾಮಲಮೇಡಮ್,[ಅಂತರಂಗದ ಮಾತುಗಳು]

ಹೊಸ ಟೋಪಿಗಳ ಸರಣಿಯ ಜೊತೆಗೆ ಹಳೆಯ ಟೋಪಿ ಸರಣಿಯನ್ನು ನೋಡಿ ಖುಷಿ ಪಟ್ಟಿದ್ದೀರಿ. ಭೂಪಟಗಳು ನಿಮಗಿಷ್ಟವೆಂದು ಹೇಳಿದ್ದು ಖುಷಿಯಾಯ್ತು...ನನ್ನ ಬ್ಲಾಗಿನ ಲೇಖನಗಳು ನಿಮಗೆ ಓದುವ ಮೋಡಿಯ ಟೋಪಿ ಹಾಕುತ್ತೆ ಅಂತ ಹೊಗಳಿದ್ದೀರಿ.

ಮತ್ತೆ ನಿಮ್ಮ ಬ್ಲಾಗಿಗೆ ಹೋಗಿದ್ದೆ. ಅಲ್ಲಿ ಯಾವುದೇ ಬ್ಲಾಗ್ ಇರಲಿಲ್ಲ. ಅನೇಕ ಬಾರಿ ಪ್ರಯತ್ನಿಸಿದರೆ ಬ್ಲಾಗ್ ತೆರೆಯಲೇ ಇಲ್ಲ. ನೀವೊಮ್ಮೆ ಪರಿಕ್ಷಿಸಿ. ಅಥವ ನನಗೆ ನಿಮ್ಮ ಬ್ಲಾಗ್ ಐಡಿ ಕೊಡಿ.
ಥ್ಯಾಂಕ್ಸ್..

shivu.k said...

ಉಮೇಶ್ ಸರ್,

ಟೋಪಿಗಳನ್ನು ಮೆಚ್ಚಿದ್ದಲ್ಲದೇ ಕಲ್ಪನೆಯಲ್ಲಿ ನನ್ನ ಬ್ಲಾಗಿನ ಎಲ್ಲಾ ಟೋಪಿಗಳನ್ನು ಹಾಕಿಕೊಂಡು ಖುಷಿಪಟ್ಟಿದ್ದೀರಿ. ಮಾಹಿತಿಯನ್ನು ಇಷ್ಟಪಟ್ಟು ಓದಿದ್ದಿರಿ.

ರಾಜಕಾರಿಣಿಗಳ ಟೋಪಿಯನ್ನು ನೋಡಲು ನಾನು ಕೊಟ್ಟಿರುವ ಲಿಂಕ್‌ನಲ್ಲಿ ನೋಡಿ ಖಂಡಿತ ಇರುತ್ತೆ.

ರಾಜಕೀಯದವರ ಟೋಪಿಗಳ ಬಗ್ಗೆ ಬರೆಯಬೇಕಿದೆ...

shivu.k said...

ಪರಂಜಪೆ ಸರ್,

ಕ್ಯಾಮೆರಾ ಇರೋದೆ ಹೀಗೆ ಸಿಕ್ಕಿದ್ದನೆಲ್ಲಾ ಕ್ಲಿಕ್ಕಿಸೋಕೆ ಅಲ್ವೇ ಸರ್..ಟೋಪಿಗಳ ಸರಣಿಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ರೂಪ ಮೇಡಮ್,

ಟೋಪಿ ಪುರಾಣವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ.

shivu.k said...

ಮೂರ್ತಿ ಹೊಸಬಾಳೆ ಸರ್,

ಮತ್ತೆ ಟೋಪಿಗಳ ಸರಣಿಯನ್ನು ಶುರುಮಾಡಿದ್ದೇನೆ. ಸುಮಾರು ಹೊಸ ಟೋಪಿಗಳಿವೆ..ಹೀಗೆ ಬರುತ್ತಿರಿ...

shivu.k said...

ಬಾಲು ಸರ್,

ನೀವು ಹೇಳಿದಂತೆ ತಲೆಮೇಲೆ ಏನಿರಲಿ, ಇಲ್ಲದಿರಲಿ ಎಲ್ಲವೂ ನನ್ನ ಕ್ಯಾಮೆರಾದಲ್ಲಿ ಸೆರೆಯಾಗಬೇಕು ಅನ್ನುವುದೇ ನನ್ನ ಉದ್ದೇಶ.

ರಾಜಕಾರಣಿಗಳ ಟೋಪಿಗಳ ಬಗ್ಗೆ ಸಂಶೋಧನೆ ನಡೆಸಲು ನೀವೇ ಸರಿ ಈಗಾಗಲೇ ಅವರ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದೀರಿ..ನನ್ನದೇನಿದ್ದರೂ ಕ್ಲಿಕ್ಕಿಸುವುದಷ್ಟೇ ಕೆಲಸ.

ಧನ್ಯವಾದಗಳು.

shivu.k said...

ರಾಜೀವ್ ಸರ್,

ಏಳನೆ ಸರಣಿಯನ್ನು ನೋಡಿದ್ದೀರಿ. ಮೊದಲ ಆರು ಸರಣಿಯನ್ನು ನೋಡಿ ಇಷ್ಟವಾಗಬಹುದು.

ಮತ್ತೆ ನೀವು ಹೇಳಿದಂತೆ ದೇವರುಗಳ ಟೋಪಿಗಳ ಬಗ್ಗೆಯೂ ಒಂದು ಲೇಖನವನ್ನು ಸಿದ್ಧ ಮಾಡಬೇಕಿದೆ. ಸಾಧ್ಯವಾದಷ್ಟು ಬೇಗ ಹೊಸ ದೇವರ ಟೋಪಿಗಳೊಂದಿಗೆ ಬರುತ್ತೇನೆ ಸರ್..

ಧನ್ಯವಾದಗಳು.

shivu.k said...

ಶಮ,

ನನ್ನ ಬ್ಲಾಗನ್ನು ಮತ್ತು ನನ್ನನ್ನೂ ತುಂಬಾ ಹೊಗಳಬೇಡಿ. ಇಬ್ಬರೂ ಸೋಮಾರಿಯಾಗಿಬಿಡುವ ಭಯ..

ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಹರೀಶ್ ಸರ್,

ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

ನೀವು ಹೇಳಿದ ಆಡಿಕೆ ಟೋಪಿಗಳ ಫೋಟೋಗಳನ್ನು ಹಿಂದಿನ[ಪರಿಸರಪ್ರೇಮಿ ಟೋಪಿಗಳು]ಸರಣಿಯಲ್ಲಿ ಹಾಕಿದ್ದೇನೆ. ನೋಡಿಸರ್.

shivu.k said...

ವಿನುತಾ,

ಟೋಪಿಗಳ ಇತಿಹಾಸ ಮತ್ತು ಹಳೆಯ ಸರಣಿಯನ್ನು ನೋಡಿ ಮೆಚ್ಚಿದ್ದೀರಿ..ಧನ್ಯವಾದಗಳು. ಹೀಗೆ ಬರುತ್ತಿರಿ..

shivu.k said...

ವಿನುತಾ,

ಟೋಪಿಗಳ ಇತಿಹಾಸ ಮತ್ತು ಹಳೆಯ ಸರಣಿಯನ್ನು ನೋಡಿ ಮೆಚ್ಚಿದ್ದೀರಿ..ಧನ್ಯವಾದಗಳು. ಹೀಗೆ ಬರುತ್ತಿರಿ..

shivu.k said...

ದೀಪಸ್ಮಿತ ಸರ್,

ಟೋಪಿಗಳು, ಭೂಪಟಗಳನ್ನಷ್ಟೆ ನನ್ನ ಕ್ಯಾಮೆರಾ ಸೆರೆಯಿಡಿಯುವುದಿಲ್ಲ ಸರ್, ತಲೆಯಿಂದ ಕಾಲಿನವರೆಗೆ ಯಾವುದಕ್ಕೂ ಮುಲಾಜಿಲ್ಲದೇ ಕ್ಲಿಕ್ಕಿಸುತ್ತೆ ನನ್ನ ಕ್ಯಾಮೆರಾ.

ಈ ವಾರದ ಸುಧಾ ವಾರಪತ್ರಿಕೆಯಲ್ಲಿ ಕೇರಳದ ದೋಣಿ ಸ್ಪರ್ದೆ ಬಗ್ಗೆ ಚಿತ್ರಲೇಖನವನ್ನು ಬರೆದಿದ್ದು ನಾನೇ ಸರ್.

ಅದನ್ನು ಗುರುತಿಸಿ ಓದಿದ್ದಕ್ಕೆ ಥ್ಯಾಂಕ್ಸ್.

ನಿಮ್ಮ ಹೊಸ ಲೇಖನವನ್ನು ಓದುತ್ತೇನೆ. ಸರ್.

nirusha said...

shivu,
eradene varshada shubhashayagalu,
nimma ella photogalu adbhuta.
andahage nimma blog ge 15000 visitor naanu.

shivu.k said...

ನಿರುಷಾ ಸರ್,

ನೀವು ನನ್ನ ಬ್ಲಾಗಿನ ಫೋಟೊಗಳನ್ನು ಮೆಚ್ಚಿದ್ದೀರಿ. ಶುಭಾಶಯಗಳಿಗೆ ಮತ್ತು ೧೫೦೦೦ ಕ್ಲಿಕ್ಕರ್ ನೀವಾಗಿದ್ದಕ್ಕೆ ಧನ್ಯವಾದಗಳು.

AntharangadaMaathugalu said...

ನಮಸ್ಕಾರ ಶಿವು ಸರ್......
ಈಗ ನೋಡಿ ನನ್ನ ಬ್ಲಾಗ್ ಗೆ ನೀವು ಬರಬಹುದು. ತಾಂತ್ರಿಕತೆ ಅಷ್ಟಾಗಿ ಗೊತ್ತಿಲ್ಲದ ಕಾರಣ, ಈ ಎಲ್ಲಾ ಎಡವಟ್ಟುಗಳೂ ಆಗುತ್ತಿರುತ್ತವೆ. :-)

ಶ್ಯಾಮಲ

Pradeep said...

ಏನೇ ಆದ್ರೂ, ಟೋಪಿ ಹಾಕೋದ್ರಲ್ಲಿ ನಿಸ್ಸೀಮರು ಕಣ್ರೀ ನೀವು!!!! ;-) ಟೋಪಿಗಳೂ, ಅವುಗಳ ಒಳಗೆ ಅಡಗಿರುವ ಭೂಪಟಗಳೂ.. ಆಹಾ!!!! ;-)

shivu.k said...

ಶ್ಯಾಮಲಾ ಮೇಡಮ್,

ನಿಮ್ಮ ಬ್ಲಾಗಿಗೆ ಹೋಗಿಬಂದೆ. ಚೆನ್ನಾಗಿದೆ. ಮತ್ತೆ ಈಗ ಲಿಂಕಿಸಿಕೊಂಡಿದ್ದೇನೆ. ನಿಮ್ಮ ಹೊಸಲೇಖನ ಬರೆದ ತಕ್ಷಣ ಮೊದಲೇ ಓದಬಹುದು...

ಧನ್ಯವಾದಗಳು.

shivu.k said...

ಪ್ರದೀಪ್,

ನಾನು ಖಂಡಿತ ಟೋಪಿಹಾಕುವುದರಲ್ಲಿ ನಿಸ್ಸೀಮನಲ್ಲ. ಟೋಪಿ ಹಾಕಿಕೊಂಡಿರುವವರು ಈ ಭೂಮಿಯಲ್ಲಿರುವುದರಿಂದ ನನ್ನಂಥವರಿಗೆ ಅದನ್ನು ಕ್ಲಿಕ್ಕಿಸುವುದೇ ಕಾಯಕವಾಗಿದೆ..
ಧನ್ಯವಾದಗಳು.

ಕ್ಷಣ... ಚಿಂತನೆ... said...

ಶಿವು ಸರ್‍, ಟೋಪಿಗಳು ಹಾಗೂ ಟೋಪಿಗಳ ಬಗೆಗಿನ ಹುಡುಕಾಟ, ಇವೆಲ್ಲ ಚೆನ್ನಾಗಿ ಪರಿಚಯಿಸಿದ್ದೀರಿ. ಹೀಗೆಯೇ ಮತ್ತಷ್ಟು ಅನೇಕ ವಿಷಯಗಳು ನಿಮ್ಮ ಕ್ಯಾಮೆರಾ ಕಣ್ಣಿನಿಂದ ಮೂಡಿಬರಲಿ.

ಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.

ಸವಿಗನಸು said...

ಶಿವು ಸರ್,
ನಿಮ್ಮ ಹಳೆಯ ಟೋಪಿಗಳನ್ನು ನೋಡಿದೆ...
ತುಂಬ ಚೆನ್ನಾಗಿದೆ....
ಬಹಳ ಇಷ್ಟವಾಯಿತು....
ಅಭಿನಂದನೆಗಳು
ಮಹೇಶ್!

Anonymous said...

Shivu,

nanhatra ondu Topi ide. Nimagaagi ittiddene.. :)

Keep Writing,

kallare

shivu.k said...

ಕ್ಷಣ ಚಿಂತನೆ ಸರ್,

ಟೋಪಿಗಳ ಚಿತ್ರ ಮತ್ತು ಲೇಖನ ಮೆಚ್ಚಿದ್ದೀರಿ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

ಧನ್ಯವಾದಗಳು.

shivu.k said...

ಮಹೇಶ್ ಸರ್,

ಮತ್ತೊಮ್ಮೆ ನನ್ನ ಹಳೆಯ ಟೋಪಿ ಸರಣಿಗಳನ್ನು ನೋಡಿ ಖುಷಿ ಪಟ್ಟಿದ್ದಕ್ಕೆ ಥ್ಯಾಂಕ್ಸ್...

ಮುಂದಿನ ಬಾರಿ ಒಂದು ಸೊಗಸಾದ ಜಿರಲೆ ಕತೆಯನ್ನು ಕೊಡುತ್ತೇನೆ ಆಗಲು ಹೀಗೆ ಬನ್ನಿ ಸರ್.

shivu.k said...

ಕಲ್ಲರೆ ಮಹೇಶ್,

ನಿಮ್ಮ ಬಳಿಯಿರುವ ಟೋಪಿಯನ್ನು ಹಾಕಿಕೊಂಡು ಬನ್ನಿ. ನಮ್ಮ ಪಕ್ಕದ ರೋಡಿನಲ್ಲೇ ಇದ್ದೀರಿ. ಬನ್ನಿ ಫೋಟೋ ತೆಗೆದುಕೊಡುತ್ತೇನೆ.

Shweta said...

Shivu sir ,chennagide ...

http://www.stevemccurry.com/main.php

ee linkannomme nodi nimage khushi aagabahudu...leya photogala sangraha

ಸುಧೇಶ್ ಶೆಟ್ಟಿ said...

shivanna.. thumba thadavaagi comment haakuthiddene... nimma topiyaayana dindale eradane varusha praarambisideera... topi haakikollalu naanu ready :)

nimage innashtu topigalu beeluthirali :)

shivu.k said...

sಸುಧೇಶ್,

ಟೋಪಿಗಳಿಂದಲೇ ಎರಡನೆ ವರ್ಷವನ್ನು ಆರಂಭಿಸಿದ್ದೇನೆ. ಏಕೆಂದು ಗೊತ್ತಿಲ್ಲ....ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...

Anonymous said...

ಚೆನ್ನಾಗಿದೆ ಬರಹ. ಚಿತ್ರಗಳು ಸುಂದರವಾಗಿವೆ. ಅಭಿನಂದನೆಗಳು..

shivu.k said...

ರಾಘವೇಂದ್ರರವರೆ,

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...

Me, Myself & I said...

ಶಿವೂ ಸಾರ್,
ನಿಜಕ್ಕೂ ಸಕತ್ ಖುಷಿ ಆತು. ನಿಮ್ಮ ರುಚಿ ಅಲ್ಲ ಸಧಬಿರುಚಿ ನಂಗೆ ಇಷ್ಟ ಆತು. ಜಿರಳೆ ಭಾಗ ಒಂದನ್ನೂ ಓದ್ತೀನಿ.
ಅಭಿನಂದನೆಗಳು.

Pradee said...

Hiiiiiiiii
sir .....u r stories r so.......goood i like it .....