Monday, August 3, 2009

ಮಳೆ ನಿಂತೂ ಹೋದ ಮೇಲೆ ಹನಿಯೊಂದು ಮೂಡಿದೆ....ಇಷ್ಟಕ್ಕೂ ಈ ಚಿತ್ರಲೇಖನಕ್ಕೂ ಮೊದಲು ಮತ್ತೊಂದು ಮಳೆ ಲೇಖನ[ಮಳೆಯಿಂದಾದ ಸತ್ಯಘಟನೆ]ಸಿದ್ದವಾಗಿತ್ತು. ಆದ್ರೆ ಈ ಮಳೆಹನಿಗಳು 'ನೀನು ನಮ್ಮ ಬಗ್ಗೆ ಬ್ಲಾಗಲ್ಲಿ ಹಾಕದಿದ್ದಲ್ಲಿ ನೀನ್ ತೆಗೆದ ಛಾಯಾಚಿತ್ರಗಳಲ್ಲೇ ಕರಗಿಹೋಗ್ತಿವಿ" ಅಂತ ಹಟ ಹಿಡಿದು ಬ್ಲಾಗಿನೊಳಗೆ ನುಗ್ಗಿಬಂದಿವೆ. ಅವು ಕರಗುವುದರೊಳಗೆ ನೀವೊಮ್ಮೆ ನೋಡಿಬಿಡಿ.
----- ------- ----------

ಮಳೆ ಫೋಟೋ ತೆಗೆದಾದ ಮೇಲೆ ಒಂದಷ್ಟು ಸೂಕ್ಷ್ಮವಾಗಿ ಮಳೆಯನ್ನು ಅವುಗಳ ಹನಿಗಳನ್ನು ಸೆರೆಯಿಡಿಯೋಣವೆನಿಸಿತ್ತು. ಈ ಹನಿಗಳೆಂದರೇ ಸಾಮಾನ್ಯವಲ್ಲ. ನಮ್ಮ ಸಕಲ ಕವಿ ಮನಸ್ಸುಗಳಿಗೂ ಸ್ಫೂರ್ತಿಯ ಚಿಲುಮೆಯಾಗುವಂತವು. ಇಂಥವನ್ನು ಸೆರೆಯಿಡಿಯಲು ಒಂದಷ್ಟು ಸಿದ್ದತೆಯನ್ನು ಮಾಡಿಕೊಳ್ಳಬೇಕಾಯಿತು. ಅದಕ್ಕಾಗಿ ಹಳ್ಳಿ, ಕಾಡು, ನಗರ ಇತ್ಯಾದಿಗಳನ್ನು ಅಲೆಯಬೇಕಾಯಿತು. ಮಳೆಗಾಗಿ ಕಾಯಬೇಕಾಯಿತು. ಮಳೆ ಬಿದ್ದಮೇಲೆ ಪ್ರಿಯೆತಮೆ ಪ್ರಿಯನಿಗಾಗಿ ಕಾಯುವಂತೇ ನಾನು ಈ ಬಿಂಕದ ಮಳೆಹನಿಗಳಿಗಾಗಿ ಕಾಯಬೇಕಾಯಿತು. ಕೊನೆಗೂ ಸಿಕ್ಕಿದವಲ್ಲ. ನನಗೆ ಸಿಕ್ಕದೆ ಇನ್ಯಾರಿಗೆ ದಕ್ಕುತ್ತವೆ ಹೇಳಿ. ನಾನು ಕ್ಲಿಕ್ಕಿಸುತ್ತಾ ಹೋದಂತೆ ಅವು ನನ್ನೊಂದಿಗೆ ನನ್ನ ಕ್ಯಾಮೆರಾದೊಂದಿಗೆ ಮಾತಾಡುತ್ತಿವೆಯೇನೋ ಅನ್ನಿಸಿತು. ಅವು ಬೆಡಗು ಬಿನ್ನಾಣದಿಂದ, ವೈಯ್ಯಾರದಿಂದ ಕ್ಯಾಮೆರಾಗೆ ಫೋಸ್ ಕೊಡುವುದರ ಜೊತೆಗೆ ನನ್ನೊಂದಿಗೆ ಮಾತಾಡಿದ ಕೆಲವು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ವೈಯ್ಯಾರದಿಂದ ಬಿನ್ನಾಣದ ಬಿತ್ರಿಯರಂತೆ, ತಳುಕುತ್ತಾ, ಬಳುಕುತ್ತಾ, ಇಲ್ಲಿ ತೋರ್ತಾಳೆ ಅಲ್ಲಿ ಹಾರ್ತಾಳೆ ಅನ್ನುವ ನಮ್ಮಜ್ಜಿ ಮಾತಿನಂತೆ, ಮಾಯಾಂಗನೆಯರಂತೆ ಮಾತುಗಳನ್ನು ಆಡಿ ಮಾಯವಾಗುತ್ತಿದ್ದ ಅವುಗಳ ಜೊತೆ ನೀವು ಮಾತಾಡಿ. ನೋಡುತ್ತಾ ಮಾತಾಡುತ್ತಿರಲ್ಲ.


ಕನಸು ನೆನಸೆಲ್ಲಾ ನಿಮ್ಮ ಲೆಕ್ಕಾಚಾರ. ನಾವೇ ಒರಿಜಿನಲ್ಲು. ಎರಡರಲ್ಲೂ ಬಂದೇ ಬರುತ್ತೀವಿ.

ಮುತ್ತು ಮುತ್ತು ನೀರ ಹನಿಯ ತಾಂತನನಂ.....ಲೈಪಲ್ಲಿ ಫೇಲ್ ಆಗೋದು ನೀವೆ ಕಣ್ರಿ, ನಾವು ನೋಡಿ ಹೀಗೆ ತೂಗಿದ್ರೆ ಮುತ್ತು, ಕೆಳಗ್‍ಬಿದ್ರೆ ನೀರು, ಮತ್‍ಮೇಲಕ್ಕೆ ಹೋದ್ರೆ ಮೋಡವಾಗಿ ತೇಲ್ತೀವಿ.ಆತ ಅಳೋದ್ ಮರೆತಿದ್ದ. ನಮ್ಮನ್ನು ನೋಡಿದ ಕೂಡಲೆ ಆತನ ಕಣ್ಣೊಳಗಿನ ನಮ್ಮ ಗೆಳೆಯರು ನಮಗಾಗಿ ಹೊರಬಂದರು. ಈಗ ಖುಷಿಯಿಂದ ಆತನ ಕಣ್ಣಂಚಲ್ಲಿ ಮಳೆಹನಿ.ನಾವೆಲ್ಲಾ ಇಷ್ಟು ಚಂದ ಕಾಣಲು ಯಾವುದೇ ಮೇಕಪ್ ಇಲ್ರೀ. ಆದ್ರೆ ನೀವಂಗ್ ನೋಡುವುದರಿಂದಲೇ ನಾವಿನ್ನಷ್ಟು ಅಂದ ಕಾಣುತ್ತೇವೆ ಅಲ್ವಾ?ನಿಜವಾಗಿ ನಮ್ ಬೆಲೆ ಗೊತ್ತಾಗುವುದು ನಾವು ಕಂಡಾಗ ಅಲ್ಲ. ಕಂಡು ಮರೆಯಾದಾಗ!ನಿಮಗೆ ಗೊತ್ತೇನ್ರಿ, ನಮಗೆ ಕಣ್ಣಿಲ್ಲ, ಆದ್ರೆ ಕಣ್ಣ ಹನಿಗಳಿವೆ. ಯಾಕಂದ್ರೆ ನಮ್ಮಲ್ಲೂ ಹೃದಯವಿದೆಯಲ್ಲಾ ಹಾಗಾಗಿ. ಹಾಗಂತ ಇದು ನೋವಿನ ಹನಿಯಲ್ರಿ. ಆನಂದಬಾಷ್ಪ.ಈ ಪ್ರೀತಿ ಅನ್ನೋದು ಶುರುವಾಗಿದ್ದೆ ನಮ್ಮಿಂದ ಕಣ್ರಿ. ಎಲೆ, ಹೂ, ಹಣ್ಣು, ನೆಲ, ಜಲ....ಭುವಿಯ ಸಕಲಗಳ ಜೊತೆ. ಆದ್ರೆ ನೀವು ಸಿಕ್ಕ ಪ್ರೀತಿಯನ್ನು ಅನುಭವಿಸದೆ, ಮೊದಲು ನಮ್ಮಿಂದಲೇ ಶುರುವಾಯ್ತು ಅಂತ ಆಹಂ ಕಿರೀಟ ಇಟ್ಟುಕೊಳ್ತೀರಿ ಅಲ್ವಾ!ನಾವು ಹನಿಗಳು ಒಂಥರ ಕಾಲದಂತೆ. ನೀವು ಮುಟ್ಟುವುದರೊಳಗೆ ಮಾಯವಾಗುತ್ತಿರುತ್ತೇವೆ. ಮತ್ತೆ ನಿಮಗೆ ಗೊತ್ತಿಲ್ಲದಂತೆ ಹೊಸದಾಗಿ ಮೂಡುತ್ತಿರುತ್ತೇವೆ.ಛೇ ನಿನ್ನ[ಕ್ಯಾಮೆರಾ]ಕಣ್ಣಿಂದ ತಪ್ಪಿಸಿಕೊಳ್ಳಲಿಕ್ಕೆ ಆಗಲಿಲ್ಲವಲ್ಲ!ಹನಿಹನಿಗೂಡಿದ್ರೆ ಹಳ್ಳ...
ಹನಿ ಹನಿ ಕೊಂಡಿ ಕಳಚಿಕೊಂಡರೆ......
ಮಳೆಗಾಲದ ರಾತ್ರಿ ಮ್ಯಾಲೆ ಚುಕ್ಕಿಗಳಿಲ್ಲ ಅಂತ ಬ್ಯಾಸರಮಾಡಬೇಡ್ರಿ. ನಮ್ಮನ್ನೇ ನೋಡಿ, ನಾವೇ ಮಳೆಗಾಲದ ಚುಕ್ಕಿಚಂದ್ರಮಗಳು....
ನೋಡಿದ ಮೇಲೆ ನೀವು ಮಳೆಹನಿಗಳ ಜೊತೆ ಏನು ಮಾತಾಡಿದ್ರಿ ಅನ್ನೋದನ್ನು ಕಾಮೆಂಟಿಸಿದರೆ ಇನ್ನೂ ಚೆನ್ನಾಗಿರುತ್ತೆ ಅಲ್ವಾ....ಅಂಥ ಮಾತುಗಳಿಗಾಗಿ ಕಾಯುತ್ತಿರುತ್ತೇನೆ.

[ಮಳೆಹನಿಗಳ ಚಿತ್ರಗಳೊಂದಿಗೆ ಲೇಖನ ಭಾಷೆ ತುಂಬಾ ಶಿಷ್ಟಚಾರದ ಪುಸ್ತಕ ಭಾಷೆಯಾಗಿಬಿಟ್ಟಿತ್ತು. ನಂತರ ನನ್ನ ಶ್ರೀಮತಿಯ ಸಹಕಾರದಿಂದ ಆಡುಭಾಷೆಯಾಗಿದೆ. ಆಕೆಗೂ ನನ್ನ ಧನ್ಯವಾದಗಳು.]

ಮತ್ತೊಂದು ಸೂಚನೆ: ಪ್ರಕಾಶ್ ಹೆಗಡೆಯವರ ಹೊಸ ಪುಸ್ತಕದ ಜೊತೆ ನನ್ನದೊಂದು ಪುಸ್ತಕವು ಪ್ರಕಟಣೆಗೆ ಭರದಿಂದ ಸಾಗಿದೆ. ಬಿಡುಗಡೆಯ ದಿನಾಂಕವನ್ನು ಮುಂದೆ ತಿಳಿಸುತ್ತೇನೆ. ಧನ್ಯವಾದಗಳು.

ಚಿತ್ರ-ಲೇಖನ.
ಶಿವು.ಕೆ.

90 comments:

Suma said...

ಸರ‍್ ಫೊಟೊಗಳು ತುಂಬ ಚೆನ್ನಾಗಿವೆ.ನನ್ನೂರಿನ ಮಳೆಗಾಲವನ್ನು ನೆನಪಿಸಿದಕ್ಕೆ ಧನ್ಯವಾದಗಳು.

guruve said...

ಹನಿಗಳ ಲೀಲೆ, ಹನಿಗಳ ಭಾಚಿತ್ರಗಳ ಲೀಲೆ.. ಫೋಟೋಗಳು ಸುಂದರವಾಗಿ ಮೂಡಿ ಬಂದಿವೆ.

ಸಂತೋಷ್ ಚಿದಂಬರ್ said...

ಮಳೆ ಹನಿ ಜೊತೆ

ಏನು ಮಾತಾಡೋಕೆ ಆಗ್ಲಿಲ್ಲ

ಮೌನ, ಬರೀ ಮೌನ

ಮಾತುಗಳು ಪೋಣಿಸುವಷ್ಟರಲ್ಲಿ..

ಹನಿಗಳು ಮುತ್ತಾಗಿತ್ತು .

Umesh Balikai said...

ಶಿವು ಸರ್,

ಮುತ್ತು ಮಳೆ ಹನಿಗಳ ಚಿತ್ರಗಳು ತುಂಬಾನೆ ಚೆನ್ನಾಗಿವೆ. ಊರಲ್ಲಿದ್ದಾಗ ಹೊಲದಲ್ಲಿ ಕೆಲಸ ಮಾಡುತ್ತಾ ಮಳೇಲಿ ನೆನೆದುಕೊಂಡು ಆಟವಾಡುತ್ತಿದ್ದ ದಿನಗಳು ನೆನಪಾದವು. ಮಳೆ ನಿಂತ ಮೇಲೆ ನೋಡಿದ್ರೆ ಅವಶ್ಯಕ ಬೆಳೆಗಳಷ್ಟೇ ಅಲ್ಲ, ಅನಾವಶ್ಯಕ ಎಂದು ನಾವು ಭಾವಿಸುತ್ತಿದ್ದ ಕಳೆ ಗಿಡಗಳೂ ಮುತ್ತಿನ ಹಾರ ಹಾಕಿಕೊಂಡು ನಳನಳಿಸುತ್ತಿದ್ದವು. ಸ್ವಲ್ಪ ಹೊತ್ತಿನ ನಂತರ ಬೀಳುವ ಸೂರ್ಯನ ಹೊಂಬಿಸಿಲೆಗೆ ಫಳಫಳ ಹೊಳೆಯುತ್ತಿದ್ದವು. ಮಳೆರಾಯ ಸಕಲ ಜೀವ ಸಂಕುಲವನ್ನೂ ಭೇದ ಭಾವವಿಲ್ಲದೆ ಪುನೀತವಾಗಿಸುತ್ತಾನಲ್ಲ ಅಂತ ಆಶ್ಚರ್ಯ ಪಡುತ್ತಿದ್ದೆವು. ನಿಮ್ಮ ಚಿತ್ರಗಳನ್ನು ನೋಡಿ ಆ ದಿನಗಳೆಲ್ಲ ನೆನಪಾದವು. ಮತ್ತೆ ಮಳೆ ಬಂದಾಗ ಅಂತಹ ದೃಶ್ಯಗಳನ್ನು ಹುಡುಕಿಕೊಂಡು ಹೋಗಬೇಕೆನಿಸುತ್ತಿದೆ.

ಕಣ್ಮನ ತಣಿಸುವ ಚಿತ್ರಗಳನ್ನು ನೋಡುವ ಭಾಗ್ಯ ನಮ್ಮದಾಗಿಸಿದ್ದಕ್ಕೆ ಹಾರ್ದಿಕ ವಂದನೆಗಳು.

- ಉಮೀ

Guru's world said...

ಶಿವೂ,,,ಸೂಪರ್ ಫೋಟೋಗಳು,,,,,,,ನಾನು ಎಲ್ಲೊ ಇದೆ ತರದ ಫೋಟೋಗಳನ್ನ ನೋಡಿ ಇದೆ ಥರ ಫೋಟೋ ತೆಗೆಯುವುದಕ್ಕೆ ಹೋಗಿದ್ದೆ, ಆದರೆ,, ನನ್ನ ಕ್ಯಾಮೆರಾ ದಲ್ಲಿ ಇಷ್ಟು ಚೆನ್ನಾಗಿ ಮೂಡಿ ಬರಲಿಲ್ಲ..... ಅವಾಗ ಮಾಡಿದ್ದ ಸರ್ಕಸ್ ಎಲ್ಲ ನೆನಪಿಗೆ ಬಂತು,,,,
ನಿಮ್ಮ ಜೊತೆ, ನಿಮ್ಮ ಕ್ಯಾಮೆರಾ ಜೊತೆ,, ಎಷ್ಟು ಚೆನ್ನಾಗಿ ಮತಾಡುತ್ತಲಿದೆ ಈ ಬಿಂಕದ ಮಳೆ ಬಿಂದುಗಳು........ :-) ತುಂಬ ಖುಷಿ ಆಯಿತು ನೋಡಿ....

Arundati said...

shivu,
I could not swallow even my mouthwater..Really.. heavenly..

RAMU said...

ಮುತ್ತು ಮುತ್ತು ಮಳೆಹನಿಯ ತಾಂತತನನಂ ರಾಗಕ್ಕೆ
ಕ್ಲಿಕ್ ಕ್ಲಿಕ್ ಕ್ಲಿಕ್... ಎಂದ ಕ್ಯಾಮೆರಾದ ತಾಳ...

ಕಾಮ್ಬಿನಶನ್ ಸುಪೆರ್ಬ್.....

--
RAMU M
9480427376

Jayalakshmi said...

intaha sundara, ramya manhara drushyavannu (kaavyavannu) saviyuvaaga maunavE taaNDavavaduttade. maatige avakaashavelli? aa hanimuttugaLalli tOidu hOguva aaseyaaitu. nijakku sundara sannivEsha maimareyalu. anta sannivEshavannu kalpisida nimage kOTi dhanyavaadagaLu. DJay

Anonymous said...

NICE Sirr...

Anonymous said...

Good Shots Again.. I have some more to share..
http://www.geeksucks.com/photography/30-beautiful-raindrops-photography.htm

Keshav Kulkarni said...

good work shivu, expectation are still high!

ಸಾಗರದಾಚೆಯ ಇಂಚರ said...

ಶಿವೂ
ಮತ್ತದೇ ಸುಂದರ ಫೋಟೋಗಳು, ಒಳ್ಳೆಯ ಬರಹ. ನಿಮ್ಮ ಫೋಟೋಗಳನ್ನು ನೋಡುತ್ತಿರಬೇಕೆನ್ನಿಸುತ್ತದೆ
ಹೀಗೆಯೇ ಬರೆಯುತ್ತಿರಿ
ಪುಸ್ತಕ ಬಹುಬೇಗ ಮುದ್ರಣಗೊಳ್ಳಲಿ

ರಮೇಶ್ ಹಿರೇಜಂಬೂರು said...

shivu nimma ella Photo's galu adbuta...

PARAANJAPE K.N. said...

ಶಿವೂ,
ನಿಮ್ಮ ಛಾಯಾಗ್ರಹಣ ಕಲೆಗಾರಿಕೆ, ನಿಮ್ಮಲ್ಲಿರುವ ಕ್ರಿಯೇಟಿವಿಟಿ, ಹೊಸತನ್ನು ತೋರಿಸುವಲ್ಲಿನ ಉತ್ಸುಕತೆ ಎಲ್ಲವು ನನಗಿಷ್ಟ. ಮಳೆಯ ಕುರಿತಾದ ಚಿತ್ರಗಳು ಸುಪರ್ಬ್. ಅದರ ಬಗ್ಗೆ ಎರಡು ಮಾತಿಲ್ಲ, ನಿಮ್ಮ ಪುಸ್ತಕ ಹೊರಬರುವ ವಿಚಾರ ಕೂಡ ನನಗೆ ಅತ್ಯ೦ತ ಖುಷಿಯ ಸ೦ಗತಿ. ಆದರೆ ಒ೦ದು ಆಕ್ಷೇಪವಿದೆ. ನೀವು ಬರೆದ ಬರಹದಲ್ಲಿ ಅಕ್ಷರದೋಷಗಳು ಬರದ೦ತೆ ಎರಡೆರಡು ಬಾರಿ ನೀವು ಚೆಕ್ ಮಾಡಿಕೊಳ್ಳಬೇಕು. ಈ ಬರಹದ ಟೈಟಲಿನಲ್ಲಿರುವ " ಮಳೆ ನಿಂತೂ ಹೋದ ಮೇಲೆ ಹನಿಹೊಂದು ಮೂಡಿದೆ...." ಯಲ್ಲಿ "ಹನಿಯೊ೦ದು" ಎ೦ದು ಕೂಡಲೇ ಸರಿಪಡಿಸಿ. ಆ ತಪ್ಪಿನಿ೦ದ ಇಡೀ ಬರಹದ ಮೌಲ್ಯ ಕಡಿಮೆಯಾಗುತ್ತದೆ. ನೇರವಾಗಿ ಹೇಳಿದ್ದಕ್ಕೆ ಬೇಸರಿಸಿಕೊಳ್ಳಬೇಡಿ. ನೀವು ನನ್ನ ಪ್ರೀತಿಯ ಸ್ನೇಹಿತ ಆದ್ದರಿ೦ದ ಹೇಳಿದೆ.

Anonymous said...

ಶಿವು ಅವರೇ, ಎಷ್ಟು ಚೆನ್ನಾಗಿದೇರಿ ನಿಮ್ಮ ಫೋಟೋಗಳು..... ಕಣ್ಣಿಗೆ, ಮನಸ್ಸಿಗೆ ಮುದ ಕೊಡುವಂಥವು.
ಮಳೆಗಾಲವೇ ಸುಂದರ, ಅದರಲ್ಲೂ 'ಹನಿಗಳಲೋಕ' ಇನ್ನೂ ಮನೋಹರ!!
ಸಣ್ಣವಳಿದ್ದಾಗ ಮಳೆಗಾಲದಲ್ಲಿ ಊರಿಗೆ ಹೋದಾಗ ಎಲೆಗಳ ಮೇಲಿನ ಹನಿಗಳನ್ನು ಕುಡಿಯುತ್ತಿದ್ದದ್ದು ನೆನಪಾಯ್ತು...
Great work and great combo of pics and writings!

Anonymous said...
This comment has been removed by a blog administrator.
ರಾಜೀವ said...

ಶಿವು ಸರ್,

ಸಕ್ಕತ್ ಫೋಟೋಸ್. ಪ್ರಕೃತಿಯ ಒಂದೊಂದು ಪುಟದಲ್ಲೂ ಸೌದರ್ಯ ಇರುತ್ತದೆ. ಆದರೆ ನಾವು ಅದನ್ನು ನೋಡುವುದಿಲ್ಲ ಅಷ್ಟೇ. ನಿಮ್ಮ ಕಣ್ಣುಗಳ ಮೂಲಕ ನಾವೂ ಅದನ್ನು ಸವಿಯುತ್ತೇವೆ. ಧನ್ಯವಾದಗಳು.

ಇನ್ನೂ ಮಳೆಹನಿಗಳ ಜೊತೆ ಮಾತಾಡಿಲ್ಲ. ಮಾತನಾಡಿದಾಗ ಅದರ ಬಗ್ಗೆ ಬರೆಯುವೆ.

ರೂpaश्री said...

ಮಳೆ ಮಳೆ ಮಳೆ ಮಳೆ
ಚೆಂದದ ಫೋಟೋಗಳ ಸುರಿಮಳೆ
ತುಂತುರಿನ ಸೋನೆ ಮಳೆ
ಹನಿಹನಿ ಮುತ್ತಾದ ಮಳೆ!!

ಸಕ್ಕತ್ ಫೋಟೋಸ್ ಶಿವು:)

ವನಿತಾ / Vanitha said...

ಸಕತ್ ಫೋಟೋಸ್..ಮತ್ತು ಸಕತ್ captions...ನಂಗೆ 'ಮುತ್ತು ಮುತ್ತು ನೀರ ಹನಿಯ ತಾಂತನನಂ'. ಹಾಡು favourite..ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು..ಹಾಗೆಯೇ ಪುಸ್ತಕ ಬಿಡುಗಡೆಗೆ goodluck.

Prashanth Arasikere said...

hi shivu,

Nimma male hani photos tumba chennagide matte adara jothe baraha kuda tumba chennagi bandidde,male hani jothe chandra ide alva adu tumba romantic agide..

NiTiN Muttige said...

ಫೊಟೊಗಳು ತುಂಬ ಚೆನ್ನಾಗಿವೆ....

ವಿನುತ said...

ಮಳೆ ಬ೦ದರೂ ಸು೦ದರ, ಬ೦ದು ನಿ೦ತ ಮೇಲೂ ಸು೦ದರ. ಒ೦ದಕ್ಕಿ೦ತ ಒ೦ದು ಸು೦ದರ ಫೋಟೋಗಳು. ನಿಮ್ಮ ಫೋಟೋಗಳಿ೦ದ ನಮ್ಮ ಮಲೆನಾಡನ್ನು ನೆನಪಿಸಿಬಿಟ್ಟಿರಿ. ಇಲ್ಲಿಯ ಬಿಸಿಲನ್ನು ಕ೦ಡಾಗಲೆಲ್ಲ, ಕುವೆ೦ಪು ಕವಿತೆಯ೦ತೆ "ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ, ಮಲೆಯ ನಾಡಿಗೆ ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ, ಬೇಸರಾಗಿದೆ ಬಯಲು, ಹೋಗುವೆ ಮಲೆಯ, ಕಣಿವೆಯ ಕಾಡಿಗೆ ಹಸಿರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ......." ಅನಿಸುತ್ತಿದೆ.

Dr. B.R. Satynarayana said...

ವಾವ್ ಸೂಪರ್ರು ಶಿವು. ಒಂದೊಂದು ಚಿತ್ರಗಳೂ ಒಂದೊಂದು ಭಾವದೀಪ್ತಿಯಿದ್ದಂತೆ, ಭಾವಗೀತೆಯಿದ್ದಂತೆ. ನೆನ್ನೆಯಷ್ಟೇ ಯವನಿಕಾದಲ್ಲಿ ನಿಮ್ಮ ಹಲವಾರು ಚಿತ್ರಗಳ ದರ್ಶನ ಮಾಡಿದ್ದ ನನಗೆ ಈ ಮಳೆಯ ಚಿತ್ರಗಳು ಭಾವನೆಗಳಲ್ಲಿ ಮಿಂದು ಹೋಗುವಂತೆ ಮಾಡಿಬಿಟ್ಟವು.

ಬಾಲು said...

ಫೋಟೋ ಗಳು ಚೆನ್ನಾಗಿದೆ. ನಿಮ್ಮ ಫೋಟೋ ನೋಡಿ ನಂಗೆ ನಮ್ಮೂರ ಮಳೆ ನೆನಪಿಗೆ ಬಂತು.
ಆಮೇಲೆ ಫೋಟೋ ತೆಗೆಯೋದಕ್ಕೆ ಕೇವಲ ಏಕಾಗ್ರತೆ ಒಂದೇ ಸಾಲದು, ಹೊಸದನ್ನು ಸೆರೆಹಿಡಿಯುವ ಮನಸ್ಸು ಇರಬೇಕು. ನಿಮ್ಮ ಎಲ್ಲ ಫೋಟೋ ಗಳಲ್ಲಿ ಇ ಎಲ್ಲವು ಸಮ್ಮಿಲಿತ ಗೊಂಡಿದೆ.

ಆದಷ್ಟು ಬೇಗ ನಿಮ್ಮ ಪುಸ್ತಕ ಹೊರ ಬರಲಿ. :)

ಮಾಲಾ ಲಹರಿ said...

ಮಳೆಯೂ ಸುಂದರ ಕಾವ್ಯ, ನಿಂತಮೇಲೇ ಇನ್ನೂ ಅಂದ ಪರಿಸರ. ಚಿತ್ರಗಳು ತುಂಬ ಚೆನ್ನಾಗಿವೆ. ವಂದನೆಗಳು
ಮಾಲಾ

roopa said...

ಶಿವು ಸರ್,
ಸು೦ದರ ದೃಶ್ಯ ಕಾವ್ಯ .. ಇನ್ನು ಹೇಳಲು ನನ್ನ ಹತ್ತಿರ ಪದಗಳಿಲ್ಲ ..
ಎಲ್ಲ ಚಿತ್ರ ಗಳು ಅದ್ಬುತ .. !!!!

sunaath said...

ಶಿವು,
ಇಲ್ಲಿಯ ಫೋಟೋಗಳು ಅದ್ಭುತವಾಗಿವೆ. ನಿಮಗೆ ನಾನು ಅಭಿನಂದನೆಗಳನ್ನು ಹಾಗೂ ಧನ್ಯವಾದಗಳನ್ನು ಹೇಳಬೇಕು.

ಪಾಚು-ಪ್ರಪಂಚ said...

ಶಿವೂ ಸರ್,
Good Work. Nice pics.
ಮೊದಲನೆಯ ಚಿತ್ರ ತುಂಬಾ ಹಿಡಿಸಿತು. ನಾನು ಕೂಡ ಇಂತಹುದೇ ಪ್ರಯತ್ನದಲ್ಲಿ ಇದ್ದೀನಿ..!
ಮಳೆಯ ನಂತರದ ಪ್ರಕೃತಿಯ ಕೌಶಲ್ಯವನ್ನು ಅಷ್ಟೇ ನೈಜವಾಗಿ ಸೆರೆಹಿಡಿದಿದ್ದೀರಿ. ಅಭಿನಂದನೆಗಳು

shivu said...

ಸುಮ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ಮಳೆಹನಿ ಫೋಟೋಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ..

shivu said...

ಗುರುಪ್ರಸಾದ್,

ಹನಿಗಳ ಲೀಲೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಸಂತೋಷ್,

ಮಳೆಹನಿಗಳ ಜೊತೆಗೆ ಮೊದಲು ನನಗೂ ಹಾಗೆ ಹಾಗಿತ್ತು. ನಂತರ ಕ್ಯಾಮೆರಾದಲ್ಲಿ ಮುತ್ತಾದಮೇಲೆ ಮಾತಾಡಿದೆ. ನನ್ನ ಲೇಖನಕ್ಕೆ ಸೊಗಸಾದ ಪ್ರತಿಕ್ರಿಯೆ ಇಷ್ಟವಾಯಿತು...
ಧನ್ಯವಾದಗಳು.

shivu said...

ಉಮೇಶ್ ಸರ್,

ಮಳೆಹನಿಗಳ ಫೋಟೋಗಳನ್ನು ನೋಡಿ ನಿಮ್ಮೂರಿನಲ್ಲಿ ನಿಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದೀರಿ. ಅವುಗಳ ವರ್ಣನೆ ತುಂಬಾ ಚೆನ್ನಾಗಿದೆ. ನೀವು ಹೇಳಿದಂತೆ ಮಳೆರಾಯ ಎಲ್ಲರನ್ನೂ ಪುನೀತಗೊಳಿಸುತ್ತಾನೆ.

ಧನ್ಯವಾದಗಳು.

shivu said...

ಗುರು,

ಮಳೆಹನಿಗಳ ಫೋಟೋ ಮೆಚ್ಚಿದ್ದೀರಿ. ನೀವು ವಿಫಲವಾದರೂ ಮತ್ತೆ ಮತ್ತೆ ಪ್ರಯತ್ನಿಸುತ್ತಿರಿ. ಪ್ರಯತ್ನಂ ಕಾರ್ಯಸಿದ್ಧಿ ಅನ್ನುವ ಗಾದೆ ಮಾತೆ ಇದೆಯಲ್ಲಾ. ಖಂಡಿತ ಯಶಸ್ಸು ಸಿಗುತ್ತದೆ.

ಹನಿಗಳ ಜೊತೆ ಮಾತಾಡಿದ್ದನ್ನು ಮೆಚ್ಚಿದ್ದೀರಿ ಧನ್ಯವಾದಗಳು.

shivu said...

Arundathi medam,

welcome my blog. thanks for your comments...

shivu said...

ರಾಮು,

ಮುತ್ತು ಮುತ್ತು ಮಳೆಹನಿಯ ತಾಂತತನನಂ ರಾಗಕ್ಕೆ
ಕ್ಲಿಕ್ ಕ್ಲಿಕ್ ಕ್ಲಿಕ್... ಎಂದ ಕ್ಯಾಮೆರಾದ ತಾಳ...

ಆಹಾ! ಎಷ್ಟು ಚೆನ್ನಾಗಿ ಹೇಳಿದ್ದೀರಿ. ಇದು ನನಗೆ ಹೊಳೆದೇ ಇರಲಿಲ್ಲ...ಹೊಸ ವಿಚಾರ.

ಧನ್ಯವಾದಗಳು.

shivu said...

ಜಯಲಕ್ಷ್ಮಿ ಮೇಡಮ್,

ಹನಿಮುತ್ತುಗಳ ನೋಡಿ ಮೌನವೇ ಮಾತಾಡಿದೆ ಅಂದಿದ್ದೀರಿ. ಇಂಥವನ್ನು ನೋಡಿದಾಗ ನಿಮ್ಮ ಅಭಿಪ್ರಾಯದಂತೆ ಮಾತುಗಳು ಖಂಡಿತ ಬೇಕಿಲ್ಲ. ಮತ್ತು ಪ್ರೋತ್ಸಾಹದ ಮಾತುಗಳು ನಾನು ಇನ್ನಷ್ಟು ಇಂಥವುಗಳಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿ ನೀಡುತ್ತವೆ..
ಧನ್ಯವಾದಗಳು.

shivu said...

ಕಲ್ಲರೇ ಮಹೇಶ್,

ಥ್ಯಾಂಕ್ಸ್...ಪಕ್ಕದ ರೋಡಿನಲ್ಲಿದ್ದುಕೊಂಡು ಇನ್ನೂ ಮನೆಕಡೆಗೆ ಬಂದಿಲ್ಲ..ನೋಡಿಕೊಳ್ತೇನೆ...

shivu said...

ಪ್ರಮೋದ್,

ನನ್ನ ಫೋಟೋಗಳನ್ನು ಮೆಚ್ಚುವ ಜೊತೆಗೆ ನೀವು ಮತ್ತಷ್ಟು ಮಳೆಹನಿ ಫೋಟೋಗಳನ್ನು ಸವಿಯಲು ಹೊಸ ಲಿಂಕ್ ಕೊಟ್ಟಿದ್ದೀರಿ. ಹೋಗಿ ನೋಡಿದೆ. ತುಂಬಾ ಚೆನ್ನಾಗಿವೆ. ಸೂಪರ್ಬ್...ಥ್ಯಾಂಕ್ಸ್...

shivu said...

ಕುಲಕರ್ಣಿ ಸರ್,

ಫೋಟೋಗಳನ್ನು ಮೆಚ್ಚಿದ್ದೀರಿ. ಮತ್ತೆ ನಿಮ್ಮ ನಿರೀಕ್ಷೆಗಳನ್ನು ನಾನು ಹುಸಿಗೊಳಿಸೊಲ್ಲ ಸರ್...ಹೀಗೆ ಬರುತ್ತಿರಿ..

ಧನ್ಯವಾದಗಳು.

shivu said...

ಗುರುಮೂರ್ತಿ ಹೆಗಡೆ ಸರ್,

ಮತ್ತೆ ಮತ್ತೆ ನೋಡುತ್ತಿರಿ..ಯಾವಾಗಲು ನೋಡುತ್ತಿರಿ...ಅದೇ ನನ್ನ ಭಾಗ್ಯವೆಂದುಕೊಳ್ಳುತ್ತೇನೆ...ಮತ್ತೆ ಪುಸ್ತಕದ ಮುಖಪುಟ ವಿನ್ಯಾಸ ಈಗ ತಾನೆ ಸಿದ್ಧವಾಯಿತು. ಮುಂದಿನ ಕೆಲಸಗಳು ನಡೆಯುತ್ತಿವೆ...

ಧನ್ಯವಾದಗಳು.

shivu said...

ರಮೇಶ್ ಹಿರೋಜಂಬೂರ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನನ್ನ ಫೋಟೊಗ್ರಫಿ ಮೆಚ್ಚಿದ್ದೀರಿ ಥ್ಯಾಂಕ್ಸ್..ಹೀಗೆ ಬರುತ್ತಿರಿ...

shivu said...

ಪರಂಜಪೆ ಸರ್,

ಮಳೆಹನಿಯೂ ಸೇರಿದಂತೆ ನನ್ನೆಲ್ಲಾ ಚಿತ್ರ ಲೇಖನಗಳನ್ನು ನೋಡಿ ಸಂತೋಷಪಡುತ್ತೀರಿ. ನನಗದೇ ಖುಷಿ. ಮತ್ತೆ ನೀವು ಹೇಳಿದಂತೆ ನಾನು ಶೀರ್ಷಿಕೆ ಬದಲಾಯಿಸಿದ್ದೇನೆ. ಹಾಗೆ ನೀವು ಹೇಳಿದ್ದರಿಂದ ನನಗೆ ಬೇಸರವಿಲ್ಲ ಬದಲಾಗಿ ಥ್ಯಾಂಕ್ಸ್ ಹೇಳಬೇಕೆಸುತ್ತದೆ ಕಾರಣ ತಪ್ಪುಗಳನ್ನು ಗುರುತಿಸಿ ತಿದ್ದಿಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದೀರಿ.

ಮತ್ತೆ ಪುಸ್ತಕದ ಕೆಲಸ ನಡೆಯುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

shivu said...

ಸುಮನ ಮೇಡಮ್,

ಮಳೆಹನಿ ಚಿತ್ರಗಳನ್ನು ನೋಡಿ ಖುಷಿಪಟ್ಟಿದ್ದೀರಿ. ಮತ್ತೆ ನೀವು ಹೇಳಿದಂತೆ ಮಳೆ ಹನಿಯನ್ನು ಕುಡಿಯುವಲ್ಲಿನ ಮಜವೇ ಬೇರೆ ಅಲ್ವಾ ಮೇಡಮ್,

ಅದರ ಅನುಭವವನ್ನು ನಿಮ್ಮ ಬ್ಲಾಗಿನಲ್ಲಿ ಬರೆಯಿರಿ ಚೆನ್ನಾಗಿರುತ್ತೆ..
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್..

shivu said...

ರಾಜೀವ್ ಸರ್,

ಪ್ರಕೃತಿಯ ಒಂದೊಂದು ಪುಟದಲ್ಲೂ ಸೌಂದರ್ಯವಿರುತ್ತೆ ಅನ್ನುವ ಮಾತೇ ಎಷ್ಟು ಚೆನ್ನಾಗಿದೆಯಲ್ಲಾ ಸರ್, ಮಳೆಹನಿಯ ಫೋಟೋಗಳನ್ನು ಇಷ್ಟಪಟ್ಟಿದ್ದೀರಿ. ನಾನೊಂದು ಸುತ್ತು ಮಾತಾಡಿದ್ದೇನೆ. ಬೇಗ ನೀವು ಮಾತಾಡಿ ಅವು ಕರಗಿಹೋಗುವ ಮುನ್ನ..

ಧನ್ಯವಾದಗಳು.

shivu said...

ರೂಪಶ್ರೀ,

ಮಳೆಹನಿಗಳನ್ನು ನೋಡಿ ಪುಟ್ಟ ಕವನವನ್ನೇ ಬರೆದಿದ್ದೀರಿ...ತುಂಬಾ ಚೆನ್ನಾಗಿದೆ.

ಧನ್ಯವಾದಗಳು.

shivu said...

ವನಿತಾ,

ಮಳೆಹನಿ ಫೋಟೋಗಳ ಜೊತೆಗೆ ಶೀರ್ಷಿಕೆಗಳನ್ನು ಮೆಚ್ಚಿದ್ದೀರಿ. ನೀವು ಇಷ್ಟಪಡುವ ಹಾಡು ನನಗೂ ಇಷ್ಟ. ಮತ್ತೆ ನಿಮ್ಮ ಆಡುಗೆ ತುಂಬಾ ಚೆನ್ನಾಗಿರುತ್ತೆ. ನಾವು ಮನೆಯಲ್ಲಿ experiment ಮಾಡುತ್ತಿರುತ್ತೇವೆ..

ಧನ್ಯವಾದಗಳು.

shivu said...

ಪ್ರಶಾಂತ್,

ಮಳೆಹನಿ ಫೋಟೋಗಳ ಜೊತೆಗೆ ಬರಹವನ್ನು ಮೆಚ್ಚಿದ್ದೀರಿ. ಮತ್ತೆ ನೀವು ಇಷ್ಟ ಪಟ್ಟ ಫೋಟೋದಲ್ಲಿರುವ ಚಂದ್ರ ಅದು ಚಂದ್ರನಲ್ಲ. ತಮಾಷೆಯೆಂದರೆ ಕೆಲವೊಮ್ಮೆ ತಪ್ಪುಗಳು ಈ ರೀತಿ ಹೊಸದನ್ನು ಸೃಷ್ಟಿಸುತ್ತವೆಯೆನ್ನುವುದಕ್ಕೆ ಇದೇ ಉದಾಹರಣೆ. ನಾನು ಕ್ಲಿಕ್ಕಿಸುವಾಗ ಸೂರ್ಯನ ಬೆಳಕಿನಿಂದ flair ಉಂಟಾಗಿ ಆ ಚಂದ್ರ ಮೂಡಿದ್ದಾನೆ. ಬೇರೆ ಫೋಟೋಗಳನ್ನು ತೆಗೆಯುವಾಗ flair ಅನ್ನು avoid ಮಾಡುತ್ತೇವೆ, ಏಕೆಂದರೆ ಅದರಿಂದ ಫೋಟೊ ಗುಣಮಟ್ಟ ಹಾಳಾಗುತ್ತದೆ ಅಂತ. ಆದ್ರೆ ವಿಪರ್ಯಾಸವೆಂದರೆ ಅದೇ ಇಲ್ಲಿ ಫೋಟೋ ಗುಣಮಟ್ಟವನ್ನು ಹೆಚ್ಚಿಸಿದೆ ಅಲ್ವಾ...

ಧನ್ಯವಾದಗಳು.

shivu said...

ನಿತಿನ್,

ಥ್ಯಾಂಕ್ಸ್...

shivu said...

ವಿನುತಾ ಮೇಡಮ್,

ಫೋಟೋಗಳನ್ನು ನಿಮ್ಮ ಮಲೆನಾಡು ನೆನಪಾಯಿತಾ....ಜೊತೆಗೆ ಕುವೆಂಪುರವರ ಹಾಡನ್ನು ನೀವು ನೆನಪಿಸಿಕೊಳ್ಳುವುದರ ಜೊತೆಗೆ ನಮ್ಮೊಂದಿಗೆ ಹಂಚಿಕೊಂಡಿದ್ದೀರಿ..ಹೀಗೆ ಬರುತ್ತಿರಿ.

ಧನ್ಯವಾದಗಳು.

shivu said...

ಸತ್ಯನಾರಾಯಣ ಸರ್,

ಮಳೆಹನಿ ಫೋಟೊಗಳು ನಿಮ್ಮ ಭಾವನೆಗಳನ್ನು ಸ್ಪಂದಿಸಿದ್ದು ನನಗೆ ಖುಷಿಯಾಯ್ತು. ಮತ್ತೆ ಯುವನಿಕದಲ್ಲಿ ನನ್ನ ಫೋಟೋಗ್ರಫಿ ಸಂವಾದಕ್ಕೆ ಬಂದು ಪ್ರೋತ್ಸಾಹ ನೀಡಿದ್ದೀರಿ...

ಧನ್ಯವಾದಗಳು.

shivu said...

ಬಾಲು ಸರ್,


ಮಳೆಹನಿಗಳು ನಿಮ್ಮೂರ ಮಳೆಹನಿ ನೆನಪಿಸಿದ್ದು ಸಂತೋಷ. ಮತ್ತೆ ನೀವು ನನ್ನನ್ನು ಹೆಚ್ಚು ಹೊಗಳುತ್ತಿದ್ದೀರಿ...ಅದರಿಂದ ನನಗೆ ಕೊಂಬು ಬರವ ಭಯವಿದೆ.

ಮತ್ತೆ ನಿಮ್ಮೂರಿನ ಆನುಭವವನ್ನು ನಿಮ್ಮದೇ ಶೈಲಿಯಲ್ಲಿ ಬರೆಯಿರಿ.ಚೆನ್ನಾಗಿರುತ್ತೆ...

shivu said...

ಮಾಲಾ ಮೇಡಮ್,

ಮಳೆಯ ಅನುಭವವನ್ನು ಮೆಚ್ಚಿದ್ದೀರಿ. ಹೀಗೆ ಬರುತ್ತಿರಿ ಧನ್ಯವಾದಗಳು.

shivu said...

ರೂಪ ಮೇಡಮ್,

ಚಿತ್ರಗಳನ್ನು ಮೆಚ್ಚಿದ್ದೀರಿ..ಥ್ಯಾಂಕ್ಸ್...ನಿಮ್ಮ ಬ್ಲಾಗಿ ಏಕೆ ಖಾಲಿ ಇದೆ. ಏನಾದ್ರು ಬೇಗ ಬರೆಯಿರಿ..

shivu said...

ರೂಪ ಮೇಡಮ್,

ಚಿತ್ರಗಳನ್ನು ಮೆಚ್ಚಿದ್ದೀರಿ..ಥ್ಯಾಂಕ್ಸ್...ನಿಮ್ಮ ಬ್ಲಾಗಿ ಏಕೆ ಖಾಲಿ ಇದೆ. ಏನಾದ್ರು ಬೇಗ ಬರೆಯಿರಿ..

shivu said...

ಸುನಾಥ್ ಸರ್,

ಮಳೆಹನಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ನಿಮ್ಮ ಪ್ರೋತ್ಸಾಹವಿರಲಿ...

shivu said...

ಪ್ರಶಾಂತ್ ಭಟ್,

ಹನಿಗಳ ಫೋಟೋಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ಮತ್ತೆ ಮೊದಲ ಫೋಟೋ ತೆಗೆಯುವುದು ತುಂಬಾ ಸುಲಭ. ಮಳೆ ಬಿದ್ದ ನಂತರ್ ಯಾವುದೇ ಪಾರ್ಕಿನ ಹುಲ್ಲನ್ನು ಗಮನಿಸಿದರೆ ಇಂಥ ದೃಶ್ಯಗಳು ಕಾಣಸಿಗುತ್ತವೆ. ಪ್ರಯತ್ನಿಸಿ.

ಧನ್ಯವಾದಗಳು.

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಬಹಳ ದಿನಗಳ ನಂತರ ಕಾಮೆನ್ಟಿಸುತ್ತಿದ್ದೇನೆ, ದಯವಿಟ್ಟು ಬೇಸರಿಸ ಬೇಡಿ...
ಫೋಟೋಗಳು ಒಂದಕ್ಕಿಂತ ಒಂದು ಸುಂದರವಾಗಿದೆ, ಮತ್ತು ಪ್ರತಿ ಚಿತ್ರದ ಮಳೆ ಹನಿಯು ಮುತ್ತಿನ ಮಣಿಯಂತಿದೆ. ಜೊತೆಗಿನ ಸಾಲುಗಳು ಫೋಟೋಗಳ ಅಂದ ಹೆಚ್ಚಿಸುವಂತಿದೆ, ಅದ್ಬುತ ಚಿತ್ರ ಲೇಖನ, ತುಂಬಾ ಇಷ್ಟವಾಯಿತು.

Deepasmitha said...

ಶಿವು ಸರ್, ದೃಶ್ಯಕಾವ್ಯ ಎಂದರೆ ಇದೆ. ಮಳೆಯನ್ನು ಎಲ್ಲರೂ ನೋಡುತ್ತಾರೆ. ಆದರೆ ಅದನ್ನೂ ಒಂದು ಸುಂದರ ಕಾವ್ಯವಾಗಿಸಿ ಎಲ್ಲರಿಗೂ ತಲುಪಿಸುವುದು ಕಲೆಗಾರಿಕೆಯೆ. ನಿಮಗೆ ಅದು ಸಿದ್ಧಿಸಿದೆ.

Rajesh Manjunath - ರಾಜೇಶ್ ಮಂಜುನಾಥ್ said...

ಪುಸ್ತಕ ಬಿಡುಗಡೆ ಮಾಡುವವರಿದ್ದೀರಿ ಎಂದು ಕೇಳಿ ತುಂಬಾ ಖುಷಿಯಾಯ್ತು, ಯಶಸ್ಸು ನಿಮ್ಮದಾಗಲಿ ಎಂಬುದೇ ನನ್ನ ಹಾರೈಕೆ...

Vidya Guggari said...

ಶಿವು ಅವರೇ,
ಮತ್ತೆ ಎಂದಿನಂತೆ ನಿಮ್ಮ ಫೋಟೋಸ್ ಅದ್ಭುತವಾಗಿ ಮೂಡಿ ಬಂದಿವೆ..ಮನಸ್ಸಿಗೆ ಮುದ ನೀಡುವಂತೆ ನಿರೂಪಿಸಿದ್ದೀರಿ! ಹನಿಗಳ ಲೀಲೆ ನಿಜಕ್ಕೂ ಅದ್ಭುತ.. ತುಂಬಾ ಖುಷಿ ಆಯ್ತು.. ಅಭಿನಂದನೆಗಳು.. ನೀವು SLR ಕ್ಯಾಮರ ಉಪಯೋಗಿಸುತ್ತೀರಾ? ನಿಮ್ಮ ಸಾಧನೆ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತೇನೆ!

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಮೊದಲ ಹನಿ, ಮೊದಲ ಪ್ರೇಮ, ಮೊದಲ ಮುತ್ತು....
ಎಲ್ಲೆಲ್ಲಿಗೋ ಕೊಂಡೊಯ್ದು ಪುನಃ ಮಳೆಹನಿಗಳು. ತುಂಬಾ ಚೆನ್ನಾಗಿವೆ. ಹನಿಗಳ ಮಾತ್ನಿಂದ ಮೂಕವಿಸ್ಮಿತನಾದೆ. ಕಣ್ಣು ತುಂಬಿದ ಮೇಲೆ ಮನಸ್ಸು ಹನಿಗೂಡಿದ ಮೇಲೆ ಮಾತೆಲ್ಲಿಯದು.ನಮ್ಮ ಮಾತು ಮೂಕವಾಗಿದೆ.

shivu said...

ರಾಜೇಶ್,

ಮಳೆಹನಿ ಫೋಟೊಗಳ ಜೊತೆಗೆ ಅವುಗಳ ಸಾಲುಗಳನ್ನು ಇಷ್ಟಪಟ್ಟಿದ್ದೀರಿ. ಧನ್ಯವಾದಗಳು.

ಮತ್ತೆ ಪುಸ್ತಕ ಖಂಡಿತ ಸಿದ್ದವಾಗುತ್ತಿದೆ. ಮುಖಪುಟಕ್ಕೆ ರೇಖಚಿತ್ರ ಪ್ರಮೋದ್ ಬರೆದುಕೊಟ್ಟಿದ್ದಾರೆ. ಅದನ್ನು ಉಪಯೋಗಿಸಿಕೊಂಡು ನಾನೆ ಮುಖಪುಟ ವಿನ್ಯಾಸ ಸಿದ್ಧಪಡಿಸಿದ್ದೇನೆ...ಮುಂದೆ ತಿಳಿಸುತ್ತೇನೆ...

ಧನ್ಯವಾದಗಳು.

shivu said...

ದೀಪಸ್ಮಿತ ಸರ್,

ಮಳೆಹನಿಗಳ ಚಿತ್ರಗಳನ್ನು ದೃಶ್ಯಕಾವ್ಯವೆಂದಿದ್ದೀರಿ ಥ್ಯಾಂಕ್ಸ್..
ನಿಮ್ಮ ಪ್ರೋತ್ಸಾಹವೇ ನನಗೆ ಸ್ಪೂರ್ತಿ.
ಹೀಗೆ ಬರುತ್ತಿರಿ...

shivu said...

ವಿದ್ಯಾ ಮೇಡಮ್,

ಲೇಖನದ ಜೊತೆಗೆ ಮಳೆಹನಿಗಳನ್ನು ಇಷ್ಟಪಟ್ಟಿದ್ದೀರಿ. ಮತ್ತೆ ನಾನು ಉಪಯೋಗಿಸುವುದು SLR ಕ್ಯಾಮೆರಾ.

ಹೀಗೆ ಬರುತ್ತಿರಿ..ಧನ್ಯವಾದಗಳು.

shivu said...

ಮಲ್ಲಿಕಾರ್ಜುನ್,

ಇಂಥ ಚಿತ್ರಗಳನ್ನು ತೆಗೆಯುವಾಗ ನಾವು ಖಂಡಿತ ಮಾತಿಗೆ ಬ್ರೇಕ್ ಹಾಕಿರುತ್ತೇವಲ್ವ..ಅಲ್ಲಿ ಮಾತು ಮೇಲುಗೈ ಸಾಧಿಸಿದರೆ ನಮ್ಮ ನಿರೀಕ್ಷಿತ ಚಿತ್ರಗಳು ಸೆರೆಯಾಗುವುದಿಲ್ಲ ಮತ್ತು ಅದಕ್ಕಿಂತ ತನ್ಮಯತೆ ಖಂಡಿತ ಬೇಕು.

ಧನ್ಯವಾದಗಳು.

ಕ್ಷಣ... ಚಿಂತನೆ... Think a while said...

ಶಿವು ಸರ್‌, ಮಳೆಹನಿಗಳು, ಹೂಗಳು, ಗಿಡಬಳ್ಳಿಗಳೆಲ್ಲ ಒಂದಕಿಂತ ಒಂದು ಚೆಂದವಾಗಿವೆ. ಶೀರ್ಷಿಕೆಗಳೂ ಸಹ ಚೆನ್ನಾಗಿವೆ. ನನಗೆ ತುಂಬಾ ಇಷ್ಟವಾಗಿದ್ದು ಕೊನೆಯದಕ್ಕಿಂತ ಮೊದಲಿನದು (ಲಾಸ್ಟ್ ಬಟ್ ಒನ್). ನಾನೂ ಸಹ ಈ ರೀತಿ ಫೋಟೋಗಳಿಗಾಗಿ ಪ್ರಯತ್ನಿಸಿದ್ದೇನೆ. ಆದರೆ ಇಷ್ಟು ಸುಂದರವಾಗಿ, ಕಂಪೋಸ್‌ ಮಾಡಿ ತೆಗೆಯಲಾಗಿಲ್ಲ.

ನೆನಪಿನಲ್ಲುಳಿಯುವ ಚಿತ್ರಗಳನ್ನು ನೀಡಿದ್ದಕ್ಕೆ ವಂದನೆಗಳು.

ನಿಮ್ಮ ಹೊಸ ಪುಸ್ತಕದ ಪ್ರಕಟಣೆಯ ಬಗ್ಗೆ ತಿಳಿಸಿದ್ದೀರಿ. ಶುಭವಾಗಲಿ.

ಸ್ನೇಹದಿಂದ,

ಚಂದ್ರಶೇಖರ ಬಿಎಚ್.

Mahesh said...

ಒ೦ದಕ್ಕಿ೦ತ ಒ೦ದು ಸು೦ದರ ಫೋಟೋಗಳು ಶಿವು.....
ಮಳೆಯೆ ಸು೦ದರ ಅಂದುಕೊಂಡವರಿಗೆ ಮಳೆ ನಿ೦ತ ಮೇಲಿನ ಸು೦ದರ ಚಿತ್ರಗಳು ತೋರಿಸಿದ್ದೀರಾ.....
ಅಭಿನಂದನೆಗಳು.

ಸುಧೇಶ್ ಶೆಟ್ಟಿ said...

ನಿಮ್ಮ ಪುಸ್ತಕ..... ವಾವ್.... It is a great news!

ಪುಸ್ತಕ ಬೇಗ ಬರಲಿ.... ಕುತೂಹಲದಿ೦ದ ಕಾಯುತ್ತಿದ್ದೇನೆ....

ಚಿತ್ರಗಳು ಎ೦ದಿನ೦ತೆ ಸೂಪರ್.... ಏನು ಹೇಳಲಿ ಮಳೆಹನಿಗಳ ಚ೦ದದ ಬಗ್ಗೆ ಮುತ್ತು ಅವುಗಳನ್ನು ತು೦ಬಾ ಸು೦ದರವಾಗಿ ನಾಜೂಕಿನಿ೦ದ ಸೆರೆಹಿಡಿದ ನಿಮ್ಮ ಕೌಶಲ್ಯದ ಬಗ್ಗೆ..

Shweta Bhat said...

Super photos shivu sir.........

Tumba chennagi bandide... bloganna nodoke aagirlilla.Svalpa late aagi commentu madta edini..

kaalagalalli malegaalave tumba sundaravaadaddu allava?

thank you.

shivu said...

ಕ್ಷಣ ಚಿಂತನೆ ಸರ್,

ನೀವು ಮೆಚ್ಚಿದ ಚಿತ್ರವನ್ನು ಸೆರೆಯಿಡಿಯಲು ನಾನು ತುಂಬಾ ತ್ರಾಸ ಪಡಬೇಕಾಯಿತು. ಹನಿ ಕೆಳಗೆ ಬೀಳುವಾಗಲೆಲ್ಲಾ ಕ್ಲಿಕ್..ಕ್ಲಿಕ್ ಕ್ಲಿಕ್ಕಿಸಿದರೂ ನಂತರ ನೋಡಿದರೆ ಅದು ಸೆರೆಯಾಗುತ್ತಿರಲಿಲ್ಲ. ಒಮ್ಮೆ ಹನಿ ದುಮುಕುವ ಮೊದಲು ಅಥವ ದುಮುಕಿ ಮರೆಯಾದ ಕ್ಲಿಕ್ಕಾಗುತ್ತಿತ್ತು. ಸುಮಾರು ಐವತ್ತಕ್ಕೂ ಹೆಚ್ಚು ಕ್ಲಿಕ್ಕಿಸಿರಬಹುದು. ಅದರಲ್ಲಿ ಒಂದೆರಡು ಬಾರಿ ಮಾತ್ರ ಇಂಥ ಚಿತ್ರ ಸಿಕ್ಕಿದೆ. ಏನಾದ್ರು ಕಷ್ಟಪಟ್ಟರೆ ಅಲ್ವೇ ಸರ್ ನಂತರ ಇಂಥವು ಸಿಗುವುದು.

ಮತ್ತೆ ಪುಸ್ತಕ ಸಿದ್ಧವಾಗುತ್ತಿದೆ. ಅದರ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲಿಯೇ ತಿಳಿಸುತ್ತೇನೆ ಸರ್.

shivu said...

ಮಹೇಶ್ ಸರ್,

ಮಳೆ ನಿಂತ ಮೇಲಿನ ಫೋಟೋ ಕಾನ್ಸೆಪ್ಟ್ ನನಗಿರಲಿಲ್ಲ. ಈ ಮೊದಲು ಮಳೆ ಫೋಟೋ ಹಾಕಿದಾಗ ಮಳೆಹನಿಯ ಫೋಟೊ ತೆಗೆಯಿರಿ ಅಂತ ಬ್ಲಾಗ್ ಗೆಳೆಯರೊಬ್ಬರು ಕೇಳಿದ್ದರು. ಅವರು ಅದನ್ನು ನೆನಪಿಸಿದ ಮೇಲೆ ನಾನು ಈ ಪ್ರಯತ್ನ ಮಾಡಿದ್ದು. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu said...

ಸುಧೇಶ್,

ಖಂಡಿತ ಪುಸ್ತಕ ಬರುತ್ತಿದೆ....ನೀವೆಲ್ಲರೂ ಬರಬೇಕು. ನಿಮ್ಮ ಪ್ರೋತ್ಸಾಹ ಬೇಕು.

ಮತ್ತೆ ಮಳೆಹನಿ ನನಗೂ ತುಂಬಾ ಇಷ್ಟ. ನೀವು ಮೆಚ್ಚಿದ್ದೀರಿ. ಧನ್ಯವಾದಗಳು.

shivu said...

ಶ್ವೇತ ಮೇಡಮ್,

ತಡವಾದರೂ ನೀವು ಬರುತ್ತೀರೆಂದು ನನಗೆ ಗೊತ್ತಿತ್ತು. ಮಳೆಹನಿ ಯಾರಿಗೆ ತಾನೆ ಇಷ್ಟವಾಗೊಲ್ಲ ಹೇಳಿ.? ಮತ್ತೆ ಜಾಸ್ತಿ ಮಳೆಗಾಲ ಇಷ್ಟ ಅಂದಿದ್ದೀರಿ. ಆದ್ರೆ ನನಗೆ ಎಲ್ಲಾ ಕಾಲವು ಇಷ್ಟ. ಎಲ್ಲಾ ಕಾಲದಲ್ಲೂ ಕ್ಲಿಕ್ಕಿಸುತ್ತಿರುತ್ತೇನೆ...ಪ್ರತಿಕಾಲವು ಹೊಸ ಹೊಸ ಫೋಟೋಗಳನ್ನು ಕೊಡುತ್ತಿರುತ್ತದೆ ಅಲ್ವಾ...ಧನ್ಯವಾದಗಳು.

ಶರಶ್ಚಂದ್ರ ಕಲ್ಮನೆ said...

ಶಿವು ಸರ್,
ಫೋಟೋಗಳ ಬಗ್ಗೆ ಎರಡು ಮಾತಿಲ್ಲ, ಎಲ್ಲ ಫೋಟೋಗಳು ತುಂಬಾ ಚಂದವಾಗಿವೆ ಹಾಗೆ ಇಷ್ಟವಾದವು... ನಿಮ್ಮ ಅಲೆದಾಟಕ್ಕೆ, ಕಾಯುವಿಕೆಗೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ನನ್ನ ಅಭಿಮತ...

ಜಿ.ಎಸ್.ಬಿ. ಅಗ್ನಿಹೋತ್ರಿ said...

very very excellent photographs

umesh desai said...

ಶಿವು ಏನಿದು ಹನಿಕಹಾನಿ...ಸೂಪರ್ ಆಗೇದ ..

b.saleem said...

ಶಿವು ಸರ್,
ಫೊಟೊಗಳು ತುಂಬ ಚೆನ್ನಾಗಿವೆ.
ನಿಮ್ಮ ಹೊಸ ಪುಸ್ತಕದ ಪ್ರಕಟಣೆಯ ಬಗ್ಗೆ ತಿಳಿಸಿದ್ದೀರಿ,
ಆದಷ್ಟು ಬೇಗ ಪ್ರಕಟವಾಗಲಿ.

ಜಲನಯನ said...

Shivu
Namaskaara
Bengalooralli iddini
Call madtene..
Bahala channagi bandive
Bindu
ondu
nondu
bendu
karagi
haniyaayitu
(kshameyirali..kannada lipiyallilla)

Prabhuraj Moogi said...

ಸೂಪರ್ ಫೊಟೊಸ ಸರ್... ಮಳೆ ಹನಿ ಯಾರಿಗೆ ತಾನೆ ಇಷ್ಟ ಆಗಲ್ಲ, ಅದರಲ್ಲೂ ಆ ಎಲೆಯಿಂದ ತೊಟ್ಟಿಕ್ಕುವ ಹನಿ ಚಿತ್ರ ಬಹಳ ಚೆನ್ನಾಗಿದೆ,
ಹಾಗೇ ಈ ಸಾಲು ಚಿಂತನೆ ಹಚ್ಚಿತು... "ಲೈಪಲ್ಲಿ ಫೇಲ್ ಆಗೋದು ನೀವೆ ಕಣ್ರಿ, ನಾವು ನೋಡಿ ಹೀಗೆ ತೂಗಿದ್ರೆ ಮುತ್ತು, ಕೆಳಗ್‍ಬಿದ್ರೆ ನೀರು, ಮತ್‍ಮೇಲಕ್ಕೆ ಹೋದ್ರೆ ಮೋಡವಾಗಿ ತೇಲ್ತೀವಿ." ಎಷ್ಟು ನಿಜ ಅಲ್ವಾ..

ಚಿತ್ರಾ said...

ಶಿವೂ,
ಮಳೆಹನಿಯಲ್ಲಿ ಮಿಂದ ಪ್ರಕೃತಿಯಂತೆಯೇ ಸುಂದರವಾಗಿವೆ ಫೋಟೋಗಳು !! ಒಂದಕ್ಕಿಂತ ಒಂದು ಚೆನ್ನಾಗಿ ಬಂದಿವೆ. ಲೇಖನಕ್ಕೆ ನೀವು ಕೊಟ್ಟ ಹೆಸರು ಕೂಡ ಸುಂದರವಾಗಿದೆ !

pradeep said...

ಮಳೆ ನಿಂತ ಮೇಲಿನ ಚಿತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ಸಾರ್.. ಮತ್ತೆ, ಯಾವಾಗ ನಿಮ್ಮ ಪುಸ್ತಕ ಬಿಡುಗಡೆ..

shivu said...

ಶರತ್,

ಮಳೆಹನಿ ಫೋಟೋಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನನ್ನ ಅಲೆದಾಟಕ್ಕೆ ಪ್ರತಿಫಲ ಸಿಗುತ್ತಿರುತ್ತದೆ ಶರತ್. ಏಕೆಂದರೆ ನಾನು ಅದು ಸಿಗುವ ವರೆಗೂ ಬಿಡುವುದಿಲ್ಲವಲ್ಲ....

ಧನ್ಯವಾದಗಳು.

shivu said...

ಅಗ್ನಿಹೋತ್ರಿ ಸರ್,

ಧನ್ಯವಾದಗಳು.

shivu said...

ದೇಸಾಯಿ ಸರ್,

ಹನಿ ಹನಿ ಕಹಾನಿ...ಹೆಸರು ಚೆನ್ನಾಗಿಟ್ಟಿದ್ದೀರಿ...ಥ್ಯಾಂಕ್ಸ್...

shivu said...

ಸಲೀಂ,

ಮಳೆಹನಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಪುಸ್ತಕದ ವಿಚಾರವನ್ನು ಮುಂದೆ ತಿಳಿಸುತ್ತೇನೆ...

shivu said...

ಜಲನಯನ ಸರ್,

ಮಳೆಹನಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ನೀವು ಬೆಂಗಳೂರಿಗೆ ಬಂದಿದ್ದೀರಿ. ನಾನು ಭಾನುವಾರ ಬೆಳಿಗ್ಗೆ ಕೇರಳದಿಂದ ವಾಪಸ್ ಬಂದಿದ್ದೇನೆ....ನೀವು ಕಾಲ್ ಮಾಡಿದರೆ ನಾನು ಸಿಗುತ್ತೇನೆ....
ಧನ್ಯವಾದಗಳು.

shivu said...

ಪ್ರಭು,

ಫೋಟೋಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ತೆಗೆದ ನಂತರ ಈ ರೀತಿ ಅವುಗಳಿಗೆ ವಿವರಣೆ ಕೊಡುವುದರಲ್ಲಿ ತುಂಬಾ ಖುಶಿಯಾಗುತ್ತೆ...ಅದನ್ನು ನೀವು ಮೆಚ್ಚಿದ್ದೀರಿ ಥ್ಯಾಂಕ್ಸ್..

shivu said...

ಚಿತ್ರಾ ಮೇಡಮ್,

ಮಳೆ ಹನಿಗಳ ಫೋಟೋಗಳನ್ನು ಮತ್ತು ಅವುಗಳಿಗೆ ಕೊಟ್ಟ ಶ್ರೀರ್ಷಿಕೆಗಳನ್ನು ಮೆಚ್ಚಿದ್ದೀರಿ...ಥ್ಯಾಂಕ್ಸ್...ಹೀಗೆ ಬರುತ್ತಿರಿ...

shivu said...

ಪ್ರದೀಪ್,

ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಪುಸ್ತಕದ ವಿಚಾರವನ್ನು ಮುಂದೆ ತಿಳಿಸುತ್ತೇನೆ...

Williebizh said...

If you do not buy a charger that equals twenty percent, it will take much longer to charge the battery. He's a very unique man! And then his own brilliant comeback -Yeah! ' When buying a led flashlight rechargeable, it is advisable to enquire whether there is any warranty for the product as well as discounts since many brands offer such facilities. Toll takers may either cross each lane to his/her booth, or use the tunnel.