Saturday, February 7, 2009

ಮತ್ತೆ ಟೋಪಿಗಳು ಬಂದವು ದಾರಿಬಿಡಿ !!

ನನಗೆ ಟೋಪಿ ಹಾಕುವ ಅಲ್ಲಲ್ಲ...ಟೋಪಿ ಫೋಟೊ ಬ್ಲಾಗಿಗೆ ಹಾಕುವ ವಿಚಾರ ಬಂದಾಗ ಮಾತ್ರ ಗೊಂದಲಕ್ಕೆ ಬೀಳುತ್ತೇನೆ.


"ದಿನಕ್ಕೊಂದು ಟೋಪಿ" ತೀರ್ಮಾನದಿಂದಾಗಿ ನನ್ನ ಬಳಿ ಒಂದೆರಡು ಸುತ್ತುಗಳಿಗಾಗುವಷ್ಟು ವೈವಿಧ್ಯಮಯ ಟೋಪಿಗಳ ಗೊಂಚಲಿದೆ......ಪರಿಸರ ಪ್ರೇಮಿಗಳಿಗಾಗಿಯೇ ಸಿದ್ಧಪಡಿಸಿದ ಕಣಜವಿದೆ.......ದೊಡ್ದ ಮಕ್ಕಳಿಗಾಗಿಯೇ[ನಮಗಾಗಿ] ವಿಭಿನ್ನ ಗೊಂಬೆ ಟೋಪಿಗಳಿವೆ.......ಇದಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮ, ಸಂತೆ, ಪ್ರವಾಸ, ಇತ್ಯಾದಿಗಳಿಗಾಗಿ ಬಂದ ವಿದೇಶಿಯರ ಟೋಪಿಗಳಿವೆ......ಹಾಗೂ ನಿಮ್ಮ ಕಲ್ಪನೆಗೂ ಬರದ ಮತ್ತೊಂದು ವಿಧದ ಟೋಪಿಗಳು ಸಿಧ್ದವಾಗುತ್ತಿವೆ.......


ಇದೇ ಸಮಯಕ್ಕೆ ದೂರದ ಆತ್ಮೀಯ ಗೆಳೆಯ[ಸದ್ಯಕ್ಕೆ ಕೆಲಸದ ನಿಮಿತ್ತ ವಿದೇಶದಲ್ಲಿದ್ದಾನೆ]ನನ್ನನ್ನು ಬೇಟಿಯಾಗಿ, ಉಭಯಕುಶೋಲೋಪರಿ.........ಉಕು......ಸಾಂಪ್ರತ....ಎಲ್ಲಾ ಆದ ಮೇಲೆ...ಟೋಪಿಗಳ ವಿಚಾರ ಬಂದ ತಕ್ಷಣ ಸರಿಯಾಗಿಯೇ ಧಮಕಿ ಹಾಕಿದ.........


"ನೋಡೋ ಟೋಪಿ ವಿಚಾರದಲ್ಲಿ ನಿನ್ನ ತರಲೆ ಅತಿಯಾಯಿತು. ನೀನು ಹಾಕಿದ ಟೋಪಿಗಳನ್ನೆಲ್ಲಾ ಹಾಕಿಕೊಳ್ಳೋದಿಕ್ಕೆ ನಾವೇನು ಮೂರ್ಖರು ಅಂದುಕೊಂಡಿದ್ದೀಯಾ ? ಮುಂದಿನ ಭಾರಿ ಟೋಪಿ ಫೋಟೊ ಜೊತೆಗೆ, ಟೋಪಿ ಹಾಕಿಕೊಂಡವರ ಮಾಹಿತಿಯನ್ನು ಕೊಡದಿದ್ದಲ್ಲಿ ಮಾಡುತ್ತೇನೆ ನೋಡು ........."


ಗೆಳೆಯನ ಮಾತಿಗೆ ಕಟ್ಟು ಬಿದ್ದೆನೋ ಅಥವ ನನಗೆ-ನಿಮಗೆ ಇಬ್ಬರಿಗೂ ಬೇಕಿತ್ತೋ.....ಗೊತ್ತಿಲ್ಲ. ಈ ಬಾರಿ ಸ್ವಲ್ಪ ಗಂಭೀರವಾಗಿ ಮತ್ತಷ್ಟು ಜಾನಪದ ಟೋಪಿಗಳ ಜೊತೆಗೆ, ಕಲಾವಿದರು, ಅವರ ಸ್ಥಳ, ಅವರ ಬಗ್ಗೆ ಒಂದೆರಡು ಸಾಲಿನ ವಿವರಣೆ ಕೊಡಲು ಪ್ರಯತ್ನಿಸಿದ್ದೇನೆ..................ಹಗಲು ವೇಷದ ವಾದ್ಯಗಾರರ ಟೋಪಿ....................


ಇವರ ಮೂಲಸ್ಥಾನ ಹಂಪಿ. ಇವರು ಅಲೆಮಾರಿಗಳಂತೆ ಊರೂರು ಅಲೆಯುತ್ತಾ, ಅಲ್ಲಲ್ಲಿ ತಮ್ಮ ಬಿಡಾರ ಊಡಿ, ಬೀದಿ, ವೇದಿಕೆ......ಹೀಗೆ ಎಲ್ಲಾ ಕಡೆಯೂ ಪ್ರದರ್ಶನ ಮಾಡಿ ಹೊಟ್ಟೆ ಪಾಡು ನಡೆಸುತ್ತಾರೆ......


ಈ ಕಲೆಯಲ್ಲಿ ಮುಗ್ಧ ಅಭಿನಯದ ಜೊತೆಗೆ ಮೊದಲ ನೋಟಕ್ಕೆ ನಗು ತರಿಸುವ ಕುಣಿತವೇ ಇವರ ವಿಶೇಷ. ಇವರು ಹನುಮಾಯಣ ನಾಟಕ ಅಭಿನಯಿಸುತ್ತಾರೆ...................................


ಲಂಬಾಣಿ ಟೋಪಿ....


ಇವರು ಲಂಭಾಣಿಗರು. ರಾಜಸ್ಥಾನದಿಂದ ಇಲ್ಲಿಗೆ ಗುಳೇ ಬಂದ ಇವರು ಇಲ್ಲಿನವ ರೇ ಆಗಿಹೋಗಿದ್ದಾರೆ..........


ನಗರ ಹಳ್ಳಿಗಳೆನ್ನೆದೇ ಊರೂರು ಅಲೆಯುತ್ತಾ ತಮ್ಮದೇ ಭಾಷೆಯಲ್ಲಿ ಹಾಡು, ಹಿತ-ಮಿತವಾದ ಹೆಜ್ಜೆಹಾಕುತ್ತಾ ಕುಣಿಯುವ ಇವರು ತೊಡುವ ವಸ್ತ್ರಗಳು ಮಣಿ, ಗುಂಡಿ[ಬಟನ್] ಚಿಲ್ಲರೆ ಕಾಸು, ಕವಡೆ...ಇತ್ಯಾದಿಗಳಿಂದ ಸಂಪೂರ್ಣ ಅಲಂಕೃತಗೊಂಡಿರುತ್ತವೆ.................................ಸೋಮನ ಕುಣಿತ ವಾದ್ಯಗಾರರ ಟೋಪಿಗಳು.


ಮದ್ದೂರಿನ ಈ ಜಾನಪದ ಕಲಾವಿದರು ರಾಕ್ಷಸ ಮುಖದ ಸೋಮನ ವೇಷ ಧರಿಸಿ ಕುಣಿಯುತ್ತಾರೆ. ಅವರ ಕುಣಿತಕ್ಕೆ ತಕ್ಕ ಹಾಗೆ ಡೋಲು ಬಾರಿಸುವ ಸಹ ವಾದ್ಯಗಾರರು ಅವರದೇ ಆದ ರೀತಿ ಟೋಪಿ ಧರಿಸುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ತಿಂಗಳಿಗೊಮ್ಮೆ ಈ ಎಲ್ಲಾ ಕಲಾವಿದರನ್ನು ಕರೆದು ಕಲೆ ಪ್ರಧರ್ಶಿಸಲು ಅವಕಾಶ ಕೊಟ್ಟರೆ ಈ ರೀತಿ ತನ್ಮಯರಾಗಿ ಕುಣಿಯುತ್ತಾರೆ. ಪ್ರೇಕ್ಷಕರಿಗೆ ರಸದೌತಣ ನೀಡುತ್ತಾರೆ.


ಆದರೆ ಅವಕಾಶವಿಲ್ಲದವರು ಶೇಷಾದ್ರಿಪುರಂ ಕಾಲೇಜಿನ ಎದುರು ಮದ್ಯರಸ್ತೆಯಲ್ಲಿ ಹುಡುಗ ಹುಡುಗಿರ ಮುಂದೆ ಹೊಟ್ಟೆ ಪಾಡಿಗೆ ಇದೇ ಸೋಮನ ವೇಷವನ್ನು ಧರಿಸಿ ಕೈಯಲ್ಲಿರುವ ಚಾಟಿಯಿಂದ ನೆಲಕೊಮ್ಮೆ, ಮತ್ತು ತಮ್ಮ ಮೈ ಮೇಲೊಮ್ಮೆ ಬಾರಿಸಿಕೊಳ್ಳುತ್ತಾ, ದೇಹ ದಂಡಿಸಿ ದೇವರ ಹೆಸರಿನಲ್ಲಿ ಬಿಕ್ಷೆ ಬೇಡುತ್ತಾರೆ..........


ಗುಜರಾತಿನ ಜನಪದ ಟೋಪಿಗಳು.


ಗರ್ಭಾ ನೃತ್ಯ ಗುಜರಾತಿನ ಬುಡಕಟ್ಟು ಜನಾಂಗದ ಒಂದು ಜಾನಪದ ಕಲೆ.


ಈಗ ಆ ರಾಜ್ಯವಲ್ಲದೇ ಗುಜರಾತಿ ಭಾಂಧವರು ದೇಶದ ಉದ್ದಗಲಕ್ಕೂ ನೆಲೆಸಿರುವುದರಿಂದ ಈ ಕಲೆ ಬೆಂಗಳೂರು ಮುಂಬೈ, ಇನ್ನಿತರ ಸ್ಥಳಗಳಲ್ಲಿ....... ಆಗಾಗ ನಡೆಯುತ್ತಿರುತ್ತದೆ. ನವರಾತ್ರಿ ಸಮಯದಲ್ಲಿ ದೊಡ್ಡ ಉತ್ಸವಗಳಾಗಿ ಮಾರ್ಪಟ್ಟಿವೆ....................................


ಕಂಸಾಳೆಯವರ ಜಾನಪದ ಟೋಪಿ.


ಮಲೈ ಮಾದೇಶ್ವರ ದೇವರನ್ನು ಹಾಡಿ ಹೊಗಳಿ ಕುಣಿದಾಡಲು ಕೊಳ್ಳೆಗಾಲ, ಮಳವಳ್ಳಿ, ಅದರ ಸುತ್ತಮುತ್ತಲಿನ ಜಾನಪದ ಕಲಾವಿದರಿಗೆ ಕಂಸಾಳೆ ನೃತ್ಯವೇ ಬೇಕು.


ಪ್ರತಿ ಹಾಡಿನಲ್ಲೂ " ಸಿದ್ದಯ್ಯ ಸ್ವಾಮಿ ಬನ್ನಿ" ಎನ್ನುತ್ತಾ ಕೈಯಲ್ಲಿ ಕಂಚಿನ ಕಂಸಾಳೆ ತಾಳವನ್ನು ಹಿಡಿದು ಕುಣಿಯುವ ಇವರ ಸಮೂಹ ನೃತ್ಯವೂ ನೋಡುಗನ ಮೈ ಮನಸ್ಸು ರೋಮಾಂಚನಗೊಳಿಸುತ್ತದೆ. ಅದಕ್ಕೆ ತಕ್ಕಂತೆ ಅದ್ಭುತ ತಾಳ, ರಾಗಸಂಯೋಜನೆಯ ಹಾಡು ನೋಡುತ್ತಾ...... ನೋಡುತ್ತಾ..... ಪ್ರೇಕ್ಷಕನೂ ಕುಣಿಯವಂತೆ ಪ್ರೇರೇಪಿಸುತ್ತದೆ ರೋಮಾಂಚನಗೊಳಿಸುತ್ತದೆ...........

ಮುತ್ತಪ್ಪನ್ ದೇವರ ಟೋಪಿ.


ಇದು ದೇವರ ವಿಚಾರವಾದ್ದರಿಂದ, ದೇವರ ತಲೆಯ ಮೇಲಿನ ಕಿರೀಟವನ್ನು ಟೋಪಿ ಅನ್ನುತ್ತಿರುವುದಕ್ಕೆ ಮೊದಲೇ ಕ್ಷಮೆ ಕೇಳಿಬಿಡುತ್ತೇನೆ. ಕೇರಳದ ಕಣ್ಣೂರಿನಲ್ಲಿರುವ ಮುತ್ತಪ್ಪನ್ ಬಡವರ ದೇವರಂತೆ. ಅಲ್ಲಿಗೆ ಹೋಗಲಿಕ್ಕಾಗದ ಸ್ಥಳೀಯಾ ಮಲೆಯಾಳಿ ಭಾಂದವರು ಯಶವಂತಪುರದಲ್ಲಿ ನಡೆಯುವ ಉತ್ಸವದಲ್ಲಿ ಸೇರುತ್ತಾರೆ.

ಅಲ್ಲಿನ ಪೂಜಾರಿಗಳು ಇಲ್ಲಿಗೆ ಬಂದು ಅರಿಸಿನ, ಕುಂಕುಮ, ವಿಭೂತಿ ಬಳಸಿ ದೇಹಕ್ಕೆ ಅವರದೇ ಆದ ಆಲಂಕಾರ, ವೇಷ ಭೂಷಣ, ಮತ್ತು ತಲೆಗೆ ವಿಶಿಷ್ಟವಾದ ಎಲೆ, ಹೂವು, ಗರಿಕೆ, ಇತ್ಯಾದಿಗಳನ್ನು ಬಳಸಿ ಸ್ವತಹ: ಅಲ್ಲೇ ತಯಾರಿಸಿದ ಕಿರೀಟ[ಟೋಪಿ]ವನ್ನು ತಲೆಗೆ ಧರಿಸಿಧರೆ ಮುತ್ತಪ್ಪನ್ ದೇವರು ಧರಿಸಿದವರ ಮೇಲೆ ಆವಾಹನೆಯಾಗುತ್ತಾನೆ ಎನ್ನುವ ನಂಬಿಕೆ..............
ಡೊಳ್ಳು ಕುಣಿತಗಾರರು


ಡೊಳ್ಳು ವಾದ್ಯ ಗಾರರ ಟೋಪಿಯನ್ನು ನಾನು ಹಿಂದಿನ ೪ನೇ ಟೋಪಿ ಸರಣಿಯಲ್ಲಿ ಹಾಕಿದ್ದೇನೆ. ಜಾನಪದ ಕಲೆಯ ಗಂಡುವಾದ್ಯವೆಂದೇ ಪ್ರಖ್ಯಾತವಾದ ಡೊಳ್ಳುವಾದ್ಯವನ್ನು ಸಾಗರದ ಜಾನಪದ ಕಲಾವಿದರು ಪ್ರದರ್ಶಿಸುತ್ತಾರೆ. ಡೊಡ್ಡ ಹೆಜ್ಜೆ ಹಾಕಿ ಆತ್ಮವಿಶ್ವಾಸದಿಂದ ಕುಣಿಯುತ್ತಾ, ಡೊಳ್ಳು ಭಾರಿಸುವುದನ್ನು ನೋಡುತ್ತಿದ್ದರೆ ಮೈ ಜುಮ್ಮೆನ್ನುತ್ತದೆ........ಡೊಳ್ಳು ವಾದ್ಯವನ್ನು ರಾಜ್ಯದ ನಾನಾ ಭಾಗದ ಜನಪದ ಕಲಾವಿದರು ಅವರದೇ ಆದ ಶೈಲಿಯಲ್ಲಿ ಪ್ರದರ್ಶಿಸುತ್ತಾರೆ................


ದಂಗೆಯ ಮುಂಚಿನ ದಿನಗಳಲ್ಲಿ ಬ್ರಿಟೀಷರ ಆಡಳಿತ ಕಾಲದಲ್ಲಿನ ಟೋಪಿಗಳನ್ನು ಫೋಟೊ ತೆಗೆಯುವ ಅವಕಾಶ ಸಿಕ್ಕಿತ್ತು...........

ರಾಜ, ಆಸ್ಥಾನ ಕವಿಗಳ ಟೋಪಿಗಳು....
ನಾಗರೀಕ, ಪರಂಗಿ ಆಡಳಿತಗಾರ, ಪರಂಗಿ ಸೈನಿಕನ ಟೋಪಿಗಳು.

ಪ್ರಮೋದ್ ಸಿಗ್ಗಾವಿ ನಿರ್ಧೇಶನ, ರಾಘವೇಂದ್ರರವರ ಹಿತಮಿತ ಬೆಳಕಿನ ಸಂಯೋಜನೆಯ ಈ ನಾಟಕ ರಂಗಶಂಕರದಲ್ಲಿ ನಡೆದಿತ್ತು.


೧೯೫೭ರ ದಂಗೆಯ ಮುಂಚಿನ ದಿನಗಳಲ್ಲಿ ಲಕ್ನೋ ನಗರದ ಮೀರ್ ಕಾಸಿಂ ಕಾಲದಲ್ಲಿ ಇದ್ದ ಪರಿಸ್ಥಿತಿಯ ಚಿತ್ರಣವನ್ನು ಈ ನಾಟಕ ತಿಳಿಹಾಸ್ಯ ಧಾಟಿಯಲ್ಲಿ ನೋಡಿಸಿಕೊಂಡು ಹೋಗುತ್ತದೆ.


ಆಗಿನ ಕಾಲದ ಸೈನಿಕರು, ರಾಜರು, ಅವರ ಆಸ್ಥಾನ ಕವಿಗಳು, ನಾಗರೀಕರು, ಪರಂಗಿ ಜನರ ಟೋಪಿಗಳನ್ನು ಒಂದು ನಾಟಕದಲ್ಲಿ ಕ್ಲಿಕ್ಕಿಸಿದ್ದೆ............


[ರಾಯಚೂರಿನ ಕಣಿಹಲಗೆ ಕಲಾವಿದರು, ಉತ್ತರ ಕನ್ನಡದ ಹಾಲಕ್ಕಿ ಜಾನಪದ ಕಲಾವಿದರು ಅವರ ಟೋಪಿಗಳನ್ನು ಇನ್ನಿತರರನ್ನು ಮುಂದೆಂದಾದರು ತೋರಿಸುತ್ತೇನೆ].
ಮುಂದಿನ ಬಾರಿ ಮತ್ತಷ್ಟು ವೈವಿಧ್ಯಮಯ ಟೋಪಿಗಳು...........
ಚಿತ್ರ ಮತ್ತು ಲೇಖನ.......

ಶಿವು.

70 comments:

Lakshmi S said...

ತುಂಬಾ ಮಾಹಿತಿಯುಕ್ತವಾಗಿದೆ. ಇಷ್ಟ ಆಯ್ತು.ಹೀಗೆ ಬರೆಯಲು ನಿಮಗೆ ತಾಕೀತು ಮಾಡಿದ ನಿಮ್ಮ ಸ್ನೇಹಿತರಿಗೆ ಧನ್ಯವಾದ ಹೇಳಿಬಿಡಿ.

ಚಿತ್ರಾ said...

ಪರವಾಗಿಲ್ಲ ಶಿವೂ ,

’ ಟೋಪಿ ಬೇಕೆ ಟೋಪಿ ? ಚೆಂದದ ಟೋಪಿ .. " ಎನ್ನುತ್ತಾ ಒಳ್ಳೊಳ್ಳೇ ಟೋಪಿಗಳನ್ನೇ ಹಾಕ್ತಿದೀರಾ !

ಒಳ್ಳೆ ಕಲೆಕ್ಷನ್ !

ಮನಸು said...

ಬಹಳ ಚೆನ್ನಾಗಿದೆ..

ಆ ಒಂದೊಂದು ಟೋಪಿಗಳಿಗೊ ಅದರದೇ ಆದ ವಿಶೇಷತೆ ಇದೆ... ಹನುಮಂತನ ಹಾರಾಟ ತುಂಬ ಹಿಡಿಸಿತು...

ಮತ್ತಷ್ಟು ಟೋಪಿಗಳ ವೀಕ್ಷಣೆಗೆ ಕಾಯುತ್ತಲಿರುತ್ತೇವೆ...

ಧನ್ಯವಾದಗಳು...

shivu said...

ಲಕ್ಷ್ಮಿ ಮೇಡಮ್,

ಟೋಪಿ ಹಾಕಿಕೊಂಡಿದ್ದಕ್ಕೆ ಥ್ಯಾಂಕ್ಸ್....ನಿಮ್ಮ ಧನ್ಯವಾದವನ್ನು ಪಡೆದುಕೊಂಡಿದ್ದಾನೆ...ಅವನಲ್ಲಿ ನೋಡುತ್ತಿರುತ್ತಾನೆ..

shivu said...

ಚಿತ್ರಾ ಮೇಡಮ್,

ಇನ್ನೂ ಇದೆ ಮೇಡಮ್, ಮುಂದೆಯೂ ಇವೆ "ಚೆಂದದ ಟೋಪಿಗಳು" ನಿಮ್ಮ ಹೊಸ ಚಿಕ್ಕ ಸೊಗಸಾದ ಲೇಖನ ಓದಿದೆ....ಮನಸ್ಪರ್ಶಿಯಾಗಿತ್ತು....ಹೀಗೆ ಬರುತ್ತಿರಿ....

shivu said...

ಮನಸು,

ಹನುಮಂತನನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಕಂಸಾಳೆ ಕಲಾವಿದ ಮೇಲಿನಿಂದ ನೆಗೆಯುವ ಫೋಟೊ...ನಾಟಕದ ಫೋಟೊಗಳು ಇಷ್ಟವಾಗಲಿಲ್ವ ? ಅವುಗಳನ್ನು ಕಾಯ್ದು ಕಷ್ಟಪಟ್ಟು ಕ್ಲಿಕ್ಕಿಸಿದ್ದೆ.. ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ಟೋಪಿಗಳು ಖಂಡಿತ ಬರುತ್ತವೆ......

srinivas said...

ವೈವಿಧ್ಯಮಯ ಟೋಪಿಗಳನ್ನು ನೋಡಿದ್ರೂ, ಇಷ್ಟೊಂದು ವಿಧಗಳಿವೆ ಎಂದು ಅರಿವಿಗೇ ಬಂದಿರಲಿಲ್ಲ :o
ನಿಮ್ಮ ಸಂಗ್ರಹ ಬಹಳ ಸೊಗಸಾಗಿದೆ :) - ಈ ಸಂಗ್ರಹಯೋಗ್ಯ ಚಿತ್ರಗಳನ್ನು ನನಗೆ ಅಂಚೆಯ ಮೂಲಕ ರವಾನಿಸಲಾಗುವುದೇ?

Anonymous said...

ಅರೇ!

ಇನ್ನೂ ಎಷ್ಟಿವೆ ನಿಮ್ಮ ಬತ್ತಳಿಕೆಯಲಿ??

ಇದನ್ನೆಲ್ಲಾ ಸೇರಿಸಿ ಪುಸ್ತಕ ಮಾಡಿದ್ರೆ ಹ್ಯಾಗೆ?

- ರಂಜಿತ್

ಜ್ಯೋತಿ said...

ಶಿವೂ ಸರ್,

ಟೋಪಿಗಳು ಚೆನ್ನಾಗಿವೆ :-)
ಇನ್ನೂ ಎಷ್ಟ್ ಟೋಪಿ ಹಾಕ್ತೀರಾ? :-P

shivu said...

ಶ್ರೀನಿವಾಸ್ ಸರ್,

ತುಂಬಾ ದಿನಗಳಾದ ಮೇಲೆ ಮತ್ತೆ ನನ್ನ ಬ್ಲಾಗಿಗೆ ಸ್ವಾಗತ...ಕ್ಯಾಮೆರಾ ಹಿಡಿದು ಟೋಪಿಗಳ ಹಿಂದೆ ಬಿದ್ದಿದ್ದಕ್ಕೆ ನನ್ನಲ್ಲಿ ಇನ್ನೂ ಸ್ಟಾಕ್ ಇವೆ......ನಾನು ತಮಾಷೆಗಾಗಿ ಮಾಡುತ್ತಿರುವ ಈ ಟೋಪಿಗಳು ನಿಮಗೆ ಸಂಗ್ರಹ ಯೋಗ್ಯವೆನಿಸಿದ್ದು ನನಗೆ ಖುಷಿಯಾಗಿದೆ...ಥ್ಯಾಂಕ್ಸ್.....

ನಾನು ಇದುವರೆಗೆ ಬ್ಲಾಗಿನಲ್ಲಿ ಹಾಕಿದ ಟೋಪಿಗಳನ್ನು ಕಡಿಮೆ ರೆಶಲ್ಯೂಷನ್ ಮಾಡಿ ಕಳುಹಿಸುತ್ತೇನೆ. ನಿಮ್ಮ ವಿಳಾಸವನ್ನು ಕೊಡಿ..

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್..

ಟೋಪಿಗಳೂ..

ಅದರ ಮಾಹಿತಿಗಳೂ ಅಪೂರ್ವವಾಗಿದೆ..

ಕೆಲವು ಫೋಟೊಗಳಂತೂ ಸೂಪರ್..

ಕಂಸಾಳೆಯ ಫೋಟೊ ನೋಡಿ ರೋಮಾಂಚನವಾಯಿತು..

ನಿಮ್ಮ ತಾಳ್ಮೆ, ಶ್ರದ್ಧೆಗೊಂದು..

ನನ್ನ ಸಲಾಮ್...

ಉತ್ತಮ ಬರಹ, ಫೋಟೊಗಳೊಂದಿಗೆ...

ನಮ್ಮನ್ನು ರಂಜಿಸಿದ್ದಕ್ಕೆ..

ವಂದನೆಗಳು...

shivu said...

ರಂಜಿತ್ ಸರ್,

ಇನ್ನೂ ತುಂಬಾ ಇವೆ..ಮತ್ತೊಂದು ದಿಕ್ಕಿನಲ್ಲಿ ಭೂಪಟಗಳು ಶೇಕರವಾಗುತ್ತಿವೆ.....ನಿಮ್ಮ ಐಡಿಯಾ ಚೆನ್ನಾಗಿದೆ ಥ್ಯಾಂಕ್ಸ್...ನಿಮ್ಮಂತೆ ಯಾರಾದರೂ ಪ್ರಕಾಶಕರು ಯೋಚಿಸಿದರೆ !! ಖಂಡಿತ ಆ ಕೆಲಸವಾಗುತ್ತದೆ...ಥ್ಯಾಂಕ್ಸ್...

shivu said...

ಜ್ಯೋತಿ ಮೇಡಮ್,

ಇನ್ನೂ ಕನಿಷ್ಟ ಐದಾರು ಬಾರಿಯಾದರು ನನ್ನ ಬ್ಲಾಗಿನಲ್ಲಿ ಟೋಪಿಗಳು ಬರುತ್ತವೆ. ಪ್ರತಿಬಾರಿಯೂ ಹಾಕುವ ೧೨-೧೫ ಟೋಪಿಗಳಲ್ಲಿ ನಿಮಗಿಷ್ಟ ಬಂದ ಟೋಪಿ ಹಾಕಿಕೊಳ್ಳಬಹುದು...enjoy ಮಾಡಬಹುದು...ಹೀಗೆ ಬರುತ್ತಿರಿ...ಥ್ಯಾಂಕ್ಸ್....

shivu said...

ಪ್ರಕಾಶ್ ಸರ್,

ಕಂಸಾಳೆ ಫೋಟೊ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....

ಇಡಿ ಕಾರ್ಯಕ್ರಮದಲ್ಲಿ ಈ ಸನ್ನಿ ವೇಶ ನಡೆಯುವುದು... ಫೋಟೊಗೆ ಸಿಗುವುದು ಕೇವಲ ಐದೇ ಸೆಕೆಂಡ್ ಆಷ್ಟೇ.....ಅದಕ್ಕೆ ಮೊದಲನೆ ಸಲ ಆ ಫೋಟೊ ತೆಗೆಯಲು ವಿಫಲನಾಗಿದ್ದೆ.....ಇನ್ನೊಂದು ಕಡೆ ಇದೇ ತಂಡದವರ ಕಾರ್ಯಕ್ರಮ ನಡೆಯುವುದು ಗೊತ್ತಾಗಿ ಅಲ್ಲಿ ಹೋಗಿ ಕಾಯ್ದುಕೊಂಡಿದ್ದು ಕ್ಲಿಕ್ಕಿಸಿದ್ದರ ಪ್ರತಿಫಲ ಈ ಫೋಟೊ..

ಮಲ್ಲಿಕಾರ್ಜುನ.ಡಿ.ಜಿ. said...

ಶಿವು, ಟೋಪಿ ನೆಪದಲ್ಲಿ ಅದ್ಭುತವಾದ ಫ್ರೇಮ್ ಗಳನ್ನೇ ಕೊಟ್ಟಿದ್ದೀರಿ. ಅಷ್ಟೇ ಅಲ್ಲ ಅವುಗಳ ಬಗ್ಗೆ ಮಾಹಿತಿ ಕೂಡ ಕೊಟ್ಟಿರುವುದರಿಂದ, ಮನರಂಜನೆ ಮತ್ತು ಮಾಹಿತಿ ಒಂದೇ ಪ್ಯಾಕೇಜ್ ನಲ್ಲಿ ಸೇರಿದೆ. ನಿಮ್ಮ ಶ್ರಮ ಎದ್ದುಕಾಣುತ್ತಿದೆ. ಉತ್ಸಾಹ ಸದಾಇರಲಿ.

shivu said...

ಮಲ್ಲಿಕಾರ್ಜುನ್,

ಟೋಪಿಗಳ ಜೊತೆಗೆ ಫ್ರೇಮುಗಳನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್..ಇತ್ತೀಚೆಗೆ ಎಲ್ಲದರಲ್ಲೂ ಪ್ಯಾಕೇಜ್ ಕೊಡುವುದು ಅಭ್ಯಾಸವಾಗಿ ಹೋಗಿದೆ....ಥ್ಯಾಂಕ್ಸ್....

Gurus world said...

ಹಾಯ್ ಶಿವೂ,,,
once again, nice ಟೋಪಿ collections ..... ಟೋಪಿ ಮೇಲಿನ ಹುಚ್ಚು ಅಥವಾ ಹೆಚ್ಚೂ ವ್ಯಾಮೋಹನ ಅಥವಾ ಎಲ್ಲರಿಗೂ ಟೋಪಿ ಹಾಕಬೇಕೆನ್ನುವ ಅಸೇನೋ ಗೊತ್ತಿಲ್ಲ .... ಅದರ ನಿಮ್ಮ ಇ ಟೋಪಿ ಚಿತ್ರಗಳು ಹಾಗು ಅದರಬಗ್ಗೆ ಉಪಯುಕ್ತ ಮಾಹಿತಿಗಳು ತುಂಬ ಚೆನ್ನಾಗಿ ಇದೆ.. ಗುಡ್ ಶಿವೂ....
ಇನ್ನು ತರಹ ತರಹದ ಟೋಪಿ ಹಾಕಿಸಿಕೊಳ್ಳೋದಕ್ಕೆ ನಾವಂತು ರೆಡಿ ...... ನೋಡೋಣ ನಮ್ಮ ಶಿವೂ ಇನ್ನು ಎಷ್ಟು ಜನರಿಗೆ ಎಷ್ಟು ತರಹದ ಟೋಪಿ ಹಾಕ್ತಾರೋ ಅಂಥ.....
:-)
ಅಂದಹಾಗೆ ನನ್ನ ಬ್ಲಾಗಿಗೆ ಬಂದು ನನ್ನನ್ನು ವಿಚಾರಿಸಿ ಕೊಂಡು ಹೊಗಿದಕ್ಕೆ ಧನ್ಯವಾದಗಳು....
ಗುರು

Prabhuraj Moogi said...

ಪರಂಗಿಗಳ ಟೊಪಿ ಬಹಳ ಚೆನ್ನಾಗಿದ್ದವು... ಎಷ್ಟಾದರೂ ಅವರು ನಮಗೆ ಟೊಪಿ ಹಾಕಿದವರಲ್ಲವೇ, ಟೊಪಿಗಳ ನಿಸ್ಸಿಮರು... ಹೀಗೆ ಟೊಪಿ ಹಾಕುತ್ತಿರಿ... ನಮಗಲ್ಲ... ಬ್ಲಾಗಿಗೆ

shivu said...

ಹಾಯ್ ಗುರು,

ಟೋಪಿ ವಿಚಾರ ಒಂದೇ ಅಲ್ಲ. ನನಗೆ ಅನೇಕ ವಿಚಾರಗಳಲ್ಲಿ ಹೀಗೆ....ಅದನ್ನು ನೀವು ಹುಚ್ಚು ಅನ್ನಿ...ವ್ಯಾಮೋಹವೆನ್ನಿ...ಎಲ್ಲಾ ಒಂದೆ....ಟೋಪಿ ಜೊತೆ ಮಾಹಿತಿಯನ್ನು ಮೆಚ್ಚಿದ್ದೀರಿ...ಥ್ಯಾಂಕ್ಸ್...

ಇನ್ನೂ ಸಾಕಷ್ಟು ಸರಣಿ ಟೋಪಿಗಳಿವೆ...ಕಾಯುತ್ತಿರಿ....
ಮತ್ತೆ ನಿಮ್ಮ ಬ್ಲಾಗಿನಲ್ಲಿರುವ ಹೊಸ ಕ್ರಿಯೇಟೀವ್ ಫೋಟೋಗಳಂತೂ ಅದ್ಭುತ....ಇನ್ನಷ್ಟು ಅವುಗಳನ್ನು ಕೊಡಿ.....ಥ್ಯಾಂಕ್ಸ್..

shivu said...

ಪ್ರಭು,

ಟೋಪಿ ಹಾಕಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್....ಇನ್ನೂ ಇವೆ...ಹೀಗೆ ಬರುತ್ತಿರಿ....

ಪಾಲಚಂದ್ರ said...

ಶಿವು,
ನಿಮ್ಮ ಟೋಪಿಯ ಬಗ್ಗಿನ ಹೊಸ ಪ್ರಯೋಗ ತುಂಬಾ ಸ್ವಾರಸ್ಯಕರವಾಗಿದೆ. ಚಿತ್ರಗಳು ಸುಂದರವಾಗಿವೆ, ಅದಕ್ಕೆ ಪೂರಕವಾಗಿ ಕೊಟ್ಟ ಮಾಹಿತಿ ಇನ್ನೂ ಸೊಗಸಾಗಿದೆ. ದೇಶದ ವಿವಿಧ ಜಾನಪಿದ ಕಲಾವಿದರ ಕಿರುನೋಟ ಈ ಮೂಲಕ ಒದಗಿಸುತ್ತಿರುವ ನಿಮ್ಮ ಪ್ರಯತ್ನ ಹೀಗೇ ಮುಂದುವರೆಯಲಿ. ವಂದನೆಗಳು
--
ಪಾಲ

PARAANJAPE K.N. said...

ಶಿವಣ್ಣ,
ತರಹೇವಾರಿ ಟೋಪಿಗಳು ಮತ್ತು ಅದಕ್ಕೆ ಹೊ೦ದುವ ಬರವಣಿಗೆ ಚೆನ್ನಾಗಿದೆ.ಮು೦ದುವರಿಯಲಿ. ಅ೦ದ ಹಾಗೆ ನಿಮಗ್ಯಾರು ಟೋಪಿ ಹಾಕಿಲ್ವೇ ??
paraanjape@gmail.com

ಚಿತ್ರಾ ಕರ್ಕೇರಾ said...

ಶಿವಣ್ಣ..
ನಿಮ್ ಆಸಕ್ತಿ, ತಾಳ್ಮೆ ಮೆಚ್ಚಲೇಬೇಕು..ಮತ್ತೆ ಟೋಪಿ ಹಾಕಕೆ ಹೊರಟಿದ್ದೀರಲ್ಲಾ? ಮೊನ್ನೆ ಒಂದು ಸಲ ಫೋನ್ ಮಾಡುವಾಗ , "ಟೋಪಿ ಹುಡುಕಾಕೆ ಹೋಗ್ತಾ ಇದ್ದೀನಿ ಮರಿ" ಅಂದ್ರಲ್ಲಾ..ಅವತ್ತು ಭಾರಿ ಖುಷಿಯಾಯಿತು. ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಇಂಥ ನಿಮ್ ಆಸಕ್ತಿಗಳಲ್ಲಿ ತೊಡಗಿಸಿಕೊಳ್ಳುವ ಪರಿ ಇದೆಯಲ್ಲಾ..ಎಲ್ಲರಿಗೂ ಬರಲ್ಲ. ಗ್ರೇಟ್..ಅಭಿನಂದನೆಗಳು. ಮುಂದೊಂದು ದಿನ ನೀವು ಸಂಗ್ರಹಿಸಿರುವ ವಿವಿಧ ಮಾದರಿಯ ಟೋಪಿಗಳು ಪುಸ್ತಕ ರೂಪದಲ್ಲಿ ನಮಗೆ ಸಿಗುವಂತಾಗಲೀ. ನನ್ ಕಡೆಯಿಂದ ಶುಭಹಾರೈಕೆಗಳಣ್ಣ..
-ಚಿತ್ರಾ

ಸುಧೇಶ್ ಶೆಟ್ಟಿ said...

ಅಬ್ಬಾ ಎಷ್ಟು ಟೋಪಿಗಳು!
ಈ ಸರ್ತಿಯ ಟೋಪಿ ಸರಣಿ ತು೦ಬಾ ವಿಶೇಷವಾಗಿದೆ ಮತ್ತು ಮಾಹಿತಿ ಪೂರ್ಣವಾಗಿದೆ.

ತು೦ಬಾ ಖುಷಿಯಾಯಿತು ಓದಿ ಮತ್ತು ಇಷ್ಟವಾಯಿತು.

ನಾಟಿ ಮಾಡುವಾಗ ನಮ್ಮೂರಿನಲ್ಲಿ ಅಡಿಕೆ ಹಾಳೆಯಿ೦ದ ಮಾಡಿದ ಟೊಪ್ಪಿ ಹಾಕಿಕೊಳ್ಳುತ್ತಾರೆ. ನೀವು ಈ ಮೊದಲು ಆ ಟೋಪಿಯನ್ನು ಹಾಕಿದ್ದೀರೋ ಇಲ್ಲವೋ ತಿಳಿಯದು.

ಮನಸ್ವಿ said...

ಅಬ್ಬಾ... ಅದೆಷ್ಟು ಟೋಪಿಗಳ ಪೋಟೋ ಇದೇರಿ ಇನ್ನೂ.......... ಮಾಹಿತಿ ಕಲೆಹಾಕಿದ ನಿಮ್ಮ ತಾಳ್ಮೆ ಮೆಚ್ಚಿದೆ, ಅಂದಹಾಗೆ ಹನುಮಂತ ದರಿಸಿದ್ದು ಟೋಪಿಯೋ ಕಿರೀಟವೋ ಗೊತ್ತಾಗಲಿಲ್ಲ, ಪೋಟೋ ಮೇಲೆ ಕ್ಲಿಕ್ಕಿಸಿದರೆ ಪೋಟೋ ದೊಡ್ಡದಾಗಿ ಕಾಣುತ್ತಿಲ್ಲ :( ..

ಟೋಪಿ ಎನ್ನುವುದರ ಬದಲು ತಲೆಗೆ ಹಾಕಿಕೊಳ್ಳುವ ಅಥವಾ ಸುತ್ತಿಕೊಳ್ಳುವ ಎಂದು ಅರ್ಥಕೊಡುವ ಪೇಟ ಎನ್ನುವ ಪದ ಪ್ರಯೋಗ ಕೂಡ ಅಪ್ಯಾಯಮಾನವೆನಿಸುತ್ತದೆ, ಚಿತ್ರದಲ್ಲಿರುವ ಹಗಲು ವೇಷದ ವಾದ್ಯಗಾರರ ತಂಡ ಹಾಗು ಸೋಮನ ಕುಣಿತದವರು,ಕಂಸಾಳೆ ತಂಡದವರಂತೆ ಅತಿ ಹೆಚ್ಚಿನ ಜನಪದ ತಂಡಗಳು ರುಮಾಲು(ಬಟ್ಟೆಯ)ನ್ನು ತಲೆಗೆ ಸುತ್ತಿಕೊಂಡಿದ್ದಾರೆ ಅದನ್ನು ಪೇಟ, ಮುಂಡಾಸು ಎಂದೂ ಕರೆಯಬಹುದಾಗಿದೆ, ಚಿತ್ರ ಮಾಹಿತಿ ಇಷ್ಟವಾಯಿತು, ಇನ್ನಷ್ಟು ಟೋಪಿಗಳ ನಿರೀಕ್ಷೆಯಲ್ಲಿದ್ದೇನೆ.... :)

ಸಂತೋಷ್ ಚಿದಂಬರ್ said...

ನಿಜಕ್ಕೂ ಇಲ್ಲ ಟೋಪಿಗಳು ಚೆನ್ನಾಗಿದೆ ಸಾರ್ ..
ಪ್ರತಿಯೊಂದು ಫೋಟೋಗಳು ತುಂಬ ಚೆನ್ನಾಗಿದೆ

ಸುನಿಲ್ ಮಲ್ಲೇನಹಳ್ಳಿ / Sunil Mallenahalli said...

Shivu Avare..
nivu haakiruva bhavachitragalu tumba sogasaagive..adara maahiti kooda..

hige baritiri..

nimma
Sunil

ಜ್ಞಾನಮೂರ್ತಿ said...

ನಮಸ್ಕಾರ ಶಿವೂ ಸರ್,

ನಾನು ನಿಮ್ಮ ಬ್ಲಾಗಿಗೆ ಹೊಸಬ, ಈಗೆ ಆಡ್ಡಾಡ್ಕೊಂಡು ಬಂದೆ, ನಿಮ್ಮ ಬ್ಲಾಗ್ ತುಂಬಾ ಇಷ್ಟವಾಯಿತು ಸರ್ , ನಿಮ್ಮ ಈ ತರ ತರಹದ ಟೋಪಿಗಳ ಚಿತ್ರ ಮತ್ತು ಅವುಗಳ ಪೂರ್ಣ ಮಾಹಿತಿ ಸೂಪರ್.

shivu said...

ಪಾಲಚಂದ್ರ,

ಟೋಪಿಗಳ ಜೊತೆಗೆ ಸ್ವಲ್ಪ ಮಾಹಿತಿಯನ್ನು ಕೊಡಬೇಕೆನ್ನಿಸಿತು.. ಫೋಟೊ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu said...

ಪರಂಜಪೆ ಸರ್,

ಟೋಪಿ ಮತ್ತು ಬರವಣಿಗೆ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ನನಗೆ ಟೋಪಿ ಯಾರು ಹಾಕಿಲ್ಲ...ಅದ್ರೆ ನಾನು ಬೆಳಿಗ್ಗೆ ಸಮಯದಲ್ಲಿ ದಿನಪತ್ರಿಕೆ ವಿತರಣೆ ಸಮಯಕ್ಕೆ ಹೋಗುವಾಗ ಚಳಿ ಟೋಪಿ ಹಾಕಿಕೊಂಡಿರುತ್ತೀನಿ...
ಚಳಿ ಟೋಪಿ ಯಾವುದು ಅಂತ ತಿಳಿಯಲಿಕ್ಕೆ ಟೋಪಿಗಳ ಹಿಂದಿನ ಸರಣಿ ನೋಡಿ....

shivu said...

ಚಿತ್ರ ಮರಿ,

ಎಲ್ಲಾ ಕೆಲಸ ಬಿಟ್ಟು ಟೋಪಿ-ಭೂಪಟ ಹುಡುಕಿಕೊಂಡು ಹೋದ್ರೆ...ಹೇಮಾಶ್ರಿ ಮನೆಗೆ ಸೇರಿಸಲ್ಲ ಗೊತ್ತ...
ಪ್ರತಿದಿನ ಬೆಳಿಗ್ಗೆ ಹೊಟ್ಟೆಪಾಡಿಗೆ ದಿನಪತ್ರಿಕೆ ಕೆಲಸ ಮಾಡ್ತೀನಿ...ಮನೆ.ಮಠ..ಹೆಂಡತಿ...ಸಂಸಾರ...ಜೊತೆಗೆ ಇವುಗಳನ್ನು ಸಮಯ ಹೊಂದಿಸಿಕೊಂಡು ಮಾಡ್ತೀನಿ..
ಬರೀ ಭೂಪಟ-ಟೋಪಿ... ಹಿಂದೆ ಬಿದ್ದರೆ ನನ್ನ ತಲೆ ಪೂರ್ತಿ "ಭೂಪಟ"ವಾಗಿ ಅದನ್ನು ಮುಚ್ಚಿಕೊಳ್ಳಲು "ಟೋಪಿ" ಖಂಡಿತ ಹಾಕಿಕೊಳ್ಳಬೇಕಾಗುತ್ತದೆ...ನನ್ನ ತಾಳ್ಮೆ ಮತ್ತು ಆಸಕ್ತಿ ಮೆಚ್ಚಿದ್ದಕ್ಕೆ....ಥ್ಯಾಂಕ್ಸ್... ಪುಸ್ತಕದ ಬಗ್ಗೆ ನನಗೆ ಕನಸಿದೆ..ನೋಡೋಣ.. ...

shivu said...

ಸುಧೇಶ್,

ಈ ಸಲದ ಟೋಪಿ ಮತ್ತು ಮಾಹಿತಿಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

ನನ್ನ ಬಳಿ ಆಡಿಕೆ ಟೋಪಿಯ ಸಂಗ್ರಹವೂ ಇದೆ. ಗೆಳೆಯ ನಾಗೇಂದ್ರನ ಮನೆಗೆ ಕಾನ್ಸೂರಿನ ಹತ್ತಿರದ ಮತ್ಮರ್ಡುವಿಗೆ ಹೋದಾಗ ಸುಮ್ಮನೆ ತೆಗೆದಿದ್ದೆ. ಈಗ ಕೆಲಸಕ್ಕೆ ಬರುತ್ತಿದೆ..ಅದನ್ನು ಸಾಧ್ಯವಾದರೆ ಪರಿಸರ ಪ್ರೇಮಿಗಳ ಟೋಪಿಗಳ ಸರಣಿಯಲ್ಲಿ ಹಾಕುತ್ತೇನೆ....

shivu said...

ಮನಸ್ವಿಯವರೆ,

ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
ಹನುಮಂತನ ತಲೆಗೆ ಹಾಕಿರುವುದು ಟೋಪಿಯಲ್ಲ..ಕಿರೀಟ..ಹಗಲುವೇಷದಲ್ಲಿ ಟೋಪಿಹಾಕಿರುವವರು..ವಾದ್ಯದವರು...ಮಾಹಿತಿಗಾಗಿ ನಾಟಕದ[ಹನುಮಂತನಿರುವುದು]ಫೋಟೊ ಹಾಕಿದ್ದೇನೆ.
ಇನ್ನೂ ಸೋಮನ ಕುಣಿತ, ಕಂಸಾಳೆ...ಇತ್ಯಾದಿಗಳು ಹಾಕಿರುವುದು ನೀವು ಹೇಳಿದಂತೆ ಪೇಟ, ಅಥವ ಮುಂಡಾಸು ಅದರೂ ನಾನು ಈ ಟೋಪಿ ಸರಣಿಯ ಮೊದಲನೆಯದರಲ್ಲೇ ತಲೆ ಮೇಲೆ, ತಲೆಗೆ ಸುತ್ತಿರುವುದನ್ನೆಲ್ಲಾ ಟೋಪಿ ಅಂತ ಪರಿಗಣಿಸಬೇಕಾಗಿ ವಿನಂತಿಸಿದ್ದೇನೆ.....ತಮಾಷೆಯಾಗಿ ತಗೊಂಡರೆ enjoy ಮಾಡಬಹುದಲ್ವ ?

shivu said...

ಸಂತೋಷ್, ಸುನಿಲ್,

ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...

shivu said...

ಜ್ಞಾನಮೂರ್ತಿ ಸರ್,

ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.

ಟೋಪಿಗಳನ್ನು ಮತ್ತು ಅದರ ಮಾಹಿತಿಯನ್ನು ಮೆಚ್ಚಿದ್ದಕೆ ಥ್ಯಾಂಕ್ಸ್...

ಹೊಟ್ಟೆ ತುಂಬಾ ನಗಬೇಕೆಂದರೆ ನಡೆದಾಡುವ ಭೂಪಟಗಳನ್ನು ನೋಡಿ....ಸಾದ್ಯವಾದರೆ ನನ್ನ ಇತರ ಲೇಖನಗಳನ್ನು ಓದಿ ೧೦೦% ಖುಷಿ ಖಚಿತ....ಹೀಗೆ ಬರುತ್ತಿರಿ...

b.saleem said...

ಶಿವು ಸರ್
ಪ್ರತಿ ಬಾರಿ ನಿವು ಹಾಕಿದ ಟೊಪಿಗಿಂತ ಈ ಬಾರಿ ಹಾಕಿದ ಜಾನಪದ ಟೊಪಿ ಅದ್ಭುತವಾಗಿದೆ.ಪ್ರತಿ ಬಾರಿಯು ಟೊಪಿಯೊಂದಿಗೆ ಮಾಹಿತಿ ಬರುತಿರಲಿ.

ಮನಸ್ವಿ said...

ಶಿವು ಅವರೆ
ಗೊತ್ತಾಗಲಿಲ್ಲ ಕ್ಷಮಿಸಿ... ಹ್ಮ್.. ತಮಾಷೆಯಾಗಿ ತೆಗೆದುಕೊಂಡಿದ್ದೇನೆ, ಅಭಿನಂದನೆಗಳು ಮತ್ತೊಮ್ಮೆ.. ಹೀಗೆ ಟೋಪಿ ಹಾಕ್ತಾ ಇರಿ.

shivu said...

ಸಲೀಂ

ಎಂದಿನಂತೆ ಟೋಪಿ ಮೆಚ್ಚಿದ್ದೀರಿ....ಹಗಲುವೇಷದವರ ಹಂಪಿ ನಿಮ್ಮಊರಿಗೆ ಹತ್ತಿರವಲ್ಲವೇ...ಮುಂದಿನ ಬಾರಿಯೂ ನಿಮ್ಮ ನಿರೀಕ್ಷೆಯಂತೆ ಪ್ರಯತ್ನಿಸುತ್ತೇನೆ...

ಶಿವಪ್ರಕಾಶ್ said...
This comment has been removed by the author.
ಶಿವಪ್ರಕಾಶ್ said...

ಹಾಯ್ ಶಿವು
ಉತ್ತಮ ಛಾಯಚಿತ್ರ ಸಂಗ್ರಹ ಮತ್ತು ಮಾಹಿತಿ.
ಅಭಿನಂದನೆಗಳು.

shivu said...

ಮನಸ್ವಿಯವರೆ,

ಪರ್ವಾಗಿಲ್ಲ ಬಿಡಿ. ಅದಕ್ಕೆ ಕ್ಷಮೆ ಕೇಳುವ ಅಗತ್ಯವಿಲ್ಲ...ನಾನು ಏನು ತಪ್ಪಾಗಿ ತಿಳಿದುಕೊಳ್ಳಲಿಲ್ಲ..ನಾವೆಲ್ಲಾರೂ ಮಾಡುತ್ತಿರುವುದು ಸಂತೋಷ ತಮಾಷೆ ಎಲ್ಲವನ್ನು ಹಂಚಿಕೊಳ್ಳುವುದೇ ಅಲ್ಲವೇ...ಹೀಗೆ ಬರುತ್ತಿರಿ....ಥ್ಯಾಂಕ್ಸ್...

shivu said...

ಶಿವಪ್ರಕಾಶ್,

ಟೋಪಿ ನೋಡಲಿಕ್ಕೆ ಬಂದಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....

NiTiN Muttige said...

topi sankhye hechchuttide!!! tumba dhanyavada :)

Idelladara trade mark yaraddu!!! :)

ಅಂತರ್ವಾಣಿ said...

ಶಿವಣ್ಣ,
ಟೋಪಿ ಹಾಕುವುದರ ಜೊತೆಗೆ ಮಾಹಿತಿಯನ್ನೂ ಹಾಕಿದ್ದೀರ.
ವಂದನೆಗಳು

shivu said...

ನಿಥಿನ್,

ಇದೆಲ್ಲರದ ಟೇಡ್ ಮಾರ್ಕ್ ಯಾರು ಇಲ್ಲ. ನನಗೆ ಬಂದ ಐಡಿಯಾ ಇದು.....ಟೋಪಿಗಳು ಇದುವರೆಗೂ ಹಾಕಿರುವುದು...ಕೇವಲ ಅರ್ಧದಷ್ಟು ಮಾತ್ರ....ಇನ್ನೂ ಇವೆ....ಕಾಯುತ್ತಿರಿ......ಟೋಪಿ ಹಾಕಿಕೊಂಡಿದ್ದಕ್ಕೆ ಥ್ಯಾಂಕ್ಸ್....ಜಯಶಂಕರ್,

ಟೋಪಿ ಮತ್ತು ಮಾಹಿತಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

Anonymous said...

ಟೋಪಿ ಹಾಕೋದ್ರಲ್ಲಿ ನಿಸ್ಸೀಮರೌ ಕಣ್ರೀ ನೀವು! ;-) ;-D ;-) ;-D

Ashok Uchangi said...

ಚಿತ್ರಗಳು ಚಿತ್ತ
ಸೆಳೆದವು...
http://mysoremallige01.blogspot.com/

hEmAsHrEe said...

the topis are too good.
your creative eye is marvellous !

shivu said...

ಪ್ರದೀಪ್,

ಹಾಕಿಸಿಕೊಳ್ಳುವವರು ಇರುವಾಗ ನಾನ್ ಯಾವಾಗಲು ರೆಡಿ!

shivu said...

ಆಶೋಕ್,

ಟೋಪಿಗಳು, ಮತ್ತು ಅದರ ಮಾಹಿತಿಗಳು ಖಂಡಿತ ನಿಮ್ಮ ಚಿತ್ತ ಕೆಡಿಸುವುದಿಲ್ಲ.....ಚಿತ್ತ ಕೆಡಿಸುವ ಲೇಖನ ಮುಂದಿನ ವ್ಯಾಲೆಂಟೈನ್ಸ್ ಡೇ ಬರುತ್ತೆ ತಪ್ಪದೇ ಬನ್ನಿ....

shivu said...

ಹೇಮಾಶ್ರಿ ಮೇಡಮ್,

ಟೋಪಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಭಾರ್ಗವಿ said...

ಚಂದದ ಟೋಪಿಗಳಿಗೆ ಚಂದದ ವಿವರಣೆ.

ಹರೀಶ ಮಾಂಬಾಡಿ said...

ಟೋಪಿಯೂ, ಅದರೊಳಗಿನ ಮಂಡೆಯೂ ಭಾರೀ ಖುಷಿ ಕೊಟ್ಟಿತು...:)

PARAANJAPE K.N. said...

ಶಿವು ಅವರೆ...
ತ೦ಗೀ ನಿನಗೆ ಇದೋ ಒ೦ದು ಪತ್ರ ಎ೦ಬ ನಿಮ್ಮ ಭಾವುಕ ಬರಹ ಓದಿದೆ. ಸೋದರತ್ವದ ಭಾವನೆಯೇ ಒ೦ದು ಮಧುರ ಅನುಭೂತಿ ಅಲ್ಲವೇ ? ನಿಮ್ಮ ಬರಹದಲ್ಲಿನ ಆಪ್ತತೆ ಇಷ್ಟವಾಯಿತು. ನೀವು ಓದುವ೦ತೆ ಜ್ಞಾಪಿಸಿದ್ದಕ್ಕೆ thanks. ಚೆನ್ನಾಗಿದೆ.

ಕೆ. ರಾಘವ ಶರ್ಮ said...

ಒಳ್ಳೆ ಟೋಪಿ ಹಾಕ್ತೀರಿ ಮಾರ್ರೆ ನೀವು ..!! :) :)

shivu said...

ಭಾರ್ಗವಿ ಮೇಡಮ್, ಥ್ಯಾಂಕ್ಸ್....

ರಾಘವ ಶರ್ಮ, ಥ್ಯಾಂಕ್ಸ್.....

ಹರೀಶ್ ಮಾಂಬಾಡಿ,

ಟೋಪಿ ಜೊತೆಗೆ ತಲೆಯೊಳಗಿರುವುದನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್.....

shivu said...

ಪರಂಜಪೆ ಸರ್,

ನೀವು ನನ್ನ ಲೇಖನ ತಂಗಿ ಇದೋ ನಿನಗೊಂದು ಪತ್ರ ಲೇಖನವನ್ನು ಓದಿ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....

shreeshum said...

ಶಿವು

ಸೂಪರ್ ಕೆಲ್ಸ ಕಣ್ರಿ.
ನಿವ್ಯಾಕೆ ಈ ಟೋಪಿಯ ಕುರಿತು ಸುಧಾಕ್ಕೆ ತರಂಗಾಕ್ಕೆ ಬರೆಯಬಾರದು ಅಂತ. ಅದೆಲ್ಲಿಂದ ಸಂಗ್ರಹಿಸಿದಿರಿ ಅಷ್ಟೊಂದು ಫೋಟೋ.
ನೈಸ್ ವರ್ಕ್
ಟೋಪಿಲಿ ಇಷ್ಟೋಂದು ಬಗೆನಾ?

shivu said...

ಶ್ರೀ ಶಂ ಸರ್,

ಟೋಪಿಗಳನ್ನು ನೋಡಿದ್ದಕ್ಕೆ ಥ್ಯಾಂಕ್ಸ್.....
ನೀವು ಹೇಳಿದಂತೆ ನಾನು ತೆಗೆದ ಫೋಟೊ ಮತ್ತು ಲೇಖನಗಳನ್ನು ಸುಧಾ, ತರಂಗ ವಾರಪತ್ರಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದೆ....ಹಾಗೆ ಫೋಟೊಗ್ರಫಿಗೆ ಸಂಭಂದಿಸಿದಂತೆ ಬರೆಯಲು ಪ್ರೇರೆಪಿಸಿದ್ದೆ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರು...ಅವರು ಆಗ ಸುಧಾ ಸಂಪಾದಕರಾಗಿದ್ದರು. ಅವರ ನಂತರ ಮಂಜುಳ ಮೇಡಮ್‌ರವರು ಇದ್ದಾಗಲು ಇದೇ ಪ್ರೋತ್ಸಾಹ ನನ್ನನ್ನು ಸೇರಿದಂತೆ ಎಲ್ಲಾ[ನಾನು, ಮಲ್ಲಿಕಾರ್ಜುನ್, ನಾಗೇಂದ್ರ ಮತ್ಮರ್ಡು, ವಿನಾಯಕ್ ನಾಯಕ್, ಪ್ರಕಾಶ ಕಂದಕೋರ, ಇತ್ಯಾದಿ] ಯುವ ಬರಹಗಾರರಿಗೆ ಇತ್ತು. ಎಲ್ಲರೂ ಒಬ್ಬರಿಗಿಂತ ಒಬ್ಬರು ಆರೋಗ್ಯಪೂರ್ಣವಾದ ಸ್ಪರ್ಧೆ ಮತ್ತು ಸ್ಫೂರ್ತಿಯಿಂದ ಬರೆಯುತ್ತಿದ್ದೇವು ಮತ್ತು ಹಾಗೆ ಪ್ರಕಟವಾಗಿಯೂ ಇತ್ತು.....ಯಾವಾಗ ಇವರಿಬ್ಬರ ಸ್ಥಾನ ಬದಲಾಗಿ ಬೇರೆಯವರು ಬಂದರೋ ಅಲ್ಲಿಂದಾಚೆಗೆ ನಾವು ಕೊಟ್ಟ [ಈಗಲೂ ಕೊಡುತ್ತಿರುವ]ಫೋಟೊಗಳು, ಅದಕ್ಕೆ ಸಂಭಂದಪಟ್ಟ ಬರಹಗಳೆಲ್ಲಾ ಗೋಡೆಗೆಸೆದ ಬಾಲಿನಂತೆ ವಾಪಸು ಬರುತ್ತಿವೆ.[ನಾವು ಕೊಡುವ ಬರಹಗಳೆಲ್ಲಿ ಹೊಸತನವಿಲ್ಲ, ಸೃಜನಶೀಲತೆಯಿಲ್ಲವೆಂದು ಸಂಪಾದಕರು ಹೇಳಿದರು]..ಇನ್ನೂ ಕೆಲವು ಗಾಳಿ ಇಳಿದ ಬಲೂನಿನಂತೆ ಕ.ಬು ಸೇರುತ್ತಿವೆ...ಆಮೇಲೆ ನಾವೆಲ್ಲಾ ಈ ರೀತಿ ಬ್ಲಾಗಿಗೆ ಬಂದಿದ್ದು...
ಮತ್ತೊಂದು ವಿಚಾರ. ನಾನು ವೃತ್ತಿಯಲ್ಲಿ ದಿನಪತ್ರಿಕೆ ವಿತರಕ..ಹಿರಿಯ ಸಂಪಾದಕರಿದ್ದ ಸಮಯದಲ್ಲಿ ನಾನು ೨೫ ಸುಧಾ ಮತ್ತು ೩೦ ತರಂಗಗಳನ್ನು ಗಿರಾಕಿಗಳ ಮನೆಗೆ ಕಳಿಸುತ್ತಿದ್ದೆ...ಆಗ ಓದುಗರಿದ್ದರು..ಈಗ ಕೇವಲ ೮ ಸುಧಾ, ಮತ್ತು ೧೧ ತರಂಗಗಳನ್ನು ತರಿಸುತ್ತೇನೆ...ಗಿರಾಕಿಗಳನ್ನು ಕೇಳಿದರೆ ಆಯ್ಯೋ ಹೋಗ್ರಿ..ಅದರಲ್ಲಿ ಏನಿರುತ್ತೆ...ಕವರ್ ಪೇಜಿನಲ್ಲಿ ಕತ್ರಿನಾ ಕೈಫ್ ಫೋಟೊ ಹಾಕೊ ಮಟ್ಟಕ್ಕೆ ಬಂದಿದೆ ಸುಧಾ ಅದರಲ್ಲಿ ಏನು ಒದೋದು ಅನ್ನುತ್ತಾರೆ. ಇದೇ ಅಭಿಪ್ರಾಯ ತರಂಗ ಮೇಲು ಇದೆ.]

ಮತ್ತೆ ನನ್ನ ಬಳಿ ಇನ್ನೂ ಸುಮಾರು ೫ ಸರಣಿಗಾಗುವಷ್ಟು ಟೋಪಿಗಳಿವೆ...ಅವುಗಳನ್ನು ಮುಂದೆ ಹಾಕುತ್ತೇನೆ..ಹೀಗೆ ಬರುತ್ತಿರಿ....
ಸಾಧ್ಯವಾದರೆ ನಿಮ್ಮ ಈಮೇಲ್ ಐಡಿ ಕೊಡ್ತೀರಾ....

Pramod said...

ಒಳ್ಳೆ ಟೋಪಿ ಕಲೆಕ್ಷನ್ ಸರ್ .. :)

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ತುಂಬಾ ತಡವಾಯಿತು... ಟೋಪಿ ಹಾಕ್ಕೊಂಡು ಮೊನ್ನೇನೆ ನೋಡಿದೆ, ನನಗೆ ಹನುಮಂತನ ಟೋಪಿ ಇಷ್ಟವಾಯಿತು, ಅದೇ ಕೊಟ್ಟು ಬಿಡಿ :).
ನೀವು ಶ್ರೀ ಶಂ ರವರಿಗೆ ಬರೆದ ಉತ್ತರದಲ್ಲಿ ಪ್ರಸ್ತಾಪಿಸಿರುವ ವಿಚಾರ ನಿಜಕ್ಕೂ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿತು. ನಮ್ಮ ಪತ್ರಿಕೆಯವರಿಗೆ ಸೃಜನಶೀಲತೆಯೆಂದರೆ ಏನು ಎಂಬ ಅರಿವಿಲ್ಲ ಅಂತ ಅನ್ನಿಸುತ್ತದೆ. ಸ್ವಾರಸ್ಯ ನಟಿಮಣಿಯ ಛಾಯಾಚಿತ್ರದಲ್ಲಿ ಇದೇ ಎಂದು ಅವರು ಭಾವಿಸಿರುವಂತಿದೆ. ಧಿಕ್ಕಾರವಿರಲಿ ಇಂತಹ ಮೂಢರಿಗೆ.
-ರಾಜೇಶ್ ಮಂಜುನಾಥ್

shivu said...

ಪ್ರದೀಪ್.....ಥ್ಯಾಂಕ್ಸ್.....


ರಾಜೇಶ್,

ನನ್ನ ಟೋಪಿ ಸರಣಿಯಲ್ಲಿ ನಿಮಗಿಷ್ಟವಾದ ಟೋಪಿಗಳನ್ನು ಹಾಕಿಕೊಳ್ಳಬಹುದು. ಪತ್ರಿಕೆಯ ಬಗ್ಗೆ ನನಗಾದ ಅನುಭವವನ್ನು ಹೇಳಿಕೊಂಡಿದ್ದೇನೆ....ಹಾಗಂತ ಮೇಲೆ ಸಿಟ್ಟಿಲ್ಲ....ಕಾರಣ ಅವರು ಹಾಗೆ ಮಾಡಿದ್ದರಿಂದಲೇ ನಾನು ನನ್ನ ಬರಹದ ತೆವಲಿಗಾಗಿ ಬ್ಲಾಗಿಗೆ ಬಂದೆ. ಅದರಿಂದ ನನಗೆ ನೂರಾರು ಪ್ರತಿಭಾವಂತ ಬ್ಲಾಗ್ ಗೆಳೆಯರ ಎಲ್ಲಾ ಪ್ರಕಾರದ ಸಾಹಿತ್ಯ, ಚಿತ್ರ, ಕವನವೆಲ್ಲಾ ಓದಲು ಸಿಗುತ್ತಿವೆ...ಇದರಿಂದ ನನ್ನ ಬರವಣಿಗೆಗೆ ಸ್ಪೂರ್ತಿಯೂ ಸಿಕ್ಕಿದಂತಾಯಿತು.....ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ.......

shivu said...

ಪ್ರದೀಪ್.....ಥ್ಯಾಂಕ್ಸ್.....


ರಾಜೇಶ್,

ನನ್ನ ಟೋಪಿ ಸರಣಿಯಲ್ಲಿ ನಿಮಗಿಷ್ಟವಾದ ಟೋಪಿಗಳನ್ನು ಹಾಕಿಕೊಳ್ಳಬಹುದು. ಪತ್ರಿಕೆಯ ಬಗ್ಗೆ ನನಗಾದ ಅನುಭವವನ್ನು ಹೇಳಿಕೊಂಡಿದ್ದೇನೆ....ಹಾಗಂತ ಮೇಲೆ ಸಿಟ್ಟಿಲ್ಲ....ಕಾರಣ ಅವರು ಹಾಗೆ ಮಾಡಿದ್ದರಿಂದಲೇ ನಾನು ನನ್ನ ಬರಹದ ತೆವಲಿಗಾಗಿ ಬ್ಲಾಗಿಗೆ ಬಂದೆ. ಅದರಿಂದ ನನಗೆ ನೂರಾರು ಪ್ರತಿಭಾವಂತ ಬ್ಲಾಗ್ ಗೆಳೆಯರ ಎಲ್ಲಾ ಪ್ರಕಾರದ ಸಾಹಿತ್ಯ, ಚಿತ್ರ, ಕವನವೆಲ್ಲಾ ಓದಲು ಸಿಗುತ್ತಿವೆ...ಇದರಿಂದ ನನ್ನ ಬರವಣಿಗೆಗೆ ಸ್ಪೂರ್ತಿಯೂ ಸಿಕ್ಕಿದಂತಾಯಿತು.....ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ.......

A J Javeed said...

ಶಿವು,
ತುಂಬಾ ಚೆನ್ನಾಗಿದೆ ನೀವು ಹಾಕಿರುವ ಟೋಪಿಗಳ.....ಕ್ಷಮಿಸಿ ನೀವು ತೆಗೆದಿರುವ ಟೋಪಿಗಳ ಚಿತ್ರಗಳು.ಅದಕ್ಕೆ ಸಂಬಂಧಿಸಿದ ಮಾಹಿತಿ extra bonus. ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು.

ಅವಕಾಶವಂಚಿತ ಸೋಮನ ವೇಷಾಧಾರಿಗಳ ಭಿಕ್ಷಾಟನೆ ವಿಷಯ ಓದಿ ಬೇಸರವಾಯಿತು.

shivu said...

ಜಾವೀದ್,

ಟೋಪಿಗಳನ್ನು ನೋಡಿದ್ದಕ್ಕೆ ಥ್ಯಾಂಕ್ಸ್....ಸೋಮನ ಕುಣಿತ ಮಾತ್ರವಲ್ಲದೇ ಇತರ ಜನಪದ ಕಲಾವಿದರ ಪಾಡು ಹೀಗೆ ರಸ್ತೆಗಿಳಿಯುತ್ತಿದೆ...ಅದರಲ್ಲಿ ಒಂದನ್ನು ಮಾತ್ರ ಬರೆದಿದ್ದೇನೆ...ಹೀಗೆ ಬರುತ್ತಿರಿ.....

mouvi PTR said...

ತುಂಬಾ ಒಳ್ಳೆಯ ಮಾಹಿತಿ ಧನ್ಯವಾದ

mouvi PTR said...

ತುಂಬಾ ಒಳ್ಳೆಯ ಮಾಹಿತಿ ಧನ್ಯವಾದ

mouvi PTR said...

ತುಂಬಾ ಒಳ್ಳೆಯ ಮಾಹಿತಿ ಧನ್ಯವಾದ

mouvi PTR said...

ತುಂಬಾ ಒಳ್ಳೆಯ ಮಾಹಿತಿ ಧನ್ಯವಾದ

mouvi PTR said...

ತುಂಬಾ ಒಳ್ಳೆಯ ಮಾಹಿತಿ ಧನ್ಯವಾದ