ಕಲ್ಕತ್ತ, ಲಕ್ನೋ, ಮುಂಬೈ, ಇಂದೋರ್, ದೆಹಲಿ, ಇತ್ಯಾದಿ ನಗರಗಳಲ್ಲಿ ರಾಷ್ಟ್ರೀಯ-ಅಂತರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆಗಳು ಹೆಚ್ಚಾಗಿ ನಡೆಯುವುದರಿಂದ[ಕೆಲವೊಮ್ಮೆ ವಿದೇಶಗಳಿಂದಲೂ] ಅವುಗಳ ಪ್ರವೇಶ ಪತ್ರ, ನಂತರ ಪಲಿತಾಂಶದ ವಿವರಣೆಯ ಪತ್ರ, ಕ್ಯಾಟಲಾಗ್, ಇತ್ಯಾದಿಗಳು ಆಗಾಗ ನನಗೆ ಬರುತ್ತಿರುವುದರಿಂದ ನನ್ನಾಕೆ ನನ್ನನ್ನು ಪರೋಕ್ಷವಾಗಿ ರೇಗಿಸುವುದು ಹೀಗೆ.
ನಾನು ಮದ್ಯಾಹ್ನ ಮನೆಗೆ ಬರುತ್ತಲೇ ಕೈಗಿತ್ತಳು. ಅದನ್ನು ನೋಡುತ್ತಲೇ ನನಗೆ ಆಶ್ಚರ್ಯವಾಗಿತ್ತು. ಅದು ಐವತ್ತು ಪೈಸೆಯ ಪೋಸ್ಟ್ ಕಾರ್ಡು. ನಾನು ಚಿಕ್ಕವನಿದ್ದಾಗ ನಮ್ಮಪ್ಪನಿಗೆ ತಂದುಕೊಡುತ್ತಿದ್ದಾಗ ಅದರ ಬೆಲೆ ಹತ್ತು ಪೈಸೆ. ನಂತರ ಹದಿನೈದು ಪೈಸೆ. ಇಪ್ಪತ್ತು, ಇಪ್ಪತೈದು, ಈಗ ಐವತ್ತು ಪೈಸೆಯಾಗಿದೆ.
ಈಗಿನ ಈ-ಮೇಲ್, ಎಸ್ ಎಮ್ ಎಸ್ ಯುಗದಲ್ಲೂ ಈ ಪತ್ರವನ್ನು ಕಳಿಸಿರುವವರು ಯಾರೆಂದು ನನಗೂ ಕುತೂಹಲ ಉಂಟಾಯಿತು. ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಅನೇಕ ಆಫೀಸುಗಳನ್ನು ಸುತ್ತಾಡಿ ಸುಸ್ತಾಗಿ ಮನೆಗೆ ಬಂದಾಗ ಆಗ ತಾನೆ ಬಂದ ಫೋಟೋಗ್ರಫಿಯ ಪತ್ರಗಳು ಸಹಜವಾಗಿ ಖುಷಿಯನ್ನುಂಟುಮಾಡುತ್ತವೆ.
ಆದರೆ ಆ ಪತ್ರವನ್ನೋದಿ ಇರಿಸುಮುರಿಸುಂಟಾಯಿತು.
ದಿನಾಂಕ ೧೩-೧-೨೦೦೯ ಮತ್ತು ೨೪-೧-೨೦೦೯ರಂದು ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆ ಬಂದಿಲ್ಲವೆಂದು ಅದರ ಬದಲಿಗೆ ಇಂಡಿಯನ್ ಎಕ್ಸ್ಪ್ರೆಸ್ ಕಳಿಸಿಬಿಟ್ಟಿದ್ದೀರೆಂದು ಬರೆದಿರುವ ಪತ್ರ. ಮತ್ತೆ ನಾನು ಹಣ ವಸೂಲಿ ಮಾಡುವಾಗ ಅವೆರಡು ದಿನಗಳ ದಿನಪತ್ರಿಕೆ ಹಣವನ್ನು ಮುರಿದುಕೊಂಡು ಕೊಡುತ್ತೇವೆಂದು ನನಗೆ ಪರೋಕ್ಷವಾಗಿ ಹೇಳುವ ಪ್ರಯತ್ನ.
ಅರೆರೆ.... ಎರಡು ದಿನ ಟೈಮ್ಸ್ ಆಪ್ ಇಂಡಿಯ ದಿನಪತ್ರಿಕೆಯನ್ನು ನಮ್ಮ ಹುಡುಗ ಹಾಕದಿದ್ದಲ್ಲಿ ಹಣ ವಸೂಲಿಗೆ ಹೋದಾಗ ಬಂದಿರದ ಎರಡು ದಿನದ ಹಣ ಆರು ರೂಪಾಯಿ ಮುರಿದು ಕೊಡಬಹುದಿತ್ತು. ಆ ಪತ್ರಿಕೆ ಬದಲಿಗೆ ಎರಡು ರೂಪಾಯಿ ಬೆಲೆಯ ಇಂಡಿಯನ್ ಎಕ್ಸ್ಪ್ರೆಸ್ ಹಾಕಿದ್ದಾನೆ. ಅಂದಮೇಲೆ ವ್ಯತ್ಯಾಸ ಕೇವಲ ಎರಡು ರೂಪಾಯಿ ಮಾತ್ರ. ಅದನ್ನು ತಿಳಿಸಲಿಕ್ಕೆ ಈ ರೀತಿ ಐವತ್ತು ಪೈಸೆಯ ಅಂಚೆಕಾರ್ಡನ್ನು ಉಪಯೋಗಿಸಿರುವ ಆ ಗ್ರಾಹಕ ಯಾರು.?
ಅಗಲ ಮತ್ತು ಮೊಂಡಾದ ಮೂಗು, ಒರಟು ಕೆನ್ನೆ, ಗುಳಿಬಿದ್ದ ಕಣ್ಣುಗಳು, ಸದಾ ಕೋಲುನಾಮವಿಟ್ಟ ಹಗಲವಾದ ಹಣೆ. ಗುಂಡು ಮುಖ. ಅದರ ಮೇಲಕ್ಕೆ ಸಂಪೂರ್ಣವಾಗಿ ಭೂಪಟವಾಗಿರುವ ತಲೆ, ದೇಹದ ರುಂಡಭಾಗ 60-60-70 ಅಳತೆಯ ಸರ್ವಕಾಲ ಸಮೃದ್ಧಿ ಹೊಂದಿದ ಸೈಜು, ಸರಾಸರಿ ೧೦೦ ಕಿಲೋ ತೂಗುವ ಅವನ ಸಂಪೂರ್ಣ ಚಿತ್ರ ಒಂದು ಕ್ಷಣ ನನ್ನ ಮನಃಪಠಲದ ಪರದೆ ಮೇಲೆ ಮೂಡಿಬಂತು
ಓಹೋ...ಆತ ಕಂಜೂಸ್. ಪ್ರತಿತಿಂಗಳು ಹಣ ವಸೂಲಿಗೆ ಹೋದರೆ ಕ್ಯಾಲೆಂಡರ್ ಹಿಡಿದುಕೊಂಡು ಪೈಸಾ-ಪೈಸಾ ಲೆಕ್ಕಾ ಹಾಕುವ ಮಹಾನ್ ಲೆಕ್ಕಿಗ.
ಇರಲಿ ನನಗೆ ಪ್ರತಿಯೊಬ್ಬ ಗ್ರಾಹಕನು ಅನ್ನದಾತನೇ...ಅವನು ಜಿಪುಣನೋ, ಧಾರಾಳಿಯೋ, ವಾಚಾಳಿಯೋ, ದಳ್ಳಾಳಿಯೋ ನನಗೇಕೆ, ಅವನಿಗೆ ಬೇಕಿರುವುದು ದಿನಪತ್ರಿಕೆ ನನಗೆ ಬೇಕಿರುವುದು ಅದರ ಹಣವಷ್ಟೇ.
ಮತ್ತೆ ಈಗಿನ ಕಾಲದಲ್ಲೂ ಜೀವನದ ಪ್ರತಿಯೊಂದು ವಿಚಾರಕ್ಕೂ ಪತ್ರವ್ಯವಹಾರದ ಮುಖಾಂತರವೇ ವ್ಯವಹರಿಸುತ್ತಾ, ತಮ್ಮದೇ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ನೆಮ್ಮದಿಯಿಂದ ಬಾಳುತ್ತಿರುವ ಅನೇಕರಲ್ಲಿ ಈತನು ಇರಬಹುದು. ಅವನ ಈ ಪತ್ರವೊಂದರಿಂದಲೇ ನಾನು ಪೂರ್ವಗ್ರಹ ಪೀಡಿತನಾಗಿ ಅವನ ಬಗ್ಗೆ ಏಕೆ ತಪ್ಪು ತಿಳಿಯಲಿ.!
ನನಗಿರುವ ಫೋಟೋಗ್ರಫಿ ಹವ್ಯಾಸದಂತೆ ಈತನಿಗೂ ಜೀವನದಲ್ಲಿ ಪತ್ರ ಬರೆಯುವ ಒಳ್ಳೆಯ ಹವ್ಯಾಸವಿರಬಹುದಲ್ಲವೇ. ಪತ್ರ ಐವತ್ತು ಪೈಸೆಯದೋ ಅಥವ ೧೦೦ ರೂಪಾಯಿಯದೋ ಮುಖ್ಯವಲ್ಲ...ಅದರೊಳಗಿನ ಭಾವನೆ ಮುಖ್ಯ. ಅದನ್ನು ಗೌರವಿಸಲೇಬೇಕು. ಮುಂದಿನ ಬಾರಿ ಹಣವಸೂಲಿಗೆ ಅವನ ಬಳಿಗೆ ಹೋದಾಗ ಈ ವಿಚಾರವಾಗಿ ಅವನ ಅಭಿಪ್ರಾಯವನ್ನು ಕೇಳಬೇಕು ಅಂದುಕೊಂಡು ಸುಮ್ಮನಾದೆ. ಆ ದಿನವೂ ಬಂತು.
"ಸರ್ ಪೇಪರ್ ಬಿಲ್ಲು,"
"ಆಹಾಂ! ಬನ್ನಿ.....ಎಷ್ಟಾಯ್ತು.. ಅದರಲ್ಲಿ ಎರಡು ದಿನ ಬಂದಿಲ್ಲ ಅಂತ ಪತ್ರ ನಿಮಗೆ ಪತ್ರ ಬರೆದಿದ್ದೆ...ಬಂತಾ ?"
"ಬಂತು ಸರ್"
ನಂತರ ಹುಡುಗನ ಬಗ್ಗೆ ದೂರು ಇತ್ಯಾದಿಯಾಗಿ ಇಬ್ಬರ ನಡುವೆ
"ಈ ಸಂಭಾಷಣೆ...ನಮ್ಮ ಈ ಪ್ರೇಮ ಸಂಭಾಷಣೆ"
ನಡೆಯಿತು. ಕೊನೆಯಲ್ಲಿ
"ನಾನು ಇಂಡಿಯನ್ ಎಕ್ಷಪ್ರೆಸ್ ಕೇಳಿರಲಿಲ್ಲ, ಆದ್ರೂ ನಿಮ್ಮ ಹುಡುಗ ಟೈಮ್ಸ್ ಬದಲಿಗೆ ಹಾಕಿಬಿಟ್ಟಿದ್ದಾನೆ."
ಅಂತ ಹೇಳಿ ಆರು ರುಪಾಯಿ ಮುರಿದುಕೊಂಡೇ ಉಳಿದ ಹಣ ಕೊಟ್ಟ.
"ಹೋಗ್ಲಿಬಿಡಿ ಸರ್, ಮತ್ತೆ ನೀವು ನನಗೆ ಪತ್ರ ಬರೆದಿದ್ದೀರಲ್ಲಾ...ಈ ಹವ್ಯಾಸ ನಿಮಗೆ ತುಂಬಾ ದಿನದಿಂದ ಇದೇಯಾ ? ಇದ್ದರೇ ಎಲ್ಲಾದಕ್ಕೂ ಹೀಗೆ ಪತ್ರ ಬರೆಯುತ್ತೀರಾ" ....
ನಾನು ಕುತೂಹಲದಿಂದ ಕೇಳಿದೆ.
"ಅಯ್ಯೋ ಹೋಗ್ರಿ....ಅದೇನು ಹವ್ಯಾಸ-ಅಭ್ಯಾಸ ಎಂಥದ್ದು ಅಲ್ಲ. ನೀವು ಹಾಕದಿರುವ ಪೇಪರಿಗೆ ನಾವು ಏಕೆ ದುಡ್ಡು ಕೊಡಬೇಕು ? ಮತ್ತೆ ಪೇಪರ್ ಬಂದಿಲ್ಲವೆಂದು ನಿಮಗೆ ತಿಳಿಸದಿದ್ದರೆ....ನೀವು ಬಂದು ಸುಮ್ಮನೆ ವಾದ ಮಾಡುತ್ತೀರಿ. ಅದಕ್ಕಾಗಿ ಫೋನ್ ಮಾಡಿ ಎರಡು ನಿಮಿಷ ಮಾತಾಡಿದರೆ ಎರಡು ರೂಪಾಯಿ ಖರ್ಚಾಗುತ್ತದೆ. ದುಡ್ಡು ಸುಮ್ಮನೆ ಬರೊಲ್ಲ. ಪೈಸಾ-ಪೈಸಾ ಉಳಿಸಿದರೆ ತಾನೆ ಈಗಿನ ಕಾಲದಲ್ಲಿ ಬದುಕಲಿಕ್ಕೆ ಆಗುವುದು, ಅದಕ್ಕೆ ಈ ಐವತ್ತು ಪೈಸೆ ಕಾರ್ಡಿನಲ್ಲಿ ಬರೆದು ಕಳಿಸಿರುವುದು."
ಆವನ ಮಾತಿಗೆ ನಾನು ಮರುಮಾತಾಡದೇ ಥ್ಯಾಂಕ್ಸ್ ಹೇಳಿದೆ.
"ಹೋಗಿಬನ್ನಿ" ಅಂದ. ಬಾಗಿಲು ದಡ್ ಅಂತ ಹಾಕಿದ.
"ಆಹಾ..ಬೆಂಗಳೂರಿನ ಹೃದಯಭಾಗವಾದ ಗಾಂಧಿನಗರದ ಒಂದು ದುಬಾರಿ ಅಪಾರ್ಟ್ಮೆಂಟಿನಲ್ಲಿ ನನಗೆ ಎಂಥ ಗ್ರಾಹಕ, ಈತನ ಬಗ್ಗೆ ಏನೇನೋ ಭಾವನೆಗಳನ್ನು ಇಟ್ಟುಕೊಂಡಿದ್ದೆನಲ್ಲಾ." ಯೋಚಿಸುತ್ತಾ ನಿದಾನವಾಗಿ ಮೆಟ್ಟಿಲಿಳಿಯುತ್ತಿದ್ದೆ.
[ಪತ್ರದಲ್ಲಿರುವ ಗ್ರಾಹಕನ ಹೆಸರು ಮತ್ತು ವಿಳಾಸವನ್ನು ಬದಲಾಯಿಸಿದ್ದೇನೆ.]
ಚಿತ್ರ ಮತ್ತು ಲೇಖನ
ಶಿವು.ಕೆ
90 comments:
ಶಿವೂ,
ನಿಮ್ಮ ಅನುಭವ ಚೆನ್ನಾಗಿದೆ. ಹೀಗೆ ಪೈಸೆ ಲೆಕ್ಕ ಹಾಕುವವರು ಒಮ್ಮೊಮ್ಮೆ ಹಳ್ಳಕ್ಕೆ ಬೀಳುವುದು ಉ೦ಟು, ಅವರು ಮಾಡಿದ್ದು ತಪ್ಪೆ೦ದು ಹೇಳಲಾರೆ. ಒ೦ದು ಘಟನೆ ನೆನಪಾಯಿತು. ನನಗೂ ಒಬ್ಬ ಕ೦ಜೂಸ ಮಿತ್ರರಿದ್ದರು. ಎಷ್ಟು ಕ೦ಜೂಸ ಅ೦ದರೆ ಕೆಳಗೆ ಬಿದ್ದ ಗು೦ಡುಸೂಜಿಯನ್ನು ಬಿಡದೆ ಹೆಕ್ಕುತ್ತಿದ್ದರು. ಒ೦ದುದಿನ ಹಾಗೆ ಗು೦ಡುಸೂಜಿ ಹೆಕ್ಕಲು ಬಗ್ಗಿದಾಗ, ಅದಾಗ ತಾನೇ ಒ೦ದುಸಾವಿರ ವ್ಯಯಿಸಿ ಕಣ್ಣಿಗೆ ಹಾಕಿಕೊ೦ಡಿದ್ದ ಕನ್ನಡಕ ಕೆಳಗೆ ಬಿದ್ದು ಒಡೆದು ಹೋಯಿತು. ಎಷ್ಟಾಯಿತು ನೋಡಿ ?, ನೆಲಕ್ಕೆ ಬಿದ್ದ ಒ೦ದು ಗು೦ಡುಸೂಜಿಯ ಬೆಲೆ.
ಶಿವು ಸರ್....
ಎಂದಿನಂತೆ ಸೊಗಸಾದ ಲೇಖನ...
ನಿಮ್ಮದೇ ಶೈಲಿಯಲ್ಲಿ...
ಕಂಜೂಸ್ ವಿಷಯಕ್ಕೆ ಬಂದರೆ...
ಅದು ಬದುಕು ಕಲಿಸುವ ಪಾಠ...
ಹಣದ ಇತಿಮಿತಿ ನೋಡಿ ಖರ್ಚು ಮಾಡುವದು...
ಭವಿಷ್ಯದ ಬದುಕಿನ ಬಗೆಗೆ ತುಂಬಾ ವಿಚಾರ ಮಾಡುವವರು
ಕೆಲವೊಮ್ಮೆ ಹಾಗಿರುತ್ತಾರೆ...
ಇವರ ವಿಷಯಕ್ಕೆ ಬಂದರೆ ಎರಡು ರೂಪಾಯಿಯ ಪೇಪರಿಗೆ..
ಐವತ್ತು ಪೈಸೆ ಪತ್ರಕ್ಕೆ ಖರ್ಚು ಮಾಡಿದ್ದಾರೆ...
ಇದರಲ್ಲಿ ತಮ್ಮ ತಪ್ಪಿಲ್ಲ...
ನಿಮ್ಮ ಹುಡುಗನ ತಪ್ಪು ಎನ್ನಲಿಕ್ಕೆ...
ಲೋಕೊ ಭಿನ್ನ ರುಚಿ...
ನಮಗೆ ನಗು ಬರುತ್ತದೆ..
ಅವರಿಗೆ ಅದು ಸರಿ ಅನ್ನಿಸುತ್ತದೆ...
ಅದು ಅವರು ಅನುಭವಿಸಿದ ಬದುಕಿನ ಅನುಭವ
ಪಾಠ ಇರಬಹುದು...
ಅಥವಾ.. ಶಿಸ್ತಿನ ಜೀವನದವರೂ ಇರಬಹುದು..
ಚಂದದ ಹಾಸ್ಯದ ಶೈಲಿಯಲ್ಲಿ ಓದಿಸಿಕೊಂಡು ಹೋಗುವ ನಿಮ್ಮ ಬರಹ ಇಷ್ಟವಾಯಿತು...
ಅಭಿನಂದನೆಗಳು....
ಶಿವು,
ಬೇರೆ ಬೇರೆ ವ್ಯಕ್ತಿಗಳ ವಿಶ್ಲೇಷಣೆ ಮಾಡುವ ನಿಮ್ಮ ಲೇಖನಗಳು
ತುಂಬಾ interesting ಆಗಿರುತ್ತವೆ. ಆದರೆ ಯಾರ ಬಗೆಗೂ ಕೊನೆಯ ಅಭಿಪ್ರಾಯವನ್ನು ಕೊಡದೆ, liberal ಆಗಿ
ನೀವು ವರ್ಣಿಸುವ ರೀತಿಯನ್ನು ನಾನು ಮೆಚ್ಚುತ್ತೇನೆ.
ಬರಹದ ಶೈಲಿ ಹಿಡಿಸಿತು
ಹಲೋ ಶಿವು,
ನಿಮಗೆ ಗ್ರಾಹಕರು ನಿಡುವ ಕಿರಿಕಿರಿಯನ್ನು ಚೆನ್ನಾಗಿ ಹೇಳಿದ್ದಿರಿ.
ನಿಮ್ಮ ಗ್ರಾಹಕ ನಿಜವಾಗಿಯೂ ಜಿಪುಣನಲ್ಲ್ಲ, ಅತ ಬುದ್ದಿವಂತ.
ಶಿವಣ್ಣ,
ಇಂತಹ ಗ್ರಾಹಕರು ಇರುತ್ತಾರೆ ಎನ್ನುವುದಕ್ಕೆ ಉದಾಹರಣೆ. ದೊಡ್ಡ ದೊಡ್ಡ ಅಪಾರ್ಟ್ಮೆಂಟಿಗೆ ಎಷ್ಟೋ ಲಕ್ಷಗಳು ಕೊಡುವವರು ಒಂದು ಟೆಲಿಫೋನ್ ಕಾಲು ದುಬಾರಿಯಾಗುತ್ತದಾ?
ಶಿವೂ ಅವರೇ, ಈಗಿನ ಕಾಲದಲ್ಲಿ ಇಂತಹ ಮಂದಿ ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ!!! ಸಾಮಾನ್ಯವಾಗಿ ಈ ರೀತಿ ಜಿಪುಣತನ ತೋರಿಸುವ ಮಂದಿ ಕೊಟ್ಯಾಧೀಶ್ವರರೆ ಆಗಿರುತ್ತಾರೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ!!!!!
ಇಂತಹವರ ಬಗ್ಗೆ ನನ್ನ ಪತಿ ಎಷ್ಟೋ ಸಲ ಹೇಳಿದ್ದಾರೆ! ಅದೇನೆಂದರೆ ದಿನಕ್ಕೊಂದು ಬಗೆಯ ಕಾರ್ ನಲ್ಲಿ ಬರುವ, ಕಮರ್ಷಿಯಲ್ ರಸ್ತೆಯಲ್ಲಿರುವ (commercial street) ಮಳಿಗೆಗಳಲ್ಲಿ ದುಬಾರಿ ವಸ್ತುಗಳನ್ನು ಖರೀದಿಸುವ ಇವರು, ತಿಂಗಳಿಗೊಮ್ಮೆ ಕೊಡುವ ಫೀಸ್ ದುಡ್ಡನ್ನು ಕೊಡುವಷ್ಟರಲ್ಲಿ ಎಷ್ಟು ಸತಾಯಿಸುತ್ತಾರೆಂದರೆ, ಇಂತಹವರುಗಳಿಂದ ಹಣ ಪಡೆಯುವುದೇ ಮಹಾ ಪಾಪವೇನೋ ಎಂದುಕೊಳ್ಳಬೇಕು ಹಾಗೆ ವರ್ತಿಸುತ್ತಾರೆ! (ಎಲ್ಲರಿಗೂ ಅನ್ವಯಿಸುವುದಿಲ್ಲ )
(ಅದಕ್ಕೆ ಅವರು ಹಾಗೆ ಕೊಟ್ಯಾಧೀಶ್ವರರಾಗಿರುತ್ತಾರೆನೋ?)
ಶಿವೂ ಸರ್,
ಕೆಲವು ಅನುಭವಗಳು ಬದುಕನ್ನು ಹದಗೊಳಿಸುತ್ತವೆ ಎನಿಸುತ್ತದೆ. ನಮ್ಮ ನಡುವೆಯೇ ಇಂಥಹ ಎಷ್ಟೋ ಜನರಿದ್ದಾರೆ. ಹಾಗೆಯೇ ಎಲ್ಲರ ಸೇವೆ ಮಾಡುವ ಕರುನಾಮಯಿಗಳು ಇದ್ದಾರೆ. ಬಹುಶ ಜೀವನ ಎಂದರೆ ಅದೇ ಇರಬೇಕು. ಒಳ್ಳೆಯ ಅನುಭವದ ಪತ್ರ. ಶಾಲಿ ಸೊಗಸಾಗಿದೆ.
ಶಿವು,
ಎಲ್ಲೂ judgement ಕೊಡದೆ ಬರೆದಿರುವುದೇ ಲೇಖನದ ಚಂದ ಹೆಚ್ಚಿಸಿದೆ. ಯಾವುದರಲ್ಲೊ ಮೀನು ಹಿಡಿಯುವಂತಹ ಜನವೂ ಇರುತ್ತಾರೆ ಮತ್ತು ಕೆಲವೊಮ್ಮೆ ಅದು ತಾವು ಕಷ್ಟದಿಂದ ಮೇಲೆದ್ದವರು ಎಂಬ ಶಿಸ್ತನ್ನು ರೂಢಿಸಿಕೊಂಡವರೂ ಇರುತ್ತಾರೆ. ತನಗೆ ಬದಲಿಯಾಗಿ ಬಂದ ಪೇಪರ್ ಹಣವನ್ನೂ ಕೊಡದಿರುವಂತಹ ಗ್ರಾಹಕರೂ, ನಿಮ್ಮ ತರಹಾವರಿ ಬೀಟ್ ಬಾಯ್ಸ್ ಗಳೂ, ನಿಮ್ಮ ಅನುದಿನದ ಸಂಕಟಗಳೂ ನವಿರಾಗಿ ಬರೆಯುತ್ತಿದ್ದೀರಿ. ನಿಮ್ಮ ಲೋಕ ನಮ್ಮೊಳಗೂ ಮೂಡಿಸುತ್ತಿದ್ದೀರ.
ಪರಂಜಪೆ ಸರ್,
ಪೈಸ-ಪೈಸ ಉಳಿಸಲು ಹೋಗಿ ಅದಕ್ಕೂ ಮಿಗಿಲಾಗಿ ಕಳೆದುಕೊಂಡವರ ಸಂಖ್ಯೆ ನಮ್ಮ ಗ್ರಾಹಕರಲ್ಲಿ ಹೆಚ್ಚಿದೆ. ಅದರ ಒಂದು ತುಣುಕನ್ನು ಇಲ್ಲಿ ಹಂಚಿಕೊಂಡಿದ್ದೇನೆ...ನನ್ನ ಲೇಖನವನ್ನು ಮೆಚ್ಚುವ ಜೊತೆಗೆಯಲ್ಲಿ ನಿಮ್ಮ ಅನುಭವವನ್ನು ಹೇಳಿದ್ದೀರಿ...ಧನ್ಯವಾದಗಳು.
ಪ್ರಕಾಶ್ ಸರ್,
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಕಂಜೂಸ್ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಸರಿಯೆನಿಸುತ್ತೆ...ಆದ್ರೆ ಇಲ್ಲಿಯ ವ್ಯಕ್ತಿ ಇತಿಮಿತಿ ಇಟ್ಟುಕೊಂಡು ಖರ್ಚು ನಿಭಾಯಿಸಿವವನಲ್ಲ...ಬೇರೆ ವಿಚಾರದಲ್ಲಿ ಧಾರಾಳಿಯಾಗಿರುವುದು ನನಗೆ ಕಂಡುಬಂದಿದೆ.
ಮತ್ತೆ ನಮ್ಮ ಮೇಲೆ ಆತನಿಗೆ ತುಂಬಾ ಅನುಮಾನವಿರುತ್ತೆ. ಯಾಕೆ ಅಂತ ಗೊತ್ತಿಲ್ಲ...
ನಮ್ಮ ದಿನಪತ್ರಿಕೆ ಹುಡಗನನನ್ನು ತುಂಬಾ ಕೀಳಾಗಿ ಕಾಣುವುದು ಉಂಟು...ಆದ್ರೆ ದೇವರ ಮೇಲೆ ಮಹಾನ್ ಭಕ್ತಿ. ಸದಾ ದೇವಾಸ್ಥಾನದಲ್ಲೇ ಇರುತ್ತಾರೆ.... ದೇವರನ್ನು ಕಾಣಬೇಕಾದ ಜಾಗದಲ್ಲಿ ಕಾಣೋದಿಲ್ಲ...ಆದರೂ ನೀವು ಹೇಳಿದಂತೆ ಲೋಕೋಭಿನ್ನ ರುಚಿ...
ಧನ್ಯವಾದಗಳು.
ಸುನಾಥ್ ಸರ್,
ನನ್ನ ಲೇಖನದ ಮುಖ್ಯ ಉದ್ದೇಶವನ್ನು ಗುರುತಿಸಿ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶ್ರೀನಿಧಿ,
ಥ್ಯಾಂಕ್ಸ್....ಹೀಗೆ ಬರುತ್ತಿರಿ..
ರಾಮು,
ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತೇನೆ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..ಹೀಗೆ ಬರುತ್ತಿರಿ...
ಜಯಶಂಕರ್,
ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯ. ಮತ್ತೆ ಇನ್ನೂ ಎಂಥೆಂಥ ಗಿರಾಕಿಗಳಿರುತ್ತಾರೆ ಅನ್ನುವುದಕ್ಕೆ ನನ್ನ ಕ್ಯಾಮೆರಾ ಹಿಂದೆ ಬ್ಲಾಗಿಗೆ ಹೋಗಿ ಅಲ್ಲಿ ಈ ವಿಚಾರವಾಗಿ ಬರೆದ ಅನೇಕ ಲೇಖನಗಳಿವೆ...ಹೀಗೆ ಬರುತ್ತಿರಿ...
ಧನ್ಯವಾದಗಳು.
ಅವರಿಗೆ ಮುಂದಿನ ಸರ್ತಿ ಇಮೇಲ್ ಮಾಡಲು ಹೇಳಿ ಕೊಡಿ, ಆ ಐವತ್ತು ಪೈಸೆ ಕೂಡ ಉಳಿಸಬಹುದು ಅಂತ!
SSK ಮೇಡಮ್,
ನಿಮ್ಮ ಅಭಿಪ್ರಾಯ ಸರಿಯೆನಿಸುತ್ತೆ. ನನಗೂ ನಿತ್ಯ ಇಂಥ ಹತ್ತಾರು ಗ್ರಾಹಕರು ಹೆಗಲೇರುತ್ತಾರೆ. ಆಗಂತ ಅವರನ್ನು ನಾನು ಕೆಟ್ಟವರೆಂದು ಹೇಳುವುದಿಲ್ಲ...ಅವರನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ..
ಕಾರಿನಲ್ಲಿ ಬರುವವರು ಕೆಲವೊಮ್ಮೆ ಹತ್ತಾರು ಸಲ ಸತಾಯಿಸಿರುವ ಅನುಭವ ನನಗೆ ತುಂಬಾ ಆಗಿವೆ...
ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.
ಗುರುಮೂರ್ತಿ ಸರ್,
ಜೀವನದ ಎಲ್ಲಾ ಘಟನೆಗಳನ್ನು ಅನುಭವಿಸಿದಾಗಲೇ ಅಲ್ಲವೇ ಬದುಕು ಪಕ್ವವಾಗುವುದು. ಜೊತೆಗೆ ಖಂಡಿತ ನೀವು ಹೇಳಿದಂತೆ ಕರುಣಾಮಯಿಗಳು ಇದ್ದಾರೆ...ಇದರ ಬಗ್ಗೆ ಇನ್ನಷ್ಟು ಲೇಖನಗಳಿಗಾಗಿ ನನ್ನ ಮತ್ತೊಂದು ಬ್ಲಾಗ್ "ಕ್ಯಾಮೆರಾ ಹಿಂದೆ" ಬ್ಲಾಗಿಗೆ ಬೇಟಿಕೊಡಿ...ಆ ಬ್ಲಾಗಿನಲ್ಲಿ ಸಂಪೂರ್ಣ ದಿನಪತ್ರಿಕೆ ಕೆಲಸದ ಬಗ್ಗೆ ಲೇಖನಗಳಿವೆ.
ಹೀಗೆ ಬರುತ್ತಿರಿ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಮಲ್ಲಿಕಾರ್ಜುನ್,
ಲೇಖನವನ್ನು ವಸ್ತುನಿಷ್ಟವಾಗಿ ಬರೆದಿದ್ದೇನೆ...ನಡೆದ ಅನುಭವವನ್ನೇ ಹಾಗೆ ಬರೆದಿದ್ದೇನೆ. ಇಂಥ ಬರವಣಿಗೆ ಯಾವುದೇ ಉಪಮೆ, ಕಾವ್ಯತ್ಮಕತೆ, ಆಕರ್ಷಕ ಶೈಲಿ ಬೇಡುವುದಿಲ್ಲವೆಂದು ನನ್ನ ಭಾವನೆ.
ಕೆಲವರು ಒಳ್ಳೆಯ ಉದ್ದೇಶದಿಂದ ಹಣಕಾಸಿನ ವಿಚಾರದಲ್ಲಿ ಪಕ್ಕಾ ಇರುತ್ತಾರೆ ಅವರ ಬಗ್ಗೆ ನನಗೆ ಗೌರವವಿದೆ. ಮತ್ತೆ ಕೆಲವೊಮ್ಮೆ ನನ್ನ ದಿನಪತ್ರಿಕೆ ವಿತರಣೆ ಸ್ಥಳಕ್ಕೆ ನೀವು ಬಂದಾಗ ನಮ್ಮ ಅವತಾರ ನಿಮಗೆ ಗೊತ್ತಾಗಿರುತ್ತದೆ.
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಜ್ಯೋತಿ ಮೇಡಮ್,
ಆ ಗಿರಾಕಿ ನನಗೆ ಮಾತನಾಡಲು ಅವಕಾಶ ಕೊಡುವುದಿಲ್ಲ.[ಬೇರೆಯವರ ಮಾತನ್ನು ಎಂದೂ ಕೇಳಿಲ್ಲ..]ಆತ ಹೇಳಿದ್ದೇ ವೇದವಾಕ್ಯ. ಇನ್ನೂ ಈ-ಮೇಲ್ ವಿಚಾರ ಕೇಳುವಷ್ಟು ತಾಳ್ಮೆ ಆತನಿಗೆ ಇದೆಯಾ ?
ಧನ್ಯವಾದಗಳು.
ಎಂದಿನಂತೆ ತಿಳಿಹಾಸ್ಯದಿಂದ ಕೂಡಿದ ನಿಮ್ಮ ಬರಹ ಬಹಳ ಇಷ್ಟವಾಯಿತು.ಒಂದು ಪತ್ರಿಕೆ ಬರದಿದ್ದರೆ ಇನ್ನೊಂದು ಪತ್ರಿಕೆ ಹಾಕುವುದು ನಿಮ್ಮ ದೊಡ್ಡಗುಣ. ನಮ್ಮ ಕಡೆ ಪತ್ರಿಕೆಯ ಬದಲಿಗೆ ಮತ್ತೊಂದನ್ನು ಹಾಕುವುದಿಲ್ಲ.
ಅನೇಕ ಓದುಗರು ಹಾಗು ನೀವು! ಕಾರ್ಡ್ ನಲ್ಲಿ ಬರೆದದ್ದನ್ನು ಜಿಪುಣತನವೆಂದೇಕೆ ಭಾವಿಸುವಿರಿ. ಕಡೆಯ ಪಕ್ಷ ಆತ ಪೆನ್ನು ಕಾರ್ಡು ತೆಗೆದುಕೊಂಡು ನಿಮ್ಮ ವಿಳಾಸ ಬರೆದು ಪೋಸ್ಟ್ ಮಾಡಿದ್ದಾನಲ್ಲ. ಬಹುಶಃ ಈಗಿನ ತಲೆಮಾರಿನವರಿಗೆ ಈ ರೀತಿ ಬದುಕುವುದು ಜಿಪುಣತನ ಅನ್ನಿಸುತ್ತದೇನೋ ?
ಪರಾಂಜಪೆಯವರ ಉತ್ತರ ನಗೆ ತರಿಸಿತು. ಇಂತಹವರನ್ನು ನೋಡಿಯೇ Penny wise Pound foolish ಎಂಬ ಗಾದೆ ಹುಟ್ಟಿರಬೇಕು.
ಚಂದ್ರ ಕಾಂತ ಮೇಡಮ್,
ಮತ್ತೆ ನನ್ನ ಬ್ಲಾಗಿಗೆ ಬಂದಿದ್ದೀರಿ ಸ್ವಾಗತ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಜಿಪುಣತನ ಪದದ ವಿಚಾರವಾಗಿ ನಿಮ್ಮ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ಸ್ವೀಕರಿಸುತ್ತೇನೆ. ನಮ್ಮ ಬ್ಲಾಗ್ ಗೆಳೆಯರು ಸೇರಿದಂತೆ ನಾವೆಲ್ಲಾ ಸ್ವಲ್ಪ ವೇಗದ ಜೀವನದಲ್ಲಿರುವುದರಿಂದ[ಇದು ಸರಿಯೋ ತಪ್ಪೋ ಗೊತ್ತಿಲ್ಲ]ಆತನ ಬಗೆಗೆ ಸಹಜವಾಗಿ ತಿರಸ್ಕಾರ ಬರುವುದುಂಟು.
ಮತ್ತೆ ಮೂರು ರೂಪಾಯಿಯ ದಿನಪತ್ರಿಕೆ ಬಂದಿಲ್ಲವೆಂದು ಹದಿನೈದು ನಿಮಿಷ ಮೊಬೈಲು ಪೋನ್ನಲ್ಲಿ ಮಾತಾಡಿದ ಗ್ರಾಹಕನ ಬಗ್ಗೆಯೂ ಈ ಹಿಂದಿನ ಲೇಖನಗಳಲ್ಲಿ ಬರೆದಿದ್ದೇನೆ.
ಆದ್ರೆ ಯಾವ ಗ್ರಾಹಕನ ಬಗೆಗೂ ನಾನು ಪೂರ್ವಗ್ರಹ ಪೀಡಿತನಾಗದೆ ಇರಲು ಪ್ರಯತ್ನಿಸಿದ್ದೇನೆ...
ಹೀಗೆ ಬರುತ್ತಿರಿ...ಧನ್ಯವಾದಗಳು.
ಸಕತ್ತಾಗಿದೆ ಶಿವು. ಬದುಕು ಕಲಿಸುವ ಇಂತಹ ಅನುಭವಗಳೇ ಸಹಜ ಸಾಹಿತ್ಯವಾಗಿ ಹೊರಹೊಮ್ಮಲು ಸಾಧ್ಯ. ದಕ್ಕೆ ನಿಮ್ಮ ಬರಹಗಳೇ ಸಾಕ್ಷಿ
ಶಿವು,
ನಿಮ್ಮ ಲೇಖನ ಚೆನ್ನಾಗಿದೆ. ಇಷ್ಟವಾಯ್ತು.
ಆಂಗ್ಲ ಭಾಷೆಯ ಈ ಗಾದೆ ನೆನಪಾಯ್ತು.
’Penny Wise Pound Foolish'
-ಅನಿಲ್
ಸತ್ಯನಾರಾಯಣ ಸರ್,
ನಿಮ್ಮ ಮಾತು ಕೂಡ ನಿಮ್ಮ ಜೀವನಾನುಭವದಿಂದ ಬಂದಿದೆಯೆಂದು ನನಗನ್ನಿಸುತ್ತದೆ...ಏಕೆಂದರೆ ನೀವು ಬರೆಯುತ್ತಿರುವ ಹೈಸ್ಕೂಲ್ ದಿನಗಳು ಲೇಖನಗಳಿಗೂ ನಿಮ್ಮ ಮಾತು ನಿಮಗೆ ಅನ್ವಯಿಸುತ್ತದೆ ಅಲ್ಲವೇ ಸರ್...
ಧನ್ಯವಾದಗಳು.
ಅನಿಲ್,
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಚಂದ್ರ ಕಾಂತ ಮೇಡಮ್ ಹೇಳಿದ ಇಂಗ್ಲೀಷ್ ಗಾದೆಯನ್ನೇ ನೀವು ಹೇಳಿದ್ದೀರಿ..ಧನ್ಯವಾದಗಳು.
ಶಿವು ಸರ್,
ಎಂದಿನಂತೆ ನಿಮ್ಮ ಲೇಖನ ಹಾಸ್ಯ ಹಾಗು ಕೆಲವು ಜೀವನದಲ್ಲಿ ಬೆಲೆಯನ್ನು ತಿಳಿಸಿದೆ... ಒಳ್ಳೆಯ ಬರಹ ಹೀಗೆ ನಿಮ್ಮ ಅನುಭವವನ್ನು ನಮ್ಮೂಂದಿಗೆ ಹಂಚಿಕೊಳ್ಳಿ.
ವಂದನೆಗಳು
ಮನಸು ಮೇಡಮ್,
ಲೇಖನದಲ್ಲಿ ಹಾಸ್ಯವನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು...ಮತ್ತೆ ನನಗೆ ಜೀವನ ಮೌಲ್ಯಗಳನ್ನು ಬರೆಯುವಷ್ಟು ನನ್ನ ಬರವಣಿಗೆ ಪರಿಪಕ್ವವಾಗಿಲ್ಲ..ಅದರೂ ಲೇಖನದಲ್ಲಿ ಅದನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು
ಇನ್ನಷ್ಟು ಬರೆಯುತ್ತೇನೆ...ಧನ್ಯವಾದಗಳು.
nimma grahakaru nimage patrike bandilla vendu thilisabekittu, sulabhada phone gintha kadime karchina post card upayogisidaru.
nivu grahakarannu ellu teekisade baredaddu kushi ayithu.
nammalli paper haakuva huduga dinakke ondu paper haakutta idda. konege besattu patrike tharisuvudanen nillisabekayithu.
ನನ್ನ ಮೊದಲ ಪತ್ರಗಳನ್ನು ಬರೆದದ್ದು ಪೋಸ್ಟ್ ಕಾರ್ಡಿನಲ್ಲೇ. ಆಗ ಅದರ ಬೆಲೆ 15 ಪೈಸೆ ಇತ್ತು. ನಮ್ಮ ಮೆಡ್ಲಿಸ್ಕೂಲ್ ಮೇಷ್ಟ್ರುಗಳು ಬೇಸಿಗೆ ರಜೆ, ದಸರಾ ರಜೆಗಳಿಗೆ ಹೋಗುವ ಮುನ್ನ ವಿದ್ಯಾರ್ಥಿಗಳಿಗೆಲ್ಲ ತಮ್ಮ ವಿಳಾಸ ಕೊಟ್ಟು, ರಜೆಯಲ್ಲಿ ಹೇಗೆ ಓದುತ್ತಿದ್ದೀವಿ, ಏನೇನು ಮಾಡಿದ್ವಿ ಅಂತೆಲ್ಲ ಪತ್ರ ಬರೆದು ತಿಳಿಸಬೇಕಾಗಿ ಹೇಳಿರುತ್ತಿದ್ದರು. ಮಕ್ಕಳಿಗೆ ಪತ್ರ ಬರೆಯುವ ಹವ್ಯಾಸ ಕಲಿಸಬೇಕೆಂಬುದು ಅವರ ಉದ್ಧೇಶವಾಗಿತ್ತೆಂದು ಈಗ ಅರ್ಥವಾಗುತ್ತದೆಯಾದರೂ ಆಗ ಅವೆಲ್ಲ ತಿಳಿಯುತ್ತಿರಲಿಲ್ಲ. ಅಪ್ಪನ ಬಳಿ ಹದಿನೈದು ಪೈಸೆ ಇಸಕೊಂಡು ಪೋಸ್ಟಾಫೀಸಿಗೆ ಹೋಗಿ ಕಾರ್ಡು ತಂದು ಈ ಕಡೆ ಮೂಲೆಯಲ್ಲಿ ’ಕ್ಷೇಮ’ ಅಂತ ಬರೆದು ಆ ಕಡೆ ಮೂಲೆಯಲ್ಲಿ ’ದಿನಾಂಕ’ ಬರೆದು ಮಧ್ಯದಲ್ಲಿ ’ಶ್ರೀ’ ಅಂತ ಬರೆದು, ’ಪೂಜ್ಯ ಗುರುಗಳಾದ.....’ ಅಂತ ಶುರು ಮಾಡಿದರೆ, ಆಹಾ ಕಾರ್ಡ್ ಎಷ್ಟು ಬೇಗ ತುಂಬಿ ಹೋಗುತ್ತಿತ್ತು..! ಮೇಷ್ಟ್ರ ವಿಳಾಸ ಬರೆದು, ಎತ್ತರದಲ್ಲಿದ್ದ ಕೆಂಪು ಪೋಸ್ಟ್ ಡಬ್ಬಿಯಲ್ಲಿ ಕಷ್ಟ ಪಟ್ಟು ಹಾರಿ ಕಾರ್ಡ್ ಹಾಕಿ ಬಂದು, ಮೇಷ್ಟ್ರ ರಿಪ್ಲೇ ಯಾವಾಗ ಬರಬಹುದು ಅಂತ ಕಾಯುತ್ತ ಕೂರುವಲ್ಲಿನ ಮಜಾ ಈಗೆಲ್ಲಿದೆ?
ಹೋಗಲಿ, ಪೋಸ್ಟ್ ಕಾರ್ಡ್ ಕೊಳ್ಳಲು ಅಪ್ಪ ಕೊಡುತ್ತಿದ್ದ ಆ ಒಂದು 10 ಪೈಸೆಯ ನಾಣ್ಯ ಮತ್ತು ಒಂದು 5 ಪೈಸೆಯ ನಾಣ್ಯ ಈಗೆಲ್ಲಿದೆ?
ಅಣ್ಣ, ಲೇಖನ ಚೆನ್ನಾಗಿದೆ... ಎಲ್ಲರು ಧಾರಾಳಿಗಳಾದರೆ ಏನು ಚೆಂದ, ನಾವು ಅವರಂತೆ ಕಂಜುಸ ಆಗದಿರಲು ಒಂದು ಒಳ್ಳೆಯ ಲೇಖನ.. ಬರೆಯುತ್ತಿರಿ.. ನಗೆಸುತ್ತಿರಿ...
ಹಾಯ್ ಶಿವು ಅವರೆ,
ನಿಮ್ಮ ಲೇಖನದ ನಿರುಪಣೆ ತುಂಬಾ ಚೆನ್ನಾಗಿತ್ತು,
ಎಲ್ಲಾ ವೃತ್ತಿಯಲ್ಲಿಯೂ ಅದರದೇ ಆದ ಬವಣೆ, ಹಾಸ್ಯ,
ಕಠಿಣತೆ,ಸರಳತೆ ಇದ್ದೇ ಇರುತ್ತದೆ. ಅದರ ಒಂದು ಮುಖವನ್ನು ನಮಗೆ ತೋರಿಸಿದ್ದಕ್ಕೆ
ತುಂಬಾ ಧನ್ಯವಾದಗಳು.
ಅವರಲ್ಲಿಯ ಲೆಕ್ಕಾಚಾರ ಗುಣ ಹಿಡಿಸಿತು.
ಆದರೆ ಅವರ ಅನೂಕೂಲಕ್ಕೆ ಅಂತ ಹಾಕಿದ ನಿಮ್ಮ ಆ ಬದಲಿ ಪೇಪರನ ದುಡ್ಡು ಕೋಡಬೇಕಗಿತ್ತು ಅದು ಅವರ ತಪ್ಪು. ಅವರು ಎಂತಹ ಮನೆಯಲ್ಲಿಯೇ ಇರಲಿ ಎಷ್ಟೇ ಖರ್ಚು ಮಾಡಲಿ ಅದನ್ನು ಕೇಳುವ ಹಕ್ಕು ನಮಗಿಲ್ಲ.
ನಮ್ಮ ಬರಬೇಕಾಗಿದ್ದ ಹಣ ಮಾತ್ರ ತೆಗೆದು ಕೋಳ್ಳಲೇಬೇಕು ಅದು ನಮ್ಮ ಕರ್ತವ್ಯ.
ನೀವು ಕೂಡ ಒಂದು ಪೊಸ್ಟ ಕಾರ್ಡ ತೆಗೆದುಕೋಂಡು ಅವರ ಮನೆಗೆ ಪೊಸ್ಟ ಮಾಡಿ
“ ನೀವು ಎರಡು ದಿನದ (ಇಂಡಿಯನ ಎಕ್ಸಪ್ರೆಸ್ಸ ) ಪೇಪರ ಬಿಲ್ಲ ಕೊಟ್ಟಿಲ್ಲಾ ಅದಕ್ಕೆ
೬ ರುಪಾಯಿ ಬಿಲ್ಲನ್ನಾದರೂ ಕೊಡಿ ಇಲ್ಲಾ ಆ ದಿನದ ಎರಡು ಪೆಪರಗಳನ್ನ ನಮಗೆ
ಹೀಂತಿರುಗಿಸಿ . ಇಂತಿ ನಿಮ್ಮ ನಿಮ್ಮಿಂದ ಲೆಕ್ಕಾಚಾರ ಕಲಿತ ಶೀವು“
ಆ ನೋಡಿ ಪ್ರತಿಕ್ರಿಯೆ ಹೇಗಿರುತ್ತೆ ಅಂತ
ಪ್ರೀತಿಯ
ಲಕ್ಷ್ಮಣ
ಶಿವು,
ಆತ ನ ಐವತ್ತು ಪೈಸೆ ಕಾರ್ಡಿಗಿ೦ತ ಇಲ್ಲಿ ಆತ ವ್ಯಯಿಸಿದ ಕಾಲ,ಆ ಪತ್ರವನ್ನು ಬರೆಯಲು ಮುಖ್ಯ ಅ೦ತ ನನಗೆ ಅನ್ನಿಸುತ್ತೆ.ಹಣ ವ್ಯಯಿಸುವುದರಲ್ಲಿ ಜಿಪುಣತನ ಸರ್ವೇ ಸಾಮಾನ್ಯವಾಗಿದೆ,ಆದರೆ ಕಾಲ ವ್ಯಯಿಸುವುದರಲ್ಲಿ ಆತ ಜಿಪುಣತನ ತೋರಿಲ್ಲ.ಪೋಸ್ಟ್ ಕಾರ್ಡನ್ನು ನೋಡುವುದೇ ಅಪರೂಪವಾಗಿದೆ ಇತ್ತೀಚೆಗೆ..ಇಲ್ಲಿ ಈ ರೀತಿ ನೋಡಿ ಖುಷಿಯಾಯ್ತು.ನಮ್ಮ ಅ೦ಚೆ ವ್ಯವಸ್ತೆಯ ಬಗ್ಗೆ ಅದರ ಸ್ತಿತಿಗತಿಯ ಬಗ್ಗೆ ಸ್ವಲ್ಪ ಬರೆದಿದ್ದರೆ ಇನ್ನೂ ಖುಷಿಯಾಗ್ತಾ ಇತ್ತು.ಒಟ್ತಿನಲ್ಲಿ ನಿಮ್ಮ ಈ ಬರಹಕ್ಕೆ ಸ್ಪೂರ್ತಿಯಾದ ಆ ಅನಾಮಿಕ ವ್ಯಕ್ತಿಗೆ ಪೂರಾ ಕ್ರೆಡಿಟ್ಟು.
ಅವರ ಕಂಜೂಸು ತನದಿಂದ ನಿಮಗೊಂದು ಒಳ್ಳೆಯ ವಿಷಯ ಸಿಕ್ತಲ್ಲ ಬರಿಯೋಕೆ, ಮತ್ತೆ ನಮಗೊಂದು ಒಳ್ಳೆ ಲೇಖನ ಒದೋದಕ್ಕೆ.. ಚೆನ್ನಾಗಿದೆ ಬರಹ.
ಅಂದಹಾಗೆ ಪತ್ರ ಬರೆಯೋ ಅಭ್ಯಾಸ ನಿಮಗಿನ್ನೂ ಇದೆಯಾ.. ಅಪರೂಪಕ್ಕೆ ತುಂಬಾ ಆಪ್ತರಿಗೆ ಒಮ್ಮೆ ಬರೆಯಿರಿ ತುಂಬಾ ಚೆನ್ನಾಗಿರುತ್ತೆ..
ಹಾ...ಹಾ...ಹಾ... :)
ಶಿವು ಅವರೇ ನಂಗೂ ನಮ್ಮನೆಗೆ ಪೇಪರ್ ಹಾಕುವ ಹುಉಗ ಹೀಗೆ ಮಾಡುತ್ತಾನೆ ಕೆಲವೊಮ್ಮೆ.ನಿಮ್ಮ ಗಿರಾಕಿಯಂತೆ ನಾನು ಸಹ ಬಿಲ್ ಗೆ ಬಂದಾಗ ಅದರ ಹಣವನ್ನು ಮುರಿದೇ ಕೊಡುವುದು!!. ಪ್ರತಿ ದಿನ ೨ ಕನ್ನಡ ಮತ್ತು ೧ ಆಂಗ್ಲ ಪತ್ರಿಕೆ ಹಾಕುವಾಗ ಕನ್ನಡದಲ್ಲಿ ಒಂದೊಂದು ದಿನ [ಮಹತ್ವದ ದಿನದಂದೇ ಹೆಚ್ಚು!]ಬೇರೆ ಪತ್ರಿಕೆ ಹಾಕಿ ಹೊಗಿರುತ್ತಾನೆ. ಓದುಗ ಒಂದು ಪತ್ರಿಕೆಗೆ ಒಗ್ಗಿಕೊಂಡಿರುತ್ತಾನೆ.ಅದನ್ನು ಬದಲಿಸಲು ಸಾಧ್ಯವೇ ಆಗದು. ಒಂದಿನ ಆ ಪತ್ರಿಕೆ ಓದಲು ಆಗದಿದ್ದರೆ ದಿನ ಪೂರ್ತಿ ಆಗದೇ ಏನೋ ಮಿಸ್ ಮಾಡಿಕೊಂಡಂತಾಗುತ್ತದೆ ನನ್ನಂತ ಅತೀ ಹುಚ್ಚಿನ ಓದುಗರಿಗೆ!!.ಬೇರೆ ಪತ್ರಿಕೆ ಬಂದರೂ ಇದರಲ್ಲಿ ಇರೋದು ಸಿಗಲಲ್ವಾ! ಆತ್ಮ ಸಂತೋಷ ನೇ ಇಲ್ಲದೇ ದುಡ್ಡು ಕೊಡೊದು ನ್ಯಾಯಾನಾ!!! :)
ವಸುದೇಂದ್ರ ಹೇಳುತ್ತಾರೆ.
ಶಿವು,
ಲೇಖನ ಚೆನ್ನಾಗಿದೆ. ಪತ್ರ ಬರೆಯುವವರನ್ನು ಕಂಡರೆ ನನಗೆ ಯಾವಾಗಲೂ ಖುಷಿ.
ವಸುಧೇಂದ್ರ
ನಿಮ್ಮನುಭವವನ್ನು ಹ೦ಚಿಕೊ೦ಡದ್ದಕ್ಕೆ ಥ್ಯಾಂಕ್ಸ್. ಬರಹದ ಶೈಲಿ ಚೆನ್ನಾಗಿದೆ. ಭಾವನೆಗಳನ್ನು ತುಂಬಾ ಕ೦ಟ್ರೋಲ ಮಾಡಿಕೊ೦ಡು ಬರೆದಿದ್ದೀರಿ. ಈಗಲೂ ಈ ತರಹದ ಕಾರ್ಡುಗಳನ್ನು ಬಳಸುವವರಿಹರೆ೦ದು ತಿಳಿದು ಸ೦ತೋಶವಾಯಿತು (ಕಾರಣಗಳೇನೆ ಇರಲಿ, ಅದು ವೈಯಕ್ತಿಕ).
ಶಿವು ಸರ್,
ನಿಮ್ಮ ಈ ಲೇಖನ ಚೆನ್ನಾಗಿದೆ. ಅದರಲ್ಲಿಯೂ ಮಾರ್ವಾಡಿ ಬುದ್ಧಿ ಹೀಗೆಯೇ ಅಲ್ಲವೇ? ಅವರದೇನಿದ್ದರೂ ಪೋಸ್ಟ್ ಕಾರ್ಡಿನಲ್ಲಿ ತಮ್ಮ ವ್ಯವಹಾರ ಜೊತೆಗೆ ಅವರಿಂದ ಹಣ ತೊಗೊಂಡಿದ್ದರಂತೂ (ಲೇವಾದೇವಿ ಮೂಲಕ), ಸಾಲಗಾರರಿಗೆ ಮೂರ್ಕಾಸಿನ ಮರ್ಯಾದೆಗೇ ಕುಂದು ಬರುವಂತೆ ಕಾರ್ಡಿನಲ್ಲಿ ಪತ್ರ ಬರೆಯುತ್ತಾರೆ ಅಂತ ಕೇಳಿದ ನೆನಪು. ಒಟ್ಟಿನಲ್ಲಿ ೫೦ ಪೈಸೆ ಕಾರ್ಡು... ನಿಮಗಾದ ಅನುಭವ ಎಲ್ಲವನ್ನೂ ಸರಳ ನಿರೂಪಣೆಯೊಂದಿಗೆ ಬರೆದಿದ್ದೀರಿ.
ಸಸ್ನೇಹಗಳೊಂದಿಗೆ,
ಶಿವು ಸರ್,
ಆಹಾ!!..ಎಂತೆಂಥ ಆಸಾಮಿಗಳು ಸಿಗ್ತಾರೆ ಸ್ವಾಮಿ ನಿಮ್ಗೆ... ನೀವೇ ಧನ್ಯ!!!
ಆಸ್ಪತ್ರೆಗೆ ಹೋದ್ರೆ ಡಾಕ್ಟರು ಕೇಳೋ ಸಾವಿರ ಸಾವಿರ ರೂಪಾಯಿಗಳನ್ನು ಮರುಮಾತಿಲ್ಲದೇ ಕೊಡುವ ಈ ಮಂದಿ 50 ಪೈಸೆಗೆಲ್ಲ ಇಷ್ಟೊಂದು ತಲೆ ಉಪಯೋಗಿಸುತ್ತಾರೆಂದರೆ ಅವರಿಗೆ ಉಳಿದ ವಿಷಯಗಳ ಬಗ್ಗೆ ಯೋಚಿಸಲು ಟೈಮೇ ಇರಲ್ಲ ಅನ್ಸುತ್ತೆ. ಈ ನಿಮ್ಮ ದಿನಪತ್ರಿಕೆ ಪ್ರಸಂಗಗಳನ್ನೆಲ್ಲ ಯಾವುದಾದರೂ ಪತ್ರಿಕೆಯಲ್ಲೋ, ಸುದ್ದಿವಾಹಿನಿಯಲ್ಲೋ ಪ್ರಚುರಪಡಿಸಿ ಅಂಥವರು ತಮ್ಮ ತಲೆಯನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಉಪಯೋಗಿಸುವಂತೆ ಮಾಡಬೇಕು.
-ಉಮೀ
Shivu sir,
khanjoosegaLu thumbaa chandaanooo irthaare.
chennagide baraha.
ಎ೦ಥಾ ಜನಗಳೂ ಇರ್ತಾರಲ್ವಾ ಅನಿಸಿತು ಶಿವಣ್ಣ ನಿಮ್ಮ ಲೇಖನ ಓದಿ....
ಒಳ್ಳೆ ಗಿರಾಕಿ ಶಿವು.
ನಾನು 'ಟೈಮ್ಸ್ ಆಫ್ ಇಂಡಿಯಾ' ಬಿಟ್ಟು ಬೇರೆ ಪೇಪರ್ ಹಾಕಿದರೆ, ಯಾಕ ಹಾಕಲಿಲ್ಲ ಅಂತ ದಬಾಯಿಸುತ್ತಿನಿ.
ಆ ಥರ ಕೇಳ್ದೆ ಇದ್ರೆ ಮತ್ತೆ ರಿಪೀಟ್ ಮಾಡಬಹುದು ಅಂತ ಅಸ್ಟೆ.
ಒಂದ್ಸಾರಿ ನಮಗೆ ಮಲಯಾಳಂ ಪೇಪರ್ ಕೊಟ್ಟಿದ್ರು, ಆ ಟೈಮ್ನಲ್ಲಿ ಏನ್ ಮಾಡೋದು ಹೇಳಿ ?.
ಒಳ್ಳೆಯ ಲೇಖನ.
ಧನ್ಯವಾದಗಳು
ಚೆನ್ನಾಗಿದೆ ಪತ್ರ ಭಲೇ ಜಿಪುಣ ಕಣ್ರೀ ಅವರು, ನಾನೂ ಪತ್ರ (ಇನ್ ಲ್ಯಾಂಡ್, ಅಂತರದೇಶಿ ಪತ್ರ) ಬರೀತಿದ್ದೆ ನನ್ನ ಕಾಲೇಜು ದಿನಗಳಲ್ಲಿ... ಈಗ ಮೊಬೈಲು ಬಂದು ಬರೆಯೋದೇ ಇಲ್ಲವಾಗಿದೆ.... ಆ ಪತ್ರಗಳು ಇನ್ನೂ ನಮ್ಮ ತಂದೆ ಕಾದಿರಿಸಿದ್ದಾರೆ, ಈಗ ಓದಿದರೆ ಅದು ನಾನೇ ಬರೆದಿದ್ದಾ ಅಂತ ಅನುಮಾನವಾಗುತ್ತದೆ :)
ಶಿವು,
ಆ ಲೆಕ್ಕಾಚಾರದ ವ್ಯಕ್ತಿಯ ಬಗ್ಗೆ ಇಷ್ಟೆಲ್ಲಾ ಬರೆದರೂ, ಅವರ ಬಗ್ಗೆ ಯಾವುದೇ ಖಚಿತ ಅಭಿಪ್ರಾಯ ಕೊಡದೇ ಬಹಳ diplomatic ಆಗಿ ವರ್ತಿಸಿದ್ದೀರಾ, ಭೇಷ್!!
ಶಿವೂ,
ಲೇಖನ ತುಂಬ ಚೆನ್ನಾಗಿ ಮೂಡಿ ಬಂದಿದೆ.. ನಿಮ್ಮ ಬರಹದ ಶೈಲಿ ಕೂಡ... ಅ ಕಂಜೂಸಿನ ವ್ಯಕ್ತಿಯನ್ನು ಎಲ್ಲೂ ನಿಂದಿಸದೆ ತುಂಬ ಚೆನ್ನಾಗಿ ವರ್ಣಿಸಿದ್ದೀರ... ಪತ್ರ ವ್ಯವಹಾರ ದ ಬಗ್ಗೆ ತುಂಬ ಉತ್ಸುಕರಾಗಿ ಅದನ್ನು ಅಭಿಮಾನಿಸಿ ಒಳ್ಳೆ ತನವನ್ನು ತೋರಿದ್ದೀರ .. ಒಟ್ಟಿನಲ್ಲಿ ಅನುಭವದ ಸರಳ ಲೇಖನ... ತುಂಬ ಚೆನ್ನಾಗಿ ಇದೆ...
ಗುರು
ಬಾಲು ಸರ್,
ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..
ಹುಡುಗ ಮಾಡಿದ ತಪ್ಪಿಗೆ ನೀವು ಪತ್ರಿಕೆ ತೆಗೆದುಕೊಳ್ಳುವುದನ್ನು ನಿಲ್ಲಿಸಬಾರದಿತ್ತು. ಇದರಿಂದ ನನ್ನಂಥ ಏಜೆಂಟರಿಗೆ ಆಧಾಯ ಕಡಿಮೆಯಾಗುತ್ತದೆ..ಅವನಿಗೆ ಮತ್ತಷ್ಟು ವಾರ್ನಿಂಗ್ ಮಾಡಿದ್ದರೆ ತಿದ್ದಿಕೊಳ್ಳುತ್ತಿದ್ದನೇನೋ...
ಧನ್ಯವಾದಗಳು.
ಸುಶ್ರುತ,
ಮೊದಲ ಬಾರಿಗೆ ದೊಡ್ಡದಾಗ ಕಾಮೆಂಟು ಹಾಕಿದ್ದೀರಿ..
ನಿಮ್ಮ ಕಾಮೆಂಟು ಅದೆಷ್ಟು ಚೆಂದವೆಂದರೇ ಇನ್ನಷ್ಟು ಬೆಳೆಸಿದ್ದರೆ ಮತ್ತೊಂದು ಲೇಖನವಾಗುವಷ್ಟು. ಬಾಲ್ಯದ ಪೋಷ್ಟ್ ಕಾರ್ಡ್ ಅನುಭವವನ್ನು ನೆನಪಿಸಿಕೊಂಡು ಇಲ್ಲಿ ಎಲ್ಲರೊಂದಿಗೆ ಹಂಚಿಕೊಂಡಿದ್ದೀರಿ. ಈಗ ನನಗೆ ಈ ಬರಹ ಬರದಿದ್ದಕ್ಕೂ ಸಾರ್ಥಕವೆನಿಸುತ್ತದೆ.
ಆಗ ಪಡೆಯುತ್ತಿದ್ದ ೫ ಪೈಸೆ ೧೦ ಪೈಸೆ ಈಗೆಲ್ಲಿದೆಯೋ..ನಮ್ಮನೆಯ ಓಣಿ ಮಕ್ಕಳಿಗೆ ಅದನ್ನು ತೋರಿಸಿ ಹೇಳಿದರೇ ಕುತೂಹಲದಿಂದ ಕಣ್ಣರಳಿಸುತ್ತಾರೆ.
ಅದನ್ನು ತೆಗೆದುಕೊಂಡು ಹೋಗಿ ಏನಾದರೂ ತನ್ನಿ ಅಂದರೆ ನಮ್ಮ ಕಡೆಗೊಂದು ತಿರಸ್ಕಾರ ನೋಟ ಬೀರಿ ಜೋರಾಗಿ ನಗುತ್ತಾರೆ.....ಅದರ ಬಗ್ಗೆ ಒಂದು ಲೇಖನವನ್ನು ಬರೆಯುವ ಆಸೆಯಿದೆ....
ಹೀಗೆ ಬರುತ್ತಿರಿ..ಧನ್ಯವಾದಗಳು.
ನವೀನ್,
ನೀವು ಹೇಳಿದಂತೆ ಧಾರಾಳಿಗಳು ಆಗಬಾರದು ಇನ್ನೂ ತೀರ ಈ ಮಟ್ಟದ ಕಂಜೂಸ್ ಕೂಡ ಆಗಬಾರದೆಂದು ನನ್ನ ಭಾವನೆ. ನಿಮ್ಮದೂ ಅದೇ ಅಂದುಕೊಳ್ಳುತ್ತೇನೆ...
ಹೀಗೆ ಬರುತ್ತಿರಿ....ಧನ್ಯವಾದಗಳು.
baryokkantoo enaadru sigtaane irattalvaa nimge :)
ಏನ್ ಗುರು ಇದು... ಈಗಲೂ ಇಂಥವರು ಇದ್ದಾರಾನಂಬೋಕೆ ಆಗ್ತಿಲ್ಲ... ಹನಿ ಹನಿ ಕೂಡಿದರೆ ಹಳ್ಳ... ತೆನೆ ತೆನೆ ಕೂಡಿದರೆ ಬಳ್ಳ... !!! :-)
ಶಿವು ಅವರೇ,
ಲೇಖನದ ವಿಷಯ ತುಂಬಾ ಮಜವಾಗಿದೆ. ದಾಟಿಯೂ ಸೊಗಸಾಗಿದೆ. ಚೆಂದದ ಬರಹ. ಈ ಕಾಲದಲ್ಲೂ ಅಷ್ಟೆಲ್ಲ ಆಲೋಚನೆ ಮಾಡಿ ಹಣ ಉಳಿಸುವ ಆತ ನಿಜವಾಗ್ಲು ಗ್ರೇಟ್!
ಕೋಡ್ಸರ
ಶಿವಣ್ಣ..'ಐವತ್ತು ಪೈಸೆ ಪೋಸ್ಟ್ ಕಾರ್ಡು' ನೆನಪಾಯಿತು..ನನ್ನನ್ನು ಕಾಲೇಜಲ್ಲಿ 'ಪೋಸ್ಟ್ ಕಾರ್ಡು' ಅಂತ ಕರೆಯುತ್ತಿದ್ರು. ನಾನು ಪತ್ರ ಬರೆಯೋದ್ರಲ್ಲಿ ಎತ್ತಿದ ಕೈ.ಆದ್ರೆ ಬರೆಯೋದು ಐವತ್ತು ಪೈಸೆಯ ಕಾರ್ಡಿನಲ್ಲಿ! ಈವಾಗಲೂ ಕಾರ್ಡು ಅನ್ನು ಬಳಸುತ್ತೇನೆ.
ನಿಮ್ಮ ಅನುಭವ ಚೆನ್ನಾಗಿದೆ..ಆದರೆ ಅವ ತೀರಾ ಬುದ್ಧಿವಂತ! ನಾನೂ ಬೇಡದ/ನಮ್ಮದಲ್ಲದ ಪೇಪರ್ ಹಾಕಿದ್ರೆ ವಾಪಾಸ್ ಕಳಿಸ್ತೀನಿ..ಅದ್ರ ಬಿಲ್ ಕೊಡಲ್ಲ!
ಧನ್ಯವಾದಗಳು..
-ಧರಿತ್ರಿ
ಪ್ರದೀಪ್ ಹೆಗಡೆ ಹೇಳಿದರು.
chennaagide saar, nimma anubhava! swaarasyakaravaagide! :)
nim blognalli, bere blaagnalliruvanthe, name/url option enable maadi saar. comment haakoke tumbaa sulabhavaagutte. for eg., see "vikaasavaada" blog in blogspot....
thanks...
ಲಕ್ಷ್ಮಣ್ ಸರ್,
ಲೇಖನದ ನಿರೂಪಣೆ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ವೃತ್ತಿ ಮತ್ತು ಅದರ ಬವಣೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಇಷ್ಟವಾಯಿತು..
ಮತ್ತೆ ನನಗೆ ನೀವು ಹೇಳಿದಂತೆ ಅವರಿಗೆ ಪತ್ರ ಬರೆಯಲು ಸಮಯವಿಲ್ಲ ಸರ್. ಬೇಕಾದರೆ ಈ-ಮೇಲ್ ಮಾಡಬಲ್ಲೆ.[ ನಾನು ಕೂಡ ಈಗಲೂ ಪತ್ರ ಬರೆಯುತ್ತಿರುತ್ತೇನೆ. ಆದರೆ ಇಂಥದ್ದಕ್ಕೆಲ್ಲಾ ಬರೆಯುವುದಿಲ್ಲ ಸರ್.]
ಧನ್ಯವಾದಗಳು.
ಆಹರ್ನಿಸಿ ಶ್ರೀಧರ್ ಸರ್,
ನಿಮ್ಮ ಪ್ರತಿಕ್ರಿಯೆ ಸ್ವಲ್ಪ ಭಿನ್ನವಾಗಿರುವುದಕ್ಕೆ ಅಭಿನಂದಿಸುತ್ತೇನೆ. ಆತನ ಜಿಪುಣತನಕ್ಕಿಂತ ಆತನ ಪತ್ರ ಬರೆಯುವ ಶ್ರದ್ಧೆ, ಕಾಳಜಿಯನ್ನು ಮೆಚ್ಚಿದ್ದೀರಿ...
ಈ ಲೇಖನ ಬರೆಯಲು ಸ್ಫೂರ್ತಿ ನೀಡಿದ ಅವನ ಪತ್ರ ಮತ್ತು ಅವನಿಗೆ ಲೇಖನದ ಯಶಸ್ಸನ್ನು ಅರ್ಪಿಸುತ್ತೇನೆ ಸರ್..
ಹೀಗೆ ಬರುತ್ತಿರಿ...ಧನ್ಯವಾದಗಳು.
ಪಾಲಚಂದ್ರ,
ಒಂದು ಲೇಖನ ಬರೆಯುವುದಕ್ಕೆ ಕಂಜೂಸುತನವೂ ಸ್ಪೂರ್ತಿಯಾಯಿತು...
ಮತ್ತೆ ನನಗೆ ಈಗಲು ಪತ್ರ ಬರೆಯುವ ಅಭ್ಯಾಸವಿದೆ.
ಮತ್ತೆ ಬಾಲ್ಯದಲ್ಲಿ ಸುಶ್ರುತ ಪ್ರತಿಕ್ರಿಯೆಯಂತೆ ನಾನು ಆಗ ಬರೆದ ಪತ್ರಗಳ ಬಗ್ಗೆ ಲೇಖನವನ್ನು ಬರೆಯುವ ಮನಸ್ಸಾಗುತ್ತಿದೆ. ಸಾದ್ಯವಾದರೆ ಬರೆಯುತ್ತೇನೆ...
ಧನ್ಯವಾದಗಳು.
ನಿತಿನ್,
ದಿನಪತ್ರಿಕೆ ಹಾಕದಿದ್ದಾಗ ಹಣವನ್ನು ಮುರಿದೇ ಕೊಡುವುದು ಅಂತ ಹೇಳಿದ್ದೀರಿ....ತೊಂದರೆಯಿಲ್ಲ. ಆದ್ರೆ ಹುಡುಗನಾಗಲಿ, ಅಥವ ಏಜೆಂಟ್ ಆಗಲಿ ಅದನ್ನು ಬೇಕಂತ ಮಾಡುವುದಿಲ್ಲ...ಬೆಳಿಗ್ಗಿನ ಹುಡುಗರ ತೊಂದರೆಯಿಂದಾಗಿ ಇದೆಲ್ಲಾ ತಪ್ಪುಗಳಾಗುತ್ತವೆ.
ನೀವು ನನ್ನ ಕ್ಯಾಮೆರಾ ಹಿಂದೆ ಬ್ಲಾಗಿನಲ್ಲಿ ದಿನಪತ್ರಿಕೆ ವಿಚಾರಕ್ಕೆ ಬರೆದಿರುವ ಎಲ್ಲಾ ಲೇಖನಗಳನ್ನು ಓದಿದರೆ ಖಂಡಿತ ನೀವು ಹಣವನ್ನು ಕಟ್ ಮಾಡುವುದಿಲ್ಲ. ನಮ್ಮ ವೃತ್ತಿಯ ಕಷ್ಟ ಸುಖಗಳನ್ನೆಲ್ಲಾ ಅಲ್ಲಿ ತೆರೆದ ಮನಸ್ಸಿನಲ್ಲಿ ಹೇಳಲಾಗಿದೆ...ನೀವೊಮ್ಮೆ ಬೇಟಿಕೊಡಿ..
http://camerahindhe.blogspot.com/
ಧನ್ಯವಾದಗಳು.
ವಿನುತಾ,
ಬರವಣಿಗೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಲೇಖನದಲ್ಲಿ ಸಾಧ್ಯವಾದಷ್ಟು ಯಾವುದೇ ಪೂರ್ವಗ್ರಹಕ್ಕೆ ಸಿಕ್ಕಿಹಾಕಿಕೊಳ್ಳದೇ ಬರೆಯಲು ಯತ್ನಿಸಿದ್ದೇನೆ.
ಈಗಲೂ ಪೋಸ್ಟ್ ಕಾರ್ಡು ಬಳಸುವವರನ್ನು ಖಂಡರೆ ನನಗೂ ಸಂತೋಷವಾಗುತ್ತದೆ. ಧನ್ಯವಾದಗಳು.
ಕ್ಷಣ ಚಿಂತನೆ ಸರ್,
ಮಾರ್ವಾಡಿಯವರ ಬಳಿ ವ್ಯವಹರಿಸಬೇಕಾದರೆ ಜೊತೆಯಲ್ಲಿ ಒಂದು ಕ್ಯಾಲಿಕುಲೇಟರ್ ಕೈಯಲ್ಲಿ ಇರಲೇಬೇಕು.
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಉಮೇಶ್ ಸರ್,
ನನ್ನ ಲೇಖನವನ್ನು ನೋಡಿ ನೀವು ನನ್ನನ್ನು ಪುಣ್ಯವಂತ ಅಂದುಕೊಂಡಿದ್ದೀರಿ...ಖಂಡಿತ ಇಲ್ಲ. ನನಗೆ ಸಿಕ್ಕುವ ಗಿರಾಕಿಗಳ ಕಾಟ ತಾಳಲಾರದೆ ಈ ರೀತಿ ಬರಹದ ಮೂಲಕ ಹಗುರಾಗುತ್ತೇನೆ.
ಮತ್ತೆ ನೀವೇ ಹೇಳಿದಂತೆ ಅನೇಕ ವಿಚಾರಗಳಲ್ಲಿ ವಿಧಿಯಿಲ್ಲದೇ ಹೆಚ್ಚು ಖರ್ಚು ಮಾಡುತ್ತಾರೆ...ನಮ್ಮಂಥ ಸಣ್ಣ ವಿಚಾರಗಳಲ್ಲಿ ಈ ರೀತಿ ವರ್ತಿಸುತ್ತಾರೆ..
ಮತ್ತೆ ನೀವು ಹೇಳಿದ ಕೊನೆ ವಿಚಾರವಾಗಿ ನಾನು ಪ್ರಯತ್ನಿಸುತ್ತಿದ್ದೇನೆ ಸರ್...
ಧನ್ಯವಾದಗಳು.
ಪ್ರೀತಿ ಮೇಡಮ್.,
ಕಂಜೂಸಿಗಳು ಎಲ್ಲಾರೂ ಚೆನ್ನಾಗಿರೊಲ್ಲ...ನಮ್ಮ ಗಿರಾಕಿ ೧೦೦ ಕಿಲೋ ತೂಗುತ್ತಾನೆ...ಅವನಲ್ಲಿ ಎಂಥ ಚಂದ ಹುಡುಕಲಿ ಹೇಳಿ...
ಲೇಖನ ಮೆಚ್ಚಿದ್ದೀರಿ..ಹೀಗೆ ಬರುತ್ತಿರಿ..
ಧನ್ಯವಾದಗಳು.
ಸುಧೇಶ್,
ಹೀಗೆ ಬರುತ್ತಿರಿ...ಇನ್ನೂ ತುಂಬಾ ವೈವಿಧ್ಯತೆಯ ಮಹಾನುಭಾವರನ್ನು ಬ್ಲಾಗಿನಲ್ಲಿ ಪರಿಚಯಿಸುತ್ತಿರುತ್ತೇನೆ...
ಧನ್ಯವಾದಗಳು.
ಶಿವು ಸರ್, ಲೇಖನ ತೆಳು ಹಾಸ್ಯದಿಂದ ರಂಜಿಸುತ್ತದೆ. ನಿಜ, ಸಣ್ಣ ಸಣ್ಣ ಲೆಕ್ಕ ಹಾಕುತ್ತ ದೊಡ್ಡದನ್ನು ಕಳೆದುಕೊಳ್ಳುವ ಅನೇಕರು ಇದ್ದಾರೆ. ಹಣಕಾಸಿನ ವಿಚಾರದಲ್ಲಿ ಅತಿರೇಕದ ಎಚ್ಚರ ಇರುವವರು ತಮ್ಮನ್ನು ತಾವು ಬಹಳ ಬುದ್ಧಿವಂತರು, ವ್ಯವಹಾರ ಜ್ನಾನ ಇರುವವರು ಎಂಬ ಭಾವನೆ ಇರುತ್ತದೆ. ಕೆಲವರಿಗೆ ನಾಲ್ಕು ತಾಸು ಚರ್ಚೆ ಮಾಡಿ ಕೊಂಡ ವಸ್ತುವಿನ ಬೆಲೆಯನ್ನು ಒಂದೈದು ಹತ್ತು ರೂಪಾಯಿ ಇಳಿಸಿದ್ದೇ ದೊಡ್ಡ ವ್ಯವಹಾರದ ಲಕ್ಷಣ ಎಂದು ತಿಳಿಯುತ್ತಾರೆ.
ಶಿವಪ್ರಕಾಶ್,
ದಿನಪತ್ರಿಕೆ ಬದಲಿಸುವುದು ಎಲ್ಲಾ ಕಡೆ ಸಹಜ. ನೀವು ಧಬಾಯಿಸಿದರೇನೆ ನಮ್ಮ ಹುಡುಗರ ತಲೆಗೆ ವಿಚಾರ ಹೋಗುವುದು.
ಮಲೆಯಾಳ ಪತ್ರಿಕೆ ಹಾಕಿದ ಹುಡುಗ ಗ್ರೇಟ್ ಅಲ್ವಾ...
ಪ್ರಭು,
ಮೊಬೈಲು ಬಂದು ನಮ್ಮ ಪತ್ರ ವ್ಯವಹಾರವನ್ನು ಹಾಳು ಮಾಡಿರುವುದಂತೂ ನಿಜ. ನಿಮ್ಮ ಪತ್ರಗಳನ್ನು ಇಟ್ಟಿರುವ ನಿಮ್ಮ ತಂದೆಯವರನ್ನು ಅಭಿನಂದಿಸುತ್ತೇನೆ...
ನೀವು ಬಿಡುವಿನಲ್ಲಿ ಎಲ್ಲಾ ಪತ್ರಗಳನ್ನು ಒಮ್ಮೆ ಓದಿ ನೋಡಿ...ಖುಷಿಯ ಜೊತೆಗೆ ನಿಮ್ಮ ಪ್ರೀತಿ ಪ್ರೇಮದ ವಿಚಾರಕ್ಕೆ ಹೊಸ ಹೊಸ ವಿಚಾರಗಳು ಸಿಗಬಹುದು.
ಧನ್ಯವಾದಗಳು.
ರೂಪ,
ನನ್ನ ಬರವಣಿಗೆ diplomatic ಆಗಿರುವುದನ್ನು ಗುರುತಿಸಿ ಪ್ರತಿಕ್ರಿಯಿಸಿದ್ದೀರಿ...ನಿಮ್ಮ ಮಾತಿನಿಂದ ತಲೆಯ ಮೇಲೆರಡು ಕೋಡು ಬಂದಂತೆ ಆಗುತ್ತಿದೆ...ಧನ್ಯವಾದಗಳು.
ಗುರು,
ಈ ಲೇಖನ ಬರೆಯುವ ಮುಂಚೆ ಆದ ಆನುಭವಗಳನ್ನು ನೇರವಾಗಿ ಬರೆದಿದ್ದೇನೆ...ಅವನ ಮೇಲೆ ಮೊದಲಿಗೆ ಕೋಪ ಬಂದರೂ ನಂತರ ಈ ವಿಚಾರವೇ ನನಗೆ ಕುತೂಹಲ ಮೂಡಿಸಿದ್ದಂತೂ ನಿಜ...
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಪ್ರಮೋದ್,
ನಮ್ಮ ಕೆಲಸವೇ ಅಂಥದ್ದಲ್ಲವೇ....ಯಾವಾಗಲೂ ರೋಡ್ ರೋಮಿಯೋಗಳಂತೆ ಅಲೆಯುವುದು...ಅದರ ಪರಿಣಾಮವೇ ಇದು...ಧನ್ಯವಾದಗಳು.
ರವಿಕಾಂತ್ ಸರ್,
ಇಂಥ ಜನ ಮೊದಲು-ಈಗಲೂ-ನಂತರವೂ ಇರುತ್ತಾರೆ ಸರ್.
ಗಾದೆ ನೆನಪಿಸಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...
ವಿನಾಯಕರವರೆ,
ನನ್ನ ಬ್ಲಾಗಿಗೆ ಸ್ವಾಗತ. ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಅಷ್ಟೆ ಅಲ್ಲ ಇನ್ನೂ ವಿಭಿನ್ನವಾಗಿ ಯೋಚಿಸಿ ಸಿಕ್ಕಾಪಟ್ಟೆ ಲೆಕ್ಕಾಚಾರದಲ್ಲಿರುವವರು ನೂರಾರು ಗ್ರಾಹಕರಿದ್ದಾರೆ...ಸರ್ ಅವರ ಬಗ್ಗೆ ನನ್ನ ಮತ್ತೊಂದು ಬ್ಲಾಗಿನಲ್ಲಿ ಅನೇಕ ಲೇಖನಗಳನ್ನು ಬರೆದಿದ್ದೇನೆ...ಬಿಡುವಾದಾಗ ಬೇಟಿಕೊಡಿ...
ಓದಿದರೆ ಖಂಡಿತ enjoy ಮಾಡುತ್ತೀರಿ...
http://camerahindhe.blogspot.com/
ಹೀಗೆ ಬರುತ್ತಿರಿ..ಧನ್ಯವಾದಗಳು.
ಧರಿತ್ರಿ,
ನೀನು ಪೋಸ್ಟ್ ಕಾರ್ಡ್ ತುಂಬಾ ಬರೆಯುತ್ತಿದ್ದೆ ಅಂತ ಹೇಳಿದ್ದೀಯಾ...ಅವುಗಳ ಸ್ವಾರಸ್ಯಕರ ಘಟನೆಗಳನ್ನು ಬ್ಲಾಗಿನಲ್ಲಿ ಬರಿ...
ಮತ್ತೆ ನೀನು ಗಿರಾಕಿಯನ್ನು ಮೆಚ್ಚಿದ್ದಕ್ಕೆ ಆತನನ್ನು ಹೊಗಳಿದ್ದೀಯಾ...ಆದಕ್ಕೆ ಬೇಸರವಿಲ್ಲ.
ಆದ್ರೆ ನೀನು ಮಾಧ್ಯಮದಲ್ಲಿದ್ದೀಯಾ.. ನಿನ್ನ ಪತ್ರಿಕೆಯನ್ನು ಮಾರುಕಟ್ಟೆಗೆ..ಮನೆ ಮನೆಗೆ ತಲುಪಿಸುವವರು ನಾನು ಮತ್ತು ನನ್ನಂಥ ಏಜೆಂಟರು...ನೀನು ನಿನ್ನ ಏಜೆಂಟನಿಗೆ[ಅವನ ತಪ್ಪುಗಳನ್ನು ಕ್ಷಮಿಸಿ]ಸರಿಯಾಗಿ ಹಣ ಕೊಡದಿದ್ದರೆ ಅವನು ಮತ್ತೆ ನಿಮ್ಮ ಪತ್ರಿಕೆಯ ಬಂಡವಾಳವನ್ನು ವಾಪಸು ಹೇಗೆ ಕೊಡುತ್ತಾನೆ...ಅವನು ಕೊಡದಿದ್ದಲ್ಲಿ ನೀವು ಹೇಗೆ ಪತ್ರಿಕೆ ನಡೆಸುತ್ತೀರಿ....ಇದೊಂದು ಚೈನ್-ಲಿಂಕ್ ತರ...ಎಲ್ಲಾ ಅನುಸರಿಸಿಕೊಂಡು ಹೋದರೆ ಎಲ್ಲಾ ಚೆನ್ನಾಗಿ ನಡೆಯುತ್ತದೆ...ಇದು ನನ್ನ ಅಭಿಪ್ರಾಯ...ತಪ್ಪು ತಿಳಿಯಬೇಡ...ನಿಮ್ಮಪೇಪರ್ ಹಾಕುವ ಹುಡುಗ ಮತ್ತು ಅವನ ಏಜೆಂಟನ ಬಗ್ಗೆ ಕರುಣೆಯಿರಲಿ...
ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು..
ಪ್ರದೀಪ್,
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಎಲ್ಲರೂ ಕಾಮೆಂಟು ಹಾಕಿದ್ದಾರೆ..ನೀವು ಪ್ರಯತ್ನಿಸಬಹುದು..ಮತ್ತೆ ನೀವು ಹೇಳಿದಂತೆ ಪ್ರಯತ್ನಿಸುತ್ತೇನೆ..
ದೀಪಸ್ಮಿತ ಸರ್,
ಮಲ್ಲಿಕಾರ್ಜುನ್ ಹೇಳಿದಂತೆ ನೀವು ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದೀರಿ...ಚಿಕ್ಕ ವಿಚಾರಗಳಲ್ಲಿ ಹಣ ಉಳಿಸಲು ಪ್ರಯತ್ನಿಸಿ...ದೊಡ್ಡ ಮೊತ್ತವನ್ನು ಕಳೆದುಕೊಂಡಿರುವ ಅದೆಷ್ಟೋ ಜನರನ್ನು ನೋಡಿದ್ದೀನಿ...
ಚಿತ್ರ ಮತ್ತು ಲೇಖನವನ್ನು ಮೆಚ್ಚಿ ಖುಷಿ ಪಟ್ಟಿದ್ದೀರಿ..
ಹೀಗೆ ಬರುತ್ತಿರಿ ಸರ್...
ಧನ್ಯವಾದಗಳು.
ಶಿವು,
ಪೋಸ್ಟ್ ಕಾರ್ಡಿಗೆ ಐವತ್ತು ಪೈಸೆ ಆಯ್ತಾ? ನಾನಿನ್ನೂ ಹದಿನೈದು ಪೈಸೆಯಿಂದ ಮುಂದೇ ಹೋಗಿಲ್ಲ. ನಾನಂತೂ ಐವತ್ತು ಪೈಸೆ ಖರ್ಚು ಮಾಡಲ್ಲಪ್ಪ! ;-))
- ಕೇಶವ
ಕುಲಕರ್ಣಿ ಸರ್,
ಪೋಸ್ಟ್ ಕಾರ್ಡಿಗೆ ಈಗ ಐವತ್ತು ಪೈಸೆ ಆಗಿದೆ. ಮೊದಲು ಹದಿನೈದು ಪೈಸೆ ಇತ್ತು. ನೀವು ಐವತ್ತು ಪೈಸೆ ಖರ್ಚು ಮಾಡಿ ನಿಮಗಿಷ್ಟವಾದ ಒಂದು ಸುಂದರ ಪತ್ರ ಬರೆದು ಅದ್ರ ಆನಂದ ಅನುಭವಿಸಿ..
ಧನ್ಯವಾದಗಳೂ
ನನಗೂ ಗೊತ್ತು ಪತ್ರಿಕೆ ಹಾಕುವವ ಹುಡುಗರ ಕಷ್ಟ.!ಮೊದಲು ಪತ್ರಿಕೆಯ ವರದಿಗಾರನಾಗಿ ಕೆಲಸ ಮಾಡುವಾಗ ಏಜೆಂಟರ ನಕರಗಳಿಂದ ಅವರನ್ನು ಸಂಭಾಳಿಸುವುದೇ ಕಷ್ಟ ಆಗುತ್ತಿತ್ತು!!ಪೇಪರ್ ಬರದೇ ಇದ್ದರೆ, ನಮ್ಮ ವರದಿ ಓದಲಾಗದು.ನ್ಯೂಸ್ ಗೆ ಹೋದಾಗ ಏನ್ರಿ ರಾಜ್ಯ ಮಟ್ಟ ಪೇಪರ್ ಆದ್ರೂ ಬರ್ಲಿಲ್ಲಾ ಅಂಥಾ ಮುಖಕ್ಕೆ ಹೊಡೆದ ಹಾಗೆ ಕೇಳ್ತಾರೆ!. ಕೊನೆಗೂ ಪುಣ್ಯಾತ್ಮ ಸಿಕ್ಕಿದ್ದ!!.
ಖಂಡಿತ ದಿನವೂ ತಪ್ಪದೆ,ಒಂದೇ ಸಮಯಕ್ಕೆ, ನೂರಾರು ಮನೆಗಳಿದ್ದರೂ ಒಂದೂ ದಿನವೂ ಪೇಪರ್ ಬದಲಾಯಿಸದೇ ಹಾಕುವುದು ನಿಜಕ್ಕೂ ಗ್ರೇಟ್. ಬೆಳ್ ಬೆಳಿಗ್ಗೆ ೫ ರಿಂದಲೇ ಆರಂಭವಾಗುವ ಕೆಲ್ಸ.ಆದರೆ ಪ್ರತಿಯೊಬ್ಬ ಗ್ರಾಹಕನೂ ತನ್ನ ದೃಷ್ಟಿಯಿಂದ ಮಾತ್ರ ನೋಡುತ್ತಾನಲ್ಲವೆ.?ಆಗ ಇಂಥ ಸಮಸ್ಯೆ ಉಧ್ಬವವಾಗುತ್ತದೆ...
hale nenapu marukalisuttide....
ಶಿವು, ನಿಮ್ಮ ಪೇಪರಿನವನೋಂದಿಗಿನ ಪರದಾಟ ಒಂದೆಡೆ ಆದರೆ ನಿಮ್ಮ ಪೇಪರಿನವನ ಎಂಜಲು ಕೈಯಲಿ ಕಾಗೆಯನೋಡಿಸದ ಜಿಪುಣಾಗ್ರೇಸರ ಅತಿಬುದ್ಧಿವಂತಿಕೆ ಇನ್ನೊಂದು ಕಡೆ.
ನಿಮ್ಮಿಬ್ಬರ ಮಧ್ಯೆ ಭಾಭಿಜಿ ಗೆ ನಿಮ್ಮನ್ನು ಇನ್ನಷ್ಟು ಚುಡಾಯಿಸಿ ಸಂಸಾರದಲ್ಲಿ ಸರಿಗಮಿಸಲು ಇನ್ನೊಂದು ಅವಕಾಶ, ಈ ಎಲ್ಲದರ ಜೊತೆಗೆ ನಿಮಗೆ ಬಂದ ಐವತ್ತು ಪೈಸೆ ಪೋಸ್ಟ್ ಕಾರ್ಡಿಗೆ ನೀವು ಚಿರ ಋಣಿಯಾಗಿರಬೇಕು, ಅದನ್ನು ಜೋಪಾನವಾಗಿಡಿ, ಬಹುಶಃ ಪ್ರಪಂಚದ ಒಂದೇ ಜೀವಂತ (ನಿರ್ಜೀವಿ.ಜೀವಂತ ವಸ್ತು...ಹಹಹ) ವಸ್ತು ಸಂಗ್ರಹಾಲಯಕ್ಕೆ ಯೋಗ್ಯ ಅತ್ಯಮೂಲ್ಯ ಸಂಗ್ರಹಕ್ಕೆ ನಿಮಗೆ ೨೦೨೦ರಲ್ಲಿ ಪ್ರಶಸ್ತಿ ಸಿಕ್ಕರೂ ಸಿಗಬಹುದು...
ಚನ್ನಾಗಿ ನೈಜವಾಗಿ ಮೂಡುತ್ತೆ ನಿಮ್ಮ ಬರಹ..ಬಿಲ್ ಕುಲ್ ನಿಮ್ಮ ಅಪೂರ್ವ ಛಾಯಾಚಿತ್ರಗಳ ತರಹ...(Hats Off)....ಟೋಪಿ..ಎತ್ತಿ...ಹಹಹಹ
ಆಗ್ನಿ ಸರ್,
ನನ್ನ ಲೇಖನದಿಂದ ನಿಮ್ಮ ನೆನಪುಗಳು ಮರುಕಳಿಸಿದ್ದಕ್ಕೆ ಥ್ಯಾಂಕ್ಸ್...
ನಿತಿನ್,
ಪತ್ರಿಕಾ ವರದಿಗಾರರಾಗಿ ನೀವು ಅದೆಷ್ಟು ಅನುಭವಿಸಿದ್ದೀರೋ ಆಷ್ಟೇ ಕಷ್ಟವನ್ನು ಏಜೆಂಟರು ಅನುಭವಿಸುತ್ತಾರೆ...ನಿಜಕ್ಕೂ ಕಷ್ಟಪಡದೆ ಎಲ್ಲರನ್ನೂ ಕಂಟ್ರೋಲ್ ಮಾಡುವವರು ಹುಡುಗರು. ಮುಕ್ಕಾಲುಗಂಟೆಯ ಕೆಲಸಕ್ಕೆ ಅವರಿಗೆ ನಾವು ಮಾಡುವ ಮರ್ಜಿ ಒಂದೆರಡಲ್ಲ...
ಮತ್ತೆ ನಿಮ್ಮ ಪೇಪರ್ ಸರಿ ಬರುತ್ತಿದೆಯೆಂದರೆ ಅದರ ನಿಮಗೆ ಸರಿಯಾದ ಹುಡುಗ ಸಿಕ್ಕಿರಬೇಕು. ಅದಕ್ಕಾಗಿ ಆ ಏಜೆಂಟು ಪುಣ್ಯ ಮಾಡಿರುತ್ತಾನೆ....
ಮತ್ತೆ ಗಿರಾಕಿಗಳು, ಏಜೆಂಟುಗಳು, ಪತ್ರಿಕಾ ಪ್ರತಿನಿಧಿಗಳು, ಹುಡುಗರು ಎಲ್ಲಾ ಅವರವರ ದೃಷ್ಠಿಕೋನದಿಂದ ನೋಡುವುದರಿಂದಲೇ ಎಲ್ಲಾ ಸಮಸ್ಯೆಗಳು ಉದ್ಬವವಾಗುವುದು...ಅಲ್ಲವೇ...
ಮತ್ತೊಮ್ಮೆ ಬಂದಿದ್ದಕ್ಕೆ ಧನ್ಯವಾದಗಳು.
ಜಲನಯನ ಸರ್,
ನಿಮ್ಮ ಕಾಮೆಂಟನ್ನು ನನ್ನಾಕೆಗೆ ತೋರಿಸಿದೆ. ಆಗ ಅವಳು ಪೂರ್ತಿ ಲೇಖನವನ್ನು ಓದಿ ಎಲ್ಲರ ಕಾಮೆಂಟುಗಳನ್ನು ನೋಡಿ ಎಂಜಾಯ್ ಮಾಡಿದಳು.
ಮತ್ತೆ ನೀವು ಹೇಳಿದಂತೆ ಆ ಫೋಸ್ಟ್ ಕಾರ್ಡನ್ನು ಜೋಪಾನವಾಗಿ ಎತ್ತಿಟ್ಟಿದ್ದೇನೆ.. ನಿಮ್ಮ ಆಶಯದಂತೆ ನಾನು ೨೦೨೦ ಕ್ಕೆ ಪ್ರಶಸ್ತಿ ಸ್ವೀಕರಿಸಲು ಈಗಿನಿಂದಲೇ ಸಿದ್ಧನಾಗುತ್ತೇನೆ...
ಲೇಖನವನ್ನು enjoy ಮಾಡಿದ್ದಕ್ಕೆ ಧನ್ಯವಾದಗಳು.
lekan channagitu. hana ulislu avru madid marg hagu nivu bare shaile hidiside
ವಿನಾಯಕ್,
ನನ್ನ ಬ್ಲಾಗಿಗೆ ಸ್ವಾಗತ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...
ಎಂದಿನಂತೆ ಬಹಳ ಸುಂದರವಾಗಿ ಮೂಡಿಬಂದ ಲೇಖನ !
ಅರ್ಚನ ಮೇಡಮ್,
ಧನ್ಯವಾದಗಳು ಹೀಗೆ ಬರುತ್ತಿರಿ...
ಎಂಥ ಕಂಜೂಸ್ ಮಾರಾಯ್ರೆ
ಹರೀಶ್,
ನಿಮ್ಮ ಅಭಿಪ್ರಾಯವನ್ನು ಅನೇಕ ಬ್ಲಾಗ್ ಗೆಳೆಯರು ಒಪ್ಪಲಿಕ್ಕಿಲ್ಲ..
ಶಿವೂ ಸರ್,
ನಿಜಕ್ಕೂ ಇಂದಿಗೂ ಯೋಚಿಸಿದರೆ ಈ ಕೈ ಬರಹದ ಪತ್ರಗಳು ಕೊಡುವ ಖುಷಿ ಬೇರೆ ಯಾವ ಮಾಧ್ಯಮವು ನೀಡಲಾರದೇನೋ ಅಲ್ವ...
ಒಟ್ಟಿನಲ್ಲಿ ಲೇಖನ ವಿಭಿನ್ನವಾಗಿದೆ ಮತ್ತು ವಾಸ್ತವಕ್ಕೆ ಕರೆದೊಯ್ಯುತ್ತದೆ.
ರಾಜೇಶ್,
ನೀವೆಷ್ಟು ಬ್ಯುಸಿ ಅಂತ ನನಗೆ ಗೊತ್ತು. ನಡುವೆ ನನ್ನ ಲೇಖನವನ್ನು ಓದಿ ಪ್ರತಿಕ್ರಿಯಿಸಿದ್ದೀರಿ...ಧನ್ಯವಾದಗಳು...
ಈಗ ತಾನೆ "ವರ್ಡ್ ಟೆನ್ ಕೆ" ಲೇಖನವನ್ನು ಬ್ಲಾಗಿಗೆ ಹಾಕಿದ್ದೇನೆ...ಬಿಡುವು ಮಾಡಿಕೊಂಡು ನೋಡಿ...
Post a Comment